ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ -1
ಶ್ರೀ ಮಲೆ
ಮಹದೇಶ್ವರ ಬೆಟ್ಟ. ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ
ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ,
ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ
ಮಹತ್ವವನ್ನು ಪಡೆದುಕೊಂಡು ಬಂದಿದೆ. ಬೆಂಗಳೂರಿನಿಂದ 210 ಕಿ
ಮೀ ದೂರ ದಲ್ಲಿರುವ ಬೆಟ್ಟ
ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ
ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ,
ಮಹದೇಶ್ವರ ಗಿರಿ, ಎಂ ಎಂ
ಹಿಲ್ಸ್ ಎಂಬ ಇತರೆ ಹೆಸರುಗಳಿವೆ.
ಈ ಬೆಟ್ಟ ಕೊಳ್ಳೇಗಾಲದ
ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.
ಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಆ ಏಳು ಮಲೆಗಳು
ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ,
ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ ದೇವಾಲಯವಿದೆ.
ಇಂದಿಗೂ
ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ
ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ
150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.
ಮಹದೇಶ್ವರರ ಬಗ್ಗೆ ನೂರಾರು ಜಾನಪದ
ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ
ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ,
ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ
ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ
ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ
ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ
ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು
ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ
ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ
ಕಾಲದ 1761ರ ಒಂದು ಶಾಸನದಲ್ಲಿ
ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ.
ಈ ದೇವಸ್ಥಾನಕ್ಕೆ ಫೆಬ್ರವರಿ
ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ.
ಆ ದಿನದಂದು ಲಕ್ಷಾಂತರ
ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು
ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.
***
ಒಮ್ಮೆ
ನಾರದ ಮಹರ್ಷಿಗಳು ಭೂಲೋಕವನ್ನೆಲ್ಲಾ ಸುತ್ತಿ ಶಿವರಾತ್ರಿಯಂದು ಕೈಲಾಸಕ್ಕೆ
ದಯಮಾಡಿಸಲು ಪರಮೇಶ್ವರನಲ್ಲಿ ಭೂಲೋಕದಲ್ಲಿ ಜನರು ಮೂಢ ನಂಬಿಕೆಗಳಿಂದ
ತುಂಬಿ ನಿನ್ನ ಮೇಲಿನ ಭಕ್ತಿಯ
ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲಿನ ಜನರಲ್ಲಿ ಢಂಬಾಚಾರ,
ಅಸಹಿಷ್ಣುತೆ ಹೆಚ್ಚಿದೆ. ನೀನೇ ಅವರಿಗೆ ದಾರಿ
ತೋರಿಸಬೇಕು. ನಿನ್ನ ಅಂಶದ ಮಹಾಪುರುಷನನ್ನು
ಭೂಲೋಕಕ್ಕೆ ಕಳುಹಿಸಿಕೊಡಬೇಕೆಂದು ಕೇಳಲು ಪರಮೇಶ್ವರನು ತನ್ನ
ಅಂಶದ ಶಿಶು ಹುಟ್ಟುವುದಕ್ಕಾಗಿ ಭೂಲೋಕದ
ಯಾವ ದಂಪತಿಗಳು ಅರ್ಹರಿದ್ದಾರೆಂದು ಪರೀಕ್ಷಿಸಲು ತೊಡಗಿದನು.
ಅದಾಗ
ಆಂದ್ರ ಪ್ರದೇಶದ ಶ್ರೀಶೈಲದ ಬಳಿಯ
ಪಾತಾಳಗಂಗೆಯಲ್ಲಿನ ಉತ್ತಮಾಪುರದಲ್ಲಿ ವಾಸವಿದ್ದ ದಂಪತಿಗಳು ಅವನ ಕಣ್ಣಿಗೆ ಬಿದ್ದರು.
ಅವರ
ಹೆಸರು ಚಂದ್ರಸೇಕರ ಮೂರ್ತಿ ಹಾಗೂ ಉತ್ತರಾಜಮ್ಮ
ಅವರು ಶರಣರಾಗಿದ್ದುದಲ್ಲದೆ,
ಮಹಾನ್ ಶಿವಭಕ್ತರೂ ಆಗಿದ್ದರು. ಉತ್ತರಾಜಮ್ಮನು ಮಹಾನ್ ಪತಿವ್ರತೆಯಾಗಿದ್ದಳು. ಅವಳ
ಮನೆಯ ಹತ್ತಿರವಿದ್ದ ಕೊಳವೊಂದಕ್ಕೆ ಪ್ರತಿದಿನವೂ ಮನೆಯಲ್ಲಿದ್ದ ನೂರೊಂದು ಶಿವಲಿಂಗಗಳನ್ನು ತೆಗೆದುಕೊಂಡು
ಹೋಗಿ ಅಲ್ಲಿನ ನೀರಿನಿಂದ ಅವುಗಳಿಗೆ
ಅಭಿಷೇಕ ಮಾಡಿಸಿ ಹೂವು, ಪತ್ರೆಗಳಿಂದ
ಪೂಜಿಸುತ್ತಿದ್ದಳು.
ಪ್ರತಿದಿನವೂ
ತಾನು ಶಿವಪೂಜೆ ಮಾಡಿದ ಬಳಿಕ
ಪರಮೇಶ್ವರನನ್ನು ಶ್ರದ್ದೆಯಿಂದ ಬೇಡಿಕೊಳ್ಳುತ್ತಾಳೆ ಉತ್ತರಾಜಮ್ಮ- "ನಾನು ಹೆಣ್ಣಾಗಿ ಹುಟ್ಟಿ,
ಹುಟ್ಟಿದ ಮನೆಗೂ, ಕೊಟ್ತಮನೆಗೂ ಹೆಸರುಳಿಸುವಂತಹಾ
ಒಂದೇ ಒಂದು ಗಂಡು ಮಗುವಿಗೆ
ತಾಯಿಯಾಗುವಂತೆ ಅನುಗ್ರಹಿಸು." ಅವಳ ಕೋರಿಕೆ ಕೈಲಾಸಪತಿಗೂ
ತಲುಪಿತು. ಅವನು ತ್ರಿಮೂರ್ತಿಗಳೂ, ತ್ರಿಶಕ್ತಿಯರೂ
ಒಂದಾಗುವ ಮೂಲಕ ಒಂದು ಪರಂಜ್ಯೋತಿಯ
ಉಗಮಕ್ಕೆ ಕಾರಣನಾದನು. ಆ ಪರಂಜ್ಯೋತಿಯು ಒಂದು
ಕಿರುಜ್ಯೋತಿಯನ್ನು ಸೃಷ್ಟಿಸಿ ಅದನ್ನು ಭೂಲೋಕಕ್ಕೆ ಕಳುಹಿತು.
ಅದೊಂದು
ದಿನ ಉತ್ತರಾಜಮ್ಮ ತಾನು ಶಿವಪೂಜೆಗಾಗಿ ಕೊಳದ
ಬಳಿ ಬಂದಾಗ ಅಲ್ಲೊಂದು ದೇವ
ಶಿಶುವು ಅವಳಿಗೆ ಕಂಡಿತು. ಆ
ಕ್ಷಣದಲ್ಲಿ "ಭಗವಂತಾ ಜಗತ್ತು ನನ್ನನ್ನು
ಬಂಜೆ ಎನ್ನುತ್ತಿದೆ. ನಿನ್ನ ಪರಮ ಭ್ಕ್ತೆಯಾದ
ನನ್ನಲ್ಲಿಯೂ ಇಂತಹಾ ಒಬ್ಬ ಮಗ
ಜನ್ಮಿಸಬಾರದೆ?" ಎಂದುಕೊಂಡು ಉತ್ತರಾಜಮ್ಮ ಶಿವಪೂಜೆಗೆ ಕುಳಿತಳು. ಅಂದು ಆ ಕೊಳದಲ್ಲಿ
ಅರಳಿದ್ದ ಏಕೈಕ ತಾವರೆ ಹೂವನ್ನು
ಕೈಗಳಲ್ಲಿ ಹಿಡಿದಳು. ವಿಶೇಷವೇನೆಂದರೆ ಆ ಹೂವಿನಲ್ಲಿ ಸ್ವಾಮಿಯು
ತಾನು ಅಣು ಸ್ವರೂಪದಲ್ಲಿ ವಿರಮಿಸಿದ್ದನು.
ಅವಳೊಮ್ಮೆ ತನ್ನ ಕೈಯಲ್ಲಿನ ಆ
ಕೆಂದಾವರೆಯನ್ನು ಮೂಸಿದ ಬಳಿಕ ಶಿವಲಿಂಗಕ್ಕೆ
ಸಮರ್ಪಿಸಿದಳು. ಉತ್ತರಾಜಮ್ಮನು ಆ ಹೂವನ್ನು ಹಾಗೆ
ಮೂಸಿದ ಆ ಕ್ಷಣದಲ್ಲಿಯೇ ಆ
ಅಣುಸ್ವರೂಪದ ಸ್ವಾಮಿಯು ಅವಳ ಬಲ ಮೂಗಿನ
ಮೂಲಕ ಅವಳ ಗರ್ಭಾಶಯವನ್ನು ಪ್ರವೇಶಿಸಿದನು.
ಅಲ್ಲಿಂದ ನವಮಾಸಗಳ ಬಳಿಕ ಅವಳು
ತುಂಬು ಗರ್ಭಿಣಿಯಾಗಿದ್ದಾಳೆ. ಆದರೆ ಸ್ವಾಮಿಯು ಮನುಷ್ಯನಲ್ಲಿನ
ನವದ್ವಾರಗಳ ಮೂಲಕ ತಾನು ಪ್ರಾವಿರ್ಭವಿಸಿದ
ಪಕ್ಷದಲ್ಲಿ ನಾನು ಮೈಲಿಗೆಯಾಗಬಹುದು ಎಂದು
ಭಾವಿಸಿ ಅವಳಿಗೆ ಯೋಗನಿದ್ರೆ ಉಂಟಾಗುವಂತೆ
ಮಾಡಿ ಒಂದು ಸೋಮವಾರದಂದು ತಾನು
ಉತ್ತರಾಜಮ್ಮನ ಬೆನ್ನಿನ ಮಜ್ಜೆಯನ್ನು ಸೀಳಿಕೊಂDಡು ಉದ್ಭವಿಸಿದನು!
ಅದಾದ
ಬಳಿಕ ಬೆನ್ನಿನ ಮಜ್ಜೆ ಹಾಗೇ
ಕೂಡಿಕೊಂಡಿದೆ. ಅವಳಿಗೆ ಎಚ್ಚರವಾದಾಗ ಯಾವ
ನೋವುಗಳೂ ಇರಲಿಲ್ಲ. ತಾನು ಹೊಟ್ಟೆಯನ್ನೊಮ್ಮೆ ಮುಟ್ಟಿ
ನೋಡಿಕೊಂಡಳು. ತನ್ನ ಹೊಟ್ಟೆಯಲ್ಲಿದ್ದ ಮಗು
ಏನಾಯಿತೆಂದು ಅತ್ತಿತ್ತ ಹೊರಳಿ ನೋಡಲು ಮಗುವು
ಆನಂದವಾಗಿ ಮಲಗಿರುವುದು ಕಂಡಿತು. ಅದೇ ಕ್ಷಣ
ಆನಂದದಿಂದ ಮಗುವನ್ನೆತ್ತಿಕೊಂಡು ಅಪ್ಪಿ ಮುದ್ದಾಡುತ್ತಾಳೆ. ತನ್ನ
ಪತಿಯನ್ನೂ ಕರೆದು ಹರ್ಷದಿಂದ ಮಗುವನ್ನು
ತೋರಿಸಿದಳು. "ಇನ್ನು ಮುಂದೆ ನಾನು
ಬಂಜೆಯಲ್ಲ." ಎನ್ನುವ ಸಂತೋಷ ಅವಳದ್ದಾಗಿತ್ತು.
ಮಗು ಹುಟ್ಟಿದ ಸಮಯ, ವನ
ಮೈಮೇಲಿನ ರೇಖೆಗಳನ್ನು ಗುರುತಿಸಿ ಇವನು ಜಗದೊದ್ದಾರಕ್ಕಾಗಿ ಅವತರಿಸಿದ
ಮಹಾ ಶಿವಯೋಗಿ ಎಂದು ತೀರ್ಮಾನಿಸಲಾಯಿತು.
ಮಾಯೆಯನ್ನು ಗೆದ್ದು ಹುಟ್ಟಿದುದರಿಂದ "ಮಾದೇಶ"
ಎಂದು ನಾಮಕರಣ ಮಾಡಲಾಯಿತು.
ಸಂತಸ
ಸಂಭ್ರಮದಿಂದ ಮಗುವು ಬೆಳೆದನು. ಮಾದೇಶನಿಗೆ
ಐದು ವರ್ಷವಾದ ಸಮಯದಲ್ಲಿ ಒಂದು
ದಿನ, ಅವನ ಮನೆಯ ಬಳಿಯಲ್ಲಿದ್ದ
ಒಂದು ಗುಹೆಯಲ್ಲಿ ವ್ಯಾಘ್ರಾನಂದ ಮಹಾಸ್ವಾಮಿಗಳೆನ್ನುವ ಯೋಗಿಗಳು ತಪವನ್ನಾಚರಿಸುತ್ತಿರುತ್ತಾರೆ. ಅಂತಹಾ ಶಿವಯೋಗಿಗಳ
ಬಳಿಯಲ್ಲಿ ಮಾದೇಶನನ್ನು ಶಿವತತ್ವಗಳ ಕುರಿತಂತೆ ಪಾಠಕ್ಕಾಗಿ ಬಿಡಲಾಗುತ್ತದೆ. ಮಹಾಮುನಿಗಳು ಮಾದೇಶನನ್ನು ಸರ್ವವಿಧದಲ್ಲಿ ಪರೀಕ್ಷಿಸಿ "ಓಂ ನಮಃ ಶಿವಾಯ"
ಎನ್ನುವ ಪಂಚಾಕ್ಷರಿ ಮಂತ್ರದೊಡನೆ ಪಾಠವನ್ನು ಮೊದಲು ಮಾಡುತ್ತಾರೆ. ಹೀಗೆ
ಶಿಕ್ಷಣ ಪ್ರಾರಂಭಿಸಿ ಸರ್ವ ಶಾಸ್ತ್ರಗಳನ್ನೂ ಶಿಷ್ಯನಿಗೆ
ದಾರೆ ಎರೆದ ವ್ಯಾಘ್ರನಂದ ಮಹಾಮುನಿಗಳನ್ನು
ಮಾದೇಶನು "ನಿಮ್ಮಿಂದ ನಾನು ಸಕಲ ಶಾಸ್ತ್ರಗಳಲ್ಲಿ
ಪಾರಂಗತನಾಗಿದ್ದೇನೆ. ಇನ್ನು ನಿಮ್ಮ ಗುರುದಕ್ಷಿಣೆಯಾಗಿ
ನಾನೇನು ನೀಡಲಿ?" ಎಂದು ಕೇಳಲು ಗುರುವು
"ಅಪ್ಪಾ ಮಾದೇಶ, ನೀನು ಸಕಲ
ವಿದ್ಯಾ ಪಾರಂಗತನಾಗಿದ್ದಿ, ನೀನು ಕೂಪ ಮಂಡೂಕನಂತಾಗದೆ
ಸಕಲ ಶಿವ ಕ್ಷೇತ್ರಗಳನ್ನು ತಿರುಗಿ
ಅಲ್ಲಿನ ಶಿವ ಭಕ್ತರಿಗೆ ಒಳಿತಾಗುವಂತೆ
ನಡೆಯಬೇಕು. ಬೇಡಿದವರಿಗೆ ವರವ ಕರುಣಿಸುವ ಮಾದೇಶ,
ಮಾದಪ್ಪನಾಗಬೇಕು. ಹೀಗೆ ನಿನ್ನನ್ನು ಜನರು
ಯಾವಾಗ ಕೊಂಡಾಡುವರೋ, ಅದು ನನ್ನ ಕಿವಿಗೆಂದು
ಬೀಳುತ್ತದೆಯೋ ಅಂದು ನನ್ನ ಗುರುದಕ್ಷಿಣೆ
ಸಲ್ಲುತ್ತದೆ." ಎಂದರು.
ಅದನ್ನು
ಕೇಳಿ ಗುರುವಿಗೆ ಸಾಷ್ಠಾಂಗವೆರಗಿ ಅವರ ಆಶೀರ್ವಾದವನ್ನು ಬೇಡಲು
ವ್ಯಾಘ್ರಾನಂದ ಗುರುಗಳು ತನ್ನ ಶಿಷ್ಯನಿಗೆ
ಹುಲಿಯೊಂದನ್ನು ಕಾಣಿಕೆಯಾಗಿ ನೀಡಿದ್ದಲ್ಲದೆ "ಈ ಹುಲಿ ನೀನು
ಹೇಳಿದಂತೆ ಕೇಳಿಕೊಂಡಿರುತ್ತದೆ. ನೀನಿದನ್ನು ವಾಹನವಾಗಿ ಬಳಸಿಕೊಂಡು ಲೋಕ ಸಂಚಾರವನ್ನು ಮಾಡು"
ಎಂದು ಅಪ್ಪಣೆಗೊಡಿಸುತ್ತಾರೆ.
ಮಾಯಕಾರ
ಮಾದೇಶನು ತಾನು ಗುರುಗಳಿಂದ ಬೀಳ್ಕೊಂಡು
ತನ್ನ ತಂದೆ ತಾಯಿಯರ ಬಳಿ
ಬಂರುತ್ತಾನೆ. ಅಲ್ಲಿ ತನ್ನವರೊಡನೆ ಸಂತೋಷದಿಂದ
ಕೆಲ ಸಮಯ ತಂಗಿದ ಮಾದಪ್ಪ
ತಂದೆ-ತಾಯಿಯ ಅಪ್ಪಣೆ ಪಡೆದು
ದಕ್ಷಿಣ ದೇಶವಾದ ಕರ್ನಾಟಕಕ್ಕೆ ಆಗಮಿಸುತ್ತಾರೆ.
ಮೊದಲು ಶಿವಮೊಗ್ಗದ ಬಾಳೇಹಳ್ಳಿಗೆ ಬಂದ ಮಾದೇಶನು ಾಲ್ಲಿಂದ
ಮೈಸೂರಿನತ್ತ ಪಯಣ ಬೆಳೆಸಿದನು. ಹಾಗೆ
ಮೈಸೂರಿಗೆ ಬಂದ ಮಾದೇಶನು ಅಲ್ಲಿನ
ಹೆಗ್ಗಡ ದೇವನ ಕೋಟೆಯ ವ್ಯಾದಗುಪ್ಪೆ
ಎನ್ನುವ ದಟ್ಟಾರಣ್ಯದ ನಡುವಿನ ಸಣ್ಣ ಗ್ರಾಮಕ್ಕೆ
ಆಗಮಿಸಿದನು. ಅಲ್ಲಿ ಹಲಗೆರೆ ಗೌಡ
ಹಾಗೂ ನಿಂಗಮ್ಮ ಎನ್ನುವ ದಂಪತಿಗಳಿರುತ್ತಾರೆ.
ಅವರು ದಯಾಪರರಾಗಿದ್ದು ದಾನ ಧರ್ಮಗಳಿಂದ ಹೆಸರಾಗಿರುತ್ತಾರೆ.
ಅವರ ಬಳಿಬಂದ ಮಾದೇಶ ಅಲ್ಲಿ
ತನ್ನ ಲೀಲೆಗಳನ್ನು ತೋರುತ್ತಾನೆ.
ಮಾದೇಶನು
ಆ ದಂಪತಿಗಳು ವಾಸವಾಗಿದ್ದ
ಮನೆಯ ನಡುಮನೆಯಲ್ಲಿ ಒಂದು ಹುತ್ತವು ಬೆಳೆಯುವಂತೆ
ಮಾಡುತ್ತಾನೆ. ಅದರಿಂದ ಭಯಗೊಂಡ ನಿಂಗಮ್ಮ
"ಈ ಹುತ್ತ ನಮ್ಮ ನಡುಮನೆಯಲ್ಲಿ
ಬೆಳೆಯುತ್ತಿರುವುದಲ್ಲ, ಅದು ಕೆಟ್ಟ ಸೂಚನೆಯೋ?
ಒಳ್ಳೆಯದೋ?" ಎಂದು ತನ್ನ ಪತಿಯನ್ನು
ಕೇಳಲು ಅವನು ಹಲವಾರು ಶಾಸ್ತ್ರದವರನ್ನು
ಕರೆಸಿ ಪ್ರಶ್ನಿಸುತ್ತಾರೆ. ಅವರೆಲ್ಲರೂ ನಾನಾ ವಿಧವಾಗಿ ಹೇಳಿದರೂ
ಗೌಡರಿಗೆ ಅದ್ಯಾವುದೂ ಮನಸ್ಸಿಗೆ ಬರುವುದಿಲ್ಲ. ಅದಾಗ ಮಾಯಕಾರ ಮಾದೇಶನೇ
ಕೊಲು ಮಂಡೆ ಜಂಗಮನ ವೇಷದಲ್ಲಿ
ಅಲ್ಲಿಗೆ ದಯಮಾಡಿಸುತ್ತಾನೆ.
ಅವನನ್ನು
ಸಕಲ ಪರಿಯಲ್ಲಿ ಉಪಚರಿಸಿ ಶಾಸ್ತ್ರ ಕೇಳಲಾಗಿ
ಮಾದೇಶನು "ಅಯ್ಯಾ, ಈ ಮನೆಯಲ್ಲಿನ
ಹುತ್ತದೊಳಗೆ ಒಂದು ಶಿವಲಿಂಗವಿದೆ. ಅದಕ್ಕೆ
"ಮಾದೇಶ್ವರ" ಎನ್ನುವ ಹೆಸರಿದೆ. ಮುಂದಿನ ಒಂದು ಸೋಮವಾರ
ನೀವೆಲ್ಲಾ ಸೇರಿ ಈ ಹುತ್ತಕ್ಕಝಾಲನ್ನೆರೆದಿರಾದರೆ
ಹುತ್ತ ಕರಗಿ ಲಿಂಗವು ಗೋಚರವಾಗಲಿದೆ.
ಆ ಮಾದೇಶ್ವರನನ್ನು ಪೂಜಿಸುತ್ತಾ
ಸುತ್ತಲಿನವರೂ, ನಿಮ್ಮ ಬುಡದವರೂ ಅವನ
ಒಕ್ಕಲಾಗಿ, ಈ ನಿಮ್ಮ ಮನೆಯನ್ನು
ಅವನ ಮಠಮನೆಯನ್ನಾಗಿಸಿ ಕೊಟ್ಟಿರಾದರೆ ನೀವೇನು ಈಗ ಅನುಭವಿಸುತ್ತಿರುವ
ಸಿರಿತನವು ಒಂದಕ್ಕೆ ನಾಲ್ಕರಷ್ಟಾಗಲಿದೆ. ನಿಮಗೆ
ಸಕಲ ಸೌಭಾಗ್ಯವು ಒದಗಲಿದೆ ಎಂದು ಅಭಯ
ನೀಡುತ್ತಾನೆ. ಆದರೆ ಗೌಡರ ಪತ್ನಿ
ನಿಂಗಮ್ಮನು "ಇದು ನಮ್ಮ ವಂಶಜರು
ಪುರಾತನ ಕಾಲದಿಂದ ಬಾಳಿ ಬದುಕಿದ
ಮನೆ. ನಾವು ಬೇಕಾದರೆ ಹೊಸ
ಮನೆ ಕಟ್ಟಿ ಕೊಡುತ್ತೇವೆ, ಸ್ವಾಮಿಯು
ಅಲ್ಲಿ ನೆಲೆಸಲಿ. ಈ ಮನೆಯನ್ನು ನಮಗೆ
ಬಿಟ್ಟು ಕೊದಲಿ." ಎನ್ನಲಿಕ್ಕೂ, ಮಾದೇಶನು "ತಾಯಿ, ಮಾದೇಶ್ವರನ ಎಣಿಕೆಯಂತೆ
ಎಲ್ಲವೂ ಆಗಬೇಕೆ ವಿನಃ ನಿಮ್ಮ
ಎಣಿಕೆಯಂತಲ್ಲ. ನಾನು ಬಂದ ಕಾರ್ಯ ಮುಗಿದಿದೆ.
" ಎಂದು ಹಿಂತಿರುಗುತ್ತಾನೆ. ಹಾಗೆ ಹಿಂದಿರುಗುವಾಗ ತನ್ನ
ಮಾಯಾ ಶಕ್ತಿಯಿಂದ ಎಪ್ಪತ್ತೇಳು ಹುಲಿಗಳನ್ನು ಸೃಷ್ಟಿಸಿ ಸುತ್ತಲ ಹಳ್ಳಿಗಳತ್ತ ಬಿಡುತ್ತಾನೆ.
ಆ ಹಳ್ಳಿಗಳ ಜನರು
ಹುಲಿಗಳ ಉಪಟಳ ತಾಳದೆ ಗೌಡರ
ಬಳಿ ದೂರಿತ್ತಿರುವಾಗ ಗೌಡರು ತಾನು ಮಾದೇಶನಿಗೆ
ಹರಕೆ ಕಟ್ಟಿಕೊಳ್ಳುತ್ತಾರೆ.
"ನೀನು ನಮ್ಮನ್ನು
ಈ ಹುಲಿಗಳ ಉಪತಳದಿಂದ
ಪಾರು ಮಾಡಿದ್ದಾದರೆ ನಾವುಗಳು ನಿಮ್ಮ ಒಕ್ಕಲಾಗಿದ್ದು
ಮಾದೇಶ್ವರ ಸ್ವಾಮಿಯ ಪೂಜೆ, ಜಾತ್ರಾದಿಗಳನ್ನು
ನೆರವೇರಿಸಿಕೊಳ್ಳುತ್ತಾ ಬರುತ್ತೇವೆ." ಅದಾಗ ಮಾದೇಶನು ಆ
ಎಪ್ಪತ್ತೇಳು ಹುಲಿಗಳನ್ನು ಸುತ್ತಲಿನ ಎಪ್ಪತ್ತೇಳು ಮಲೆಗಳಿಗೆ ಅಟ್ಟುತ್ತಾನೆ. ಆಗ ಹಲಗೆ ಗೌಡರು
ತಾವು ಹತ್ತೂರ ಪ್ರಮುಖರಿಗೆ ಹೇಳಿ
ಹಾಲನ್ನು ತರಿಸಿ ಒಂದು ದಿವ್ಯವಾದ
ಸೋಮವಾರ ಹುತ್ತಕ್ಕೆ ಹಾಲೆರೆಯುತ್ತಾರೆ. ಹಾಗೆ ಮಾಡಲಾಗಿ ಹುತ್ತ
ಕರಗಿ ಸ್ವಾಮಿಯು ಲಿಂಗ ಸ್ವರೂಪನಾಗಿ ಕಾಣಿಸಿಕೊಳ್ಳುತ್ತಾನೆ.
ಅಲ್ಲಿಂದ ನಿತ್ಯವೂ ಹಲಗೆ ಗೌಡರ
ಮನೆಯಲ್ಲಿ ಶಿವಪೂಜೆ, ಮಹಾ ಪೂಜೆಗಳು ನಡೆಯತೊಡಗುತ್ತವೆ. ದಿನನಿತ್ಯವೂ
ಸುತ್ತಲ ಊರುಗಳಿಂದ ಜನರು ಬಂದು ಜಾತ್ರೆಯ
ಸಂಭ್ರಮ ಮನೆಯಲ್ಲಿ ಮೂಡುತ್ತದೆ.