ಕಾಂಚೀಪುರ (Kanchipuram)
ಭಾಗ - 2
ಕಂಚಿ, ಕಾಂಚೀಪುರ - ತಮಿಳುನಾಡಿನಲ್ಲಿರುವ ಭಾರತದ ಅತ್ಯಂತ ಪ್ರಾಚೀನ
ನಗರಗಳಲ್ಲಿ ಒಂದು. ದೇವಾಲಯಗಳ ನಗರಿ,
ಪ್ರಾಚೀನ ಶಿಕ್ಷಣ ಕೇಂದ್ರ, ರೇಷ್ಮೆ
ಉತ್ಪಾದನೆ, ಪಲ್ಲವರ ರಾಜಧಾನಿ ಇಹೀಗೆ
ನಾನಾ ಕಾರಣಗಳಿಂಡ ಹೆಸರಾಗಿರುವ ಈ ಪಟ್ಟಣದ ಸೊಗಸೇ
ಅವರ್ಣನೀಯವಾದದ್ದು.
ಚೆನ್ನೈನಿಂದ
ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್
ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ
ದೂರದಲ್ಲಿರುವ ನಗರಿ ಪ್ರಾಚೀನ
ಕಾಲದಿಂದಲೂ ಅನೇಕ ಸಂತರು, ಭಕ್ತರು,
ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ
ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ. ಅರ್ಥಶಾಸ್ತ್ರ
ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ
ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳ ಜನ್ಮಸ್ಥಳ ಇದೇ ಕಾಂಚೀಪುರ.
ಶ್ರೀ ಏಕಾಮ್ರನಾಥ ಸ್ವಾಮಿ |
ಶಿವಕಂಚಿ,
ವಿಷ್ಣುಕಂಚಿ ಎಂದು ನಗರದಲ್ಲಿ ಎರಡು
ಭಾಗಗಳಿದ್ದು ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿದೆ. ವಿಷ್ಣುಕಂಚಿಯಲ್ಲಿ
ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ
ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ
ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ.
ಕಾಂಚೀಪುರ
ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ
ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ
8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ.
***
ಏಕಾಮ್ರನಾಥ ದೇವಾಲಯದ ಹಿಂಭಾಗದಲ್ಲಿರುವ 3500 ವರ್ಷ ಹಳೆಯ ಪವಿತ್ರ ಏಕಾಮ್ರ(ಮಾವಿನ ಮರ) |
ಏಕಾಂಬರೇಶ್ವರ
ಅಥವಾ ಏಕಾಮ್ರನಾಥ ದೇವಾಲಯ ಕಾಂಚೀಪುರದ ಅತಿ
ದೊಡ್ಡ ದೇವಾಲಯ. ಇದರ ಹಿಂಭಾಗದಲ್ಲಿರುವ
ಮಾವಿನ ಮರವು ಪವಿತ್ರ ಮಾವಿನ
ಮರವಾಗಿದೆ. ಇದು 3500 ವರ್ಷಗಳ
ಪ್ರಾಚೀನತೆಯನ್ನು ಹೊಂದಿದೆ ಎನ್ನಲಾಗಿದ್ದು ಇದರ
ನಾಲ್ಕು ಗೆಲ್ಲುಗಳು ನಾಲ್ಕು ವೇದಗಳ ಸಂಕೇತ
ಎನ್ನಲಾಗುತ್ತದೆ. ಈ ನಾಲ್ಕೂ ಗೆಲ್ಲುಗಳಲ್ಲಿ
ಬಿಡುವ ಎಲೆ, ಹಣ್ಣುಗಳು ವಿಭಿನ್ನ
ರುಚಿ ಹೊಂದಿದೆ ಎನ್ನುವುದು ಇನ್ನೊಂದು
ವಿಸ್ಮಯಕಾರಿ ಸಂಗತಿ.
***
ಒಮ್ಮೆ ಪಾರ್ವತಿ ದೇವಿಯು ಕುಚೋದ್ಯಕ್ಕೆನ್ನುವಂತೆ
ಶಿವನ ಹಿಂದಿನಿಂದ ಆಗಮಿಸಿ ಅವನ ಎರಡೂ
ಕಣ್ಣುಗಳನ್ನು ಮುಚ್ಚುತ್ತಾಳೆ. ಹಾಗೆ ಶಿವನ ಕಣ್ಣನ್ನು
ಮುಚ್ಚಿದಾಗ ದೊಡ್ಡ ಅನಾಹುತವೇ ಸಂಭವಿಸುತ್ತದೆ.
ಸೂರ್ಯ, ಚಂದ್ರ ಅಗ್ನಿಗಳನ್ನೇ ಕಣ್ಣಾಗಿ
ಉಳ್ಳ ಪರಮೇಶ್ವರನ ಕಣ್ಣು ಮುಚ್ಚಲು ಲೋಕವೆಲ್ಲಾ
ಅಂಧಕಾರದಲ್ಲಿ ಮುಳುಗಿತು.
ಶ್ರೀ ಏಕಾಮ್ರನಾಥ ಸ್ವಾಮಿ ಮತ್ತು ಶ್ರೀ ಕಾಮಾಕ್ಷಿ ಅಂಬಾಳ್ |
ಏಕಾಮ್ರನಾಥ ದೇವಾಲಯ ಪುಷ್ಕರಿಣಿ |
ಆಗ ಲೋಕವನ್ನೆಲ್ಲಾ ತಾಮಸ ಶಕ್ತಿಗಳು ಆವರಿಸಿಕೊಂಡವು.
ಮಾನವರ ಪಾಪಗಳೆಲ್ಲಾ ಕರಿನೆರಳಾಗಿ ಪಾರ್ವತಿಯನ್ನು ಸುತ್ತಿಕೊಂಡವು. ಬಿಳುಪಾದ ಆಕೆಯ ಮೈಬಣ್ಣವು
ಗಾಢ ಕರಿವರ್ಣಕ್ಕೆ ತಿರುಗಲ್ಪಟ್ಟಿತು. ಒಂದೇ ಒಂದು ಕ್ಷಣದಲ್ಲಿ
ಆಕೆ ಅಂಧಕಾರದ ಸ್ವರೂಪಳಾಗಿ ಮಾರ್ಪಟ್ಟಳು.
"ಶಿವ
ಶಿವಾ! ಇದೇನು ಹೀಗಾಗುತ್ತಿದೆ? ನನ್ನ
ಮೈ ಬಣ್ಣವೇಕೆ ಕಪ್ಪಗಾಗಿದೆ?" ಪಾರ್ವತಿ ಪರಮೇಶ್ವರನನ್ನು ಕೇಳುವಳು.
"ದೇವಿ,
ಇದು ಬಣ್ಣವಲ್ಲ, ಜೀವರಾಶಿಗಳ ಪಾಪಸಾಗರ." ಪರಮೇಶ್ವರ ಉತ್ತರಿಸಿದ್ದ.
ಏಕಾಮ್ರನಾಥ ದೇವಾಲಯದಮುಖ್ಯ ಗೋಪುರಗಳಲ್ಲಿ ಒಂದು |
ಪಾರ್ವತಿ
ಈ ಕರಿಯ ಪಾಪಕೂಪಗಳಿಂದ
ದಹಿಸತೊಡಗಿದ್ದಳು. ಇದರಿಂದ ಪಾರುಮಾಡುವಂತೆ ತನ್ನ
ಪತಿಯನ್ನು ಕೇಳಿದಳು. "ಪ್ರಿಯೆ,
ಇದು ಲೋಕಕಲ್ಯಾಣಾರ್ಥವಾಗಿ ಸಂಭವಿಸಿದೆ. ನೀನೀಗ ಬಬದರಿನಾಥಕ್ಕೆ ತೆರಳಬೇಕು.
ಅಲ್ಲಿ ನೀನು ಮಗುವಿನ ರೂಪದಲ್ಲಿ
ಕಾಣಿಸಿಕೊಳ್ಳಬೇಕು. ಆ ಕ್ಷೇತ್ರದಲ್ಲಿರುವ ಕಾತ್ಯಾಯನ
ಮುನಿಯು ನಿನ್ನನ್ನು ಒಯ್ದು ಸಲಹುತ್ತಾರೆ. ನೀನು
ಯಾರೆನ್ನುವುದನ್ನು ಆತ ಯೋಗಜ್ನಾನದಿಂಡ ಅರಿತಾಗ
ನಿನಗೆ ಯೋಗದಂಡ, ಕಮಂಡಲ, ರುದ್ರಾಕ್ಷಿ,
ಪಾತ್ರೆಗೆಳು, ಕೊಡೆ, ಚಾಮರ, ಹುರಿದ
ಬೀಜಗಳು ಇದೇ ಮೊದಲಾದ ತಪಸ್ಸಿಗೆ
ಅನುಕೂಲವಾಗುವ ಸಾಧನಗಳನ್ನು ನೀಡುವನು.
ಏಕಾಮ್ರನಾಥ ದೇವಾಲಯ |
"ಅವುಗಳನ್ನು
ತೆಗೆದುಕೊಂಡ ನೀನು ಕಾಶಿಗೆ ತೆರಳಬೇಕು.
ಅಲ್ಲಿ ಕ್ಷಾಮದಿಂದ ಜನರು ಹಾಹಾಕಾರ ಪಡುತ್ತಿರುವರು.ಅವರ ಕಷ್ಟಗಳನ್ನು ನೀನು
ಪರಿಹರಿಸಲು ಬೇಕು. ಅದಕ್ಕಾಗಿ ಕಾಶಿಯಲ್ಲಿ
ನೀನು ಅನ್ನಪೂರ್ಣೆಯಾಗಿ ಹನ್ನೆರಡು ವರ್ಷಗಳ ಕಾಲ ನೆಲೆಸಬೇಕು.
"ಬಳಿಕ
ಮತ್ತೆ ದಕ್ಷಿಣಕ್ಕೆ ತೆರಳಬೇಕು. ದಕ್ಷಿಣ ದಿಕ್ಕಿಗಿರುವ ಒಂದು
ಸ್ಥಳದಲ್ಲಿ ಮುನಿಯು ನಿನಗೆ ಕೊಟ್ಟ
ತಪಓ ಪರಿಕರಗಳು ಅಚ್ಚರಿ ಎನ್ನುವಂತೆ ಬದಲಾಗುತ್ತದೆ.
ರುದ್ರಾಕ್ಷಿ ಮಾಲೆಯು ಬಿಲ್ವ ಮಾಲೆಯಾಗಿ,
ಕೊಡೆಯು ನಾಗಭೂಷಣವಾಗಿ, ಯೋಗದಂಡವು ತ್ರಿಶೂಲವಾಗಿ, ಕಮಂಡಲುವಿನ ಜಲವು ಹಾಲಾಗಿ, ಬೀಸಣಿಗೆಯು
ಗಿಳಿಯಾಗುತ್ತದೆ. ಚಾಮರವು ಷೋಡಶ ಕನ್ಯೆಯರಾಗುತ್ತಾರೆ.
ಹುರಿದ ಬೀಜಗಳು ಮೊಳಕೆಯೊಡೆಯುತ್ತದೆ. ಅದುವೇ
ಕಂಚಿ ಕ್ಷೇತ್ರ.
ಏಕಾಮ್ರನಾಥ ದೇವಾಲಯದ ಆವರಣ |
"ಅಲ್ಲಿ
ಒಂದು ಮಾವಿನ ಮರದ ಕೆಳಗೆ
ಉದ್ಭವ ಲಿಂಗವು ಕಾಣುವುದು. ಅದು
ನನ್ನದೇ ಸ್ವರೂಪ. ನೀನು ಅದನ್ನು
ಹಾಲಿನಿಂದ ತೊಳೆದು ನಾಗಭೂಷಣದಿಂದ ಅಲಂಕರಿಸಿ,
ಬಿಲ್ವದ ಮಾಲೆ ಹಾಕಿ ಪೂಜಿಸು.
ಷೋಡಶ ಕನ್ಯೆಯರನ್ನು ಲಿಂಗದ ಸೇವೆಗಾಗಿ ನಿಲ್ಲಿಸಿ
ಕೈಯಲ್ಲಿ ಗಿಳಿಯನ್ನು ಹಿಡಿದು ಪಂಚಾಗ್ನಿ ವೇದಿಕೆಯ
ಮೇಲೆ ನಿಂತು ತಪಸ್ಸು ಮಾಡಬೇಕು.
ಅಲ್ಲಿ ನಾವು ಇನ್ನೊಮ್ಮೆ ಸಮಾಗಮ
ಹೊಂದುವೆವು. ಆಗ ನಿನಗೆ ಆವರಿಸಿದ
ಕರಿಛಾಯೆಯು ಮಾಯವಾಗುವುದು, ಬಂಗಾರದ ವರ್ಣ ಮೂಡಿ
ಬರುವುದು" ಪರಮೇಶ್ವರ ವಿವರಿಸಿದನು.
ಏಕಾಮ್ರನಾಥ ದೇವಾಲಯದ ಹೊರಸುತ್ತಿನಲ್ಲಿರುವ ವಿವಿಧ ಗಾತ್ರದ ಲಿಂಗಗಳು (ಇಲ್ಲಿ ಒಟ್ಟು 1008 ಲಿಂಗಗಳಿವೆ) |
ಪಾರ್ವತಿಯು
ಅಂತೆಯೇ ಮಾಡಿದಳು. ತಾನು ಕಾತ್ಯಾಯಿನೀ ಸ್ವರೂಪ
ಧರಿಸಿ ಕಾಶಿಗೆ ಬಂದು ಅಲ್ಲಿ
ಅನ್ನಪೂರ್ಣೆಯಾಗಿ ಅಲ್ಲಿಂದ ದಕ್ಷಿಣಕ್ಕೆ ಬಂದು
ಶಿವನು ಸೂಚಿಸಿದ ಆ ಉದ್ಭವ
ಲಿಂಗಕ್ಕೆ ಪೂಜೆ ಸಲ್ಲಿಸಿ ತಪೋನಿರತಳಾದಳು.
ಆದರೆ ಆಕೆ ಎಷ್ಟು ಕಾಲ
ತಪಸ್ಸು ಮಾಡಿದರೂ ಶಿವ ಪ್ರತ್ಯಕ್ಷನಾಗಲಿಲ್ಲ.
ಅದಾಗ ಒಮ್ಮೆ ಅಲ್ಲಿಗೆ ಬಂದ
ನಾರದರು ಕಾತ್ಯಾಯಿನಿಗೆ 'ಪಂಚಪಾನ ಮಂತ್ರ' ವನ್ನು
ಉಪದೇಶಿಸಿದರು. ಈ ಮಂತ್ರೆ ಬಲದಿಂದ ಶಿವನಲ್ಲಿ ಕಾಮೋದ್ದೀಪನವಾಯಿತು. ಕಾಮನ ಉರಿ ತಾಳಲಾಗದೆ
ಪರಮೇಶ್ವರ ಗಂಗೆಯನ್ನು ದಕ್ಷಿಣಕ್ಕೆ ಕಳಿಸಿದ. ಗಂಗೆ ಎಲ್ಲವನ್ನೂ
ಮುಳುಗಿಸುತ್ತಾ ಸಾಗಿದ್ದಳು. ಆದರೆ ಪಾರ್ವತಿಯು ಕಾಳಿ
ಸ್ವರೂಪವನ್ನು ತಾಳಿ ಗಂಗೆಯನ್ನು ತನ್ನ
ಕಪಾಲದಲ್ಲಿ ತುಂಬಿಸಿಕೊಂಡಳು.
ಏಕಾಮ್ರನಾಥ ದೇವಾಲಯ |
ಆಗ ಶಿವನು ತಾನು ಪ್ರಳಯರುದ್ರನಾಗಿ
ಅವಳ ಮೇಲೆ ನುಗ್ಗಿದನು. ಆದರೆ
ಕಾತ್ಯಾಯಿನಿಯು ಪ್ರಳಯದಲ್ಲಿ ತಾನು ಪೂಜಿಸುತ್ತಿದ್ದ ಲಿಂಗವು
ಮುಳುಗಬಾರದೆನ್ನುವ ಕಾರಣಕ್ಕೆ ಅದನ್ನು ಎತ್ತಿ ತನ್ನ
ಎದೆ ಭಾಗದಲ್ಲಿರಿಸಿಕೊಂಡಳು.
ಪರಮೇಶ್ವರನನ್ನು
ದಹಿಸುತ್ತಿದ್ದ ಕಾಮಾಗ್ನಿಯು ಕಾತ್ಯಾಯಿನಿಯ ಸಂಗಮದಿಂದ ಶಾಂತಗೊಂಡಿತು. ಆ ಕ್ಷಣವೇ ಕಾತ್ಯಾಯಿನಿ
ಸ್ವರೂಪದ ಪಾರ್ವತಿಗೆ ಆವರಿಸಿದ್ದ ಕರಿಛಾಯೆ ತೊಲಗಿ ಹೋಯಿತು.
ಶಿವನು ತನ್ನ ನಿಜ ಸ್ವರೂಪದಲ್ಲಿ
ಕಾತ್ಯಾಯಿನೀ ಸ್ವರೂಪದ ಪಾರ್ವತಿಗೆ ಕಾಣಿಸಿದ.
ದೇವಾನುದೇವತೆಗಳು ಈ ಸಂದರ್ಭದಲ್ಲಿ ಹರ್ಷಚಿತ್ತರಾಗಿ
ಹೂಮಳೆಗೆರೆದರು. ಅವರು ಕಾಂಚೀಪುರದಲ್ಲಿ ಶಿವ
ಪಾರ್ವತಿಯರ ಕಲ್ಯಾಣ ಮಹೋತ್ಸವ ನೆರವೇರಿಸಲು
ಉದ್ಯುಕ್ತರಾದರು.
ಹಾಗೆ ಶಿವ ಪಾರ್ವತಿಯರ ಕಲ್ಯಾಣವು
ಒಂಭತ್ತು ದಿನಗಳ ಕಾಲ ನಡೆಯಿತು.
ಹತ್ತನೇ ದಿನಕ್ಕೆ ಶಿವನು ಏಕಾಮ್ರನಾಥ*ನ ಸ್ವರೂಪದಲ್ಲಿಯೂ, ಪಾರ್ವತಿಯು
ಕಾಮಾಕ್ಷಿ ಸ್ವರೂಪದಲ್ಲಿಯೂ ವೇದಿಕೆ ಮೇಲೆ ಕುಳಿತರು.
ಬ್ರಹ್ಮ,
ಮಹಾವಿಷ್ಣು, ಲಕ್ಷ್ಮಿದೇವಿಯರು ಈ ವಿವಾಹದ ಮುಖ್ಯ
ಆದ್ವರ್ಯರಾಗಿದ್ದರು. ಹೀಗೆ ದೇವಾನು ದೇವತೆಗಳ
ಸಮ್ಮುಖದಲ್ಲಿ ಏಕಾಮ್ರನಾಥನು ಕಾಮಾಕ್ಷಿಯ ಕೊರಳಿಗೆ ಮಾಂಗಲ್ಯ ಧಾರಣೆ
ಮಾಡಿದ್ದನು. ಶ್ರೀ ಕಾಮಾಕ್ಷೀ-ಏಕಾಮ್ರನಾಥರ
ವಿವಾಹ ಸಂಪನ್ನವಾಯಿತು.
ಏಕಾಮ್ರನಾಥ ದೇವಾಲಯ ಭವ್ಯ ನೋಟ |
*ಏಕಾಮ್ರ
- ಏಕ ಎಂದರೆ ಒಂದು, ಆಮ್ರ
ಎಂದರೆ ಮಾವಿನ ಮರ. ಏಕಾಮ್ರ
ಎಂದರೆ ಒಂದು ಮಾವಿನ ಮರ.
ಪಾರ್ವತಿಯು ಶಿವಲಿಂಗವನ್ನು ಪೂಜಿಸಿ ತಪೋನಿರತಳಾಗಿದ್ದ ಮಾವಿನ
ಮರವನ್ನು ಇದು ಸೂಚಿಸುವುದು.