ಅಗಸ್ತ್ಯ ವಿಂದ್ಯ ಪ್ರರ್ವತವನ್ನು ಅಗಾಧ ಎತ್ತರಕ್ಕೆ ಬೆಳೆಯುವುದನ್ನು ತಡೆದನು ಎನ್ನುವ ಕಥೆ ಪುರಾಣದಲ್ಲಿದೆ.
ಕಥೆಯಲ್ಲಿ
ಹೇಳುವಂತೆ ನಾರದ ಮಹರ್ಷಿ ಒಮ್ಮೆ ವಿಂದ್ಯನ ಬಳಿ ಬಂದು "ನಿನ್ನ ಮೇಲಿಂದ ಸೂರ್ಯೋದಯ ಕಾಣುವಷ್ಟು ಸುಂದರ ಬೇರೆಲ್ಲಿಯೂ ಇಲ್ಲ ಹಾಗಾದರೂ ನಿನ್ನನ್ನು ಜಗತ್ತಿನ ಶ್ರೇಷ್ಠ ಪರ್ವತ ಎನ್ನಲು ಸಾಧ್ಯವಿಲ್ಲ" ಎನ್ನುತ್ತಾನೆ. ಆಗ ವಿಂದ್ಯ "ಹಾ!
ಯಾಕೆ?" ಎಂದು ಕೇಳಲು ನಾರದ ಉದ್ದೇಶಪೂರ್ವಕವಾಗಿ ವಿಂದ್ಯನನ್ನು ಸೂರ್ಯನನ್ನು ಈ ಪ್ರಶ್ನೆಗೆ ಉತ್ತರಿಸಲು
ಕೇಳೆಂದು ಹೇಳಿ ಹೊರಡುತ್ತಾನೆ. ಸೂರ್ಯನನ್ನು ಕೇಳಲಾಗಿ ಸೂರ್ಯನು "ಬ್ರಹ್ಮನ ವಾಸಸ್ಥಾನ ಮೇರು ಪರ್ವತ ಎತ್ತರವಾಗಿದೆ. ಮತ್ತು ಸೃಷ್ಟಿಕರ್ತನ ವಾಸಸ್ಥಳವಾಗಿರುವ ಅದುವೇ ಶ್ರೇಷ್ಠ" ಎಂದು ಉತ್ತರಿಸುತ್ತಾನೆ. ಆಗ ವಿಂದ್ಯಗೆ ಅಹಂಕಾರ
ತಲೆ ಎತ್ತಿ ತಾನೂ ಅಷ್ಟು ಎತ್ತರವಾಗಬೇಕೆಂದು ಬೆಳೆಯತೊಡಗಿದ್ದನು. ಅದರಿಂದ ಭೂ ಅಸಮತೋಲನವಾಗಲು ಇಂದ್ರನು
ವಿಂದ್ಯನ ಗುರುವೂ, ವಿಂದ್ಯದ ಸಮೀಪವೇ ವಾಸವಿದ್ದವನೂ ಆದ ಅಗಸ್ತ್ಯನ ಸಹಾಯ
ಯಾಚಿಸುತ್ತಾನೆ. ಅಗಸ್ತ್ಯ ಆ
ಕೂಡಲೇ ಒಂದು ಉಪಾಯ ಹೂಡಿ ತಾನು ಆಶ್ರಮದಿಂದ ಪರಿವಾರ ಸಮೇತ ಬೇರೆಡೆಗೆ ಪ್ರಯಾಣಿಸಲು ಮುಂದಾಗುತ್ತಾನೆ. ಹಾಗೆ ಮಾಡುವ ಸಮಯದಲ್ಲಿ ಮಾರ್ಗದ ನಡುವೆ ವಿಂದ್ಯ ಎದುರಾಗುತ್ತದೆ. ಅದರ ಅಗಾಧತೆಯಿಂದ ಅಗಸ್ತ್ಯನಾಗಲಿ, ಅವನ ಕುಟುಂಬ ಪರಿವಾರವಾಗಲಿ ಅದನ್ನು ದಾಟಲಾಗುವುದಿಲ್ಲ. ಆಗ ಅಗಸ್ತ್ಯ ಕೋಪಗೊಂಡು
ವಿಂದ್ಯನನ್ನು ಶಪಿಸಲು ಮುಂದಾಗುತ್ತಾನೆ. ಆಗ ವಿಂದ್ಯ ತನ್ನ
ಗುರುವಾಗಿದ್ದ ಅಗಸ್ತ್ಯನಿಗೆ ತಲೆಬಾಗಿ ಅವನು ಮುಂದುವರಿಯಲು ಮಾರ್ಗ ಮಾಡಿಕೊಡುತ್ತದೆ, ಹಾಗೆಯೇ ತಾನು ಬೆಳೆಯುವುದನ್ನು ನಿಲ್ಲಿಸುತ್ತದೆ!
ಬಿಹಾರದಲ್ಲಿರುವ 12 ನೇ ಶತಮಾನಕ್ಕೆ ಸೇರಿದ ಅಗಸ್ತ್ಯನ ಪ್ರತಿಮೆ |
ಈ
ಮೇಲಿನ ಕಥೆಯಲ್ಲಿನ ಸತ್ಯಾಂಶವೆಂದರೆ ಅಗಸ್ತ್ಯ ‘ಭೂ
ಮಾರ್ಗ’ದ
ಮೂಲಕ ಮೊಟ್ಟ ಮೊದಲ ಬಾರಿಗೆ ವಿಂಧ್ಯ ಪರ್ವತ ದಾಟಿದ್ದನು!! ಎಂದರೆ ಅದುವರೆಗೂ ನಮ್ಮ ಪೂರ್ವದೇಹಿಗಳು ಉತ್ತರದಿಂದ ದಕ್ಷಿಣಕ್ಕೂ, ದಕ್ಷಿಣದಿಂದ ಉತ್ತರಕ್ಕೂ ಪ್ರಯಾಣಿಸಲು ಹೆಚ್ಚಾಗಿ ಸಮುದ್ರ ಮಾರ್ಗಗಳನ್ನು ಬಳಸುತ್ತಿದ್ದರು!! ಆದರೆ ಅಗಸ್ತ್ಯ ಇದೇ ಮೊದಲ ಬಾರಿ ಒಟ್ಟೂ 18 ಬೇರೆ
ಬೇರೆ ಸಮುದಾಯದ ಗುಂಪುಗಳೊಡನೆ ದಕ್ಷಿಣಕ್ಕೆ ಆಗಮಿಸಿದ್ದನು. ಹಾಗೆ ದಕ್ಷಿಣಕ್ಕೆ ಆಗಮಿಸಿದ ಅಗಸ್ತ್ಯನು ಇಂದಿನ ತಮಿಳುನಾಡಿನ ಭಾಗಗಳಲ್ಲಿ ನೆಲೆಲ್ಸಿ ಅಲ್ಲಿ ತಮಿಳು ಭಾಷೆಗೆ ಪ್ರಾಥಮಿಕ ವ್ಯಾಕರಣ ರಚಿಸಿದ್ದನು ಹಾಗೂ ಶೈವ, ಸಂಗಂ ಸಾಹಿತ್ಯದ ಬೆಳವಣಿಗೆಗೆ ಕಾರಣಕರ್ತನಾದನು
ಇದೇನನ್ನು
ಸೂಚಿಸುತ್ತದೆಂದರೆ ಉತ್ತರ ಭಾರತ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿದ್ದ ಪರಿನಾಮ ಕೆಲವಷ್ಟು ಜನರ ಗುಂಪಿನೊಂದಿಗೆ ಅಗಸ್ತ್ಯ ದಕ್ಷಿಣಕ್ಕೆ ಆಗಮಿಸಿ ನೆಲೆಸಿದ. ಇದರ ಕಾರಣದಿಂದ ಭೂಮಿಯ ಮೇಲಿನ ಸಮತೋಲನ ತಪ್ಪುವ ಪ್ರಸಂಗ ಇಲ್ಲವಾಗಿತ್ತು.
ಇದಕ್ಕೆ
ನಿದರ್ಶನವಾಗಿ ಇನ್ನೊಂದು ಕಥೆಯೂ ಇದೆ. ಅದೊಮ್ಮೆ ಕೈಲಾಸದಲ್ಲಿ ಶಿವ-ಪಾರ್ವತಿಯರ ವಿವಾಹ ಕಾರ್ಯಕ್ರಮ ನಡೆಯುವುದಿದ್ದಾಗ ಪವಿತ್ರ ವಿವಾಹವನ್ನು ನೋಡಲು ದೊಡ್ಡ ಮಟ್ಟದ ಜನಸಮೂಹವೇ ಅಲ್ಲಿ ನೆರೆದಿತ್ತು! ಆ ಸಮಯದಲ್ಲಿ
ಹಿಮಾಲಯದಲ್ಲಿ ಜಮಾಯಿದ್ದ ಅಷ್ಟು ದೊಡ್ಡ ಜನಸಮೂಹದ ಕಾರಣ ‘ಭೂಮಿಯ’ ಸಮತೋಲನವನ್ನು
ತಪ್ಪುವಂತೆ ಮಾಡಿತ್ತು. ಆಗ ಭೂದೇವಿಯು ಶಿವನಿಗೆ
ಈ ಸಂಬಂಧ ತನ್ನ ಮನವಿ ಸಲ್ಲಿಸಿದ್ದಳು. ಆಗ ಶಿವನು ಮಹಾನ್
ಋಷಿ ಅಗಸ್ತ್ಯನನ್ನು ಕರೆದು ದಕ್ಷಿಣಕ್ಕೆ ಹೋಗುವಂತೆ ಕೇಳಿಕೊಂಡನು. ಆಗ ಅಗಸ್ತ್ಯತಾನು ಈ
ಸುಂದರ ವಿವಾಹದ ಕ್ಷಣವನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಆಕ್ಷೇಪಿಸಿದಾಗ "ನೀನೇನೂ ಚಿಂತಿಸಬೇಡ. ನಾನು ನಿನಗೆ ದಕ್ಷಿಣದಲ್ಲೇ ನಮ್ಮ ವಿವಾಹವನ್ನು ಕಾಣಿಸುತ್ತೇನೆ" ಎಂದು ಶಿವ ವಾಗ್ದಾನ ಮಾಡಿದ್ದನು. ಆ
ವಾಗ್ದಾನದ ನಂತರ ಅಗಸ್ತ್ಯ ತನ್ನ ಪರಿವಾರದೊಡನೆ ದಕ್ಷಿಣಕ್ಕೆ ಪ್ರಯಾಣಿಸಿದ್ದನು!
ಮುಂದೆ
ಅಗಸ್ತ್ಯ ಇಂದಿನ ತಮಿಳುನಾಡಿಗೆ ಆಗಮಿಸಿದ ವೇಳೆ ಅಲ್ಲಿನ್ಜ ಕುತ್ರಳಂ ಎಂಬಲ್ಲಿ ಶಿವ-ಪಾರ್ವತಿಯರ ಕಲ್ಯಾಣ ನೋಡೊದ್ದನೆಂದು ಕಥೆ ಇದೆ.
ಆದರೆ
ಆ ಕಥೆಯ ಹಿನ್ನೆಲೆ ಎಂದರೆ ಅದು ಜನಸಂಖ್ಯಾ ಸ್ಫೋಟ! ಪ್ರಾಚೀನ ಭಾರತದಲ್ಲಿ ಸಹ ಇಂತಹಾ ಜನಸಂದಣಿ,
ಜನಸಖ್ಯಾ ಸಮಸ್ಯೆ ಇದ್ದಿತ್ತೆನ್ನುವುದು ಆಸಕ್ತಿದಾಯಕ ಸಂಗತಿ! ಅಷ್ಟು ಮಾತ್ರವಲ್ಲದೆ ಇಂತಹಾ ಜನಸಂಖ್ಯೆ ಸಮಸ್ಯೆಗೆ ಪರಿಹಾರ ಸೂಚಿಇಸ್ದ್ದಾರೆ, ಕಾರ್ಯಗತವನ್ನೂ ಮಾಡಿಕೊಂಡಿದ್ದಾರೆ ಎನ್ನುವುದು ರೋಚಕ ಸತ್ಯ! ಅಗಸ್ತ್ಯರು
18 ಬುಡಕಟ್ಟು ಜನಾಂಗದವರೊಂದಿಗೆ ದಕ್ಷಿಣ ದಿಕ್ಕಿಗೆ ತೆರಳಿದ!!!! ಅಂದು ಅಗಸ್ತ್ಯನೊಂದಿಗೆ ಬಂದ ಆ ಎಲ್ಲಾ ಸಮುದಾಯದ
ಜನರು ಮಾರ್ಗದಲ್ಲಿ ನಾನಾ ಕಡೆಗಳಲ್ಲಿ, ವಿವಿಧ ಸ್ಥಳಗಳಲ್ಲಿ ನೆಲೆಸಿದರು. ಈ ವಿಚಾರಕ್ಕೆ ಸಂಬಂಧಿಸಿ
ನಮಗೆ ಸಾಹಿತ್ಯ ಮತ್ತು ಶಾಸನಗಳ ಪುರಾವೆಯೂ ಸಿಕ್ಕುತ್ತದೆ!
ಇದಕ್ಕೆ
ಪೂರಕವಾಗಿ ನಾವಿಲ್ಲಿಯೇ ಒಂದು ವಿಚಾರ ನೋಡೋಣ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಅಗಸ್ತ್ಯನಿಗೆ ಒಂದು ಆಶ್ರಮವಿತ್ತು! ಆದರೆ ಆ ಆಶ್ರಮವಿದ್ದ ಜಾಗದ
ಬಗ್ಗೆ ಗೊಂದಲವಿದೆ. ಕೆಲ ದಾಖಲೆಗಳಲ್ಲಿ ಇದನ್ನು ವಾಯುವ್ಯ ಮಹಾರಾಷ್ಟ್ರದಗೋದಾವರಿ ನದಿಯ ದಡದಲ್ಲಿ, ನಾಸಿಕ್ ಬಳಿ ಅಗಸ್ತ್ಯಪುರಿ ಮತ್ತು ಅಕೋಲೆ ಎಂಬ ಸಣ್ಣ ಪಟ್ಟಣದಲ್ಲಿ ಇದೆ ಎಂದು ಹೇಳಿದ್ದರೆ ಇನ್ನು ಕೆಲ ದಾಖಲೆಗಳಲ್ಲಿ ಅದನ್ನು ಉತ್ತರ ಹಾಗೂ ಪೂರ್ವ ಭಾರತಗಳಲ್ಲಿ ಇದೆ ಎನ್ನಲಾಗಿದೆ. ಐನ್ವಾಡಿ
(ಅಗಾಸ್ಟಿನಗರ) (ತಾಲ್-ಖಾನಾಪುರ) ಗ್ರಾಮದ (ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳು), ಅಥವಾ ಕನ್ನೌಜ್ (ಉತ್ತರ ಪ್ರದೇಶ) ಬಳಿ, ಅಥವಾ ರುದ್ರಪ್ರಯಾಗ್ (ಉತ್ತರಾಖಂಡ) ಬಳಿಯ ಅಗಸ್ತ್ಯಮುನಿ ಗ್ರಾಮದಲ್ಲಿ ಸಾಂಗ್ಲಿ ಬಳಿ, ಸಾತ್ಪುರ(ಮಧ್ಯಪ್ರದೇಶ). ತಮಿಳುನಾಡಿನ ತಿರುನೆಲ್ವೇಲಿ, ಪೊಥಿಯಲ್ ಬೆಟ್ಟ, ತಂಜಾವೂರು, ಕನ್ಯಾಕುಮಾರಿಯಲ್ಲಿ ಸಹ ಅವನ ಆಶ್ರಮವಿದೆ
ಎಂದು ಹೇಳಲಾಗಿದೆ. ಮತ್ತು ಕಲಿಯುಗದ ಪ್ರಾರಂಭದಲ್ಲಿ ಅವನ ಕಡೇ ದಿನಗಳನ್ನು ಕಳೆಯುವಾಗ ಅಗಸ್ತ್ಯ ತಿರುವನಂತಪುರಂನ ಅಗಸ್ತ್ಯರ್ಕುಂಡಂ ಎಂಬಲ್ಲಿ ಇದ್ದನೆಂದು ಅಲ್ಲಿಯೇ ಆತನ ಕಡೆಯ ದಿನವನ್ನು (ಮರಣ) ಕಳೆದದ್ದಾಗಿ ಪುರಾಣ ಉಲ್ಲೇಖಿಸಿದೆ.!
ತಮಿಳುನಾಡಿನಲ್ಲಿ ಅಗಸ್ತ್ಯನ ಮೂರ್ತಿ |
ಅಗಸ್ತ್ಯನ
ಕಥೆ ಇತಿಹಾಸದಲ್ಲಿ ಏಕೀಕರಣದ ನಿಜವಾದ ಸಂಕೇತವಾಗಿದೆ ಎಂಬುದಕ್ಕೆ ಮೊದಲ ಪುರಾವೆಗಳು ಶಿಲಾಶಾಸನ ಮತ್ತು ಪಾಲಿಯೋಗ್ರಫಿಯಲ್ಲಿ ಕಾಣುತ್ತೇವೆ. ಅಶೋಕ ಸಾಮ್ರಾಜ್ಯದ ದಕ್ಷಿಣದ ಕಡೆಗೆ ಪ್ರಗತಿಯು ಅಷ್ಟು ಕಂಡುಬರದೆ ಹೋಗಿದ್ದರೆ ಅದೇ ದಕ್ಷಿಣ ಪ್ರದೇಶದಲ್ಲಿ, ಗ್ರಂಥ ಲಿಪಿಯು,ಶಾತವಾಹನ ಮತ್ತು
ಪಲ್ಲವನ ಪ್ರಾಕೃತ ಶಾಸನಗಳ ಮೂಲಕವೂ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತದೆ ಎಂದರೆ ಅಶೋಕಾ ಶಾಸನದಲ್ಲಿನ ಭಾಷೆಗೂ ಪಲ್ಲವ ಶಾಸನದ ಬಾಷೆಗೂ ವ್ಯತ್ಯಾಸವಿದೆ! ಆದರೆ ಸಂಸ್ಕೃತ
ಗ್ರಂಥಗಳನ್ನು ಮುದ್ರಿಸಲು ಇದನ್ನು ಇಂದಿಗೂ ನಾವು ಇಲ್ಲಿ ಬಳಕೆ ಮಾಡುತ್ತೇವೆ. ಈಗೆ ಭಾಷೆ, ಜನಾಂಗ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಗಸ್ತ್ಯ ಉತ್ತರದಿಂದ ಬಂದವನಾಗಿ ದಕ್ಷಿಣದ ತಮಿಳು ಸಂಸ್ಕೃತು, ದ್ರಾವಿಡ ಸಂಸ್ಕೃತಿ ಬೆಳೆಸಿದ್ದ ಪ್ರಮುಖನಾಗುತ್ತಾನೆ. ಅಲ್ಲದೆ ಬಾರತವನ್ನು ಅಖಂಡವಾಗಿ, ಏಕತೆಯ ಸ್ವರೂಒಅದಲ್ಲಿಡಲು ಶ್ರಮಿಸಿದ ಋಷಿ ಎನಿಸಿಕೊಳ್ಳುತ್ತಾನೆ.
ಎಂದರೆ
ನಮ್ಮ ಪೂರ್ವಜರು ಅಗಸ್ತ್ಯ ದಕ್ಷಿಣಕ್ಕೆ ಬಂದನೆಂದೂ ಭಾರತದ ಅಖಂಡತೆ ಕಾಪಾಡಲು ಶ್ರಮಿಸಿದ ಎನ್ನುವುದನ್ನು ವಿಂದ್ಯ ಪರ್ವತದ ಪವಾಡ ಹಾಗೂ ಶಿವ-ಪಾರ್ವತಿಯವಿವಾಹ ಕಥೆಯೊಡನೆ ಸಮೀಕರಿಸಿ ಹೇಳಿದ್ದಾರೆ.
...ಮುಂದುವರಿಯುವುದು
No comments:
Post a Comment