ಸಂಕ್ರಾಂತಿ / Sankranti

Saturday, December 23, 2023

ಹುಬ್ಬಳ್ಳಿಯಲ್ಲಿ 3 ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ.

 ಬರೀ ದಕ್ಷಿಣಕ್ಕಷ್ಟೇ ಸೀಮಿತಗೊಂಡಿದ್ದ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸುವ ಸದುದ್ದೇಶದಿಂದ ಡಾ. ಎಂ.ಎ.ಮುಮ್ಮಿಗಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಆಯೋಜಿಸಿರುವದು ಉತ್ತಮ ಬೆಳವಣಿಗೆ , ಈ ಭಾಗದ ಅನೇಕ ಕಲಾವಿದರಿಗೂ ಇದರಿಂದ ಲಾಭವಾಗಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. 


ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆರಂಭಗೊಂಡ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ,ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿ ನಗರ , ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಸೂಕ್ತ ಕಲಾ ಪ್ರತಿಭೆಗಳಿವೆ , ಆದರೆ ಅವರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆಗಳಿಲ್ಲ, ಡಾ. ಮುಮ್ಮಿಗಟ್ಟಿ ಅವರು ದೈರ್ಯದಿಂದ ಸತತ ಮೂರನೇ ಬಾರಿಗೆ ಇಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿರುವದು ಸ್ತುತ್ಯಾರ್ಹ , ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಮಟ್ಟದ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಸೂಕ್ತ ರೀತಿಯ ಅನುದಾನ , ಸಹಾಯ , ಸಹಕಾರ ನೀಡುವ ಅವಶ್ಯಕತೆ ಇದೆ , ನನ್ನ ಪರಿಮಿದಿಯಲ್ಲಿ ಲಭ್ಯವಾಗುವ ಸಹಾಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಅವರು ಮಾತನಾಡಿ , ಕಳೆದ ಬಾರಿ ಡಾ. ಮುಮ್ಮಿಗಟ್ಟಿ ಅವರು ಇದೇ ಹುಬ್ಬಳ್ಳಿಯಲ್ಲಿ 2 ಯಶಸ್ವಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಿರುವದನ್ನು ನಾನು ಸನಿಹದಿಂದ ಬಲ್ಲವನಾಗಿದ್ದೇನೆ , ಹುಬ್ಬಳ್ಳಿ- ಧಾರವಾಡ ಮಹಾನಗರ ತ್ವರಿತ ಗತಿಯಲ್ಲಿ ಬೃಹನ್ನಗರವಾಗಿ ಬೆಳೆಯುತ್ತಲಿದ್ದು, ಚಲನಚಿತ್ರಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಚಟುವಟಿಕೆಗಳು ಇಲ್ಲಿ ನಡೆಯುವಂತಾಗಬೇಕು , ಈ ದಿಸೆಯಲ್ಲಿ ಡಾ. ಎಂ.ಎ. ಮುಮ್ಮಿಗಟ್ಟಿ ಅವರು ಇತರರಿಗೆ ಮಾದರಿಯಾಗುವಂತೆ ಮುನ್ನುಡಿ ಬರೆದಿದ್ದಾರೆ. ಇವರ ಈ ವೇದಿಕೆ ಮೂಲಕ ಉತ್ತರ ಕರ್ನಾಟಕ ಭಾಗದ ಕಲಾಪ್ರತಿಭೆಗಳಿಗೆ ಹೆಚ್ಚಿನ ಸ್ಥಾನಮಾನ ದೊರೆಯುವಂತಾಗಲಿ ಎಂದು ಆಶಿಸಿದರು. 


\ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಸಂಸ್ಥಾಪಕ-ಅಧ್ಯಕ್ಷ ಡಾ. ಎಂ.ಎ ಮುಮ್ಮಿಗಟ್ಟಿ , ಹುಬ್ಬಳ್ಳಿ ರೋಟರಿ ಎಲೈಟ್ ಅಧ್ಯಕ್ಷ ಅನೀಶ ಖೋಜೆ, ಇಂದು ಮುಂಜಾನೆ ಪತ್ರಿಕೆಯ ಸಂಸ್ಥಾಪಕ ಗುರುರಾಜ ಹೂಗಾರ , ಹುಬ್ಬಳ್ಳಿ ರೋಟರಿ ಎಲೈಟ್‍ನ ರೀತು ಸರಾಫ್ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.

ಸಂಕ್ರಾಂತಿ at 7:53 AM
Share

No comments:

Post a Comment

‹
›
Home
View web version

ನನ್ನ ಬಗ್ಗೆ ಒಂಚೂರು......

ಸಂಕ್ರಾಂತಿ
View my complete profile
Powered by Blogger.