Sunday, July 26, 2026

ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

 ಸಾಧಕರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರಧಾನ

ರಾಷ್ಟ್ರ ರಕ್ಷಣೆಗೆ ಸೈನಿಕ, ಅರೋಗ್ಯ ಸದೃಢವಾಗಿರಲು ವೈದ್ಯ, ಸಮಾಜ ತಿದ್ದುವ ಕೆಲಸ ಮಾಡುವ ಪತ್ರಕರ್ತರನ್ನು ಗೌರವಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದು ಕಾಂತಾರ ಸಿನೆಮಾದ ಗುರುವ ಖ್ಯಾತಿಯ ನಟ ಸ್ಬರಾಜ್ ಶೆಟ್ಟಿ ಹೇಳಿದರು.



ನಗರದ ನಯನ ಸಭಾಂಗಣದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ, ಕಾರ್ಗಿಲ್ ವಿಜಯ್ ದಿವಸ್ ಹಾಗೂ ಸಾಂಸ್ಕೃತಿಕ ಸಿಂಚನ-23 ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.



ಭಾರತ ದೇಶದ ಐತಿಹಾಸಿಕ ಮೈಲಿಗಲ್ಲು ಎನಿಸಿಕೊಂಡ ಕಾರ್ಗಿಲ್ ವಿಜಯ್ ದಿವಸ್ ಮೂಲಕ ನಮ್ಮ ದೇಶದ ಸೈನಿಕರನ್ನು ಸ್ಮರಣೆ ಮಾಡಬೇಕಾದುದು ನಾವು ಸೈನಿಕರಿಗೆ ಸಲ್ಲಿಸುವ ಗೌರವವಾಗಿದೆ. ಸೈನಿಕ ಹಗಲಿರುಳು ಎನ್ನದೆ ನಮ್ಮ ಹಾಗೂ ನಮ್ಮ ಕುಟುಂಬವನ್ನು ಕಾಯುವದಲ್ಲದೆ. ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ವೈದ್ಯರು ಮತ್ತು ಪತ್ರಕರ್ತರು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.



ರಿಪಬ್ಲಿಕ್ ಕನ್ನಡ ಚಾನೆಲ್ ನ ನಿರೂಪಕಿ ಕು.ರೂಪಾ ಚಂದ್ರು ಮಾತನಾಡಿ, ಸೈನಿಕ, ವೈದ್ಯ, ಪತ್ರಕರ್ತ ಈ ಮೂರು ಸ್ತಂಭಗಳು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ಸೈನಿಕ ನಮ್ಮ ದೇಶವನ್ನು ರಕ್ಷಿಸಿದರೆ. ವೈದ್ಯ ನಮ್ಮೆಲ್ಲರ ಅರೋಗ್ಯ ಕಾಳಜಿಗೆ ಕಾರಣರಾದರೆ, ಪತ್ರಕರ್ತ ಸಮಾಜ ತಿದ್ದುವ ಕೆಲಸ ಮಾಡಲಿದ್ದಾರೆ ಎಂದರು.





ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕ ಹಿರಿಯ ಪತ್ರಕರ್ತರಾದ ವೆಂಕಟಸ್ವಾಮಿ, ಅಮ್ಜದ್ ಖಾನ್, ಶರಣಯ್ಯ ಒಡೆಯರ್, ರಾಘವೇಂದ್ರ ಅಡಿಗ ಎಚ್ಚೆನ್. ಮುರಳಿ ಕೆ.ಎಂ. ಮಲ್ಲಿಕಾರ್ಜುನ,  ಇತರರಿಗೆ ಮಾಧ್ಯಮ ಸೇವಾ ರತ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಭಾಗಗಳಿಂದ ನೃತ್ಯ ಶಾಲೆಗಳಿಂದ ಪಾಲ್ಗೊಂಡಿದ್ದ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.




ಇದು ನಿಮ್ಮ ವಾಹಿನಿಯ ಕಲಾ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಕೆ.ಎಸ್, ಅಧ್ಯಕ್ಷತೆಯನ್ನು ಗಂಡಸಿ ಸದಾನಂದ ಸ್ವಾಮಿ, ವಿ.ನಂಜುಂಡಪ್ಪ, ಸುನೀತಾ ನಾಗೇಶ್, ಡಾ.ಕುಮಾರಸ್ವಾಮಿ, ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ಅಧ್ಯಕ್ಷೆ  ಡಾ.ವಿ.ಭರಣಿರಾಜು, ಡಾ.ಪವನ್ ರಾಜ್ ಎನ್, ಕಿರುತೆರೆ ನಟಿ ಅಂಕಿತ ಜಯರಾಮ್, ಇವೆಂಟ್ ಕೋ- ಅರ್ಡಿನೆಟರ್ ಚಂದ್ರಿಕಾ ಬಿ.ವಿ ಇತರರು ಭಾಗವಹಿಸಿದ್ದರು.



Sunday, May 24, 2026

ರಾಘವೇಂದ್ರ ಅಡಿಗ ಎಚ್ಚೆನ್.




ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿದ ಬುದ್ದ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಅವರು ಹೇಳಿದರು.


ನಗರದ ನಯನ ಸಭಾಂಗಣದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬುದ್ದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವ ಹಾಗೂ 22ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬುದ್ದ ಶಾಂತಿಯ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದು ಜಗತ್ತಿಗೆ ಜ್ಯೋತಿ ಬೆಳಗಿನ ಜ್ಞಾನಿಯಾದ ಅದರಂತೆ ಬುದ್ದನ ಮಾರ್ಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಶೋಷಿತರ ಪರವಾಗಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮಹಾನ್ ಚೇತನರಾದರು. ಈ ಇಬ್ಬರ ತತ್ವ ಆದರ್ಶಗಳು ಇಂದಿನ ಪೀಳಿಗೆಗೆ ಅವಶ್ಯಕವಾಗಿದೆ ಎಂದರು.


ಉಪ ಪೋಲಿಸ್ ಆಯುಕ್ತ ಡಾ.ಹೆಚ್.ಮಂಜುನಾಥ್ ಬಾಬು ಮಾತನಾಡಿ, ನಾವೆಲ್ಲರೂ ಕಾನೂನಿನ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರಣ. ಬುದ್ದನ ಶಾಂತಿ ಮಾರ್ಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟ ನಾವೆಲ್ಲರೂ ಮಾದರಿಯಾಗಿ ತೆಗೆದುಕೊಳ್ಳಬೇಕು. ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಪೋಷಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.


ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ, ಡಿಸಿಪಿ ಡಾ.ಹೆಚ್.ಡಾ.ಮಂಜುನಾಥ್ ಬಾಬು ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಸತ್ಕಾರ ಮಾಡಲಾಯಿತು.


ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಸುಬ್ರಹ್ಮಣ್ಯ ಹಂಡಿಗೆ, ಶಿವರಾಜ್ ಮೌರ್ಯ ಅವರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಹಾಗೂ ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್ ನ ಡಾ.ವಿ.ಭರಣಿ ರಾಜು ಅವರಿಗೆ ವಿಶಿಷ್ಟ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಪುಟಾಣಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ಈ ಸಂಧರ್ಭದಲ್ಲಿ ಇದು ನಿಮ್ಮ ವಾಹಿನಿಯ ಪ್ರದಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್, ಇವೆಂಟ್ ಕೊ- ಅರ್ಡಿನೆಟರ್ ಚಂದ್ರಿಕಾ ಬಿ.ವಿ.ಇದ್ದರು.






Friday, May 22, 2026

ನಾಳೆ ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಬುದ್ಧ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

 


ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಬುದ್ಧ ಮತ್ತು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಹಾಗೂ 22 ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಹೇಳಿದರು.




ಭಾನುವಾರ 24 ರಂದು ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವ್ಯಕ್ತಿಗಳು ಭಾಗವಹಿಸುವರು ಎಂದರು.


ಟಿವಿ5 ಕನ್ನಡ ಚಾನೆಲ್ ನ ಪ್ರಧಾನ ಸಂಪಾದಕ ರಮಾಕಾಂತ್ ಆರ್ಯಾನ್, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.


ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಹೋರಾಟಗಾರ ಗಂಡಸಿ ಸದಾನಂದಸ್ವಾಮಿ ವಹಿಸಿದರೆ. ಮುಖ್ಯ ಅತಿಥಿಗಳಾಗಿ ಉಪ ಪೋಲಿಸ್ ಆಯುಕ್ತ (ಡಿಸಿಪಿ) ಡಾ.ಹೆಚ್.ಮಂಜುನಾಥ ಬಾಬು, ಥರ್ಡ್ ಐ ಯೂಟ್ಯೂಬ್ ಸಂಸ್ಥಾಪಕ ಸುಬ್ರಹ್ಮಣ್ಯ ಎಸ್ ಹಂಡಿಗೆ, ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್ ನ ಸಂಸ್ಥಾಪಕ ಅಧ್ಯಕ್ಷೆ ಡಾ.ವಿ.ಭರಣಿ ರಾಜು, ಪತ್ರಕರ್ತ ಶಿವರಾಜ್ ಮೌರ್ಯ, ಇವೆಂಟ್ ಕೊ-ಆರ್ಡಿನೇಟರ್ ಚಂದ್ರಿಕಾ ಬಿ.ವಿ ವಹಿಸಲಿದ್ದಾರೆ ಎಂದು ಕಿಶೋರ್ ಹೇಳಿದರು.


Friday, April 24, 2026

ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್*

 

- ರಾಘವೇಂದ್ರ ಅಡಿಗ ಎಚ್ಚೆನ್.


ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್  ತನ್ನ ಬ್ರಾಂಡ್ ಪಾರ್ಟ್ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ    ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ.


ರವಿಚಂದರ್ ಅವರ instagram ರೀಲ್ ನಲ್ಲಿ ಸ್ಕಿನ್ ಕೇರ್ ಡಿಕನ್ಸ್ ಸ್ಟ್ರಕ್ಟ್ ಇತ್ತು. ಇದನ್ನು ಅಭಿಮಾನಿಗಳು ಗಮನಿಸಿದರು. ಆ ಬಳಿಕ ಇದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತು. ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಆದ ವಿಷಯ ಈಗ ಪಾರ್ಟ್ನರ್ ಶಿಪ್ ಗೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಅವರು ಮಾತನಾಡಿದ್ದಾರೆ. ಜನರು ಸಹಜವಾಗಿ ಸ್ಪಂದಿಸಿ ಬ್ರಾಂಡ್ ನ್ನು ನೋಡಿದಾಗ ಅದನ್ನು ಮುಂದುವರಿಸಿಕೊಂಡು ಹೋಗುವುದು ನಮಗೆ ಸರಿ ಅನಿಸಿತು. ಅನಿರುದ್ಧ್ ಅವರು ನಮ್ಮ ಬ್ರಾಂಡಿಗೆ ಸರಿ ಹೊಂದುತ್ತಾರೆ. ಹೀಗಾಗಿ ಇಂಟರ್ನೆಟ್ ನಲ್ಲಿ ಉಂಟಾದ ವಿಡಿಯೋದ ಪ್ರಭಾವ ಸಹಯೋಗಕ್ಕೆ ಪ್ರೇರಣೆ ನೀಡಿತು ಎಂದು ಹೇಳಿದ್ದಾರೆ.
__
ತಮ್ಮ ಹಿಟ್ ಹಾಡುಗಳು ಗಳಿಂದ ಯುವ ಜನರ ಮೇಲೆ ಅಪಾರ ಪ್ರಭಾವ ಬೀರಿರುವ ಅನಿರುದ್ಧ ರವಿಚಂದರ್ ಪ್ರೇಕ್ಷಕರಿಗೆ ಅವರ ಸ್ಟೈಲ್ ಮತ್ತು ವ್ಯಕ್ತಿತ್ವದಿಂದ ಇಷ್ಟವಾಗುತ್ತಾ ಬಂದಿದ್ದಾರೆ. ಈಗ ಪ್ರಸಿದ್ಧ ಸನ್ ಸ್ಕ್ರೀನ್  ಬ್ರಾಂಡ್ ನ ಪಾರ್ಟ್ನರ್ ಆಗಿ ಅವರು ಹೊರ ಹೊಮ್ಮಿದ್ದಾರೆ.

Sunday, March 29, 2026

ಮೋಹನ ಮುರಳಿ ಲೈಫ್‌ನಲ್ಲಿ ಪ್ರಕೃತಿ ಚಿಲುಮೆ

 

- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಯಾವ ಮೋಹನ ಮುರಳಿ ಕರೆಯಿತು 
ನಿರ್ದೇಶನ: ವಿಶ್ವಾಸ ಕೃಷ್ಣ 
ನಿರ್ಮಾಣ: ಶರಣಪ್ಪ ಗೌರಮ್ಮ 
ತಾರಾಗಣ: ಪ್ರಕೃತಿ ಶರಣ್, ಮಾಧವ್ ಹೆಚ್, ಸ್ವಪ್ನಾ ಶೆಟ್ಟಿಗಾರ, ಪಟೇಲ್ ವರುಣ್ ರಾಜ್, ಶಶಿಧರ್ ಭಟ್ ಮುಂತಾದವರು. 
ರೇಟಿಂಗ್: 3/5



ಜೀವನದ ಪಯಣದಲ್ಲಿ ಯಾರು ಹೇಗೆ ಸಿಗುತ್ತಾರೆ, ಯಾಕೆ ಸಿಗುತ್ತಾರೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಿಕ್ಕ ಮೇಲೆ ಏನಾಯಿತು ಎಂಬುದಷ್ಟೇ ಉಳಿಯುತ್ತದೆ. ಅದು ವ್ಯಕ್ತಿ ಆಗಿರಬಹುದು, ಪ್ರಾಣಿ ಆಗಿರಬಹುದು ಅಥವಾ ವಸ್ತು ಆಗಿರಬಹುದು. ಇಂತಹುದೇ ಒಂದು ಆಕಸ್ಮಿಕವಾಗಿ ಸಿಗುವ ವ್ಯಕ್ತಿ ಹಾಗೂ ಪ್ರಾಣಿಯನ್ನು ಇಟ್ಟುಕೊಂಡು ಅಚ್ಚುಕಟ್ಟಾದ ಕಥೆಯನ್ನು ಹೊತ್ತು ಬಂದಿರುವ ಸಿನಿಮಾ 'ಯಾವ ಮೋಹನ ಮುರಳಿ ಕರೆಯಿತು'.  

ತಾಯಿ ಇಲ್ಲದೆ ತಂದೆಯ ಪ್ರೀತಿಯಲ್ಲಿ ಅವರ ಆದರ್ಶದ ಮಾತುಗಳನ್ನು ಮೈಗೂಡಿಸಿಕೊಂಡು ಬೆಳೆದವ ಮೋಹನ (ಮಾಧವ ಹೆಚ್). ಪ್ರೀತಿ ಮಾಡು ಪ್ರೀತಿ ಹಂಚು ಎಂಬ ತಂದೆಯ ಮಾತಿಗೆ ಹೆಚ್ಚು ಬೆಲೆ ಕೊಡುವವ. ಹೆಂಡತಿ ಸಿಂಧು (ಸ್ವಪ್ನಾ ಶೆಟ್ಟಿಗಾರ) ಮಗಳು ಪ್ರಕೃತಿ (ಪ್ರಕೃತಿ ಶರಣ್) ಜೊತೆ ಹಾಯಾಗಿ ಸಂಸಾರ ನಡೆಸುವ ಮೋಹನ್‌ದು ಸುಖಿ ಸಂಸಾರ. ಗಂಡ ಹೆಂಡತಿಗೆ ಒಂದೆ ಕೊರಗು ಎಲ್ಲಾ ಮಕ್ಕಳ ತರ ನಮ್ಮ ಮಗಳು ನಡೆಯಲ್ಲ ಆಟವಾಡಲ್ಲ ಎಂಬುದು. ಹುಟ್ಟಿನಿಂದಲೇ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಪ್ರಕೃತಿ ವೀಲ್ ಚೇರ್‌ನಲ್ಲಿಯೇ ಬಾಲ್ಯ ಕಳೆಯುತ್ತಿದ್ದಾಳೆ. ಇಂತಹ ಸುಂದರ ಸಂಸಾರಕ್ಕೆ ಹೊಸ ಅಥಿತಿ ಎನ್ನುವಂತೆ ಆಕಸ್ಮಿಕವಾಗಿ ಎಂಟ್ರಿ ಕೊಡುತ್ತಾನೆ ರಾಕಿ (ನಾಯಿ). ಯಾವ ಕುಂದು ಕೊರತೆ ಬಾರದೆ ಸುಂದರವಾಗಿ ಸಾಗುತ್ತಿರುವ ಸಂಸಾರಕ್ಕೆ ಮತ್ತೋಬ್ಬ ಅಥಿತಿಯಾಗಿ ಮುರಳಿ ಬರುತ್ತಾನೆ. 8 ವರ್ಷಗಳ ಹಿಂದೆ ಹೆಂಡತಿಯಿಂದ ದೂರ ಆಗಿದ್ದ ಮುರಳಿ (ಪಟೇಲ್ ವರುಣ್ ರಾಜ್) ಆ ಊರಿಗೆ ಬಂದದ್ದೇ ಮಗಳನ್ನು ಹುಡುಕಿಕೊಂಡು. ಮುರಳಿಯ ಹೆಂಡತಿ ಯಾರು? ಮೋಹನ್‌ಗೂ ಮುರಳಿಗೂ ಏನು ಸಂಬಂಧ. ಕಥೆಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಲೇ ಬೇಕು. 



ಮಲೆನಾಡಿನ ಸುಂದರ ಪರಿಸರ ಈ ಚಿತ್ರದ ಹೈಲೈಟ್ ಎನ್ನಬಹುದು. ಸಿನಿಮಾ ನೋಡುಗರಿಗೆ ಹಚ್ಚ ಹಸಿರಿನ ಪರಿಸರ ಕಣ್ಣಿಗೆ ತಂಪು, ಮನಸ್ಸಿಗೆ ಮುದ ನೀಡುತ್ತದೆ. ಅಷ್ಟು ಚನ್ನಾಗಿ ಕಟ್ಟಿ ಕೊಟ್ಟಿದ್ದಾರೆ ಛಾಯಾಗ್ರಾಹಕ ಕೀರ್ತನ್ ಪೂಜಾರಿ. ಚಿತ್ರದ ಸ್ಕ್ರೀನ್ ಪ್ಲೇ ಮೇಲೆ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೇ ಸಿನಿಮಾಗೆ ಇನ್ನಷ್ಟು ಶಕ್ತಿ ಬರುತಿತ್ತು. ನಿರ್ಮಾಪಕರೇ ಹೇಳಿಕೊಂಡಂತೆ ಈ ಚಿತ್ರವನ್ನು ಅವರು ತಮ್ಮ ಮಗಳಿಗಾಗಿ ನಿರ್ಮಾಣ ಮಾಡಿದ್ದಾರೆ. ಅವರ ಶ್ರಮ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ಒಟ್ಟಿನಲ್ಲಿ ಇದೊಂದು ಪ್ರಾಣಿ-ಮನುಷ್ಯ ಪ್ರೀತಿಯ ಭಾವನಾತ್ಮಕ ಸಿನಿಮಾ. ಅದರಲ್ಲೂ ಪೆಟ್ (ಸ್ವಾನ) ಲವ್ವರ್‌ಗಳಿಗೆ ಈ ಸಿನಿಮಾ ಹೆಚ್ಚಾಗಿ ಇಷ್ಟವಾಗುತ್ತದೆ. 


Sunday, March 22, 2026

ನವೆಂಬರ್ ತಿಂಗಳ ಗೃಹಶೋಭಾ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಫುಕ್ ಮೀಲ್ಸ್ ಚಿತ್ರದ ನಾಯಕಿ ದಿಯಾ ಖ್ಯಾತಿಯ ಖುಷಿ ರವಿ ಕುರಿತ ನನ್ನ ಪರಿಚಯ ಲೇಖನ... 



 



 ಹೊಸವರ್ಷದ ಹಾಗೂ ಮಕರ ಸಂಕ್ರಾಂತಿ ಸಡಗರಕ್ಕೆ ಗೃಹ ಶೋಭಾ ಮಾಸಪತ್ರಿಕೆಯಲ್ಲಿ ಕನ್ನಡದ ಹೆಸರಾಂತ ನಟಿ @nishvika_  ಕುರಿತು ನನ್ನ ಲೇಖನ...