ಸಾಧಕರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರಧಾನ
ರಾಷ್ಟ್ರ ರಕ್ಷಣೆಗೆ ಸೈನಿಕ, ಅರೋಗ್ಯ ಸದೃಢವಾಗಿರಲು ವೈದ್ಯ, ಸಮಾಜ ತಿದ್ದುವ ಕೆಲಸ ಮಾಡುವ ಪತ್ರಕರ್ತರನ್ನು ಗೌರವಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದು ಕಾಂತಾರ ಸಿನೆಮಾದ ಗುರುವ ಖ್ಯಾತಿಯ ನಟ ಸ್ಬರಾಜ್ ಶೆಟ್ಟಿ ಹೇಳಿದರು.
ನಗರದ ನಯನ ಸಭಾಂಗಣದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ, ಕಾರ್ಗಿಲ್ ವಿಜಯ್ ದಿವಸ್ ಹಾಗೂ ಸಾಂಸ್ಕೃತಿಕ ಸಿಂಚನ-23 ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶದ ಐತಿಹಾಸಿಕ ಮೈಲಿಗಲ್ಲು ಎನಿಸಿಕೊಂಡ ಕಾರ್ಗಿಲ್ ವಿಜಯ್ ದಿವಸ್ ಮೂಲಕ ನಮ್ಮ ದೇಶದ ಸೈನಿಕರನ್ನು ಸ್ಮರಣೆ ಮಾಡಬೇಕಾದುದು ನಾವು ಸೈನಿಕರಿಗೆ ಸಲ್ಲಿಸುವ ಗೌರವವಾಗಿದೆ. ಸೈನಿಕ ಹಗಲಿರುಳು ಎನ್ನದೆ ನಮ್ಮ ಹಾಗೂ ನಮ್ಮ ಕುಟುಂಬವನ್ನು ಕಾಯುವದಲ್ಲದೆ. ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ವೈದ್ಯರು ಮತ್ತು ಪತ್ರಕರ್ತರು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.
ರಿಪಬ್ಲಿಕ್ ಕನ್ನಡ ಚಾನೆಲ್ ನ ನಿರೂಪಕಿ ಕು.ರೂಪಾ ಚಂದ್ರು ಮಾತನಾಡಿ, ಸೈನಿಕ, ವೈದ್ಯ, ಪತ್ರಕರ್ತ ಈ ಮೂರು ಸ್ತಂಭಗಳು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ಸೈನಿಕ ನಮ್ಮ ದೇಶವನ್ನು ರಕ್ಷಿಸಿದರೆ. ವೈದ್ಯ ನಮ್ಮೆಲ್ಲರ ಅರೋಗ್ಯ ಕಾಳಜಿಗೆ ಕಾರಣರಾದರೆ, ಪತ್ರಕರ್ತ ಸಮಾಜ ತಿದ್ದುವ ಕೆಲಸ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕ ಹಿರಿಯ ಪತ್ರಕರ್ತರಾದ ವೆಂಕಟಸ್ವಾಮಿ, ಅಮ್ಜದ್ ಖಾನ್, ಶರಣಯ್ಯ ಒಡೆಯರ್, ರಾಘವೇಂದ್ರ ಅಡಿಗ ಎಚ್ಚೆನ್. ಮುರಳಿ ಕೆ.ಎಂ. ಮಲ್ಲಿಕಾರ್ಜುನ, ಇತರರಿಗೆ ಮಾಧ್ಯಮ ಸೇವಾ ರತ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಭಾಗಗಳಿಂದ ನೃತ್ಯ ಶಾಲೆಗಳಿಂದ ಪಾಲ್ಗೊಂಡಿದ್ದ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದು ನಿಮ್ಮ ವಾಹಿನಿಯ ಕಲಾ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಕೆ.ಎಸ್, ಅಧ್ಯಕ್ಷತೆಯನ್ನು ಗಂಡಸಿ ಸದಾನಂದ ಸ್ವಾಮಿ, ವಿ.ನಂಜುಂಡಪ್ಪ, ಸುನೀತಾ ನಾಗೇಶ್, ಡಾ.ಕುಮಾರಸ್ವಾಮಿ, ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ಅಧ್ಯಕ್ಷೆ ಡಾ.ವಿ.ಭರಣಿರಾಜು, ಡಾ.ಪವನ್ ರಾಜ್ ಎನ್, ಕಿರುತೆರೆ ನಟಿ ಅಂಕಿತ ಜಯರಾಮ್, ಇವೆಂಟ್ ಕೋ- ಅರ್ಡಿನೆಟರ್ ಚಂದ್ರಿಕಾ ಬಿ.ವಿ ಇತರರು ಭಾಗವಹಿಸಿದ್ದರು.