ಯಲಹಂಕದ ಕರ್ಮ & ಕರಿಯಲ್ಲಿ ಇಮ್ಮರ್ಸಿವ್ ಇಂಡೀ ಫಿಲ್ಮ್ ಪಾಪ್-ಅಪ್ ಜೊತೆ ಎಲ್ಲೆಲ್ಲೂ ಮನರಂಜನೆ ಜಾರಿ
ಜೂನ್ 27, 2025 ರಂದು, ಎಂಟರ್ಟೈನ್ಮೆಂಟ್ ಎವ್ರಿವೇರ್ (ಇಇ) ಯಲಹಂಕದ ಕರ್ಮ & ಕರಿಯಲ್ಲಿ ಆಯೋಜಿಸಲಾದ ವಿಶೇಷ ಪಾಪ್-ಅಪ್ ಕಾರ್ಯಕ್ರಮದೊಂದಿಗೆ ತನ್ನ ಕ್ರಾಂತಿಕಾರಿ ಚಲನಚಿತ್ರ ಪ್ರದರ್ಶನ ವೇದಿಕೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು. ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಉಪಕ್ರಮವಾದ ಈ ಕಾರ್ಯಕ್ರಮವು, ಸ್ವತಂತ್ರ ಸಿನಿಮಾವನ್ನು ಹೇಗೆ ಪ್ರೇಕ್ಷಕರಿಗೆ ನಿಕಟವಾಗಿ, ಪರಿಣಾಮಕಾರಿಯಾಗಿ ಮತ್ತು ಸಾಂಪ್ರದಾಯಿಕ ಸ್ಥಳಗಳ ನಿರ್ಬಂಧಗಳಿಲ್ಲದೆ ಅನುಭವಿಸಬಹುದು ಎಂಬುದರ ದಿಟ್ಟ ಮರುಕಲ್ಪನೆ ಆಗಿದೆ.
ಕೇವಲ 25 ವಿಐಪಿ ಅತಿಥಿಗಳಿಗೆ ಸೀಮಿತವಾದ ಈ ಸಂಜೆ, ನೆಹೇಶ್ ಪೋಲ್ ನಿರ್ದೇಶಿಸಿದ ಇಟ್ಸ್ ಅಬೌಟ್ ಚಾಯ್ಸಸ್ ಮತ್ತು ಜಾಗತಿಕವಾಗಿ ಮೆಚ್ಚುಗೆ ಪಡೆದ ಕ್ಲಿಂಗ್ ಜಾನ್ಸನ್ ನಿರ್ದೇಶಿಸಿದ ದ್ವಮದ್ವ ಎಂಬ ಎರಡು ಸ್ವತಂತ್ರ ಚಲನಚಿತ್ರಗಳನ್ನು ಒಳಗೊಂಡ ಬಹು-ಸಂವೇದನಾಶೀಲ ಸಿನಿಮೀಯ ಅನುಭವವನ್ನು ನೀಡಿತು. ಅತಿಥಿಗಳಿಗೆ ಹೆಚ್ಚಿನ ಗುಣಮಟ್ಟವುಳ್ಳ ವೈರ್ಲೆಸ್ ಹೆಡ್ ಫೋನ್ ಗಳನ್ನು ನೀಡಿ ಅವರನ್ನು ಸುತ್ತಲಿನ ಗದ್ದಲಿಂದಾಚೆ ನಿಶ್ಯಬ್ದ ಪ್ರಪಂಚದೊಡನೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಯಿತು. ಇದರೊಂದಿಗೆ ಸ್ವಾದಿಷ್ಟ ಆಹಾರ, ಪಾನೀಯದೊಂದಿಗೆ ಚರ್ಚೆಗೆ ಸಹ ಅವಕಾಶಇತ್ತು.. ಇದರ ಫಲಿತಾಂಶವಾಗಿ ಆಯಾವ್ ವ್ಯಕ್ತಿಗಳಿಗೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿವಿಶೇಷವಾಗಿ ತೊಡಗಿಸಿಕೊಳ್ಳುವ ಭಾವನೆ ಮೂಡಿಸುವ ಸಿನಿಮೀಯ ಅನುಭವ ಸಿಕ್ಕಿತು.
“ಎಂಟರ್ಟೈನ್ಮೆಂಟ್ ಎವೆರಿವೇರ್ ಚಲನಚಿತ್ರ ನಿರ್ಮಾಪಕರನ್ನು ಅವರ ಪ್ರೇಕ್ಷಕರೊಂದಿಗೆ ಸಂಪರ್ಕಿಸುವ ಮೂಲಕ ಅವರ ಬಲವರ್ಧಿಸುವ ಗುರಿಯನ್ನು ಹೊಂದಿದೆ ಮತ್ತು ಮಾರುಕಟ್ಟೆಯಲ್ಲಿರುವ ವಿಪರೀತ ಸ್ಪರ್ಧೆಯ ನಡುವೆ ಸ್ವತಂತ್ರ ಚಲನಚಿತ್ರಗಳಿಗೆ ಮೀಸಲಾದ ಸ್ಥಳವನ್ನು ಇಲ್ಲಿ ಒದಗಿಸುತ್ತದೆ, ಚಲನಚಿತ್ರ ನಿರ್ಮಾಪಕರು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಪ್ರದರ್ಶಿಸಲು ತಾವು ಸ್ಥಳವನ್ನು ಹುಡುಕುತ್ತಿದ್ದರೆ ಅಂಥವರಿಗೆ ಈ ಸಂಸ್ಥೆ ಪ್ರೋತ್ಸಾಹಿಸುತ್ತದೆ” ಎಂದು ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಮಾಲೀಕ ಶ್ರೀ ನೆಹೇಶ್ ಪೌಲ್ ಹೇಳಿದರು. “ನಮ್ಮ ಚಲನಚಿತ್ರಗಳನ್ನು ಪ್ರದರ್ಶಿಸುವ ಬಯಕೆಯಿಂದ ಎಂಟರ್ಟೈನ್ಮೆಂಟ್ ಎವ್ರಿವೇರ್ ಹುಟ್ಟಿಕೊಂಡಿತು. ನಮಗೆ ಸೂಕ್ತವಾದ ಅವಕಾಶ ಸಿಗದಿದ್ದಾಗ, ನಾವು ನಮ್ಮದೇ ಆದ ಅವಕಾಶವನ್ನು ಸೃಷ್ಟಿಸಲು ನಿರ್ಧರಿಸಿದೆವು ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ಹೀಗೆ ಅಸ್ತಿತ್ವಕ್ಕೆ ಬಂದಿತು” ಎಂದು ಅವರು ಹೇಳಿದರು. "ಪ್ರೇಕ್ಷಕರು ಉಲ್ಲಿ ಸಾವಿರ ರೂ. ಪಾವತಿಸಿ ಎರಡು ಸಿನಿಮಾ ವೀಕ್ಷಿಸುವದರ ಜೊತೆಗೆ ತಮಗಿಷ್ತವಾದ ಆಹಾರ, ಪಾನೀಯ ಸಹ ಪಡೆಯುವ ಅವಕಾಶವಿದೆ. ಹಾಗಾಗಿ ಇಲ್ಲಿ ಮನರಂಜನೆಯ ಜೊತೆ ಜೊತೆಗೆ ಹಸಿವನ್ನು ಸಹ ನೀಗಿಸುವ ಉದ್ದೇಶವಿದೆ" ಎಂದು ಅವರು ವಿವರಿಸಿದ್ದಾರೆ.
"ನಮ್ಮಲ್ಲಿ ಬೇರೆ ಕಡೆಗಳಲ್ಲಿ ಪ್ರದರ್ಶನಕ್ಕೆ ಸರಿಯಾದ ವ್ಯವಸ್ಥೆ ಕಾಣದೆ ನಿರಾಶರಾದ ಚಿತ್ರ ತಯಾರಕರು ನಮ್ಮಲ್ಲಿಗೆ ಬಂದರೆ ಅವರಿಗೆ ಸ್ಕ್ರೀನಿಂಗ್ ಗೆ ಅವಕಾಶ ಕಲ್ಪಿಸಿಕೊಟ್ಟು ಪ್ರೇಕ್ಷಕರಿಗೆ ಅವರ ಚಿತ್ರ ತಲುಪಿಸಲಾಗುತ್ತದೆ. ಅಲ್ಲದೆ ನಮ್ಮಲ್ಲಿ ಹಲವು ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನವೂ ಇರುತ್ತದೆ." ಎಂದರು.
ಕೆಫೆಗಳು ಮತ್ತು ಓಪನ್ ಟೆರೇಸ್ ಮೈಕ್ರೋಬ್ರೂವರಿ ಮತ್ತು ಗ್ಯಾಲರಿಗಳ ವರೆಗೆ ಯಾವುದೇ ಜಾಗವನ್ನು ಮೊಬೈಲ್ ಸಿನೆಮಾ ಹಾಲ್ ಆಗಿ ಪರಿವರ್ತಿಸಲು ಎಂಟರ್ಟೈನ್ಮೆಂಟ್ ಎವೆರಿವೇರ್ ವಿಶಿಷ್ಟ ಮಾದರಿಯು ತಂತ್ರಜ್ಞಾನ, ಸೃಜನಶೀಲತೆ ಮತ್ತು ಆತಿಥ್ಯವನ್ನು ಜೊತೆಗೂಡಿಸುತ್ತದೆ. ಪ್ರೇಕ್ಷಕರಿಗೆ . ವೀಕ್ಷಣಾ ಅನುಭವವನ್ನು ಮರಳಿ ಪಡೆಯುವ ಧ್ಯೇಯದೊಂದಿಗೆ, ವೇದಿಕೆಯು ಶಬ್ದಮಾಲಿನ್ಯ,, ಹೊರಗಿನ ಗದ್ದಲ ಮತ್ತು ಸ್ಕ್ರೀನಿಂಗ್ ಮಾಡಲು ಇರಬಹುದಾದಂತಹಾ ಸಾಂಪ್ರದಾಯಿಕ ಅಡೆತಡೆಗಳನ್ನು ನಿವಾರಿಸುತ್ತದೆ.
ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ನ ಸಹ-ಸಂಸ್ಥಾಪಕಿ ಅಕ್ಷರಾ ಸುರೇಶ್ ತಮ್ಮ ಸಂಥೆಯ ಮೂಲ ಉದ್ದೇಶವನ್ನು ಹಂಚಿಕೊಂಡರು. ”ಕೇವಲ ಸ್ಕ್ರೀನಿಂಗ್ ಮಾಡುವುದು ನಮ್ಮ ಗುರಿಯಲ್ಲ, ಕಥೆ ಹೇಳುವ ಪರಿಸರದ ಮರುಸೃಷ್ಟಿಯೂ ಇಲ್ಲಿರಲಿದೆ. . ಎಂಟರ್ಟೈನ್ಮೆಂಟ್ ಎವೆರಿವೇರ್ ಹೆಚ್ಚಾಗಿ ಗಮಕ್ಕೆ ಬಾರದ ಆದರೆ ತಮ್ಮೊಳಗೆ ಅಪಾರ ಕಥನ ಶಕ್ತಿಯನ್ನು ಹೊಂದಿರುವ ಚಲನಚಿತ್ರ ತಯಾರಕರು ತಮ್ಮ ತೀಕ್ಷ್ಣವಾದ ಕಥೆಗಳು ಮತ್ತು ಅದರ ಆಳವನ್ನು ಅನುಭವಿಸಬಲ್ಲ ಪ್ರೇಕ್ಷಕರಿಗಾಗಿ. ಈ ಸಂಸ್ಥೆ ಅಸ್ತಿತ್ವದಲ್ಲಿದೆ ಮತ್ತು ಇನ್ನೂ ಹೆಚ್ಚಿನದನ್ನು ನೀಡುವುದಕ್ಕಾಗಿ ಬಯಸುತ್ತಿದೆ ಎನ್ನುವುದಕ್ಕೆ ಈ ಸಂಜೆ ಸಾಕ್ಷಿಯಾಗಿದೆ.” ಎಂದು ಹೇಳಿದರು.
ಎಂಟರ್ಟೈನ್ಮೆಂಟ್ ಎವೆರಿವೇರ್ ಉದ್ಘಾಟನಾ ಆವೃತ್ತಿಯು ಭಾರತೀಯ ಚಲನಚಿತ್ರ ಸಂಸ್ಥೆ (www.indianfilminstitute.org) ನೊಂದಿಗೆ ಪ್ರಮುಖ ಸಹಯೋಗವನ್ನು ಹೊಂದಿದೆ. ಇದು ಭಾರತದಾದ್ಯಂತ ಹೊಸತಾದ, ಸ್ವತಂತ್ರ ಸಿನಿಮಾ ತಯಾರಕರ ದ್ವನಿಯನ್ನು ಪೋಷಿಸುವ ವೇದಿಕೆಯ ಬದ್ದತೆಯನ್ನು ಬಲಪಡಿಸುತ್ತದೆ.
ಎಂಟರ್ಟೈನ್ಮೆಂಟ್ ಎವೆರಿವೇರ್ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ಬೆಂಗಳೂರು ನಗರ ಇದಕ್ಕೆ ತಕ್ಕ ಹಾದಿಯನ್ನು ತೋರೊಸೊದೆ/: ಇದು ಕೇವಲ ಒಂದು ಘಟನೆಯಲ್ಲ, ಇದು ಕಥೆಗಳು, ತಯಾರಕರು/ನಿರ್ಮಾಪಕರು ಮತ್ತು ವೀಕ್ಷಕರ ನಡುವೆ ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸಲು ನಿರ್ಮಿಸಲಾದ ಸಾಂಸ್ಕೃತಿಕ ಚರ್ಚಾ ವೇದಿಕೆಯಾಗಿದೆ.
No comments:
Post a Comment