Monday, January 07, 2019
Wednesday, December 19, 2018
ವಿಶ್ವ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್: ಶತಮಾನದ ನೆನಪು
ಯೋಗಗುರು ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯಲಿಕ್ಕಿಲ್ಲ. ಅದೇ ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಎಂದರೆ ತಕ್ಷಣ ಅರ್ಥವಾಗುತ್ತದೆ. ಇಂದು (ಡಿಸೆಂಬರ್ 14) ಅವರು ನಮ್ಮೊಡನಿದ್ದಿದ್ದರೆ ನೂರು ವರ್ಷಗಳಾಗುತ್ತಿತ್ತು. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ ಯೋಗ.ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಯೋಗಾಚಾರ್ಯ ಬಿ. ಕೆ. ಎಸ್.ಅಯ್ಯಂಗಾರ್ ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ಅವರ ನೂರನೇ ಜನ್ಮದಿನಾಚರಣೆಯಂದು ಅವರನ್ನು ಸ್ಮರಿಸುವ ನೆಪದಲ್ಲಿ ಅವರ ಜೀವನ, ಸಾಧನೆಯನ್ನೊಮ್ಮೆ ಮೆಲುಕು ಹಾಕುವ ಚಿಕ್ಕ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
ಶ್ರೇಷ್ಠ ಯೋಗ ಶಿಕ್ಷಕರಾಗಿದ್ದ ಬಿಕೆಎಸ್ ಅಯ್ಯಂಗಾರರು ಹುಟ್ಟಿದ್ದು 14 ಡಿಸೆಂಬರ್ 1918ರಂದು ಕೋಲಾರ ಜಿಲ್ಲೆಯ ಬೆಳ್ಳೂರು
ಗ್ರಾಮದಲ್ಲಿ. ಕನ್ನಡದ ಕಣ್ವ ಎಂದು ಖ್ಯಾತರಾದ ಬಿಎಂಶ್ರೀ ಹುಟ್ಟೂರು ಸಹ ಇದೇ ಆಗಿತ್ತು. ಇವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಒಂಬತ್ತು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕಡುಬಡತನದ ಬಾಲ್ಯವನ್ನು ಕಂಡ ಇವರು ಸಂಬಂಧಿಕರ ಮನೆಯಲ್ಲೇ ಬೇಳೆದವರು. ಜತೆಗೆ ಇನ್‌ಫ್ಲುಯೆಂಝಾ, ವಿಷಮಜ್ವರ, ಮಲೇರಿಯಾ, ಹಾಗೂ ಕ್ಷಯರೋಗ ಸೇರಿ ಅನೇಕ ವಿಧದ ಖಾಯಿಗಲೆಗಳಿಗೆ ಇವರ ದೇಹವೇ ಆಶ್ರಯ ತಾಣವಾಗಿತ್ತು.
ಕ್ಷಯರೋಗವನ್ನು ಜಯಿಸಲು ಯೋಗದೀಕ್ಷೆ
ಮೆಟ್ರಿಕ್ಯುಲೇಷನ್ ವರೆಗಷ್ಟೇ ವಿದ್ಯಾಭ್ಯಾಸ ನಡೆಸಿದ ಬಿಕೆಎಸ್ ತಾವು ಅನುಭವಿಸುತ್ತಿದ್ದ ಅಸಹನೀಯ ಖಾತಯಿಎಗಳಿಂದ ಪಾರಾಗಲು ಯೋಗಾಭ್ಯಾಸದ ಮೊರೆ ಹೋದದ್ದೇ ಮಉಂದೆ ಅವರನ್ನು ವಿಶ್ವಯೋಗಾಚಾರ್ಯನನ್ನಾಗುವಂತೆ ಮಾಡಿತ್ತು!
ಹದಿನೈದನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಕಾಲ ಯೋಗಾಭ್ಯಾಸ ನಡೆಸಿದ್ದರು. ಕೃಷ್ಣಮಾಚಾರ್ ಸಹ ಸಾಮಾನ್ಯ ಗುರುವಾಗಿರಲಿಲ್ಲ ಅವರು ಹಿಮಾಲಯದಲ್ಲಿ ಯೋಗಗುರುಗಳಿಂದ ಯೋಗ ವಿದ್ಯಾಭ್ಯಾಸ ಪಡೆದು ಅದನ್ನು ದಕ್ಷಿಣ ಭಾರತದಾದ್ಯಂತ ಪ್ರಚಾರ ಮಾಡಲು ಮೈಸೂರು ಒಡೆಯರ ಆಶ್ರಯ ಪಡೆದಿದ್ದರು.
ಒಡೆಯರ ಯೋಗಶಾಲೆಯಲ್ಲಿ ಪ್ರಧಾನ ಯೋಗಶಿಕ್ಷಕರಾಗಿದ್ದ ಕೃಷ್ಣಮಾಚಾರ್ ಅವರ ಮಾರ್ಗದರ್ಶನದಲ್ಲಿ ಬಿಕೆಎಸ್ ತಮ್ಮೆಲ್ಲಾ ಖಾಯಿಲೆಗಳಿಗೆ ಪರಿಹಾರ ಕಂಡುಕೊಂಡರು.
ಆದರೆ ಅದೇನೂ ಅಷ್ಟು ಸುಲಭದಲ್ಲಿ ಒಲಿದ ಶಿಕ್ಷಣವಲ್ಲ, ಪ್ರಾರಂಭದಲ್ಲಿ ಅದೊಂದು ಶಿಕ್ಷೆ ಎಂಬಂದತೆ ಬಿಕೆಎಸ್ ಅವರಿಗೆ ಹಲವು ಬಾರಿ ಭಾಸವಾಗಿದ್ದಿದೆ. ಏಕೆಂದರೆ ಗುರು ಕೃಉಷ್ಣಮಾಚಾರ್ ಕಠಿಣವಾದ ಯೋಗವನ್ನು ಹೇಳುತ್ತಿದ್ದು ಅದನ್ನು ಸಾಧಿಸುವವರೆಗೂ ಊಟವನ್ನು ಸಹ ನೀಡುತ್ತಿರಲಿಲ್ಲ. ಒಂದು ಬಾರಿ ಅದು ಎಷ್ಟು ವಿಪರೀತಕ್ಕೆ ಹೋಗಿತ್ತೆಂದರೆ ಗುರುಗಳು ಬಿಕೆಎಸ್ ಅವರಿಂದ ಕಾಲುಗಳ ಅಗಲಿಸುವ ಆಸನ ಮಾಡಿಸಿದ್ದರು. ಆಗ ಬಿಕೆಎಸ್ ತೊಡೆಯಲ್ಲಿನ ಒಂದು ಅಸ್ಥಿಬಂಧಕ (ಲಿಗಾಮೆಂಟ್) ಕತ್ತರಿಸಿ ಹೋಗಿ ಹಲವಾರು ದಿನಗಳ ಕಾಲ ನಡೆಯಲೂ ಆಗುತ್ತಿರಲಿಲ್ಲ!
ಆದರೆ ಕಾಲಕ್ರಮೇಣ ಆಸನಗಳು ಕರಗತವಾಗುತ್ತಾ ಹೋಗಿ ದೇಹವುೀಲ್ಲಾ ವಿಧದ ಆಸನಗಳಿಗೆ ಒಗ್ಗಿಕೊಂಡಿತ್ತು, ಮಾತ್ರವಲ್ಲ ಜೀವನದಲ್ಲೇ ಪ್ರಥಮ ಬಾರಿಗೆ ತನ್ನ ಆರೋಗ್ಯದಲ್ಲಿ ಮಹತ್ವದ ಸುಧಾರಣೆಗಳಾಗುತ್ತಿದೆ ಎಂದು ಬಿಕೆಎಸ್ ಗೆ ಅರಿವಾಗಿತ್ತು.
ಮೈಸೂರಿನಿಂದ ಪುಣೆಗೆ
ಬಿಕೆಎಸ್ ಗೆ ಹದಿನೆಂಟು ವರ್ಷವಾಗಿದ್ದಾಗ ಅವರ ಭಾವಮೈದುನ, ಗುಉರು ಅವ್ರನ್ನು ಧಾರವಾಡಕ್ಕೆ ಕರೆತಂದು ಯೋಗ ಪ್ರದರ್ಶನ ಏರ್ಪಡಿಸಿದ್ದರು. ಇದು ಬಿಕೆಎಸ್ ಜೀವನದ ಮಹತ್ವದ ಘಟ್ಟವಾಗಿತ್ತು. ಅಲ್ಲಿಂದ ಮುಂದೆ ಬಿಕೆಎಸ್ ಧಾರವಾಡ, ಹುಬ್ಬಳ್ಳಿಗಳಲ್ಲಿ ನೆಲೆಸಿ ಯೋಗತರಗತಿಗಳನ್ನು ನಡೆಸಲು ಪ್ರಾರಂಭಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಧಾರವಾಡದಲ್ಲಿ ಹಲವರಿಗೆ ಯೋಗ ತರಬೇತಿ ನೀಡಿದ್ದ ಬಿಕೆಎಸ್ ಸಿವಿಲ್ ಸರ್ಜನ್ ಡಾ. ವಿ.ಬಿ.ಗೋಖಲೆ ಅವರ ಆಹ್ವಾನದ ಮೇರೆಗೆ 1937ರಲ್ಲಿ ಪುಣೆಗೆ ತೆರಳಿದರು
1937 ಸೆಪ್ಟೆಂಬರ್ ಮೊದಲನೆಯ ತಾರೀಖಿಗೆ ಅಯ್ಯಂಗಾರರ ಯೋಗತರಗತಿಗಳು ಪುಣೆಯ ಡೆಕ್ಕನ್ ಜಮಖಾನಾದಲ್ಲಿ ಪ್ರಾರಂಭವಾಗಿತ್ತು. ಸುಮಾರು ಮೂರು ವರ್ಷಗಳಲ್ಲಿ 600ಕ್ಕೂ ಹೆಚ್ಚು ಮಂದಿಗೆ ಯೋಗಶಿಕ್ಷಣ ನೀಡಿದ ಬಿಕೆಎಸ್ ಅವರ ಖ್ಯಾತಿಯು ಹಲವರ ಕಣ್ಣು ಕುಕ್ಕುವಂತೆ ಮಾಡಿತ್ತು. 1941ರಲ್ಲಿ ಒಂದು ಘಟನೆಯಲ್ಲಿ ಕೆಲ ಹೊಟ್ಟೆಕಿಚ್ಚಿನ ಜನರು ಬಿಕೆಎಸ್ ಯೋಗತರಗತಿಗೆ ಬೆಂಕಿ ಇಟ್ಟಿದ್ದರು. ಬೆಂಕಿಯಲ್ಲಿ ಅವರು ಉಪಯೋಗಿಸುತ್ತಿದ್ದ ಯೋಗ ಸಾಧನಗಳು, ಜಮಖಾನೆ ಎಲ್ಲಾ ಸುಟ್ಟು ಹೋಗಿದ್ದವು. ಇಇಷ್ಟಾದರೂ ಅವರು ತಮ್ಮ ನಿರಂತರ ಯೋಗಸಾಧನೆಯನ್ನು ಮಾತ್ರ ಎಂದಿಗೂ ನಿಲ್ಲಿಸಲಿಲ್ಲ.
ವಿವಾಹ
ಬಿಕೆಎಸ್ ಅತ್ತ ಪುಣೆಯಲ್ಲಿ ಯೋಗಸಾಧನೆಯಲ್ಲಿ ನಿರತವಾಗಿದ್ದರೆ ಇತ್ತ ಅವರ ಮನೆಯವರಿಗೆ ಅವರ ನೆಲೆಯಿಲ್ಲದ ಸನ್ಯಾಸಿಯ ಜೀವನ ಕಂಡು ಆತಂಕ ಪ್ರಾರಂಭವಾಗಿತ್ತು. ಇದೇ ಕಾರಣಕ್ಕೆ ಅವರೆಲ್ಲಾ ಸೇರಿ ಹದಿನಾರು ವರ್ಷದ ರಮಾಮಣಿ ಎಂಬ ಯುವತಿಯೊಡನೆ ಬಿಕೆಎಸ್ ವಿವಾಹ ನೆರವೇರಿಸಲು ನಿಶ್ವಯಿಸಿದರು.
ವಿಶೇಷವೆಂದರೆ ಬಿಕೆಎಸ್ ಯೋಗ ಸಾಧನೆಯೇ ನನ್ನ ಜೀವನೋದ್ದೇಶ ಎಂದುಕೊಂಡಿದ್ದ ಬಿಕೆಎಸ್ ತಾನು ಮದುವೆಯಾಗುವ ಹುಡುಗಿಯನ್ನು ನೋಡಲೂ ಹೋಗಿರಲಿಲ್ಲ! ಜುಲೈ 11, 1943ರಂದು ಅವರ ವಿವಾಹ ನೆರವೇರಿತು. ಬಿಕೆಎಸ್ ಬಾಳಸಂಗಾತಿಯಾಗಿ ಬಂದಿದ್ದ ರಮಾಮಣಿ ಅವರಿಗೆ ಜೀವನದುದ್ದಕ್ಕೂ ಆಧಾರಸ್ತಂಭವೆಂಬತೆ ಇದ್ದರು. ಗಂಡನ ಯೋಗಸಾಧನೆಗೆ ತಾವು ಹಿಂದಿನಿಂದ ಬೆಂಬಲ ನೀಡುತ್ತಾ ಬಂದಿದ್ದ ರಮಾಮಣಿ ಅವರ ಕುರಿತಂತೆ ಬಿಕೆಎಸ್ "ನಾವು ಯಾವುದೇ ದ್ವಂದ್ವವಿಲ್ಲದೆ ನಮ್ಮೆರಡೂ ಆತ್ಮಗಳು ಒಂದೇ ಎಂಬಂತೆ ಜೀವಿಸಿದ್ದೆವು" ಎಂದಿದ್ದರು.
ಗೀತಾ, ಸುನೀತಾ, ಸುಚೀತಾ, ಸುನೀಲಾ, ಸವಿತಾ ಎಂಬ ಐವರು ಹೆಣ್ಣುಮಕ್ಕಳು ಹಾಗೂ ಪ್ರಶಾಂತ ಎಂಬ ಓರ್ವ ಪುತ್ರ ಇವರಿಗೆ ಜನಿಸಿದರು.
ಮೆನ್ಯೂಹಿನ್ ತಂದ ಭಾಗ್ಯ!
1952 ಬಿಕೆಎಸ್ ಜೀವನದಲ್ಲಿ ಮಹತ್ವದ ವರ್ಷವಾಗಿತ್ತು. ಅದೇ ವರ್ಷ ಜಗತ್ಪ್ರಸಿದ್ದ ಪಿಟೀಲು ವಾದಕರಾಗಿದ್ದ ಯಹೂದಿ ಮೆನ್ಯೂಹಿನ್ ಭಾರತಕ್ಕೆ ಆಗಮಿಸಿದ್ದರು. ಭಾರತದ ಪ್ರಥಮ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರ ಅತಿಥಿಯಾಗಿದ್ದ ಮೆನ್ಯೂಹಿನ್ ಗೋಣು ಹಾಗೂ ಬಲಭುಜದ ನೋವಿನಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಮೆನ್ಯೂಹಿನ್ ಕಾರ್ಯಕ್ರಮ ನೀಡಲು ಬಂದಾಗ ಅಲ್ಲಿನ ಓರ್ವ ಐಎಎಸ್ ಅಧಿಕಾರಿ ಅವರಿಗೆ ಪುಣೆಯಲ್ಲಿರುವ ಬಿಕೆಎಸ್ ಅವರನ್ನು ಕಾಣಲು ಹೇಳಿದ್ದರು.
ಐದು ನಿಮಿಷಗಳ ಭೇಟಿ!
ಆತನಿಗೆ ಬಿಕೆಎಸ್ ಅವರನ್ನು ಭೇಟಿಯಾಗುವುದು ಮೊದಲಾಗಿ ಇಷ್ಟವಿರಲಿಲ್ಲ ಆದರೂ ಕೇವಲ ಐದು ನಿಮಿಷಗಳ ಭೇಟಿಗಾಗಿ ಸಮಯ ತೆಗೆದುಕೊಂಡು ಮುಂಬೈನಿಂದ ಪುಣೆಗೆ ಬೆಳಿಗ್ಗೆ ಏಳು ಗಂಟೆಗೆಲ್ಲಾ ಹಾಜರಾಗಿದ್ದರು. ಬಿಕೆಎಸ್ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಮೆನ್ಯೂಹಿನ್ ಗೆ ಬಿಕೆಎಸ್ ಕೆಲ ಆಸನಗಳನ್ನು ಸಲಹೆ ಮಾಡಿದರು.
ಅವರು ಹೇಳಿದ ಆಸನಗಳ ಮಾಡುತ್ತಲೇ ಮೆನ್ಯೂಹಿನ್ ದೇಹದಲ್ಲಿ ಹೊಸ ಚೈತನ್ಯವೊಂದು ಮೂಡಿಬಂದಿತ್ತು. ಐದು ನಿಮಿಷಗಳ ಭೇಟಿಯು ಮೂರೂವರೆ ಗಂಟೆಗಳ ಕಾಲ ವಿಸ್ತರಿಸಿತ್ತು. ಇಷ್ಟರಲ್ಲಿ ಇಬ್ಬರ ನಡುವೆ ಸ್ನೇಹವು ಬೆಳೆದು ಅದು 47 ವರ್ಷಗಳ ಬಳಿಕ 1999ರಲ್ಲಿ ಮೆನ್ಯೂಹಿನ್ ಅಸುನೀಗುವವರೆಗೂ ಈ ಮಹಾಮೈತ್ರಿ ಹಾಗೆಯೇ ಇತ್ತು.
ಬಿಕೆಎಸ್ ಅವರ ಕಾರಣದಿಂದ ಮೆನ್ಯೂಹಿನ್ ಆರಾಮವಾಗಿ ಪಿಟೀಲು ನುಡಿಸುವಂತಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಒಂದು ಬೆಲೆಬಾಳುವ ಗಡಿಯಾರವನ್ನು ಕೊಟ್ಟು ಅದರ ಹಿಂದೆ ಟು ಮೈ ವಯೋಲಿನ್ ಟೀಚರ್- ಬಿ.ಕೆ.ಎಸ್.ಐಯ್ಯಂಗಾರ್ ಎಂದು ಬರೆದಿದ್ದರು.
ವಿದೇಶಗಳಲ್ಲಿ ''ಅಯ್ಯಂಗಾರ್ ಯೋಗ'
1954ರಲ್ಲಿ ಮೆನ್ಯೂಹಿನ್ ಬಿಕೆಎಸ್ ಅಯ್ಯಂಗಾರ್ ಅವರನ್ನು ಸ್ವಿಡ್ಜರ್ ಲ್ಯಂಆಡ್ ಗೆ ಕರೆಸಿಕೊಂಡಿದ್ದರು. ಅಲ್ಲಿಯೇ ಅವರಲ್ಲಿ ಇನ್ನಷ್ಟು ಯೋಗಶಿಕ್ಷಣವನ್ನೂ ಪಡೆದರು. ಮೆನ್ಯೂಹಿನ್ ತಮ್ಮ ಯೋಗ ಗುರುವಿನ ಪರಿಚಯವನ್ನು ಪಾಶ್ಚಾತ್ಯ ದೇಶಗಳಿಗೆ ಮಾಡಿಕೊಟ್ಟರು. ಇದರಿಂದ ಅಯ್ಯಂಗಾರ್ ವಿದೇಶಗಳಲ್ಲಿಯೂ ಯೋಗತರಗತಿಗಳನ್ನು ತೆರೆಯಲು ಸಾಧ್ಯವಾಗಿತ್ತು. ಅವರ ಪ್ರಥಮ ಪುಸ್ತಕ ಲೈಟ್ ಆನ್ ಯೋಗ ಕ್ಕೆ ಮುನ್ನುಡಿಯನ್ನು ಸ್ವತಃ ಮೆನ್ಯೂಹಿನ್ ಬರೆದರು
ಆದರೆ ಪ್ರಾರಂಭದಲ್ಲಿ ಅಲ್ಲಿಯೂ ಅವರು ವರ್ಣಬೇಧದ ಕಠೀಣ ಕಷ್ಟಗಳನ್ನು ಎದುರಿಸಬೇಕಾಗಿತ್ತು. ಕೆಲ ದೇಶದವರು ಇವನಾರೋ ಜಾದೂಗಾರನೆಂದು ಭಾವಿಸಿದ್ದರು. ಲಂಡನ್ ಮಹಾನಗರದಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿತ್ತು. ಆದರೆ ಬಾಲ್ಯದಿಂದ ಕಷ್ಟಗಳ ನಡುವೆಯೇ ಬೆಳ್ದ ಬಿಕೆಎಸ್ ಅವರಿಗಿದು ಅಷ್ಟೇನೂ ಭಿನ್ನವಾಗಿ ಕಾಣಿಸಲಿಲ್ಲ. ಕಡೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇವರ ಯೋಗಸಾಧನೆ, ಯೋಗ ಶಿಕ್ಷಣಗಳು ಎಷ್ಟು ಪ್ರಚುರವಾಗಿತ್ತೆಂದರೆ ಬೆಲ್ಜಿಯಂ ರಾಣಿ ಎಲಿಜಬೆತ್, ಆರನೇ ಪೋಪ್ ಪಾಲ್ ಸಹ ಇವರ ಶಿಷ್ಯರಾಗಿದ್ದರು!
ಇನ್ನು ಭಾರತದಲ್ಲಿ ನೆಹರು, ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ದಿಲೀಪ್ಕುಮಾರ್ ರಾಯ್, ಸಂಗೀತಗಾರ ಅಮ್ಜದ್ ಆಲಿಖಾನ್, ಕಲಾವಿದ ಆರ್.ಕೆ. ಲಕ್ಷ್ಮಣ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಮಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಕಿರಣ್ ಮೋರೆ, ಜಹೀರ್ ಖಾನ್ ಹೀಗೆ ಅನೇಕ ಮಹನೀಯರಿಗೆ ಬಿಕೆಎಸ್ ಯೋಗ ಗುರುಗಳಾಗಿದ್ದರು.
ಅಯ್ಯಂಗಾರ್ ಯೋಗ-ಆದ್ಯಾತ್ಮಿಕ ಶಿಸ್ತು
ಬಿಕೆಎಸ್ ಅಯ್ಯಂಗಾರರಿಗೆ ಯೋಗವೆನ್ನುವುದು ಕೇವಲ ದೈಹಿಕ ವ್ಯಾಯಾಮವಷ್ಟೇ ಆಗಿರಲಿಲ್ಲ ಅದು ಆದ್ಯಾತ್ಮಿಕ ಶಿಸ್ತು ಸಹ ಆಗಿತ್ತು. ಯೋಗವು ಆತ್ಮ ಸಾಕ್ಷಾತ್ಕಾರದ ಮಾದ್ಯಮ" ಎಂದು ಅವರು ಹೇಳುತ್ತಿದ್ದರು. ಬಿಜೆಎಸ್ ತಮ್ಮ ಜೀವಿತಾವಧಿಯಲ್ಲಿ ಸುಮಾರು 200ರಷ್ಟು ಯೋಗ ಭಂಗಿಗಳನ್ನು, ಸುಮಾರು 14 ಬಗೆಯ ಪ್ರಾಣಾಯಾಮ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಿ, ಪ್ರಯೋಗಾರ್ಹ ಯೋಗವಿದ್ಯೆಗೆ ಹೊಸ ಆಯಾಮ ಒದಗಿಸಿಕೊಟ್ಟರು.
ಯೋಗದ ಮೂಲಕ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸಿಕೊಳ್ಳುವುದು ಹೇಗೆಂದು ಇವರು ತೋರಿಸಿಕೊಟ್ಟ ರೀತಿಗೆ ಇಡೀ ಜಗತ್ತು ತಲೆಬಾಗಿತ್ತು. 1970ರ ಅವಧಿಯಲ್ಲಿ ಮೊದಲಬಾರಿಗೆ ಬಿಕೆಎಸ್ ಈ ಹೊಸ ವಿಧಾನದ ಯೋಗವನ್ನು ಪರಿಚಯಿಸಿದ್ದರು. ಉಸಿರಿನ ಮೂಲಕ ನಿಯಂತ್ರಣ ಸಾಧಿಸುವುದಲ್ಲದೆ ದೇಹದ ವಿವಿಧ ಭಾಗಗಳನ್ನು ಆಸನಕ್ಕೆ ಒಳಪಡಿಸಿ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸುವ ಕ್ರಮವೇ ಅವರ ಹೊಸ ಯೋಗ ವಿಧಾನವಾಗಿತ್ತು. ಅದುವೇ ಅಯ್ಯಂಗಾರ್ ಯೋಗ ಎಂದು ಜಗತ್ ಮನ್ನಣೆ ಗಳಿಸಿತ್ತು.
ಪುಸ್ತಕಗಳ ಮೂಲಕ ಯೋಗ ಪ್ರಚಾರ
ಬಿಕೆಎಸ್ ಪ್ರಕಟಿಸಿದ ಪುಸ್ತಕರಗಳ ಸಂಖ್ಯೆಯೂ ದೊಡ್ಡದಿದೆ. ಅವುಗಳಲ್ಲಿ ಲೈಟ್ ಆನ್ ಯೋಗ (1966), ಲೈಟ್ ಆನ್ ಪ್ರಾಣಾಯಾಮ (1978), ಆರ್ಟ್ ಆಫ್ ಯೋಗ (1985) ಲೈಟ್ ಆನ್ ಯೋಗ ಸೂತ್ರಾಸ್ ಆಫ್ ಪತಂಜಲಿ ಅತ್ಯಂತ ಮಹತ್ವವಾದವು.
ಪ್ರಶಸ್ತಿ-ಪುರಸ್ಕಾರಗಳು
ವಿಶ್ವದ ನಾನಾ ಕಡೆ ಯೋಗ ಶಿಕ್ಷಣದ ಮೂಲಕ ಹೆಸರಾದ ಬಿಕೆಎಸ್ ಅಯ್ಯಂಗಾರ್ ಅವರಿಗೆ ಸಾಕಷ್ಟು ಮನ್ನಣೆ ಗೌರವಗಳು ಅರಸಿ ಬಂದಿದ್ದವು. ಅವುಗಳಲ್ಲಿ ಪದ್ಮಶ್ರೀ(1991), ಪದ್ಮ ಭೂಷಣ(2002), ಪದ್ಮ ವಿಭೂಷಣ(2014) ಪ್ರಶಸ್ತಿ ಅತ್ಯಂತ ಶ್ರೇಷ್ಠವಾದದ್ದು.
ಇನ್ನು ಜಗದ್ವಿಖ್ಯಾತ ಟೈಮ್ಸ್ ನಿಯತಕಾಲಿಕವು 2004ರಲ್ಲಿ ಬಿಕೆಎಸ್ ಅಯ್ಯಂಗಾರರನ್ನು ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿತ್ತು.
2011ರಲ್ಲಿ ಚೀನಾ ಅಂಚೆ ಇಲಾಖೆ ಬಿಕೆಎಸ್ ಅವರ ಗೌರವಾರ್ಥ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿತ್ತು. ಆಕ್ಸ್ ಫರ್ಡ್ ಶಬ್ದಕೋಶದಲ್ಲಿ ಸಹ "ಅಯ್ಯಂಗಾರ್" ಎಂಬ ಶಬ್ದವಿದ್ದು ಇದಕ್ಕೆ "ದೇಹದ ಪರಿಪೂರ್ಣ ಭಂಗಿಗಾಗಿ ಬೆಲ್ಟ್, ಮರದ ಇಟ್ಟಿಗೆಯಂತಹಾ ಸಾಧನ ಬಳಸುವ ಹಠಯೋಗದ ಒಂದು ಮಾರ್ಗ" ಎಂದು ಅರ್ಥ ನೀಡಲಾಗಿದೆ!
ಡಿಸೆಂಬರ್2015ರಲ್ಲಿ ಅಯ್ಯಂಗಾರರ 97ನೇ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ರಚಿಸಿಆವರಿಗೆ ಗೌರವ ಸಮರ್ಪಿಸಿತ್ತು.
"ನನ್ನ ದೇಹವೇ ಒಂದು ದೇವಾಲಯ, ಆಸನಗಳೇ ನನ್ನ ಪೂಜೆ, ನಾವು ಪ್ರಾಣಿಗಳಂತೆ ಭೂಮಿಮೇಲೆ ನಡೆದಾಡುತ್ತೇವೆ. ಆದರೆ ಒಂದು ದೈವಿಕ ಚೈತನ್ಯವನ್ನು ಹೊತ್ತಿರುವ ಕಾರಣ ನಕ್ಷತ್ರಗಳೊಡನೆ ತಿರುಗಬಲ್ಲೆವು" ಎಂದಿದ್ದ ಬಿಕೆಎಸ್ ಅಯ್ಯಂಗಾರ್ 2014, ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ಕಾಲವಶರಾದರು.
(ನನ್ನ ಈ ಲೇಖನ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರರ ಜನ್ಮ ಶತಮಾನ ದಿನವಾದ ಡಿಸೆಂಬರ್ 14, 2018ರಂದು ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು)
Sunday, December 09, 2018
ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -98
ಸಿಗಂಧೂರು (Sigandur)
ಮಲೆನಾಡಿನ ದಟ್ಟ ಕಾಡಿನ ನಡುವೆ ಚೌಡೇಶ್ವರಿ ಮಾತೆ ನೆಲೆಸಿದ ಸ್ಥಳವೇ ಸಿಗಂಧೂರು. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿರುವ ಈ ಕ್ಷೇತ್ರಕ್ಕೆ ತೆರಳಲು ಸಾಗರ-ಹೊಳೆಬಾಗಇಲು ನಡುವಿನ ಬಸ್ ಹತ್ತಿ ಸುಮಾರು ದೂರ ಶರಾವತಿಯ ಲಾಂಚ್ ನಲ್ಲಿ ಪ್ರಯಾಣಿಸಿ ಮತ್ತೆ ಬಸ್ ನಲ್ಲಿ ಐದು ಕಿಮೀ ದೂರ ಕ್ರಮಿಸಬೇಕು. ಸಾಗರ ಪಟ್ಟಣದಿಂದ ಸುಮಾರು 40 ಕಿಮೀ ಇರುವ ಸಿಗಂಧೂರಿಗೆ ಬೆಂಗಳೂರಿನಿಂದ 410 ಕಿಮೀ ಆಗಲಿದೆ.
ಸುಮಾರು ಎರಡೂವರೆ ಶತಮಾನ ಕಾಲದಷ್ಟು ಹಳೆಯದಾದ ಈ ಕ್ಷೇತ್ರದಲ್ಲಿ ಮಕರ ಸಂಗಕ್ರಮಣದಿಂದ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಎನಿಸಿದ್ದು ಪ್ರತಿನಿಯ ಬೇರೆ ಬೇರೆ ಊರುಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಸ್ಥಳದ ಸುತ್ತ ಮುತ್ತಲೆಲ್ಲಿಯೂ ಕಳ್ಳತನ ಮಾಡದಂತೆ ದೇವಿಯು ತಡೆದಿದ್ದಾಳೆ ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದೆ. ಈ ದೇವಾಲಯದ ಕೂಗಳತೆ ಅಂತರದಲ್ಲೇ ಭೂತನಾಥ ಎಂಬ ವೀರಭದ್ರ ದೇವಾಲಯವೂ ಇದೆ. ಭೂತನಾಥ ಸುತ್ತಲ ಗ್ರಾಮಗಳನ್ನು ಕಾಯುತ್ತಾರೆ ಎನ್ನುವುದು ಜನರ ನಂಬುಗೆಯಾಗಿದೆ.
***
ಸುಮಾರು ಐದು ಶತಮಾನದ ಹಿಂದೆ ಶೇಶಪ್ಪ ಎಂಬಾತಿಂದಿನ ಸಿಗಂಧೂರು ಇರುವ ಸ್ಥಳದಲ್ಲಿದ್ದ ದಟ್ಟ ಕಾಡಿಗೆ ಬೇಟೆಗಾಗಿ ಬಂದಿದ್ದನು. ದಾರಿ ತಪ್ಪಿದ ಕಾರಣ ರಾತ್ರಿ ಅವನೊಂದು ಮರದಡಿ ಮಲಗಿದ್ದ. ಅಂದಿನ ರಾತ್ರಿ ತಾಯಿ ಚೌಡೇಶ್ವರಿ ಅವನ ಕನಸಲ್ಲಿ ಕಾಣಿಸಿಕೊಂಡು "ಅಯ್ಯಾ ಶೇಶಪ್ಪ, ಇಲ್ಲಿ ನಾನು ನೆಲೆಸಿದ್ದೇನೆ, ನೀನು ನನಗಾಗಿ ಒಂದು ಗುಡಿಯನ್ನಿಲ್ಲಿ ಕಟ್ಟಿಸಬೇಕು" ಎಂದು ಆದೇಶಿಸಿದ್ದಳು.
ಮರುದಿನ ಊರಿಗೆ ಮರಳಿದ ಶೇಶಪ್ಪ ತನ್ನೂರ ಪುರೋಹಿತರ ಬಳಿ ಈ ಸಮಾಚಾರ ಹೇಳಲು ಅವರು ಆ ಸ್ಥಳದಲ್ಲಿ ಗುಡಿ ಕಟ್ಟಿ ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ.
Saturday, November 24, 2018
ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -97
ಶ್ರೀಕ್ಷೇತ್ರ ಧರ್ಮಸ್ಥಳ (Dharmasthala)
ಕರ್ನಾಅಕದಲ್ಲಷ್ಟೇ ಅಲ್ಲದೆ ನೆರೆ ರಾಜ್ಯ ಕೇರಳದಲ್ಲಿ ಸಹ ಮನೆಮಾತಾಗಿರುವ ಸತ್ಯ, ಧರ್ಮನ್ಯಾಯಕ್ಕೆ ಹೆಸರಾದ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷದ ಇತಿಹಾಸವಿದೆ. ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಎಲ್ಲಾ ದೈವಗಳ ಅಧಿಪತಿಯಾಗಿದ್ದು ಇವನೊಂದಿಗಿನ ಧರ್ಮದೇವತೆಗಳು ಇಲ್ಲಿನ ಹೆಗ್ಗಡೆಗಳ ಆದೇಶವನ್ನು ಪಾಲಿಸುತ್ತಾರೆ ಇಂತಹಾ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣ.
![]() |
| ಶ್ರೀ ಮಂಜುನಾಥ ಸ್ವಾಮಿ |
ನೇತ್ರಾವತಿ ನದಿಯ ದಡದಲ್ಲಿ ನೆಲೆಯಾಫ಼್ದ ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.
ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ 75 ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಜಿರೆಯಿಂದ ಕೇವಲ 9 ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ ಸುಬ್ರಹ್ಮಣ್ಯ,ಉಡುಪಿ,ಕೊಲ್ಲೂರು,ಕಟೀಲು ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.
***
ಧರ್ಮಸ್ಥಳವು ರೋಚಕವಾದ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ಧರ್ಮಸ್ಥಳವನ್ನು "ಕುಡುಮ" ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಭೀಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ವಾಸಿಸುತ್ತಿದ್ದರು. ಇವರ ಮನೆಗೆ ಬಂದ ನಾಲ್ವರು ಅತಿಥಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ದಂಪತಿಗಳು ನೋಡಿಕೊಂಡಿದ್ದರು. ಅದೇ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಆ ನಾಲ್ವರು ದೇವತೆಗಳಿಗೆ ಅಣತಿಯಂತೆ ಮನೆಯನ್ನು ಬಿಟ್ಟುಕೊಟ್ಟ ಭೀಮಣ್ಣ ಎಂಬುವರು ದೇವಾಲಯ ನಿರ್ಮಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದಂತೆ. ಆ ನಾಲ್ಕು ದೈವವೆಂದರೆ ಕಾಳರಾಹು - ಪುರುಷ ದೈವ, ಕಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ. ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆಯಿತ್ತರು. ಇದರಂತೆ ಧರ್ಮದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಅಣ್ಣಪ್ಪಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀಮಂಜುನಾಥನ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳುತ್ತದೆ ಇಲ್ಲಿನ ಪ್ರತೀತಿ.
ಮತ್ತೊಂದು ದಂತಕಥೆಯ ಪ್ರಕಾರ, 16 ನೇಯ ಶತಮಾನದಲ್ಲಿ ದೇವಾರಜ ಹೆಗ್ಗಡೆಯವರು ಉಡುಪಿಯ ವಾದಿರಾಜರಿಗೆ ಇಲ್ಲಿಗೆ ಭೇಟಿ ನೀಡಲು ಅಹ್ವಾನಿಸಿದ್ದರು. ಮೊದಲೆ ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಸಂತೋಷದಿಂದ ಒಪ್ಪಿದರು ಹಾಗೂ ಭೇಟಿಯೂ ನೀಡಿದರು. ನಂತರ ಧರ್ಮದೂಟ ಸ್ವೀಕರಿಸಲು ಒಪ್ಪಲಿಲ್ಲ. ಕಾರಣವೆಂದರೆ ಅಲ್ಲಿರುವ ಶಿವಲಿಂಗವು ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ದೇವರಾಜ ಹೆಗ್ಗಡೆಯವರೆ ವಾದಿರಾಜರನ್ನು ಕುರಿತು ನಿಯಮಗಳಿಗನುಸಾರವಾಗಿ ಲಿಂಗವನ್ನು ತಾವೆ ಮರುಪ್ರತಿಷ್ಠಾಪಿಸಬೇಕೆಂದು ವಿನಂತಿಸಿಕೊಂಡರು. ಅವರ ವಿನಯತೆ, ದಾನ ಧಾರ್ಮಗಳ ಮನೋಭಾವದಿಂದ ಪ್ರಸನ್ನರಾದ ಯತಿಗಳು ಸ್ವತಃ ತಾವೆ ದೈವಿಕ ವಿಧಿ ವಿಧಾನಗಳ ಮೂಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಹಾಗೂ ನೈತಿಕತೆ, ಸರಳತೆ, ಧರ್ಮ ನೆಲೆಯೂರಿರುವ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂಬ ನಾಮಕರಣ ಮಾಡಿದರು. ಅಂದಿನಿಂದ ಈ ಕ್ಷೇತ್ರವು ಶ್ರೀಕ್ಷೇತ್ರ ಧರ್ಮಸ್ಥಳವಾಗಿ ಜನಪ್ರಿಯವಾಗಿದೆ.
Tuesday, November 13, 2018
ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -96
ಹಾಸನ (Hassan)
ಹಾಸನ ಕರ್ನಾಟಕದ ಒಂದು ಜಿಲ್ಲಾಕೇಂದ್ರ. ಹಾಸನ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ. ನಗರವು ರಾಜಧಾನಿ ಬೆಂಗಳೂರಿನಿಂದ 187 ಕಿ.ಮೀ ದೂರದಲ್ಲಿದೆ. ಹಾಸನಕ್ಕೆರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿದೆ.
ಹಾಸನ ಜಿಲ್ಲೆಯ ಬೇಲೂರು ಸಮೀಪದ ಹಳೆಬೀಡು ಪ್ರಸಿದ್ದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೇಲೂರು ಚೆನ್ನಕೇಶವ ದೇವಾಲಯ ಶಿಲ್ಪಕಲೆಗಳಿಂದ ವಿಶ್ವ ಪ್ರಸಿದ್ದಿಯನ್ನು ಪಡೆದಿದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಹ ಬಾಹುಬಲಿ ಮೂರ್ತಿಯ ಕಾರಣ ಜೈನರ ಪುಣ್ಯಸ್ಥಳವಾಗಿದ್ದು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.
ಹಾಸನಂಬಾ ಸನ್ನಿಧಿ
![]() |
| ಹಾಸನಂಬಾ ದೇವಿ |
ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂದು ಹೆಸರಿತ್ತು. ದೇವಿಯರು ನೆಲೆಸಿದ ನಂತರ ಹಾಸನ ಎಂಬ ಹೆಸರು ಬಂದಿತು.
ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು.
ವಿಶೇಷವೆಂದರೆ ಇಲ್ಲಿ ಎಲ್ಲಾ ದೇವಸ್ಥಾನಗಳಂತೆ ವರ್ಷ ಪೂರ್ತಿ ಪೂಜೆ ನಡೆಯುವುದಿಲ್ಲ.ರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ಬಾಗಿಲು ತೆಗೆದಾಗ ದೇವಿಯರ ದರ್ಶನದ ಲಾಭವಾಗುತ್ತದೆ. ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ಬಾಗಿಲನ್ನು (ವರ್ಷಕೊಮ್ಮೆ) ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮರುದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ.
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ಆಕಸ್ಮಿಕ ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ.
ಹಿಂದೆಲ್ಲಾಈ ದೇವರ ಎದುರು ೩ ಬುಟ್ಟಿಯಲ್ಲಿ ಅನ್ನವನ್ನು ಮಾಡಿ ಇಡಲಾಗುತ್ತಿತ್ತು. ಆ ಸಮಯದಲ್ಲಿ ಅನ್ನವು ಹಾಳಾಗದೆ ಬಿಸಿಯಾಗಿರುತ್ತಿತ್ತು ಮತ್ತು ಅದನ್ನೇ ದೇವರ ಪ್ರಸಾದವೆಂದು ಬಡಿಸಲಾಗುತ್ತಿತ್ತು. ಈಗ ಆ ಪದ್ಧತಿಯೂ ಕ್ರಮೇಣ ನಿಂತುಹೋಯಿತು.
***
ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವೀ, ವಹಾಹಿಣಿ, ಇಂದ್ರಾಣಿ ಮತ್ತು ಚಾಮುಂಡಿ ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ, ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ, ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿರುವರು. ಬ್ರಾಹ್ಮದೇವಿಯು ಹಾಸನದಿಂದ ಸುಮಾrvedರು ೩೫ ಕಿ.ಮೀ. ದೂರದಲ್ಲಿರುವ ಕೆಂಚಮ್ಮ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ.
***
ಓರ್ವ ಸೊಸೆಗೆ ಅತ್ತೆಯು ಬಹಳಷ್ಟು ಕಷ್ಟ ಕೊಡುತ್ತಿದ್ದಳು. ಆ ಸೊಸೆಯು ಪ್ರತಿನಿತ್ಯ ದೇವಸ್ಥಾನಕ್ಕೆ ಬಂದು ದೇವರ ಬಳಿ ಮಾತನಾಡುತ್ತಿದ್ದಳು. ದೇವತೆಯರು ಅವಳಿಗೆ ಪ್ರತ್ಯಕ್ಷರಾಗಿ ಮಾತನಾಡಿಸುತ್ತಿದ್ದರು ಮತ್ತು ಈ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ದೇವಿಯರು ಸೊಸೆಗೆ ಹೇಳಿದ್ದರು. ಒಂದು ದಿನ ಸೊಸೆ ಅಮ್ಮ ನವರ ದರ್ಶನ ಪಡೆಯಲು ಹೊರಟಾಗ, ಅತ್ತೆಯು ಅವಳನ್ನು ಹಿಂಬಾಲಿಸಿ, ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತು ಧ್ಯಾನ ಮಗ್ನಳಾಗಿದ್ದ ಸೊಸೆಯನ್ನು ಕಂಡು ಕೋಪದಿಂದ ಅತ್ತೆಯು ಮನೆಯ ಕೆಲಸ ಕಾರ್ಯಗಳಿಗಿಂತ ಅಮ್ಮನವರ ದರ್ಶನ ಹೆಚ್ಚಾಯಿತೆ! ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಟ್ಟಿದಾಗ ನೋವನ್ನು ತಾಳಲಾರದೆ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ಭಕ್ತಳ ಕಷ್ಟವನ್ನು ನೋಡಿ ಅವಳ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆಯು ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸಲು ಸಿಗುವುದು ಮತ್ತು ಆ ಕಲ್ಲು ವರ್ಷದಿಂದ ವರ್ಷಕ್ಕೆ ಭತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ ಮತ್ತು ಅದು ಸಂಪೂರ್ಣ ಚಲಿಸಿ ದೇವಿಯರ ಪಾದ ತಲುಪಿದ ದಿನ ಕಲಿಯುಗದ ಅಂತ್ಯವಾಗುತ್ತದೆ.
Friday, October 19, 2018
ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -95
ಶಿರಡಿ (Shirdi)
ಭಾಗ- 2
"ಓಂ ಸಾಯಿರಾಂ" ಇಂದು (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.
ಚಿಕ್ಕ ಗ್ರಾಮವನ್ನು ಜಗತ್ರಸಿದ್ಧ ಯಾತ್ರಾಸ್ಥಳವನ್ನಾಗಿಸಿದ ಮಹಾಸಂತ
ಸಾಯ್ಒಂದು ಕಾಲದಲ್ಲಿ ಹಳೆಯ ಹಾಗು ಚಿಕ್ಕದಾದ ಗ್ರಾಮವಾಗಿತ್ತು. ಈ ದಿನ ಆ ಸ್ಥಳವು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುವ
ಪವಿತ್ರವಾದ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸಾಯಿಬಾಬಾ ಅವರ ಜೀವನ ಕಾಲದಲ್ಲಿ 50 ವರ್ಷಕ್ಕಿಂತ ಹೆಚ್ಚಾಗಿ ನಿವಾಸಿಸಿ
ಒಂದು ದೊಡ್ಡಇಬಾಬಾ ಒಬ್ಬ ಪವಾಡ ಪುರುಷ ಎನ್ನುವುದಕ್ಕಿಂತ ಅವರೊಬ್ಬ ಯೋಗಿ, ಮಹಾಗುರು, ಸಂತರೆಂದು ಹೇಳಬಹುದು.
ಯಾತ್ರಾ ಸ್ಥಳವಾಗಿ ಪರಿರ್ವತನೆ ಮಾಡಿದರು.
ಮಹಾಯೋಗಿಯು 1918 ರಲ್ಲಿ ಸಮಾಧಿಯಾದರೂ, ಅಂದಿನಿಂದ ಆತನ ಸಮಾಧಿಯನ್ನು ನಿತ್ಯವೂ ಲಕ್ಷಾದಿ ಮಂದಿ ಭಕ್ತರು
ದರ್ಶನವನ್ನು ಪಡೆಯುತ್ತಾರೆ. ಬಾಲ ಯೋಗಿಯಾಗಿ ಬಾಬಾ ಶಿರಿಡಿಯನ್ನು ಸೇರಿಕೊಂಡ ಪ್ರದೇಶವನ್ನು "ಗುರುಸ್ಥಾನ" ಎಂದು ಕೂಡ
ಕರೆಯುತ್ತಾರೆ. ಇಂದು ಅಲ್ಲಿ ಅದ್ಭುತವಾದ ದೇವಾಲಯವನ್ನು ಹಾಗು ಸ್ಮಾರಕವನ್ನು ಸ್ಥಾಪನೆ ಮಾಡಿದ್ದಾರೆ.
ಇನ್ನು ಶಿರಡಿಗೆ ಆಗಮಿಸುವವರಿಗೆ ಖಂಡೋಬಾ ದೇವಾಲಯ, ಸಾಕೋರಿ ಆಶ್ರಮ, ಶನಿ ದೇವಾಲಯ, ಚಂಗ್ ದೇವ್ ಮಹಾರಾಜ್
ಸಮಾಧಿ, ನರಸಿಂಹ ದೇವಾಲಯಗಳು ಆಕರ್ಷಣೆಯ ಕೇಂದ್ರವಾಗುತ್ತದೆ. ಬಾಬಾ ಅವರು ತಮ್ಮ ಸ್ವ ಹಸ್ತದಿಂದ ಬೆಳಸಿ ಪೋಷಿಸಿದ
ತೋಟವು ಕೂಡ ಇದೆ. ಬಾಬಾ ನಿತ್ಯವು ಈ ವನವನ್ನು ದರ್ಶನ ಮಾಡಿ ನಿಂಬೆ ಮರದ ಕೆಳಗೆ ವಿಶ್ರಮಿಸುತ್ತಿದ್ದರು ಎನ್ನುವುದು
ವಿಶೇಷ.
ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಸುಂದರವಾದ ಬಾಬಾ ಅವರ ವಿಗ್ರಹವಿದ್ದು ಗುರುವಾರದಂದು ಭಾರಿ ಸಂಖ್ಯೆಯಲ್ಲಿಯೇ ಜನರು ಸೇರಿರುತ್ತಾರೆ. ಆ ದಿನವು ಪ್ರತ್ಯೇಕವಾದ ಪೂಜೆ, ಬಾಬಾ ವಿಗ್ರಹದ ಪ್ರತ್ಯೇಕವಾದ ದರ್ಶನವಿರುತ್ತದೆ. ಮಂದಿರದಲ್ಲಿ ಬೆಳಗಿನ ಜಾವದ 5 ಗಂಟೆಗೆ ಬಾಬಾಗೆ ಕಾಕಡ ಹಾರತಿಯನ್ನು ಮಾಡುತ್ತಾರೆ. ರಾತ್ರಿಯ ಸಮಯದಲ್ಲಿ ಪ್ರಾರ್ಥನೆಯ ನಂತರ 11 ಗಂಟೆಗೆ ದೇವಾಲಯವನ್ನು ಮುಚ್ಚುತ್ತಾರೆ.
ಮಂದಿರದಲ್ಲಿ ಸುಮಾರು 600 ಮಂದಿ ಭಕ್ತರಿಗೆ ಸರಿಹೋಗುವಂತಹ ಬೃಹತ್ ಹಾಲ್ ಕೂಡ ಇದೆ. ಮೊದಲನೇ ಅಂತಸ್ತಿನಲ್ಲಿ ಬಾಬಾರ ಜೀವನದಲ್ಲಿನ ಮುಖ್ಯವಾದ ಘಟ್ಟಗಳನ್ನು ಕಾಣುವ ಚಿತ್ರಗಳು ಇವೆ. ಈ ಪವಿತ್ರವಾದ ಸ್ಥಳದಲ್ಲಿನ ಅಂಗಡಿಗಳಲ್ಲಿಯೂ ಬಾಬಾ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ಚಿತ್ರಗಳನ್ನು ಮಾರಾಟ ಮಾಡುತ್ತಾರೆ.
ಸಾಯಿಬಾಬಾ ವಿಗ್ರಹ ಸ್ಥಾಪನೆ
ಗುಜರಾತ್‍ನಲ್ಲಿ 1889 ರಲ್ಲಿ ಜನ್ಮಿಸಿದ ಸ್ವಾಮಿ ಸಾಯಿಚರಣ್ ಮೊಟ್ಟಮೊದಲ ಬಾರಿಗೆ ಸಾಯಿಬಾಬಾ ಅವರನ್ನು ತನ್ನ ತಂದೆಯ ಜೊತೆ ಸೇರಿ ಮೊಟ್ಟ ಮೊದಲ ಬಾರಿಗೆ ಅಂದರೆ 1911 ರಲ್ಲಿ ಬಾಬಾರನ್ನು ಆನಂದ ದರ್ಶನ ಮಾಡಿಕೊಂಡನು.
ಕುಷ್ಠರೋಗಿಗಳನ್ನು ನಯ ಮಾಡುತ್ತಿದ್ದ ಬಾಬಾ ಅವರನ್ನು ಕಂಡು ಆಶ್ಚರ್ಯಗೊಂಡ ಆನಂದನು ತನ್ನ ತಂದೆಯವರ ಅನುಮತಿಯ ಮೇರೆಗೆ ಸಾಷ್ಟಾಂಗ ಸಮಸ್ಕಾರವನ್ನು ಮಾಡಿದ. ಆಗ ಬಾಬಾ ಅವರು ಆನಂದನಿಗೆ ದೇವರು ಇದ್ದಾನೆಯೋ, ಇಲ್ಲವೋ ಎಂದು ಎಂದಿಗೂ ಅನುಮಾನ ಬೇಡ ಎಂದರು. ತದನಂತರ 1912 ರಲ್ಲಿ ಗುರು ಪೌರ್ಣಮಿಯಂದು ಬಾಬಾ ಆನಂದನ ಕನಸ್ಸಿನಲ್ಲಿ ಬಂದು "ನೀನೆಂದರೆ ನನಗೆ ಇಷ್ಟ" ಎಂದು ಹೇಳಿದರು. ಅಂದಿನಿಂದ ಆನಂದನು ಆ ಶಿರಿಡಿಯಲ್ಲಿಯೇ ಉಳಿದುಕೊಂಡನು. ಬಾಬಾ ಭಕ್ತರಿಂದ ದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಆನಂದನು ಹಲವಾರು ಬಾರಿ ಕಂಡಿದ್ದನು. ಬಾಬಾ ಅವರ ಜೀವಿತಾವಧಿಯಲ್ಲಿ ಹಲವಾರು ಅದ್ಭುತಗಳು, ಭೋದನೆಗಳನ್ನು ಸಮೀಪದಲ್ಲಿಯೇ ಇದ್ದು ಪುಸ್ತಕಗಳನ್ನು ರಚನೆ ಮಾಡಬೇಕು ಎಂದು ಅಂದುಕೊಂಡನು.
ಬಾಬಾ ಸಮಾಧಿಯಾದ ನಂತರ ಸಾಯಿ ಸಂಸ್ಥಾನದಲ್ಲಿ ಕಾರ್ಯಕಲಾಪಗಳಲ್ಲಿ ಆನಂದನು ಪಾಲ್ಗೊಳ್ಳುತ್ತಿದ್ದನು. 1945 ರಲ್ಲಿ ಶಿರಿಡಿ ಸಮಾಧಿ ಮಂದಿರದಲ್ಲಿ ಬಾಬಾರವನ್ನು ಅಮೃತ ಶಿಲೆಯಲ್ಲಿ ವಿಗ್ರಹವನ್ನು ಪ್ರತಿಷ್ಟಾನೆ ಮಾಡಿದರು. ಆನಂದ್ 1963 ರಲ್ಲಿ ಸನ್ಯಾಸವನ್ನು ಸ್ವೀಕಾರ ಮಾಡಿ ಸ್ವಾಮಿಜೀಯಾಗಿ ಮಾರ್ಪಾಟಾದರು.
ಶಿರಡಿ ಸಾಯಿಬಾಬಾರವದರ ಬೋಧನೆಗಳು
ಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ
ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ
ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ
ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು.
ಸಾಯಿ ಬಾಬಾ ಅಭಯ ವಾಕ್ಯಗಳು
ಶಿರಡಿಯ ಪವಿತ್ರ ಮಣ್ಣಿನ ಮೇಲೆ ಪಾದವಿರಿಸಿದ ಯಾರಿಗೆ ಆಗಲಿ ಕೆಟ್ಟದ್ದು ಎಂಬುದು ಘಟಿಸಲಾರದು.
ನನ್ನ ಸಮಾಧಿಗೆ ಭೇಟಿ ಕೊಡುವರಿಗೆ ಕಷ್ಟ ಮತ್ತು ಯಾತನೆಗಳು ದೂರಾಗುವವು.
ನಾನು ಭೌತಿಕವಾಗಿ ಇಲ್ಲವಾದರೂ, ನನ್ನ ಸಮಾಧಿಯಿಂದಲೇ ಸದಾ ಭಕ್ತರನ್ನು ರಕ್ಷಿಸುತ್ತೇನೆ.
ನನ್ನನ್ನು ನಂಬಿ, ನಿಮ್ಮ ಎಲ್ಲ ಪ್ರಾರ್ಥನೆಗಳಿಗೂ ನನ್ನಲ್ಲಿ ಉತ್ತರಗಳಿವೆ.
ನನ್ನ ಆತ್ಮವು ಅಮರವಾಗಿದೆ. ಇದನ್ನು ಮೊದಲು ತಿಳಿದುಕೊಳ್ಳಿ.
ನನ್ನನ್ನು ನಂಬಿ ಆರಾಧಿಸಿದ ಭಕ್ತರ ಮನೆಯಲ್ಲಿ ಕಷ್ಟ ಎಂಬ ಪದವೇ ಇರಲಾರದು.
ನನಗೆ ಯಾರು ಸಂಪೂರ್ಣವಾಗಿ ಶರಣಾಗುವರೋ ಅವರಿಗೆ ನಾನು ಸಂಪೂರ್ಣ ಅಧೀನನಾಗಿರುತ್ತೇನೆ.
ಎಲ್ಲರ ಭಾರವನ್ನು ನಾನು ತೆಗೆದುಕೊಳ್ಳುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ.
ಎಲ್ಲ ಸಹಾಯವೂ ಇಲ್ಲೇ ಸಿಗುತ್ತದೆ. ಇದನ್ನು ತಿಳಿಯಿರಿ ಯಾರು ಯಾರು ಹೇಗೆ ಬೇಡುತ್ತಾರೊ ಹಾಗೆ ಫಲವು ದೊರೆಯುತ್ತದೆ.
ಯಾರಾದರೂ ನನಗೆ ಶರಣು ಬಂದು, ಅವರ ಜೀವನ ಪ್ರಯೋಜನವಾಗದೆ ಇದ್ದಾರೆ ತೋರಿಸಿ.
ಸಾಯಿ ಸಾಯಿ ಎಂದವನೇ ಪುಣ್ಯವಂತನು, ನನ್ನ ಮೇಲೆ ಅನನ್ಯ ವಿಶ್ವಾಸ ಶ್ರದ್ಧೆ ಇಟ್ಟು ಸಾಯಿ ಸಾಯಿ ಎಂದವನೇ ಧನ್ಯನು.
ಪವಾಡಗಳು
ಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು ನೋಡಿದ್ದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿರುವುದು, ನಿರಾಧಾರವಾಗಿ ಗಾಳಿಯಲ್ಲಿ ತೇಲುವುದು, ಮುಖ ನೋಡಿದ ತಕ್ಷಣ
ಮನಸ್ಸಿನಲ್ಲಿರುವುದನ್ನು ಹೇಳುವುದು, ದೇಹದಿಂದ ಆತ್ಮದ ಬೇರ್ಪಡಿಸುವಿಕೆ, ಯಮುನಾ ನದಿಯ ಸೃಷ್ಟಿ, ಸಮಾಧಿ ಸ್ಥಿತಿಗೆ
ತಲುಪುವುದು, ರೋಗಿಗಳನ್ನು ಕ್ಷಣಾರ್ಧದಲ್ಲಿ ಗುಣಮುಕ್ತರನ್ನಾಗಿ ಮಾಡುವುದು, ಕರುಳು ಮತ್ತಿತರ ಹೊಟ್ಟೆಯ ಭಾಗಗಳನ್ನು
ಹೊಟ್ಟೆಯಿಂದ ತೆಗೆದು ಮತ್ತೆ ಹಾಗೆ ಕೂಡಿಸುವುದು,ಬೀಳುತ್ತಿದ್ದ ಮಸೀದಿಯನ್ನು ನೋಟದಿಂದಲೇ ತಡೆದಿದ್ದು, ತಮ್ಮ ಭಕ್ತರಿಗೆ ಪವಾಡ
ಸದೃಶವಾಗಿ ಸಹಾಯ ಮಾಡುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ.
ಇಂತಹಾ ಕೆಲ ಪ್ರಮುಖ ಪವಾಡಗಳ ಕಿರು ನೋಟ ಇಲ್ಲಿದೆ-
ಮಹಿಳೆಯ ಅಂಧತ್ವ ನಿವಾರಿಸಿದ ಸಾಯಿ ಬಾಬಾ
ಸಾಯಿ ಬಾಬಾರ ಭಕ್ತೆಯೊಬ್ಬರು ಯಾವುದೋ ಕಾರಣದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಹಲವು ನೇತ್ರವೈದ್ಯರಲ್ಲಿ
ತೋರಿಸಿದ ಬಳಿಕವೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲ, ವಿದೇಶಕ್ಕೂ ಕರೆದುಕೊಂಡು ಹೋಗಿ ತಜ್ಞರಿಗೆ
ತೋರಿಸಲಾಯಿತು. ಎಲ್ಲೂ ಇವರ ಅಂಧತ್ವಕ್ಕೆ ಪರಿಹಾರವೇ ಇರಲಿಲ್ಲ. ಇವರ ದುಃಖವನ್ನು ನೋಡಲಾರದೇ ಆಕೆಯ ಪತಿ ಆಕೆ
ಆರಾಧಿಸುತ್ತಿದ್ದ ಸಾಯಿಬಾಬಾರ ಸಮಾಧಿಯನ್ನು ಸಂದರ್ಶಿಸುವ ಮೂಲಕ ಕೊಂಚ ಮನಸ್ಸಿಗೆ ಶಾಂತಿ ಸಿಗಬಹುದು ಎಂದು ಶಿರ್ಡಿಗೆ
ಕರೆದುಕೊಂಡು ಬಂದರು.
ಸಾಯಿಬಾಬಾರ ಸಮಾಧಿಯ ಬಳಿ ಆಕೆ ತನಗೆ ದೃಷ್ಟಿ ಬಂದರೆ ತಾವು ಬಾಬಾರಿಗೆ ಕಸೂತಿ ಇರುವ ಶಾಲ್ ಒಂದನ್ನು ದೇಣಿಗೆ
ನೀಡುವುದಾಗಿ ಹರಕೆ ಹೊತ್ತರು. ಅಂದಿನಿಂದ ನಿಧಾನವಾಗಿ ಅವರ ದೃಷ್ಟಿ ಮರುಕಳಿಸತೊಡಗಿತು. ಒಂದೇ ವರ್ಷದಲ್ಲಿ ಅವರು
ಪೂರ್ಣ ದೃಷ್ಟಿಯನ್ನು ಪಡೆದರು. ಬಳಿಕ ಅವರು ತಮ್ಮ ಮಾತಿನಂತೆ ದೇಣಿಗೆಯನ್ನು ಒಪ್ಪಿಸಿ ಹರಕೆಯನ್ನು ಪೂರೈಸಿದರು.
ಬೆಂಕಿಯ ಮುನ್ಸೂಚನೆ
ಒಮ್ಮೆ ಶಿರಡಿಯಲ್ಲಿ ಬೆಳೆಯ ಕಟಾವು ಮುಗಿದ ಬಳಿಕ ಒಂದು ಮೈದಾನದಲ್ಲಿ ಇಡಿಯ ಗ್ರಾಮದವರ ಬೆಳೆಯನ್ನು ಒಂದೆಡೆ
ಸಂಗ್ರಹಿಸಲಾಗಿತ್ತು. ಅದು ಬೇಸಿಗೆಯ ದಿನವಾಗಿದ್ದು ಬಿಸಿಲು ಪ್ರಖರವಾಗಿತ್ತು. ಎಲ್ಲರ ಮೈಯಿಂದ ಬೆವರು ಸುರಿಯುತ್ತಿತ್ತು. ಒಂದು
ದಿನ ನಡುಮಧ್ಯಾಹ್ನ ಎಲ್ಲರೂ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ
ಗ್ರಾಮಸ್ಥರೊಬ್ಬರಿಗೆ ಬೆಳೆಗೆ ಬೆಂಕಿ ಹತ್ತಿದೆ ಎಂದು ತಿಳಿಸಿದರು.
ಕೂಡಲೇ ಬೆಳೆ ಇದ್ದ ಕಡೆ ಓಡಿದ ಆ ಗ್ರಾಮಸ್ಥ ದೂರದಿಂದ ಕಂಡಾಗ ಯಾವುದೇ ಬೆಂಕಿ ಕಾಣಿಸದ ಕಾರಣ ಹಿಂದಿರುಗಿ ಅಲ್ಲಿ
ಯಾವುದೇ ಬೆಂಕಿ ಇಲ್ಲವೆಂದು ತಿಳಿಸಿದ. ಆದರೆ ತಮ್ಮ ಮಾತಿನಿಂದ ಹಿಂದೆ ಬರದ ಸಾಯಿಬಾಬಾ ಮತ್ತೊಮ್ಮೆ ಹೋಗಿ ನೋಡು,
ಬೆಂಕಿ ಇದೆ, ಎಂದು ತಿಳಿಸಿದರು. ಯಾವುದಕ್ಕೂ ಹೋಗಿ ನೋಡೋಣ ಎಂದು ಪರಿಶೀಲಿಸಲು ಬಂದ ಗ್ರಾಮಸ್ಥರಿಗೆ ನಿಜವಾಗಿಯೂ
ಬೆಳೆಯ ಗುಂಪಿನ ಹತ್ತಿರವೇ ಇದ್ದ ಹುಲ್ಲಿನ ಕಟ್ಟೊಂದಕ್ಕೆ ಬೆಂಕಿ ಹತ್ತಿದ್ದು ಇನ್ನು ಕೊಂಚ ಹೊತ್ತು ಕಳೆದಿದ್ದರೆ ಇಡಿಯ ಬವಣೆಗೆ ಬೆಂಕಿ
ಹತ್ತುವ ಸಂಭವವಿತ್ತು.
ನೀರಿನಿಂದ ದೀಪ ಬೆಳಗಿತು!
ಸಂತರೆಂದು ಗುರುತಿಸಲ್ಪಡುವ ಮುನ್ನ ಸಾಯಿ ಬಾಬಾರಿಗೆ ಜನರ ಮನಃಸ್ಥಿತಿಯನ್ನು ಅರಿಯಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು.
ಇದಕ್ಕೊಂದು ಉದಾಹರಣೆ ಎಂದರೆ ನೀರಿನಿಂದ ದೀಪ ಬೆಳಗಿಸುವ ಪವಾಡ. ಅಂದು ಫಕೀರ (ಧರ್ಮ ಪ್ರಚಾರಕ) ರಾಗಿದ್ದ
ಸಾಯಿಬಾಬಾರಿಗೆ ಮಸೀದಿಯಲ್ಲಿ ಹಚ್ಚುವ ದೀಪಕ್ಕೆ ಎಣ್ಣೆ ಕೊಳ್ಳಲು ಹಣವಿಲ್ಲದೇ ಇದ್ದ ಕಾರಣ ವರ್ತಕರಿಂದ ಎಣ್ಣೆಯನ್ನು ದಾನ
ಪಡೆದುಕೊಳ್ಳಬೇಕಾಗಿ ಬರುತ್ತಿತ್ತು.
ಆದರೆ ಪ್ರತಿಬಾರಿ ಎಣ್ಣೆಯನ್ನು ದಾನ ನೀಡಿ ಬೇಸರಿಸಿದ ವರ್ತಕರು ಒಂದು ದಿನ ತಮ್ಮಲ್ಲಿ ಎಣ್ಣೆ ಇಲ್ಲ ಎಂದು ಸುಳ್ಳೇ ಹೇಳಿದರು.
ಇವರ ಮಾತಿಗೆ ಯಾವುದೇ ಎದುರುತ್ತರ ನೀಡದ ಸಾಯಿಬಾಬಾ ದೀಪಗಳನ್ನು ನೀರಿನಿಂದ ತುಂಬಿಸಿ ಬೆಳಗಿಸಿದರು. ಈ ದೀಪಗಳು
ಸೂರ್ಯಾಸ್ತದ ಸಮಯದಿಂದ ಮಧ್ಯರಾತ್ರಿಯವರೆಗೆ ಎಣ್ಣೆ ಉರಿದಂತೆಯೇ ಉರಿದವು.
ಎಲ್ಲರನ್ನೂ ಪ್ರೀತಿಸಿ
ಬಾಬಾರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು ಅವರು ಯಾರನ್ನೂ ಜಾತಿ ಮತ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ
ಪರಿಗಣಿಸುತ್ತಲೇ ಇರಲಿಲ್ಲ. ಬರೆಯ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳನ್ನೂ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎಷ್ಟೋ
ಸಲ ತಮ್ಮ ಭಕ್ತರ ಮನೆಗಳಲ್ಲಿ ಅವರು ಪ್ರಾಣಿಗಳ ರೂಪದಲ್ಲಿ ಬಂದು ಅವರ ಮನೆಯ ಪ್ರಸಾದ ಸ್ವೀಕರಿಸುತ್ತಿದ್ದರು. ಒಮ್ಮೆ ಅವರ
ಭಕ್ತರಾದ ದಾಮಿಯಾ ಎಂಬುವರು ಬಾಬಾರನ್ನು ತಮ್ಮ ವಠಾರಕ್ಕೆ ಊಟಕ್ಕೆ ಆಹ್ವಾನಿಸಿದರು. ಆದರೆ ಬಾಬಾ ತಮ್ಮ ಬದಲಿಗೆ ತಮ್ಮ
ಇನ್ನೊಬ್ಬ ಭಕ್ತ ಬಾಲಾ ಪಟೇಲ್ ಎಂಬುವರು ಬರುತ್ತಾರೆ ಎಂದು ತಿಳಿಸಿದರು
ಬಾಲಾ ಪಟೇಲ್ ದಲಿತರಾಗಿದ್ದ ಕಾರಣ ದಾಮಿಯಾ ಅಥವ ಅವರ ಪಂಗಡದ ಯಾರೂ ಬಾಲಾಪಟೇಲರನ್ನು ಅವಮಾನ
ಮಾಡುವುದಾಗಲೀ ಮೂದಲಿಸುವುದಾಗಲೀ ಮಾಡಬಾರದು, ತಮ್ಮಿಂದ ದೂರವಾಗಿ ಕುಳ್ಳರಿಸಬಾರದು ಎಂದು ಸ್ಪಷ್ಟವಾಗಿ
ತಿಳಿಸಿದರು. ಅಂತೆಯೇ ಬಾಬಾ ಹಾಗೂ ಉಳಿದವರಿಗಾಗಿ ಅನ್ನದ ತಟ್ಟೆಗಳನ್ನು ಸಿದ್ಧಪಡಿಸಿದ ದಾಮಿಯಾ "ಸಾಯಿ, ಬನ್ನಿ" ಎಂದು
ಕರೆದ ತಕ್ಷಣ ಎಲ್ಲಿಂದಲೂ ಒಂದು ಕಪ್ಪು ನಾಯಿ ಓಡೋಡಿ ಬಂದು ಬಾಬಾರಿಗಾಗಿ ಇಟ್ಟಿದ ತಟ್ಟೆಯಿಂದ ತಿಂದು ಬಂದಷ್ಟೇ
ವೇಗವಾಗಿ ಹಿಂದಿರುಗಿತು. ಬಳಿಕ ದಾಮಿಯಾ ಹಾಗೂ ಬಾಲಾ ಪಟೇಲ್ ಜೊತೆಯಾಗಿ ಕುಳಿತು ಊಟ ಮಾಡಿದರು.
ಬಾಬಾರಿಗೆ ಶಿಷ್ಟಾಚಾರ ಮತ್ತು ಧರ್ಮದ ಅಂಧಾನುಕರಣೆ ಬೇಕಿರಲಿಲ್ಲ. ಅವರ ಅನುಗ್ರಹ ಪಡೆಯಲು ಭಕ್ತಿ ಮತ್ತು ನಂಬಿಕೆಯೇ ಸಾಕು
ಎಂದು ಅವರ ಭಕ್ತರು ಇಂದಿಗೂ ನಂಬುತ್ತಾರೆ.
ಪಟೇಲನ ಕುದುರೆ
ಧೂಪ್ಖೇಡಾ ಗ್ರಾಮದ ಪಟೇಲನಾದ ಚಾಂದ್ಪಾಟೀಲ್ ಕಳೆದುಹೋದ ತನ್ನ ಕುದುರೆಯನ್ನು ಹುಡುಕುವುದರಲ್ಲಿ
ಮನುಷ್ಯಪ್ರಯತ್ನವನ್ನೆಲ್ಲ ಮಾಡಿ ದಾರಿಕಾಣದೆ ‘ಏಲಗಂಗಾ’ ನದಿದಂಡೆಯ ಮೇಲೆ ಕುಳಿತು ದುಃಖಭಾರದಲ್ಲಿ ಅಶ್ರುಧಾರೆ ಹರಿಸಿ,
ನಂಬಿದ ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನಿಸುತ್ತಿದ್ದನು. ಆಗ ಯಾರೋ ತನ್ನ ಹೆಸರನ್ನು ಕೂಗಿ ಕರೆಯುತ್ತಿರುವಂತೆ
ಭಾಸವಾಗಿ ನದಿದಂಡೆಯ ಬೆಟ್ಟದ ಮೇಲಿನ ಕಲ್ಲುಬಂಡೆಗಳ ದಾಟಿ ಅಲ್ಲಿದ್ದ ದಿವ್ಯಪುರುಷನ ಕಂಡು ಮಾತು ಹೊರಡದೆ ನಿಂತನು.
ಆಗ ಫಕೀರನು ‘ಯಾಕೆ ಚಾಂದ್ಪಾಟೀಲ್, ಸೋಜಿಗವ ಕಂಡಂತೆ ನಿಂತಿರುವೆ?’ ಎಂದನು. ದೇವವಾಣಿಯ ಮಾಧುರ್ಯ
ತುಂಬಿದ ಫಕೀರನ ಮಾತಿಗೆ ಇನ್ನಷ್ಟು ಚಕಿತನಾದ ಚಾಂದ್, ‘ತಮಗೆ ನನ್ನ ಹೆಸರು ಹೇಗೆ ಗೊತ್ತು?’ ಎಂಬುದಾಗಿ
ಕುತೂಹಲದಲ್ಲಿ ಕೇಳಿದಾಗ ಆ ಮಹಾತ್ಮನು ಮಂದಹಾಸ ಬೀರಿದನು. ‘ಇಲ್ಲಿನ ಚರಾಚರಗಳೆಲ್ಲವುಗಳ ಬಗ್ಗೆ ಅರಿವಿರುವ ನನಗೆ
ನಿನ್ನ ಹೆಸರು ತಿಳಿಯದಿರುವುದೇ ಪಾಟೀಲ್? ನಿನ್ನ ನೆಚ್ಚಿನ ಕುದುರೆ ಕಳೆದುಕೊಂಡು ರೋದಿಸುತ್ತಿರುವೆಯಲ್ಲವೇ? ಅದರ ಅಗಲಿಕೆಯ
ನೋವನ್ನು ಸಹಿಸದಾಗದೆ ನಿನ್ನ ದೈನಂದಿನ ವ್ಯವಹಾರವನ್ನೂ ಮರೆತು ಬಿಜಿಲಿಯ ಜೀನು ಹೆಗಲಿನಲ್ಲಿ ಹೊತ್ತು ಅದನ್ನು ಹುಡುಕುತ್ತ
ಊರುಕೇರಿ ಕಾಡುಮೇಡು ಅಲೆಯುತ್ತಿರುವೆಯಲ್ಲವೇ? ಪ್ರಾಪಂಚಿಕ ವಿಷಯವಾಸನೆಯಲ್ಲಿ ತನ್ನನ್ನು ತಾನು ಕಳೆದುಕೊಂಡು; ಅದರ
ಹುಡುಕಾಟದಲ್ಲಿ ಬದುಕೆಂಬ ಭ್ರಮೆಯೊಳಗೆ ಜೀವಿಸುವವನು ಮನುಷ್ಯಮಾತ್ರನಲ್ಲವೇ?’ ಎಂದು ಮತ್ತೆ ಆ ಫಕೀರನು ನಕ್ಕನು.
ಇದೇನು ತಾನು ಕಾಣುತ್ತಿರುವುದು ಸ್ವಪ್ನವಲ್ಲವಷ್ಟೇ! ನಿಜಸಂಗತಿಯ ನೋಡಿದಂತೆಯೇ ಹೇಳುತ್ತಿರುವರು. ಇವರು ನಿಜಕ್ಕೂ
ಮನುಷ್ಯರಲ್ಲ, ದೇವಮಾನವರೇ ಇರಬೇಕೆಂದುಕೊಂಡನು. ಕಾಣದೆಯೂ ಕಂಡಂತೆ ಎಲ್ಲವನ್ನೂ ಹೇಳಿದ ಫಕೀರನ ಮಾತಿಗೆ
ಅಹುದು ಅಹುದೆಂದು ಶರಣುಹೋದ ಪಾಟೀಲನು ಭಕ್ತಿಗೌರವದಲ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಿ ಕೈಯನ್ನು
ಕಣ್ಣಿಗೊತ್ತಿಕೊಂಡನು. ಆಗ ಆ ಮಹಾತ್ಮನು, ‘ಮೂರು ತಿಂಗಳಿನಿಂದ ಬಿಜಲಿಗಾಗಿ ಹಂಬಲಿಸಿ ದುಃಖಿಸಿರುವೆ. ಬಿಜಿಲಿಯೂ ನಿನ್ನ
ಅಗಲಿಕೆಯನ್ನು ಸಹಿಸದೆ – ಎಂದು ಒಡೆಯನ ನೆರಳು ಸೇರುವೆನೋ ಎಂದು ಕಾದಿದೆ. ನಿನ್ನ ಬಿಜಲಿ ಇಲ್ಲೇ ನಿನ್ನ ಬಳಿಯಲ್ಲೇ ಇದೆ.
ಕರೆಯದೆ ಕುದುರೆಯಾದರೂ ಹೇಗೆ ಬರಲು ಸಾಧ್ಯ?’ ಎಂದ ಫಕೀರನು ನದಿಯ ತಪ್ಪಲಿನತ್ತ ಮುಖಮಾಡಿ, ‘ಬಿಜಿಲಿ.. ಬಿಜಿಲಿ..
ಬಿಜಿಲಿ.. ಬಾರಪ್ಪ, ನಿನ್ನ ಯಜಮಾನ ಕಾಯುತ್ತಿದ್ದಾನೆ’ ಎಂದು ಗಟ್ಟಿಯಾಗಿ ಕೂಗಿದನು. ಮುಂದಿನ ಕ್ಷಣದಲ್ಲೇ
ತಪ್ಪಲುಪ್ರದೇಶದಿಂದ ಮಿಂಚಿನ ವೇಗದಲ್ಲಿ ಬಿಜಿಲಿ ಮಹಾತ್ಮನೆಡೆಗೆ ಓಡಿ ಬರುತ್ತಿರುವುದನ್ನು ಕಂಡ ಚಾಂದ್ಪಾಟೀಲ್ ತನ್ನ ಕಣ್ಣನ್ನೇ
ನಂಬದಾದನು. ಓಡಿಬಂದು ಫಕೀರನನ್ನು ಒಮ್ಮೆ ಸುತ್ತುಹಾಕಿದ ಕುದುರೆಯಾದರೋ ತನ್ನೊಡೆಯನ ಬಳಿ ಬಂದು ಕಾಲುಗಳನ್ನು
ಮೇಲೆತ್ತಿ ಕೆನೆಯುತ್ತ ತನ್ನ ಸಂತಸ ವ್ಯಕ್ತಪಡಿಸಿ ಆ ಮಹಾತ್ಮನ ಎದುರು ನಿಂತಿತು. ನೋಡಲು ಫಕೀರನಂತಿರುವ ಇವರು ನಿಜಕ್ಕೂ
ಅವಲಿಯನೇ ಇರಬೇಕೆಂದು ಭಕ್ತಿಭಾವ ಪರವಶನಾದ ಚಾಂದ್ಪಾಟೀಲ್, ‘ನಿಮ್ಮಿಂದಾಗಿ ಬಿಜಿಲಿ ಪುನಃ ನನಗೆ ಸಿಕ್ಕಿತು, ನೀವು
ಅಸಾಮಾನ್ಯರು’ ಎಂದು ಅವರ ಚರಣಾರವಿಂದಕ್ಕೆ ಮತ್ತೊಮ್ಮೆ ನಮಿಸಿದನು.
ಅಪಸ್ಮಾರ ಖಾಯಿಲೆಯನ್ನು ದೂರ ಮಾಡಿದರು!
ಮುಂಬಯಿಯ ಹರಿಶ್ಚಂದ್ರ ಪಿತಳೆಯವರು ತಮ್ಮ ಮಗನ ಕಾರಣದಿಂದ ಬಹಳ ದುಃಖಿಯಾಗಿದ್ದರು. ಆತನು ಅಪಸ್ಮಾರ
ರೋಗಪೀಡಿತನಾಗಿ ಎಲ್ಲೆಂದರಲ್ಲಿ ಮೂರ್ಛಿತನಾಗಿ ಬಿದ್ದುಬಿಡುತ್ತಿದ್ದನು. ಆರಂಭದಲ್ಲಿ ಕಾಯಿಲೆ ಸರಿಹೋಗುವುದೆಂದು ವೈದ್ಯರು
ಏನೆಲ್ಲ ಔಷಧ ನೀಡಿದರೂ ಮೇಲಾಗಲಿಲ್ಲ; ವಿದೇಶಿ ವೈದ್ಯರಿಂದಲೂ ರೋಗ ಗುಣ ಕಾಣಲಿಲ್ಲ. ದೂರದೂರದ ನಗರಗಳಿಗೆ ಚಿಕಿತ್ಸೆಗೆ
ಹೋಗಿ ಬಂದರೂ ಫಲ ನೀಡಲಿಲ್ಲ. ದಿನೇದಿನೆ ಮಗನು ಹಿಂಸೆ ಅನುಭವಿಸುವುದನ್ನು ನೋಡಲಾರದೆ ಬದುಕು ಕಣ್ಣೀರಾಗಿತ್ತು.
ಆಗರ್ಭ ಶ್ರೀಮಂತನಾದ ಪಿತಳೆ ಮಗನ ಕಾಯಿಲೆ ಗುಣಪಡಿಸಲು ಅದೆಷ್ಟು ಹಣವಾದರೂ ಖರ್ಚುಮಾಡಲೂ ಸಿದ್ದನಿದ್ದ. ವೈದ್ಯರೇ
ಕೈಚೆಲ್ಲಿದ ಮೇಲೆ ಅವನಾದರೂ ಏನು ಮಾಡಿಯಾನು? ಸಾವಿನ ಮನೆ ಬಾಗಿಲು ತಟ್ಟುತ್ತಿರುವ ಮಗನನ್ನು ನೋಡಿ ಸುಮ್ಮನೆ
ಕುಳಿತಿರಲಾಗದೆ ಬೇರೆ ದಾರಿಯೇನೆಂಬ ಚಿಂತೆಯಲ್ಲಿದ್ದನು. ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ ಪಿತಳೆಯದು.
ಆ ಹೊತ್ತಿಗಾಗಲೇ ದಾಸಗಣುವಿನ ಹರಿಕಥೆ-ಕೀರ್ತನೆಗಳಿಂದ ಸಾಯಿಬಾಬಾರ ಕೀರ್ತಿ ದೇಶದೆಲ್ಲೆಡೆ ವ್ಯಾಪಿಸಿತ್ತು; ಅವರ
ಮಹಿಮೆಯನ್ನು ಹಾಡಿ ಕೊಂಡಾಡುವರು ಸಾಕಷ್ಟು ಜನರಿದ್ದರು. ಸದ್ಗುರುವಿನ ದರ್ಶನ, ಹಸ್ತಸ್ಪರ್ಶಮಾತ್ರದಿಂದಲೂ ಹಾಗೂ ಅವರು
ನೀಡುವ ವಿಭೂತಿಯಿಂದಲೂ ಸರ್ವರೋಗಗಳು ಗುಣವಾಗುವುದೆಂಬ ಮಾತು ಜನಜನಿತವಾಗಿತ್ತು. ಇದು ಹರಿಶ್ಚಂದ್ರ ಪಿತಳೆಯವರ
ಕಿವಿಗೂ ಬಿದ್ದಿತ್ತು. ಆದರೆ ಅವನಿಗೆ ದೇವರು, ದೇವರ ಪೂಜೆ, ಗುರುಬಾಬಾಗಳ ದರ್ಶನ, ಹರಕೆ, ಕಾಣಿಕೆ ಇವುಗಳ ಮೇಲೆ ಅಷ್ಟಾಗಿ
ನಂಬಿಕೆ ಇರಲಿಲ್ಲ. ಅವನು ಮಾಡುತ್ತಿದ್ದ ವ್ಯವಹಾರವೂ ಅದಕ್ಕೆ ಪೂರಕವಾಗಿಯೇ ಇತ್ತು. ಆತನ ತಂದೆ-ತಾಯಿ ದೈವಭಕ್ತರಾದರೂ
ಮಗನಲ್ಲಿ ಅದೊಂದು ಸಂಸ್ಕಾರ ಹರಿದುಬಂದಿರಲಿಲ್ಲ. ಕೆಲವು ಭಕ್ತಬಂಧುಗಳು, ‘ನಿಮ್ಮ ಮಗನನ್ನು ಕರೆದುಕೊಂಡು ಬಾಬಾರಲ್ಲಿಗೆ
ಹೋಗಿ’ ಎಂದು ಹೇಳಿದರಾದರೂ ಆತ ಮೊದಮೊದಲು ಅವರ ಮಾತು ಕೇಳಲಿಲ್ಲ. ಮುಂದೆ ಮಗನ ಕಾಯಿಲೆ
ಉಲ್ಬಣಗೊಳ್ಳತ್ತಿರುವಂತೆ ಬೇರೆ ದಾರಿಗಾಣದಾಯಿತು; ‘ಮನುಜಪ್ರಯತ್ನವನ್ನೆಲ್ಲ ಮಾಡಿ ಆಗಿದೆ, ಇನ್ನು ಉಳಿದಿರುವುದು
ದೈವವೊಂದೇ’ ಎನಿಸಿತು.
ಇಂತಹ ಒಂದು ಭಾವ ಅವರಲ್ಲಿ ಮೂಡಿದ್ದೂ ಪೂರ್ವಪುಣ್ಯದಿಂದಲಿ ಎನ್ನುವುದು ಸರಿ. ರೋಗಗ್ರಸ್ತ ಮಗನೊಂದಿಗೆ ಕುಟುಂಬಸಮೇತ
ಶಿರಡಿಗೆ ಬಂದನು. ಬರುವಾಗ ಬರಿಗೈಯಲ್ಲಿ ಬರಲಿಲ್ಲ. ತನ್ನ ಶ್ರೀಮಂತಿಕೆ ತಕ್ಕಂತೆ ಬಾಬಾರಿಗೆಂದು ಹಣ್ಣು ಉಡುಗೊರೆಯನ್ನು
ತಂದಿದ್ದನು. ಅವೆಲ್ಲವನ್ನೂ ಬಾಬಾರಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಪಿತಳೆಯ ಕುಮಾರನು ಸಾಯಿನಾಥರನ್ನು
ನೋಡುತ್ತಿರುವಂತೆ ಸ್ಮೃತಿ ತಪ್ಪಿ ಬಿದ್ದನು; ಬಾಯಿಯಿಂದ ಬಿಳಿನೊರೆ ಉಕ್ಕಿತು. ಅವನ ತಾಯಿ, ‘ಮಗನೇ’ ಎಂದು
ಚೀತ್ಕರಿಸಿದಳು. ಉಸಿರಾಟ ನಿಲ್ಲುತ್ತಿರುವಂತೆ ಕೈಕಾಲು ಒದರುತ್ತಿದ್ದ ಮಗನನ್ನು ನೋಡಿ ತಂದೆ ದಿಕ್ಕು ತೋಚದಂತಾದನು. ಬಹಳ
ಸಮಯದವರೆಗೂ ಅದೇ ಸ್ಥಿತಿ! ಮಗ ಆಗಾಗ ಎಚ್ಚರ ತಪ್ಪುತ್ತಿದ್ದನಾದರೂ ಈ ಪ್ರಮಾಣದ ಹಿಂಸೆ ಎಂದೂ ಅನುಭವಿಸಿರಲಿಲ್ಲ.
‘ಸಾಯಿನಾಥರ ಸನ್ನಧಿಯಲ್ಲಿ ರೋಗ ಗುಣವಾಗುವುದೆಂದು ಬಂದರೆ ಉಲ್ಬಣವಾಯಿತಲ್ಲ, ನೆರಳಿಗಾಗಿ ಮರದ ಆಶ್ರಯಕ್ಕೆ ಬಂದರೆ
ಮರವೇ ಶಿರದ ಮೇಲೆ ಉರುಳಿತೇ? ಹುಲಿಯಿಂದ ತಪ್ಪಿಸಿಕೊಂಡ ಹಸು ಕಟುಕನ ಕೈಗೆ ಸಿಕ್ಕಿದಂತಾಯಿತೇ? ಧರೆಗೆ ಬೀಳುವುದನ್ನು
ತಪ್ಪಿಸಲು ಹೋಗಿ ಕೆರೆಗೆ ಕೆಡವಿದೆನೇ?’ ಎಂಬೆಲ್ಲ ಸಂಕಟದಲ್ಲಿ ಆ ದಂಪತಿ ಗೋಳಾಡಿದರು. ಇದನ್ನು ಶಾಂತಚಿತ್ತದಿಂದ
ಗಮನಿಸಿದ ಸಾಯಿಬಾಬಾ, ‘ಏಕೆ ಇಷ್ಟು ಸಂಕಟಪಡುವಿರಿ? ದುಃಖದ ಹಿಂದೆ ಸುಖವೂ ಅನುಸರಿಸಿ ಬರುತ್ತದೆ. ಧೈರ್ಯ
ತಂದುಕೊಳ್ಳಿ, ಪತಿ-ಪತ್ನಿ ಇಬ್ಬರೂ ಮಗನನ್ನು ಹಿಡಿದುಕೊಳ್ಳಿ, ಜ್ಞಾನ ಬರುವುದು. ನಂತರ ನೀವು ಉಳಿದುಕೊಂಡ ವಸತಿಗೃಹಕ್ಕೆ
ಕರೆದುಕೊಂಡು ಹೋಗಿ. ಕಷ್ಟಕ್ಕೆ ಹೆದರಿದರೆ ಇಷ್ಟಾರ್ಥ ನೆರವೇರದು. ಸ್ವಲ್ಪ ಹೊತ್ತಿಗೆ ಸರಿಹೋಗುವನು’ ಎಂದು ಹೇಳಿ ಅವರ
ಮುಂದಿನ ಮಾತಿಗೆ ಅವಕಾಶಕೊಡದಂತೆ ಎದ್ದುಹೋದರು.
ಬಾಬಾರ ಮಾತಿನಂತೆ ಕುಮಾರ ಎಚ್ಚರಗೊಂಡನು, ಆ ಕುಟುಂಬದ ಆನಂದಕ್ಕೆ ಪಾರವಿಲ್ಲ. ನಂತರ ಮಗನೊಂದಿಗೆ ವಸತಿಗೃಹಕ್ಕೆ
ಬಂದರು. ಆ ಒಂದು ದಿನದಲ್ಲಿ ಕುಮಾರ ಸುಧಾರಿಸಿಕೊಂಡನು. ಸದ್ಗುರುವಿನ ದರ್ಶನ ಆಶೀರ್ವಾದಮಾತ್ರದಿಂದಲೆ ಮಗನಿಗೆ
ಗುಣವಾಯಿತು. ಅವರಲ್ಲಿದ್ದ ಸಂಶಯ ದೂರವಾಗಿ ಸಾಯಿನಾಥರ ಮೇಲಿನ ಭಕ್ತಿ, ನಂಬಿಕೆ ದ್ವಿಗುಣಗೊಂಡಿತು. ಮರುದಿನ
ದಂಪತಿಯಿಬ್ಬರೂ ಮಸೀದಿಗೆ ತೆರಳಿ ಸಾಯಿನಾಥರಿಗೆ ಸಾಷ್ಟಾಂಗವೆರಗಿ ಅವರ ಸೇವೆಯಲ್ಲಿ ತೊಡಗಿದರು. ಆಗ ಬಾಬಾ, ‘ನಿಮ್ಮ
ಸಂಕಲ್ಪ ತೀರಿತು ತಾನೆ? ವಿಕಲ್ಪದ ತರಂಗಗಳು ಹಾರಿಹೋದವಷ್ಟೆ! ಈಗ ನಂಬಿಕೆ ಬಂದಿತೇ? ಸಹನೆ ಮತ್ತು
ವಿಶ್ವಾಸದಲ್ಲಿರುವವರನ್ನು ಪರಮಾತ್ಮ ರಕ್ಷಿಸದೆ ಇರನು’ ಎಂದರು.
(ಕಡೆಯ ಎರಡು ಪವಾಡ ಪ್ರಸಂಗಗಳುಬೆಂಗಳೂರಿನ ಶ್ರೀ ಸಾಯಿ ದರ್ಶನಂ ಟ್ರಸ್ಟ್ ಪ್ರಕಟಿಸಿರುವ ‘ಶ್ರೀ ಸಾಯಿ ಲೀಲಾಮೃತ’ ಗ್ರಂಥದಿಂದ್ ಆಯ್ದ ಭಾಗ)
Thursday, October 18, 2018
ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -94
ಶಿರಡಿ (Shirdi)
ಭಾಗ- 1
"ಓಂ ಸಾಯಿರಾಂ" ನಾಳೆ (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.
ಶಿರಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು 83 ಕಿ.ಮಿ. ಮತ್ತು ಕೋಪರಗಾ೦ವನಿಂದ 15 ಕಿ.ಮಿ. ದೂರವಿರುವ ಇದನ್ನು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ 10 ರ ಮೂಲಕ ತಲುಪಬಹುದಾಗಿದೆ.
ಶಿರಡಿ ಪಟ್ಟಣದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ 20,000 ಭಕ್ತರು ಶ್ರೀ ಸಾಯಿಬಾಬಾ ದರ್ಶನಕ್ಕೆ ಬರುತ್ತಾರೆ. ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ.
1998-99ರಲ್ಲಿ ದೇವಸ್ಥಾನ ಆವರಣವನ್ನು ನವೀಕರಣಗೊಳಿಸಲಾಯಿತು. ಈಗ ದರ್ಶನ ಮಾರ್ಗ, ಪ್ರಸಾದ(ಬೋಜನ, ರಾತ್ರಿಯೂಟ), ದಾನದ ಕೌಂಟರ್, ಪ್ರಸಾದದ ಕೌಂಟರ್, ಕ್ಯಾಂಟೀನ್, ರೈಲ್ವೆ ಮೀಸಲು ಕೌಂಟರ್, ಪುಸ್ತಕದ ಮಳಿಗೆ ಮುಂತಾದ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯಾತ್ರಿಕರಿಗೆ ಸಾಯಿಬಾಬ ಸಂಸ್ಥಾನವು ವಸತಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ.
ಮುಂಬೈನಿಂದ 161 ಕಿಮೀ, ಪುಣೆಯಿಂದ 100 ಕಿಮೀ, ಹೈದರಾಬಾದ್ 360 ಕಿಮೀ, ಮನ್ಮಾಡ್ 29 ಕಿಮೀ, ಔರಂಗಾಬಾದ್ 66, ಭೋಪಾಲ್ 277 ಕಿಮೀ ಮತ್ತು ಬರೋಡದಿಂದ 202 ಕಿಮೀ ದೂರವಿರುವ ಶಿರಡಿಗೆ ನೇರಬಸ್ ಸೌಕರ್ಯವಿದೆ.ಹತ್ತಿರದ ರೈಲ್ವೆ ನಿಲ್ದಾಣವು ಮನ್ಮಾಡ್ ಆಗಿದ್ದು, ಕೇಂದ್ರ ರೈಲ್ವೆಯ ಮನ್ಮಾಡ್-ದಾಂಡ್ ವಿಭಾಗದಲ್ಲಿದೆ. ಮುಂಬೈ, ಪುಣೆ, ದೆಹಲಿ, ವಾಸ್ಕೊನಿಂದ ಮನ್ಮಾಡ್ ರೈಲು ಸೌಲಭ್ಯವಿದೆ. ಮುಂಬೈ ಮತ್ತು ಪುಣೆ ಹತ್ತಿರದ ವಿಮಾನ ನಿಲ್ದಾಣಗಳು.
***
ಶಿರಡಿ ಸಾಯಿ ಬಾಬಾ (ಸಮಾಧಿ – 15 ಅಕ್ಟೋಬರ್ 1918 - ವಿಜಯದಶಮಿ ದಿನ) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.
ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು ಕೂಡ.
ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು “ಮನುಷ್ಯ” ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗು ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಹಾಗು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು ಎನ್ನಲಡ್ಡಿಯಿಲ್ಲ.
ಸಾಯಿ ಬಾಬಾ ಬದುಕಿದ್ದು ಮುಸ್ಲೀಮರ ಸಾಮಾನ್ಯ ಮಸೀದಿಯಲ್ಲಿ, ಆದರೆ ಅದೇ ಮಸೀದಿಗೆ ‘ದ್ವಾರಕಾಮಾಯಿ’ ಎಂಬ ಹಿಂದೂ ಹೆಸರು ನಾಮಕರಣ ಮಾಡಿ ಹಿಂದೂ ಮುಸ್ಲೀಮರ ಸಾಮರಸ್ಯದ ಜೀವನಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಇವಿಷ್ಟೇ ಅಲ್ಲದೆ ದಿನ ನಿತ್ಯದ ಜೀವನದಲ್ಲೂ ಬಾಬಾ ಅನೇಕ ಹಿಂದೂ ಆಚರಣೆಗಳನ್ನು ಮತ್ತು ಮುಸ್ಲೀಂ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದರು.
ಬಾಬಾರವರ ಒಂದು ಸುಪ್ರಸಿದ್ಧ ಉಕ್ತಿ “ಸಬ ಕಾ ಮಾಲಿಕ್ ಏಕ್ ಹೈ”(ಸರ್ವರ ಮಾಲೀಕನು ಒಬ್ಬನೇ). ಇದು ಹಿಂದೂ, ಇಸ್ಲಾಂ ಹಾಗು ಸೂಫಿ ತತ್ವಗಳನ್ನು ಒಳಗೊಂಡಿದೆ. ಅವರು ಸದಾ ಕಾಲ ಭಕ್ತರಿಗೆ ಕೊಡುತ್ತಿದ್ದ ಅಭಯ ವಾಕ್ಯಗಳೆಂದರೆ “ನನ್ನನ್ನು ನಂಬಿ, ನಿಮ್ಮ ಪ್ರಾರ್ಥನೆಗಳಿಗೆ ನನ್ನಲ್ಲಿ ಉತ್ತರಗಳಿವೆ” ಹಾಗು “ಅಲ್ಲಾ ಮಾಲಿಕ್ “(ದೇವರೇ ಮಾಲೀಕ).
'ಸಾಯಿ' ಪದದ ಹಿನ್ನೆಲೆ
ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಯಾವುದೇ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಇದರ ಬಗ್ಗೆ ಬಾಬಾರವರನ್ನೇ ಕೇಳಿದಾಗ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲವೆಂದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಯಿಬಾಬಾರು ಶಿರಡಿಗೆ ಆಗಮಿಸಿ ದಾಗ ಅವರಿಗೆ ಯಾವ ಹೆಸರಿತ್ತು ಎಂಬ ಬಗ್ಗೆ ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.
ಆದರೆ ಸ್ಥಳೀಯ ಖಂಡೋಬ ದೇವಳದ ಆಗಮಿಕರು ಅವರನ್ನು ಕಂಡು ‘ಯಾ ಸಾಯಿ'(ಸಾಯಿ ಸುಸ್ವಾಗತ) ಎಂದು ಉದ್ಘರಿಸಿದರಂತೆ. ಅಂದಿನಿಂದ ಅವರ ಹೆಸರು ಸಾಯಿ ಬಾಬಾ ಎಂದೇ ಪ್ರಸಿದ್ಧಿಯಾಗಿದೆ. ‘ಸಾಯಿ’ ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರು ಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತುಹಾಗು ಅದು ‘ಬಡ ವ್ಯಕ್ತಿ ‘ ಎಂಬ ಅರ್ಥ ಹೊಂದಿತ್ತು.
ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ ‘ಒಳ್ಳೆಯ’ ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಅಥವಾ ಹಿರೀಕರು ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ ‘ಒಳ್ಳೆಯ ಗುರು’ ‘ಪವಿತ್ರ ಗುರು’ ‘ಸಂತ ಪಿತಾಮಹ’ ಎಂಬಂತಹ ಅರ್ಥಗಳು ಬರುತ್ತವೆ.
ಇತಿಹಾಸ ಮೂಲಗಳು
ಸಾಯಿ ಬಾಬಾ ಜೀವನ ಚರಿತ್ರಕಾರರು (ಉದಾಹರಣೆಗೆ: ಗೋವಿಂದ ರಾವ್ ರಘುನಾಥ ದಾಬೋಲ್ಕರ್, ಆಚಾರ್ಯ ಎಕ್ಕಿರಾಳ ಭಾರದ್ವಾಜ್, ಸ್ಮ್ರಿತಿ ಶ್ರೀನಿವಾಸ್, ಆಂತೋನಿಯೋ ರಿಗೊಪೋಲಾಸ್) ಅವಲೋಕಿಸಿರುವ ಪ್ರಾಥಮಿಕ ಮೂಲವೆಂದರೆ ಶಿರಡಿಯಲ್ಲಿ ದೊರೆತ ಒಂದು ಡೈರಿ. ಈ ಡೈರಿಯನ್ನು ಬರೆದಿದ್ದು ‘ಗಣೇಶ ಶ್ರೀಕೃಷ್ಣ ಕಪರ್ದೆ’ ಎನ್ನುವರು. ಇವರು ಪ್ರತಿ ದಿನವು ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.
ಪ್ರಾರಂಭದ ದಿನಗಳು
ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ "ಶ್ರೀ ಸಾಯಿ ಸತ್‌ಚರಿತೆ"ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು.
ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್‌ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು. (ಶಿರಡಿ ಸಾಯಿಬಾಬಾ ಅವರ ಜನನವು ಪಾಥರಿ ಗ್ರಾಮದಲ್ಲಿ 1830ರ ಡಿಸೆಂಬರ್ 27ರಂದು ಆಗಿತ್ತು ಎಂದು ಸತ್ಯ ಸಾಯಿಬಾಬಾ ಅವರು ಹೇಳಿದ್ದಾರೆ.)
1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್‌ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.
"ಸಾಯಿ ಸಚ್ಚರಿತ್ರೆ” ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಸಾಯಿ ಬಾಬಾ ತಮ್ಮ 16ನೆ ವಯಸ್ಸಿನಲ್ಲಿ ಶಿರಡಿ ಪ್ರವೇಶ ಮಾಡಿದರು. ಶಿರಡಿ ಗ್ರಾಮವು ಈಗಿನ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿದೆ. ಸಾಯಿಬಾಬ ಒಂದು ಬೇವಿನ ಮರದ ಕೆಳಗೆ ಧ್ಯಾನಸ್ಥ ಭಂಗಿಯಲ್ಲಿ ಶಿರಡಿಯ ನಿವಾಸಿಗಳ ಕಣ್ಣಿಗೆ ಬಿದ್ದರು.
ಬೇವಿನ ಮರದಡಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ತೇಜೋಮಯನಾದ ಬಾಲಕನನ್ನು ಕಂಡೊಡನೆ ಶಿರಡಿಯ ನಿವಾಸಿಗಳು ಆಶ್ಚರ್ಯಭರಿತರಾದರು ಮತ್ತು ಆತನು ಯಾರೆಂಬುದನ್ನು ತಿಳಿಯಲು ಮೊದಲಾದರು. ಅಷ್ಟು ಸಣ್ಣ ವಯಸ್ಸಿನಲ್ಲಿ ಚಳಿ, ಗಾಳಿ, ಮಳೆ, ಹಗಲು, ಇರುಳುಗಳಿಗೆ ಹೆದರದೆ ಧ್ಯಾನ ಮಾಡುತ್ತಿದ್ದವನ ಕಂಡಿದ್ದೇ ಅವರೆಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಇದಾದ ಮೇಲೆ ಶಿರಡಿಯ ಧಾರ್ಮಿಕ ನಂಬಿಕೆ ಗಳಿದ್ದ ಜನರೆಲ್ಲರೂ ಬಾಬಾರನ್ನು ಸದಾ ಸಂಧಿಸುತ್ತಿದ್ದರು. ಇನ್ನುಳಿದ ಜನರು ಆ ತರುಣನನ್ನು ಹುಚ್ಚನಿರಬಹುದೆನ್ದೇ ಭಾವಿಸಿ ಕಲ್ಲು ತೂರುತ್ತಿದ್ದರು. ಈ ಘಟನೆಗಳ ನಂತರ ಸಾಯಿ ಬಾಬಾ ಶಿರಡಿಯಿಂದ ನಿರ್ಗಮಿಸಿದರು ಎನ್ನುತ್ತದೆ ಇತಿಹಾಸ. ಸಾಯಿ ಬಾಬಾ ಜೀವನ ಚರಿತ್ರೆ ಬರೆದಿರುವ ನರಸಿಂಹ ಸ್ವಾಮೀಜಿಯವರು ಸಾಯಿಬಾಬಾ ಬ್ರಾಹ್ಮಣ ದಂಪತಿಗಳಿಗೆ ಜನಿಸಿದವರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಫಕೀರರೊಬ್ಬರ ಆಶ್ರಯದಲ್ಲಿ ಬೆಳೆದಿದ್ದುದರಿಂದ ತಮ್ಮ ಆಚರಣೆಯಲ್ಲಿ ಮುಸ್ಲೀಮರ ಕೆಲವು ಆಚರಣೆಗಳನ್ನು ಒಳಗೂಡಿಸಿಕೊಂಡಿರಬಹುದು ಎಂದು ನರಸಿಂಹ ಸ್ವಾಮೀಜಿ ತಮ್ಮ ವಾದವನ್ನು ಮುಂದಿಡುತ್ತಾರೆ. ವಾದಗಳು ಏನೇ ಆದರು ‘ಸಾಯಿ ಸಚ್ಚರಿತ್ರೆ’ ಯಲ್ಲಿ ಅಧಿಕೃತವಾಗಿ ಇರುವ ಪ್ರಕಾರ ಸಾಯಿಬಾಬಾ ರ ಜನ್ಮಸ್ಥಳ, ಜನ್ಮ ದಿನಾಂಕ ಹಾಗು ಅವರ ಪೂರ್ವಾಶ್ರಮದ ಸಂಬಂಧಗಳ ಯಾವುದೇ ನಿಖರ ಉಲ್ಲೇಖಗಳು ಇಲ್ಲ.
ಈ ವಿಚಾರವಾಗಿ ಕೆಲ ಭಕ್ತರು ಬಾಬಾರನ್ನೇ ಪ್ರಶ್ನಿಸಿದಾಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದನ್ನು ಹಲವಾರು ಭಕ್ತರು ಒಪ್ಪಿಕೊಂಡಿದ್ದಾರೆ. ಬಾಬಾರು ಶಿರಡಿಯಿಂದ ನಿರ್ಗಮಿಸಿದ ಮೇಲೆ ಯಾರಿಗೂ ಅವರ ಬಗ್ಗೆ ಅಷ್ಟಾಗಿ ಮಾಹಿತಿಗಳು ಇರುವುದಿಲ್ಲ. ಆದರೂ ಶಿರಡಿಯಿಂದ ಹೊರಟ ಬಾಬ ಅನೇಕ ಸಂತರನ್ನು ಹಾಗೂ ಫಕೀರರನ್ನು ಭೇಟಿ ಮಾಡುತ್ತಾ ಅವರಿಂದ ಆಧ್ಯಾತ್ಮಿಕ ಜ್ಞಾನ ಸಂಪಾದನೆ ಮಾಡುತ್ತಾ ನೇಯ್ಗೆಯ ಕೆಲಸವನ್ನು ಮಾಡುತ್ತಾ ಕಾಲ ಕಳೆದಿರಬಹುದು ಎಂಬ ನಂಬಿಕೆ ಇದೆ.
ಮತ್ತೊಂದು ಮೂಲದ ಪ್ರಕಾರ ಅವರು ಭಾರತದಲ್ಲಿ ಸಿಪಾಯಿ ದಂಗೆ ಯಾಗುವ ಹೊತ್ತಿಗೆ ಅಂದರೆ 1857ರ ಆಸು ಪಾಸು ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಸೇನೆಯಲ್ಲಿ ಗುರುತಿಸಿಕೊಂಡಿದ್ದರು.ಐತಿಹ್ಯಗಳ ಪ್ರಕಾರ ಸಾಯಿಬಾಬ ಶಿರಡಿಯಲ್ಲಿ 3 ವರ್ಷಗಳಿದ್ದು 1 ವರ್ಷ ಮಾತ್ರ ಶಿರಡಿಯಿಂದ ಹೊರಗೆ ಕಳೆದಿದ್ದಾರೆ. ಇದಾದ ನಂತರ 1858ರ ಆಸು ಪಾಸಿನಲ್ಲಿ ಶಿರಡಿಗೆ ಮರಳಿ ಅನಂತರ ಶಾಶ್ವತವಾಗಿ ಅಲ್ಲಿಯೇ ಉಳಿದರು ಎನ್ನಲಾಗಿದೆ.
ಶಿರಡಿಗೆ ಪುನರಾಗಮನ
1858ರಿಂದ 1918ರ ಅಕ್ಟೋಬರ್ 15ರಂದು ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು.
1858ರಲ್ಲಿ ಬಾಬಾ ಶಿರಡಿಗೆ ಹಿಂದಿರುಗಿದಾಗ ಅವರ ಉಡುಗೆಯ ಶೈಲಿ ಸಂಪೂರ್ಣ ಬದಲಾಗಿತ್ತು. ಮುಕ್ಕಾಲು ತೋಳು ಇರುವ ಮಂಡಿಯವರೆವಿಗೂ ಇರುವ ಕಪನಿಯನ್ನು ಧರಿಸಿ ಕಾಲುಗಳಿಗೆ ಶ್ವೇತ ವರ್ಣದ ಒಂದು ವಸ್ತ್ರ ಹಾಗು ತಲೆಗೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತಿದ್ದರು. ಮುಂದೆ ಬಾಬಾರು ಈ ಶೈಲಿಯನ್ನೇ ಅನುಸರಿಸಿದರು. ಅವರ ಈ ಧರಿಸಿನ ಶೈಲಿ ಯಥಾವತ್ತಾಗಿ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ.
Subscribe to:
Posts (Atom)




































