Saturday, August 29, 2020

ವಾಮನ - ಹೀಗೊಂದು ಐತಿಹಾಸಿಕ ಹಿನ್ನೆಲೆ

 ವಾಮನ- ವಿಷ್ಣುವಿನ ಐದನೇ ಅವತಾರ, ಸಂಪೂರ್ಣ ಮಾನವ ರೂಪದ ಮೊದಲ ಅವತಾರ. ಆತ ಬಾಲವಟುವಾಗಿ ಕಾಣಿಸಿಕೊಂಡು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿ ದಾನ ಪಡೆದಿದ್ದ. ಅದಲ್ಲದೆ ಆ ನಂತರ ತ್ರಿವಿಕ್ರಮನಾಗಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ್ದ ಎನ್ನುವುದು ಪುರಾಣ. ಆದರೆ ವಾಮನ ಹಾಗೂ ಬಲಿ ಚಕ್ರವರ್ತಿಯ ಪ್ಪುರಾಣ ಕಥೆ ಹೇಳುವುದು ನನ್ನ ಉದ್ದೇಶವಲ್ಲ. ಬದಲಾಗಿ ಆ ಕಥೆಯ ಹಿಂದಿನ ಐತಿಹಾಸಿಕ ಸತ್ಯವನ್ನು ಸಂಶೋಧಿಸಿ ಆ ಐತಿಹಾಸಿಕ ಘಟನೆ ಬಗ್ಗೆ ಕೆಲಮಟ್ಟಿಗೆ ಬೆಳಕು ಚೆಲ್ಲುವುದಕ್ಕಾಗಿ ಈ ಲೇಖನ.

Lord Vishnu as Vamana and Birth of Goddess Ganga - RESEARCHUT
ವಾಮನ

ದಕ್ಷಿಣ ಅಮೆರಿಕಾದ ಪೆರುವಿನಲ್ಲಿದ್ದ ಪ್ರಾಚೀನ ಇಂಕಾ ನಾಗರಿಕತೆಗೂ ನಮ್ಮ ವಾಮನ-ಬಲಿಯ ಕಥೆಗೂ ಇದೆ ಸಂಬಂಧ!!!

ಸಾಕ್ಷ್ಯವಾಮನ ಅಥವಾ ಸಾಕ್ಷಾತ್ ವಾಮನ ಅಥವಾ ವೈರಾಕೊಚಾ  ಇಂಕಾ ನಾಗರಿಕತೆ ಜನರ ಸೃಷ್ಟಿಕರ್ತ ದೇವರು. ಮಚು ಪಿಚುವಿನಲ್ಲಿ ಈ ವ್ರಕೋಚನ ದೇವಾಲಯವಿದೆ.

ಸಾಕ್ಷ್ಯವಾಮನ ಎಂದರೆ ಸಾಕ್ಷಾತ್ ವಾಮನ ಎಂಬುದರ ಸಂಕ್ಷೇಪ ರೂಪ. ಇಂಕಾ ಸಾಮ್ರಾಜ್ಯದ ಐತಿಹಾಸಿಕ ರಾಜಧಾನಿಯಾದ ಪೆರುವಿನ ಕುಸ್ಕೊ ನಗರದ ಉತ್ತರದ ಹೊರವಲಯದಲ್ಲಿರುವ ದೇವಾಲಯ ಈ ಸಾಕ್ಷಾತ್ ವಾಮನನಿಗೆ ಸೇರಿದ್ದು!! ಸಾಕ್ಷ್ಯೇ ಎಂದರೆ `ಪೂರ್ಣವಾಗಿರುವುದು` ಎಂದರ್ಥ. ವಾಮನ್ ಎಂದರೆ ಗಿಡುಗದ ಮೇಲೆ ಕುಳಿತು ಪ್ರಯಾಣಿಸುವ ಮನುಷ್ಯ ಎಂದು ಅರ್ಥವಿದೆ.

Viracocha - Wikipedia
ವೈರಾಕೊಚಾ 

ವಿಷ್ಣು ಮತ್ತು ಭಾಗವತ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಐದನೇ ಅವತಾರ ವಾಮನ (ವಾಮನ್),  ಈತ ತಮ್ಮ ಗಿಡುಗ(ಗರುಡ) ನ ಮೇಲೆ ಕುಳಿತು ಪ್ರಪಂಚ ಪರ್ಯಟನೆ ಮಾಡಿದ್ದ!!

ವಾಮನ ಮಹಾರಾಜನಾಗಿದ್ದ ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆಯ ಭೂಮಿ ಕೇಳಿದ ಎನ್ನುವುದು ಪುರಾಣ. ಆ ಮೂರು ಹೆಜ್ಜೆ ಭೂಮಿ ಎಂದರೆ ಬಲಿಯು ಆ ದಿನ ಆಳ್ವಿಕೆ ನಡೆಸುತ್ತಿದ್ದ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡದ ಭೂಭಾಗವಾಗಿತ್ತು!!  ಹಾಗೆ ಮೂರು ಹೆಜ್ಜೆ ಭೂಮಿಯನ್ನು ಪಡೆದ ವಾಮನ ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳಿಸಿದ ಎನ್ನುವುದು ಕಥೆಯಾದರೆ ಅದೇ ಪಾತಾಳ ಲೋಕವು ಇಂದಿನ ದಕ್ಷಿಣ ಅಮೆರಿಕಾ ಆಗಿತ್ತು ಎಂದು ಸಂಶೋಧನೆಗಳು ಹೇಳುತ್ತಿದೆ!!!

ವಾಮನನು ಬಲಿಯನ್ನು ಪಾತಾಳ(ದಕ್ಷಿಣ ಅಮೆರಿಕಾ)ದಲ್ಲಿ ನೆಲೆಸಲು ಕೇಳಿಕೊಳ್ಳುವುದಕ್ಕೂ ಮುನ್ನ ತಾನು ತನ್ನ ಗಿಡುಗ(ಗರುಡ)ವನ್ನೇರಿ ಆ ಭಾಗದಲ್ಲಿ ವಾಸಿಸುತ್ತಿದ್ದ ಎಲ್ಲಾ ರಾಕ್ಷಸರನ್ನು (ಮೂಲ ನಿವಾಸಿಗಳು?) ನಾಶ ಮಾಡಿದ್ದನು ಮತ್ತು ಬಲಿ ಹಾಗೂ ಅವನ ಅನುಯಾಯಿಗಳು, ಪ್ರಜೆಗಳು ಅಲ್ಲಿ ನೆಲೆಸಲು ಅನುಕೂಲಕರ ಪರಿಸರ ನಿರ್ಮಾಣ ಮಾಡಿದ್ದನು.

ಹಾಗಾದರೆ ಭಾರತೀಯ ಪುರಾಣದಲ್ಲಿರುವ ಪಾತಾಳ ಲೋಕದ  ವರ್ಣನೆಯಲ್ಲಿಡಗಿರುವ ಸತ್ಯವೇನು? ಪಾತಾಳ ಲೋಕ ಸೇರಿ ಏಳು ಲೋಕಗಳು ಈ ಭೂ ಖಂಡದಲ್ಲಿ ಎಲ್ಲಿದೆ? ಬಲಿ ಚಕ್ರವರ್ತಿ-ವಾಮನರ ಐತಿಹಾಸಿಕತ್ವ ತಿಳಿಯುವ ಮುನ್ನ ಇದನ್ನೊಮ್ಮೆ ನೋಡೋಣ

ಪುರಾಣದ ಪಾತಾಳ ಲೋಕದ ಭೂ ವಿವರ 

ಪಾತಾಳ ಲೋಕ-ಮೂಲತಃ  ವೇದ ಕಾಲದ ಜನರಿಗೆ ವಿದೇಶವಾಗಿದ್ದ ಎಲ್ಲಾ ಭೂಮಿಯನ್ನು ಸೂಚಿಸುತ್ತದೆ,

ವೈದಿಕ ಪುರಾಣಗಳಲ್ಲಿ ಬಳಸಲಾದ ಹೆಚ್ಚಿನ ಪದಗಳಂತೆ ಪಾತಾಳ ಲೋಕ ಕೂಡ ವಿವಿಧ ರೀತಿಯಲ್ಲಿ ಶೈಲೀಕೃತವಾಗಿರುವ ಒಂದು ನೈಜ ಸ್ಥಳವೆಂದು ತೋರುತ್ತದೆ- ಸಮುದ್ರದ ಕೆಳಗೆ ಇದೆ, ಭೂಮಿಯ ಕೆಳಗೆ ಇದೆ. ಹೆಚ್ಚು ಅಥವಾ ಕಡಿಮೆ ಎಲ್ಲಾ ವಸ್ತುಗಳು, ಸ್ಥಳಗಳು ಮತ್ತು ವೈದಿಕ ಪುರಾಣಗಳಲ್ಲಿ ಉಲ್ಲೇಖಿಸಲಾದ ಘಟನೆಗಳು ಆರ್ಯರ ನಿಜ ಜೀವನದ ಅನುಭವಗಳಿಗೆ ಸಂಬಂಧಿಸಿವೆ ಎಂದು ಊಹಿಸಬಹುದು.

ಇಡೀ  ಬ್ರಹ್ಮಾಂಡವನ್ನು ಸ್ವರ್ಗ / ದೇವಲೋಕ(ಆರು ಮೇಲಿನ ಪ್ರದೇಶಗಳು), ಪೃಥ್ವಿ / ಭೂ-ಲೋಕ  (ಭೂಮಿ) ಮತ್ತು ಪಾತಾಳ (ಏಳು ಕೆಳ ಪ್ರದೇಶಗಳು) ಎಂದು ವಿಂಗಡಿಸಬಹುದು. ಡಾ. ದೇವದುತ್ ಪಟ್ಟಾನಾಯಕ್ ಅವರ ಈ ವಿವರಣೆ ಈ ಮೂರು ಲೋಕಗಳನ್ನು ಉತ್ತಮವಾಗಿ ವಿವರಿಸುತ್ತದೆ:

ಬ್ರಹ್ಮಾಂಡವನ್ನು ಗಗನಚುಂಬಿ ಕಟ್ಟಡವಾಗಿ ದೃಶ್ಯರೂಪದಲ್ಲಿಟ್ಟರೆ ಮಧ್ಯದಲ್ಲಿ ಭೂಲೋಕ ಅಥವಾ ಭೂಮಿ ಬರುತ್ತದೆ. ಮೇಲಿನವು ಹೆಚ್ಚುತ್ತಿರುವ ಸಂತೋಷ, ಸುಖದ ಸ್ಥಳಗಳಾಗಿದ್ದರೆ ಕೆಳಗಿನವು ಸಂತೋಷ, ಸುಖ ಕಡಿಮೆಯಾಗಿ ರುವ ಸ್ಥಳಗ ಳಾಗಿದೆ. ಇದರಲ್ಲಿ ದೇವಲೋಕ ಅಥವಾ ಸ್ವರ್ಗ ಉಚ್ಚಸ್ಥಾನದಲ್ಲಿದ್ದರೆ ಪಾತಾಳ ಲೋಕ ಅಸುರರ ಕ್ಷೇತ್ರ ಅತ್ಯಂತ ಕೆಳಗಿನದಾಗಿದೆ!

What Are The 14 Lokas Or Worlds According To Hindu Mythology - Hindutva Gyan
ಪುರಾಣದ ಹದಿನಾಲ್ಕು ಲೋಕದ ವರ್ಣನೆ

ಈ ಎಲ್ಲಾ ಲೋಕವನ್ನೂ ನೈಜ ಸ್ಥಳಗಳೆಂದು ಊಹಿಸಿದ್ದಾದರೆ ಭೂಲೋಕ ಸಾಮಾನ್ಯ ಜನರ ಕ್ಷೇತ್ರ, ಅಂದರೆ, ನಗರದಲ್ಲಿ ವಾಸಿಸುವ ಸಾಮಾನ್ಯರು. ದೇವಲೋಕವೆಂದರೆ ಮಹಾನ್ ರಾಜರು ಮತ್ತು ವಿಜಯಶಾಲಿಗಳ ಕ್ಷೇತ್ರ. ಇಂದ್ರ ಮತ್ತು ಇತರರು. ಇವರು ಸಾಮಾನ್ಯ ಮಾನವರಾಗಿದ್ದೂ ಅಂತಹ ಮಹಾನ್ ವಿಜಯಗಳನ್ನು ಸಾಧಿಸಿದ್ದ ಕಾರಣ ಅವರನ್ನು ದೇವತೆಗಳ ಮಟ್ಟಕ್ಕೆ ಏರಿಸಲಾಯಿತು. ಬಹುಜನರು ಅವರನ್ನು ಆರಾಧಿಸುತ್ತಿದ್ದರು. ಈ ಇಂದ್ರನಂತಹವರು ಬಹು ವಿರಾಮದ ಆರಾಮದಾಯಕ ಜೀವನ ನಡೆಸುತ್ತಿದ್ದರು ಮತ್ತು ಎಲ್ಲಾ ಸಾಮಾನ್ಯ ಜನರು ಅಂತಹ ಜೀವನ ಮಟ್ಟವನ್ನು ತಲುಪಲು ಹಂಬಲಿಸಿದರು.

ಫಾತಾಳ-ಆರ್ಯರ ಪಾಲಿನ ವಿದೇಶ!!

ಪಾತಾಳ ಲೋಕ ವಿದೇಶಿ ಕ್ಷೇತ್ರ. ಆರ್ಯರ ಸಾಮ್ರಾಜ್ಯವನ್ನು ಮೀರಿದ ಎಲ್ಲಾ ಸ್ಥಳಗಳು, ಅಂದರೆ, ದಕ್ಷಿಣ ಭಾರತ ಮತ್ತು ಪೂರ್ವ ಮತ್ತು ಈಶಾನ್ಯ ಭಾರತ. ಇವು ಶತ್ರುಗಳ ಸಾಮ್ರಾಜ್ಯಗಳಾಗಿದ್ದು, ಆರ್ಯರಿಗೆ ತಲುಪಲಾಗದ ಸ್ಥಳಗಳು!!!

ಆರ್ಯರಿಗೆ ತಲುಪಲಾಗದ ಸ್ಥಳಗಳೇ ಪಾತಾಳ ಲೋಕ ಎನ್ನಲು ಇನ್ನಷ್ಟು ಪುರಾವೆಗಳು ಹೀಗಿದೆ-

ಆರ್ಯರು ವಾಯುವ್ಯದಿಂದ ಭಾರತವನ್ನು ಆಕ್ರಮಿಸಿದಾಗ, ಅವರು ಸಿಂಧೂ ಕಣಿವೆ ನಾಗರಿಕತೆಯ ನಾಶಕ್ಕೆ ಕಾರಣವಾದರೆನ್ನಲಾಗಿದೆ. ಸಿಂಧೂ ಕಣಿವೆ ನಾಗರಿಕತೆಯು ಉನ್ನತ ತಾಂತ್ರಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಜ್ಞಾನವನ್ನು ಹೊಂದಿರುವ ಅತ್ಯಾಧುನಿಕ ನಾಗರಿಕತೆಗಳಲ್ಲಿ ಒಂದಾಗಿತ್ತು. ಈ ಜನರು ದಕ್ಷಿಣ ಮತ್ತು ಪೂರ್ವ ಭಾರತದ ಕಡೆಗೆ ವಲಸೆ ಹೋಗಬೇಕಾಯಿತು. ಈ ಜನರು ಎಲ್ಲಿ ನೆಲೆಸಿದ್ದರೂ ಅಲ್ಲೇ  ತಮ್ಮ ಉನ್ನತ ಜೀವನ ಮಟ್ಟವನ್ನು ಮುಂದುವರೆಸುತ್ತಾರೆ. ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ವಿವರಿಸಿದಂತೆ ಪಾತಾಳ ಲೋಕದ ಸಮೃದ್ಧಿಯ ವಿವಿಧ ವಿವರಣೆಗಳಿಂದ ಇದು ಸ್ಪಷ್ಟವಾಗಿದೆ:

ಪುರಾಣಗಳಲ್ಲಿ ಪಾತಾಳದ ವರ್ಣನೆ

ವಿಷ್ಣು ಪುರಾಣವು ದೇವರ್ಷಿ ನಾರದನು ಪಾತಾಳ ಲೋಕಕ್ಕೆ ಭೇಟಿ ನೀಡಿದ ಬಗ್ಗೆ ಹೇಳುತ್ತದೆ. ನಾರದನು ಪಾತಾಳವನ್ನು  ಸ್ವರ್ಗ (ಸ್ವರ್ಗ) ಕ್ಕಿಂ ತ ಹೆಚ್ಚು ಸುಂದರ ಎಂದು ವರ್ಣಿಸುತ್ತಾನೆ.ಪಾತಳದಲ್ಲಿ  ಭವ್ಯವಾದ ಆಭರಣಗಳು, ಸುಂದರವಾದ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರವಾದ ರಾಕ್ಷಸ ಹೆಣ್ಣುಮಕ್ಕಳಿಂದ ತುಂಬಿದೆ ಎಂದು ವಿವರಿಸಲಾಗಿದೆ. ಸಿಹಿ ಸುಗಂಧವು ಗಾಳಿಯಲ್ಲಿ ಸಂಗೀತದೊಡನೆ ಬೆರೆಯುತ್ತದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ನೇರಳೆ, ಮರಳು, ಹಳದಿ, ಕಲ್ಲು ಮತ್ತು ಚಿನ್ನದಿಂದ ಕೂಡಿದೆ..

The different realms of Patala loka The... - Vedic Cosmology and the Srimad  Bhagavatam's 5th Canto | Facebook
ಕಾಲ್ಪನಿಕ ಚಿತ್ರ

ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು  ಬಿಲಾ-ಸ್ವರ್ಗಗಳು ("ಸಬ್ಟೆರ್ರೇನಿಯನ್ ಸ್ವರ್ಗ") ಎಂದು ಕರೆಯುತ್ತದೆ ಮತ್ತು ಅವುಗಳನ್ನು ಭೂಮಿಯ ಕೆಳಗಿರುವ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸಲಾಗುತ್ತದೆ. ಈ ಪ್ರದೇಶಗಳು ಸ್ವರ್ಗವನ್ನು ಒಳಗೊಂಡಿರುವ ಬ್ರಹ್ಮಾಂಡದ ಮೇಲಿನ ಪ್ರದೇಶಗಳಿಗಿಂತ ಹೆಚ್ಚು ಸಮೃದ್ಧವಾಗಿದೆ ಎಂದು ವಿವರಿಸಲಾಗಿದೆ. ಇಲ್ಲಿನ ಜೀವನವು ಸಂತೋಷ, ಸಂಪತ್ತು ಮತ್ತು ಐಷಾರಾಮಿಯಾಗಿದೆ. ಯಾವುದೇ ತೊಂದರೆ, ಅಡ್ಡಿಯಿಲ್ಲ. ರಾಕ್ಷಸ ವಾಸ್ತುಶಿಲ್ಪಿ ಮಯ ಆಭರಣಗಳೊಂದಿಗೆ ಅರಮನೆಗಳು, ದೇವಾಲಯಗಳು, ಮನೆಗಳು ಸೇರಿ ವ್ಯಾಪಾರ ಸ್ಥಳಗಳನ್ನು ನಿರ್ಮಾಣ ಮಾಡಿದ್ದಾನೆ. ಪಾತಾಳದ ನೈಸರ್ಗಿಕ ಸೌಂದರ್ಯವು ಮೇಲಿನ ಲೋಕಗಳಿಗಿಂತ ಸೌಂದರ್ಯವನ್ನು ಮೀರಿಸುತ್ತದೆ  ಎಂದು ಹೇಳಲಾಗುತ್ತದೆ. ಕೆಳಗಿನ  ಲೋಕದಲ್ಲಿ  ಸೂರ್ಯನ ಬೆಳಕು ಇಲ್ಲ, ಆದರೆ  ಪಾತಾಳದ ನಿವಾಸಿಗಳು ಧರಿಸಿರುವ ಆಭರಣಗಳ ಹೊಳಪಿನಿಂದ ಕತ್ತಲೆ ಕರಗುತ್ತದೆ. ಪಾತಾಳದಲ್ಲಿ ವಾಸಿಸುವವರಲ್ಲಿ  ವೃದ್ಧಾಪ್ಯವಿಲ್ಲ, ಬೆವರು ಇಲ್ಲ, ರೋಗವಿಲ್ಲ ಎಂದೂ ವಿವರವಿದೆ.

ಇವು ಆರ್ಯರಿಗೆ ವಿದೇಶೀಯರ ಬಗೆಗಿದ್ದ ಕಲ್ಪನೆಯನ್ನು ಹೇಳ್ಲುತ್ತದೆ. ಅಲ್ಲದೆ ಆರ್ಯರಿಗಿಂ ತ  ಈ ಬೇರೆ ಜನಾಂಗ ಹೆಚ್ಚು ಸುಧಾರಿತ ನಾಗರಿಕತೆಯನ್ನು ಹೊಂದಿದ್ದಾಗಿ ಹೇಳುತ್ತದೆ.

ದೈತ್ಯ,, ದಾನವ, ಯಕ್ಷ  ಹಾಗೂ ನಾಗರ ಕುಲ

ವಿವಿಧ ವರ್ಗದ  ರಾಕ್ಷಸರಾದ ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಲೋಕದಲ್ಲಿ  ವಾಸಿಸುತ್ತಿದ್ದಾರೆಂದು ಹೇಳಲಾಗಿದೆ. ಇವು ಆರ್ಯರಿಂದ ಸೋಲಿಸಲ್ಪಟ್ಟ ಕೆಲವು ಆರ್ಯೇತರ ಬುಡಕಟ್ಟು ಜನಾಂಗದವರ ಹೆಸರುಗಳೂ ಆಗಿದ್ದವು.

ಸಿಂಧೂ ಕಣಿವೆಯಲ್ಲಿ ವಾಸಿಸುವ ಬುಡಕಟ್ಟು ಜನಾಂಗಗಳನ್ನು ದಾನವರು ಎಂದು ಪರಿಗಣಿಸಬಹುದು. ಅದಲ್ಲಿಯೂ ವಿಶೇಷಆಗಿ ಅನೇಕ ಪ್ರಾಚೀನ ಯುರೋಪಿಯನ್ನರು, ಸ್ಪೇನ್ ಹಾಗೂ ಜರ್ಮನಿಯ ನಾಗರಿಕರು ತಮ್ಮನ್ನು ದನು,ವಿನ ಮಕ್ಕಳು (ದಾನವರು) ಎಂದು ಪರಿಗಣಿಸಿದ್ದರು. ಡ್ಯಾನ್ಯೂಬ್ ನದಿಯು ಅದೇ ಮೂಲದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ.

ದೈತ್ಯರು ಅಸುರರ ಕುಲ. ಅಸುರರು ಆರ್ಯರ ಶತ್ರುಗಳಾಗಿದ್ದ ಪ್ರಾಚೀನ ಮೆಸೊಪಟ್ಯಾಮಿಯಾದ ಬುಡಕಟ್ಟು ಜನಾಂಗದ ಪತಿನಿಧಿಗಳೆಂದು ನಂಬಲಾಗಿದೆ. ಯಕ್ಷರು ಲಂಕಾ ಸಾಮ್ರಾಜ್ಯದಲ್ಲಿ (ಶ್ರೀಲಂಕಾ) ವಾಸಿಸುತ್ತಿದ್ದ ಶಿವನ ಆರಾಧಕರು. ಕುಬೇರ ಮತ್ತು ರಾವಣನು ಯಕ್ಷ ಜನಾಂಗಕ್ಕೆ ಸೇರಿದವರು.

ನಾಗ ಕುಲದ ಶ್ರೇಷ್ಠತೆ, ಪ್ರಾಚೀನತೆ

ನಾಗಲೋಕ ಎಂದು ಕರೆಯುವ ಪಾತಾಳ ಲೋಕದ ಅತ್ಯಂತ ಕಡಿಮೆ ಕ್ಷೇತ್ರದಲ್ಲಿ ನಾಗರು ವಾಸಿಸುತ್ತಾರೆ ಎಂದು ನಂಬಲಾಗಿದೆ.

ನಾಗರು ಯೋಧ ಬುಡಕಟ್ಟು ಜನಾಂಗದವರಾಗಿದ್ದು, ಅವರು ಆರ್ಯರ ಆಕ್ರಮಣಕ್ಕೆ ಮೊದಲು ಭಾರತದ ಹೆಚ್ಚಿನ ಭಾಗಗಳಲ್ಲಿದ್ದರು. ನಾಗಗಳ  ಸಂತತಿ ಇದ್ದ ಕುರುಹು ಭಾರತದ ನಾನಾ ಕಡೆ ಇಂದಿಗೂ ಗೋಚರಿಸಿದೆ. ಕೇರಳ ಮತ್ತು ಕಾಶ್ಮೀರದ ನಾಗ ಕುಲಗಳು ಮೂಲ ಕುಲಗಳೆಂದು ತೋರುತ್ತದೆ. ಕೇರಳದ ತಿರು-ಅನನಾಥ-ಪುರಂ ಮತ್ತು ಕಾಶ್ಮೀರದ ಅನಂತ್‌ನಾಗ್ ಮುಂತಾದ ಸ್ಥಳಗಳು ಇವು ನಿಜವೆಂದು ದೃಢಪಡಿಸಿದೆ.

ಅನಂತ, ವಾಸುಕಿ, ತಕ್ಷಕ

ಎಲ್ಲಾ ನಾಗ ರಾಜರ ಪೈಕಿ ಅನಂತ (ಶೇಷ) ಮೊದಲಿಗ ಹಾಗೂ ಶ್ರೇಷ್ಠನಾಗಿದ್ದ,  ತಿರು-ಅನಂತ-ಪುರಂ ಅನ್ನು ಮಹಾ ಸರ್ಪ (ನಾಗ ಕುಲ ಶ್ರೇಷ್ಠ ರಾಜ)  ಅನಂತನ  ಆಸ್ಥಾನ ಎಂದು ಕರೆಯಲಾಗುತ್ತದೆ.  ಪ್ರಾಚೀನ ಇತಿಹಾಸದಲ್ಲಿ ಕೇರಳವನ್ನು "ಪಾತಾಳ" ಎಂದು ಕರೆದಿರುವ ಉಲ್ಲೇಖವಿದೆ. ನಾಯರ್ ಕುಲವನ್ನು ಅನಂತನ  ವಂಶಸ್ಥರು ಎಂದು ಕರೆಯಲಾಗುತ್ತದೆ

ನಾಗ ಕುಲದ ಎರಡನೇ ಅತಿಮುಖ್ಯ ವ್ಯಕ್ತಿ ವಾಸುಕಿವಾಸುಕಿಗೆ ಕೈಲಾಸದ ಬಳಿ ರಾಜ್ಯವಿತ್ತು (ಆದ್ದರಿಂದ ಶಿವನೊಂದಿಗೆ  ವಾಸುಕಿಯ ಸಂಪರ್ಕ), ಮೂಅನೇ ಮುಖ್ಯ ವ್ಯಕ್ತಿ ತಕ್ಷಕ. ತಕ್ಷಶಿಲಾದಲ್ಲಿ ನೆಲೆಸಿದ್ದವನು. ಈ ಪ್ರದೇಶ  ಅನಂತ್‌ನಾಗ್‌ನಿಂದ ದೂರವಿಲ್ಲ ಎನ್ನುವುದು ಗಮನಾರ್ಹ.

ಇತರ ನಾಗರ ಸಾಮ್ರಾಜ್ಯಗಳಾದ ಕಾರ್ಕೋಟಕ,  ಐರಾವತ (ಐರಾವತಿ ನದಿಯ ಹತ್ತಿರ (ರಾವಿ, ಪಂಜಾಬ್‌ನ ಐದು ನದಿಗಳಲ್ಲಿ ಒಂದಾಗಿದೆ) ಸಹ ದೂರವಿರಲಿಲ್ಲ. 

ಮಹಾಭಾರತದಲ್ಲಿ ಬರುವ ಅರ್ಜುನನ ಪತ್ನಿ ಉಲೂಚಿ ಸಹ ಇಂತಹಾ ನಾಗಕುಲಕ್ಕೆ ಸೇರಿದ್ದಾಳೆ. ಬಹುಶಃ ಗಂಗಾ ಬಯಲಿನಲ್ಲಿ ಈ ನಾಗಕುಲವಿತ್ತು. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಈಗ ಅನೇಕ ನಾಗ ಪೂಜಾ ಸ್ಥಳಗಳಿವೆ!!!

ಈ ಎಲ್ಲಾ ಕುಲಗಳು ಮುಖ್ಯವಾಗಿ ಆರ್ಯರ ಶತ್ರುಗಳು, ವಿದೇಶಿಯರು ಎಂಬ ಕಾರಣಕ್ಕೆ ರಾಕ್ಷಸರಾಗಿದ್ದರು ಎಂಬುದು ಸ್ಪಷ್ಟ.

...ಮುಂದುವರಿಯುವುದು

Friday, August 28, 2020

ಕೃಷ್ಣನ ಐತಿಹಾಸಿಕ ಬದುಕು - ಒಂದು ಸ್ಥೂಲ ನೋಟ

ಕೃಷ್ಣನ ಕಾಲನಿರ್ಣಯದ ಕುರಿತಾಗಿ ಈ ಹಿಂದಿನ ಎಲ್ಲಾ ಲೇಖನ ಸರಣಿಗಳಲ್ಲಿ ವಿವಿಧ ಐತಿಹಾಸಿಕ, ಸಾಹಿತ್ಯಿಕ ಜ್ಯೋತಿಷ್ಯ ದಾಖಲೆಗಳನ್ನೂ ಅವಲೋಕಿಸಿದ ನಂತರ ಇದೀಗ ಕೃಷ್ಣನ ಐತಿಹಾಸಿಕ ಬದುಕು ಹೇಗಿತ್ತು ಎನ್ನುವುದು ನೋಡೋಣ. 

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣ ವಸುದೇವ-ದೇವಕಿಯರ ಎಂಟನೇ ಪುತ್ರ. ಕೃಷ್ಣನ ಜನನ ದಿನಾಂಕ ಕ್ರಿ.ಪೂ. 3228ರ  17-18 ಜುಲೈ. ಅಂದು ಶ್ರೀಮುಖನಾಮ ಸಂವತ್ಸರದ ಶ್ರಾವಣ ಬಹುಳ(ಕೃಷ್ಣ) ಅಷ್ಟಮಿ ರಾತ್ರಿ ಹನ್ನೆರಡು ಗಂಟೆಯ ಸಮಯ. ಬಾರ್ಹಸ್ಪತ್ಯ ರೀತ್ಯಾ ಪಾರ್ಥಿವ ನಾಮ ಸಂವತ್ಸರ. ರೋಹಿಣಿ ನಕ್ಷತ್ರ, (ಅಷ್ಟಮಿ ಜೂನ್ 17 ರಂದು ಸಂಜೆ ಕೊನೆಯಾಗಿದ್ದರೂ  ನವಮಿ ತಿಥಿ ಇದ್ದೂ  ಹುಟ್ಟಿದ ಸಮಯದಲ್ಲಿ ರೋಹಿಣಿ ನಕ್ಷತ್ರವಿತ್ತು) ಶುಕ್ರವಾರವಿತ್ತು. ಅಂದಿಗೆ ಜಗತ್ತು ಸೃಷ್ಟಿಯಾಗಿ 195,58,79,894 ವರ್ಷಗಳಾಗಿತ್ತು!!!

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣನ ಜನನವಾಗಿ ಸ್ವಲ್ಪ ಹೊತ್ತಿಗೇ ದೈವ ಸಂಕಲ್ಪ ಎಂಬಂತೆ ಕೃಷ್ಣನನ್ನು ವಸುದೇವ ಗೋಕುಲಕ್ಕೆ ಕರೆದೊಯ್ಯುತ್ತಾನೆ.  ಈತ ಬಾಲ್ಯ ಕಳೆದದ್ದು ಗೋಕುಲದಲ್ಲಿ. ಸಾಕು ತಂದೆ ತಾಯಿಯರಾದ ನಂದಗೋಪ ಮತ್ತು ಯಶೋದೆಯ ಮಡಿಲಲ್ಲಿ!! 

ವಿವಿಧ ಸ್ಥಳಗಳಲ್ಲಿ ಶ್ರೀ ಕೃಷ್ಣನ ಜೀವಿತಾವಧಿ

ಕೃಷ್ಣ ತನ್ನ ಜೀವನವನ್ನು 3 ಪ್ರಮುಖ ಭಾಗಗಳಲ್ಲಿ ವಿಂಗಡಿಸಬಹುದು,

  • ವೃಂದಾವನ  ಲೀಲೆ: 11 ವರ್ಷ 6 ತಿಂಗಳು (ಬೃಂದಾವನ/ಗೋಕುಲದಲ್ಲಿ ಬಾಲ್ಯದ ದಿನಗಳು)
  • ಮಥುರಾ ಲೀಲೆ: 10 ವರ್ಷ 6 ತಿಂಗಳು (ತನ್ನ ಮಾವ ಕಂಸನನ್ನು ಕೊಂದ ನಂತರ ಹದಿಹರೆಯದ ಜೀವನ)
  • ದ್ವಾರಕಾ ಲೀಲೆ: 105 ವರ್ಷ 3 ತಿಂಗಳು (ದ್ವಾರಕದಲ್ಲಿ ರಾಜ್ಯವನ್ನು ಸ್ಥಾಪಿಸಿದ ನಂತರದ ಜೀವನ)
ಕೃಷ್ಣ ಗೋಕುಲದಲ್ಲಿದ್ದಾಗಲೇ  ತನ್ನನ್ನು ಕೊಲ್ಲಲಿರುವ ಮಗು ಗೋಕುಲದಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು, ಆ ಶಿಶುವನ್ನು ಹತ್ಯೆಗೈಯಲು ಕಂಸ ನಾನಾ ಸಂಚು ರೂಪಿಸಿದ್ದ (ಈ ನಿಟ್ಟಿನಲ್ಲಿ ಬಂದವರೇ ಪೂತನಿ, ಶಕಟಾಸುರ, ಕಾಲಯವನ, ತೃಣಾವರ್ತ, ಬಕ,ಅಘ, ಅರಿಷ್ಟ, ಕೇಶಿ ಮುರ, ಜರಾಸಂಧ, ಪೌಂಡ್ರಕ )

ಬೃಂದಾವನ ಲೀಲೆಯ ಸಮಯದಲ್ಲೇ ಕೃಷ್ಣ ಮರದರೂಪದಲ್ಲಿದ್ದ ನಳಕುಬೇರ ಹಾಗೂ ಮಣಿಗ್ರೀವ ಎಂಬ ಶಾಪಗ್ರಸ್ಥ ಗಂಧರ್ವರಿಗೆ ಮೋಕ್ಷ ನೀಡಿದನು.(ಈ ಇಬ್ಬರೂ ಗಂಧರ್ವ ಕುಲಕ್ಕೆ ಸೇರಿದವರಾಗಿದ್ದು ಕಂಸನೋ ಇನ್ನಾರೋ ಅಣತಿಯಂತೆ ಆ ಪ್ರದೇಶದಲ್ಲಿ ಜೀತದಾಲಾಗಿ ದುಡಿಯುತ್ತಿರಬಹುದು, ಆ ಜೀತದಿಂದ ಬಾಲಕ ಕೃಷ್ಣ ಅವರನ್ನು ಮುಕ್ತಗೊಳಿಸಿದ್ದ)

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)

ಕೃಷ್ಣನಿಗೆ 7 ವರ್ಷ 2 ತಿಂಗಳು 10 ದಿನಗಳಾಗಿದ್ದ ವೇಳೆ ಗೋವರ್ಧನ ಗಿರಿ ಘಟನೆ ನಡೆದಿತ್ತು!!

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)


ಕ್ರಿ.ಪೂ 3222 ಆಗಸ್ಟ್ 28 ರ ರಾತ್ರಿ ಕೃಷ್ಣನು ಭೀಕರ ಮಳೆ ಹಾಗೂ ಬಿರುಗಾಳಿಗಳಿಂದ ದನಗಳನ್ನು ಮತ್ತು ಜನರನ್ನು ಗೋವರ್ಧನ ಗಿರಿ ಗುಹೆಯಲ್ಲಿ ಅಡಗಿಸಿಟ್ಟು ರಕ್ಷಿಸಿದ್ದನು.

ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)

ಬೃಂದಾವನ ಲೀಲೆಯ ಕಡೆಯಲ್ಲಿ ಕೃಷ್ಣನು ಮಥುರಾವನ್ನು ಪ್ರವೇಶಿಸಲು ನಿರ್ಧರಿಸಿದನು ಮತ್ತು ಅವನ ಮಾವ ಕಂಸ ನಡೆಸುತ್ತಿದ್ದ ದುರಾಡಳಿತವನ್ನು ಕೊನೆಗೊಳಿಸಿದನು
ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)


ಮಥುರ ಲೀಲೆಯ ಸಮಯದಲ್ಲಿ ಕ್ರಿ,ಪೂ. 3218ರ ಡಿಸೆಂಬರ್ 14 ಕ್ಕೆ ಶಿವರಾತ್ರಿಯ ದಿನ ಕೃಷ್ಣನು ಕಂಸನ ವಧೆ ಮಾಡಿದ್ದನು, (ಆ ದಿನಗಳಲ್ಲಿ ಶಿವರಾತ್ರಿ ಈಗಿನ ಕಾಲಮಾನಕ್ಕೆ ಹೋಲಿಸಿದರೆ  2-3 ತಿಂಗಳು ಮುಂಚಿತವಾಗಿ ಸಂಭವಿಸುತ್ತಿತ್ತು. ಕಳೆದ 5000+ ವರ್ಷಗಳಲ್ಲಿ ಸಂಕ್ರಾಂತಿ ಹಾಗೂ ವಿಷು ಕಾಲಮಾನದ ಬದಲಾವಣೆಯ ಕಾರಣ ಈಗ ಶಿವರಾತ್ರಿ ಫೆಬ್ರವರಿ ಇಲ್ಲವೆ ಮಾರ್ಚ್ ಗೆ ಸಂಭವಿಸುತ್ತದೆ.) ಕಂಸನನ್ನು ಕೊಂದ ನಂತರ ಕಂಸನ ತಂದೆ ಉಗ್ರಸೇನನನ್ನು ಮಥುರಾದ ರಾಜನನ್ನಾಗಿ ಮಾಡಿದ್ದನು ಕಂಸ ವಧೆ ಮಾಡುವಾಗ ಕೃಷ್ಣನಿಗೆ 11 ವರ್ಷ 6 ತಿಂಗಳಾಗಿತ್ತು

ದ್ವಾರಕೆಯತ್ತ ಗಮನ (ಕ್ರಿ.ಪೂ 3207 ಜೂನ್)

ಅದಾಗಿ ಸುಮಾರು ಹತ್ತು ವರ್ಷಗಳ ಕಾಲ ಮಥುರೆಯಲ್ಲಿದ್ದ ಕೃಷ್ಣ ಕ್ರಿ.ಪೂ 3207 ಜೂನ್ ನಲ್ಲಿ  ಮಥುರೆಯನ್ನು ತೊರೆದು ಪಶ್ಚಿಮ ಸಮುದ್ರ ತೀರದಲ್ಲಿ ದ್ವಾರಕ ಎಂಬ ಹೊಸ ನಗರವನ್ನು ರೂಪಿಸಲು ತಯಾರಾದ. ಅದಕ್ಕೆ ಕಾರಣ ಹೀಗಿದೆ- 

ಮಗಧ ದೊರೆ ಜರಾಸಂಧ 17 ಬಾರಿ ಮಥುರೆಯ ಮೇಲೆ ಮೇಲೆ ದಾಳಿ ಮಾಡಿದ ಅಲ್ಲದೆ ಇನ್ನೂ ಅನೇಕ ರಾಜರು ಮಥುರೆಯ ಆಕ್ರಮಣಕ್ಕೆ ಮುಂದಾಗಿದ್ದರು.ಪರಿಣಾಮ ಕೃಷ್ಣ  ತನ್ನ ಯಾದವ ಪರಿವಾರದ ರಕ್ಷಣೆಗಾಗಿ ಯುದ್ಧವನ್ನು ಪರಿತ್ಯಜಿಸಿದನು ಹಾಗೂ ತನ್ನ ರಾಜಧಾನಿಯನ್ನು  ಮಥುರೆಯ ಬದಲು ದ್ವಾರಕೆಗೆ ಬದಲಿಸಿದನು. ಅಲ್ಲಿ ಆತ 12 ಯೋಜನ ಜಾಗದಲ್ಲಿ ದ್ವಾರಕಾ ನಗರವನ್ನು ನಿರ್ಮಿಸಿದ್ದನು,  ದ್ವಾರಕಾ ಅಥವಾ ದ್ವಾರವತಿ ಎಂದು ಕರೆಯಲಾಗುತ್ತಿದ್ದ ಈ ನಗರ ಯಾದವರಿಗೆ ಹೊಸ ಜೀವನ ಕಟ್ಟಿಕೊಟ್ಟಿತು.

ದ್ವಾರಕೆಯಲ್ಲಿ ಕೃಷ್ಣ, ಅವನ ಪತ್ನಿಯರು, ಮಕ್ಕಳು

ಕೃಷ್ಣ ತನ್ನ ಜೀವನದ ಬಹುಪಾಲು ಅವಧು ಕಳೆದದ್ದು ದ್ವಾರಕೆಯಲ್ಲಿ. ದ್ವಾರಕೆಗೆ ಬಂದು ನೆಲೆಸಿದ್ದ ಕೃಷ್ಣನಿಗೆ  16,108 ಪತ್ನಿಯರೆಂದು  ಹೇಳಲಾಗಿದೆ, ಆದರೆ ಅದರಲ್ಲಿ ಆದರೆ 8 ಜನ ಪತ್ನಿಯರು ಮಾತ್ರವೇ ಮುಖ್ಯವಾಗಿರುತ್ತಾರೆ. ಅವರೆಂದರೆ
  • ವಿದರ್ಭ ರಾಜ ಭೀಷ್ಮಕನ ಮಗಳು ರುಕ್ಮಿಣಿ 
  • ಸತ್ರಾಜಿತನ ಮಗಳು ಸತ್ಯಭಾಮೆ
  • ಜಾಂಬವನ ಮಗಳು ಜಾಂಬವತಿ
  • ಸೂರ್ಯದೇವನ ಮಗಳಾದ ಕಳಿಂದಿ
  • ಕೋಸಲ ರಾಜ ನಗ್ನಜಿತನ ಮಗಳು ನಗ್ನಜಿತಿ 
  • ಉಜೈಯನಿಯ ಪ್ರಖ್ಯಾತ ರಾಜರಾದ ವಿಂದ ಮತ್ತು ಅನುವಿಂದರ ಮುದ್ದಿನ ಹಾಗೂ ಏಕೈಕ ಸಹೋದರಿ ಮಿತ್ರಾವಿಂದ 
  • ದ್ರಿಷ್ಟಿಕೇತು ಮತ್ತು ಶ್ರುತಕೀರ್ತಿ ದಂಪತಿಗಳ ಮಗಳಾದ  ಭದ್ರ
  • ಮದ್ರಾ ರಾಜ್ಯದ ಬೃಹತ್ಸೇನನ ಮಗಳು ಲಕ್ಷ್ಮಣ 

ಈ ಎಲ್ಲಾ ರಾಜರು, ಸಾಮಂತರ ಪುತ್ರಿಯರನ್ನು ಕೃಷ್ಣ ವಿವಾಹವಾಗುವುದರ ಮೂಲಕ ದ್ವಾರಕೆಯ ಸುತ್ತಮುತ್ತಲ ಹ್ಗಡಿಯನ್ನು ಭದ್ರಪಡಿಸಿದ್ದಲ್ಲದೆ.ದ್ವಾರಕೆಗೆ ಶತ್ರುಗಳಿಂದಾಗಬಹುದಾದ ಹಾನಿಯನ್ನೂತನ್ನ ರಾಜನೀತಿ ಚಾತುರ್ಯದಿಂದ  ತಪ್ಪಿಸಿದ್ದ!!!

ಇದಲ್ಲದೆ ನರಕ ಎಂಬ ಅಸುರ(ರಾಜ?) ಬೇರೆ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿದ್ದಾಗ ಕದ್ದು ತಂದು ಬಂಧಿಸಿಟ್ಟಿದ್ದ  16,100 ಮಹಿಳೆಯರನ್ನು ಕೃಷ್ಣ ಬಂಧನದಿಂದ ಬಿಡಿಸಿದ್ದನು, ಈ ವೇಳೆ ಇಷ್ಟು ದಿನ ನರಕನ ಆಶ್ರಯದಲ್ಲಿದ್ದ ಅವರನ್ನು ಬೇರಾರೂ ವಿವಾಹವಾಗದೆ ಹೋಗಲು ಕೃಷ್ಣ ಎಲ್ಲರನ್ನೂ ತಾನೇ ವಿವಾಹವಾದನೆಂದು ಹೇಳಲಾಗುತ್ತದೆ, 

ಕೃಷ್ಣನಿಗೆ ಅಷ್ಟ ಪತ್ನಿಯರಲ್ಲಿ ಪ್ರತೊಬ್ಬರಿಗೆ ಹತ್ತು ಮಂದಿ ಒಟ್ಟೂ ಎಂಬತ್ತು ಮಂದಿ ಮಕ್ಕಳಿದ್ದರು ಎಂದು ಹೇಳಲಾಗಿದೆ. ಆದರೆ ಅವರೆಲ್ಲರ ಪೈಕಿ ಕೃಷ್ಣ ಹಾಗೂ ರುಕ್ಮಿಣಿಯ ಮಗ ಪ್ರದ್ಯುಮ್ನ ಅತ್ಯಂತ ಪ್ರಮುಖನಾಗಿದ್ದಾನೆ. ಜಾಂಬವತಿಗೆ ಹುಟ್ಟಿದ ಸಾಂಬ ಕೃಷ್ಣನ ಇನ್ನೋರ್ವ ಪುತ್ರ. 

ಕೃಷ್ಣನ ಮುಂದಿನ ತಲೆಮಾರುಗಳಿಗೆ ಕೊಂಡಿಯಾಗಿದ್ದು ಪ್ರದ್ಯುಮ್ನ ಮಾತ್ರ!!

ಪ್ರದ್ಯುಮ್ನ ಹಾಗೂ ರುಕ್ಮಿಯ ಮಗಳು ರುಕ್ಮವತಿ ವಿವಾಹವಾಗಿ ಹುಟ್ಟಿದವ ಅನಿರುದ್ದ!!

ಅನಿರುದ್ದ ನೋಡಲು ಆತನ ಅಜ್ಜ ಕೃಷ್ಣನ ಹಾಗೇ ಇದ್ದವನು. ಅದಕ್ಕಾಗಿ ಆತನನ್ನು  ಕೃಷ್ಣಾಅಂಶ ಸಂಭೂತ ಎಂದು ಕರೆಯಲಾಗುತ್ತದೆ,  ಅನಿರುದ್ದ ಬಾಣಾಸುರನ ಮಗಳು ಉಷೆಯೊಡನೆ ವಿವಾಹವಾಗುತ್ತಾನೆ, ಬಾಣಾಸುರನೆಂದರೆ ಆತ ಬಲಿಚಕ್ರವರ್ತಿಯ ಮಗ. ಆತ ಅನಿರುದ್ದ ತನ್ನ ಮಗಳನ್ನು ವಿವಾಹವಾದ ಕಾರಣ ಕೋಪಗೊಂಡು ಅವನನ್ನು ಸೆರೆಯಲ್ಲಿಡುತ್ತಾನೆ. ಆಗ ಅಜ್ಜ ಕೃಷ್ಣ ಹಾಗೂ ಆತನ ಸೋದರ ಬಲರಾಮ ಬಾಣನೊಡನೆ ಹೋರಾಡಿ ಮೊಮ್ಮಗನನ್ನು ಸೆರೆಯಿಂದ ಮುಕ್ತಗೊಳಿಸುತ್ತಾರೆ!!

ಮುಂದೆ ಯಾದವರಲ್ಲಿ ಅವರವರೇ ಜಗಳವಾಡಿಕೊಂಡು ಸಾವನ್ನಪ್ಪಿದ್ದ ವೇಳೆ ಉಳಿದ ಯಾದವರೊಡನೆ ಕೃಷ್ಣನ ಪುತ್ರ ಪ್ರದ್ಯುಮ್ನ ದೇಹತ್ಯಾಗ ಮಾಡುತ್ತಾನೆ. ಆದರೆ ಹಾಗೆ ಕಲಹವಾದಾಗ ಬದುಕುಳಿದ ಕೆಲವೇ ಕೆಲವು ಯಾದವರ ಪೈಕಿ ಕೃಷ್ಣನ ಮರಿ ಮಗ ಪ್ರದ್ಯುಮ್ನನ ಮೊಮ್ಮಗ, ಅನಿರುದ್ದನ ಮಗ ವಜ್ರನಾಭ ಸಹ ಒಬ್ಬನಾಗಿದ್ದ. ಇದೇ ವಜ್ರನಾಭ ದ್ವಾರಕೆಯಲ್ಲಿ ಮೊಟ್ಟ ಮೊದಲಿಗೆ ಶ್ರೀಕೃಷ್ಣನ ದೇವಾಲಯ ನಿರ್ಮಾಣ ಮಾಡಿದ್ದ!!

ಕೃಷ್ಣ-ಬಲರಾಮರ ಸೋದರಿ ಸುಭದ್ರೆ

ಕೃಷ್ಣನ ತಂದೆ ವಸುದೇವನ ಮೊದಲ ಪತ್ನಿ ರೋಹಿಣಿಯ ಮಗಳು ಸುಭದ್ರಾ ಅಥವಾ ಸುಭದ್ರೆ. ಈಕೆ ಕೃಷ್ಣ ಹಾಗೂ ಬಲರಾಮರಿಗೆ ಸೋದರಿಯಾಗಿದ್ದು ಇವಳು ಅರ್ಜುನನ್ನು ಪ್ರೀತಿಸಿ ಕೃಷ್ಣ ಸಹಕಾರದೊಡನೆ ವಿವಾಹವಾಗುತ್ತಾಳೆ. ಈಕೆಯ ಪುತ್ರನೇ ಅಭಿಮನ್ಯು, ಹಾಗೆಯೇ ಕಲಿಯುಗದ ಪ್ರಾರಂಭದಲ್ಲಿ ಮಹಾಭಾರತದ ಪಾಂಡವರ ಕುಲದಲ್ಲಿ ಬದುಕಿದ್ದ ಪರೀಕ್ಷಿತ ಮಹಾರಾಜನ ಅಜ್ಜಿ ಇದೇ ಸುಭದ್ರೆ.

ಪರೀಕ್ಷಿತನ ಪುತ್ರ ಜನಮೇಜಯ ಅರ್ಜುನನಿಂದ ಮೂರನೇ ತಲೆಮಾರಿನವನಾಗಿದ್ದಾನೆ. ಈತ ಹಾಗೂ ಪರೀಕ್ಷಿತ ಮಹಾರಾಜನ ಹೆಸರು ವೇದಗಳಲ್ಲಿ ಕಾಣಸಿಗುತ್ತದೆ,.

ಕೃಷ್ಣ ಹಾಗೂ ಪಾಂಡವರು,

ಪಾಂಡವರು ಕೃಷ್ಣನ ತಂದೆ ವಸುದೇವನ ತಂಗಿ ಕುಂತಿಯ ಮಕ್ಕಳು. ಅಂದರೆ ಪಾಂಡವರಿಗೆ ಕೃಷ್ಣ ಸಂಬಂಧದಲ್ಲಿ ಖಾಸಾ ಸೋದರಮಾವನಾಗುತ್ತಾನೆ

ಜರಾಸಂಧ ವಧೆ (ಕ್ರಿ.ಪೂ 3154 ಸೆಪ್ಟೆಂಬರ್)

ಕೃಷ್ಣನ ಅಣತಿಯಂತೆ ಮಗಧ ದೇಶದ ಅರಸ. ಬೃಹದ್ರಥನ ಪುತ್ರ, ಯಾದವರ ಶತ್ರುವಾಗಿದ್ದ ಜರಾಸಂಧನನ್ನು ವಧಿಸಿದ್ದ. ಭೀಮ ಹಾಗೂ ಜರಾಸಂಧನ ನಡುವೆ ದ್ವಂದ್ವ ಯುದ್ಧ ಕ್ರಿ.ಪೂ 3154 ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿ  14 ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ನಡೆದಿತ್ತು!!!

ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)

ಕ್ರಿ.ಪೂ. 3153ರಲ್ಲಿ ಕೃಷ್ಣನಿಗೆ 75 ವರ್ಷ 8 ತಿಂಗಳವಾಗಿದ್ದ ಸಮಯ ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಸಿದ್ದರು, ಅಂದು ಚೈತ್ರ ಪೂರ್ಣಿಮೆಯ ದಿನ ಯಾಗದ ವೇಳೆ  ದಮಘೋಷ ಎಂಬ ಛೇದಿ ರಾಜ್ಯದ ರಾಜನ ಮಗ ಶಿಶುಪಾಲನನ್ನು ಎಲ್ಲಾ ರಾಜರ ಸಮ್ಮುಖದಲ್ಲೇ ಕೊಂದು ಹಾಕಿದ್ದನು!!!
ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)


ವಿಶೇಷವೆಂದರೆ ಶಿಶುಪಾಲ ಕೃಷ್ಣನ ಸೋದರತ್ತೆಯ ಮಗ. ಶಿಶುಪಾಲನ ತಾಯಿ ಶ್ರುತಕೀರ್ತಿ ಹಾಗೂ  ಪಾಂಡವರ ತಾಯಿ ಕುಂತಿ ಕೃಷ್ಣನ ಜನ್ಮದಾತ ವಸುದೇವನ ಸ್ವಂತ ತಂಗಿಯರು

ದ್ಯೂತದಲ್ಲಿ ಪಾಂಡವರ ಸೋಲು(ಕ್ರಿ.ಪೂ 3153 ರ ಮೇ 2)

ಕ್ರಿ.ಪೂ 3153 ರ ಮೇ 2 ರಂದು ಪಾಂಡವರು ತಮ್ಮ ದಾಯಾದಿ ಕೌರವರೆದುರು ದ್ಯೂತವಾಡಿ ಎಲ್ಲವನ್ನೂ ಕಳೆದುಕೊಂಡರು ಮತ್ತು ವನವಾಸಕ್ಕೆ ಹೊರಟರು. ಅವರು ಹೊರಡುವ ಮುನ್ನ ಶ್ರೀ ಕೃಷ್ಣ ಅವರನ್ನು ಭೇಟಿಯಾಗಿದ್ದನು. ಯುಧಿಷ್ಟಿರ(ಧರ್ಮರಾಯ) ಹಾಗೂ  ಭೀಮನ ಆಶೀರ್ವಾದ ಪಡೆದ ಕೃಷ್ಣ ಅರ್ಜುನನನ್ನು ತಬ್ಬಿ ಸಂತೈಸಿದ್ದನು, ಹಾಗೆಯೇ ನಕುಲ ಹಾಗೂ ಸಹದೇವರಿಗೆ  ಆಶೀರ್ವದಿಸಿದನು.  ಈ ಘಟನೆಯಿಂದ ಭೀಮ ಹಾಗೂ ಯುಧಿಷ್ಠಿರರು ಕೃಷ್ನನಿಗಿಂತ ವಯಸ್ಸಿನಲ್ಲಿ ಹಿರಿಯರು ಎನ್ನುವುದು ನಮಗೆ ಅರಿವಾಗುತ್ತದೆ!!

ಅರ್ಜುನ ಕೃಷ್ಣನ ಸಮಾನ ವಯಸ್ಸಿನವನಾಗಿದ್ದರೆ ನಕುಲ ಹಾಗೂ ಸಹದೇವ ಅವನಿಗಿಂತ ಸಣ್ಣವರಿದ್ದರು

ಪಾಂಡವರ ವಮವಾಸ, ಅಜ್ಞಾತವಾಸ ಅಂತ್ಯ ಉತ್ತರ ಕುಮಾರನಿಗೆ ಅರ್ಜುನನ  ಮೂಲ ಸ್ವರೂಪ ದರ್ಶನ (ಕ್ರಿ.ಪೂ. 3140ರ ಮೇ 7)

ಕ್ರಿ.ಪೂ. 3140ರ ಮೇ 7(ಆಷಾಢ ಶುಕ್ಲ ಸಪ್ತಮಿ) ಅಂದು ಪಾಂಡವರು ತಮ್ಮ 12  ವರ್ಷಗಳ ವನವಾಸ ಹಾಗೂ ಒಂದು  ವರ್ಷದ ಅಜ್ಞಾತವಾಸವನ್ನು ಕೊನೆಗೊಳಿಸಿದ್ದರು, ಅಂದು ಅರ್ಜುನನು ತನ್ನ ಮೂಲ ರೂಪವನ್ನು ಉತ್ತರ ಕುಮಾರನಿಗೆ ಬಹಿರಂಗಪಡಿಸಿದನು. ಅವರು ಕ್ರಿ.ಪೂ. 3140ರ ಮೇ 15ರಂದು (ಆಷಾಢ ಪೂರ್ಣಿಮೆ) ವಿರಾಟ ರಾಜನ ಮುಂದೆ ಕಾಣಿಸಿಕೊಂಡರು.

ಇದಾಗಿ 6 ತಿಂಗಳ ನಂತರ, ಕೃಷ್ಣನ ಸಂಧಾನ ಪ್ರಯತ್ನಗಳು  ವಿಫಲವಾದಾಗ, ಕುರುಕ್ಷೇತ್ರ ಯುದ್ಧ ಜರುಗಿತ್ತು

ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!

ಕುರುಕ್ಷೇತ್ರ ಯುದ್ಧವು ಕ್ರಿ.ಪೂ 3140 ರ ನವೆಂಬರ್ ನಲ್ಲಿ ಪ್ರಾರಂಭವಾಗಿತ್ತು. ಯುದ್ಧದ ಮೊದಲ ದಿನ ಕೃಷ್ಣ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ್ದ ದಿನವಾಗಿದ್ದು ಅಂದು ಕೃಷ್ಣನಿಗೆ  89 ವರ್ಷ ಮತ್ತು ಅರ್ಜುನನಿಗೆ 88 ವರ್ಷ.ವಯಸ್ಸು.
ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!


ಯುದ್ಧದ 10 ನೇ ದಿನದಂದು ಭೀಷ್ಮನನ್ನು ಅರ್ಜುನನು ಶರಶಯ್ಯೆ (ಬಾಣಗಳಿಂದ ಮಾಡಿದ್ದ ಹಾಸಿಗೆ) ಮೇಲೆ ಮಲಗಿಸಿದನು. ಅದಾದ 3 ದಿನಗಳ ನಂತರ, ದ್ರೋಣಾಚಾರ್ಯರು ಯೋಜಿಸಿದ ಪದ್ಮ ವ್ಯೂನಲ್ಲಿ ಅರ್ಜುನನ ಮಗ ಅಭಿಮನ್ಯುನನ್ನು ಕೊಲ್ಲಲಾಯಿತು. ಆ ನಂತರ ಕೃಷ್ಣ ಅರ್ಜುನ ಸೇರಿ ಕುರು, ಪಾಡವರ ಗುರುವಾಗಿದ್ದ, ಮಹಾನ್‌ ಮುನಿಯಾದ ಭಾರದ್ವಾಜ ರ ಮಗ. ದ್ರೋಣಾಚಾರ್ಯನನ್ನು ತಂತ್ರದಿಂದ ಮಣಿಸುತ್ತಾನೆ, 

ಇದಾದ ನಂತರ ಸೇನಾಪತಿಯಾದ ಕುಂತಿಯ ಕಾನೀನ ಪುತ್ರ ಕರ್ಣನನ್ನೂ ಸಹ ಕೃಷ್ಣನ ಸಲಹೆ ಮೇರೆಗೆ ಆತ ನಿರಾಯುಧನಾಗಿದ್ದಾಗಲೇ ಅರ್ಜುನ ಕೊಲ್ಲುತ್ತಾನೆ. ದುರ್ಯೋಧನನ ಮರಣದೊಂದಿಗೆ ಕುರುಕ್ಷೇತ್ರ ಯುದ್ಧವು 18 ದಿನಗಳಲ್ಲಿ ಕೊನೆಗೊಂಡಿತು.

ಭೀಷ್ಮನಿಂದ ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶ( ಕ್ರಿ.ಪೂ. 3140ರ ಡಿಸೆಂಬರ್ 5) 

.ಪೂ. 3140ರ ಡಿಸೆಂಬರ್ 5 (ಮಾಘ ಶುಕ್ಲ ಏಕಾದಶಿ)ರಂದು ಭೀಷ್ಮ ಯುಧಿಷ್ಟಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸುತ್ತಾನೆ, ಹಾಗೂ ತಾನು ದೇಹತ್ಯಾಗ ಮಾಡುತ್ತಾನೆ.

ಎರಡು ತಿಂಗಳ ನಂತರ , ಕ್ರಿ.ಪೂ 3139 ರ ಫೆಬ್ರವರಿ 5ರಂದು (ಚೈತ್ರ ಪೂರ್ಣಿಮೆ) ಯುಧಿಷ್ಟಿರ ಅಶ್ವಮೇಧ ಯಾಗವನ್ನು ಪ್ರಾರಂಭಿಸುತ್ತಾನೆ.

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)

ಅದಾಗಿ 37 ವರ್ಷಗಳ ನಂತರ, ಕ್ರಿ.ಪೂ 3102ರ ಫೆಬ್ರವರಿ 17ರಂದು ಸಂಜೆ ಬೇಟೆಗಾರನೊಬ್ಬನ ಬಾಣ ಕೃಷ್ಣನ ಕಾಲಿಗೆ ತಗುಲಿ ಗಾಯವಾಗುತ್ತದೆ. ಅದಾಗಿ ಮರುದಿನ 18 ಫೆಬ್ರವರಿ ನಸುಕಿನ ಜಾವ  02 ಗಂಟೆ 27 ನಿಮಿಷ 30 ಸೆಕೆಂಡ್ ಗೆ ಕೃಷ್ಣ ತನ್ನ ದೇಹತ್ಯಾಗ ಮಾಡುತ್ತಾನೆ, ಆ ದಿನ ಸೂರ್ಯೋದಯವು ಶುಕ್ರವಾರ, ಅಶ್ವಿನಿ ನಕ್ಷತ್ರ ಹಾಗೂ  ತಿಥಿ (ಚಂದ್ರನ ದಿನ) ಶುದ್ದ ಪಾಡ್ಯಮಿ(ಶುಕ್ಲ ಪ್ರತಿಪದ್ ಅಥವಾ ಚಂದ್ರ ಮಾಸದ ಮೊದಲ ದಿನ). ಪ್ರಮಾದಿ ನಾಮ ಸಂವತ್ಸರದ ಮೊದಲ ದಿನ!!!   

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)


ಹೀಗೆ ಒಟ್ತಾರೆ ಕೃಷ್ಣ ಈ ಭೂಮಿಯಲ್ಲಿ 126 ವರ್ಷ 8 ತಿಂಗಳ ಕಾಲ ಬದುಕಿದ್ದನು, 

ಯಾದವರ ಕಲಹ, ದ್ವಾರಕೆಯ ಮುಳುಗಡೆ(ಕ್ರಿ.ಪೂ. 3102)

ಕೃಷ್ಣನ ಅವಸಾನದ ನಂತರ  ವಾದವಿವಾದಗಳಿಂದ ಅವರವರ ನಡುವೆಯೇ ಕದನ ನಡೆದು ಪ್ರಮುಖ ಯಾದವ ಮುಖಂಡರು ನಿಧನಹೊಂದಿದರು, ಅರ್ಜುನನು ದ್ವಾರಕಾ ನಗರಕ್ಕೆ ಹೋಗಿ ಕೃಷ್ಣನ ಮೊಮ್ಮಕ್ಕಳು ಹಾಗೂ ಯಾದವರ ಪತ್ನಿಯರನ್ನು ಸುರಕ್ಷಿತತೆಗಾಗಿ ಹಸ್ತಿನಾಪುರಕ್ಕೆ ಕರೆತಂದನು. ಅರ್ಜುನನು ದ್ವಾರಕಾ ನಗರವನ್ನು ಬಿಟ್ಟಬಳಿಕ ಕೃಷ್ಣ ಕ್ರಿ.ಪೂ. 3102ರಲ್ಲಿ ಅವಸಾನ ಹೊಂದಿದ ಬಳಿಕ ದ್ವಾರಕಾ ಕ್ರಿ.ಪೂ 3031 ರಲ್ಲಿ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಯಿತು, ಕೃಷ್ಣನ  ಮೊಮ್ಮಗ ವಜ್ರನಾಭನನ್ನು ಹೊರತುಪಡಿಸಿ ಎಲ್ಲರೂ ಕಾಲವಶರಾದರು,

ಶುಭಂ.

Thursday, August 27, 2020

ಕೃಷ್ಣನ ಜನ್ಮಭೂಮಿ ಮಥುರೆಯ ಐತಿಹಾಸಿಕ ಹಿನ್ನೆಲೆ - ಒಂದು ಇಣುಕು ನೋಟ

ಮಥುರೆ ಮುಕ್ತಿ ಧಾಮಗಳಲ್ಲೇ ಎರಡನೇ ಸ್ಥಾನದಲ್ಲಿದೆ. ಕೃಷ್ಣನು ಮಥುರೆಯ ಜೈಲಿನಲ್ಲಿ ಜನಿಸುವ ಮುನ್ನವೂ ಮಥುರೆ ನಗರ ಅತ್ಯಂತ ಸುಂದರ ಇತಿಹಾಸವನ್ನು ಹೊಂದಿದೆ. ಕೃಷ್ಣನ ಕುರಿತಾದ ಈ ಲೇಖನ ಸರಣಿಯಲ್ಲಿ ನಾವಿಂದು ಕೃಷ್ಣನ ಐತಿಹಾಸಿಕ ಬದುಕನ್ನು ವಿಶ್ಲೇಷಿಸುವ ಮುನ್ನ ಆ ಕೃಷ್ಣ ಹುಟ್ಟಿದ ಮಥುರೆಯ ಬಗೆಗೆ ವಿವರವಾಗಿ ತಿಳಿಯೋಣ/

Image may contain: outdoor, text that says "Keshavdeva temple (Right) Shahi Eidgah (Left)"

ಮಥುರೆ ಮೂಲ ಹೆಸರು "ಮಧುವನ" (ದಟ್ಟ ಅರಣ್ಯ) ಎಂದಿತ್ತು. ಯಾದವ ರಾಜ ಮಧು ಈ ಅರಣ್ಯವನ್ನು ಬೆಳೆಸಿದ್ದ.  ರಾಮನ ಸಹೋದರ ಶತ್ರುಘ್ನ ಮಧುವುನ ಅವಂಶಜನಾದ ಮಾಧವನನ್ನು ಕೊಂದು ಮಧುವನವನ್ನು ವಶಪಡಿಸಿಕೊಂಡ. ಅಲ್ಲಿನ ಕಾಡನ್ನು ಕಡಿದು ಅಲ್ಲಿ ಮಧುಪುರಿ (ಮಥುರೆ ನಗರ) ನಿರ್ಮಿಸಿದನು. 

ಉತ್ತರ ರಾಮಾಯಣದಲ್ಲಿ ಬರುವ ಶತ್ರುಘ್ನ ಹಾಗೂ ಲವಣಾಸುರನ ಯುದ್ಧ ಸನ್ನಿವೇಶ ಮಧುವನಕ್ಕೆ ಸಂಬಂಧಿಸಿದೆ. ಮಧುವುನ ಪುತ್ರನಾಗಿದ್ದ ಲವಣ ಅಸುರೀ ಗುಣದಿಂದ ಕೂಡಿ ಎಲ್ಲ ಜೀವಿಗಳಿಗೆ ತೊಂದರೆ ಉಂಟು ಮಾಡಿದ್ದ. ಆ ವೇಳೆ ರಾಮನಿಗೆ ಲವಣನ ಉಪಟಳದ ಸುದ್ದಿ ಮುಟ್ಟಿ ಲವಣನನ್ನು ಕೊಲ್ಲಲು ತನ್ನ ಸೋದರ ಶತ್ರುಘ್ನನನ್ನು ಕಳಿಸುತ್ತಾನೆ. ಆ ಲವಣ ಸಂಹಾರಕ್ಕೆ ಹೋಗುವ ದಾರಿಯಲ್ಲೇ ಶತ್ರುಘ್ನ ಸೀತೆ ತಂಗಿದ್ದ ವಾಲ್ಮೀಕಿಯ ಆಶ್ರಮಕ್ಕೆ ಬಂದಿದ್ದ. ಅದೇ ದಿನ ಸೀತೆ ಕುಶ-ಲವರಿಗೆ ಜನ್ಮವಿತ್ತಿದ್ದಳು. ಶತ್ರುಘ್ನ ತನ್ನ ಅತ್ತಿಗೆಯ ಮಕ್ಕಳಿಗೆ ಬೆಲೆಬಾಳುವ ಬಟ್ಟೆಗಳನ್ನು ಉಡುಗೊರೆ ನೀಡಿ ಮುಂದುವರಿದಿದು ಲವಣನನ್ನು ಸಂಹರಿಸಿದ.  ಹಾಗೂ  ಮಧುಪುರವನ್ನು ತನ್ನ ವಶಕ್ಕೆ ಪಡೆದು ಅಣ್ಣ ರಾಮನ ಅಣತಿಯಂತೆ ಆತ  12 ವರ್ಷಗಳ ಕಾಲ ಆಳಿದನು. ಆ ನಂತರ ಅಯೋಧ್ಯೆಗೆ ಹಿಂದಿರುಗುವಾಗ, ವಾಲ್ಮೀಕಿ ಆಶ್ರಮದಲ್ಲಿ ಕುಶ-ಲವರು ರಾಮಾಯಣದ ಕಥೆಯನ್ನು ಹಾಡುತ್ತಿರುವುದು ಕಂಡಿತ್ತು. 

ರಾಮ ಮತ್ತು ಅವನ ಸಹೋದರರ ಮರಣದ ನಂತರ, ಮಧು ವಂಶಸ್ಥರಾದ ಸಾತ್ವತನ ಪುತ್ರ ಭೀಮನು ಮಥುರೆಯನ್ನು ಮತ್ತೆ ತನ್ನದಾಗಿಸಿಕೊಂಡನು.  ಐತರೇಯ ಬ್ರಾಹ್ಮಣಸಾತ್ವತಗಳನ್ನು ಯದು ರಾಜವಂಶದ ಕ್ಷತ್ರಿಯ ಎಂದು ಉಲ್ಲೇಖಿಸಿದೆ.  ಭೀಮ ಸಾತ್ವತನ ಪುತ್ರ. ಅಂಧಕ ರಾಮನ ಪುತ್ರ ಕುಶನ ಸಮಕಾಲೀನನಾಗಿದ್ದ.  ಹಾಗೂ ಆತ ತನ್ನ ತಂದೆಯ ಬಳಿಕ ಮಧುವನದ ಸಿಂಹಾಸನವನ್ನೇರಿದ.

ಆ ನಂತರ ಆತನ ವಂಶರು -ಅಂಧಕರು, ವೃಷ್ಣಿಗಳು(ವೀರ ವಾಸುದೇವನ ಆರಾಧಕರು)ಕುಕುರರು, ಭೋಜರು ಮತ್ತು ಶೈನ್ಯರು ಮಥುರೆ ಅಥವಾ ಮಧುವನ್ನು ಆಳಿದ್ದಾರೆ. 

Prisnigarbha Vishnu Avatar

ಆ ನಂತರ ಬಂದ ಯಾದವ ದೊರೆ ಉಗ್ರಸೇನ ಸಹ  (ಕುಕುರೋದ್ಭವ)  ಈ ಕುಲಕ್ಕೆ ಸೇರಿದವನು. . ಪುರಾಣಗಳ ಪ್ರಕಾರ, ಕುಕುರಾದ ಆಹುಕನಿಗೆ ಕಾಶಿಯ ರಾಜಕುಮಾರಿಯಿಂದ ಉಗ್ರಸೇನ ಮತ್ತು ದೇವಕ ಎಂಬ ಇಬ್ಬರು ಗಂಡು ಮಕ್ಕಳಾಗಿದ್ದರು.  ಉಗ್ರಸೇನನಿಗೆ ಒಂಬತ್ತು ಗಂಡು ಮತ್ತು ಐದು ಹೆಣ್ಣು ಮಕ್ಕಳಿದ್ದರು, ಅದರಲ್ಲಿ ಕಂಸ ಹಿರಿಯವನಾಗಿದ್ದ. ದೇವಕನಿಗೆ ನಾಲ್ಕು ಗಂಡು ಮತ್ತು ಏಳು ಹೆಣ್ಣು ಮಕ್ಕಳಿದ್ದರು, ದೇವಕಿ ಅವರಲ್ಲಿ ಒಬ್ಬಳು. . ಉಗ್ರಸೇನನನ್ನು ಸೆರೆಹಿಡಿದ ನಂತರ ಕಂಸ ಮಥುರೆಯ ಸಿಂಹಾಸನವನ್ನು ವಶಪಡಿಸಿಕೊಂಡ. ಆತ ದುರಾಡಳಿತಕ್ಕೆ ಹೆಸರಾಗಿದ್ದವನು. ಇವನ ಕಾಲದಲ್ಲಿ ಕ್ರೌರ್ಯ ಎಡೆಬಿಡದೆ ಸಾಗಿತ್ತು. ಇವನ ಅಪ್ಪಣೆಗಳನ್ನು ಎದುರಿಸುವವರಿಲ್ಲದೇ, ತಡೆಯುವವರಿಲ್ಲದೇ ಇವನ ಸೆರೆಮನೆ ಶತ್ರುಗಳಿಂದ ತುಂಬಿತ್ತು. ಅಲ್ಲದೇ ಕಂಸ ಸಾಕಷ್ಟು ಯಾದವ ಯುವಕರನ್ನು ಕೊಲ್ಲಿಸಿ, ಅಲ್ಲಿನ ಯುವತಿಯರನ್ನು ವಿಷಕನ್ಯೆರನ್ನಾಗಿ ಮಾರ್ಪಡಿಸಿದ್ದ. ಒಟ್ಟಾರೆ ಮಥುರಾ ನಗರಿ ಇವನ ಆಡಳಿತದಿಂದ ರೋಸಿಹೋಗಿತ್ತು. ಯಾದವರು ಕಂಸನನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಕಾಲ ಅದು.

ವಸುದೇವ : ಈತ ಯಾದವರ ಮುಖಂಡ. ಈತನಿಗೆ ಇಬ್ಬರು ಹೆಂಡತಿಯರು. ಒಬ್ಬಳು ರೋಹಿಣೀದೇವಿ (ಬಲರಾಮನ ತಾಯಿ, ಬಲರಾಮನ ಹೆಂಡತಿಯ ಹೆಸರು ರೇವತಿ ಈಕೆ ರೈವತನ ಮಗಳು) ಹಾಗೂ ಇನ್ನೊಬ್ಬಳು ದೇವಕಿ ದೇವಕಿಯನ್ನು ವಸುದೇವನಿಗೆ ಕೊಟ್ಟು ವಿವಾಹ ಮಾಡುವುದರ ಹಿಂದೆ ಸಹ ಕಂಸನ ಕುತಂತ್ರವಿದೆ. - ಈ ವಿವಾಹದಲ್ಲಿ ಯಾದವರನ್ನೆಲ್ಲಾ ತನ್ನೆಡೆಗೆ ಸೆಳೆಯಬೇಕೆಂಬ ಕಂಸನ ಸ್ವಾರ್ಥವಿತ್ತು.  ಆದರೆ ಈ ವಿವಾಹದ ಸಮಯದಲ್ಲೇ ಕಂಸನನ್ನು ಕುರಿತು ಅಶರೀರ ವಾಣಿಯೊಂದು ಗೋಚರಿಸಿ, " ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶುವಿನಿಂದ ನಿನಗೇ ಮೃತ್ಯು" ಎಂದು ಹೇಳುತ್ತದೆ. ಅಂದಿನಿಂದ ದೇವಕಿ-ವಸುದೇವರಿಗೆ ಕಂಸ ಸೆರೆವಾಸ ವಿಧಿಸುತ್ತಾನೆ. ದೇವಕಿಗೆ ಜನಿಸಿದ ಎಲ್ಲಾ 7 ಶಿಶುಗಳನ್ನು ಹತ್ಯೆ ಮಾಡುತ್ತಾನೆ. ಎಂಟನೇ ಶಿಶುವಾಗಿ ಕೃಷ್ಣ ಜನಿಸಿದ್ದ.ಹಾಗಾದರೆ ಎಲ್ಲರ ಅಚ್ಚುಮೆಚ್ಚಿನ ಶ್ರೀಕೃಷ್ಣನ ಜನ್ಮ , ಐತಿಹಾಸಿಕ ಜೀವನ ಹೇಗಿತ್ತು? ಮುಂದಿನ ಭಾಗದಲ್ಲಿ ನೋಡೋಣ.. ಈಗ ಮಥುರೆಯ ಐತಿಹಾಸಿಕ, ಚಾರಿತ್ರಿಕ ಅಂಶಗಳತ್ತ ಗಮನ ಹರಿಸೋಣ 

ಕೃಷ್ಣನ ಮರಿಮಗನಾಗಿದ್ದ ವಜ್ರನಾಭ (ಬೃಜನಾಭ) ಮಥುರೆಯಲ್ಲಿ ಮೊಟ್ಟ ಮೊದಲಿಗೆ ಕೃಷ್ಣ ದೇವಾಲಯ ನಿರ್ಮಾಣ ಮಾಡಿದ್ದ. 17ನೇ ಶತಮಾನದಲ್ಲಿ ವೀರಸಿಂಹ ಜುದೇವ್ ಬುಂದೇಲಾ ಎಂಬ ರಾಜಪೂತ ರಾಜ ಇದನ್ನು ನವೀಕರಿಸಿದ್ದ 

ವಿವಿಧ ಧರ್ಮದ ಸಾಹಿತ್ಯದಲ್ಲಿ ಮಥುರೆಯ ಉಲ್ಲೇಖ

ಕತ್ರಿ ಕೇಶವದೇವನ ಪುರಾತತ್ತ್ವ ಶಾಸ್ತ್ರದ ಉತ್ಖನನದಿಂದ ಕಂಡುಬರುವ ಮಾನವನ ಆಕೃತಿಗಳು, ಹಿಂಭಾಗದ ನೋಟ, ಕ್ರಿ.ಪೂ 2 ನೇ ಶತಮಾನದ ಸಿರ್ಕಾ, ಓಗೀ ಕಮಾನುಗಳು ಮತ್ತು ಬಾಲ್ಕನಿ ಈಗ  ಮಥುರಾದ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿದೆ.

ಮಥುರಾದ ಮೂಲರೂಪ ಮಥುರೆ. ವೈದಿಕಸಾಹಿತ್ಯದಲ್ಲಿ ಮಥುರೆಯ ಉಲ್ಲೇಖವಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಇದನ್ನು ಮಧುಪುರ ಅಥವಾ ಮಧುದಾನವ ನಗರವೆಂದು ಕರೆದಿದೆ. ಮಹಾಭಾರತದಲ್ಲಿಯ ಉಲ್ಲೇಖದಂತೆ ಇದು ಶೂರಸೇನ ರಾಜಧಾನಿ. ಭಾಗವತದಲ್ಲಿ ಹಲವೆಡೆ ಮಥುರಾ ನಗರದ ವರ್ಣನೆಗಳಿವೆ. ಮೂರು ಕೋಟಿ ಮ್ಲೇಚ್ಛರ ಜೊತೆಗೂಡಿ ಬಂದ ಕಾಲಯವನ ಈ ನಗರವನ್ನು ಮುತ್ತಿದನಂತೆ. ಹರಿವಂಶ ಮತು ವಿಷ್ಣುಪುರಾಣಗಳಲ್ಲಿ ಈ ನಗರವನ್ನು ಮುತ್ತಿದನಂತೆ ಹರಿವಂಶ ಮತ್ತು ವಿಷ್ಣುಪುರಾಣಗಳಲ್ಲಿ ಈ ನಗರದ ವಿಲಾಸವೈಭವಗಳ ಮನೋಹರ ಚಿತ್ರಣ ಕಂಡುಬರುತ್ತದೆ. ಕಾಳಿದಾಸನ ರಘುವಂಶದಲ್ಲಿ ಇಂದುಮತಿಯ ಸ್ವಯಂವರ ವರ್ಣನೆಯ ಸಂದರ್ಭದಲ್ಲಿ ಈ ನಗರ ಶೂರಸೇನಾಧಿಪ ಸುಷೇಣನ ರಾಜಧಾನಿಯಾಗಿತ್ತೆಂದು ಉಲೇಖಿತವಾಗಿದೆ. ಈ ಕಾವ್ಯಕ್ಕೆ ಟೀಕೆ ಬರೆದ ಮಲ್ಲಿನಾಥನು ಮಥುರೆ ಶತ್ರುಘ್ನ ನಿರ್ಮಿತ ನರಗವೆಂದು ಉಲ್ಲೇಖಿಸಿದ್ದಾನೆ.

ಬೌದ್ಧ ಸಾಹಿತ್ಯದಲ್ಲಿ ಈ ನಗರದ ಹಲವು ಉಲ್ಲೇಖಗಳು ಕಂಡುಬರುತ್ತವೆ. ಕ್ರಿ. ಪೂ. ಸು. 600ರ ವೇಳೆಗೆ ಇಲ್ಲಿ ಅವಂತಿಪುತ್ತ (ಅವಂತಿಪುತ್ರ) ಎಂಬ ಅರಸನ ಆಡಳಿತವಿತ್ತೆಂದೂ ಗೌತಮಬುದ್ಧ ಇಲ್ಲಿಗೆ ಭೇಟಿ ನೀಡುತ್ತಿದ್ದನೆಂದೂ `ಅಂಗುತ್ತರ ನಿಕಾಯ ತಿಳಿಸುತ್ತದೆ. ಆ ಕಾಲದಲ್ಲಿಯೂ ಇದೊಂದು ಪ್ರಧಾನ ವೈದಿಕ ಕೇಂದ್ರವಾಗಿತ್ತು. ಚಂದ್ರಗುಪ್ತಮೌರ್ಯನ ಕಾಲದಲ್ಲಿ ಇದು ಮೌರ್ಯ ಸಾಮ್ರಾಜ್ಯದಲ್ಲಿ ಲೀನವಾಯಿತು. ಮೆಗಾಸ್ತನೀಸನು ಈ ಸೂರಸೇನಾ ಮಥೋರಾ ಹಾಗೂ ಕ್ಲೀಸೊಬೋರಾ ಎಂಬ ನಗರಗಳನ್ನು ಉಲ್ಲೇಖಿಸಿ ಅವು ಕೃಷ್ಣೋಪಾಸನೆಯ ಕೇಂದ್ರಗಳಾಗಿದ್ದ ವೆಂದು ತಿಳಿಸಿದ್ದಾನೆ. ಅಶೋಕನ ಕಾಲದ ಹೊತ್ತಿಗೆ ಇಲ್ಲಿ ಬೌದ್ಧಧರ್ಮ ಸಾಕಷ್ಟು ಬೇರೂರಿತ್ತು. ಬೌದ್ಧ ಸಾಹಿತ್ಯ ಮತ್ತು ಹ್ಯೂಯೆನ್‍ತ್ಸಾಂಗ್ ಪ್ರವಾಸಕಥನಗಳಲ್ಲಿ ಅಶೋಕನ ಗುರುವೆಂದು ಉಕ್ತವಾದ ಉಪಗುಪ್ತ ಮಥುರೆಯ ನಿವಾಸಿ. ಟಾಲೆಮಿ, ಫಾಹಿಯಾನ ಕೃತಿಗಳಲ್ಲೂ ಈ ನಗರದ ಉಲ್ಲೇಖವಿದೆ.

ಜೈನಪರಂಪರೆಯ ಪ್ರಕಾರ ಜೈನ ಸಂಘದ ಎರಡನೆಯ ಪರಿಷತ್ತು ಸಮಾವೇಶಗೊಂಡದ್ದು ಮಥುರೆಯಲ್ಲಿ. ಸ್ಕಂದಿಲಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ `ಮಾಥುತವಾಚನ ಎಂಬ ಆಗಮನಗಳನ್ನು ರೂಪಿಸಲಾಯಿತ್ತು. ಆದರೆ ಕ್ರಿ.ಶ. ೫ನೆಯ ಶತಮಾನದ ಹೊತ್ತಿಗೆ ಈ ಜೈನಾಗಮಗಳ ವಾಚನ ನಿಂತು ಹೋಗಿದ್ದಿತೆಂದು ತಿಳಿದುಬರುತ್ತದೆ. ಮಥುರೆಯು ಜೈನಯತಿಗಳಾದ ಧರ್ಮರುಚಿ ಹಾಗೂ ಧರ್ಮಘೋಷರ ವಾಸಸ್ಥಾನವೆಂಬುದಾಗಿ `ವಿವಿಧ ತೀರ್ಥಕಲ್ಪ ಎಂಬ ಕೃತಿ ತಿಳಿಸುತ್ತದೆ. ಆಗ ಈ ನಗರ ಹನ್ನೆರಡು ಯೋಜನ ಉದ್ದ ಮತ್ತು ಒಂಬತ್ತು ಯೋಜನ ಅಗಲವಾಗಿದ್ದು, ದೇವಾಲಯ, ಜಿನಮಂದಿರ ಹಾಗೂ ಸರೋವರಗಳಿಂದ ಕಂಗೊಳಿಸುತ್ತಿತ್ತು; ವೃಕ್ಷಗಳಿಂದ ನಿಬಿಡವಾಗಿದ್ದ ಭೂಘರಮಣಿ ಉದ್ಯಾನದಲ್ಲಿ ಜೈನ ಸಾಧುಸಂತರು ವಾಸಿಸುತ್ತಿದ್ದರು. ಈ ಉದ್ಯಾನದ ಪ್ರಭುವಾದ ಕುವೇರ ಇಲ್ಲಿ ಜೈನಸ್ತೂಪವೊಂದನ್ನು ಕಟ್ಟಿಸಿ ಅದರಲ್ಲಿ ಸುಪಾಶ್ರ್ವ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದ, ನಗರದಲ್ಲಿ ಭಂಡೀರ ಯಕ್ಷನ ಮಂದಿರವಿದ್ದಿತು. ತಾಲ, ಭಂಡೀರ,ಕೌಲ, ಬಹುಲ, ಬಿಲ್ವ ಹಾಗೂ ಲೋಹಜಂಘ ಎಂಬ ಉದ್ಯಾನಗಳಿದ್ದುವು. ಅರ್ಕಸ್ಥಲ, ವೀರಸ್ಥಲ, ಪದ್ಯಸ್ಥಲ, ಕುಶಸ್ಥಲ ಹಾಗೂ ಮಹಾಸ್ಥಲ ಎಂಬ ಹೆಸರಿನ ಪವಿತ್ರ ಜೈನಸ್ಥಳಗಳಿದ್ದುವು. ವಿಶ್ರಾಂತಿಕ ತೀರ್ಥ, ಅಸಿಕುಂಡಾತೀರ್ಥ, ವೈಕುಂಠತೀರ್ಥ, ಕಾಲಿಂಜರತೀರ್ಥ, ಚಕ್ರತೀರ್ಥ-ಎಂಬ ಪಂಚತೀರ್ಥಗಳಿದ್ದುವು. ಲೋಹಜಂಘವನ, ಮಧುವನ, ಬಿಲ್ವವನ, ತಾಲವನ, ಕುಮುದನ, ವೃಂದಾವನ, ಭಾಂಡೀರವನ, ಖದಿರವನ, ಕಾರ್ಮಿಕವನ, ಕೋಲವನ, ಬಹೂಲಾವನ, ಮಹಾವನಗಳೆಂಬ ಹನ್ನೆರಡುವನಗಳನ್ನು ಜೈನಸಾಹಿತ್ಯದಲ್ಲಿ ಉಲ್ಲೇಖಿಸಿದೆ. ಕಾವೇಶಿಕ, ಸೋಮದೇವ, ಕಂಬಲ ಮತ್ತು ಸಂಬಲ ಮುಂತಾದ ಜೈನಯುತಿಗಳಿಗೆ ಮಥುರೆಯೊಡನೆ ಸಂಬಂಧ ವಿದ್ದಿತೆಂದು ಭಾವಿಸಲಾಗಿದೆ.

ಮಥುರೆಯ ಇತಿಹಾಸ

ಕ್ರಿ . ಪೂ. 2-1ನೆಯ ಶತಮಾನದಲ್ಲಿ ಶುಂಗವಂಶದ ಅರಸರು ಅಳುತ್ತಿದ್ದಾಗ ಮಥುರೆಗೆ ಹೆಚ್ಚಿನ ಮಹತ್ತ್ವ ಬಂತು; ಇದು ಪಶ್ಚಿಮ ಭಾಗದ ರಾಜಧಾನಿಯಾಗಿತ್ತು. ಇದೇ ಅವಧಿಯಲ್ಲಿ ಯವನರಾಜ ಡೆಮಿಟ್ಟ್ರಿಯಸ್ ಮಥುರೆಯನ್ನು ಕೆಲಕಾಲ ರಾಜಧಾನಿಯನ್ನಾಗಿ ಮಾಡಿಕೊಡಿದ್ದ. ಕ್ರಿ. ಪೂ. 1ನೆಯ ಶತಮಾನದ ಹೊತ್ತಿಗೆಶುಂಗ ಪ್ರಭುತ್ವದ ಪ್ರಭಾವ ಕ್ಷೀಣಿಸಿ ಶಕಕ್ಷತ್ರಪರು ಪ್ರಬಲರಾದರು. ರಾಜುಲ ಮತ್ತು ಆತನ ಮಗ ಶೋಡಾಸ ಈ ವಂಶದ ಪರಾಕ್ರಮಿ ಅರಸರುಗಳಾಗಿದ್ದು ಇವರು ಯಮುನಾತೀರದಲ್ಲಿ ಸಿಂಹಸ್ತಂಭವೊಂದನ್ನು ಸ್ಥಾಪಿಸಿದರು. ಇವರು ಕಾಲದಲ್ಲಿ ಮಥುರೆ ವಾಸುದೇವ ಕೃಷ್ಣರ ಆರಾಧನಾ ಕೇಂದ್ರವಾಗಿತ್ತೆಂಬ ಸಂಗತಿ ಶೋಡಾಸನ ಶಾಸನವೊಂದರಿಂದ ಸ್ಪಷ್ಟಪಡುತ್ತದೆ. ಕ್ರಿಸ್ತಶಕೆಯ ಆರಂಭದಿಂದ ಸುಮಾರು 3ನೆಯ ಶತಮಾನದ ತನಕ ಆಳಿದ ಕುಷಾಣರ ಕಾಲದಲ್ಲಿ ಮಥುರೆ ಪ್ರಧಾನ ಕಲಾಕೇಂದ್ರವಾಯಿತು. ಸ್ವಲ್ಪಮಟ್ಟಿಗೆ ಗಾಂಧಾರ ಶಿಲ್ಪದ ಪ್ರಭಾವಕ್ಕೆ ಒಳಗಾದಂತೆ ಕಂಡರೂ ಮಥುರಾಶಿಲ್ಪ ಉನ್ನತ ಮಟ್ಟಕ್ಕೇರಿತು. ಸಹಸ್ರಾರು ಪ್ರಾಚೀನ ಶಿಲ್ಪಾವಶೇಷಗಳು ಮಥುರೆಯಲ್ಲಿ ಲಭ್ಯವಾಗಿವೆ. ಬುದ್ಧನ ಮಾನವರೂಪದ ಮೂರ್ತಿ ನಿರ್ಮಾಣ ಆರಂಭವಾದದು ಈ ಕಾಲದಲ್ಲೇ. ಕೆಂಪು ಕಣಶಿಲೆಯಲ್ಲಿ ಕಡೆದ ವಿವಿಧ ಭಂಗಿಯ ಯಕ್ಷಯಕ್ಷಿ ಶಿಲ್ಪಗಳು ಕಣ್ಸೆಳೆಯುತ್ತವೆ. ಕುಷಾಣ ಅರಸರ ಶರೀರ ಪ್ರಮಾಣದ ಮೂರ್ತಿಗಳು ಮಥುರಾ ಬಳಿಯ ಮಾತ್ ಎಂಬಲ್ಲಿ ಸಿಕ್ಕಿವೆ. ಕನಿಷ್ಕನ ಶಿರರಹಿತಶಿಲ್ಪ ಗಮನಾರ್ಹ. ಶಿವ, ಸೂರ್ಯ, ವಿಷ್ಣು, ಮಹಿಷಮರ್ದಿನಿ ಮುಂತಾದ ಮೂರ್ತಿಗಳೂ ಈ ಕಾಲದಲ್ಲಿ ನಿರ್ಮಿತವಾದವು. ಮಥುರಾಶಿಲ್ಪ ಶೈಲಿಯ ಅತಿದೊಡ್ಡಸಾಧನೆ ಎಂದರೆ ಅಪ್ಪಟ ಭಾರತೀಯವೆನ್ನಿಸುವ ಬುದ್ಧಮೂರ್ತಿಗಳು. (ನೋಡಿ-ಕುಷಾಣರು-ವಾಸ್ತುಶಿಲ್ಪ) ವಿನ್ಯಾಸ ಹಾಗೂ ಕಂಡರಣೆ, ಸೌಂದರ್ಯದ ಪರಿಕಲ್ಪನೆ ಹಾಗೂ ಅಭಿವ್ಯಕ್ತಿಗಳಲ್ಲಿ ಶಿಲ್ಪಿಯ ಪ್ರತಿಭೆ ಹಾಗೂ ಸ್ವೋಪಜ್ಞತೆಗಳನ್ನು ಈ ಕಾಲದ ಶಿಲ್ಪಗಳಲ್ಲಿ ಕಾಣಬಹುದುದಾಗಿದೆ. ಈ ಕಾಲದ ಶಿಲ್ಪಗಳು ಈಗ ದೆಹಲಿ, ಮಥುರಾ, ಲಕ್ನೋ, ಕಲ್ಕತ್ತ ವಸ್ತುಸಂಗ್ರಹಾಲಯಗಳಲ್ಲಿವೆ.

Image may contain: outdoor, text that says "Krishna Janmasthan, Mathura, UP. Image taken in 1949"

ಕುಷಾಣರ ತರುವಾಯ ಅಧಿಕಾರಕ್ಕೆ ಬಂದು ಆಳಿದ ಗುಪ್ತರ ಕಾಲದಲ್ಲಿ ಮಥುರಾ ಶಿಲ್ಪಶೈಲಿ ಪರಮೋನ್ನತಿಯನ್ನು ಸಾಧಿಸಿತು. ಇಲ್ಲಿ ನಿರ್ಮಿತವಾದ ಮೂರ್ತಿಗಳು ದೇಶದ ಇತರಡೆಗಳಲ್ಲಿಯ ಶಿಲ್ಪಗಳಿಗೆ ಮಾದರಿಗಳಾದುವು. ದಿವ್ಯಾದರ್ಶಗಳಿಂದ ಮಾರ್ಗದರ್ಶಿತನಾದ ಈ ಕಾಲದ ಕಲಾಕಾರನ ಶಿಲ್ಪದಲ್ಲಿ ಗಾಂಭೀರ್ಯ ಮಿಶ್ರಿತ ಸೌಂದರ್ಯ ಮೈದಳೆಯಿತು. ಸದಭಿರುಚಿ, ಅಲಂಕರಣದಲ್ಲಿ ಸಮತೋಲನೆ, ಲಾಲಿತ್ಯ ಈ ಕಾಲದ ಮಥುರಾ ಶೈಲಿಯ ಶಿಲ್ಪಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತವೆ. ಇದಕ್ಕೆ ಈ ಕಾಲದ ಬುದ್ಧಮೂರ್ತಿ ಹಾಗೂ ವಿಷ್ಣುಮೂರ್ತಿಗಳನ್ನು ಉದಾಹರಿಸಬಹುದು. ಗುಪ್ತರ ಕಾಲದಲ್ಲಿ ಮಥುರಯ ಇಪ್ಪತ್ತು ಬೌದ್ಧ ವಿಹಾರಗಳಲ್ಲಿ ಮೂರು ಸಾವಿರ ಭಿಕ್ಷುಗಳು ವಾಸಿಸುತ್ತಿದ್ದರೆಂದು ಫಾಹಿಯಾನ್ ತಿಳಿಸಿದ್ದಾನೆ.

ಮುಂದೆ ಹೂಣರು ಮಥುರಾ ಪ್ರದೇಶವನ್ನಾಕ್ರಮಿಸಿ ಲೂಟಿ ಹೊಡೆದರು. ಕ್ರಿ. ಶ. 7ನೆಯ ಶತಮಾನ ಹೊತ್ತಿಗೆ ಈ ಭಾಗದಲ್ಲಿ ಬೌದ್ಧಧರ್ಮ ಅವನತಿ ಹೊಂದುತ್ತಿದ್ದುದರ ಬಗ್ಗೆ ಹ್ಯೂಯೆನ್ ತ್ಸಾಂಗನ ಪ್ರವಾಸ ಕಥನದಲ್ಲಿ ಸ್ಪಷ್ಟ ಸುಳಿವುಗಳು ದೊರಕುತ್ತವೆ. ಉಪಗುಪ್ತ ಕಟ್ಟಿಸಿದ್ದ ಕಂಕಾಲತೀಲಾದ ಬೌದ್ಧ ವಿಹಾರವನ್ನು ಆತ ಕಂಡಿದ್ದ. ಆದರೆ ಮುಂದೆ ಹಲವು ಕಟ್ಟಡಗಳು ನಾಶವಾದುವು; ಅಳಿದುಳಿದ ಕಟ್ಟಡಗಳೂ ಘಜ್ನಿಮಹಮೂದನ ದಾಳಿಕಾಲದಲ್ಲಿ ನಿರ್ನಾಮವಾದುವು. ಇಲ್ಲಿಂದ ಆತ ಐದು ಚಿನ್ನದ ಮೂರ್ತಿಗಳನ್ನು ಅಪಹರಿಸಿಕೊಂಡು ಹೋದನೆಂದೂ ಮಥುರೆಯಲ್ಲಿಯ ಶ್ರೀಕೃಷ್ಣದೇವಾಲಯವನ್ನು ನಾಶಮಾಡಿದನೆಂದೂ ಪ್ರತೀತಿ.

Image may contain: outdoor, text that says "The site celebrated as the birthplace of Krishna who, as tradition goes, was born in a prison and the prison is said to have existed on the plot marked by a stone plate. कृणसन्मर्भाम"


Image may contain: cloud, sky and outdoor, text that says "The Shahi Eidgah in 1949 which was constructed on the raised plinth of the original temple destroyed by Aurangzeb"

ಮುಸಲ್ಮಾನ ಸುಲ್ತಾನರ ಕಾಲದಲ್ಲಿ ಈ ನಗರಕ್ಕೆ ಮೊದಲಿನ ಪ್ರಾಶಸ್ತ್ಯ ವಿರಲಿಲ್ಲ. ಅಕ್ಬರ್ ಹಾಗೂ ಜಹಾಂಗೀರರ ಕಾಲದಲ್ಲಿ ಕೆಲವಾರು ಕಟ್ಟಡಗಳು ನಿರ್ಮಿತವಾದುವು.17ನೆಯ ಶತಮಾನದ ಉತ್ತರಾರ್ಧದಲ್ಲಿ ಔರಂಗಜೇಬನ ಅಧಿಕಾರಿಗಳಲ್ಲೊಬ್ಬನಾದ ಅಬ್ದುಲ್‍ನಬಿ ಸ್ಥಳೀಯ ದಂಗೆಯಲ್ಲಿ ಮೃತನಾದಾಗ ಅದನ್ನೇ ನೆಪಮಾಡಿಕೊಂಡ ಸುಲ್ತಾನ ಮಥುರೆಯ ಎಲ್ಲ ಪ್ರಮುಖ ದೇವಾಲಯಗಳನ್ನೂ ಹಾಳುಮಾಡಿದ. ಪ್ರಸಿದ್ಧ ಕೃಷ್ಣದೇಗುಲವನ್ನು ಕೆಡವಿ ಈಗಿನ ಮಸೀದಿಯನ್ನು ನಿರ್ಮಿಸಿದ. ಮಥುರೆಗೆ ಇಸ್ಲಾಮಾಬಾದ್ ಎಂದು ಹೊಸ ಹೆಸರನ್ನಿಟ್ಟ. ಆದರೆ ಅದು ಹೆಚ್ಚುಕಾಲ ಚಲಾವಣೆಯಲ್ಲಿ ಉಳಿಯಲಿಲ್ಲ. ಅಹಮದ್ ಅಬ್ಬಾಲಿಯ ಕಾಲದಲ್ಲಿ ಮಥುರೆ ಮತ್ತೊಮ್ಮೆ ದುರ್ದಿನಗಳನ್ನು ಕಂಡಿತು. ಮೊಗಲರು, ಜಾಟರು ಹಾಗೂ ಮರಾಠರ ನಡುವಣ ಹೋರಾಟಗಳಿಗೆ ಮಥುರೆ ಕಣವಾಯಿತು. ಮಾಧವರಾವ್ ಸಿಂಧಿಯಾಗೆ ನೆಚ್ಚಿನ ಬೀಡಾಗಿದ್ದ ಹಾಗೂ ಜಾಟ ಪ್ರಭು ಸೂರಜಮಲ್ಲನ ಕೇಂದ್ರಸ್ಥಳವಾಗಿದ್ದ ಮಥುರೆಯನ್ನು 1804 ರಲ್ಲಿ  ಬ್ರಿಟಿಷರು ವಶಪಡಿಸಿಕೊಂಡರು.

ಬ್ರಿಟೀಷರ ಹಾಗೂ ಸ್ವಾತಂತ್ರ್ಯಾನಂತರ ಕೃಷ್ಣ ಜನ್ಮಭೂಮಿ

ಈಸ್ಟ್ ಇಂಡಿಯಾ ಕಂಪನಿ ಕತ್ರಾ (ಮಸೀದಿಯ ಸುತ್ತಲಿನ ಮಾರುಕಟ್ಟೆ) ಭೂಮಿಯನ್ನು ಹರಾಜು ಮಾಡಿತು ಮತ್ತು ಅದನ್ನು ಬನಾರಸ್‌ನ ಶ್ರೀಮಂತ ಬ್ಯಾಂಕರ್ ರಾಜಾ ಪಟ್ನಿಮಲ್ ಖರೀದಿಸಿದರು.

ರಾಜ ಪಟ್ನಿಮಲ್ ಕೃಷ್ಣ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಆತನ ವಂಶಜರು ಭೂಮಿಯನ್ನು ಆನುವಂಶಿಕವಾಗಿ ಪಡೆದರು. ಮಥುರಾದ ಮುಸ್ಲಿಮರು ಎರಡು ಸಿವಿಲ್ ದಾವೆಗಳಲ್ಲಿ  ದೇಗುಲ ಮತ್ತು ಈದ್ಗಾ ಮೈದಾನವಿರುವ  13.37 ಎಕರೆ ಜಮೀನಿನ ಮಾಲೀಕತ್ವಕ್ಕಾಗಿ  ಮಾಲೀಕರಾಗಿದ್ದ ರಾಜ ಪಟ್ನಿಮಲ್ ವಂಶಜ ರಾಜ ಕೃಷ್ಣ ದಾಸ್ ವಿರುದ್ಧ ಕೋರ್ಟ್ ಕಟಕಟೆ ಏರಿದರು.  ಆದರೆ ಅಲಹಾಬಾದ್ ಹೈಕೋರ್ಟ್ ಎರಡೂ ದಾವೆಗಳಲ್ಲಿ ರಾಜ ಕೃಷ್ಣ ದಾಸ್ ಪರವಾಗಿ ತೀರ್ಪು ನೀಡಿತು 1935 ರಲ್ಲಿ. ಕೈಲಾಶ್ ನಾಥ್ ಕಟ್ಜು ಮತ್ತು ಮದನಮೋಹನ  ಚತುರ್ವೇದಿ ಅವರು ಈ ಮೊಕದ್ದಮೆಯಲ್ಲಿ ಸಹಾಯಕ್ಕೆ ಬಂದರು.

 ಮದನ್ ಮೋಹನ ಮಾಳವೀಯ ಹಾಗೂ ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ

ಮದನ್ ಮೋಹನ್ ಮಾಳವಿಯಾ ಅವರು ಫೆಬ್ರವರಿ 7, 1944 ರಂದು ರಾಜ ಕೃಷ್ಣ ದಾಸ್ ಅವರಿಂದ  ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರ ಆರ್ಥಿಕ ಸಹಾಯದಿಂದ 13000 ರೂ. ಗೆ ಆ ವಿವಾದಿತ ಜಾಗವನ್ನು ಖರೀದಿಸಿದ್ದರು. ಮಾಳವಿಯ ಮರಣದ ನಂತರ, ಜುಗಲ್ ಕಿಶೋರ್ ಬಿರ್ಲಾ ಅವರು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಅನ್ನು ರಚಿಸಿದರು, ನಂತರ ಇದನ್ನು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥೆಯಾಗಿ ನೋಂದಾಯಿಸಲಾಯಿತು, ಫೆಬ್ರವರಿ 21, 1951 ರಂದು ಆ ಜಾಗ ಸಂಸ್ಥೆಯ  ವಶಕ್ಕೆ ಬಂದಿತು. 

ಜುಗಲ್ ಕಿಶೋರ್ ಬಿರ್ಲಾ ಅವರು ಹೊಸ ದೇವಾಲಯದ ನಿರ್ಮಾಣವನ್ನು ಮತ್ತೊಬ್ಬ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಜೈ ದಯಾಳ್ ದಾಲ್ಮಿಯಾ ಅವರಿಗೆ ವಹಿಸಿಕೊಟ್ಟರು. ದೇವಾಲಯ ಸಂಕೀರ್ಣದ ನಿರ್ಮಾಣವನ್ನು ಅಕ್ಟೋಬರ್ 1953 ರಲ್ಲಿ ಭೂಮಿಯನ್ನು ಹಸನುಗೊಳಿಸುವ  ಮೂಲಕ ಪ್ರಾರಂಭಿಸಲಾಯಿತು ಮತ್ತು ಫೆಬ್ರವರಿ 1982 ರಲ್ಲಿ ಪೂರ್ಣಗೊಳಿಸಲಾಯಿತು.

ಲೋಕೋಪಕಾರಿ ಜೈ ದಯಾಳ್ ದಾಲ್ಮಿಯಾ

1968 ರಲ್ಲಿ, ಟ್ರಸ್ಟ್ ಮತ್ತು ಶಾಹಿ ಈದ್ಗಾ ಸಮಿತಿಯು ಒಪ್ಪಂದಕ್ಕೆ ಬಂದಿದ್ದು, ಇದು ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ನೀಡಿತು ಮತ್ತು ಈದ್ಗಾ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ನೀಡಿತು ಮತ್ತು ಈದ್ಗಾದಲ್ಲಿ ಟ್ರಸ್ಟ್‌ನ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು. 

1992 ರಲ್ಲಿ ಬಾಬರಿ ಮಸೀದಿ ನೆಲಸಮವಾದ ನಂತರ, ವೃಂದಾವನದ ನಿವಾಸಿ ಮನೋಹರ್ ಲಾಲ್ ಶರ್ಮಾ ಅವರು 1968 ರ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಅಲ್ಲದೆ 1991 ರ ಧಾರ್ಮಿಕ ಪೂಜಾ ರದ್ದತ್ ಕಾನೂನನ್ನು ಸಹ ಪ್ರಶ್ನಿಸಿದ್ದಾರೆ. ಈ ಕಾನೂನು ಆಗಸ್ಟ್ 15, 1947 ರಲ್ಲಿರುವಂತೆ ಎಲ್ಲಾ ಪೂಜಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡುತ್ತದೆ.

...ಮುಂದುವರಿಯುವುದು