Sunday, August 20, 2023

ಕಸದ ರಾಶಿಯ ನಡುವೆ ಚಾಣಕ್ಯನ ಅಂತ್ಯ! ಚಾಣಕ್ಯ - ಭಾಗ 1

ಚಾಣಕ್ಯನು ಕ್ರಿ.ಪೂ. 15 ನೇ ಶತಮಾನದ ಕೊನೆಯಲ್ಲಿ ಚಣಕ ಎಂಬ ಹಳ್ಳಿಯಲ್ಲಿ ಚನಿ ಮತ್ತು ಚನೇಶ್ವರಿ ಎನ್ನುವ ದಂಪತಿಗಳಿಗೆ ಜನಿಸಿದನು.  ಈ ಚಣಕ ಎನ್ನುವ ಗ್ರಾಮವು ದಕ್ಷಿಣ ಭಾರತದ ಗೊಲ್ಲ ವಿಷಯ (ಗೊಲ್ಲ ಪ್ರದೇಶ)ದಲ್ಲಿದೆ. ಪರಿಶಿಷ್ಟ-ಪರ್ವರಚನೆಗಾರನಾದ ಹೇಮಚಂದ್ರ ಸೇರಿದಂತೆ ಅನೇಕ ಮೂಲಗಳು ಚಾಣಕ್ಯನನ್ನು ಡ್ರಾಮಿಳ ಎಂದು ಉಲ್ಲೇಖಿಸುತ್ತವೆ, ಈ ಪದವನ್ನು ಆ ದಿನಗಳಲ್ಲಿ ದ್ರಾವಿಡ ಸ್ಥಳೀಯರಿಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು. ವಾತ್ಸಾಯನನನ್ನು ಸಹ ದ್ರಮಿಳ ಎಂದು ಕರೆಯಲಾಗುತ್ತದೆ. ಇದರರ್ಥ ಪೂರ್ವಜರು ಪ್ರಾಚೀನ ತಮಿಳನ್ನು ಮಾತನಾಡುವ ದ್ರಾವಿಡರು ಎಂದಾಗಿದೆ. 


ಚಾಣಕ್ಯನುಜನಿಸುವಾಗಲೇ ಅವನಿಗೆ ಬಾಯಲ್ಲಿ ಹಲ್ಲುಗಳಿದ್ದವು. ಇಂತಹಾಮಗು ರಾಜ್ಯವನ್ನು ಆಳುತ್ತದೆ ಎಂದು ಋಷಿಗಳು ಭವಿಷ್ಯ ನುಡಿದರು. ಆದರೆ ಚಾಣಕ್ಯನ ತಂದೆ ಸರಳ ಜೀವನವನ್ನು ನಡೆಸಲು ಬಯಸಿದ್ದ. ಆ ಕಾರಣದಿಂದ ಚಾಣಕ್ಯನಿಗಿದ್ದ ಹಲ್ಲುಗಳನ್ನು ಕಿತ್ತು ಹಾಕಾಲಾಯಿತು. ಆಗ ಋಷಿಗಳು ಈ ಮಗು ರಾಜನನ್ನು ನಿಯಂತ್ರಿಸಬಲ್ಲ ಮಹಾನ್ ಗುರುವಾಗಿತ್ತಾನೆ. ಇವನ ಕೆಳಗೆ ರಾಜನು ಆಳುತ್ತಾನೆ ಎಂದು ಭವಿಷ್ಯ ನುಡಿದರು. ಚಾಣಕ್ಯನು ಉನ್ನತ ವ್ಯಾಸಂಗಕ್ಕಾಗಿ ತಕ್ಷಶಿಲೆಗೆ ಹೋದನು ಮತ್ತು ಮದುವೆಯಾಗುವುದಕ್ಕಾಗಿ ಮತ್ತೆ ತನ್ನ ಹಳ್ಳಿಗೆ ಹಿಂತಿರುಗಿದನು. 

ತಕ್ಷಶಿಲಾ ವಿಶ್ವವಿದ್ಯಾನಿಲಯ"

ಇಂದು ಪಾಕಿಸ್ತಾನದಲ್ಲಿ ತಕ್ಷಶಿಲಾ ಎಂದು ಕರೆಯಲ್ಪಡುವ ತಕ್ಷಶಿಲಾ ವಿಶ್ವವಿದ್ಯಾನಿಲಯವು ಸುಮಾರು 3700 ವರ್ಷಗಳ ಹಿಂದೆ (ಸುಮಾರು ಕ್ರಿ.ಪೂ. 1700) ಸ್ಥಾಪಿತವಾಗಿದೆ 10500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆಲೆಯಾಗಿತ್ತು.  ಅಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ವೇದಗಳಂತಹ 64 ವಿಭಿನ್ನ ವಿದ್ಯೆಗಳಲ್ಲಿ ಪರಿಣತಿಯನ್ನು ಪಡೆಯಲು ಬರುತ್ತಿದ್ದರು. , ವ್ಯಾಕರಣ, ತತ್ವಶಾಸ್ತ್ರ, ಆಯುರ್ವೇದ, ಕೃಷಿ, ಶಸ್ತ್ರಚಿಕಿತ್ಸೆ, ರಾಜಕೀಯ, ಬಿಲ್ಲುಗಾರಿಕೆ, ಯುದ್ಧ, ಖಗೋಳಶಾಸ್ತ್ರ, ವಾಣಿಜ್ಯ, ಭವಿಷ್ಯಶಾಸ್ತ್ರ, ಸಂಗೀತ, ನೃತ್ಯ, ಇತ್ಯಾದಿ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು. ಈ ವಿಶ್ವವಿದ್ಯಾಲಯದ ಪ್ರಸಿದ್ಧ ಪದವೀಧರರಲ್ಲಿ ಪಾಣಿನಿ, ಚಾಣಕ್ಯ, ಚರಕ, ವಿಷ್ಣು ಶರ್ಮ, ಜೀವಕ ಮುಂತಾದವರು ಸೇರಿದ್ದಾರೆ.ಇದು ಇಲ್ಲಿಯವರೆಗೆ ಕಂಡುಬರುವ ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. 

ಚಾಣಕ್ಯನ ಪತ್ನಿ ಯಶೋಮತಿ. ಯಶೋಮತಿಯು ಅವಳ ಸಹೋದರಿಯರಿಂದ ಬಡತನದ ಕಾರಣಕ್ಕೆ ಅವಮಾನಿತಳಾದ ನಂತರ ಚಾಣಕ್ಯನು ಮಗಧದ ದೊರೆ ಮಹಾಪದ್ಮ ನಂದನನ್ನು ಭೇಟಿ ಮಾಡಲು ಮತ್ತು ಹಣವನ್ನು ಸಂಪಾದಿಸುವ ಮಾರ್ಗ ಹುಡುಕಲು ಮುಂದಾದನು.  ಚಾಣಕ್ಯನು ಅಲ್ಲಿಯೂ ಅವಮಾನಿಸಲ್ಪಟ್ಟನು ಹಾಗಾಗಿ ಅವನು ನಂದ ಮತ್ತು ಅವನ ಮಕ್ಕಳನ್ನು ರಾಜ  ಸಿಂಹಾಸನದಿಂದ ತೊಡೆದುಹಾಕಲು ಪ್ರತಿಜ್ಞೆ ಮಾಡಿದನು. ವಾಸ್ತವವಾಗಿ, ಚಾಣಕ್ಯ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಾನೆ ಏಕೆಂದರೆ ಕ್ಷೌರಿಕನ ಮಗ ನಂದ ಮತ್ತು ಅವನ ರಾಜವಂಶವನ್ನು ಪದಚ್ಯುತಗೊಳಿಸಲು ಅವನಿಗೆ ಒಂದು ಕಾರಣ ಬೇಕಾಗಿತ್ತು. ಅದೇ ಕಾರಣವೆಂದರೆ ಅವರು (ನಂದರು)ಈಗಾಗಲೇ ನೆರೆಯ ರಾಜ್ಯಗಳಲ್ಲಿ ಹೆಚ್ಚಿನ ಕ್ಷತ್ರಿಯ ಮೂಲದವರನ್ನು ನಿರ್ಮೂಲನೆ ಮಾಡಿದ್ದಾರೆ. ಅಲ್ಲದೆ ಅವರ ಆಳ್ವಿಕೆ ಧರ್ಮದ ಪರವಿದ್ದಿರಲಿಲ್ಲ. ಪ್ರಜೆಗಳಿಗೆ ಅಸಹನೀಯವಾಗಿತ್ತು.  ಪ್ರಾಣಿಗಳ ಚರ್ಮ, ಒಸಡುಗಳು, ಮರಗಳು, ಕಲ್ಲುಗಳು ಇತ್ಯಾದಿಗಳ ಮೇಲೆ ತೆರಿಗೆಯನ್ನು ವಿಧಿಸಿ, ಅವರು ಹಣವನ್ನು ಸಂಗ್ರಹಿಸಿದರು. ಅವರು ಒಟ್ಟೂ ಎಂಬತ್ತು ಮಹಾಪದ್ಮದಷ್ಟು ಹಣ ಸಂಗ್ರಹ ಮಾಡಿ ಗಂಗಾ ತಟದಲ್ಲಿ ಹೂತಿಟ್ಟರು.  ಗಂಗೆಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟಿನ ಮೂಲಕ ಮುಖ್ಯ ಪ್ರವಾಹವನ್ನು ಬೇರೆಡೆ ತಿರುಗಿಸಿ ನದಿ ದಂಡೆಯಲ್ಲಿ ಹಣ ಇಡಲು ಸಾಕಾಗುವಷ್ಟು ದೊಡ್ಡ ಬಂಡೆಯೊಂದರಲ್ಲಿ ರಂದ್ರ ಕೊರೆದು ತಮ್ಮ ಧನದ ಸಂಗ್ರಹವನ್ನು ಅಲ್ಲಿಟು ಮುಚ್ಚಿದರು.  ಬಳಿಕ ಅದರ ಮೇಲೆ ಕರಗಿದ ಸೀಸವನ್ನು ಬೆರೆಸಿ ನದಿಯನ್ನು ಪುನ್ಃಅ ಮತ್ತೆ ಮೊದಲಿನ ಮಾರ್ಗಕ್ಕೆ ತಿರುಗಿಸಲಾಗಿತ್ತು. ಹೀಗೆ ನಿಧಿಯನ್ನು ಬಹಳ ಬಲವಾದ ಸ್ಥಳದಲ್ಲಿ ಭದ್ರಪಡಿಸಲಾಯಿತು. ಅವರ ಜೀವಿತಾವಧಿಯಲ್ಲಿ, ಅವರು ಸಂಗ್ರಹಣೆಯನ್ನು ಮುಂದುವರೆಸಿದರು ಮತ್ತು ಕಾಲಕಾಲಕ್ಕೆ ನದಿಯ ತಳದಲ್ಲಿ ನಿಧಿಯನ್ನು ಸಂಗ್ರಹಿಸುತ್ತಾ ಸಾಗಿದರು. 

ಮಹಾಪದ್ಮನಂದ"

ಮಹಾಪದ್ಮನಂದ ನಂದ ರಾಜವಂಶದ ದೊರೆ. ಸಾಯಿಸುನಾಗ ರಾಜವಂಶದ 11 ನೇ ರಾಜನಾಗಿ ಮಹಾಪದ್ಮ ನಂದ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಸಾಯಿಸುನಾಗ ರಾಜವಂಶವು ಕೊನೆಗೊಂಡಿತು, ಎಂದರೆ ವನು ಕ್ಷೌರಿಕ ಮತ್ತು ಮಹಾನಂದಿಯ ರಾಣಿಯ ಮಗನಾಗಿದ್ದರಿಂದ, ಅವನ ರಾಜವಂಶವನ್ನು ಪ್ರತ್ಯೇಕವಾಗಿ ನಂದ ರಾಜವಂಶವೆಂದು ಗುರುತಿಸಲಾಯಿತು.ಅವನು ಮತ್ತು ಅವನ ಮಕ್ಕಳು ಕ್ರಿ.ಪೂ. 1634 - 1534ರವರೆಗೆ  100 ವರ್ಷಗಳ ಕಾಲ ಆಳಿದರು.

ಕ್ರಿ.ಪೂ. 1546 ಯಲ್ಲಿ ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯ ಅವರನ್ನು ತೊಡೆದು ಹಾಕಿದನು.  (ಮಹಾಪದ್ಮ ಎಂಬುದು ಒಂದು ಸಂಖ್ಯೆ = ಪದ್ಮ x 1000 x 100 = 1037.) ಮಹಾಪದ್ಮ ನಂದನು ಆ ಅನೇಕ ಚಿನ್ನದ ನಾಣ್ಯಗಳನ್ನು ಗಂಗಾ ನದಿಯ ದಡದಲ್ಲಿ ಮಡಕೆಗಳಲ್ಲಿ ಹೂತಿಟ್ಟಿದ್ದನು.

ಚಾಣಕ್ಯನು ತಾನು ರಾಜ್ಯವನ್ನು ರಾಜಗುರುವಾಗಿ ಆಳಬಹುದೆನ್ನುವ ಬ ಋಷಿಗಳ ಭವಿಷ್ಯವನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಭವಿಷ್ಯದ ರಾಜನಿಗಾಗಿ ಸೂಕ್ತ ವ್ಯಕ್ತಿಯನ್ನು ಹುಡುಕುತ್ತಾನೆ.

 ಅವನುಉ ಪಿಫಲಿವನ(ನೇಪಾಳದ ತೆರಾಯ್ ಪ್ರದೇಶದ ರುಮ್ಮಿಂದೆ ಅಥವಾ ಲುಂಬಿನಿಯ ನಡುವಿನ ಪ್ರದೇಶ ಮತ್ತು ಆಧುನಿಕ ಗೋರಖ್‌ಪುರ ಜಿಲ್ಲೆಯ ಕಾಸಿಯಾ) ಗ್ರಾಮವನ್ನು ತಲುಪುತ್ತಾರೆ, ಅಲ್ಲಿ ಹೆಚ್ಚಿನ ಕ್ಷತ್ರಿಯ ಕುಟುಂಬಗಳು ರಾಜ ನವಿಲುಗಳನ್ನು ಸಾಕಿ ಬೆಳೆಸಿ ಅವುಗಳನ್ನು ತಿನ್ನುವವರಿರುತ್ತಾರೆ. ಅವರನ್ನು ಮೌರ್ಯ ಎಂದು ಕರೆಯಲಾಗುತ್ತಿತ್ತು (ಮಯೂರ - ನವಿಲು ತಿನ್ನುವವನು). ಮಹಾಪರಿನಿಬ್ಬನ ಸುತ್ತದಲ್ಲಿ (ಸೂತ್ರದಲ್ಲಿ)ಬೌದ್ಧ ಗ್ರಂಥದಲ್ಲಿ, ಮೋರಿಯರು ಅಥವಾ ಮೌರ್ಯರು ಕ್ಷತ್ರಿಯ ಕುಲವಾಗಿ ಪಿಪ್ಪಲಿವನವನ್ನು ಆಳುತ್ತಿದ್ದರೆನ್ನುವ ಉಲ್ಲೇಖವಿದೆ. ಆರಂಭದಲ್ಲಿ,ಮೌರ್ಯರು ಸಾಯಿಸುನಾಗ ರಾಜವಂಶಕ್ಕೆ ನಿಷ್ಠರಾಗಿದ್ದರು, ಈ ರಾಜವಂಶವು ಕ್ರಿ.ಪೂ. 1994-1643ರ ನಡುವೆ ಆಳ್ವಿಕೆ ನಡೆಸಿತ್ತು.  ಮಹಾನಂದಿ ಕ್ಷೌರಿಕನಿಂದ ಕೊಲ್ಲಲ್ಪಟ್ಟ ನಂತರ, ಅವರು ಮಹಾಪದ್ಮ ನಂದ ಮತ್ತು ಅವರ ಪುತ್ರರ ವಿರುದ್ಧ ನಿರಂತರವಾಗಿ ಯುದ್ಧಗಳನ್ನು ನಡೆಸುತ್ತಿದ್ದರು.

ಗ್ರಾಮದ ಮುಖ್ಯಸ್ಥನ ಮಗಳು ಮುರಾ ಗರ್ಭಿಣಿಯಾಗಿದ್ದಾಳೆ ಮತ್ತು ಹುಣ್ಣಿಮೆಯನ್ನು ಹಾಗೆಯೇ ಹೀರಲು ಬಯಸಿದ್ದಾಗಿ ಚಾಣಕ್ಯನು ಕಂಡುಕೊಂಡನು. ಭವಿಷ್ಯದಲ್ಲಿ ಅವಳ ಮಗುವನ್ನು ಬೆಳೆಸುವ ಜವಾಬ್ದಾರಿ ತನಗೆ ಕೊಡಬೇಕೆನ್ನುವ ಷರತ್ತಿನೊಂದಿಗೆ ಚಾಣಕ್ಯನು ಅವಳ ಆಸೆಯನ್ನು ಪೂರೈಸಲು ಒಪ್ಪಿಕೊಳ್ಳುತ್ತಾನೆ. ಗ್ರಾಮದ ಮುಖ್ಯಸ್ಥರು ಮತ್ತು ಅವರ ಕುಟುಂಬದವರು ಈ ಒಪ್ಪಂದಕ್ಕೆ ಒಪ್ಪುತ್ತಾರೆ. ಮುರಾ ಹಾಗೂ ಅವಳ ಪತಿ ಸರ್ವಾರ್ಥಸಿದ್ದಿ ಮೌರ್ಯ ನಂದರ ಮ್ರಾಜ್ಯದ ವಿರುದ್ಧದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸೇನಾ ದಂಡನಾಯಕನಾಗಿದ್ದ. 

ಚಾಣಕ್ಯನು ಛಾವಣಿಯ ಮೇಲೆ ರಂಧ್ರವಿರುವ ಗುಡಿಸಲು ನಿರ್ಮಿಸುತ್ತಾನೆ. ಬೆಳದಿಂಗಳು ಬೀಳುವ ಗುಡಿಸಲಿನಲ್ಲಿ ಹಾಲು ತುಂಬಿದ ಮಡಕೆಯನ್ನು ಇಟ್ಟುಕೊಂಡು ಗರ್ಭಿಣಿ ಮುರನನ್ನು ಆಹ್ವಾನಿಸುತ್ತಾನೆ. ಚಂದ್ರನ ಪ್ರತಿಬಿಂಬವಿರುವ ಹಾಲಿನ ಪಾತ್ರೆಯನ್ನು ತೋರಿಸಿ ‘ಆ ಚಂದ್ರನನ್ನು ಕುಡಿ’ ಎಂದು ಹೇಳುತ್ತಾರೆ. ಚಾಣಕ್ಯನ ಮಾತಿನಿಂದ ಸಂತೋಷಗೊಂಡ ಮುರಾ ತುಂಬಿದ ಪಾತ್ರೆಯಲ್ಲಿದ್ದ ಹಾಲನ್ನು ಕುಡಿಯುತ್ತಾಳೆ. ಹಾಗೆ ತಾನು ಚಂದ್ರನನ್ನೇ ಹೀರಿದೆನೆಂದು ಭಾವಿಸುತ್ತಾಳೆ. ಚಾಣಕ್ಯನು ಹಾಗೆ ಮುರಾ ಹಾಲು ಕುಡಿಯುತ್ತಿದ್ದಾಗಲೇ ಗುಡಿಸಲ್ಲಿನ ಚಾವಣಿಯಲ್ಲಿನ ರಂದ್ರವನ್ನು ಉಪಾಯದಿಂದ ಮುಚ್ಚುತ್ತಾನೆ. ಮಡಕೆಯನ್ನು ಖಾಲಿ ಮಾಡಿದ ನಂತರ ಚಂದ್ರನು ಕಣ್ಮರೆಯಾದ ಎಂಬ ಭ್ರಮೆಯನ್ನು ಸೃಷ್ಟಿಸುತ್ತಾನೆ. ನಂತರ ಮುರಾ ತನ್ನ ಮಗುವಿಗೆ ಚಂದ್ರ-ಗುಪ್ತ ಎಂದು ಹೆಸರಿಸುತ್ತಾಳೆ(ಚಂದ್ರನನ್ನು ಗುಪ್ತವಾಗಿ ಸೇವಿಸಿದಳೆನ್ನುವ ಅರ್ಥ)


ಚಾಣಕ್ಯನು ಮಗಧದ ರಾಜಧಾನಿ ಪಾಟಲೀಪುತ್ರವನ್ನು ಪ್ರವೇಶಿಸುತ್ತಾನೆ ಮತ್ತು ವಿಷ್ಣು ಗುಪ್ತನ ವೇಷವನ್ನು ಧರಿಸುತ್ತಾನೆ. ಮಹಾಪದ್ಮ ನಂದನಿಗೆ ಅನೇಕ ಶತ್ರುಗಳಿದ್ದರು ಆದರೆ ರಾಜನ ಮೇಲೆ ಆಕ್ರಮಣ ಮಾಡಲು ಏಕತೆ ಮತ್ತು ನಾಯಕತ್ವದ ಕೊರತೆ ಇತ್ತು. ವಿಷ್ಣು ಗುಪ್ತನಾಗಿ ಚಾಣಕ್ಯನು ಇಂತಹಾ ಸಮಾನ ಶತ್ರುಗಳನ್ನು ಒಂದುಗೂಡಿಸಲು ಮತ್ತು ರಾಜನ ಮೇಲೆ ಆಕ್ರಮಣ ಮಾಡಲು ಅನೇಕ ಬಾರಿ ಪ್ರಯತ್ನಿಸಿ ವಿಫಲವಾಗುತ್ತಾನೆ. ಒಂದು ದಿನ, ಪಿಫಲಿವನದಲ್ಲಿಸಾಗುತ್ತಿದ್ದಾಗ ಅವನು ತನ್ನ ಸ್ನೇಹಿತರ ನಡುವೆ ರಾಜನಂತೆ ವರ್ತಿಸುತ್ತಿರುವ 12 ವರ್ಷದ ಮಗುವನ್ನು ಕಾಣುತ್ತಾನೆ. ಚಾಣಕ್ಯ ಅವನನ್ನು ಪರೀಕ್ಷಿಸಲು ಬಯಸಿ ದಾನ ಕೇಳುತ್ತಾನೆ. ಆಗ ಬಾಲಕ ದಾನಕ್ಕಾಗಿ ಹಸುವಿನ ಹಿಂಡನ್ನು ತೋರಿಸುತ್ತಾನೆ.  ಚಾಣಕ್ಯನು ಈ ಮಗು ಚಂದ್ರಗುಪ್ತನೆಂದು ತಿಳಿದುಕೊಳ್ಳುತ್ತಾನೆ ಮತ್ತು 'ನೀನು ನಿಜವಾದ ರಾಜನಾಗಲು ಬಯಸಿದರೆ, ನಿನಗೆ ಆಳುವುದಕ್ಕೆ ರಾಜ್ಯ ಬೇಕಾಗುತ್ತದೆ. ನಾನು ನಿನಗೆ ಒಂದು ರಾಜ್ಯವನ್ನು ನಿಡಬಹುದು'. ಆ ಬಾಲಕನ ಕುಟುಂಬ ಅವರ ಮೊದಏ ಮಾತು ನೀಡಿದಂತೆ ಚಂದ್ರಗುಪ್ತನನ್ನು ಚಾಣಕ್ಯನೊಂದಿಗೆ ಕಳುಹಿಸುತ್ತಾರೆ.

Tuesday, February 14, 2023

ಪ್ರೇಮಿಗಳ ದಿನದಂದು “ಪ್ರೇಮಪತ್ರದ ಆಫೀಸು” ಪುಸ್ತಕ ಬಿಡುಗಡೆ ಮಾಡಿದ ’ಸಿಂಹಪ್ರಿಯಾ’

 ವರ್ಷಗಳ ಕಾಲ ಪ್ರೇಮಿಗಳಾಗಿದ್ದು ಇತ್ತೀಚಿಗಷ್ಟೆ ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ವ್ಯಾಂಲಂಟೈನ್ ಡೇನ ಈ ಬಾರಿ ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಒಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ "ಪ್ರೇಮಪತ್ರದ ಆಫೀಸು ಮತ್ತು ಅವಳು" ಎಂಬ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನವನ್ನು ಅವರಿಬ್ಬರೂ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ , ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಾಲಂಟೈನ್ ದಿನಗಳ ನೆನಪು ಮಾಡಿಕೊಂಡರು. 



ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನ ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು. 


ಹರಿಪ್ರಿಯ, ''ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ'' ಎಂದು ಹೇಳಿದರೆ, ವಸಿಷ್ಠ ಸಿಂಹ , " ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ " ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. ಮಾವಲಿ ಪಬ್ಲಿಕೇಶನ್ ಇಂದ ಪ್ರಕಟವಾಗುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು. 


'ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು, ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು' ಎಂದು ಹರಿಪ್ರಿಯ ಹೇಳಿದರು... 


'ದೇವರು ಅರೆಸ್ಟ್ ಆದ' ಮತ್ತು 'ಟೈಪಿಸ್ಟ್ ತಿರಸ್ಕರಿಸಿದ ಕತೆ' ಎಂಬ ಕತಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ 'ಸುಪಾರಿ ಕೊಲೆ' ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ 'ಒಂದು ಕಾನೂನಾತ್ಮಕ ಕೊಲೆ' ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ 'LTTE Murthy Calling' ಇತ್ತೀಚಿಗಷ್ಟೆ ತಮಿಳಿಗೆ ಅನುವಾದಗೊಂಡಿದೆ. 


ಈಗ ಅವರ ಹೊಸ ಕತಾ ಸಂಕಲನ "ಪ್ರೇಮಪತ್ರದ ಆಫೀಸು ಮತ್ತು ಅವಳು" ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕವಾಗಿದೆ. ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.

Saturday, February 04, 2023

ಸಪ್ತ ಸ್ವರಗಳಲ್ಲಿ ಲೀನವಾದ ಗಾನ ಕೋಗಿಲೆ ವಾಣಿ ಜಯರಾಮ್

 

ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರತೀಯ ಹಿನ್ನೆಲೆ ಗಾಯಕಿ,  ಬೇರೆ ಬೇರೆ ಭಾಷೆಗಳಲ್ಲಿ ಸುಮಾರು ೧೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು‌ಹಾಡಿ ಜನಮಾನಸದಲ್ಲಿ ನೆಲೆಸಿದಾಕೆ.  ಅವರು ಒಂದು ಸಾವಿರಕ್ಕೂ ಹೆಚ್ಚು ಭಾರತೀಯ ಚಲನಚಿತ್ರಗಳಿಗೆ ಪ್ಲೇಬ್ಯಾಕ್ ಸಿಂಗರ್ ಆಗಿದ್ದವರು.  ಸಾವಿರಾರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂ ಅವರ ಹೆಸರಿನಲ್ಲಿದೆ.  ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿ ಸಂಗೀತ ಸುಧೆ ಹರಿಸಿದವರು. 19 ಭಾಷೆಗಳಲ್ಲಿ ಹಾಡಿರುವ ಮೇರು ಗಾಯನ ಪ್ರತಿಭೆ.  ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಡಿಶಾ , ಆಂಧ್ರ ಪ್ರದೇಶ , ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿ, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಯಾರ್ಕ್ ನಗರದಲ್ಲಿ ನಡೆದ NAFA 2017 ಸಮಾರಂಭದಲ್ಲಿ ಅವರು ಅತ್ಯುತ್ತಮ ಮಹಿಳಾ ಗಾಯಕಿ ಎನ್ನುವ ಗೌರವ ಗಳಿಸಿಕೊಂಡವರು..

ಅವರೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ಗಾನ ಕೋಗಿಲೆ ವಾಣಿ ಜಯರಾಮ್. ಅವರಿಂದು ಇಹಲೋಕ ತ್ಯಜಿಸಿದ್ದಾರೆ. ಹಾಡುಹಕ್ಕಿಯು ಮೌನಕ್ಕೆ ಶರಣಾಗಿದೆ.

ಬೋಲೆ  ರೆ  ಪಪಿ   ಹರಾ.. ಪಪಿ.. ಹರಾ..

ಕಿತ್ ಗನ್ ಬರ್ಸೆ .. ನಿತ್ ಮನ್ ಪ್ಯಾಸ......!

1971 ರಲ್ಲಿ ಬಿಡುಗಡೆಯಾದ ", ಗುಡ್ಡಿ" ಚಿತ್ರದ ಈ  ಗೀತೆ ವಾಣಿ ಜಯರಾಮ್ ಅವರ ಜೀವನದಲ್ಲಿ ಅತ್ಯಂತ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ ಅಂದಿನ ಕಾಲಕ್ಕೆ ವರ್ಷಗಳ ಕಾಲ ಅಮೋಘ ಪ್ರಖ್ಯಾತಿ ಪಡೆದು ಆ ಕಾಲದ ಖ್ಯಾತ ಗಾಯಕಿಯರ ನಿದ್ದೆ ಕೆಡಿಸಿತ್ತಂತೆ.

ವಾಣಿಜಯರಾಂ 1945ರ ನವೆಂಬರ್ 30ರಂದು  ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು.  ಇಅವರ ತಾಯಿಯು ಸಹ ಖ್ಯಾ ಸಂಗೀತ ವಿದ್ವಾಂಸರ ಶಿಷ್ಯೆಯಾಗಿದ್ದು ಮನೆಯಲ್ಲಿ ಸಂಗೀತಮಯ ವಾತಾವರಣವಿದ್ದ ಕಾರಣ ಬಾಲ್ಯದಲ್ಲೇ ವಾಣಿ ಅವರಿಗೆ ಸಂಗೀತದ ಮೇಲೆ ಒಲವು ಮೂಡಿತ್ತು. ಐದನೆಯ ವಯಸ್ಸಿನಲ್ಲೇ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಏಳನೇ ವಯಸ್ಸಿಗೆ  ದೇಶಿಕರ್ ಕೃತಿಗಳನ್ನು ಹಾಡುವಷ್ಟರ ಮಟ್ಟಿಗೆ ಅಭ್ಯಾಸ ಬೆಳೆಸಿಕೊಂಡಿದ್ದ ವಾಣಿ ಹತ್ತು ವರ್ಷದವರಿದ್ದಾಗಲೇ ತಿರುವನಂತಪುರದಲ್ಲಿ ಸತತ ಮೂರು ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು.  ಆರ್. ಬಾಲಸುಬ್ರಮಣ್ಯಂ ಮತ್ತು ಆರ್. ಎಸ್. ಮಣಿ  ಅವರಲ್ಲಿ ಸಂಗೀತಾಭ್ಯಾಸ ಮಾಡಿದ್ದ ವಾಣಿಯವರು ಮುಂದೆ ಸಂಗೀತದ ಜೊತೆಗೇ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿ ಇದ್ದರು. ವಾಣಿಯವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಚೇಂಬರ್ ಆಫ್ ಕಾಮರ್ಸ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ  ವಿವಾಹವಾದ ನಂತರ ಪತಿಯ ಪ್ರೋತ್ಸಾಹದೊಂದಿಗೆ ಪಟಿಯಾಲ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ಥಾನಿ ಸಂಗೀತ ಕಲಿತರು.  ಆರಂಭದಲ್ಲಿ ಎಸ್.ಬಿ.ಐ. ಉದ್ಯೋಗಿ ಆಗಿದ್ದ ಇವರು, ಹೆಚ್ಚು ಹೆಚ್ಚು ಅವಕಾಶಗಳು ಬಂದಂತೆ , ಉದ್ಯೋಗ ತೊರೆದು ಸಂಗೀತದಲ್ಲೇ ತಮ್ಮನ್ನು ತೊಡಗಿಸಿ ಕೊಂಡರು.. ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿಯವರ ಮರಾಠಿ ಆಲ್ಬಂನ 'ಋಣಾನುಬಂಧಾಚ್ಯ' ಗೀತೆಗೆ ಕುಮಾರಗಂಧರ್ವರೊಂದಿಗೆ ಸಹಗಾಯಕಿಯಾಗಿ ಹಾಡಿದ್ದ ವಾಣಿ ಜಯರಾಂ ಅವರ ಗಾಯನ ಅವರನ್ನು ಹಿಂದಿ ಚಿತ್ರರಂಗಕ್ಕೆ ಕರೆತಂದಿತು.  ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಗುಡ್ಡಿ’ ಚಿತ್ರದ “ಬೋಲ್ ರೆ ಪಪ್ಪಿ ಹರಾ”  ಹಿಂದಿ ಚಿತ್ರರಂಗ ಮಾತ್ರವಲ್ಲ ಭಾರತದಾದ್ಯಂತ ವಾಣಿ ಜಯರಾಮ್ ಅವರ ಹೆಸರನ್ನು ಪ್ರಖ್ಯಾತವಾಗಿಸಿತು. 


1973ರಿಂದ  ಕನ್ನಡದಲ್ಲಿ ಹಾಡಲು ತೊಡಗಿದ ವಾಣಿ ಜಯರಾಮ್ 1973ರಲ್ಲಿ ತೆರೆಕಂಡ 'ಕೆಸರಿನ ಕಮಲ' ಚಿತ್ರಕ್ಕಾಗಿ ಎರಡು ಹಾಡುಗಳನ್ನು ಹಾಡಿದ್ದರು.  ಅವರು ಕನ್ನಡದಲ್ಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸುಮಧುರ ಹಾಡುಗಳನ್ನು ಹಾಡಿದ್ದಾರೆ. ಭಾರತ ಭೂಷಿರ ಮಂದಿರ ಸುಂದರಿ, ದಾರಿ ಕಾಣದಾಗಿದೆ ರಾಘವೇಂದ್ರನೆ, ಪ್ರಿಯತಮಾ ಓ ಪ್ರಿಯತಮ.... , ಹೋದೆಯಾ ದೂರ ಓ.. ಜೊತೆಗಾರ ಸೇರಲು ಬಂದಾಗ. ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ಸವಿನೆನಪುಗಳು ಬೇಕು ,ಸವಿಯಲಿ ಬದುಕು, ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ, ಒಲುಮೆ ಸಿರಿಯ ಕಂಡು ,ಬಯಕೆ ಸಿಹಿಯ ಉಂಡು, ಏನೇನೋ ಆಸೆ ನೀ ತಂದ ಭಾಷೆ ಎಂದು ನಿನ್ನ ತನು ಮನ ಕೂಗುತ್ತಿದೆ ಬಾ ಎಂದು ನನ್ನಾ, ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೇ ನೋಡೆನ್ನುತಾ, 'ಸುತ್ತ ಮುತ್ತ ಯಾರೂ ಇಲ್ಲ..'-, ಇವ ಯಾವ ಸೀಮೆ ಗಂಡು ಕಾಣಮ್ಮೋ..', 'ಮುತ್ತೇ ಪ್ರಥಮ.. ಅದುವೇ ಜಗದ ನಿಯಮ..'-, 'ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ..''ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ..'- ಇಂತಹಾ ಅದೆಷ್ಟೋ ಮಧುರ ಗೀತೆಗಳು ಕೇಳುವ ಕಿವಿಗಳಿಗೆ ಇಂಪು ನೀಡಿದೆ. ಇದೆಲ್ಲದರ ಹಿನ್ನೆಲೆ ಧ್ವನಿ ವಾಣಿ ಜಯರಾಮ್ ಎನ್ನುವುದು ಗಮನಾರ್ಹ.

ಇಷ್ತಾಗಿ 1995ರಲ್ಲಿ ತೆರೆಕಂಡ 'ಬೆಳಂದಿಗಳ ಬಾಲೆ' ಸಿನಿಮಾದವರೆಗೂ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 'ಬೆಳಂದಿಗಳ ಬಾಲೆ' ಸಿನಿಮಾದಲ್ಲಿಯೂ ಎರಡು ಗೀತೆಗಳನ್ನು ಅವರು ಹಾಡಿದ್ದರು. ಆನಂತರ ಐದು ವರ್ಷ ಸುದೀರ್ಘ ಬ್ರೇಕ್ ತೆಗೆದುಕೊಂಡರು. ನಂತರ 2000ರಲ್ಲಿ ತೆರೆಕಂಡ 'ನೀಲಾ' ಚಿತ್ರಕ್ಕಾಗಿ ಐದು ಗೀತೆಗಳನ್ನು ಹಾಡಿದರು. ವಿಶೇಷವೆಂದರೆ, ಈ ಸಿನಿಮಾಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನೀಡಿದ್ದರು. ವಾಣಿ ಜಯರಾಂ ಅವರು ಹಾಡಿದ ಮೊದಲ ಕನ್ನಡ ಸಿನಿಮಾ ಹಾಗೂ ಕೊನೆಯ ಸಿನಿಮಾ ಎರಡಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನಿರ್ದೇಶಕರಾಗಿದ್ದರು. ವಾಣಿ ಅವರು ಹಾಡಿದ ಹೆಚ್ಚಿನ ಸಿನಿಮಾಗಳಿಗೆ ವಿಜಯ ಭಾಸ್ಕರ್  ಸಂಗೀತವೇ ಇರುತ್ತಿತ್ತೆನ್ನುವುದು ಗಮನಾರ್ಹ.

ಗಝಲ್,  ಭಜನ್,  ಭಕ್ತಿಗೀತೆಗಳ ಗಾಯನ ಸಹ ಅವರ ಸುಮಧುರ ಕಂಠದಿಂದ ಬಂದಿದೆ.  "ಮಲ್ಲಿಗೈ ಎನ್ ಮನ್ನನ್ ಮಯಂಗುಂ" ಎಂಬ ಇವರು ಹಾಡಿದ್ದ ಹಾಡೊಂದು ಆ ಚಿತ್ರದ ಯಶಸ್ಸಿಗೆ ಬಹು ಮುಖ್ಯ ಕಾರಣವಾಗಿತ್ತು  ಇನ್ನು ಸಂಗೀತದ ಜೊತೆಗೆ ಸಾಹಿತ್ಯದಲ್ಲಿ ಸಹ ಹೆಸರಾಗಿದ್ದ ವಾಣಿ ಅವರ ಕವನ ಸಂಕಲನಗಳು ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಪ್ರಕಟವಾಗಿದೆ.  'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ  ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿದ್ದ ವಾಣಿ ಅವರ ಸಾಧನೆ ಅಪೂರ್ವವಾದದ್ದು.


ಇಂತಹಾ ಪ್ರತಿಭಾನ್ವಿತ ಗಾಯಕಿಯೂ ಸಹ ಚಿತ್ರೋದ್ಯಮದಲ್ಲಿ ತಾರತಮ್ಯವನ್ನು ಅನುಭವಿಸಿದ್ದರು ಎಂದರೆ ಅಚ್ಚರಿಯಾಗಬಹುದು. "ನನ್ನ ವೃತ್ತಿ ಕ್ಷೇತ್ರದಲ್ಲಿ ಪ್ರತಿಭೆ ಇರುವವರಿಗೂ 5℅ ವಂಚಿಸಿದರೆ ನನಗೆ ಮಾತ್ರ 500℅ ವಂಚಿಸುತ್ತಿದ್ದಾರೆ" ಎಂದು ಸಂದರ್ಶನವೊಂದರಲ್ಲಿ ಅವರು ತಮ್ಮ ಮನದಾಳವನ್ನು ತೆರೆದಿಟ್ಟಿದ್ದರು.

ಇನ್ನು ಅವರ ಪಾಲಿಗೆ ಸಂಗೀತ ಕೇವಲ ಹಾಡುವಿಕೆ ಮಾತ್ರವೇ ಆಗಿರಲಿಲ್ಲ. ಅವರೇ ಹೇಳಿಕೊಂಡಿದ್ದ ಹಾಗೆ - “I need songs with substance. It was music rather than name, fame and glamour that always captivated me." (ನನಗೆ ಸತ್ವವಿರುವ ಹಾಡುಗಳು ಬೇಕು. ಹೆಸರು, ಖ್ಯಾತಿ ಮತ್ತು ಗ್ಲಾಮರ್‌ಗಿಂತ ಸಂಗೀತವೇ ನನ್ನನ್ನು ಯಾವಾಗಲೂ ಆಕರ್ಷಿಸುತ್ತದೆ.) ಇನ್ನು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಶೈಲಿಯ ಛಾಪು ಮೂಡಿಸಿದ ವಿಶಿಷ್ಟ ಹೆಮ್ಮೆಯ ಗಾಯಕಿ ಅಚ್ಚುಮೆಚ್ಚಿನ ಗಾಯಕಿಯಾಗಿ ಹೊರಹೊಮ್ಮಿ ಮೆಚ್ಚುಗೆಗೆ ಪಾತ್ರರಾಗಿ , ಜನಪ್ರಿಯತೆಯ ಉತ್ತುಂಗಕ್ಕರಿದ ಗಾಯಕಿರಲ್ಲಿ ವಾಣಿ ಜಯರಾಂ ಅವರು ಕೂಡ ಅಂದರೆ ತಪ್ಪಾಗಲಿಕ್ಕಿಲ್ಲ.

ಇಂದು ಸಪ್ತ ಸ್ವರಗಳಲ್ಲಿ ಲೀನವಾದ ಮಹಾನ್ ಚೇತನ‌ಕ್ಕೆ ನಾವು ಗೌರವ ನಮನ ಸಲ್ಲಿಸೋಣ.  ಮಾತ್ರವಲ್ಲ ಅಮರ ಮಧುರ ಗೀತೆಗಳ ಮೂಲಕ ಸಂಗೀತಾಸಕ್ತರ ಮನಸ್ಸುಗಳಲ್ಲಿ ವಾಣಿ ಅವರು ರಸ್ಥಾಯಿಯಾಗಿ ನೆಲೆಸಿರುತ್ತಾರೆ ಎನ್ನುವುದನ್ನು ಸಾರೋಣ.


Friday, December 09, 2022

ವಿಜಯಾನಂದ - ಛಲಗಾರನೊಬ್ಬನ ಜೀವನಗಾಥೆಯೋ? ಸ್ವಯಂ ಆತ್ಮಪ್ರಶಂಸೆಯೋ?

 ಚಿತ್ರ: ವಿಜಯಾನಂದ
ನಿರ್ದೇಶನ: ರಿಷಿಕಾ ಶರ್ಮಾ
ನಿರ್ಮಾಪಕರು: ವಿಆರ್ ಎಲ್ ಫಿಲ್ಮ್ ಪ್ರೊಡಕ್ಷನ್ಸ್, , ಆನಂದ ಸಂಕೇಶ್ವರ
ಪಾತ್ರವರ್ಗ: ನಿಹಾಲ್, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ , ಶೈನ್ ಶೆಟ್ಟಿ, ದಯಾಳ್ ಪದ್ಮನಾಭ, ರಮೇಶ್ ಭಟ್ ಹಾಗೂ ಮುಂತಾದವರು
ಎಡಿಟಿಂಗ್: ಹೇಮಂತ್ ಕುಮಾರ್
ಛಾಯಾಗ್ರಹಣ: ಕೀರ್ತನ್ ಪೂಜಾರಿ
ಸಂಗೀತ: ಗೋಪಿ ಸುಂದರ್
ರೇಟಿಂಗ್: 3.5/5


ಇಂದು (ಡಿಸೆಂಬರ್ 9) ವಿಶ್ವದಾದ್ಯಂತ ತೆರೆ ಕಂಡಿರುವ ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಕ್ಸೃತ ಡಾ. ವಿಜಯಸಂಕೇಶ್ವರ ಅವರ ಜೀವನ ಆಧಾರಿತ ಚಿತ್ರ "ವಿಜಯಾನಂದ" ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಓಪನಿಂಗ್ ಪಡೆದಿದೆ.  ‘ಟ್ರಂಕ್’ ಎಂಬ ಚಿತ್ರದ ನಿರ್ದೇಶಕರಾದ ರಿಷಿಕಾ ಶರ್ಮ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರು ಕಥೆಯನ್ನು ಕತೂಹಲಭರಿತವಾಗಿ ಹೆಣೆದಿದ್ದಾರೆ. ವಿ.ಆರ್.ಎಲ್. ಸಂಸ್ಥೆಯ ಹುಟ್ಟು, ಬೆಳವಣಿಗೆಯನ್ನು  ಯಾವುದೇ ಅತಿಶಯೋಕ್ತಿ ಎನಿಸದಂತೆ ಸಹಜವಾಗಿ ತೋರಿಸಲಾಗಿದೆ. ಕೇವಲ ಒಂದು ಟ್ರಕ್‌ನೊಂದಿಗೆ ಪ್ರಾರಂಭವಾಗಿ ದೊಡ್ಡ ಲಾಜಿಸ್ಟಿಕ್ಸ್ ಕಂಪನಿಯನ್ನು ಹೇಗೆ ಸ್ಥಾಪಿಸಿದರು ಎನ್ನುವುದೇ ಸಿನಿಮಾದ ಜೀವಾಳ. 

ಇದನ್ನೂ ನೋಡಿ: ವಿಜಯಾನಂದ ಟ್ರೈಲರ್


ವಿಜಯ ಸಂಕೇಶ್ವರ ಹೇಗೆ ಬೆಳೆದರೆನ್ನುವುದನ್ನು ಅವರ ಪುತ್ರ್ತ ಆನಂದ್ ಸಂಕೇಶ್ವರ ನಿರೂಪಣೆ ಮಾಡುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ವಿಜಯ್ ಸಂಕೇಶ್ವರ್ (ನಿಹಾಲ್) ಇವರ ತಂದೆ(ಅನಂತ್ ನಾಗ್)  ಗದಗದಲ್ಲಿ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್ ಮಾಲಕರು.ಈ ಮುದ್ರಣಾಲಯದಲ್ಲಿ ಸ್ಟಡಿ ಪುಸ್ತಕಗಳು, ಮದುವೆ ಪತ್ರಿಕೆಗಳು ಸೇರಿದಂತೆ ಹಲವಾರು ವಿಧದ ಪುಸ್ತಕ, ಪತ್ರಿಕೆ ಪ್ರಿಂಟ್ ಆಗುತ್ತದೆ. ಆದರೆ ವಿಜಯ ಸಂಕೇಶ್ವರ್ ಗೆ ತನ್ನ ತಂದೆಯ ವ್ಯವಹಾರ ಮುಂದುವರಿಸಲು ಇಷ್ಟವಿಲ್ಲದೆ ಅವರ ವಿರೋಧ ಕಟ್ಟಿಕೊಂಡು ತನ್ನದೇ ಆದ ಲಾಜಿಸ್ಟಿಕ್ ವ್ಯಾಪಾರ ಮಾಡಲು ತೊಡಗುತ್ತಾನೆ. ತಾನು ನಂಬಿದ ದಾರಿಯನ್ನು ಅನುಸರಿಸುವ ಆತ ಸಾಧನೆಯ ಹಾದಿಯಲ್ಲಿ ಅನೇಕ ಬಗೆಯ ಅವಮಾನ, ಅಡ್ಡಿ ಆತಂಕ ಎದುರಿಸುತ್ತಾನೆ. ಮುಂದೆ ಅವರು ಕನ್ನಡ ದಿನಪತ್ರಿಕೆ ಪ್ರಾರಂಭಿಸಿದ್ದು, ಅದನ್ನು ಆಂಗ್ಲ ಭಾಷಾ ಪತ್ರಿಕಾ ಸಮೂಹಕ್ಕೆ ಹೇಗೆ ಮಾರಾಟ ಮಾಡಲಾಗಿದೆ ಮತ್ತೆ ಐದು ವರ್ಷದಲ್ಲಿ ಮತ್ತೊಂದು ಪತ್ರಿಕೆ ಪ್ರಾರಂಭ ಮಾಡಿದ್ದು ಹೇಗೆ ಎನ್ನುವುದನ್ನು ಸಹ ಚಿತ್ರದಲ್ಲಿ ತೋರಿಸಲಾಘಿದೆ. 

ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯ ಪರಿಚಯ : ‘ಅನವರತ ಅಪ್ಪು’


ನಿರ್ದೇಶಕರ ಹೋಂ ವರ್ಕ್ ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ. ಇದೊಂದು ವ್ಯಕ್ತಿಯ ಜೀವನಾಧಾರಿತ ಚಿತ್ರವಾಗಿರುವುದರಿಂದ ಯಾವುದೇ ಹಾಸ್ಯ ದೃಶ್ಯಗಳೈಲ್ಲದೆ ಚಿತ್ರ ಸಂಪೂರ್ಣ ಸೀರಿಯಸ್ ಆಗಿ ಮೂಡಿಬಂದಿದೆ.  ಇನ್ನು ವಿಜಯ ಸಂಕೇಶ್ವರ 2012ರಲ್ಲಿ ಮಗ ಆನಂದ್ ಜೊತೆಗೂಡಿ ವಿಜಯವಾಣಿ ಪತ್ರಿಕೆಯನ್ನು ಪ್ರಾರಂಭಿಸಿರುವಲ್ಲಿಗೆ ಚಿತ್ರ ಅಂತ್ಯವಾಗಿದೆ.  ಬಿಜೆಪಿ ಪರವಾಗಿ ಮೂರು ಬಾರಿ ಸಂಸದರಾಗಿ ಗೆದ್ದಿರುವ ವಿಜಯ ಸಂಕೇಶ್ವರ್ ತಾವು ಬಿಜೆಪಿ ತೊರೆದು ಕನ್ನಡ ನಾಡು ಎನ್ನುವ ಪಕ್ಷ ಕಟ್ಟಿರುವುದಾಗಲಿ ನಂತರದಲ್ಲಿ ಆ ಪಕ್ಷವನ್ನು ಮತ್ತೆ ಬಿಜೆಪಿ ಜತೆಗೆ ವಿಲೀನ ಮಾಡಿದ್ದಾಗಲಿ ಇಲ್ಲಿ ಪ್ರಸ್ತಾಪವಾಗಿಲ್ಲ. ಅದಷ್ಟೇ ಅಲ್ಲದೆ ವಿಜಯ ಸಂಕೇಶ್ವರ ಅವರ ಮತ್ತೊಂದು ದೊಡ್ಡ ಸಾಹಸವಾಗಿರುವ ದಿಗ್ವಿಜಯ ಟಿವಿ ನ್ಯೂಸ್ ಚಾನಲ್ ಬಗ್ಗೆ ಸಹ ಚಿತ್ರದಲ್ಲಿ ಯಾವ ಪ್ರಸ್ತಾಪವೂ ಇಲ್ಲ. ಚಿತ್ರದ ಅಂತ್ಯದಲ್ಲಿ ’ಟು ಬಿ ಕಂಟಿನ್ಯೂ...’ ಎಂದಿರುವುದರಿಂಡ ಮುಂದಿನ ದಿನದಲ್ಲಿ ಸಂಕೇಶ್ವರ ಜೀವನದ ಮತ್ತಷ್ಟು ಘಟನೆಗಳು ಮುಂದಿನ ಭಾಗದಲ್ಲಿ ಮೂಡಿಬರಬಹುದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲಿ ನಟನಾಗಬೇಕೆನ್ನುವ ಆಸೆ ಈಗ ಕೈಗೂಡಿದೆ: ಸಚಿವ ಡಾ. ಕೆ. ಸುಧಾಕರ್



ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ಕಾಣಿಸಿಕೊಂಡು ಅತ್ಯುತ್ತಮ ಅಭಿನಯ ನೀಡೀದ್ದಾರೆ. ಅವರು ಸಿನಿಮಾದಲ್ಲಿ ಮೂರು ವಯೋಮಾನ ಮತ್ತು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ನಟ ಮತ್ತು ಆ್ಯಂಕರ್ ಆಗಿದ್ದ ಇವರು ಮೊದಲ ಚಿತ್ರದಲ್ಲೇ ನಾಯಕ ನಟರಾಗಿ ಮೆಚ್ಚುಗೆ ಗಳಿಸುಉವುದರಲ್ಲಿ ಅನುಮಾನವಿಲ್ಲ.  ನಂದ ಸಂಕೇಶ್ವರ್ ಪಾತ್ರದಲ್ಲಿ ನಟಿಸಿರುವ ಭರತ್ ಬೋಪಣ್ಣ ಕೂಡ ತಮ್ಮ ಪಾತ್ರಾಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ಅನಂತ್ ನಾಗ್, ತಾಯಿಯಾಗಿ ವಿನಯಾ ಪ್ರಸಾದ್ ಅಭಿನಯ ಮೆಚ್ಚುವಂತಿದೆ. ಇದಲ್ಲದೆ ಸಂಕೇಶ್ವರ ಅವರಿಗೆ ವ್ಯಾಪಾರದಲ್ಲಿ ನೆರವಾಗುವ ಗಣೇಶ್ ದಾದಾ ಪಾತ್ರದಲ್ಲಿ ರವಿಚಂದ್ರನ್, ಪತ್ರಿಕಾ ಸಂಪಾದಕ ರಾಮರಾವ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಅವರ ಪಾತ್ರವೂ ಮಹತ್ವದ್ದಾಗಿದ್ದು ಜನರಿಗೆ ಇಷ್ತವಾಗುತ್ತದೆ. ಸಂಕೇಶ್ವರ ಅವರ ಪತ್ನಿಯಾಗಿ ಲಲಿತಾ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಅಭಿನಯವೂ ಗಮನಾರ್ಹವಾಗಿದೆ. ಉಳಿದ ಎಲ್ಲಾ ಪಾತ್ರಧಾರಿಗಳೂ ಆಯಾ ಪಾತ್ರಗಳ ಅನುಗುಣವಾಗಿ ಅಭಿನಯಿಸಿದ್ದಾರೆ. 


ಇನ್ನು ಹಿನ್ನೆಲೆ ಸಂಗೀತ, ಕೊರಿಯೋಗ್ರಫಿ ವಿಚಾರ ನೋಡುವುದಾದರೆ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್  ಅಚ್ಚುಕಟ್ತಾಗಿ ಕೆಲಸ ಮಾಆಡಿದ್ದಾರೆ. ಆದರೆ ವಿಜಯ ಸಂಕೇಶ್ವರ ಜೀವನಾಧಾರಿತ ಈ ಸಿನಿಮಾದಲ್ಲಿ ಯಾವ ಡ್ಯುಎಟ್ ಹಾಡುಗಳು, ವಿದೇಶೀ ಲೊಕೇಷನ್ ಗಳಾಗಲಿ ಕಾಣಿಸುಉವುದಿಲ್ಲ. ಇಷ್ತೇ ಅಲ್ಲ ಚಿತ್ರದಲ್ಲಿ ಮಾರುಕಟ್ಟೆಯಲ್ಲಿ ನಡೆಯುವ ಒಂದೇ ಒಂದು ಫೈಟ್ ಹೊರತಾಗಿ ಯಾವುದೇ ಸಾಹಸ ದೃಶ್ಯಗಳೂ ಇಲ್ಲ.  ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಕೆಲಸವೂ ಸಹ ಚಿತ್ರದ ಸೌಂದರ್ಯಕ್ಕೆ ಗರಿಯಾಗಿದೆ. 

ಇದನ್ನೂ ಓದಿ: ‘ಬಾಂಡ್ ರವಿ’ ಟ್ರೇಲರ್ ರಿಲೀಸ್-ಪುನೀತ್ ಅಭಿಮಾನಿ ಚಿತ್ರಕ್ಕೆ ಸಿಕ್ತು ದೊಡ್ಮನೆಯ ಆಶೀರ್ವಾದ


ಇಷ್ಟೆಲ್ಲಾ ಹೇಳಿದ ಮೇಲೆ  ವಿಆರ್​ಎಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ ಸಂಕೇಶ್ವರ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆನ್ನುವುದನ್ನು ಉಲ್ಲೇಖಿಸಲೇಬೇಕು. ಇದನ್ನೇ ಇನ್ನೊಂದು ದಿಕ್ಕಿನಿಂದ ನೋಡಿದರೆ  ಓರ್ವ ಸಾಧಕ ವ್ಯಕ್ತಿಯ ಕುರಿತು ನಾಡಿನ ಜನತೆ ತಿಳಿಯಲಿ, ಅವರ ಜೀವನ ಕಂಡು ತಾವೂ ಸ್ಫೂರ್ತಿ ಹೊಂದಲೆಂದು ಈ ಚಿತ್ರವನ್ನು ವಿಆರ್​ಎಲ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಆದರೆ ತಮ್ಮದೇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರ ಕುರಿತು ತಾವೇ ಚಿತ್ರ ತಯಾರಿಸುವ ಮೂಲಕ ಆ ವ್ಯಕ್ತಿಯ ಬದುಕಿನ ಕೇವಲ ಒಳ್ಳೆಯ ಅಂಶಗಳನ್ನು ಮಾತ್ರವೇ ಎತ್ತಿ ತೋರಿಸುತ್ತಿದ್ದಾರೆ ಎನ್ನುವ ಭಾವನೆ ಪ್ರೇಕ್ಷಕರಲ್ಲಿ ಮೂಡಲು ಅವಕಾಶಗಳಿದೆ. ಅದರಲ್ಲಿಯೂ ವಿಜಯ ಸಂಕೇಶ್ವರ ಕೇವಲ ಉದ್ಯಮಿಯಾಗಿ ಮಾತ್ರವಲ್ಲ ಓರ್ವ ರಾಜಕಾರಣಿಯಾಗಿ ಸಹ ಗುರುತಿಸಿಕೊಂಡಿರುವುದರಿಂದ ತಮ್ಮದೇ ಸಂಸ್ಥೆಯ ಮೂಲಕ ತಮ್ಮ ಕಥೆಯನ್ನು ಹೇಳಿಕೊಂಡಿರುವುದು ಅದೊಂದು ಸ್ವಯಂ ಆತ್ಮಪ್ರಶಂಸೆ ಮಾಡಿಕೊಡಂತೆ ಎನಿಸದಿರದು. ಮುಂದಿನ ದಿನಗಳಲ್ಲಿ ಸಂಕೇಶ್ವರ ಅವರ ರಾಜಕೀಯ ವಿರೋಧಿಗಳು ಇದನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.  

ಇದನ್ನೂ ಓದಿ: ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ



ಇದೆಲ್ಲಾ ಏನೇ ಇದ್ದರೂ ಕನ್ನಡ ಚಿತ್ರರಂಗದ ಮಟ್ಟಿಗೆ ’ವಿಜಯಾನಂದ’ ನಿಜಕ್ಕೂ ಒಂದು ಹೊಸ ದಾಖಲೆಯನ್ನು ಮೂಡಿಸಿದ ಚಿತ್ರ. ವಿಶ್ವದಾದ್ಯಂತ ವಿ.ಆರ್.ಎಲ್. ಸಮೂಹ ಗೆಲುವಿನ ಪತಾಕೆ ಹಾರಿಸಿದಂತೆ ’ವಿಜಯಾನಂದ’ ಚಿತ್ರವೂ ಸಹ ಗೆಲುವನ್ನು ಕಾಣಲಿ...

Saturday, November 12, 2022

ರಾಜ ಬಿಂಬಿಸಾರ ಕಂಡ ಭವಿತವ್ಯದ ಕನಸುಗಳು

 ಕ್ರಿ.ಪೂ. 1852-1814ರ ಅವಧಿಯಲ್ಲಿ 38 ವರ್ಷಗಳ ಕಾಲ ಮಗಧ ಸಾಮ್ರಾಜ್ಯವನ್ನು ಆಳಿದ ಶೈಶುಂಗ ರಾಜವಂಶದ ರಾಜ ಬಿಂಬಿಸಾರ ಗೌತಮ ಬುದ್ಧನ (ಕ್ರಿ.ಪೂ.  1887 - 1807) ಸಮಕಾಲೀನನಲ್ಲಿ ಒಬ್ಬ,  ಒಂದು ರಾತ್ರಿ ಬಿಂಬಿಸಾರನು ವಿಚಿತ್ರವಾದ ಕನಸುಗಳನ್ನು ಕಂಡನು ಮತ್ತು ಅವನು ತನ್ನ ರಾಜ್ಯದಲ್ಲಿ ಬ್ರಾಹ್ಮಣರನ್ನು ತನಗಾಗಿ ವಿವರಿಸಲು ಕೇಳಿದನು. ಆಗ ಆ ಬ್ರಾಹ್ಮಣರು ತಾವು ಮಹಾರಾಜನಿಂದ ಹಣವನ್ನು ಪಡೆದುಕೊಳ್ಳಲು ಇದೊಂದು ಅವಕಾಶ ಎಂದು ಭಾವಿಸಿ ಕೆಟ್ಟ ಕನಸುಗಳು ಅಪಾಯಕಾರಿ ಎಂದು ಅವನನ್ನು ಭಯಪಡಿಸಿದರು. ಆ ಕನಸುಗಳು ಅವನ ಹಾಗೂ  ವನ ರಾಜವಂಶ, ರಾಜ್ಯ ಮತ್ತು ಮುಂದಿನ ಭವಿಷ್ಯದಲ್ಲಿ ಜನರಿಗೆ ಹಾನಿಯನ್ನುಂಟುಮಾಡುತ್ತದೆ.


ಆ ಅಪಾಯಗಳನ್ನು ನಿವಾರಿಸಲು ರಾಜನು ಪರಿಹಾರಕ್ಕಾಗಿ ರಾಜ್ಯದೆಲ್ಲೆಡೆ ಪ್ರಮುಖ ವೃತ್ತಗಳು, ಅಡ್ಡ ರಸ್ತೆಗಳಲ್ಲಿ ಹೋಮ, ಹವನ ನಡೆಸಬೇಕು ಎಂದರು. ಅಂತಹ ಎಲ್ಲಾ ಯಜ್ಞಗಳನ್ನು ಮಾಡಿದ ನಂತರ, ನಮಗೆ ಅನ್ನ, ಚಿನ್ನ ಮತ್ತು ಹಣವನ್ನು ದಾನ ಮಾಡಿ. ಇದು ನಿಮ್ಮ ಕನಸಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಒದಗಿಸುತ್ತದೆ ಎಂದರು. ಈ ಬಗ್ಗೆ ಎರಡನೇ ಆಲೋಚನೆ ಮಾಡದ ಬಿಂಬಿಸಾರನು ತನ್ನ ಖಜಾಂಚಿಯನ್ನು ಕರೆದು ಪಂಡಿತರು ಕೇಳಿದ್ದಕ್ಕೆ ಹಣವನ್ನು ಖರ್ಚು ಮಾಡಲು ಆದೇಶಿಸಿದನು.

ಆದರೆ ಬಿಂಬಿಸಾರನ ಪತ್ನಿ, ಪಟ್ಟದ ರಾಣಿ ಕೋಸಲಾ ದೇವಿಯು ಈ ವಿಷಯ ತಿಳಿದು ತನ್ನ ಪತಿಗೆ ಹಣವನ್ನು ಖರ್ಚು ಮಾಡದಂತೆ ಎಚ್ಚರಿಸಿದಳು. ಈ ಕೋಸಲ ದೇವಿಯು ಕೋಸಲದ ರಾಜ ಮಹಾ-ಕೋಸಲನಿಗೆ ಜನಿಸಿದವಳು.  ವಳು ತನ್ನ ತಂದೆಯ ನಂತರ ಕೋಸಲದ ಆಡಳಿತಗಾರನಾದ ಪ್ರಸೇನಜಿತ್ ರಾಜನ ಸೋದರಿ.  ವಳು ರಾಜ ಬಿಂಬಿಸಾರನನ್ನು ಮದುವೆಯಾಗಿದ್ದಳು ಮತ್ತು ಮದುವೆಯಲ್ಲಿ ಕಾಶಿ ರಾಜ್ಯವನ್ನು ಕೊಡುಗೆಯಾಗಿ ತಂದಿದ್ದಳು. ಆಕೆ "ಈ ಬ್ರಾಹ್ಮಣರಿಗೆ ಸಾಕಷ್ಟು ಜ್ಞಾನವಿಲ್ಲ ಮತ್ತು ಸಂಪೂರ್ಣ ಜ್ಞಾನಿಯಾಗಿರುವ ಬುದ್ಧ, ಪ್ರಸ್ತುತ ಭಾರತದಲ್ಲಿದ್ದಾನೆ." ಎನ್ನುತ್ತಾಳೆ. ಬುದ್ಧನು ಮಗಧದ 31, 32 ಮತ್ತು 33 ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಸಮಕಾಲೀನನಾಗಿದ್ದನು. ಬುದ್ಧನನ್ನು ಭೇಟಿ ಮಾಡಲು ಮತ್ತು ಬಿಂಬಿಸಾರನು ತನ್ನ ಕನಸುಗಳನ್ನು ಅವನೊಂದಿಗೆ ಹಂಚಿಕೊಳ್ಳಲು ರಾಣಿ ಕೇಳುತ್ತಾಳೆ. ಬುದ್ಧನು ಈ ಯಜ್ಞಗಳನ್ನು ಶಿಫಾರಸ್ಸು ಮಾಡಿದರೆ ಮಾತ್ರ ರಾಜನು ಅವುಗಳನ್ನು ನಡೆಸಬೇಕು ಎನ್ನುತ್ತಾಳೆ. ಬಿಂಬಿಸಾರ ಇದಕ್ಕೆ ಒಪ್ಪಿ ಬುದ್ಧನನ್ನು ಬಿಕ್ಷೆಗಾಗಿ ತನ್ನ ಅರಮನೆಗೆ ಆಹ್ವಾನಿಸುತ್ತಾನೆ.

ರಾಜನು  ತನ್ನ ಕನಸುಗಳನ್ನು ವಿವರಿಸುತ್ತಾನೆ ಮತ್ತು ಬುದ್ಧ ಪ್ರತಿಯೊಂದನ್ನು ಅರ್ಥೈಸುತ್ತಾನೆ, ಅವುಗಳಲ್ಲಿ ಯಾವುದೂ ರಾಜನಿಗೆ ಅಥವಾ  ಅವನ ಇಂದಿನ ಪೀಳಿಗೆಗೆ ಸಂಬಂಧಿಸಿಲ್ಲ ಎಂದು ಹೇಳುತ್ತಾನೆ. ಈ ಎಲ್ಲಾ ಕನಸುಗಳು ಭವಿಷ್ಯದವು ಎಂದಾಗ ಬಿಂಬಿಸಾರ ನಿರಾಳನಾಗುತ್ತಾನೆ.

ಮೊದಲ ಕನಸಿನಲ್ಲಿ, ಬಿಂಬಿಸಾರನು 4 ಗೂಳಿಗಳು ನನ್ನ ಅರಮನೆಯನ್ನು ಕೋಪದಿಂದ ಪ್ರವೇಶಿಸುವುದನ್ನು ನೋಡಿದನು. ಅವು ಕೋಪದಲ್ಲಿ ಕಾಳಗ ಮಾಡುತ್ತವೆ ಎಂದು ಭಾವಿಸಿದನು. ಆದರೆ ಅವು ಇದ್ದಕ್ಕಿದ್ದಂತೆ ಶಾಂತವಾದವು. ಮತ್ತು ಮೌನವಾಗಿ ಹಿಂದಕ್ಕೆ ಹೋದವು.  ಈ ಕನಸಿಗೂ ವರ್ತಮಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬುದ್ಧ ವಿವರಿಸುತ್ತಾನೆ. ಭವಿಷ್ಯದಲ್ಲಿ, ಆಡಳಿತಗಾರರು ದುಷ್ಟರಾಗುತ್ತಾರೆ ಮತ್ತು ಪರಿಣಾಮವಾಗಿ, ಮಳೆಗಾಲದಲ್ಲಿ ಮೋಡಗಳು ಆಗಸದಲ್ಲಿ ಕಾಣಿಸಿಕೊಂಡಾಗ ಜನ ಮಳೆಯು ಸುರಿಯಲಿದೆ ಎಂದು ಭಾವಿಸುತ್ತಾರೆ ಆದರೆ ಎಲ್ಲಾ ಮೋಡಗಳು ಮಳೆ ಸುರಿಸದೆ ಹಾಗೇ ಹಾರಿ ಹೋಗುತ್ತದೆ, ಜನರು ನಿರಾಶರಾಗುತ್ತಾರೆ.

ಎರಡನೇ ಕನಸಿನಲ್ಲಿ ಬಿಂಬಿಸಾರನು ಕೆಲವು ಸಸ್ಯಗಳು ಮಣ್ಣಿನಲ್ಲಿ ಬೆಳೆಯುತ್ತಿರುವುದನ್ನು ನೋಡಿದನು ಮತ್ತು ಪೂರ್ಣವಾಗಿ ಬೆಳೆಯುವ ಮುನ್ನವೇ ಹೂವು ಅರಳಿತು,, ಹಣ್ನಾಗಿತ್ತು.  ಇದರಂತೆ  ಭವಿಷ್ಯದಲ್ಲಿ, ರಾಜರ ದುಷ್ಕೃತ್ಯಗಳಿಂದಾಗಿ, ಮಹಿಳೆಯರು ಬಾಲ್ಯದಲ್ಲಿ ಮದುವೆಯಾಗುತ್ತಾರೆ ಮತ್ತು ಅವರು ಸರಿಯಾದ ಪ್ರೌಢಾವಸ್ಥೆಯನ್ನು ತಲುಪುವ ಮೊದಲು ಮಕ್ಕಳನ್ನು ಹೊಂದುತ್ತಾರೆ ಎಂದು ಬುದ್ಧ ವಿವರಿಸಿದರು. ವಿದೇಶಿಗರ (ಮುಸ್ಲಿಮರ)  ಆಕ್ರಮಣ ನಡೆಯುವವರೆಗೂ ಬಾಲ್ಯವಿವಾಹಗಳು ಪ್ರಾಚೀನ ಭಾರತದಲ್ಲಿ ಇರಲಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಮೂರನೇ  ಕನಸಿನಲ್ಲಿ ಹಸುಗಳು ಕರುಗಳಿಂದ ಹಾಲು ಕುಡಿಯುವುದನ್ನು ಕಂಡನು. ಭವಿಷ್ಯದಲ್ಲಿ ವಯಸ್ಸಾದವರು ‘ವಾನಪ್ರಸ್ಥ’ಕ್ಕೆ ಹೋಗುವ ಬದಲು ಮನೆಯಲ್ಲಿಯೇ ಇರುತ್ತಾರೆ ಮತ್ತು ತಮ್ಮ ಆಹಾರ ಮತ್ತು ಯೋಗಕ್ಷೇಮಕ್ಕಾಗಿ ಕಿರಿಯರನ್ನು ಅವಲಂಬಿಸಿರುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ. ತಂದೆ ತಾಯಿಗಳು ವಾನಪ್ರಸ್ಥಕ್ಕೆ ತೆರಳುವ ಸಂಪ್ರದಾಯ  ಇಕ್ಷ್ವಾಕು ವಂಶದಲ್ಲಿ ದಶರಥನು ಮನೆಯಲ್ಲಿ ಸಾಯುವವರೆಗೂ ಇತ್ತು. ಆಗಿನ ಕಾಲದಲ್ಲಿ ವೃದ್ಧರು ತೀರ್ಥಯಾತ್ರೆಗೆ ಹೋಗಿ ತಾವಾಗಿಯೇ ಬದುಕುವಷ್ಟು ಸದೃಢರಾಗಿದ್ದರು.

ನಾಲ್ಕನೇ ಕನಸಿನಲ್ಲಿ, ರೈತರು ಆರೋಗ್ಯಕರ ಮತ್ತು ಬಲವಾದ ಎತ್ತುಗಳ ಬದಲು  ಹೊಲಗಳನ್ನು ಉಳುಮೆ ಮಾಡಲು ಕರುಗಳನ್ನು ಬಳಸುತ್ತಿದ್ದರು.

ಭ್ರಷ್ಟ ರಾಜರು ದಕ್ಷ ಮಂತ್ರಿಗಳನ್ನು ತೆಗೆದುಹಾಕುತ್ತಾರೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿರುವ ಯುವಕರನ್ನು ಆ ಸ್ಥಾನಗಳಲ್ಲಿ ನೇಮಿಸಿಕೊಳ್ಳುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ.

ಐದನೇ ಕನಸಿನಲ್ಲಿ, ಮುಂಭಾಗ ಮತ್ತು ಹಿಂಭಾಗದಲ್ಲಿ 2 ತಲೆಗಳನ್ನು ಹೊಂದಿರುವ ಕುದುರೆಯು ಎರಡೂ ಕಡೆಗಳಿಂದ ಹುಲ್ಲು ತಿನ್ನುತ್ತಿತ್ತು. ಭವಿಷ್ಯದಲ್ಲಿ, ನ್ಯಾಯಾಧೀಶರು ಎರಡೂ ಪಕ್ಷಗಳಿಂದ ಲಂಚವನ್ನು ತೆಗೆದುಕೊಳ್ಳುತ್ತಾರೆ ಮತ್ತು ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಗೌತಮ ಬುದ್ಧ ವಿವರಿಸುತ್ತಾನೆ.

ಆರನೇ ಕನಸಿನಲ್ಲಿ, ಒಬ್ಬ ಮನುಷ್ಯನು ಹಗ್ಗವನ್ನು ನೇಯುತ್ತಿದ್ದಾನೆ ಮತ್ತು ನೆಲದ ಮೇಲೆ ನೇಯ್ದ ಭಾಗವನ್ನು ಹೆಣ್ಣು ನರಿ ತಿನ್ನುತ್ತಿರುತ್ತದೆ. ದುಷ್ಟ ಮಹಿಳೆಯರು ತಮ್ಮ ಗಂಡನ ದುಡಿಮೆಯ ಹಣವನ್ನು ತಕ್ಷಣವೇ ಖರ್ಚು ಮಾಡುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ.

ಏಳನೇ ಕನಸಿನಲ್ಲಿ, ದೊಡ್ಡ ಮಡಕೆಯನ್ನು ಅರಮನೆಯ ಹೊರಗೆ ಇಡಲಾಗುತ್ತದೆ. ಅದರ ಸುತ್ತಲೂ ಅನೇಕ ಸಣ್ಣ ಖಾಲಿ ಮಡಕೆಗಳಿವೆ. ಮಹಿಳೆಯರು ನೀರು ತುಂಬಿದ ಮಡಕೆಗಳೊಂದಿಗೆ ನಡೆದು  ದೊಡ್ಡ ಮಡಕೆಗೆ ಸುರಿಯಲು ಪ್ರಾರಂಭಿಸುತ್ತಾರೆ.

ಅದು ಉಕ್ಕಿ ಹರಿಯಲು ಪ್ರಾರಂಭಿಸಿದ ನಂತರವೂ, ಮಹಿಳೆಯರು ಅದರಲ್ಲಿ ನೀರನ್ನು ಸುರಿಯುತ್ತಾರೆ ಆದರೆ ಸುತ್ತಲಿನ ಖಾಲಿ ಮಡಕೆಗಳನ್ನು ನಿರ್ಲಕ್ಷಿಸುತ್ತಾರೆ.

ಭವಿಷ್ಯದಲ್ಲಿ ಅಧರ್ಮವು ಹೆಚ್ಚಾದಾಗ ಆಡಳಿತಗಾರರು ಪ್ರಜೆಗಳ ಮೇಲೆ ಭಾರಿ ತೆರಿಗೆ ವಿಧಿಸುತ್ತಾರೆ ಎಂದು ಬುದ್ಧ ಹೇಳುತ್ತಾನೆ. ಜನರು ಖಜಾನೆಯನ್ನು ತುಂಬುತ್ತಾರೆ ಮತ್ತು ತಮ್ಮ ಬಳಿ ಹಣವಿಲ್ಲದೆ ಕಷ್ಟಪಡುತ್ತಾರೆ ಎನ್ನುತ್ತಾನೆ ಬುದ್ದ.

ಎಂಟನೇ ಕನಸಿನಲ್ಲಿ, ರಾಜನು ಅಕ್ಕಿ ಬೇಯಿಸುವ ಪಾತ್ರೆಯನ್ನು ನೋಡಿದನು. ಅಕ್ಕಿಯ ಒಂದು ಭಾಗವು ಬೆಂದಿದ್ದರೆ ಇನ್ನೊಂದು ಭಾಗ ಸರಿಯಾಗಿ ಬೆಂದಿರುವುದಿಲ್ಲ.  ಭ್ರಷ್ಟ ಮತ್ತು ಅಸಮರ್ಥ ರಾಜರು ಪ್ರವಾಹ ಮತ್ತು ಕ್ಷಾಮಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಬುದ್ಧ ಹೇಳುತ್ತಾನೆ. ಪಾತ್ರೆಯಲ್ಲಿರುವ ಅಕ್ಕಿ ಕೃಷಿಯನ್ನು ಸೂಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಅತಿವೃಷ್ಟಿಯು ಬೆಳೆಗಳನ್ನು ನಾಶಪಡಿಸುತ್ತದೆ, ಆದರೆ ಕೆಲವು ಪ್ರದೇಶಗಳಲ್ಲಿ ಮಳೆಯಿಲ್ಲದೆ ಬರಗಾಲಕ್ಕೆ ಕಾರಣವಾಗುತ್ತದೆ. ಸರಿಯಾದ ಆಹಾರ ಉತ್ಪಾದನೆಯನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಬಹುದು.

ಒಂಬತ್ತನೇ ಕನಸಿನಲ್ಲಿ, ರಾಜನು  ಬೀದಿಗಳಲ್ಲಿ ಶ್ರೀಗಂಧವನ್ನು ಮಾರುವ ಜನರನ್ನು ಕಂಡರು. ಭವಿಷ್ಯದಲ್ಲಿ ಕೆಲವು ಜನರು ಹಣ ಮತ್ತು ಸೌಕರ್ಯಗಳ ವಿನಿಮಯಕ್ಕಾಗಿ ಪವಿತ್ರ ಜ್ಞಾನ ಮತ್ತು ಉಪದೇಶಗಳನ್ನು ಮಾರಾಟ ಮಾಡುತ್ತಾರೆ ಎಂದು ಬುದ್ಧ ಹೇಳುತ್ತಾನೆ.

ಹತ್ತನೇ ಕನಸಿನಲ್ಲಿ, ನೀರಿನ ಮೇಲೆ ಭಾರವಾದ ಕಲ್ಲುಗಳು ತೇಲುತ್ತಿರುವುದನ್ನು ಕಂಡನು. ಹನ್ನೊಂದನೇ ಕನಸಿನಲ್ಲಿ, ಹಂಸಗಳ ಗುಂಪು ಕಾಗೆಯನ್ನು ಹಿಂಬಾಲಿಸಿತು. ಹನ್ನೆರಡನೇ ಕನಸಿನಲ್ಲಿ, ಆಡುಗಳು ಹುಲಿಗಳನ್ನು ಬೇಟೆಯಾಡಿದವು ಮತ್ತು ಇದನ್ನು ನೋಡಿ ತೋಳಗಳು ಭಯದಿಂದ ನಡುಗಿದವು.

ಇವೆಲ್ಲವೂ ಭವಿಷ್ಯವನ್ನು ಸೂಚಿಸುವ ನಸುಗಳು ಎಂದು ಬುದ್ಧ ಹೇಳುತ್ತಾನೆ. ಭ್ರಷ್ಟ ಆಡಳಿತಗಾರರಿಂದ ಮನ್ನಣೆಯ ಕೊರತೆಯಿಂದ ಹೆಚ್ಚಿನ ಪ್ರತಿಭಾವಂತ ಮತ್ತು ಬುದ್ಧಿವಂತ ಪುರುಷರು ಸಮಯದೊಂದಿಗೆ ಸರಿದು ಹೋಗುತ್ತಾರೆ.  ದುಷ್ಟ ಜನರು ಅಧಿಕಾರವನ್ನು ಪಡೆಯುತ್ತಾರೆ, ಇದು ಅರ್ಹ ವ್ಯಕ್ತಿಗಳು ಅವರ ಆದೇಶಗಳನ್ನು ಅನುಸರಿಸುವಂತೆ ಮಾಡುತ್ತದೆ. ಹೆಚ್ಚಿನ ಅನರ್ಹರು ಅಧಿಕಾರವನ್ನು ಪಡೆದಾಗ, ಅತ್ಯಂತ ಶಕ್ತಿಶಾಲಿ ಮತ್ತು ಒಳ್ಳೆಯ ಪುರುಷರು ಸಹ ಅವರಿಗೆ ಭಯಪಡಬೇಕಾಗುತ್ತದೆ. ಅವರೂ ಹೊರನಡೆಯಬೇಕಾಗುವುದು.

ಈ ಕನಸಿನ ವ್ಯಾಖ್ಯಾನಗಳನ್ನು ಆಲಿಸಿದ ರಾಜ ಬಿಂಬಿಸಾರನು ತನ್ನ ಹವನ ಯೋಜನೆಗಳನ್ನು ಕೈಬಿಡುತ್ತಾನೆ.  ಗೌತಮ ಬುದ್ಧನಿಗೆ ಬಿಕ್ಷೆಯನ್ನು ಅರ್ಪಿಸುತ್ತಾನೆ.

ಈ ಪ್ರಸಂಗವು ಗೌತಮ ಬುದ್ಧನ 'ಜಾತಕ ಕಥೆಗಳು' ಭಾಗಗಳಲ್ಲಿ ದಾಖಲಾಗಿದೆ.

Monday, October 17, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 116

  ಮುಜಂಗಾವು  (Mujungavu)


ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯಲ್ಲಿದೆ ಮುಜಂಗಾವು ಪಾರ್ಥಸಾರಥಿ ದೇವಾಲಯ ನಾಡಿನೆಲ್ಲೆಡೆಯ ಭಕ್ತರ ಶ್ರದ್ದಾಕೇಂದ್ರವಾಗಿದೆ.  ಮುಜುಂಗಾರೆ ಎಂದು ಕರೆಯಲ್ಪಡುವ ಈ ಸ್ಥಳ ತಾಲ್ಲೂಕು ಕೇಂದ್ರ ಕುಂಬಳೆಯಿಂದ ಪೂರ್ವಕ್ಕೆ ಸುಮಾರು 5 ಕಿಮೀ ದೂರದಲ್ಲಿದೆ.  ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆಯಿಂದ ಬದಿಯಡ್ಕದ ಕಡೆಗೆ ತೆರಳುವ ರಸ್ತೆಯಲ್ಲಿ ೩ ಕಿ.ಮೀ. ಸಂಚರಿಸಿದಾಗ ಸಿಕ್ಕುವ ನಯ್ಯಾಪು ಎನ್ನುವ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ದೇವಾಲಯದಲ್ಲಿ ಪಾರ್ಥಸಾರಥಿ ಹೆಸರಿನಿಂದ ಕೃಷ್ಣನನ್ನು ಆರಾಧಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಚರ್ಮ ರೋಗದ ಪರಿಹಾರಕ್ಕಾಗಿಯೇ ಬರುತ್ತಾರೆ. ಚರ್ಮರೋಗವಿದ್ದಾಗ ದೇವಸ್ಥಾನಕ್ಕೆ ಆಗಮಿಸಿ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡು ಹರಕೆ ಹೇಳಿಕೊಳ್ಳಬೇಕು.  ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚರ್ಮರೋಗ ನಿವಾರಣೆ ಆಗಲು ಇಲ್ಲಿನ ಕೆರೆಯೇ ಕಾರಣ ಎಂದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ ದೇವರ ಮುಂದೆ ನಿಂತು ಹರಕೆ ಕಟ್ಟಿಕೊಳ್ಳುವ ಭಕ್ತರು ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡಲೇ ಬೇಕು. ಇನ್ನು ಈ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳಿದ್ದು, ಹರಕೆ ಹೇಳಿಕೊಳ್ಳುವ ಭಕ್ತರು ಮೀನುಗಳಿಗೆ ದೇವಸ್ಥಾನದಿಂದ ನೀಡಲಾಗುವ ಅಕ್ಕಿ ಹಾಗೂ ಹುರುಳಿಯನ್ನು ನೀಡುತ್ತಾರೆ. ಕೆರೆಗೆ ಸುತ್ತು ಬರುತ್ತಾ ಕೆರೆಗೆ ಹುರುಳಿ, ಅಕ್ಕಿ ಹಾಕುವ ಮೂಲಕ ಪ್ರದಕ್ಷಿಣೆ ಮುಗಿಸಿ ಕೆರೆಯಲ್ಲಿ ಮಿಂದೆದ್ದು ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ತುಲಾ ಸಂಕ್ರಮಣದ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದಲ್ಲಿ ಸೇರುತ್ತಾರೆ. ಅವರು ಪವಿತ್ರ ಕೆರೆಯಲ್ಲಿ  ಸ್ನಾನ ಮಾಡಿ ಭಗವಂತನನ್ನು ಪೂಜಿಸುತ್ತಾರೆ.  

****

ಸೂರ್ಯವಂಶದ ಮಾಂಧಾತ ರಾಜನ ಪುತ್ರನಾದ ಮುಚಕುಂದನು ಪ್ರಬಲನಾಗಿದ್ದರಿಂದ  ದೇವತೆಗಳೂ ಸಹ ಅವನ ನೆರವು ಯಾಚಿಸುತ್ತಿದ್ದರು. ಮುಚಕುಂದನ ಪರಾಕ್ರಮಕ್ಕೆ ಸೋತ ದೇವತೆಗಳು ಹಲವಾರು ಯುದ್ಧಗಳಲ್ಲಿ ಅವನನ್ನು ತಮ್ಮ ಸೇನಾಪತಿಯನ್ನಾಗಿಸಿಕೊಂಡಿದ್ದರು. 

ಆದರೆ ದೇವತೆಗಳ ಸೇನಾಪತಿ ಅಧಿಕಾರವನ್ನು ಮುಚಕುಂದನು ಸುಬ್ರಹ್ಮಣ್ಯನಿಗೆ ಬಿಟ್ಟುಕೊಟ್ಟು ತಾನು ಇಂದಿನ ಮುಜಂಗಾವುವಿನಲ್ಲಿನ ಪ್ರಶಾಂತ ಸ್ಥಳದಲ್ಲಿ ತಪಸ್ಸನ್ನು ಆಚರಿಸತೊಡಗಿದ. ಆ ಸಮಯ ಶ್ರೀಕೃಷ್ಣನೊಮ್ಮೆ ವಿಹಾರದಲ್ಲಿದ್ದ ವೇಳೆ ಈ ಪ್ರದೇಶಕ್ಕೆ ಬಂದಾಗ ಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದ ಮುಚಕುಂದನನ್ನು ಕೃಷ್ಣ ಎಂದು ಭ್ರಮಿಸಿ ಕಾಲಿನಿಂದ ಒದ್ದನು. ಆಗ ತಪೋಭಂಗವಾಗಿ ಮುಚಕುಂದ ಕಣ್ತೆರೆಯಲು ಕಾಲಯವನನು ಭಸ್ಮವಾಗಿ ಹೋದನು.  ಆಗ ಮುಚಕುಂದನೆದುರು ಶ್ರೀಕೃಷ್ಣನು ಪ್ರತ್ಯಕ್ಷನಾಗಲು ಮುಚಕುಂದ ಆತನಿಗೆ ಮುಳ್ಳುಸೌತೆಯನ್ನು ಸಮರ್ಪಿಸಿದನು. 

ಅಂದಿನಿಂದ ಇಂದಿಗೂ ಇಲ್ಲಿ ಶ್ರೀದೇವರಿಗೆ ಮುಳ್ಳುಸೌತೆ ಸಮರ್ಪಣೆ ವಿಶೇಷವೆನಿಸಿದೆ. ಕೃಷ್ಣನನ್ನು ಕರೆದು ಪ್ರಾರ್ಥಿಸಿದ ಕಾರಣದಿಂದ ಈ ಪ್ರದೇಶ, ಕೆರೆಗೆ ’ಮುಚಕುಂದ ಕೆರೆ’ ಎಂದು ಹೆಸರಾಗಿದೆ. ಅದೇ ಮುಂದೆ ಜನರ ಬಾಯಲ್ಲಿ ’ಮುಜುಂಗೆರೆ’ ಎಂದು ಆಗಿದ್ದಾಗಿ ಹೇಳಲಾಗುತ್ತದೆ. ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಿಂದ ಈ ಕೆರೆಗೆ ಗುಪ್ತ ಸಂಪರ್ಕವಿದೆ, ಕಾವೇರಿಯು ಇಲ್ಲಿಗೆ ಗುಪ್ತಗಾಮಿನಿಯಾಗಿ ಬರುತ್ತಾಳೆನ್ನ್ಫ಼ುವುದು ಭಕ್ತರ ನಂಬಿಕೆ.


Thursday, September 08, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 115

 ಪೆರ್ಡೂರು ಅನಂತಪದ್ಮನಾಭ (Perdur)

ಉಡುಪಿ ಜಿಲ್ಲೆ ಹಲವಾರು ದೇವಾಲಯ, ಪ್ರವಾಸಿ ತಾಣಗಳ ಆಗರ. ಅದರಲ್ಲಿ ಪೆರ್ಡೂರು ಸಹ ಒಂದು  ಪೆರ್ಡೂರು. ಉಡುಪಿ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ   ಆಗುಂಬೆಗೆ ಹೋಗುವ ರಾಜ್ಯ ರಸ್ತೆಯಲ್ಲಿ ಹಾಗೆಯೇ ಆಗುಂಬೆಯಿಂದ 32 ಕಿ.ಮೀ. ದೂರದಲ್ಲಿ ಉಡುಪಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಈ ಪುಣ್ಯಕ್ಷೇತ್ರ ಪೆರ್ಡೂರು. ಉಡುಪಿ ತಾಲೂಕಿನಲ್ಲಿ ಗಾತ್ರದಲ್ಲಿ ಅತೀ ದೊಡ್ಡ ಗ್ರಾಮವಾದ ಪೆರ್ಡೂರು ಬ್ರಹ್ಮಾವರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೂ ಉಡುಪಿ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಸೇರಿದೆ.ಯಕ್ಷಗಾನದಲ್ಲಿ ಪೆರ್ಡೂರು ಮೇಳೆ ಹೆಸರುವಾಸಿಯಾಗಿದ್ದು ಪೆರ್ಡೂರು ಅನಂತ ಪದ್ಮನಾಭ ಸ್ವಾಮಿ ದೇವಾಲಯವೂ ಸಹ ಇಲ್ಲಿನ ವಿಶೇಷ ಆಕರ್ಷಣೆ. ಇಲ್ಲಿ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ನಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.  ಇಂದು(ಸೆಪ್ಟೆಂಬರ್ 9) ಶ್ರೀ ಅನಂತಪದ್ಮನಾಭ ವ್ರತವಿರುವುದರಿಂದ ಪೆರ್ಡೂರು ಕ್ಷೇತ್ರದ ಪುರಾಣೇತಿಹಾಸದ ಕುರಿತು ಇಲ್ಲೊಂದು ಬರಹ.

***

‘ಪೇರ್ ಉಂಡು ಊರು’ - ಪೇರುಂಡೂರು - ಪೆರುಡೂರು - ಪೆರ್ಡೂರು ಎನ್ನುವ ಹೆಸರಿಂದ ಕರೆಯಲ್ಪಡುವ ಉಡುಪಿ ಸಮೀಪದ ಪೆರ್ಡೂರು ಕುರಿತಂತೆ ಅದರ ಹೆಸರ ಕುರಿತಂತೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಅದೆಂದರೆ  ತುಳುವಿನಲ್ಲಿ ‘ಪೇರ್’ ಎಂದರೆ ಎತ್ತರ, ‘ಪೆರಿದ್’ ಎಂದರೆ ದೊಡ್ಡದಾದ – ವಿಸ್ತಾರವಾದ – ಅಂದರೆ ವಿಸ್ತಾರವಾದ ಎತ್ತರದಲ್ಲಿರುವ ಊರು – ‘ಪೆರಿದ್ – ಊರು,’ ಪೆರಿದೂರು - ಪೆರ್ದೂರು - ಪೆರ್ಡೂರು ಎಂದು ಕರೆಯಲ್ಪಟ್ಟಿದೆ.  ಇನ್ನೊಂದು ಐತಿಹ್ಯದಂತೆ ಸಾವಿರಾರು ವರ್ಷದ ಹಿಂದೊಮ್ಮೆಇಂದಿನ ಪೆರ್ಡೂರು ಇರುವ ಜಾಗದಲ್ಲಿ  ಹಸುವೊಂದು ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಇದನ್ನು ಕಂಡ ದನಗಾಯಿಯೊಬ್ಬ `ಪೇರ್ ಉಂಡು, ಪೇರ್ ಉಂಡು' (ಹಾಲಿದೆ ಹಾಲಿದೆ) ಎಂದು ಕೂಗಿದ. ಅದೇ ಮುಂದೆ ಪೆರ್ಡೂರು ಎಂದಾಗಿದೆ.


ತುಳುನಾಡೆಂದುಕರೆಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಯ್ಸಳ, ವಿಜಯನಗರ ಸಾಮ್ರಾಟರ ಅಂಕಿತಕ್ಕೊಳಪಟ್ಟು ಕೆಲವಾರು ರಾಜರು ಬಾರಕೂರು, ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಆಳುತ್ತಿದ್ದರು. ಈ ಪೆರ್ಡೂರು ಸೀಮೆ ಬಾರಕೂರಿನ ರಾಜರ ಅಧೀನದಲ್ಲಿತ್ತು. ಪಶ್ಚಿಮ ಘಟ್ಟದ ಕೆಳಗಿನ ನಾಡಾದ ಇದು ಕಾಡಿನಿಂದಾವೃತವಾಗಿತ್ತು. ಕಾಡಿನ ನಡುವೆ ವಿಶೇಷ ಸಾನ್ನಿಧ್ಯವಿರುವ ನಿರ್ವೈರ ಸ್ಥಳದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಗಿದೆ. ಉಡುಪಿಯಿಂದ ಈಶಾನ್ಯದಲ್ಲಿ ಒಂದು ಯೋಜನದೂರದಲ್ಲಿ ‘ಕೋಟಿಕುಂಜ’ವನ್ನು ಆಳುತ್ತಿದ್ದ ರಾಜ ಶಂಕರನು ತನ್ನ ಆಶ್ರಿತನಾದ ಮುನ್ನೂರು ಗ್ರಾಮದ ಕೃಷ್ಣಶರ್ಮನೆಂಬ ಬ್ರಾಹ್ಮಣೋತ್ತಮನು ಕಾಡಿನ ಮಧ್ಯದಲ್ಲಿ ಫಾಲ್ಗುಣ ಮಾಸ ಶುಕ್ಲಪಕ್ಷ ಪ್ರತಿಷ್ಠಾಪಿಸಿದ ಅನಂತಪದ್ಮನಾಭ ಸ್ವಾಮಿಗೆ ಸುಂದರವಾದ ಆಲಯ, ಪ್ರಾಕಾರ, ಕೆರೆ,  ಕಟ್ಟಡಗಳನ್ನು ಕಟ್ಟಿಸಿದ್ದಲ್ಲದೆ ನಿತ್ಯಪೂಜೆಗಾಗಿ ಬಣ್ಣಂಪಳ್ಳಿ ಗ್ರಾಮದಲ್ಲಿ ಉಂಬಳಿಬಿಟ್ಟನೆಂದು ತಿಳಿದುಬರುತ್ತದೆ.


ಬಾರ್ಕೂರು ರಾಜರ ಆಳ್ವಿಕೆ ಕಾಲದಲ್ಲಿ ಕೃಷ್ಣ ಶರ್ಮನೆಂಬ ಬ್ರಾಹ್ಮಣನಿಗೆ ಕನಸಿನಲ್ಲಿ ದೇವರು ಪ್ರತ್ಯಕ್ಷನಾಗಿ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಅನಂತ ಪದ್ಮನಾಭ ಎಂದು ಹೆಸರು ಇಡುವಂತೆ ಹೇಳಿದ ಕಾರಣ, ಇಲ್ಲಿ ಅನಂತ ಪದ್ಮನಾಭ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು ಎನ್ನುವುದು ಪ್ರತೀತಿ. ಈ ದೇವಾಲಯಕ್ಕೆ ಅಂದಿನ ರಾಜರು ಸುಂದರ ದೇಗುಲ, ಧ್ವಜ, ಮರ, ಪಕ್ಕದಲ್ಲೇ ಪದ್ಮತೀರ್ಥವೆಂಬ ಕಲ್ಯಾಣಿಯನ್ನು ನಿರ್ಮಿಸಿದರು. ಇಲ್ಲಿರುವ ತೀರ್ಥದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಹಾಗೂ ಇನ್ನಿತರ ವ್ಯಾಧಿಗಳು ಗುಣವಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆ ಉಂಟು.