Sunday, April 12, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 49

ಬಾದಾಮಿ (Badami)


ಬಾದಾಮಿ ಬನಶಂಕರಿ


ಬಾದಾಮಿ ಎಂದರೆ ನೆನಪಾಗುವುದು ಬಾದಾಮಿ ಬನಶಂಕರಿ ಚಾಲುಕ್ಯರ ಕಾಲದ ಮತ್ತು ಶಿಲ್ಪಕಲಾ ವೈಭವ. ಪುರಾಣ ಕಾಲದಲ್ಲಿ "ವಾತಾಪಿ'' ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರು. ದೇವಾಲಯ 7ನೇ ಶತಮಾನದಲ್ಲೇ ನಿರ್ಮಿತವಾಗಿದ್ದರೂ ಅದನ್ನು 17ನೇ ಶತಮಾನದಲ್ಲಿ ಮರಾಠರಲ್ಲಿ ಪ್ರಮುಖನಾಗಿದ್ದ ಪರಸುರಾಮ್ ಅಗಲೆ ಎಂಬವನು ದುರಸ್ತಿಗೊಳಿಸಿದನು.  ಈ ಪುರಾತನ ದೇವಾಲಯವು ದ್ರಾವಿಡ ಶೈಲಿಯ ವಾಸ್ತು ಶೈಲಿಯನ್ನು ಪ್ರದರ್ಶಿಸುತ್ತದೆ ತಿಲಕಾರಣ್ಯದಲ್ಲಿ ನೆಲೆಸಿಹ ಈ ದೇವಾಲಯವು ಬನ ಮತ್ತು ಶಂಕರಿ ಎಂಬ ಎರಡು ಪದಗಳ ಸಂಯೋಜನೆಯಿಂದ ಹೆಸರನ್ನು ಪಡೆದುಕೊಂಡಿದೆ. ಬನ ಎಂದರೆ ಕಾಡು ಮತ್ತು ಶಂಕರಿ ಎಂದರೆ ಶಿವ ಪ್ರಿಯೆ ಅಥವಾ ಪಾರ್ವತಿಯನ್ನು ಬಣ್ಣಿಸುವ ರೀತಿ. ದೇಶದ ಶಕ್ತಿಪೀಠಗಳಲ್ಲಿ  ಒಂದು ಎನಿಸಿರುವ ಇಲ್ಲಿ ಪುಷ್ಯ ಮಾಸ ಕಾಲಿಡುತ್ತಿದ್ದಂತೆ ಜಾತ್ರೆಯ ಸಡಗರ. ಪ್ರಾರಂಭವಾಗುತ್ತದೆ. ಒಂದು ತಿಂಗಳು ನಡೆಯುವ ಜಾತ್ರೆಗೆ ರಾಜ್ಯದ ಅತಿ ದೊಡ್ಡ ಜಾತ್ರೆ ಎನ್ನುವ ಹಿರಿಮೆ ಇದೆ.

***


ಬಾದಾಮಿ ಬನಶಂಕರಿ ದೇವಾಲಯ
ಈ ಸ್ಥಳದಲ್ಲಿ ರಾಮಾಯಣದಲ್ಲಿ ಬರುವ ವಾತಾಪಿ ಎನ್ನುವ ಹೆಸರಿನ ರಕ್ಕಸನು ನೆಲೆಸಿದ್ದನು. ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಬ್ರಹ್ಮಾದಿ ದೇವತೆಗಳೆಲ್ಲ ಸೇರಿ ತ್ರಿಗುಣಾತ್ಮಿಕಾ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ಶ್ರೀದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಕಾಹಾರದಿಂದ ಸಕಲ ಜಗತ್ತನ್ನು ಕಾಪಾಡಿ ದಳು. ಅವಳ ಕೃಪೆಯಿಂದ ಬರ ನೀಗಿತು, ದಾಹ ತೀರಿತು, ಹಸಿವು ಇಂಗಿತು, ಜಲ ಸಂಪತ್ತಿನಿಂದ ಭೂದೇವಿ ಹಸಿರು ವರ್ಣ ತಾಳಿದಳು. ಎಲ್ಲ ಬನಗಳು ಹಸಿರು ವರ್ಣ ದಿಂದ ನಲಿದವು ಶ್ರೀ ದೇವಿ ಶಾಕಾಂಭರಿ ಎಂದು ಪ್ರಸಿದ್ಧಳಾದಳು.

Thursday, April 09, 2015

ಸತ್ಯಂ ಹಗರಣ: ಏನಿದರ ಸತ್ಯಾಸತ್ಯತೆ?

ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್(ಎಸ್ ಸಿಎಸ್ಎಲ್) ಹಗರಣದ ಪ್ರಮುಖ ಅಪರಾಧಿ ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿ ಹತ್ತು ಮಂದಿ ತಪ್ಪಿತಸ್ಥರಿಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣ ಎನಿಸಿರುವ ಸತ್ಯಂ ಕಂಪ್ಯೂಟರ್ಸ್ ಹಗರಣದ ತೀರ್ಪಿನಿಂದ ಕಾರ್ಪೋರೇಟ್ ವಲಯದ ಮೋಸಗಾರರಿಗೆ ನಡುಕ ಪ್ರಾರಂಭವಾಗಿದೆ.2009,ರಲ್ಲಿ ಸದೇಶವನ್ನು ಬೆಚ್ಚಿಬೀಳುವಂತೆ ಮಾಡಿದ್ದ ಬಹುಕೋಟಿ ಹಗರಣದ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.



ಏನಿದು ಹಗರಣ್?

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ಸಂಸ್ಥಾಪಕ ರಾಮಲಿಂಗರಾಜು 2009, ಜನವರಿ 7ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದೇ ವೇಳೆ ತಾವೇಎಸಗಿದ ತಪ್ಪುಗಳಿಂದ ಪರಿತಾಪಗೊಂಡು ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ ದೇಶದ ಉದ್ಯಮ ವಲಯವು ಬೆಚ್ಚಿ ಬೀಳುವಂತಹಾ ಸತ್ಯ ಸಂಗತಿಗಳಿದ್ದವು.ವೆಚ್ಚಗಳನ್ನು ಮರೆಮಾಚಿ ಕಂಪನಿ ಸಾಕಷ್ಟು ಲಾಭದಾಯಕವಾಗಿದೆ ಎಂದು ತೋರಿಸಲು ಕಂಪನಿಯ ಅಕೌಂಟ್'ನಲ್ಲೇ ಗೋಲ್ಮಾಲ್ ಮಾಡಿಬಿಟ್ಟಿದ್ದೇವೆ ಷೇರುಪೇಟೆಯಲ್ಲಿ ಕಂಪನಿಯ ಷೇರುಗಳು ಕುಸಿಯದರಲೆಂದು ಈ ರೀತಿ ಮಾಡಲಾಗಿತ್ತು. ಏರುತ್ತಿರುವ ವೆಚ್ಚವನ್ನ ಸರಿದೂಗಿಸಲು ತಮ್ಮಿಂದ ಆಗದು; ಇಂಥ ಸ್ಥಿತಿಯಲ್ಲಿ ಮುಂದುವರಿಯಲಾರೆ. ತಮ್ಮಿಂದಾದ ಅವ್ಯವಹಾರಗಳಿಗೆ ದೇಶದ ಕಾನೂನು ಏನು ಶಿಕ್ಷೆ ಕೊಡುತ್ತದೋ, ಅದನ್ನು ಅನುಭವಿಸಲು ಸಿದ್ಧ ಎಂದು ಬಿ.ರಾಮಲಿಂಗ ರಾಜು ತಿಳಿಸಿದ್ದರು.
ಕಾರ್ಪೊರೇಟ್ ಕಂಪನಿಗಳು ತಮ್ಮ ಷೇರುದಾರರಿಗೆ ಹೇಗೆ ವಂಚನೆ ಮಾಡುತ್ತವೆ ಎಂಬ ವಿಷಯ ಇದರಿಂದ ಬಹಿರಂಗವಾಗಿತ್ತು. ಹಗರಣ ಬಹಿರಂಗವಾಗುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್'ನ ಷೇರುಗಳ ಬೆಲೆ 544 ರೂಪಾಯಿಯಿಂದ  11.50 ರೂಗೆ ಕುಸಿದುಹೋಗಿತ್ತು.. ಕೇಂದ್ರ ಸರ್ಕಾರದ ಕಂಪನಿ ಕಾನೂನು ಮಂಡಳಿಯು ಸತ್ಯಂ ಕಂಪ್ಯೂಟರ್ಸ್'ನ ಆಡಳಿತ ಮಂಡಳಿಯನ್ನೇ ಅನೂರ್ಜಿತಗೊಳಿಸಿ 10 ನಾಮಾಂಕಿತ ನಿರ್ದೇಶಕರನ್ನ ನೇಮಿಸಿತ್ತು.

ರಾಮಲಿಂಗರಾಜು ಯಾರು?

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ಸಂಸ್ಥಾಪಕ ರಾಮಲಿಂಗರಾಜು
ಸತ್ಯಂ ಬಹುಕೋಟಿ ಹಗರಣದ ಆರೋಪಿಯಾದ ರಾಮಲಿಂಗರಾಜು ಹಾರ್ವರ್ಡ್‌ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪವೆದು ಬಂದವರು.ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಲೆದೋರಿದ್ದ 'ವೈ2ಕೆ' ಬಿಕ್ಕಟ್ಟಿಗೆ ಸಾಫ್ಟ್‌ವೇರ್ ಮೂಲಕ ಪರಿಹಾರ ಒದಗಿಸಿ ಸುದ್ದಿಯಾಗಿದ್ದರು.
ರಾಮಲಿಂಗರಾಜು ಶ್ರೀ ಸತ್ಯಂ ಹೆಸರಿನಲ್ಲಿ ಸಣ್ಣ ನೂಲಿನ ಮತ್ತು ನೇಯ್ಗೆ ಗಿರಣಿ ಮೂಲಕ ಉದ್ಯಮ ಜೀವನ ಆರಂಭಿಸಿದ್ದರು..1987ರಲ್ಲಿ ಸ್ಥಾಪಿಸಿದ ಸತ್ಯಂ ಅನ್ನು ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಕಂಪನಿಯಾಗಿ ರೂಪಿಸಿದ್ದರು.
ವೈ2ಕೆ ವೈರಸ್ ವಿಶ್ವ ಮಟ್ಟದಲ್ಲಿ ಕಂಪ್ಯೂಟರ್ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ ಎಂಬ ವ್ಯಾಪಕ ಆತಂಕ ಮತ್ತು ಭೀತಿ ಸೃಷ್ಟಿಯಾಗಿದ್ದ ಸಮಯದಲ್ಲಿ ಕಂಪ್ಯೂಟರ್ ಸಿಸ್ಟಂ 1900ನೇ ಇಸವಿಯಿಂದ 2000ನೇ ಇಸವಿಯ ವರ್ಷವನ್ನು ಗುರುತಿಸುತ್ತಿರಲಿಲ್ಲ.ಇದಕ್ಕೆ ಸಾಫ್ಟ್‌ವೇರ್ ಒದಗಿಸಿಕೊಟ್ಟದ್ದು ರಾಜು ಅವರ ಆಗ್ಗಳಿಕೆ.

ಹಗರಣ ಅಂಕಿ ಸಂಕಿಗಳಲ್ಲಿ

ಸತ್ಯಂ ಬಹುಕೋಟಿ ಹಗರಣದ ಒಟ್ಟೂ  ಮೊತ್ತ - 7000 ಕೋಟಿ ರೂ.
ಹಗರಣಾದಿಂದ ಹೂಡಿಕೆದಾರರು ಅನುಭವಿಸಿದ ನಷ್ಟ  - 14000 ಕೋಟಿ ರೂ.
ರಾಮಲಿಂಗರಾಜು ಮತ್ತು ಅವರ ಕುಟುಂಬದವರು ಗಳಿಸಿದ ಲಾಭ 1900 ಕೋಟಿ ರೂ

ಸತ್ಯಂ ಹಗರಣ ನಡೆದು ಬಂದ ದಾರಿ

ಸತ್ಯಂ ಕಂಪ್ಯೂಟರ್ಸ್ ಹಗರಣದ ಪ್ರಮುಖ ಘಟನಾವಳಿಗಳು ಇಲ್ಲಿದೆ-

  • ಜನವರಿ 7, 2009 - ಸಂಸ್ಥೆಯ ಆಡಳಿತ ಮಂದಳಿಗೆ ಪತ್ರ ಬರೆದು ಬಹುಕೋಟಿ ಅವ್ವ ವಹಾರದ ಕುರಿತು ರಾಮಲಿಂಗರಾಜು ತಪೊಪ್ಪಿಗೆ.
  • ಜನವರಿ 9, 2009 - ಸತ್ಯಂ ಸ್ಥಾಪಕ ರಾಮಲಿಂಗರಾಜು ಬಂಧನ
  • ಫೆಬ್ರವರಿ 17 2009 - ಹಗರಣದ ಸಂಪೂರ್ಣ ತನಿಖೆ ಜವಾಬ್ದಾರಿಯನ್ನು  ಸಿಬಿಐ ಗೆ ವರ್ಗಾವಣೆ ಮಾದಲಾಯಿತು.
  • ಏಪ್ರಿಲ್ 4, 2009 - ಸಿಬಿಐ ನಿಂದ ಮೊದಲ ಚಾರ್ಜ್ ಷೀಟ್ ಸಲ್ಲಿಕೆ
  • ಏಪ್ರಿಲ್ 13, 2009 - ಟೆಕ್ ಮಂಹೀಂದ್ರಾದಿಂದ ಸತ್ಯಂ ಸಂಸ್ಥೆ ಖರೀದಿ.
  • ಅಕ್ಟೋಬರ್ 25, 2012 - ನ್ಯಾಯಾಲಯವು ರಾಮಲಿಂಗರಾಜು ತಪ್ಪಿತಸ್ಥನೆಂದು ತೀರ್ಪು ನೀಡಿತು.
  • ಜನವರಿ 9, 2014 - ರಾಮಲಿಂಗರಾಜು ಹಾಗೂ ಕುಟುಂಬದವರು ತಪ್ಪಿತಸ್ಥರೆಂದು ಆರ್ಥಿಕ ಅವ್ಯವಹಾರಗಳ ನ್ಯಾಯಾಲಯದಿಂದ ತೀರ್ಪು.
  • ಏಪ್ರಿಲ್ 9, 2015 - ಸಿಬಿಐ ತನಿಖೆ ಪೂರ್ಣಗೊಂಡ ಹಿನ್ನೆಲೆ, ರಾಮಲಿಂಗರಾಜು ಸೇರಿ 10 ಮಂದಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟ

Thursday, April 02, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -48

ದೇವರಾಯನ ದುರ್ಗ (Devarayana Durga)

ಮನಮೋಹಕ ಪರಿಸರ, ಕಾನನ, ಹಸಿರಿನ ಸೊಬಗಿನ ಸಿರಿಯ ನಡುವೆ ಇರುವ ತಾಣ ತುಮಕೂರು ಜಿಲ್ಲೆಯ ದೇವರಾಯನ ದುರ್ಗ. ರಾಜ್ಯದ ಪ್ರಮುಖ ಪ್ರವಾಸೀ ತಾಣವಾಗಿರುವ ಇದು ದೇವಾಲಯಗಳು, ಜಯತೆಗೆ ಗಿರಿಸೌಂದರ್ಯವನ್ನೂ ಹೊಂದಿದೆ. ಇಲ್ಲಿನ ನರಸಿಂಹ ದೇವರ ಜಾತ್ರೆ ಸಹ ಬಹು ಪ್ರಸಿದ್ದವಾದದ್ದು.

ದೇವರಾಯನ ದುರ್ಗ

ದೇವಲೋಕದಲ್ಲಿ ದೇವದತ್ತ ಹಾಗೂ ಧನಂಜಯ ಎನ್ನುವ ಗಂಧರ್ವ ಸಹೋದರರು ಭೃಗು ಮಹರ್ಷಿಗಳ ಶಾಪಕ್ಕೆ ತುತ್ತಾಗಿಒಬ್ಬನು ಆನೆಯ ರೂಪದಲ್ಲಿ, ಇನ್ನೊಬ್ಬನು ಗಿರಿಯ ರೂಪದಲ್ಲಿ ಜನ್ಮಿಸಿದರು. ಅವರು ಈಗಿನ ದೇವರಾಯನ ದುರ್ಗದಲ್ಲಿ ಬಹುಕಾಲ ತಪವನ್ನಾಚರಿಸಿದ ಕಾರಣ ಈ ಕ್ಷೇತ್ರ "ಕರಿಗಿರಿ" ಎಂದು ಪ್ರಸಿದ್ದವಾಗಿತ್ತು.

ಇಲ್ಲಿ ಬ್ರಹ್ಮದೇವರು ಸ್ವತಃ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಪ್ರತಿಷ್ಟಾಪಿಸಿ ಪೂಜಿಸಿದ್ದರು. ಅದೇ ನರಸಿಂಹ ಸ್ವಾಮಿ ದೇವಾಲಯವು ಇಂದಿಗೂ ಸಾವಿರಾರು ಭಕ್ತಾದಿಗಳ ಆಕರ್ಷಣೆಯ ಕೇಂದ್ರವೆನಿಸಿದೆ.

Monday, March 30, 2015

ವಿಶ್ವದ ನಂ. 1 ಆಟಗಾರ್ತಿ: ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.ಸಿರಿ ಫೋರ್ಟ್‌ ಸ್ಪೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ಸೈನಾ 21–16, 21–14ರಲ್ಲಿ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನೊನ್‌ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಜತೆಗೆ ವಿಶ್ವದ ನಂಬರ್ 1 ಆಟಗಾರ್ತಿ ಪಟ್ಟಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಪಟ್ಟಕ್ಕೆ ಏರಿದ ಭಾರತದ ಪ್ರಥಮ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ ಜೀವನ ಸಾಧನೆಗಳ ಬಗೆಗಿನ ಕಿರುನೋಟವೊಂದು ಇಲ್ಲಿದೆ 


ಸೈನಾ, ಜನಿಸಿದ್ದು ಹರಿಯಾಣದ ’ಹಿಸ್ಸಾರ್ ನಗರ’ದಲ್ಲಿ.1990ರ ಮಾರ್ಚ್ 17ರಂದು.ಸೈನಾ  ತಂದೆ, ’ಡಾ. ಹರ್ವೀರ್ ಸಿಂಗ್’ ರವರು,ವೃತ್ತಿಯಲ್ಲಿ  ಹೈದರಾಬಾದ್’ ನ, ’Directorate of Oil Seeds Research Centre ನಲ್ಲಿ ವಿಜ್ಞಾನಿ. ಆಗಿದ್ದು ತಾಯಿ ಉಷಾ ನೆಹ್ವಾಲ್‌ ಮ‌ೂಲತಃ ಹರ್ಯಾಣದ ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್‌. 

ಸೈನಾ ಬಾಲಕಿಯಾಗಿದ್ದಾಗಲೇ ಹೈದರಾಬಾದಿಗೆ ವಲಸೆ ಬಂದ ’ಡಾ. ಹರ್ವೀರ್ ಸಿಂಗ್ ಕುಟುಂಬ ಸೈನಾ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪೋಷಿಸಿತು. ತಂದೆ ಹರ್ವೀರ್ ಸಿಂಗ್ ಮಗಳನ್ನು ಉತ್ತಮ ಬ್ಯಾಡ್ಮಿಂಟನ್ ತಾರೆಯನ್ನಾಗಿ ರೂಪಿಸುವ ಉದ್ದೇಶದಿಂದ ತನ್ನ ಉಳಿತಾಯ ಮತ್ತು ಭವಿಷ್ಯನಿಧಿಯ ಹಣವನ್ನು ವ್ಯಯಿಸಿದ್ದರು. 

ಇಂದು ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿರುವ ಸೈನಾ ಈ ಸ್ಥಾನವನ್ನು ತಲುಪುವ ಹಿಂದೆ ಅವರ ಸತತ ಪರಿಶ್ರಮವೂ ಇದೆ. ಪ್ರಾರಂಭದಲ್ಲಿ ಸೈನಾ ಮುಂಜಾನೆ ೫ ಗಂಟೆಗೆ ಎದ್ದು, ೨೦ ಕಿ. ಮೀ ದೂರದ ಕ್ರೀಡಾಂಗಣಕ್ಕೆ ನಡೆದುಕೊಂಡು ಹೋಗಿ ಅಭ್ಯಾಸ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಮಗಳಿಗೆ ಅನುಕೂಲವಾಗಲೆಂದು ಸಿಂಗ್ ಕ್ರೀಡಾಂಗಣದ ಬಳಿಯೇ ಮನೆಮಾಡಿದರು. 

ವಿಶ್ವದ ನಂಬರ್ 1 ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್


ಅತಿಕ್ ಜುಹಾರಿ, ಪುಲ್ಲೇಲಾ ಗೋಪಿಚಂದ್ ,ವಿಮಲ್ ಕುಮಾರ್ ರವರ ಬಳಿಕಯಲ್ಲಿ ಅಭ್ಯಾಸ ನಡೆಸಿದ ಸೈನಾ ಪ್ರಸ್ತುತ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಎಸ್.ಎಂ. ಅರೀಫ್ ರವರನ್ನು ತಮ್ಮ ಕೋಚ್ ಆಗಿಸಿಕೊಂಡಿದ್ದಾರೆ. ೨೦೦೩ರಲ್ಲಿ ಝಕೊಸ್ಲಾವಿಯಾ ಜೂನಿಯರ್ ಓಪನ್ ಅಲ್ಲಿ ೧೯ ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಸೈನಾ ನೆಹ್ವಾಲ್ ಇಲ್ಲಿಂದ ಮುಂದೆ ಆಕೆ ಮಾಡಿದ್ದೆಲ್ಲವೂ ಇತಿಹಾಸ ಸೃಷ್ಟಿಸುವ ಕಾರ್ಯ.

 2004ರ ಕಾಮನ್‌ವೆಲ್ತ್ ಯೂತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕಗೆಲ್ಲುವ ಸಾಧನೆ ಮಾಡಿದ್ದ ಸೈನಾ 2005ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ನಲ್ಲಿಯೂ ಚಾಂಪಿಯನ್ ಆಗಿದ್ದರು. 2006 ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರನ್ನರ್ ಅಪ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ, ಫಿಲಿಫೈನ್ಸ್ ಬ್ಯಾಡ್ಮಿಂಟನ್ ಓಪನ್ ಗೆಲುವು, ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು, ಹೀಗೆ ಒಂದರ ಬೆನ್ನ ಹಿಂದೊಂದರಂತೆ ಸಾಧನೆಗೈಯುತ್ತಲೇ ಹೋದರು. 

ಮುಂದೆ ೨೦೦೮ರಲ್ಲಿ ಕಾಮನ್‍ವೆಲ್ತ್ ಯುವ ಕ್ರೀಡಾಕೂಟ ದಲ್ಲಿ ಚಿನ್ನದ ಪದಕ ಗಳಿಸಿದ ಸೈನಾ 2012ರ ಲಂಡನ್ ಒಲಂಪಿಕ್ ನಲ್ಲಿ ಕಂಚಿನ ಪದಕ ವಿಜೇತರಾಗುವ ಮೂಲಕ ಆ ಸಾಧನೆ ಮಾಡಿದ ಭಾರ್ತದ ಪ್ರಥಮ ಬ್ಯಾಡ್ಮಿಂಟನ್ ಆತಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ೨೦೦೯ರಲ್ಲಿ ಇಂಡೋನೇಷಿಯಾ ಓಪನ್ ಸೀರೀಸ್ ನಲ್ಲಿ ಗೆಲುವು ಸಾಧಿಸಿ ಸೂಪರ್ ಸೀರೀಸ್ ಗೆದ್ದ ಪ್ರಥಮ ಭಾರತೀಯರೆನಿಸಿದರು. 

ಭಾರ್ತದ ಹೆಮ್ಮೆಯ ಬ್ಯಾಡ್ಮಿಂತನ್ ಆತಗಾರ್ತಿಯಾದ ಸೈನಾ ನೆಹ್ವಾಲ್ ಸಾಧನೆಗಳನ್ನು ಪರಿಗಣಿಸಿ ಇದುವರೆಗೆ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ ಅರ್ಜುನ ಪ್ರಶಸ್ತಿ(2009), ರಾಜೀವ್ ಗಾಂಧಿ ಖೇಲ್ ರತ್ನ (2010) ಪದ್ಮಶ್ರೀ(2010)ಗಳು ಸೇರಿವೆ. 

ಹೀಗೆ ಇಂದು ನಮ್ಮ ನಾಡಿನ ಹೆಮ್ಮೆಯ ಕ್ರೀಡಾ ತಾರೆಆಗಿರುವ ಸೈನಾ ತಮ್ಮ ಮುಂದಿನ ಜೀವನದಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಉನ್ನತಿಯನ್ನು ಕಾಣಲೆಂದು ಹಾರೈಸೋಣ. 

Tuesday, March 24, 2015

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ ನಟ

ಕನ್ನಡಿಗ ಸಂಚಾರಿ ವಿಜಯ್ ಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆಯಾಗಿದ್ದು  ಅದರಲ್ಲಿ ಕ್ವೀನ್ ಚಿತ್ರದ ನಾಯಕಿ ಕಂಗನಾ ರನೌತ್ ಶ್ರೇಷ್ಠ ನಟಿ ಹಾಗೂ 'ನಾನು ಅವನಲ್ಲ ಅವಳು' ಕನ್ನಡ ಚಿತ್ರದ ನಾಯಕ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ್ದಾರೆ. 'ಹರಿವು' (ನಿರ್ಮಾಣ ಓಂ ಸ್ಟುಡಿಯೋ, ನಿರ್ದೇಶಕ: ಮಂಜುನಾಥ್ (ಮನ್ಸೋರೆ)) ಚಿತ್ರಕ್ಕೆ ಶ್ರೇಷ್ಠ ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಸಂಚಾರಿ ವಿಜಯ್ ಯಾರು?

ಅತ್ಯುತ್ತಮ ನಟ ಸಂಚಾರಿ ವಿಜಯ್ 


ಇಂದು ರಾಷ್ಟ್ರ ಪ್ರಶಸ್ತಿ ಗಳಿಸಿರುವ ಸಂಚಾರಿ ವಿಜಯ್ ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಗ್ರಾಮದವರಾದ ವಿಜಯ್ ಕಲಾಸಕ್ತಿ ತುಂಬಿದ ಕುಟುಂಬದಲ್ಲಿ ಬೆಳೆದವರು. ತಾಯಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರೆ ತಂದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಕಂಪ್ಯೂಟರ್ ಸೈನ್ಸ್ ಶಿಕ್ಷಣಕ್ಕೆಂದು ಬೆಂಗಳೂರು ದಾರಿ ಹಿಡಿದ ಅವರನ್ನು ಕಲೆಯ ಆಕರ್ಷಣೆ ಬಿಡಲಿಲ್ಲ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿಜಯ್‌ಗೆ, ನೀನು ಇರಬೇಕಾದ ಜಾಗ ಇದಲ್ಲ ಎಂದು ರಂಗಭೂಮಿಯತ್ತ ಕರೆದುಕೊಂಡು ಹೋದ ಗೆಳೆಯ ರಂಗಪ್ಪ, ಅಲ್ಲಿ ಮಧುಸೂದನ್ ಎಂಬುವವರನ್ನು ಪರಿಚಯಿಸಿದರು.ಅವರಿಂದ ಕೇಶ್ರೀ ಅವರ ಪರಿಚಯ ಉಂಟಾಯಿತು.

ದರ್ಪಣ ತಂಡದ ಮೂಲಕ "ಸಾವು ಧ್ಯೇಯಕಿಲ್ಲ" ಎಂಬ ನಾಟಕದಲ್ಲಿ ಸೈನಿಕನ ಪಾತ್ರದಿಂದ ರಂಗಭೂಮಿಗೆ ಕಾಲಿಟ್ಟ ವಿಜಯ್ ನಂತರ ವಿವಿಧ ಪಾತ್ರಗಳಲ್ಲಿ ಪರಿಪಕ್ವಗೊಳ್ಳುತ್ತ ಬಂದರು. ಮುಂದೆ ಖ್ಯಾತ ನಿರ್ದೇಶಕರುಗಳಾದ ಮಾಲತೇಶ್ ಬಡಿಗೇರ್ , ಛಾಯಾ ಭಾರ್ಗವಿ ,ಮಂಜುನಾಥ ಬಡಿಗೇರ್ ,ಎಂ.ಸಿ.ಆನಂದ್ ,ಎಸ್. ಆನಂದ್ ,ಜೋಸೆಫ್ ಜಾನ್ ,ಮಹೇಶ್ ಪಲ್ಲಕ್ಕಿ ರವರಂತಹರೊಂದಿಗೆ ಅನುಭವವನ್ನು ಪಡೆದುಕೊಳ್ಳುತ್ತ 'ಸಂಚಾರಿಯ'ತ್ತ ಸಾಗಿದ ವಿಜಯ್ ಹೆಸರಾಂತ ನಿರ್ದೇಶಕಿ ಮಂಗಳ.ಎನ್ ರವರ ಗರಡಿಯಲ್ಲಿ ಅರಹಂತ ನಾಟಕದ ಖಾರವೆಲನಾಗಿ ಮುಖ್ಯ ಪಾತ್ರದಲ್ಲಿ ಗುರುತಿಸಿಕೊಂಡರು. ಅದಾದನಂತರ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಾ ಬಂದ ವಿಜಯ್  ಹೊಸ ಹೊಸ ಪ್ರಯತ್ನಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತ ಸಾಗುತ್ತಿರುವಾಗ ವಿಜಯ್ ರವರ ಪ್ರತಿಭೆಗೆ ಇನ್ನಷ್ಟು ಮೆರಗುಕೊಡಲು ಮಂಗಳ.ಎನ್ ರವರು ನಿರ್ದೇಶಕನಾಗುವ ಅವಕಾಶವನ್ನು 'ಪಿನೋಕಿಯೊ' ಎಂಬ ನಾಟಕದ ಮೂಲಕ ಕಲ್ಪಿಸಿದರು. ಕೊಟ್ಟ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ವಿಜಯ್ ವಿಸ್ಮಯಕಾರಿಯಾಗಿ ಪಿನೋಕಿಯೊ ವನ್ನು ರಂಗದ ಮೇಲೆ ತಂದರು. ಹೀಗೆ ಸಂಚಾರಿ ಥಿಯೇಟರ್ ನಲ್ಲಿ ಬೆಳೆದು ಬಂದ ವಿಜಯ್ ,"ಸಂಚಾರಿ ವಿಜಯ್" ಆಗಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ತನ್ನ ಬಾಲ್ಯದಿಂದಲೇ ಬಳುವಳಿಯಾಗಿ ಬಂದ ಕಲೆಯನ್ನು ಸತತವಾಗಿ ಪೋಷಿಸಿಕೊಂಡು ಬಂದ ವಿಜಯ್  ಡಿ ಡಿ 9 (ಚಂದನ) ದಲ್ಲಿ 'ನಗು ನಗುತಾ ನಲಿ' ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದಿನ ದಿನಗಳಲ್ಲಿ ಶ್ರೀನಗರ ಚಂದ್ರು ರವರ ನಿರ್ದೇಶನದ 'ಹೊಸ ಬಾಳಿಗೆ ನೀ ಜೊತೆಯಾದೆ', ಪೃಥ್ವಿ ಕುಲಕರ್ಣಿ ರವರ ನಿರ್ದೇಶನದ 'ಪಾರ್ವತಿ ಪರಮೇಶ್ವರ', 'ಪಾಂಡುರಂಗ ವಿಠಲ', ಪಂಚರಂಗಿ ಪೊಂ ಪೊಂ', ಗುರುರವರ ನಿರ್ದೇಶನದ 'ರೌರವ', ಸೇತುರಾಮ್ ರವರ ನಿರ್ದೇಶನದ 'ಅನಾವರಣ'ದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 

ಮಂಜುನಾಥ್ ಮನ್ಸೂರ್ ಮತ್ತು ಸಂತೋಷ್ ಕೊಡೆನ್ಕೆರಿ ನಿರ್ದೇಶನದ 'ಹರಿವು', ಬಿ.ಸುರೇಶ್ ರವರ 'ಕವಲೊಡೆದ ದಾರಿ', ಅರವಿಂದ್ ಕುಪ್ಲಿಕರ್ ನಿರ್ದೇಶನದ ಟಿಕೆಟ್, Kಶ್ರೀ ರವರ ನಿರ್ದೇಶನದ 'ನೀವು ಸರದಿಯಲ್ಲಿದ್ದೀರಿ', ಗುರು ನಿರ್ದೇಶನದ 'ಮರ್ಡರ್', ಎಂಬ ಕಿರುಚಿತ್ರಗಳಲ್ಲಿ ನಟಿಸಿದ ವಿಜಯ್ ಎಂ.ಎಲ್.ಪ್ರಸನ್ನ ರವರ ನಿರ್ದೇಶನದ  'ರಂಗಪ್ಪ ಹೋಗ್ಬಿಟ್ನ', ರಘು ರಾಜ್ ರವರ  ನಿರ್ದೇಶನದ 'ರಾಮ ರಾಮ ರಘುರಾಮ', ಎಂ.ಎಸ್.ರಮೇಶ್ ರವರ ನಿರ್ದೇಶನದ 'ವಿಲನ್' ಮತ್ತು 'ದಾಸ್ವಾಳ', ಪ್ರಕಾಶ್ ರಾಜ್/ರೈ  ಅಭಿನಯಿಸಿ ನಿರ್ದೇಶಿಸುತ್ತಿರುವ ಮೂರು ಭಾಷೆಯ 'ಒಗ್ಗರಣೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ 

ವಿಜಯ್, ಸಂಚಾರಿ ವಿಜಯ್ ಆದದ್ದೇಕೆ?

ರಂಗಾಯಣ ರಘು ಅವರ ಪತ್ನಿ ಎನ್.ಮಂಗಳ ಅವರ ಸಂಚಾರಿ ಥೀಯೇಟರ್ ತಂಡದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡು ಬಂದ ವಿಜಯ್'ಹೆಸರಿನ ಮುಂದೆ ಸಂಚಾರಿ ಎಂಬ ಪದವೂ ಅಂಟಿಕೊಂಡು ಇಂದು “ಸಂಚಾರಿ ವಿಜಯ್” ಆಗಿ ನಮ್ಮೆದುರಿಗಿದ್ದಾರೆ. 

ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ

೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಇದುವರೆಗೂ ಇಬ್ಬರು ಕನ್ನಡಿಗರಿಗೆ ಲಭಿಸಿತ್ತು. ೧೯೭೫ರಲ್ಲಿ ಎಂ.ವಿ. ವಾಸುದೇವ ರಾವ್ (ಚೋಮನ ದುಡಿಯಲ್ಲಿನ ಚೋಮನ ಪಾತ್ರ), ೧೯೮೬ರಲ್ಲಿ ಚಾರುಹಸನ್ (ತಬರನ ಕತೆಯ ತಬರ ಶೆಟ್ಟಿಯ ಪಾತ್ರ) ಈ ಗೌರವಕ್ಕೆ ಪಾತ್ರರಾಗಿದ್ದರು.

ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ

೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಗೆ ಇದುವರೆಗೂ ಮೂವರು ಕನ್ನಡಿಗರು ಭಾಜನರಾಗಿದ್ದರು.೧೯೭೩ರಲ್ಲಿ ನಂದಿನಿ ಭಕ್ತವತ್ಸಲ (ಕಾಡುವಿನಲ್ಲಿನ ಕಮಲಿ ಪಾತ್ರ), ೨೦೦೪ರಲ್ಲಿ ತಾರಾ (ಹಸೀನಾ ಚಿತ್ರದಲ್ಲಿನ ಹಸೀನಾ ಪಾತ್ರ) ಹಾಗೂ ೨೦೦೭ರಲ್ಲಿ ಉಮಾಶ್ರೀ (ಗುಲಾಬಿ ಟಾಕೀಸ್ ನಲ್ಲಿನ ಗುಲಾಬಿ ಪಾತ್ರ) ಈ ಉನ್ನತ ಪುರಸ್ಕಾರಕ್ಕೆ ಪಾತ್ರರಾಗಿದ್ದರು. 


Friday, March 13, 2015

ರಣಜಿ ಟ್ರೋಫಿ: ಕರ್ನಾಟಕ ಚಾಂಪಿಯನ್

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕವು ಇನಿಂಗ್ಸ್‌ ಹಾಗೂ 217 ರನ್‌ಗಳ ಜಯ ಪಡೆದು 2014-15ನೇ ಸಾಲಿನ ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡ ವಿನಯ್‌ ಬಳಗವು ಸತತ ಎರಡನೇ ಬಾರಿ ರಣಜಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Ranaji Trophy 2015 Champions 


ರಣಜಿ ಇತಿಹಾಸ
Raja Bhupindar Singh

ಜುಲೈ 1934 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಭೆ ನಂತರ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್" ಎನ್ನುವ ಕ್ರಿಕೆಟ್ ಸರಣಿ ಪ್ರಾರಂಭಗೊಂಡಿತು. 1934-35 ರಲ್ಲಿ ಮೊದಲ ರಣಜಿ ಪಂದ್ಯಗಳು ನಡೆದವು. ಪಟಿಯಾಲದ ಮಹರಾಜ ಭುಪಿಂದರ್ ಸಿಂಗ್ 1911ರಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡಿದ್ದ ಬಾರತೀಯ ಕ್ರಿಕೆಟ್ ತ್ಂಡದ ನಾಯಕರಾಗಿದ್ದರು.  ಅವರು ಕುಮಾರ್ ಶ್ರೀ ರಂಜಿತ್ಸಿಂಹಜೀ, ಸಿನ್ಜಿ ಜಾಮ್ ಸಾಹಿಬ್ ಗೌರವಾರ್ಥವಾಗಿ ರಣಜಿ ಟ್ರೋಫಿ ದಾನವಾಗಿ ನೀಡಿದ್ದರು. ಇಲ್ಲಿಂದ ಮುಂದೆ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್"ಎಂದಿದ್ದ್ ಸರಣಿಅಯ ಹೆಸರನ್ನು ರಣಜಿ ಟ್ರೋಫಿ ಕ್ರಿಕೆಟ್ ಸರಣಿ ಎಂದು ಬದಲಾಯಿಸಲಾಗಿತ್ತು.
ಮೊದಲ ರಣಜಿ ಟ್ರೋಫಿ ಚಾಂಪಿಯನ್ಷಿಪ್ ಬಾಂಬೆ ಗೆದ್ದುಕೊಂಡಿತು. ಅಂತಿಮ ಸುತ್ತಿನ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿದ ಮುಂಬೈ ಈ ಸಾಧನೆ ಮಾಡಿತ್ತು. ಹೈದರಾಬಾದ್ ತಂಡದ ಸೈಯದ್ ಮೊಹಮ್ಮದ್ ಹದಿ ರಣಜಿ ಪಂದ್ಯಾವಳಿಯಲ್ಲಿ ಮೊದಲ ಶತಕ ಬಾರೀಸಿದ್ ದಾಖಲೆ ಮಾಡಿದ್ದರು. ಇದುಅವರೆಗೆ ಮುಂಬೈ ಒಟ್ಟೂ 40 ಬಾರಿ ಪ್ರಶಸ್ತಿ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ,ಕರ್ನಾಟಕ 8 ಬಾರಿ ಪ್ರಶಸ್ತಿ ಗಳಿಸಿ ಎರಡನೇ ಸ್ಥಾನದಲ್ಲಿದೆ.

ರಣಜಿ ಕುರಿತಂತೆ ಮುಖ್ಯ ಮಾಹಿತಿಗಳು ಈ ಕೆಳಗಿನಂತಿವೆ
ಕರ್ನಾಟಕ ಪ್ರಶಸ್ತಿ ಗೆದ್ದ ವರ್ಷ ಹಾಗೂ ನಾಯಕರು
ವರ್ಷ
ಸ್ಥಳ
ನಾಯಕ
ಎದುರಾಳಿ ತ್ಂಡ
1973 - 74
ಜೈಪುರ
ಎರ್ರಪಳ್ಳಿ ಪ್ರಸನ್ನ
ರಾಜಾಸ್ಥಾನ
1977 - 78
ಮೋಹನ್ ನಗರ
ಎರ್ರಪಳ್ಳಿ ಪ್ರಸನ್ನ
ಉತ್ತರ ಪ್ರದೇಶ
1982 – 83
ಮುಂಬೈ
ಬ್ರಿಜೇಶ್ ಪಟೇಲ್
ಮುಂಬೈ
1995 – 96
ತಮಿಳು ನಾಡು
ಅನಿಲ್ ಕುಂಬ್ಳೆ
ಚೆನ್ನೈ
1997 – 98
ಉತ್ತರ ಪ್ರದೇಶ
ರಾಹುಲ್ ದ್ರಾವಿಡ್
ಬೆಂಗಳೂರು
1998 – 99
ಮಧ್ಯ ಪ್ರದೇಶ
ಸುನಿಲ್ ಜೋಷಿ
ಬೆಂಗಳೂರು
2013 – 14
ಹೈದರಾಬಾದಾಛ್
ವಿನಯ್
ಮಹಾರಾಷ್ಟ್ರ
2014 - 15
ಮುಂಬೈ
ವಿನಯ್
ತಮಿಳು ನಾಡು






ಅಂತಿಮ ಸ್ಕೋರ್ ವಿವರ
ತಮಿಳುನಾಡು  134 (62.4 ಓವರ್‌ಗಳಲ್ಲಿ)
ಕರ್ನಾಟಕ ಮೊದಲ ಇನಿಂಗ್ಸ್‌ 231.2 ಓವರ್‌ಗಳಲ್ಲಿ 762
ತಮಿಳುನಾಡು ಎರಡನೇ ಇನಿಂಗ್ಸ್ 107.5 ಓವರ್‌ಗಳಲ್ಲಿ 411
(ಬುಧವಾರದ ಅಂತ್ಯಕ್ಕೆ 40 ಓವರ್‌ಗಳಲ್ಲಿ 3 ವಿಕೆಟ್‌ಗೆ 113)

ಬಾಬಾ ಅಪರಾಜಿತ್‌ ಸಿ ರಾಬಿನ್ ಉತ್ತಪ್ಪ ಬಿ ಎಸ್‌. ಅರವಿಂದ್‌  68
ವಿಜಯ್‌ ಶಂಕರ್‌ ಸಿ ಮತ್ತು ಬಿ ವಿನಯ್‌ ಕುಮಾರ್‌  103
ದಿನೇಶ್‌ ಕಾರ್ತಿಕ್‌ ಸಿ ಅರವಿಂದ್‌ ಬಿ ಶ್ರೇಯಸ್‌ ಗೋಪಾಲ್‌  120
ರಾಮಸ್ವಾಮಿ ಪ್ರಸನ್ನ ಸಿ ಮನೀಷ್ ಪಾಂಡೆ ಬಿ ಎಚ್‌.ಎಸ್. ಶರತ್‌  08
ಎಂ. ರಂಗರಾಜನ್ ಸಿ ಮನೀಷ್‌ ಪಾಂಡೆ ಬಿ ಅರವಿಂದ್‌  33
ಅಶ್ವಿನ್‌ ಕ್ರೈಸ್ಟ್‌ ಸ್ಟಂಪ್ಡ್‌ ರಾಬಿನ್‌ ಉತ್ತಪ್ಪ ಬಿ ಶ್ರೇಯಸ್‌ ಗೋಪಾಲ್‌  00
ಲಕ್ಷ್ಮಿಪತಿ ಬಾಲಾಜಿ ಔಟಾಗದೆ  05
ಪ್ರಶಾಂತ್ ಪರಮೇಶ್ವರನ್‌ (ಬ್ಯಾಟ್‌ ಮಾಡಲು ಬರಲಿಲ್ಲ)  00
ಇತರೆ: (ಬೈ-3, ಲೆಗ್‌ ಬೈ-6, ವೈಡ್‌-5, ನೋ ಬಾಲ್‌-2)  16

ವಿಕೆಟ್‌ ಪತನ: 4-191 (ಅಪರಾಜಿತ್‌; 60.3), 5-306 (ಶಂಕರ್‌; 80.6), 6-344 (ಪ್ರಸನ್ನ; 87.5), 7-379 (ಕಾರ್ತಿಕ್‌; 96.1), 8-379 (ಅಶ್ವಿನ್‌; 98.1), 9-411 (ರಂಗರಾಜನ್‌; 107.5)

ಬೌಲಿಂಗ್‌: ಅಭಿಮನ್ಯು ಮಿಥುನ್ 18-2-84-0, ಎಚ್‌.ಎಸ್. ಶರತ್‌ 20-4-77-1, ಎಸ್. ಅರವಿಂದ್‌ 21.5-6-52-2, ಶ್ರೇಯಸ್ ಗೋಪಾಲ್ 25-4-126-4, ವಿನಯ್‌ ಕುಮಾರ್‌ 21-8-43-2, ಆರ್‌. ಸಮರ್ಥ್‌ 2-0-20-0.
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್‌ ಹಾಗೂ 217 ರನ್‌ ಗೆಲುವು.
ಪಂದ್ಯ ಶ್ರೇಷ್ಠ: ಕರುಣ್‌ ನಾಯರ್‌