Monday, March 24, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ ಜನ್ಮ ದಿನಾಚರಣೆ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ  ಜನ್ಮ ದಿನಾಚರಣೆ

ಅಂತರಾಷ್ಟ್ರೀಯ ಮಹಿಳಾ ದಿನ  ೧೫ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ


ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ  ಜನ್ಮ ದಿನಾಚರಣೆಯ ಹಗೂ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೫ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಂಡಸಿ ಸದಾನಂದ ಸ್ವಾಮಿ, ಕಿರಣ್ ಸೂರ್ಯ, ಶಶಿಧರ ಕೋಟೆ, ಡಾ. ಕರ್ಣ, ಶ್ರೀಮತಿ ರೂಪ , ಪ್ರಮೀಳಾ ನೇಸರ್ಗಿ, ಲಯ ಕೋಕಿಲಾ, ಕೊರಿಯೋಗ್ರಾಫರ್ ವಿನೋದ್ ಎ.ಕೆ. ಬೇಬಿ ರಿತು ಸಿಂಗ್ ಮತ್ತು ಚಂದ್ರಿಕಾ ಬಿ.ವಿ. ಭಾಗವಹಿಸಿದ್ದರು.




ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಡ್ಯಾನ್ಸ್ ಅಕಾಡಮಿಗಳು ವೈವಿದ್ಯಮಯ ನೃತ್ಯ ಪ್ರದರ್ಶನ ನೀಡಿದವು. ಅವುಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ನೃತ್ಯವು ಒಳಗೊಂಡಿತ್ತು. ಇದಲ್ಲದೆ ಮಸ್ಕಿ ತಂಡದವರಿಂದ ರಾಮಾಯಣದ ಪ್ರದರ್ಶನವನ್ನೂ ಸಹ ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಇನ್ನೂರಕ್ಕೂ ಹೆಚ್ಚು ಜನ ಸಾಧಕರಿಗೆ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು. 



ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು.


No comments:

Post a Comment