Tuesday, April 08, 2025

ಟಾಲಿವುಡ್ ಗೆ ಕನ್ನಡದ ಇನ್ನೊಬ್ಬ ನಟ, ’ಬ್ಲಡ್ ರೋಸಸ್’ ಹಿಡಿದು ಬಂದ ಧರ್ಮ ಕೀರ್ತಿರಾಜ್

 ಈಗಾಗಲೇ ಚಂದನವನದ ಪ್ರತಿಭೆಗಳಾದ ಚರಣ್‌ರಾಜ್, ಪ್ರಕಾಶ್‌ರೈ, ಅರ್ಜುನ್‌ಸರ್ಜಾ, ರಶ್ಮಿಕಾಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ಅನ್ಯ ಭಾಷೆಯ ಚಿತ್ರರಂಗದಲ್ಲಿ ಖ್ಯಾತರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಸಾಲಿಗೆ ಚಿತ್ರರಂಗದ ಚಾಕಲೇಟ್ ಬಾಯ್ ಅಂತ ಪ್ರೀತಿಯಿಂದ ಕರೆಸಿಕೊಂಡಿರುವ ಧರ್ಮಕೀರ್ತಿರಾಜ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಅವರು  ’ಬ್ಲಡ್ ರೋಸಸ್’ ಸಿನಿಮಾದ ಮುಖಾಂತರ ಟಾಲಿವುಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಇವರಿಗೆ ರಂಜಿತ್‌ರಾಮ್ ಎಂದು ಹೆಸರಿನೊಂದಿಗೆ ಗ್ರ್ಯಾಂಡ್ ವೆಲ್ ಕಂ ಸಿಕ್ಕಿದೆ. . ಪ್ರಚಾರದ ಮೊದಲ ಹಂತವಾಗಿ ಹಬ್ಬದ ದಿನದಂದು ಪೋಸ್ಟರ್ ಬಿಡಲಾಗಿದ್ದು ಎಲ್ಲಡೆ ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.


ಎಂ.ಗುರುರಾಜನ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವ  ’ಬ್ಲಡ್ ರೋಸಸ್’ ಸಿನಿಮಾಗೆ ಟಿಬಿಆರ್.ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ಬಂಡವಾಳ ಹೂಡಿದ್ದಾರೆ. , ಯಲ್ಲಪ್ಪ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೆ.ಲಕ್ಷಮ್ಮ ಮತ್ತು ಕೆ.ನಾಗಣ್ಣ ಜಂಟಿಯಾಗಿ  ಚಿತ್ರವನ್ನು ಅರ್ಪಣೆ ಮಾಡಿದ್ದಾರೆ.

ಸಮಾಜದಲ್ಲಿ ನಡೆದಿರುವ ಹಾಗೂ ಪ್ರಸಕ್ತ ನಡೆಯುತ್ತಿರುವ ಒಂದಷ್ಟು ನೈಜ ಅಂಶಗಳನ್ನು ಚಿತ್ರದ ಕಥೆಯನ್ನಾಗಿಸಲಾಗಿದೆ.. ಕ್ರೈಂ, ಥ್ರಿಲ್ಲರ್ ಹಾಗೂ ಆಕ್ಷನ್ ಸಾರ ಇರುವ ಸಿನಿಮಾ ಇದಾಗಿದೆ ಎಂದಿರುವ ನಿರ್ದೇಶಕರು ಸಿನಿಮಾದ ಕುರಿತ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


ಧರ್ಮಕೀರ್ತಿರಾಜ್ (ರಂಜಿತ್‌ರಾಮ್), ಅಪ್ಸರರಾಣಿ ಮುಖ್ಯ ಪಾತ್ರಗಳಲ್ಲಿ ಪೋಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕ್ರಾಂತಿಕಿಲ್ಲಿ, ಶ್ರೀಲು, ಹಿರಿಯ ನಟ ಸುಮನ್, ಘರ್ಷಣಾಶ್ರೀನಿವಾಸ್, ಟಾರ್ಜಾನ್, ರಾಜೇಂದ್ರ, ಜ್ಯೂ.ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್‌ದಸ್ತ್ ಜಿಎಂಆರ್, ಜಬರ್‌ದಸ್ತ್ ಬಾಬು, ಜಬರ್‌ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ಅಭಿನಯಿಸಿದ್ದಾರೆ.      

 ಪೆದ್ದಪಲ್ಲಿ ರೋಹಿತ್ ಸಂಗೀತ ,  ಬೋಗಿರೆಡ್ಡಿ ಸಿವಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.  ’ಹನುಮಾನ್’ ಖ್ಯಾತಿಯ ನಂದು ಸಾಹಸ ಮತ್ತು ರಾಜೇಶ್ ಲಂಕ ಹಾಗೂ ಹುಸೇನ್ ಅವರ ಆಕ್ಷನ್ ಚಿತ್ರಕ್ಕಿದೆ. ಕಾರ್ಯಕಾರಿ ನಿರ್ಮಾಪಕ ಮಣಿಕುಮಾರ್, ರವಿತೇಜ್.ಸಿ.ಹೆಚ್ ಸಂಕಲನ ವಿಎಫ್‌ಎಕ್ಸ್ ಶಿರಾ ಪ್ರೊಡಕ್ಷನ್ಸ್, ಎಸ್ ಎಫ್‌ಎಕ್ಸ್ ಶ್ರೀನು ನಾಗಪುರಿ, ಡಿಐ ಸಂಜೀವ್ ಮಾಮಡಿ, ಕಾಸ್ಟ್ಯೂಮ್ ಡಿಸೈನರ್ ಮಂದಾತಿ ಗೀತಿಕ ಅವರದಾಗಿದೆ. 

ಹೈದರಬಾದ್, ರಾಮೋಜಿರಾವ್ ಸ್ಟುಡಿಯೋ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರ. ಸದ್ಯ ಪ್ರಸ್ತುತ ಪೋಸ್ಟ್ ಪ್ರೊಡಕ್ಸನ್ ಹಂತದಲ್ಲಿದೆ.


No comments:

Post a Comment