Sunday, February 22, 2026

ಸಂಪೂರ್ಣ ಚಂದ್ರ ಗ್ರಹಣ 3 ಮಾರ್ಚ್ 2026 ವೈದಿಕ ಜ್ಯೋತಿಷ್ಯದ ಭವಿಷ್ಯವಾಣಿ


2026ರ ಮಾರ್ಚ್ 3ರಂದು ನಡೆಯುವ ಈ ಸಂಪೂರ್ಣ ಚಂದ್ರಗ್ರಹಣವು ಜಪಾನ್, ಆಸ್ಟ್ರೇಲಿಯಾದ ಪೂರ್ವ ಕರಾವಳಿ, ನ್ಯೂಜಿಲೆಂಡ್, ಅಲಾಸ್ಕಾ, ಪಪುವಾ ನ್ಯೂ ಗಿನಿಯಾ ಮತ್ತು ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರಿಸಲಿದೆ.

ಏಷ್ಯಾದ ಹೆಚ್ಚಿನ ಭಾಗ, ಇಡೀ ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ ಭಾಗಶಃ ಚಂದ್ರಗ್ರಹಣವನ್ನು ನೋಡುತ್ತವೆ.

ಈ ಸಂಪೂರ್ಣ ಚಂದ್ರಗ್ರಹಣವನ್ನು ಮೇಲಿನ ಚಿತ್ರದಲ್ಲಿರುವ ಗಾಢ ಬಣ್ಣದ ವಲಯದ ಅಡಿಯಲ್ಲಿ ಬರುವ ಎಲ್ಲಾ ದೇಶಗಳಿಂದ ನೋಡಬಹುದು.

ಪೆರುದಲ್ಲಿನ ಲಿಮಾ, ಹೊನೊಲುಲು, ನ್ಯೂಯಾರ್ಕ್, ಚಿಕಾಗೊ, ವಾಷಿಂಗ್ಟನ್ ಡಿಸಿ, ಹೊನೊಲುಲು, ಸ್ಯಾನ್ ಫ್ರಾನ್ಸಿಸ್ಕೊ, ಲಾಸ್ ಏಂಜಲೀಸ್, ನ್ಯೂ ಓರ್ಲಿಯನ್ಸ್, ಡೆಟ್ರಾಯಿಟ್, ಯುಎಸ್ಎಯ ನ್ಯೂ ಓರ್ಲಿಯನ್ಸ್, ಮಾಂಟ್ರಿಯಲ್, ಕೆನಡಾದ ಟೊರೊಂಟೊ, ಫಿಲಿಪೈನ್ಸ್ನ ಮನಿಲಾ, ವಿಯೆಟ್ನಾಂನ ಹನೋಯಿ, ಆಸ್ಟ್ರೇಲಿಯಾದ ಮೆಲ್ಬೋರ್ನ್, ತೈವಾನ್ನ ತೈಪೆ, ಇಂಡೋನೇಷ್ಯಾದ ಜಕಾರ್ತಾ ವಿಶೇಷ ರಾಜಧಾನಿ ಪ್ರದೇಶ, ಮೆಲ್ಬೋರ್ನ್, ಬ್ರಿಸ್ಬೇನ್, ಆಸ್ಟ್ರೇಲಿಯಾದ ಸಿಡ್ನಿ, ಹಾಂಗ್ ಕಾಂಗ್, ಗ್ವಾಟೆಮಾಲಾದ ಗ್ವಾಟೆಮಾಲಾ ನಗರ, ಕ್ಯೂಬಾದ ಹವಾನಾ, ಥೈಲ್ಯಾಂಡ್ನ ಬ್ಯಾಂಕಾಕ್, ದಕ್ಷಿಣ ಕೊರಿಯಾದ ಸಿಯೋಲ್, ಸಿಂಗಾಪುರ್, ಶಾಂಘೈ, ಚೀನಾದಲ್ಲಿ ಬೀಜಿಂಗ್, ಎಲ್ ಸಾಲ್ವಡಾರ್ನ ಸ್ಯಾನ್ ಸಾಲ್ವಡಾರ್, ಜಪಾನ್ನ ಟೋಕಿಯೊ, ಮೆಕ್ಸಿಕೊದ ಮೆಕ್ಸಿಕೋ ನಗರ, ಮ್ಯಾನ್ಮಾರ್ನ ಯಾಂಗೊನ್, ಮುಂಬೈ, ದೆಹಲಿ, ಭಾರತದ ಕೋಲ್ಕತ್ತಾ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ - ಈ ನಗರಗಳು ಆ ದಿನದಂದು ಸಂಪೂರ್ಣ ಚಂದ್ರ ಗ್ರಹಣದ ಕನಿಷ್ಠ ಭಾಗವನ್ನು ನೋಡಬಹುದುಃ 

ಲಘು ಬಣ್ಣದ ವಲಯದಲ್ಲಿರುವವರು ಭಾಗಶಃ ಚಂದ್ರಗ್ರಹಣವನ್ನು ಮಾತ್ರ ನೋಡಬಹುದು.

ಗ್ರಹಣವು ಪ್ರಾರಂಭವಾದಾಗ, ಭೂಮಿಯ ನೆರಳು ಮೊದಲು ಚಂದ್ರನನ್ನು ಸ್ವಲ್ಪ ಗಾಢವಾಗಿಸುತ್ತದೆ. ನಂತರ, ನೆರಳು ಚಂದ್ರನ ಭಾಗವನ್ನು "ಮುಚ್ಚಲು" ಪ್ರಾರಂಭಿಸುತ್ತದೆ.

ಚಂದ್ರ ಗ್ರಹಣವು ಮಾರ್ಚ್ 3,2026 ರಂದು 00:44 ಗೆ ಪ್ರಾರಂಭವಾಗುತ್ತದೆ  ಈ ಗ್ರಹಣವು 06:23 ಗೆ ಕೊನೆಗೊಳ್ಳುತ್ತದೆ, 

ಪೂರ್ವ ಆಸ್ಟ್ರೇಲಿಯಾ, ಏಷ್ಯಾ ಪೆಸಿಫಿಕ್ ದ್ವೀಪಗಳು, ಚೀನಾ ಮತ್ತು ಭಾರತೀಯ ಉಪಖಂಡದಲ್ಲಿ, ಮಾರ್ಚ್ 2 ರ ಸಂಜೆಯಿಂದ ಗ್ರಹಣವನ್ನು ಕಾಣಬಹುದು.

ಈ ಗ್ರಹಣದ ಒಟ್ಟು ಅವಧಿ 05 ಗಂಟೆ 39 ನಿಮಿಷಗಳು.

ಸಿಂಹ ರಾಶಿಯಲ್ಲಿ (ಸಿಂಹ) ಗ್ರಹಣವು ಸಂಭವಿಸಿದಂತೆ, ಇದು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಚಂದ್ರನನ್ನು ಹೊಂದಿದ್ದು, ಕೇತುವಿನೊಂದಿಗೆ 4 ಗ್ರಹಗಳನ್ನು ಹೊಂದಿರುತ್ತದೆ-ಧನುಷ್ಟದಲ್ಲಿ ಮಂಗಳ, ಶತಭಿಷಾದಲ್ಲಿ ರಾಹು ಮತ್ತು ಸೂರ್ಯ, ಕುಂಭ ರಾಶಿಯಲ್ಲಿ ಪೂರ್ವಭದ್ರ ನಕ್ಷತ್ರದಲ್ಲಿ ಬುಧ (ಹಿಮ್ಮುಖ ಚಲನೆ) ಅವುಗಳನ್ನು ಹೊಂದಿರಲಿದೆ.

ಈ 6 ಗ್ರಹಗಳು ಸಿಂಹ ಮತ್ತು ಕುಂಭ ರಾಶಿಯವರಿಗೆ ದೈಹಿಕ ಮತ್ತು ಆರ್ಥಿಕ ಸವಾಲುಗಳನ್ನು ಸೃಷ್ಟಿಸುತ್ತವೆ.

ಹಣಕಾಸಿನ ಒತ್ತಡಗಳು, ಪಾಲುದಾರರು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯಗಳು, ಕುಟುಂಬದಿಂದ ಸಹಕಾರವಿಲ್ಲದಿರುವುದು, ದೈಹಿಕ ಮತ್ತು ಮಾನಸಿಕ ಒತ್ತಡ, ನಿದ್ರಾಹೀನತೆಯು ಮುಂದಿನ 1 ತಿಂಗಳವರೆಗೆ ನಿಮ್ಮನ್ನು ಕಾಡಬಹುದು

ಆಗಾಗ್ಗೆ ಬದಲಾಗುತ್ತಿರುವ ತೆರಿಗೆ ನೀತಿಗಳು, ಯುದ್ಧದ ಪರಿಸ್ಥಿತಿಗಳು, ಆರ್ಥಿಕ ಹಿಂಜರಿತದಿಂದಾಗಿ ಉಂಟಾಗುವ ಆರ್ಥಿಕ ಅನಿಶ್ಚಿತತೆಯು ಅಸ್ಥಿರ ಮಾರುಕಟ್ಟೆಗಳಿಗೆ ಕಾರಣವಾಗುತ್ತದೆ. ಲೋಹಗಳು ಮತ್ತು ರಿಯಲ್ ಎಸ್ಟೇಟಿನಂತಹ ಸುರಕ್ಷಿತ ಹೂಡಿಕೆಗಳಿಗೆ ಜನರು  ಆಸಕ್ತಿ ತಾಳುತ್ತಾರೆ. 

ಪೂರ್ವಾಶಾಡ ನಕ್ಷತ್ರದಲ್ಲಿ ಜನಿಸಿದ ಜನರು ಶುಕ್ರನ ಸಂಚಾರ ಫಲದಿಂದ  ಮಾನಸಿಕವಾಗಿ ಮತ್ತು ದೈಹಿಕವಾಗಿ ಭಾರೀ ಪ್ರಕ್ಷುಬ್ಧತೆಯನ್ನು ಎದುರಿಸುತ್ತಾರೆ.

ಕುಂಭ ರಾಶಿಯಲ್ಲಿನ 4 ಗ್ರಹಗಳ ಮೇಲೆ ಗುರುಗ್ರಹದ ದೃಷ್ಟಿಯು ಸ್ವಲ್ಪ ಮಟ್ಟಿಗೆ ಅವುಗಳನ್ನು ಉಳಿಸುವ ಏಕೈಕ ಅಂಶವಾಗಿದೆ.

ಆಹಾರ ವ್ಯಾಪಾರ (ರೆಸ್ಟೋರೆಂಟುಗಳು ಮತ್ತು ವಿತರಣಾ ಅಪ್ಲಿಕೇಶನ್ನುಗಳು) ಅನೇಕ ದೇಶಗಳಲ್ಲಿ ತೀವ್ರ ಹಿನ್ನಡೆಗಳನ್ನು ಎದುರಿಸುತ್ತವೆ.

ಇರಾನ್ ಮತ್ತು ಇಸ್ರೇಲಿನಲ್ಲಿನ ಪರಿಸ್ಥಿತಿಯನ್ನು  ಸಂಭಾಳಿಸಲು ವಿಶ್ವ ನಾಯಕರು ಮಧ್ಯಪ್ರವೇಶಿಸುತ್ತಾರೆ.

.

Friday, February 20, 2026

"ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್

 ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಪ್ರೆಸ್‌ ಕ್ಲಬ್‌ನ ‘ವರ್ಷದ ವ್ಯಕ್ತಿ’ಪ್ರಶಸ್ತಿ

- ರಾಘವೇಂದ್ರ ಅಡಿಗ ಎಚ್ಚೆನ್.

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ನೀಡಿದ  ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಯೇ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ ಮತ್ತು ಖಚಿತತೆ ಸತೀಶ್ ಜಾರಕಿಹೊಳಿಯವರಿಗೆ ಇರುವ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ  ಜಾರಕಿಹೊಳಿಯವರನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ.  ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗಳ ಪಕ್ಕದಲ್ಲೇ ಜಾರಕಿಹೊಳಿಯವರ ಕೈಗಳಿವೆ ಎಂದು ನುಡಿದರು.
ಜಾರಕಿಹೊಳಿಯವರು ಹೆಚ್ಚು ಮಾತಾಡುವುದಿಲ್ಲ, ಐವತ್ತು ಮಂದಿ ಸೇರಿರುವ ಸಭೆಯಾಗಲಿ, ಐದು ಲಕ್ಷ ಮಂದಿ ಸೇರಿರುವ ಸಭೆಯಾಗಲಿ ಐದೇ ನಿಮಿಷದಲ್ಲಿ ಮಾತು ಮುಗಿಸುತ್ತಾರೆ ಎಂದು ಬಹಳ ಮಂದಿ ನನಗೆ ಹೇಳಿದ್ದಾರೆ. ಅವರಿಗೆಲ್ಲಾ ನಾನು ಒಂದೇ ಉತ್ತರ ಕೊಡುತ್ತೇನೆ, "ದಡದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಮುದ್ರದ ರಭಸ ಇರುವುದು ಅದರ ಆಳದಲ್ಲಿ. ಜಾರಕಿಹೊಳಿಯವರ ಮೌನದ ಆಳದಲ್ಲಿ ಅವರ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ ಎಂದರು.
ಯಾವತ್ತು Easy chair politics ಗೆ ಒರಗಿಕೊಳ್ಳದ ಸತೀಶ್ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಅದರಲ್ಲಿ ಸಕ್ಸಸ್ ಆಗುತ್ತಾರೆ. ಇದು ಸ್ಪಷ್ಟವಾಗಿ ಮತ್ತೊಮ್ಮೆ ಗೋಚರಿಸಿದ್ದು ಶಿಗ್ಗಾಂವ್ ಉಪ ಚುನಾವಣೆಯಲ್ಲಿ. ಯಾವ ಮಾಧ್ಯಮದವರೂ ಕಲ್ಪಿಸಿಕೊಳ್ಳದ ರೀತಿಯಲ್ಲಿ ಹಲವು ಸವಾಲುಗಳ ನಡುವೆಯೂ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡೇ ಬಂದರು. ಇದಕ್ಕಾಗಿ ಅವರು ಮಾಡಿದ ಕೆಲಸವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ."

"ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೇಗೆ ಇಡೀ ಕ್ಷೇತ್ರದ ತುಂಬ ಹರಡಿ ಹೋಗಿದ್ದರು. ಅವರ ಮೂಲಕ ಹೇಗೆ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಪಾಠ ಆಗುತ್ತದೆ ಎಂದು ವಿವರಿಸಿದರು.
ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ "ಮಾನವ ಬಂಧುತ್ವ ವೇದಿಕೆ" ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಇವತ್ತು ಅಭಿಮಾನಿ ಪಡೆಯನ್ನು ಕಟ್ಟುವುದು ಬಹಳ ಸಲೀಸು. ಧಾರವಾಹಿ ನಟರೂ ಅಭಿಮಾನಿ ಪಡೆ ಕಟ್ಟುತ್ತಾರೆ. ಆದರೆ ಸೈದ್ಧಾಂತಿಕ‌ ಪಡೆ ಕಟ್ಟವುದು ಬಹಳ ದೊಡ್ಡ ಸವಾಲು. ಅಧಿಕಾರ-ಹಣ-ಜಾತಿಯ ಬಲ ಇದ್ದರೆ ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳು ಸಾಲುಗಟ್ಟುತ್ತಾರೆ. ಆದರೆ ಸೈದ್ದಾಂತಿಕ ಪಡೆ ಕಟ್ಟಲು ನಿತ್ಯ ಕಸರತ್ತು ಮಾಡಬೇಕಾಗುತ್ತದೆ. ಈ ಕಸರತ್ತನ್ನು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ತುಂಬ ಮಾಡುತ್ತಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ನೀರು ಗೊಬ್ಬರ ಹಾಕುತ್ತಿದೆ ಎಂದು ವಿವರಿಸಿದರು.
ಜಾರಕಿಹೊಳಿ ಅವರಲ್ಲದೆ ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತಗಳು ಮತ್ತು ವಿಪರೀತ ಆರ್ಥಿಕ ಹೊರೆಯ ಬಳಿಕವೂ ಸಮತೋಲನದಿಂದ  ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೇ ನಾನು ಆಗಲೇ ಹೇಳಿದ್ದು, ಸತೀಶ್ ಅವರು ಕಷ್ಟವಾದ ಸವಾಲುಗಳಿಗೇ ಕೈ ಹಾಕಿ ಅದರಲ್ಲಿ ಸಕ್ಸಸ್ ಆಗುತ್ತಾರೆ.
ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ.  ಹಾಗೆಯೇ ಬಹಳ ದೊಡ್ಡ ಉದ್ಯಮಿಯಾಗಿ ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಸಕ್ಸಸ್ ಆಗಿದ್ದಾರೆ.  ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಪ್ರೆಸ್ ಕ್ಲಬ್ , ವರ್ಷದ ವ್ಯಕ್ತಿ ಪ್ರಶಸ್ತಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ನಮಿ MOVIE REVIEW : ಪ್ರೀತಿ, ದ್ವೇಷ ಮತ್ತು ಹುಲಿವೇಷ

 - ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಮಾರ್ನಮಿ
ನಿರ್ದೇಶನ: ರಿಷಿತ್‌ ಶೆಟ್ಟಿ
ನಿರ್ಮಾಣ:  ಗುಣಾಢ್ಯ ಪ್ರೊಡಕ್ಷನ್ಸ್  - ಶಿಲ್ಪಾ ನಿಶಾಂತ್, ನಿಶಾಂತ್ ಮುನಿಸ್ವಾಮಯ್ಯ
ತಾರಾಗಣ: ರಿತ್ವಿಕ್ ಮಠದ್‌, ಚೈತ್ರಾ ಆಚಾರ್, ಸೋನು ಗೌಡ, ಪ್ರಕಾಶ್‌ ತುಮ್ಮಿನಾಡು, ಜ್ಯೋತಿಶ್‌ ಶೆಟ್ಟಿ, ಸ್ವರಾಜ್ ಶೆಟ್ಟಿ,  ಸುಮನ್‌ ತಲ್ವಾರ್‌ ಮೊದಲಾದವರು
ರೇಟಿಂಗ್: 3/5 


ಚೇತು (ರಿತ್ವಿಕ್)‌ಗೆ ಚಿಕ್ಕ ವಯಸ್ಸಿನಲ್ಲಿ ಸೀತಾಳೆ ಸಿಡುಬು ಉಂಟಾಗಿದ್ದಾಗ ಅವನ ತಾಯಿ ಈರಿನ ದೇವಿಗೆ ನನ್ನ ಮಗ ಗುಣವಾದರೆ ಮುಂದೆ ಅವನಿಂದ ಮಾರ್ನಮಿ ( ನವರಾತ್ರಿ) ಉತ್ಸವಕ್ಕೆ ಹುಲಿವೇಷದ ಕುಣಿತ ಮಾಡಿಸುವುದಾಗಿ ಹರಕೆ ಕಟ್ಟಿಕೊಂಡಿರುತ್ತಾಳೆ. ಆದರೆ ತಾಯಿ ಅವನು ಚಿಕ್ಕವನಿರುವಾಗಲೇ ತೀರಿ ಹೋದ ಕಾರಣ ಚೇತು  ಮಾವನ ಆಸರೆಯಲ್ಲಿ ಬೆಳೆಯುತ್ತಾನೆ.  ಅವನೊಬ್ಬ ಯುವನಾಕನಾಗಿ ಊರಿನ ಪ್ರಮುಖರೆಲ್ಲರ ಕಣ್ಣು ಸೆಳೆಯುವಂತೆ ಬೆಳೆಯುತ್ತಿರುವಾಗಾಗಲೇ ಅದೇ ಊರಿನ ದೀಕ್ಷಾ  (ಚೈತ್ರಾ ಆಚಾರ್)‌ ಆಗಮನವಾಗುತ್ತದೆ. ಚೇತು ಹಾಗೂ ದೀಕ್ಷಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವಾಗಲೇ ವಿಧಿಯಾಟ ಎನ್ನುವಂತೆ ಅನಿರೀಕ್ಷಿತ ತಿರುವು ಬರುತ್ತದೆ. ಆ ಸಮಸ್ಯೆಗೆ ಕಾರಣವೇನು? ಅದರಿಂದ ಚೇತು ಹೇಗೆ ಪಾರಾದ? ಇದನ್ನು ತಿಳಿಯಲು ನೀವು  ಈ ವಾರ ತೆರೆಗೆ ಬಂದ "ಮಾರ್ನಮಿ" ಚಿತ್ರವನ್ನು ಸಿಇನಿಮಾ ಮಂದಿರದಲ್ಲಿ ನೋಡಬೇಕು.
ನಿರ್ದೇಶಕ ರಿಷಿತ್‌ ಶೆಟ್ಟಿತಮ್ಮ ಚೊಚ್ಚಲ ಚಿತ್ರದಲ್ಲಿ ಭರವಸೆ ಹುಟ್ಟಿಸಿದ್ದಾರೆ. ತುಳುನಾಡಿನ ಮಾರ್ನಮಿ ಆಚರಣೆ, ಹುಲಿವೇಷದ ಕುಣಿತ, ಅದಕ್ಕೆ ಬೇಕಾದ ತಯಾರಿಗಳು ಇದನ್ನು ಸ್ವಲ್ಪ ವಿವರವಾಗಿಯೇ ತೋರಿಸಲಾಗಿದೆ. ಆದರೆ ಪ್ರಥಮಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಸ್ವಲ್ಪ ನಿಧಾನಗತಿಯೆಂದು ತೋರುತ್ತದೆ. . ಚರಣ್‌ ರಾಜ್‌ ಅವರ ಸಂಗೀತದಲ್ಲಿ "ಏ ಮಾರಾಯ.." ಹಾಡು ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ. , . ಶಿವಸೇನ ಅವರ ಛಾಯಾಗ್ರಹಣ ಮೆಚ್ಚುವಂತಿದೆ.
ಕಿರುತೆರೆಯಲ್ಲಿ ಹೆಸರಾದ ರಿತ್ವಿಕ್ ಮಠದ್‌  ಈ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ. ಮೂಲತಃಅ ಉತ್ತರ ಕರ್ನಾತಕದವರಾದ ರಿತ್ವಿಕ್ ಮಠದ್‌ ಕರಾವಳಿ ಹುಡುಗನಾಗಿ ಅಭಿನಯಿಸುವ ಮೂಲಕ ಮನಸ್ಸು ತಟ್ಟುತ್ತಾರೆ. ಅವರದು ಇದರಲ್ಲಿ ಎರಡು ಶೇಡ್ ನ ಪಾತ್ರವಿದೆ. ಇನ್ನು ಚೈತ್ರಾ ಆಚಾರ್ ಅಭಿನಯಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಇವರೊಂದಿಗೆ ಪ್ರಕಾಶ್‌ ತುಮ್ಮಿನಾಡು, ಜ್ಯೋತಿಶ್‌ ಶೆಟ್ಟಿ, ಸ್ವರಾಜ್ ಶೆಟ್ಟಿ,  ಸುಮನ್‌ ತಲ್ವಾರ್‌ ಅವರು ಕಥೆಗೆ ತಕ್ಕ ಅಭಿನಯ ಕೊಟ್ಟಿದ್ದರೆ ಸೋನು ಗೌಡ ಒಂದು ವಿಶೇಷ ಪಾತ್ರದಲ್ಲಿ ಬಂದು ಹೋಗುತ್ತಾರೆ. ಒಟ್ಟಾರೆ "ಮಾರ್ನಮಿ" ಒಂದು ಉತ್ತಮ ಮನರಂಜನಾತ್ಮಕ ಚಿತ್ರ ಎನ್ನಲು ಯಾವ ಅಡ್ಡಿಯೂ ಇಲ್ಲ. 

Monday, February 02, 2026

ವಲವಾರ ಚಿತ್ರ ವಿಮರ್ಶೆ - ಒಂದೇ ರಾತ್ರಿಯಲ್ಲಿ ಜೀವನಾನುಭವ ಕಲಿಸುವ 'ಗೌರ’, ಬಾಲ್ಯವನ್ನು ಕಳೆದುಕೊಂಡವರ ಸಿನಿಮಾ


- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ –  ವಲವಾರ

ನಿರ್ಮಾಪಕರು – ಜೆ. ಗಿರಿಧರ್,   ಅನಿರುದ್ ಗೌತಮ್, ಸಹನ ನಾಗರಾಜ್, ಸಾನ್ಯಾ ಅರೋರ.

ನಿರ್ದೇಶನ –  ಸುತಾನ್ ಗೌಡ

ಕಲಾವಿದರು – ವೇದಿಕ್ ಕೌಶಲ್, ಶಯನ್, ಮಾಲತೇಶ್, ಹರ್ಷಿತಾ ಗೌಡ, ಅಭಯ್ ಮುಂತಾದವರು.

ರೇಟಿಂಗ್: 3.5/5



“ವಲವಾರ” ಚಿತ್ರವು ಈವಾರ ಬಿಡುಗಡೆಯಾದ ಕನ್ನಡ ಸಿನಿಮಾವಾಗಿದ್ದು, ಸುತಾನ್ ಗೌಡ ನಿರ್ದೇಶನದಲ್ಲಿ ತಯಾರಾಗಿದೆ. ಇದು ಬಡ ಕುಟುಂಬದಲ್ಲಿನ ಮಕ್ಕಳ ಮನಸ್ಥಿತಿ ಹಾಗೂ ಮಕ್ಕಳಿನ ನಡುವಿನ ತಾರತಮ್ಯದ ಬಗ್ಗೆ ಹೆಣೆಯಲಾದ ಕಥೆಯಾಗಿದೆ. 

ಚಿಕ್ಕಹಳ್ಳಿ ಊರಿನ ಬಡ ಕುಟುಂಬದಲ್ಲಿ ಕುಂಡೇಸಿ (ವೇದಿಕ್ ಕೌಶಲ್) ಮತ್ತು ಚಿಕ್ಕ ತಮ್ಮ ಕೊಸುಡಿ (ಶಯನ್) ಅಣ್ಣ-ತಮ್ಮಂದಿರು. ತಂದೆ (ಮಾಲತೇಶ್) ಚಿಕ್ಕ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾನೆ, ಹಿರಿಯ ಮಗ ಕುಂಡೇಸಿಯನ್ನು ಕಂಡರೆ ಸಿಡುಕುವುದು, ಹೊಡೆಯುವುದು, ರೇಗುವುದೆ ಮಾಡುತ್ತಾನೆ ಇದರಿಂದ ಕುಂಡೇಸಿ ಮಾನಸಿಕವಾಗಿ ನೋವು ಅನುಭವಿಸುತ್ತಾನೆ. ತಂದೆಯನ್ನು ಕಟ್ಟಿಹಾಕಿ ಹೊಡೆಯಬೇಕೆಂಬ ಅವನ ಸುಪ್ತ ಮನಸ್ಸಿನ ವ್ಯಾಕುಲತೆಯನ್ನು ನಿರ್ದೇಶಕರು ಮೊದಲ ದೃಶ್ಯದಲ್ಲೇ ಕನಸಿನ ಮೂಲಕ ತೋರಿಸಿದ್ದಾರೆ. ತಂದೆ ಮಾಲತೇಶ್ ಗೆ ಅವರ ಅಪ್ಪನ ಕಡೆಯಿಂದ ಬಂದ ಒಂದಷ್ಟು ಭೂಮಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಶತಾಯ ಗತಾಯ ಕಷ್ಟ ಪಡುತ್ತಲೇ ಇರುತ್ತಾನೆ. ಹಾಗೆ ರಿಜಿಸ್ಟ್ರಾರ್ ಕಛೇರಿಯ ಅಧಿಕಾರಿ ನಿಮ್ಮ ಮನೆಯ ಹಸು ಕರು ಹಾಕಿದ ಕೂಡಲೇ ಅದರ ಮೊದಲ ಗಿಣ್ಣು ಹಾಲು ತಂದು ಕೊಡುವಂತೆ ಹೇಳಿರುತ್ತಾನೆ. ಆದರೆ ಹಸು ಕರು ಹಾಕಬಾಕಾದ ನಿಗದಿತ ದಿನಾಂಕ ಮುಗಿದು 15 ದಿನವಾಗಿದ್ದರೂ ಕರು ಹಾಕಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಂದ ಬೇಸತ್ತಿದ್ದ ಮಾಲತೇಶ್ ತನ್ನ ಕೋಪ, ದುಗುಡವನ್ನೆಲ್ಲಾ ಮಗ ಕುಂಡೇಸಿ ಮೇಲೆ ತೀರಿಸಿ ಕೊಳ್ಳುತ್ತಿರುತ್ತಾನೆ. ಆದರೆ ಕುಂಡೇಸಿಗೆ ಎಲ್ಲಾ ರೀತಿಯಲ್ಲಿ ಸಮಾಧಾನ ಮಾಡಿ, ಪ್ರೀತಿ ತೋರಿಸಿ ಸಂತೈಸುವುದು ಅವನ ತಾಯಿ. ಒಂದು ದಿನ ಅಪ್ಪ ಸಿಟಿಗೆ ಹೋದಾಗ ಹಸುವನ್ನು ಮೇಯಿಸಲು ಅಣ್ಣ, ತಮ್ಮರಾದ ಕುಂಡೇಸಿ ಮಾತ್ತು ಕೋಸೂಡಿ ಇಬ್ಬರು ಹೋಗುತ್ತಾರೆ. ತಮ್ಮನ ಎಡವಟ್ಟಿನಿಂದ ಗೌರಿ ಹಸು ಕಾಣೆಯಾದಾಗ, ಕುಂಡೇಸಿ ಅಪ್ಪನಿಗೆ ಗೊತ್ತಾದರೆ ಏನು ಮಾಡುವುದು ಎಂದು ನನೆದು ಹೆದರುತ್ತಾನೆ. ಒಂದೇ ರಾತ್ರಿಯಲ್ಲಿ ಬದುಕಿನ ಹಲವು ಕಷ್ಟಗಳನ್ನು ಎದುರಿಸುತ್ತಾನೆ. 


ಚಿತ್ರವು  ಮಗುವಿನ ಭಯ, ಅತಂಕದ ನಿರ್ಧಾರಗಳನ್ನು ಒಳಗೊಂಡಿದೆ. ನಟನೆ ಮತ್ತು ತಂತ್ರಗಾರಿಕೆ ವೇದಿಕ್ ಕೌಶಲ್‌ನ ಕುಂಡೇಸಿ ಪಾತ್ರ ಹಾಗೂ ಕೋಸೂಡಿ ಶಯನ್‌ ಪಾತ್ರಗಳ ಅಭಿನಯ  ಅಚ್ಚುಕಟ್ಟಾಗಿ ಮತ್ತು ಭಾವನಾತ್ಮಕವಾಗಿದೆ, ಹರ್ಷಿತಾ ಗೌಡ ತಾಯಿಯಾಗಿ ಮತ್ತು ಮಾಲತೇಶ್ ತಂದೆಯಾಗಿ ಸಹಜವಾಗಿ ಕಾಣುತ್ತಾರೆ. ಅಭಯ್ ಕೋಳಿ ಕಳ್ಳನಾಗಿ ನೈಜವಾಗಿ ಅಭಿನಯಿಸಿದ್ದಾರೆ.

ಬಾಲರಾಜ್ ಗೌಡ ರವರ ಛಾಯಾಗ್ರಹಣ, ಕದ್ರಿ ಮಣಿಕಾಂತ್ ರವರ ಸಂಗೀತ ಮತ್ತು ಸರಳ ಚಿತ್ರಕಥೆ ಚಿತ್ರದ ಶಕ್ತಿಯಾಗಿದೆ. ಮಕ್ಕಳಲ್ಲಿ ತಾರತಮ್ಯ ಮಾಡಬಾರದು ಮತ್ತು ಮಕ್ಕಳ ಚಿಕ್ಕ ಚಿಕ್ಕ ಆಸೆಗಳನ್ನು ಕಡೆಗಣಿಸ ಬಾರದು ಎಂಬುದನ್ನು ನಿರ್ದೇಶಕರು ಚನ್ನಾಗಿ ತೋರಿಸಿದ್ದಾರೆ.