- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಮಾರ್ನಮಿನಿರ್ದೇಶನ: ರಿಷಿತ್ ಶೆಟ್ಟಿ
ನಿರ್ಮಾಣ: ಗುಣಾಢ್ಯ ಪ್ರೊಡಕ್ಷನ್ಸ್ - ಶಿಲ್ಪಾ ನಿಶಾಂತ್, ನಿಶಾಂತ್ ಮುನಿಸ್ವಾಮಯ್ಯ
ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಆಚಾರ್, ಸೋನು ಗೌಡ, ಪ್ರಕಾಶ್ ತುಮ್ಮಿನಾಡು, ಜ್ಯೋತಿಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಸುಮನ್ ತಲ್ವಾರ್ ಮೊದಲಾದವರು
ರೇಟಿಂಗ್: 3/5
ಚೇತು (ರಿತ್ವಿಕ್)ಗೆ ಚಿಕ್ಕ ವಯಸ್ಸಿನಲ್ಲಿ ಸೀತಾಳೆ ಸಿಡುಬು ಉಂಟಾಗಿದ್ದಾಗ ಅವನ ತಾಯಿ ಈರಿನ ದೇವಿಗೆ ನನ್ನ ಮಗ ಗುಣವಾದರೆ ಮುಂದೆ ಅವನಿಂದ ಮಾರ್ನಮಿ ( ನವರಾತ್ರಿ) ಉತ್ಸವಕ್ಕೆ ಹುಲಿವೇಷದ ಕುಣಿತ ಮಾಡಿಸುವುದಾಗಿ ಹರಕೆ ಕಟ್ಟಿಕೊಂಡಿರುತ್ತಾಳೆ. ಆದರೆ ತಾಯಿ ಅವನು ಚಿಕ್ಕವನಿರುವಾಗಲೇ ತೀರಿ ಹೋದ ಕಾರಣ ಚೇತು ಮಾವನ ಆಸರೆಯಲ್ಲಿ ಬೆಳೆಯುತ್ತಾನೆ. ಅವನೊಬ್ಬ ಯುವನಾಕನಾಗಿ ಊರಿನ ಪ್ರಮುಖರೆಲ್ಲರ ಕಣ್ಣು ಸೆಳೆಯುವಂತೆ ಬೆಳೆಯುತ್ತಿರುವಾಗಾಗಲೇ ಅದೇ ಊರಿನ ದೀಕ್ಷಾ (ಚೈತ್ರಾ ಆಚಾರ್) ಆಗಮನವಾಗುತ್ತದೆ. ಚೇತು ಹಾಗೂ ದೀಕ್ಷಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವಾಗಲೇ ವಿಧಿಯಾಟ ಎನ್ನುವಂತೆ ಅನಿರೀಕ್ಷಿತ ತಿರುವು ಬರುತ್ತದೆ. ಆ ಸಮಸ್ಯೆಗೆ ಕಾರಣವೇನು? ಅದರಿಂದ ಚೇತು ಹೇಗೆ ಪಾರಾದ? ಇದನ್ನು ತಿಳಿಯಲು ನೀವು ಈ ವಾರ ತೆರೆಗೆ ಬಂದ "ಮಾರ್ನಮಿ" ಚಿತ್ರವನ್ನು ಸಿಇನಿಮಾ ಮಂದಿರದಲ್ಲಿ ನೋಡಬೇಕು.
ನಿರ್ದೇಶಕ ರಿಷಿತ್ ಶೆಟ್ಟಿತಮ್ಮ ಚೊಚ್ಚಲ ಚಿತ್ರದಲ್ಲಿ ಭರವಸೆ ಹುಟ್ಟಿಸಿದ್ದಾರೆ. ತುಳುನಾಡಿನ ಮಾರ್ನಮಿ ಆಚರಣೆ, ಹುಲಿವೇಷದ ಕುಣಿತ, ಅದಕ್ಕೆ ಬೇಕಾದ ತಯಾರಿಗಳು ಇದನ್ನು ಸ್ವಲ್ಪ ವಿವರವಾಗಿಯೇ ತೋರಿಸಲಾಗಿದೆ. ಆದರೆ ಪ್ರಥಮಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಸ್ವಲ್ಪ ನಿಧಾನಗತಿಯೆಂದು ತೋರುತ್ತದೆ. . ಚರಣ್ ರಾಜ್ ಅವರ ಸಂಗೀತದಲ್ಲಿ "ಏ ಮಾರಾಯ.." ಹಾಡು ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ. , . ಶಿವಸೇನ ಅವರ ಛಾಯಾಗ್ರಹಣ ಮೆಚ್ಚುವಂತಿದೆ.
ಕಿರುತೆರೆಯಲ್ಲಿ ಹೆಸರಾದ ರಿತ್ವಿಕ್ ಮಠದ್ ಈ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ. ಮೂಲತಃಅ ಉತ್ತರ ಕರ್ನಾತಕದವರಾದ ರಿತ್ವಿಕ್ ಮಠದ್ ಕರಾವಳಿ ಹುಡುಗನಾಗಿ ಅಭಿನಯಿಸುವ ಮೂಲಕ ಮನಸ್ಸು ತಟ್ಟುತ್ತಾರೆ. ಅವರದು ಇದರಲ್ಲಿ ಎರಡು ಶೇಡ್ ನ ಪಾತ್ರವಿದೆ. ಇನ್ನು ಚೈತ್ರಾ ಆಚಾರ್ ಅಭಿನಯಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಇವರೊಂದಿಗೆ ಪ್ರಕಾಶ್ ತುಮ್ಮಿನಾಡು, ಜ್ಯೋತಿಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಸುಮನ್ ತಲ್ವಾರ್ ಅವರು ಕಥೆಗೆ ತಕ್ಕ ಅಭಿನಯ ಕೊಟ್ಟಿದ್ದರೆ ಸೋನು ಗೌಡ ಒಂದು ವಿಶೇಷ ಪಾತ್ರದಲ್ಲಿ ಬಂದು ಹೋಗುತ್ತಾರೆ. ಒಟ್ಟಾರೆ "ಮಾರ್ನಮಿ" ಒಂದು ಉತ್ತಮ ಮನರಂಜನಾತ್ಮಕ ಚಿತ್ರ ಎನ್ನಲು ಯಾವ ಅಡ್ಡಿಯೂ ಇಲ್ಲ.

No comments:
Post a Comment