ಬೆಂಗಳೂರಿನ
ತಾಜ್ ವೆಸ್ಟ್ ಎಂಡ್ ನಲ್ ಅದ್ದೂರಿಯಾಗಿ ನಡೆಯಿತು ಕಾವ್ಯಗೌಡ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿ
ಹರಸಿದರು
'ಗಾಂಧಾರಿ', 'ಶುಭ
ವಿವಾಹ', 'ರಾಧಾ
ರಮಣ' ಧಾರಾವಾಹಿಗಳ
ಖ್ಯಾತಿಯ ನಟಿ ಕಾವ್ಯಾ ಗೌಡ ಅವರ ಸೀಮಂತ ಸಮಾರಂಭದ ಫೋಟೋಗಳು ಇಲ್ಲಿವೆ.
ಬೆಂಗಳೂರಿನ
ತಾಜ್ ವೆಸ್ಟ್ ಎಂಡ್ ನಲ್ ಅದ್ದೂರಿಯಾಗಿ ನಡೆಯಿತು ಕಾವ್ಯಗೌಡ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿ
ಹರಸಿದರು
'ಗಾಂಧಾರಿ', 'ಶುಭ
ವಿವಾಹ', 'ರಾಧಾ
ರಮಣ' ಧಾರಾವಾಹಿಗಳ
ಖ್ಯಾತಿಯ ನಟಿ ಕಾವ್ಯಾ ಗೌಡ ಅವರ ಸೀಮಂತ ಸಮಾರಂಭದ ಫೋಟೋಗಳು ಇಲ್ಲಿವೆ.
ಕೊಟ್ಟೂರು ಬಳ್ಳಾರಿ ಜಿಲ್ಲೆಯ ಕುಡ್ಲಿಗಿ ತಾಲೂಕಿನಲ್ಲಿದೆ. ನಿಜ ಹೇಳಬೇಕೆಂದರೆ ಈ ಸ್ಥಳದ ಹೆಸರೆ ಕೊಟ್ಟೂರೇಶ್ವರ ಸ್ವಾಮಿಯಿಂದ ಬಂದುದಾಗಿದೆ. ಕೊಟ್ಟೂರು ಒಂದು ತಾಲೂಕು ಪ್ರದೇಶವಾಗಿದ್ದು ಮಂಡಕ್ಕಿ ಮೆಣಸಿನಕಾಯಿಗೆ ಹೆಚ್ಚು ಜನಪ್ರೀಯವಾಗಿದೆ. ಬಳ್ಳಾರಿ ಹಾಗೂ ಕುಡ್ಲಿಗಿಯಿಂದ ಕೊಟ್ಟೂರಿಗೆ ತಲುಪಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಕೊಟ್ಟೂರಿನಲ್ಲಿರುವ ಕೊಟ್ಟೂರೇಶ್ವರ ದೇವಾಲಯವು ನಾಲ್ಕು ಭಾಗಗಳಲ್ಲಿ ವಿಂಗಡನೆಗೊಂದಿದೆ. ಅವುಗಳೆಂದರೆ ಮುರ್ಕಲಮಠ, ತೋಟಲಮಠ, ದರ್ಬಾರ್ ಮಠ ಅಥವಾ ದೊಡ್ಡ ಮಠ ಹಾಗೂ ಗಚ್ಚಿನಮಠ. ಕೊಟ್ಟೂರಿನಲ್ಲಿ ಮೂರು ಕಲ್ಲುಮಠ, ಹಿರೇಮಠ ದರ್ಬಾರ್ ಮಠ, ತೊಟ್ಟಿಲು ಮಠ, ಗಚ್ಚಿನ ಮಠ ಹಾಗೂ ಮರಿ ಮಠ ಎಂಬ ಬಸವೇಶ್ವರರ ಐದು ಮಠಗಳಿವೆ. ಮೂರುಕಲ್ಲು ಮಠದಲ್ಲಿನ ಮೂರು ಶಿಲಾಗೋಪುರಗಳು ಚಾಲುಕ್ಯ ಮತ್ತು ಹೊಯ್ಸಳರ ಕಾಲದ ಜೈನ್ಯರ ಚೈತ್ಯಾಲಯಗಳ ಮಾದರಿಯಲ್ಲಿವೆ. ತೊಟ್ಟಿಲುಮಠದಲ್ಲಿ ಇರುವ ತೊಟ್ಟಿಲನ್ನು ತೂಗಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂತಲು ಕರೆಯುತ್ತಾರೆ. ಪ್ರತಿ ವಷ೯ ಫೆಬ್ರುವರಿ ಅಥವಾ ಮಾಚ್೯ ತಿಂಗಳಲ್ಲಿ ರಥೋತ್ಸವ ಜರುಗುವುದು ಡಿಸೆ೦ಬರ್ ತಿ೦ಗಳಲ್ಲಿ ಲಕ್ಷ ದೀಪೊತ್ಸವ ಜರುಗುವುದು. ಈ ಸ್ವಾಮಿಯ ಹಿರೇಮಠಕ್ಕೆ ಅನೇಕ ಭಕ್ತರಿದ್ದಾರೆ. ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವತಿ೯ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.
ಜೀವಿತಾವಧಿಯಲ್ಲಿ ಮರುಳನಂತೆ ಇದ್ದುಕೊಂಡೇ ಅಸಂಖ್ಯಾತ ಭಕ್ತರ ಮನಗೆದ್ದ ಗುರು ಬಸವೇಶ್ವರರು ಲಕ್ಷಾಂತರ ಭಕ್ತರ ಆರಾಧ್ಯ ದೈವ. ಕಾಯಕ ಯೋಗಿ, ಶರಣ, ಮಾನವತವಾದಿ. ಗುರು ಬಸವೇಶ್ವರ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಅರಸೀಕೆರೆ ಕೋಲಶಾಂತಯ್ಯ, ಹರಪನಹಳ್ಳಿ ಕೆಂಪಯ್ಯ, ಕೂಲಹಳ್ಳಿ ಮದ್ದಾನಸ್ವಾಮಿ ಅವರನ್ನು ಪಂಚಗಣಾಧೀಶ್ವರೆಂದು ಕರೆಯಲಾಗುತ್ತದೆ. ವೀರಶೈವ ಪರಂಪರೆಯ ನೂತನ ಗಣಗಳ ಪಟ್ಟಿಯಲ್ಲಿ ಕೊಟ್ಟೂರು ಗುರುಬಸವೇಶ್ವರರು ಪ್ರಮುಖರು. ಗುರುಬಸವೇಶ್ವರರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನವರು. ಅಲ್ಲಿಂದ ಅವರು ಕರ್ನಾಟಕದ ಎಡೆಯೂರಿಗೆ ಬಂದು ಅಲ್ಲಿ ಸಿದ್ಧಲಿಂಗ ಯತಿಗಳ ಶಿಷ್ಯತ್ವ ಸ್ವೀಕರಿಸಿ ನಂತರ ಚಾಮರಾಜನಗರದಲ್ಲಿ ಧರ್ಮಕಾರ್ಯದಲ್ಲಿ ತೊಡಗಿದರು. ನಂತರ ಹಂಪಿಗೆ ಬಂದು ಅಲ್ಲಿಂದ ಕೊಟ್ಟೂರಿಗೆ ಬಂದರು ಎಂಬ ಮಾತು ಭಕ್ತರ ವಲಯದಲ್ಲಿ ಪ್ರಚಲಿತವಿದೆ. ಅವರ ಕಾಲ ಕ್ರಿ.ಶ.1580ರ ಅಸುಪಾಸು. ಬಸವಲಿಂಗ ಕವಿ ಬರೆದ ಕೊಟ್ಟೂರು ಬಸವೇಶ್ವರ ಚರಿತ್ರೆ (1678) ಕೃತಿಯು ಕೊಟ್ಟೂರಿನ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಬಾಲಬಸವರು ಹಾಡುವ ಗೋಣಿ ಬಸವನ ಕಾವ್ಯಗಳು ಗುರುಬಸವೇಶ್ವರರ ಬಗ್ಗೆ ವಿಫುಲ ಮಾಹಿತಿ ನೀಡುತ್ತವೆ. ಒಂದು ಕಾಲದಲ್ಲಿ ಜೈನರ ಕೇಂದ್ರ ಸ್ಥಳವಾದ ಕೊಟ್ಟೂರು ಗುರುಬಸವೇಶ್ವರರಿಂದಾಗಿ ಶೈವ ಪಂಥದ ಕೇಂದ್ರವಾಯಿತು. ಗುರುಬಸವೇಶ್ವರರನ್ನು ಅವಧೂತರೆಂದೂ, ಇನ್ನು ಕೆಲವರು ಹುಚ್ಚಕೊಟ್ರಯ್ಯ ಎಂದೂ ಸಂಬೋಧಿಸುತ್ತಿದ್ದರು
ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ್ವರ ಸ್ವಾಮಿಗಳು. ಇವರು ನೆಲೆಸಿದ ಸ್ಥಳವೆ ಇಂದು ಕೊಟ್ಟೂರು ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.
ಕೊಟ್ಟೂರಶ್ವರ ಸ್ವಾಮಿ ನೆಲೆ ನಿಲ್ಲುವ ಮುಂಚೆ ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರಶ್ವೇರ ಸ್ವಾಮಿ ನೆಲೆಯ ಕ್ಷೇತ್ರವಾಗಿತ್ತು, ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು ಊರುರು ಸುತ್ತುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಯಿತು ಆ ಸಮಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ಕೊಟ್ಟುರೇಶ್ವರರು ತಮಗೆ ತಂಗಲು ಸ್ಥಳವನ್ನು ನೀಡುವಂತೆ ಕೋರಲು ಒಪ್ಪಿದ ವೀರಭದ್ರೇಶ್ವರರರು ತಮ್ಮ ಆಸ್ತಾನದಲ್ಲಿ ಮಲಗಲು ಸ್ಥಳವನ್ನು ನೀಡಿದರು ಬೆಳಗಾಗುವ ಹೊತ್ತಿಗೆ ಸಂಪೂರ್ಣಾವಾಗಿ ಇಡಿ ಆಸ್ತಾನವನ್ನು ಆವರಿಸಿದ ಕೊಟ್ಟೂರೇಶ್ವರರು ಶ್ರೀ ವೀರಭದ್ರನಿಗೆ ಸ್ಥಳವೇ ಇಲ್ಲದಂತೆ ಮಾಡಿದರು ಈ ಕುರಿತು ವೀರಭದ್ರನು ಕೊಟ್ಟೂರೇಶ್ವರರನ್ನಲ್ಲಿ ಕೇಳಲಾಗಿ ನೀವು ನಿಮ್ಮ ಸ್ಥಳವನ್ನು ನನಗೆ ನೀಡಿ ನೀವು ಕೊಡದಗುಡ್ಡಕ್ಕೆ ಹೋಗಿ ನೆಲೆಸಿರಿ ಎಂದು ಹೇಳಿದರು ಅದರಂತೆ ವೀರಭದ್ರ ದೇವರು ಇನ್ನು ಮುಂದೆ ಆ ನಿಮ್ಮ ಸ್ಥಳವನ್ನು ನೀವು ಯಾರಿಗೂ ಕೊಡಬಾರದು ಆ ಕ್ಷೇತ್ರವು "ಕೊಡದಗುಡ್ಡ" ಎಂದು ಪ್ರಖ್ಯಾತವಾಗಲಿ ಅಂತಯೇ ನೀವು ನನಗೆ ಕೊಟ್ಟ ಈ ಶಿಖಾಪುರ ಇನ್ನು ಮುಂದೆ "ಕೊಟ್ಟೂರು" ಎಂದು ಪ್ರಖ್ಯಾತವಾಗಲಿ ಎಂದು ಹರಸಿದರು.
ಗುರು ಕೊಟ್ಟೂರೇಶ್ವರರು ಕಾಷ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡಿ ಕೊಟ್ಟೂರಿನಲ್ಲಿ ನೆಲೆಸಿದರು. ಒಂದೊಮ್ಮೆ ದೆಹಲಿಯಲ್ಲಿ ಅಕ್ಬರನ ಆಡಳಿತವಿದ್ದಾಗ ಗುರುಗಳು ಅಕ್ಬರನ ರಜಪೂತ ಪತ್ನಿಯ ಕೊಣೆಯಲ್ಲಿ ಪ್ರಕಟರಾದರು ಹಾಗೂ ಆಕೆಗೆ ಇವರು ಸಂತನ ರೂಪದಲ್ಲಿ ದರ್ಶನ ನೀಡಿದರು. ಹೀಗೆ ತಕ್ಷಣ ತನ್ನ ಪತ್ನಿಯ ಕೋಣೆಯಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವಾದುದನ್ನು ಭಟರಿಂದ ತಿಳಿದ ಅಕ್ಬರ ಸಿಟ್ಟಿನಿಂದ ಬಂದು ನೋಡಿದಾಗ ಒಬ್ಬ ಮಧ್ಯ ವಯಸ್ಕನಂತೆ ಗುರುಗಳು ಆತನಿಗೆ ಕಂಡರು. ಕೋಪ ತಡೆಯಲಾಗದೆ ತನ್ನ ಖಡ್ಗವನ್ನು ತೆಗೆದು ಅವನ ಮೇಲ ಬೀಸಿದಾಗ ಅದು ಹಾರವಾಗಿ ಗುರುಗಳನ್ನು ಶೃಂಗರಿಸಿತು. ಇದರಿಂದ ಅಕ್ಬರನಿಗೆ ಆ ಮಹಾನ್ ಚೇತನದ ಅರಿವುಂಟಾಗಿ ತನ್ನ ಆಭಾರವನ್ನು ಪ್ರಕಟಿಸುತ್ತ ಅವರಿಗೆ ಒಂದು ಮಂಚ ಹಾಗೂ ಖಡ್ಗವನ್ನು ಕಾಣಿಕೆಯಾಗಿ ನೀಡಿದನು. ಇಂದಿಗೂ ಆ ಮಂಚವನ್ನು ಕೊಟ್ಟೂರಿನ ಗಚ್ಚಿನ ಮಠದಲ್ಲಿ ಕಾಣಬಹುದು. ಇನ್ನು ಹರಪನಳ್ಳಿ ಪಾಳೇಗಾರರು ತಮ್ಮ ಕಷ್ಟ ಕಾಲದಲ್ಲಿ ಅವರ ದರ್ಶನಕ್ಕೆ ಬರುತ್ತಿದ್ದರಂತೆ
ಬರೀ ದಕ್ಷಿಣಕ್ಕಷ್ಟೇ ಸೀಮಿತಗೊಂಡಿದ್ದ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸುವ ಸದುದ್ದೇಶದಿಂದ ಡಾ. ಎಂ.ಎ.ಮುಮ್ಮಿಗಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಆಯೋಜಿಸಿರುವದು ಉತ್ತಮ ಬೆಳವಣಿಗೆ , ಈ ಭಾಗದ ಅನೇಕ ಕಲಾವಿದರಿಗೂ ಇದರಿಂದ ಲಾಭವಾಗಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆರಂಭಗೊಂಡ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ,ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿ ನಗರ , ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಸೂಕ್ತ ಕಲಾ ಪ್ರತಿಭೆಗಳಿವೆ , ಆದರೆ ಅವರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆಗಳಿಲ್ಲ, ಡಾ. ಮುಮ್ಮಿಗಟ್ಟಿ ಅವರು ದೈರ್ಯದಿಂದ ಸತತ ಮೂರನೇ ಬಾರಿಗೆ ಇಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿರುವದು ಸ್ತುತ್ಯಾರ್ಹ , ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಮಟ್ಟದ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಸೂಕ್ತ ರೀತಿಯ ಅನುದಾನ , ಸಹಾಯ , ಸಹಕಾರ ನೀಡುವ ಅವಶ್ಯಕತೆ ಇದೆ , ನನ್ನ ಪರಿಮಿದಿಯಲ್ಲಿ ಲಭ್ಯವಾಗುವ ಸಹಾಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್ ರಾಯಭಾರಿ ಶಿವರಾಜ್ ಕುಮಾರ್ ಅವರ ಜಾಹೀರಾತನ್ನು ಬಿಡುಗಡೆ ಮಾಡಿದರು.
ನಂದಿನಿ ಬ್ರ್ಯಾಂಡ್ಗೆ ರಾಯಭಾರಿಯಾಗಲು ನಟ ಶಿವರಾಜ್ಕುಮಾರ್ ಕೂಡ ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಇದು ನಮ್ಮ ಸರ್ಕಾರದ್ದು, ನಮ್ಮ ಪ್ರಾಡೆಕ್ಟ್. ನಾವು ನಮ್ಮ ರೈತರಿಗೋಸ್ಕರ ಯಾವಾಗಲು ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
https://twitter.com/Mooviecampus/status/1737774327313912021
ಈ ಹಿಂದೆ ದಿವಂಗತ ಪುನೀತ್ ರಾಜಕುಮಾರ್ ಕೆಎಂಎಫ್ ರಾಯಭಾರಿಯಾಗಿದ್ದರು. ಇದೀಗ ಶಿವರಾಜ್ ಕುಮಾರ್ ಅವರನ್ನ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ನಟ ಶಿವರಾಜ್ ಕುಮಾರ್ಗೆ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.
ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯ ಪಡೆದ ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು) ಅವರಿಗೆ ತವರಿನ ಗೌರವ ದೊರಕಿದೆ. ರಂಗ ಚಿನ್ನಾರಿ ಕಾಸರಗೋಡು ಮತ್ತು ಇತರ ಸಂಘಟನೆಗಳು ತನ್ನೂರಿನ ಸಾಧಕರಿಗೆ ಗೌರವಿಸಿವೆ.
ಕಾಸರಗೋಡು ಪದ್ಮಗಿರಿ ಕಲಾಕುಟೀರ ಕರಂದಕ್ಕಾಡುವಿನಲ್ಲಿ ನಡೆದ ಹುಟ್ಟುರ ಗೌರವ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮಿ, ಕಾಸರಗೋಡು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಾಜಿ ಸಚಿವೆ, ನಟಿ ಉಮಾಶ್ರೀ, ನಿರ್ದೇಶಕ ಶಿವಧ್ವಜ್ ಮತ್ತು ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾನಾಸು ಅವರಿಗೆ ಸನ್ಮಾನಿಸಿದ್ದಾರೆ.
ಕರ್ನಾಟಕಸಮಿತಿ ಕಾಸರಗೋಡು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟ, ಕೂಡ್ಲು ಯುವಜನ ಸಂಘ, ಕನ್ನಡ ಭವನ ಮತ್ತು ಗ್ರಂಥಾಲಯ, ಯುವನಿಕಾ ಕಾಸರಗೋಡು, ಗಮಕ ಕಲಾ ಪರಿಷತ್ತು, ತರುಣ ಕಲಾ ವೃದ್ಧ ಉಪ್ಪಳ, ಗೀತಾ ವಿಹಾರ ಕಾಸರಗೋಡು, ಗಡಿನಾಡ ಕಲಾವಿದರು ಹೀಗೆ 24ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬಾನಾಸು ಅವರಿಗೆ ಸನ್ಮಾನಿಸಿ ಗೌರವಿಸಿವೆ. ವರ್ಣರಂಜಿತ ಈ ಸಮಾರಂಭದಲ್ಲಿ ಕಾಸರಗೋಡು ಚಿನ್ನಾ, ಸತೀಶ್ಚಂದ್ರ, ಸತ್ಯನಾರಾಯಣ ಕೆ. ಮನೋಹರ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನಾಲ್ಕು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ, ವಿಶ್ಲೇಷಕರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿರುವ ಸುಬ್ರಮಣ್ಯ ಬಾಡೂರು, ಕನ್ನಡ ಸಿನಿಮಾ ರಂಗಕ್ಕೆ ಬಾ.ನಾ.ಸುಬ್ರಮಣ್ಯ ಎಂದೇ ಖ್ಯಾತರಾದವರು. ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಸಂಪಾದಕರೂ ಆದವರು.
ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು, ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಹಲವು ದಶಕಗಳ ಕಾಲ ಕೆಲಸ ಮಾಡಿದ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಸಂದಿದೆ ವಿಶೇಷ.
ಟೈಮ್ ಟ್ರಾವೆಲ್ ಮತ್ತು ಸಾಪೇಕ್ಷತಾ ಸಿದ್ಧಾಂತವು ಇಂದಿನ ಮಾನವರಿಗೆ ಇನ್ನೂ ವಿಜ್ಞಾನದ ಕಾಲ್ಪನಿಕ ವಿಷಯಗಳಾಗಿವೆ. ಆದರೆ ಪುರಾಣಗಳಲ್ಲಿ, ಅವುಗಳನ್ನು ಹಲವಾರು ಬಾರಿ ಚರ್ಚಿಸಲಾಗಿದೆ.
ಅಂತಹ ಒಂದು ಶ್ರೇಷ್ಠ ಉದಾಹರಣೆಯೆಂದರೆ ರಾಜ ಕಕುದ್ಮಿ ಮತ್ತು ಅವನ ಮಗಳು ರೇವತಿ ಬೇರೆ ಬೇರೆ ಲೋಕಕ್ಕೆ (ಆಯಾಮಗಳಿಗೆ) ಪ್ರಯಾಣಿಸಿ ಭವಿಷ್ಯತ್ ಕಾಲದಲ್ಲಿ ಭೂಮಿಗೆ ಮರಳಿದರು.
ಕಕುದ್ಮಿ ಸೂರ್ಯವಂಶದ ರಾಜನಾಗಿದ್ದ. ರೇವತಿ ಕಕುದ್ಮಿಯ ಮಗಳ. ಅವಳು ಸೌಂದರ್ಯವತಿ ಹಾಗೂ ಅಪೂರ್ವ ಸಾಧಕಳಾಗಿದ್ದಳು. ಅವಳು ಮದುವೆಯ ವಯಸ್ಸಿಗೆ ಬಂದಾಗ ಕಕುದ್ಮಿ, ತನ್ನ ಮಗಳಿಗೆ ಭೂಮಿಯ ಮೇಲೆ ಯಾರೂ ಸರಿಯಾದ ವರರಿಲ್ಲ ಎಂದು ಭಾವಿಸಿ ತನ್ನ ಮಗಳಿಗೆ ಸೂಕ್ತವಾದ ವರನನ್ನು ಸೂಚಿಸಲು ಸೃಷ್ಟಿಕರ್ತನಾದ ಬ್ರಹ್ಮ ದೇವರ ಬಳಿಗೆ ಮಗಳು ರೇವತಿಯೊಡನೆ ಹೋದನು. ಹಾಗೆ ಅವರು ಬ್ರಹ್ಮನ ಬಳಿಗೆ ಬಂದಾಗ ಬ್ರಹ್ಮನು ಗಂಧರ್ವರ ಸಂಗೀತ ಕಾರ್ಯಕ್ರಮವನ್ನು ಕೇಳುತ್ತಿದ್ದನು, ರಾಜನು ಪ್ರದರ್ಶನ ಮುಗಿಯುವವರೆಗೆ ತಾಳ್ಮೆಯಿಂದ ಕಾಯುತ್ತಿದ್ದ. ಒಮ್ಮೆ ಬ್ರಹ್ಮನ ಸಂಗೀತ ಕಾರ್ಯಕ್ರಮ ಮುಗಿದ ಬಳಿಕ ರಾಜ ಕಕುಡ್ಮಿ ನಮ್ರತೆಯಿಂದ ನಮಸ್ಕರಿಸಿ, ತನ್ನ ಕೋರಿಕೆಯನ್ನು ಸಲ್ಲಿಸಿದನು ಮತ್ತು ತನ್ನ ಮಗಳಿಗಾಗಿ ವರಗಳನ್ನು ಸೂಚಿಸುವಂತೆ ಬೇಡಿಕೆ ಇಟ್ಟನು. ಇದನ್ನು ಕೇಳಿದ ಬ್ರಹ್ಮನು ಜೋರಾಗಿ ನಕ್ಕುಬಿಟ್ಟನು. ಆ ನಂತರ ಅಸ್ತಿತ್ವದ ವಿವಿಧ ಸಮತಲಗಳಲ್ಲಿ ಸಮಯವು ವಿಭಿನ್ನವಾಗಿ ಚಲಿಸುತ್ತದೆ ಎಂದು ವಿವರಿಸಿದನು. ಹಾಗೆ ರಾಜ ಕಕುಡ್ಮಿ ಬ್ರಹ್ಮಲೋಕದಲ್ಲಿ ಕಳೆದ ಈ ಸಮಯ ಮಾನವ ಲೋಕದ ಸಮಯದ ಲೆಕ್ಕಾಚಾರದಲ್ಲಿ 27 ಚತುರ್ಯುಗಗಳಾಗಿತ್ತು.
ಬ್ರಹ್ಮನು ಕಕುದ್ಮಿಗೆ ಹೇಳಿದನು, “ಓ ರಾಜನೇ, ನೀನು ಯಾರನ್ನು ನಿನ್ನ ಹೃದಯದಾಳದಲ್ಲಿ ನಿನ್ನ ಅಳಿಯನನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದೀಯೋ ಅವರೆಲ್ಲರೂ ಕಾಲಾನಂತರದಲ್ಲಿಸಾವನ್ನಪ್ಪಿದ್ದಾರೆ. ಇಪ್ಪತ್ತೇಳು ಚತುರ್ಯುಗಗಳು ಈಗಾಗಲೇ ಕಳೆದಿವೆ. ನೀನು ಈಗಾಗಲೇ ನಿರ್ಧರಿಸಿರುವ ವರಗಳು ಯಾರೂ ಈಗ ಬದುಕಿಲ್ಲ. ಅವರ ಪುತ್ರರು, ಮೊಮ್ಮಕ್ಕಳು ಮತ್ತು ಇತರ ವಂಶಸ್ಥರು ಈಗಿದ್ದು ಅವರಾರ ಹೆಸರನ್ನು ನೀನು ಕೇಳುವುದಕ್ಕೂ ಸಾಧ್ಯವಿಲ್ಲ.ಆದುದರಿಂದ ನೀನು ನಿನ್ನ ಮಗಳನ್ನು ಬೇರೆ ವರನಿಗೆ ಕೊಟ್ಟು ವಿವಾಹ ಮಾಡಬೇಕು. ಏಕೆಂದರೆ ನೀನು ಈಗ ಒಬ್ಬಂಟಿಯಾಗಿರುವೆ ಮತ್ತು ನಿನ್ನ ಸ್ನೇಹಿತರು, ಮಂತ್ರಿಗಳು, ಸೇವಕರು, ಹೆಂಡತಿಯರು, ಬಂಧುಗಳು, ಸೈನ್ಯಗಳು ಮತ್ತು ಸಂಪತ್ತುಗಳು ಬಹಳ ಹಿಂದೆಯೇ ಕಾಲದ ಕೈಯಿಂದ ನಾಶವಾಗಿವೆ.
ಈ ಸುದ್ದಿಯನ್ನು ಕೇಳಿ ರಾಜ ಕಕುದ್ಮಿ ಆಶ್ಚರ್ಯಚಕಿತನಾದನು. ಆದಾಗ್ಯೂ, ಬ್ರಹ್ಮನು ಅವನನ್ನು ಸಾಂತ್ವನಗೊಳಿಸಿದನು ಮತ್ತು ರಕ್ಷಕನಾದ ವಿಷ್ಣುವು ಪ್ರಸ್ತುತ ಕೃಷ್ಣ ಮತ್ತು ಬಲರಾಮನ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿದ್ದಾನೆ ಎಂದು ತಿಳಿಸಿದನು. ಅಲ್ಲದೆ ಅವನು ಬಲರಾಮನನ್ನು ರೇವತಿಗೆ ಯೋಗ್ಯ ಪತಿಯಾಗಿ ಶಿಫಾರಸು ಮಾಡಿದನು. ಕಕುದ್ಮಿ ಮತ್ತು ರೇವತಿ ನಂತರ ಭೂಮಿಗೆ ಮರಳಿದರು, ಆಗ ಭೂಮಿಯಲ್ಲಾದ ಬದಲಾವಣೆ ಕಂಡು ಅವರು ಆಘಾತಕ್ಕೊಳಗಾದರು. ಭೂದೃಶ್ಯ ಮತ್ತು ಪರಿಸರವು ಬದಲಾದದ್ದು ಮಾತ್ರವಲ್ಲದೆ, ಮಧ್ಯಂತರ 27 ಚತುರ್ಯುಗಗಳಲ್ಲಿ (ಮಹಾಯುಗಗಳು), ಮಾನವನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಕಾಸದ ಚಕ್ರಗಳಲ್ಲಿ, ಮಾನವಕುಲವು ಸಾಕಷ್ಟು ಬದಲಾಯಿಸಿತ್ತು. (ಭಾಗವತ ಪುರಾಣವು ಪುರುಷರ ಜನಾಂಗವು "ಸ್ಥಳದಲ್ಲಿ ಕ್ಷೀಣಿಸುತ್ತಿದೆ, ಚೈತನ್ಯದಲ್ಲಿ ಮತ್ತು ಬುದ್ಧಿಶಕ್ತಿಯಲ್ಲಿ ದುರ್ಬಲವಾಗಿದೆ" ಎಂದು ಅವರು ಕಂಡುಕೊಂಡರು ಎಂದು ವಿವರಿಸುತ್ತದೆ.)
ರಾಜ ಮತ್ತು ಅವನ ಪುತ್ರಿ ಬಲರಾಮನನ್ನು ಕಂಡು ಮದುವೆಯ ಪ್ರಸ್ತಾಪವನ್ನು ಮಾಡಿದರು, ಅದನ್ನು ಬಲರಾಮ ಒಪ್ಪಿಕೊಂಡನು. ಆದರೆ ರೇವತಿ ಹಿಂದಿನ ಕಾಲದಿಂದ ಬಂದವಳಾಗಿದ್ದ ಕಾರಣ ಅವಳು ಬಲರಾಮನಿಗಿಂತ ಎತ್ತರವಾಗಿದ್ದಳು. ಹಾಗಾಗಿ ಬಲರಾಮ ತನ್ನ ನೇಗಿಲನ್ನು ಬಳಸಿ ಅವಳ ಎತ್ತರ ಕಡಿಮೆ ಮಾಡಲು ಪ್ರಯತ್ನಿಸಿದನು. ಆನಂತರ ಅವರ ವಿವಾಹ ವಿಧಿವತ್ತಾಗಿ ನಡೆಯಿತು.
ರಾಜ ಮುಚುಕುಂದನ ಸಮಯ ಪ್ರಯಾಣ ಮತ್ತು ಮೂಸಿ ನದಿ
ಮುಚುಕುಂದ (ಶ್ರೀರಾಮನ ಪೂರ್ವಜ), ರಾಜ ಮಾಂಧಾತನ ಮಗ ಇಕ್ಷ್ವಾಕು ರಾಜವಂಶದಲ್ಲಿ (ಸೂರ್ಯವಂಶ) ಜನಿಸಿದನು. ಯುದ್ಧದಲ್ಲಿ, ರಾಕ್ಷಸರು ದೇವತೆಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಆದ್ದರಿಂದ ದೇವತೆಗಳ ರಾಜ ಇಂದ್ರ ಮುಚುಕುಂದ ರಾಜನಿಗೆ ಯುದ್ಧದಲ್ಲಿ ಸಹಾಯ ಮಾಡುವಂತೆ ವಿನಂತಿಸಿದನು.
ರಾಜ ಮುಚುಕುಂದ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡ. ರಾಕ್ಷಸರ ವಿರುದ್ಧ ದೀರ್ಘಕಾಲ ಹೋರಾಡಿದ ದೇವತೆಗಳು ಶಿವನ ಮಗನಾದ ಕಾರ್ತಿಕೇಯನಂತಹ ಸಮರ್ಥ ಸೇನಾಪತಿಯನ್ನು ಪಡೆಯುವವರೆಗೆ. ದೇವತೆಗಳಿಗೆ ಸಮರ್ಥ ಸೇನಾಪತಿ ಇಲ್ಲದ ಕಾರಣ, ರಾಜ ಮುಚುಕುಂದನು ರಾಕ್ಷಸ ದಾಳಿಯಿಂದ ಅವರನ್ನು ರಕ್ಷಿಸಿದನು,
ಆಗ ಇಂದ್ರನು ಮುಚುಕುಂದ ರಾಜನಿಗೆ ಹೇಳಿದನು, “ಓ ರಾಜ, ನಿನ್ನ ಸ್ವಂತ ಕುಟುಂಬ ಜೀವನವನ್ನು ತ್ಯಾಗಮಾಡಿ ನಮಗೆ ನೀಡಿದ ಸಹಾಯ ಮತ್ತು ರಕ್ಷಣೆಗಾಗಿ ನಾವು ದೇವತೆಗಳು ನಿಮಗೆ ಋಣಿಯಾಗಿದ್ದೇವೆ. ಇಲ್ಲಿ ಸ್ವರ್ಗದಲ್ಲಿ, ಒಂದು ವರ್ಷವು ಭೂಮಿಯ ಮುನ್ನೂರ ಅರವತ್ತು ವರ್ಷಗಳಿಗೆ ಸಮನಾಗಿರುತ್ತದೆ. ಇದು ಬಹಳ ಸಮಯದಿಂದ, ನಿಮ್ಮ ರಾಜ್ಯ ಮತ್ತು ಕುಟುಂಬವು ಕಾಲಾನಂತರದಲ್ಲಿ ನಾಶವಾಗಿರುವುದರಿಂದ ಯಾವುದೇ ಕುರುಹು ಇಲ್ಲ. ನೀವು ತ್ರೇತಾಯುಗದಲ್ಲಿ ಇಲ್ಲಿಗೆ ಬಂದಿದ್ದೀರಿ ಮತ್ತು ಈಗ ಭೂಮಿಯ ಮೇಲೆ ಅದರ ದ್ವಾಪರ ಯುಗ.
ನಾವು ನಿಮ್ಮೊಂದಿಗೆ ಸಂತೋಷದಿಂದ ಮತ್ತು ಸಂತುಷ್ಟರಾಗಿದ್ದೇವೆ, ಆದ್ದರಿಂದ ಮೋಕ್ಷ (ವಿಮೋಚನೆ) ಹೊರತುಪಡಿಸಿ ಯಾವುದೇ ವರವನ್ನು ಕೇಳಿ ಏಕೆಂದರೆ ಅದು ನಮ್ಮ ಸಾಮರ್ಥ್ಯಗಳನ್ನು ಮೀರಿದೆ". ಎಂದನು.
ದೇವತೆಗಳ ಪರವಾಗಿ ಯುದ್ಧ ಮಾಡುವಾಗ, ರಾಜ ಮುಚುಕುಂದನಿಗೆ ಒಂದು ಕ್ಷಣವೂ ಮಲಗಲು ಅವಕಾಶ ಸಿಗಲಿಲ್ಲ. ಈಗ, ಸುಸ್ತಾಗಿತ್ತು. ಅವನಿಗೆ ತುಂಬಾ ನಿದ್ರೆ ಬರುತ್ತಿತ್ತು. ಆದ್ದರಿಂದ, ಅವನು ಹೇಳಿದನು, “ದೇವತೆಗಳ ರಾಜನೇ ನಾನು ಮಲಗಲು ಬಯಸುತ್ತೇನೆ. ನನ್ನ ನಿದ್ದೆ ಕೆಡಿಸುವ ಧೈರ್ಯ ತೋರುವ ಯಾರಾದರೂ ತಕ್ಷಣವೇ ಸುಟ್ಟು ಬೂದಿಯಾಗಬೇಕು".
ಇಂದ್ರನು ಹೇಳಿದನು, "ಹಾಗೇ ಆಗಲಿ, ಭೂಮಿಗೆ ಹೋಗು ಮತ್ತು ನಿದ್ರೆ ಮಾಡು. ನಿನ್ನನ್ನು ಎಚ್ಚರಗೊಳಿಸುವವರು ಬೂದಿಯಾಗುತ್ತಾರೆ". ಎಂದನು. ಇದರ ನಂತರ, ರಾಜ ಮುಚುಕುಂದನು ಭೂಮಿಗೆ ಬಂದನು. ಅವನು ಒಂದು ಗುಹೆಯನ್ನು ಆರಿಸಿಕೊಂಡನು, ಅಲ್ಲಿ ಅವನು ತೊಂದರೆಯಾಗದಂತೆ ಮಲಗುತ್ತಾನೆ.
ಕಾಲಯವನ ರಾಜನು ವರದ ಕಾರಣದಿಂದಾಗಿ ಯುದ್ಧದಲ್ಲಿ ಅಜೇಯ ಮತ್ತು ಸಾಟಿಯಿಲ್ಲದವನಾಗಿದ್ದನು, ಆದರೆ ಅವನು ದಯೆಯಿಲ್ಲದವನೂ ಕ್ರೂರಿಯೂ ಆಗಿದ್ದನು. ಯುದ್ಧದಲ್ಲಿ ಅವನನ್ನು ಸೋಲಿಸುವ ಏಕೈಕ ವ್ಯಕ್ತಿ ಕೃಷ್ಣ ಎಂದು ಅವನು ತಿಳಿದುಕೊಳ್ಳುತ್ತಾನೆ ಮತ್ತು ಈ ಸವಾಲನ್ನು ಸ್ವೀಕರಿಸಿ ಕೃಷ್ಣನ ರಾಜ್ಯವಾದ ಮಥುರಾವನ್ನು ಆಕ್ರಮಿಸಲು ಹೊರಟನು. ಎರಡು ಸೈನ್ಯಗಳು ಯುದ್ಧದಲ್ಲಿ ಪರಸ್ಪರ ಮುಖಾಮುಖಿಯಾದಾಗ, ಕೃಷ್ಣನು ತನ್ನ ರಥದಿಂದ ಇಳಿದು ಹೊರಟು ಹೋಗುತ್ತಾನೆ, ಕಾಲಯವನನು ಹಿಂಬಾಲಿಸಿ ಬರುತ್ತಾನೆ. ಬಹಳ ಸಮಯದ ನಂತರ ಕೃಷ್ಣ, ಕತ್ತಲೆಯಾದ ಗುಹೆಯನ್ನು ಪ್ರವೇಶಿಸುತ್ತಾನೆ. ಈ ಗುಹೆಯಲ್ಲಿ ಮುಚುಕುಂದನು ದೇವತೆಗಳ ರಾಜನಿಂದ ಆಶೀರ್ವಾದ ಪಡೆದಂದಿನಿಂದ ಮಲಗಿರುತ್ತಾನೆ. ಅವನ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರು ತಕ್ಷಣ ಮರಣಿಸುತ್ತಾರೆ. ಆಗ ಕೃಷ್ಣನನ್ನೇ ಹಿಂಬಾಲಿಸಿ ಬಂದ ಕಾಲಯವನ ಕೋಪದ ಭರದಲ್ಲಿ ಮತ್ತು ಕತ್ತಲೆಯಲ್ಲಿ ನೋಡಲು ಸಾಧ್ಯವಾಗದೆ ಮುಚುಕುಂದನನ್ನು ಕೃಷ್ಣನೆಂದು ತಪ್ಪಾಗಿ ಭಾವಿಸುತ್ತಾನೆ. ಮುಚಕುಂದನು ತನ್ನ ಕಣ್ಣುಗಳನ್ನು ತೆರೆದಾಗ, ಅವನ ನೋಟವು ಕಾಲಯವನ ಮೇಲೆ ಬೀಳುತ್ತದೆ, ಅವನು ತಕ್ಷಣವೇ ಸುಟ್ಟು ಸಾವನ್ನಪ್ಪುತ್ತಾನೆ. ಕೃಷ್ಣನು ಮುಚುಕುಂದನಿಗೆ ಅನಂತ ಪದ್ಮನಾಭ ಸ್ವಾಮಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ (ಮುಚುಕುಂದನು ಅನೇಕ ವರ್ಷಗಳ ಕಾಲ ಮಲಗಿದ್ದ ಅದೇ ಸ್ಥಾನದಲ್ಲಿ).
ಆ ಗುಹೆಯ ಸಮೀಪದಿಂದ ತನ್ನ ಹರಿವನ್ನು ಪ್ರಾರಂಭಿಸುವ ನದಿಯನ್ನು ಈಗ ಮುಚುಕುಂದ ನದಿ ಎಂದು ಕರೆಯಲಾಗುತ್ತದೆ. ಕಾಲಾನಂತರದಲ್ಲಿ, ಇದನ್ನು ಮೂಸಿ ನದಿ ಎಂದು ಕರೆಯಲಾಗುತ್ತದೆ, ಇದು ಭಾರತದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಹೈದರಾಬಾದ್ ಮೂಲಕ ಹರಿಯುತ್ತದೆ.
ತ್ರಿಪುರ ರಹಸ್ಯದಲ್ಲಿ ಗಂಡಶೈಲವಲೋಕನಂ (ದತ್ತಾತ್ರೇಯನು ಪರಶುರಾಮನಿಗೆ ಹೇಳಿದ ಪ್ರಸಂಗ)
ಅದ್ವೈತ ವೇದಾಂತದ ಅಂತಿಮ ಪುಸ್ತಕವಾದ ತ್ರಿಪುರ ರಹಸ್ಯವು ಟೈಮ್ ಟ್ರಾವೆಲ್ ಕುರಿತು ಒಂದು ಅಧ್ಯಾಯವನ್ನು ಚರ್ಚಿಸುತ್ತದೆ. ವಂಗ ರಾಜ ಸುಷೇಣನ ಸಹೋದರ ಮಹಾಸೇನನು ಅಶ್ವಮೇಧ ಯಾಗವನ್ನು ಮಾಡಲು ತನ್ನ ಸೈನ್ಯವನ್ನು ಕುದುರೆಯೊಂದಿಗೆ ಕಳುಹಿಸಿದನು. ಧ್ಯಾನದಲ್ಲಿದ್ದ ತಂಗನೆಂಬ ಋಷಿಯನ್ನು ಸೇನೆಯು ತಲುಪಿದಾಗ ಅವರಿಗೆ ಗೌರವ ಕೊಡದೆ ಮುಂದೆ ಸಾಗಿತು. ಋಷಿಯ ಮಗ ತನ್ನ ತಂದೆಗೆ ಆಗುವ ಅವಮಾನವನ್ನು ಗಮನಿಸಿದನು ಮತ್ತು ಕೋಪಗೊಂಡನು. ಅವನು ಯಜ್ಞದ ಕುದುರೆಯನ್ನು ಹಿಡಿದು ಅದನ್ನು ಕಾವಲು ಕಾಯುವ ವೀರರ ವಿರುದ್ಧ ಹೋರಾಡಿದನು. ಅವರು ಅವನನ್ನು ಎಲ್ಲಾ ಕಡೆಯಿಂದ ಸುತ್ತುವರೆದರು ಆದರೆ ಅವನು ಕುದುರೆಯೊಂದಿಗೆ ಅವರ ಕಣ್ಣುಗಳ ಮುಂದೆ ಬೆಟ್ಟವನ್ನು (ಗಂಡಶೈಲ) ಪ್ರವೇಶಿಸಿದನು. ಬೆಟ್ಟದಲ್ಲಿ ನಾಪತ್ತೆಯಾದನು.
ಇದನ್ನು ಗಮನಿಸಿದ ದಾಳಿಕೋರರು ಬೆಟ್ಟದ ಮೇಲೆ ದಾಳಿ ನಡೆಸಿದರು. ಋಷಿಯ ಮಗ ದೊಡ್ಡ ಸೈನ್ಯದೊಂದಿಗೆ ಮತ್ತೆ ಕಾಣಿಸಿಕೊಂಡನು, ಶತ್ರುಗಳೊಂದಿಗೆ ಹೋರಾಡಿದನು, ಅವರನ್ನು ಸೋಲಿಸಿದನು ಮತ್ತು ಸುಸೇನನ ಸೈನ್ಯವನ್ನು ನಾಶಪಡಿಸಿದನು. ಅವನು ಎಲ್ಲಾ ರಾಜಕುಮಾರರನ್ನು ಒಳಗೊಂಡಂತೆ ಅನೇಕ ಯುದ್ಧ ಕೈದಿಗಳನ್ನು ಸೆರೆಹಿಡಿದನು. ನಂತರ ಮತ್ತೆ ಬೆಟ್ಟವನ್ನು ಪ್ರವೇಶಿಸಿದನು. ತಪ್ಪಿಸಿಕೊಂಡ ಕೆಲವು ಅನುಯಾಯಿಗಳು ಸುಷೇನನ ಬಳಿಗೆ ಓಡಿಹೋಗಿ ಎಲ್ಲವನ್ನೂ ಹೇಳಿದರು. ಸುಷೇಣನು ಆಶ್ಚರ್ಯಚಕಿತನಾದನು ಮತ್ತು ಋಷಿಯನ್ನು ಗೌರವಿಸಿ ಕುದುರೆಯನ್ನು ಮರಳಿ ತರಲು ತನ್ನ ಸಹೋದರನಿಗೆ ಹೇಳಿದನು. ರಾಜನ ಸಮಸ್ಯೆಯನ್ನು ತಿಳಿದ ತಂಗನನು ತನ್ನ ಮಗನನ್ನು ಕುದುರೆಯನ್ನು ಬಿಡುವಂತೆ ಕೇಳಿದನು. ಮಗ ಸಹ ಅದರಂತೆಯೇ ಮಾಡಿದನು. ಆದರೆ ರಾಜನಿಗೆ ಬೆಟ್ಟದೊಳಗಿಂದ ಹೇಗೆ ಬೃಹತ್ ಸೈನ್ಯವು ಹೊರಹೊಮ್ಮಿತು ಎಂದು ತಿಳಿಯುವ ಕುತೂಹಲ ಉಂಟಾಯಿತು.
ತಂಗನ ಮಗ ಮಹಾಸೇನನು ತನ್ನ ಭೌತಿಕ ದೇಹವನ್ನು ಬೆಟ್ಟದ ಹೊರಗೆ ಬಿಟ್ಟು ಅವನ ಅತಿವಾಹಿಕ ಶರೀರದೊಡನೆ ಒಳಗೆ ಪ್ರವೇಶಿಸಿದ್ದನು. ಹಾಗೆ ಮಾಡುತ್ತಿದ್ದ ಹಾಗೆ ಮಹಾಸೇನನು ಮೇಲಿನ ಆಕಾಶವನ್ನು ನೋಡಿದನು, ರಾತ್ರಿಯ ಕತ್ತಲೆಯಲ್ಲಿ ಆವರಿಸಲ್ಪಟ್ಟು ನಕ್ಷತ್ರಗಳಿಂದ ಹೊಳೆಯುತ್ತಿದ್ದ ಆ ಆಕಾಶಕ್ಕೆ ಏರಿದನು ಮತ್ತು ಕೆಳಗೆ ನೋಡಿದನು; ಅವನು ಚಂದ್ರನ ಮೇಲೆ ಬಂದನು. ಬಳಿಕ ಸೂರ್ಯ, ಹಿಮಾಲಯದ ಶಿಖರಗಳಿಗೆ ತೆರಳಿದನು. ಅಲ್ಲಿಂದ ದೂರ ದೂರದ ಭೂ ಭಾಗಗಳನ್ನು ಕಂಡನು. ದೂರದ ಲೋಕಗಳಲ್ಲಿ ಕೆಲವೆಡೆ ಕತ್ತಲು ಆವರಿಸಿತ್ತು; ಭೂಮಿಯು ಕೆಲವರಲ್ಲಿ ಚಿನ್ನವಾಗಿತ್ತು; ನದಿಗಳು ಮತ್ತು ಪರ್ವತಗಳಿಂದ ಹಾದುಹೋಗುವ ಸಾಗರಗಳು ಮತ್ತು ದ್ವೀಪ ಖಂಡಗಳು ಇದ್ದವು; ಇಂದ್ರ ಮತ್ತು ದೇವರುಗಳು, ಅಸುರರು, ಮಾನವರು, ರಾಕ್ಷಸರು ಮತ್ತು ಆಕಾಶದ ಇತರ ಜನಾಂಗಗಳಿಂದ ಜನಿಸಲ್ಪಟ್ಟ ಸ್ವರ್ಗಗಳು ಇದ್ದವು. ಸಂತನು ತನ್ನನ್ನು ಸತ್ಯಲೋಕದಲ್ಲಿ ಬ್ರಹ್ಮನಾಗಿಯೂ, ವೈಕುಂಠದಲ್ಲಿ ವಿಷ್ಣುವಾಗಿಯೂ ಮತ್ತು ಕೈಲಾಸದಲ್ಲಿ ಶಿವನಾಗಿಯೂ ತನ್ನ ಮೂಲ-ಸ್ವತಃ ರಾಜನಾಗಿ ಉಳಿದುಕೊಂಡಿರುವಾಗ ಪ್ರಸ್ತುತ ಜಗತ್ತಿನಲ್ಲಿ ಆಳುತ್ತಿರುವುದನ್ನು ಅವನು ಕಂಡುಕೊಂಡನು. ಹೀಗೆ ಇದು ಅಲ್ಲಿನ ಸಮಯಕ್ಕನುಸಾರ ಒಂದು ದಿನ ಸಾಗಿತು. ಆದರೆ ಸಾಮಾನ್ಯ ಭೂಮಿಯಲ್ಲಿ ಮಾನವನ ದಿನಗಳ ಲೆಕ್ಕಾಚಾರದಲ್ಲಿ ಈ ಪ್ರಯಾಣ 1,200,000,000 ವರ್ಷಗಳಾಗಿದ್ದವು.
ಮಾತಾ ತ್ರಿಪುರ ಸುಂದರಿ ದೇವಸ್ಥಾನ (Mata Tripura Sundari Temple)
ತ್ರಿಪುರ ರಾಜ್ಯದ ಅಗರ್ತಲಾ ನಗರದಲ್ಲಿರುವ ತ್ರಿಪುರ ಸುಂದರಿ ದೇವಾಲಯ ಅದೇ ಹೆಸರಿನ ದೇವಿಗೆ ಸಮರ್ಪಿತವಾಗಿರುವ ದೇವಾಲಯ. ಈ ದೇವಿಗೆ ಸ್ಥಳೀಯರು ದೇವಿ ತ್ರಿಪುರೇಶ್ವರಿ ಎಂದು ಕರೆಯುತ್ತಾರೆ. ದೇವಾಲಯವು ತ್ರಿಪುರಾದ ಅಗರ್ತಲಾದಿಂದ ಸುಮಾರು 55 ಕಿಮೀ ದೂರದಲ್ಲಿರುವ ಪುರಾತನ ನಗರವಾದ ಉದಯಪುರದಲ್ಲಿದೆ ಮತ್ತು ಅಗರ್ತಲಾದಿಂದ ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಈಶಾನ್ಯ ರಾಜ್ಯಗಳಲ್ಲಿನ ಅತ್ಯಂತ ಪ್ರಸಿದ್ದ ಹಾಗೂ ಪವಿತ್ರ ದೇವಾಲಯಗಳ ಪೈಕಿ ತ್ರಿಪುರ ಸುಂದರಿ ದೇವಾಲಯ ಅತ್ಯಂತ ಹೆಸರಾಗಿದೆ. ಮಾತಾಬರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ಆಮೆಯ (ಕುರ್ಮಾ) ಗೂನು ಹೋಲುವ ಸಣ್ಣ ಬೆಟ್ಟದ ಮೇಲಿದೆ. ಕೂರ್ಮಪೃಷ್ಠಾಕೃತಿ ಎಂದು ಕರೆಯಲ್ಪಡುವ ಈ ಆಕಾರವನ್ನು ಶಕ್ತಿ ದೇವತೆಗಳಿಗೆ ಅತ್ಯಂತ ಪವಿತ್ರವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸ್ಥಳಕ್ಕೆ ಕೂರ್ಮ ಪೀಠ ಎಂದೂ ಕರೆಯಲಾಗುತ್ತದೆ.
ಸತೀ ದೇವಿಯ ಎಡಗಾಲಿನ ಕಿರುಬೆರಳು ಇಲ್ಲಿ ಬಿದ್ದಿದೆ ಎಂದು ಪುರಾಣ ಹೇಳುತ್ತದೆ. ಈ ದೇವಾಲಯದಲ್ಲಿ ತ್ರಿಪುರ ಸುಂದರಿಯ ಜೊತೆ ಭೈರವ ತ್ರಿಪುರೇಶ ಸನ್ನಿಧಾನವೂ ಇದೆ. 1501ರಲ್ಲಿ ಪುರಾ ಧನ್ಯ ಮಾಣಿಕ್ಯ ಮಹಾರಾಜ ಈ ದೇವಾಲಯ ನಿರ್ಮಾಣ ಮಾಡಿದ್ದಾರೆನ್ನಲು ದಾಖಲೆಗಳಿವೆ.
ದೇವಾಲಯದ ಗರ್ಭಗುಡಿಯಲ್ಲಿ ದೇವಿಯ ಎರಡು ಒಂದೇ ರೀತಿಯ ಆದರೆ ವಿಭಿನ್ನ ಗಾತ್ರದ ಕಪ್ಪು ಕಲ್ಲಿನ ವಿಗ್ರಹಗಳಿದ್ದು 5 ಅಡಿ ಎತ್ತರದ ದೊಡ್ಡ ವಿಗ್ರಹ ತ್ರಿಪುರ ಸುಂದರಿ ಎನಿಸಿದರೆ ಚಿಕ್ಕ ವಿಗ್ರಹ ಛೋಟೋ ಮಾ ಎಂದು ಕರೆಯಲ್ಪಡುತ್ತದೆ. ಈ ವಿಗ್ರಹ 2 ಅಡಿ ಎತ್ತರದ ಚಂಡಿಯ ವಿಗ್ರಹವಾಗಿದೆ. ಇದನ್ನು ಈ ಹಿಂದೆ ತ್ರಿಪುರದ ರಾಜರು ಯುದ್ಧಭೂಮಿಗೆ ಹಾಗೂ ಬೇಟೆಯಾಡಲು ಕೊಂಡೊಯ್ಯುತ್ತಿದ್ದರು ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ, ದೇವಸ್ಥಾನದ ಬಳಿ ಪ್ರಸಿದ್ಧ ಮೇಳ ನಡೆಯುತ್ತದೆ, ಇದರಲ್ಲಿ ಎರಡು ಲಕ್ಷ ಜನರು ಭಾಗವಹಿಸುತ್ತಾರೆ.
***
ರಾಜ ಧನ್ಯ ಮಾಣಿಕ್ಯನಿಗೆ ಒಂದು ದಿನ ರಾತ್ರಿ ಕನಸಿನಲ್ಲಿ ತ್ರಿಪುರ ಸುಂದರಿ ದೇವಿ ಕಾಣಿಸಿಕೊಂಡು ಉದಯಪುರ ಪಟ್ಟಣದ ಸಮೀಪವಿರುವ ಬೆಟ್ಟದ ಮೇಲೆ ತನ್ನ ಸಾನ್ನಿಧ್ಯವಿದ್ದು ಅಲ್ಲಿ ತನ್ನನ್ನು ಪೂಜಿಸುವಂತೆ ಸೂಚಿಸಿದಳು. ಆದರೆ ರಾಜ ತನ್ನ ರಾಜಧಾನಿಯ ಹೊರಗಿನ ಬೆಟ್ಟದಲ್ಲಿ ಇದಾಗಲೇ ವಿಷ್ಣು ದೇವಾಲಯವಿರುವುದನ್ನು ಗಮನಿಸಿದನು. ವಿಷ್ಣು ದೇವಾಲಯದ ಸಮೀಪ ಶಕ್ತಿ ದೇವತೆಯ ಪ್ರತಿಷ್ಠಾಪನೆ ಹೇಗೆ ಸಾಧ್ಯ ಎನ್ನುವ ಗೊಂದಲ ಅವನಿಗೆ ಮೂಡಿತು. ಅದಾದ ನಂತರ ಮತ್ತೆ ಕನಸಿನಲ್ಲಿ ದೇವಿಯ ದರ್ಶನ ಪಡೆದ ರಾಜನಿಗೆ ವಿಷ್ಣು ಹಗೂ ಶಕ್ತಿ ಎರಡೂ ಒಂದೇ ಪರಮಾತ್ಮನ (ಬ್ರಹ್ಮನ) ವಿಭಿನ್ನ ರೂಪಗಳು ಎಂದು ಕಂಡುಬಂದಿತು. ಹಾಗಾಗಿ ಮಹಾರಾಜನು ತಡ ಮಾಡದೆ ಬೆಟ್ಟದ ಮೇಲೆ ದೇವಿಯ ದೇವಾಲಯ ನಿರ್ಮಾಣ ಮಾಡಿದನು.
ತ್ರಿಪುರ ಸುಂದರಿ - ರಾಜರಾಜೇಶ್ವರಿ, ರಾಜೇಶ್ವರಿ, ಷೋಡಶಿ, ಕಾಮಾಕ್ಷಿ, ಮತ್ತು ಲಲಿತಾ ಎನ್ನುವ ದೇವತೆಯಾದ ಇವಳನ್ನು ಶಾಕ್ತ ಸಂಪ್ರದಾಯದವರು ಹೆಚ್ಚಾಗಿ ಆರಾಧಿಸುತ್ತಾರೆ. "ತ್ರಿಪುರ" ಎಂಬ ಪದವು ಮೂರು ನಗರಗಳು ಅಥವಾ ಪ್ರಪಂಚಗಳ ಪರಿಕಲ್ಪನೆಯಾಗಿದ್ದರೆ "ಸುಂದರಿ" ಎಂಡರೆ ಸುಂದರವಾಗಿರುವ ಹೆಣ್ಣು ಎಂದು ಹೇಳಲಾಗಿದೆ. ತ್ರಿಪುರವು ಮಾಯಾಸುರನಿಂದ ರಚಿಸಲ್ಪಟ್ಟ ಮತ್ತು ತ್ರಿಪುರಾಂತಕನಿಂದ ನಾಶವಾದ ಮೂರು ನಗರಗಳನ್ನು ಸಂಕೇತಿಸುತ್ತದೆ. ಹಾಗಾಗಿಯೇ "ಮೂರು ನಗರಗಳನ್ನು ನಾಶಮಾಡುವವನಿಗೆ ಅವಳು ಅರಸಿ ಅಥವಾ ಸುಂದರಿಯಾಗಿದ್ದಳೆಂದು ಅರ್ಥ.
ಯೋನಿ ಚಿಹ್ನೆ ದೇವಿಯನ್ನು ನಿರೂಪಿಸುವ ವೃತ್ತವನ್ನು ರೂಪಿಸುವ ತ್ರಿಕೋನವನ್ನು ಹೋಲುವುದರಿಂದ ಅವಳನ್ನು ತ್ರಿಪುರ ಎಂದು ಕರೆಯಲಾಗುತ್ತದೆ. ಅವಳ ಮಂತ್ರವು ಮೂರು ಅಕ್ಷರಗಳ ಸಮೂಹವನ್ನು ಹೊಂದಿರುವುದರಿಂದ ಅವಳನ್ನು ತ್ರಿಪುರ ಎಂದೂ ಕರೆಯುತ್ತಾರೆ. ಅವಳು ಬ್ರಹ್ಮ, ವಿಷ್ಣು ಮತ್ತು ಶಿವನಲ್ಲಿ ಬ್ರಹ್ಮಾಂಡದ ಸೃಷ್ಟಿಕರ್ತ, ಸಂರಕ್ಷಕ ಮತ್ತು ವಿನಾಶಕಾರಿಯಾಗಿ ಪ್ರಕಟವಾಗಿರುವುದರಿಂದ ಅವಳನ್ನು ತ್ರಿಪುರ ಎಂದು ಕರೆಯಲಾಗುತ್ತದೆ ಹಾಗೆಯೇ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಶಕ್ತಿಗಳೊಂದಿಗೆ ಸಂಬಂಧ ಹೊಂದಿರುವ ದೇವಿಯು ಮೂರು ಕ್ಷೇತ್ರಗಳಲ್ಲಿ ಅತ್ಯಂತ ಸುಂದರಿ ಎಂದು ಗುರುತಿಸಿಕೊಳ್ಳುತ್ತಾಳೆ. ಶಾಕ್ತ ಸಂಪ್ರದಾಯದಲ್ಲಿ ಶ್ರೀಕುಲ ಸಂಪ್ರದಾಯದ ಪ್ರಕಾರ, ತ್ರಿಪುರ ಸುಂದರಿಯು ಮಹಾವಿದ್ಯೆಗಳಲ್ಲಿ ಅಗ್ರಗಣ್ಯಳು, ಹಿಂದೂ ಧರ್ಮದ ಪರಮೋಚ್ಚ ದೈವಿಕತೆ ಮತ್ತು ಶ್ರೀ ವಿದ್ಯೆಯ ಪ್ರಾಥಮಿಕ ದೇವತೆಯೂ ಸಹ ಈಕೆಯಾಗಿರುತ್ತಾಳೆ. . ತ್ರಿಪುರಾ ಉಪನಿಷತ್ತು ಅವಳನ್ನು ಬ್ರಹ್ಮಾಂಡದ ಅಂತಿಮ ಶಕ್ತಿ ಎಂದು ಪ್ರತಿಪಾದಿಸುತ್ತದೆ. ಅವಳನ್ನು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಆಳಬಲ್ಲವಳೆಂದು ಗುರುತಿಸಿದೆ. ತ್ರಿಪುರ ಸುಂದರಿ ದೇವಿಯು ಶಿವನ ಪತ್ನಿ. ಆಕೆಯು ಶಿವನೊಂದಿಗೆ ಸೇರಿ ವಿಶ್ವವನ್ನು ಸೃಷ್ಟಿಸುತ್ತಾಳೆ. ಅದನ್ನು ರಕ್ಷಿಸುತ್ತಾಳೆ ಮತ್ತು ತಪ್ಪೆಂದು ತಿಳಿದುಬಂದರೆ ಮುಲಾಜಿಲ್ಲದೆ ನಾಶ ಮಾಡುತ್ತಾಳೆ. ತ್ರಿಪುರ ಸುಂದರಿ ದೇವಿ ಎಂದರೆ ದುರ್ಗಾ, ಮಹಾಕಾಳಿ ಮತ್ತೊಂದು ರೂಪ. ಧರ್ಮ ಗ್ರಂಥಗಳಲ್ಲಿ ತ್ರಿಪುರ ಸುಂದರಿ ದೇವಿಯನ್ನು ಸಾವಿರಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಆಕೆಯ ಯುವ ರೂಪವನ್ನು ಶೋಡಶಿ ಮತ್ತು ಮಗುವಿನ ರೂಪವನ್ನು ಬಾಲ ಸುಂದರಿ ಎಂದು ಕರೆಯಲಾಗುತ್ತದೆ. ಆಕೆಯ ಮುಗಿವನ ರೂಪದಲ್ಲಿ ಮುಗ್ದತೆ ಎದ್ದು ಕಾಣುತ್ತದೆ. ತಮಾಷೆ ಮಾಡುವುದು, ಆಟವಾಡುವುದು, ಎಲ್ಲರನ್ನೂ ತನ್ನತ್ತ ಆಕರ್ಷಿಸುವುದು ಈ ರೂಪದ ಸ್ವಭಾವವಾಗಿದೆ. ದೇವಿಯ ಶೋಡಶಿ ರೂಪವು ಹದಿನಾರು ಆಸೆಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಈ ರೂಪವು ಹದಿನಾರು ಉಚ್ಚಾರ ಮಂತ್ರಗಳನ್ನು ಒಳಗೊಂಡಿದೆ. ಹದಿನೈದು ಉಚ್ಚಾರ ಮಂತ್ರಗಳಾದರೆ ಕೊನೆಯದು ಬೀಜ ಮಂತ್ರವಾಗಿರುತ್ತದೆ. ಶೋಡಶಿ ರೂಪವು ವ್ಯಕ್ತಿಯನ್ನು ಆಧ್ಯಾತ್ಮಿಕ ಹಾದಿಯಲ್ಲಿ ಕರೆದೊಯ್ಯುತ್ತದೆ. ಆತನ ಮುಗ್ದ ಅಂಶಗಳು ದೇವರಿಗೆ ಹತ್ತಿರವಾಗುವಂತೆ ಮಾಡುತ್ತದೆ.
ತ್ರಿಪುರ ಸುಂದರಿ ದೇವಿಯನ್ನು ಲಲಿತಾ ಎಂದೂ ಕರೆಯಲಾಗುತ್ತದೆ. ಲಲಿತಾ ಎಂದರೆ ಬುದ್ಧಿವಂತೆ ಮತ್ತು ಪ್ರಕಾಶಮಾನವಾದ ವ್ಯಕ್ತಿತ್ವ ಎಂದು ಅರ್ಥ. ಜೊತೆಗೆ ಇತರರನ್ನು ಬುದ್ಧಿವಂತಿಕೆಯಲ್ಲಿ ಮೀರಿಸುವ ವ್ಯಕ್ತಿತ್ವ ಹೊಂದಿರುವ ಮಹಿಳೆ. ಲಲಿತಾ ದೇವಿಯು ಬ್ರಹ್ಮಾಂಡದ ಸೃಷ್ಟಿ, ಕ್ರಿಯೆ, ಮತ್ತು ನಾಶದ ಪ್ರತಿನಿಧಿಯೂ ಹೌದು. ತ್ರಿಪುರ ಸುಂದರಿಯನ್ನು ರಾಜರಾಜೇಶ್ವರಿ ಎಂದೂ ಕರೆಯುತ್ತಾರೆ. ಇಡೀ ಬ್ರಹ್ಮಾಂಡದ ಆಡಳಿತವು ಆಕೆಯ ಕೈನಲ್ಲಿದೆ ಎಂದು ನಂಬಲಾಗಿದೆ. ವಿಶ್ವದ ಪ್ರತಿ ಕ್ರಿಯೆಗಳು ನಡೆಯಬೇಕಾದರೆ ತ್ರಿಪುರ ಸುಂದರಿ ದೇವಿಯ ಆಜ್ಞೆಯು ಬೇಕೇ ಬೇಕು ಎಂದು ನಂಬಲಾಗಿದೆ. ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮುನ್ನ ತ್ರಿಪುರ ಸುಂದರಿ ದೇವಿಯನ್ನು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು. ಹಾಗೆ ಮಾಡುವುದರಿಂದ ನಿಮ್ಮ ನಿರ್ಧಾರ ದೃಢವಾಗಿರ್ತದೆ, ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ನಂಬಲಾಗಿದೆ.
ತ್ರಿಪುರ ಸುಂದರಿ ಉದಯಿಸುತ್ತಿರುವ ಸೂರ್ಯನಂತೆ ಸಂತೋಷ, ಸಹಾನುಭೂತಿ ಮತ್ತು ಜ್ಞಾನದ ಸಂತೋಷವನ್ನು ಚೆಲ್ಲುತ್ತಾಳೆ. ಆಕೆಯನ್ನು ಹದಿನಾರು ವರ್ಷದ ಸುಂದರ ಯುವತಿಯಂತೆ ಚಿತ್ರಿಸಲಾಗಿದೆ. ಚಿನ್ನದ ಬಣ್ಣದ ಚರ್ಮ, ಕೆಂಪು ಕೆನ್ನಗಳು, ಸೆಳೆಯುವ ಕಣ್ಣುಗಳು, ನಾಲ್ಕು ಕೈಗಳು, ತೆರೆದ ನಾಲಗೆ, ಭಯಭೀತಗೊಳಿಸುವ ಹಲ್ಲುಗಳು ಈಕೆಯ ಗುಣಲಕ್ಷಣ. ತ್ರಿಪುರ ಸುಂದರಿ ದೇವಿಯ ಒಂದು ಕೈನಲ್ಲಿ ಹೂಬಿಟ್ಟಿರುವ ಕಬ್ಬಿನ ಜಲ್ಲೆ, ಒಂದು ಕೈನಲ್ಲಿ ಅಂಕುಶ, ಮತ್ತು ಇನ್ನೊಂದು ಕೈನಲ್ಲಿ ಹೂವಿನ ಬಾಣವನ್ನು ಹಿಡಿದಿದ್ದಾಳೆ. ಅಂಕುಶವು ಆಕರ್ಷಣೆಯನ್ನು ಪ್ರತಿನಿಧಿಸಿದರೆ, ಕಬ್ಬಿನ ಜಲ್ಲೆ ಆಸೆಗಳನ್ನು ಪ್ರತಿನಿಧಿಸುತ್ತದೆ. ಹೂಬಾಣಗಳು ನಮ್ಮ ಪಂಚೇಂದ್ರಿಯಗಳನ್ನು ಪ್ರತಿನಿಧಿಸುತ್ತವೆ. ತ್ರಿಪುರ ಸುಂದರಿ ದೇವೆ ಎಷ್ಟು ಸುಂದರವಾಗಿದ್ದಳು ಎಂದರೆ ಪರಶಿವನೇ ಆಕೆಯ ಸೌಂದರ್ಯಕ್ಕೆ ಮಾರುಹೋಗಿದ್ದ ಎಂದು ಪುರಾಣಗಳು ಹೇಳುತ್ತವೆ.
***
ಲಲಿತಾ ಸಹಸ್ರನಾಮವು ಲಲಿತಾ ತ್ರಿಪುರ ಸುಂದರಿ ಮತ್ತು ರಾಕ್ಷಸ ಭಂಡಾಸುರನ ನಡುವಿನ ಕದನವನ್ನು ಉಲ್ಲೇಖಿಸಿದೆ. ಇದು ಕೆಡುಕಿನ ಮೇಲಿನ ಒಳಿತಿನ ವಿಜಯವನ್ನು ಸೂಚಿಸಿದೆ.
ಅದೊಮ್ಮೆ ಭಂಡಾಸುರ ಎನ್ನುವ ಅಸುರ ರಾಕ್ಷಸನು ಚಿತ್ರಕರ್ಮದ ಕಾರಣದಿಂದ ಕಾಮದೇವನ ಭಸ್ಮದಿಂದ ಜನಿಸಿದನು. ಎಂದರೆ ಕಾಮದೇವನ ಚಿತಾಭಸ್ಮದಿಂದ ಈ ಭಂಡಾಸುರನ ಸೃಷ್ಟಿಯಾಗಿತ್ತು. ಶಿವನನ್ನು ಮೆಚ್ಚಿಸಲು ತೀವ್ರವಾದ ತಪಸ್ಸನ್ನು ಮಾಡಿದ ಭಂಡಾಸುರ ತನ್ನೊಂದಿಗೆ ಯುದ್ಧ ಮಾಡಿದವರ ಅರ್ಧದಷ್ಟು ಶಕ್ತಿ ಮತ್ತು ಪುರುಷತ್ವವನ್ನು ಕಳೆದುಕೊಳ್ಳುತ್ತಾರೆ ಎನ್ನುವ ವರವನ್ನು ಪಡೆದನು. ಅಲ್ಲದೆ ಭಂಡಾಸುರನಿಗೆ ಮಹೇಂದ್ರ ಪರ್ವತದ ಭಾಗದಲ್ಲಿರುವ ಶೂನ್ಯ ಎನ್ನುವ ಅಸುರರ ನಗರದಲ್ಲಿ ನೆಲೆಸಲು ಸೂಚಿಸಲಾಯಿತು. ಅವನಿಗೆ ಅಲ್ಲಿ ಯಾವ ಅಡ್ಡಿ ಆತಂಕವಿರಲಿಲ್ಲ. ಸುಮಾರು ಅರವತ್ತು ಸಾವಿರ ವರ್ಷಗಳ ಕಾಲ ಭಂಡಾಸುರ ಅಲ್ಲಿ ಚಕ್ರವರ್ತಿಯಾಗಿ ಮೆರೆದನು. ಶಿವನ ವರ ಇದ್ದ ಕಾರಣ ಆ ಅವಧಿಯಲ್ಲಿ ಯಾವುದೇ ದೇವರು, ಮನುಷ್ಯ ಅಥವಾ ರಾಕ್ಷಸ ಅವನ ಮೇಲೆ ಆಕ್ರಮಣ ಮಾಡಲು ಧೈರ್ಯ ಮಾಡಲಿಲ್ಲ.
ಭಂಡಾಸುರನು ತನ್ನ ಭುಜಗಳಿಂದ ವಿಶುಕ್ರ ಮತ್ತು ವಿಶಾಂಗ ಎಂಬ ಇಬ್ಬರು ಸಹೋದರರನ್ನು ಸೃಷ್ಟಿಸಿದನು. ಅವನ ಹೃದಯದಿಂದ ಸಹೋದರಿ ಧುಮಿನಿಯನ್ನು ಸೃಷ್ಟಿಸಿದನು. ಅವನು ನಾಲ್ವರು ಪತ್ನಿಯರು, ಒಟ್ಟು ಮೂವತ್ತು ಗಂಡು ಮಕ್ಕಳನ್ನು ಮತ್ತು ರಶ್ಮಿ ಪ್ರಭಾ ಎಂಬ ಮಗಳನ್ನು ಹೊಂದಿದ್ದನು.
ಭಗವಾನ್ ವಿಷ್ಣುವಿನ ಮಾಯೆಯಿಂದ ಕಾಮ ಮತ್ತು ಭೋಗದಲ್ಲಿ ಮುಳುಗಿದ್ದ ಭಂಡಾಸುರನ ಅವಿರತ ಆಳ್ವಿಕೆಯ ಕಳೆದ ಕೆಲವು ಸಾವಿರ ವರ್ಷಗಳಿಂದ ಅವನ ಕೆಟ್ಟ ಆಡಳಿತದಲ್ಲಿದ್ದ ದೇವತೆಗಳು, ಮಾನವರು ಅವನನ್ನು ಸಂಹರಿಸಲು ಸಹಕಾರಿಯಾಗುವಂತೆ ದ ಪರಾಶಕ್ತಿ ದೇವಿಯನ್ನು ಪೂಜಿಸಲು ತೊಡಗಿದ್ದರು. ಹೀಗಿರಲು ಅದೊಮ್ಮೆ ಭಂಡಾಸುರನಿಗೆ ಈ ಕುರಿತು ಅರಿವಾಗಿ ಯಜ್ಞವನ್ನು ಮಾಡುತ್ತಿದ್ದ ಸ್ಥಳದ ಮೇಲೆ ಆಕ್ರಮಣ ನಡೆಸಿದನು. ಆಗ ಭಯದಿಂದ, ದೇವತೆಗಳು ಅಗ್ನಿಕುಂಡವನ್ನು ಪ್ರವೇಶಿಸಿ ಸಜೀವ ದಹನವಾದರು, ಇದರಿಂಡ ಸಮಾಧಾನಗೊಂಡ ಭಂಡಾಸುರ ಅಲ್ಲಿಂದ ಹೊರಟು ಹೋದನು. ಆದರೆ ಇತ್ತ ತ್ರಿಪುರ ಸುಂದರಿ ದೇವಿಯು ಅವತಾರವೆತ್ತಿ ಸಜೀವ ದಹನವಾಗಿದ್ದ ದೇವತೆಗಳನ್ನೆಲ್ಲಾ ಮತ್ತೆ ಸಜೀವವಾಗಿಸಿ ಅವರ ಕರ್ತವ್ಯಗಳನ್ನು ಪುನಃಸ್ಥಾಪಿಸಿದಳು.
ಅವಳು ಬ್ರಹ್ಮಾಂಡವನ್ನು ಮರುಸೃಷ್ಟಿಸಿದಳು. ತನ್ನ ವಿವಿಧ ಅಂಗಗಳಿಂದ, ಅವಳು ಲೋಕಗಳು, ಪಂಚ ಭೂತಗಳು ಇತ್ಯಾದಿಗಳನ್ನು ಸೃಷ್ಟಿಸಿದಳು ನಂತರ, ಅವಳು ತನ್ನ ಹೃದಯದಿಂದ ಬಾಲಾ ತ್ರಿಪುರಸುಂದರಿಯನ್ನು, ಕುಂಡಲಿನಿಯಿಂದ ಗಾಯತ್ರಿಯನ್ನು, ಅವಳ ಅಹಂಕಾರದಿಂದ ವಾರಾಹಿಯನ್ನು, ಅವಳ ಬುದ್ಧಿಯಿಂದ ಮಾತಂಗಿಯನ್ನು, ಅಂಕುಶದಿಂದ ಸಂಪತ್ಕರಿಯನ್ನು, ಅವಳ ಪಾಶದಿಂದ ಅಶ್ವಾರೂಢವನ್ನು ಮತ್ತು ನಕುಲೇಶ್ವರಿ, ಜ್ವಾಲಾಮಾಲಿನಿ ಮುಂತಾದ ಇತರ ದೇವತೆಗಳನ್ನು ಸೃಷ್ಟಿಸಿದಳು.
ಇದಾದ ನಂತರ ತ್ರಿಪುರ ಸುಂದರಿ ದೇವಿಯು ಭಂಡಾಸುರನ ವಿರುದ್ಧ ಯುದ್ಧಕ್ಕೆ ಹೊರಟಳು. ಅವನನ್ನು ಮತ್ತು ಶೋಣಿತಪುರದ ನಿವಾಸಿಗಳನ್ನು ನಾಶಮಾಡುವಷ್ಟು ಪ್ರಬಲವಾದ ಸೈನ್ಯವನ್ನು ಜೊತೆಗೆ ಒಯ್ದಳು. ಸಂಪತ್ಕರಿ ದೇವಿಯು ಆನೆಯ ಮೇಲೆ ಮತ್ತು ಅಶ್ವಾರೂಢ ದೇವಿಯು ಕುದುರೆಯ ಮೇಲೆ ಮುನ್ನಡೆಸಿದಳು. ಅವಳು ಸ್ವತಃ ಶ್ರೀ-ಚಕ್ರ, ಚಕ್ರರಾಜ-ರಥದ ಮೇಲೆ ದೇವರಿಗೆ ಮತ್ತು ಮನುಷ್ಯನಿಗೆ ತಿಳಿದಿರುವ ಪ್ರತಿಯೊಂದು ಆಯುಧಗಳೊಂದಿಗೆ ಯುದ್ಧ ಹೂಡಿದಳು. ಅವಳ ಮುಖ್ಯ ಸೈನ್ಯಾಧಿಕಾರಿಯಾಗಿದ್ದ ದೇವಿ ದಂಡಿನಿ (ವರಾಹಿ) ಅವಳನ್ನು ಅನುಸರಿಸಿದಳು. ಆಕೆಯ ಪ್ರಧಾನ ಮಂತ್ರಿ /ಶ್ಯಾಮಲಾ (ಮಾತಂಗಿ) ಕೂಡ ಜತೆಯಾದಳು.
ಯುದ್ಧವು ದೇವಿ ಲಲಿತಾ (ತ್ರಿಪುರ ಸುಂದರಿ) ಪರವಾಗಿತ್ತು. ಅವಳ ಮಗಳು ಬಾಲಾ ಭಂಡಾಸುರನ ಎಲ್ಲಾ ಮೂವತ್ತು ಮಕ್ಕಳನ್ನು ಯಶಸ್ವಿಯಾಗಿ ಕೊಂದಳು, ಆದರೆ ಮಾತಂಗಿ ಅವನ ಸಹೋದರ ವಿಶಾಂಗನನ್ನು ಕೊಂದಳು. ಅವನ ಇನ್ನೊಬ್ಬ ಸಹೋದರ ವಿಶುಕ್ರನು ವರಾಹಿಯಿಂದ ಕೊಲ್ಲಲ್ಪಟ್ಟನು. ಸಾಯುವ ಮೊದಲು, ವಿಶುಕ್ರನು ದೇವಿಯ ಪಡೆಗಳ ಮಧ್ಯ ಜಯ-ವಿಘ್ನ-ಯಂತ್ರವನ್ನು ಇರಿಸಿದ್ದನು. ಇದು ಲಲಿತಾ, ಬಾಲ, ಕಾಮೇಶ್ವರ ಶಿವ, ಮಾತಂಗಿ ಮತ್ತು ವಾರಾಹಿಯನ್ನು ಹೊರತುಪಡಿಸಿ ಉಳಿದವರೆಲ್ಲರನ್ನು ಸ್ತಬ್ಧಗೊಳಿಸಿತು. ನಂತರ ದೇವಿ ಲಲಿತಾ ತನ್ನ ಪತಿಯೊಂದಿಗೆ ಕಾಮೇಶ್ವರನಿಂದ ಮಹಾಗಣಪತಿಯನ್ನು ಸೃಷ್ಟಿಸಿದಳು, ಅವನು ವಿಶುಕ್ರನ ಯಂತ್ರವನ್ನು ನಾಶಪಡಿಸಿದ.
ಭಂಡಾಸುರ ಈಗ ತನ್ನ ಏಳು ಅವತಾರಗಳಲ್ಲಿ ವಿಷ್ಣುವಿನಿಂದ ಕೊಲ್ಲಲ್ಪಟ್ಟ ರಾಕ್ಷಸರನ್ನು ಮರುಸೃಷ್ಟಿಸಿದನು. ದೇವಿ ಲಲಿತಾ ಪಾರ್ವತಿಯು ತನ್ನ ಬೆರಳಿನ ಉಗುರುಗಳಿಂದ ವಿಷ್ಣುವಿನ ಪ್ರತಿಯೊಂದು ಅವತಾರಗಳನ್ನು (ದಶಾವತಾರ) ಹೊರತಂದಳು, ಅದು ರಾಕ್ಷಸರನ್ನು ಅಂತ್ಯಗೊಳಿಸಿತು. ಲಲಿತಾ ದೇವಿಯು ತನ್ನ ದಾರಿಗೆ ಬಂದ ರಾಕ್ಷಸನು ಕಳುಹಿಸಿದ ಪ್ರತಿ ಅಗ್ನಿಯಾಸ್ತ್ರವನ್ನೂ ನಂದಿಸಿದಳು ಮತ್ತು ಮಹಾ-ಪಾಶುಪತಾಸ್ತ್ರದಿಂದ ಅವನ ಸೈನ್ಯವನ್ನು ನಾಶಪಡಿಸಿದಳು. ಕೊನೆಗೆ ಭಂಡಾಸುರನನ್ನು ಕೊಂದು ಶೋಣಿತಾಪುರವನ್ನು ಕಾಮೇಶ್ವರಾಸ್ತ್ರದಿಂದ ನಾಶಮಾಡಿದಳು. ಭಂಡಾಸುರನು ತನ್ನ ಬಾಣದಿಂದ ಭಸ್ಮವಾದಾಗ, ದೇವಿಯು ಕಾಮದೇವನನ್ನು ಅವನ ಚಿತಾಭಸ್ಮದಿಂದ ಮರುಸೃಷ್ಟಿಸಿದಳು. ಮತ್ತೆ ಕಾಮನು ರತಿಯೊಂದಿಗೆ ವಿವಾಹವಾಗಿ ಬಹುವರ್ಗಕ್ಕೆ ಶಾಂತಿ ಪುನರ್ ಸ್ಥಾಪನೆಯಾಯಿತು.