Saturday, August 11, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -93

ಮೈಲಾಪುರ್, ಚೆನ್ನೈ (Mylapore,Chennai)

ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟೀಷರಿಟ್ಟ ಈ ಹೆಸರನ್ನು 1997ರಲ್ಲಿ ತಮಿಳುನಾಡು ಸರ್ಕಾರ "ಚೆನ್ನೈ" ಎಂದು ಬದಲಿಸಿದೆ. ಭಾರತದ ದೊಡ್ಡ ನಾಲ್ಕನೇ ಮೆಟ್ರೋಪಾಲಿಟನ್ ನಗರವಾಗಿರುವ ಚೆನ್ನೈಬಂಗಾಳ ಕೊಲ್ಲಿಯ ಕೋರಮಂಡಲ್ ತೀರದಲ್ಲಿ ಇದೆ. ಇ ನಗರದ ಅಂದಾಜು ಜನಸಂಋಯ 7.60 ರಂತೆ ಮಿಲಿಯನ್ (2006), ಸುಮಾರು 368 ವರ್ಷಗಳ ಇತಿಹಾಸವಿರುವ ಈ ನಗರ ಜಗತ್ತಿನ ಆತಿ ದೊಡ್ಡ್ಡ ನಗರಳ ಪಟ್ಟೀಯಲಿ 36ನೇ ಸ್ಥಾನದಲ್ಲಿದೆ.


ಕಪಾಲೀಶ್ವರ ದೇವಾಲಯ - Kapaleeswarar Temple


ಚೆನ್ನೈ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇಗುಲಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ  ವಾಹನ ರಾಜಧಾನಿಯಾಗಿದ್ದು, ವಾಹನೋದ್ಯಮದ ಪ್ರಮುಖ ಕೇಂದ್ರವಾಗಿದೆಲಾಗುತ್ತದೆ.ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು ದಕ್ಷಿಣ ಏಶಿಯಾದ ಡೆಟ್ರಾಯಿಟ್ ಎಂದು ಕರೆಯಲಾಗುತ್ತದೆ. 13 ಕಿಮೀ ಉದ್ದದ ರೀನಾ ಬೀಚ್ ನಗರದ ಪೂರ್ವ ತೀರವಾಗಿದ್ದು, ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ.



'ಮದ್ರಾಸುಪಟ್ನಂ' ಅಥವಾ ಮದ್ರಾಸನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ 1639 ರಲ್ಲಿ ಆಯ್ಕೆ ಮಾಡಿಕೊಂಡಿತು. ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ 'ಚೆನ್ನಪಟ್ಟಣಂ' ಎಂಬ ಚಿಕ್ಕ ಪೇಟೆಯಿದೆ. ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ 'ಮದರಾಸು' ಆಯಿತು. ನಾಯಕ ಜನಾಂಗದ ಚೆನ್ನಪ್ಪನಾಯಕನ್ ಎಂಬ ಮುಖಂಡನೊಬ್ಬನ ಹೆಸರಿಂದ ಈ ಪ್ರದೇಶ 'ಚೆನ್ನಪಟ್ಟಣ' ಎಂದು ಗುರುತಿಸಲ್ಪಟ್ಟಿತ್ತು. 1639ರಲ್ಲಿ ಸ್ಥಳೀಯ ನಾಯಕನಿಂದ ಭೂಮಿಯನ್ನು ಖರೀದಿಸಿದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿ ಫ್ರಾನ್ಸಿಸ್ ಡೇ ಸೆಂಟ್ ಜಾರ್ಜ್ ಇಲ್ಲಿ ಕೋಟೆಯನ್ನು ನಿರ್ಮಿಸಿದ್ದನು. ಮತ್ತು ಈ ಪ್ರದೇಶಕ್ಕೆ 'ಮದ್ರಾಸ್' ಎಂದು ಪುನರ್ ನಾಮಕರಣ ಮಾಡಿದ್ದನು. ಈ ಕೋಟೆ ಕಟ್ಟಡದಲ್ಲಿಯೇ ಇಂದು ತಮಿಳುನಾಡು ಸರ್ಕಾರದ ಆಡಳಿತ ಕಛೇರಿ ಕಾರ್ಯನಿರ್ವಹಿಸುತ್ತಿದೆ.

ಇನ್ನ್ನು ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ, ಸೈನ್ಯ ಮತ್ತು ಆರ್ಥಿಕ ಕೇಂದವಾಗಿತ್ತು. ದಕ್ಷಿಣ ಭಾರತದ ಸಾಮ್ರಾಜ್ಯಗಳು, ಪ್ರಮುಖವಾಗಿ ಪಲ್ಲವ, ಚೋಳ, ಪಾಂಡ್ಯ, ಮತ್ತು ವಿಜಯನಗರ ಸಾಮ್ರಾಜ್ಯಗಳ ಅರಸರು ಈ ಪ್ರದೇಶವನ್ನಾಳಿದ್ದಾರೆ.  ಇಂದಿನ ಮಹಾನಗರದ ಭಾಗವಾಗಿರುವ ಮೈಲಾಪುರ ಪಟ್ಟಣವು ಒಂದು ಕಾಲಕ್ಕೆ, ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು. 1522 ರಲ್ಲಿ ಪೋರ್ತುಗೀಸ್ರು ಬಂದು ಕೋಟೆಯನ್ನು ಕಟ್ಟಿಸಿದರು. ಕ್ರೈಸ್ತ ಧರ್ಮ ಪ್ರಸಾರ ಕಾರ್ಯ ನಡೆಸಿದ ಅವರು ಇದನ್ನು  ಸಂತ ಥಾಮಸರ ಹೆಸರಿನಲ್ಲಿ ಸಾವೋ ಟೋಮ್ ಎಂದು ಕರೆದಿದ್ದರು. ಬಳಿಕ ಡಚ್ಚರು ತಮ್ಮ ವಸಾಹತನ್ನು ಇಲ್ಲಿ ಸ್ಥಾಪಿಸಿದ್ದರು. 1612 ರಲ್ಲಿ ಚೆನ್ನೈನ ಉತ್ತರದಲ್ಲಿರುವ ಪುಲಿಕಾಟ್ ನಲ್ಲಿ ಡಚ್ಚರು ವಸಾಹತು ನಿರ್ಮಾಣ ಮಾಡಿದರು. ಆದರೆ ಬ್ರಿಟೀಷರು ಇಲ್ಲಿ ಆಗಮಿಸಿದ ಬಳಿಕ ತಮ್ಮ ಶಾಸ್ವತ ವಸಾಹತನ್ನಾಗಿ ಮಾಡಿಕೊಂಡದ್ದಲ್ಲದೆ ವಂದವಾಸಿಯ ನಾಯಕರಾಗಿದ್ದ ದಮೆರ್ಲ ವೆಂಕಟಾದ್ರಿಯವರಿಂದ 22 ನೇ ಆಗಸ್ಟ್ 1639 ರಂದು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದರು.

ಪೂರ್ವ ಸಮುದ್ರ ತೀರ - ಮರೀನಾ ಬೀಚ್, ಚೆನ್ನೈ - Marina Beach

ಇಂತಹಾ ಅದ್ಭುತ ಐತಿಹಾಸಿಕ ನಗರವಾದ ಚೆನ್ನೈನ  ಮೈಲಾಪುರದಲ್ಲಿರುವ ಪಕಪಾಲೀಶ್ವರ ದೇವಾಲಯ ಪವಿತ್ರವೂ, ಪುರಾತವೂ ಆದ ದೇವಾಲಯಗಳಲ್ಲಿಇ ಒಂದು. ರಾಮಕೃಷ್ಣ ಮಠದ ಪಕ್ಕದಲ್ಲಿಯೇ ಇರುವ ಈ ದೇವಾಲಯದ ಆರಾದ್ಯ ದೈವ ಕಪಾಲೀಶ್ವರ ಸ್ವಾಮಿ. ಹಾಗೆಯೇ ಇಲ್ಲಿ ನೆಲೆಯಾದ ಅಮ್ಮನವರ ಹೆಸರು ಕರ್ಪಗಂಬಾಳ್ ಎಮ್ದಾಗಿದೆ.

ಪೂರ್ವ ಸಮುದ್ರ ತೀರ - ಮರೀನಾ ಬೀಚ್, ಚೆನ್ನೈ - Marina Beach
 ಪಲ್ಲವ ಅರಸರು ನಿರ್ಮಿಸಿದ ಈ ದೇವಾಲಯದ ವಾಸ್ತು ಶೈಲಿ ಅತ್ಯಂತ ಸುಂದರವಾಗಿದ್ದು ದೇವಾಲಯದ ಗೋಪುರವು ವಿಶೇಷವಾಗಿದೆ. ಅಲ್ಲದೆ ದೇವಾಲಯದ ಪಶ್ಚಿಮ ಭಾಗದಲ್ಲಿ ಪುಷ್ಕರಣಿ ಸಹ ಇದ್ದು ದೇವಾಲಯದ ನಾಲ್ಕು ದಿಕ್ಕಿನಲ್ಲಿ ಪ್ರಮುಖ ಬೀದಿಗಳು, ಮಾರುಕಟ್ಟೆ ಪ್ರದೇಶಗಳಿದೆ. ಸಮುದ್ತ ತೀರದಿಂದ ಅರ್ಧ ಮೈಲು ದೂರದಲ್ಲಿರುವ ಮೈಲಾಪುರ ಚೆನ್ನೈ ಮಹಾನಗರದ ಜನನಿಬಿಡ ಪ್ರದೇಶಗಳಲ್ಲಿ 
ಮರೀನಾ ಬೀಚ್ ನಲ್ಲಿ ಸೂರ್ಯೋದಯದ ಸುಂದರ ದೃಶ್ಯ
ಒಂದಾಗಿದೆ.

ಪುರಾಣದ ಕಥೆ ಹೇಳುವಂತೆ  ಇಲ್ಲಿ ತಾಯಿ ಉಮಾದೇವಿ ಶಿವನನ್ನು ನವಿಲಿನ ರೂಪದಲ್ಲಿದ್ದು ಪೂಜಿಸಿದ್ದಾಳೆ ತಮಿಳಿನಲ್ಲಿ ನವಿಲಿಗೆ ಮೆಯಿಲ್ ಎನ್ನಲಾಗುವುದು. ಇದೇ ಕಾರಣಕ್ಕೆ ಈ ಪ್ರದೇಶ ಮೈಲಾಪುರ ಎನಿಸಿದೆ. ಕಪಾಲೀಶ್ವರ ದೇವಾಲಯದಲ್ಲಿರುವ ಶಾಲ ವೃಕ್ಷದ ಕೆಳಗೆ ಇಂದೂ ಸಹ ಸಣ್ಣ ಕಲ್ಲೊಂದನ್ನು ಣಾವು ನೋಡುತ್ತೇವೆ. ಇದು ನವಿಲಿನ ಸ್ವರೂಪದ ಉಮೆಯು ಶಿವನನ್ನು ಪೂಜಿಸಿದ ಸ್ಥಳ ಎನ್ನಲಾಗುವುದು.
ಕಪಾಲೀಶ್ವರ ದೇವಾಲಯ - Kapaleeswarar Templ
ಸೆಂಟ್ ಜಾರ್ಜ್ ಕೋಟೆ - Fort St. George
ಇನ್ನೊಂದು ಕಥೆಯಂತೆ ಇಲ್ಲಿನ ದೇವನಾದ ಕಪಾಲೀಶ್ವರನನ್ನು ಸಾಕ್ಷಾತ್ ಬ್ರಹ್ಮದೇವ ಸ್ಥಾಪಿಸಿದ್ದಾನೆ. ಹಿಂದೊಮ್ಮೆ ಬ್ರಹ್ಮದೇವನು ಶಿವನನ್ನು ಸರಿಯಾದ ಗೌರವದೊಡನೆ ನಡೆಸಿಕೊಳ್ಳಲಿಲ್ಲ ಆಗ ಕೈಲಾಸಾಧಿಪತಿಯಾದ ಪರಮೇಶ್ವರ ಬ್ರಹ್ಮನ ತಲೆಯನ್ನು (ಕಪಾಲ) ಕಡಿಯುತ್ತಾನೆ. ಆಗ ಬ್ರಹ್ಮನು ಭೂಲೋಕಕ್ಕೆ ಬಂದು ಇಂದಿನ ಮೈಲಾಪುರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ತನ್ನ ತಲೆಗಳನ್ನು ಪುನಃ ಪಡೆದುಕೊಳ್ಳುವನು
.
ಸೆಂಟ್ ಜಾರ್ಜ್ ಕೋಟೆ - Fort St. George in 1858
ಕಾರಣಾಂತರದಿಂದ ಪಾರ್ವತಿ ದೇವಿ ತಾನು ಶಾಪಕ್ಕೊಳಗಾಗಿ ಹೆಣ್ಣು ಕೋಳಿಯಾಗಿ ಮಾರ್ಪಟ್ಟಿದ್ದಾಗ ತನ್ನ ನಿಜ ರೂಪವನ್ನು ಮರಳಿ ಹೊಂಡಲು ಈ ಸ್ಥಳಕ್ಕೆ ಬಂದಿದ್ದಳು. ಇನ್ನು ಶಿವಪುತ್ರನಾದ ಕಾರ್ತಿಕೇಯ(ಸುಬ್ರಹ್ಮಣ್ಯ) ತಾನು ಅಸುರ ಶಕ್ತಿಯ ನಿರ್ನಾಮಕ್ಕಾಗಿ ಇಲ್ಲಿ ಶಕ್ತಿಯನ್ನು ಸಂಪಾದಿಸಿದ್ದನು. ಇನ್ನು ಅಸುರ ಗುರು ಶುಕ್ರಾಚಾರ್ಯ ಸಹ ಈ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಉಲ್ಲೇಖ ನಮಗೆ ಪುರಾಣಗಳಲ್ಲಿ ದೊರಕುತ್ತದೆ. ಶುಕ್ರಾಚಾರ್ಯ ತಾನು ಕಳೆದುಕೊಂಡಿದ್ದ ಒಂದು ಕಣ್ಣನ್ನು ಮರಳಿ ಪಡೆದ ಸ್ಥಳ ಇದಾಗಿದೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಮರಳಿ ಅಡೆಯಲು ಲಂಕೆಗೆ ತೆರಳುವ ಶ್ರೀರಾಮ ಇಲ್ಲಿಗೆ ಆಗಮಿಸಿ ಶಿವನನ್ನು ಪೂಜಿಸಿದ್ದನೆಂದು ರಾಮಾಯಣದಲ್ಲಿ ಉಲ್ಲೇಖವಿದೆ,

Tuesday, July 03, 2018

ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!

ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನುನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆಎನ್ನುವಂತೆ ಇರುವ ಶಿವ ಸನ್ನಿಧಾನವೇತುಳುವೇಶ್ವರ.

ತುಳುವೇಶ್ವರ ದೇವಸ್ಥಾನ, ಬಸ್ರೂರು


ಸಾವಿರ ವರ್ಷದ ಇತಿಹಾಸವಿರುವ ಈತುಳುವೇಶ್ವರನ ವಿಶೇಷವೆದರೆ ಈ ಶಿವಲಿಂಗಕ್ಕೆಆಲಯವೇ ಇಲ್ಲ, ಬದಲಿಗೆ ಆಲದ ಮರವೇ ಶಿವಆಲಯವಾಗಿ ಲಿಂಗವನ್ನು ಮಳೆ, ಬಿಸಿಲಿನಿಂದರಕ್ಷಿಸುತ್ತಿದೆ.

ಉಡುಪಿ ಜಿಲ್ಲೆ ಪ್ರಮುಖ ತಾಲೂಕು ಕೇಂದ್ರಕುಂದಾಪುರದಿಂದ ಸುಮಾರು 6 ಕಿಮೀ ಇರುವಐತಿಹಾಸಿಕ ಗ್ರಾಮ ಬಸ್ರೂರ್ನಲ್ಲಿ ಈ ತುಳುವೇಶ್ವರಸನ್ನಿಧಾನವಿದೆ. ತುಳುನಾಡು ಎಂದುಕರೆಯಲ್ಪಡುವ ಕಾಸಗೋಡಿನಿಂದಬೈಂದೂರಿನವರೆಗಿನ ಉದ್ದನೆ ಕಡಲ ಕಿನಾರೆಯಪ್ರದೇಶದ ತುಳು ಭಾಷಿಕರ ಅಧಿದೇವತೆ ಈತುಳುವೇಶ್ವರನಾಗಿದ್ದು ಪ್ರಕೃತಿ ಮತ್ತು ದೈವ ಶಕ್ತಿಯಸಂಗಮವಾಗಿ ಉಳಿದಿದೆ.

ಹಿಂದೆ ವಸುಪುರ ಎಂದು ಹೆಸರಾಗಿದ್ದ ಬಸ್ರೂರುವಿಜಯನಗರ ಮತ್ತು ಅದಕ್ಕೂ ಮುನ್ನಿನಕಾಲದಿಂಡ ವ್ಯಾಪಾರಿ ಕೇಂದ್ರವಾಗಿಪ್ರಸಿದ್ದಿಯಾಗಿತ್ತು. ಬಾರ್ಕೂರು ಸಂಸ್ಥಾನದಲ್ಲಿಪ್ರಮುಖ ವಾಣಿಜ್ಯ ನಗರವಾಗಿಗುರುತಿಸಿಕೊಂಡಿದ್ದ ಬಸ್ರೂರು ಇಂತಹಾಊರಿನಲ್ಲಿ ಪ್ರಸಿದ್ದ ಮಹಾಲಿಂಗೇಶ್ವರನಸನ್ನಿಧಾನವೂ ಇದ್ದು ಆಲಯವೇ ಇಲ್ಲದೆ ಮರದನಡುವೆಯೇ ಪೂಜಿಸಲ್ಪಡುವ ಈ ತುಳುವೇಶ್ವರಶಿವಾಲಯದ ಬಗೆಗೆ ಇನ್ನೂ ಹೆಚ್ಚಿನವರಿಗೆಮಾಹಿತಿಯೇ ಇಲ್ಲ.

ಇನ್ನು ಶತ ಶತಮಾನಗಳಷ್ಟು ಹಿಂದೆ ಈತುಳುವೇಶ್ವರನಿಗೆ ದೇವಾಲಯವಿತ್ತು. ಆದರೆಕಾಲದ ಹೊಡೆತಕ್ಕೆ ಸಿಕ್ಕು ಸುಮಾರು 200ವರ್ಷಗಳ ಹಿಂದೆ ಈ ಪುರಾತನ ದೇವಾಲಯಶಿಥಿಲವಾಗಿದೆ. ವಿಶೇಷವೆಂದರೆ ಅನೇಕ ವರ್ಷಗಳಹಿಂದೆ ದೇವಾಲಯದ ಗೋಡೆಯ ಬದಿ ಬೆಳೆದಆಲದ ಮರವೊಂದು ಇಂದಿಗೂ ಹಾಗೆಯೇ ಇದ್ದುಶಿವಲಿಂಗದ ಸುತ್ತ ರಕ್ಷಣಾ ಗೋಡೆಯಂತೆಆವರಿಸಿದೆ. ಈ ಆಲದ ಮರಕ್ಕೆ ಸುಮಾರು 250 ವರ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ.
ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲುಶಾಸನಾಧಾರಗಳೂ ಇದೆ. ಕ್ರಿಶ 1401ರಲ್ಲಿಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರ ದೇವರಿಗೆದಾನ ಕೊಟ್ಟಿರುವ ವಿಚಾರ ಬರುತ್ತದೆ, ಬಾರ್ಕೂರುರಾಜ್ಯಪಾಲ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿಬಸ್ರೂರಿನ ಪಡುವನ ಕೇರಿಯ ಭೂ ಒಡೆತನಹೊಂದಿದ್ದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕಹೆಗ್ಗಡತಿ ತಾನು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆಬೇರೆ ಬೇರೆ ಕಡೆಗಳಲ್ಲಿದ್ದ ಅವಳ ಭೂಮಿಯಿಂದಬರುವ ಆದಾಯವನ್ನು ದತ್ತಿ ನೀಡಿದ್ದಳು. ಹಾಗೆದತ್ತಿ ನೀಡುವಾಗ ಆಕೆ ತುಳುವೇಶ್ವರ ದೇವರಿಗೆಮತ್ತು ಮುಳುಲದೇವಿಗೆ ನೀಡಿದ್ದ ದತ್ತಿ ವಿಚಾರ ಸಹಶಾಸನದಲ್ಲಿ ಪ್ರಸ್ತಾಪವಾಗಿದೆ.

ಈ ಸ್ಥಳದಲ್ಲಿ ಶಿವನ ಆಲಯವಿತ್ತು ಎನ್ನಲು ಇನ್ನೂದಾಖಲೆಗಳೆಂಬಂತೆ ಶಿವನ ಎದುರಲ್ಲಿ ನಂದಿವಿಗ್ರಹವಿದೆ. ಅಲ್ಲದೆ ಮುರಕಲ್ಲಿನಲ್ಲಿ ಕಟ್ಟಿರುವಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯಶಾಲೆ ಅವಶೀಷಗಳು, ಸೇರಿ ಅನೇಕ ಪ್ರಾಚೀನದಾಖಲೆಗಳು ಇಲ್ಲಿ ಸಿಗುತ್ತದೆ. ನಂದಿ ವಿಗ್ರಹವುಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದ್ದುಏಕಶಿಲಾ ವಿಗ್ರಹವು ಪ್ರಾಚೀನ ಚರಿತ್ರೆಯ ಮೇಲೆಬೆಳಕು ಚೆಲ್ಲುತ್ತದೆ.
ಸುಮಾರು 60 ವರ್ಷಗಳಷ್ಟು ಹಿಂದೆನಿಧಿಯಾಸೆಗಾಗಿ ಈ ನಂದಿ ವಿಗ್ರಹವನ್ನು ಕಬ್ಬಿಣದಸಲಾಕೆ ಬಳಸಿ ಪೀಠದಿಂದ ಬೇರ್ಪಡಿಸಲು ಯತ್ನನಡೆದಿತ್ತು. ಆದರೆ ಅದು ವಿಫಲವಾಗಿತ್ತು.ಅಂದಿನಿಂದಲೂ ನಂದಿಯ ಒಂದು ಭಾಗವಾಲಿಕೊಂಡಿರುವುದು, ಮೇಲಕ್ಕೆ ಎದ್ದಿರುವುದನ್ನುನಾವು ಕಾಣುತ್ತೇವೆ.
ಇಲ್ಲಿನ ಶಿವಲಿಂಗದ ಸುತ್ತಲೂ ಆಲದ ಮರದಬಿಳಲುಗಳೇ ರಕ್ಷಣಾ ಪೌಳಿಯಾಗಿದ್ದುದೇವಾಲಯದ ಪೂರ್ವ ದಿಕ್ಕಿನಿಂದ ಶಿವಲಿಂಗದಕಡೆಗೆ ಓರ್ವ ವ್ಯಕ್ತಿ ಪ್ರವೇಶಿಸುವಷ್ಟುಸ್ಥಳಾವಕಾಶವಿದೆ. ಪಾಣಿಪೀಠದ ಮೇಲಿರುವಶಿವಲಿಂಗವು ಎರಡೂವರೆ ಅಡಿ ಎತ್ತರವಿದೆ.

ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆಸೇರಿದ ವ್ಯಕ್ತಿ ಈ ಶಿವಲಿಂಗವಿದ್ದ ಜಾಗವನ್ನುಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗಅವರಿಗೆ ಈ ಸ್ಥಳದಲ್ಲಿ ಶಿವಲಿಂಗವಿದೆ ಎನ್ನ್ನುವವಿಚಾರ ಸಹ ತಿಳಿದಿರಲಿಲ್ಲ. ಆದರೆ ಎಂದು ಶಿವನಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲಕಿಣಿ ತಾವು ಪ್ರತಿನಿತ್ಯ ಆ ಪರಮೇಶ್ವರನಿಗೆ ನಿತ್ಯಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದಇಂದಿನವರೆಗೆ ವಿಠಲ ಕಿಣಿ ಮನೆತನದವರೇ ಈತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾಬರುತ್ತಿದ್ದಾರೆ.

ಇನ್ನು ಈಗ ಶಿವನ ಪೂಜಾ ಕೈಂಕರ್ಯನಡೆಸುತ್ತಿರುವ ಕುಟುಂಬಕ್ಕೆ ಶಿವನ ಈ ಪ್ರಾಚೀನಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದುಬಯಕೆ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ಈದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ಈದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆಎನ್ನುವ ಉತ್ತರ ದೊರಕಿದೆ.

ತುಳುನಾಡಿನ ಬೇರೆಲ್ಲಿಯೂ 'ತುಳುವೇಶ್ವರ' ಎನ್ನುವದೇವರ ಸನ್ನಿಧಾನವಿಲ್ಲ. ಹೀಗಾಗಿಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆಬೈಂದೂರಿನ ತನಕದ ತುಳು ಭಾಷಾ ಪ್ರಾಂತಕ್ಕೆ ಈಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನಸ್ಥಳೀಯರು ಹೇಳುತ್ತಾರೆ. ಅಲ್ಲದೆ ಕಳೆದವರ್ಷಗಳಲ್ಲಿ ಬದಿಯಡ್ಕ, ಧರ್ಮಸ್ಥಳಗಳಲ್ಲಿನಡೆದಿದ್ದ ವಿಶ್ವ ತುಳು ಸಮ್ಮೇಳನಕ್ಕೆ ಇದೇಸನ್ನಿಧಾನದಲ್ಲಿ ಚಾಲನೆ ನೀಡಲಾಗಿತ್ತು

(ಈ ನನ್ನ ಲೇಖನ 'ಕನ್ನಡ ಪ್ರಭ ಡಾಟ್ ಕಾಂ'ನಲ್ಲಿ ದಿನಾಂಕ 02-07-2018ದಂದು ಪ್ರಕಟವಾಗಿತ್ತು - https://goo.gl/hMWttR)

Tuesday, June 12, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -92

ಕೇದಾರನಾಥ (Kedaranath)

ಕೇದಾರನಾಥ ದೇವಾಲಯ ಭಾರತದ ಪ್ರಸಿದ್ದ ಪುಣ್ಯಕ್ಷೇತ್ರದಲ್ಲಿ ಒಂದು. ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಮಂದಾಕಿನೀ ನದಿ ತಟದಲ್ಲಿರುವ ಹಿಮಾಲಯದ ಗಡ್ವಾಲ್ ಪ್ರದೇಶದಲ್ಲಿದೆ. ತೀವ್ರವಾದ ಹಿಮಪಾತದ ಕಾರಣದಿಂದ ವರ್ಷದಲ್ಲಿ ಕೇವಲ ಆರು ತಿಂಗಳ ಕಾಲ (ಏಪ್ರಿಲ್ ಅಂತ್ಯದಿಂದ ನವೆಂಬರ್ ಅಂತ್ಯದವರೆಗೆ) ಮಾತ್ರ ತೆರೆದಿರುವ ಈ ದೇವಾಲಯಕ್ಕೆ ನೇರ್ವಾದ ರಸ್ತೆ ಸಂಪರ್ಕವಿಲ್ಲ. ಗೌರಿಕುಂಡ್ ನಿಂದ 18 ಕಿಮೀ ಚಾರಣ ಮಾಡಬೇಕಾಗುವುದು.ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ಪಾಂಡವರು ಕಟ್ಟಿಸಿದ್ದು ಶಂಕರಾಚಾರ್ಯರು ಜೀರ್ಣೋದ್ದಾರ ಮಾಡಿದರು ಎನ್ನಲಾಗುತ್ತದೆ. ಋಷಿಕೇಶದಿಂದ 223 ಕಿಮೀ ದೂರ್ದಲ್ಲಿರುವ ಈ ದೇವಾಲಯಕ್ಕೆ ವರ್ಷ ವರ್ಷವೂ ಲಕ್ಷಾಂತರ ಭಕ್ತರು ಬೇಟಿ ಕೊಡುತ್ತಾರೆ. 
ಶ್ರೀ ಕೇದಾರನಾಥ ಜ್ಯೋತಿರ್ಲಿಂಗ
ಇಲ್ಲಿನ ಲಿಂಗವನ್ನು ಮುಟ್ಟಿ ಪೂಜಿಸಬಹುದಾಗಿದೆ. ದೇವಾಲಯದ ಪ್ರಾಕಾರದಲ್ಲಿ ಪಾಂಡವರು ಕೃಷ್ಣ ಹಾಗೂ ವೀರಭದ್ರರ ಮೂರ್ತಿಗಳಿದೆ. ಸಮುದ್ರ ಮಟ್ಟದಿಂದ ಸುಮಾರು ೬೫೦೦ ಮೀಟರ್ ಎತ್ತರದಲ್ಲಿರುವ ಈ ಕ್ಷೇತ್ರದ ಹಿಂಭಾಗದಲ್ಲಿಯೇ ಶಂಕರಾಚಾರ್ಯರ ಸಮಾಡಿ ಇದ್ದು ಅದಕ್ಕೆ ಮುಂದೆಸ್ ಆಗಿದರೆ ಗೌರಿಕುಂಡ್ ಸಿಗುತ್ತದೆ. 
ಉತ್ತರಾಖಂಡದಲ್ಲಿರುವ ಚಾರ್ ಧಾಮ್ (ಗಂಗೋತ್ರಿ, ಯಮುನೋತ್ರಿ, ಕೇದಾರ ಮತ್ತು ಬದರಿ) ಗಳಲ್ಲಿ ಒಂದಾದ ಕೇದಾರನಾಥದ ಸ್ಥಳ ಪುರಾಣವನ್ನು ನಾವೀಗ ತಿಳಿಯೋಣ

***
ಕೇದಾರನಾಥ ದೇವಾಲಯ
ಮಹಾಭಾರತದ ಕುರುಕ್ಷೇತ್ರ ಯುದ್ಧ ಮುಕ್ತಾಯವಾಗುತ್ತದೆ. ಕೃಷ್ಣ ಮತ್ತಿತರೆ ಋಷಿಗಳ ಸಲಹೆಯಂತೆ ಯುದ್ಧದ ಸಮಯದಲ್ಲಿ ಬ್ರಾಹ್ಮಣಾದಿಗಳನ್ನು ಕೊಂದ ಪಾಪವನ್ನು ಕಳೆದುಕೊಳ್ಳಲು ಹಾಗೂ ಮೋಕ್ಷವನ್ನು ಹೊಂದಲು ಕಾಶಿಯಲ್ಲಿ ಶಿವನನ್ನು ಪ್ರಾರ್ಥಿಸಲು ತೀರ್ಮಾನಿಸುತ್ತಾರೆ. ಆದರೆ ಶಿವನು ಅವರಿಗೆ ಕಾಣಿಸಿಕೊಳ್ಳುವುದಿಲ್ಲ. ಆತನು ಹಿಮಾಲಯದಲ್ಲಿರುವ ಗುಪ್ತಕಾಶಿಗೆ ತೆರಳುತ್ತಾನೆ. ಹಿಮಾಲಯಕ್ಕೆ ತೆರಳಿ ಅವಿತುಕೊಳ್ಳುತ್ತಾನೆ. ಆಗ ಧರ್ಮರಾಯನು ತನ್ನ ಕೈಗಳನ್ನು ಮುಗಿದು "ಶಂಕರ, ನಾವು ಪಾಪಾತ್ಮರೆಂದು ನೀನು ನನಗೆ ದರ್ಶನ ನೀಡದೆ ಹೋಗುವೆಯಾ? ನನಗೆ ತಿಳಿದಿದೆ. ನೀನು ನಮಗೆ ದರ್ಶನ ನೀಡುವುದಕ್ಕೆ ಮನ ಮಾಡುತ್ತಿಲ್ಲ. ಆದರೆ ನಾವು ಭಕ್ತಿಯಿಂದ ನಿನ್ನ ದರ್ಶ್ನ ಮಾಡಬೇಕೆಂದಿದ್ದೇವೆ. ಮತ್ತು ನಮ್ಮ ಪಾಪಗಳಿಂದ ಮುಕ್ತರಾಗಬೇಕೆಂದಿದ್ದೇವೆ. ಇದು ನಮ್ಮ ಸಂಕಲ್ಪ" ಎಂದು ಬೇಡಿಕೊಳ್ಳುತ್ತಾನೆ ಶಿವ ಹಿಮಾಲಯದ ಯಾವ ಭಾಗದಲ್ಲಿ ಪಾಂಡವರಿಗೆ ಕಾಣದಂತೆ ಅವಿತಿದ್ದನೋ ಅದೇ ಕ್ಷೇತ್ರಕ್ಕೆ ಇಂದು ಗುಪ್ತ ಕಾಶಿ ಎಂದು ಹೆಸರಾಗುತ್ತದೆ.
ರುದ್ರನಾಥ ದೇವಾಲಯ
ಆಗ ಪಾಂಡವರು ಅಲ್ಲಿಗೂ ಅವನನ್ನು ಹಿಂಬಾಲಿಸಲು ಶಿವನು ಮಾರುವೇಷದಲ್ಲಿ ಬಸವನ ಎತ್ತಾಗಿ ಈಗಿನ ಕೇದಾರವಿರುವ ಸ್ಥಳದಲ್ಲಿ ಮೇಯುತ್ತಿರುತ್ತಾನೆ. ದ್ವಿತೀಯ ಪಾಂಡವ ಭೀಮನಿಗೆ ಸಂದೇಹ ಬಂದು ಆತ ಎರಡು ಪರ್ವತಗಳ ನಡುವೆ ಒಂದೊಂದು ಕಾಲನ್ನಿಟ್ಟು ನಿಲ್ಲುತ್ತಾನೆ. ಆಗ ಎಲ್ಲಾ ಹಸುಗಳೂ, ಎತ್ತುಗಳೂ ಅವನ ಕಾಲಡಿಯಿಂದ ನುಸುಳಿ ಹೋಗುತ್ತದೆ. ಆದರೆ ಬಸವನ ಎತ್ತಾಗಿದ್ದ ಶಿವ ಮಾತ್ರ ಹಾಗೆ ಮಾಡದೆ ನೆಲದಡಿಯಲ್ಲಿ ಇಳಿದು ಬಿಡುತ್ತಾನೆ. ಆಗ ಭೀಮನಿಗೆ ಆತನೇ ಶಿವ ಪರಮಾತ್ಮನೆನ್ನುವುದು ತಿಳಿದು ಬಿಡುತ್ತದೆ. ಆಗ ಅವನು ಬಸವನ ಎತ್ತಿನ ಭುಜ (ಡುಬ್ಬ)ವನ್ನು ಹಿಡಿದು ಎಳೆದುಬಿಡುವನು. ಹೀಗಾಗಿ ಎತ್ತಿನ ಭುಜ ಮಾತ್ರ ಕೇದಾರದಲ್ಲಿಯೇ ಉಳಿಯುತ್ತದೆ. (ಕೇದಾರದ ಲಿಂಗವು ತ್ರಿಭುಜಾಕಾರದಲ್ಲಿದೆ ಎನ್ನುವುದು ವಿಶೇಷ).

ಇನ್ನು ಎತ್ತಿನ ಉಳಿದ ಭಾಗಗಳು ಕ್ರಮವಾಗಿ ರುದ್ರನಾಥ್ (ಶಿರ), ಮಧ್ಯಮ ಮಹೇಶ್ವರ (ಮುಂಡ), ತುಂಗಾನಾಥ (ತೋಳುಗಳು), ನೇಪಾಳದ ಪಶುಪತಿನಾಥ ಹಾಗೂ ಕರೈಶ್ವರ (ದೇಹದ ಉಳಿದ ಅಂಗಗಳು) ಹಂಚಿ ಹೋಗುತ್ತದೆ.
ತುಂಗಾನಾಥ ದೇವಾಲಯ

ಕಡೆಗೂ ಪ್ರಸನ್ನನಾದ ಪರಮೇಶ್ವರ ಕೇದಾರದಲ್ಲಿ ಪಾಂಡವರಿಗೆ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಹಾಗೆ ಭೀಮನಿಗೆ ನಂದಿಯ ಭುಜ ಸಿಕ್ಕಿದ ಜಾಗದಲ್ಲಿ ಪಾಂಡವರು ತ್ರಿಭುಜಾಕೃತಿಯ ನಂದಿಯ ಭುಜ ಹೊತ್ತ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಅಲ್ಲಿಂದ ಮುಂದೆ ಬದರಿನಾಥದ ಸಮೀಪವಿರುವ ಹಿಮಾಲಯ ಪರ್ವತ ಶಿಖರದ ’ಸ್ವರ್ಗಾರೋಹಣ’ ಶಿಖರವೇರಿ ಸ್ವರ್ಗಕ್ಕೆ ತೆರಳುತ್ತಾರೆ. 

***
ಮಧ್ಯ ಮಾಹೇಶ್ವರ ದೇವಾಲಯ
ನರ ನಾರಾಯಣನೊಮ್ಮೆ ಬದರಿಕಾಶ್ರಮದಲ್ಲಿ ಪಾರ್ಥಿವ ಪೂಜೆಯಲ್ಲಿ ತೊಡಗಿದ್ದಾಗ ಪರಮೇಶ್ವರನು ಅವರಿಗೆ ದರ್ಶ್ನ ನೀಡಿದ್ದನು. ಆಗ ನಾರಾಯಣನು ’ಮಾನವಕುಲದ ಕಲ್ಯಾಣಕ್ಕಾಗಿ ಪರಮೇಶ್ವರನು ತನ್ನ ಮೂಲರೂಪದಲ್ಲಿ ಇಲ್ಲಿಯೇ ನೆಲೆಸಬೇಕು’ ಎಂದು ಬೇಡಿಕೊಂಡನು. ಪರಮೇಶ್ವನು ನಾರಾಯಣನ ಕೋರಿಕೆಯನ್ನು ಮನ್ನಿಸಿ ಹಿಮಾಲಯದ ಕೇದಾರ್ ಎನ್ನುವ ಪ್ರದೇಶದಲ್ಲಿ ಮೂಲ ಸ್ವರೂಪವಾದ ಜ್ಯೋತಿಯ ರೂಪದಲ್ಲಿ ಉಳಿದನು. ***
ಕಲ್ಪೇಶ್ವರ ದೇವಾಲಯ
ಇನ್ನು ಸತ್ಯಯುಗದಲ್ಲಿ ಈ ಪ್ರದೇಶವನ್ನು ಕೇದಾರನೆನ್ನುವ ರಾಜನು ಆಳಿದ್ದನು. ಅವನು ಧರ್ಮಾತ್ಮನಾಗಿದ್ದು ಆತನ ಸ್ಮರಣಾರ್ಥ ಈ ಸುತ್ತಲ ಪ್ರದೇಶಕ್ಕೆ ಕೇದಾರನಾಥ ಎಂದು ಹೆಸರಾಯಿತು

Saturday, May 19, 2018

ಶಿರಡಿ, ನಾಸಿಕ ಪ್ರವಾಸ: ಗುರು ಕರುಣೆಯೊಡನೆ ದೈವ ಸನ್ನಿದಿಯ ದರ್ಶನ


ಮಹಾರಾಷ್ಟ್ರದ ಶಿರಡಿ ಸಾಯಿ ಬಾಬಾ ನೆಲೆಸಿರುವ ಪ್ರಖ್ಯಾತ ಪುಣ್ಯ ಕ್ಷೇತ್ರ. ದೇಶದ ನಾನಾ ಕಡೆಗಳಿಂದ ದಿನನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗಾಗಮಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹಾ ಶಿರಡಿ ಕ್ಷೇತ್ರದ ಜತೆಗೆ ಅದೇ ಸುತ್ತ ಮುತ್ತಲ ಇತರೇ ಕ್ಷೇತ್ರಗಳ ಭೇಟಿಗೆ ಪ್ರವಾಸಿಗರಿಗೆ ಶಿರಡಿ ಕೇಂದ್ರ ಸ್ಥಳವಾಗಲಿದೆ.

ಕರ್ನಾಟಕ ಸೇರಿ ದೇಶದ ಎಲ್ಲೆಡೆಗಳಿಂಡ ಉತ್ತಮ ರಸ್ತೆ, ರೈಲು ಸಂಪರ್ಕ ಹೊಂದಿರುವ ಶಿರಡಿಯ ಸಮೀಪವೇ ಇತ್ತೀಚೆಗೆ ವಿಮಾನ ನಿಲ್ದಾಣ ಸಹ  ಪ್ರಾರಂಭಗೊಂಡಿದೆ. ಹೀಗಾಗಿ ಶಿರಡಿಗೆ ಯಾವಗಲಾದರೂ ಸುಲಭವಾಗಿ ತಲುಪಬಹುದು. ಶಿರಡಿಯಲ್ಲಿ ತಂಗಲು ಸಾಕಷ್ಟು ಹೋಟೆಲ್, ವಸತಿ ಗೃಹಗಳೂ ಲಭ್ಯವಿದೆ. ಶಿರಡಿ ಸಾಯಿಬಾಬಾ ಮಂದಿರದ ವಸತಿ ವ್ಯವಸ್ಥೆ ಸಹ ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ಕೋಣೆಗಳನ್ನು ಹೊಂದಿದೆ.

ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯಲ್ಲಿರುವ ಶಿರಡಿ ಪುಟ್ಟ ಗ್ರಾಮವಾದರೂ ಸಾಯಿಬಾಬಾ ಮಂದಿರದ ಕಾರಣ ದೇಶ್ದಾದ್ಯಂತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ತಾಣ. ಶಿರಡಿಯ ಕೇಂದ್ರ ಭಾಗದಲ್ಲಿ ಸಾಯಿಬಾಬಾ ಸಮಾಧಿ ಮಂದಿರವಿದೆ. ಬೆಳಿಗ್ಗೆ 4ಕ್ಕೆ ತೆರೆಯುವ ಈ ಮಂದಿರ ರಾತ್ರಿ 11ಕ್ಕೆ ಮುಚ್ಚಲ್ಪಡುತ್ತದೆ. ಇದೇ ಮಂದಿರದ ಸನಿಹದಲ್ಲಿ ಬಾಬಾ ಅವರು ನೆಲೆಸಿದ್ದ ದ್ವಾರಕಾಮಾಯಿ ಮಸೀದಿ, ಬಾಬಾ ಅವರ ಚಾವಡಿ (ನ್ಯಾಯ ನಿರ್ಣಯ ಸ್ಥಳ), ಗಣೇಶ, ಆಂಜನೇಯನ ಗುಡಿಗಳೂ ಇದೆ. ಸಾಯಿ ಮಂದಿರಕ್ಕೆ ತೆರಳಿದವರು ಈ ಎಲ್ಲಾ ಸ್ಥಳಕ್ಕೂಭೇತಿ ನೀಡುತ್ತಾರೆ.
ದೇವಾಲಯದ ಆವರಣದಲ್ಲಿ ಸಾಯಿಬಾಬಾ ಜೀವನದ ಪ್ರಮುಖ ಘಟ್ಟಗಳಲ್ಲಿ ತೆಗೆಯಲಾದ ಛಾಯಾಚಿತ್ರಗಳಿರುವ ವಸ್ತು ಸಂಗ್ರಹಾಲವೂ ಇದೆ.
ವಿಶೇಷವೆಂದರೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ನಾನಾ ದೇವಾಲಯದಲ್ಲಿರುವಂತೆಯೇ ಇಲ್ಲಿಯೂ ಜನಸಂದಣಿ ಅಧಿಕವಾಗಿದ್ದು ಸರತಿ ಸಾಲಿನಲ್ಲಿ ನಿಂತು ದರ್ಶ್ನ ಪಡೆಯಬೇಕು. ಬಾಬಾ ಸಮಾಧಿ ಮಂದಿರ ದರ್ಶನ ಅಥವಾ ಆರತಿಗೆ ಮುಂಗಡ ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ. ದರ್ಶನಕ್ಕೆ 300 ರೂಪಾಯಿಯಾದರೆ ಆರತಿಗೆ 600 ರೂ. ಟಿಕೆಟ್ ದರವಿದೆ. ದೇವಳದ ವಸತಿ ನಿಲಯದಲ್ಲಿ ಒಂದು ಸಾವಿರ ಕೊಠಡಿಗಳಿದ್ದು ಒಂದಕ್ಕೆ 300 ರೂ. ನಂತೆ ಮುಂಗಡ ಕಾಯ್ದಿರಿಸಿಅಬಹುದು.
ಶಿರಡಿಗೆ ತೆರಳಲು ನಾವುಗಳು ಪ್ಯಾಕೇಜ್ ಟೂರ್ ಆಯ್ಕೆ ಮಾಡಿಕೊಂಡಿದ್ದೆವು. ಈ ಪ್ಯಾಕೇಜಿನಲ್ಲಿ ಮುಂಬೈ, ಶಿರಡಿ, ನಾಶಿಕ, ಪಂಚವಟಿ, ಶನಿಶಿಂಗಣಾಪುರ ಮತ್ತು ರಂಜನ್ ಗಾಂವ್ ಮಹಾಗಣಪತಿ ದೇವಸ್ಥಾನಗಳುಸೇರಿತ್ತು, ನಾವು ಒಟ್ಟು 7 ಮಂದಿ ಬೆಂಗಳೂರಿನಿಂದ ಹೊರಟಿದ್ದೆವು. ಬೆಂಗಳೂರಿನೊಂದ ಮುಂಬೈಗೆ ವಿಮಾನ ಮುಂಬೈನಿಂದ  ಉಳಿದ ಕ್ಷೇತ್ರಗಳಿಗೆ ಎಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು ನಾವು ಶನಿವಾರ ಬೆಳಿಗ್ಗೆ ಏಳಕ್ಕೆ ಮುಂಬೈನಲ್ಲಿದ್ದೆವು.
ಸಿದ್ದಿವಿನಾಯಕ ದೇವಾಲಯ
 ಅಲ್ಲಿ ಬೆಳಗಿನ ಉಪಹಾರ ತೀರಿಸಿಕೊಂಡು ಸಿದ್ದಿವಿನಾಯಕ, ಮಹಾಲಕ್ಷ್ಮಿ ದೇವಾಲಯಗಳ ನೋಡಿ ವಿಶ್ವ ವಿಖ್ಯಾತ ಗೇಟ್ ವೇ ಆಫ್ ಇಂಡಿಯಾ, ತಾಜ್ ಹೋಟೆಲ್ ನೋಡಿದೆವು. ಇಷ್ಟೆಲ್ಲಾ ಸುತ್ತಾಡಿ ಮಧ್ಯಾಹ್ನದ ಊಟ ಮಾಡಿದ ಬಳಿಕ ಸುಮಾರು 2ಕ್ಕೆ ನಾಸಿಕದತ್ತ ಪ್ರಯಾಣ ಸಾಗಿತ್ತು.
ನಾಸಿಕದ ತ್ರಯಂಬಕೇಶ್ವರ ತಲುಪುವಾಗ ಸಂಜೆ 5.30. ನಾಸಿಕ ಪಟ್ಟಣದಿಂದ ಸುಮಾರು ಮುಕ್ಕಾಲು ಗಂಟೆ ಪ್ರಯಾಣದ ಊರು(ಸುಮಾರು 30 ಕಿ.ಮೀ) ತ್ರಯಂಬಕೇಶ್ವರ. ಸುಮಾರು 700  ವರ್ಷಗಳಷ್ಟು ಹಳೆಯ ದೇವಾಲಯವಾದ ತ್ರಯಂಬಕೇಶ್ವರ ದೇವಾಲಯ ಭಾರತದಲ್ಲಿ ಪ್ರಖ್ಯಾತವಾದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ 10ನೇ ಜ್ಯೋತಿರ್ಲಿಂಗವಾಗಿದೆ. ವಿಶೇಷವೆಂದರೆ ಇಲ್ಲಿ ಮೂರು ಚಿಕ್ಕ ಚಿಕ್ಕ ಶಿವಲಿಂಗಗಳಿದ್ದು ಇದನ್ನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ರೂಪ ಎನ್ನಲಾಗುತ್ತದೆ. ಭಾರತದ ಇನ್ನಾವ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ಸಹ ಈ ರೀತಿ ಮೂರು ಲಿಂಗಗಳು ಒಟ್ಟಾಗಿಲ್ಲ ಎನ್ನುವುದು ಗಮನಾರ್ಹ.


ಮಹಾಲಕ್ಷ್ಮಿ ದೇವಾಲಯ
ಇದೇ ತ್ರಯಂಬಕೇಶ್ವರ ಸನ್ನಿಧಿಯಲ್ಲಿಯೇ ಭಾರತದ ಪುಣ್ಯನದಿಗಳಲ್ಲೊಂದಾದ ಗೋದಾವರಿ ಉಗಮವಾಗುತ್ತದೆ. ಇದೇ ಸಮೀಪದಲ್ಲಿರುವ ಬ್ರಹ್ಮಗಿರಿ ಬೆಟ್ಟದ ಮೇಲೆ ಹಿಂದೆ ಗೌತಮ ಮಹರ್ಷಿಗಳು ಅಹಲ್ಯೆಯೊಡನೆ ನೆಲೆಸಿದ್ದರು ಎನ್ನಲಾಗುತ್ತದೆ. ಇಂದಿಗೂ ಈ ಗಿರಿಶ್ರೇಣಿಯಲ್ಲಿ ಗೌತಮ, ಅಹಲ್ಯೆಯರಿಗೆ ಮೀಸಲಾದ ಪುಟ್ಟ ಗುಡಿ ಇದೆ. ಅಲ್ಲದೆ ಪ್ರಕೃತಿ ಪ್ರಿಯರಿಗೆ ಇಲ್ಲಿ ಅತ್ಯದ್ಭುತ ಪ್ರಾಕೃತಿಕ ನೋಟಗಳನ್ನು ಹೊತ್ತ ಸುಂದರ ದೃಶ್ಯಗಗಳನ್ನು ಕಾಣಬಹುದಾಗಿದೆ. ಇದೇ ಬೆಟ್ಟದಲ್ಲಿ ಹುಟ್ಟುವ ಇನ್ನೂ ಎರಡು ಪಟ್ಟ ನದಿಗಳು ತ್ರಯಂಬಕೇಶ್ವರದಲ್ಲಿ ಗೋದಾವರಿಯೊಡನೆ ಸಂಗಮವಾಗುತ್ತದೆ. ಇದೇ ಸಂಗಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ವಿಶ್ವ ಪ್ರಸಿದ್ದ  ನಾಸಿಕ ಕುಂಭಮೇಳವು ನಡೆದು ಲಕ್ಷಾಂತರ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ.
ನಾವು ತ್ರಯಂಬಕೇಶ್ವರನ  ದರ್ಶನ ಪಡೆದು ಅಲ್ಲಿಂದ ನಾಸಿಕದಿಂದ 2 ಕಿ.ಮೀ. ಇರುವ  ಪಂಚವಟಿಗೆ ತೆರಳಿದೆವು.
ಇದು ಸುಂದರವಾದ ಧಾರ್ಮಿಕ ಕ್ಷೇತ್ರವಾಗಿದ್ದು 5 ವಟವೃಕ್ಷ (ಆಲದ ಮರ) ಗಳಿರುವ ಊರು ಎನ್ನುವ ಅರ್ಥ ಇರುವ ಇದೇ ಸ್ಥಳದಲ್ಲಿ ವನವಾಸದ ಸಮಯದಲ್ಲಿ  ರಾಮ, ಲಕ್ಷ್ಮಣರು ಸೀತೆಯೊಡನೆ ವಾಸವಿದ್ದರು.  ಶೂರ್ಪನಖಿ ಮೂಲಕ ಸೀತೆಯ ವಿಚಾರ ತಿಳಿದ ರಾವಣ ಇಲ್ಲಿಂದಲೇ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದನೆನ್ನಲಾಗುತ್ತದೆ. ಇಲ್ಲಿರುವ ಸೀತಾಗುಹ (ಸೀತೆಯ ಗುಹೆ), ಕಾಲಾರಾಮ, ಗೋರಾರಾಮ ಮಂದಿರಗಳು (ಕಪ್ಪು ರಾಮ ಹಾಗೂ ಬಿಳಿ ರಾಮನ ಮೂರ್ತಿಗಳಿರುವ ಪ್ರತ್ಯೇಕ ದೇವಾಲಯ) ನೋಡಲು ಅತ್ಯಂತ ಆಕರ್ಷಕವಾಗಿದೆ.
ಇಲ್ಲಿರುವ ರಾಮಕುಂಡ ಸಹ ಅತ್ಯಂತ ಪ್ರಸಿದ್ದವಾದದ್ದು ಇಲ್ಲಿ ಶ್ರೀರಾಮನು ದಶರಥ ಮಹಾರಾಜನಿಗೆ ಪಿಂಡ ಪ್ರಧಾನ ಮಾಡಿದ ಎನ್ನಲಾಗುತ್ತದೆ. 
ಇನ್ನು ನಾಸಿಕ (ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ್ದ ಸ್ಥಳ ಎನ್ನುವ ಅರ್ಥದಲ್ಲಿ ಬಳಕಯಾಗುತ್ತಿದೆ) ಪಟ್ಟಣವು ಭಾರತ  "ವೈನ್ ಕ್ಯಾಪಿಟಲ್" ಭಾರತದ ಒಟ್ಟಾರೆ ವೈನ್ ಉತ್ಪಾದಿಸುವ ಘಟಕಗಳ ಪೈಕಿ ಅರ್ಧದಷ್ಟು ಘಟಕಗಳು ನಾಸಿಕ್ ನಲ್ಲಿವೆ. ವಾರ್ಷಿಕ 10,000 ಟನ್ ಗಿಂತಲೂ ಹೆಚ್ಚು ಪ್ರಮಾಣದ ದ್ರಾಕ್ಷಿಯನ್ನು ನಾಸಿಕ್  ನಲ್ಲಿ ಬೆಳೆಯಲಾಗುತ್ತದೆ. ಸುಳಾ ದ್ರಾಕ್ಷಾ ರಸ ಪ್ರಸಿದ್ಧವಾಗಿದ್ದು ಸುಳಾ ಉತ್ಸವ ಕೂಡ ಇಲ್ಲಿ ಜರುಗುತ್ತದೆ.

ಪಂಚವಟಿಯ ಶ್ರೀರಾಮನ ದರ್ಶನ ಪಡೆದ  ನಾವುಗಳು ನಾಸಿಕದಲ್ಲಿ ರಾತ್ರಿ ಭೋಜನ ಮುಗಿಸಿಕೊಂಡು  ಅಲ್ಲಿಂದ ರಾತ್ರಿ 11.30 ಸುಮಾರಿಗೆ  ಶಿರಡಿಯತ್ತ ತಲುಪಿದೆವು.  ಶಿರಡಿಗೆ ತೆರಳಿ ಅಲ್ಲಿ ಮೊದಲೇ ಕಾಯ್ದಿರಿಸಲಾಗಿದ್ದ ಹೋಟೆಲ್ ಕೋಣೆಯಲ್ಲಿ ರಾತ್ರಿ ತಂಗಿದ್ದು ಬೆಳಿಗ್ಗೆ 6ಕ್ಕೆ ಮೊದಲೇ ನಿಗದಿಯಾದಂತೆ ಸಾಯಿಬಾಬಾ ದರ್ಶನಕ್ಕೆ ಹೊರಟೆವು. ಗೇಟ್ ನಂ.3ರಿಂದ ಮಂದಿರ ಪ್ರವೇಶಿಸಿ ಸಮಾಧಿ ದರ್ಶನ ಪಡೆವಾಗಲೂ ಸರತಿ ಸಾಲಿನಲ್ಲೇ ಹೋಗಬೇಕಾಗಿತ್ತು. 
ಅಷ್ಟೆಲ್ಲಾ ಜನಸಂದಣಿಯ ನಡುವೆಯೇ ಸಾಯಿಬಾಬಾ ಸಮಾಧಿಯ ಸಮೀಪದಲ್ಲೇ ಎರಡು ನಾಯಿಗಳು ಏನೂ ಗೊತ್ತಿಲ್ಲದಂತೆ ಮಲಗಿದ್ದದ್ದು ಅಚ್ಚರಿ ತಂದಿತ್ತು. ಸಾಯಿಬಾಬಾ ಅವರಿಗೆ ನಾಯಿಗಳೆಂದರೆ ಪ್ರೀತಿಯೆಂದೂ, ನಾಯಿಗಳು ದೇಗುಲದಲ್ಲಿ ಸದಾ ಕಾಲ ಇರುತ್ತವೆಂದೂ ನಮ್ಮ ಪ್ರವಾಸಿ ಮಾರ್ಗದರ್ಶಕ (ಗೈಡ್) ಹೇಳಿದರು.
ನಾಸಿಕದ ತ್ರಯಂಬಕೇಶ್ವರ ದೇವಾಲಯ
ಹೀಗೆ ಸಾಯಿಬಾಬಾ ಮಂದಿರ, ದ್ವಾರಕಾಮಾಯಿ ಸೇರಿ ಸುತ್ತಲ ದೇವಾಲಯಗಳ ದರ್ಶನ ಪಡೆದು ಹೊರಬರುವಾಗ ಗಂಟೆ 9ತ್ತಾಗಿತ್ತು.. ಹೋಟೆಲ್ ಚೆಕ್ ಔಟ್ ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದು ಅಲ್ಲಿಯವರೆಗೆ ಶಾಪಿಂಗ್ ಗೆ ಅವಕಾಶವಿತ್ತು. ನಾವು ದೇವಾಲಯ ಸುತ್ತಲಿನಲ್ಲಿರುವ ಸಿಹಿತಿಂಡಿ, ಬಾಬಾ ಮೂರ್ತಿಗಳನ್ನು ಸಾಲಾಗಿಜೋಡಿಸಿಟ್ಟ ಅಂಗಡಿಗಳ ಸಾಲಿನುದ್ದಕ್ಕೆ ಸಾಗಿದೆವು. ಬಾಬಾ ಮೂರ್ತಿಗಳು, ಛಾಯಾಚಿತ್ರಗಳು, ಮಣಿಸರ ಸೇರಿ ಸಿಹಿ ತಿಂಡಿಗಳ ಅಂಗಡಿಗಳ ಸಾಲು ಸಾಲೇ ಅಲ್ಲಿದ್ದು ಪ್ರವಾಸಿ ತಾಣವಾಗಿರುವ ಕಾರಣ ಬೆಲೆಗಳೆಲ್ಲಾ ತುಸು ಅಧಿಕವಾಗಿದ್ದವು.

ನಾವು ಶಿರಡಿ ಬಸ್ ನಿಲ್ದಾಣದ ಬಳಿ ಇರುವ ಖಂಡೋಬಾ ಮಂದಿರಕ್ಕೆ ತೆರಳಿದ್ದೆವು. ಸಾಯಿ ಬಾಬಾ ಪ್ರಥಮ ಬಾರಿಗೆ ಕಾಣಿಸಿಕೊಂಡದ್ದು ಇದೇ ಮಂದಿರದಲ್ಲಿರುವ ಮರದ ಬಳಿಯಲ್ಲಿ. ಅದಾಗ ಅಲ್ಲಿನ ಅರ್ಚಕ ಪ್ರಮುಖರೊಬ್ಬರು 'ಆವೋ ಸಾಯಿ' ಎಂದು ಕರೆದರು. ಅದುವೇ ಬಾಬಾ ಅವರ ಖಾಯಂ ಹೆಸರಾಯಿತು ಎನ್ನಲಾಗುತ್ತದೆ.
ಶಿರಡಿಯಲ್ಲಿ ಬಾಬಾ ಒಟ್ಟು 64 ವರ್ಷಗಳ ಕಾಲ ಬದುಕಿದ್ದರು ಕ್ರಿ.ಶ. 1918 ವಿಜಯದಶಮಿಯ ದಿನದಂದು ಅವರು ಸಮಾಧಿಸ್ಥರಾದರು. ಎಂದರೆ ಈ ವರ್ಷ (2018 ಸಾಯಿ ಬಾಬಾ ಸಮಾಧಿಯಾಗಿ ನೂರನೇ ವರ್ಷವಾಗಿದೆ. ಈ ಪ್ರಯುಕ್ತ ವರ್ಷ ಪೂರ್ತಿ ದೇವ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಬರುವ ವಿಜಯದರ್ಶಮಿಯಂದು ಅತ್ಯಂತ ವೈಭವದ ಬಾಬಾ 100ನೇ ಮಹಾಸಮಾಧಿ ವರ್ಷೋತ್ಸವ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 12ಕ್ಕೆ ನಾವು ಶಿರಡಿಯ ಆಗ್ನೇಯಕ್ಕೆ ಸುಮಾರು 75 ಕಿ.ಮೀ ದೂರದಲ್ಲಿರುವ ಶನಿ ದೇವರ ಸನ್ನಿಧಾನ ಶನಿಶಿಂಗಣಾಪುರಕ್ಕೆ ತೆರಳಿದ್ದೆವು.
ಶನಿದೇವರೇ ನೆಲೆ ನಿಂತಿರುವ ಈ ಗ್ರಾಮ ದೇಶದಲ್ಲಿ ಪ್ರಖ್ಯಾತವಾಗಿದ್ದು ಸಹಸ್ರಾರು ಜನ ನಿತ್ಯವೂ ಇಲ್ಲಿಗೆ ಆಗಮಿಸುವರು. ವಿಶೇಷವೆಂದರೆ ಈ ಶನಿದೇವರ ಮಂದಿರಕ್ಕೆ ಯಾವ ಬಾಗಿಲು, ಕಿಟಕಿ, ಗೋಪುರಗಳಲ್ಲ. ಬಯಲಿನ ನಡುವೆಯೇ ನಿಂತಿರುವ ಶನಿದೇವರ ನೆಲೆಯಾದ ಈ ಊರಿನಲ್ಲಿರುವ ಮನೆ, ಅಂಗಡಿ, ಬ್ಯಾಂಕ್, ಶಾಲೆಯಂತಹಾ ಕಛೇರಿಗಳಿಗೆ ಸಹ ಬಾಗಿಲು, ಬೀಗಗಳಿಲ್ಲ! ಇಲ್ಲಿ ಕಳ್ಳತನ ಮಾಡಿದ್ದರೆ ಶನಿದೇವರ ಪ್ರಕೋಪಕ್ಕೆ ಈಡಾಗಬೇಕಾಗುವುದು ಎನ್ನುವ ನಂಬಿಕೆ ಇದ್ದು ಶನಿದೇವರ ಅಣತಿಯಂತೆಯೇ ಇಲ್ಲಿ ಯಾರ ಮನೆ, ಕಛೇರಿಗಳಿಗೆ ಬಾಗಿಲು ಇರುವುದಿಲ್ಲವಂತೆ.
ಪಂಚವಟಿ
ದಂತಕಥೆಯಂತೆ ಇಲ್ಲಿನ ಹಳ್ಳಿಗಾಡಿನ ಕುರಿ ಮೇಯಿಸುವವನೊಬ್ಬನಿಗೆ ಈ ಹೊಳಪುಳ್ಳ ಕರಿಶಿಲೆ ಕಾಣಿಸಿತು. ಆತ ಕುತೂಹಲಗೊಂಡು ತನ್ನ ಬಳಿಯಿದ್ದ ಕೋಲಿಂದ ಅದನ್ನು ತಿವಿಯಲು ಅದರಿಂದ ರಕ್ತ ಒಸರಿತು. ಇದನ್ನು ಕಂಡು ಗಾಬರಿಗೊಂಡ ಆತ ಹಳ್ಳಿಯ ಇತರರಿಗೆ ಈ ವಿಚಾರ ತಿಳಿಸಿದ. ಅಂದಿನ ರಾತ್ರಿ ಆ ಹಳ್ಳಿಯಲಿದ್ದ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿದೇವ 'ನಾನು ಈ ಗ್ರಾಮದಲ್ಲಿ ನೆಲೆಸುವವನಿದ್ದೇನೆ. ಈ ಕರಿಶಿಲೆಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ, ತೈಲಾಭಿಷೇಕ ನೆರವೇರಿಸಿರಿ. ಮುಂದೆ ಇಲ್ಲೆಲ್ಲೆ ಆಗಲಿ ಕಳ್ಳತನವಾಗದಂತೆ ನಾನು ನೋಡಿಕೊಳ್ಳುವೆನು' ಎಂದು ಆದೇಶಿಸಿದ.
ಅದರಂತೆ ಆ ಕರಿಶಿಲೆಯನ್ನು ಊರ ನಡುವೆ ಪ್ರತಿಷ್ಠಾಪಿಸಲಾಗಿದ್ದು ಅಂದಿನಿಂದ ಇಂದಿನವರೆಗೆ ಶನಿದೇವರಿಗೆ ನಿತ್ಯ ಪೂಜೆ, ತೈಲಾಭಿಷೇಕಗಳು ನಡೆಯುತ್ತಿದೆ.
ರಂಜನ್ ಗಾಂವ್ ಮಹಾಗಣಪತಿ
ನಾವೂ ಸಹ ಆ ವಿಸ್ಮಯಕಾಇ ಶಿಲೆಯನ್ನು ವೀಕ್ಷಿಸಿ ಅಚ್ಚರಿಗೊಂಡೆವು. ಅಲ್ಲಿಂದ ಹೊರಟ ನಾವುಗಳು ಸಂಜೆ 6.30ರ ವೇಳೆಗೆ  ಪೂನಾ ಸಮೀಪದ ರಂಜನ್‌ಗಾಂವ್‌ ಗೆ ಬಂದೆವು. ಅಲ್ಲಿ ಮಹಾಗಣಪತಿ ದೇವಸ್ಥಾನ ಬಹು ಪ್ರಸಿದ್ದವಾದದ್ದು. ಪೂನಾ ಸುತ್ತ ಮುತ್ತಲೂ ಇರುವ ಅಷ್ಟ ವಿನಾಯಕ ಸನ್ನಿಧಾನಗಳಲ್ಲಿ ಇದು 8ನೇ ಅಥವಾ ಕಡೆಯ ಸನ್ನಿಧಾನ ಎಂ ದು ನಮ್ಮ ಗೈಡ್ ಹೇಳಿದ್ದ.

ರಂಜನ್ ಗಾಂವ್ ಮಹಾಗಣಪತಿ ದೇವಾಲಯ ಮಹಾದ್ವಾರ
ಒಂದು  ಐತಿಹ್ಯದಂತೆ  ರಂಜನ್‌ಗಾಂವ್‌ ಪಟ್ಟಣವಿರುವ ಸ್ಥಳ ತ್ರಿಪುರಾಸುರನನ್ನು ವಧಿಸಲು ಪರಮೇಶ್ವರ ತನ್ನ ಮಗ ಗಣಪತಿಯ ಆಶೀರ್ವಾದ ಪಡೆದ ಸ್ಥಳವಾಗಿದೆ.
ಹಾಗೆ ಶಿವನು ಗಣೇಶನ ಆಶೀರ್ವಾದ ಪಡೆದ ಸ್ಥಳದಲ್ಲಿಯೇ ಪರಮೇಶ್ವರ ಗಣೇಶನ ದೇವಸ್ಥಾನವನ್ನು ನಿರ್ಮಿಸಿದ್ದನು. ಆ ದೇವಸ್ಥಾನದ ಸುತ್ತಲಿನ ನಗರವನ್ನು ಮಣಿಪುರ ಎಂದು ಕರೆಯಲಾಗುತ್ತಿತ್ತು. ಅದೇ ಮಣಿಪುರ ಇಂದು ರಂಜನ್ಗಾಂವ್ ಆಗಿದೆ. ಶಿವನು ಪ್ರತಿಷ್ಠಾಪಿಸಿ ಪೂಜಿಸಿದ ಆ ಗಣೇಶ ದೇವಸ್ಥಾನ ಇದೇ ಮಹಾಗಣಪತಿ ಸನ್ನಿಧಾನ ಎನ್ನಲಾಗುತ್ತದೆ.
ನಾವು ಮಹಾಗಣಪತಿಯನ್ನು ದರ್ಶಿಸಿ ಅಲ್ಲಿಂದ ಪೂನಾ ವಿಮಾನ ನಿಲ್ದಾಣ ತಲುಪಿದೆವು. ಮತ್ತೆ ಅಲ್ಲಿಂದ ನಿಗದಿಯಾಗಿದ್ದ ವಿಮಾನದಲ್ಲಿ ಬೆಂಗಳೂರಿನತ್ತ ಪಯಣಿಸಿದೆವು.  ಹೀಗೆ ಶಿರಡಿ, ನಾಸಿಕ ಪ್ರವಾಸ ನಮ್ಮ ನೆನಪುಗಳ ಪುಟದಲ್ಲಿ ಸೇರಿ ಹೋಯಿತು.


(ಈ ನನ್ನ ಲೇಖನದ ಸಂಗ್ರಹ ರೂಪ 08 ಮೇ 2018ರಂದು ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು - https://bit.ly/2KNn6GS)