Friday, January 26, 2024

ಕುವೆಂಪು ಕುಪ್ಪಳ್ಳಿಗೆ ಭೇಟಿನೀಡಿದ ಡೈಲಾಗ್ ಕಿಂಗ್ ಸಾಯಿಕುಮಾರ್

ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ದಕ್ಷಿಣ ಭಾರತದ ಖ್ಯಾತ ನಟ ಸಾಯಿಕುಮಾರ್ ಇತ್ತೀಚಿಗೆ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಆ ಸುಂದರ ಸ್ಥಳಕ್ಕೆ  ಭೇಟಿ ನೀಡಿ ತಮ್ಮ ಸುಂದರ ಅನುಭವಗಳನ್ನು ಸಾಯಿಕುಮಾರ್ ಹಂಚಿಕೊಂಡಿದ್ದಾರೆ.










"ನಾನು ಹಾಗೂ ನನ್ನ ಕೆಲವು ಸ್ನೇಹಿತರು ಇತ್ತೀಚಿಗೆ ತೀರ್ಥಹಳ್ಳಿಯಿಂದ  ರಾಷ್ಟ್ರಕವಿ ಕುವೆಂಪು ಅವರ ಮನೆ ಹಾಗು ಕವಿಶೈಲಕ್ಕೆ ಭೇಟಿ ನೀಡಿದ್ದೆ. ಅಬ್ಬಾ ಆ ಸ್ಥಳವನ್ನು ಬಣಿಸಲು ಪದಗಳೆ ಸಿಗುತ್ತಿಲ್ಲ. ನಾನು ನನ್ನ ಸಿನಿಮಾಗಳಲ್ಲಿ ಕುವೆಂಪು ಅವರ        "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು", "ಕನ್ನಡಕ್ಕೆ ಹೋರಾಡು ಕನ್ನಡದ ಕಂದ" ,"ಬಾರಿಸು ಕನ್ನಡ ಡಿಂಡಿಮವ" ಮುಂತಾದ ಕವನಗಳನ್ನು ಹಾಗೂ "ಜಯ ಭಾರತ ಜನನಿಯ ತನುಜಾತೆ" ನಾಡಗೀತೆಯನ್ನು ಹಾಡುತ್ತಿರುತ್ತೇನೆ.  ಆದರೆ ಈವರೆಗೂ ಕುಪ್ಳಳ್ಳಿಗೆ ಹೋಗಿರಲಿಲ್ಲ. ಇತ್ತೀಚಿಗೆ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಹೋಗಿದ್ದೆ. ಪ್ರಕೃತಿಯ ಮಡಿಲಲ್ಲಿರುವ ಆ ಪುಣ್ಯಸ್ಥಳವನ್ನು ನೋಡಿ ಪುಳಕಿತನಾದೆ. ಅವರು ಬಳಸುತ್ತಿದ್ದ ಲೇಖನಿ ಹಾಗೂ ಪುಸ್ತಕ ಮುಂತಾದವುಗಳನ್ನು ಕಂಡು ಧನ್ಯನಾದೆ. ನಾನು ಸುಮಾರು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಚಿತಗಳನ್ನು ಮಾಡುತ್ತಾ ಬಂದಿದ್ದರೂ ಕುಪ್ಪಳ್ಳಿಯನ್ನು ನೋಡುವ ಯೋಗ ಬಂದಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಯುವಕರು ಕುಪ್ಪಳ್ಳಿಗೆ ಭೇಟಿ ನೀಡಿ. ಅಲ್ಲಿನ ಸೊಬಗನ್ನ ಕಣ್ತುಂಬಿಕೊಳ್ಳ ಎನ್ನುತ್ತಾರೆ ನಟ ಸಾಯಿಕುಮಾರ್.

Friday, January 19, 2024

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಲೋಗೋ ಅನಾವರಣಗೊಳಿಸಿದ ಸಿಎಂ

 ಕರ್ನಾಟಕ ಸರ್ಕಾರದ ಹೆಮ್ಮೆಯ ಉತ್ಸವವಾದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bangalore Chirotsava) ಬೆಂಗಳೂರಿನಲ್ಲಿ ನಡೆಯಲಿದೆ. ಈ ಚಿತ್ರೋತ್ಸವದ ಲೋಗೋವನ್ನು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರು ಅನಾವರಣ ಮಾಡಿದರು. ಉತ್ಸವದ ಉದ್ಘಾಟನಾ ಸಮಾರಂಭ 2024ರ ಫೆಬ್ರವರಿ 29 ರಂದು ವಿಧಾನಸೌಧದ ಮುಂಭಾಗ ನಡೆಯಲಿದ್ದು, ಮಾರ್ಚ್ 7ರಂದು ಸಮಾರೋಪ ಸಮಾರಂಭ  ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.


15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಈ ಬಾರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟ (FIAPF) ಮಾನ್ಯತೆ ಪಡೆದ ಈ  ಚಲನಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಿಚ್ಚನ ‘ಮ್ಯಾಕ್ಸ್’ ಹೆಸರಲ್ಲಿ ಆಂಬುಲೆನ್ಸ್ ಸೇವೆ…ಇದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ಕೊಡುಗೆ

 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಜೊತೆಗೆ ಸದ್ದಿಲ್ಲದೇ, ಕಷ್ಟ ಎಂದುಕೊಂಡು ಬಂದವರಿಗೆ ಸಹಾಯಹಸ್ತ ಚಾಚಿದ್ದಾರೆ. ಈಗಾಗಲೇ ತಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡಿರುವ ಸಹಾಯಗಳು ಎಲ್ಲರ ಕಣ್ಣಮುಂದಿವೆ. ಗ್ರಾಮ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯದ ನೆರವು ನೀಡಿದ್ದಾರೆ. ಕಿಚ್ಚನ ಹೆಸರಿನ ಟ್ರಸ್ಟ್ ಹೊರತಾಗಿ ಅವರ ಅಭಿಮಾನಿಗಳೇ ಸಂಸ್ಥಾಪಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಾವಿರಾರು ಜೀವಗಳ ಉಳಿವಿಗೆ ನೆರವಾಗಿದೆ.


ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಪ್ರಾರಂಭಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಅದರಂತೆ ಈ ಟ್ರಸ್ಟ್ ಈಗ ಮ್ಯಾಕ್ಸ್ ಹೆಸರಿನ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಇಂದು ಮಾಕ್ಸ್ ಹೆಸರಿನ ಆಂಬುಲೆನ್ಸ್ ನ್ನು ಸುದೀಪ್ ಸಾವರ್ಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ. 

ಅಂದಹಾಗೇ ಮ್ಯಾಕ್ಸ್ ಕಿಚ್ಚ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಚಿತ್ರದ ಮೊದಲ ಗ್ಲಿಂಪ್ಸ್ ಫ್ಯಾನ್ಸ್ಗೆ ಇಷ್ಟ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್ ಪುನರಾರಂಭವಾಗಿದ್ದು, ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ.

ಕಾಲಿವುಡ್‌ನ ಖ್ಯಾತ ಡೈರೆಕ್ಟರ್‌ ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದು, ವಿಭಿನ್ನ ಕಥೆಯಲ್ಲಿ ಸುದೀಪ್ ಜೀವತುಂಬಿದ್ದಾರೆ. ಮ್ಯಾಕ್ಸ್‌ ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇರಲಿದ್ದು, ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್‌, ಕಾಮರಾಜ್, ಸುಕೃತಾ ವಾಗ್ಲೆ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಸಾಹಸಮಯ ಚಿತ್ರವಾಗಿದ್ದು ಮತ್ತು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ಎಸ್ ಥಾನು ಹಣ ಹಾಕಿದ್ದಾರೆ.

Tuesday, January 16, 2024

 ಕನ್ನಡ ಚಲನ ಚಿತ್ರದ ಹೆಸರಾಂತ ನಟಿಯರಾದ ಪ್ರೇಮಾ ಹಾಗೂ ರಾಗಿಣಿ ದ್ವಿವೇದಿ ಯವರು ಪೌರ‌ಕಾರ್ಮಿಕರೊಂದಿಗೆ ಅರ್ಥಪೂರ್ಣವಾಗಿ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಿಸಿದರು.


ಭಾರತಿನಗರ ನಾಗರಿಕರ ವೇದಿಕೆ ಬೆಂಗಳೂರು, ಕಾಕ್ಸ್ ಟೌನ್ ಶ್ರೀ ಗಂಗಮ್ಮ ದೇವಸ್ಥಾನದ ಆವರಣದಲ್ಲಿ ಸಂಕ್ರಾಂತಿ ಹಬ್ಬ ಕಾರ್ಯಕ್ರಮ ಅಂಗವಾಗಿ

ಶೃಂಗರಿಸಿದ ಮಡಕೆಯಲ್ಲಿ ಅಕ್ಕಿಯ‌ ಹುಗ್ಗಿ ( ಪೊಂಗಲ್ ) ತಯಾರಿಸಿದ ನಟಿಯರಾದ ಪ್ರೇಮಾ‌ ಮತ್ತು ರಾಗಿಣಿ ದ್ವಿವೇದಿಯವರು ನಂತರ ಸಂಪ್ರದಾಯದಂತೆ‌ ಗೋ ಪೂಜೆ ನೆರವೇರಿಸಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಸೀರೆ, ಕಬ್ಬು‌ ಹಾಗೂ ಸಿಹಿ ಪೊಂಗಲ್‌ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿಯರಾದ ಪ್ರೇಮ ಮತ್ತು ರಾಗೀಣಿ ದ್ವಿವೇದಿ ಅವರು ವರ್ಷದ ಮೊದಲ ಹಬ್ನ ಸಂಕ್ರಾಂತಿಯನ್ನು ಪೌರಕಾರ್ಮಿಕರೊಂದಿಗೆ ಆಚರಿಸಿರುವುದು ತುಂಬಾ ಖುಷಿ ನೀಡಿದೆ ಎಂದರು.
ಭಾರತಿ ನಗರ ನಾಗರಿಕರ‌ ವೇದಿಕೆ ಅಧ್ಯಕ್ಷ ಎನ್.ಎಸ್.ರವಿ‌ ಹಾಜರಿದ್ದರು.
ಸಂಕ್ರಾಂತಿ ಆಚರಣೆ ಹಿನ್ನಲೆಯಲ್ಲಿ ಡೋಲು ಜಗನ್ನಾಥ್ ತಂಡದಿಂದ ವಿಶೇಷ ನಾಧಸ್ವರ ಹಾಗೂ ಸ್ಯಾಕ್ಷೋಪೋನ್ ವಾದನ‌ದ ಸಂಗೀತ ಕಾರ್ಯಕ್ರಮ ಸಂಗೀತ ಪ್ರಿಯರನ್ನು ರಂಜಿಸಿತು.

ಸೀಮಂತದ ಸಂಭ್ರಮದಲ್ಲಿ ನಟಿ ಕಾವ್ಯ ಗೌಡ.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ ಅದ್ದೂರಿಯಾಗಿ ನಡೆಯಿತು ಕಾವ್ಯಗೌಡ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿ ಹರಸಿದರು

 'ಗಾಂಧಾರಿ', 'ಶುಭ ವಿವಾಹ', 'ರಾಧಾ ರಮಣ' ಧಾರಾವಾಹಿಗಳ ಖ್ಯಾತಿಯ ನಟಿ ಕಾವ್ಯಾ ಗೌಡ ಅವರ ಸೀಮಂತ ಸಮಾರಂಭದ ಫೋಟೋಗಳು ಇಲ್ಲಿವೆ.


















Thursday, January 04, 2024

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -119

 ಕೊಟ್ಟೂರು(Kotturu)



ಕೊಟ್ಟೂರು ಬಳ್ಳಾರಿ ಜಿಲ್ಲೆಯ ಕುಡ್ಲಿಗಿ ತಾಲೂಕಿನಲ್ಲಿದೆ. ನಿಜ ಹೇಳಬೇಕೆಂದರೆ ಈ ಸ್ಥಳದ ಹೆಸರೆ ಕೊಟ್ಟೂರೇಶ್ವರ ಸ್ವಾಮಿಯಿಂದ ಬಂದುದಾಗಿದೆ. ಕೊಟ್ಟೂರು ಒಂದು ತಾಲೂಕು ಪ್ರದೇಶವಾಗಿದ್ದು ಮಂಡಕ್ಕಿ ಮೆಣಸಿನಕಾಯಿಗೆ ಹೆಚ್ಚು ಜನಪ್ರೀಯವಾಗಿದೆ. ಬಳ್ಳಾರಿ ಹಾಗೂ ಕುಡ್ಲಿಗಿಯಿಂದ ಕೊಟ್ಟೂರಿಗೆ ತಲುಪಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಕೊಟ್ಟೂರಿನಲ್ಲಿರುವ ಕೊಟ್ಟೂರೇಶ್ವರ ದೇವಾಲಯವು ನಾಲ್ಕು ಭಾಗಗಳಲ್ಲಿ ವಿಂಗಡನೆಗೊಂದಿದೆ. ಅವುಗಳೆಂದರೆ ಮುರ್ಕಲಮಠ, ತೋಟಲಮಠ, ದರ್ಬಾರ್ ಮಠ ಅಥವಾ ದೊಡ್ಡ ಮಠ ಹಾಗೂ ಗಚ್ಚಿನಮಠ. ಕೊಟ್ಟೂರಿನಲ್ಲಿ ಮೂರು ಕಲ್ಲುಮಠ, ಹಿರೇಮಠ ದರ್ಬಾರ್ ಮಠ, ತೊಟ್ಟಿಲು ಮಠ, ಗಚ್ಚಿನ ಮಠ ಹಾಗೂ ಮರಿ ಮಠ ಎಂಬ ಬಸವೇಶ್ವರರ ಐದು ಮಠಗಳಿವೆ. ಮೂರುಕಲ್ಲು ಮಠದಲ್ಲಿನ ಮೂರು ಶಿಲಾಗೋಪುರಗಳು ಚಾಲುಕ್ಯ ಮತ್ತು ಹೊಯ್ಸಳರ ಕಾಲದ ಜೈನ್ಯರ ಚೈತ್ಯಾಲಯಗಳ ಮಾದರಿಯಲ್ಲಿವೆ. ತೊಟ್ಟಿಲುಮಠದಲ್ಲಿ ಇರುವ ತೊಟ್ಟಿಲನ್ನು ತೂಗಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.


 ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂತಲು ಕರೆಯುತ್ತಾರೆ. ಪ್ರತಿ ವಷ೯ ಫೆಬ್ರುವರಿ ಅಥವಾ ಮಾಚ್೯ ತಿಂಗಳಲ್ಲಿ ರಥೋತ್ಸವ ಜರುಗುವುದು ಡಿಸೆ೦ಬರ್ ತಿ೦ಗಳಲ್ಲಿ ಲಕ್ಷ ದೀಪೊತ್ಸವ ಜರುಗುವುದು. ಈ ಸ್ವಾಮಿಯ ಹಿರೇಮಠಕ್ಕೆ ಅನೇಕ ಭಕ್ತರಿದ್ದಾರೆ. ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವತಿ೯ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.


ಜೀವಿತಾವಧಿಯಲ್ಲಿ ಮರುಳನಂತೆ ಇದ್ದುಕೊಂಡೇ ಅಸಂಖ್ಯಾತ ಭಕ್ತರ ಮನಗೆದ್ದ ಗುರು ಬಸವೇಶ್ವರರು ಲಕ್ಷಾಂತರ ಭಕ್ತರ ಆರಾಧ್ಯ ದೈವ. ಕಾಯಕ ಯೋಗಿ, ಶರಣ, ಮಾನವತವಾದಿ. ಗುರು ಬಸವೇಶ್ವರ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಅರಸೀಕೆರೆ ಕೋಲಶಾಂತಯ್ಯ, ಹರಪನಹಳ್ಳಿ ಕೆಂಪಯ್ಯ, ಕೂಲಹಳ್ಳಿ ಮದ್ದಾನಸ್ವಾಮಿ ಅವರನ್ನು ಪಂಚಗಣಾಧೀಶ್ವರೆಂದು ಕರೆಯಲಾಗುತ್ತದೆ. ವೀರಶೈವ ಪರಂಪರೆಯ ನೂತನ ಗಣಗಳ ಪಟ್ಟಿಯಲ್ಲಿ ಕೊಟ್ಟೂರು ಗುರುಬಸವೇಶ್ವರರು ಪ್ರಮುಖರು. ಗುರುಬಸವೇಶ್ವರರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನವರು. ಅಲ್ಲಿಂದ ಅವರು ಕರ್ನಾಟಕದ ಎಡೆಯೂರಿಗೆ ಬಂದು ಅಲ್ಲಿ ಸಿದ್ಧಲಿಂಗ ಯತಿಗಳ ಶಿಷ್ಯತ್ವ ಸ್ವೀಕರಿಸಿ ನಂತರ ಚಾಮರಾಜನಗರದಲ್ಲಿ ಧರ್ಮಕಾರ್ಯದಲ್ಲಿ ತೊಡಗಿದರು. ನಂತರ ಹಂಪಿಗೆ ಬಂದು ಅಲ್ಲಿಂದ ಕೊಟ್ಟೂರಿಗೆ ಬಂದರು ಎಂಬ ಮಾತು ಭಕ್ತರ ವಲಯದಲ್ಲಿ ಪ್ರಚಲಿತವಿದೆ. ಅವರ ಕಾಲ ಕ್ರಿ.ಶ.1580ರ ಅಸುಪಾಸು. ಬಸವಲಿಂಗ ಕವಿ ಬರೆದ ಕೊಟ್ಟೂರು ಬಸವೇಶ್ವರ ಚರಿತ್ರೆ (1678) ಕೃತಿಯು ಕೊಟ್ಟೂರಿನ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಬಾಲಬಸವರು ಹಾಡುವ ಗೋಣಿ ಬಸವನ ಕಾವ್ಯಗಳು ಗುರುಬಸವೇಶ್ವರರ ಬಗ್ಗೆ ವಿಫುಲ ಮಾಹಿತಿ ನೀಡುತ್ತವೆ. ಒಂದು ಕಾಲದಲ್ಲಿ ಜೈನರ ಕೇಂದ್ರ ಸ್ಥಳವಾದ ಕೊಟ್ಟೂರು ಗುರುಬಸವೇಶ್ವರರಿಂದಾಗಿ ಶೈವ ಪಂಥದ ಕೇಂದ್ರವಾಯಿತು. ಗುರುಬಸವೇಶ್ವರರನ್ನು ಅವಧೂತರೆಂದೂ, ಇನ್ನು ಕೆಲವರು ಹುಚ್ಚಕೊಟ್ರಯ್ಯ ಎಂದೂ  ಸಂಬೋಧಿಸುತ್ತಿದ್ದರು


ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ್ವರ ಸ್ವಾಮಿಗಳು. ಇವರು ನೆಲೆಸಿದ ಸ್ಥಳವೆ ಇಂದು ಕೊಟ್ಟೂರು ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.


ಕೊಟ್ಟೂರಶ್ವರ ಸ್ವಾಮಿ ನೆಲೆ ನಿಲ್ಲುವ ಮುಂಚೆ ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರಶ್ವೇರ ಸ್ವಾಮಿ ನೆಲೆಯ ಕ್ಷೇತ್ರವಾಗಿತ್ತು, ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು ಊರುರು ಸುತ್ತುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಯಿತು ಆ ಸಮಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ಕೊಟ್ಟುರೇಶ್ವರರು ತಮಗೆ ತಂಗಲು ಸ್ಥಳವನ್ನು ನೀಡುವಂತೆ ಕೋರಲು ಒಪ್ಪಿದ ವೀರಭದ್ರೇಶ್ವರರರು ತಮ್ಮ ಆಸ್ತಾನದಲ್ಲಿ ಮಲಗಲು ಸ್ಥಳವನ್ನು ನೀಡಿದರು ಬೆಳಗಾಗುವ ಹೊತ್ತಿಗೆ ಸಂಪೂರ್ಣಾವಾಗಿ ಇಡಿ ಆಸ್ತಾನವನ್ನು ಆವರಿಸಿದ ಕೊಟ್ಟೂರೇಶ್ವರರು ಶ್ರೀ ವೀರಭದ್ರನಿಗೆ ಸ್ಥಳವೇ ಇಲ್ಲದಂತೆ ಮಾಡಿದರು ಈ ಕುರಿತು ವೀರಭದ್ರನು ಕೊಟ್ಟೂರೇಶ್ವರರನ್ನಲ್ಲಿ ಕೇಳಲಾಗಿ ನೀವು ನಿಮ್ಮ ಸ್ಥಳವನ್ನು ನನಗೆ ನೀಡಿ ನೀವು ಕೊಡದಗುಡ್ಡಕ್ಕೆ ಹೋಗಿ ನೆಲೆಸಿರಿ ಎಂದು ಹೇಳಿದರು ಅದರಂತೆ ವೀರಭದ್ರ ದೇವರು ಇನ್ನು ಮುಂದೆ ಆ ನಿಮ್ಮ ಸ್ಥಳವನ್ನು ನೀವು ಯಾರಿಗೂ ಕೊಡಬಾರದು ಆ ಕ್ಷೇತ್ರವು "ಕೊಡದಗುಡ್ಡ" ಎಂದು ಪ್ರಖ್ಯಾತವಾಗಲಿ ಅಂತಯೇ ನೀವು ನನಗೆ ಕೊಟ್ಟ ಈ ಶಿಖಾಪುರ ಇನ್ನು ಮುಂದೆ "ಕೊಟ್ಟೂರು" ಎಂದು ಪ್ರಖ್ಯಾತವಾಗಲಿ ಎಂದು ಹರಸಿದರು.


ಗುರು ಕೊಟ್ಟೂರೇಶ್ವರರು ಕಾಷ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡಿ ಕೊಟ್ಟೂರಿನಲ್ಲಿ ನೆಲೆಸಿದರು. ಒಂದೊಮ್ಮೆ ದೆಹಲಿಯಲ್ಲಿ ಅಕ್ಬರನ ಆಡಳಿತವಿದ್ದಾಗ ಗುರುಗಳು ಅಕ್ಬರನ ರಜಪೂತ ಪತ್ನಿಯ ಕೊಣೆಯಲ್ಲಿ ಪ್ರಕಟರಾದರು ಹಾಗೂ ಆಕೆಗೆ ಇವರು ಸಂತನ ರೂಪದಲ್ಲಿ ದರ್ಶನ ನೀಡಿದರು. ಹೀಗೆ ತಕ್ಷಣ ತನ್ನ ಪತ್ನಿಯ ಕೋಣೆಯಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವಾದುದನ್ನು ಭಟರಿಂದ ತಿಳಿದ ಅಕ್ಬರ ಸಿಟ್ಟಿನಿಂದ ಬಂದು ನೋಡಿದಾಗ ಒಬ್ಬ ಮಧ್ಯ ವಯಸ್ಕನಂತೆ ಗುರುಗಳು ಆತನಿಗೆ ಕಂಡರು. ಕೋಪ ತಡೆಯಲಾಗದೆ ತನ್ನ ಖಡ್ಗವನ್ನು ತೆಗೆದು ಅವನ ಮೇಲ ಬೀಸಿದಾಗ ಅದು ಹಾರವಾಗಿ ಗುರುಗಳನ್ನು ಶೃಂಗರಿಸಿತು. ಇದರಿಂದ ಅಕ್ಬರನಿಗೆ ಆ ಮಹಾನ್ ಚೇತನದ ಅರಿವುಂಟಾಗಿ ತನ್ನ ಆಭಾರವನ್ನು ಪ್ರಕಟಿಸುತ್ತ ಅವರಿಗೆ ಒಂದು ಮಂಚ ಹಾಗೂ ಖಡ್ಗವನ್ನು ಕಾಣಿಕೆಯಾಗಿ ನೀಡಿದನು. ಇಂದಿಗೂ ಆ ಮಂಚವನ್ನು ಕೊಟ್ಟೂರಿನ ಗಚ್ಚಿನ ಮಠದಲ್ಲಿ ಕಾಣಬಹುದು. ಇನ್ನು ಹರಪನಳ್ಳಿ ಪಾಳೇಗಾರರು ತಮ್ಮ ಕಷ್ಟ ಕಾಲದಲ್ಲಿ ಅವರ ದರ್ಶನಕ್ಕೆ ಬರುತ್ತಿದ್ದರಂತೆ



Saturday, December 23, 2023

ಹುಬ್ಬಳ್ಳಿಯಲ್ಲಿ 3 ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ.

 ಬರೀ ದಕ್ಷಿಣಕ್ಕಷ್ಟೇ ಸೀಮಿತಗೊಂಡಿದ್ದ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸುವ ಸದುದ್ದೇಶದಿಂದ ಡಾ. ಎಂ.ಎ.ಮುಮ್ಮಿಗಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಆಯೋಜಿಸಿರುವದು ಉತ್ತಮ ಬೆಳವಣಿಗೆ , ಈ ಭಾಗದ ಅನೇಕ ಕಲಾವಿದರಿಗೂ ಇದರಿಂದ ಲಾಭವಾಗಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. 


ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆರಂಭಗೊಂಡ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ,ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿ ನಗರ , ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಸೂಕ್ತ ಕಲಾ ಪ್ರತಿಭೆಗಳಿವೆ , ಆದರೆ ಅವರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆಗಳಿಲ್ಲ, ಡಾ. ಮುಮ್ಮಿಗಟ್ಟಿ ಅವರು ದೈರ್ಯದಿಂದ ಸತತ ಮೂರನೇ ಬಾರಿಗೆ ಇಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿರುವದು ಸ್ತುತ್ಯಾರ್ಹ , ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಮಟ್ಟದ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಸೂಕ್ತ ರೀತಿಯ ಅನುದಾನ , ಸಹಾಯ , ಸಹಕಾರ ನೀಡುವ ಅವಶ್ಯಕತೆ ಇದೆ , ನನ್ನ ಪರಿಮಿದಿಯಲ್ಲಿ ಲಭ್ಯವಾಗುವ ಸಹಾಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಅವರು ಮಾತನಾಡಿ , ಕಳೆದ ಬಾರಿ ಡಾ. ಮುಮ್ಮಿಗಟ್ಟಿ ಅವರು ಇದೇ ಹುಬ್ಬಳ್ಳಿಯಲ್ಲಿ 2 ಯಶಸ್ವಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಿರುವದನ್ನು ನಾನು ಸನಿಹದಿಂದ ಬಲ್ಲವನಾಗಿದ್ದೇನೆ , ಹುಬ್ಬಳ್ಳಿ- ಧಾರವಾಡ ಮಹಾನಗರ ತ್ವರಿತ ಗತಿಯಲ್ಲಿ ಬೃಹನ್ನಗರವಾಗಿ ಬೆಳೆಯುತ್ತಲಿದ್ದು, ಚಲನಚಿತ್ರಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಚಟುವಟಿಕೆಗಳು ಇಲ್ಲಿ ನಡೆಯುವಂತಾಗಬೇಕು , ಈ ದಿಸೆಯಲ್ಲಿ ಡಾ. ಎಂ.ಎ. ಮುಮ್ಮಿಗಟ್ಟಿ ಅವರು ಇತರರಿಗೆ ಮಾದರಿಯಾಗುವಂತೆ ಮುನ್ನುಡಿ ಬರೆದಿದ್ದಾರೆ. ಇವರ ಈ ವೇದಿಕೆ ಮೂಲಕ ಉತ್ತರ ಕರ್ನಾಟಕ ಭಾಗದ ಕಲಾಪ್ರತಿಭೆಗಳಿಗೆ ಹೆಚ್ಚಿನ ಸ್ಥಾನಮಾನ ದೊರೆಯುವಂತಾಗಲಿ ಎಂದು ಆಶಿಸಿದರು. 


\ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಸಂಸ್ಥಾಪಕ-ಅಧ್ಯಕ್ಷ ಡಾ. ಎಂ.ಎ ಮುಮ್ಮಿಗಟ್ಟಿ , ಹುಬ್ಬಳ್ಳಿ ರೋಟರಿ ಎಲೈಟ್ ಅಧ್ಯಕ್ಷ ಅನೀಶ ಖೋಜೆ, ಇಂದು ಮುಂಜಾನೆ ಪತ್ರಿಕೆಯ ಸಂಸ್ಥಾಪಕ ಗುರುರಾಜ ಹೂಗಾರ , ಹುಬ್ಬಳ್ಳಿ ರೋಟರಿ ಎಲೈಟ್‍ನ ರೀತು ಸರಾಫ್ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.