ಉತ್ತರ ಕರ್ನಾಟಕದ ಜೀವನಾಡಿಯಾದ ತುಂಗಭದ್ರಾ ಅಣೆಕಟ್ಟೆ ನಿರ್ಮಾಣವಾಗಿ ಮೊನ್ನೆ ಜುಲೈ ೧ ಕ್ಕೆ ಭರ್ತಿ ೬೦ ವರ್ಷಗಳಾದವು. ೧೯೪೫ ರ ಫೆಬ್ರವರಿಯಲ್ಲಿ ಆರಂಭಗೊಂಡ ಅಣೆಕಟ್ಟೆ ನಿರ್ಮಾಣ ಕಾರ್ಯ ಸುಮಾರು ೮ ವರ್ಷಗಳ ಬಳಿಕ ೧೯೫೩ ಜುಲೈ ೧ ಕ್ಕೆ ಮುಕ್ತಾಯಗೊಂಡಿತು. ಒಂದು ವಿಶೇಷವೆಂದರೆ ಅಂದು ಈ ಜಲಾಶಯವನ್ನು ಲೋಕಾರ್ಪಣೆ ಮಾಡಿದವರ್ಯಾರೋ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಯಾಗಲಿ ಆಗಿರದೆ ಇಬ್ಬರು ರೈತರಾಗಿದ್ದದ್ದು. ಎಡಭಾಗದ ಕಾಲುವೆಯನ್ನು ಕೊಪ್ಪಳದ ದೊಡ್ಡಬಸಪ್ಪ ಉದ್ಘಾಟಿಸಿದರೆ ಬಲಭಾಗದ್ದನ್ನು ಹೊಸಪೇಟೆಯ ರುದ್ರಪ್ಪನೆಂಬ ರೈತ ಲೋಕಾರ್ಪಣೆಗೊಳಿಸಿದರು.
ಸರ್ ಅರ್ಥರ್ ಕಾಟನ್ ಎಂಬ ಬ್ರಿಟೀಷ್ ಅಧಿಕಾರಿ ೧೯ ನೇ ಶತಮಾನದ ಉತ್ತರಾರ್ಧದಲ್ಲಿಯೆ ಅಣೆಕಟ್ಟೆ ನಿರ್ಮಾಣದ ರೂಪುರೇಷೆಯನ್ನು ಸಿದ್ದಪಡಿಸಿದ್ದನಾದರೂ
ಅಂದಿನ ಬ್ರಿಟೀಷ್ ಸರ್ಕಾರದಿಂದ ಅದಕ್ಕೆ ಅನುಮತಿ ದೊರೆಯಲಿಲ್ಲ, ಆ ಒಂದು ಅನುಮತಿಗಾಗಿ ೧೯೪೫ ರ ವರೆಗೂ ಕಾಯಬೇಕಾಯಿತು.
ಈ ಜಲಾಶಯ ನಿರ್ಮಾಣಕ್ಕಾಗಿ ೧೩೦.೭೬ ಕೋಟಿ ರೂಪಾಯಿ ವೆಚ್ಚವಾಗಿದ್ದು ಇದರಿಂದ ೧.೨೫ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕುತ್ತಿದೆ. ಜಲಾಶಯವು ೨೮,೧೮೦ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು ಗರಿಷ್ಠ ೧೩೩ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ(ಆದರೆ ಇಂದು ಸುಮಾರು ೩೦ ಟಿಎಂಸಿಯಷ್ಟು ಹೂಳು ತುಂಬಿರುವ ಪರಿಣಾಮ ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯ ೧೦೦.೮೫ ಟಿಎಂಸಿ ಗೆ ಕುಸಿದಿದೆ.) ಜಲಾಶಯವು ಒಟ್ಟು ೧೬೩೩ ಅಡಿ ಆಳವಿದ್ದು ಇಲ್ಲಿನ ಒಟು ನೀರಿನ ಸಂಗ್ರಹದಲ್ಲಿ ಕರ್ನಾಟಾಕ ೧೫೧.೪೯ ಟಿಎಂಸಿ, ಆಂಧ್ರ ಪ್ರದೇಶ ೭೮.೫೧ ಟಿಎಂಸಿ ನೀರು ಬಳಸಿಕೊಳ್ಳಬೇಕೆಂದು ಕೃಷ್ಣಾ ನ್ಯಾಯಾಧಿಕರಣ ಮಂಡಳಿಯು ತೀರ್ಪಿತ್ತಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳು(major dams in Karnataka)
Name of the Dam
|
River
|
Linganamakki
Dam
|
Sharavati
|
Kadra
Dam
|
Kali
|
Alamayyi
Dam
|
Krishna
|
Supa
Dam
|
Kali
|
Krishna
Raja Sagara Dam
|
Cauvery
|
Harangi
Dam
|
Cauvery
|
Narayanapura
Dam
|
Krishna
|
Judasalli
Dam
|
Kali
|
No comments:
Post a Comment