ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರಗಳು,
ನಾನು ಈ ಒಂದು ವರ್ಷದ ಆಜುಬಾಜಿನಲ್ಲಿ ಪ್ರಾರಂಭಿಸಿದ “ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) ” ಅಂಕಣವು ಇದೀಗ 25 ನೇ ಅಂಕ ಪೂರೈಸಿದೆ ಎನ್ನುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೊತ್ಸಾಹವು ಹೀಗೆ ಮುಂದುವರಿದಲ್ಲಿ ಈ ಅಂಕಣವು ತನ್ನ 100 ನೇ ಅಂಕವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆನ್ನುವುದರಲ್ಲಿ ಸಂದೇಹವಿಲ್ಲ.
ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ....
ನಿಮ್ಮ ಪ್ರೀತಿಯ
ರಾಘವೇಂದ್ರ ಅಡಿಗ ಎಚ್ಚೆನ್.
***
ಕುರುಡುಮಲೆ (Kurudumale)
ಕರ್ನಾಟಕದ ಕೋಲಾರ
ಜಿಲ್ಲೆಯಲ್ಲಿನ ಮುಳಬಾಗಿಲು ತಾಲೂಕು ಕೇಂದ್ರದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ
ಕುರುಡುಮಲೆ ಅಲ್ಲಿನ ವಿನಾಯಕ ದೇವಾಲಯದಿಂದಾಗಿ ಜಗದ್ವಿಖ್ಯಾತವಾಗಿದೆ. ತ್ರಿಮೂರ್ತಿಗ್ಳು ಸೇರಿ ಸ್ಥಾಪಿಸಿದರೆನ್ನಲಾಗುವ
ಈ ಕಾರಣಿಕ ಸ್ಥಳಕ್ಕೆ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀ ಮಹಾಗಣಾಪತಿಯು ನಿಂತಿರುವ
ಶೈಲಿಯಲ್ಲಿನ ಇಲ್ಲಿನ ವಿಗ್ರಹವು ನಹು ಪುರಾತನವೂ ಸುಂದರವೂ ಆಗಿದೆ.
![]() |
Kurudumale Sri Siddi Vinayaka Swami |
***
ಕೃತಯುಗದಲ್ಲಿ
ಲೋಕಕಂಟಕನಾಗಿದ್ದ ತ್ರಿಪುರಾಸುರನನ್ನು ಕೊಲ್ಲಕು ತ್ರಿಮೂರ್ತಿಗಳ ಸಹಿತ ಯಾರಿಂದಲೂ ಅಸಾಧ್ಯವಾಗಲು,
ಆಗ ತ್ರಿಮೂರ್ತಿಗಳೂ ಸೇರಿದಂತೆ ಎಲ್ಲಾ ದೇವತೆಗಳೂ ಸೇರಿ ಗಣಪತಿಯನ್ನು ಪ್ರಾರ್ಥಿಸಲು ನಿಶ್ಚಯಿಸಿ ಹಾಗೆಯೇ
ಮಾಡಿದರು. ತನ್ನ ಉಪಾಸಕನೇ ಆಗಿದ್ದ ಆ ಅಸುರನನ್ನು ನೇರವಾಗಿ ಸಂಹರಿಸುವುದಕ್ಕೆ ಗಣಪತಿಯ ಕೈಯಿಂದಲೂ
ಸಾಧ್ಯವಾಗದೇ ಹೋಯಿತು. ಆಗ ಗಣಪತಿಯು ತನ್ನೊಂದು ದಂತವನ್ನು ಕಿತ್ತು ಇಂದ್ರನಿಗೆ ಕೊಡುವುದರ ಮೂಲಕ ಅದರ
ಸಹಾಯದಿಂದ ರಾಕ್ಷಸನನ್ನು ಸಂಹರಿಸಲು ತಿಳಿಸಿದನು. ಅಂದಿನಿಂದ ಗಣಪತಿಯು “ಏಕದಂತ” ಎನ್ನುವ ವಿಶೇಷಣಕ್ಕೆ
ಭಾಜನನಾದನು.
![]() |
Sri Siddi Vinayaka Swami temple, Kurudumale |
ಹಾಗೆ ಗಣಪತಿಯ ಅಣತಿಯಂತೆ ತ್ರಿಪುರಾಸುರನನ್ನು
ಇಂದ್ರನು ಸಂಹರಿಸಿದ ಬಳಿಕ ಎಲ್ಲಾ ದೇವಾನುದೇವತೆಗಳೂ ಈ ಒಂದು ಗಿರಿಯ ಮೇಲೆ ಕೂಡಿಕೊಂಡು ಸಂಭ್ರಮ ಪಟ್ಟರು.
ಹಾಗೆ ದೇವತೆಗಳೆಲ್ಲಾ ಒಂದೆಡೆ ಕೂಡಿದ್ದ ಈ ಸ್ಥಳವೇ “ಕೂಡುಮಲೆ” ಎಂದು ಖ್ಯಾತವಾಯಿತು. ಕಾಲಕ್ರಮೇಣ
ಜನರ ಬಾಯಿಗೆ ಸಿಕ್ಕು ಈ “ಕೂಡುಮಲೆ” ಎನ್ನುವುದು “ಕುರುಡುಮಲೆ” ಎಂದು ನಾಮ ಪರಿವರ್ತನೆಯನ್ನು ಹೊಂದಿತು.
ಇದು ಕೌಂಡಿನ್ಯ ಕ್ಷೇತ್ರ.ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ.
ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ.
ಕೃತಯುಗದಲ್ಲಿ, ದ್ವಾಪರದಲ್ಲಿ ಇದು `ಗಣೇಶಗಿರಿ' ಎನಿಸಿಕೊಂಡಿತ್ತು.
No comments:
Post a Comment