ಶನಿಶಿಂಗಾಪುರ (Shanisingapur)
ಶನಿಶ್ಚರ ಕ್ಷೇತ್ರವಾಗಿ ಜಗತ್ಪ್ರಸಿದ್ದಿ ಪಡೆದಿರುವ, ಇತ್ತೀಚಿನವರೆಗೂ ಇಡೀ ಊರಿನ ಯಾರ ಮನೆಗೂ ಕಿಟಕಿ-ಬಾಗಿಲುಗಳಿಲ್ಲದೆ, ಕಳ್ಳ ಕಾಕರ ಭಯವಿಲ್ಲದೆ ಜನರು ಬದುಕುತ್ತಿರುವ ಊರು ಶನಿಶಿಂಗಾಪುರ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿನ ನಿವಾಸ್ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರವು ಮುಂಬೈ ಮಹಾನಗರದಿಂದ ಸುಮಾರು 296 ಕಿ.ಮೀ. ದೂರದಲ್ಲಿದೆ. ಶ್ರೀ ಸಾಯಿಬಾಬಾ ಪವಾಡ ಕ್ಷೇತ್ರವಾದ ಶಿರಡಿಯಿಂದ 72 ಕಿ.ಮೀ ದೂರದಲ್ಲಿದೆ.

***


ಶನಿದೇವರ್ ಫಲಕವು ನೀರಿನಲ್ಲಿ ತೇಲಿ ಬಂದಿತು. ಕೆಲ ದಿನಗಳ ಬಳಿಕ ಪ್ರವಾಹವು ಇಳಿಮುಖವಾಗಲು ಅಲ್ಲಿನ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿಶ್ಚರನು "ಈ ಊರಿನಲ್ಲಿ ವಾಸವಾಗಿರುವ ಸೋದರಳಿಯಾ ಹಾಗೂ ಸೋದರ ಮಾವಂದಿರು ಸೇರಿ ನನ್ನ ಫಲಕವನ್ನು ಊರ ಮಧ್ಯೆ ಸ್ಥಾಪನೆ ಮಾಡಬೇಕು. ಸಮೀಪದಲ್ಲಿ ಬೇವಿನ ಮರ ನೆಡಬೇಕು, ಆದರೆ ಬೇವಿನ ಮರದ ಕೊಂಬೆಗಳು ನನ್ನ ಫಲಕಕ್ಕೆ ತಾಗಬಾರದು." ಎಂದು ಆದೇಶಿಸಿದನು.
"ನೀನೇನಾದರೂ ಹೀಗೆ ನಡೆದುಕೊಂದಲ್ಲಿ, ಈ ಊರಿನ ರಕ್ಷಣಾ ಭಾರ ನನ್ನದು. ನಿಮ್ಮ ನಿಮ್ಮ ಮನೆಗಳಿಗೆ ಕಿಟಕಿ-ಬಾಗಿಲುಗಳಿರಕೂಡದು." ಎಂದೂ ಅಭಯವನ್ನಿತ್ತನು.
ಶನಿಶ್ಚರನ ಆದೇಶದ ಅನುಸಾರ ಅವನ ಫಲಕವನ್ನು ಸ್ಥಾಪಿಸಿ ಊರಲ್ಲಿದ್ದ ಮನೆಗಳನ್ನೆಲ್ಲಾ ಬಾಗಿಲು-ಕಿಟಕಿಗಳಿಲ್ಲದ ಮನೆಗಳನ್ನಾಗಿ ಪರಿವರ್ತಿಸಲಾಯಿತು. ಅಲ್ಲಿಂದ ಮುಂದೆ ಈ ಊರಲ್ಲಿ ಕಳ್ಳತನವಾಗಿರುವ ವರದಿ ಇರಲಿಲ್ಲ! ಒಂದೊಮ್ಮೆ ಯಾರಾದರೂ ಕಳ್ಳರು ಕಳ್ಳತನವೆಸಗಿದ್ದೇ ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡು ಅದೇ ಊರಿನಲ್ಲಿ ಸುತ್ತುತ್ತಿರಬೇಕಾಗಿ ಬರುತ್ತದೆ ಎನ್ನಲಾಗಿತ್ತು.
No comments:
Post a Comment