ಚಿಕ್ಕತಿರುಪತಿ (Chikka Tirupati)
ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ಕ್ಷೇತ್ರ ವಿಶ್ವ ಪ್ರಸಿದ್ದ ವಾಗಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಹೊರವಲಯದಲ್ಲಿರುವ, ಕೋಲಾರ ಜಿಲ್ಲೆ ಮಾಲೂರು ತಾಕೂಕಿನ ಚಿಕ್ಕ ತಿರುಪತಿ ಸಹ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಕಾರಣದಿಂದ ಪ್ರಸಿದ್ದಿಯನ್ನು ಹೊಂದಿದೆ. ಇಲ್ಲಿನ ದೇವಾಲಯವು ವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿದ್ದು ಚೋಳರ ಕಾಲದ ದೇವಾಲಯವೆಂದು ಗುರುತಿಸಲ್ಪಟ್ಟಿದೆ. ಚಿಕ್ಕತಿರುಪತಿಯು ತಾಲೂಕು ಕೇಂದ್ರವಾದ ಮಾಲೂರಿನಿಂದ 15 ಕಿಮೀ (9.3 ಮೈಲಿ), ITPL ನಿಂದ 26 ಕಿಮೀ (16 ಮೈಲಿ) ಮತ್ತು ಕೋರಮಂಗಲದಿಂದ 30 ಕಿಮೀ (19 ಮೈಲಿ) ದೂರದಲ್ಲಿದೆ.
.ದೇವಾಲಯವು ಬೆಳಿಗ್ಗೆ 6.30 ರಿಂದ ಸಂಜೆ 7:30 ರವರೆಗೆ (ವಾರದ ಎಲ್ಲಾ ದಿನಗಳು) ತೆರೆದಿರುತ್ತದೆ ಮತ್ತು ದಿನದ ವಿವಿಧ ಸಮಯಗಳಲ್ಲಿ ನಾಲ್ಕು ಜಾವಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರುತ್ತದೆ. ವಾರ್ಷಿಕ ಬ್ರಹ್ಮೋತ್ಸವ ಸಹ ಇಲ್ಲಿ ನೆರವೇರುತ್ತದೆ. ಮಾರ್ಗಶಿರ ಮಾಸದ ವೈಕುಂಠ ಏಕಾದಶಿಯ ದಿನ ಮತ್ತು ಜನವರಿ 1ನೇ ತಾರೀಖು ಹಾಗೂ ಶ್ರಾವಣ ಶನಿವಾರಗಳಂದು ಮತ್ತು ಧನುರ್ಮಾಸದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ. ಪ್ರತಿ ನಿತ್ಯ ವೈಖಾನಸಾಗಮ ರೀತ್ಯ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ರಥ ಸಪ್ತಮಿಯ ದಿನ ಸೂರ್ಯಪ್ರಭೆ ಉತ್ಸವ ಇಲ್ಲಿನ ವಿಶೇಷಗಳಲ್ಲಿ ಒಂದು. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನ ಸ್ವಾಮಿಯವರಿಗೆ ಪುಷ್ಪ ಪಲ್ಲಕ್ಕಿ ಉತ್ಸವ ನಡೆಯುತ್ತದೆ, ಪುಬ್ಬ ನಕ್ಷತ್ರದ ದಿನ ಬ್ರಹ್ಮ ರಥೋತ್ಸವ ಜರುಗುತ್ತದೆ.
***’
ದ್ವಾಪರಯುಗದಲ್ಲಿ ರಾಜ ಮಹಾರಾಜರು, ಋಷಿ ಮುನಿಗಳು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗವನ್ನು ದೇವತೆಗಳಿಗೆ ಅರ್ಪಿಸುತ್ತಿದ್ದ ಹವ್ಯವಾಹನನಾದ ಅಗ್ನಿದೇವ ಯಥೇಚ್ಛವಾದ ತುಪ್ಪಸೇವನೆಯಿಂದಾಗಿ ಉದರಬೇನೆ (ಹೊಟ್ಟೆನೋವು)ಗೆ ತುತ್ತಾಗುತ್ತಾನೆ. ಸುರವೈದ್ಯರಾದ ಅಶ್ವಿನಿ ಕುಮಾರರು, ಔಷಧ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಕಾಳ್ಗಿಚ್ಚಿನಿಂದ ಸುಟ್ಟರೆ, ಆ ಗಿಡಮೂಲಿಕೆಗಳ ಭಕ್ಷಣೆಯಿಂದ ನಿನ್ನ ಉದರ ಬೇನೆ ನಿವಾರಣೆ ಆಗುತ್ತದೆ ಎಂದು ಅಗ್ನಿದೇವನಿಗೆ ತಿಳಿಸುತ್ತಾನೆ. .
ಶಾಪಗ್ರಸ್ಥನಾದ ಅಗ್ನಿ ತನ್ನ ಸುಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಋಷಿ ಮುನಿಗಳು ಮಾಡುವ ಯಾಗದ ಹವಿರ್ಭಾಗ ದೇವತೆಗಳ ತಲುಪದ ಸ್ಥಿತಿಯೂ ಬಂದೊದಗುತ್ತದೆ. ಇದರಿಂದ ದೇವತೆಗಳು ಹಾಗೂ ಋಷಿ ಮುನಿಗಳು ವ್ಯಾಕುಲಗೊಳ್ಳುತ್ತಾರೆ. ಅಗ್ನಿ ದೇವನಿಗೆ ತಕ್ಷಕ ನೀಡಿರುವ ಶಾಪ ವಿಮೋಚನೆ ಮಾಡಿಕೊಳ್ಳಲು ನಾರಾಯಣನ ಕುರಿತು ತಪಸ್ಸು ಆಚರಿಸುವಂತೆ ತಿಳಿಸುತ್ತಾರೆ.
ಹಿರಿಯ ಮಾರ್ಗದರ್ಶನದಂತೆ ಅಗ್ನಿದೇವ ಒಂದು ಮಂಡಲ ಕಾಲ ನಾರಾಯಣನ ಪೂಜೆ ಮಾಡಿ ತಪಸ್ಸು ಮಾಡುತ್ತಾನೆ. ಆಗ ನಾರಾಯಣ ಪ್ರಸನ್ನ ವೆಂಕಟರಮಣನ ರೂಪದಲ್ಲಿ ದರ್ಶನ ನೀಡಿ ಶಾಪ ವಿಮೋಚನೆ ಮಾಡುತ್ತಾನೆ. ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಕೃಪೆಯಿಂದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ತನಗೆ ವಿಷ್ಣು ದರ್ಶನ ನೀಡಿದ ರೂಪದಲ್ಲೇ ವರದ ನಾರಾಯಣಸ್ವಾಮಿ ವಿಗ್ರಹ ಸ್ಥಾಪಿಸಿ ಪೂಜಿಸಿ, ದೇವಾಲಯವನ್ನು ನಿರ್ಮಾಣ ಮಾಡಿದನೆಂದು ಪ್ರತೀತಿ ಇದೆ.
ಹೀಗೆ ಶತಮಾನಗಳ ಕಾಲದಿಂಡ ಇಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನಂಬಿದ್ದಾದರೆ ಅವರ ಸಕಲ ಕಷ್ಟಗಳು ನಿವಾರಣೆ ಆಗುತ್ತವೆ. ವಿವಾಹ ವಿಳಂಬ ಆಗುವವರು ಇಲ್ಲಿ ಬಂದು ಹರಕೆ ಹೊತ್ತು ಹೋದರೆ. ಅವರಿಗೆ ಕಂಕಣಭಾಗ್ಯ ಕೂಡಿ ಬರುತ್ತದಂತೆ. ಹೀಗಾಗಿ ಇಲ್ಲಿ ಹರಕೆ ಹೊತ್ತ ತರುವಾಯ ವಿವಾಹ ಆದವರು ಇಲ್ಲಿ ಬಂದು ಕಲ್ಯಾಣೋತ್ಸವ ನೆರಬೇರಿಸುತ್ತಾರೆ.
No comments:
Post a Comment