ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ – ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ ‘ಎ ರಾಕ್ ಸಮ್‌ವೇರ್’ ಹಾಡಿನಲ್ಲಿನ ಗಾಯನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದೇ ವಿಭಾಗದಲ್ಲಿ ಪ್ರಸಿದ್ಧ ಸಿತಾರ್ ಕಲಾವಿದೆ ಅನುಷ್ಕಾ ಶಂಕರ್ ಕೂಡ ನಾಮನಿರ್ದೇಶನಗೊಂಡಿದ್ದಾರೆ.
30 ವರ್ಷಗಳ ಪ್ರದರ್ಶನದ ಅನುಭವದೊಂದಿಗೆ, ವಾರಿಜಶ್ರೀ ವೇಣುಗೋಪಾಲ್ ಅವರು ಅಂತರ-ಶೈಲಿ ಮತ್ತು ಅಂತರ-ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾರತೀಯ ಗಾಯನದ ಅನನ್ಯ ಪ್ರಸ್ತುತಿಗಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಮೆಚ್ಚುಗೆ ಪಡೆದಿದ್ದಾರೆ. ಅಪರೂಪದ ಕಲಾವಿದೆಯಾಗಿ, ವಾರಿಜಶ್ರೀ ಇಂದು ವಿಶ್ವದ ಬಹು ಶ್ರೇಷ್ಠ ಕಲಾವಿದರೊಂದಿಗೆ ಸಹಯೋಗಿಸುತ್ತಿದ್ದಾರೆ.
ವಿವಿಧ ಸಂಸ್ಕೃತಿಗಳು ಮತ್ತು ಜಾಗತಿಕ ಶೈಲಿಗಳೊಂದಿಗೆ ಭಾರತೀಯ ಸಂಗೀತದ ಸಾರವನ್ನು ಮೇಳೈಸುವ ಅವರ ಅನನ್ಯ ಸಾಮರ್ಥ್ಯವು ಶ್ಲಾಘಿಸಲ್ಪಟ್ಟಿದೆ ಮತ್ತು ಪ್ರಪಂಚದಾದ್ಯಂತ ವಿವೇಚನಾಶೀಲ ಅಭಿಮಾನಿಗಳನ್ನು ಗಳಿಸಿದೆ. ಆಕೆಯ ಇತ್ತೀಚೆಗೆ ಬಿಡುಗಡೆಯಾದ ಆಲ್ಬಂ ‘ವಾರಿ’, ಸಂಯೋಜಕಿಯಾಗಿ, ಗೀತರಚನೆಗಾರ್ತಿಯಾಗಿ ಮತ್ತು ಗಾಯಕಿಯಾಗಿ ಆಕೆಯ ಸಾಮರ್ಥ್ಯಕ್ಕೆ ಒಂದು ಅನುಮೋದನೆಯಾಗಿದೆ, ಇದನ್ನು ಅಮೆರಿಕಾದ ಬಹು ಗ್ರ್ಯಾಮಿ ವಿಜೇತ ಕಲಾವಿದ ಹಾಗೂ ವಿಶ್ವ ವಿಖ್ಯಾತ ಜಾಝ್ ಫ್ಯೂಶನ್ ಬ್ಯಾಂಡ್ ಸ್ನಾರ್ಕಿ ಪಪ್ಪಿಯ ಸ್ಥಾಪಕರಾದ ಮೈಕಲ್ ಲೀಗ್ ಅವರು ನಿರ್ಮಿಸಿದ್ದಾರೆ.
Varijashree Venugopal gets nominated for a Grammy award!
Bangalore based Carnatic singer-flautist Varijashree Venugopal has secured a nomination at this year’s Grammy awards in the category of ‘Best global music performance’, for being a featured artist on UK based musician Jacob Collier’s song ‘A Rock Somewhere’ from his album Djesse Vol 4, also featuring Anoushka Shankar.
With over 30 years of performance experience, Varijashree Venugopal is known and appreciated for her unique presentation of Indian singing in cross-genre and cross-cultural platforms. As an artist of a rare kind, Varijashree is seen collaborating with few of the greatest artists in the world today.
Her unique ability to blend her roots of Indian music with various cultures and global styles has been applauded and has garnered a discerning following all over the world. Her recently released album ‘Vari’ is a testament for her capability as a composer, arranger, songwriter and singer, produced by multiple Grammy winning artist Michael League of Snarky Puppy.
No comments:
Post a Comment