Thursday, May 29, 2025

ಭಾವಗೀತೆಯ ಕವಿ ಎಂದೇ ಖ್ಯಾತಿಯಾಗಿದ್ದ ಸಾಹಿತಿ ಎಚ್.ಎಸ್.ವೆಂಕಟೇಶ್ ‌ಮೂರ್ತಿ ವಿಧಿವಶ!

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರಾದ ಭಾವಗಳ ಕವಿ ಎಚ್ಚೆಸ್ವಿ ಎಂದೇ ಕರೆಯಲ್ವಡುತ್ತಿದ್ದ ಎಚ್ ಎಸ್ ವೆಂಕಟೇಶಮೂರ್ತಿ (80 ವರ್ಷ )ನಿಧನರಾಗಿದ್ದಾರೆ. ಕಥೆ, ಕಾದಂಬರಿ, ವಿಮರ್ಶೆ, ಕವನ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ ಮುಂತಾಗಿ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿ ಮಾಡಿದ್ದ ಕನ್ನಡದ ನಲ್ಮೆಯ ಕವಿ, ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆಗಿದ್ದ ಇವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ನಾಲ್ವರು ಪುತ್ರರನ್ನು ಅಗಲಿದ್ದಾರೆ.


ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿದ್ದರು. ಅಲ್ಲದೇ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

ಮೂಲತಃ ದಾವಣಗೆರೆ  ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಗ್ರಾಮದ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದರು. ನಂತರ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. ಕನ್ನಡದಲ್ಲಿ `ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ  ಪದವಿ ಪಡೆದಿದ್ದಾರೆ. 2000ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರು.

ಎಚ್ ಎಸ್ ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.

Tuesday, May 27, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಬುದ್ದ ಪೂರ್ಣಿಮಾ, 16ನೇ ಸಾಂಸ್ಕೃತಿಕ ಸಿಂಚನ

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಬುದ್ದ ಪೂರ್ಣಿಮಾ ನಿಮಿತ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೬ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ,ಗಂಡಸಿ ಸದಾನಂದ ಸ್ವಾಮಿ, ಡಿಕೆಡಿ ಮಂಜು ಮಾಸ್ಟರ್, ಗಜಲಕ್ಷ್ಮಿ  ಕಮಲೇಶ್, ಕಿಶೋರ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಕಲಾವಿದರು ವೈವಿದ್ಯಮಯ ನೃತ್ಯ ಪ್ರದರ್ಶನ ನೀಡಿದರು. ಅವುಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ನೃತ್ಯವು ಒಳಗೊಂಡಿತ್ತು. . 

ಈ ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತಾ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇದಕ್ಕೆ ಮುನ್ನ ಈ ಕಾರ್ಯಕ್ರಮವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದಲ್ಲದೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಗರ್ ನವಿಲೆ,ಸಪ್ನ ಜಿ.ಎಂ., ಅಜೀಂ ಮುನ್ನೀಸಾ, ಮಂಜುನಾಥ ಪಾಟೀಲ್, ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು.

Monday, May 26, 2025

Rotary Club of Bangalore. Programe


Greetings from the Rotary Club of Bangalore.

Bangalore May 2025, Rotary recognizes the importance of partnerships with like-minded individuals and organizations, and actively encourages collaboration. On this journey, something remarkable was discovered by the Rotary Club of Bangalore: that there are many others who are equally dedicated, equally credible, and equally passionate. Such individuals and institutions have come to be admired, respected, and honoured by us. Beyond our own service, those who contribute selflessly to their communities are actively sought out and spotlighted by the Rotary Club of Bangalore. Through such recognition, it is hoped that their impact will be amplified, and others will be inspired to join in making the world a better place. Our 8th edition of "Exemplars" was held at a glittering function in Bangalore.

Recognitions were given as follows. Citizen Extraordinaire: Dr. H Sudarshan Ballal Corporate Citizen: Alpha Design Technologies Pvt Ltd Pride of Work: Thomas Raja Home of Hope Community Service: Nightingales Medical Trust Environment Conservation: Hasiru Dala Youth Icon: Satyarup Siddhanta Startup Success: Digantara Research and Technologies Pvt Ltd Vigyan Veer: Col. H S Shankar (Retd.) Kind regards Rtn Gowri Oza President RCB 2024 – 25 ***

Bangalore, May 2025, As you are aware Rotary club of Bangalore, along with its charity partner Rotary club of Bangalore Charitable Trust, a Registered public charitable trust has been doing enormous charity activities in communities in and around Bangalore for the last 91 years. The trust has a state of art blood bank, free hospital for 1000 patient a month, a privately owned school with 500 students , constructed over 41 schools for the government, refurbished 156 primary health centres affecting 13 Lakh population, refurbished 100 anganwadis impacting 2000 Children, refurbished 125 Government primary schools impacting over 17,000 children , donated 40 dialysis machines, and is supporting numerous other socially relevant community projects in Bangalore. Some of them are continuing projects like RBV school, Rotary TTK blood bank, Manmohan Attavar hospital etc while most of the projects are single year projects. 

Alongside with our objective of doing good in the world, the Rotary Club also is actively in pursuit of identifying individuals and organizations who are engaged in doing good in the communities that they inhabit. We are often amazed at the enormous work that many others offer to society, and wish to highlight the same. So that the ground is prepared for even more good work to happen,  and to make this world a better place to live in.  For this reason we have an initiative called "Exemplars" where we identify on a yearly basis, the change makers and the path breakers of our community who have the sole objective of improving the life and lifestyle of the citizens of this country. This is the 8th edition of Exemplars where we have attempted to highlight the good efforts of all of us -- the do good people. 

Some of the Bangalore personalities who have been awarded   Citizen Extraordinaire in the past are  Dr. BM Verma N. Lakshman Rau Prof. C N R Rao Prakash Padukone Prof. U R Rao Kiran Majumdar Shaw Arundhathi Nag Dr. Annadurai Isro and so on

Saturday, May 24, 2025

ಆಂಜನೇಯನ ಜನ್ಮನಾಮ - ಸುಂದರ!


ಆಂಜನೇಯ ಅಥವಾ ಹನುಮನ ತಾಯಿ ಅಂಜನಾ, ಹನುಮ ಹುಟ್ಟಿದ ನಂತರ ಅವನಿಗೆ ಸುಂದರ ಎಂದು ಹೆಸರಿಟ್ಟಳು. ಮುಂದೆ ಅವನ ದವಡೆ ವಿರೂಪಗೊಂಡ ನಂತರ ಹನುಮಾನ್ ಎಂದು ಕರೆಯಲಾಯಿತು. ಹನುಮ ಎಂದರೆ 'ದವಡೆ' ಅಥವಾ 'ಗಲ್ಲ'. ಆಂಜನೇಯ ಎಂಬುದು ಅವನ ತಾಯಿ ಅಂಜನಾ ಗುರುತಾಗಿ ನೀಡಲಾದ ಹೆಸರು.


ಹನುಮನ ಬಗ್ಗೆ ಸಂಪೂರ್ಣ ವಿವರಗಳಿರುವ ಏಕೈಕ ಅಧಿಕೃತ ಗ್ರಂಥ ಪರಾಶರ ಸಂಹಿತವು, ಸುಂದರ (ಹನುಮಾನ್) ಶಿಶುವಾಗಿದ್ದಾಗ ಅಮಾವಾಸ್ಯೆಯ ದಿನದಂದು ಅವನು ಆಹಾರವನ್ನು ಕೇಳುವ ಕೆಲವು ಶ್ಲೋಕಗಳನ್ನು ಉಲ್ಲೇಖಿಸುತ್ತದೆ. ಅವನ ತಾಯಿ ಅಂಜನಾ ಅವನಿಗೆ ಯಾವುದಾದರೂ ಹಣ್ಣನ್ನು ತಿನ್ನಲು ಹೇಳುತ್ತಾಳೆ. ಅವನು ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಾನೆ, ಅದನ್ನು ಹಣ್ಣು ಎಂದು ಭಾವಿಸುತ್ತಾನೆ ಮತ್ತು ಹತ್ತಿರ ಬರುತ್ತಾನೆ. ಇಂದ್ರನು ಅವನ ಗಲ್ಲದ ಮೇಲೆ ವಜ್ರಾಯುಧದಿಂದ ಹೊಡೆದಾಗ ಅದು ಊದಿಕೊಳ್ಳುತ್ತದೆ.  ಅವನ ಗಲ್ಲ/ದವಡೆ (ಹನುಮ) ಊದಿಕೊಂಡಿದ್ದರಿಂದ/ವಿರೂಪಗೊಂಡಿದ್ದರಿಂದ, ಅವನಿಗೆ ಹನುಮ ಎಂದು ಹೆಸರಾಯಿತು. ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತಿರುವ ಹನುಮನ ಈ ಕಥೆಯು ವಾಸ್ತವವಾಗಿ ಚಳಿಗಾಲದ ಅಯನ ಸಂಕ್ರಾಂತಿಯಿಂದ ವಸಂತದ ವಿಷುವತ್ ಸಂಕ್ರಾಂತಿಯವರೆಗಿನ ವೃಷಕಪಿ (ಓರಿಯನ್ ಅಥವಾ ಮೃಗಶಿರ ನಕ್ಷತ್ರಪುಂಜ) ಪ್ರಯಾಣವಾಗಿದೆ, ಇದು ಓರಿಯನ್ ನಕ್ಷತ್ರಪುಂಜವು ಸೂರ್ಯನನ್ನು ಸಮೀಪಿಸುವಂತೆ  ಕಾಣುತ್ತದೆ. ಓರಿಯನ್ ಮಾನವ ಆಕೃತಿಯಂತೆ (ಬೇಟೆಗಾರ) ಕಾಣಿಸಿಕೊಂಡರೆ, ಹಣ್ಣೊಂದನ್ನು ನುಂಗುವುದಕ್ಕೆ ಹೊರಟಂತೆ ಇದು ಭಾಸವಾಗುತ್ತದೆ. 

ಈ ಅವಧಿ (ಡಿಸೆಂಬರ್ - ಮಾರ್ಚ್) ಉತ್ತರ ಗೋಳಾರ್ಧದಲ್ಲಿ (ಸಮಭಾಜಕರೇಖೆಯ ಮೇಲೆ) ಮಳೆಯಿಲ್ಲದ ಸಮಯ. ಹೆಚ್ಚಿನ ಸಂಖ್ಯೆಯ ಮಾನವರು ಈ ವಲಯದಲ್ಲಿ ವಾಸಿಸುತ್ತಾರೆ. ಅವರಿಗದು ಚಳಿಗಾಲವಾಗಿರುತ್ತದೆ ಮತ್ತು ಆ ಸಮಯದಲ್ಲಿ ಮಳೆ ಬರುವುದಿಲ್ಲ. ಇಂದ್ರನು ಮಳೆಯೊಂದಿಗೆ ಸಂಬಂಧ ಹೊಂದಿರುವ ದೇವರು ಮತ್ತು ಈ ಅವಧಿಯಲ್ಲಿ ಅವನನ್ನು ಪೂಜಿಸಲಾಗುವುದಿಲ್ಲ. ವೃಷಕಪಿ ಇಂದ್ರನಿಗೆ ಪ್ರತಿಸ್ಪರ್ಧಿಯಾಗಲು ಇದೇ ಕಾರಣ. 


ವಾಸ್ತವವಾಗಿ, ಓರಿಯನ್‌ನ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾದ ಬೆಟೆಲ್‌ಗ್ಯೂಸ್ (ಆಲ್ಫಾ ಓರಿಯೊನಿಸ್) ಒಂದು ಕೆಂಪು ದೈತ್ಯ ಆಗಿದ್ದು ಅದು ತುಂಬಾ ದೊಡ್ಡದಾಗಿದೆ, ಸೂರ್ಯನು ಅದರ ಮುಂದೆ ಒಂದು ಸಣ್ಣ ಚುಕ್ಕೆಯಂತೆ ಕಾಣಿಸಿಕೊಳ್ಳುತ್ತಾನೆ. ಸೂರ್ಯನು ಉದಯವಾಗುವ ಸಮಯ ಅಥವಾ ಉತ್ತರಾಯಣದ ಸಮೀಪದ ಅವಧಿ (ಪ್ರತಿ ವರ್ಷ ಡಿಸೆಂಬರ್-ಮಾರ್ಚ್ ನಡುವೆ) ಕಾಣಿಸಿಕೊಂಡಾಗ, ಓರಿಯನ್ ಅದೇ ವೇಗದಲ್ಲಿ ಸೂರ್ಯನ ಕಡೆಗೆ ಸಾಗುತ್ತಿರುವ ಹಾಗೆ  ಕಾಣುತ್ತದೆ. ಈ ಬೃಹತ್ ಬೆಟೆಲ್‌ಗ್ಯೂಸ್, ಓರಿಯನ್‌ನಲ್ಲಿರುವ ಇತರ ನಕ್ಷತ್ರಪುಂಜಗಳೊಂದಿಗೆ ಸಣ್ಣ ಸೂರ್ಯನ ಕಡೆಗೆ ಪ್ರಯಾಣಿಸುವಂತೆ ಕಂಡಾಗ ಸ್ಪಷ್ಟವಾಗಿ ಸೂರ್ಯನು ಒಂದು ಸಣ್ಣ ಕೆಂಪು ಹಣ್ಣಿನಂತೆ ಕಾಣುತ್ತಾನೆ. ಈ ಸಂಪೂರ್ಣ ಖಗೋಳ ಘಟನೆಯನ್ನು ಪರಾಶರ ಸಂಹಿತದಲ್ಲಿ ಮತ್ತು ನಂತರ ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಜಾನಪದ ಕಥೆಯ ರೂಪದಲ್ಲಿ ದಾಖಲಿಸಿದ್ದಾರೆ.

ಹನುಮಂತನು ಸಾಮಾನ್ಯ ಮಾನವ ಮುಖದೊಂದಿಗೆ ಜನಿಸಿದನು ಆದರೆ ದವಡೆ ವಿರೂಪವಾಗಿದ್ದ ಕಾರಣ ಇದನ್ನು ಋಷಿಗಳು ಇಂದ್ರನೊಂದಿಗಿನ ಅವನ ಬಾಲ್ಯ ಜೀವನದ ಘರ್ಷಣೆಯ ಪರಿಣಾಮವೆಂದು ವಿವರಿಸಿದರು. 

ವಾಲ್ಮೀಕಿ ರಾಮಾಯಣದಾದ್ಯಂತ ಹನುಮನನ್ನು "ಹನುಮ" ಎನ್ನುವ  ಹೆಸರಿನಲ್ಲೇ ಗುರುತಿಸಿದ್ದಾರೆ ಆದರೆ ಸುಂದರಕಾಂಡವನ್ನು ಹನುಮಾನ್ ಕಾಂಡ ಎನ್ನುವ  ಬದಲಿಗೆ ಸುಂದರ ಎಂದು  ಹೆಸರಿಡಲಾಗಿದೆ.


ಸುಂದರ ಕಾಂಡವು  ಹನುಮನೇ ಪ್ರಮುಖವಾಗಿರುವ ರಾಮಾಯಣದ ಏಕೈಕ ಅಧ್ಯಾಯವಾಗಿದ್ದು, ಇದರಲ್ಲಿ ಪ್ರಮುಖ ಪಾತ್ರ ರಾಮನ, ಬದಲಾಗಿ ಹನುಮನಾಗಿದ್ದಾನೆ.


ಈ ಇಡೀ ಕಾಂಡ ಅಥವಾ ಅಧ್ಯಾಯ 24 ಗಂಟೆಗಳ ಕಾಲದಲ್ಲಿ ನಡೆದಿದ್ದು, ಸಮುದ್ರದ ಮೇಲೆ ಹಾರಿ, ಲಂಕೆಯನ್ನು ಹುಡುಕಿ, ಸೀತೆಯನ್ನು ಕಂಡು ಮಾತನಾಡಿ, ರಾವಣನ ಸೈನ್ಯದ ವಿರುದ್ಧ ಹೋರಾಡಿ ಕೊಂದು, ಇಂದ್ರಜಿತುವಿನಿಂದ ಉದ್ದೇಶಪೂರ್ವಕವಾಗಿ ಸಿಕ್ಕಿಬಿದ್ದು, ಲಂಕೆಗೆ ಬೆಂಕಿ ಹಚ್ಚಿ ಮತ್ತೆ ಸಮುದ್ರ ದಾಟಿ ಹಿಂತಿರುಗಿದ ಹನುಮನ ವೀರತನದ ಬಗ್ಗೆ.. ಇಲ್ಲಿ ವಿವರವಿದೆ.  ಈ ಪ್ರಯಾಣದುದ್ದಕ್ಕೂ, ಅವನು ವಿಶ್ರಾಂತಿ ಪಡೆಯಲಿಲ್ಲ ಅಥವಾ ಆಹಾರವನ್ನು ಸೇವಿಸಲಿಲ್ಲ. ಗುರಿಯನ್ನು ಸಾಧಿಸಲು ಒಬ್ಬ ವ್ಯಕ್ತಿ   ಎಷ್ಟು ಗಮನಹರಿಸಬೇಕು ಎಂಬುದಕ್ಕೆ ಸುಂದರ ಕಾಂಡವು ಅತ್ಯುತ್ತಮ ಉದಾಹರಣೆಯಾಗಿದೆ. ನಿತ್ಯ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಸುಂದರ ಕಾಂಡದ ಪಾರಾಯಣಕ್ಕೆ ವಿದ್ವಾಂಸರು ಸಲಹೆ ನೀಡುತ್ತಾರೆ, ಆದರೆ ನಿಜವಾದ ಉದ್ದೇಶವೆಂದರೆ ಹನುಮಂತನು ಗುರಿಯತ್ತ ಎಷ್ಟು ಗಮನಹರಿಸಿದ್ದ್ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದಾಗಿದೆ. ಅದು ಬಿಟ್ಟು "ಸುಂದರಕಾಂಡ" ಎನ್ನುವ ಹೆಸರಿಗಾಗಿ ಅದನ್ನು ಓದುವುದಲ್ಲ. 

ರಾಮಾಯಣದ ಸಂಸ್ಕೃತ ಆವೃತ್ತಿಯಲ್ಲಿ, ಹೆಚ್ಚಿನ ಹೆಸರುಗಳು ಸ್ವರಗಳೊಂದಿಗೆ ಕೊನೆಗೊಳ್ಳುತ್ತವೆ, ವಿಶೇಷವಾಗಿ 'ಅ'. ಹಿಂದಿ ಎಂಬುದು ಖರಿಬೋಲಿ, ಪ್ರಾಕೃತ, ಅಪಭ್ರಮ್ಸ ಮತ್ತು ಪರ್ಷಿಯನ್ ಭಾಷೆಗಳ ನಂತರ ಬಂದ ಭಾಷೆಯಾಗಿದೆ. ಅವರು ರಾಮನನ್ನು ರಾಮ ಎಂದು, ಸುಂದರನನ್ನು ಸುಂದರ ಎಂದು, ಶಿವನನ್ನು ಶಿವ ಎಂದು ಉಚ್ಚರಿಸುತ್ತಾರೆ (ಉಚ್ಚರಿಸುವಾಗ ಸ, ಶ, ಷ ನಡುವೆ ವ್ಯತ್ಯಾಸವಿಲ್ಲದೆ).


ಲಂಕೆ ಮತ್ತು ಅಶೋಕ ವನದ ಸುಂದರವಾದ (ಸುಂದರ) ವರ್ಣನೆಯಿಂದಾಗಿ ರಾಮಾಯಣದ ಒಂದು ಕಾಂಡವನ್ನು ಸುಂದರ ಕಾಂಡ ಎಂದು ಕರೆಯಲಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಅದು ತಪ್ಪು! ಅಲ್ಲದೆ, ಭಾರತದ ಕೆಲವು ರಾಜ್ಯಗಳಲ್ಲಿ, ಏಪ್ರಿಲ್‌ನಲ್ಲಿ ಚೈತ್ರ ಪೌರ್ಣಮಿ (ಹುಣ್ಣಿಮೆಯ ದಿನ) ದಂದು ಹನುಮಾನ್ ಜಯಂತಿ (ಜನ್ಮೋತ್ಸವ) ವನ್ನು ತಪ್ಪಾಗಿ ಆಚರಿಸಲಾಗುತ್ತದೆ. ಮಂಗಳವಾರ ಮುಂಜಾನೆ, ಅಂದರೆ ಚೈತ್ರ ಪೌರ್ಣಮಿಯಂದು, ಹನುಮ ಅಶೋಕ ವನದಲ್ಲಿದ್ದ ಮರದ ಕೆಳಗೆ ಸೀತೆಯನ್ನು ಕಂಡುದಾಗಿ ಸುಂದರ ಕಾಂಡ ಸ್ಪಷ್ಟವಾಗಿ ಹೇಳುತ್ತದೆ. ಈ ದಿನದಂದು, ಅವನು ರಾವಣನ ಸೈನ್ಯದ ಬಹುಭಾಗವನ್ನು ಕೊಂದು, ಲಂಕೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಒಬ್ಬನೇ ಸುಟ್ಟುಹಾಕಿದನು. ಇದನ್ನು ‘ಹನುಮದ್ ವಿಜಯಂ’ (ಹನುಮನ ವಿಜಯ) ಎಂದು ಆಚರಿಸಬೇಕು.


ಪರಾಶರ ಸಂಹಿತೆಯು ಹನುಮಂತನು ತಿರುನಾಳದಲ್ಲಿರುವ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ, ವೈಶಾಖ ಮಾಸದಲ್ಲಿ (ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಬರುವ) ಶನಿವಾರದಂದು, ಕೃಷ್ಣಪಕ್ಷ  ದಶಮಿಯಂದು (ಹುಣ್ಣಿಮೆಯ ನಂತರದ 10 ನೇ ಚಂದ್ರನ ದಿನ) ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಜನಿಸಿದನೆಂದು ಸ್ಪಷ್ಟವಾಗಿ ಹೇಳುತ್ತದೆ. ಅಂಜನಾ ಶಿವನಿಗಾಗಿ ತಪಸ್ಸು ಮಾಡಿದಳು ಮತ್ತು ರುದ್ರರಲ್ಲಿ ಒಬ್ಬನಾದ (ಏಕ ಪಾದ ರುದ್ರ) ಎನ್ನುವ ಮಗುವನ್ನು ಪಡೆದಳು. ಶಿವನ ನಾಮಗಳಲ್ಲಿ (ರೂಪಗಳು) ಒಂದಾಗಿರುವುದರಿಂದ ಅವಳು ಮಗುವಿಗೆ ಸುಂದರ ಎಂದು ಹೆಸರಿಸಿದಳು. ಶಿವನು ಎಲ್ಲಾ ದೇವತೆಗಳೊಡನೆ ಪಾರ್ವತಿಯನ್ನು ವರಿಸಲೆಂದು ಹೋದಾಗ ಆಕೆಯ ಹೆತ್ತವರು ಅವನನ್ನು ಸಾಮಾನ್ಯವಾದ ಅವನ ಕಪಾಲವನ್ನು ಕರದಲ್ಲಿ ಹಿಡಿದಿರುವ ರೂಪಕ್ಕಿಂತ ಸುಂದ್ರವಾದ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ಕೇಳಿಕೊಂಡರು.  ಅದರಂತೆ ಪಾರ್ವತಿಯನ್ನು ಮದುವೆಯಾಗುವುದಕ್ಕೆ ಶಿವ ತನ್ನ ರೂಪವನ್ನು ಬದಲಿಸಿಕೊಂಡನು. ಶಿವನ ಆ ರೂಪವನ್ನು ಸುಂದರ ಎಂದು ಕರೆಯಲಾಯಿತು.


ಮೀನಾಕ್ಷಿ ಕಲ್ಯಾಣದ ಕಥೆಯಲ್ಲಿಯೂ ಸಹ, ಶಿವನು ಸುಂದರೇಶ್ವರರ್ ಅಥವಾ ಸುಂದರ ಪಾಂಡ್ಯನ್ ಎಂಬ ಹೆಸರಿನಿಂದ ಅವಳನ್ನು ಮದುವೆಯಾದನೆಂದು ಹೇಳಲಾಗುತ್ತದೆ ಮತ್ತು ಅವರಿಬ್ಬರೂ ಮಧುರೈ ಅನ್ನು ಹಲವು ವರ್ಷಗಳ ಕಾಲ ಆಳಿದರು.

ಸತ್ಯಂ ಶಿವಂ ಸುಂದರಂ

Sunday, May 18, 2025

"Ayurvedic Approach to Fighting Bad Breath"

 Bangalore May 2025: According to Dr. Sonia Datta, MDS, PhD, Professor in Public Health Dentistry bad breath, or halitosis, can be socially distressing, affecting confidence and interpersonal interactions. It often stems from poor oral hygiene, dietary choices, tobacco abuse, certain medication or underlying health conditions. Occasional bad breath is common, often related to food consumption or morning breath. However, persistent halitosis can be a sign of an underlying issue, such as gum disease or dry mouth. Fight bad breath naturally with Dabur Red Paste. Its Ayurvedic ingredients like clove, neem, and mint target odor-causing bacteria for lasting freshness. Make it a daily habit and feel confident with fresh breath all day long. Understanding the causes of bad breath is the first step to addressing it effectively.

Common Causes of Bad Breath: Bad breath primarily results from bacterial buildup in the mouth. Bacteria break down food particles, producing foul-smelling sulfur compounds. Dry mouth, smoking, and certain foods like onions and garlic can worsen the problem. Bacteria thrive in the warm, moist environment of the mouth, particularly on the tongue, where they can accumulate and produce odor-causing compounds. Poor oral hygiene practices, such as neglecting to brush and floss regularly, allow these bacteria to flourish. Dry mouth, often caused by medications or medical conditions, reduces saliva production, which normally helps to cleanse the mouth. Certain foods, like garlic and onions, contain compounds that can be absorbed into the bloodstream and exhaled through the lungs, contributing to bad breath.

The Ayurvedic Advantage for Fresh Breath: Using ingredients with antibacterial properties, such as clove, neem, and mint, can help maintain oral freshness. Clove’s natural compounds combat odor-causing bacteria. Neem helps in plaque reduction. Mint leaves a refreshing aftertaste. Dabur Red Paste harnesses the power of these natural ingredients to provide long-lasting freshness. Moreover, Dabur Red Paste has been awarded the IDA Seal of Acceptance, ensuring its effectiveness in combating bad breath and promoting overall oral health.

Tips for Maintaining Fresh Breath: Tips for maintaining fresh breath include brushing daily using Dabur Red Paste and flossing for a refreshing and effective clean. Brushing removes plaque and bacteria from the teeth and gums, while flossing removes food particles trapped between the teeth. Cleaning the tongue with a tongue scraper or toothbrush helps remove bacteria that accumulate on the tongue's surface. Staying hydrated to support saliva production is essential. Saliva helps to cleanse the mouth and neutralize acids. Avoiding strong-smelling foods that contribute to bad breath, like onions and garlic, can also be helpful. Regular dental check-ups are important for identifying and treating any underlying oral health issues that may be contributing to bad breath. 

Thursday, May 08, 2025

ಗರುಡ ಮಾಲ್ ನಲ್ಲಿ ಮಾವು ಹಾಗೂ ಪುಸ್ತಕ ಮೇಳಕ್ಕೆ ಡಾಲಿ ಧನಂಜಯ್ ಚಾಲನೆ

ಬೆಂಗಳೂರಿನ ಗರುಡಾ ಮಾಲ್ ನಲ್ಲಿ ಮಾವು ಮೇಳ ಹಾಗೂ ಪುಸ್ತಕ ಮೇಳಕ್ಕೆ ಚಾಲನೆ ಕೊಡಲಾಗಿದೆ.


ಮಾವು ಹಾಗೂ ಪುಸ್ತಕ ಮೇಳಕ್ಕೆ ಖ್ಯಾತ ನಟ ಡಾಲಿ ಧನಂಜಯ ಚಾಲನೆ ನೀಡಿದ್ದಾರೆ.
ರೈತರಿಂದ ನೇರವಾಗಿ ಮಾವು ಖರೀದಿಸಲು ಇದೊಂದು ಉತ್ತಮ ಅವಕಾಶವಿದ್ದು ಈ ಮಾವು ಮೇಳ ಮೇ ೧೧ರವರೆಗೆ ಇದ್ದರೆ ಪುಸ್ತಕ ಮೇಳ ಮೇ ೧೮ರವರೆಗೆ ಇರಲಿದೆ.
ಮೇಳ ಉದ್ಘಾಟಿಸಿದ ನಟ ಡಾಲಿ ಧನಂಜಯ "ಮಕ್ಕಳಿಂದ ಮತ್ತು ಹಿರಿಯವರಗೆ ಅಕ್ಷರ ಜ್ಞಾನ ಸಂಪಾದನೆ 1ಲಕ್ಷ ಪುಸ್ತಕಗಳು ಇಲ್ಲಿ ಲಭ್ಯವಿದೆ ಮತ್ತು ರೈತರಿಂದ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ನೇರವಾಗಿ ಮಾವಿನ ಹಣ್ಣು ಮಾರಾಟ ಪ್ರದರ್ಶನದಿಂದ ರೈತರಿಗೆ ಉತ್ತಮ ವೇದಿಕೆಯಾಗಿದೆ. ಕನ್ನಡ ನಾಡು, ದೇಶಕ್ಕಾಗಿ ಪ್ರತಿಯೊಬ್ಬರು ಗಟ್ಟಿಯಾಗಿ ನಿಲ್ಲಬೇಕು, ಹಲಸಿನ ಹಣ್ಣು, ಮಾವಿನಹಣ್ಣು ನಾನು ಬಹಳ ಇಷ್ಟಪಡುವ ಹಣ್ಣು. ಪ್ರತಿಯೊಬ್ಬ ಹಣ್ಣುಗಳನ್ನು ತಿಂದು ಆರೋಗ್ಯವಂತರಾಗಿ " ಎಂದರು.


ಶಾಸಕ ಉದಯ್ ಗರುಡಾಚಾರ್ ಮಾತನಾಡಿ "ದೇಶದಲ್ಲಿ ರೈತ ಮತ್ತು ಸೈನಿಕ ಎರಡು ಕಣ್ಣುಗಳು ಇದ್ದಂತೆ ನಮ್ಮ ಮಾವಿನ ಮೇಳದಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ, ಸಾರ್ವಜನಿಕರಿಗೆ ಉತ್ತಮ ಮಾವಿನ ಹಣ್ಣು ಸವಿಯುವ ಅವಕಾಶ ಸಿಗುತ್ತದೆ. ಅಕ್ಷರ ಜ್ಞಾನ ಎಂದು ಕಡಿಮೆಯಾಗಬಾರದು , ಪ್ರತಿದಿನ ಪುಸ್ತಕ ಓದುವುದರಿಂದ ಜ್ಞಾನ ಸಂಪಾದನೆ ಇನ್ನು ಹೆಚ್ಚಾಗುತ್ತದೆ " ಎಂದು ತಿಳಿಸಿದರು.


ಮೇ 8ರಿಂದ ಮೇ 18ರವರೆಗೆ ಎಲ್ಲ ವಯಸ್ಸಿನ ಜನರಿಗೆ ಅನುಕೂಲವಾಗುವಂತೆ ಆಯ್ದ ಪುಸ್ತಕಗಳ ಪ್ರದರ್ಶನ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

Tuesday, May 06, 2025

ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

 ಬಸವನಗುಡಿ: ಅಶ್ವತ್ಥ ಕಲಾಭವನದಲ್ಲಿ ಸ್ನೇಹ ಬುಕ್ ಹೌಸ್ 555ನೇ ಕೃತಿ *ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್* ಡಾ.ರಾಜ್ ಕುಮಾರ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳ ಕೃತಿಯ ಲೋಕಾರ್ಪಣೆ ಸಮಾರಂಭ.


ವರನಟ ಡಾ||ರಾಜ್ ಕುಮಾರ್ ರವರ ಸುಪುತ್ರಿ ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್ ರವರು, ವಿದ್ವಾಂಸರಾದ ಡಾ.ಅರುಳು ಮಲ್ಲಿಗೆ ಪಾರ್ಥಸಾರಥಿರವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ಸೋಮಶೇಖರ್ ರವರು, ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ರವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ , ಲೇಖಕರಾದ ಡಾ.ಕೆ.ನಟರಾಜ್, ಪ್ರಕಾಶಕರಾದ ಕೆ.ಬಿ.ಪರಶಿವಪ್ಪ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಸಿ, ಕೃತಿಯ ಲೋಕಾರ್ಪಣೆ ಮಾಡಿದರು.

*ಡಾ.ಅರುಳು ಮಲ್ಲಿಗೆ* ಪಾರ್ಥಸಾರಥಿರವರು ಘನತೆ, ಗಾಂಭಿರ್ಯ, ಶತಮಾನದ ಸಾಧಕರು ಡಾ.ರಾಜ್ ಕುಮಾರ್ ರವರು ಎಷ್ಟೆ ಎತ್ತರಕ್ಕೆ ಏರಿದರು ಸರಳವಾಗಿ ಬದುಕಿದರು.'

ಚಲನಚಿತ್ರ ರಂಗಕ್ಕೆ ಹಾಗೂ ಅವರ ನಟಿಸಿದ ಪಾತ್ರಗಳಿಗೆ ನ್ಯಾಯ ಒದಗಿಸಿ ಮಾರ್ಯಾದ ಪುರುಷೋತ್ತಮರಾದರು. ಡಾ.ರಾಜ್ ಕುಮಾರ್ ಹಿಂದಿ ಚಲನಚಿತ್ರರಂಗದಲ್ಲಿ ಇದ್ದಿದರೆ ನಾವು ಇರುತ್ತಿರಲ್ಲಿಲ ಎಂದು ಅಮಿತಾಬ್ ಬಚ್ಚನ್ ರವರು ಹೇಳಿದರು, ಸಮಾಜವಾಗಿ ಜೀವಂತವಾಗಿರಬೇಕು ಎಂದರೆ ಮಹಾನ್ ಸಾಧಕರ ಪುಸ್ತಕ ಮುಂದಿನ ಪೀಳಿಗೆಗೆ ಲಭಿಸುವಂತೆ ಮಾಡಬೇಕು ಎಂದರು.

ಗುರುರಾಯರು, ಭಕ್ತ ಕನಕದಾಸ ಆನೇಕ ದೇವರುಗಳನ್ನು ಚಿತ್ರ ಮಾಡಿ ದೇವರುಗಳನ್ನು ಜೀವಂತವಾಗಿ ನೋಡಿವಂತೆ ಮಾಡಿದರು ಎಂದು ಹೇಳಿದರು.ಕೆನಡಾದ ಚರ್ಚ್ ನಲ್ಲಿ ಡಾ.ರಾಜ್ ಕುಮಾರ್ ಕನ್ನಡನಾಡು, ಕನ್ನಡಿಗರಿಗೆ ಸುಖ, ಶಾಂತಿ ಲಭಿಸಲಿ ಎಂದು ಮೊಂಬತ್ತಿ ಬೆಳಗಿಸಿ ಬೇಡಿಕೊಂಡರು.

*ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್* ರವರು ಮಾತನಾಡಿ ನಾಡಿನ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು.ನಮ್ಮ ತಂದೆ, ತಾಯಿಯವರು ಗಳಿಸಿದ ಕೀರ್ತಿ, ಖ್ಯಾತಿಯನ್ನು ಕನ್ನಡಿಗರಿಗೆ ಧಾರೆ ಎರೆಯುತ್ತೇನೆ. ಡಾ.ರಾಜ್ ಕುಮಾರ್ ರವರ ನೋಡಿ ಇನ್ನು ಕಲಿಯಬೇಕಾದದ್ದು ಬಹಳ ಇದೆ ಎಂದು ಹೇಳಿದರು.

*ಎನ್.ಆರ್.ರಮೇಶ್* ರವರು ಮಾತನಾಡಿ ಭಾರತ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ವೈವಿಧ್ಯಮಯ, ಸಾಮಾಜಿಕ ಮೌಲ್ಯಗಳುವುಳ್ಳ ಚಿತ್ರಗಳಲ್ಲಿ ನಟಿಸಿದರು. 174ಕೃತಿಗಳು ಡಾ.ರಾಜ್ ಕುಮಾರ್ ರವರ ಬಗ್ಗೆ ಪುಸ್ತಕಗಳು ಪ್ರಕಟನೆಯಾಗಿದೆ ಇದು ಒಂದು ದಾಖಲೆಯಾಗಿದೆ.

ಪಾತ್ರಗಳ ಮೂಲಕ ಸಾಮಾಜಿಕ ಪೀಡಗುಗಳ ವಿರುದ್ದ ಸಮರ ಸಾರಿದರು, ಸಮಾಜದಲ್ಲಿ  ಬದಲಾವಣೆ ತಂದರು. ಕಸ್ತೂರಿ ನಿವಾಸ, ಜೀವನಚೈತ್ರ ಚಿತ್ರಗಳು ಯುವಕರಿಗೆ ಸ್ಪೂರ್ತಿಯಾಯಿತು.

ಡಾ.ರಾಜ್ ಕುಮಾರ್ ನಟಿಸಿದ ಚಿತ್ರಗಳು ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿದ್ದವು, ಅವರ ಕುಟುಂಬದ ಸ್ನೇಹ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

*ಸಿ.ಸೋಮಶೇಖರ್* ರವರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿದ ಮಹಾನ್ ವ್ಯಕ್ತಿತ್ವ ಡಾ.ರಾಜ್ ಕುಮಾರ್ ರವರು ಮೌಲ್ಯ ಸರದಾರ ಪುಸ್ತಕ ಹೊರಬಂದಿರುವುದು ಸಂತೋಷ ಸಂಗತಿಯಾಗಿದೆ.

ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳಲ್ಲಿ ಉತ್ತಮ ಸಾಮಾಜಿಕ ಮೌಲ್ಯಗಳು ಇರುತ್ತಿತು. ನೈತಿಕ ಮೌಲ್ಯ, ಶುದ್ದತೆ ನಿಷ್ಟೆ, ಕಾಯಕ ಎಲ್ಲವು ಅವರಲ್ಲಿ ಇತ್ತು, ಎಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ ನಟ ಸೌರ್ವಭೌಮರಾದರು.


*ಮಹೇಶ್ ಜೋಷಿ* ರವರು ಮಾತನಾಡಿ ಕನ್ನಡ ಚಲನಚತ್ರರಂಗಕ್ಕೆ ಹೊಸ ಸಂಚಲನ ಮೂಡಿಸಿದರು, ಪಾತ್ರಕ್ಕೆ ಜೀವ ತುಂಬಿದರು. ಡಾ.ರಾಜ್ ಕುಮಾರ್ ರವರಿಗೆ ದಾದ ಸಾಹೇಬ ಪಾಲ್ಕ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸುಸಂದರ್ಭದಲ್ಲಿ ಡಾ.ರಾಜ್ ಕುಮಾರ್ ರವರ ಉತ್ತಮ ಒಡನಾಟ ಸಿಕ್ಕಿತ್ತು.

ಮಂತ್ರಾಲಯ ಮಹಾತ್ಮೆ ಗುರುರಾಯರ ಪಾತ್ರ ಮಾಡಿರುವುದು ಅತ್ತುತ್ಯಮ ಚಿತ್ರವಾಗಿದೆ ,ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವಾಭಿಮಾನದ ಸಂಸ್ಥೆ ಎಂದು ಡಾ.ರಾಜ್ ರವರು ಹೇಳಿದರು.

ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಗೌರವ ಪುರಸ್ಕಾರವನ್ನು ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಹಾಲುಜೇನು ರಾಮ್ ಕುಮಾರ್, ಲೇಖಕ ಕೆ.ವಿ.ಲಕ್ಷ್ಮಣಮೂರ್ತಿ, ಸಮಾಜ ಸೇವಕರಾದ ರಂಗಸ್ವಾಮಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಪ್ರವಾಸಿ ತಾಣ ಆಗಬೇಕು: ವೀರಪ್ಪ ಮೊಯ್ಲಿ

  ಕನ್ನಡ ಸಾಹಿತ್ಯ ಪರಿಷತ್ತು ೧೧೧ನೇ ಸಂಸ್ಥಾಪನಾ ದಿನಾಚರಣೆ

ಬೆಂಗಳೂರು:  ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ   ಹುಟ್ಟಿದ  ‘ಕನ್ನಡ ಸಾಹಿತ್ಯ ಪರಿಷತ್ತು’  ಇಂದು (ಮೇ 5) “111ನೆಯ ಸಂಸ್ಥಾಪನಾ ದಿನ”ವನ್ನು ಆಚರಿಸಿ ಕೊಳ್ಳುತ್ತಿದೆ. ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನಿಸಿ ಕೊಂಡಿರುವ ಇದು ಕನ್ನಡಿಗರೆಲ್ಲರ ಮಾತೃ ಸಂಸ್ಥೆ ಕೂಡ ಹೌದು,. ಮಹಾತ್ಮ ಗಾಂಧೀಜಿಯವರಿಂದಲೇ ರಾಜರ್ಷಿ ಎನ್ನಿಸಿ ಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೋಷಣೆ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್.ಮಿರ್ಜಾ ಇಸ್ಮಾಯಿಲ್ ಅವರ ಬೆಂಬಲದಿಂದ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಭವಿಷ್ಯದ ದಿಕ್ಯೂಚಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ’ ಏರ್ಪಾಟಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದ್ದೇ ಮೊದಲನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ನಿರಂತರವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ  ಸಾಹಿತ್ಯ ಪರಿಷತ್ತು ಏರ್ಪಡಿಸುತ್ತಾ ಬಂದಿದ್ದು ಅವುಗಳು ಕನ್ನಡ ನಾಡು-ನುಡಿಗಳ ಕುರಿತು ಚಿಂತನೆ ನಡೆಸುವ ಮಹತ್ವದ ಕೊಡುಗೆ ಜೊತೆಗೆ ಕನ್ನಡಿಗರು ಒಂದಾಗಿ ಸೇರುವ ತಾಣಗಳಾಗಿ ಶ್ರೀಮಂತ ಕೊಡುಗೆಗಳನ್ನು ನೀಡಿವೆ. ಕರ್ನಾಟಕ ರಾಜ್ಯದ ಏಕೀಕರಣ ಮತ್ತು ನಾಮಕರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನೀಡಿದ ಕೊಡುಗೆ ಅಪಾರ. ಹೀಗೆ ಹಲವು   ಮಹತ್ವದ ಕೊಡುಗೆಗಳನ್ನು ನೀಡಿದ  ಕನ್ನಡ ಸಾಹಿತ್ಯ ಪರಿಷತ್ತು, 110 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡು ಬಂದಿರುವುದೇ ಬಹು ದೊಡ್ಡ  ಹೆಗ್ಗಳಿಕೆ ಎಂದು ಹೇಳಿದ ನಾಡೋಜ ಡಾ.ಮಹೇಶ  ಜೋಶಿಯವರು ಮಾಸ್ತಿಯಂತಹ ಹಿರಿಯರು ಇದನ್ನು ಸರಸ್ವತಿ ಮಂದಿರವೆಂದು ಭಾವಿಸಿ ಬರಿಗಾಲಿನಲ್ಲಿ ಬರುತ್ತಿದ್ದರು. ಈ ನೆಲಕ್ಕೆ  ಇಂತಹ ಮಹನೀಯರು ನಡೆದಾಡಿದ ಸ್ಪರ್ಶವಿದೆ. ಅವರ ಮಾರ್ಗದಲ್ಲಿಯೇ ಪರಿಷತ್ತು ಕನ್ನಡದ ಏಳಿಗೆಗೆ ಶ್ರಮಿಸಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ  ಸರಸ್ವತಿ ಸಮ್ಮಾನ್ ಪುರಸ್ಕೃತರು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆದ ಡಾ.ಎಂ.ವೀರಪ್ಪ ಮೊಯ್ಲಿಯವರು ಮಾತನಾಡಿ ಗೊವಿಂದ ಪೈಯವರು ಕನ್ನಡ ಬೆಳೆಯಲು ಹೊಸ ಶಬ್ದಗಳು ನಿರಂತರವಾಗಿ ಸೇರ ಬೇಕು ಎಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಿಘಂಟಿನ ಮೂಲಕ ಆ ಕೆಲಸವನ್ನು ಮಾಡುತ್ತಾ ಬಂದಿದೆ. ಅದು ಮುಂದುವರೆಯ ಬೇಕು, ಕನ್ನಡ ಸಾಹಿತ್ಯ ಪರಿಷತ್ತು ಪ್ರವಾಸಿ ತಾಣವಾಗ ಬೇಕು, ಇಂದು ಸೃಜನಶೀಲತೆ ವಿಪುಲವಾಗಿದ್ದರೂ ಕನ್ನಡದಲ್ಲಿ ಸಂಶೋಧನೆ ಹಿಂದೆ ಬಿದ್ದಿದೆ. ತಾಂತ್ರಿಕ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯುವ ಅಗತ್ಯವಿದೆ ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸ ಬೇಕು ಎಂದರು.

ಉದಯವಾಣಿ ಸಂಪಾದಕರಾದ ರವಿಶಂಕರ್.ಕೆ.ಭಟ್ ಅವರು ಮಾತನಾಡಿ ಕನ್ನಡ ಮನೆ-ಶಾಲೆಗಳ ಬುನಾದಿಯಲ್ಲಿ ಬೆಳೆಯ ಬೇಕು, ಕನ್ನಡ ಮೊದಲ ಆದ್ಯತೆಯಾಗುವ ಕಡೆಗೆ ಪ್ರಯತ್ನಗಳು ಸಾಗಬೇಕು, ನಾವು ಗೋಪುರದ ಕಡೆ ಗಮನ ಹರಿಸಿ ಬುನಾದಿಯನ್ನು ನಿರ್ಲಿಕ್ಷಿಸಬಾರದು. ಇಂತಹ ಪ್ರಯತ್ನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾತ್ರ ಸಾಧ್ಯ ಎಂದರು.  ‘ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಮತ್ತು ಮಹತ್ವ’ದ ಕುರಿತು  ವಿಶೇಷ ಉಪನ್ಯಾಸ ನೀಡಿದ  ಹಿರಿಯ ಬರಹಗಾರರಾದ ಬೇಲೂರು ರಾಮಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸವನ್ನು ಸ್ಮರಿಸಿ ಕೊಂಡು ಹಿರಿಯರು ತಮ್ಮ ತನುಮನಗಳನ್ನು ನೀಡಿ ಈ ಸಂಸ್ಥೆಯನ್ನು ಕಟ್ಟಿದರು. ಸಂಪನ್ಮೂಲವನ್ನು ತಾವೇ ಭರಿಸಿದರು. ನಾಡನ್ನು ಒಗ್ಗೂಡಿಸುವಲ್ಲಿ, ಭಾಷೆಯನ್ನು ಬೆಳೆಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದಾಗಿದ್ದು ಎಂದು ಪ್ರಶಂಸಿಸಿದರು.

ಕಲಾವಿದ ಶ್ರೀಧರ್ ಮಾತನಾಡಿ ಈಜಾಗಕ್ಕೆ ಬರುವುದೇ ಪುಣ್ಯದ ಕೆಲಸ, ಮೇರು ಸಾಧಕರು ಇಲ್ಲಿ ಓಡಾಗಿದ್ದಾರೆ. ಅವರ ನಡೆ-ನುಡಿಗಳ ನಡುವೆ ಅಂತರವಿರಲಿಲ್ಲ. ಅವರು ತೋರಿದ ಹಾದಿಯಲ್ಲಿ ಸಾಗುತ್ತಿರುವ ಪರಿಷತ್ತು ನಮ್ಮೆಲ್ಲರ ಪಾಲಿಗೆ ದೇಗುಲವಿದ್ದಂತೆ ಎಂದರು. ಇದೇ ಕಾರ್ಯಕ್ರಮದಲ್ಲಿ ಮೈಸೂರಿನ ಸ.ರ.ಸುದರ್ಶನ ಅವರಿಗೆ ‘ಕನ್ನಡ ಚಳುವಳಿ ವೀರಸೇನಾನಿ ಮ.ರಾಮಮೂರ್ತಿ’ ದತ್ತಿ ಪುರಸ್ಕಾರ, ದಕ್ಷಿಣ ಕನ್ನಡದ ಎಚ್.ಶಕುಂತಲಾ ಭಟ್ ಮತ್ತು ತುಮಕೂರಿನ ವಿಜಯ ಮೋಹನ್ ಅವರಿಗೆ ‘ಪದ್ಮಭೂಷಣ ಡಾ.ಬಿ.ಸರೋಜ ದೇವಿ ದತ್ತಿ ಪುರಸ್ಕಾರ’. ಬೆಂಗಳೂರಿನ ಗುರುದೇವ ನಾರಾಯಣ ಕುಮಾರ್ ಮತ್ತು ಶಿವಮೊಗ್ಗದ ಡಿ.ಬಿ.ರಜಿಯಾ ಅವರಿಗೆ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ದತ್ತಿ ಪುರಸ್ಕಾರ’ ಮತ್ತು ಧಾರವಾಡದ ಶ್ರೀ ಗುರುಬಸವ ಮಹಾಮನೆಯ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳಿಗೆ ‘ಡಾ.ಎಚ್.ವಿಶ್ವನಾಥ್ ಮತ್ತು ಎಂ.ಎಸ್.ದತ್ತಿ ಪುರಸ್ಕಾರ’ ನೀಡಿ ಗೌರವಿಸಲಾಯಿತು. ದತ್ತಿದಾನಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜ್ ಅವರು ಸ್ವಾಗತಿಸಿ ಇನ್ನೊಬ್ಬ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿಮಾನಿಗಳು, ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.