Saturday, May 24, 2025

ಆಂಜನೇಯನ ಜನ್ಮನಾಮ - ಸುಂದರ!


ಆಂಜನೇಯ ಅಥವಾ ಹನುಮನ ತಾಯಿ ಅಂಜನಾ, ಹನುಮ ಹುಟ್ಟಿದ ನಂತರ ಅವನಿಗೆ ಸುಂದರ ಎಂದು ಹೆಸರಿಟ್ಟಳು. ಮುಂದೆ ಅವನ ದವಡೆ ವಿರೂಪಗೊಂಡ ನಂತರ ಹನುಮಾನ್ ಎಂದು ಕರೆಯಲಾಯಿತು. ಹನುಮ ಎಂದರೆ 'ದವಡೆ' ಅಥವಾ 'ಗಲ್ಲ'. ಆಂಜನೇಯ ಎಂಬುದು ಅವನ ತಾಯಿ ಅಂಜನಾ ಗುರುತಾಗಿ ನೀಡಲಾದ ಹೆಸರು.


ಹನುಮನ ಬಗ್ಗೆ ಸಂಪೂರ್ಣ ವಿವರಗಳಿರುವ ಏಕೈಕ ಅಧಿಕೃತ ಗ್ರಂಥ ಪರಾಶರ ಸಂಹಿತವು, ಸುಂದರ (ಹನುಮಾನ್) ಶಿಶುವಾಗಿದ್ದಾಗ ಅಮಾವಾಸ್ಯೆಯ ದಿನದಂದು ಅವನು ಆಹಾರವನ್ನು ಕೇಳುವ ಕೆಲವು ಶ್ಲೋಕಗಳನ್ನು ಉಲ್ಲೇಖಿಸುತ್ತದೆ. ಅವನ ತಾಯಿ ಅಂಜನಾ ಅವನಿಗೆ ಯಾವುದಾದರೂ ಹಣ್ಣನ್ನು ತಿನ್ನಲು ಹೇಳುತ್ತಾಳೆ. ಅವನು ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಾನೆ, ಅದನ್ನು ಹಣ್ಣು ಎಂದು ಭಾವಿಸುತ್ತಾನೆ ಮತ್ತು ಹತ್ತಿರ ಬರುತ್ತಾನೆ. ಇಂದ್ರನು ಅವನ ಗಲ್ಲದ ಮೇಲೆ ವಜ್ರಾಯುಧದಿಂದ ಹೊಡೆದಾಗ ಅದು ಊದಿಕೊಳ್ಳುತ್ತದೆ.  ಅವನ ಗಲ್ಲ/ದವಡೆ (ಹನುಮ) ಊದಿಕೊಂಡಿದ್ದರಿಂದ/ವಿರೂಪಗೊಂಡಿದ್ದರಿಂದ, ಅವನಿಗೆ ಹನುಮ ಎಂದು ಹೆಸರಾಯಿತು. ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತಿರುವ ಹನುಮನ ಈ ಕಥೆಯು ವಾಸ್ತವವಾಗಿ ಚಳಿಗಾಲದ ಅಯನ ಸಂಕ್ರಾಂತಿಯಿಂದ ವಸಂತದ ವಿಷುವತ್ ಸಂಕ್ರಾಂತಿಯವರೆಗಿನ ವೃಷಕಪಿ (ಓರಿಯನ್ ಅಥವಾ ಮೃಗಶಿರ ನಕ್ಷತ್ರಪುಂಜ) ಪ್ರಯಾಣವಾಗಿದೆ, ಇದು ಓರಿಯನ್ ನಕ್ಷತ್ರಪುಂಜವು ಸೂರ್ಯನನ್ನು ಸಮೀಪಿಸುವಂತೆ  ಕಾಣುತ್ತದೆ. ಓರಿಯನ್ ಮಾನವ ಆಕೃತಿಯಂತೆ (ಬೇಟೆಗಾರ) ಕಾಣಿಸಿಕೊಂಡರೆ, ಹಣ್ಣೊಂದನ್ನು ನುಂಗುವುದಕ್ಕೆ ಹೊರಟಂತೆ ಇದು ಭಾಸವಾಗುತ್ತದೆ. 

ಈ ಅವಧಿ (ಡಿಸೆಂಬರ್ - ಮಾರ್ಚ್) ಉತ್ತರ ಗೋಳಾರ್ಧದಲ್ಲಿ (ಸಮಭಾಜಕರೇಖೆಯ ಮೇಲೆ) ಮಳೆಯಿಲ್ಲದ ಸಮಯ. ಹೆಚ್ಚಿನ ಸಂಖ್ಯೆಯ ಮಾನವರು ಈ ವಲಯದಲ್ಲಿ ವಾಸಿಸುತ್ತಾರೆ. ಅವರಿಗದು ಚಳಿಗಾಲವಾಗಿರುತ್ತದೆ ಮತ್ತು ಆ ಸಮಯದಲ್ಲಿ ಮಳೆ ಬರುವುದಿಲ್ಲ. ಇಂದ್ರನು ಮಳೆಯೊಂದಿಗೆ ಸಂಬಂಧ ಹೊಂದಿರುವ ದೇವರು ಮತ್ತು ಈ ಅವಧಿಯಲ್ಲಿ ಅವನನ್ನು ಪೂಜಿಸಲಾಗುವುದಿಲ್ಲ. ವೃಷಕಪಿ ಇಂದ್ರನಿಗೆ ಪ್ರತಿಸ್ಪರ್ಧಿಯಾಗಲು ಇದೇ ಕಾರಣ. 


ವಾಸ್ತವವಾಗಿ, ಓರಿಯನ್‌ನ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾದ ಬೆಟೆಲ್‌ಗ್ಯೂಸ್ (ಆಲ್ಫಾ ಓರಿಯೊನಿಸ್) ಒಂದು ಕೆಂಪು ದೈತ್ಯ ಆಗಿದ್ದು ಅದು ತುಂಬಾ ದೊಡ್ಡದಾಗಿದೆ, ಸೂರ್ಯನು ಅದರ ಮುಂದೆ ಒಂದು ಸಣ್ಣ ಚುಕ್ಕೆಯಂತೆ ಕಾಣಿಸಿಕೊಳ್ಳುತ್ತಾನೆ. ಸೂರ್ಯನು ಉದಯವಾಗುವ ಸಮಯ ಅಥವಾ ಉತ್ತರಾಯಣದ ಸಮೀಪದ ಅವಧಿ (ಪ್ರತಿ ವರ್ಷ ಡಿಸೆಂಬರ್-ಮಾರ್ಚ್ ನಡುವೆ) ಕಾಣಿಸಿಕೊಂಡಾಗ, ಓರಿಯನ್ ಅದೇ ವೇಗದಲ್ಲಿ ಸೂರ್ಯನ ಕಡೆಗೆ ಸಾಗುತ್ತಿರುವ ಹಾಗೆ  ಕಾಣುತ್ತದೆ. ಈ ಬೃಹತ್ ಬೆಟೆಲ್‌ಗ್ಯೂಸ್, ಓರಿಯನ್‌ನಲ್ಲಿರುವ ಇತರ ನಕ್ಷತ್ರಪುಂಜಗಳೊಂದಿಗೆ ಸಣ್ಣ ಸೂರ್ಯನ ಕಡೆಗೆ ಪ್ರಯಾಣಿಸುವಂತೆ ಕಂಡಾಗ ಸ್ಪಷ್ಟವಾಗಿ ಸೂರ್ಯನು ಒಂದು ಸಣ್ಣ ಕೆಂಪು ಹಣ್ಣಿನಂತೆ ಕಾಣುತ್ತಾನೆ. ಈ ಸಂಪೂರ್ಣ ಖಗೋಳ ಘಟನೆಯನ್ನು ಪರಾಶರ ಸಂಹಿತದಲ್ಲಿ ಮತ್ತು ನಂತರ ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಜಾನಪದ ಕಥೆಯ ರೂಪದಲ್ಲಿ ದಾಖಲಿಸಿದ್ದಾರೆ.

ಹನುಮಂತನು ಸಾಮಾನ್ಯ ಮಾನವ ಮುಖದೊಂದಿಗೆ ಜನಿಸಿದನು ಆದರೆ ದವಡೆ ವಿರೂಪವಾಗಿದ್ದ ಕಾರಣ ಇದನ್ನು ಋಷಿಗಳು ಇಂದ್ರನೊಂದಿಗಿನ ಅವನ ಬಾಲ್ಯ ಜೀವನದ ಘರ್ಷಣೆಯ ಪರಿಣಾಮವೆಂದು ವಿವರಿಸಿದರು. 

ವಾಲ್ಮೀಕಿ ರಾಮಾಯಣದಾದ್ಯಂತ ಹನುಮನನ್ನು "ಹನುಮ" ಎನ್ನುವ  ಹೆಸರಿನಲ್ಲೇ ಗುರುತಿಸಿದ್ದಾರೆ ಆದರೆ ಸುಂದರಕಾಂಡವನ್ನು ಹನುಮಾನ್ ಕಾಂಡ ಎನ್ನುವ  ಬದಲಿಗೆ ಸುಂದರ ಎಂದು  ಹೆಸರಿಡಲಾಗಿದೆ.


ಸುಂದರ ಕಾಂಡವು  ಹನುಮನೇ ಪ್ರಮುಖವಾಗಿರುವ ರಾಮಾಯಣದ ಏಕೈಕ ಅಧ್ಯಾಯವಾಗಿದ್ದು, ಇದರಲ್ಲಿ ಪ್ರಮುಖ ಪಾತ್ರ ರಾಮನ, ಬದಲಾಗಿ ಹನುಮನಾಗಿದ್ದಾನೆ.


ಈ ಇಡೀ ಕಾಂಡ ಅಥವಾ ಅಧ್ಯಾಯ 24 ಗಂಟೆಗಳ ಕಾಲದಲ್ಲಿ ನಡೆದಿದ್ದು, ಸಮುದ್ರದ ಮೇಲೆ ಹಾರಿ, ಲಂಕೆಯನ್ನು ಹುಡುಕಿ, ಸೀತೆಯನ್ನು ಕಂಡು ಮಾತನಾಡಿ, ರಾವಣನ ಸೈನ್ಯದ ವಿರುದ್ಧ ಹೋರಾಡಿ ಕೊಂದು, ಇಂದ್ರಜಿತುವಿನಿಂದ ಉದ್ದೇಶಪೂರ್ವಕವಾಗಿ ಸಿಕ್ಕಿಬಿದ್ದು, ಲಂಕೆಗೆ ಬೆಂಕಿ ಹಚ್ಚಿ ಮತ್ತೆ ಸಮುದ್ರ ದಾಟಿ ಹಿಂತಿರುಗಿದ ಹನುಮನ ವೀರತನದ ಬಗ್ಗೆ.. ಇಲ್ಲಿ ವಿವರವಿದೆ.  ಈ ಪ್ರಯಾಣದುದ್ದಕ್ಕೂ, ಅವನು ವಿಶ್ರಾಂತಿ ಪಡೆಯಲಿಲ್ಲ ಅಥವಾ ಆಹಾರವನ್ನು ಸೇವಿಸಲಿಲ್ಲ. ಗುರಿಯನ್ನು ಸಾಧಿಸಲು ಒಬ್ಬ ವ್ಯಕ್ತಿ   ಎಷ್ಟು ಗಮನಹರಿಸಬೇಕು ಎಂಬುದಕ್ಕೆ ಸುಂದರ ಕಾಂಡವು ಅತ್ಯುತ್ತಮ ಉದಾಹರಣೆಯಾಗಿದೆ. ನಿತ್ಯ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಸುಂದರ ಕಾಂಡದ ಪಾರಾಯಣಕ್ಕೆ ವಿದ್ವಾಂಸರು ಸಲಹೆ ನೀಡುತ್ತಾರೆ, ಆದರೆ ನಿಜವಾದ ಉದ್ದೇಶವೆಂದರೆ ಹನುಮಂತನು ಗುರಿಯತ್ತ ಎಷ್ಟು ಗಮನಹರಿಸಿದ್ದ್ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದಾಗಿದೆ. ಅದು ಬಿಟ್ಟು "ಸುಂದರಕಾಂಡ" ಎನ್ನುವ ಹೆಸರಿಗಾಗಿ ಅದನ್ನು ಓದುವುದಲ್ಲ. 

ರಾಮಾಯಣದ ಸಂಸ್ಕೃತ ಆವೃತ್ತಿಯಲ್ಲಿ, ಹೆಚ್ಚಿನ ಹೆಸರುಗಳು ಸ್ವರಗಳೊಂದಿಗೆ ಕೊನೆಗೊಳ್ಳುತ್ತವೆ, ವಿಶೇಷವಾಗಿ 'ಅ'. ಹಿಂದಿ ಎಂಬುದು ಖರಿಬೋಲಿ, ಪ್ರಾಕೃತ, ಅಪಭ್ರಮ್ಸ ಮತ್ತು ಪರ್ಷಿಯನ್ ಭಾಷೆಗಳ ನಂತರ ಬಂದ ಭಾಷೆಯಾಗಿದೆ. ಅವರು ರಾಮನನ್ನು ರಾಮ ಎಂದು, ಸುಂದರನನ್ನು ಸುಂದರ ಎಂದು, ಶಿವನನ್ನು ಶಿವ ಎಂದು ಉಚ್ಚರಿಸುತ್ತಾರೆ (ಉಚ್ಚರಿಸುವಾಗ ಸ, ಶ, ಷ ನಡುವೆ ವ್ಯತ್ಯಾಸವಿಲ್ಲದೆ).


ಲಂಕೆ ಮತ್ತು ಅಶೋಕ ವನದ ಸುಂದರವಾದ (ಸುಂದರ) ವರ್ಣನೆಯಿಂದಾಗಿ ರಾಮಾಯಣದ ಒಂದು ಕಾಂಡವನ್ನು ಸುಂದರ ಕಾಂಡ ಎಂದು ಕರೆಯಲಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಅದು ತಪ್ಪು! ಅಲ್ಲದೆ, ಭಾರತದ ಕೆಲವು ರಾಜ್ಯಗಳಲ್ಲಿ, ಏಪ್ರಿಲ್‌ನಲ್ಲಿ ಚೈತ್ರ ಪೌರ್ಣಮಿ (ಹುಣ್ಣಿಮೆಯ ದಿನ) ದಂದು ಹನುಮಾನ್ ಜಯಂತಿ (ಜನ್ಮೋತ್ಸವ) ವನ್ನು ತಪ್ಪಾಗಿ ಆಚರಿಸಲಾಗುತ್ತದೆ. ಮಂಗಳವಾರ ಮುಂಜಾನೆ, ಅಂದರೆ ಚೈತ್ರ ಪೌರ್ಣಮಿಯಂದು, ಹನುಮ ಅಶೋಕ ವನದಲ್ಲಿದ್ದ ಮರದ ಕೆಳಗೆ ಸೀತೆಯನ್ನು ಕಂಡುದಾಗಿ ಸುಂದರ ಕಾಂಡ ಸ್ಪಷ್ಟವಾಗಿ ಹೇಳುತ್ತದೆ. ಈ ದಿನದಂದು, ಅವನು ರಾವಣನ ಸೈನ್ಯದ ಬಹುಭಾಗವನ್ನು ಕೊಂದು, ಲಂಕೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಒಬ್ಬನೇ ಸುಟ್ಟುಹಾಕಿದನು. ಇದನ್ನು ‘ಹನುಮದ್ ವಿಜಯಂ’ (ಹನುಮನ ವಿಜಯ) ಎಂದು ಆಚರಿಸಬೇಕು.


ಪರಾಶರ ಸಂಹಿತೆಯು ಹನುಮಂತನು ತಿರುನಾಳದಲ್ಲಿರುವ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ, ವೈಶಾಖ ಮಾಸದಲ್ಲಿ (ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಬರುವ) ಶನಿವಾರದಂದು, ಕೃಷ್ಣಪಕ್ಷ  ದಶಮಿಯಂದು (ಹುಣ್ಣಿಮೆಯ ನಂತರದ 10 ನೇ ಚಂದ್ರನ ದಿನ) ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಜನಿಸಿದನೆಂದು ಸ್ಪಷ್ಟವಾಗಿ ಹೇಳುತ್ತದೆ. ಅಂಜನಾ ಶಿವನಿಗಾಗಿ ತಪಸ್ಸು ಮಾಡಿದಳು ಮತ್ತು ರುದ್ರರಲ್ಲಿ ಒಬ್ಬನಾದ (ಏಕ ಪಾದ ರುದ್ರ) ಎನ್ನುವ ಮಗುವನ್ನು ಪಡೆದಳು. ಶಿವನ ನಾಮಗಳಲ್ಲಿ (ರೂಪಗಳು) ಒಂದಾಗಿರುವುದರಿಂದ ಅವಳು ಮಗುವಿಗೆ ಸುಂದರ ಎಂದು ಹೆಸರಿಸಿದಳು. ಶಿವನು ಎಲ್ಲಾ ದೇವತೆಗಳೊಡನೆ ಪಾರ್ವತಿಯನ್ನು ವರಿಸಲೆಂದು ಹೋದಾಗ ಆಕೆಯ ಹೆತ್ತವರು ಅವನನ್ನು ಸಾಮಾನ್ಯವಾದ ಅವನ ಕಪಾಲವನ್ನು ಕರದಲ್ಲಿ ಹಿಡಿದಿರುವ ರೂಪಕ್ಕಿಂತ ಸುಂದ್ರವಾದ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ಕೇಳಿಕೊಂಡರು.  ಅದರಂತೆ ಪಾರ್ವತಿಯನ್ನು ಮದುವೆಯಾಗುವುದಕ್ಕೆ ಶಿವ ತನ್ನ ರೂಪವನ್ನು ಬದಲಿಸಿಕೊಂಡನು. ಶಿವನ ಆ ರೂಪವನ್ನು ಸುಂದರ ಎಂದು ಕರೆಯಲಾಯಿತು.


ಮೀನಾಕ್ಷಿ ಕಲ್ಯಾಣದ ಕಥೆಯಲ್ಲಿಯೂ ಸಹ, ಶಿವನು ಸುಂದರೇಶ್ವರರ್ ಅಥವಾ ಸುಂದರ ಪಾಂಡ್ಯನ್ ಎಂಬ ಹೆಸರಿನಿಂದ ಅವಳನ್ನು ಮದುವೆಯಾದನೆಂದು ಹೇಳಲಾಗುತ್ತದೆ ಮತ್ತು ಅವರಿಬ್ಬರೂ ಮಧುರೈ ಅನ್ನು ಹಲವು ವರ್ಷಗಳ ಕಾಲ ಆಳಿದರು.

ಸತ್ಯಂ ಶಿವಂ ಸುಂದರಂ

No comments:

Post a Comment