ಕೊಳನಕಲ್ ಮಹಾಗಣಪತಿ ದೇವಸ್ಥಾನ..(Kolanakal Mahaganapati Temple)
ಬೃಹತ್ ಬಂಡೆಯ ಮೇಲೊಂದು ಕೊಳ ಅಲ್ಲೊಂದು ಸುಂದರ ದೇಗುಲ ಇದು ಕುಂದಾಪುರ ತಾಲೂಕಿನಲ್ಲಿರುವ ಕೊಳನಕಲ್ ಮಹಾಗಣಪತಿ ದೇವಸ್ಥಾನ..
ಮಹಾಗಣಪತಿ ದೇವಸ್ಥಾನ ಕೊಳನಕಲ್ಲು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿರುವ ಪ್ರಕೃತಿದತ್ತವಾದ ಪುರಾತನ ದೇವಾಲಯ. ಈ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಗಣಪತಿಯ ಮಹಿಮೆ ಅಪಾರ. ಸಂಕಷ್ಟಿ , ಸಂಕ್ರಮಣ ದಿನಗಳಲ್ಲಿ ಅಪಾರ ಭಕ್ತಾಬಿಮಾನಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ. ದೇವಾಲಯವು ಬ್ರಹತ್ ಕಲ್ಲು ಬಂಡೆಯ ಮೇಲೆ ಸ್ಥಾಪಿತವಾಗಿದೆ. ಈ ಬಂಡೆಯ ಆನೆಯ ಆಕಾರ ಹೊಂದಿದ್ದು ನೆಲದ ಮೇಲೆ ನೀರು ಇಲ್ಲದ ಈ ಕಾಲದಲ್ಲಿ ಕಲ್ಲು ಬಂಡೆಯ ಮೇಲೆ ಸದಾ ಕಾಲ ನೀರು ಇರುವುದು ಇಲ್ಲಿಯ ವಿಶೇಷ ಈ ಕಾರಣಕ್ಕಾಗಿಯೇ "ಕೊಳನಕಲ್ಲು" ಎಂದು ಪ್ರಸಿದಿಯಾಗಿದೆ. ಅಭಿವೃದ್ಧಿಯ ಹೊಸ್ತಿಲಲ್ಲಿರುವ ಈ ದೇವಾಲಯಕ್ಕೆ ಭಕ್ತರ ಸಂಖ್ಯೆ ದಿನ ದಿನಕ್ಕೆ ಏರುತ್ತಿದೆ.,
ಕೊಳ ಕಲ್ಲು - ಕೊಳವನ್ನು ಹೊಂದಿರುವ ದೈತ್ಯ ಬಂಡೆಯ ಮೇಲೆ ಗಣೇಶನ ಗರ್ಭಗುಡಿ ಇದೆ. ಹಾಗಾಗಿ ಇದಕ್ಕೆ ಕೊಳಂಕಲ್ಲು ಎಂದು ಹೆಸರು ಬಂದಿದೆ.ಈ ಕೊಳದ ನೀರು ಎಂದಿಗೂ ಒಣಗುವುದಿಲ್ಲ.
***
ಹಲವಾರು ವರ್ಷಗಳ ಹಿಂದೆ, ಬರಗಾಲದ ಪರಿಸ್ಥಿತಿಯನ್ನು ನೀಗಿಸಲು, ಅಳುಪ ರಾಜನು ಚೌಳಿಕೆರೆ ಬಾರ್ಕೂರಿನಲ್ಲಿ ಒಂದು ಕೆರೆಯನ್ನು ನಿರ್ಮಿಸಿದನು. ಆ ಸಮಯದಲ್ಲಿ, ಗಣೇಶನ ರೂಪ ಇದ್ದ ಬಂಡೆ ಇಲ್ಲಿ ಬಿದ್ದಿತು.
ಆಗ ಕೆಲವರು ಇಡೀ ಗಣೇಶ ವಿಗ್ರಹವನ್ನು ತಾವು ತೆಗೆದುಕೊಂಡರಾದರೆ ದೇವರ ಕಿರೀಟ (ಶಿರದ ಕವಚ) ಹಾರಿ ಇಲ್ಲಿ ಬಿದ್ದಿತು ಎಂದು ಹೇಳುತ್ತಾರೆ, ಮತ್ತು ಉಳಿದ ಭಾಗ ಚೌಳಿಕೆರೆ ಬಳಿ ಬಿದ್ದಿದೆ ಎನ್ನಲಾಗಿದೆ. ಇಂದು, ನಾವಲ್ಲಿ ಭೈರವ ಗಣಪತಿ ದೇವಾಲಯವನ್ನು ಕಾಣಬಹುದು..
ದೇವರು ಹಾರಿಬಂದ ಕಾರಣ, ಈ ಗ್ರಾಮಕ್ಕೆ ಹಾರಿದ ಹಳ್ಳಿ ಎಂಬ ಹೆಸರು ಬಂದಿತು. ಅದು ಕಾಲಾನಂತರದಲ್ಲಿ ಹಾರ್ದಳ್ಳಿಯಾಗಿದೆ.. ಕೆಲವರು ಇಲ್ಲಿನ ಗಣೇಶನು ಮಂಡಿಯೂರಿ ಕುಳಿತ ಭಂಗಿಯಲ್ಲಿದ್ದಾನೆ ಆದ್ದರಿಂದ ಮಂಡಿಹಳ್ಳಿ ಎಂದು ಹೆಸರು ಬಂದಿದೆ, ಅದು ಕಾಲಾಂತರದಲ್ಲಿ ಮಂಡಳ್ಳಿಯಾಗಿದೆ ಎಂದು ಹೇಳುತ್ತಾರೆ.
ತೆರೆದ ಗರ್ಭಗುಡಿಯಲ್ಲಿ ಬೃಹತ್ ಬಂಡೆಯ ಕೆಳಗೆ ಗಣೇಶನನ್ನು ಕಾಣಬಹುದು. ಕೊಳದ ನೀರನ್ನು ಬಳಸಿ ಗಣೇಶನ ಅಭಿಷೇಕವನ್ನು ಮಾಡಲಾಗುತ್ತದೆ. ಸಂಕಷ್ಟಿ ಮತ್ತು ಗಣೇಶ ಚತುರ್ಥಿಯಂದು ಭಕ್ತರು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.
No comments:
Post a Comment