Friday, November 28, 2025

ಸೃಜನ್ ಲೋಕೇಶ್ ನಿರ್ದೇಶನದ 'ಜಿಎಸ್​ಟಿ' ಸಿನಿಮಾ ವಿಮರ್ಶೆ- 'ಅನ್‌ಲಕ್ಕಿ'ಯೊಬ್ಬನ ಅಳಲಿನ ಕಥೆ

- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಜಿಎಸ್​ಟಿ

ನಿರ್ದೇಶನ: ಸೃಜನ್ ಲೋಕೇಶ್

ನಿರ್ಮಾಣ: ಸಂದೇಶ್ ನಾಗರಾಜ್

ತಾರಾಂಗಣ:  ಸೃಜನ್ ಲೋಕೇಶ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಶೋಭರಾಜ್, ವಿನಯ ಪ್ರಸಾದ್, ರವಿಶಂಕರ್ ಗೌಡ,  ಗಿರೀಶ್ ಶಿವಣ್ಣ ಮುಂತಾದವರು

ರೇಟಿಂಗ್: 2.5/5


ಅವನು ಹೆಸರಿನಲ್ಲಷ್ಟೇ ಲಕ್ಕಿ, ಅವನು ಹುಟ್ಟುತ್ತಲೇ ಅಪ್ಪನ ಫ್ಯಾಕ್ಟರಿಗೆ ಬೆಂಕಿ ಬಿದ್ದಿರುತ್ತದೆ,  ಕುಟುಂಬ ಬೀದಿಗೆ ಬರುತ್ತದೆ. ಶಾಲೆಗೆ ಹೋದರೆ ಕಟ್ಟಡ ಕುಸಿಯುತ್ತದೆ. ಅಂಗಡಿ ಆರಂಭಿದಾಕ್ಷಣ ಲಾಕ್ ಡೌನ್ ಆಗುತ್ತದೆ. ತಾಯಿಯ ಸಾವಿಗೆ ಸಹ ಅವನೇ ಕಾರಣ. ಅಂತಹಾ ಅನ್‌ಲಕ್ಕಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸ್ಮಶಾನಕ್ಕೆ ತೆರಳಿದಾಗ ಅಲ್ಲಿಊ ಅವನಿಗೆ ಲಕ್ ಕುದುರುವುದಿಲ್ಲ. ಅಲ್ಲಿದ್ದ ದೆವ್ವಗಳು ಅವನು ಸಾಯುವುದನ್ನು ತಡೆಯುತ್ತವೆ! ಅದಕ್ಕೆ ಕಾರಣ ಏನು? ಈ ಸಿನಿಮಾದಲ್ಲಿ ದೆವ್ವಗಳು ಹೇಗೆ ಬರುತ್ತವೆ? ಕಥೆ ಅಂತಿಮವಾಗಿ ಏನಾಗಲಿದೆ ಎನ್ನುವುದನ್ನು ನೋಡಲು ನೀವು ಜಿಎಸ್​ಟಿ ಸಿನಿಮಾ ವೀಕ್ಷಿಸಬೇಕು. 

ಇದು ಸೃಜನ್ ಲೋಕೇಶ್ ನಿರ್ದೇಶನದ ಪ್ರಥಮ ಚಿತ್ರ. ಸೃಜನ್ ಲೋಕೇಶ್ ಜೊತೆ ಅವರ ಅಮ್ಮ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಹಾಗೂ ಪುತ್ರ ಸುಕೃತ್ ನಟಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬದ ಮೂರು ತಲೆಮಾರು ಒಂದೇ ಸಿನಿಮಾದಲ್ಲಿದೆ.  ಹಾಸ್ಯ, ಮನರಂಜನೆಯನ್ನೇ ಪ್ರಧಾನವಾಗಿ ಇರಿಸಿಕೊಂಡ ಈ ಚಿತ್ರದ ಮೊದಲರ್ಧ ಏನೂ ವಿಶೇಷತೆ ಇಲ್ಲದೆ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮಾತ್ರ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಗ್ಯಾಂಗ್‌ ಒಂದರ ಲೀಡರ್ ಆಗಿರುವ ಶೋಭರಾಜ್, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಮಿಂಚಿರುವ ರವಿಶಂಕರ್ ಗೌಡ ಇಷ್ಟ ಆಗುತ್ತಾರೆ.. ಹಾಗಾಗಿ ಚಿತ್ರದ ದ್ವಿತೀಯಾರ್ಧವೇ ಸಿನಿಮಾದ ಪ್ಲಸ್ ಪಾಯಿಂಟ್. 

ಆದರೆ ಮೊದಲ ನಿರ್ದೇಶನದ ಸಿನಿಮಾ ಆಗಿಯೂ ಸೃಜನ್  ಕಥೆಯಲ್ಲಿ ಯಾವುದೇ ಹೊಸತನವಿಲ್ಲ. ಸಿನಿಮಾ ನಿರೂಪಣೆಯಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶ ಅವರಿಗೆ ಇತ್ತು. ನಾಯಕಿ ಪಾತ್ರ ನಿರ್ವಹಿಸಿರುವ ರಜನಿ ಇನ್ನಷ್ಟು ಅಭಿನಯದಲ್ಲಿ ಪರಿಣತಿ ಸಾಧಿಸಬೇಕಿದೆ. ಯಾವುದೇ ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ, ಹಿನ್ನೆಲೆ ಸಂಗೀತ ಸಹ ಗಮನ ಸೆಳೆಯುವುದಿಲ್ಲ. ಮೇಕಿಂಗ್​ನಲ್ಲೂ ಚಿತ್ರ ಹೊಸತನವನ್ನು ಹೊಂದಿಲ್ಲ.


No comments:

Post a Comment