ಈಗಾಗಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಬಂದು, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡದಲ್ಲಿ ನಟಿಸುತ್ತಿರುವ ಅಪ್ಪಟ ಕನ್ನಡತಿ ಯಶಾ ಶಿವಕುಮಾರ್ ಇಲ್ಲ ತಮ್ಮ ಬಗ್ಗೆ ಏನು ಹೇಳಿಕೊಂಡಿದ್ದಾರೆ....?
ಯಶಾ ಶಿವಕುಮಾರ್ ಕನ್ನಡದ ಒಬ್ಬ ಅಪರೂಪದ ನಟಿ, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿರುವ 'ಪದವಿಪೂರ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಶಿವರಾಜ್ ಕುಮಾರ್, ಪೃಥ್ವಿ ಅಂಬಾ ಮುಖ್ಯ ಭೂಮಿಕೆಯಲ್ಲಿರುವ 'ಬೈರಾಗಿ,' ಧನಂಜಯ್ ಅಭಿನಯದ 'ಮಾನ್‌ಸೂನ್ ರಾಗ' ಸಿನಿಮಾಗಳಲ್ಲಿ ಈಗಾಗಲೇ ಸಣ್ಣ ಪುಟ್ಟ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರು.
ಆ ಪೈಕಿ 'ಮಾನ್‌ಸೂನ್ ರಾಗ' ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಮಾಡೆಲಿಂಗ್ ಮಾಡುತ್ತಿದ್ದ ಇವರು ಬೆಂಗಳೂರಿನ ಹುಡುಗಿ. ಮೂಡಬಿದರೆ ಆಳ್ವಾಸ್ ಕಾಲೇಜ್‌ನಲ್ಲಿ ಎಂಜಿನಿಯರಿಂಗ್ ಮಾಡಿದ್ದು, ಆ ಸಮಯದಲ್ಲೇ ರಾಜ್ ಬಿ ಶೆಟ್ಟಿಯವರ 'ಸೌಂಡ್ಸ್ & ಲೈಟ್ಸ್' ಎನ್ನುವ ತುಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದರು.
ಸೌಂದರ್ಯ ಸ್ಪರ್ಧೆಗಳಲ್ಲಿ ಮುಂದು
2019ರ ವರ್ಷದಲ್ಲಿ 'ಫ್ಯಾಷನ್ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ 'ಮಿಸ್ ಬೆಂಗಳೂರು 2019, ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019' ಹಾಗೂ ಮುಂಬೈನಲ್ಲಿ ನಡೆದ 'ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019' ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು.
ನಾಟ್ಯ ಕಲೆಯಲ್ಲಿ ಪ್ರವೀಣೆ
ಇವರು ನೃತ್ಯ ಕಲಾವಿದೆಯೂ ಹೌದು. ಭರತನಾಟ್ಯ, ಕಥಕ್, ಫ್ರೀ ಸ್ಟೈಲ್, ಮಣಿಪುರಿ, ಜಾನಪದ ಕಲಾ ನೃತ್ಯಗಳಲ್ಲಿ ಇವರು ಪರಿಣಿತರಾಗಿದ್ದಾರೆ. ದೇಶದ ಅತ್ಯಂತ ಸುಪ್ರಸಿದ್ಧ ವಸ್ತ್ರ ವಿನ್ಯಾಸಕರು ಮತ್ತು ಛಾಯಾಗ್ರಾಹಕರುಗಳೊಂದಿಗೆ ಕೆಲಸ ಮಾಡಿರುವ ಅನುಭವವನ್ನೂ ಇವರು ಹೊಂದಿದ್ದಾರೆ.
ತೆಲುಗಿನಲ್ಲೂ ಮಿಂಚುತ್ತಿರುವ ಯಾ
ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿ ಕೂಡ ಯಶಾ ಅಭಿನಯಿಸಿದ್ದಾರೆ, ಸಾಯಿರಾಮ್ ಶಂಕರ್ ನಾಯಕನಾಗಿರುವ 'ವೆ ದುವೆಯ ಸಿನಿಮಾದಲ್ಲಿ ಯಶಾ ನಾಯಕಿಯಾಗಿ ಅಭಿನಯಿಸಿದ್ದಾರೆ.
'ದಂತಕಥೆ' ಎನ್ನುವ ಸಿನಿಮಾದಲ್ಲಿ ಸಹ ಅವರದು ಪ್ರಮುಖ ಪಾತ್ರ, ಉತ್ತಮ ಕಂಟೆಂಟ್ ಇರುವಂಥ, ಜನರ ಮೆರೆಸ್ಸಿನಲ್ಲಿ ಉಳಿಯುವ ಪಾತ್ರ ಮಾಡುವ ಆಸೆ ಇರುವ ನಟಿ ಯಶಾ.
ಇಷ್ಟಾನಿಷ್ಟಗಳು
ಈಕೆಗೆ ಸ್ನೇಹಿತರೆಂದರೆ ತುಂಬಾ ಇಷ್ಟ, ಹಾಗೆಯೇ ನಾಯಿ ಅಂದ್ರೆ ಬಹಳ ಇಪ್ಪ ಶಾಪಿಂಗ್ ಕ್ರೇಜ್ ಇದೆ. ಡಾನ್ ಅಂದ್ರೆ ಪಂಚಪ್ರಾಣ ಎನ್ನುವುದು ವಿಶೇಷ.
ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ ಓದಿದ್ದೂ ಅಲ್ಲಿಯೇ ಮೊದಲಿನಿಂದಲೂ ನನಗೆ ನಟನೆ, ಭರತನಾಟ್ಯದಲ್ಲಿ ಆಸಕ್ತಿ ಇತ್ತು. ಡಿಗ್ರಿ ಮಾಡಲು ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರಿದೆ. ಅಲ್ಲಿ ಕಥಕ್, ಮಣಿಸರಿ ಮೊದಲಾದ ನೃತ್ಯಗಳನ್ನು ಕಲಿತುಕೊಂಡೆ.
ತುಳು ಚಿತ್ರದಲ್ಲೂ ನವನ
ಜೊತೆಗೆ ತುಳು ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡೆ. ಇದರಿಂದಾಗಿ ನನಗೆ ರಾಜ್, ಬಿ. ಶೆಟ್ಟಿ ಅವರ ತಂಡ ನಿರ್ಮಾಣ ಮಾಡುತ್ತಿರುವ 'ರಾಜ್ ಸೌಂಡ್ಸ್ & ಲೈಟ್ ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಎನ್ನುತ್ತಾರೆ.
ಇಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಇದಾದ ನ೦ತರ ನಾನು ಮಾಡೆಲಿಂಗ್‌ನಲ್ಲಿ ಇರುವಾಗಲೇ ಯೋಗರಾಜ್ ಭಟ್‌ರನ್ನು ಭೇಟಿಯಾಗಿ ಆಡಿಷನ್ ಕೊಟ್ಟು ಬಂದಿದೆ. ಕೆಲವು ದಿನಗಳ ನಂತರ ಅವರು ಕಾಲ್ ಮಾಡಿ ನಾನು ಆಯ್ಕೆಯಾಗಿರುವ ವಿಷಯ ತಿಳಿಸಿದರು.
ಅಧಿಕೃತ ಎಂಟ್ರಿ
ಮೊದಲ ಚಿತ್ರ 'ಪದವಿಪೂರ್ವ'ದ ಮೂಲಕ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡೆ ಎಂದು ನಟಿ ಯಶಾ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಹೇಳಿಕೊಂಡಿದ್ದಾರೆ.
ನಿರ್ವಹಿಸಿದ ಪಾತ್ರಗಳು
ಕಳೆದ ವರ್ಷ ತೆರೆಕಂಡಿದ್ದ ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಭರ್ಜರಿ ಗಂಡು ಚಿತ್ರದಲ್ಲಿ ನಾಯಕಿಯಾಗಿ ಯಶಾ
ಅಭಿನಯಿಸಿದ್ದರು. ಪ್ರಸ್ತುತ ವರ್ಷ ತೆರೆಗೆ ಬಂದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿರುವ 'ಗಣ' ಸಿನಿಮಾದಲ್ಲಿ ನಾಯಕಿಯಾಗಿ ಯಶಾ ಅಭಿನಯಿಸಿದ್ದಾರೆ.
ಕನ್ನಡ, ತೆಲುಗು, ತುಳು ಭಾಷೆಯ ಸಿನಿಮಾಗಳ ಆಫರ್‌ಗಳು ಯತ್ನಾಗೆ ಬರುತ್ತಿದ್ದು, ಸದ್ಯ ಸಾಕಷ್ಟು ಬ್ಯುಸಿ ನಟಿ ಎನಿಸಿದ್ದಾರೆ. ಯಶಾ ಮು೦ದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಬರಲಿ ಎನ್ನುವುದು ಗೃಹಶೋಭಾ ಓದುಗರ ಹಾರೈಕೆ.
ಗೃಹಶೋಬಾ | ಏಪ್ರಿಲ್ 2025ರಲ್ಲಿ ಪ್ರಕಟವಾಗಿದ್ದ ನನ್ನ ಲೇಖನ...
No comments:
Post a Comment