Monday, January 12, 2026

ಬೋಲ್ಡ್ ನಟಿ ಸಂಗೀತಾ ಭಟ್

 - ರಾಘವೇಂದ್ರ ಅಡಿಗ ಎಚ್ಚೆನ್.

ಕಮಲ್ ಶ್ರೀದೇವಿ' ಕಸದಲ್ಲಿನ ನೈಜ ಅಭಿನಯಕ್ಕೆ ಹೆಸರಾದ ನಟಿ ಈ ಭಟ್, ಕನ್ನಡದಲ್ಲಿ ಒಬ್ಬ ಹೊಸ ಪ್ರತಿಭೆಯಾಗಿ ಮಿಂಚಲಿದ್ದಾರೆ. ತಮ್ಮ ನವರೆಯ ಕುರಿತು ಈತ ಹೇಳಿರುವುದೇನು....?


ಚಂದನವನದಲ್ಲಿ ತನ್ನ ನೈಜ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿ ಸಂಗೀತ ಭಟ್ ಮತ್ತೊಮ್ಮೆಕಮಾಲ್ ಮಾಡೋಕ ತಯಾರಾಗಿದ್ದಾರೆ. ಅವರ 'ಕಮಲ್ ಶ್ರೀದೇವಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕೈಮ್ ಡ್ರಿಲ್ಲರ್ ಕಥಾ ನಾಯಕಿಯಾದ ಸಂಗೀತಾ ಭಟ್ ಅದಾಗಲೇ ಚಿತ್ರರಂಗಕ್ಕೆ ಎಂಟ್ರಿಯಾಗಿ ದಶಕದ ಮೇಲಾಗಿದೆ. ಅವರ ಸಿನಿ ಪಯಣ ಹಾಗೂ ಜೀವನದ ಒಂದು ಚಿಕ್ಕ ಪರಿಚಯ ಇಲ್ಲಿದೆ.

ನಟಿ ಸಂಗೀತಾ ಭಟ್ 1992 ಜುಲೈ 4 ರಂದು ಜನಿಸಿದರು. ಹತ್ತನೇ ತರಗತಿಯಲ್ಲಿದ್ದಾಗ ಸಂಗೀತಾರ ತಂದೆ ತೀರಿಹೋಗಿದ್ದು ಆ ಬಳಿಕ ಹೊಟ್ಟೆಪಾಡಿಗಾಗಿ ಚಿತ್ರರಂಗದತ್ತ ಆಗಮಿಸಿದ ನಟಿ 2014ರಲ್ಲಿ ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಸಂಗೀತಾ ನಟಿಸಿದ್ದಾರೆ.

'ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲ, ಕಿಸ್ಮತ್, ಅಳಿದು ಉಳಿದವರು, ಕಪಟನಾಟಕ ಸೂತ್ರಧಾರಿ, ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಅವರು ಧನ೦ಜಯ್ ನಟನೆಯ 'ಎರಡನೇ ಸಲ, ದಯವಿಟ್ಟು ಗಮನಿಸಿ, ಆದ್ಯ, ಅನುಕ್ತ' ಮೊದಲಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. 

ಇವರಿಗೆ ಹೆಸರು ತಂದುಕೊಟ್ಟ ಚಿತ್ರ ಎಂದರೆ 'ಎರಡನೇ ಸಲ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರವಾಗಿದ್ದ ಈ ನಟಿ 'ಕಾಂತಾ' ಚಿತ್ರದ ಮೂಲಕ ಮತ್ತೆ ಸಕ್ರಿಯವಾದರು. ಆದರೆ ಚಿತ್ರ ನಿರೀಕ್ಷೆಯ ಮಟ್ಟದಲ್ಲಿ ಯಶಸ್ವಿ ಆಗಲಿಲ್ಲ.

ಸಂಗೀತಾ ತಾವು ಸಿನಿಮಾ ಮಾತ್ರವಲ್ಲದೆ, ಕಿರುತೆರೆಯಲ್ಲಿ ಕೂಡಾ ತಮ್ಮಭಾವು ತೋರಿಸಿದ್ದು 'ಪಂಜರದ ಗಿಳಿ, ಭಾಗ್ಯವಂತರು. ಚಂದ್ರಚಕೋರಿ, ನೀಲಿ, ಚಂದ್ರಮುಖಿ

ಮೊದಲಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಲ್ಲದೆ ರಿಯಾಲಿಟಿ ಶೋಗಳಾದ ಲೈಫ್ ಸೂಪರ್ ಗುರು, ಬಿ.ಸಿ.ಎಲ್. ಗಳಲ್ಲಿ ಸಹ ಭಾಗವಹಿಸಿದರು. 

ಹೀಗೆ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಈ ನಟಿಯ ಪತಿ ಸಹ ಪ್ರತಿಭಾವಂತ ಕಲಾವಿದರೇ ಆಗಿದ್ದಾರೆ. ಅವರ ಪತಿ ಸುದರ್ಶನ್ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. "ಭಾಗ್ಯಲಕ್ಷ್ಮಿ" ಧಾರಾವಾಹಿಯ ತಾಂಡವ್ ಪಾತ್ರದ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸುದರ್ಶನ್ ಸಹ ಒಬ್ಬ ಪ್ರಮುಖ ಸ್ಟಾಂಡಪ್ ಕಾಮಿಡಿ ನಟ ಆಗಿದ್ದಾರೆ. 


"ಅಣ್ಣ" ಎನ್ನುತ್ತಿದ್ದವನನ್ನೇ ವರಿಸಿದ ಸಂಗೀತಾ!

ಸುದರ್ಶನ್ ಹಾಗೂ ಸಂಗೀತಾ ನಡುವಿನ  ಪ್ರೀತಿ ಹಾಗೂ ವಿವಾಹದ ಕಥೆ ಕೂಡ ಸ್ವಾರಸ್ಯವಾಗಿದೆ. ತಮ್ಮ ಹಾಗೂ ಸುದರ್ಶನ್‌ರ ಪ್ರೀತಿ ಮತ್ತು ಮದುವೆ ವಿಷಯವಾಗಿ ಸಂಗೀತಾ ಹೀಗೆ ವಿವರಿಸುತ್ತಾರೆ - 'ಸುದರ್ಶನ್ ಹಾಗೂ ನಾನು ಪ್ರೀತಿ ಗೀತಿ ಇತ್ಯಾದಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದೆವು.

ತಮಾಷೆ ಎಂದರೆ ಮದುವೆಗೆ ಮುನ್ನ ಸುದರ್ಶನ್‌ರನ್ನು ನಾನು ಅಣ್ಣ' ಎನ್ನುತ್ತಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ಒಂದು ಅಭ್ಯಾಸವೆಂದರೆ ಎಲ್ಲರನ್ನೂ ಅಣ್ಣ ಅಕ್ಕ ಎಂದೇ ಮಾತನಾಡಿಸುವ ರೂಢಿ, ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಬಂದಿದ್ದರಿಂದ ಇಲ್ಲೂ ಅದನ್ನು ಮುಂದುವರಿಸಿದ.

“ಹಾಗೆಯೇ ಇವರ ಜೊತೆ ಕೆಲಸ ಮಾಡುವಾಗ, ನಿಮ್ಮನ್ನು ಅಣ್ಣ ಅಂತ ಕರೆಯಲಾ ನಿಮ್ಮನ್ನು ನೋಡಿದ್ರೆ ನನಗೆ ಹಾಗೆ ಅನಿಸ್ತಿದೆ,' ಎಂದಿದ್ದೆ. ಆದರೆ ಕ್ರಮೇಣ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿತು. ಸಿನಿಮಾ ಸೆಟ್‌ಗೆ ಹೋಗುವಾಗ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿದೆವು, ಆಗ ನಮಗೆ ಮಾತನಾಡಲು ಸಮಯ ಸಿಗುತ್ತಿತ್ತು.

“ಅಲ್ಲಿಂದ ನಮ್ಮಿಬ್ಬರ ಪ್ರೀತಿ ಶುರುವಾಯ್ತು. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ನಾವಿಬ್ಬರೂ ಪ್ರೀತಿ ಇದೆ ಎಂದು ಹೇಳಿಕೊಂಡು ಒಪ್ಪಿಕೊಂಡೆವು. ಇವತ್ತಿಗೂ ನಮಗೆ ಆ ಜಾಗ ತುಂಬಾ ಸ್ಪೆಷಲ್,' ಎನ್ನುತ್ತಾರೆ ಸಂಗೀತಾ.

ಸುದರ್ಶನ್ ಹಾಗೂ ಸಂಗೀತಾ ಮದುವೆಗೆ ಎರಡು ಕುಟುಂಬದವರ ಖುಷಿಯಿಂದ ಒಪ್ಪಿಕೊಂಡರು. ಇವರಿಬ್ಬರ ವಿವಾಹವಾಗಿ ಈಗಾಗಲೇ ಒಂಬತ್ತು ವರ್ಷಗಳಾಗಿವೆ. ಇತ್ತೀಚೆಗೆ ಅವರು ತಮ್ಮ ಸ್ವಂತ ಮನೆಯ ಗೃಹಪ್ರವೇಶ ಸಹ ಮಾಡಿದ್ದಾರೆ.

ಹೊಸ ಮನೆಗೆ 'ಸುಖಾಸ ಎಂದು ಹೆಸರಿಟ್ಟಿದ್ದಾರೆ. ಸುಖಾಸ ನಮಗೆ ಕನಸಿನ ಮನೆ. - ಎಂದರೆ ಸುದರ್ಶನ, ಸುಖ - ಎಂದರೆ ಆಳದ ಸಂತೋಷ ಸ - ಎಂದರೆ ಸಂಗೀತಾ. ಸುಖಾಸ ಎಂದರೆ ನಿಮ್ಮ ಮನೆ, ಖಾಸ ಎಂದರೆ ಗೃಹ ಆಸ ಎಂದರೆ ಆಶ್ರಯ ಎಂದು ಅರ್ಥವಂತೆ. 


ಸಂಗೀತಾ ತಮ್ಮ ಪತಿ ಸುದರ್ಶನ್ ಜೊತೆಯಾಗಿ ತಮ್ಮದೇ ಆದ ನಿರ್ಮಾಣ ಸಂಸ್ಥೆ 'ಸ್ಟಾಟಲ್ ಪ್ರೊಡಕ್ಷನ್ ಎನ್ನುವ ಸಂಸ್ಥೆ ಸಹ ಪ್ರಾರಂಭಿಸಿದ್ದು ಈಗಾಗಲೇ ಒಂದು ಕಿರುಚಿತ್ರವನ್ನು ಹೊರತಂದಿದ್ದಾರೆ. ಅಲ್ಲದೆ, ಸಂಗೀತಾ ಭಟ್ ಹಾಗೂ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ "ಅರವಣಿಪುರಂ" ಸಿನಿಮಾಗೆ ಸುದರ್ಶನ್ ರಂಗಪ್ರಸಾದ್ ನಿರ್ದೇಶನವಿದ್ದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಬೀಡಿ ಫೋಟೋಶೂಟ್

ಸಂಗೀತಾ ಭಟ್ ಒಂದು ಪೊಟೋಶೂಟ್ ಗಾಗಿ ಬೀಡಿ ಸೇದಿದ ಕಥೆ ಇದು. ಸಿನಿಮಾ ಜೀವನದಲ್ಲಿ ಹೊಸತನವನ್ನು ಪ್ರಯತ್ನಿಸಬೇಕು ಎನ್ನುವುದು ಸಂಗೀತಾ ಅವರ ಆಲೋಚನೆ ಹಾಗಾಗಿ ಈ ಬೀಡಿ  ಸೇದುವ ಫೋಟೋಶೂಟ್ ಮಾಡೋಕೆ ತಯಾರಾದರು. ಆದರೆ ಇವರು ಅಂದಿನವರೆಗೆ ಎಂದೂ ಬೀಡಿ ಸೇದುವುದಿರಲಿ ಮುಟ್ಟಿಯೂ ನೋಡಿರಲಿಲ್ಲ. ಆದರೆ ಫೋಟೋಶೂಟ್‌ಗಾಗಿ ಬೀಡಿ ಸೇದುವುದನ್ನು ಅವರು ಕಲಿಯಬೇಕಾಯಿತು.

ಬೀಡಿಯನ್ನು ಹೇಗೆ ಹಚ್ಚಬೇಕು, ಹೇಗೆ ಧಂ ಎಳೆಯಬೇಕು ಅಂತ ಸೆಟ್ ಹುಡುಗರಿಂದ ಅವರು ಕಲಿತುಕೊಂಡರು. ಆ ಫೋಟೋಶೂಟ್ ಹೇಗೋ ಮುಗಿದಿತ್ತು. ಆದರೆ ಅದಾಗಿ ಎರಡು ದಿನವಿಡೀ ಕೆಮ್ಮು ಅವರನ್ನು ಬಾಧಿಸಿತ್ತು. 

ಅರೋಗ್ಯ ಸೌಂದರ್ಯದ ಗುಟ್ಟು

ಸಂಗೀತಾ ಭಟ್ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಪ್ರಾಣಾಯಾಮದೊಡನೆ ಯೋಗದಲ್ಲಿ ಉಸಿರಾಟದ ನಿಯಂತ್ರಣ ಮಾಡುವ 'ಕಪಾಲಬಾತಿ' ಆಸನವನ್ನು ಅವರು ನಿತ್ಯ ಅಭ್ಯಾಸ ಮಾಡುತ್ತಾರೆ. 'ಪ್ರತಿನಿತ್ಯ ಹತ್ತು ನಿಮಿಷ ಪ್ರಾಣಾಯಾಮ ಮಾಡಿದರೆ ಮನೋಬಲ ಹೆಚ್ಚುತ್ತದೆ, ನಕಾರಾತ್ಮಕ ಆಲೋಚನೆ ಹತ್ತಿರ ಬರುವುದಿಲ್ಲ. ಎಲ್ಲಕ್ಕೂ ಮನೋಸಂಕಲ್ಪ ಅಗತ್ಯ.' ಎನ್ನುವುದು ಸಂಗೀತಾರ ಮಾತು.

ನಿತ್ಯವೂ ಪೌಷ್ಟಿಕಾಂಶಯುಕ್ತ ಆಹಾಸ ಸೇವನೆ ಮಾಡಬೇಕು, ಖಾಲಿ ಹೊಟ್ಟೆಗೆ ಎರಡು ಚಮಚ ಆಪಲ್ ಸೈಡರ್ ವಿನಿಗರ್ ಸೇವಿಸುವುದರ ಜೊತೆಗೆ ಬೆಳಗ್ಗೆ ಓಟ್ಸ್ ಹಾಗೂ ಡೈಫೂಟ್ಸ್ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎನ್ನುತ್ತಾರೆ.

ಮಧ್ಯಾಹ್ನಕ್ಕೆ ಅನ್ನ, ಸಾರು, ಪಲ್ಯ ಸೇವಿಸುತ್ತಾರೆ. ಮಧ್ಯಾಹ್ನ ಯಾವ ಡಯೆಟ್ ಇರುವುದಿಲ್ಲ. ರಾತ್ರಿ ಕನಿಷ್ಠ ಪ್ರಮಾಣದಲ್ಲಿ ಅನ್ನ ಸೇವಿಸುತ್ತಾರೆ. ಆದಷ್ಟೂ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಬೇಕು ಎನ್ನುವುದು ಸಂಗೀತಾರ ಸಲಹೆ, ಅವರಿಗೆ ಮೊಸರನ್ನ ಎಂದರೆ ಅಚ್ಚುಮೆಚ್ಚು.

ಸಂಗೀತಾ ಭಟ್ ಬ್ಯೂಟಿ ಪಾರ್ಲರ್ ಅವಲಂಬಿಸಿಲ್ಲ. ಸ್ವತಃ ಅವರೇ ಐದ್ರೋ, ಅಪ್ಪ‌ ಲಿಪ್ ಬ್ರೆಡಿಂಗ್ ಮಾಡಿಕೊಳ್ಳುತ್ತಾರೆ. ರಾತ್ರಿ ಹೊತ್ತು ನೀಮ್ ಫೇಸ್ ಪ್ಯಾಕ್ ಬಳಸುವುದರಿಂದ ಹಾಲುಗೆನ್ನೆಯ ಹೊಳಪು ಹೆಚ್ಚುತ್ತದೆ. ನೈಸರ್ಗಿಕ ಉತ್ಪನ್ನ ಬಳಸಿ ಎರಡು ದಿನಕ್ಕೊಮ್ಮೆ ತ್ವಚೆಯನ್ನು ಸ್ವಚ್ಛ ಮಾಡಿಕೊಳ್ಳುವ ಈ ನಟಿ, ಹೆಚ್ಚಾಗಿ ನೀರು ಮಜ್ಜಿಗೆ, ನಿಂಬೆ ಪಾನಕದ ಸೇವನೆಯೇ ನನ್ನ ಸೌ೦ದರ್ಯದ ಗುಟ್ಟು ಎನ್ನುತ್ತಾರೆ. ತಿಂಗಳಲ್ಲಿ ಎರಡು ದಿನ ಉಪವಾಸ ಮಾಡುವ ಈಕೆ ಆ ದಿನಗಳಲ್ಲಿ ಸ್ವಲ್ಪ ಹಣ್ಣು ಹಾಗೂ ನೀರನ್ನು ಮಾತ್ರವೇ ಸೇವಿಸುತ್ತಾರಂತೆ.

ಚಿತ್ರೋದ್ಯಮದ ಬಗ್ಗೆ ನಟಿಯ ಮಾತು


“ಕೋವಿಡ್ ನಂತರ ಚಿತ್ರರಂಗದ ಡೆಸ್ಟೇಷನ್ಸ್  ಬದಲಾಗಿದೆ. ಈಗ ಚಿತ್ರೋದ್ಯಮದಲ್ಲಿ ತಯಾರಾಗುತ್ತಿರುವ ವಿವಿಧ ರೀತಿಯ ಚಲನಚಿತ್ರಗಳು ಮತ್ತು ಲಭ್ಯವಿರುವ ಅವಕಾಶಗಳು ಬದಲಾದ ಮಾರುಕಟ್ಟೆಯನ್ನು ಸೂಚಿಸುತ್ತವೆ. ಈ ಬದಲಾವಣೆ ಧನಾತ್ಮಕ ಅಥವಾ ಋಣಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತದೆ. ಅನೇಕ ವರ್ಷಗಳಿಂದಲೂ ನಟನೆಯೊಂದೇ ನನ್ನ ಏಕೈಕ ಪ್ಯಾಶನ್ ಆಗಿದೆ. ನಾನು ಅದನ್ನು ಬಿಡಲು ಸಾಧ್ಯವಾಗಲಿಲ್ಲ.

'ನಾನು ಜರ್ಮನಿಯಲ್ಲಿದ್ದಾಗ ಕಲಾವಿದರೂ ಆಗಿರುವ ನನ್ನ ಪತಿ ಸುದರ್ಶನ್ ನನ್ನಲ್ಲಿ ಆಗಿದ್ದ ಬದಲಾವಣೆಯನ್ನು ಗಮನಿಸಿ, ಆ ಬಗ್ಗೆ ಚರ್ಚಿಸಿದರು. ಕಲೆಯ ಮೇಲಿನ ನನ್ನ ಪ್ರೀತಿಯನ್ನು ನಾನು ಅರಿತುಕೊಂಡೆ.' ಎನ್ನುತ್ತಾರೆ ಸಂಗೀತಾ.

ಫಿಟ್‌ನೆಸ್ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ ಎಂದು ಒತ್ತಿಹೇಳುವ ನಟಿ ಸಂಗೀತಾ, ಜರ್ಮನಿಯಲ್ಲಿದ್ದಾಗ ದೊರಕಿದ ಸಮಯ ನನ್ನ ದೃಷ್ಟಿಕೋನವನ್ನು ವಿಸ್ತರಿಸಿ, ನನ್ನನ್ನು ಹೆಚ್ಚು ಮುಕ್ತ ಹಾಗೂ ವಿಚಾರವಾದಿ ಆಗಿಸಿತು ಎಂದು ಹೇಳಿದ್ದಾರೆ.

"ಬೇರೆ ದೇಶದಲ್ಲಿ ವಾಸಿಸುವುದು ನನ್ನ ಕಂಫರ್ಟ್ ರೋನ್‌ನಿಂದ ಹೊರಬರಲು, ವಿವಿಧ ಸಂಪ್ರದಾಯಗಳನ್ನು ಅನುಸರಿಸಲು ಮತ್ತು ಹೆಚ್ಚು ಮುಕ್ತ ಮನಸ್ಸಿನವಳಾಗಲೂ ನನಗೆ ಸಹಾಯ ಮಾಡಿತು. ಟೀಕೆಗಳನ್ನು ಎದುರಿಸುತ್ತಿದರೂ, ನಾನು ಅಡೆತಡೆಗಳನ್ನು ತೊಡೆದು ಹಾಕಲು ಮತ್ತು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಅರ್ಥಪೂರ್ಣ ಪಾತ್ರಕ್ಕೆ ತೆರೆದಕೊಳ್ಳುತ್ತೇನೆ,” ಎನ್ನುತ್ತಾರೆ.

ಅನುಭವಿ ನಟರು, ಹೊಸಬರ ಜೊತೆಗೆ ಹೊಂದಿಕೊಂಡರೆ, ಮೌಲ್ಯಯುತವಾದ ಉದ್ಯಮದ ಅನುಭವವನ್ನು ನೀಡಬಹುದು,' ಎನ್ನುತ್ತಾರೆ ಸಂಗೀತಾ.

ಇಂದು ಸಿನಿಮಾ ನೋಡಲು ಜನ ಬರುತ್ತಿಲ್ಲ. ಮಾಡಿದ ಸಿನಿಮಾ ಮಾರಾಟವಾಗುತ್ತಿಲ್ಲ. ಹಾಗಾಗಿ ಅನೇಕರು ಸಿನಿಮಾ ಮಡುವುದಕ್ಕೆ ಹಿಂದೇಟು ಹಾಕುತ್ತಾರೆ. ಚಿತ್ರೀಕರಣ ಪೂರ್ಣವಾಗಿರುವ ಸಿನಿಮಾ ಬಿಡುಗಡೆಗೂ ಸಹ ಭಯ. ಹಾಗಾಗಿ ನಟರಿಗೆ ಅವಕಾಶಗಳು ಸಿಕ್ಕುತ್ತಿಲ್ಲ. ಇಂದು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವುದು ಸವಾಲು ಎನ್ನುವುದಕ್ಕಿಂತ ಉದ್ಯಮದಲ್ಲಿ ಉಳಿದುಕೊಳ್ಳುವುದೇ ದೊಡ್ಡ ಸವಾಲು ಎನ್ನುವಂತಾಗಿದೆ.' ಇದು ಸಂಗೀತಾರ ಮಾತು.

ಇದೆಲ್ಲದರ ಹೊರತಾಗಿ ಮಿಟೂ ಅಭಿಯಾನದಲ್ಲಿ ಸಂಗೀತಾರ ಹೆಸರು ಬಾರಿ ಸದ್ದು ಮಾಡಿತ್ತು. ಸಂಗೀತಾ ಭಟ್ ಚಿತ್ರರಂಗದಲ್ಲಿ ಎದುರಿಸಿದ ಕಡಗ ಪರಿಸ್ಥಿತಿಯನ್ನು ಸಹ ಒಮ್ಮೆ ಹೇಳಿಕೊಂಡಿದ್ದರು. ನಾನು ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಆ ಚಿತ್ರಗಳು ತಲೆಗೇ ಬರಲೇ ಇಲ್ಲ ಹಾಗಾಗಿ ಆ ಚಿತ್ರಕ್ಕಾಗಿ ನನ್ನ ಸಂಬಾವನೆ ಇನ್ನೂ ದಿರಕಿಲ್ಲ" ಎಂದು ಹೇಳುತ್ತಾರೆ. 

ಹದಿನೈದನೇ ವಯಸ್ಸಿಗೆ ಆಡಿಷನ್ ಕೊಡಲು ಪ್ರಾರಂಭಿಸಿದಾಗಿ ನಟಿ ಹೇಳಿದ್ದಾರೆ.

“ಸಿನಿಮಾ ಎಂದರೆ ಅಂಗಡಿಗೆ ಹೋಗಿ ನಮಗಿಷ್ಟದ ವಸ್ತು ಖರೀದಿಸಿದಂತೆ ಅಲ್ಲ, ನಾವು ಯಾರನ್ನೂ ಹುಡುಕಿಕೊಂಡು ಹೋಗಿ ಅವಕಾಶ ಕೇಳುವುದಕ್ಕೆ ಆಗುವುದಿಲ್ಲ. ನಮ್ಮನ್ನು ಯಾರು ಹುಡುಕಿ ಬರುತ್ತಾರೆಯೋ ಅವರೊಡನೆ ಕೆಲಸ ಮಾಡಬೇಕಷ್ಟೇ,'' ಎನ್ನುವುದು ಈ ನಟಿಯ ಅಭಿಪ್ರಾಯ. 'ಸು ಫ್ರಂ ಸೋ' ಚಿತ್ರದ ಟಿಕೆಟ್ ಸಿಗ್ತಿಲ್ಲ. 'ಸು ಪ್ರಂ ಸೋ' ಚಿತ್ರದ ಗೆಲುವು ಇಡೀ ಇಂಡಸ್ಟ್ರೀಗೆ ಹೊಸ ಉಲ್ಲಾಸ ತುಂಬಿದೆ. ಜನ ಥಿಯೇಟರ್‌ಗೆ ಬರ್ತಿಲ್ಲ ಅನ್ನೋರಿಗೆ ಇದು ಉತ್ತರವಾಗಿದೆ. ವಾರ ವಾರಕ್ಕೂ ಹೆಚ್ಚು ಕಲೆಕ್ಷನ್ ಮಾಡುತ್ತಿರುವ ಚಿತ್ರದ ಕುರಿತು ಸಂಗೀತಾ ಭಟ್ ಹೇಳಿದ್ದಾರೆ.

''ಚಿತ್ರಗಳು ಥಿಯೇಟರ್‌ಗೆ ಬಂದರೂ ಜನ ಬರದೇ ಇರೋ ಸ್ಥಿತಿ ಇತ್ತು. ಆದರೆ, ಇದೀಗ 'ಸು ಪ್ರತಿ ಸೋ' ಚಿತ್ರ ಮನೆಯಲ್ಲಿರುವ ಮಂದಿಯನ್ನು ಥಿಯೇಟ‌ಗೆ ಕರೆದುಕೊಂಡು ಬಂದಿದೆ. ಈ ಚಿತ್ರವನ್ನು ನೋಡಲು ಜನ ಥಿಯೇಟರ್‌ಗೆ ಬರುತ್ತಿರುವುದರಿಂದ ಹೌಸ್‌ಫುಲ್ ಆಗಿವೆ. ಈ ಒಂದು ವಿಷಯ್ ತಿಳಿದು ತುಂಬಾನೇ ಖುಷಿಯಾಗಿದೆ.

'ಹಾಗೇನೆ ಈ ಚಿತ್ರ ನೋಡಲು ನಮಗೆ ಟಿಕೆಟ್ ಸಿಗುತ್ತಿಲ್ಲ ನೋಡಿ, ಹಾಗಾಗಿಯೇ ಟಿಕೆಟ್‌ ಗಾಗಿಯೇ ನಾವು ರಾಜ್ ಶೆಟ್ಟಿಗೆ ಕಂಪ್ಲೇಂಟ್ ಮಾಡಬೇಕಿದೆ' ಎಂದು ಸಂಗೀತ ಹೇಳಿಕೊಂಡಿದ್ದಾರೆ.

ಕಮಲ್ ಶ್ರೀದೇವಿ'ಯ ಪಾತ್ರ ಹೇಗಿದೆ?

'ಕಮಲ್ ಶ್ರೀದೇವಿ' ಸಿನಿಮಾದಲ್ಲಿ ಹಿಂದೆಂದೂ ಕಾಣದ ಬೋಲ್ಡ್ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಈ ಚಿತ್ರ ಹಾಗೂ ಪಾತ್ರದ ಕುರಿತು ನಟಿ ಹೇಳುವದು ಹೀಗೆ - “ಒಂದೇ ದಿನದಲ್ಲಿ ನಡೆಯುವ ಕಥಾನಕವುಳ್ಳ ಕಮಲ್ ಶ್ರೀದೇವಿ' ಸಿನಿಮಾದಲ್ಲಿ ನನ್ನದು ಮಧ್ಯವಯಸ್ಸಿನ ಸೇಲ್ಸ್ ಪ್ರಮನ್ ಪಾತ್ರ. ಇದರ ಹೀರೋ ಹಾಗೂ ಉಳಿದ ಏಳು ಪಾತ್ರಗಳೂ ನಾನು ಮಾಡಿರುವ ಶ್ರೀದೇ ಪಾತ್ರಕ್ಕೆ ಸಂಬಂಧ ಹೊಂದಿರುತ್ತವೆ. ಪ್ರತಿಯೊಬ್ಬರೂ ಇಂಥದ್ದೊಂದು ಸನ್ನಿವೇಶದಲ್ಲಿ ಸಿಲುಕಿರುತ್ತಾರೆ ಅಥವಾ ಒಮ್ಮೆಯಾದರೂ ಕೇಳಿರುತ್ತಾರೆ. 

“ಶ್ರೀದೇವಿಯಂಥ ಪಾತ್ರವನ್ನು ನಾನು ಮಾಡಬಹುದೇ ಎಂಬ ಬಗ್ಗೆ ನಿರ್ದೆಶಕರಿಗೆ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇತ್ತು. ಆದರೆ, ಚಿತ್ರೀಕರಣದ ಬಳಿಕ ಇದೀಗ ಅವರು ತೃಪ್ತರಾಗಿದ್ದಾರೆ. ರಾಜವರ್ಧನ್ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ನಿರ್ದೇಶಕ ಸುನಿ ಮತ್ತು ಇಡೀ ತಂಡ ನನಗೆ ಉತ್ತಮ ಸ್ಥಾನ ನೀಡಿದರು. ಚಿತ್ರ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂಬ ವಿಶ್ವಾಸ ನನಗಿದೆ.”

ಸಚಿನ್‌ ಚೆಲುವರಾಯ ಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮಿತ್ರ, ಎಂ.ಎಸ್. ಉಮೇಶ್ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹ್ಯಾಪಿ ಬರ್ತ್‌ಡೇ (2016) ಮತ್ತು ಬೆಂಗಳೂರು ಬಾಯ್ಸ್ (2023) ನಂತರ ಸಚಿನ್‌ ಮೂರನೇ ಚಿತ್ರ ಇದಾಗಿದೆ. 'ಗಜರಾಮ ಖ್ಯಾತಿಯ ವಿ.ಎ. ಸುನೀಲ್‌ ಕುಮಾ‌ ನಿರ್ದೆಶನ ಮಾಡುತ್ತಿದ್ದಾರೆ. ಸಿನಿಮಾದ ಕ್ರಿಯೇಟಿವ್ ಜವಾಬ್ದಾರಿಯನ್ನು ಸಹ ನಿರ್ಮಾಪಕ ರಾಜವರ್ಧನ್ ವಹಿಸಿಕೊಂಡಿದ್ದಾರೆ.

ಎನ್. ಚೆಲುವರಾಯ ಸ್ವಾಮಿ ಕಮಲ್ ಶ್ರೀದೇವಿ' ಚಿತ್ರವನ್ನು ಅರ್ಪಿಸುತ್ತಿದ್ದಾರೆ. 'ಸ್ವರ್ಣಾಂಬಿಕ ಪಿಕ್ಚರ್ಸ್' ಮೂಲಕ ಬಿ.ಕೆ. ಧನಲಕ್ಷ್ಮೀ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಒಟ್ಟು ಏಳು ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಸಾಂಕೇತಿಕವಾಗಿ ಪ್ರಾಣಿಗಳ ರೂಪ ನೀಡಿ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿದೆ. ಈಗಾಗಲೇ ತನ್ನ ಶೀರ್ಷಿಕೆ, ಟೀಸರ್‌ಗಳಿಂದಲೇ ಈ ಚಿತ್ರ ತೀವ್ರ ಕುತೂಹಲ ಮೂಡಿಸಿದ್ದು, ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರಕ್ಕೆ ಛಾಯಾಗ್ರಹಣವನ್ನು ನಾಗೇಶ್ ಮಾಡುತ್ತಿದ್ದು, ಕೀರ್ತನ್ ಸಂಗೀತ ನಿರ್ದೇಶನ ನೀಡಿದ್ದಾರೆ. ಗುಣ ಸಲಾ ನಿರ್ದೆಶನ ಮಾಡಿದ್ದಾರೆ, ಕಮಲ್ ಹಾಗೂ ಶ್ರೀದೇವಿ ನಡುವೆ ನಡೆಯುವ ಇದರ ಕಥೆ ಪ್ರಶಿಕ್ಷಣ ಹೊತ್ತಿನ ಯಾವುದೋ ಮೂಲೆಯಲ್ಲಿ ಭೀತಿಸುತ್ತಲೇ ಇರುತ್ತದೆ ಎಂದು ಹೇಳುವ ಮುಲಕ ಈ ಸಿನಿಮಾ ತಂಡ ಕುತೂಹಲ ಮೂಡಿಸಿದೆ. 

"ಗೃಹಶೋಭಾ" ಮಾಸಪತ್ರಿಕೆಯಲ್ಲಿ ಸೆಪ್ಟೆಂಬರ್ 2025 ಸಂಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ

No comments:

Post a Comment