Tuesday, July 23, 2013

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕತರು(Dada Saheb Phalke prize winners)

ಪ್ರಥ್ವಿರಾಜ್ ಕಪೂರ್(Prathviraj Kapur)
    ಪ್ರಥ್ವಿರಾಜ್ ಕಪೂರ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರುಗಳಲ್ಲಿ ಒಬ್ಬರು. ಹಿಂದಿ ಚಿತ್ರರಂಗದ ಮೇರು ನಟರುಗಳಲ್ಲಿ ಒಬ್ಬರಾದ ಪ್ರಥ್ವಿರಾಜ್ ಮೂಲತಃ ರಂಗಭೂಮಿಯಿಂದ ಬಂದವರು. ಭಾರತೀಯ ಚಲನಚಿತ್ರ ರಂಗಕ್ಕೆ ಇವರ ಅಪಾರವಾದ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ ೧೯೭೧ ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು.
    ೧೯೦೬ ರ ನವೆಂಬರ್ ೩ ರಂದು ಈಗಿನ ಪಾಕಿಸ್ತಾನದಲ್ಲಿನ ಫೈನಲಾಬಾದ್ ನಲ್ಲಿ ಜನಿಸಿದ ಪ್ರಥ್ವಿರಾಜ್ ತಂದೆ ದಿವಾನ್ ಬಶೇಶ್ವರನಾಥ್ ಕಪೂರ್ ಪೋಲೀಸ್ ಉಪ ನಿರ್ದೇಶಕರಾಗಿದ್ದರು. ಲಾಹೋರ್ ನಲ್ಲಿ ತಮ್ಮ ಆರಂಭಿಕ ಶಿಕ್ಷಣಾವನ್ನು ಪೂರೈಸಿದ ಪ್ರಥ್ವಿರಾಜ್ ಪೇಷಾವರದಲ್ಲಿ ಉನ್ನತ ಶಿಕ್ಷಣವನ್ನು ಹೊಂದಿದರು. ಆ ಬಳಿಕ ಒಂದು ವರ್ಷದ ಕಾನೂನು ಶಿಕ್ಷಣಕೆ ಸೇರ್ಪಡೆಗೊಂಡ ಪ್ರಥ್ವಿರಾಜ್ ಅಲ್ಲಿನ ಪ್ರೊಫೆಸರರ ಸಹಕಾರದೊಂದಿಗೆ ರಂಗಭೂಮಿಗೆ ಪ್ರವೇಶ ಮಾಡಿದರು. ಅವರ ಶಿಕ್ಷಕರಾದ ಜಯ ದಯಾಲ್ ರವರು ಪ್ರಥ್ವಿರಾಜ್ ಪ್ರತಿಭೆ ನೀರೆರೆದು ಪೋಷಿಸಿದರು. ಪೇಷಾವರದ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮುಗಿಸಿದ ಬಳಿಕ ಒಂದು ವರ್ಷದ ಕಾನೂನು ವ್ಯಾಸಂಗವನ್ನೂ ಪೂರೈಸಿದರೂ ರಂಗಭೂಮಿಯ ಗೀಳು ಅವರನ್ನು ಬಿಡದೆ ಮುಂಬೈ ಗೆ ಎಳೆತಂದಿತು. ೧೯೨೮ ರಲ್ಲಿ ತಮ್ಮ ಸೋದರ ಸಂಬಂಧಿಯಿಂದ ಸಾಲ ಪಡೆದು ತಾವು ಮುಂಬೈಗೆ ಬಂದರು.

    ೧೯೨೯ ರಿಂದ ೧೯೩೧ ರವರೆಗೆ ಒಂಭತ್ತು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ೧೯೩೧ ರಲ್ಲಿ ತೆರೆಕಂಡ ಭಾರತದ ಮೊದಲ ವಾಕ್ ಚಿತ್ರ ”ಅಲಂ ಅರಾ” ದಲ್ಲಿ ಪೋಷಕ ನಟರಾಗಿ ಅಭಿನಯಿಸಿದರು. ಮುಂದೆ ೧೯೩೭ ರಲ್ಲಿ ತೆರೆಕಂಡ ”ವಿದ್ಯಾವತಿ”ಯಲ್ಲಿನ ಅವರ ಅಭಿನಯ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು. ೧೯೪೧ ರಲ್ಲಿ ಬಿಡುಗಡೆಯಾದ ”ಸಿಕಂದರ್” ನಲ್ಲಿನ ಚಕ್ರವರ್ತಿ ಅಲೆಕ್ಸಾಂಡರ್ ನ ಪಾತ್ರ ಪ್ರಥ್ವಿರಾಜ್ ನಿರ್ವಹಿಸಿದ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಅದೆಲ್ಲ ಆದ ಬಳಿಕ ”ದಿ ಗ್ರೇಟ್ ಆಂಡರ್ ಸನ್” ನಾಟಕ ತಂಡವನ್ನು ಸೇರಿದ ಪ್ರಥ್ವಿರಾಜ್ ತಮ್ಮ ಅಮೋಘ ನಟನೆಯಿಂದ ರಂಅಗಭೂಮಿ ಹಾಗೂ ಚಲನಚಿತ್ರಗಳಾಲ್ಲಿ ಉತ್ತಮ ನಟನೆನ್ನುವ ಹೆಸರು ಸಂಪಾದಿಸಿದರು.
    ೧೯೪೪ ರಲ್ಲಿ ತಮ್ಮದೇ ನಾಟಕ ತಂಡವನ್ನು ರಚಿಸಿಕೊಂಡ ಪ್ರಥ್ವಿರಾಜ್ ಸುಮಾರು ೧೬ ವರ್ಷಗಳ ಕಾಲ ಭಾರತದೆಲ್ಲೆಡೆ ಸುಮಾರು ೨೦೦೦ಕ್ಕೂಹೆಚ್ಚಿನ ನಾಟಕ ಪ್ರದರ್ಶನ ನೀಡಿ ಅಪಾರ ಖ್ಯಾತಿ ಗಳಿಸಿತು. ಅಂದು ಪ್ರದರ್ಶನಗೊಳ್ಳುತ್ತಿದ್ದ ಬಹುತೇಕ ಪ್ರಮುಖ ನಾಟಕಗಳಲ್ಲಿ ಪ್ರಥ್ವಿರಾಜ್ ಪ್ರಮುಖ ಪಾತ್ರ ವಹಿಸುತ್ತಿದ್ದರೆನ್ನುವುದು ಇನ್ನೊಂದು ವಿಶೆಷ. ಮುಂದೆ ಪ್ರಥ್ವಿರಾಜ್ ಪುತ್ರ ಶಮ್ಮಿ ಕಪೂರ್ ಹಾಗೂ ಅವರ ಪತ್ನಿ ಹುಟ್ಟು ಹಾಕಿದ ಇಂಡಿಯನ್ ಷೇಕ್ಸ್ ಪಿಯರ್ ನಾಟಕ ತಂಡಒಂದಿಗೆ ಪ್ರಥ್ವಿ ಥಿಯೇಟರ್ಸ್ ವಿಲೀನಹೊಂದಿತು.
    ಮುಂದೆ ಪುನಹ ಚಲನಚಿತ್ರ ರಂಗಕ್ಕೆ ಮರಳಿದ ಪ್ರಥ್ವಿರಾಜ್ ”ಮೊಘಲ್-ಎ-ಅಜ಼ಮ್”, ”ಹರಿಶ್ಚಂದ್ರ ತಾರಾಮತಿ”, ” ,”ಸಿಕಂದರ್-ಎ-ಅಜ಼ಮ್”, ”ಕಲ್ ಆಜ್ ಔರ್ ಕಲ್” ಇವೇ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ೧೯೬೯-೭೦ ರಲ್ಲಿ ಬಿಡುಗಡೆಯಾದ ಪಂಜಾಬಿ ಚಿತ್ರ ”ನಾನಕ್ ನಾಮ್ ಜಿಹಾಜ಼್ ಹೈ” ಎನ್ನುವ ಧಾರ್ಮಿಕ ಚಿತ್ರದಲ್ಲಿಯೂ ಪ್ರಥ್ವಿರಾಜ್ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು ಅದೇ ಮುಂದೆ ”ನಾನಕ್ ದುಃಖಿಯಾ ಸಬ್ ಸನ್ಸಾರ್”  ಹಾಗೂ ”ಮೇರೇ ಮಿತ್ರನ್” ಚಿತ್ರಗಳಲ್ಲಿಯೂ ಅವರು ಅಭಿನಯಿಸುವಂತಾಯಿತು.
    ಪ್ರಥ್ವಿರಾಜ್ ರವರ ಈ ಎಲ್ಲ ಅಮೋಘ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಅನೇಕ ಗೌರವ-ಪ್ರಶಸ್ತಿಗಳು ಸಂದವು. ಅವುಗಳಲ್ಲಿ ೧೯೫೪ ರಲ್ಲಿ ನೀಡಲಾದ ಅಂಗೀತ ನಾಟಕ ಅಕಾಡಮಿ ಫೆಲೋಷಿಪ್, ೧೯೬೯ ರಲ್ಲಿ ಭರತ ಸರ್ಕಾರದಿಂದ ಕೊಡಮಾಡಿದ ಪದ್ಮಭೂಷಣ ಪ್ರಶಸ್ತಿಗಳು ಮತ್ತು ೧೯೭೧ರಲ್ಲಿ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಪಾತ್ರರಾಗಿದ್ದ ಪ್ರಥ್ವಿರಾಜ್ ಕಪೂರ್ ೧೯೭೨ ಮೇ ೨೯ ರಂದು ತಮ್ಮ ೬೭ನೇ ವರ್ಷದಲ್ಲಿ ಇಹಲೋಕವನ್ನು ತ್ಯಜಿಸಿದರು

ನಮ್ಮಲ್ಲಿನ ಸ್ಥಳ ಪುರಾಣಗಳು (Myths)

ಕೊಲ್ಲೂರು(Kollur)
    ಪರಶುರಾಮನ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ (ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ') ಒಂದಾದ ಕೊಲ್ಲೂರು ಕುಂದಾಪುರ ತಾಲ್ಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿ, ದಟ್ಟವಾದ ಕಾನನದ ನಡುವೆ ನೆಲೆಸಿಹ ಮೂಕಾಂಬಿಕೆ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಸಹಸ್ರ ಸಹಸ್ರ ಭಕ್ತರನ್ನು ಹೊಂದಿರುವ ಜಗನ್ಮಾತೆ, ಶ್ರೀ ಮೂಕಾಂಬಿಕೆ.
    ಬಹಳ ವರ್ಷಗಳ ಹಿಂದೆ ಈಗಿನ ಕೊಲ್ಲೂರು ಇರುವಲ್ಲಿ ದಟ್ಟವಾದ ಕಾಡು ಇತ್ತು. ಆ ದಟ್ತ ಕಾನನದ ಮದ್ಯೆ ಹರಿಯುತ್ತಿದ್ದ ಸೌಪರ್ಣಿಕಾ ನದಿಯ ತೀರದಲ್ಲಿ ಕೋಲ ಮಹರ್ಷಿ ಎನ್ನುವ ಮಹಾ ತಪಸ್ವಿಗಳು ಪರ್ಣಕುಟೀರವನ್ನು ಸ್ಥಾಪಿಸಿ ತಮ್ಮ ತಪೋ ಜೀವನವನ್ನು ಸಾಗಿಸುತ್ತಿದ್ದರು. ಅವರ ಆಶ್ರಮದಲ್ಲಿದ್ದ ಹಸುವೊಂದು ಅಲ್ಲಿನ ಅರಣ್ಯ ಮದ್ಯದಲ್ಲಿ ಉದ್ಭವವಾಗಿದ್ದ ಕಲ್ಲೊಂದಕ್ಕೆ ದಿನವೂ ಹಾಲೆರೆದು ಬರುತ್ತಿತ್ತು. ಅದನ್ನು ನೋಡಿದ ಕೋಲ ಮಹರ್ಷಿಗಳು ತಾವು ಆ ಕಲ್ಲಿಗೆ ದಿನನಿತ್ಯ ಪೂಜೆ ಸಲ್ಲಿಸಲಾರಂಭಿಸಿದರು. ಅದಾಗಿ ಬಳಿಕ ಶಿವನ ಕುರಿತಾಗಿ ತಪಸ್ಸು ಕೈಗೊಂಡ ಕೋಲ ಮಹಷಿಗಳು ತಾವು ವಾಸಿಸುತ್ತಿದ್ದ ಸ್ಥಳವು ತನ್ನ ಹೆಸರಿನಲ್ಲಿಯೇ ಉಳಿಯಬೇಕೆಂದು ಶಿವನಲ್ಲಿ ಪ್ರಾರ್ಥಿಸಿದರು. ಆ ಪ್ರಕಾರವಾಗಿ ಆ ಸ್ಥಳಕ್ಕೆ ”ಕೋಲಾಪುರ” ಎನ್ನುವ ಹೆಸರಾಯಿತು.
    ಮತ್ತೆ ಹಲವು ವರ್ಷಗಳು ಉರುಳಿದವು. ಅದ್ದಗ ಕಂಹಾಸುರನೆನ್ನುವ ಅಸುರನೊಬ್ಬಬಲಾದ್ಯನಾಗಿ ಅಲ್ಲಿಗೆ ಬಂದನಲ್ಲದೆ ಕೋಲ ಮಹರ್ಷಿ ಸೇರಿದಂತೆ ಅಲ್ಲಿ ನೆಲೆಸಿದ್ದ ಋಷಿ ಮುನಿಗಳಿಗೆ ತೀವ್ರ ತೊಂದರೆಕೊಡಲು ಪ್ರಾರಂಭಿಸಿದ. ಅದಾಗ ತ್ರಿಮೂರ್ತಿಗಳ ಮೊರೆಹೋದ ಋಷಿಗಳು ಅಸುರನಿಂದ ತಮ್ಮನ್ನು ರಕ್ಷಿಸುವಂತೆ ಮೊರೆಯಿಟ್ಟರು. ಆ ಅವರ ಬೇಡಿಕೆಗೆ ಮಣಿದ ತ್ರಿಮೂರ್ತಿಗಳು ತ್ರಿಪುರ ಭೈರವಿಯನ್ನು ಸೃಷ್ಟಿಸಿ ಅಸುರನ ವಧೆಗಾಗಿ ಕಳಿಸಿದರು. ಅದನ್ನು ತಿಳಿದ ಅಸುರ ಕಂಹಾಸುರನು ಋಷ್ಯಮೂಕಾಚಲವೆಂಬಲ್ಲಿಗೆ ಓಡಿಹೋಗಿ ತಪಸ್ಸಿನಲ್ಲಿ ನಿರತನಾದನು.
    ಅದಾಗಿ ಬಹಳ ವರ್ಷಗಳು ಗತಿಸಿದ ನಂತರ ಋಷ್ಯಮೂಕಾಚಲದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಅಸುರನಿಗೆ ಪರಮೇಶ್ವರನೊಲಿವ ವೇಳೆ ಸನ್ನಿಹಿತವಾಯಿತು. ಈ ವಿಚಾರವನ್ನರಿತ ಋಷಿಗಳು ಪರಮೇಶ್ವರಿಯನ್ನ ಪ್ರಾರ್ಥಿಸಿ ಶಿವನು ದರ್ಶನ ನೀಡುವ ಸಮಯದಲ್ಲಿ ನೀನು ಅಸುರನ ನಾಲಿಗೆಯ ಮೇಲೆ ನೆಲೆಸಿ ಆತನನ್ನು ಮೂಕನನ್ನಾಗಿಸಬೇಕೆಂದು ಪ್ರಾರ್ಥಿಸಿಕೊಂಡರು. ಅದರಂತೆಯೇ ನಡೆದುಕೊಂಡ ದೇವಿ ಅಸುರನು ವರ ಕೇಳುವುದನ್ನು ತಪ್ಪಿಸಿ ಅವನು ಮೂಕಾಸುರನಾಗುವಂತೆ ಮಾಡಿದಳು. ಮುಂದೆ ಋಷಿಗಳಿಂದಲೇ ನಾನು ಮೂಕನಾದುದೆಂದು ಅರಿತ ಮೂಕಾಸುರ ಪುನಃ ಋಷಿಗಳಿಗೆ ಉಪಟಳ ನೀಡಲು ಆರಂಭಿಸಿದ. ಅದಾಗ ಪುನಃ ದೇವಿಯ ಮೊರೆಹೋದ ಋಷಿಗಳು ಅಸುರನಿಂದ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳಲು ದೇವಿಯು ಉಗ್ರ ಶಕ್ತಿ ಸ್ವರೂಪಿಣಿಯಾಗಿ ಅವತರಿಸಿ ಮೂಕಾಸುರನನ್ನು ಕೊಂದು ಮೂಕಾಂಬಿಕೆ ಎನಿಸಿದಳು. ರಕ್ಕಸ ಸಂಹಾರದ ಬಳಿಕ ಋಶಿಗಳೆಲ್ಲರೂ ಸೇರಿ ದೇವಿಗೆ ನೀನು ತಮ್ಮಲ್ಲಿಯೇ ನೆಲೆಸಬೇಕೆಂದು ಬೇಡಿಕೊಂಡಾಗ ದೇವಿ ಅದನ್ನು ಸಂತೋಷದಿಂದೊಪ್ಪಿ ಅಲ್ಲಿಯೇ ನೆಲೆಸಿದಳು.
    ಮುಂದೆ ಆ ಸ್ಥಳಕ್ಕೆ ಕೋಲಾಪುರ ಎಂತಲೂ ದೇವಿಗೆ ಮೂಕಾಂಬಿಕೆ ಎಂತಲೂ ಹೆಸರಾಯಿತು. ಇದೀಗ ಜನರ ಆಡುಭಾಷೆಯಲ್ಲಿ ಊರು ಕೊಲ್ಲೂರು ಆಗಿದೆ. ಕೊಲ್ಲೂರ ಮೂಕಾಂಬೆ ದೇಶದೆಲ್ಲೆಡೆ ವಿಖ್ಯಾತ ಶಕ್ತಿದೇವತೀನಿಸಿ ಸಾವಿರಾರು ಭಕ್ತಕೋಟಿಯನ್ನು ಆಶೀರ್ವದಿಸಿ ಸಲಹುತ್ತಿದ್ದಾಳೆ. 

Thursday, July 18, 2013

Memories of Rajesh Khanna

ಕಳೆದ ವರ್ಷ ಇದೇ ದಿನ (ಜುಲೈ ೧೮ ೨೦೧೨) ಬಾಲಿವುಡ್ ನ ಪ್ರಥಮ ಬಾದ್ ಷಾಹ್ ಎನಿಸಿಕೊಂಡ ರಾಜೇಶ್ ಖನ್ನಾ ನಮ್ಮನ್ನೆಲ್ಲ ಅಗಲಿದರು, ಅವರ ಭೌತಿಕ ದೇಹ ನಮ್ಮನ್ನೆಲ್ಲ ಅಗಲಿದರೂ ಅವರ ಅಭಿನಯದ ಸಾರ್ವಕಾಲಿಕ ಚಿತ್ರಗಳಿಂದ ನಮ್ಮೆಲ್ಲರ ಹೃದಯದಲ್ಲಿ ಸದಾ ಕಾಲ ಜೀವಿಸಿರುವರು. ಅವರ ಹಾಡುಗಳನ್ನು ಒಮ್ಮೆ ಗುನುಗುತ್ತಾ ಅವರ ಆತ್ಮಕ್ಕೆ ಚಿರಶಾಂತಿಯನ್ನು ಬಯಸೋಣ.......



ಬೆಳ್ಳಿ ತೆರೆಯ ಮೇಲೆ ಮಿಲ್ಕಾ ಓಟ (Milka run on Silver screen)

     ಭಾರತೀಯ ಸಿನಿಮಾ ರಂಗ ತನ್ನ ಶತಮಾನೊತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಏನಾದರೂ ಬರೆಯೋಣವೆಂದು ಕುಳಿತಾಗಲೇ ಭಾರತೀಯ ಅಥ್ಲೀಟ್ Flying sikh ಎಂದೇ ಖ್ಯಾತನಾದ ಮಿಲ್ಕಾ ಸಿಂಗ್ ನ ಜೀವನದ ಕುರಿತಾದ ಸಿನಿಮಾ ”ಭಾಗ್ ಮಿಲ್ಕಾ ಭಾಗ್” ಬಿಡುಗಡೆಯಾಗಿ ಬಹಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ.
    ಕ್ರೀಡೆ, ಕ್ರೀಡಾ ಪಟುಗಳಾ ಜೀವನದ ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಸಿನಿಮಾಗಳೆ ಅಲ್ಲೊಂದು-ಇಲ್ಲೊಂದೆನ್ನಬೇಕು. ”ಚೆಕ್ ದೇ ಇಂಡಿಯಾ”, ”ಜನ್ನತ್”, ”ಫೆರಾರಿ ಕೆ ಸವಾರಿ” ಇಂತಹಾ ಕೆಲ ಚಿತ್ರಗಳನ್ನು ಬಿಟ್ತರೆ ಅಂತಹಾ ಹೆಸರುಗಳಾವುದೂ ಕಾಣಿಸಲಾರದು, ಇದೀಗ ಬಂದಿರುವ ”ಭಾಗ್ ಮಿಲ್ಕಾ ಭಾಗ್” ಅದಕ್ಕೊಂದು ಹೊಸ ಸೇರ್ಪಡೆ ಮತ್ರವಾಗಿರದೆ ಬಹಳ ಒಳ್ಳೆಯ ಕಥವಸ್ತುವನ್ನೊಳಗೊಂಡ ಚಿತ್ರವಾಗಿರುವುದು ವಿಶೇಷ. ಕೆಲ ವರ್ಷಗಳಾ ಹಿಂದೆ ”ರಂಗ್ ದೇ ಬಸಂತಿ” ಯಂತಹಾ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಚಿತ್ರದ ನಿರ್ದೇಶನ ಮಾಡಿದ್ದು, ಪ್ರಸೂನ್ ಜೋಷಿ ಚಿತ್ರ್ಕಥೆ ಬರೆದಿದ್ದಾರೆ. ಮಿಲ್ಕಾನ ಜೀವದಲ್ಲಿ ಘಟಿಸಿದ ಪ್ರಮುಖ ಘಟನೆಗಳನ್ನಾಧರಿಸಿ ತಯಾರಾದ ಈ ಚಿತ್ರ ಕಥೆ ಸರಾಗವಾಗಿ ಸಾಗುವಂತಹುದಾದರೂ ಪದಗಳಲ್ಲಿ ಹಿಡಿದಿಡಲಾಗದ ಹಲವು ವೈಶಿಷ್ಟ್ಯಗಳು ಚಿತ್ರದಲ್ಲಿವೆ. ಮಿಲ್ಕಾ ಸಿಂಗ್ ಪಾತ್ರಧಾರಿಯಾದ ಫರ್ಹಾನ್ ಅಖ್ತರ್ ಬಹು ಒಳ್ಳೆಯ ಅಭಿನಯ ನೀಡುವಿದರೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ.
    uಒಟ್ಟಾರೆಯಾಗಿ ಈ ಮೊದಲೇ ಹೇಳಿದಂತೆ ನಮ್ಮಲ್ಲಿ ಕ್ರೀಡೆಗಳ ಕುರಿತಾದ ಚಿತ್ರಗಳ ಸಂಖ್ಯೆಯೆ ತೀರಾ ಕಡಿಮೆ ಅದರಲ್ಲಿಯೂ ಗಮನ ಸೆಳೆಯುವಂತಹುಗಳು ಬಹಳ ಕಡಿಮೆ ಅಂತಹಾ ಎಲ್ಲಾ ಚಿತ್ರಗಳಾ ಪೈಕಿ ” ಭಾಗ್ ಮಿಲ್ಕಾ ಭಾಗ್” ಪ್ರೇಕ್ಷಕರನ್ನು ತಲುಪುವುದರೊಂದಿಗೆ ಸದಾಕಾಲ ನೆನಪಿನಲ್ಲುಳಿವ ಚಿತ್ರವಿದಾಗಿದೆ.
ಮಿಲ್ಕಾ ಸಿಂಗ್: ಒಂದು ಪರಿಚಯ
    ಭಾರತೀಯ ಅಥ್ಲೀಟ್ ಗಳ ಪೈಕಿ ಅತ್ಯಂತ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಮಿಲ್ಕಾ ಸಿಂಗ್. ೧೯೬೦ ರ ರೋಮ್ ಒಲಂಪಿಕ್ ಹಾಗೂ ೧೯೬೪ ರ ಟೋಕೊಯೋ ಒಲಂಪಿಕ್ ನಲ್ಲಿ ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಈ ಕ್ರೀಡಾಪಟುವಿಗೆ Flying sikh ಎನ್ನುವ ಅನ್ವರ್ಥ ನಾಮವಿದೆ. ೧೯೩೫ ರ ಅಕ್ಟೋಬರ್ ೮ ರಂದು ಹುಟ್ಟಿದ ಮಿಲ್ಕಾ ಸಿಂಗ್ ೧೯೪೭ ರ ಸ್ವಾತಂತ್ರ್ಯ ಸಂದರ್ಭದಲ್ಲಿ ಉಂಟಾದ ಭಾರತ ಪಾಕ್ ವಿಭಜನೆಯ ಸಮಯ ಭಾರತಕ್ಕೆ ವಲಸೆ ಬಂದರು. ದೇಶ ವಿಭಜನೆಯ ಸಂದರ್ಭದಲ್ಲುಂಟಾದ ನರಮೇಧದಲ್ಲಿ ಮಿಲ್ಕಾರ ತಂದೆ ತಾಯಿಗಳನ್ನು ಖೂನಿ ಮಾಡಲಾಗಿತ್ತು. (ಅದಾಗ ಮಿಲ್ಕಾಗೆ ಕೇವಲ ೧೨ ರ ಪ್ರಾಯ!) ಅದಾದ ಬಳಿಕ ಭಾರತೀಯ ಸೇನೆಗೆ ಸೇರಿದ ಮಿಲ್ಕಾ ಅಲ್ಲಿಯೇ ಉತ್ತಮ ಅಥ್ಲೀಟ್ ಆಗಿ ರೂಪುಗೊಂಡರು.
    ೧೯೫೬ ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಒಲಂಪಿಕ್ ನಲ್ಲಿ ಭಾಗವಹಿಸಿದ ಮಿಲ್ಕಾ ಸಿಂಗ್ ಅಲ್ಲಿಂದ ತಮ್ಮ ಅಂತರಾಷ್ಟ್ರೀಯ ಕ್ರೀಡಾ ವೃತ್ತಿಜೀವನವನ್ನು ಆರಂಭ ಮಾಡಿದರು. ೧೯೫೮ ರಲ್ಲಿ ಬ್ರಿಟನ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದರು(ಸ್ವತಂತ್ರ ಭಾರತದ ಮೊಟ್ಟ ಮೊದಲ ಸ್ವರ್ಣ ಪದಕ ವಿಜೇತರೆಂಬ ಕೀರ್ತಿ ಇವರದಾಯ್ತು). ಅದೇ ವರ್ಷ ಟೋಕಿಯೋದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ೨೦೦ ಹಾಗೂ ೪೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಸ್ವರ್ಣ ಪದಕ ವಿಜೇತರಾದರು.  ಅದೇ ೧೯೫೮ ರಲ್ಲಿ ಪಾಕಿಸ್ತಾನದಲ್ಲಿ ನಡೆದ ಒಂದು ಕ್ರೀಡ ಸ್ಪರ್ಧೆಯಲ್ಲಿ ಅಲ್ಲಿನ ಎಲ್ಲಾ ಕ್ರೀಡಾಳುಗಳನ್ನು ಹಿಂದಿಕ್ಕಿ ಜಯ ಗಳಿಸುವ ಮೂಲಕ ”ಹಾರುವ ಸಿಖ್(Flying sikh)  ೪೦೦ ಮೀತರ್ ಓಟ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನವರೆಗೂ ಬಂದಿದ್ದರಾದರೂ ಪದಕ ಗಳಿಸುವಲ್ಲಿ ವಿಫಲರಾದರು.
    ಕ್ರೀಡಾ ವೃತ್ತಿ ಜೀವನದ ನಿವೃತ್ತಿಯ ಬಳಿಕ ಪಂಜಾಬ್ ರಾಜ್ಯ ಕ್ರೀಡಾ ಇಲಾಖೆಯ್ ನಿರ್ದೇಶಕರಾಗಿ ದುಡಿಯುತ್ತಿರುವ ಮಿಲ್ಕಾ ಸಿಂಗ್ ರವರ ಜೀವಮಾನದ ಸಾ    ಧನೆಯನ್ನು ಪರಿಗಣಿಸಿ ೧೯೫೯ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.