Thursday, July 18, 2013

ಬೆಳ್ಳಿ ತೆರೆಯ ಮೇಲೆ ಮಿಲ್ಕಾ ಓಟ (Milka run on Silver screen)

     ಭಾರತೀಯ ಸಿನಿಮಾ ರಂಗ ತನ್ನ ಶತಮಾನೊತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಏನಾದರೂ ಬರೆಯೋಣವೆಂದು ಕುಳಿತಾಗಲೇ ಭಾರತೀಯ ಅಥ್ಲೀಟ್ Flying sikh ಎಂದೇ ಖ್ಯಾತನಾದ ಮಿಲ್ಕಾ ಸಿಂಗ್ ಜೀವನದ ಕುರಿತಾದ ಸಿನಿಮಾಭಾಗ್ ಮಿಲ್ಕಾ ಭಾಗ್ಬಿಡುಗಡೆಯಾಗಿ ಬಹಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ.
    ಕ್ರೀಡೆ, ಕ್ರೀಡಾ ಪಟುಗಳಾ ಜೀವನದ ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಸಿನಿಮಾಗಳೆ ಅಲ್ಲೊಂದು-ಇಲ್ಲೊಂದೆನ್ನಬೇಕು. ”ಚೆಕ್ ದೇ ಇಂಡಿಯಾ”, ”ಜನ್ನತ್”, ”ಫೆರಾರಿ ಕೆ ಸವಾರಿಇಂತಹಾ ಕೆಲ ಚಿತ್ರಗಳನ್ನು ಬಿಟ್ತರೆ ಅಂತಹಾ ಹೆಸರುಗಳಾವುದೂ ಕಾಣಿಸಲಾರದು, ಇದೀಗ ಬಂದಿರುವಭಾಗ್ ಮಿಲ್ಕಾ ಭಾಗ್ಅದಕ್ಕೊಂದು ಹೊಸ ಸೇರ್ಪಡೆ ಮತ್ರವಾಗಿರದೆ ಬಹಳ ಒಳ್ಳೆಯ ಕಥವಸ್ತುವನ್ನೊಳಗೊಂಡ ಚಿತ್ರವಾಗಿರುವುದು ವಿಶೇಷ. ಕೆಲ ವರ್ಷಗಳಾ ಹಿಂದೆರಂಗ್ ದೇ ಬಸಂತಿಯಂತಹಾ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ರಾಕೇಶ್ ಓಂಪ್ರಕಾಶ್ ಮೆಹ್ರಾ ಚಿತ್ರದ ನಿರ್ದೇಶನ ಮಾಡಿದ್ದು, ಪ್ರಸೂನ್ ಜೋಷಿ ಚಿತ್ರ್ಕಥೆ ಬರೆದಿದ್ದಾರೆ. ಮಿಲ್ಕಾನ ಜೀವದಲ್ಲಿ ಘಟಿಸಿದ ಪ್ರಮುಖ ಘಟನೆಗಳನ್ನಾಧರಿಸಿ ತಯಾರಾದ ಚಿತ್ರ ಕಥೆ ಸರಾಗವಾಗಿ ಸಾಗುವಂತಹುದಾದರೂ ಪದಗಳಲ್ಲಿ ಹಿಡಿದಿಡಲಾಗದ ಹಲವು ವೈಶಿಷ್ಟ್ಯಗಳು ಚಿತ್ರದಲ್ಲಿವೆ. ಮಿಲ್ಕಾ ಸಿಂಗ್ ಪಾತ್ರಧಾರಿಯಾದ ಫರ್ಹಾನ್ ಅಖ್ತರ್ ಬಹು ಒಳ್ಳೆಯ ಅಭಿನಯ ನೀಡುವಿದರೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ.
    uಒಟ್ಟಾರೆಯಾಗಿ ಮೊದಲೇ ಹೇಳಿದಂತೆ ನಮ್ಮಲ್ಲಿ ಕ್ರೀಡೆಗಳ ಕುರಿತಾದ ಚಿತ್ರಗಳ ಸಂಖ್ಯೆಯೆ ತೀರಾ ಕಡಿಮೆ ಅದರಲ್ಲಿಯೂ ಗಮನ ಸೆಳೆಯುವಂತಹುಗಳು ಬಹಳ ಕಡಿಮೆ ಅಂತಹಾ ಎಲ್ಲಾ ಚಿತ್ರಗಳಾ ಪೈಕಿಭಾಗ್ ಮಿಲ್ಕಾ ಭಾಗ್ಪ್ರೇಕ್ಷಕರನ್ನು ತಲುಪುವುದರೊಂದಿಗೆ ಸದಾಕಾಲ ನೆನಪಿನಲ್ಲುಳಿವ ಚಿತ್ರವಿದಾಗಿದೆ.
ಮಿಲ್ಕಾ ಸಿಂಗ್: ಒಂದು ಪರಿಚಯ
    ಭಾರತೀಯ ಅಥ್ಲೀಟ್ ಗಳ ಪೈಕಿ ಅತ್ಯಂತ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಮಿಲ್ಕಾ ಸಿಂಗ್. ೧೯೬೦ ರೋಮ್ ಒಲಂಪಿಕ್ ಹಾಗೂ ೧೯೬೪ ಟೋಕೊಯೋ ಒಲಂಪಿಕ್ ನಲ್ಲಿ ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾಪಟುವಿಗೆ Flying sikh ಎನ್ನುವ ಅನ್ವರ್ಥ ನಾಮವಿದೆ. ೧೯೩೫ ಅಕ್ಟೋಬರ್ ರಂದು ಹುಟ್ಟಿದ ಮಿಲ್ಕಾ ಸಿಂಗ್ ೧೯೪೭ ಸ್ವಾತಂತ್ರ್ಯ ಸಂದರ್ಭದಲ್ಲಿ ಉಂಟಾದ ಭಾರತ ಪಾಕ್ ವಿಭಜನೆಯ ಸಮಯ ಭಾರತಕ್ಕೆ ವಲಸೆ ಬಂದರು. ದೇಶ ವಿಭಜನೆಯ ಸಂದರ್ಭದಲ್ಲುಂಟಾದ ನರಮೇಧದಲ್ಲಿ ಮಿಲ್ಕಾರ ತಂದೆ ತಾಯಿಗಳನ್ನು ಖೂನಿ ಮಾಡಲಾಗಿತ್ತು. (ಅದಾಗ ಮಿಲ್ಕಾಗೆ ಕೇವಲ ೧೨ ಪ್ರಾಯ!) ಅದಾದ ಬಳಿಕ ಭಾರತೀಯ ಸೇನೆಗೆ ಸೇರಿದ ಮಿಲ್ಕಾ ಅಲ್ಲಿಯೇ ಉತ್ತಮ ಅಥ್ಲೀಟ್ ಆಗಿ ರೂಪುಗೊಂಡರು.
    ೧೯೫೬ ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಒಲಂಪಿಕ್ ನಲ್ಲಿ ಭಾಗವಹಿಸಿದ ಮಿಲ್ಕಾ ಸಿಂಗ್ ಅಲ್ಲಿಂದ ತಮ್ಮ ಅಂತರಾಷ್ಟ್ರೀಯ ಕ್ರೀಡಾ ವೃತ್ತಿಜೀವನವನ್ನು ಆರಂಭ ಮಾಡಿದರು. ೧೯೫೮ ರಲ್ಲಿ ಬ್ರಿಟನ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದರು(ಸ್ವತಂತ್ರ ಭಾರತದ ಮೊಟ್ಟ ಮೊದಲ ಸ್ವರ್ಣ ಪದಕ ವಿಜೇತರೆಂಬ ಕೀರ್ತಿ ಇವರದಾಯ್ತು). ಅದೇ ವರ್ಷ ಟೋಕಿಯೋದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ೨೦೦ ಹಾಗೂ ೪೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಸ್ವರ್ಣ ಪದಕ ವಿಜೇತರಾದರುಅದೇ ೧೯೫೮ ರಲ್ಲಿ ಪಾಕಿಸ್ತಾನದಲ್ಲಿ ನಡೆದ ಒಂದು ಕ್ರೀಡ ಸ್ಪರ್ಧೆಯಲ್ಲಿ ಅಲ್ಲಿನ ಎಲ್ಲಾ ಕ್ರೀಡಾಳುಗಳನ್ನು ಹಿಂದಿಕ್ಕಿ ಜಯ ಗಳಿಸುವ ಮೂಲಕಹಾರುವ ಸಿಖ್(Flying sikh)  ೪೦೦ ಮೀತರ್ ಓಟ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನವರೆಗೂ ಬಂದಿದ್ದರಾದರೂ ಪದಕ ಗಳಿಸುವಲ್ಲಿ ವಿಫಲರಾದರು.
    ಕ್ರೀಡಾ ವೃತ್ತಿ ಜೀವನದ ನಿವೃತ್ತಿಯ ಬಳಿಕ ಪಂಜಾಬ್ ರಾಜ್ಯ ಕ್ರೀಡಾ ಇಲಾಖೆಯ್ ನಿರ್ದೇಶಕರಾಗಿ ದುಡಿಯುತ್ತಿರುವ ಮಿಲ್ಕಾ ಸಿಂಗ್ ರವರ ಜೀವಮಾನದ ಸಾ    ಧನೆಯನ್ನು ಪರಿಗಣಿಸಿ ೧೯೫೯ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


No comments:

Post a Comment