Sunday, July 14, 2013

ಕಣ್ಮುಚ್ಚಿದ ’ಪ್ರಾಣ’ ಮತ್ತು ಮರೆಯಲಾಗದ ನಾಗಭೂಷಣ

    ಕೇವಲ ೨೦ ದಿನಗಳ ಅಂತರದಲ್ಲಿ ಭಾರತೀಯ ಚಿತ್ರರಂಗ ಇಬ್ಬರು ಗಣ್ಯರನ್ನು ಕಳೆದುಕೊಂಡಿದೆ, ಅದರಲ್ಲಿ ಒಬ್ಬರು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಖಳ ನಟ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ಪ್ರಾಣ್(July 12) ಮತ್ತೊಬ್ಬ ಕನ್ನಡ ಚಿತ್ರರಂಗ ಕಂಡ ಅಪರೂಪದ ಸಹ ನಿರ್ದೇಶಕ, ಸಂಭಾಷಣಾಕಾರ ಕುಣಿಗಲ್ ನಾಗಭೂಷಣ್(June 23). ಇಬ್ಬರಿಂದಲೂ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಂದಿದೆಯೆಂದರೆ ತಪ್ಪಾಗಲಾರದು. ೯೩ ವರ್ಷದವರಾದ ಪ್ರಾಣ್ ೧೯೪೦ರ ದಶಕದಿಂದ ೨೦೦೭ ರವರೆಗೆ ಸರಿಸುಮಾರು ೪೦೦ ಚಿತ್ರಗಳಾಲ್ಲಿ ಅಭಿನಯಿಸಿದ್ದರೆ, ಕುಣಿಗಲ್ ನಾಗಭೂಷಣ್ ೧೯೬೧ ರಲ್ಲಿ ತೆರೆಕಂಡ ನಾಂದಿ ಚಿತ್ರಕ್ಕೆ ಸಹನಿರ್ದೇಶಕರಾಗುವುದರೊಂದಿಗೆ ತಮ್ಮ ಚಿತ್ರಜೀವನವನ್ನಾರಂಭಿಸಿ ಸಿಂಹ ಜೋಡಿ ಚಿತ್ರದ ಮೂಲಕ ಸಂಭಾಷಣಾಕಾರರಾಗಿ ಪರಿಚಯವಾಗಿ ಸುಮಾರು ೨೫೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
    ’ಖಾಂದಾನ್, ಮಧುಮತಿ, ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ, ಉಪ್ಕಾರ್, ಜಾನಿ ಮೇರಾ ನಾಮ್, ಶಹೀದ್, ಬೀ ಇಮಾಮ್ ಇವೇ ಮುಂತಾದ ಚಿತ್ರಗಳಲ್ಲಿ ಮುಖ್ಯ ಪೋಷಕ ನಟನಾಗಿ ಅಭಿನಯಿಸಿದ್ದ ಪ್ರಾಣ್ ಹಿಂದಿ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಖಳನಟರೆಂದು ಹೆಸರು ಮಾಡಿದ್ದರು. ೧೯೯೭ರಲ್ಲಿ ಬಿಡುಗಡೆಯಾದ ಮೃತ್ಯುದಾತಾ ಇವರ ಅಭಿನಯದ ಕಡೆಯ ಚಿತ್ರವಾಗಿತ್ತು. ಒಟ್ಟಾರೆ ೫೦-೬೦ರ ದಶ್ಕದ ಬಹುತೇಕ ಹಿಟ್ ಚಿತ್ರಗಳಲ್ಲಿ ಪ್ರಾಣ್ ಕ್ರಿಶನ್ ಸಿಕಂದ್ ರವರ ಅಭಿನಯವನ್ನು ಕಾಣುತ್ತೇವೆ.
   ಇಲ್ಲಿ ನಾವು ಹೇಳಬೇಕಾದ ಇನ್ನೊಂದು ಸಂಗತಿಯೆಂದರೆ ಪ್ರಾಣ್ ಹಾಗೂ ಬಿಗ್ ಬಿ ಅಮಿತಾಬ್ ಜೋಡಿಯ ಬಗ್ಗೆ. ಅಮಿತಾಬ್ ವೃತ್ತಿಜೀವನದ ಮೈಲಿಗಲ್ಲೆನಿಸಿದ ಜಂಝೀರ್ ನಲ್ಲಿನ ಪ್ರಾಣ್ (ಶೇರ್ ಖಾನ್) ಪಾತ್ರವನ್ನು ಜನರೆಂದಿಗೂ ಮರೆಯಲು ಸಾದ್ಯವಿಲ್ಲ. ಅಲ್ಲಿಂದ ಆರಂಭವಾದ ಪ್ರಾಣ್ - ಅಮಿತಾಬ್ ಜೋಡಿ ಮುಂದೆ ಸಾಕಷ್ಟು ಸಮಯ ಮುಂದುವರಿದುಕೊಂಡು ಬಂದಿತು. ಅಂತೆಯೆ ಕನ್ನಡದಲ್ಲಿ ಕೆ.ವಿ. ಜಯರಾಮ್ ನಿರ್ದೇಷಿಸಿದ ಹೊಸರಾಗ ಎನ್ನುವ ಚಿತ್ರದಲ್ಲಿ ಸಹ ಇವರು ಅಭಿನಯಿಸಿದ್ದರು. ಚಿತರ್ರಂಗದಲ್ಲಿನ ಇವರ ಎಲ್ಲ ಅಭಿನಯ ಹಾಗೂ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ೨೦೦೧ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ, ೨೦೧೩ ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಅಲ್ಲದೆ ಬಾರಿ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಫಿಲ್ಮ್ ಫೇರ್ ಲೈಪ್ಫ಼್ ತೈಮ್ ಅಚೀವ್ಮೆಂಟ್ ಅವಾರ್ಡ್ ಗೆ ಸಹ ಇವರು ಪಾತ್ರರಾಗಿದರು.
    ಇನ್ನು ಕುಣಿಗಲ್ ನಾಗಭೂಷಣ್ ಕನ್ನಡದ ಮಟ್ಟಿಗೆ ಅತ್ಯಂತ ಪ್ರಮುಖ ಸಂಭಾಷಣಾಕಾರರು. ಆಶೀರ್ವಾದ ಮತ್ತು ಬಾಳು ಜೇನು ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ನಾಗಭೂಷಣ್ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ರವರನ್ನು ಬೆಳ್ಳಿತೆರೆಗೆ ಪರಿಚಯಿಸಿದವರು ಎನ್ನುವುದು ಮುಖ್ಯ ಸಂಗತಿ. ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಶ್, ಶಿವರಾಜ್ ಕುಮಾರ್, ಜಗ್ಗೇಶ್ ಇನ್ನೂ ಮೊದಲಾದವರ ಚಿತ್ರಗಳಿಗೆ ಕೆಲಸ ಮಾಡಿದ್ದ ನಾಗಭೂಷಣ್ ರವರ ಗೌರಿ ಗಣೇಶ ಹಾಗೂ ಯಾರಿಗೂ ಹೇಳ್ಬೇಡಿ ಚಿತ್ರಗಳ ಸಂಭಾಷಣೆಗಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

No comments:

Post a Comment