Sunday, July 14, 2013

ಮರೆಯಾದರೂ ಮರೆಯಬಾರದ Technology: Telegram

    ಒಂದು ಕಾಲದಲ್ಲಿ ಜನಸಾಮಾನ್ಯರ ತುರ್ತು ಸನ್ನಿವೇಶಗಳಲ್ಲಿ ಅವಶ್ಯಕ ಸಾಧನವಾಗಿದ್ದ ಟೆಲಿಗ್ರಾಂ ಇಂದು ಮದ್ಯರಾತ್ರಿಯಿಂದ ಸ್ತಬ್ದವಾಗಲಿದೆ! ಹೌದು ಇಂದಿನ ಮೊಬೈಲ್, ಇಂಟರ್ ನೆಟ್, ಮೇಲ್ ಗಳ ಭರಾಟೆಯ ಜಮಾನಾದಲ್ಲಿ ಟೆಲಿಗ್ರಾಂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡು ಇತಿಹಾಸದ ಪುಟ ಸೇರುತ್ತಿದೆ. ದೇಶದಲ್ಲಿ ಟೆಲಿಗ್ರಾಂ ಬಳಕೆದಾರರ ಸ್ಂಖ್ಯೆ ತೀರಾ ಕಡಿಮೆಯಾದುದರಿಂದ ಜುಲೈ ೧೫ ರಿಂದ ಸೇವೆಯನ್ನು ಸ್ಥಗಿತಗೊಳಿಸಲು ಭಾರತ್ ಸಂಚಾರ್ ನಿಗಮ ನಿರ್ಧರಿಸಿದೆ. ಹಿನ್ನೆಲೆಯಲ್ಲಿ ನಮ್ಮ ವಯೋಮಾನದವರಿಗೆ ಅಷ್ಟಾಗಿ ಪರಿಚಯವೇ ಇರದ ತುರ್ತು ಸಂಪರ್ಕ ಸಾಧನವೊಂದರ ಪರಿಚಯ ಮಾಡಿಕೊಳ್ಳೋಣವೇ?
   
An Old Telegraph  Machine 
ಟೆಲಿಗ್ರಾಂ ಭಾರತಕ್ಕೆ ಕಾಲಿಟ್ಟು ಬರೋಬ್ಬರಿ ೧೬೩ ವರ್ಷಗಳಾಗಿವೆ. ಆಧುನಿಕ ಸಂಪರ್ಕ ಕ್ರಾಂತಿಗೂ ಮುನ್ನ ತುರ್ತು ಸಂದೇಶವಾಹಕವಾಗಿದ್ದ ಟೆಲಿಗ್ರಾಂ ವ್ಯವಸ್ಥೆಟೆಲಿಗ್ರಾಫ್ಎನ್ನುವ ಯ್ಂತ್ರದ ಮುಖಾಂತರ ಕಾರ್ಯ ನಿರ್ವಹಿಸುತ್ತದೆ. ಒಂದು ಸ್ಥಳದಲ್ಲಿ ಟೆಲಿಗ್ರಾಫ್ ಯಂತ್ರದ ಮೂಲಕ ಕಳುಹಿಸಲಾದ ಸಂದೇಶವನ್ನು ಇನ್ನೊಂದು ಸ್ಥಳದಲ್ಲಿನ ಯಂತ್ರದ ಮೂಲಕ ಪಡೆದುಕೊಂಡು ಸೂಕ್ತ ವಿಳಾಸಕ್ಕೆ ಅದನ್ನು ತಲುಪಿಸಲಾಗುತ್ತಿತ್ತು. ಯಂತ್ರದ ಮೂಲಕ ಕಳಿಸಿದ ಸಂದೇಶಕ್ಕೆ ಟೆಲಿಗ್ರಾಂ ಎನ್ನಲಾಗುತ್ತಿತ್ತು. ಯುರೋಪಿನಲ್ಲಿ ೧೮ ನೇ ಶತಮಾನದಿಂದಲೂ ಬಳಕೆಯಲ್ಲಿದ್ದ ತಂತ್ರಜ್ಞಾನ ೧೮೫೦ ರಲ್ಲಿ ಭಾರತಕ್ಕೆ ಕಾಲಿರಿಸಿತು. ೧೮೫೦ ರಲ್ಲಿ ಕೋಲ್ಕತ್ತಾ ಹಾಗೂ ಡೈಮಂಡ್ ಪಾರ್ಲರ್ ಮದ್ಯೆ ಪ್ರಪ್ರಥಮ ಬಾರಿಗೆ ಟೆಲಿಗ್ರಾಂ ಅನ್ನು ಕಳುಹಿಸುವ ಪ್ರಯೋಗ ಯಶಸ್ಸು ಕಂಡಿತು. ಇದಾಗಿ ೧೮೫೧ ರಿಂದ ಅಂದಿನ ಬ್ರಿಟೀಷ್ ಸರ್ಕಾರದ ಕೆಲಸಗಳಿಗೆ ಟೆಲಿಗ್ರಾಂ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಯಿತು. ೧೮೫೩ ರಲ್ಲಿ ಪ್ರತ್ಯೇಕ ಟೆಲಿಗ್ರಾಂ ಇಲಾಖೆಯನ್ನು ಸ್ಥಾಪಿಸಿ ಸಾರ್ವಜನಿಕರ ಉಪಯೋಗಕ್ಕೂ ಸೇವೆಯನ್ನು ವಿಸ್ತರಿಸಲಾಯಿತು. ಮುಂದೆ ೧೮೮೫ ರ್ಲಿ ಭಾರತದಲ್ಲಿ ಮೊದಲ ಟೆಲಿಗ್ರಾಫ್ ಕಾಯ್ದೆಯನ್ನು ಜಾರಿ ಮಾಡಲಾಯಿತು. ೧೯೦೨ರಿಂದ ನಿಸ್ತಂತು ಟೆಲಿಗ್ರಂ ಸೇವೆ ದೇಶದಲ್ಲಿ ಬಳಕೆಗೆ ತೆರೆದುಕೊಂಡಿತು. ಇದೇ ಮುಂದೆ ೧೯೨೭ ರಲ್ಲಿ ಭಾರತ ಹಾಗೂ ಬ್ರಿಟನ್ ಮದ್ಯೆ ರೇಡಿಯೋ ಟೆಲಿಗ್ರಾಂ ವ್ಯವಸ್ಥೆ ಜಾರಿಗೆ ಬರಲು ನಾಂದಿಯಾಯಿತು. ಇಷ್ಟೆಲ್ಲದರ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ತರುವಾಯ ೧೯೫೪ ರಲ್ಲಿ ಭಾರತದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸುವ ೬೪೩೭ ಕಿಲೋಮೀಟರ್ ಟೆಲಿಗ್ರಾಂ ಲೈನ್ ಅನ್ನು ಅಳವಡಿಸಲಾಯಿತು. ಅಲ್ಲಿಂದ ಸರಿಸುಮಾರು ಐದು ದಶಕಗಳ ಕಾಲ ಜನಸಾಮಾನ್ಯರ ತುರ್ತು ಸಂದೇಶವಾಹಕವಾಗಿ ಟೆಲಿಗ್ರಾಂ ಕೆಲಸ ಮಾಡಿತು.
    ಆದರೆ ೧೯೮೦ರ ದಶಕದಲ್ಲಿ ಸಂಪರ್ಕ ಕ್ಷೇತ್ರದಲ್ಲಾದ ಅದ್ಬುತ ಕ್ರಾಂತಿ, ಮೊಬೈಲ್, ಅಂತರ್ಜಾಲಗಳ ಭರಾಟೆಯಲ್ಲಿ ಟೆಲಿಗ್ರಾಂ ತನ್ನ ಮಹತ್ವವನ್ನು ಕಳೆದುಕೊಂಡಿತು. ಇಂದು ದೇಶದಲ್ಲಿ ಸುಮಾರು ೯೦ ಕೋಟಿ ಮೊಬೈಲ್ ಬಳಕೆದಾರರಿದ್ದು ಟೆಲಿಗ್ರಾಂ ಬಳಸುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ಇದೇ ಕಾರಣಕ್ಕೆ ಭಾರತ ಸಂಚಾರ್ ನಿಗಮವು ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
    ಇದೆಲ್ಲದರ ಹೊರತಾಗಿಯೂ ಟೆಲಿಗ್ರಾಂ ನಮ್ಮ ಹಿರಿಯ ತಲೆಮಾರಿನವರಲ್ಲಿ ಸಾವಿರಾರು ಅಮರ ನೆನಪುಗಳನ್ನು ಉಳಿಸಿ ಹೋಗುತ್ತಿದೆ ಎಂದರೆ ತಪ್ಪಲ್ಲ.
    ಇದಕ್ಕಾಗಿ ನಾವು ಸಹ ಇತಿಹಾಸದ ಪುಟ ಸೇರುತ್ತಿರುವ ಟೆಲಿಗ್ರಾಂ ಗೆ ಹೃತ್ಪೂರ್ವಕ ವಿದಾಯವನ್ನು ಹೇಳೋಣವಲ್ಲವೆ?

    ಬೈ ಬೈ... ಟೆಲಿಗ್ರಾಂ.....!!

No comments:

Post a Comment