Tuesday, May 18, 2021

ಪ್ರಾಚೀನ ಭಾರತದಲ್ಲಿ ಬಾಲ್ಯ ವಿವಾಹವಿತ್ತೆ? ಇಲ್ಲಿದೆ ವೇದ, ಪುರಾಣಗಳ ಆಧಾರ

 ಪ್ರಾಚೀನ ಭಾರತದಲ್ಲಿ ಬಾಲ್ಯ ವಿವಾಹಗಳು ಅಸ್ತಿತ್ವದಲ್ಲಿಲ್ಲ ಮತ್ತು ಇಸ್ಲಾಮಿಕ್ ಆಕ್ರಮಣದ ನಂತರವೇ ಬಾಲ್ಯ ವಿವಾಹಗಳು ಪ್ರಾರಂಬವಾಗಿದ್ದವು.ವೇದಗಳು, ಇತಿಹಾಸಗಳು ಅಥವಾ ಪುರಾಣಗಳು ಯಾವುದೇ ಬಾಲ್ಯವಿವಾಹವನ್ನು ಉಲ್ಲೇಖಿಸುವುದಿಲ್ಲ. ಪ್ರಾಚೀನ ಕಾಲದ ಎಲ್ಲ ಮಹಿಳೆಯರು ಕನಿಷ್ಠ 16 ವರ್ಷ ದಾಟಿದ ನಂತರ ವಿವಾಹವಾಗುತ್ತಿದ್ದರು. ಅಲ್ಲದೆ ಹೆಚ್ಚಿನ ವಿವಾಹಗಳು ಸ್ವಯಂವರ ಪದ್ದತಿಯಂತೆ ನಡೆದಿವೆ.


ಅನೇಕರು ರಾಮ-ಸೀತೆಯರು ಮದುವೆಯಾದ ಸಮಯದಲ್ಲಿ ಅವರಿನ್ನೂ ಚಿಕ್ಕ ವಯಸ್ಸಿನವರಾಗಿದ್ದರು ಎಂದು ವಾದಿಸುತ್ತಾರೆ.ದರೆ ವಾಲ್ಮೀಕಿ ರಾಮಾಯಣ ಅವರ ವಾದವು ಸುಳ್ಳು ಎಂದು ಸಾಬೀತು ಮಾಡುತ್ತದೆ. ವಾಲ್ಮೀಕಿ ರಾಮಾಯಣದ ಆರಣ್ಯ ಕಾಂಡದಲ್ಲಿ ಸೀತೆ ರಾವಣನಿಗೆ ಮದುವೆಯ ನಂತರ 12 ವರ್ಷಗಳ ಕಾಲ ಅಯೋಧ್ಯೆಯಲ್ಲಿ ಇದ್ದದ್ದಾಗಿ ಹೇಳಿದ್ದಾಳೆ.ಅವಳು ವನವಾಸಕ್ಕೆ ತೆರಳಿದಾಗ, ಅವಳಿಗೆ 18 ಮತ್ತು ರಾಮನಿಗೆ 25 ವರ್ಷ.ಅಂದರೆ ಅವಳಿಗೆ ರಾಮನೊಡನೆ ಮದುವೆಯಾಗುವಾಗ ಸೀತೆಗೆ6 ಮತ್ತು ರಾಮನಿಗೆ 13 ವರ್ಷ ಎಂದು ಅರ್ಥವೇ?

ವೇದಗಳ ಕಾಲದಿಂದ ಉಪನಯನ ಅಥವಾ ಶಿಕ್ಷಣದ ದೀಕ್ಷೆಯನ್ನು 2 ನೇ ಜನ್ಮ (ದ್ವಿಜ)ಎಂದು ಪರಿಗಣಿಸಲಾಗುತ್ತಿತ್ತು.ಬ್ರಾಹ್ಮಣರಿಗೆ ಇದನ್ನು 8 ನೇ ವಯಸ್ಸಿನಲ್ಲಿ, ಕ್ಷತ್ರಿಯರು 11 ಮತ್ತು ವೈಶ್ಯರಿಗೆ 12 ನೇ ವಯಸ್ಸಿನಲ್ಲಿ ಈ ದೀಕ್ಷೆ ನೀಡಲಾಗುತ್ತಿತ್ತು. ಆ ನಂತರ ಅವರನ್ನು ದ್ವಿಜ (ಎರಡನೇ ಬಾರಿ ಜನಿಸಿದವರು) ಎಂದು ಕರೆಯಲಾಗುತ್ತಿತ್ತು. (ಅಪಸ್ಥಂಬಾ ಗೃಹ ಸೂತ್ರ). ಸೀತೆ ಹಾಗೂ ರಾಮ ಬ್ಬರೂ ಕ್ಷತ್ರಿಯ ಕುಟುಂಬಗಳಿಗೆ ಸೇರಿದವರಾಗಿದ್ದರಿಂದ, ಇಬ್ಬರೂ 11 ನೇ ವಯಸ್ಸಿನಲ್ಲಿ ದೀಕ್ಷೆ ಪಡೆದರು.

ಆದ್ದರಿಂದ, ಅವರ 2 ನೇ ಜನ್ಮದ ನಂತರ (ದೀಕ್ಷೆ), ಅವರ ಹೊಸ ವಯಸ್ಸು 6 ಮತ್ತು 13 ಆಗಿತ್ತು, ಆದರೆ ಅವರ ನಿಜ ವಯಸ್ಸು ಮದುವೆಯ ಸಮಯದಲ್ಲಿ ಕ್ರಮವಾಗಿ 17 ಮತ್ತು 24 ವರ್ಷಗಳು! ಅಯೋಧ್ಯೆಯಲ್ಲಿ 12 ವರ್ಷಗಳ ವೈವಾಹಿಕ ಜೀವನದ ನಂತರ, ಅವರು ವನವಾಸಕ್ಕೆ ತೆರಳಿದಾಗ  ಅವರ ವಯಸ್ಸು 29 ಮತ್ತು 36 ವರ್ಷಗಳು!

उषित्वा द्वादश समा इक्ष्वाकुणां निवेशने।

भुञ्जाना मानुषान्भोगान्सर्वकामसमृद्धिनी।।3.47.4।।

ನಾನು ಹನ್ನೆರಡು ವರ್ಷಗಳ ಕಾಲ ಇಕ್ಷಾಕುವಿನ ಮನೆಯಲ್ಲಿ ವಾಸಿಸುತ್ತಿದ್ದೆ ಮತ್ತು ಮನುಷ್ಯರಿಗಾಗಿ ನಿರೂಪಿಸಲಾದ ಎಲ್ಲಾ ರೀತಿಯ ಸಂತೋಷಗಳನ್ನು ಅನುಭವಿಸಿದೆ.

ततस्त्रयोदशे वर्षे राजामन्त्रयत प्रभुः।

अभिषेचयितुं रामं समेतो राजमन्त्रिभिः।।3.47.5।।

ದುವೆಯಾದ ಹದಿಮೂರನೇ ವರ್ಷದಲ್ಲಿ ರಾಜ ದಶರಥನು ಇತರ ಮಂತ್ರಿಗಳ ಜತೆ ಸಮಾಲೋಚಿಸಿ ರಾಮನನ್ನು ಯುವರಾಜನನ್ನಾಗಿಸಿದ.

मम भर्तामहातेजा वयसा पञ्चविंशकः।

अष्टादश हि वर्षाणि मम जन्मनि गण्यते।।3.47.10।।

ತುಂಬಾ ಧೈರ್ಯಶಾಲಿ ನನ್ನ ಪತಿ 25 ವರ್ಷ ಮತ್ತು ನಾನು 18 ವರ್ಷಗಳನ್ನು ಪೂರೈಸಿದ್ದೇನೆ.

13 ವರ್ಷ ವನವಾಸ ಮಾಡಿದ ನಂತರ ರಾವಣನು ಸೀತೆಯನ್ನು ಅಪಹರಿಸಿದಾಗ, ಅವಳ ನಿಜವಾದ ವಯಸ್ಸು 42 ಮತ್ತು ರಾಮನಿಗೆ 49 ವರ್ಷ!! ರಾಮನು ರಾವಣನನ್ನು ಕೊಂದು ಸೀತೆಯೊಂದಿಗೆ ಮತ್ತೆ ಅಯೋಧ್ಯೆಗೆ ಹಿಂದಿರುಗಿದಾಗ, ಅವರ ವಯಸ್ಸು ಕ್ರಮವಾಗಿ 50 ಮತ್ತು 43 ಆಗಿತ್ತು!!

ರಾಕ್ಷಸರನ್ನು ಕೊಲ್ಲುವುದಕ್ಕಾಗಿ ದಶರಥನು ತನ್ನ ಮಗ ರಾಮನನ್ನು ಕಳುಹಿಸಬೇಕೆಂದು ವಿಶ್ವಾಮಿತ್ರರು ದಶರಥನನ್ನು ಕೇಳಿದಾಗ  ಆ ಸಮಯದಲ್ಲಿ ದಶರಥ ರಾಮನಿಗಿನ್ನೂ 19 ವರ್ಷ ವಯಸ್ಸು ಎನ್ನುತ್ತಾನೆ(ಬಾಲ ಕಾಂಡ)

ऊनषोडशवर्षो मे रामो राजीवलोचन:।

न युद्धयोग्यतामस्य पश्यामि सह राक्षसै:।। 1.20.2

ನನ್ನ ಕಮಲದ ಕಣ್ಣಿನ ಮಗ ರಾಮನಿಗೆ ಸುಮಾರು ಹದಿನಾರು ವರ್ಷ. ಯುದ್ಧದಲ್ಲಿ ರಾಕ್ಷಸರೊಂದಿಗೆ ಹೋರಾಡುವ ಸಾಮರ್ಥ್ಯ ಅವನಿಗೆ ಇದೆ ಎಂದು ನಾನು ಭಾವಿಸುವುದಿಲ್ಲ. ಇಲ್ಲಿ, ऊनविंशति ಎಂದರೆ 19, ಅಂದರೆ 20 ಕ್ಕಿಂತ 1 ಕಡಿಮೆ.

ಆದ್ದರಿಂದ ವಿಶ್ವಾಮಿತ್ರರ ಬಳಿ ತರಬೇತಿಗೆ ಹೋದಾಗ ರಾಮನಿಗೆ 19 ವರ್ಷ ವಯಸ್ಸಾಗಿತ್ತು ಮತ್ತು ಕೆಲವು ವರ್ಷಗಳ ತರಬೇತಿಯ ನಂತರ ಆತ ತಾಟಕಿಯನ್ನು ಕೊಂದಿದ್ದ 24 ನೇ ವಯಸ್ಸಿನಲ್ಲಿ, ಅವರನ್ನು ಸ್ವಯಂವರಕ್ಕೆ ಕರೆದೊಯ್ಯಲಾಯಿತು.  ಆ ಸಮಯದಲ್ಲಿ 17 ವರ್ಷ ವಯಸ್ಸಿನ ಸೀತೆ ರಾಮನನ್ನು ವಿವಾಹವಾಗಿದ್ದಳು.

ಭಾರತದ ಪ್ರಾಚೀನ ಶಸ್ತ್ರಚಿಕಿತ್ಸಕ ಸುಶ್ರುತ ತನ್ನ ‘ಸುಶ್ರುತ ಸಂಹಿತೆ’ ಪುಸ್ತಕದಲ್ಲಿ ಹುಡುಗಿಯ ಮದುವೆಯ ವಯಸ್ಸು 16 ಕ್ಕಿಂತ ಹೆಚ್ಚಿರಬೇಕು ಮತ್ತು ಹುಡುಗನಿಗೆ ಅದು 25 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಎಂದು ಬರೆದಿದ್ದಾರೆ.

ಸೀತೆ ವಿವಾಹಕ್ಕೆ ಮುನ್ನ ವಯಸ್ಸಿಗೆ ಬಂದಿದ್ದಳೆಂದು ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ

ಪದ್ಮ ಪುರಾಣವು ಮದುವೆಗೆ ಮುಂಚಿತವಾಗಿ ಸೀತೆಯನ್ನು ಸಂಪೂರ್ಣವಾಗಿ ಬೆಳೆದ ವಯಸ್ಕ ಯುವತಿ ಎಂದು ವರ್ಣಿಸುತ್ತದೆ.

 ಸೀತೆ ಈ ಸಮಯದಲ್ಲಿ ಕಮಲದ ತಂತುಗಳ ವೈಭವವನ್ನು ಹೊಂದಿದ್ದಳು. ಅವಳು ಕೆಂಪು ಬಣ್ಣದ ಉಡುಪನ್ನು ಧರಿಸಿದ್ದಳು. ಅವಳ ಹಣೆಯು ಕಪ್ಪು ಮತ್ತು ಸುರುಳಿಯಾಗಿದ್ದ ಮುಂಗುರುಳು ಅಂದವಾಗಿತ್ತು.ಅದು ಯುವಕರ ಮನಸ್ಸನ್ನು ಆಕರ್ಷಿಸುತ್ತಿತ್ತು. ಅವಳ ಹುಬ್ಬುಗಳು ಬಿಲ್ಲಿನಂತೆ ಅವಳ ಕಣ್ಣುಗಳು ಕಮಲದ ದಳಗಳಂತೆ ಕೆಂಪಾಗಿದ್ದವು. ಅವಳ ಮೂಗು ಸಂಪಿಗೆಯಂತೆ ಕೆಂಪು ಬಣ್ಣದ ತುಟಿಗಳು ಅವಳ ಹೊಳಪು, ಕೂದಲುಳ್ಳ ಕೆನ್ನೆಗಳಿಗೆ ಹತ್ತಿರದಲ್ಲಿದ್ದವು ಮತ್ತು ಮಾಣಿಕ್ಯಗಳನ್ನು ಹೋಲುತ್ತಿದ್ದವು. ಅವಳ ಹಲ್ಲುಗಳು ದಾಳಿಂಬೆ ಬೀಜದಂತೆ ಇದ್ದವು. . ಅವಳ ತುಟಿಗಳು ಜಾಪೆ ಹೂವುಗಳಂತೆ ಕೆಂಪಾಗಿದ್ದವು. ಅವಳ ಗಲ್ಲದ ತುಂಬಾ ಸುಂದರವಾಗಿತ್ತು.

ಅವಳ ಕಿವಿ ಸಿಂಪಿ ಚಿಪ್ಪುಗಳಂತೆ ಇತ್ತು. ಅವಳ ಕುತ್ತಿಗೆ ಸಮ ಮತ್ತು ಉದ್ದವಾಗಿತ್ತು. ಅವಳ ಸ್ತನಗಳು ಎದ್ದು ನಿಂತ ಮೊಗ್ಗಿನಂತಿದ್ದವು. ಅವಳ ಆಕೃತಿ ಸುಂದರವಾಗಿತ್ತು.

ಅವಳು ವಿವಿಧ ರತ್ನಖಚಿತ ಉಂಗುರಗಳನ್ನು ಹಾಕಿದ್ದಳು.

ಅವಳು ಬಿಳಿ ಲಿಲ್ಲಿಯನ್ನು ಹಿಡಿದಿದ್ದಳು.

ರಾಮ ಮತ್ತು ಸೀತೆಮದುವೆಯಾದಾಗ ವಯಸ್ಕರಾಗಿದ್ದರು ಎಂಬುದನ್ನು ಸಾಬೀತುಪಡಿಸಲು ರಾಮಾಯಣದಲ್ಲಿ ಅನೇಕ ಉದಾಹರಣೆಗಳಿವೆ.

ರಾವಣನು ಅಪಹರಿಸುವ ಮೊದಲು ಅವರು 12 ವರ್ಷಗಳನ್ನು ಅಯೋಧ್ಯೆಯಲ್ಲಿ ಮತ್ತು ನಂತರ 13 ವರ್ಷಗಳ ಕಾಲ ಕಾಡಿನಲ್ಲಿ ಕಳೆದರು.

ಅವರ 25 ವರ್ಷಗಳ ಸಂಬಂಧವನ್ನು ರಾವಣ ಮುರಿದಿದ್ದನು!!!

ರಾಮಚರಿತಮಾನಸದಲ್ಲಿ ರಾಮನು ತಮ್ಮ ಸ್ವಯಂವರಕ್ಕೆ ಮೊದಲು ಸೀತಾಳ ಸೌಂದರ್ಯವನ್ನು ಲಕ್ಷ್ಮಣನಿಗೆ ವಿವರಿಸಿದ್ದಾನೆ. ಅಲ್ಲಿ ಚಂದ್ರನನ್ನು ಕ್ಷೀಣಿಸುವಂತೆ ಮಾಡುತ್ತಾಳೆ, ಕಮಲವನ್ನು ಒಣಗುವಂತೆ ಮಾಡುತ್ತಾಳೆ ಎಂದು ಸೀತೆಯ ಮುಖದ ಸೌಂದರ್ಯವನ್ನು ಶ್ಲಾಘಿಸುವ ರಾಮ  ಮತ್ತೆ ತನ್ನ ಗುರುಗಳ ಬಳಿ ಬಂದು  ಅವರ ಮಲದ ಪಾದಕ್ಕೆ ನಮಸ್ಕರಿಸಿ ಅವನ ಅನುಮತಿಯನ್ನು ಪಡೆದುಕೊಂಡು ವಿಶ್ರಾಂತಿ ಪಡೆಯಲು ತೆರಳಿದ್ದನು. ಆ ನಂತರ ಸಹ ರಾತ್ರಿಯಲ್ಲಿ ರಾಮನು ತಮ್ಮ ಲಕ್ಶ್ಮಣನಿಗೆ ಸೀತೆಯ ಬಗ್ಗೆ ಅನೇಕ ವಿವರಣೆ ನೀಡುತ್ತಾನೆ. ಅಲ್ಲದೆ, ಸೀತೆ  ಪಾರ್ವತಿಯನ್ನು ಪೂಜಿಸಲು ಹೋಗಿದ್ದಳು, ರಾಮನನ್ನು ತೋಟದಲ್ಲಿ ಮೊದಲ ಬಾರಿಗೆ ಭೇಟಿಯಾದಾಗ. ಅವಳ ಸ್ನೇಹಿತೆಯರು ಸಹ ಅಲ್ಲಿದ್ದರು. ಅವರು ಸೀತೆ ಹಾಗೂ ರ್ಮಾನನನ್ನು ಕೆಣಕುತ್ತಾರೆ. ಏಕೆಂದರೆ ಅವರು ಪರಸ್ಪರರ ಸೌಂದರ್ಯದಿಂದ ಆಕರ್ಷಿತರಾಗಿದ್ದರು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಅವರು ವಯಸ್ಕರಲ್ಲದಿದ್ದರೆ, ಈ ವಿವರಣೆಗಳು ಮತ್ತು ಭಾವನೆಗಳು ಹೊಂದಿಕೆಯಾಗುವುದಿಲ್ಲ.

1000 ವರ್ಷಗಳ ಹಿಂದಿನವರೆಗೂ, ಬಾಲ್ಯ ವಿವಾಹಗಳು ಇರಲಿಲ್ಲ, ಭಾರತೀಯ ಮಹಿಳೆಯರಿಗೆ ಬಲವಂತವಾಗಿ ಮದುವೆ ಮಾಡಿಸುತ್ತಿರಲಿಲ್ಲ. ಹೆಚ್ಚಿನವರು ಸ್ವಯಂವರದ ಆಯ್ಕೆಯನ್ನು ಹೊಂದಿದ್ದರು ಅಥವಾ ಪೋಷಕರ ಆಯ್ಕೆಗೆ ಒಪ್ಪಿಕೊಂಡರು.

ಇಸ್ಲಾಮಿಕ್ ಆಕ್ರಮಣದ ನಂತರ, ಅವಿವಾಹಿತ ಯುವತಿಯರನ್ನು ಅಪಹರಿಸಿ ಅತ್ಯಾಚಾರ ಮಾಡಿದಾಗ, ಜನರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು  ಬಾಲ್ಯ ವಿವಾಹಗಳನ್ನು ಮಾಡಲು ನಿರ್ಧರಿಸಿದರು.

No comments:

Post a Comment