Tuesday, April 22, 2025

ಬೆಂಗಳೂರು ನಗರದಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ನ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ

- ರಾಘವೇಂದ್ರ ಅಡಿಗ ಎಚ್ಚೆನ್.

ಆದಿತ್ಯ ಬಿರ್ಲಾ ಗ್ರೂಪ್‌ನ ಅಂಗಸಂಸ್ಥೆಯಾದ ಗ್ರಾಸಿಂ ಇಂಡಸ್ಟ್ರೀಸ್‌ನ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಕಂಪನಿ ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ (ಪೇಂಟ್ ಸ್ಟುಡಿಯೊ) ಅನ್ನು ಅಧಿಕೃತವಾಗಿ ಉದ್ಘಾಟಿಸಿತು. ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಇಂತಹ ಕೇಂದ್ರಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಬಿರ್ಲಾ ಓಪಸ್ ಪೇಂಟ್ಸ್, ಈ ಮೂಲಕ ಪೇಂಟ್ ಮತ್ತು ಅಲಂಕರಣ ಕ್ಷೇತ್ರದಲ್ಲಿ ತನ್ನ ಜಾಲವನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸಿದೆ.


ಈ ಎಕ್ಸ್ಪೀರಿಯನ್ಸ್ ಸೆಂಟರ್‌ನ್ನು ಗ್ರಾಹಕರ ಸಾಮಾನ್ಯ ಖರೀದಿ ಅನುಭವವನ್ನು ಆಧುನಿಕ, ತಾಂತ್ರಿಕ ಹಾಗೂ ತಲ್ಲೀನಗೊಳಿಸುವ ರೀತಿಯಲ್ಲಿ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ. ಬಣ್ಣಗಳ ಆಯ್ಕೆ, ವಿನ್ಯಾಸ ತಂತ್ರಗಳು, ವಿಶೇಷ ಫಿನಿಷ್‌ಗಳು, ವಾಲ್ ಪೇಪರ್‌ಗಳು ಸೇರಿದಂತೆ ಸುಮಾರು 170 ಕ್ಕೂ ಹೆಚ್ಚು ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ನೈಜ ತಜ್ಞರ ಮಾರ್ಗದರ್ಶನವೂ ದೊರೆಯುತ್ತದೆ.

ಪರಿಪೂರ್ಣ ಗ್ರಾಹಕ ಅನುಭವಕ್ಕೆ ಒತ್ತು ನೀಡಿದ ಈ ಕೇಂದ್ರವು ಸುಧಾರಿತ ವಿಶುಯಲೈಸೇಷನ್ ಸಾಧನಗಳ ಮೂಲಕ ಬಣ್ಣಗಳ ಅಂತಿಮ ಫಲಿತಾಂಶವನ್ನು ಮನೆ ಅಥವಾ ಆಫೀಸ್‌ನ ನೈಜ ಪರಿಸರದಲ್ಲಿ ಕಣ್ತುಂಬಿಕೊಳ್ಳುವ ಅನುಕೂಲವನ್ನೂ ನೀಡುತ್ತದೆ. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳೂ ಇಲ್ಲಿ ಮುಖ್ಯ ಆಕರ್ಷಣೆಯಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ ಹೇಳಿದರು, “ಇದು ಬಿರ್ಲಾ ಓಪಸ್ ಪೇಂಟ್ಸ್ ಕಂಪನಿಗೆ ಮಹತ್ವದ ಮೈಲಿಗಲ್ಲಾಗಿದೆ. ಬೆಂಗಳೂರು ಕೇಂದ್ರದಿಂದ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ, ಉತ್ಪನ್ನ ಹಾಗೂ ವಿಶಿಷ್ಟ ಅನುಭವ ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಸ್ಟುಡಿಯೊ ಕೇವಲ ಮಳಿಗೆ ಅಲ್ಲ, ಇದು ಕ್ರಿಯಾತ್ಮಕ ಚಿಂತನೆ, ವಿನ್ಯಾಸ ಮತ್ತು ಅನುಭವಗಳ ಸಂಕಲನವಾಗಿದೆ,” ಎಂದು ಹೇಳಿದರು.


ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕಾರರಿಗೂ ಈ ಸ್ಟುಡಿಯೊ ಉಪಯುಕ್ತವಾಗಿದೆ. ತಜ್ಞರ ಬೆಂಬಲ, ನವೀನ ತಂತ್ರಜ್ಞಾನಗಳು ಮತ್ತು ಆಯ್ಕೆಗಲ ಪಾಲು ಇದನ್ನು ವೃತ್ತಿಪರರ ಕಾರ್ಯತಾಣವಾಗಿಯೂ ಮಾಡುತ್ತದೆ.

ಪಡೆಯಬಹುದಾದ ವಿಳಾಸ:

ಅರ್ಬನ್ ವಾಲ್, ಗ್ರೌಂಡ್ ಫ್ಲೋರ್, ನಂ.732, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಸ್ಟಾರ್ಬಕ್ಸ್ ಎದುರು, ಇಂದಿರಾನಗರ, ಹಂತ 1, ಬೆಂಗಳೂರು – 560038.


ಕಂಪನಿಯು ಮುಂದಿನ ಹಂತದಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತ್ತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಸೇರಿದಂತೆ ಹಲವು ನಗರಗಳಲ್ಲಿ ಇಂತಹ ಎಕ್ಸ್ಪೀರಿಯನ್ಸ್ ಸೆಂಟರ್‌ಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ.

ಡಾ.ರಾಜ್​ಕುಮಾರ್ 96ನೇ ಹುಟ್ಟುಹಬ್ಬದ ಸಂಭ್ರಮ – ಇಂಟರ್​ ನ್ಯಾಷನಲ್ ಆರ್ಟ್ಸ್ & ಕಲ್ಚರಲ್ ಫೌಂಡೇಶನ್​​ನಿಂದ ನೃತ್ಯ ಪ್ರದರ್ಶನ!

 ಬೆಂಗಳೂರು : ಕರ್ನಾಟಕ ರತ್ನ, ಕನ್ನಡದ ವರನಟ, ಪದ್ಮಭೂಷಣ ಡಾ.ರಾಜಕುಮಾರ್ ಅವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಇಂಟರ್​ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಶ್ರೀವತ್ಸ ಶಾಂಡಿಲ್ಯ ನೇತೃತ್ವದಲ್ಲಿ 14ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ.


ರಾಜ್ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ: ‘ಹೌಸ್ ಫುಲ್’ ಶೀರ್ಷಿಕೆ ಅಡಿಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನ 14ನೇ ಕ್ರಾಸ್​ನಲ್ಲಿರುವ ‘ಸೇವಾ ಸದನ’ ಸಭಾಂಗಣದಲ್ಲಿ ಇದೇ ಗುರುವಾರ (ಏ.24) ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ನಟ ಸಾರ್ವಭೌಮ ಡಾ.ರಾಜಕುಮಾರ್ ನಟಿಸಿರುವ ಹಳೆಯ ಚಲನಚಿತ್ರ ಗೀತೆಗಳು ಅದರಲ್ಲೂ ಶಾಸ್ತ್ರಿಯ ಸಂಗೀತ ಹಿನ್ನೆಲೆ ಇರುವ ಚಿತ್ರದ ಹಾಡುಗಳನ್ನು ಹೆಸರಾಂತ ನೃತ್ಯಗಾರರಿಂದ ಭರತ ನಾಟ್ಯಂ, ಕುಚುಪುಡಿ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕರ್ನಾಟಕ ರತ್ನ ಡಾ.ರಾಜಕುಮಾರ್ ನಟಿಸಿರುವ ಕವಿರತ್ನ ಕಾಳಿದಾಸ, ಬಬ್ರುವಾಹನ, ಶ್ರೀ ಕೃಷ್ಣದೇವರಾಯ, ಆಕಸ್ಮಿಕ, ಸನಾದಿ ಅಪ್ಪಣ್ಣ, ಜೀವನ ಚೈತ್ರ, ಇಮ್ಮಡಿ ಪುಲಕೇಶಿ ಸೇರಿ ಹಲವು ಸೂಪರ್​ ಹಿಟ್​ ಚಲನಚಿತ್ರ ಗೀತೆಗಳಿಗೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಕಲಾ ಸೇವೆಯ ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು ಅಭಿಮಾನಿಗಳು, ಸಿನಿ ಪ್ರೇಕ್ಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸುಮಧುರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.


ವಿಶಿಷ್ಠ ಹಾಗೂ ಅದ್ದೂರಿ ಕಾರ್ಯಕ್ರಮದಲ್ಲಿ ಹೆಸರಾಂತ ನೃತ್ಯಗಾರರಾದ ಡಾ.ಸಂಜಯ್ ಶಾಂತರಾಮ್, ಡಾ.ವಸಂತ್ ಕಿರಣ್, ವಿದುಷಿಗಳಾದ ರಾಜಶ್ರೀ ಹೊಳ್ಳ, ಶ್ರದ್ಧಾ ಮೆಣನ್ ಅವರುಗಳ ಶಿಷ್ಯರು ಒಳಗೊಂಡಂತೆ ವಿದುಷಿ ಪ್ರತಿಭಾ ಕಿಣಿ, ವಿದುಷಿ ಸೀಮ ಕೃಷ್ಣನ್, ವಿದುಷಿ ಮನುಶ್ರೀ ಆನಂದ್ ಕುಮಾರ್, ವಿದುಷಿ ಅನನ್ಯ ಬಿ ಆರ್, ವಿದುಷಿ ಸೃಷ್ಟಿ ಪಂಡ್ರಿ, ವಿದುಷಿ ಶ್ರೀ ಲಕ್ಷ್ಮಿ, ವಿದುಷಿ ಪ್ರೇರಣ ದೇಶಪಾಂಡೆ ಮತ್ತು ವಿದುಷಿ ಬಿಂದುಶ್ರೀ ಸೇರಿ ಹಲವರು ಭಾಗವಹಿಸಲಿದ್ದಾರೆ.


Pahalgam Terror Attack: Akshay Kumar, Sanjay Dutt, Anupam Kher condemn tourist killing — Cowards, can’t be forgiven

 At least 24 people were killed in Kashmir's Pahalgam region when gunmen opened fire on tourists on Tuesday. Confirming the loss of lives and those who are still battling death, several Bollywood celebrities took to social media and requested swift action from PM Narendra Modi.

Akshay on Pahalgam attack

Actor Akshay Kumar wrote on X, formerly Twitter, “Horrified to know of the terror attack on tourists in Pahalgam. Sheer evil to kill innocent people like this. Prayers for their families.”

Bollywood celebs condemn Pahalgam terror attack

“Strongly condemn the cowardly terrorist attack on innocent tourists in Kashmir’s #Pahalgam. Terrorism should not have any place in a civilized world and this dastardly act is unacceptable. My deepest condolences to the families who lost their dear ones and prayers for early recovery of those who are injured. Om Sai ram,” added Sonu Sood.

Tusshar Kapoor posted, “Strongly condemn the dastardly terrorist attack in Pehalgam, India will give a befitting reply to the cowards! Those who fear the rise of India will have to eat humble pie, as always! Prayers for those injured and the families of those killed! #pehalgam.”

Tagging Narendra Modi, Amit Shah and Rajnath Singh, Sanjay Dutt said, “They killed our people in cold blood. This can’t be forgiven, these terrorists need to know we are not staying quiet. We need to retaliate, I request our Prime Minister @narendramodi ji, Home Minister @AmitShah ji and Defence Minister @rajnathsingh ji to give them what they deserve.”

Anupam Kher posted a self-shot video about the attack and reminded people of his film The Kashmir Files.

Raveena Tandon reacted to the attack news, saying, “Om Shanti. condolences. Shocked and angry. No words to express the anguish. Prayers and strength to the victims. Time we all let go of petty in-house fighting, UNITE and realise the true enemy.”

Ranvir Shorey wrote on Instagram, “Dunno if I’m more angry or more sad.”

A shadow of sorrow falls heavy today, as news of the horrific terror attack in Kashmir breaks our hearts. Sending deepest condolences and prayers to all the families who have tragically lost loved ones.

A shadow of sorrow falls heavy today, as news of the horrific terror attack in Kashmir breaks our hearts. Sending deepest condolences and prayers to all the families who have tragically lost loved ones.

Meanwhile, Narendra Modi described the "heinous act" in the summer retreat of Pahalgam, pledging the attackers "will be brought to justice".

ರಾಜ ಪುನೀತೋತ್ಸವದಲ್ಲಿ ಸಾಧಕರಿಗೆ ಗೌರವ ಹಿರಿಯ ನಟ ಶ್ರೀನಾಥ್ ಗೆ ರಾಜ್ ರತ್ನ, ವೈದ್ಯ ರವೀಂದ್ರನಾಥ್ ಗೆ ಪುನೀತ್ ರತ್ನ

 ಸಿಂಫೋನಿ ಸ್ವರ ಪ್ರತಿಷ್ಠಾನ ಸಂಸ್ಥೆಯ ಮೂರನೇ ವರ್ಷದ 'ರಾಜ ಪುನೀತೋತ್ಸವ' ಸಂಗೀತ ರಸಸಂಜೆ ಹಾಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಿತು.


ಕನ್ನಡ ಚಿತ್ರರಂಗದ ಅಮೂಲ್ಯ ರತ್ನಗಳಾದ ಡಾ. ರಾಜ್ ಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್‌ ಅವರ ಸವಿನೆನಪಿನಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪ್ರಣಯರಾಜ ಡಾ.ಶ್ರೀನಾಥ್ ಅವರಿಗೆ 'ರಾಜ್ ರತ್ನ' ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ.ರವೀಂದ್ರನಾಥ್ ಅವರಿಗೆ 'ಪುನೀತ್ ರತ್ನ' ಪ್ರಶಸ್ತಿ
ನೀಡಿ ಗೌರವಿಸಲಾಯಿತು. ನಟ ಶ್ರೀನಾಥ್
ಇದೇ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಎಂ. ರಮೇಶ್ ರೆಡ್ಡಿ, ಹಿರಿಯ ಸಿನಿಮಾ ಪ್ರಚಾರಕರ್ತರಾದ ನಾಗೇಂದ್ರ ಅವರಿಗೆ ಹಾಗೂ ಯುವನಟಿ ರೂಪಿಕಾ ಅವರಿಗೂ ಗೌರವ ಸಮರ್ಪಣೆ ಮಾಡಲಾಯಿತು. ನಟ ಶ್ರೀನಾಥ್ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚಿ ಮಾತನಾಡುತ್ತ ಕಲೆಯನ್ನು, ಕಲಾವಿದರನ್ನು ಬೆಳೆಸುತ್ತಿದ್ದೀರಿ. ಪ್ರತಿಭೆಗಳನ್ನು ಹುಟ್ಟುಹಾಕುವ ನಿಮ್ಮ ಕೆಲಸ ಅಭಿನಂದನಾರ್ಹ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ರಾಜ ಪುನೀತೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ 'ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಿಂಫೋನಿ ಸ್ವರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಎಸ್.ಕೆ.ಅನಂತು, ಕಾರ್ಯದರ್ಶಿಗಳಾದ ಸಿಂಫೋನಿ ಶಿವು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ಸಂಜೆ ಐದರಿಂದ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ಚಲನಚಿತ್ರಗಳ ನೂರಾರು ಜನಪ್ರಿಯ ಗೀತೆಗಳ ಗಾಯನ ಹಾಗೂ ನೃತ್ಯ ನೆರೆದಿದ್ದ ಕಲಾರಸಿಕರ ಕಣ್ಮನ ತಣಿಸಿದವು.

*ಚಂದನಾ ನಾಗ್ ರಂಗಪ್ರವೇಶ*

 *ಚಂದನಾ ನಾಗ್ ರಂಗಪ್ರವೇಶ*

ಏಪ್ರಿಲ್ 20ರ ಸಂಜೆ ಭಾನುವಾರ ಎಡಿಎ ರಂಗಮಂದಿರದಲ್ಲಿ ಹಿರಿ ಕಿರಿಯ ಕಲಾವಿದರ ಸಮಾವೇಶ.


ನಟ, ಚಿತ್ರ ನಿರ್ದೇಶಕ - ನಿರ್ಮಾಪಕ ಬಿ ಸುರೇಶ ಮತ್ತು ಶೈಲಜಾ ನಾಗ್ ಅವರ ಮಗಳು, ಪತ್ರಕರ್ತೆ ಡಾ.ವಿಜಯಮ್ಮ ಅವರ ಮೊಮ್ಮಗಳು ಚಂದನ ನಾಗ್ ರಂಗಪ್ರವೇಶಕ್ಕೆ ಎಲ್ಲಾ ಪ್ರಾಕಾರಗಳ ಕಲಾವಿದರು ಮತ್ತು ಸಾಹಿತ್ಯ ಲೋಕದ ದಿಗ್ಗಜರ ಸಂತೆಯೇ ಸೇರಿತ್ತು. ಇಡೀ ಸಭಾಂಗಣ ತುಂಬಿತ್ತು.
ಚಂದನಾ ನಾಗ್ ಸ್ವತಃ‌ ರಂಗಭೂಮಿ‌ ಕಲಾವಿದೆ, ಕಿರು ಚಿತ್ರಗಳ ಬರಹಗಾರ್ತಿ ಮತ್ತು‌ ನಿರ್ದೇಶಕಿ.
ಚಂದನಾ ‌ಭರತನಾಟ್ಯದ ಆರಂಭಿಕ‌ ಪಾಠಗಳನ್ನು ಗುರು ಭಾನುಮತಿ‌ ಅವರಲ್ಲಿ‌ ಬಹಳ ವರ್ಷ ಕಲಿತು‌, ನಂತರ ಐದು ವರ್ಷ ದಿಂದ ಸ್ನೇಹಾ ಕಪ್ಪಣ್ಣ ಅವರ ಬಳಿ ಕಲಿಕೆ ಮುಂದುವರೆಸಿದ್ದಾರೆ. ಇಷ್ಟು ಕಾಲದ ಸಿದ್ಧತೆಯ ನಂತರ ಈಗ ರಂಗಪ್ರವೇಶ ಮಾಡಿದರು.
ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯ ಕಲಾವಿದೆ, ಗುರು ಲಲಿತಾ ಶ್ರೀನಿವಾಸನ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಪ್ರಸಿದ್ಧ ಕಲಾವಿದೆ ಶುಭ ಧನಂಜಯ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಾಗೂ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಮುಖ್ಯ ‌ಅತಿಥಿಗಳಾಗಿ ಭಾಗವಹಿಸಿದ್ದರು.

ಚಂದನಾ ನಾಗ್ ಅವರ ಈ ರಂಗಪ್ರವೇಶದ ಆರಂಭಕ್ಕೆ ಲಲಿತಾ ಶ್ರೀನಿವಾಸನ್ ‌ಅವರು ದೀಪ ಬೆಳಗಿ‌ ಉದ್ಘಾಟಿಸಿದರು. ನಂತರ ಆದಿತಾಳದ ಪುಷ್ಪಾಂಜಲಿಗೆ ನೃತ್ಯದ ಮೂಲಕ ರಂಗಪ್ರವೇಶ ಆರಂಭಿಸಿದ ಚಂದನಾ ಪಂಚಭೂತಗಳನ್ನು ಪ್ರಧಾನ ವಸ್ತುವಾಗಿರಿಸಿಕೊಂಡು, ಕೌತ್ವಂಗಾಗಿ‌ ಅಗ್ನಿಯ ಹಲವು ಮುಖಗಳನ್ನು ದಾಟಿಸಿದರೆ, ಶಬ್ದಂಗಾಗಿ‌ ಆಕಾಶದ ವಿವರ ನೀಡುವ ಚಿದಂಬರಂ ಶಿವನ ಪದ್ಯವನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ವರ್ಣದಲ್ಲಿ ನೀರಿನ ಬಗ್ಗೆ ಮಾತಾಡಲು ಗಂಗೆಯ ವಿವಿಧ ಕಥೆಯನ್ನು ಹೇಳುತ್ತ, ಗೀತಗೋವಿಂದದ ಅಷ್ಟಪದಿ ಬಳಸಿ ವಾಯುವಿನ ಬಗ್ಗೆ ಹೇಳಿದರು. ಪದಂನಲ್ಲಿ ಭೂಮಿಯ ಕುರಿತು ಮಾತಾಡಲು ಸೀತೆಯ ಕಥನವಿದ್ದ ಹಾಡನ್ನು ಅಭಿನಯ ಪ್ರಧಾನವಾಗಿ ಕಟ್ಟಿದರು. ಚಿದಂಬರ ಶಿವನ‌ ಬಾನಗಲದ ಪರಿಚಯ ಒಂದೆತ್ತರವಾದರೆ ಪದಂನ ಮೂಲಕ ಸೀತೆಯು‌ ಭೂತಾಯಿಯನ್ನು ಕರೆದು ಅವಳ ಮಡಿಲಿಗೆ ಮರಳಿ ಸೇರುವ ವಿವರ ನೋಡುಗರ ಕಣ್ಣಲ್ಲಿ‌ ಹನಿ‌ ಮೂಡಿಸಿತು.
ಚಂದನಾ ನೃತ್ಯದಲ್ಲಿ ಕೇವಲ ಅಂಗಭಾಷೆಯ ಮುದ್ರೆ ಅಲ್ಲದೆ ಮುಖಮುದ್ರೆಯನ್ನು ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದಳು ಎಂದು‌ ಪ್ರತಿಭಾ ಪ್ರಹ್ಲಾದ್ ಅವರೂ ಸಹ ಗಮನಿಸಿ ತಿಳಿಸಿದರು. ಲಲಿತಾ ಶ್ರೀನಿವಾಸನ್ ಮತ್ತು ‌ಶುಭಾ ಧನಂಜಯ ಅವರೂ ಸಹ ಚಂದನಾ ಶ್ರಮವನ್ನು ಮೆಚ್ಚಿ ಹಾರೈಸಿದರು.

ನಟುವಾಂಗದಲ್ಲಿ ಸ್ವತಃ ಗುರು ಸ್ನೇಹಾ ಕಪ್ಪಣ್ಣ, ಗಾಯನದಲ್ಲಿ ಶ್ರೀವತ್ಸ, ಮೃದಂಗದಲ್ಲಿ ವಿದ್ವಾನ್ ಶ್ರೀಹರಿ, ಕೊಳಲು ವಾದನದಲ್ಲಿ ವಿದ್ವಾನ್ ಮಹೇಶ್ ಸ್ವಾಮಿ ಮತ್ತು ರಿದಂನಲ್ಲಿ ವಿದ್ವಾನ್ ಕಾರ್ತಿಕ್ ವೈದಾರ್ತಿ ಇದ್ದ ಹಿಮ್ಮೇಳದ ಜೊತೆಗೆ ಹಿರಿ-ಕಿರುತೆರೆ ಕಲಾವಿದೆ ಹಾಗೂ ಭರತನಾಟ್ಯ ಕಲಾವಿದೆ ಸೀತಾ ಕೋಟೆ ಅವರ ನಿರೂಪಣೆ, ಶಶಿಧರ್ ಅಡಪ ಅವರ ರಂಗ ಸಜ್ಜಿಕೆ, ಕಿರಣ್ ರಾಜ್ ಅವರ ಪ್ರಸಾಧನ, ನಾಗರಾಜ್ ಅವರ ಬೆಳಕು ವಿನ್ಯಾಸ ಇದ್ದ ಈ ಕಾರ್ಯಕ್ರಮಕ್ಕೆ ಎರಡು ಹೊಸ ಸಂಯೋಜನೆಗಳನ್ನು ರಮ್ಯಾ ಸೂರಜ್ ಅವರು‌, ಅಕ್ಷಯ್ ಮರಾಠೆ ಅವರು ರಚಿಸಿದ್ದರು.
ಚಲನ ಚಿತ್ರನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಂಸಲೇಖಾ , ಎಸ್.ಜಿ.ಸಿದ್ದರಾಮಯ್ಯ , ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರಾದ ಚಿರಂಜೀವಿ ಸಿಂಗ್, ಬಿಎಲ್ ಶಂಕರ್, ಜಿ. ರಾಮಕೃಷ್ಣ , ಗಿರಿಜಾ ಲೋಕೇಶ್, ಗಿರೀಶ್ ಕಾಸರವಳ್ಳಿ, ಜಯಂತ್ ಕಾಯ್ಕಿಣಿ, ವಿ. ಹರಿಕೃಷ್ಣ , ಯೋಗರಾಜ್ ಭಟ್ , ವೈಕೆ ಮುದ್ದುಕೃಷ್ಣ, ವನಮಾಲ ವಿಶ್ವನಾಥ್, ಅರುಂಧತಿ ನಾಗ್ , ನಟ ಕಿಶೋರ್ ಮತ್ತು ನೃತ್ಯ, ಸಂಗೀತ ಕ್ಷೇತ್ರದ ಗಣ್ಯರೂ ಸೇರಿದಂತೆ ಕಲಾಭಿಮಾನಿಗಳೂ ಈ ಕಾರ್ಯಕ್ರಮದಲ್ಲಿ ಇದ್ದು ಚಂದನಾ ನಾಗ್ ರಂಗಪ್ರವೇಶಕ್ಕೆ ಸಾಕ್ಷಿಯಾದರು.

ತನ್ನ ಭರತನಾಟ್ಯ ಕಲಿಕೆಯನ್ನು ಮತ್ತು ಅಭಿನಯವನ್ನು ಅತ್ಯಂತ ಸಮರ್ಥವಾಗಿ ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದ ಚಂದನಾ ನಾಗ್ ಎಲ್ಲ ನೋಡುಗರಿಂದ ಮೆಚ್ಚುಗೆಯನ್ನು ಪಡೆದರು. ಈ ಬಗೆಯಲ್ಲಿ ಕಳೆದ ಭಾನುವಾರ ಏಪ್ರಿಲ್ ‌ಇಪ್ಪತ್ತರ ಸಂಜೆ ತುಂತುರು ಮಳೆಯಿಂದ ಆರಂಭವಾಗಿ ಚಪ್ಪಾಳೆಗಳ ಸುರಿಮಳೆಯಲ್ಲಿ‌ ಸಂಪನ್ನವಾಯಿತು.
- ರಾಧಿಕಾ ರಂಜನ

Tuesday, April 08, 2025

ಟಾಲಿವುಡ್ ಗೆ ಕನ್ನಡದ ಇನ್ನೊಬ್ಬ ನಟ, ’ಬ್ಲಡ್ ರೋಸಸ್’ ಹಿಡಿದು ಬಂದ ಧರ್ಮ ಕೀರ್ತಿರಾಜ್

 ಈಗಾಗಲೇ ಚಂದನವನದ ಪ್ರತಿಭೆಗಳಾದ ಚರಣ್‌ರಾಜ್, ಪ್ರಕಾಶ್‌ರೈ, ಅರ್ಜುನ್‌ಸರ್ಜಾ, ರಶ್ಮಿಕಾಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ಅನ್ಯ ಭಾಷೆಯ ಚಿತ್ರರಂಗದಲ್ಲಿ ಖ್ಯಾತರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಸಾಲಿಗೆ ಚಿತ್ರರಂಗದ ಚಾಕಲೇಟ್ ಬಾಯ್ ಅಂತ ಪ್ರೀತಿಯಿಂದ ಕರೆಸಿಕೊಂಡಿರುವ ಧರ್ಮಕೀರ್ತಿರಾಜ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಅವರು  ’ಬ್ಲಡ್ ರೋಸಸ್’ ಸಿನಿಮಾದ ಮುಖಾಂತರ ಟಾಲಿವುಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಇವರಿಗೆ ರಂಜಿತ್‌ರಾಮ್ ಎಂದು ಹೆಸರಿನೊಂದಿಗೆ ಗ್ರ್ಯಾಂಡ್ ವೆಲ್ ಕಂ ಸಿಕ್ಕಿದೆ. . ಪ್ರಚಾರದ ಮೊದಲ ಹಂತವಾಗಿ ಹಬ್ಬದ ದಿನದಂದು ಪೋಸ್ಟರ್ ಬಿಡಲಾಗಿದ್ದು ಎಲ್ಲಡೆ ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.


ಎಂ.ಗುರುರಾಜನ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವ  ’ಬ್ಲಡ್ ರೋಸಸ್’ ಸಿನಿಮಾಗೆ ಟಿಬಿಆರ್.ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ಬಂಡವಾಳ ಹೂಡಿದ್ದಾರೆ. , ಯಲ್ಲಪ್ಪ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೆ.ಲಕ್ಷಮ್ಮ ಮತ್ತು ಕೆ.ನಾಗಣ್ಣ ಜಂಟಿಯಾಗಿ  ಚಿತ್ರವನ್ನು ಅರ್ಪಣೆ ಮಾಡಿದ್ದಾರೆ.

ಸಮಾಜದಲ್ಲಿ ನಡೆದಿರುವ ಹಾಗೂ ಪ್ರಸಕ್ತ ನಡೆಯುತ್ತಿರುವ ಒಂದಷ್ಟು ನೈಜ ಅಂಶಗಳನ್ನು ಚಿತ್ರದ ಕಥೆಯನ್ನಾಗಿಸಲಾಗಿದೆ.. ಕ್ರೈಂ, ಥ್ರಿಲ್ಲರ್ ಹಾಗೂ ಆಕ್ಷನ್ ಸಾರ ಇರುವ ಸಿನಿಮಾ ಇದಾಗಿದೆ ಎಂದಿರುವ ನಿರ್ದೇಶಕರು ಸಿನಿಮಾದ ಕುರಿತ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


ಧರ್ಮಕೀರ್ತಿರಾಜ್ (ರಂಜಿತ್‌ರಾಮ್), ಅಪ್ಸರರಾಣಿ ಮುಖ್ಯ ಪಾತ್ರಗಳಲ್ಲಿ ಪೋಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕ್ರಾಂತಿಕಿಲ್ಲಿ, ಶ್ರೀಲು, ಹಿರಿಯ ನಟ ಸುಮನ್, ಘರ್ಷಣಾಶ್ರೀನಿವಾಸ್, ಟಾರ್ಜಾನ್, ರಾಜೇಂದ್ರ, ಜ್ಯೂ.ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್‌ದಸ್ತ್ ಜಿಎಂಆರ್, ಜಬರ್‌ದಸ್ತ್ ಬಾಬು, ಜಬರ್‌ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ಅಭಿನಯಿಸಿದ್ದಾರೆ.      

 ಪೆದ್ದಪಲ್ಲಿ ರೋಹಿತ್ ಸಂಗೀತ ,  ಬೋಗಿರೆಡ್ಡಿ ಸಿವಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.  ’ಹನುಮಾನ್’ ಖ್ಯಾತಿಯ ನಂದು ಸಾಹಸ ಮತ್ತು ರಾಜೇಶ್ ಲಂಕ ಹಾಗೂ ಹುಸೇನ್ ಅವರ ಆಕ್ಷನ್ ಚಿತ್ರಕ್ಕಿದೆ. ಕಾರ್ಯಕಾರಿ ನಿರ್ಮಾಪಕ ಮಣಿಕುಮಾರ್, ರವಿತೇಜ್.ಸಿ.ಹೆಚ್ ಸಂಕಲನ ವಿಎಫ್‌ಎಕ್ಸ್ ಶಿರಾ ಪ್ರೊಡಕ್ಷನ್ಸ್, ಎಸ್ ಎಫ್‌ಎಕ್ಸ್ ಶ್ರೀನು ನಾಗಪುರಿ, ಡಿಐ ಸಂಜೀವ್ ಮಾಮಡಿ, ಕಾಸ್ಟ್ಯೂಮ್ ಡಿಸೈನರ್ ಮಂದಾತಿ ಗೀತಿಕ ಅವರದಾಗಿದೆ. 

ಹೈದರಬಾದ್, ರಾಮೋಜಿರಾವ್ ಸ್ಟುಡಿಯೋ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರ. ಸದ್ಯ ಪ್ರಸ್ತುತ ಪೋಸ್ಟ್ ಪ್ರೊಡಕ್ಸನ್ ಹಂತದಲ್ಲಿದೆ.


Sunday, April 06, 2025

ದ್ವಾದಶ ಜ್ಯೋತಿರ್ಲಿಂಗಗಳ ನಡುವಿನ ನಿಗೂಢ ರಹಸ್ಯ

 ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ?

ಭಾರತದ ಅಪರೂಪದ ಸಂಸ್ಕೃತಿ, ನಮ್ಮ ಪೂರ್ವಜರಿಗಿದ್ದ ಅದ್ವಿತೀಯ ವಿಜ್ಞಾನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸಿ ನಮ್ಮಲ್ಲಿ ಚಾಣಾಕ್ಷತನ ಎಷ್ಟಿದೆ ಅನ್ನೋದನ್ನ ಹೇಳುತ್ತೇನೆ.
ಇದನ್ನ ಓದಿದ ನಂತರ ನಿಮಗೆ ನಮ್ಮ ಸಂಸ್ಕೃತಿ, ಬುದ್ಧಿಮತ್ತೆಯಿಂದ ನಿಮಗೆ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆಯಂತೂ ಇಮ್ಮಡಿಯಾಗುತ್ತೆ.
‘ಮಹಾಕಾಲ’ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಅದ್ಭುತ ಸಂಬಂಧ ರಹಸ್ಯ, ರೋಚಕ ಹಾಗು ನಂಬಲಸಾಧ್ಯ.
ಈ ಭೂಮಂಡಲ ಅಥವಾ ಪೃಥ್ವಿಯ ಕೇಂದ್ರಸ್ಥಾನ(Centre of the Earth) ಉಜ್ಜಯಿನಿ ಅನ್ನೋದನ್ನ ನಮ್ಮ ಸನಾತನಿಗಳು ಯಾವಾಗಲೋ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದರು, ಅದು ನಿಜವಂತ ಇತ್ತೀಚಿನ ಅನೇಕ ಸಂಶೋಧನೆಗಳೂ ಒಪ್ಪಿವೆ. ಈ ಉಜ್ಜಯಿನಿಗೂ ನಮ್ಮ ಪೂರ್ವಜರಿಗೂ ಅವರಿಗಿದ್ದ ಖಗೋಳಶಾಸ್ತ್ರದ ಪಾಂಡಿತ್ಯಕ್ಕೂ ಸಂಬಂಧವೇನಂತ ಯೋಚಸುತ್ತಿದೀರಾ.
ಅದಕ್ಕೂ ಕಾರಣವಿದೆ. ಭಾರತದಲ್ಲಿರುವ ಶೇಷ ಜ್ಯೋತಿರ್ಲಿಂಗಗಳ ಸಂಬಂಧ ಉಜ್ಜಯಿನಿಯೊಂದಿಗಿದೆ.
ಅದನ್ನು ತಿಳಿಯೋಣ ಬನ್ನಿ
ಉಜ್ಜಯಿನಿಯಿಂದ ಶೇಷ ಜ್ಯೋತಿರ್ಲಿಂಗಗಳಿಗಿರುವ ದೂರವೂ(in KM’s) ಕೂಡ ಒಂದು ರೋಚಕವೇ.
ಉಜ್ಜಯಿನಿಯಿಂದ
ಸೋಮನಾಥ – 777km
ಓಂಕಾರೇಶ್ವರ – 111km
ಭೀಮಾಶಂಕರ – 666km
ಕಾಶಿವಿಶ್ವನಾಥ – 999km
ಶ್ರೀಶೈಲ ಮಲ್ಲಿಕಾರ್ಜುನ – 999km
ಕೇದಾರನಾಥ – 888km
ತ್ರಿಯಂಬಕೇಶ್ವರ – 555km
ಬೈಜನಾಥ – 999km
ರಾಮೇಶ್ವರಂ – 1999km
ಘೃಷ್ಣೇಶ್ವರ -555km
ಸನಾತನ ಧರ್ಮದಲ್ಲಿ ಕಾರಣವಿಲ್ಲದ ಯಾವ ಸಂಗತಿಗಳೂ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಹಾಗು ಇದನ್ನ ನಮ್ಮ ಪೂರ್ವಜರು ಎರಡೂವರೆ ಸಾವಿರ ವರ್ಷ ಅದಕ್ಕಿಂತ ಮುಂಚೆಯೇ ತಿಳಿಸಿದ್ದರು.
ಜ್ಯೋತಿರ್ಲಿಂಗಗಳು ಹಾಗು ಅವುಗಳು ಸ್ಥಾಪಿಸಿರುವ ಜಾಗಗಳು ನಿಜಕ್ಕೂ ವೈಜ್ಞಾನಿಕವಾಗಿ ಭಾರತದ ರಕ್ಷಣೆ ಮಾಡುತ್ತಿವೆ ಎಂದರೆ ನೀವು ನಂಬುತ್ತೀರಾ?

ಹೌದು ಭಾರತದಲ್ಲಿನ ಜ್ಯೋತಿರ್ಲಿಂಗಗಳಿರುವ ಪ್ರದೇಶಗಳು ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ಕಿರಣಗಳನ್ನ ಸೂಸುವ ಪ್ರದೇಶಗಳಾಗಿವೆ. ಈ ರೇಡಿಯೋ ಆ್ಯಕ್ಟಿವ್ ಕಿರಣಗಳಿಂದ ಮನುಷ್ಯನಿಗೆ ಅತಿ ಅಪಾಯಕಾರಿಯಾಗಿದ್ದು ಇವುಗಳ ನಿಯಂತ್ರಣಕ್ಕೆಂದೇ ನಮ್ಮ ಪೂರ್ವಜರು ರೇಡಿಯೋ ಆ್ಯಕ್ಟಿವ್ ತರಂಗಗಳಿರುವ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ ಮಾಡಿದ್ದರು.
ಪಂಚಾಮೃತವೆಂದು ನಾವು ಶಿವಲಿಂಗಕ್ಕೆ ಅಭಿಷೇಕ ಮಾಡೋದರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ, ಆದರೆ ಜ್ಯೋತಿರ್ಲಿಂಗಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸತತವಾಗಿ ಅಭಿಷೇಕ ಮಾಡುವುದರ ಉದ್ದೇಶವಾದರೂ ಏನು ಅನ್ನೋದು ನಿಮಗೆ ಗೊತ್ತೆ?
ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ಸೂಸುವ ಪ್ರದೇಶದಲ್ಲಿ ಶಿವಲಿಂಗವನ್ನ ಸ್ಥಾಪನೆ ಮಾಡಿ ಅದಕ್ಕೆ ಪಂಚಾಮೃತ ಅಭಿಷೇಕ, ಅಂದರೆ ಹಾಲು ತುಪ್ಪ ಮೊಸರು ಗೋಮಯ ಬೆಣ್ಣೆ ಹೀಗೆ ಅಭಿಷೇಕ ಮಾಡುವುದರಿಂದ ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ತಡೆಯಬಹುದು.
ಈ ಕಾರಣಕ್ಕಾಗೇ ಜ್ಯೋತಿರ್ಲಿಂಗಗಳಿರೋ ಪ್ರದೇಶಗಳಲ್ಲಿ ನಿರಂತರವಾಗಿ ಅಭಿಷೇಕ ಮಾಡುತ್ತ ತರಂಗಗಳ ನಿಯಂತ್ರಣ ಮಾಡಬಹುದೆಂದು ಹಾಗು ಈ ವೈಜ್ಞಾನಿಕತೆಯನ್ನ ಸಾಮಾನ್ಯ ಜನರಿಗೆ ಹೇಳಿದರೆ ಅರ್ಥವಾಗುವುದಿಲ್ಲ ಅನ್ನೋ ಕಾರಣಕ್ಕೆ ನಮ್ಮ ಪೂರ್ವಜರು ದೇವರು, ಶಿವಲಿಂಗ ಅಂತ ಆಧ್ಯಾತ್ಮಿಕ, ಪೌರಾಣಿಕ ಕತೆಗಳ ಮೂಲಕ ನಮಗೆ ಇದರ ಅರಿವು ಮಾಡಿಸಿದ್ದರು.
ಉಜ್ಜಯಿನಿ ಈ ಭೂಮಂಡಲದ ಮಧ್ಯಭಾಗ ಎಂದು ನಮ್ಮ ಪೂರ್ವಜರೂ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು, ನಂತರ ಬಂದ ಬ್ರಿಟಿಷ್ ವಿಜ್ಞಾನಿಗಳು 100 ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಎಳೆದ ಕಾಲ್ಪನಿಕ ರೇಖೆಯ ಮಧ್ಯಭಾಗವು(center place of the earth) ಕೂಡ ಉಜ್ಜಯಿನಿಯನ್ನೇ ಸೂಚಿಸಿತ್ತು ಅನ್ನುವುದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿದ್ದ ಖಗೋಳ ಶಾಸ್ತ್ರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈಗಲೂ ಸೂರ್ಯನ ಹಾಗು ಅಂತರಿಕ್ಷದ ಮಾಹಿತಿಗಾಗಿ ಜಗತ್ತಿನ ವಿಜ್ಞಾನಿಗಳು ಭಾರತದ ಉಜ್ಜಯಿನಿಗೇ ಬರುತ್ತಾರೆ.
ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಏನಂದ್ರೆ ದೇಶದಲ್ಲಿರುವ ಹನ್ನೆರಡೂ ಜ್ಯೋತಿರ್ಲಿಂಗಗಳಿರುವ ಜಾಗವನ್ನ ಮ್ಯಾಪಿನಲ್ಲಿ ಗುರುತು ಹಾಕಿ ಅವುಗಳನ್ನೊಮ್ಮೆ ಪೆನ್ಸಸಿಲ್ ಮೂಲಕ ಗೆರೆಯೆಳೆದು ಜೋಡಿಸಿ,‌ ಆಗ ನಿಮ್ಮ ಕಣ್ಣಿಗೆ ಕಾಣುವುದೇ ಶಂಖ!! ಹೌದು ಬೇಕಿದ್ದರೆ ಟ್ರೈ ಮಾಡಿ ನೋಡಿ
ಭಾರತದಲ್ಲಿ ಇಲ್ಲಿಯವರೆಗೂ ಆಯುರ್ವೇದ, ವಿಜ್ಞಾನ, ಖಗೋಳಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಜೀವನ ಪದ್ಧತಿ ಸಮೇತ ಸಿಕ್ಕ ಸುಮಾರು 12,000 ಪುರಾತನ ಗ್ರಂಥಗಳಲ್ಲಿ ಅಮೇರಿಕ ನಾಲ್ಕು ಸಾವಿರ ಹಾಗು ಜರ್ಮನಿ ಎರಡು ಸಾವಿರದ ಏಳು ನೂರು ಗ್ರಂಥಗಳ ಮೇಲೆ ಪೆಟೆಂಟ್ ಪಡೆದು ನಮ್ಮ ಭಾರತದ ಸಂಸ್ಕೃತಿಯನ್ನ ವಿಶ್ವವ್ಯಾಪಿ ಮಾಡುತ್ತ ಲಾಭ ಮಾಡಿಕೊಳ್ಳುತ್ತಿವೆ
ಆದರೆ ನಮ್ಮದೇ ಇತಿಹಾಸವನ್ನ ನಮ್ಮದೇ ಪ್ರಾಚೀನ ಗ್ರಂಥಗಳ ಬಗ್ಗೆ ನಮಗೆ ಗೊತ್ತರದಿರುವುದು ಅಥವಾ ತಿಳಿದುಕೊಳ್ಳಲೂ ಪ್ರಯತ್ನ ಮಾಡದಿರುವುದು ಮಾತ್ರ ನಿಜಕ್ಕೂ ವಿಷಾದನೀಯ ಹಾಗು ನಾಚಿಕೆಗೇಡಿನ ಸಂಗತಿಯೇ.
ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮ ಸನಾತನ ಹಿಂದೂ ಧರ್ಮ ವೈಜ್ಞಾನಿಕವಾಗಿಯೇ ನಿರ್ಮಿಸಿದಂತ ಧರ್ಮವಾಗಿದ್ದು ಇದನ್ನ ಯಾರು ಎಷ್ಟೇ ಹೀಗಳೆದರು, ನಿರಾಕರಿಸಿದರೂ ಇದು ವಿಶ್ವವ್ಯಾಪಿ ಸಾರ್ವತ್ರಿಕ ಸತ್ಯ ಆದರೆ ಇದನ್ನ ನಾವು ಪೆಟೆಂಟ್ ಮಾಡಿಸಿಲ್ಲ ಅಷ್ಟೇ.
ನಮ್ಮತನ, ಇತಿಹಾಸ, ಸಂಸ್ಕೃತಿ ಆಚಾರ ವಿಚಾರ ನಾವು ಮರೆತರೆ ನಾವು ಜಗತ್ತಿನಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೇವೆ. ಬನ್ನಿ ಈಗಲಾದರೂ ಇದರ ಬಗ್ಗೆ ಗಮನಹರಿಸಿ ನಮ್ಮ ಶಕ್ತಿಯನ್ನ ಬೌದ್ಧಿಕ ಸಾಮರ್ಥ್ಯವನ್ನ ಜಗತ್ತಿನೆದುರು ಅನಾವರಣವಗೊಳಿಸೋಣ.