ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಹಬ್ಬವನ್ನು ನವೆಂಬರ್ 28 ರಂದು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಬಿತ್ತಿಪತ್ರ ಬಿಡುಗಡೆ ಸಮಾರಂಭವನ್ನು ಹೆಚ್. ಎಸ್. ಆರ್. ಲೇಔಟ್ ನಲ್ಲಿರುವ ಸಮರ್ಥನಂ ಟ್ರಸ್ಟ್ ನಲ್ಲಿ ಲೋಕಾರ್ಪಣೆಗೊಂಡಿತು.
ಇಲ್ಲಿನ ಸಮರ್ಥನಂ ಟ್ರಸ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರನೇ ವಿಶ್ವಕನ್ನಡ ಹಬ್ಬದ ಪದಾಧಿಕಾರಿಗಳ ಜೊತೆಯಲ್ಲಿ ಶಾರದಾ ಹಾಗೂ ಶ್ರಾವ್ಯ ರವರು ಪಲ್ಲಕ್ಕಿಯಲ್ಲಿ ಭೀತಿ ಪತ್ರವನ್ನು ವೇದಿಕೆಗೆ ತಂದು ಗಣ್ಯಾಧಿ ಗಣ್ಯರು ಬಿಡುಗಡೆಯನ್ನು ಮಾಡಿದರು. ಇದೇ ವೇಳೆ ಪಿ,ಎಸ್, ರಂಗನಾಥ್ ಸಂಪಾದಿಸಿರುವ 'ಬಿಯಾಂಡ್ ದಿ ಹರಿಜಾನ್' ( ಇಂಡಿಯನ್ ವಾಯ್ಸಸ್ ಫ್ರಮ್ ಒಮಾನ್) ಪುಸ್ತಕವನ್ನು ಜನಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮೂರನೇ ವಿಶ್ವಕನ್ನಡ ಹಬ್ಬದ ಪ್ರಧಾನ ಕಾರ್ಯದರ್ಶಿಯನ್ನಾಗಿ ಚೈತ್ರಾ ಕೆ. ಎಸ್. ಹಾರೋಬೆನವಳ್ಳಿ, ನೃತ್ಯಕ್ಕೆ ಸಹನಾ, ಗಾಯನಕ್ಕೆ ಚೇತನ್ ನಾಯ್ಕ್ ರವರನ್ನು ಆದೇಶ ಪತ್ರ ವಿತರಿಸಿದರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸೋಮಣ್ಣ ಬೇವಿನಮರದ ಅವರು ಕನ್ನಡದ ಸಂಸ್ಕೃತಿ ಉಳಿಸಲು ಬೆಳೆಸಲು ನಮ್ಮ ಬೆಂಬಲ ಯಾವಾಗಲೂ ಇದ್ದೆ ಇರುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮಾತನಾಡಿ ಕನ್ನಡದ ಕಾರ್ಯಕ್ರಮಗಳು ನಮ್ಮ ಜೀವಾಳ, ನಾಡಿನ ನೆಲ ಜಲ ಸಾಂಸ್ಕೃತಿಕತೆಗಾಗಿ ಸಾಕಷ್ಟು ಹಿರಿಯರು ಹೋರಾಟ ಮಾಡಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ರೀತಿಯಲ್ಲಿ ನಾವು ಕನ್ನಡವನ್ನು ರಕ್ಷಿಸಿದರೆ ಕನ್ನಡದಿಂದ ನಾವು ರಕ್ಷಿಸಲ್ಪಡುತ್ತೇವೆ ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವ ಭಗವಂತ ಖೂಬ ರವರು ಮಾತನಾಡಿ ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದಾರೆ ಯಾವುದೇ ಸಮುದಾಯ ಅತ್ಯುನ್ನತ ಸ್ಥಾನಕ್ಕೆ ಇರಬೇಕಾದರೆ ಅದರ ಸಂಸ್ಕೃತಿ ತಳಪಾಯ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಕನ್ನಡ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಹರಡೋಣ ವಿದೇಶದಲ್ಲಿರುವ ಕನ್ನಡಿಗರಲ್ಲಿ ಕನ್ನಡದ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಿ ಕನ್ನಡಿಗರ ಪ್ರೀತಿ ಸಹಕಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಲ್ಲಿ ಕನ್ನಡದ ಹಬ್ಬ ನಡೆಯಲಿದೆ ಎಂದು ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ರವರು ಕಣ್ಣಿಲ್ಲದವರು ಸೇರಿ ಅಂಗವಿಕಲರಿಗೆ ಬೆಳಕಾಗಿರುವ ಸಮರ್ಥನಂ ಸಂಸ್ಥೆಯ ಮಹಾಂತೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲು ಪಕ್ಷಾತೀತವಾಗಿ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಎಂದು ಅಗ್ರಹಿಸಿದರು.
ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಮಹಂತೇಶ್ ಕಿವಡಸಣ್ಣವರ್ ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವಕನ್ನಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದೀವಿ, ಕನ್ನಡದವನ್ನು ಉಳಿಸಿಕೊಳ್ಳಲು ಬೆಳೆಸಲು ಇಂತಹ ಕಾರ್ಯ ಹೆಜ್ಜೆ ಹೆಜ್ಜೆಯೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಟಿ ಶಿವಕುಮಾರ್ ನಾಗರನವಿಲೆ ಮಾತನಾಡಿ ದುಬೈ, ಸಿಂಗಾಪುರ್ ಬಳಿಕ ವಿಶ್ವಕನ್ನಡ ಹಬ್ಬ ಮಸ್ಕತ್ ನಲ್ಲಿ ನಡೆಯಲಿದೆ. ಕನ್ನಡದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಸಾಕಷ್ಟು ಸವಾಲಿನಿಂದ ಕೂಡಿದ್ದ ಎರಡನೇ ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದ್ದೇನೆ, ಈ ಬಾರಿಯೂ ಎಲ್ಲ ಕನ್ನಡಿಗರು ಒಟ್ಟಾಗಿ ಹಬ್ಬವನ್ನು ಗೆಲ್ಲಿಸಿ ಎಂದರು. ಮೂರನೇ ವಿಶ್ವಕನ್ನಡ ಹಬ್ಬದ ಸಮಿತಿ ಅಧ್ಯಕ್ಷ ದಿನೇಶ್ ಜೋಶಿಯವರು ನಮ್ಮ ತನು, ಮನ, ಎಲ್ಲದರಲ್ಲಿಯೂ ನಮ್ಮ ಬೆಂಬಲವಿದೆ ಮುನ್ನುಗೋಣ ನಮ್ಮ ಕನ್ನಡಾಂಬೆಯ ಹಬ್ಬ ಆಚರಿಸಲು ಎಂದು ಪ್ರಶಂಸಿಸಿದರು. ಮಸ್ಕತ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕರುಣಾಕರಾವ್, ಜಾನಕಿನಾಥ್, ಬಸವ ಬಳಗದ ಶಿವ ಕುಮಾರ್ ಕೆಂಚನಗೌಡ್ರ, ಮೂರನೇ ವಿಶ್ವಕನ್ನಡ ಹಬ್ಬದ ಎಲ್ಲಾ ಪದಾಧಿಕಾರಿಗಳು ಸೇರಿ ಹಲವರಿದ್ದರು.
ಹಲವಾರು ಗಣ್ಯಾಧಿ ಗಣ್ಯರು ಮಾತನಾಡಿ ಕನ್ನಡದ ಸೇವೆಗೆ ನಮ್ಮ ಬೆಂಬಲ ಯಾವಾಗಲು ಸಿದ್ದ ನಮ್ಮ ಕನ್ನಡದ ಸೇವೆ ಮಾಡುತ್ತಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಶಿವಕುಮಾರ್ ನಾಗರ ನಾವಿಲೆ ಹಾಗೂ ವಿಶ್ವ ಕನ್ನಡ ಹಬ್ಬದ ಸಮಿತಿಗೆ ಅಭಿನಂದಿಸಿದರು.
No comments:
Post a Comment