ಜ್ಞಾನಪೀಠ ಪ್ರಶಸ್ತಿ ವಿಜೇತ ಮತ್ತು 1955ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಒಡಿಯಾ ಸಾಹಿತಿ ಗೋಪಿನಾಥ್ ಮೊಹಂತಿ (20 ಏಪ್ರಿಲ್ 1914 - 20 ಆಗಸ್ಟ್ 1991) ಇಪ್ಪತ್ತನೇ ಶತಮಾನದ ಮಧ್ಯಭಾಗದ ಒಬ್ಬ ಮಹತ್ವದ ಒಡಿಯಾ ಬರಹಗಾರರಾಗಿದ್ದರು. : "ನನ್ನ ಅಭಿಪ್ರಾಯದಲ್ಲಿ, ಗೋಪಿನಾಥ್ ಮೊಹಂತಿ ಇಪ್ಪತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ ಅತ್ಯಂತ ಪ್ರಮುಖ ಭಾರತೀಯ ಕಾದಂಬರಿಕಾರ" ಎನ್ನುವುದಾಗಿ ಕಾರ್ನೆಲ್ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಸತ್ಯ ಪ್ರಕಾಶ್ ಮೊಹಂತಿ ಹೇಳಿದ್ದಾರೆ. ಮೊಹಂತಿಯವರ "ಅಮೃತರ್ ಬಚುಮಾನ್" ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಕೃತಿಗಳು ಬುಡಕಟ್ಟು ಜೀವನಶೈಲಿ ಮತ್ತು ಅವರ ಮೇಲಿನ ಆಧುನಿಕತೆಯ ದಬ್ಬಾಳಿಕೆಗಳ ಕುರಿತು ಹೇಳುತ್ತವೆ. ಅವರ ಬರಹಗಳನ್ನು ಭಾರತದ ಇತರೆ ಬಾಷೆಗಳಿಗೆ ಅನುವಾದಿಸಲಾಗಿದೆ. ಪರ್ಜಾ, ದಾದಿಬುಧಾ, ಅಮೃತರ್ ಬಚುಮಾನ್, ಛಾಯಾಲು ಗಲ್ಪ್ ಇವೇ ಮುಂತಾದವು . ಅವರ ಪ್ರಮುಖ ಕೃತಿಗಳಾಗಿದೆ. 1986 ರಲ್ಲಿ, ಗೋಪಿನಾಥ್ ಮೊಹಂತಿ ಯುಎಸ್‌ನ ಸ್ಯಾನ್ ಜೋಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ಸೇರಿದರು. ಅವರು ತಮ್ಮ ಉಳಿದ ಜೀವನವನ್ನು ಅಲ್ಲಿಯೇ ಕಳೆದರು.
ಗೋಪಿನಾಥ್ ಮೊಹಂತಿ ಅವರು ಕಟಕ್ ಜಿಲ್ಲೆಯ ನಾಗಬಲಿ ಗ್ರಾಮದಲ್ಲಿ 1914 ರ ಏಪ್ರಿಲ್ 20 ರಂದು ಜನಿಸಿದರು. ಅವರು ಪ್ರಸಿದ್ಧ ಸಾಹಿತಿ ಕಹ್ನು ಚರಣ್ ಮೊಹಂತಿ ಅವರ ಹಿರಿಯ ಸಹೋದರ ಮತ್ತು ಮತ್ತೊಬ್ಬ ಸಾಹಿತಿ ಗುರುಪ್ರಸಾದ್ ಮೊಹಂತಿ. ಅವರ ಸೋದರಳಿಯ ಬಿಜು ಪಟ್ನಾಯಕ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಶಿಕ್ಷಣತಜ್ಞ ಓಂಕಾರನಾಥ್ ಮೊಹಂತಿ ಅವರ ಪುತ್ರರಾಗಿದ್ದಾರೆ.. ರಾವೆನ್‌ಶಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು 1936 ರಲ್ಲಿ ಪಾಟ್ನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಮೊಹಂತಿ 1938 ರಲ್ಲಿ ಒಡಿಶಾ ಆಡಳಿತ ಸೇವೆಗೆ ಸೇರಿ 1969 ರಲ್ಲಿ ನಿವೃತ್ತರಾದರು. 1970 ರ ದಶಕದ ಉತ್ತರಾರ್ಧದಲ್ಲಿ ಉತ್ಕಲ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ, ಯುಜಿಸಿಯ ವಿಶಿಷ್ಟ ಸಂದರ್ಶಕ ಪ್ರಾಧ್ಯಾಪಕ ಮತ್ತು ಉತ್ಕಲ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಪ್ರಭಾತ್ ನಳಿನಿ ದಾಸ್ ಅವರಿಂದ ವಿಶ್ವವಿದ್ಯಾನಿಲಯದ ಕೆಲಸಕ್ಕಾಗಿ ಮೊಹಂತಿಯವರಿಗೆ ಆಹ್ವಾನ ಬಂದಿತ್ತು. 1986 ರಲ್ಲಿ, ಅವರು ಸಮಾಜ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾಗಿ ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಜೋಸ್ ಸ್ಟೇಟ್ ವಿಶ್ವವಿದ್ಯಾಲಯವನ್ನು ಸೇರಿದರು.
ಸ್ವಾತಂತ್ರ್ಯಾನಂತರದ ಯುಗದಲ್ಲಿ ಒಡಿಯಾ ಕಾದಂಬರಿ ಕ್ಷೇತ್ರ ಹೊಸ ದಿಕ್ಕನ್ನು ಪಡೆದುಕೊಂಡಿತು. 1950 ರ ದಶಕದ ನಂತರ ಫಕೀರ್ ಮೋಹನ್ ಸೇನಾಪತಿ ಪ್ರಾರಂಭಿಸಿದ ಹೊಸ ಹಾದಿಗೋಪಿನಾಥ್ ಮೊಹಂತಿ, ಸುರೇಂದ್ರ ಮೊಹಂತಿ ಮತ್ತು ಮನೋಜ್ ದಾಸ್ ಅವರಿಂಡ ಸಮೃದ್ದವಾಗಿತ್ತು. ಈ ಮೂವರನ್ನು ಅಂದಿನ ಅವಧಿಯ ಮೂವರು ಸಾಹಿತ್ಯ ರತ್ನಗಳೆಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯದ ನಂತರ ಮೊಹಂತಿಯವರ ಬರವಣಿಗೆ ಪ್ರಾರಂಭವಾಗಿತ್ತು. ಗೋಪಿನಾಥ್ ಅವರ ಮೊದಲ ಕಾದಂಬರಿ, ಮನ ಗಹಿರಾರ ಚಾಸಾ, 1940ರಲ್ಲಿ ಪ್ರಕಟವಾಯಿತು, ಅದರ ನಂತರ ದಾದಿಬುಧಾ, (1944), ಪರ್ಜಾ,(1945) ಮತ್ತು ಅಮೃತರ್ ಬಚುಮಾನ್ (1947) ಪ್ರಕಟವಾದವು. ಅವರ ಬರಹಗಳು ಆ ಕಾಲದ ಸಾಮಾನ್ಯ ಜನರು, ಬುಡಕಟ್ಟು ಜನಾಂಗದವರು ಮತ್ತು ಇತರ ಬುಡಕಟ್ಟು ಜನಾಂಗದವರ ಸರಳ, ಸರಳ ಜೀವನದ ಕುರಿತಾಗಿತ್ತು. ಒಡಿಯಾ ಸಂಸ್ಕೃತಿ, ಬಯಲು ಹಾಗೂ ಬೆಟ್ಟ ಪ್ರದೇಶದಲ್ಲಿ ಜೀವನದ ಕಥೆಗಳು, ಸಾಮಾನ್ಯ ಜನರ ಭಾಷೆಯ ಬಳಕೆ ಇತ್ಯಾದಿಗಳನ್ನು ಅವರ ಬರಹಗಳಲ್ಲಿ ಕಾಣಬಹುದು.
ದಾದಿಬುಧಾ, ಬುಡಕಟ್ಟು ಸಮುದಾಯದ ಕುರಿತಾದ ಅವರ ಮೊದಲ ಕಾದಂಬರಿ ಮತ್ತು ಇದು ದಟ್ಟವಾದ ಕಾಡಿನಿಂದ ಸುತ್ತುವರೆದಿರುವ ಪರ್ವತ ಪ್ರದೇಶದ ಬುಡಕಟ್ಟು ಜನರ ಜೀವನ ಮತ್ತು ಸಂಪ್ರದಾಯದ ವಾಸ್ತವಿಕ ಚಿತ್ರಣವನ್ನು ನೀಡುತ್ತದೆ. ಇದು ಬುಡಕಟ್ಟು ಸಾಹಿತ್ಯದ ಕುರಿತ ಒಂದು ಪ್ರಮುಖ ಕಾದಂಬರಿಯಾಗಿದ್ದು, ಚಿನುವಾ ಅಚೆಬೆ ಅವರ ಬುಡಕಟ್ಟು ಸಂಸ್ಕೃತಿಯ ವಸಾಹತುಶಾಹಿ ಆಕ್ರಮಣದ ಶ್ರೇಷ್ಠ ಕಥೆಗೆ ಅನುರೂಪವಾಗಿದೆ. , ಚಿನುವಾ ಅಚೆಬೆ ಅವರ ಥಿಂಗ್ಸ್ ಫಾಲ್ ಅಪಾರ್ಟ್ ಮತ್ತು ಈ ಕೃತಿ ಬಹುತೇಕ ಒಂದೇ ವಿಷಯವನ್ನು ಮುನ್ನೆಲೆಗೆ ತರುತ್ತದೆ. ಆಧುನಿಕತೆಯ ಪ್ರಭಾವ ಮತ್ತು ಬುಡಕಟ್ಟು ಸಮಾಜದ ವಿಘಟನೆ. ಕುರಿತಂತೆ ಇಲ್ಲಿ ಚರ್ಚಿಸಲಾಗಿದೆ.
ಪರ್ಜಾ, ಬುಡಕಟ್ಟು ಸಮುದಾಯದ ಜೀವನವನ್ನು ಆಧರಿಸಿದ ಒಂದು ಹೃದಯಸ್ಪರ್ಶಿ ನಿರೂಪಣೆಯಾಗಿದೆ. ಇದು ಪೂರ್ವಜರ ಮಣ್ಣಿನೊಂದಿಗೆ ಹೊಂದಿರುವ ರ ಬಾಂಧವ್ಯದ ಕಥೆಯಾಗಿದೆ. ಈ ಕಾದಂಬರಿಯು ಒಡಿಯಾ ಬುಡಕಟ್ಟು ಜನಾಂಗದವರ ಮೇಲೆ ವಸಾಹತುಶಾಹಿ ಆಳ್ವಿಕೆಯ ಪ್ರಭಾವವನ್ನು ಸೂಚ್ಯವಾಗಿ ಚಿತ್ರಿಸುತ್ತದೆ. "ಛಿದ್ರಗೊಂಡ ಕನಸುಗಳ ಕಥೆ" ಎನ್ನುವುದಾಗಿ . ಸೀತಾಕಾಂತ್ ಮಹಾಪಾತ್ರ ಈ ಕಾದಂಬರಿಯನ್ನು ಕುರಿತು ಹೇಳಿದ್ದಾರೆ.
ಅಮೃತರ್ ಬಚುಮಾನ್, , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955) ಪಡೆದ ಮೊದಲ ಕಾದಂಬರಿ, ಒಡಿಶಾದ ದಕ್ಷಿಣ ಭಾಗಗಳ ಮತ್ತೊಂದು ಬುಡಕಟ್ಟು ಜನಾಂಗವಾದ ಕಂದರ ಜೀವನವನ್ನು ಕುರಿತಾಗಿ ಈ ಕಥೆ ಸಾಗುತ್ತದೆ.
ಅವರ ಸಾಹಿತ್ಯಿಕ ಸಾಧನೆ ಸಮೃದ್ಧವಾಗಿತ್ತು ಅವರು 24 ಕಾದಂಬರಿಗಳು, 11 ಸಣ್ಣ ಕಥೆಗಳು, 3 ನಾಟಕಗಳು, 2 ಆತ್ಮಚರಿತ್ರೆಗಳು, 2 ಪ್ರಬಂಧಗಳು, ಕಂಧ, ಗಡ್ಬಾ, ಸೌರ ಭಾಷೆಯ ಕುರಿತು 5 ಪುಸ್ತಕಗಳನ್ನು ಬರೆದಿದ್ದಾರೆ. ಅವರು ಲಿಯೋ ಟಾಲ್‌ಸ್ಟಾಯ್ ಅವರ "ಯುದ್ಧ ಮತ್ತು ಶಾಂತಿ" ಯನ್ನು ಒಡಿಯಾಕ್ಕೆ ಅನುವಾದಿಸಿದ್ದಾರೆ. (ಯುದ್ಧ ಊ ಶಾಂತಿ, 3 ಸಂಪುಟಗಳು, 1985-86) ಮತ್ತು ಅವರ ಇನ್ನೊಂದು ಅನುವಾದವೆಂದರೆ ಟ್ಯಾಗೋರ್ ಅವರ "ಯೋಗಯೋಗ" (1965). 1956 ರಲ್ಲಿ ಬರೆದ ಅವರ ಐದು ಸಣ್ಣ ಕಥೆಗಳ ಸಂಗ್ರಹವಾದ "ಚೈಯಾಲುವೋ" ನಂತರ, 1992 ರಲ್ಲಿ, ಅವರ ಮರಣದ ಒಂದು ವರ್ಷದ ನಂತರ, ಇನ್ನೂ ಐದು ಕಥೆಗಳನ್ನು ಸೇರಿಸುವುದರೊಂದಿಗೆ "ಚೈಯಾಲುವೋ" ನ ವಿಸ್ತೃತ ಆವೃತ್ತಿ ಪ್ರಕಟವಾಯಿತು.
ಗೋಪಿನಾಥ್ ಅವರ ನಾಲ್ಕು ಕಾದಂಬರಿಗಳಾದ ಪರ್ಜಾ, ದಾನಪಾಣಿ, ಲಯಾ ಬಿಲಾಯ್, ದಾದಿ ಬುದ್ಧ ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಮೊದಲ ಮೂರು ಕಾದಂಬರಿಗಳನ್ನು ಬಿಕಮ್ ಕೇಸರಿ ದಾಸ್ ಮತ್ತು ಕೊನೆಯದನ್ನು ಅರುಣ್ ಕುಮಾರ್ ಮೊಹಂತಿ ಅನುವಾದಿಸಿದ್ದಾರೆ. ಪರ್ಜಾವನ್ನು 1987 ರಲ್ಲಿ ಫೆಬ್ರ & ಫೆಬ್ರ (ಯು..ಕೆ.) ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (ಭಾರತ) ಪ್ರಕಟಿಸಿವೆ. ಅವರ ಅನೇಕ ಸಣ್ಣ ಕಥೆಗಳನ್ನು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ. ಗೋಪಿನಾಥ್ ಮೊಹಂತಿಯವರ ಭಾಷೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಇಂಗ್ಲಿಷ್‌ನಲ್ಲಿ ನಿರೂಪಿಸುವುದು ತುಂಬಾ ಕಷ್ಟ ಎನ್ನುವುದು ಅನುವಾದಕರ ಮಾತಾಗಿದೆ.
ಮೊಹಂತಿ 1950 ರಲ್ಲಿ ವಿಸುವ ಮಿಲನ್ ಪ್ರಶಸ್ತಿಯನ್ನು ಪಡೆದರು. 1955ರಲ್ಲಿ ಅವರು ತಮ್ಮ "ಅಮೃತರ್ ಬಚುಮಾನ್" ಕಾದಂಬರಿಗಾಗಿ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಯಾವುದೇ ಭಾಷೆ ಅಥವಾ ಯಾವುದೇ ಪ್ರಕಾರದ ಸೃಜನಶೀಲ ಸಾಹಿತ್ಯ ಕೃತಿಗೆ ನೀಡಲಾದ ಮೊದಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇದು.1973ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಮಹಾಕಾವ್ಯವಾದ "ಮತಿ ಮಾತಲ"ಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಗೌರವ ಒಲಿದಿತ್ತು. 1976ರರಲ್ಲಿ ಗೋರ್ಕಿಯವರ ಕೃತಿಯ ಒಡಿಯಾ ಅನುವಾದಕ್ಕಾಗಿ ಅವರಿಗೆ 1970 ರಲ್ಲಿ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಯನ್ನು ನೀಡಲಾಯಿತು,1976ರಲ್ಲಿ ಸಂಬಲ್ಪುರ್ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಮತ್ತು 1976ರರಲ್ಲಿ ಉತ್ಕಲ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಯು.ಜಿ.ಸಿ.ಯಿಂದ ಸೃಜನಶೀಲ ಬರವಣಿಗೆಗಾಗಿ ವಿಶಿಷ್ಟ ಸಂದರ್ಶಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಲಾಯಿತು. 1981ರಲ್ಲಿ, ಭಾರತ ಸರ್ಕಾರವು ಸಾಹಿತ್ಯಕ್ಕೆ ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಅವರು ಸೃಜನಶೀಲ ಬರವಣಿಗೆಗಾಗಿ ಭಾರತ ಸರ್ಕಾರದ ಎಮೆರಿಟಸ್ ಫೆಲೋ ಆಗಿದ್ದರು.
ಅವರು ಆಗಸ್ಟ್ 20, 1991 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಿಧನರಾದರು.
No comments:
Post a Comment