Friday, July 11, 2025

ಜೆನ್ ಜೀ ಪ್ರೇಮಿಗಳ ತವಕ ತಲ್ಲಣಗಳ ಕಥೆ - ದೂರ ತೀರ ಯಾನ


- ರಾಘವೇಂದ್ರ ಅಡಿಗ ಎಚ್ಚೆನ್. 

ಚಿತ್ರ: ದೂರ ತೀರ ಯಾನ

ನಿರ್ಮಾಣ: ದೇವರಾಜ್ ಆರ್. 

ನಿರ್ದೇಶನ: ಮಂಸೋರೆ

ತಾರಾಂಗಣ: ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್, ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ ಮುಂತಾದವರು.

ರೇಟಿಂಗ್: 3/5


ಆಕಾಶ್ ಒಬ್ಬ ವಯೋಲಿನ್ ವಾದಕ, ಹಾಗೂ ಭೂಮಿ ಕೊಳಲು ವಾದಕಿ 5 ವರ್ಷಗಳಿಂದ ಪ್ರೇಮಿಗಳಾಗಿರುತ್ತಾರೆ. ಆದರೆ ಇಬ್ಬರ ನಡುವೆ ಚಿಕ್ಕ ಪುಟ್ಟ ವಿಷಯಗಳಿಗೂ ಕಿತ್ತಾಡಿಕೊಳ್ಳುತ್ತಾರೆ. ಅದು ಕಾಫಿ ಟೀ ವಿಷಯದಲ್ಲಿಯೂ ಜಗಳ ಆಗುವಷ್ಟರ ಮಟ್ಟಿಗೆ ಇದೆ. ಹಾಗಾಗಿ ಇಬ್ಬರೂ ಮದುವೆಯಾಗದೆ ಬೇರೆ ಆಗುವುದಕ್ಕೆ ನಿರ್ಧರಿಸುತ್ತಾರೆ. ಅದಕ್ಕೆ ಮುನ್ನ ಒಂದು ವಾರ ಇಬ್ಬರೂ ಒಟ್ಟಿಗೇ ಪಯಣಿಸಿ ನಂತರ ಬೇರಾಗಬೇಕು ಎನ್ನುವ ತೀರ್ಮಾನ ಮಾಡುತ್ತಾರೆ. ಆ ಒಂದು ವಾರದ ಪಯಣವೇ "ದೂರ ತೀರ ಯಾನ"

ನಿರ್ದೇಶಕ ಮಂಸೋರೆ ಈ ಬಾರಿ ಹೊಸದೊಂದು ಸ್ವರೂಪದ ಕಥೆಯನ್ನು ತೆಗೆದುಕೊಂಡು ಬಂದಿದ್ದಾರೆ.  ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’, ‘19-20-21’ ಎಲ್ಲವುಗಳಿಗಿಂತ ಇದು ಬೇರೆಯದೇ ರೀತಿಯ ಕಥೆ. ಮುಖ್ಯವಾಗಿ ಈ ಸಿನಿಮಾ ಪ್ರೇಮಿಗಳು ಹೇಗೆ ಒಂದಾಗುತ್ತಾರೆ ಎನ್ನುವುದಕ್ಕಿಂತ ಪ್ರೇಮಿಗಳ ನಡುವೆ ಬ್ರೇಕಪ್  ಆಗುವಾಗ ಹೇಗೆ ಗೌರವಯುತವಾಗಿ ದೂರವಾಗುವುದು ಎಂಬುದನ್ನು ತೋರಿಸಲಾಗಿದೆ. ದಾಂಪತ್ಯ ಅಥವಾ ಪ್ರೇಮದ ಜೀವನದಲ್ಲಿ ಹೊಂದಾಣಿಕೆಯ ಬದುಕಿನ ಬಗ್ಗೆ ಕೆಲವು ಸಿದ್ದ ಸೂತ್ರವಿದೆ. ಆದರೆ ಹಾಗೆ ಸಿದ್ದ ಸೂತ್ರ ಪಾಲನೆ ಮಾಡುವವರೆಲ್ಲಾ ಖುಷಿಯಾಗಿದ್ದಾರೆಯೆ? ಅದು ಸಾಧ್ಯವಿದೆಯ? ಈ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಕೊಡುವ ಪ್ರಯತ್ನ ಇದೆ. ಇದೊಂದು ಪ್ರೇಮಕಥೆ,, ಅದರಲ್ಲೂ ಈಗಿನ ಜನರೇಷನ್‌ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ.. ಇಂದಿನ ಕಾಲದ ಪ್ರೇಮಿಗಳ ತವಕ ತಲ್ಲಣಗಳಿಗೆ ಇದು ಕನ್ನಡಿಯಾಗಿದೆ. 

ಚಿತ್ರಕಥೆ ಸೊಗಸಾಗಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್, ಕಾರ್ತಿಕ್ ಹಾಗೂ ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಥೆಗೆ ಪೂರಕವಾಗಿದೆ.  ಆದರೆ ಕಥೆಯಲ್ಲಿ ಹೆಚ್ಚು ತಿರುವು ಇಲ್ಲ, ಸಿನಿಮಾದಲ್ಲಿ ಎಲ್ಲೂ ಹಾಸ್ಯ ಸನ್ನಿವೇಶಗಳಿಲ್ಲ ನಿಧಾನಗತಿಯ ನಿರೂಪಣೆಯೂ ಕೆಲವೆಡೆ ನೀರಸ ಎನಿಸಬಹುದು

ನಾಯಕ ವಿಜಯ್ ಕೃಷ್ಣ ಹಾಗೂ ನಾಯಕಿ ಪ್ರಿಯಾಂಕಾ ಕುಮಾರ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುತ್ತಾರೆ. ಇಬ್ಬರದೂ ಸಹಜಾಭಿನಯವಿದೆ.  ಆದರೆ ಕೆಲ ಭಾವನಾತ್ಮಕ ಸನ್ನಿವೇಶಗಳಲ್ಲಿ ಪ್ರಿಯಾಂಕಾ ಅವರಿಂದ ಇನ್ನಷ್ಟು ಉತ್ತಮ ನಟನೆಯ ನಿರೀಕ್ಷೆ ಇತ್ತು. ಉಳಿದಂತೆ ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, , ಕೃಷ್ಣ ಹೆಬ್ಬಾಲೆ,ಅವರೆಲ್ಲರ ಪಾತ್ರಗಳು ಹೀಗೆ ಬಂದು ಹಾಗೆ ಮರೆಯಾಗುತ್ತದೆ. 

Wednesday, July 09, 2025

ಏಪ್ರಿಲ್, ಮೇ ಮತ್ತು ಜೂನ್ ತಿಂಗಳ "ಗೃಹಶೋಭಾ" ಸಂಚಿಕೆಯಲ್ಲಿ ನನ್ನ ಲೇಖನ

 May be an image of text

May be an image of 1 person and text that says "5 ಸಾಯರಾಮ プずの ២ ಿಅಿರಮಾಡಲ್ಲಿ ಭುಸ್ಸಮ ಮನక್ನ್ಲಿ ಮೂರುಕ 리닉 သစ်မာ បានអ្នកក6 วำซัท ಹಾಗಯ್ೋ ನಾಯ rise ಪಂಚಸ್ರವಗ ಮందವಾ ಬೆಂಗಳಯರಗರೇ ಸದಲಿಸಿಂದಲೂ ನನೆಗೆ ಒದಿದೂ ನಟಸೆ. ಮಾಡಲು ಕಾರಲೇಜೆಗೆ පටක් ಕಡಕ್ ಮಗವರಿ ಸಯತ್ಮಗಳನ್ನು රයාන්යකක. ತಳು ಚಿಪ್ರದಲಲ್ಲಿ ನವನೆ ಚೊತೆಗೆ ಸುಳು ಭಾನೆಯನ್ನೂ ದರಿಂದಾಗಿ ರಾಜ್. ನಿರ್ಮಾಣ ಮಾಡುತಿರುವ 'ರಾಜ್ মমিয়য়গ ತುಳು ನಟವಿಕುವ ಎಸ್ುತತಾರೆ ಇಲ್ಲಿಂದ ಜರ್ನಿ ಶುರುವಾಯಿತು ಜೋಗರಾಜ್ ರೆಲವುದಿ ದಿನಗಳ ನಾವು ಆಯ್ಯೆಯಾಗಿರುವ ವಿಷಯ ತಿಳಿಸಿವರು. ಮಾಡಿ ಅಧಿಕ್ಯತ 'ಪದವಿಸಂರ್ತ' ಮೂಲಕ ಆಧಿಕ್ೃತವಾಗಿ ನ್ಾಂಡಲ್‍ವುಡ್ಗ ಎಂಟ್ರ ಪಡೆದುಕೊಂಡ ಎಂದು ಯಸಾ ತಮ್ಮ ಚಿತ್ಯರಂಗದ ಎಂಟ್ರ ಕುರಿತು ಹೇಭಿಕೊಂದಿದಾರ. ನಿರ್ವಹಿಸಿದ ಸಾತ್ರಗಳು ಕಳೆದ ವರ್ ತರೆಕಂಡಿದ ಕಿರಣ್ ನಟಿಸಿರುವ 'ಭರ್ಜರ ಗಂು ಅಭಿನಯೆಸ್ಿದರು. ವ್ರಸ್ತ ಡೈನಾಮಿಕ್ ದೇವರಾಜ್ ನಾಯಕನಾಗಿರುವ ತಲುಗು, ತುಳು ಬಾವಯ ಸಿನಿಮಾಗಳ ಸದ್ದ ಮುಂದಿನ ಬರಲಿ ವನ್ನುವುರು ಹಾರೈರ. ರಾಭರವಂುದ್ಯ ಎನಿಸಿದಾರ. ಮದಾ ಎಟ್ಟನ್ 77 കയ்ലോാ 2025"

May be an image of 1 person, smiling and text that says "ಬೇಸಿಗೆಯಲ್ಲಿ ಆರೋಗ್ಯ ಬೇಸಿಗೆ ರಜೆಯಲ್ಲಿ ಸಾಂದರ್ಯ ದ ನಿರ್ವ ಹಣೆ ಪ್ರವಾಸಕ್ಕೆ ಹೊರಟಿರಾ...? ? ಗೃಹಶೋಭಾ ಏಪ್ರಿಲ್,2025 2025 Grihshobha ಏಪ್ರಿಲ್, ಜೋಯಾ ಅಖ್ತರ್ ಬಾಲಿವುಡ್‌ನಲ್ಲಿ ಈಕೆ ತನ್ನ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದು ಹೇಗೆ? ಸಮ್ಮರ್ 06 ಸಪಷಲ್ ನ್ಯ ನ್ಯೂಡಿನೈತ್ នថ្លែសន"

May be an image of 1 person, smiling and text that says "ក្គក ಸಿనಿ ಆಕಾಶದಲ್ಲಿ ಮೇದಿನಿ ಮಿಂಚು! ಅಸ್ಥವ ಪನ್ಲಾಸ ಸ್ರತಿಬೆ, ಲನಾಡಿನ ಮೀಂಚನ ಬೆಡಗಿ ಮೇಡಿನಿಗೆ ಸ್ಾಂಡಲ್‌ಪುಣ್ನಲ್ಲಿ ಅಸ್ತುತ್ತಮ ಅನಕಾಲಗಳು ದೊರಬುತ್ತಿವೆ ಬವರ ನ್ರತಿಬಿಗೆ ಸ್ನತಿಬೆಗೆತಕ್ನಂತೆ ತಪ್ಸಂತೆ ಭವಸ್ಯದಲ್ಲ តាបម្ៀំថ្នា ದಿಶೇಸೆ ಅನಕಾಶಗಳ ಸಿಗಲಿ လ ಪ್ರಕಂಚದಲ್ಲ ನಮತಗಾರೆಯಯಾಗಿ ಬೆಳಗಲ ಳದ ವರ್ ತರೆಕಂಡ ರಿಯಲ್ ত ಅವೇಂದಯ ನಿರ್ದೆೇಕನದ 'ಯಯುಖ ಸಿನಿಮೂ ಸೇಕ್ಕಕನಂದ ಭರಪೂರ ಗನಿಡದುಕೊಂಡಿದ ಗಮನಿಸೆಳೆದೇ ವಯಸ್ನಿಗೆ ಮೀರಿದ ಪಾತ್ನದಲ್ಲಿ ಮಂಡೆದರು, ฟลอส ಅವರ ಯಾರು? ವು? ಸೋತೋ សង្ចរ ಮೋದಿನಿ ನದು ගපක් ದಾರಿ ಮಲಹ ಶಗ್ಯೋಸದನರಾದ ಮೋದಿದಿ 80 മകക്രുമ ಮೇ 2025"May be an image of 1 person and textMay be an image of 3 people and text

May be an image of 7 people, people smiling and text that says "ಮದರ್ಸ್ ಡೇ ಸಪಷಲ್ ₹50 ಗೃಹಶೋಭಾ ಮೇ, 2025 Grihshobha GRIHSHOBHA INSPIBE AWARDS ತಿಕಾರಿ ಬದಲಾವಕು ತಂದುಕೊಟ್ಣ ಸಾಧಕಿಯರ ಯಶೋಗಾಥ"


May be an image of 2 people and text

No photo description available.

May be an image of 1 person, smiling and text

ಗುರು ಪೂರ್ಣಿಮಾ ವಿಶೇಷ - ವ್ಯಾಸ ಮಹರ್ಷಿಯ ಕಥೆ

May be an image of templeಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸ ಜನ್ಮದಿನ. 

ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತೀ ದೇವಿ. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವಂತಹ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಬೆಸ್ತರ ಕನ್ಯೆ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆಯ ಹೆಸರು “ಸತ್ಯವತಿ”. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು “ಮತ್ಸ್ಯಗಂಧೀ” ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು “ಯೋಜನಗಂಧೀ” ಎಂದೂ ಕರೆಯುತ್ತಿದ್ದರು. 

ಆಕೆಯು ಮೂಲತಃ ಬೆಸ್ತರವಳಲ್ಲ. ಆಕೆಯ ಜನ್ಮ ವೃತ್ತಾಂತವು ಬಹಳ ವಿಚಿತ್ರವಾಗಿದೆ. ಮೃಗಬೇಟೆಗೆಂದು ಕಾಡಿಗೆ ಹೋದ ಚೇದಿ ದೇಶದ ಅರಸ ಉಪರಿಚರ ವಸು ಎಂಬವನು ಅಲ್ಲಿ ಹರಿಣಗಳ ಮೈಥುನವನ್ನು ನೋಡುತ್ತಾನೆ. ಇದರಿಂದ ಆತ ಕಾಮೋದ್ರಿಕ್ತನಾದಾಗ ಅವನಿಗೆ ವೀರ್ಯ ಸ್ಖಲನವಾಗುತ್ತದೆ. ವೀರ್ಯನಾಶವು ಭ್ರೂಣಹತ್ಯೆಗೆ ಸಮ ಎಂಬುದನ್ನು ಮನಗಂಡು ವಸುವು ಅದನ್ನು ಒಂದು ಗಿಡುಗ ಪಕ್ಷಿಯ ಮೂಲಕ ಅರಮನೆಯಲ್ಲಿರುವ ತನ್ನ ಪತ್ನಿ ಗಿರಿಕೆಗೆ ಕಳುಹಿಸುತ್ತಾನೆ. ಆ ಗಿಡುಗವು ಆಕಾಶ ಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಾಗ ಇನ್ನೊಂದು ಗಿಡುಗವು ಅದನ್ನು ನೋಡಿ , ಅದರ ಬಾಯಿಯಲ್ಲಿರುವುದು ಮಾಂಸದ ಚೂರು ಎಂಬುದಾಗಿ ಭ್ರಮಿಸಿ , ಆಹಾರಕ್ಕಾಗಿ ಜಗಳಕ್ಕೆ ತೊಡಗುತ್ತದೆ. ಹಾಗೆ ಜಗಳ ಆಡುವಾಗ ಗಿಡುಗದ ಬಾಯಿಯಲ್ಲಿರುವ ವೀರ್ಯವು ಎರಡು ತುಂಡುಗಳಾಗಿ ಕೆಳಗಡೆ ಇರುವ ಗಂಗಾ ನದಿಗೆ ಬೀಳುತ್ತದೆ. 

ಬ್ರಹ್ಮನ ಶಾಪದ ಕಾರಣದಿಂದಾಗಿ ಆ ನದಿಯಲ್ಲಿ ಮತ್ಸ್ಯಕನ್ಯೆಯಾಗಿ ಜೀವಿಸುತ್ತಿದ್ದ “ಅದ್ರಿಕೆ” ಎಂಬ ಅಪ್ಸರೆಯು ಆ ವೀರ್ಯದ ತುಂಡುಗಳೆರಡನ್ನು ನುಂಗುತ್ತಾಳೆ. ಪರಿಣಾಮವಾಗಿ ಆ ಮೀನು ಗರ್ಭವತಿಯಾಗುತ್ತದೆ. ಮುಂದೆ ಒಂದು ದಿನ ಬೆಸ್ತರ ಗುರಿಕಾರನಾದ ದಾಶರಾಜ ಕಂಧರನಿಗೆ ಆ ಮೀನು ಸಿಗುತ್ತದೆ. ಅವನು ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಅವಳಿ ಶಿಶುಗಳು ಒಂದು ಗಂಡು ಮತ್ತು ಒಂದು ಹೆಣ್ಣು ಶಿಶುಗಳು ಕಾಣಿಸುತ್ತವೆ. ಕಂಧರನಿಂದ ಸೀಳಲ್ಪಟ್ಟು ಮತ್ಸ್ಯಕನ್ಯೆಯು ಕೊಲ್ಲಲ್ಪಟ್ಟಾಗ ಶಾಪವಿಮೋಚನೆಗೊಂಡ ಅದ್ರಿಕೆಯು ಪ್ರತ್ಯಕ್ಷಳಾಗಿ ಆ ಅವಳಿ ಮಕ್ಕಳನ್ನು ವಸುರಾಜನಿಗೆ ಒಪ್ಪಿಸುವಂತೆ ತಿಳಿಸಿ ಆಕೆ ಅದೃಶ್ಯಳಾಗುತ್ತಾಳೆ. 

ಅವಳ ಆಣತಿಯಂತೆ ಕಂಧರನು ಆ ಎರಡು ಶಿಶುಗಳನ್ನು ವಸುರಾಜನಿಗೆ ಒಪ್ಪಿಸಿದಾಗ ಆತ ಗಂಡು ಶಿಶುವನ್ನು ಮಾತ್ರ ಸ್ವೀಕರಿಸಿ , ಆ ಮಗುವಿಗೆ “ಮತ್ಸ್ಯ” ಎಂಬ ಹೆಸರನ್ನಿರಿಸಿ ತಾನೇ ಸಾಕಿಕೊಳ್ಳುತ್ತಾನೆ. ಮುಂದೆ ಆತನೇ “ಮತ್ಸ್ಯರಾಜ”ನಾಗುತ್ತಾನೆ. ಹೆಣ್ಣು ಶಿಶುವಿಗೆ “ಮತ್ಸ್ಯಗಂಧೀ” ಎಂಬ ಹೆಸರನ್ನಿರಿಸಿ ಕಂದರನಿಗೆ ಮರಳಿಸಿ ಸಾಕಿಕೊಳ್ಳುವಂತೆ ಆದೇಶಿಸುತ್ತಾನೆ. ಹೀಗೆ ಬೆಸ್ತನಾದ ಕಂಧರನ ಸಾಕು ಮಗಳಾಗಿ ಬೆಳೆದವಳೇ ಈ ಮತ್ಸ್ಯಗಂಧಿ. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. 

ಆಕೆಯು ಪರಾಶರ ಮುನಿಗಳನ್ನು ನೋಡಿ , ಬಳಿಗೆ ಬಂದು ಅವರ ಪಾದಕ್ಕೆರಗುತ್ತಾಳೆ. ಅಲ್ಲದೇ “ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕು” ಎಂದು ಆಕೆ ಪರಾಶರರನ್ನು ಪ್ರಾರ್ಥಿಸುತ್ತಾಳೆ. ಆಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡುತ್ತಾರೆ. ಆಗ ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವ “ಯೋಜನಗಂಧಿ”ಯಾಗುತ್ತಾಳೆ. ತ್ರಿಕಾಲ ಜ್ಞಾನಿಗಳಾದ ಪರಾಶರರು ಆಕೆಯ ಭವಿಷ್ಯವನ್ನು ಅರಿತು “ಯೋಜನಗಂಧೀ , ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ಹೀಗಾಗಿ ನಾನು ಲೋಕಕಲ್ಯಾಣಕ್ಕಾಗಿ ನಿನ್ನ ಸಮಾಗಮವನ್ನು ಬಯಸುತ್ತಿದ್ದೇನೆ. ಹಾಗಂತ ನೀನು ಶಿಶುವನ್ನು ನವಮಾಸ ಪರ್ಯಂತ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಸಮಾಗಮವಾದ ಕೂಡಲೇ ಒಬ್ಬ ಮಹಾಪುರುಷನ ಜನನವಾಗುತ್ತದೆ. ಅಲ್ಲದೇ ಶಿಶು ಪಡೆದ ಮೇಲೆ ನಿನ್ನ ಕನ್ಯೆತನವೂ ನಾಶವಾಗುವುದಿಲ್ಲ. ನಮ್ಮ ಮಿಲನದಿಂದ ಜನಿಸುವ ಆ ತೇಜೋವಂತ ಮಗನಿಂದ ಮುಂದೆ ಲೋಕ ಕಲ್ಯಾಣವಾಗುವುದು” ಎನ್ನುತ್ತಾರೆ.

ಸತ್ಯವತಿಯು ಅದಕ್ಕೆ ಒಪ್ಪುತ್ತಾಳೆ. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ , ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾಗುತ್ತಾರೆ. ಇವರಿಬ್ಬರಿಂದ ಜನಿಸಿದ ಮಗುವೇ “ಕೃಷ್ಣ ದ್ವೈಪಾಯನ”. ಅಂದರೆ ವ್ಯಾಸರು. ‘ಕೃಷ್ಣ’ ಎಂದರೆ ‘ಕಪ್ಪು’ ಎಂತಲೂ , ‘ದ್ವೈಪಾಯನ’ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. 

ಹುಟ್ಟಿದ ಕ್ಷಣವೇ ಅಳುವುದಕ್ಕೆ ಬದಲಾಗಿ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು ತಾಯಿ ಸತ್ಯವತಿಯ ಪಾದಕ್ಕೆ ಎರಗಿ “ಮಾತೃದೇವೋಭವ” ಎನ್ನುತ್ತಾ ವಂದಿಸುತ್ತಾರೆ. ಅಲ್ಲದೇ “ತಾಯೇ ನಿನಗೆ ಕಷ್ಟಕಾಲ ಒದಗಿದಾಗ ನನ್ನನ್ನು ಸ್ಮರಿಸಿಕೋ , ತಕ್ಷಣ ನಾನು ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗುತ್ತಾರೆ.  ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ , ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ , ಯಜುರ್ವೇದ , ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ , ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ , ವೈಶಂಪಾಯನ , ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.   ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ ವೇದವ್ಯಾಸ ಎಂಬ ಗೌರವ ನಾಮ ದೊರೆಯಿತು. 

'ಶುಕ' ಮಹರ್ಷಿ

'ಶುಕ' ಮಹರ್ಷಿ ಕೃಷ್ಣದ್ವಪಾಯನನ ಮಗ. ಅರ್ಥಾತ್ ವೇದವ್ಯಾಸರ ಪುತ್ರ. 'ಪ್ರತಾಜಿ' ಎಂಬ ಅಪ್ಸರೆಯು 'ಶುಕಿ' ಎಂದರೆ ಹೆಣ್ಣು ಗಿಳಿಯ ರೂಪದಲ್ಲಿ ವೇದವ್ಯಾಸರಲ್ಲಿಗೆ ಬಂತು. ಇದಕ್ಕೆ ಮೊದಲು ಒಬ್ಬ ಸುಪುತ್ರನ ಜನನಕ್ಕಾಗಿ ವೇದವ್ಯಾಸರು ತಪಸ್ಸು ಮಾಡುತ್ತಿದ್ದರು. ಈ ಘತಾಜಿ ಎಂಬ ಶುಕಿಯು ವೇದವ್ಯಾಸರಿಂದ ಪಡೆದ ಮಗನಿಗೆ 'ಶುಕ' ಎಂದು ನಾಮಕರಣ ಮಾಡಿದನು. 'ಪಿತೃ' ಎಂಬ ಋಷಿಯ ಮಗಳಾದ 'ಪೀವರಿ'ಯು ಈತನ ಪತ್ನಿ. ಈ ದಂಪತಿಗಳ ಮಗನೇ ಬ್ರಹ್ಮದತ್ತ. ಶುಕಮುನಿಗೆ ಪೀವರಿಯಲ್ಲಿ 'ಕೃಷ್ಣ' ಗೌರಪ್ರಭ, ಭೂರಿ, ದೇವಶ್ರುತರೆಂಬ ನಾಲ್ವರು ಮಕ್ಕಳಾದರು. ಹಾಗೆಯೇ ಕೀರ್ತಿ ಎಂಬ ಮಗಳೂ ಜನಿಸಿದಳು.

ಶುಕನು ಜನಕರಾಜನಿಂದ ವಿದ್ಯಾಭ್ಯಾಸ ಪಡೆದನು. ಹಾಗೆಯೇ ನಾರದ ಮಹರ್ಷಿಯಿಂದ ಉಪದೇಶ ಹೊಂದಿ ವೈರಾಗ್ಯಶಾಲಿಯಾದನು. ಶುಕನು ತಪಸ್ಸು ಮಾಡುತ್ತಿದ್ದಾಗ ಅದನ್ನು ಭಂಗಗೊಳಿಸುವುದಕ್ಕಾಗಿ ದೇವಲೋಕದ ವೇಶೈಯರಲ್ಲಿ ಸುಪ್ರಸಿದ್ದಳೆನಿಸಿದ ರಂಭೆಯು ಹಲವು ಬಾರಿ ಪ್ರಯತ್ನಪಟ್ಟಳು. ಆದರೆ ಶುಕ ಮಹರ್ಷಿಯ ತಪಸ್ಸು ಕೆಡಿಸಲು ಆಕೆಯಿಂದಾಗದೆ ಆಕೆಯೇ ಹತಾಶಳಾಗಬೇಕಾಯಿತು. ಶುಕಮಹರ್ಷಿಯು ಭಾಗವತ ಪುರಾಣವನ್ನು ಪರೀಕ್ಷಿತ್ ರಾಜನಿಗೆ ಹೇಳಿದನು. ಈ ಮೂಲಕ ಶ್ರೀಮದ್ಭಾಗವತವು ಲೋಕದಲ್ಲಿ ಪ್ರಚಾರವಾಯಿತು. ಪರೀಕ್ಷಿತ್ ರಾಜನು ಬೇಟೆಯಾಡುತ್ತಾ ಒಮ್ಮೆ ಕಾಡಿನಲ್ಲಿ ಸಂಚರಿಸುತ್ತಿದ್ದಾಗ 'ಶಮೀಕ'ನೆಂಬ ಋಷಿಯು ತಪಸ್ಸು ಮಾಡುತ್ತಿದ್ದುದನ್ನು ಕಂಡನು. ವಿನೋದಕ್ಕಾಗಿ ಸತ್ತ ಹಾವನ್ನು ಶಮೀಕನ ಕೊರಳಿಗೆ ಹಾಕಿ ಅರಮನೆಗೆ ತೆರಳಿದ್ದನ್ನು ತಿಳಿದ ಶಮೀಕನ ಮಗ ಶೃಂಗಿಯು 'ಪರೀಕ್ಷಿತನನ್ನು ಏಳು ದಿನಗಳೊಳಗೆ ಹಾವು ಕಚ್ಚಿ ಮರಣಿಸಲಿ” ಎಂದು ಶಾಪವಿತ್ತನು. ಈ ಚಿಂತೆಯಿಂದ ನೊಂದು ಬೆಂದ ಪರೀಕ್ಷಿತನಿಗೆ ಶುಕ ಮಹಾಮುನಿಯು ಶ್ರೀಮದ್ಭಾಗವತ್‌ವನ್ನು ಹೇಳುತ್ತಾನೆ ಎಂದು ಭಾಗವತದಿಂದ ತಿಳಿದು ಬರುತ್ತದೆ. ಹಾಗೆಯೇ ಶುಕನು ಮಹಾಭಾರತವನ್ನು ಯಕ್ಷ, ರಾಕ್ಷಸ, ಗಂಧರ್ವರಿಗೆ ಹೇಳಿದನು ಎಂದು ತಿಳಿದು ಬರುತ್ತದೆ. ಕಾರ್ಯ ಸಾಧಿಸುವ ಕಲೆಯನ್ನೂ ಗ್ರಂಥ ಪ್ರಕಾಶನ ಕಲೆಯನ್ನೂ ನಾವು ಶುಕ ಮಹರ್ಷಿಯಿಂದ ಕಲಿಯಬಹುದು. 

ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ , 18 ಪುರಾಣಗಳನ್ನು , ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳ  ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.