Saturday, September 26, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 58

ಮೈಸೂರು (Mysore)

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು  ''ಅರಮನೆಗಳ ನಗರ'' ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ಜತೆಗೆ ದೇಶದ ಅತ್ಯಂತ ಸ್ವಚ್ಚ ನಗರವೆನ್ನುವ ಕೀರ್ತಿಗೂ ಭಾಜನವಾಗಿದೆ. 

***


ಹಿಂದೆ ಮೈಸೂರಿಗೆ ಮಹಿಷಪುರ ಎಂದು ಕರೆಯಲಾಗುತ್ತಿತ್ತು. ಮಹಿಷಾಸುರನೆಂಬ ರಾಕ್ಷಸ ತನ್ನ ದುರ್ವರ್ತನೆಯಿಂದ ಋಷಿಮುನಿಗಳಿಗೆ ತೊಂದರೆ ನೀಡುತ್ತಿದ್ದ. ಆತನ ಸಂಹಾರ ಸುಲಭ ಸಾಧ್ಯವಾಗಿರುವುದಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರಾದಿ ಎಲ್ಲ ದೇವತೆಗಳು ತಮ್ಮ ಶಕ್ತಿಯನ್ನು ಧಾರೆ ಎರೆದು ಹೊಸ ಶಕ್ತಿಯನ್ನು ರೂಪಿಸುತ್ತಾರೆ. ಹಾಗೆ ರೂಪ ತಾಳಿದ ಮಹಾಮಾತೆಯೇ ಚಾಮುಂಡೇಶ್ವರಿ.
ಹೀಗೆ ಅವತರಿಸಿದ ತಾಯಿ ಮನುಕುಲದ ಕಲ್ಯಾಣಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ವಿವಿಧ ರೂಪದಲ್ಲಿ ಮಹಿಷಾಸುರ, ಚಂಡ-ಮುಂಡ, ಶುಂಭ-ನಿಶುಂಭ ಮುಂತಾದ ರಾಕ್ಷಸರನ್ನು ಸಂಹರಿಸಿ, ಮಹಾಬಲಗಿರಿಯಲ್ಲಿ (ಚಾಮುಂಡಿಬೆಟ್ಟ) ನೆಲೆಸುತ್ತಾಳೆ.
ಚಾಮುಂಡೇಶ್ವರಿಯಿಂದ ಸಂಹಾರಗೊಂಡ ಮಹಿಷಾಸುರ ರಾಕ್ಷಸಜನ್ಮವನ್ನು ಅಂತ್ಯಗೊಳಿಸಿ ತನಗೆ ಮುಕ್ತಿ ನೀಡಿದ ದೇವಿಯಲ್ಲಿ ತನಗೂ ಭಕ್ತರಿಂದ ಪೂಜೆ ಸಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಾನೆ. ಅದಕ್ಕೆ ದೇವಿಯು; ‘ವರ್ಷಕ್ಕೊಮ್ಮೆ ನನ್ನ ವರ್ಧಂತಿಯ ಮರುದಿನ ನಿನಗೆ ಭಕ್ತರು ಪೂಜೆ ಸಲ್ಲಿಸಲಿ’ ಎಂದು ಹೇಳುತ್ತಾಳೆ. ಅದರಂತೆ ಪ್ರತಿ ಆಷಾಢಮಾಸದಲ್ಲಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಜರುಗಿದ ಮರುದಿನ ಮಹಿಷಾಸುರನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ, ಬಗೆಬಗೆಯ ಭಕ್ಷ್ಯೋಜ್ಯಗಳನ್ನು ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ.

***

ದುರ್ಗೆಯು ಚಂಡ ಮತ್ತು ಮುಂಡರ ವಿರುದ್ಧ ಯುದ್ಧ ಮಾಡುವಾಗ, ಕೋಪೋಕ್ತಳಾಗಿ ಭಯಾನಕ ಕಾಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ದೇವರ ಈ ಇಬ್ಬರು ಶತ್ರುಗಳ ತಲೆ ಕಡಿದು, ಆ ತಲೆಗಳನ್ನು ದೇವಿ ಮಾತೆಗೆ ಅರ್ಪಿಸುತ್ತಾಳೆ. ಕಾಳಿಯ ಈ ಪರಾಕ್ರಮ ಅವಳಿಗೆ ಚಾಮುಂಡಿ ಎಂಬ ಹೆಸರನ್ನು ತಂದಿತು 
ಅಸುರ ರಕ್ತಬೀಜ'ತನ್ನ ಒಂದೇ ಒಂದು ಹನಿ ರಕ್ತವು ನೆಲಕ್ಕೆ ಬಿದ್ದರೆ ಅವರಿಂದ ಅಸಂಖ್ಯಾತ ಅಸುರರನ್ನು ಹುಟ್ಟಿಸುವಶಕ್ತಿ' ಹೊಂದಿದ್ದನು. ಇವನನ್ನು ಕೊಲ್ಲಲು ಕಾಳಿದೇವಿಯನ್ನು ಕರೆಯಿಸಲಾಯಿತು. ದೇವಿ ಮಹಾತ್ಮೆಯ ಪ್ರಕಾರ, ಚಾಮುಂಡಿಯು ರಕ್ತಬೀಜನಿಂದ ಹೊರಬಂದ ಎಲ್ಲ ರಕ್ತವನ್ನು ತನ್ನ ದೊಡ್ಡ ನಾಲಿಗೆಯಿಂದ ನೆಕ್ಕಿ ಕುಡಿದಳು. ತನ್ನ ಬಾಯಿಯನ್ನು ಪಾತಾಳ ಮುಟ್ಟುವಂತೆ ಅಗಲವಾಗಿ ತೆರೆದು ರಕ್ತಬೀಜ ಮತ್ತು ಅವನಿಂದ ಉತ್ಪತ್ತಿಯಾದಅಸುರನನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡಳು.

***

ಉಜ್ಜಯನಿ ರಾಜನಾದ ಬಿಜ್ಜಲರಾಯನಿಗೆ ಏಳು ಹೆಣ್ಣು ಮಕ್ಕಳಿದ್ದು ಅವರಲ್ಲಿ ಚಾಮುಂಡಿ ಒಬ್ಬಳು. ಈ ಅಕ್ಕ ತಂಗಿಯರು ಯಾವುದೋ ಕಾರಣಕ್ಕಾಗಿ ತಮ್ಮಲ್ಲಿಯೇ ಜಗಳಾಡಿ ಉತ್ತರದ ಕಡೆ ಹೊದರು. ಆವಾಗ ಚಾಮುಂಡಿಯು ಮಹಿಷಾ ಮಂಡಳ ಎಂಬ ಸಮೃದ್ಧ ರಾಜ್ಯದಲ್ಲಿ ನೆಲೆಯೂರಲು ನಿರ್ಧರಿಸಿದಳು. ಉತ್ತನಹಳ್ಳಿಯ ತನ್ನ ತಂಗಿ ಉರಿಕಾಂತಿಯ ಸಹಾಯದಿಂದ, ಚಾಮುಂಡಿ ಮಹಿಷನನನ್ನು ವಧಿಸಿ, 'ಮಹಿಷಮರ್ದಿನಿ' ಎಂದು ಪ್ರಸಿದ್ಧಳಾದಳು.

***

ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.
ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ.
ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ.ಇದರಿಂದ ಕಂಗಾಲಾದ ಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ.
ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯ ಜಯಂತ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.ಮೈಸೂರು ದಸರಾ ಸೇಎರಿದಂತೆ ದಿನನಿತ್ಯವೂ ಸಾವಿರ ಸಂಖ್ಯೆಯೆ ಭಕ್ತಾದಿಗಳು ತಾಯಿಯ ದರ್ಶನ ಪಡೆದು ಪುನೀತರಾಗುತ್ತಾರೆ.

Saturday, September 12, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 57

ಇಡಗುಂಜಿ (Idagunji)

Lord Sri Ganesha, Idagunji, Honnavara, UK



ಕರ್ನಾಟಕದ  ಕರಾವಳಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ ಇಡಗುಂಜಿ. ಶರಾವತಿ ನದಿಯ ತಟದಲ್ಲಿರುವ ಈ ಕ್ಷೇತ್ರಕ್ಕೆ  ಮುಂಚೆ ಇಡಾಕುಂಜ ಎಂದು ಕರೆಯಲಾಗುತ್ತಿತ್ತು. ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿ.  ದಟ್ಟವಾದ ಗೋಂಡಾರಣ್ಯದ ಮಧ್ಯದಲ್ಲಿರುವ ಈ ಪ್ರದೇಶ ನಂತರ ಇಡಗುಂಜಿಯಾಗಿ ರೂಢಿಯಲ್ಲಿದೆ.   ಎಲ್ಲಾ ದೇವರುಗಳಲ್ಲಿ  ಗಣೇಶನೇ ಪ್ರಥಮ ಪೂಜ್ಯನು. ವಿಘ್ನನಿವಾರಕ ನೆಲೆಸಿರುವ ಈ ಕ್ಷೇತ್ರವು ಎಲ್ಲಾ ಸಮುದಾಯದವರಿಗೂ   ಪ್ರಮುಖ ಯಾತ್ರಾಸ್ಥಳವಾಗಿದ್ದು  ನಂಬಿ ಬಂದ ಭಕ್ತರ ಎಲ್ಲಾ  ಇಷ್ಟಾರ್ಥಗಳನ್ನು ಪೂರೈಸಲು  ಗಣೇಶ  ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಸಂಕಷ್ಟಿ, ವಿನಾಯಕ ಚೌತಿ, ರಥಸಪ್ತಮಿ  ಇನ್ನಿತರ   ಹಬ್ಬ ಹರಿದಿನಗಳಲ್ಲಿ  ಮತ್ತು ವಿಶೇಷ  ದಿನಗಳಲ್ಲಿ  ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೇವಾಲಯದಲ್ಲಿ  ಪ್ರತೀ ವರ್ಷ ರಥ ಸಪ್ತಮಿಯಂದು ವಿಶೇಷ ಜಾತ್ರೆ ನಡೆಯುತ್ತದೆ.   ವರ್ಷದಲ್ಲಿ ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾರೆ.  


***

Lord Sri Ganesha temple, Idagunji, Honnavara, UK
ದ್ವಾಪರ  ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ  ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ  ಬಂದರು. ಸಾಧು ಸಂತರಿಗೆ  ಅವರ ಯಜ್ಞ  ಯಾಗಕ್ಕೆ   ಸಹಾಯವಾಗಲೆಂದು  ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು  ಹೊಂಡಗಳನ್ನು  ಇಲ್ಲಿ  ನಿರ್ಮಿಸಿದ್ದರು.  ಕೆಲ ಕಾಲದ ನಂತರ  ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ  ನಾರದರು  ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು  ಭೂಲೋಕಕ್ಕೆ ಕಳುಹಿಸಿಕೊಡುವಂತೆ  ಬೇಡಿಕೊಂಡರು.  ಗಣೇಶನನ್ನು  ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ    ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ  ಮುನಿಗಳು ಇಲ್ಲಿ  ತಪ್ಪಸ್ಸಾಚರಿಸಿ ಸಿದ್ಧಿ  ಪಡೆದುಕೊಂಡರು. ನಾರದರು ಇಲ್ಲಿ  ದೇವತೀರ್ಥವೆಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದರು 

'ಗುಮ್ನಾಮಿ ಬಾಬಾ’ರೇ ನೇತಾಜಿ!

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಗೆ ಸಂಬಂಧಿಸಿದ ಎಲ್ಲಾ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಬೋಸ್ ಗೆ ಸಂಬಂಧಿಸಿದ 64 ದಾಖಲೆಗಳನ್ನು ಸೆ.18ರಂದು ಬಿಡುಗಡೆ ಮಾಡುವುದಾಗಿ ಶುಕ್ರವಾರ ಘೋಷಿಸಿದೆ.
ನೇತಾಜಿ ಕಣ್ಮರೆ ಕುರಿತು ಇಂದಿಗೂ ಅನೇಕ ಪ್ರಶ್ನೆಗಳಿವೆ. 1945 ಆಗಸ್ಟ್ 18ರಂದು ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಮೃತರಾದರೆಂದು ವರದಿಯಾಗಿದ್ದು ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಉತ್ತರ ಪ್ರದೇಶದಲ್ಲಿ ನೆಲೆಸಿದ್ದ ಗುಮ್ನಾಮಿ ಬಾಬಾ ಹೆಸರಿನ ನಿಗೂಢ ಸನ್ಯಾಸಿಯೇ ನೇತಾಜಿ ಎನ್ನುವುದು ಇತ್ತೀಚೆಗೆ ಸಿಕ್ಕಿದ ವಿನೂತನ ಮಾಹಿತಿ. ಈ ಕುರಿತಂತೆ ಟೈಮ್ಸ್ ಸಮೂಹ ನಡೆಸಿದ ವಿವರಣಾತ್ಮಕ ತನಿಖೆಯಿಂದ ಅದು ಇನ್ನಷ್ಟು ಖಚಿತಗೊಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗುಮ್ನಾಮಿ ಬಾಬಾನೇ ನೇತಾಜಿಯೇ? ಎನ್ನುವ ವಿಚಾರಗಳ ಕುರಿತಂತೆ ವಿಜಯ ಕರ್ನಾಟಕ ಹಾಗೂ ಟೈಮ್ಸ್ ಆಫ್ ಇಂಡಿಯಾಗಳಲ್ಲಿ  ಪ್ರಕಟವಾದ ಲೇಖನವನ್ನುಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
















Saturday, September 05, 2015

“ಕೃಷ್ಣಂ ವಂದೇ ಜಗದ್ಗುರು”

ಬಾರಿ ಜಗದೊಡೆಯನಾದ ಶ್ರೀ ಕೃಷ್ಣ ಹಾಗೂ ಭಾರತದ ಎರ್ಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನ- ಶಿಕ್ಷಕರ ದಿನ ಎರಡೂ ಒಟ್ಟಾಗಿ ಬಂದಿರುವುದು ವಿಶೇಷ. ಶ್ರೀಕೃಷ್ಣನಿಗೆ ಸಮರಾದ ಗುರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಸಂಧಾನಕಾರನೂ, ಸಾರಥಿಯೂ, ರಾಜತಾಂತ್ರಿಕನೂ ಆಗಿದ್ದು ಎದುರಾಳಿಗಳನ್ನು ಮಣಿಸಬಲ್ಲವನಾಗಿದ್ದನು.. ಶ್ರೀಕೃಷ್ಣನನ್ನು ನಾವು ಕೇವಲ ಆದ್ಯಾತ್ಮಿಕ ಗುರು ಎಂದು ಮಾತ್ರವೇ ಸ್ವೀಕರಿಸದೆ ಅತ್ಯುತ್ತಮ ಮ್ಯಾನೇಜ್ ಮೆಂಟ್ ಗುರುವನ್ನಾಗಿಯೂ ಸ್ವೀಕರಿಸಬೇಕು.

ಸ್ನೇಹಿತರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
ಬಾರಿ ಜಗದೊಡೆಯನಾದ ಶ್ರೀ ಕೃಷ್ಣ ಹಾಗೂ ಭಾರತದ ಎರ್ಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನ- ಶಿಕ್ಷಕರ ದಿನ ಎರಡೂ ಒಟ್ಟಾಗಿ ಬಂದಿರುವುದು ವಿಶೇಷ.



ಶ್ರೀ ಕೃಷ್ಣನೇ ಗುರು
ಶ್ರೀಕೃಷ್ಣನಿಗೆ ಸಮರಾದ ಗುರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಅರ್ಜುನನ ಮೂಲಕ ಇಡೀ ಜಗತ್ತಿಗೆ ನೀಡಿರುವ ಸಂದೇಶವೇ ಭಗವದ್ಗೀತೆ. ಭಗವದ್ಗೀತೆ ಸರ್ವ ಕಾಲಕ್ಕೂ ಪ್ರಸ್ತುತ. ಜಗತ್ತಿನ ಸರ್ವರಿಗೂ ಆದ್ಯಾತ್ಮದ ಗುರುವಾಗಬಲ್ಲ ಸಾಮರ್ಥ್ಯವಿರುವುದು ಶ್ರೀ ಕೃಷ್ಣನಲ್ಲಿ. ಅದಕ್ಕಾಗಿಯೇ ಕೃಷ್ಣಾವತಾರವನ್ನು ಪರಿಪೂರ್ಣ ಅವತಾರವೆನ್ನುತ್ತಾರೆ.
ಐದು ಸಾವಿರ ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿದ ಶ್ರೀ ಕೃಷ್ಣನು ಇಡೀ ಜಗತ್ತಿಗೇ ಗುರು ಎಂದು ಗುರುತಿಸಿಕೊಂಡವನು. ಮನುಷ್ಯ ತನ್ನ ಜೀವನದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಭಗವಂತ ಮಹಾಭಾರತದ ರಣರಂಗದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಭಗವದ್ಗೀತೆಯ 18 ಅಧ್ಯಾಯಗಳ ಮೂಲಕ ಉಪದೇಶಿಸಿ ಸರ್ವರಿಗೂ ಮಾರ್ಗದರ್ಶನ ಮಾಡಿದ್ದಾನೆ.
ಶ್ರೀಕೃಷ್ಣ ತಾನು ಸಂಧಾನಕಾರನೂ, ಸಾರಥಿಯೂ, ರಾಜತಾಂತ್ರಿಕನೂ ಆಗಿದ್ದು ಎದುರಾಳಿಗಳನ್ನು ಮಣಿಸಬಲ್ಲವನಾಗಿದ್ದನು. ಕೃಷ್ಣನಲ್ಲಿ ಒಬ್ಬ ಸಮರ್ಥ ನಾಯಕನಲ್ಲಿರಬೇಕಾದ ಎಲ್ಲಾ ಉತ್ತಮ ಗುಣಗಳಿದ್ದವು. ಅವನು ತನ್ನ ಅಪಾರವಾದ ಬುದ್ದಿಮತ್ತೆ, ಜಾಣ್ಮೆಯಿಂದ ತನಗೆದುರಾದ ಎಲ್ಲಾ ಎಡರು ತೊಡರುಗಳನ್ನು ಯಶಸ್ವಿಯಾಗಿ ಭೇಧಿಸಿ ಮುನ್ನಡೆದನು.ಯಾರಲ್ಲಿ ಆಚಲವಾದ ಆತ್ಮವಿಶ್ವಾಸ, ಮನೋದಾರ್ಡ್ಯವಿರುತ್ತದೋ ಅಂತಹವರು ತಾವು ದೈಹಿಕವಾಗಿ ದುರ್ಬಲರಾಗಿದ್ದರೂ ಸಹ ಜೀವನದಲ್ಲಿ ಯಶಸ್ಸು ಕಾಣಬಲ್ಲರು. ಶ್ರೀಕೃಷ್ಣನಲ್ಲಿ ಅಂತಹಾ ಮನೋಬಲವಿತ್ತು. ಅದನ್ನೇ ಆದ್ಯಾತ್ಮವಾದಿಗಳು "ಕೃಷ್ಣಪ್ರಜ್ಞೆ" ಎನ್ನುತ್ತಾರೆ. ಅರಿವಿನ ಬೆಳಕಿನಿಂದ ಮೂಡಿದುದೇ ಭಗವದ್ಗೀತೆ. ಹೀಗಾಗಿ ಶ್ರೀಕೃಷ್ಣನನ್ನು ನಾವು ಕೇವಲ ಆದ್ಯಾತ್ಮಿಕ ಗುರು ಎಂದು ಮಾತ್ರವೇ ಸ್ವೀಕರಿಸದೆ ಅತ್ಯುತ್ತಮ ಮ್ಯಾನೇಜ್ ಮೆಂಟ್ ಗುರುವನ್ನಾಗಿಯೂ ಸ್ವೀಕರಿಸಬೇಕು.
ಮನುಕುಲವು ತನ್ನ ಇತಿಹಾಸದಲ್ಲಿ ಅಂತಹ ಸರಿಸಾಟಿಯಿಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಕಂಡಿಲ್ಲ. ಭಗವತ್ವಾಣಿಯಾಗಿರುವ ಭಗವದ್ಗೀತೆಯು ಅಳೆಯಲಸಾಧ್ಯವಾದ ಆಳ ಮತ್ತು ನೈಜ ಬೋಧನೆಗಳಿಂದ ಪರಿಪ್ಲುತವಾಗಿರುವ ಗ್ರಂಥವೆಂದು ಇಡೀ ಪ್ರಪಂಚವೇ ಒಪ್ಪಿಕೊಂಡಾಗಿದೆ. ಅದು ಮನುಕುಲಕ್ಕೆ ನೀಡುತ್ತಿರುವ ಅತ್ಯಮೂಲ್ಯ ಜ್ಞಾನವನ್ನು ಜಗತ್ತಿನ ಅಗ್ರಗಣ್ಯ ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳು ಶ್ಲಾಘಿಸಿದ್ದಾರೆ. ಸೂಕ್ಷ್ಮದರ್ಶಿಯೊಬ್ಬನು ಭಗವದ್ಗೀತೆಯಲ್ಲಿರುವ ಬೋಧನೆಗಳು ಜಗತ್ತಿನ ಇತರ ಧಾರ್ಮಿಕ ಗ್ರಂಥಗಳಲ್ಲಿಯೂ ದೊರೆಯುವುದೆಂದು ಯೋಚಿಸುವನು. ಆದರೆ ಭಗವದ್ಗೀತೆಯಲ್ಲಿರುವಂತಹ ಅತ್ಯುಚ್ಚ ಜ್ಞಾನವು ಬೇರೆ ಯಾವ ಜ್ಞಾನ ಗ್ರಂಥದಲ್ಲಿಯೂ ಸಿಗುವುದಿಲ್ಲ.

ಶ್ರೀಕೃಷ್ಣ ಎಂಬ ಮಹಾರಹಸ್ಯ
ಡಿವಿಜಿಯವರ ಉಕ್ತಿಯಂತೆ - ‘ಶ್ರೀಕೃಷ್ಣ ಎಂಬುದು ಒಂದು ಪ್ರಸಿದ್ಧ ರಹಸ್ಯ. ಹಿಂದೂಜನರು ಅದನ್ನು ಶ್ರದ್ಧೆಯಿಂದ ಅಂಗೀಕರಿಸಿದ್ದಾರೆ. ವಿಚಾರಮಾಡಹೊರಟವರು ವಿಸ್ಮಿತರಾಗಿದ್ದಾರೆ. ಶ್ರೀಕೃಷ್ಣ ವ್ಯಕ್ತಿಮನಸ್ಸಿಗೆ ರಮಣೀಯವಾಗಿ, ಆದರೂ ಬುದ್ಧಿಗೆ ಪೂರ್ತಿ ಅರ್ಥವಾಗದ್ದಾಗಿ ಉಳಿದುಕೊಂಡಿದೆ. ಅದರ ಮರ್ಮವೇನು? ಪ್ರಸಿದ್ಧ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರದಂತೆ ಬುದ್ಧಿಪ್ರಯತ್ನಕ್ಕೆ ದುಸ್ಸಾಧ್ಯವಾಗಿರುವ ಅವತಾರ ಇನ್ನಾವುದೂ ಇಲ್ಲ." ‘ಕೃಷ್ಣಎಂದರೆ ಕಪ್ಪು ಎಂದು ಅರ್ಥವಿದೆ. ಕಪ್ಪುಬಣ್ಣ ರಹಸ್ಯಕ್ಕೆ ಸಂಕೇತ. ಇಡಿಯ ಅವತಾರಗಳಲ್ಲಿ ಅತ್ಯಂತ ಸಂಕೀರ್ಣ ಪಾತ್ರವೆಂದರೆ ಶ್ರೀಕೃಷ್ಣನೇ ಹೌದು; ಅವನಷ್ಟು ನಿಗೂಢವಾಗಿರುವ, ರಹಸ್ಯವಾಗಿರುವ ಮತ್ತೊಂದು ದೈವವನ್ನಾಗಲೀ ಅವತಾರಪುರುಷನನ್ನಾಗಲೀ ವ್ಯಕ್ತಿಯನ್ನಾಗಲೀ ಕಾಣಲಾರೆವು. ಆದುದರಿಂದಲೇ ಕೃಷ್ಣನ ಜೀವನದ ಘಟನೆಗಳನ್ನು ನಾವುಹೀಗೆಎಂದು ತೀರ್ಪು ಕೊಡಲು ಆಗದು; ಅವನ ವ್ಯಕ್ತಿತ್ವದ ಬಣ್ಣಇದೇಎಂದು ನಿಸ್ಸಂಶಯವಾಗಿ ಹೇಳಲು ಬಾರದು. ಅವನು ಮನುಷ್ಯನೋ ದೇವರೋ? ತೀರ್ವನಿಸುವುದು ಕಷ್ಟ. ಅವನು ಯೋಗಿಯೋ ಭೋಗಿಯೋ? ನಿರ್ಧಾರ ಮಾಡಲು ಕಷ್ಟ. ‘ಕೃಷ್ಣನೆಂದರೆ ಆಕರ್ಷಣೆ, ಸೆಳೆತ, ಉಜ್ಜುವಿಕೆ ಎಂದೂ ಅರ್ಥವಿದೆ. ಅವನು ನಮ್ಮನ್ನು ಅವನ ಗುಣಗಳಿಂದ ಸೆಳೆಯುತ್ತಾನೆ; ನಮ್ಮ ಕಲ್ಮಷಗಳನ್ನು ಉಜ್ಜಿ ತೆಗೆದುಹಾಕಿ ಶುದ್ಧಗೊಳಿಸುತ್ತಾನೆ.
ಕೃಷ್ಣ ಹೆಸರು ಪ್ರಸ್ತಾಪ ವಾದಗೆಲ್ಲ ಲೀಲಾ ವಿನೋದಗಳು ,ಯುದ್ದದಲ್ಲಿ ಕೃಷ್ಣ ಅನುಸರಿಸಿದ ತಂತ್ರಗಾರಿಕೆ ನೆನಪಿಗೆ ಬರುತ್ತದೆ. ಬಾಲ್ಯದಲ್ಲಿ ತನ್ನ ಸಾಕು ತಾಯಿ ಯಶೋದೆಗೆ ತಾನೇ ಸ್ವತಃ ಮಣ್ಣು ತಿಂದಂತೆ ನಟಿಸಿ, ಇಡೀ ಬ್ರಹ್ಮಾಂಡ ತನ್ನ ಬಾಯಿಯಲ್ಲಿ ತೋರಿಸಿದ.ನಾವುಗಳು ಮಕ್ಕಳಿಂದ ಕಲಿಯುವ ಎಸ್ಟೋ ವಿಷಯಗಳು ಇರುತ್ತದೆ.ಶ್ರೀಕೃಷ್ಣ ನಿಗೆ ಹಾಲಿನ ರೀತಿಯಲ್ಲಿ ವಿಷವುನಿಸಿದ ಪೂತನಿ ರಾಕ್ಷಸಿಯನ್ನು ತಾಯಿಯೆಂದೇ ಭಾವಿಸಿದ.ಹೆತ್ತ ತಾಯಿ -ದೇವಕಿ,ಸಾಕುತಾಯಿ-ಯಶೋದೆ ,ಹಾಲು ಎಂದು ವಿಷವುನಿಸಿದ - ಪೂತನಿ ಎಲ್ಲರೂ ತಾಯಿಗಳು. ತಾಯಿ ಪಾತ್ರದಲ್ಲಿ ಮೋಸ,ಕಪಟವಿಲ್ಲ.ತಾಯಿಗೆ ನೀಡಬೇಕಾದ ಗೌರವ ಬಾಲಕೃಷ್ಣ ಎತ್ತಿ ಹಿಡಿದ. ಸಾಂದೀಪನಿ ಗುರುಕುಲದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ,ಸುಧಾಮಾನಂತಹ,ಇನ್ನುಳಿದ  ಸಹವರ್ತಿಯೊಂದಿಗೆ,ಶ್ರಮದಾನ ಕಾರ್ಯ ನಿರ್ವಹಿಸಿ ವಿದ್ಯೆ ಗಳಿಸಿದ ರೀತಿ ಅನುಕರಣೀಯ.ಅದೇ ಸುಧಾಮನಿಂದ ಅಕ್ಕಿಯ ಪುಡಿ ಅವಲಕ್ಕಿ ಸ್ವೀಕರಿಸಿ ಸ್ನೇಹದಲ್ಲಿ ಬಡವ ಶ್ರೀಮಂತಿಕೆ ಎಂಬ ಭೇದವಿಲ್ಲ ಎಂದು ಸಾರಿದ ಮಹಾನ್ ದೈವ.ಬಂಧುವಾದ ಶಿಶುಪಾಲನನ್ನುಸಂತೈಸಿ,ಅವನು ಕ್ರೂರನಾದ ಕಾರಣ ಸಮಾಜದ ಹಿತಕ್ಕಾಗಿ ದಂಡಿಸಿದ.ಅಂದರೆ ಬಂಧುಗಳನ್ನು ಆದರಿಸುವ ಸಮನ್ವಯತೆ ಇರಬೇಕೆಂದು ಜಗತ್ತಿಗೆ ಸಾರಿದ ವ್ಯಕ್ತಿ.ಗೋವರ್ದನ ಗಿರಿಯನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಹಿಡಿದು ಗೋವುಗಳನ್ನು ಸಂರಕ್ಷಿಸಿ,ಪ್ರಾಣಿದಯೆ ತತ್ವವನ್ನು ಗಿರಿಧರನಾಗಿ ತಿಳಿಸಿದ.ಇಂದ್ರನ ಗರ್ವವನ್ನು ಮೆಟ್ಟಿ ನಿಂತು ,ಸ್ವಪ್ರತಿಸ್ತ್ತೆಸಲ್ಲದು ಎಂಬ ಅಂಶ ಬಹಿರಂಗಪಡಿಸಿದ.ಬಲರಾಮನ ಸೋದರತೆಗೆ ಗಟ್ಟಿತನ ಕೂಡಿಸಿದ ರಾಮಕೃಷ್ಣ .ಶಮಂತ ಮಣಿ ವಿಷಯದಲ್ಲಿ ಆರೋಪ ಬಂದಾಗ ಅದರಿಂದ ಹೊರಬರುವ ತನ್ನ ನಡೆಯನ್ನು  ಪಣ ವಾಗಿಸಿ ನಿರ್ದೋಷ ಸಾಬೀತುಪಡಿಸಿದ.ಮಹಾಸಾಧ್ವಿ ರುಕ್ಮಣಿಯ ಮುಕೇನ,ತಾನು ಸರಳ ಪೂಜೆಗೂ,ಆರಾಧನೆಗೂ,ಕೇವಲ ತುಳಸಿದಳಕ್ಕೆತಾನು ದೊರಕಬಲ್ಲೆ ಎಂದು ಶ್ರೀಹರಿ ನಿರೂಪಿಸಿದ.ನರಕಾಸುರನನ್ನು ವಧಿಸುವಾಗ ತನ್ನ ಪತ್ನಿ ಸತ್ಯಭಾಮೆಯನ್ನು ಯುದ್ದ ರಂಗಕ್ಕೆ ಕರೆದೊಯ್ದು , ಶತ್ರುವಿನ ವಶದಲ್ಲಿ ಹದಿನಾಲ್ಕು ಸಾವಿರ ಸ್ತ್ರೀಯರನ್ನು ವಿಮೊಚಿಸಿ,ಸ್ತ್ರೀಯರಿಂದಲೇ ಸ್ತ್ರೀಯರನ್ನು ಉದ್ದರಿಸಲು ಸಾದ್ಯ ಸಂದೇಶ ಸಾರಿದ.ಈಗಲೂ ಬ್ರಿಂನ್ದಾವನದ ಅಬಲೆಯರಿಗೆ ಆಶ್ರಯದಾತ.ಮಹಾಭಾರತ ಯುದ್ದದಲ್ಲಿ ಒಬ್ಬ ಯೋಧನಿಗಿರ ಬೇಕಾದ ಗುಣಗಳನ್ನು ತಿಳಿ ಹೇಳಿ ಅರ್ಜುನನನ್ನು ಜಾಗೃತಗೊಳಿಸಿದ.ಧರ್ಮವಂತ ಯೋಧನಿಗೆ ಪಾರ್ಥಸಾರಥಿ ತಾನಾಗಬಲ್ಲೆ .ಇದರಿಂದ ಜಗತ್ತಿಗೆ ಭಗವದ್ಗೀತೆ ದೊರಕಿತು. ಶಸ್ತ್ರ ಹಿಡಿಯದೆ ಕೌಶಲ್ಯದಿಂದ ದುಷ್ಟರಾದ ಕೌರವರನ್ನು  ಸಂಹರಿಸಿಲು ಕಾರಣನಾದ.
ಹೀಗೆ ಕೃಷ್ಣಾವತಾರದ ಪ್ರತಿ ಹಂತದಲ್ಲಿಯೂ ಒಂದೊಂದು ಸಂದೇಶವಿದೆ. ಇಂತಹಾ ಮಹಾಪುರುಷ, ದೇವೋತ್ತಮನಾದ ಶ್ರೀಕೃಷ್ಣನನ್ನು ನಾವೆಲ್ಲರೂ ಗುರು ಎಂದು ಭಾವಿಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇರುವುದಿಲ್ಲ.
ಸ್ನೇಹಿತರೆ, ಇಂದು ಕೃಷ್ಣಾಷ್ಠಮಿಯಾಗಿದ್ದು ಶ್ರೀಕೃಷ್ಣನ ಕುರಿತು ನನ್ನ ವಿಚಾರಗಳನ್ನು ಕೊಂಚಮಟ್ಟಿಗೆ ತಮ್ಮೊಡನೆ ಹಂಚಿಕೊಳ್ಳಬೇಕೆನಿತು. ಜಗದೊದ್ದಾರಕ ಶ್ರೀಕೃಷ್ಣ ನಮ್ಮೆಲ್ಲರಿಗೂ ಸರ್ವಮಂಗಳಾವನ್ನುಂಟುಮಾದಲಿ
ನಮಸ್ಕಾರ