ವಿಶ್ವಾಮಿತ್ರ ತಾನು ಬ್ರಹ್ಮಜ್ಞಾನ ಪಡೆದು ವಸಿಷ್ಟನನ್ನು ಮೀರಿಸಬೇಕು ಎಂಬ ಛಲದೊಡನೆ ತಪಸ್ಸಿಗೆ ಕುಳಿತಿದ್ದಾಗ ದೇವರಾಜ ಇಂದ್ರನಿಗೆ ಸಮಸ್ಯೆ ತಲೆದೋರುತ್ತದೆ. ಏಕೆಂದರೆ ವಿಶ್ವಾಮಿತ್ರ ತಾನು ತಪಸ್ಸಿನ ಶಕ್ತಿಯಿಂದ ವಸಿಷ್ಟರನ್ನು ಮಾತ್ರವಲ್ಲ ದೇವತೆಗಳನ್ನೂ ಸೋಲಿಸುವ ಶಪಥ ಮಾಡಿದ್ದ. ದೇವಗಣದ ಜನರು ವಾಸಿಸುವ ಸ್ವರ್ಗದಂತೆಯೇ ತಾನೂ ಒಂದು ಸ್ವರ್ಗವನ್ನು ಸೃಷ್ಟಿಸುವುದಾಗಿ ಇಂದ್ರನಿಗೆ ಸವಾಲೆಸಿಸಿದ್ದ. ಇದರಿಂದಾಗಿ ದೇವಗಣದ ಮುಖ್ಯಸ್ಥನಾಗಿದ್ದ ಇಂದ್ರನಿಗೆ ಸಹಜವಾಗಿ ಭೀತಿ ಆವರಿಸುತ್ತದೆ, ವಿಶ್ವಾಮಿತ್ರ ಒಂದೊಮ್ಮೆ ಸರ್ವಜ್ಞಾನ ವನ್ನೂ ಪಡೆದು ತನ್ನ ಅಧಿಕಾರವನ್ನು ಪ್ರಶ್ನಿಸಿದರೆ ಕೆಡುಕಾಗಬಹುದು ಎಂದು ಆಲೋಚನೆಯೊಡನೆ ಮೇನಕೆ ಎಂಬ ಅಪ್ಸರಾ ಕನ್ಯೆಯನ್ನು ವಿಶ್ವಾಮಿತ್ರನ ತಪೋಭಂಗಕ್ಕಾಗಿ ಕಳಿಸುತ್ತಾನೆ.
ಮೇನಕೆ
ಎಂಬ ಅಪ್ಸರ ಕುಲದ ಕನ್ಯೆ!!!
ಮೇನಕೆ |
ಪ್ರಾಚೀನ ಬಾರತದ ಮಹಾಕಾವ್ಯಗಲಾಗಿರುವ ರಾಮಾಯಣ ಮತ್ತು ಮಹಾಭಾರತ , ಪುರಾಣಗಳಲ್ಲಿ ವೈವಿಧ್ಯಮಯ ಜೀವಿಗಳನ್ನು ಉಲ್ಲೇಖವಿದೆ. ಅವುಗಳನ್ನು ಅತಿಮಾನುಷ ಅಥವಾ ಅಮಾನುಷ ಜೀವಿ ಎನ್ನಲಾಗುತ್ತದೆ. ಆದರೆ ಅಂತಹಾ ಜೀವಿಗಳು ಲೌಕಿಕ ಜಗತ್ತಿನಲ್ಲಿ ವಾಸಿಸಲು ಭೂಮಿಗೆ ಬಂದಿದ್ದರೆಂದು ಹೇಳಲಾಗಿದೆ. ಅವರಲ್ಲಿ ದೇವ, ಅಸುರ, ಗಂಧರ್ವ, ಯಕ್ಷ, ಕಿನ್ನರ, ಕಿರಾತ, ಕಿಂಪುರುಷ, ರಾಕ್ಷಸ, ನಾಗ, ಸುಪರ್ಣ, ವಾನರ,ವಿದ್ಯಾಧರ, ವಲಾಖಿಲ್ಯಾಸ್, ಪಿಶಾಚಾ, ರುದ್ರ, ಆದಿತ್ಯ, ದಾನವ, ಮಾರುತ್, ನಿವತಕವಾಚ, ದೈತ್ಯ, ಕಾಲಕೇಯ, ವಸು ಈ ಎಲ್ಲರೂ ಇದ್ದಾರೆ.
ಆದರೆ ಐತಿಹಾಸಿಕ ದೃಷ್ಟಿಯಿಂದ ನೋಡಿದ್ದಾದರೆ ಪ್ರಾಚೀನ ಭಾರತದಲ್ಲಿ ವೇದಕಾಲ ಹಾಗೂ ಅದರ ಪೂರ್ವದಲ್ಲಿ ಈ ಮೇಲೆ ಹೆಸರಿಸಲಾದ ಬುಡಕಟ್ಟುಗಳ ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸವಿದ್ದರು. ವಿಶೇಷವಾಗಿ ಉತ್ತರ ಭಾರತದ ಹಿಮಾಲಯದ ಭಾಗಗಳಲ್ಲಿ ಇವರ ವಸತಿ ಸ್ಥಳಗಳಿತ್ತು!!
ಇವರಲ್ಲಿ ದೇವ ಬುಡಕಟ್ಟು ಎನ್ನುವುದು ವಿಶೇಷ ಬುಡಕಟ್ಟು ಹಾಗೂ ಅತ್ಯಂತ ಉಚ್ಚ ಬುಡಕಟ್ಟು ಆಗಿತ್ತು. ಯಕ್ಷ, ಕಿನ್ನರ, ಕಿಂಪುರುಷ, ಸುಪರ್ಣ, ,ವಿದ್ಯಾಧರ, ವಲಾಖಿಲ್ಯಾಸ್ ಈ ಮೊದಲಾದವು ಸಹ ವಿವಿಧ ಬುಡಕಟ್ಟು ಸಮುದಾಯವೇ ಆಗಿತ್ತು!!! ಇನ್ನು ಅಸುರ, ದೈತ್ಯ, ದಾನವ, ಕಿರಾತ, , ರಾಕ್ಷಸ, ನಾಗ, ಪಿಶಾಚಾ, ರುದ್ರ, ಮೊದಲಾದವು ದೇವ ಬುಡಕಟ್ಟು ಸಮುದಾಯದ ವಿರೋಧಿಗಳ್ಳೂ ವೈರಿಗಳೂ ಆಗಿದ್ದರು.
ಇನ್ನು ಗಂಧರ್ವರು ವಿಶೇಷತಃ ಸಂಗೀತ, ನೃತ್ಯದಂತಹಾ ಲಲಿತಕಲೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಮುದಾಯದ ಜನಾಂಗವಾಗಿತ್ತು!! ಇವರು ಇಂದ್ರ(ಆಡಳಿತ ಮುಖ್ಯ) ನ ಸಭೆಯಲ್ಲಿ ತಮ್ಮ ಸಂಗೀತ, ನೃತ್ಯಗಳನ್ನು ಪ್ರಸ್ತುತ ಪಡಿಸಿ ಮನರಂಜಿಸುತ್ತಿದ್ದರು.
ಅಪ್ಸರಾ ಎಂದರೆ ಯಾರು?
ಅಪ್ಸರಾ ಅಥವಾ ಅಪ್ಸರೆಯರು ಎಂಬ ಪದ ಹಿಂದೂ ಮತ್ತು ಬೌದ್ಧ ಸಂಸ್ಕೃತಿಯಲ್ಲಿ ಮೋಡಗಳು ಮತ್ತು ನೀರಿನ ರೀತಿಯ ಒಂದು ಸ್ತ್ರೀ ಸ್ವಭಾವ ಎಂಬ ವಿವರಗಳ ಹಿನ್ನೆಲೆಯಲ್ಲಿ ಬರುತ್ತದೆ. ಅಲ್ಲದೆ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳ ಶಿಲ್ಪಕಲೆ, ನೃತ್ಯ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಪ್ಸರೆಯರನ್ನು ಕಾಣಬಹುದಾಗಿದೆ. ಎರಡು ವಿಧದ ಅಪ್ಸರೆಯರಿದ್ದು ಲೌಕಿಕ ಹಾಗೂ ದೈವಿಕ ಎಂಬುದಾಗಿ ಇವರನ್ನು ವಿಂಗಡಿಸಲಾಗಿದೆ. ಲೌಕಿಕ ಅಪ್ಸರೆಯರ ಪೈಕಿ ಮೂವತ್ತನಾಲ್ಕು ಅಪ್ಸರೆಯರಿದ್ದರೆ ದೈವಿಕ ಅಪ್ಸರೆಯರು ಹತ್ತು ಮಂದಿ ದ್ದು ಅವರಲ್ಲಿ ಮೂವರು ಅತ್ಯಂತ ಹೆಚ್ಚು ಪ್ರಸಿದ್ದರಿದ್ದಾರೆ.
ಉತ್ತರ ಪ್ರದೇಶದ 12 ನೇ ಶತಮಾನದ ಅಪ್ಸರೆಯ ಮರಳುಗಲ್ಲಿನ ಪ್ರತಿಮೆ. |
ಭಾರತೀಯ ಪುರಾಣಗಳಲ್ಲಿ, ಅಪ್ಸರಗಳು ಸುಂದರವಾದ, ಅಲೌಕಿಕ ಸ್ತ್ರೀ ಜೀವಿಗಳು. ಅವರು ಸೌಂದರ್ಯ, ಯೌವ್ವನ ಹಾಗೂ ಸೊಗಸಾದ, ನೃತ್ಯ ಕಲೆಯಲ್ಲಿ ಅದ್ಭುತ ಪರಿಣಿತಿ ಸಾಧಿಸಿದ್ದರು. ಹಾಗೂ ಅವರು ಆಗಾಗ ಗಂಧರ್ವರ ಪತ್ನಿಯರಾಗಿ ಕಾಣಿಸಿಕೊಳ್ಳುತ್ತಾರೆ. (ಎಂದರೆ ಅಪ್ಸರೆಯರು ಗಂಧರ್ವ ಸಮುದಾಯಕ್ಕೇ ಸೇರಿದವರು ಅಥವಾ ಅದಕ್ಕೆ ಸರಿಸಮಾನ ಸಮುದಾಯದವರು ಎಂದಾಯಿತು!) ದೇವಗಣದ ಅಧಿಪತಿಯಾದ ಇಂದ್ರನ ಸಭೆಯಲ್ಲಿ ಈ ಅಪ್ಸರೆಯರು ಗಂಧರ್ವ (ವಿಶೇಷವಾಗಿ ಸಂಗೀತದಲ್ಲಿ ಪ್ರವೀಣರಾದ ಕುಲ)ರ ಹಾಡಿಗೆ ನೃತ್ಯ ಮಾಡುತ್ತಿದ್ದರು. ಆ ಮೂಲಕ ದೇವತೆಗಳು, ಸಭಿಕರನ್ನು ಮನರಂಜಿಸುತ್ತಿದ್ದರು. ಆಕಾಶದಲ್ಲಿ ತೇಲುವ ದೇವಗಣದವರ ಸೇವೆ ಮಾಡುವ ಇವರನ್ನು ಅಲೌಕಿಕ ಜೀವಿಗಳಾಗಿ ಹಿಂದೂ ಪುರಾಣಗಳಲ್ಲಿ ದೇವತೆಗಳಂತೆಯೇ ಚಿತ್ರಿಸಲಾಗಿದೆ.
ಒಡಿಶಾದ ಬೈತಲಾ ಡಿಯುಲಾದ ಬಾಗಿಲಿನ ಚೌಕಟ್ಟನ್ನು ಹಿಡಿದಿರುವ ಅಪ್ಸರೆಯ ಪ್ರತಿಮೆ |
ಇನ್ನು ಈ ಅಪ್ಸರೆಯರು ತಮ್ಮ ದೈಹಿಕ ರೂಪವನ್ನು ಇಚ್ಚೆಮಾತ್ರದಿಂದ ಬದಲಿಸಿಕೊಳ್ಳಬಲ್ಲವರಾಗಿದ್ದರು. ಅವರು ಕ್ರೀಡೆ, ಜೂಜಾಟದ ಅದೃಷ್ಟದ ಕೇಂದ್ರವಾಗಿರುತ್ತಿದ್ದರು(ಎಂದರೆ ದೇವಗಣ ಸಮುದಾಯದವರು ಇವರನ್ನು ಜೂಜಾಟದಲ್ಲಿಯೂ, ಇತರೆ ಕ್ರೀಡೆಗಳಲ್ಲಿ ಪಣದಂತೆಯೋ ಇನ್ನಾವ ಬಗೆಯಲ್ಲಿಯೋ ತೊಡಗಿಸಿಕೊಳ್ಳುತ್ತಿದ್ದರೆಂದು ಭಾವಿಸಬಹುದೆ?
ಮಧ್ಯಪ್ರದೇಶದ ಖುಜರಾಹೋ ದೇವಾಲಯದಲ್ಲಿರುವ ಅಪ್ಸರೆಯ ಪ್ರತಿಮೆ |
ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ 9 ನೇ ಶತಮಾನದ ಬೊರೊಬುದುರ್ ದೇವಾಲಯದ;;ಇರಿಬ ಅಪ್ಸರೆಯರ ಶಿಲ್ಪ |
ಕಾಂಬೋಡಿಯಾದಲ್ಲಿನ ದೇವಾಲಯಗಳಲ್ಲಿ ಅಪ್ಸರೆಯರ ಕಲಾಕೃತಿ |
ಇನ್ನು ಭಾರತೀಯ ಪುರಾಣದ ಅಪ್ಸರೆಯರನ್ನು ಪ್ರಾಚೀನ ಗ್ರೀಕ್ ನ ಮ್ಯೂಸ್‌ಗಳಿಗೆ ಹೋಲಿಸಲಾಗುತ್ತದೆ, ಇಂದ್ರನ ಆಸ್ಥಾನದಲ್ಲಿರುವ 26 ಅಪ್ಸರೆಯರಲ್ಲಿ ಪ್ರತಿಯೊಂದೂ ಪ್ರದರ್ಶನ ಕಲೆಗಳ ಒಂದು ವಿಶಿಷ್ಟ ಅಂಶವನ್ನು ಪ್ರತಿನಿಧಿಸುತ್ತದೆ. ಅವು ಫಲವತ್ತತೆ(ಸಂತಾನಶಕ್ತಿ) ವಿಧಿಗಳೊಂದಿಗೆ ಸಂಬಂಧ ಹೊಂದಿವೆ. ಭಾಗವತ ಪುರಾಣವು ಅಪ್ಸರೆಯರು ಕಶ್ಯಪನಿಂದ ಹುಟ್ಟಿದವರು ಎನ್ನುತ್ತದೆ. ಎಂದರೆ ಅಪ್ಸರೆಯರ ವರ್ಗ ಅಥವಾ ಸಮುದಾಯ ಮೂಲತಃಅ ಕಶ್ಯಪ ಋಷಿಕುಲದ ಬುಡಕಟ್ಟಿಗೆ ಸೇರಿದೆ!!!
ಇನ್ನು ಭಾರತ ಮಾತ್ರವಲ್ಲದೆ ಶ್ರೀಲಂಕಾ, ಚೀನಾ, ಇಂಡೋನೇಷಿಯಾ, ಕಾಂಬೋಡಿಯಾ ಸೇರಿ ಅನೇಕ ರಾಷ್ಟ್ರಗಲಲ್ಲಿ ಸಹ ಅಪ್ಸರೆಯರ ಬಗೆಗೆ ವಿವಿಧ ರೀತಿಯ ಉಲ್ಲೇಖಗಳಿದ್ದು ಆಯಾ ದೇಶದ ಕೆಲ ಪ್ರಾಚೀನ ದೇವಾಲಯಗಳಲ್ಲಿ ಸಹ ಅಪ್ಸರೆಯರ ಶಿಲ್ಪಗಳನ್ನು ಕಾಣಬಹುದಾಗಿದೆ.
ಮೇನಕೆ/ಮೇನಕಾ ಎಂಬ ಅಪ್ಸರೆ ಯಾರು?
- ಒಮ್ಮೆ ದೇವಲೋಕಕ್ಕೆ ಆಗಮಿಸಿದ್ದ ದೂರ್ವಾಸನಿಗೆ ಮೇನಕೆ ಹೂವಿನ ಹಾರವನ್ನು ಅರ್ಪಿಸಿದ್ದಳು. ಈ ಘಟನೆಯು ನಂತರದ ಅವಧಿಯಲ್ಲಿ ಕ್ಷೀರ ಸಾಗರ (ಹಾಲಿನ ಸಮುದ್ರ ಅರ್ಥಾನ್ ಬಿಳುಪಾದ, ಶುದ್ದವಾದ ನೀರಿನಿಂದ ಕೂಡಿದ) ಮಥಿಸಲು ಕಾರಣವಾಯಿತು
- ಮೇನಕೆಯು ಆರು ಪ್ರಮುಖ ಆಕಾಶತಾರೆಯರ ಪೈಕಿ ಒಬ್ಬಳಾಗಿದ್ದಾಳೆಂದು ಮಹಾಭಾರತದ ಆದಿ ಪರ್ವಅಧ್ಯಾಯ 74ರ ಶ್ಲೋಕ ಸಂಖ್ಯೆ 68ರಲ್ಲಿ ಹೇಳಿದೆ.
- ಮೇನಕೆಯು ಅರ್ಜುನನ (ಅರ್ಜುನ ಕುಂತಿಗೆ ಜನ್ಮಿಸಿದ್ದ ಇಂದ್ರನ ಮಗ)ಜನ್ಮೋತ್ಸವದ ವೇಳೆ ಭಾಗವಹಿಸಿ ಹಾಡಿ ನರ್ತಿಸಿದ್ದಳು ಎಂದೂ ಮಹಾಭಾರತದ ಆದಿ ಪರ್ವದಲ್ಲಿ ಅಧ್ಯಾಯ 122 ಶ್ಲೋಕ 64ರಲ್ಲಿ ಉಲ್ಲೇಖವಿದೆ. ಅಲ್ಲದೆ ಅದೇ ಮಹಾಭಾರತದ ಸಭಾ ಪರ್ವದ ಅಧ್ಯಾಯ 10ಶ್ಲೋಕ 10ರಲ್ಲಿ ಮೇನಕೆ ಕುಬೇರನ ಆಸ್ಥಾನ ನರ್ತಕಿಯಾಗಿದ್ದಳೆನ್ನಲಾಗಿದೆ.
- ಮೇನಕೆ ಒಮ್ಮೆ ಅರ್ಜುನನ ಗೌರವಾರ್ಥವಾಗಿ ಇಂದ್ರನ ಆಸ್ಥಾನದಲ್ಲಿ ಸಂಗೀತ ಪ್ರದರ್ಶನ ನೀಡಿದಳು ಎನ್ನುವುದಾಗಿ ಮಹಾಭಾರತ , ವನ ಪರ್ವ ಅಧ್ಯಾಯ 43ಶ್ಲೋಕ 29, ಹೇಳುತ್ತದೆ.
- ಇನ್ನು ಶಿವಪುರಾಣದಲ್ಲಿ ( 2.2.22 ರ ಪ್ರಕಾರ) ಮೇನಕೆ “ಪರ್ವತಗಳ ರಾಜ” (ಪರ್ವತರಾಜ / ಹಿಮವಂತ)ನ ಪತ್ನಿಯಾಗಿದ್ದಳು.
ವಿಶ್ವಾಮಿತ್ರ ಮತ್ತು ಮೇನಕೆ |
ಶಕುಂತಲೆಯ ಜನನ(ಖ್ಯಾತ ಚಿತ್ರಕಾರ ರವಿವರ್ಮ ಕಲಾಕೃತಿ) |
No comments:
Post a Comment