Tuesday, November 23, 2021

ಋಗ್ವೇದ ಕನಿಷ್ಟ ಕ್ರಿ.ಪೂ. 23720 ನಲ್ಲಿ ರಚನೆಯಾಗಿದೆ!!

 ವೇದಗಳು ಅನಾದಿ ಕಾಲದಿಂದಲೂ ಅಸ್ತುತ್ವದಲ್ಲಿದೆ. ವೇದವ್ಯಾಸರು ಕ್ರಿ.ಪೂ. 3100 ರ ಸುಮಾರಿಗೆ ಅವುಗಳನ್ನು ಸಂಗ್ರಹಿಸಿ ಪ್ರಕಟಪಡಿಸಿದರೆಂದು ಹಲವರು ನಂಬುವರು. ಆದರೆ ಅದರ ಹಿಂದಿನ ಸತ್ಯ ಎಂದರೆ ವ್ಯಾಸರು ಸಂಪೂರ್ಣ ವೇದಗಳನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ್ದಾರೆ.ಇದಕ್ಕೆ ಮುನ್ನ ಎಲ್ಲಾ ನಾಲ್ಕು ವೇದಗಳು ಒಂದೇ ಆಗಿದ್ದವು ಅಥವಾ ಒಟ್ಟಿಗೆ ಇದ್ದವು. ವ್ಯಾಸರು ಅನಾದಿ ಏಕ ವೇದವನ್ನು ನಾಲ್ಕಾಗಿ ವರ್ಗೀಕರಿಸಿದ್ದಾರೆ. ಅದರಿಂದಾಗಿ ಅವರನ್ನು ವೇದವ್ಯಾಸ ಅಥವಾ ವೇದಗಳ ವಿಂಗಡನೆಗಾರ ಎಂದು ಕರೆಯಲಾಗಿದೆ  ಇದು ವೇದಗಳಲ್ಲಿನ ಅಪೂರ್ವ ಜ್ಞಾನವನ್ನು ಜನರಿಗೆ ಅರ್ಥೈಸಿಕೊಳ್ಳಲು ಅನುವಾಗುವಂತೆ ಮಾಡಿದ ಒಂದು ಸಾಧನೆಯಾಗಿದೆ.

ವ್ಯಾಸ ಎಂಬ ಪದದ ಅರ್ಥ ವಿಂಗಡನೆ, ವಿಭಜನೆ ಅಥವಾ ವ್ಯತ್ಯಾಸ ಎಂದಾಗುತ್ತದೆ. ವೇದವ್ಯಾಸರು ತಮ್ಮ ಈ ಕಾರ್ಯವನ್ನು ಸು,ಆರು 5000 ವರ್ಷಗಳ ಹಿಂದೆ ಮಾಡಿದ್ದರೂ ಋಗ್ವೇದವು ಯಾವಾಗ ಅಸ್ತಿತ್ವಕ್ಕೆ ಬಂದಿತೆನ್ನುವುದು ಮಾನವನ ಕಲ್ಪನೆಗೆ ಮೀರಿದ್ದಾಗಿದೆ.

ಋಗ್ವೇದದ 1-161-13 ಭಾಗದಲ್ಲಿ ಹೇಳಿದಂತೆ "ರುಭುಸ್(ಮೋಡಗಳು) ಗಳನ್ನು ಯಾರು ಜಾಗೃತಗೊಳಿಸಿದರು? ಎಂಬ ಪ್ರಶ್ನೆಗೆ ಸೂರ್ಯನ ಉತ್ತರ "ನಾಯಿ,ಏಕೆಂದರೆ ಇಂದು ವರ್ಷದ ಕಡೆಯ ದಿನ."(ಇಲ್ಲಿ ನಾಯಿ ಎಂದರೆ  ಕ್ಯಾನಿಸ್ ಮೇಜರ್ ಅಥವಾ ಮೃಗಶಿರ ನಕ್ಷತ್ರವಾಗಿದೆ. ವರ್ಷಾಂತ್ಯವನ್ನು ಬಿರಿ ಬೇಸಿಗೆಯ ಅಂತ್ಯಕಾಲ ಅಥವಾ ಬೇಸಾಯದ ಪ್ರಾರಂಭ (ಮಳೆಗಾಲ) ಎಂದು ಭಾವಿಸಬಹುದು.

ನಾಯಿಗಳು ಮೋಡವನ್ನು ಎಚ್ಚರಿಸಿದವು ಎಂದರೆ ಸೂರ್ಯನು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸಿದಾಗ ಜಗತ್ತು ಮೋಡಗಳಿಂದ ಕೂಡಿ ಮಳೆಗಾಲ ಪ್ರಾರಂಬವಾಗಿತ್ತು ಎಂದು ಅರ್ಥ. ಪ್ರಸ್ತುತ ಕಾಲದಲ್ಲಿ ಸೂರ್ಯನು ಕೇನಿಸ್ ಮೇಜರ್ (ಮೃಗಶಿರ ನಕ್ಷತ್ರ) ಪ್ರವೇಶಿಸಿದಾಗ ಭಾರತದಲ್ಲಿ ಮಳೆ ಪ್ರಾರಂಭವಾಗುತ್ತದೆ.

ಋಗ್ವೇದದ ಕಾಲಮಾನ ಹಾಗೂ ಸಮಯ

ಪ್ರಸ್ತುತ ಯುಗದಲ್ಲಿ ವೇದಗಳು ರಚನೆಯಾಗಿರಲಿಲ್ಲ ಹಾಗಾಘಿ ಷುವತ್ ಸಂಕ್ರಾಂತಿಯ ಪೂರ್ವವರ್ತನೆಯ ಒಂದು ಚಕ್ರವನ್ನು ಪೂರ್ಣಗೊಳಿಸಿರಬೇಕು. ಭಾರತೀಯ ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಿವೆ. ಎಂದರೆ ಪ್ರತಿಪ್ರಮಾಣ ದರ  ಪ್ರತಿ ನಕ್ಷತ್ರಕ್ಕೆ 960 ವರ್ಷಗಳು. ಅಂದರೆ 27 ನಕ್ಷತ್ರಗಳ ಒಂದು ಚಕ್ರವೆಂದರೆ ಅದು 25920 ವರ್ಷಗಲಾಗುತ್ತದೆ ಹಾಗಾಗಿ ಋಗ್ವೇದವು ಕನಿಷ್ಠ 25920 ವರ್ಷಗಳಷ್ಟು ಹಳೆಯದಾಗಿದೆ (ಅಂದಿನಿಂದ ಇಂದಿನವರೆಗೆ ಕಾಲಚಕ್ರದ ಒಂದೇ ಒಂದು ಸುತ್ತು ಪೂರ್ಣವಾಗಿದೆ ಎಂದು ನಾವು ಭಾವಿಸಿದ್ದಾದರೆ..) ಪ್ರಸ್ತುತ ನಾವು 2000 ವರ್ಷಗಳನ್ನು ಕಳೆದಿರುವ ಕಾರಣ ಈ ಕಾಲವು ಸುಮಾರು ಕ್ರಿ.ಪೂ. 25720 ಗೆ ಸಮವಾಗುತ್ತದೆ.

ಋಗ್ವೇದದ 4-57-5 ನಲ್ಲಿ  ಶುನಾಸಿರಾಯನಿಗೆ ಸ್ವರ್ಗದಲ್ಲಿನ ನೀರನ್ನು ಬಳಸಿ ಭೂಮಿಯಲ್ಲಿ ಸ್ನಾನ ಮಾಡಲು ಕೇಳಲಾಗುತ್ತದೆ. ಇಲ್ಲಿ ಶುನ ಎಂದರೆ ನಾಯಿ, ಸಿರೌ ಎಂದರೆ ಎರಡು ತಲೆಗಳು. ನಾಯಿಯ ಎರಡು ತಲೆಗಳು ಎಂದರೆ  ಕ್ಯಾನಿಸ್ ಮೇಜರ್ ಮತ್ತು ಮೈನರ್ ಎಂಬ ಎರಡು ನಕ್ಷತ್ರಗಳನ್ನು ಅರ್ಥೈಸುತ್ತವೆ. ಅಂದರೆ ಮೃಗಶಿರ ನಕ್ಷತ್ರ.

ಇದು ಮೃಗಶಿರಾ ನಕ್ಷತ್ರದಂದು ಮಳೆಗಾಲದ ಆರಂಭವನ್ನು ತೋರಿಸುತ್ತದೆ, ಇದರ ಕಾಲಾವಧಿ ಕ್ರಿ.ಪೂ. 23720.

ಮೌಖಿಕ ಸಂಪ್ರದಾಯ ಅನೇಕ ತಲೆಮಾರುಗಳವರೆಗೆ ಮುಂದುವರಿದಿತ್ತಾದುದರಿಂದ  ನಿಖರವಾದ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ. ಆದರೆ ಈ ಶ್ಲೋಕದ ರಚನೆ ಕಾಲವನ್ನು ಸಹಜವಾಗಿ ನೋಡಿದಾಗ ಋಗ್ವೇದದ ಕಾಲಮಾನವು ಅಥವಾ ಋಗ್ವೇದ ರಚನೆಯಾದ ಸಮಯವು 25920 ವರ್ಷಗಳ ಗುಣಕವಾಗಿರುತ್ತದೆ.

Thursday, November 18, 2021

ಬಲಿ ಚಕ್ರವರ್ತಿಯ ರಾಜಧಾನಿ ಭೋಗಾವತಿಯೇ ಕೊಲಂಬಿಯಾದ ಬೊಗೋಟಾ!

ವಾಮನನಿಂದ ಪಾತಾಳ ಲೋಕಕ್ಕೆ (ದಕ್ಷಿಣ ಅಮೇರಿಕಾ)ಕಳುಹಿಸಲ್ಪಟ್ಟ ಮಹಾಬಲಿ ಅಲ್ಲಿ ಭೋಗಾವತಿ ಎಂಬ ನಗರವನ್ನು ತನ್ನ ರಾಜಧಾನಿಯಾಗಿ ನಿರ್ಮಿಸಿಕೊಂಡನು. ಈ ಭೋಗಾವತಿ ಇಂದಿನ ಆಧುನಿಕ ಜಗತ್ತಿನ ಕೊಲಂಬಿಯಾ ದೇಶದ ರಾಜಧಾನಿ ಬೊಗೋಟ ಆಗಿದೆ.


ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ, ರಾಮನು ವಿಶಾಖವು ಇಕ್ಷ್ವಾಕು ವಂಶದ ನಕ್ಷತ್ರಪುಂಜ ಮತ್ತು ಮೂಲ ರಾಕ್ಷಸ ವಂಶಜರ ನಕ್ಷತ್ರಪುಂಜ ಎಂದು ಉಲ್ಲೇಖಿಸಿದ್ದಾನೆ. ಅಂದಿನ ದಿನಗಳಲ್ಲಿ ವರ್ನಾಲ್ ಈಕ್ವಿನಾಕ್ಸ್ ಎನ್ನುವುದು ಬಹಳ ಪ್ರಮುಖವಾಗಿತ್ತು.ಆದ್ದರಿಂದ ವಸಂತ ಋತುವಿನ ವಿಷುವತ್ ಸಂಕ್ರಾಂತಿಯು ಮೂಲಾ ನಕ್ಷತ್ರದಲ್ಲಿದ್ದಾಗ ಬಲಿ ಚಕ್ರವರ್ತಿಯು ಭಾರತವನ್ನು ಆಳಿದ್ದನು. ಮತ್ತು ಈ ಕಾಲಾವಧಿಯು 17000 - 18000 ಬಿಸಿಇ ಅಥವಾ ಐದಕ್ಕೂ ಹಿಂದಿನ ಅವಧಿಯಾಗಿದೆ. ಅದೇ ವಿಷುವತ್ ಸಂಕ್ರಾಂತಿಯು ವಿಶಾಖಾ ನಕ್ಷತ್ರದಲ್ಲಿದ್ದಾಗ ಇಕ್ಷ್ಯಾಕು ರಾಜವಂಶದ ಪ್ರಾರಂಭವಾಗಿತ್ತು. ಅಂದರೆ ಬಲಿಯು  ಭಾರತವನ್ನು ತೊರೆದ ಸರಿಸುಮಾರು 3000-4000 ವರ್ಷಗಳ ನಂತರ, ಇಕ್ಷ್ವಾಕು ವಶದವರು ಭಾರತವನ್ನು 15000-14000 ಬಿಸಿಇ ನಿಂದ ಆಳಲು ಪ್ರಾರಂಭಿಸಿದ್ದರು.

विमले च प्रकाशेते विशाखे निरुपद्रवे || ६-४-५१

नक्षत्रम् परम् अस्माकम् इक्ष्वाकूणाम् महात्मनाम् |

ವಿಶಾಖಾ ನಕ್ಷತ್ರಪುಂಜ ಯಾವುದೇ ದುಷ್ಟ ಪ್ರಭಾವವಿಲ್ಲದೆ ಸ್ಪಷ್ಟವಾಗಿ ಹೊಳೆಯುತ್ತಿದೆ. ಈ ಸರ್ವೋಚ್ಚ ನಕ್ಷತ್ರಪುಂಜವು ನಮ್ಮ ಇಕ್ಷ್ವಾಕುಗಳ ಅತ್ಯುನ್ನತ ಆತ್ಮವಾಗಿದೆ.

नैरृतम् नैरृतानाम् च नक्षत्रम् अभिपीड्यते || ६-४-५२ ( ವಾಲ್ಮೀಕಿ ರಾಮಾಯಣ)

मूलम् मूलवता स्प्ऱ्ष्टम् धूप्यते धूम केतुना |

नैरृतम् नैरृतानाम् च नक्षत्रम् अभिपीड्यते || ६-४-५२

मूलम् मूलवता स्प्ऱ्ष्टम् धूप्यते धूम केतुना |

ಮುಲಾ ನಕ್ಷತ್ರಪುಂಜವು ಕೆಟ್ಟದಾದ ಪ್ರಭಾವಲಯ ಹೊಂದಿದ್ದು ಅದು ಧೂಮಕೇತುವಿನ ಬಾಲದಿಂಡ ಸ್ಪರ್ಶಿಸಲ್ಪಟ್ಟಿದೆ ಅಲ್ಲದೆರ್ ಅದರಿಂದ ಪೀಡಿತವಾಗಿದೆ.

ಬಲಿಯು ಮೊದಲಿಗೆ ಪೆರು ದೇಶಕ್ಕೆ ಆಗಮಿಸಿ ಅಲ್ಲಿ ರಾಕ್ಷಸರು ಅಥವಾ ಅಸುರರ ಹಾಗೂ ಇತರ ನಡುವೆ ಗಡಿರೇಖೆಯ ಗುರುತಾಗಿ ತ್ರಿಶೂಲದ ಚಿಹ್ನೆನ್ನು ಕೆತ್ತಿದ್ದನು. ಅಲ್ಲಿ ಅವನು ತನ್ನ ರಾಜ್ಯವನ್ನು 'ಭೋಗಾವತಿ' ಎಂಬ ಹೆಸರಿನೊಂದಿಗೆ ಸ್ಥಾಪಿಸಿದನು, ಇದು ಇಂದಿನ ಆಧುನಿಕ ಕಾಲದಲ್ಲಿ ಕೊಲಂಬಿಯಾದ ರಾಜಧಾನಿಯಾಗಿದೆ.  ಅಂತೆಯೇ ಮಕ್ಷಿಕಾ ಮೆಕ್ಸಿಕೋ, ಕೇತು ಮಾಲಾ ಗ್ವಾಟೆಮಾಲಾ, ಸೂರ್ಯನಾಮ ಸುರಿನಾಮ್ ಎಂಬ ಹೆಸರಿನಿಂದ ಪ್ರಚಲಿತವಿದೆ. ವಿಷ್ಣು ಪುರಾಣವು ಕೇತುಮಾಲವು ಜಂಬೂದ್ವೀಪದ ಪಶ್ಚಿಮದಲ್ಲಿ ನೆಲೆಯಾಗಿದೆ ಎಂದು ಉಲ್ಲೇಖಿಸಿದೆ. ಪುರಾಣಗಳು, ರಾಮಾಯಣ, ಉತ್ತರ ರಾಮಾಯಣ ಇತ್ಯಾದಿಗಳಲ್ಲಿ ಮಯ, ಸುಮಾಲಿ, ಮಾಲಿ, ಮಾಲ್ಯವನ, ಪ್ರಥಮ ರಾವಣ, ಸಗರನ ಮಕ್ಕಳು, ಕಪಿಲ ಋಷಿ, ಹನುಮ, ರಾಮ ಲಕ್ಷ್ಮಣರು ಪಾತಾಳಕ್ಕೆ ಪ್ರಯಾಣಿಸಿರುವುದನ್ನು ಉಲ್ಲೇಖಿಸುತ್ತದೆ.


ವಿದುರಪಡಿತ ಜಾತಕ ಪುಸ್ತಕದಲ್ಲಿ ಭೋಗಾವತಿ ಅರಮನೆಯ ವಿಸ್ಕೃತವಾಗಿರುವ ವಿವರಣೆ ಇದೆ.

ಬಲಿ ಚಕ್ರವರ್ತಿಯು ವಿಮಾನ ನಿಲ್ದಾನ, ರನ್ ವೇ ಗಳನ್ನು ಸಹ ನಿರ್ಮಾಣ ಮಾಡಿದ್ದು ಆತನ ವಿಮಾನಗಳು ಪೆರುವಿನ ನಾಜ್ಕಾ ಲೇನ್ ನಲ್ಲಿ ಇಳಿದಿದ್ದವು.

ಬಲಿಯ ಕಾಲಾವಧಿಯಲ್ಲೇ ವಿಮಾನಗಳಿದ್ದವಾದರೆ ಆ ನಂತರ ನಾವು ಇದನ್ನು ಹೇಗೆ ಕಳೆದುಕೊಂಡೆವು? ಇದಕ್ಕೆ ಉತ್ತರ ಎಂದರೆ ನಾವಿಂದು ಬಳಸುತ್ತಿರುವ ಪೆಟ್ರೋಲಿಯಂ ಅತ್ಯಂತ ವೇಗವಾಗಿ ಖಾಲಿಯಾಗುತ್ತಿರುವ ಹಾಗೆಯೇ ಅಂದಿನ ಕಾಲದಲ್ಲಿ ಬಳಸಿದ್ದ ಇಂಧನ ಖಾಲಿಯಾಗಿರಬೇಕು.


ಮೆಕ್ಸಿಕೋದ ಚಕ್ರವರ್ತಿ ಮಾಂಟೆಝುಮಾ ಸ್ಪೇನ್ ನ ಆಕ್ರಮಣಕಾರರಿಗೆ "ನನ್ನ ಪೂರ್ವಜರು ಪೂರ್ವದಿಂದ ಇಲ್ಲಿಗೆ ಬಂದವರು" ಎಂದು ಹೇಳಿದ್ದಾನೆ. ಅಜ್ಟೆಕ್, ನಹುವಾ ಇತ್ಯಾದಿ ಬುಡಕಟ್ಟುಗಳು ಭಾರತದಿಂದ ಇಲ್ಲಿಗೆ ವಲಸೆ ಬಂದವುಗಳಾಗಿದೆ,

ಬ್ಯಾಂಕೊ ಡಿ ಬೊಗೊಟಾ (ಸ್ಟೇಟ್ ಬ್ಯಾಂಕ್ ಆಫ್ ಕೊಲಂಬಿಯಾ) ಕಟ್ಟಡದ ಒಳಗಿರುವ ಬಗೋಟಾ ಗೋಲ್ಡ್ ಮ್ಯೂಸಿಯಂನಲ್ಲಿಚಿನ್ನದಿಂದ ಮಾಡಲ್ಪಟ್ಟ ವಿಮಾನದ ಮಾದರಿಗಳು ಕಂಡುಬಂದಿದೆ. ಅವು ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದ್ದು ಸಾವಿರಾರು ವರ್ಷಗಳಿಂಡ ಯಾವುದೇ ಬಗೆಯಲ್ಲಿ ಹಾನಿಗೊಳ್ಳದೆ ಅಸ್ತಿತ್ವದಲ್ಲಿದೆ. ಅದಲ್ಲದೆ ಈಜಿಪ್ಟ್ ನಲ್ಲಿರುವ ಸಕ್ಕರಾ ಗ್ಲೈಡರ್ ಸಹ ಇದೇ ಬಗೆಯ ಮಾದರಿಯನ್ನು ಹೊಂದಿದೆ. ಅವುಗಳು ಸಹ ಪ್ರಾಚೀನ ಭಾರತೀಯರು ವಿಶ್ವದ ನಾನಾ ಭಾಗಗಳಿಗೆ ವಿಮಾನದ ಮೂಲಕ ತಲುಪಿದ್ದರೆಂದು ಸೂಚಿಸಿದೆ.


Wednesday, November 17, 2021

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 109

 ಕಳಸ (Kalasa)

ಕಳಸ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿದ್ದು ಭದ್ರಾ ನದಿಯ ಬಲದಂಡೆಯ ಬಳಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಇದರೊಂದಿಗೆ ದಕ್ಷಿಣದಲ್ಲಿ ದುಗ್ಗಪ್ಪನ ಕಟ್ಟೆ(ಸಣ್ಣ ಗುಡ್ಡ)ಯಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ಸುಮಾರು ೧೧೦ಕಿಲೋಮೀಟರ್ ದೂರದಲ್ಲಿದ್ದು , ರಾಜ್ಯ ರಾಜಧಾನಿ ಬೆಂಗಳೂರಿನಿಂದ ೩೧೦ ಕಿಲೋಮೀಟರ್ ಹಾಗೂ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಕಳಸಕ್ಕೆ ೯೨ ಕಿಲೋ ಮೀಟರ್ ಅಂತರವಿದೆ. ಇಲ್ಲಿಯ ಕಳಸನಾಥ ಅಥವ ಕಳಸೇಶ್ವರ ದೇವಾಲಯ ಬಲು ಪ್ರಾಚೀನ ದೇವಾಲಯವಾಗಿದ್ದು ನಾಯಕರ  ಕಾಲದಲ್ಲಿ ಈಇದ್ದ ದೇವಾಲಯ 



ಕಳಸದಿಂದ 8 ಕಿಲೊಮೀಟರ್ ದೂರದಲ್ಲಿ ಜಗತ್ ಪ್ರಸಿದ್ಧ  ಆದಿಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇಗಲು ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಕೋಟಿ ಭಕ್ತರು ಸಲಹುತ್ತಿರುತಾಳೆ. ದೇಶದ ನಾನಾ ಭಾಗಗಳಿಂದ ಭಕ್ತರು ಈ ಶಕ್ತಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿ, ತೀರ್ಥಪ್ರಸಾದ ಸೇವಿಸಿ, ಭಗವತಿ ಅನುಗ್ರಹ ಪಡೆಯುತ್ತಿದ್ದಾರೆ. ಪ್ರಸಿದ್ಧ ಚಲನಚಿತ್ರ ನಟ ನಟಿಯರು ಅನ್ನಪೂರ್ಣೇಶ್ವರಿ ಅಗಸ್ತ್ಯ ಕ್ಷೇತ್ರದಲ್ಲಿ ಬಂದು ಪ್ರಸಿದ್ಧರಾಗಿದ್ದಾರೆ.

ನಿರ್ಮಾಣವಾಗಿದೆ.ದರೆ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ ಹೊಯ್ಸಳ ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದು ಎಂದು ಹೇಳಲಾಗುತ್ತದೆ.  ಈ ದೇವಾಲಯದ ಗರ್ಭಗುಡಿಯಲ್ಲಿರುವ ೯ ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ. ೧೬ ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ.ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ.
ಇದಲ್ಲದೆ ಇನ್ನೊಂದಷ್ಟು ಆಧಾರಗಳು ಹೇಳಿದಂತೆ ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ.
ಇನ್ನೂ ವಿಶೇಷವೆಂದರೆ ಈ ದೇವಾಲಯದಲ್ಲಿ ಎರಡು ಆನೆಗಳ ವಿಗ್ರಹಗಳಿದ್ದು, ಅವುಗಳಲ್ಲಿ  ಒಂದು ಗಣೇಶನದಾಗಿದ್ದು  ಮತ್ತೊಂದು ಹೆಣ್ಣಾನೆಯಾದು. ಎರಡು ವಿಗ್ರಹಗಳೂ ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ ಗಂಡಾನೆಯ ಪಾದದ ಅಡಿಯಲ್ಲಿ ಅಸುರರನ್ನು ಕಾಣಬಹುದು. ಪ್ರವಾಸಿಗರು ಕಳಸೇಶ್ವರನ ಪುತ್ಥಳಿ ಹಾಗೂ ಕಳಸದಲ್ಲಿ ಶಿವನೇ ಆ ರೂಪದಲ್ಲಿ ಅವತರಿಸಿಹನೆಂದು ನಂಬಿರುವ ಲಿಂಗವನ್ನು ದರ್ಶನ ಮಾಡಬಹುದು

***

ಈ ಸ್ಥಳವು ಗಣೇಶನಿಂದ ಹತ್ಯೆಗೊಳಗಾದ ಅಸುರನದಾಗಿತ್ತು ಎಂಬ ನಂಬಿಕೆಯಿದೆ. ಅಲ್ಲದೆ ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ.ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮುನಿಯೇ ಕಾರಣರಾಗಿದ್ದಾರೆ.

ತುಂಗಭದ್ರ ಖಂಡದಲ್ಲಿ ಹೇಳಿರುವಂತೆ, ಬಹು ಹಿಂದೆ ದೇವೇಂದ್ರನು ತನ್ನ ಸಕಲ ದೇವತೆಗಳೊಡನೆ ಸೇರಿಕೊಂಡು ಬಹು ವೈಭವಯುತವಾಗಿ ಸಾಮ್ರಾಜ್ಯ ನಡೆಸುತ್ತಿದ್ದನು. ಅವನ ಕೀರ್ತಿ ಪತಾಕೆಗಳು ಎಲ್ಲೆಡೆ ಹರಿದಾಡಿದ್ದವು. ಹಾಗಾಗಿ ದೇವೇಂದ್ರನು ಸಂತಸದಲ್ಲಿದ್ದನು.

ಇತ್ತ ಭೂಲೋಕದಲ್ಲಿ ಮಿತ್ರ ವರುಣರೆಂಬ ಋಷಿ ಸಹೋದರರಿಬ್ಬರೂ ವಿಹಾರ ಮಾಡುತ್ತಾ ತುಂಗಭದ್ರಾ ನದಿಯ ತೀರದಲ್ಲಿ ಅಪಾರವಾದ ಸಿದ್ಧಿ ಹಾಗೂ ದೇವಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ತಪಸ್ಸು ಮಾಡುತ್ತಿದ್ದರು.ದಿನಗಳೆದಂತೆ ಅವರಿಗೆ ಅಪಾರವಾದ ಶಕ್ತಿ ಸಿಗಲಾರಂಭಿಸಿತು. ಧಾರ್ಮಿಕವಾಗಿ ಸಾಕಷ್ಟು ಪ್ರಬಲರಾಗತೊಡಗಿದರು. ಈ ವಿಷಯವು ಈಗ ಇಂದ್ರನ ಕಿವಿಗೆ ತಲುಪಿತು. ಅದರಿಂದ ಚಿಂತಾಕ್ರಾಮ್ತನಾದ ಇಂದ್ರನು ಅವರಿಬ್ಬರ ತಪಸ್ಸಿಗೆ ಭಂಗ ಉಂಟು ಮಾಡಲು ಉಪಾಯ ಮಾಡತೊಡಗಿದ. ಉಪಾಯದ ಫಲವಾಗಿ, ಇಂದ್ರನು ತನ್ನ ಆಸ್ಥಾನದ ಅತಿ ಸುಂದರ ಕನ್ಯೆಯಾದ ಉರ್ವಶಿಯನ್ನು ಕರೆದು ಅವರ ತಪಸ್ಸು ಭಂಗ ಮಾಡಲು ಸೂಚಿಸಿದ. ದೇವೇಂದ್ರನ ಆದೇಶದಂತೆ ಉರ್ವಶಿಯು ಭುಲೋಕಕ್ಕೆ ಬಂದು ಅವರಿಬ್ಬರು ತಪ ಮಾಡುತ್ತಿದ್ದ ಸ್ಥಳಕ್ಕೆ ಬಂದು ತನ್ನ ಮೈಮಾಟದ ಮೂಲಕ ಹಾಡಲಾರಂಭಿಸಿದಳು, ನೃತ್ಯಿಸತೊಡಗಿದಳು. ಕೆಲ ಸಮಯ ಹಾಗೆ ಕಳೆಯಿತಾದರೂ ಕೊನೆಗೆ ಉರ್ವಶಿ ಅಪೂರ್ವ ಸೌಂದರ್ಯ ಹಾಗೂ ಶರೀರಕ್ಕೆ ಮರಳಾದ ಇಬ್ಬರು ವಿಚಲಿತರಾಗಿ ಅವಳೊಡಗೂಡಿ ಮೋಹಪಾಶದಲ್ಲಿ ಸಿಲುಕಿಬಿದ್ದರು. ಈ ಸಂದರ್ಭದಲ್ಲಿ ಮಿತ್ರನ ವೀರ್ಯ ಸ್ಖಲನವಾಗಿ ಅದನ್ನು ದೇವತೆಗಳು ಒಂದು ಕುಂಭ (ಮಡಕೆ) ದಲ್ಲಿ ಶೇಖರಿಸಿದರು. ಕುಂಭದಲ್ಲಿದ್ದ ಆ ವೀರ್ಯದಿಂದಲೆ ನಂತರ ಅಗಸ್ತ್ಯ ಋಷಿಗಳ ಜನನವಾಯಿತು. ಆದ್ದರಿಂದಲೆ ಅಗಸ್ತ್ಯ ಮುನಿಗ ಕುಂಭಯೋನಿ, ಕುಂಭಸುತ ಎಂಬ ಇತರೆ ಹೆಸರುಗಳಿರುವುದನ್ನು ಗಮನಿಸಬಹುದು. ಹೀಗೆ ಅವತರಿಸಿದ ಅಗಸ್ತ್ಯರು ಮುಂದೆ ಕ್ರಮವಾಗಿ ವೈದಿಕ ವಿದ್ಯೆಗಳನ್ನು ಪಡೆದು ಸಕಲ ಶಾಸ್ತ್ರ, ಪುರಾಣಾದಿಗಳನ್ನು ಅಭ್ಯಸಿಸಿ, ತಪಸ್ಸನ್ನಾಚರಿಸುತ ಶಿವನ ಕೃಪೆಗೆ ಪಾತ್ರರಾದರು. ಶಿವನು ಪ್ರಸನ್ನನಾಗಿ ಅಗಸ್ತ್ಯರಿಗೆ ವರ ಕೇಳಲು ಹೇಳಿದಾಗ, ಅಗಸ್ತ್ಯರು ತಾವು ಜನಿಸಿದ್ದ ಕುಂಭದಲ್ಲಿ ಶಿವನು ಸದಾ ನೆಲೆಸಿರಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ಶಿವನು ಕಳಸದಲ್ಲಿ ಕಳಸೇಶ್ವರನಾಗಿ ನೆಲೆಸಿದನೆಂಬ ಪ್ರತೀತಿಯಿದೆ. 


ಅಲ್ಲದೆ ಅಗಸ್ತ್ಯರ ಜನನವಾಗುವ ಸಮಯದಲ್ಲೇ ಕಲಶದ ಹೊರಗೆ ಚೆಲ್ಲಿದ ರೇತಸ್ಸಿನಿಂದ ಹಿಂದೆ ನಿಮಿಚಕ್ರವರ್ತಿಯಿಂದ ಶಾಪಗ್ರಸ್ತರಾಗಿದ್ದ ವಸಿಷ್ಠರ ಜನನವಾಯಿತು. ಎಂದೂ ಹೇಳಲಾಗುತ್ತದೆ.

***

"ಕಳಸ" ಶಬ್ದದ ವ್ಯುತ್ಪತ್ತಿಯ ಬಗೆಗೆ ನೋಡುವಾಗ ಕಳಸ ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆಂದು ಹೇಳಲಾಗಿದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿಂದ ಕಳಸವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. 

ಅಗಸ್ತ್ಯ, ವಶಿಷ್ಠ ಋಷಿಗಳ ತಪೋಭೂಮಿಯಾದ ಕಳಸದಲ್ಲಿ. ಪಂಚ ತೀರ್ಥಗಳಿವೆ. ಕೋಟಿ ತೀರ್ಥ, ಅಂಬಾತೀರ್ಥ, ರುದ್ರತೀರ್ಥ, ನಾಗತೀರ್ಥ, ವಶಿಷ್ಷ ತೀರ್ಥ. ಈ ಪಂಚತೀರಥಗಳಲ್ಲಿ ಪಿತೃ ಕಾರ್ಯವನ್ನು ಮಾಡುವುದರಿಂದ ಸದ್ಗತಿ ಪ್ರಾಪ್ತಿ ಎಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಕಾಶಿಯಲ್ಲಿ 12ವರ್ಷಗಳಿಗೊಮ್ಮೆ ಗಿರಿಜಾ ಕಲ್ಯಾಣವಾಗುತ್ತದೆ. ಇಲ್ಲಿಯ ವೈಶಿಷ್ಟ್ಯತೆ ಏನೆಂದರೆ ಪ್ರತಿ ವರ್ಷ ಕಾರ್ತೀಕ ಶುದ್ಧ, ಏಕಾದಶಿಯಂದು ಪ್ರತಿವರ್ಷ ಗಿರಿಜಾ ಕಲ್ಯಾಣ ನಡೆಯುತ್ತಿದೆ ವಶಿಷ್ಟ, ಅಗಸ್ತ್ಯ ಋಷಿಗಳ ಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿರುವುದು. ಹಾಗಾಗಿ ಈಶ್ವರನಿಗೆ ಕಲ್ಯಾಣ ಕಲಶೇಶ್ವರ ಎಂದು ಜಗತ್ ಪ್ರಸಿದ್ಧ ತಾಣವಾಗಿದೆ. 

***

ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ.

ಮಧ್ವಾಚಾರ್ಯರು ಏಕಹಸ್ತದಿಂದ ಮೇಲಕ್ಕೆ ಎತ್ತಿಟ್ಟ ಬೃಹತ್ ಗಾತ್ರದ ಬಂಡೆಗಲ್ಲು, ಆ ಬಂಡೆಗಲ್ಲಿನ ಮೇಲೆ ಮಧ್ವಾಚಾರ್ಯರ ಹಸ್ತಾಕ್ಷರವನ್ನು ನೋಡಬಹುದು. 32ಅಡಿ ಎತ್ತರದಿಂದ ಮಧ್ವಾಚಾರ್ಯರು ಧುಮುಕಿ ಈಜಿದ ಸ್ಥಳವನ್ನು ಕಾಣಲಿಕ್ಕೆ ಇದೆ. ಅಂಬತೀರ್ಥ ಎಂದು ಕರೆಯುತ್ತಾರೆ. ಮುಸಲಸ್ನಾನವನ್ನು ಮನ್ಮಧ್ವಾಚಾರ್ಯರು ಮಾಡಿದರು ಎಂದು ಮಾಧ್ವ ವಿಜಯದಲ್ಲಿ ಉಲ್ಲೇಖವಿದೆ. ಮುಸಲ ಸ್ನಾನ ಎಂದರೆ ಮೂವತ್ತೆರಡು ಅಡಿ ಎತ್ತರದಿಂದ ನದಿಗೆ ಧುಮುಕಿವುದು. ಈ ಸುಂದರ ತಾಣಗಳನ್ನು ಹೊಂದಿದೆ.

ಅಲ್ಲದೆ ಇಲ್ಲಿ  ರಾಮ ಸೀತೆ ಲಕ್ಷ್ಮಣ ರು ಪ್ರಯಾಣಿಸಿದ ಸ್ಥಳೀಯ ಐತಿಹ್ಯವಿದೆ. ಸೀತಾಸೆರಗು ಎಂಬ ಜಾಗವನ್ನು ನೋಡಬಹುದು.

Tuesday, November 16, 2021

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 108

 ಹೊರನಾಡು (Hornadu)

ಚಿಕ್ಕಮಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಹೊರನಾಡಿನಲ್ಲಿ ತಾಯಿ ಪಾರ್ವತಿಯು ಶ್ರೀ ಅನ್ನಪೂರ್ಣೇಶ್ವರಿಯ ರೂಪದಲ್ಲಿ ನೆಲೆಸಿದ್ದಾಳೆ. ಈ ದೇವಾಲಯವು ಅತ್ಯಂತ ಪುರಾತನವಾದುದಾಗಿದ್ದು, ಅನ್ನಪೂರ್ಣೆಶ್ವರಿಯ ಮೂಲ ವಿಗ್ರಹವು ಬಂಗಾರದಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಒಂದು ನಂಬಿಕೆಯ ಪ್ರಕಾರ, ಇಲ್ಲಿಗೆ ಭೇಟಿ ನೀಡುವ ಭಕ್ತರು ಅನ್ನದ ಕೊರತೆಯನ್ನು ಯಾವುದೇ ರೀತಿಯಲ್ಲಿ ಕಾಣುವುದಿಲ್ಲ ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಹಲವಾರು ಸ್ಥಳಗಳಿಂದ ಈ ತಾಯಿಯ ದರ್ಶನ ಕೋರಿ ಬರುತ್ತಾರೆ. ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಅನ್ನಪ್ರಸಾದ ಮತ್ತು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ. ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿರುವ ಹೊರನಾಡಿಗೆ ಹತ್ತಿರವಿರುವ ರೈಲ್ವೆ ನಿಲ್ದಾಣ ಶಿವಮೊಗ್ಗ ಆಗಿದೆ. ಅಲ್ಲದೇ ರಾಜ್ಯ ಮತ್ತು ಸ್ಥಳೀಯ ಬಸ್ಸು ಸೇವೆಗಳು ಇಲ್ಲಿಗೆ ಬರುವಂತೆ ಉತ್ತರ ರಸ್ತೆ ಸಂಪರ್ಕ ಹೊಂದಿದೆ. ಮಂಗಳೂರು ನಗರ ವಿಮಾನ ನಿಲ್ದಾಣವು ಹೊರನಾಡಿಗೆ ಸಮೀಪವಿದೆ. ಇಲ್ಲಿ ಎಲ್ಲರಿಗೂ ಉಚಿತವಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮಹಾಪ್ರಸಾದವಾಗಿ ನೀಡಲಾಗುತ್ತದೆ. ಹೊರನಾಡು ಅನ್ನಪೂಣೇಶ್ವರಿ ಬೇಡಿದ್ದನ್ನು ಕರುಣಿಸುವ ತಾಯಿ ಎಂಬ ನಂಬಿಕೆಯಿಂದ ಭಕ್ತರು ನಾನಾ  ಬಗೆಯ ಹರಕೆ ಮಾಡಿಕೊಳ್ಳುತ್ತಾರೆ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿದ್ದು ದಕ್ಕಿದಾಗ ಹರಕೆ ತೀರಿಸಲು ಮತ್ತೆ ಬರುತ್ತಾರೆ.ದೂರದ ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ದರ್ಶನ ಕೊಡುವ ಇತರ ದೇವಿಯರಂತಲ್ಲ ಹೊರನಾಡ ಅನ್ನಪೂರ್ಣೇಶ್ವರಿ. ತೀರಾ ಹತ್ತಿರದಿಂದ ದೇವಿಯ ದರ್ಶನ ಲಭ್ಯವಿದೆ.

ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅಲಂಕಾರದ ಎಕ್ಸ್ಕ್ಲೂಸಿವ್ ಚಿತ್ರ Exclusive image of Sri Annapoorneshwari Ammanavar(ಚಿತ್ರಕೃಪೆ: Sri Kshetra Horanadu Facebook page)


ದೇವಿಯ ಪ್ರಧಾನ ವಿಗ್ರಹ  ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ತಂದು ಸ್ಥಾಪಿಸಲಾಯಿತು. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಕ್ಷೇತ್ರವನ್ನು ಅಗಸ್ತ್ಯ ಋಷಿಗಳು ಸ್ಥಾಪಿಸಿದರು ಎಂದು ಬಲ್ಲವರು ಹೇಳುತ್ತಾರೆ  

ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರ್ಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ ನಡೆಯುತ್ತದೆ.

***

ಶಿವನ ಮಡದಿಯಾದ ಮಹಾಗೌರಿಯು ಅತ್ಯಂತ ಸುಂದರ ಹಾಗು ರೂಪವತಿಯಾಗಿದ್ದಳು. ಒಂದೊಮ್ಮೆ ರಸಿಕಾಟದಲ್ಲಿ ಮಹಾಶಿವನ ಮೂರು ಕಣ್ಣುಗಳನ್ನು ಮುಚ್ಚಿದಳು. ಇದರ ಪರಿಣಾಮ. ಇದರಿಂದ ಜಗತ್ತಿನೆಲ್ಲೆಡೆ ಅಂಧಕಾರ ವ್ಯಾಪಿಸಿತು. ಗೌರಿಯು ಕೂಡ ತನ್ನ ಪ್ರಭೆಯನ್ನು ಕಳೆದುಕೊಂಡಳು. ಇದರಿಂದ ಅಂತಕಕ್ಕೊಳಗಾದ ಗೌರಿಯು ಶಿವನನ್ನು ಕ್ಷಮೆ ಯಾಚಿಸಿದಳು. ಇದಕ್ಕೆ ಮಹಾಶಿವನು ಕಾಶಿಯಲ್ಲಿ ಅನ್ನದಾನ ಮಾಡಲು ಸೂಚಿಸುತ್ತಾನೆ.ಅದರಂತೆ ಕಾಶಿಯಲ್ಲಿ ಅನ್ನಪೂರ್ಣೆಯ ರೂಪದಲ್ಲಿ ಅವತರಿಸಿದ ಗೌರಿಯು ಅಲ್ಲೇ ಅಡುಗೆ ಮನೆ ನಿರ್ಮಿಸಿ ಪ್ರತಿಯೊಬ್ಬರಿಗೆ ಆಹಾರವ, ಭೋಜನವನ್ನು ನೀಡಿದಳು.

***

ಒಮ್ಮೆ ಶಿವನು ಮಾತನಾಡುವ ಸಮಯದಲ್ಲಿ ಪಾರ್ವತಿಗೆ ಈ ಲೋಕವು ಮಾಯೆ ಎಂದೂ, ಇಲ್ಲಿರುವ ಸಕಲ ವಸ್ತುಗಳು ಕೂಡ ಮಾಯೆ ಎಂದೂ, ಆಹಾರವು ಕೂಡ ಮಾಯೆ ಎಂದು ಹೇಳಿದನು. ಇದರಿಂದ ಬೇಸರಗೊಂಡ ಪಾರ್ವತಿ ದೇವಿಯು ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು. ಪಾರ್ವತಿ ದೇವಿ ಹೀಗೆ ಮಾಡಿದ್ದರಿಂದ ಹಾಹಾಕಾರ ಉಂಟಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಸಹ ಹಸಿವಿನ ತೀವ್ರತೆ ಎದುರಾಯಿತು. ನಂತರ ಪಶ್ಚಾತಾಪ ಪಟ್ಟು ಕರುಣೆಯಿಂದ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರವನ್ನು ನೀಡತೊಡಗಿದಳು. ಹೀಗೆ ಆಹಾರ ನೀಡುವ ಸಲುವ ತಾಯಿಗೆ ನಾವು ನಮಿಸಲೇಬೇಕು ಅಲ್ಲವೇ? ಹಾಗಾಗಿಯೇ ಪಾರ್ವತಿ ದೇವಿಯ ಅವತಾರವಾದ ಅನ್ನಪೂರ್ಣೆಯನ್ನು ನಾವು ಭಕ್ತಿಯಿಂದ ಆರಾಧಿಸಿದರೆ ಸಕಲ ಧನ-ಧಾನ್ಯಗಳು ಮನೆಯಲ್ಲಿರುತ್ತದೆ ಎಂಬ ನಂಬಿಕೆ ಇದೆ.!

***

 ಒಮ್ಮೆ ಶಿವ ಮತ್ತು ಪಾರ್ವತಿ ನಡುವೆ ಪಗಡೆ ಆಟದಲ್ಲಿ ಜಗಳ ಆಗುತ್ತದೆ ಕೋಪಗೊಂಡ ಶಿವ ಜಗತ್ತಿನ ಎಲ್ಲ ವಸ್ತುಗಳು ಮಾಯ ಆಗಲಿ ಎಂದು ಹೇಳುತ್ತಾನೆ ಅದರಂತೆ ಜಗತ್ತಿನಲ್ಲಿ ಅನ್ನ ಆಹಾರ ಸೇರಿದಂತೆ ಎಲ್ಲ ವಸ್ತುಗಳು ಮಾಯ ಆದವು ಮನುಷ್ಯ ಸೇರಿದಂತೆ ಸಕಲ ಜೀವ ಸಂಕುಲ ಅನ್ನ ಆಹಾರವಿಲ್ಲದೆ ತತ್ತರಿಸಿದವು. ಆಗ ಪಾರ್ವತಿ ಮಾತೇ ಹೊರನಾಡಿನಲ್ಲಿ ಬಂದು ನೆಲಸಿ ಎಲ್ಲರಿಗೂ ಆಹಾರ ಕೊಟ್ಟರು ಅಂದಿನಿಂದ ಪಾರ್ವತಿಯ ಈ ಅವತಾರವನ್ನು ಅನ್ನಪೂರ್ಣೇಶ್ವರಿ ಎಂದು ಕರೆಯಲಾಯಿತು 


Saturday, November 13, 2021

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 107

 ಎಡೆಯೂರು (Yadiyur)

ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು ಇದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕೇಂದ್ರದಿಂದ (ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ೦ ಕೇವಲ 19 ಕಿ.ಮೀ. ದೂರದಲ್ಲಿದೆ. ಇಲ್ಲಿ ನಾಡಿನ ಪ್ರಮುಖ ಅನುಭಾವಿಗಳಲ್ಲಿ ಒಬ್ಬರಾದ ಶ್ರೀ  ತೋಂಟದ ಸಿದ್ಧಲಿಂಗೇಶ್ವರರು ಜೀವಂತ ಸಮಾಧಿಯಾಗಿದ್ದಾರರೆ.

ಎಡೆಯೂರು ಜಾಗೃತ ಆಧ್ಯಾತ್ಮಿಕ ಪ್ರಜ್ಞೆಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಶ್ರೀ ಸಿದ್ದಲಿಂಗೇಶ್ವರನ ಅತ್ಯಂತ ಪೂಜ್ಯ ಗದ್ದಿಗೆಯು ವಿಭೂತಿಯ ರಾಶಿಯಿಂದ ಕೂಡಿದೆ. ಇದು ಲಿಂಗದ ರೂಪದಿಂದ ಮುಚ್ಚಲ್ಪಟ್ಟಿದೆ, ಅದರ ಮೇಲೆ ಮುಖ್ಯ ದ್ವಾರದಲ್ಲಿ ಕಲ್ಲಿನ ಆಕೃತಿಯನ್ನು ಹೋಲುವ ಬೆಳ್ಳಿಯ ಮುಖವಾಡವನ್ನಿರಿಸಲಾಗಿದೆ.  ದೇವಾಲಯದ ಆಭರಣಗಳು, ಗಂಟೆಗಳು, ಪಾತ್ರೆಗಳು ಇತ್ಯಾದಿಗಳ ಮೇಲೆ ಕೆಲವು ಆಸಕ್ತಿದಾಯಕ ಶಾಸನಗಳಿವೆ. ಮುಸ್ಲಿಂ ದಾಳಿಯ ಸಮಯದಲ್ಲಿ ದೇವಾಲಯಕ್ಕೆ ಸೇರಿದ ಕೆಲವು ಗಂಟೆಗಳನ್ನು ಬಾವಿಗೆ ಎಸೆಯಲಾಯಿತು ಮತ್ತು ಮೊಹಮ್ಮದ ಅಮಿಲ್ದಾರ್ ಅವರು ಅವುಗಳನ್ನು ಚೇತರಿಸಿಕೊಂಡಿದ್ದರೂ ಕೂಡ ಕೆಲವೊಂದಷ್ಟು ಸಾಮಗ್ರಿಗಳಿಂದಿಗೂ ನಾಪತ್ತೆಯಾಗಿದೆ. 

ಶೈವರಿಗೆ ಮಹಾ ಪವಿತ್ರವಾದ ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯೂ ಅಪಾರ. ಯುಗಾದಿಯ ಬಳಿಕ ಇಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಆಗ ನಡೆಯುವ ಬಾಣ ಬಿರುಸಿನ ವೈಭವ ಕಣ್ಮನ ಸೆಳೆಯುತ್ತದೆ. ಈಗ ಭಕ್ತರಿಂದ ದೇಣಿಗೆ ಬಂದ ಚಿನ್ನದಿಂದ ಶ್ರೀಸಿದ್ಧಲಿಂಗೇಶ್ವರರಿಗೆ 9 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಮುಖವಾಡ ಮಾಡಲಾಗಿದೆ. 320 ಕೆ.ಜಿ. ತೂಕದ ಬೆಳ್ಳಿಯ ರಥವೂ ಸಿದ್ಧಗೊಂಡಿದೆ. ರಥದಲ್ಲಿನ ಕೆತ್ತನೆ ಕಣ್ಮನಸೆಳೆಯುತ್ತದೆ.

ದೇಗುಲದ ಸನಿಹದಲ್ಲೇ ಬಾಳೆಹೊನ್ನೂರು ಮಠದ ಶಾಖಾ ಮಠವಿದೆ. ಸನಿಹದಲ್ಲೇ ಮಾರ್ಕೋನಹಳ್ಳಿ ಜಲಾಶಯವಿದೆ

***

ಹೊಯ್ಸಳರು ರಾಜ್ಯವಾಳುತ್ತಿದ್ದ ಕಾಲಕ್ಕೆ ಈಗಿನ ಹರದನಹಳ್ಳಿಯನ್ನು ತಮ್ಮ ಎರಡನೇ ರಾಜಧಾನಿಯಂತೆ ನಡೆಸಿಕೊಳ್ಳುತ್ತಿದ್ದರು ಹಾಗು ಈ ಪ್ರದೇಶಕ್ಕೆ ಎಣ್ಣೆನಾಡು ಎಂದು ಕರೆಯಲಾಗುತ್ತಿತ್ತು. ವಿವಿಧ ದಾಖಲೆಗಳು ಲಭ್ಯವಾಗಿರುವ ಪ್ರಕಾರ ಇದೇ ಪ್ರದೇಶವನ್ನು 'ಮಗ್ಗೇಯ', 'ಮಾರ್ಗೆಯ್', 'ವಾಣಿಜ್ಯ ಪುರಿ' ಎಂಬ ಹೆಸರುಗಳಿಂದಲೂ ಕರೆಯಲಾಗಿದೆ. ಆದರೆ ಎಲ್ಲಕ್ಕೂ ಮುಂಚಿನ ದಾಖಲೆ ಮೂರನೇ ಬಲ್ಲಾಳನ ಕ್ರಿ.ಶ ೧೩೪೫ ರ ಶಾಸನದಲ್ಲಿ ಈ ಹಳ್ಳಿಯನ್ನು ಮಗ್ಗೇಯ ಎಂದು ಹೆಸರಿಸಲಾಗಿದೆ. ಆದರೆ ಆದೇ ಸಮಯದ ಇನ್ನೊಂದು ತಾಮ್ರದ ಶಾಸನ ಅಡೆ ಹಳ್ಳಿಯನ್ನು 'ವಾಣಿಜ್ಯ ಪುರಿ' ಎಂದೂ ಸಂಭೋದಿಸಿದೆ. 'ವಾಣಿಜ್ಯ ಪುರಿ' ಎಂಬುದು ಸಂಸ್ಕೃತ ಪದವಾಗಿದ್ದು ಅದರದ್ದೇ ಕನ್ನಡ ಪದ 'ಹರದನ ಹಳ್ಳಿ'ಯೂ ಚಾಲ್ತಿಯಲ್ಲಿತ್ತು. ಹರದ ಎಂದರೆ ವ್ಯಾಪಾರಿ ಎಂದರ್ಥ.ಶೈವ ಸಮುದಾಯದ ವ್ಯಾಪಾರಿಗಳನ್ನು ಆ ಪ್ರದೇಶದಲ್ಲಿ 'ವಾಣಿಜ' ರು ಎಂದು ಕರೆಯಲಾಗುತ್ತಿತ್ತು. ಇವರ ವ್ಯಾಪಾರ ಪ್ರಮುಖವಾಗಿ ತಮಿಳುನಾಡಿನೊಂದಿಗೆ ಇರುತ್ತಿತ್ತು, ಆದರಿಂದ ಈ ಹಳ್ಳಿಗೆ ಹರದನ ಹಳ್ಳಿ ಎಂದು ಹೆಸರು ಬಂದಿರಬಹುದು ಎಂದೂ ತರ್ಕಗಳಿವೆ.

ವೀರಶೈವ ಪಂಥದಲ್ಲಿ ಹರದನಹಳ್ಳಿ ಬಹು ಮುಖ್ಯವಾದದ್ದು. ವೀರಶೈವ ಮಠ ಗಳಲ್ಲಿ ಒಂದಾದ ಶೂನ್ಯ ಸಿಂಹಾಸನ ಪರಂಪರೆಯ ನಿರಂಜನ ಪೀಠ ಈ ಹರದನಹಳ್ಳಿಯ ಮೂಲದ್ದೇ.ಆ ಮಠ ಜನ ಸಾಮಾನ್ಯರಿಂದ ಹರದನಹಳ್ಳಿ ಮಠವೆಂದೇ ಕರೆಸಿಕೊಳ್ಳುತ್ತದೆ. ಅನಾದಿ ಜ್ಞಾನೇಶ್ವರರು ಈ ಮಠದ ಪ್ರಥಮ ಪೀಠಾಧಿಪತಿಗಳು. ಇವರು ಶೂನ್ಯ ಸಿಂಹಾಸನದ ನಾಲ್ಕನೇ ಪೀಠಾಧಿಪತಿಗಳೂ ಹೌದು. ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ್ದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. ಇದೇ ಮಠದ ಪರಂಪರೆಯನ್ನು ಇದೀಗ ನಾವು ಕುಂತೂರು, ಸಾಲೂರು, ಗುಬ್ಬಿ,ಸಿದ್ದಗಂಗೆ ಹಾಗು ಎಡೆಯೂರುಗಳಲ್ಲಿ ಕಾಣಬಹುದಾಗಿದೆ.

ಸಿದ್ದಲಿಂಗೇಶ್ವರರು  701 ವಚನಗಳನ್ನು (ಪದ್ಯಗಳು) ಒಳಗೊಂಡಿರುವ ಷಟ್ಸ್ಥಲ ಜ್ಞಾನ ಸಾರಾಮೃತವನ್ನು ಬರೆದಿದ್ದಾರೆ, ಇದು ಸ್ಥಲಗಳನ್ನು (ಮಾರ್ಗ) ಐಕ್ಯವನ್ನು ಸಾಧಿಸಲು ಅಂದರೆ ಬೆಳಕಿನಲ್ಲಿ ತೊಡಗಿಸಿಕೊಳ್ಳಲು ಭಕ್ತರಿಗೆ ಮಾರ್ಗದರ್ಶನ ನೀಡುತ್ತದೆ.

***

ಶ್ರೀ ಸಿದ್ಧಲಿಂಗೇಶ್ವರರು ಜನಿಸಿದ್ದು ಈಗಿನ ಚಾಮರಾಜ ನಗರ ಜಿಲ್ಲೆಯ, ಅದೇ ತಾಲೂಕಿನ ಹರದನ ಹಳ್ಳಿ ಎಂಬ ಗ್ರಾಮದಲ್ಲಿ.ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ಎಂಬ ಶಿವ ಶರಣ ದಂಪತಿಗಳಿಗೆ ವಿವಾಹವಾಗಿ ಬಹಳ ಕಾಲಗಳು ಉರುಳಿದರೂ ಸಂತಾನ ಭಾಗ್ಯವಿರಲಿಲ್ಲ. ಇದಕ್ಕಾಗಿ ನಿತ್ಯವೂ ಭಕ್ತಿ ಭಾವಗಳಿಂದ ಶಿವನನ್ನು ಪ್ರಾರ್ಥಿಸುತ್ತಾ , ಅತಿಥಿ, ಯೋಗಿಗಳ ಸೇವೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುವಾಗಲೇ ಅವರಿಗೆ ಸಿದ್ಧಲಿಂಗೇಶ್ವರರ ಜನನವಾಗುತ್ತದೆ. ವಿಶೇಷವೆಂದರೆ ಅವರು ಗರ್ಭಾಶಯದಿಂದ ಜನಿಸಲಿಲ್ಲ, ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆಗೆ  ಆನುವಂಶಿಕ ಉತ್ತರಾಧಿಕಾರಿಗಳಿಲ್ಲದ ಶಿಶುವಾಗಿ ಕಾಣಿಸಿಕೊಂಡರು. ಅವರ ಜೀವಿತಾವಧಿಯಲ್ಲಿ ಅವರು ತೋಟದಲ್ಲಿ (ತೋಟ) 12 ವರ್ಷಗಳ ತಪಸ್ಸು ಮಾಡಿದರು ಮತ್ತು ಆದ್ದರಿಂದ ಅವರನ್ನು ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ಎಂದು ಗುರುತಿಸಲಾಯಿತು.ಸಿದ್ಧಲಿಂಗೇಶ್ವರರು ಎಂಟು ವರ್ಷದವರಾಗಿದ್ದಾಗ ಅವರ ತಂದೆ ತಾಯಿಗಳು ಅವರನ್ನು ಚೆನ್ನಬಸವೇಶ್ವರರ ಗೋಸಲ ಮಠಕ್ಕೆ ವಿಧ್ಯಾಭ್ಯಾಸಕಾಗಿ ಕಳುಹಿಸುತ್ತಾರೆ.ಅಧ್ಯಾತ್ಮಿಕ, ದೈವೀಕ ಜ್ಞಾನಗಳಲ್ಲಿ ತನ್ನ ವಯಸ್ಸಿಗೆ ಮೀರಿದ ಜ್ಞಾನಿಯಾಗಿದ್ದ ಬಾಲಕ ಸಿದ್ದಲಿಂಗನನ್ನು ಕಂಡು ಗುರು ಚೆನ್ನ ಬಸವೇಶ್ವರರು ಆಶ್ಚರ್ಯ ಚಕಿತರಾಗುತ್ತಾರೆ.ಗುರುಗಳು ಕೂಡಲೇ ಬಾಲಕನಿಗೆ ಸನ್ಯಾಸತ್ವ ದೀಕ್ಷೆ ನೀಡಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಹಳೆಯ ಗುರುಕುಲ ಪದ್ಧತಿಯಲ್ಲಿ ತರಗತಿಗಳಿಗೆ ಹಾಜರಾಗಿ ಪಡೆಯುವ ಜ್ಞಾನಕ್ಕಿಂತ ಲೋಕ ಸಂಚಾರ ಮಾಡುತ್ತಾ ಗಳಿಸುವ ಜ್ಞಾನ ಮಹತ್ತರವಾದದ್ದು ಎಂಬ ನಂಬಿಕೆಯಿತ್ತು. ಹೀಗಾಗಿ ಲೋಕ ಸಂಚಾರ ಮಾಡುತ್ತಲು ಜ್ಞಾನ ಸಂಪಾದಿಸಿಕೊಳ್ಳುವುದು ಶಿಕ್ಷಣದ ಒಂದು ಮುಖ್ಯ ಭಾಗವಾಗಿತ್ತು. ಅದೇ ರೀತಿ ಸಿದ್ಧಲಿಂಗೇಶ್ವರರು ಚೆನ್ನ ಬಸವೇಶ್ವರರ ಮಾರ್ಗದರ್ಶನದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮೇಲೆ, ಗುರುಗಳ ಅಪ್ಪಣೆಯ ಮೇರೆಗೆ ಲೋಕ ಸಂಚಾರ ಹೊರಟು ನಿಲ್ಲುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆವಿಗೂ, ಪಶ್ಚಿಮಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆವಿಗೂ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. 

ಎಡೆಯೂರಿನ ಸಮೀಪವಿರುವ ಮಾರ್ಕೋನಹಳ್ಳಿ ಜಲಾಶಯ.

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದ ವಚನ ಕ್ರಾಂತಿಯ ಕೀರ್ತಿಗೆ ಪುನಶ್ಚೇತನ ನೀಡಿದ ಸಿದ್ಧಲಿಂಗೇಶ್ವರರು 'ಷಟ್ ಸ್ಥಲ ಜ್ಞಾನ ಸಾರಾಮೃತ' ಎಂಬ ವಚನ ಸಂಚಿಕೆಯನ್ನು ರಚಿಸಿದರು. ೭೦೧ ವಚನಗಳಿಂದ ಕೂಡಿದ್ದ ಈ ಗ್ರಂಥ ಷಟ್ (ಆರು) ಸ್ಥಳಗಳನ್ನು(ಮೂಲಗಳನ್ನು) ಐಕ್ಯದೆಡೆಗೆ ಕೊಂಡೊಯ್ಯುವ ವಿಚಾರಗಳಿಂದ ಕೂಡಿದ ಗ್ರಂಥವಾಗಿದೆ. ಸಿದ್ದಲಿಂಗೇಶ್ವರರ ಅಂಕಿತ 'ಮಹಾಲಿಂಗ ಗುರು ಶ್ರೀ ಸಿದ್ದೇಶ್ವರ ಪ್ರಭು'.

ಈಗಿನ ತುಮಕೂರು ಜಿಲ್ಲೆಯ ಕಗ್ಗೆರೆ ಗ್ರಾಮ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಮಾಂಡಲೀಕರಾಗಿದ್ದವರು ವಕ್ಕಲಿಗರ ನಂಬಿಯನ. ಸಿದ್ಧಲಿಂಗೇಶ್ವರರು ಲೋಕ ಸಂಚಾರ ಮಾಡುತ್ತಾ ಈ ನಂಬಿಯನ ತೋಟದಲ್ಲಿ ಬೀಡು ಬಿಡುತ್ತಾರೆ. ಅದಾಗಲೇ ಸಿದ್ಧಲಿಂಗೇಶ್ವರರ ಬಗ್ಗೆ ಕೇಳಿ ತಿಳಿದಿದ್ದ ನಂಬಿಯನ ಖುದ್ದು ತಾನೇ ಬಂದು ಸ್ವಾಮಿಯವರನ್ನು ಭೇಟಿಯಾಗುತ್ತಾನೆ ಹಾಗು ತಮ್ಮ ಮನೆಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಊರಿನ ಜನಗಳನ್ನು ಆಶಿರ್ವದಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸಿದ್ಧಲಿಂಗೇಶ್ವರರು ಮತ್ತೊಮ್ಮೆ ನಂಬಿಯನ ಬಂದು ಕರೆಯುವವರೆಗೂ ತಾವು ಅದೇ ತೋಟದಲ್ಲಿ ಇರುವುದಾಗಿ ತಿಳಿಸುತ್ತಾರೆ. ಸಂತೋಷದಿಂದ ನಂಬಿಯನ ತನ್ನ ಮನೆಗೆ ಹಿಂದಿರುಗಿ ಸ್ವಾಮಿಯವರ ಸೇವೆಗೆ ಅಣಿ ಮಾಡಲು ಮೊದಲಾಗುತ್ತಾನೆ. ಇದೇ ಸಮಯಕ್ಕೆ ಬಹಳ ವರ್ಷಗಳಿಂದ ಆ ಊರಿನೊಂದಿಗೆ ವೈರತ್ವ ಸಾಧಿಸುತ್ತಿದ್ದ ದಕ್ಷಿಣ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಬೇಡರ ಗುಂಪು ಕಗ್ಗೆರೆ ಮತ್ತಿತರ ಪ್ರದೇಶಗಳ ಮೇಲೆ ಯುದ್ಧ ಸಾರುತ್ತದೆ. ಯುದ್ಧದಲ್ಲಿ ಪ್ರಬಲರಾಗಿದ್ದ ಬೇಡರ ಪಡೆ ಯುದ್ಧದಲ್ಲಿ ವಿಜಯಿಗಳಾಗಿ ಅಲ್ಲಿನ ಮಾಂಡಲೀಕರು ಸೇರಿದಂತೆ ಎಲ್ಲರನ್ನು ಸೆರೆಯಾಳುಗಳನ್ನಾಗಿ ಹೊತ್ತೊಯ್ಯಲಾಗುತ್ತದೆ. ಮುಂದೆ ಈ ಸಂಕಷ್ಟದಿಂದ ಪಾರಾಗಲು ಅವರಿಗೆ ಸುಮಾರು ಹನ್ನೆರಡು ವರ್ಷಗಳೇ ಬೇಕಾಗುತ್ತವೆ. ಇಷ್ಟು ಸುಧೀರ್ಘ ಅವಧಿ ಬಂಧನದಲ್ಲಿ ಕಳೆದಿದ್ದ ಅವರ್ಯಾರಿಗೂ ನಂಬಿಯನು ಸಿದ್ಧಲಿಂಗೇಶ್ವರರನ್ನು ಆಹ್ವಾನಿಸಿದ ವಿಷಯ ನೆನಪೇ ಇರಲಿಲ್ಲ.

ಬಂಧನಮುಕ್ತರಾಗಿ ಊರಿಗೆ ಹಿಂದಿರುಗಿದ ಎಲ್ಲರಿಗೂ ನಂಬಿಯನ ತೋಟದಲ್ಲಿ ಹುತ್ತ ಬೆಳೆದಿರುವುದು ಕಂಡಿತ್ತು. ಆದರೆ ಅದರ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಅಲ್ಲೊಂದು ಆಶ್ಚರ್ಯ ನಡೆಯಲು ಶುರುವಾಗುತ್ತದೆ. ಮೇಯಲು ಬಿಟ್ಟಿದ್ದ ದನಗಳ ಗುಂಪಿನಿಂದ ತಪ್ಪಿಸಿಕೊಂಡ ಹಸುವೊಂದು ಬಿರುಸಾಗಿ ಓಡಿ ನಂಬಿಯನ ತೋಟದಲ್ಲಿರುವ ಹುತ್ತದ ಮೇಲೇರಿ ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಕರೆಯಲು ಆರಂಭಿಸುತ್ತದೆ. ಇದನ್ನು ಆರಂಭದಲ್ಲಿ ಕಂಡ ಅಲ್ಲಿನ ದನಗಾಹಿಗಳು ಅದನ್ನು ಹಗುರವಾಗಿ ಪರಿಗಣಿಸಿದ್ದರು, ಆದರೆ ಹಸುಗಳು ಸರತಿಯ ಪ್ರಕಾರ ದಿನವೂ ಹೋಗಿ ಸ್ವಪ್ರೇರಿತವಾಗಿ ನಂಬಿಯನ ತೋಟದಲ್ಲಿರುವ ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು ಅಲ್ಲೇನೂ ವಿಶೇಷವಿರಬಹುದು ಎಂದು ಭಾವಿಸಿದ ದನಗಾಹಿಗಳು ಹುತ್ತವನ್ನು ಒಡೆಯಲು ಮುಂದಾಗುತ್ತಾರೆ. ಆದರೆ ಅಲ್ಲಿ ಭಯಂಕರ ವಿಷ ಸರ್ಪಗಳು ಓಡಾಡುತ್ತಿದುದನ್ನು ಕಂಡು ಭಯದಿಂದ ದೂರ ಸರಿದು ಈ ವಿಷಯವನ್ನು ಕೂಡಲೇ ಊರಿಗೆ ತಿಳಿಸುತ್ತಾರೆ. ಊರ ಜನರ ಸಮೇತ ನಂಬಿಯನ ತೋಟಕ್ಕೆ ಬಂದು ಕೂಲಂಕುಶವಾಗಿ ಹುತ್ತದ ಹತ್ತಿರ ನಿಂತು ಪರಿಶೀಲಿಸಿದಾಗ ಹುತ್ತದ ಒಳಗಿಂದ 'ಓಂ ನಮಃ ಶಿವಾಯ' ಎಂದು ಶಿವ ಪಂಚಾಕ್ಷರಿ ಮಂತ್ರ ನಿರಂತರವಾಗಿ ಕೇಳಿಬರುತ್ತಿದ್ದುದನ್ನು ಗ್ರಹಿಸುತ್ತಾರೆ. ಊರಿನ ಜನರೆಲ್ಲಾ ಇಲ್ಲಿ ಯಾರೋ ಮಹಾತ್ಮರು ತಪಸ್ಸು ಮಾಡುತ್ತಿರಬಹುದು ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಾಗ ನಂಬಿಯನ ತಾನು ಸಿದ್ಧಲಿಂಗೇಶ್ವರರಿಗೆ ವರ್ಷಾನು ಗಟ್ಟಲೆಗಳ ಹಿಂದೆ ಕೊಟ್ಟಿದ್ದ ವಚನ ಜ್ಞಾಪಕವಾಗುತ್ತದೆ. ತನ್ನಿಂದ ಅತಿ ದೊಡ್ಡ ಪ್ರಮಾದವಾಗಿ ಈ ಅಚಾತುರ್ಯಕ್ಕೆ ಕಾರಣವಾಯಿತು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಕೂಡಲೇ ಹುತ್ತದ ಹೊರಗೆ ನಿಂತುಕೊಂಡೆ ಸಿದ್ಧಲಿಂಗೇಶ್ವರರನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಸಿದ್ಧಲಿಂಗೇಶ್ವರರು ತನ್ನ ಸುತ್ತಲು ಇರುವ ಹುತ್ತದಲ್ಲಿ ಅನೇಕ ಜೀವಿಗಳು ವಾಸಿಸುತ್ತಿರುವುದರಿಂದ ಹುತ್ತವನ್ನು ಒಡೆದರೆ ಅವುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವುಗಳು ಈ ಸ್ಥಳ ಬಿಟ್ಟು ತೆರಳಿದ ನಂತರ ನೀವು ಹುತ್ತವನ್ನು ಕೆಡವಬಹುದು ಎಂದು ಆಜ್ಞಾಪಿಸುತ್ತಾರೆ. ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ ಹಾವುಗಳು, ಇಲಿ ಹೆಗ್ಗಣಗಳು, ಕಪ್ಪೆಗಳು, ಗೆದ್ದಲು ಹುಳುಗಳು, ಮುಂತಾದ ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ. ಭಕ್ತನೊಬ್ಬನಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಕುಳಿತ ಜಾಗದಿಂದ ಕದಲದೇ ಹನ್ನೆರಡು ವರ್ಷಗಳ ಕಾಲ ತೋಟವೊಂದರಲ್ಲಿ ತಪೋನಿಷ್ಠರಾಗಿದ್ದ ಸಿದ್ಧಲಿಂಗೇಶ್ವರರು ಜಗತ್ತು ಕಂಡ ಮಹಾ ಶರಣ ಹಾಗು ಪವಾಡ ಪುರುಷ, ಹಾಗಾಗಿ ಅವರಿಗೆ ‘ತೋಂಟದ ಸಿದ್ಧಲಿಂಗೇಶ್ವರ’ ಎಂಬ ಹೆಸರು ಪ್ರಾಪ್ತವಾಯಿತು.

ಮಹಾ ಪವಾಡ ಪುರುಷರಾದ ಯತಿಗಳು ಲಿಂಗೈಕ್ಯರಾಗಿದ್ದು ಈಗಿನ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ. (ಕಲ್ಕೆರೆಯಲ್ಲಿಯೇ ಅವರು ಐಕ್ಯರಾದುದು ಅಂತಲೂ ಜನ ಹೇಳುತ್ತಾರೆ.)

***

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು ಮಹಾದೇವನ ಅಂಶ, ಅವತಾರವೆಂದು ಹೇಳಲಾಗುತ್ತದೆ. ಅವರು ದೂರ ದೂರದ ಊರುಗಳಿಗೆ ಪ್ರಯಾಣಿಸಿ ಅಲ್ಲಿನ ಜನರಿಗೆ ಶಾಶ್ವತ ಸತ್ಯವನ್ನು ಬೋಧಿಸಿದರು ಅಲ್ಲದೆ ಜಾತಿ, ಉಪಜಾತಿಗಳ, ಧರ್ಮವನ್ನು ಲೆಕ್ಕಿಸದೆ  ಅನೇಕ ಜನರಿಗೆ ಅನೇಕ ಬಗೆಯಲ್ಲಿ ಒಳಿತನ್ನು ಮಾಡಿದ್ದರು.

ಸಿದ್ದಗಂಗಾ ಕ್ಷೇತ್ರವು ಬರಡು ಮತ್ತು ಬಂಜರು ಪ್ರದೇಶವಾಗಿದೆ ಎಂದು ಹೇಳಿದ ಶ್ರೀಗಳು ಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಜನರಿಗೆ ನೀರಿನ ಒರತೆ ಕೊಡಿಸುವ ಮೂಲಕ ಪವಾಡ ಮೆರೆದರು. ಅವರ  ಪಾದದ ಕೆಳಗಿನಿಂದ ನೀರಿನ ಚಿಲುಮೆ ಹೊರಹೊಮ್ಮಿತು. ಸಿದ್ದಲಿಂಗೇಶ್ವರನ ಕುರಿತಾದ ಒಂದು ಕಥೆಯು ಎಡೆಯೂರು  ಸಮೀಪದ ಕಗ್ಗೆರೆಗೆ ಸಂಬಂಧಿಸಿದೆ, ಅಲ್ಲಿ ಶ್ರೀಗಳು ನಂಬಿಯಣ್ಣ ಎಂಬ ಭಕ್ತನ ಮನೆಯಲ್ಲಿ  ಜೆಯನ್ನು ಮಾಡಲು ಒಪ್ಪಿಕೊಂಡನು. ಪೂಜೆಯನ್ನು ವಿರೋಧಿಸಿ ಬುಡಕಟ್ಟು ಮುಖಂಡರು ದಾಳಿ ಮಾಡಿದರು, ಇದರಿಂದ ಗ್ರಾಮಸ್ಥರು ಗ್ರಾಮದಿಂದ ಓಡಿಹೋದರು (ಗುಳೆಹೊದರು). ಹನ್ನೆರಡು ವರ್ಷಗಳು ಕಳೆದವು ಮತ್ತು ಶ್ರೀಗಳು ತನ್ನ ಆಳವಾದ ಧ್ಯಾನವನ್ನು ಮುಂದುವರೆಸಿದರು.  ಅವರ ಸುತ್ತಲೂ ಹುತ್ತ ಬೆಳೆದಿತ್ತು.ಆದರೆ ನಂಬಿಯಣ್ಣನ ಹಸುವೊಂದು ಆ ಹುತ್ತದಲ್ಲಿದ್ದ ಶ್ರೀಗಳಿಗೆ ನಿತ್ಯ ಹಾಲೂಡಿಸುತ್ತಿತ್ತು.ಇದನ್ನು ಕಂಡ ಗ್ರಾಮಸ್ಥರು ಶ್ರೀಗಳ ಬಗೆಗಿನ ತಮ್ಮ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಿ ಅವರಿಗೆ ಶರಣಾದರು.


Friday, November 12, 2021

ಕನ್ನಡ ರಾಜ್ಯೋತ್ಸವ ವಿಶೇಷ: ಪದ್ಮ ವಿಭೂಷಣ, ಪದ್ಮ ಭೂಷಣ ಪುರಸ್ಕೃತ ಕನ್ನಡಿಗರು

 ಇದೀಗ ನವೆಂಬರ್ ತಿಂಗಳು, ನ್=ಕನ್ನಡ ರಾಜ್ಯೋತ್ಸವ ಆಚರಿಸುವ ಆ ಮೂಲಕ ಕನ್ನಡ ಹಬ್ಬವನ್ನು ಆಚರಿಸಿ ಸಂಭ್ರಮಿಸುವ ಸಮಯದಲ್ಲಿ 2015ರಿಂದ 2021ರ ಈ ಅವಧಿಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ "ಪದ್ಮ ವಿಭೂಷಣ" ಮತ್ತು "ಪದ್ಮ ಭೂಷಣ" ಪ್ರಶಸ್ತಿ ಪುರಸ್ಕೃತರಾದ ಕನ್ನಡಿಗರ ಕಿರಿ ಪರಿಚಯ ಇಲ್ಲಿದೆ.

ಡಾ. ಡಿ. ವೀರೇಂದ್ರ ಹೆಗ್ಗಡೆ

ಡಾ. ಡಿ. ವೀರೇಂದ್ರ ಹೆಗ್ಗಡೆ (ಜನನ 25 ನವೆಂಬರ್ 1948) ಶ್ರೀ ಕ್ಷೇತ್ರ ಧರ್ಮಸ್ಥಳ ಅನುವಂಶಿಕ ಧರ್ಮಾಧಿಕಾರಿಗಳಾಗಿದ್ದು ಶ್ರೇಷ್ಠ ಸಮಾಜ ಸೇವಕರು ಎನಿಸಿದ್ದಾರೆ.ಅವರು 19 ನೇ ವಯಸ್ಸಿನಲ್ಲಿ, 24 ಅಕ್ಟೋಬರ್ 1968ರಲ್ಲಿ ಶ್ರೀ ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿ ಪಟ್ಟವೇರಿದ್ದರು. ಇವರ ಸೇವಾ ಕೈಂಕರ್ಯಕ್ಕೆ ಗೌರವವಾಗಿ "ಕರ್ನಾಟಕ ರತ್ನ"(2009) ಸೇರಿ ಅನೇಕ ಪುರಸ್ಕಾರಗಳು ಇವರಿಗೆ ಸಂದಿದೆ.

ವಾಸುದೇವ್ ಕಲಕುಂಟೆ ಆತ್ರೆ

ವಾಸುದೇವ್ ಕಲಕುಂಟೆ ಆತ್ರೆ ಅಥವಾ ವಿ.ಕೆ. ಅತ್ರೆ(ಜನನ 1939) ಒಬ್ಬ ಯ ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಮಾಜಿ ಮುಖ್ಯಸ್ಥರಾಗಿದ್ದಾರೆ. ಇವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರು ಅಕ್ಟೋಬರ್ 2004 ರಲ್ಲಿ ನಿವೃತ್ತರಾದರು ಪ್ರಸ್ತುತ ಅತ್ರೆ  ಹೌರಾದ IIEST SHIBPUR ನ ಅಧ್ಯಕ್ಷರಾಗಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡೀದ್ದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ (2015) ನೀಡಿ ಗೌರವಿಸಲಾಗಿತ್ತು.

ಶ್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್ (ಜನನ 13 ಮೇ 1956) ಒಬ್ಬ ಯೋಗ ಗುರುವಾಗಿದ್ದು ಆದ್ಯಾತ್ಮ ಸಾಧಕರೂ ಆಗಿದ್ದಾರೆ. 1970 ರ ದಶಕದ ಮಧ್ಯಭಾಗದಿಂದ, ಅವರು ಟ್ರಾನ್ಸೆಂಡೆಂಟಲ್ ಧ್ಯಾನದ ಸಂಸ್ಥಾಪಕರಾದ ಮಹೇಶ್ ಯೋಗಿ ಅವರ ಅಡಿಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡಿದರು. 1981 ರಲ್ಲಿ, ಅವರು ಟ್ರಾನ್ಸ್‌ಸೆಂಡೆಂಟಲ್ ಮೆಡಿಟೇಶನ್ (TM) ನಿಂದ ಬೇರಾಗಿ  ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಅನ್ನು ಸ್ಥಾಪಿಸಿದರು. 1980 ರ ದಶಕದಲ್ಲಿ, ರವಿಶಂಕರ್  ಪ್ರಪಂಚದಾದ್ಯಂತ ಆಧ್ಯಾತ್ಮಿಕತೆಯ ಪ್ರಾಯೋಗಿಕ ಮತ್ತು ಅನುಭವದ ಕೋರ್ಸ್‌ಗಳನ್ನು ಪ್ರಾರಂಭಿಸಿದರು. ಅವರ ಲಯಬದ್ಧ ಉಸಿರಾಟದ ಅಭ್ಯಾಸ, ಸುದರ್ಶನ ಕ್ರಿಯೆಯು 1982 ರಲ್ಲಿ ಅವರಿಗೆ ಒಲಿದಿತ್ತೆಂದು ಅವರು ಹೇಳಿದ್ದಾರೆ. ಕರ್ನಾಟಕ ರಾಜ್ಯದ ಶಿವಮೊಗ್ಗದ ಭದ್ರಾ ನದಿಯ ದಡದಲ್ಲಿ ಹತ್ತು ದಿನಗಳ ಅವಧಿಯ ಮೌನದ ನಂತರ,ಅವರು  ಇದನ್ನು ಸಾಧಿಸಿದ್ದರೆಂದು ಹೇಳಲಾಗಿದೆ. 1981/82 ರಲ್ಲಿ, ಶಂಕರ್ ಸೊಲ್ಲಾಪುರದಲ್ಲಿ ಮೊದಲ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಅನ್ನು ನಡೆಸಿದ ರವಿಶಂಕರ್  1983 ರಲ್ಲಿ, ಸ್ವಿಟ್ಜರ್ಲೆಂಡ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಅನ್ನು ನಡೆಸಿದರು. 1986 ರಲ್ಲಿ, ಅವರು ಉತ್ತರ ಅಮೇರಿಕಾದಲ್ಲಿತಮ್ಮ ಈ ಕೋರ್ಸ್ ಅನ್ನು ಮೊದಲ ಬಾರಿಗೆ ನಡೆಸಿದ್ದರು. ಅಲ್ಲಿಂದಲೂ ವಿಶ್ವದ ನಾನಾ ಭಾಗಗಳಲ್ಲಿ ಅವರು ಈ ಕೋರ್ಸ್ ಮೂಲಕ ಜನರಲ್ಲಿ ಆದ್ಯಾತ್ಮ ಉನ್ನತಿಗೆ ಶ್ರಮಿಸುತ್ತಿದ್ದಾರೆ. 

ಉಡುಪಿ ರಾಮಚಂದ್ರ ರಾವ್

ಉಡುಪಿ ರಾಮಚಂದ್ರ ರಾವ್ ಉಡುಪಿ ರಾಮಚಂದ್ರ ರಾವ್ (10 ಮಾರ್ಚ್ 1932 - 24 ಜುಲೈ 2017) ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿದ್ದರು ಅವರು ಅಹಮದಾಬಾದ್‌ನಲ್ಲಿರುವ ಭೌತ  ಸಂಶೋಧನಾ ಪ್ರಯೋಗಾಲಯ ಮತ್ತು ಬೆಂಗಳೂರಿನ ನೆಹರು ತಾರಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು ಮತ್ತು ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯ (IIST) ಕುಲಪತಿಯಾಗಿದ್ದರು ಅವರನ್ನು "ಭಾರತದ ಸ್ಯಾಟಲೈಟ್ ಮ್ಯಾನ್" ಎಂದು ಕರೆಯಲಾಗುತ್ತದೆ. ಅವರು 1975 ರಲ್ಲಿ ಭಾರತದ ಮೊದಲ ಉಪಗ್ರಹ ಉಡಾವಣೆ "ಆರ್ಯಭಟ" ಉಡಾವಣೆ ಇವರ ನೇತೃತ್ವದಲ್ಲಿ ಆಗಿತ್ತು. 19 ಮಾರ್ಚ್ 2013 ರಂದು ಸೊಸೈಟಿ ಆಫ್ ಸ್ಯಾಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್ ಆಯೋಜಿಸಿದ ಸಮಾರಂಭದಲ್ಲಿ ವಾಷಿಂಗ್ಟನ್‌ನ ಸ್ಯಾಟಲೈಟ್ ಹಾಲ್ ಆಫ್ ಫೇಮ್‌ಗೆ ಅವರನ್ನು ಸೇರ್ಪಡೆಗೊಳಿಸಲಾಯಿತು. ಇದರೊಂದಿಗೆ ಅವರು ಸೇರ್ಪಡೆಗೊಂಡ ಮೊದಲ ಭಾರತೀಯ ಎನ್ಸಿದ್ದರು. ಅವರು 15 ಮೇ 2016 ರಂದು ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕ್ಸ್ ಫೆಡರೇಶನ್ (IAF) ಗೆ ಸೇರ್ಪಡೆಗೊಳ್ಳಬೇಕಿತ್ತು. ಅಂತಹ ಸಾಧನೆಯನ್ನು ಸಾಧಿಸಿದ ಮೊದಲ ಭಾರತೀಯ ಕೂಡ ಅವರಾಗಿದ್ದರು.

ಶ್ರೀ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ

ಶ್ರೀ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ (27 ಏಪ್ರಿಲ್ 1931 – 29 ಡಿಸೆಂಬರ್ 2019) ಅದೋಕ್ಷಜ ಮಠ, ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ತತ್ವಶಾಸ್ತ್ರಕ್ಕೆ ಸೇರಿದ ಅಷ್ಟ ಮಠಗಳಲ್ಲಿ ಒಂದಾಗಿದೆ. ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬರಾದ ಶ್ರೀ ಅಧೋಕ್ಷಜ ತೀರ್ಥರಿಂದ ಪ್ರಾರಂಭವಾದ ಪೇಜಾವರ ಮಠದ ಪರಂಪರೆಯಲ್ಲಿ 32 ನೇಯವರು.  ವಿಶ್ವ ತುಳು ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಶೀಗಳು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಸ್ಥಾಪಿಸಿದ್ದಾರೆ. ಇವರ ಮೂಲ ಹೆಸರು ವೆಂಕಟರಾಮ ರಾಮಕುಂಜದಲ್ಲಿ ಜನಿಸಿದ ಶ್ರೀಗಳು  ತಮ್ಮ 7 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದರು. ಅವರ ವಿದ್ಯಾ ಗುರುಗಳು ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯ ತೀರ್ಥ. ಅವರು ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು. ಮದ್ವ ಸಿದ್ದಾಂತದಲ್ಲಿ ಅತ್ಯುಚ್ಚ ಸಾಧನೆ ಮಾಡಿದ್ದ ಶ್ರೀಗಳು ಅಯೋಧ್ಯೆ ಶ್ರೀರಾಮ ಮಂದಿರ ಸ್ಥಾಪನೆಗೆ ಸತತ ಹೋರಾಟ, ಬೆಂಬಲ ಸೂಚಿಸಿದ್ದರು. ಅಲ್ಲದೆ ಹಿಂದೂಗಳಲ್ಲಿ ಜಾತಿ ವ್ಯವಸ್ಥೆಯ ಅಳಿವಿಗಾಗಿ ಹೋರಾಟ ನಡೆಸಿ ದಲಿತರ ಕೇರಿಗಳಲ್ಲಿ ಪಾದಯಾತ್ರೆ ಸಹ ನಡೆಸಿದ್ದರು. 

ಬೆಳ್ವೆ  ಮೋನಪ್ಪ ಹೆಗ್ಡೆ 

ಬೆಳ್ವೆ  ಮೋನಪ್ಪ ಹೆಗ್ಡೆ (ಜನನ 18 ಆಗಸ್ಟ್ 1938) ಒಬ್ಬ ಹೃದ್ರೋಗ ತಜ್ಞ, ವೈದ್ಯಕೀಯ ಪ್ರಾಧ್ಯಾಪಕ ಮತ್ತು ಲೇಖಕರಾಗಿದ್ದಾರೆ. ] ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಮಾಜಿ ಉಪಕುಲಪತಿಗಳು, ಚೆನ್ನೈನ TAG-VHS ಮಧುಮೇಹ ಸಂಶೋಧನಾ ಕೇಂದ್ರದ ಸಹ-ಅಧ್ಯಕ್ಷರೂಆಗಿದ್ದಾರೆ.  ಮಂಗಳೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷರು. ಅವರು ವೈದ್ಯಕೀಯ ಅಭ್ಯಾಸ ಮತ್ತು ನೀತಿಶಾಸ್ತ್ರದ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ] ಅವರು ಜರ್ನಲ್ ಆಫ್ ದಿ ಸೈನ್ಸ್ ಆಫ್ ಹೀಲಿಂಗ್ ಔಟ್‌ಕಮ್ಸ್‌ನ ಮುಖ್ಯ ಸಂಪಾದಕರಾಗಿದ್ದಾರೆ. ಅವರಿಗೆ 1999 ರಲ್ಲಿ ಡಾ. ಬಿ. ಸಿ. ರಾಯ್ ಪ್ರಶಸ್ತಿಯನ್ನು ನೀಡಲಾಯಿತು

ಶ್ರೀ ಶ್ರೀ ಶಿವಕುಮಾರ ಸ್ವಾಮಿ 
ಶ್ರೀ ಶ್ರೀ ಶಿವಕುಮಾರ ಸ್ವಾಮಿ ( 1 ಏಪ್ರಿಲ್ 1907 - 21 ಜನವರಿ 2019) ಒಬ್ಬ ನಡೆದಾಡುವ ದೇವರು, ತ್ರ್ವಿಧ ದಾಸೋಹಿಯಾಗಿದ್ದ ಮಹಾನ್ ಸಂತರು. ಇವರು ತುಮಕೂರಿನ ಸಿದ್ದಗಂಗಾ ಮಠಕ್ಕೆ1930ರಲ್ಲಿ ಸೇರಿದ್ದು 1941ರಿಂದ ಪೀಠಾಧಿಪತಿಗಳಾಗಿದ್ದರು.  ಅವರು ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯನ್ನು ಸಹ ಸ್ಥಾಪಿಸಿದರು ಗಾಯತ ಧರ್ಮದ (ವೀರಶೈವಿಸಂ) ಅತ್ಯಂತ ಗೌರವಾನ್ವಿತರಾಗಿದ್ದ ಶ್ರೀಗಳು  111 ವರ್ಷಗಳು, 295 ದಿನಗಳ ಕಾಲ ಇದ್ದು ಲಕ್ಷಾಂತರ ಜನರಿಗೆ ವಿದ್ಯೆ, ಅನ್ನದಾನಗಳನ್ನು ನೆರವೇರಿಸಿದ್ದರು. 
ಪಂಕಜ್ ಅರ್ಜನ್ ಅಡ್ವಾಣಿ
ಪಂಕಜ್ ಅರ್ಜನ್ ಅಡ್ವಾಣಿ (ಜನನ 24 ಜುಲೈ 1985) ಓರ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ. ಅವರು 23 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು IBSF ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಅನ್ನು 15 ಬಾರಿ ಗೆದ್ದಿದ್ದಾರೆ, ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ 1 - ಬಾರಿ, IBSF ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ (15 ರೆಡ್ಸ್) 3 - ಬಾರಿ, (6 ರೆಡ್ಸ್) 2 - ಬಾರಿ, IBSF ವರ್ಲ್ಡ್ ಟೀಮ್ ಕಪ್ 1 - ಬಾರಿ ಮತ್ತು IBSF ವಿಶ್ವ ಟೀಮ್ ಚಾಂಪಿಯನ್‌ಶಿಪ್ - 1 ಬಾರಿ ಗೆದ್ದಿದ್ದರು. ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನ ಎಲ್ಲಾ ಸ್ವರೂಪಗಳಲ್ಲಿ ಏಷ್ಯನ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಏಕೈಕ ಕ್ಯೂಯಿಸ್ಟ್ ಪಂಕಜ್ ಅಡ್ವಾಣಿ. ಅವರು ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ ಗರಿಷ್ಠ IBSF ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಪಡೆದುಕೊಂಡಿದ್ದಾರೆ. ಅಡ್ವಾಣಿ ಅವರು 2014 ರ IBSF ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್‌ಶಿಪ್ ಅನ್ನು ಗೆದ್ದರು, ಆ ವಿಭಾಗದಲ್ಲಿ ಅವರ ಚೊಚ್ಚಲ ಪಂದ್ಯ. ಅಡ್ವಾಣಿ 6-ರೆಡ್ ಸ್ನೂಕರ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಕೂಡ ಆಗಿದ್ದರು.  ಅವರ ಸಾಧನೆಗಳನ್ನು ಗುರುತಿಸಿ, ಭಾರತ ಸರ್ಕಾರವು ಅಡ್ವಾಣಿ ಅವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿದೆ: 2004 ರಲ್ಲಿ ಅರ್ಜುನ ಪ್ರಶಸ್ತಿ, 2006 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಅಲವಿಗೆ ಒಲಿದಿದೆ.
ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ(ಜನನ 2 ಜನವರಿ 1937) ಪ್ರಮುಖ ಕವಿ, ನಾಟಕಕಕಾರ, ಕಾದಂಬರಿಕಾರರು ಆಗಿದ್ದು  ಜಾನಪದ ತಜ್ಞ, ಕನ್ನಡ ಭಾಷೆಯ ಚಲನಚಿತ್ರ ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ-ಉಪಕುಲಪತಿಯೂ ಹೌದು.  ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಆಗಿರುವ ಕಂಬಾರರು ಉತ್ತರ ಕರ್ನಾಟಕ ಭಾಷಾ ಶೈಲಿಗೆ ಹೆಸರಾಗಿದ್ದಾರೆ.  ಕಂಬಾರರ ನಾಟಕಗಳು ಮುಖ್ಯವಾಗಿ ಸಮಕಾಲೀನ ಸಮಸ್ಯೆಗಳೊಂದಿಗೆ ಅಂತರ್ಸಂಪರ್ಕವಾಗಿರುವ ಜಾನಪದ ಅಥವಾ ಪುರಾಣಗಳ ಸುತ್ತ ಇರುತ್ತದೆ. ಅವರ ಸಾಹಿತ್ಯ ಸೇವೆಗಾಗಿ  2011 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಬಂದಿವೆ. ಕಂಬಾರರು ನಿವೃತ್ತಿಯ ನಂತರ, ಕಂಬಾರರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು.

Thursday, November 11, 2021

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 106

 ದೇವರಾಯನದುರ್ಗ(Devarayana Durga)

ದೇವರಾಯನದುರ್ಗ ಬೆಂಗಳೂರಿನಿಂದ 65 ಕಿ.ಮೀ. ಮತ್ತು ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ ಮತ್ತು ಪವಿತ್ರ ಸ್ಥಳ ಕೂಡ ಹೌದು. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8 ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ದೇವರಾಯನ ದುರ್ಗ ದೇವಾಲಯಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲೂ ತಂಪಾದ ಪರಿಸರಕ್ಕೆ ಜನಪ್ರಿಯವಾಗಿದೆ.


 ಯುದ್ಧದಲ್ಲಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಮೈಸೂರು- ಚಿಕ್ಕ ದೇವರಾಯ ಒಡೆಯರ್ ಮಹಾರಾಜರಿಂದ ದೇವರಾಯನ ದುರ್ಗಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ,ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ

***

ಈ ಸ್ಥಳವನ್ನು ಕರಿಗಿರಿ ಎಂದೂ ಕರೆಯುತ್ತಾರೆ ಅಂದರೆ ಆನೆಗಳಿರುವ ಬೆಟ್ಟ ಎಂದರ್ಥ.ದೇವಾಲಯವಿರುವ ಬೆಟ್ಟವನ್ನು ಪೂರ್ವ ದಿಕ್ಕಿನಿಂದ ನೋಡಿದಾಗ ಅದು ಆನೆಯನ್ನು ಹೋಲುತ್ತದೆ. ಆದ್ದರಿಂದ ಕರಿಗಿರಿ (ಕರಿ-ಆನೆ, ಗಿರಿ-ಬೆಟ್ಟ) ಎಂದು ಹೆಸರು. ಈ ಬೆಟ್ಟವು 3940 ಅಡಿ ಎತ್ತರದಲ್ಲಿದೆ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಕೃಷ್ಣಾ ನದಿಯನ್ನು ಸೇರುವ ಜಯಮಂಗಲ ಮತ್ತು ಶಿವನಸಮುದ್ರದಲ್ಲಿ ಕಾವೇರಿ ನದಿಯನ್ನು ಸೇರುವ ಶಿಂಷಾ ನದಿಯಂತಹ ನದಿಗಳ ಜನ್ಮಸ್ಥಳ ದೇವರಾಯನದುರ್ಗ. 17 ನೇ ಶತಮಾನದ ಕೋಟೆ ಅವಶೇಷಗಳು, ಹೊಯ್ಸಳ ಮತ್ತು ವಿಜಯನಗರ ಕಾಲದ ಐತಿಹಾಸಿಕ ಅವಶೇಷಗಳು ಮತ್ತು ಒಡೆಯರ್ ರಾಜವಂಶದ ಆಳ್ವಿಕೆಯ ಕುರುಹುಗಳನ್ನು ದೇವರಾಯನದುರ್ಗ ಗ್ರಾಮ ಮತ್ತು ದೇವರಾಯನದುರ್ಗದ ಕುಂಭಿ ಬೆಟ್ಟಗಳಲ್ಲಿ ಕಾಣಬಹುದು.

ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆ ಬಿದ್ದಸರಿ (ಆನೆ ಬಿದ್ದ ಝರಿ) ಎಂಬ ಹೆಸರಿನ ಊರಿತ್ತು ಎನ್ನುತ್ತದೆ ಇತಿಹಾಸ. ವಿಜಯನಗರದ ಅರಸರ ಕಾಲದಲ್ಲಿ ಬೆಟ್ಟ ದುರ್ಗಕ್ಕೆ ಕರಿಗಿರಿ ಎಂಬ ಹೆಸರು ಪಡೆಯಿತು. 1696ರಲ್ಲಿ ಚಿಕ್ಕದೇವರಾಯ ಒಡೆಯರು ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂತು.

ಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ.

ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಭಿಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೋಣೆ, ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು.


ತುಮಕೂರಿನಿಂದ ಉರುಡಗೆರೆ ಮಾರ್ಗವಾಗಿ ಕ್ಷೇತ್ರಕ್ಕೆ ಬಂದರೆ ಮೊದಲು ನಾಮದ ಚಿಲುಮೆ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಜಯಮಂಗಲಿ ನದಿಯ ತಟದಲ್ಲಿ ಕಾಳಿಕಾಗುಡಿ ಇದೆ. ಮುಂದೆ ನರಸಿಂಹನ ದೇವಾಲಯವಿದೆ. ಪಕ್ಕದಲ್ಲೇ ಮೂರ್ಚಿತನಾಗಿದ್ದ ಲಕ್ಷ್ಮಣನ ರಕ್ಷಿಸಲು ಸಂಜೀವಿನಿ ಪರ್ವತವನ್ನೇ ಕಿತ್ತುತಂದ ಹನುಮ ಸಂಜೀವರಾಯನ ದೇವಾಲಯವಿದೆ. ಕ್ಷೇತ್ರದಲ್ಲಿ ರಾಮತೀರ್ಥ, ಧನುಷ್ ತೀರ್ಥ ಎಂಬ ಎರಡೂ ದೊಣೆಗಳೂ ಇವೆ. ತಳಬೆಟ್ಟದಿಂದ 2 ಕಿಲೋ ಮೀಟರ್ ಮೇಲಿರುವ ಕುಂಬಿ ಬೆಟ್ಟದ ಮೇಲೆ ಕುಂಬೀನರಸಿಂಹನ ದೇವಸ್ಥಾನವಿದೆ.

ಬ್ರಹ್ಮದೇವರು ಇಲ್ಲಿ ತಪವನ್ನಾಚರಿಸಿದಾಗ, ವಿಷ್ಣು ಲಕ್ಷ್ಮೀನರಸಿಂಹ ರೂಪದಲ್ಲಿ ಪ್ರತ್ಯಕ್ಷನಾದನಂತೆ, ವಿಷ್ಣುವಿಗೆ ಬ್ರಹ್ಮದೇವರು ಕುಂಭಾಭಿಷೇಕ ಮಾಡಿದರಂತೆ ಇಲ್ಲಿ ನೆಲೆನಿಂತ ವಿಷ್ಣು ಕುಂಬಿ ನರಸಿಂಹ ಎಂದೂ ಖ್ಯಾತನಾಗಿದ್ದಾನೆ. ಭಕ್ತರು ಯೋಗಾನರಸಿಂಹ, ಲಕ್ಷ್ಮೀನರಸಿಂಹ ಎಂದೂ ಪೂಜಿಸುತ್ತಾರೆ.

ಇಲ್ಲಿರುವ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪವಿದೆ. ಇಲ್ಲಿ ನರಸಿಂಹತೀರ್ಥ, ಪಾದ ತೀರ್ಥ, ಪರಾಶರತೀರ್ಥ ಇದೆ. ದಾಸಶ್ರೇಷ್ಠ ಪುರಂದರದಾಸರು ಕ್ಷೇತ್ರಕ್ಕೆ ಭೇಟಿ ನೀಡಿ, ಕರಿಗಿರಿ ನರಸಿಂಹ ಭಕ್ತರ ದಂತಿಸಿಂಹ ಪರಿಪಾಲಿಸು ಮೊರೆಹೊಕ್ಕೆನು ನಾನು ವರದಪುರಂದರ ವಿಠಲ ಎಂದು ಹಾಡಿದ್ದಾರೆ.

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 105

 ಸಾವನದುರ್ಗ (Savandurga )

ಸಾವನದುರ್ಗ ಬೆಂಗಳೂರು ನೆರೆ ಜಿಲ್ಲೆಯಾದ ರಾಮನಗರದ ಮಾಗಡಿಯಿಂದ ) ಪಶ್ಚಿಮಕ್ಕೆ 60 ಕಿಮೀ ದೂರದಲ್ಲಿದೆ. ಈ ಬೆಟ್ಟವನ್ನು ಏಷ್ಯಾದ ಅತಿ ದೊಡ್ಡ ಏಕಶಿಲೆಯ ಬೆಟ್ಟ ಎಂದು ಪರಿಗಣಿಸಲಾಗಿದೆ.ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ ಮತ್ತು ದಕ್ಷಿಣ ಪ್ರಸ್ಥಬೂಮಿಯ ಭಾಗವಾಗಿದೆ. . ಇದು ಪೆನಿನ್ಸುಲರ್ ಗ್ನಿಸ್, ಗ್ರಾನೈಟ್‌ಗಳು, ಅಪರೂಪದ  ಡೈಕ್‌ಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ ಸಾವನದುರ್ಗ ಬೆಟ್ಟ ಬೆಂಗಳೂರು ಸಿಟಿ ಜಂಕ್ಷನ್‌ನಿಂದ 48 ಕಿ.ಮೀ, ರಾಮನಗರದಿಂದ 31 ಕಿ.ಮೀ ಮತ್ತು ಮಾಗಡಿಯಿಂದ 13 ಕಿ.ಮೀ ದೂರದಲ್ಲಿದೆ. ಚಾರಣಕ್ಕಾಗಿ  ಇಲ್ಲಿಗೆ ಬೆಂಗಳೂರಿನಿಂದ ಸಾಕಷ್ಟು ಜನ ಪ್ರತಿನಿತ್ಯ ಆಗಮಿಸುತ್ತಾರೆ.

ಚಿತ್ರಕೃಪೆ: ಕೆಂಗೇರಿ ಚಕ್ರಪಾಣಿ



ಲಕ್ಷ್ಮಿ ನರಸಿಂಹ ದೇವಾಲಯ ಮತ್ತು ಚಾರಣ ಪ್ರಿಯರ ಸ್ಥಳ

ಸಾವನದುರ್ಗ ದಲ್ಲಿನ ಎರಡು ನಿಷಿದ್ಧ ಬೆಟ್ಟಗಳು, ದೇವಸ್ಥಾನಗಳು ಹಾಗು ಪ್ರಕೃತಿ ಸೌಂದರ್ಯ ಆಕರ್ಷಣೀಯವಾಗಿದೆ. ಬೆಂಗಳೂರಿಂದ ಇದು 33 ಕಿಮೀ ದೂರವಿದ್ದು  ಭಾರತದ ಇತರೆ ಯಾವುದೇ ಭಾಗದಿಂದ ಸುಲಭವಾಗಿ  ತಲುಪಬಹುದು.

ಬೆಟ್ಟಗಳು ಹಾಗು ಕೋಟೆಗಳು


ಕರಿಗುಡ್ಡ ಹಾಗು ಬಿಳಿಗುಡ್ಡಗಳಿಂದಾಗಿ  ಸಾವನದುರ್ಗ  ಹೆಚ್ಚು  ಪ್ರಖ್ಯಾತಿ ಹೊಂದಿದೆ . ಇದರ  ಮೂಲಾರ್ಥ ‘ಬ್ಲ್ಯಾಕ್  ಹಿಲ್ಲ್’ ಹಾಗು  ‘ವೈಟ್ ಹಿಲ್ಲ್  ಎಂದು.  ಕರಿಗುಡ್ಡ ಹಾಗು ಬಿಳಿಗುಡ್ಡಗಳು ಡೆಕ್ಕನ್ ತಪ್ಪಲಿಗಿಂತ ಮೇಲೆ  1226 ಮೀಟರ್ ಗಳಷ್ಟು ಎತ್ತರವಿದೆ. ಇವು ಬೃಹದಾಕಾರದ ಬಂಡೆಗಳು,  ಗ್ರಾನೈಟ್  ಹಾಗು ಲಾಟೆರೈಟ್ ಗಳಿಂದ  ನಿರ್ಮಿತವಾಗಿದ್ದು ಏರಲು ಕಷ್ಟವಾಗಿದೆ. ಬೆಟ್ಟದ ತಳದಿಂದ ತುದಿಯವರೆಗಿನ ಪ್ರಯಾಣ ಹಲವು ಬಂಡೆ ಮುರುಕುಗಳು ಮತ್ತು ಬಾಗುವಿಕೆಯಿಂದ ಕಷ್ಟಕರವಾಗಿರುತ್ತದೆ. ಹಾಗಿದ್ದರೂ  ಉತ್ಸುಕರಿಗೆ  ಇದು ಪರಿಶ್ರಮಕ್ಕೆ ತಕ್ಕ ಫಲವಾಗುತ್ತದೆ. ಪುರಾತನ ಕೋಟೆಯ ಅವಶೇಷಗಳು ಬೆಟ್ಟದ ತುದಿಯಲ್ಲಿ ಕಿರೀಟವಾಗಿ ಅಲಂಕರಿಸುತ್ತವೆ.

ಬೆಟ್ಟಗಳನ್ನು ಹತ್ತುವ  ಆಸಕ್ತಿ ಹೊಂದಿರದವರು ವೀರಭದ್ರೇಶ್ವರ ಸ್ವಾಮಿ ಹಾಗು ನರಸಿಂಹ ಸ್ವಾಮಿ ದೇವಸ್ಥಾನಗಳನ್ನು ಅನ್ವೇಷಿಸಬಹುದಾಗಿದೆ (ಸಂದರ್ಶಿಸಬಹುದಾಗಿದೆ). ಬೆಟ್ಟದ ಕೆಳಗಿರುವ ಗುಡ್ಡಗಳ ಮೇಲೆ ಈ ದೇವಸ್ಥಾನಗಳು ನೆಲೆಸಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು ವಾಯುವಿಹಾರಕ್ಕೆ ಹೊರಟರೆ ಅಪರೂಪದ ಮರಗಳು ಅಲ್ಲದೆ ಹಳದಿ-ಗಂಟಲಿನ ಬುಲ್ ಬುಲ್  ಹಕ್ಕಿಗಳನ್ನು ಕಾಣಬಹುದು. ಈ ಸ್ಥಳದಲ್ಲಿ ಹಲವು ಕುತೂಹಲಕಾರಿ ಹಿನ್ನೆಲೆಯಿರುವ ಬಹಳಷ್ಟು ಚಿತಾಭಸ್ಮದ ಪಾತ್ರೆಗಳನ್ನು ಕಾಣಬಹುದಾಗಿದೆ.

ಬೆಂಗಳೂರಿಂದ ಮಾಗಡಿಗೆ ಹೋಗುವ ಬಸ್ಸುಗಳು ಸಾವನದುರ್ಗಕ್ಕೆ ಬಹಳ ಹತ್ತಿರದಲ್ಲಿ ಸಂಚರಿಸುತ್ತವೆ. ಅಲ್ಲದೆ ತುಂಬಾ ಬಸ್ಸುಗಳು ಲಭ್ಯವಿದ್ದು ಅಲ್ಲಿಗೆ ಎರಡು ತಾಸಿನ ಪ್ರಯಾಣ, ಅಲ್ಲಿಂದ ಸಾವನದುರ್ಗಕ್ಕೆ ಹೋಗಲು ಸ್ಥಳೀಯ ಬಸ್ಸುಗಳು ಹಾಗು ಆಟೋಗಳ ಸೌಲಭ್ಯವಿದೆ.

***

ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. 1340ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. 1638ರಿಂದ 1728ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ‌ನಲ್ಲಿ (1794) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.

ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎನ್ನುವುದು ಒಂದು ಊಹೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವನ್ನು ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದ್ದು ಒಂದು ಕಾಲಕ್ಕೆ ಸಾವನದುರ್ಗದಲ್ಲಿ ಅತೀ ಹೆಚ್ಚಾಗಿ ಚಿತ್ರೀಕರಣಗಳು ನಡೆಯುತ್ತಿದ್ದವು.

ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.