ಕಳಸ (Kalasa)
ಕಳಸ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿದ್ದು ಭದ್ರಾ ನದಿಯ ಬಲದಂಡೆಯ ಬಳಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಇದರೊಂದಿಗೆ ದಕ್ಷಿಣದಲ್ಲಿ ದುಗ್ಗಪ್ಪನ ಕಟ್ಟೆ(ಸಣ್ಣ ಗುಡ್ಡ)ಯಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ಸುಮಾರು ೧೧೦ಕಿಲೋಮೀಟರ್ ದೂರದಲ್ಲಿದ್ದು , ರಾಜ್ಯ ರಾಜಧಾನಿ ಬೆಂಗಳೂರಿನಿಂದ ೩೧೦ ಕಿಲೋಮೀಟರ್ ಹಾಗೂ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಕಳಸಕ್ಕೆ ೯೨ ಕಿಲೋ ಮೀಟರ್ ಅಂತರವಿದೆ. ಇಲ್ಲಿಯ ಕಳಸನಾಥ ಅಥವ ಕಳಸೇಶ್ವರ ದೇವಾಲಯ ಬಲು ಪ್ರಾಚೀನ ದೇವಾಲಯವಾಗಿದ್ದು ನಾಯಕರ ಕಾಲದಲ್ಲಿ ಈಇದ್ದ ದೇವಾಲಯ
ಕಳಸದಿಂದ 8 ಕಿಲೊಮೀಟರ್ ದೂರದಲ್ಲಿ ಜಗತ್ ಪ್ರಸಿದ್ಧ ಆದಿಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇಗಲು ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಕೋಟಿ ಭಕ್ತರು ಸಲಹುತ್ತಿರುತಾಳೆ. ದೇಶದ ನಾನಾ ಭಾಗಗಳಿಂದ ಭಕ್ತರು ಈ ಶಕ್ತಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿ, ತೀರ್ಥಪ್ರಸಾದ ಸೇವಿಸಿ, ಭಗವತಿ ಅನುಗ್ರಹ ಪಡೆಯುತ್ತಿದ್ದಾರೆ. ಪ್ರಸಿದ್ಧ ಚಲನಚಿತ್ರ ನಟ ನಟಿಯರು ಅನ್ನಪೂರ್ಣೇಶ್ವರಿ ಅಗಸ್ತ್ಯ ಕ್ಷೇತ್ರದಲ್ಲಿ ಬಂದು ಪ್ರಸಿದ್ಧರಾಗಿದ್ದಾರೆ.
ನಿರ್ಮಾಣವಾಗಿದೆ.ದರೆ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ ಹೊಯ್ಸಳ ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದು ಎಂದು ಹೇಳಲಾಗುತ್ತದೆ. ಈ ದೇವಾಲಯದ ಗರ್ಭಗುಡಿಯಲ್ಲಿರುವ ೯ ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ. ೧೬ ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ.ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ.ಈ ಸ್ಥಳವು ಗಣೇಶನಿಂದ ಹತ್ಯೆಗೊಳಗಾದ ಅಸುರನದಾಗಿತ್ತು ಎಂಬ ನಂಬಿಕೆಯಿದೆ. ಅಲ್ಲದೆ ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ.ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮುನಿಯೇ ಕಾರಣರಾಗಿದ್ದಾರೆ.
ತುಂಗಭದ್ರ ಖಂಡದಲ್ಲಿ ಹೇಳಿರುವಂತೆ, ಬಹು ಹಿಂದೆ ದೇವೇಂದ್ರನು ತನ್ನ ಸಕಲ ದೇವತೆಗಳೊಡನೆ ಸೇರಿಕೊಂಡು ಬಹು ವೈಭವಯುತವಾಗಿ ಸಾಮ್ರಾಜ್ಯ ನಡೆಸುತ್ತಿದ್ದನು. ಅವನ ಕೀರ್ತಿ ಪತಾಕೆಗಳು ಎಲ್ಲೆಡೆ ಹರಿದಾಡಿದ್ದವು. ಹಾಗಾಗಿ ದೇವೇಂದ್ರನು ಸಂತಸದಲ್ಲಿದ್ದನು.
ಇತ್ತ ಭೂಲೋಕದಲ್ಲಿ ಮಿತ್ರ ವರುಣರೆಂಬ ಋಷಿ ಸಹೋದರರಿಬ್ಬರೂ ವಿಹಾರ ಮಾಡುತ್ತಾ ತುಂಗಭದ್ರಾ ನದಿಯ ತೀರದಲ್ಲಿ ಅಪಾರವಾದ ಸಿದ್ಧಿ ಹಾಗೂ ದೇವಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ತಪಸ್ಸು ಮಾಡುತ್ತಿದ್ದರು.ದಿನಗಳೆದಂತೆ ಅವರಿಗೆ ಅಪಾರವಾದ ಶಕ್ತಿ ಸಿಗಲಾರಂಭಿಸಿತು. ಧಾರ್ಮಿಕವಾಗಿ ಸಾಕಷ್ಟು ಪ್ರಬಲರಾಗತೊಡಗಿದರು. ಈ ವಿಷಯವು ಈಗ ಇಂದ್ರನ ಕಿವಿಗೆ ತಲುಪಿತು. ಅದರಿಂದ ಚಿಂತಾಕ್ರಾಮ್ತನಾದ ಇಂದ್ರನು ಅವರಿಬ್ಬರ ತಪಸ್ಸಿಗೆ ಭಂಗ ಉಂಟು ಮಾಡಲು ಉಪಾಯ ಮಾಡತೊಡಗಿದ. ಉಪಾಯದ ಫಲವಾಗಿ, ಇಂದ್ರನು ತನ್ನ ಆಸ್ಥಾನದ ಅತಿ ಸುಂದರ ಕನ್ಯೆಯಾದ ಉರ್ವಶಿಯನ್ನು ಕರೆದು ಅವರ ತಪಸ್ಸು ಭಂಗ ಮಾಡಲು ಸೂಚಿಸಿದ. ದೇವೇಂದ್ರನ ಆದೇಶದಂತೆ ಉರ್ವಶಿಯು ಭುಲೋಕಕ್ಕೆ ಬಂದು ಅವರಿಬ್ಬರು ತಪ ಮಾಡುತ್ತಿದ್ದ ಸ್ಥಳಕ್ಕೆ ಬಂದು ತನ್ನ ಮೈಮಾಟದ ಮೂಲಕ ಹಾಡಲಾರಂಭಿಸಿದಳು, ನೃತ್ಯಿಸತೊಡಗಿದಳು. ಕೆಲ ಸಮಯ ಹಾಗೆ ಕಳೆಯಿತಾದರೂ ಕೊನೆಗೆ ಉರ್ವಶಿ ಅಪೂರ್ವ ಸೌಂದರ್ಯ ಹಾಗೂ ಶರೀರಕ್ಕೆ ಮರಳಾದ ಇಬ್ಬರು ವಿಚಲಿತರಾಗಿ ಅವಳೊಡಗೂಡಿ ಮೋಹಪಾಶದಲ್ಲಿ ಸಿಲುಕಿಬಿದ್ದರು. ಈ ಸಂದರ್ಭದಲ್ಲಿ ಮಿತ್ರನ ವೀರ್ಯ ಸ್ಖಲನವಾಗಿ ಅದನ್ನು ದೇವತೆಗಳು ಒಂದು ಕುಂಭ (ಮಡಕೆ) ದಲ್ಲಿ ಶೇಖರಿಸಿದರು. ಕುಂಭದಲ್ಲಿದ್ದ ಆ ವೀರ್ಯದಿಂದಲೆ ನಂತರ ಅಗಸ್ತ್ಯ ಋಷಿಗಳ ಜನನವಾಯಿತು. ಆದ್ದರಿಂದಲೆ ಅಗಸ್ತ್ಯ ಮುನಿಗ ಕುಂಭಯೋನಿ, ಕುಂಭಸುತ ಎಂಬ ಇತರೆ ಹೆಸರುಗಳಿರುವುದನ್ನು ಗಮನಿಸಬಹುದು. ಹೀಗೆ ಅವತರಿಸಿದ ಅಗಸ್ತ್ಯರು ಮುಂದೆ ಕ್ರಮವಾಗಿ ವೈದಿಕ ವಿದ್ಯೆಗಳನ್ನು ಪಡೆದು ಸಕಲ ಶಾಸ್ತ್ರ, ಪುರಾಣಾದಿಗಳನ್ನು ಅಭ್ಯಸಿಸಿ, ತಪಸ್ಸನ್ನಾಚರಿಸುತ ಶಿವನ ಕೃಪೆಗೆ ಪಾತ್ರರಾದರು. ಶಿವನು ಪ್ರಸನ್ನನಾಗಿ ಅಗಸ್ತ್ಯರಿಗೆ ವರ ಕೇಳಲು ಹೇಳಿದಾಗ, ಅಗಸ್ತ್ಯರು ತಾವು ಜನಿಸಿದ್ದ ಕುಂಭದಲ್ಲಿ ಶಿವನು ಸದಾ ನೆಲೆಸಿರಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ಶಿವನು ಕಳಸದಲ್ಲಿ ಕಳಸೇಶ್ವರನಾಗಿ ನೆಲೆಸಿದನೆಂಬ ಪ್ರತೀತಿಯಿದೆ.
ಅಲ್ಲದೆ ಅಗಸ್ತ್ಯರ ಜನನವಾಗುವ ಸಮಯದಲ್ಲೇ ಕಲಶದ ಹೊರಗೆ ಚೆಲ್ಲಿದ ರೇತಸ್ಸಿನಿಂದ ಹಿಂದೆ ನಿಮಿಚಕ್ರವರ್ತಿಯಿಂದ ಶಾಪಗ್ರಸ್ತರಾಗಿದ್ದ ವಸಿಷ್ಠರ ಜನನವಾಯಿತು. ಎಂದೂ ಹೇಳಲಾಗುತ್ತದೆ.
***
"ಕಳಸ" ಶಬ್ದದ ವ್ಯುತ್ಪತ್ತಿಯ ಬಗೆಗೆ ನೋಡುವಾಗ ಕಳಸ ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆಂದು ಹೇಳಲಾಗಿದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿಂದ ಕಳಸವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಅಗಸ್ತ್ಯ, ವಶಿಷ್ಠ ಋಷಿಗಳ ತಪೋಭೂಮಿಯಾದ ಕಳಸದಲ್ಲಿ. ಪಂಚ ತೀರ್ಥಗಳಿವೆ. ಕೋಟಿ ತೀರ್ಥ, ಅಂಬಾತೀರ್ಥ, ರುದ್ರತೀರ್ಥ, ನಾಗತೀರ್ಥ, ವಶಿಷ್ಷ ತೀರ್ಥ. ಈ ಪಂಚತೀರಥಗಳಲ್ಲಿ ಪಿತೃ ಕಾರ್ಯವನ್ನು ಮಾಡುವುದರಿಂದ ಸದ್ಗತಿ ಪ್ರಾಪ್ತಿ ಎಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಕಾಶಿಯಲ್ಲಿ 12ವರ್ಷಗಳಿಗೊಮ್ಮೆ ಗಿರಿಜಾ ಕಲ್ಯಾಣವಾಗುತ್ತದೆ. ಇಲ್ಲಿಯ ವೈಶಿಷ್ಟ್ಯತೆ ಏನೆಂದರೆ ಪ್ರತಿ ವರ್ಷ ಕಾರ್ತೀಕ ಶುದ್ಧ, ಏಕಾದಶಿಯಂದು ಪ್ರತಿವರ್ಷ ಗಿರಿಜಾ ಕಲ್ಯಾಣ ನಡೆಯುತ್ತಿದೆ ವಶಿಷ್ಟ, ಅಗಸ್ತ್ಯ ಋಷಿಗಳ ಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿರುವುದು. ಹಾಗಾಗಿ ಈಶ್ವರನಿಗೆ ಕಲ್ಯಾಣ ಕಲಶೇಶ್ವರ ಎಂದು ಜಗತ್ ಪ್ರಸಿದ್ಧ ತಾಣವಾಗಿದೆ.***
ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ.ಮಧ್ವಾಚಾರ್ಯರು ಏಕಹಸ್ತದಿಂದ ಮೇಲಕ್ಕೆ ಎತ್ತಿಟ್ಟ ಬೃಹತ್ ಗಾತ್ರದ ಬಂಡೆಗಲ್ಲು, ಆ ಬಂಡೆಗಲ್ಲಿನ ಮೇಲೆ ಮಧ್ವಾಚಾರ್ಯರ ಹಸ್ತಾಕ್ಷರವನ್ನು ನೋಡಬಹುದು. 32ಅಡಿ ಎತ್ತರದಿಂದ ಮಧ್ವಾಚಾರ್ಯರು ಧುಮುಕಿ ಈಜಿದ ಸ್ಥಳವನ್ನು ಕಾಣಲಿಕ್ಕೆ ಇದೆ. ಅಂಬತೀರ್ಥ ಎಂದು ಕರೆಯುತ್ತಾರೆ. ಮುಸಲಸ್ನಾನವನ್ನು ಮನ್ಮಧ್ವಾಚಾರ್ಯರು ಮಾಡಿದರು ಎಂದು ಮಾಧ್ವ ವಿಜಯದಲ್ಲಿ ಉಲ್ಲೇಖವಿದೆ. ಮುಸಲ ಸ್ನಾನ ಎಂದರೆ ಮೂವತ್ತೆರಡು ಅಡಿ ಎತ್ತರದಿಂದ ನದಿಗೆ ಧುಮುಕಿವುದು. ಈ ಸುಂದರ ತಾಣಗಳನ್ನು ಹೊಂದಿದೆ.
ಅಲ್ಲದೆ ಇಲ್ಲಿ ರಾಮ ಸೀತೆ ಲಕ್ಷ್ಮಣ ರು ಪ್ರಯಾಣಿಸಿದ ಸ್ಥಳೀಯ ಐತಿಹ್ಯವಿದೆ. ಸೀತಾಸೆರಗು ಎಂಬ ಜಾಗವನ್ನು ನೋಡಬಹುದು.
No comments:
Post a Comment