Saturday, May 28, 2016

ಟೆನಿಸ್ ಲೋಕದ ಅರಳು ಪ್ರತಿಭೆ ಏಕಲವ್ಯ ಪ್ರಶಸ್ತಿ ವಿಜೇತೆ - ಅರ್ಚನಾ ಕಾಮತ್

ಕನ್ನಡ ನಾಡು ವೀರರ, ಪ್ರತಿಭಾವಂತರ ನೆಲೆವೀಡು. ಇಲ್ಲಿ ಹಲವಾರು ಸಾಹಸಿಗಳು, ಕವಿಪುಂಗವರು, ಕ್ರೀಡಾಪಟುಗಳು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಲವಾರು ಪ್ರತಿಭಾವಂತರು ಇದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಅರ್ಚನಾ ಕಾಮತ್ ಅಂತಹ ಅದ್ಭುತ ಪ್ರತಿಭಾವಂತರಲ್ಲಿ ಒಬ್ಬರು.




ವಿಶ್ವ ಜೂನಿಯರ್ ಸರ್ಕಿಟ್ ಫೈನಲ್ಸ್ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ  ಮೊದಲ ಭಾರತೀಯ ಆಟಗಾರ್ತಿ ಎನಿಸಿರುವ ಇವರು ನಾಡಿನ ಹೆಮ್ಮೆಯ ಟೇಬಲ್ ಟೆನಿಸ್ ಆಟಗಾರ್ತಿ.  18ನೇ ವರ್ಷದೊಳಗಿನ ವರ್ಲ್ಡ್ ರ್ಯಾಕಿಂಗ್ನಲ್ಲಿ 30ನೇ ಸ್ಥಾನದಲ್ಲಿರುವ ಅರ್ಚನಾ ಅತ್ಯಂತ ಚಿಕ್ಕ ವಯಸ್ಸಿಗೆ ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿ ಆಗಿ  ಗುರುತಿಸಿಕೊಂಡಿದ್ದಾರೆ.

ಕುತೂಹಲದಿಂದ ಕಲಿತ ವಿದ್ಯೆ

ಆಟದ ಕುರಿತಂತೆ ಆಸಕ್ತಿ ಹುಟ್ಟಿದ ವಿಚಾರವಾಗಿ ಹೇಳುವ  ಅರ್ಚನಾ "ನಾನು ಒಂಭತ್ತನೇ ವಯಸ್ಸಿನಲ್ಲಿ ಒಮ್ಮೆ ಬೇಸಿಗೆ ರಜೆಯಲ್ಲಿ ಮಂಗಳೂರಿನ ದೊಡ್ಡಪ್ಪನ ಮನೆಗೆಂದು ಹೋಗಿದ್ದ ಸಂದರ್ಭ ಅವರ ಮನೆಯ ಟೆರೇಸ್ ನಲ್ಲಿದ್ದ ಟಿಟಿ ಟೇಬಲ್ ಕಣ್ಣಿಗೆ ಕಂಡಿತ್ತು. ದೊಡ್ಡ ಗಾತ್ರದ ಟೇಬಲ್ ನಡುವೆ ನೆಟ್ ಸಹ ಇದ್ದದ್ದು ನನ್ನಲ್ಲಿ ಕುತೂಹಲವನ್ನು ಕೆರಳಿಸಿತು. ಅಂದು ದೊಡ್ಡಪ್ಪನಿಂದ ಆಟದ ಪರಿಚಯ ಮಾಡಿಕೊಂಡ  ಬಳಿಕ ತನ್ನ ಅಣ್ಣನನ್ನೇ ತಕ್ಷಣದ ಎದುರಾಳಿ ಅನ್ನಾಗಿಸಿಕೊಂಡು ಆಡಲು ಪ್ರಾರಂಭಿಸಿದೆ." ಎನ್ನುತ್ತಾರೆ.

"ಮಂಗಳೂರಿನಿಂದ ವಾಪಾಸಾದ ಮೇಲೆ ಮನೆಗೊಂದು ಟಿಟಿ ಟೇಬಲ್ ತಂದು ಮನೆಯ ನೆಲಮಹಡಿಯಲ್ಲಿಯೇ ನಿತ್ಯವೂ ಆಟವಾಡಲು ತೊಡಗಿದೆ. ಕ್ರಮೇಣ ಕ್ರೀಡೆಯಲ್ಲಿ ಗಂಭೀರ ಆಸಕ್ತಿಯು ಹುಟ್ಟಿತು. ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಲು ನಿರ್ಧರಿಸಿ ಮಲ್ಲೇಶ್ವರಂ ಅಸೋಸಿಏಷನ್ ನಲ್ಲಿ ತರಬೇತಿಗಾಗಿ ಸೇರಿದೆ. ಅಲ್ಲಿ ಜಗದೀಶ್ ನನ್ನ ತರಬೇತುದಾರರಾಗಿ ಸಿಕ್ಕಿದರು. ಕೆಲವು ತಿಂಗಳ ಬಳಿಕ ರಾಜಾಜಿನಗರದಲ್ಲಿನ ಪ್ರವೀಣ್ ಜೋಷಿಯವರ ಬಳಿ ಟಿಟಿ ತರಬೇತಿಯನ್ನು ಮುಂದುವರಿಸಿದ್ದೆ.  ಇದೀಗ ಪ್ರಕಾಶ್ ನಗರದಲ್ಲಿ ಸಗಾಯ್ ರಾಜ್ ಹಾಗೂ ದಿನಕರ್ ಎನ್ನುವವರ ಬಳಿಯಲ್ಲಿ ಟೆನಿಸ್ ತರಬೇತಿ ಪಡೆಯುತ್ತಿದ್ದೇನೆ.”


ಅರ್ಚನಾ ಅವರ ತಂದೆ ಡಾ. ಗಿರೀಶ್ ಕಾಮತ್ ಹಾಗೂ ತಾಯಿ ಅನುರಾಧಾ ಕಾಮತ್ ಇಬ್ಬರೂ ನೇತ್ರ ವೈದ್ಯರಾಗಿದ್ದು ಇದೀಗ ಮಗಳ ಕ್ರೀಡಾ ಜೀವನದ ಯಶಸ್ಸಿಗಾಗಿ ಅನುರಾಧಾ ಅವರು ತಮ್ಮ ವೈದ್ಯ ವೃತ್ತಿಯನ್ನೇ ತೊರೆದಿದ್ದಾರೆ. ಮುಖೇನ ಮಗಳ ಎಲ್ಲಾ ಆಸೆ ಕನಸುಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

“ನನ್ನ ಶಾಲೆಯವರು ನನಗೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ” ಎನ್ನುವ ಅರ್ಚನಾಈ ವರ್ಷ 10 ನೇ ತರಗತಿ ಪರೀಕ್ಷೆ ಕಟ್ಟಿದ್ದಾರೆ. “ಟೂರ್ನಮೆಂಟ್ ಗಳಿರುವಾಗ ಶಾಲೆಗೆ ಹೋಗಲು ಸಾಧ್ಯವಾಗದು. ಅಂತಹಾ ಸಮಯದಲ್ಲಿ ಶಾಲೆಯು ವಿಶೇಷ ರಜಾ ಸೌಲಭ್ಯವನ್ನು ಕಲ್ಪಿಸುತ್ತದೆ. ಅಲ್ಲದೆ ಶಾಲಾ ಮುಖ್ಯೋಪಾದ್ಯಾಯರಾದ ಕೆ. ನಾಗರಾಜ್ ಸೇರಿದಂತೆ ಎಲ್ಲಾ ಶಿಕ್ಷಕರೂ ವಿಶೇಷ ತರಗತಿ ತೆಗೆದುಕೊಂಡು ಪಾಠ ಹೇಳುತ್ತಾರೆ.

ಇದುವರೆಗೂ ಪ್ರತಿ ತರಗತಿಯಲ್ಲಿಯೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಅರ್ಚನಾ ಇತರೆ ಸಹಪಾಠಿಗಳೊಂದಿಗೆ ಸಾಮಾನ್ಯ ಗೆಳತಿಯಂತೆಯೇ ಇರಲು  ಇಷ್ಟಪಡುತ್ತಾರೆ.

ಸಾಧನೆಯ ಹಾದಿ

ಎಳವೆಯಲ್ಲಿಯೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಅರ್ಚನಾ ಹಲವು ಪ್ರಥಮಗಳ ಒಡತಿ. ಸಬ್ ಜೂನಿಯರ್, ಜೂನಿಯರ್, ಯೂತ್ ಹಾಗೂ ಮಹಿಳಾ ವಿಭಾಗಗಳಲ್ಲಿ ಸ್ಪರ್ಧಿಸಿ ಯಶಸ್ಸು ಕಂಡಿರುವ ಇವರು ದಕ್ಷಿಣ ಕೊರಿಯ, ಮಲೇಷಿಯಾ, ಜಪಾನ್ ಇವೇ ಮೊದಲಾದ ದೇಶಗಳ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರಿಸುವ ಅರ್ಚನಾ " ಕಠಿಣ ಅಭ್ಯಾಸ, ನಾನು ಟೂರ್ನಿ ಇರಲಿ, ಬಿಡಲಿ ನಿತ್ಯವೂ ಅಭ್ಯಾಸ ತಪ್ಪಿಸುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಆಡುತ್ತೇನೆ. ಪ್ರತಿದಿನ ಬೆಳೆಗ್ಗೆ ನನ್ನ ವೈಯುಕ್ತಿಕ ಕೋಚ್ ಸಗಾಯ್ ರಾಜ್ ನನಗೆ ಮಾರ್ಗದರ್ಶನ ನೀಡುತ್ತಾರೆ. ಸಂಜೆಯ ವೇಳೆಯಲ್ಲಿ ರಾಜ್ಯ ಮಟ್ಟದ ಇತರೆ ಸ್ಪರ್ಧಾಳುಗಳೊಂದಿಗೆ ಆಡುತ್ತೇನೆ." ಎನ್ನುತ್ತಾರೆ.



ತಮ್ಮ ಕ್ರೀಡಾ ಜೀವನದಲ್ಲಿನ ಸವಾಲುಗಳು, ಎದುರಾಳಿಗಳ ಕುರಿತಂತೆ ವಿವರಿಸುವ ಅರ್ಚನಾ "ನಾ, ದಕ್ಷಿಣ ಕೊರಿಯಾ, ಜಪಾನ್ ದೇಶದವರು ಸಾಕಷ್ಟು ಪೈಪೋಟಿ ನೀಡುತ್ತಾರೆ. ಕೆಲವೊಮ್ಮೆ ನಮ್ಮ ದೇಶದವರಿಂದಲೂ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ." ಎಂದು ಹೇಳುತ್ತಾರೆ..

ಅರ್ಚನಾ ಅವರಿಗೆ ಇತಿಹಾಸ ಆಸಕ್ತಿದಾಯಕ ವಿಷಯ. "ಬಿಡುವಿದ್ದಾಗಲೆಲ್ಲಾ ಇತಿಹಾಸದ ಪುಸ್ತಕಗಳನ್ನು ಓದುತ್ತೇನೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಪುಸ್ತಕಗಳು, ಅವರ ಜೀವನ ಚರಿತ್ರೆಯನ್ನು ಆಸಕ್ತಿಯಿಂದ ಓದುತ್ತೇನೆ.” ಎನ್ನುವ ಅರ್ಚನಾ "ಸೈನಾ ನೆಹ್ವಾಲ್ ನನ್ನ ರೋಲ್ ಮಾಡಲ್!  ಅವರು ಏರಿದ ಎತ್ತರ, ತೋರಿದ ಸಾಧನೆಯೇ ನನಗೆ ಸ್ಪೂರ್ತಿಯಾಗಿದೆ, ಅವರಂತೆಯೇ ನಾನೂ ಒಲಂಪಿಕ್ಸ್ ನಲ್ಲಿ ಭಾರತಕ್ಕಾಗಿ ಪದಕ ಗೆಲ್ಲಬೇಕೆನ್ನುವ ಕನಸಿದೆ. ಅದಕ್ಕಾಗಿ ಈಗಿಂದಲೇ ಸಿದ್ದತೆ ನಡೆಸಿದ್ದೇನೆ. ಮುಂದಿನ ದಿನ ಗುರಿ ತಲುಪುತ್ತೇನೆನ್ನುವ ವಿಶ್ವಾಸ ನನ್ನದು." ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಹೀಗೆ ಕಿರಿ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿರುವ ಅರ್ಚನಾ ಮುಂದಿನ ಜೀವನದಲ್ಲಿ ಸಹ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಟೆನಿಸ್ ಕ್ಷೇತ್ರದಲ್ಲಿ ಬಾರತದ ಕೀರ್ತಿಯನ್ನು ವಿಶ್ವದ ಬಾನೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸೋಣ.

ಪದಕ-ಪ್ರಶಸ್ತಿ
         
ಅರ್ಚನಾ ಕಾಮತ್ ಇದುವರೆಗೂ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪದಕ, ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳ ವಿವರ ಹೀಗಿದೆ-
  • ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪುರಸ್ಕಾರ
  • 2013 ರಲ್ಲಿ ನಡೆದ ಸಬ್-ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿದ ಕರ್ನಾಟಕದ ಆಟಗಾರ್ತಿ
  • 2015ರಲ್ಲಿ ನಡೆದ ಕ್ರೋಷಿಯಾ ಓಪನ್ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪದಕ
  • ಇಂದೋರ್ ಅಲ್ಲಿ )ನಡೆದ ಐಟಿಟಿಎ- ಜೂನಿಯರ್ ಸರ್ಕಿಟ್ನಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ
  • ಬೆಲ್ಜಿಯಂ ಓಪನ್, ಇಟಾಲಿಯನ್ ಓಪನ್  ಸೇರಿದಂತೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಚಿನ್ನ, 7 ಬೆಳ್ಳಿ ಹಾಗೂ 8 ಕಂಚಿನ ಪದಕ - ಒಟ್ಟು 20 ಪದಕ
  • ರಾಷ್ಟ್ರ ಮಟ್ಟದಲ್ಲಿ 11 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು  - ಒಟ್ಟು 17 ಪದಕ
  • ದೂರದರ್ಶನ ಚಂದನ ಪ್ರಶಸ್ತಿ
  • ನ್ಯಾಷನಲ್ ಚೈಲ್ಡ್ ಅವಾರ್ಡ್ (ರಾಷ್ಟ್ರಪತಿಗಳಿಂದ ‘ರಾಷ್ಟ್ರೀಯ ಮಕ್ಕಳ ಪುರಸ್ಕಾರ)
  • 15 ವರ್ಷದೊಳಗಿನ ವರ್ಲ್ಡ್ರ್ಯಾಂ ಕಿಂಗ್ನಲ್ಲಿ 12ನೇ ಸ್ಥಾನ  (2015 ಡಿಸೆಂಬರ್ ವರೆಗೆ)
  • 18ನೇ ವರ್ಷದೊಳಗಿನ ವರ್ಲ್ಡ್ ರ್ಯಾಂ ಕಿಂಗ್ನಲ್ಲಿ  30ನೇ ಸ್ಥಾನ


(ನನ್ನ ಈ ಲೇಖನವು ಹೆಸ್ರಾಂತ ಮಹಿಳಾ ಮಾಸಪತ್ರಿಕೆ "ಗೃಹಶೋಭಾ" ದ ಮೇ 2016 ರ ಸಂಚಿಕೆಯಲ್ಲಿ "ಗೋಲ್ಡನ್ ಗರ್ಲ್ಸ್" ವಿಶೇಷ ಮಾಲಿಕೆಯಲ್ಲಿ ಪ್ರಕಟಗೊಂಡಿತ್ತು. )


Wednesday, May 25, 2016

ಕನ್ನಡಕ್ಕೊಬ್ಬ ನವ್ಯ ನಿರ್ದೇಶಕಿ - ಅನನ್ಯ ಕಾಸರವಳ್ಳಿ

ತಂದೆ ತಾಯಿಯರ ದಾರಿಯಲ್ಲೇ ಮಕ್ಕಳು ನಡೆಯಬೇಕೆನ್ನುವುದು ಹಿರಿಯರ  ಆಸೆಯಾಗಿರುತ್ತದೆ. ಆದರೆ ಎಲ್ಲಾ ಮಕ್ಕಳೂ ಹಾಗೆ ಇರದೆ ತಮ್ಮದೇ ವಿಭಿನ್ನ  ಮಾರ್ಗಗಳನ್ನು ಆಯ್ದುಕೊಂಡು ಮುಂದೆ ನಡೆಯುತ್ತಾರೆ. ಇನ್ನು ಕೆಲವರು ಮಾತ್ರ  ತಂದೆ-ತಾಯಿಯವರ ಮಾರ್ಗದರ್ಶನದಲ್ಲಿ ಅವರ ದಾರಿಯಲ್ಲಿಯೇ ಸಾಗಿ  ಯಶಸ್ಸು ಕಾಣುತ್ತಾರೆ. ಅಂತಹಾ ವ್ಯಕ್ತಿಗಳಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಪುತ್ರಿಯಾದ ಅನನ್ಯ ಕಾಸರವಳ್ಳಿ ಸಹ ಒಬ್ಬರು. ಕನ್ನಡ  ಚಿತ್ರ ಜಗತ್ತಿನಲ್ಲಿ ಕೇಳಿಬರುತ್ತಿರುವ ಕೆಲವೇ ಕೆಲವು ಸಮರ್ಥ ಮಹಿಳಾ  ನಿರ್ದೇಶಕಿಯರಲ್ಲಿ ಇವರೂ ಒಬ್ಬರಾಗಿದ್ದಾರೆ.



ಹಿಂದೆ "ಗುಪ್ತಗಾಮಿನಿ", "ಮುತ್ತಿನ ತೋರಣ" ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನನ್ಯ ಇದುವರೆಗೂ ನಾಲ್ಕೈದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಅವರು ನಿರ್ದೇಶಿಸಿದ್ದಕಪ್ಪು ಕಲ್ಲಿನ ಸೈತಾನಎಂಬ ಕಿರುಚಿತ್ರಕ್ಕೆ ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸಹ ಬಂದಿತ್ತು. ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ಅವರು ತಮ್ಮ ತಂದೆ ಗಿರೀಶ್ ಕಾಸರವಳ್ಳಿ ಅವರ ಚಿತ್ರಕ್ಕೂ ಸಹಾಯಕರಾಗಿ ದುಡಿದಿದ್ದರು

 ತಂದೆ, ತಾಯಿ, ಅಣ್ಣ - ಹೀಗೆ  ಮನೆಯವರೆಲ್ಲರೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕುಟುಂಬದಿಂದ ಬಂದ  ಅನನ್ಯ ಇದೀಗ ತಾವು ಕೂಡ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಖ್ಯಾತ  ನಿರ್ಮಾಪಕ ಬಸಂತ್ ಕುಮಾರ್ ಪಾಟೀಲರ ನಿರ್ಮಾಣದಲ್ಲಿ ಮೂಡಿಬರುತ್ತಿರುವ  ಗೋಪಾಲಕೃಷ್ಣ ಪೈಗಳ ಕಥೆಯಾಧಾರಿತ ಚಿತ್ರ "ಹರಿಕಥಾ ಪ್ರಸಂಗ" ತೆರೆಗೆ  ಬರಲು ಸಿದ್ದವಾಗಿದೆ.
ಇಂತಹಾ ಪ್ರತಿಭಾನ್ವಿತ ಯುವ ನಿರ್ದೇಶಕಿಯನ್ನು "ಗೃಹಶೋಭಾ" ಮಾತಿಗೆ  ಆಹ್ವಾನಿಸಿದಾಗ ಅವರು ಮುಕ್ತವಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.   ಸಂದರ್ಶನದ ಪ್ರಮುಖ ಸಾರಾಂಶ ಮುಂದಿನಂತಿದೆ-

ನಿಮ್ಮ ಬಾಲ್ಯದ ಕುರಿತು ತಿಳಿಸಿ
ನಮ್ಮದು ಮದ್ಯಮ ವರ್ಗದ ಕುಟುಂಬವಾಗಿತ್ತು. ನಾವು ಮೊದಲು ಬೆಂಗಳೂರಿನ  ರಾಜಾಜಿನಗರದಲ್ಲಿದ್ದೆವು. ಎಲ್ಲಾ ಮಕ್ಕಳಂತೆಯೇ ನನ್ನ ಬಾಲ್ಯವೂ ಆಟನೋಟಗಳಿಂದ ಕೂಡಿ ಸುಂದರವಾಗಿತ್ತು. ನಾನು ಓದಿದ್ದು ಕಾರ್ಮೆಲ್ ಕಾನ್ವೆಂಟ್  ನಲ್ಲಿ, ನನ್ನ ಶಾಲಾ ದಿನಗಳಲ್ಲಿಯೇ ನಾನು ನೃತ್ಯಾಭ್ಯಾಸದಲ್ಲಿ ತೊಡಗಿದ್ದೆಶಾಲಾ ವಿದ್ಯಾಭ್ಯಾಸದ ನಂತರ ಕ್ರೈಸ್ತ್ ಕಾಲೇಜಿಗೆ ಸೇರಿದ. ಇದಾದ ನಂತರ ಚೆನ್ನೈನ ಎಲ್.ವಿ. ಪ್ರಸಾದ್ ಅವರ  ಇನ್ಸ್ಟಿಟ್ಯೂಟ್ ಸೇರಿ ಸಿನಿಮಾ ಲೋಕದ ನಾನಾ ಪ್ರಕಾರಗಳ ಕುರಿತು ತರಬೇತಿ  ಹೊಂದಿದೆ. ನಾನು  ಕಾಲೇಜಿನಲ್ಲಿರುವಾಗಲೇ ಧಾರಾವಾಹಿ ಮತ್ತು ನಾಟಕಗಳಲ್ಲಿ  ಅಭಿನಯಿಸತೊಡಗಿದ್ದೆ.

ನಿಮ್ಮ ತಂದೆ ಅಂತರಾಷ್ಟ್ರೀಯ ಮಟ್ಟದ ನಿರ್ದೇಶಕ, ತಾಯಿಯವರೂ ಹೆಸರಾಂತ ಕಲಾವಿದೆಯಾಗಿದ್ದವರು. ನಿಮ್ಮ ಬೆಳವಣಿಗೆಯಲ್ಲಿ ಅವರ ಸಹಾಯ, ಮಾರ್ಗದರ್ಶನ ಹೇಗಿತ್ತು?
ನನಗೆ ನನ್ನ ತಂದೆಯವರಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಇಂದು ನಾನು ಸ್ವತಂತ್ರವಾಗಿ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆಂದರೆ ಅದರ ಹಿಂದೆ ನನ್ನ ತಂದೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಕಷ್ಟು ಇದೆ.
ನನ್ನ ತಾಯಿಯವರು ಇದ್ದಾಗ ಅವರೂ ನನ್ನ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಅವರು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿಯೂ ನಾನು ಅಭಿನಯಿಸುತ್ತಿದ್ದ ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದರು, ನಾನು ಎಲ್ಲಿ ಚೆನ್ನಾಗಿ ಅಭಿನಯಿಸಿದ್ದೇನೆ, ಎಲ್ಲಿ ಇನ್ನೂ ಚೆನ್ನಾಗಿ ಅಭಿನಯಿಸಲು ಅವಕಾಶಗಳಿದ್ದವು ಎನ್ನುವುದನ್ನು ತಿಳಿಸಿ ಹೇಳುತ್ತಿದ್ದರು.

ನಾನೂ ಸಹ ಚಲನಚಿತ್ರ ನಿರ್ದೇಶಕಿ ಆಗಬೇಕು ಎನ್ನುವುದು ಅಮ್ಮನ ಕನಸಾಗಿತ್ತು. ನಿಟ್ಟಿನಲ್ಲಿ ಅವರು ನನಗೆ ಸಾಕಷ್ಟು ವಿಚಾರ ತಿಳಿಸುತ್ತಿದ್ದರು. ಅವರು ಅಭಿನಯಿಸುತ್ತಿದ್ದ ಚಿತ್ರಗಳು, ನಿರ್ದೇಶಿಸಿದ್ದ ಧಾರಾವಾಹಿಗಳ ಸೆಟ್ ಗಳಿಗೆ ನಾನೂ ಭೇಟಿ ನೀಡುತ್ತಿದ್ದೆ. ಅವರ ಪ್ರಮುಖ ಜನಪ್ರಿಯ ಧಾರಾವಾಹಿ "ಮೂಡಲ ಮನೆ" ಚಿತ್ರೀಕರಣದ ವೇಳೆ ನಾನೂ ಅಲ್ಲಿದ್ದೆ. ಅವರಿಂದ ಬೇಕಾದಷ್ಟು ಕಲಿತಿದ್ದೇನೆ.

ಒಮ್ಮೆ ತಾಯಿಯವರು "ನೂರೊಂದು ಬಾಗಿಲು" ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ಅಮ್ಮ ನನ್ನನ್ನು ಕರೆದು ಒಂದು ಶಾಟ್ ನೀನೇ ನಿರ್ದೇಶನ ಮಾಡು ಎಂದು ಹೇಳುವುದರೊದನೆ ನನಗೆ ಸ್ವತಂತ್ರವಾಗಿ ನಿರ್ದೇಶನ ಕೆಲಸ ಮಾಡಲು ಅವಕಾಶ ನೀಡಿದ್ದರು.

ಒಟ್ಟಾರೆ ತಂದೆ ತಾಯಿಗಳೇ ನನಗೆ ದಾರಿದೀಪವಾಗಿದ್ದಾರೆ. ಇನ್ನೂ ಹೇಳಬೇಕೆಂದರೆ ಗಿರೀಶ್ ಕಾಸರವಳ್ಳಿಯವರ ಮಗಳಾಗಿರುವುದರಿಂದ ಅವರ ಹೆಸರನ್ನು ಉಳಿಸಿ ಅವರ ಹಾದಿಯಲ್ಲೇ ಸಾಗುವುದರಲ್ಲಿ ನನ್ನ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ.

ಕಮರ್ಷಿಯಲ್ ಚಿತ್ರಗಳಿಗೇ ಚಿತ್ರಮಂದಿರದ ಕೊರತೆಯುಂಟಾಗತ್ತಿರುವ ದಿನಗಳಲ್ಲಿ ಕಲಾತ್ಮಕ ಚಿತ್ರಗಳು, ಕಿರು ಚಿತ್ರಗಳಿಗೆ ಮಾರುಅಕಟ್ಟೆ, ಜನರು ಹೇಗೆ ಸ್ಪಂದಿಸುತ್ತಾರೆ?
ನಾನಿನ್ನೂ ಪೂರ್ಣ ಪ್ರಮಾಣದ ಚಿತ್ರ ನಿರ್ದೇಶನ ಮಾಡಿಲ್ಲ. ಇದು (ಹರಿಕಥಾ ಪ್ರಸಂಗ) ನನ್ನ ಚೊಚ್ಚಲ ಚಿತ್ರ. ವರೆಗೆ ನಾನು ಕಾಲೇಜಿನಲ್ಲಿದ್ದಾಗ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಇನ್ನು ಒಟ್ಟಾರೆ ಹೇಳಬೇಕೆಂದರೆ ಕನ್ನಡ ಚಿತ್ರೋದ್ಯಮ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ತೆರೆದುಕೊಳ್ಳಬೇಕಿದೆ.

ಕನ್ನಡದಲ್ಲಿ ಕಿರು ಚಿತ್ರಗಳಿಗೆ ಮೀಸಲಾದ ಮಾರುಕಟ್ಟೆಯಾಗಲೀ, ಕಿರು ಚಿತ್ರಗಳ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆ ಆಗಲಿ ಇನ್ನೂ ನಿರ್ಮಾಣವಾಗಿಲ್ಲ. ಮುಂದಿನ ದಿನಗಳಲ್ಲಷ್ಟೇ ಬಗೆಗೆ ಕೆಲಸ ನಡೆಯಬೇಕಿದೆ.



ನೀವೊಬ್ಬ ಮಹಿಳೆಯಾಗಿ ಚಿತ್ರ ನಿರ್ದೇಶನ, ಅಭಿನಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಿ. ಇಂದು ಚಿತ್ರರಂಗದಂತಹಾ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ತೊಡರುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಇಂತಹಾ ಅನುಭವವಾಗಿತ್ತೆ?
ವೈಯುಕ್ತಿಕವಾಗಿ ನನಗೆ ಅಂತಹಾ ಯಾವ ಅನುಭವವೂ ಆಗಿಲ್ಲ. ಆದರೆ ಸಮಸ್ಯೆ ಖಂಡಿತಾ ಇದೆ. ಅದು ಚಿತ್ರರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ.ೀಲ್ಲಾ ಕ್ಷೇತ್ರಗಳಲ್ಲಿಯೂ, ಮಹಿಳೆ ಯಾವ ಕ್ಷೇತ್ರದಲ್ಲಿದ್ದರೂ ಅಲ್ಲಿ ಸಮಸ್ಯೆಗಳನ್ನು ಎದುರಾಗಿಯೇ ಆಗುತ್ತವೆ. ಆದರೆ ನಾವು ಸಮಸ್ಯೆಗಳಿವೆ ಎಂದು ಕೊರಗುವುದಕ್ಕಿಂತಲೂ ಇಂದು ಮಹಿಳೆ ಸಮಸ್ಯೆಗಳನ್ನೆಲ್ಲವನ್ನೂ ಹಿಮ್ಮೆಟ್ಟಿ ಮುಂದುವರಿಯುತ್ತಿದ್ದಾಳೆ  ಎನ್ನುವುದರ ಕುರಿತಾಗಿ ಸಂತಸ ಪಡಬೇಕು.

ನಿಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡುವಿರಿ? ನಿಮ್ಮ ನೆಚ್ಚಿನ ಹವ್ಯಾಸವೇನು?
(ನಗುತ್ತಾ) ನಾನು ಬಿಡುವಿದ್ದಾಗ ಹೆಚ್ಚಾಗಿ ಅಡಿಗೆ ಕೆಲಸದಲ್ಲಿ ತೊಡಗುತ್ತೇನೆ. ವೈವಿದ್ಯಮಯ, ವಿಭಿನ್ನ ಖಾದ್ಯ ತಯಾರಿಸುವುದು, ಅದೇ ನನ್ನ ಹವ್ಯಾಸವೂ ಆಗಿದೆ.

ನಿಮ್ಮ ಭವಿಷ್ಯದ ಯೋಜನೆಗಳ ಕುರಿತು ತಿಳಿಸಿ
ಸಧ್ಯ ನನ್ನ ನಿರ್ದೇಶನದ "ಹರಿಕಥಾ ಪ್ರಸಂಗ" ಚಿತ್ರ ಸಿದ್ದವಾಗುತ್ತಿದೆ. ಇದು ನನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೂರ್ಣ ಪ್ರಮಾಣ್ದ ಮೊದಲ ಚಿತ್ರವಾಗಿದ್ದು ನನ್ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇನ್ನು ಭವಿಷ್ಯದಲ್ಲಿ ನನ್ನ ತಂದೆ ಗಿರೀಶ್ ಕಾಸರವಳ್ಳಿಯವರ ಹೆಸರಿನಲ್ಲಿ ಒಂದು ಟ್ರೈನಿಂಗ್ ಇನ್ಸ್ ಟಿಟ್ಯೂಟ್ ತೆರೆಯಬೇಕೆಂದಿದ್ದೇನೆ. ಅದು ನನ್ನ ಭವಿಷ್ಯದ ಮಹತ್ವದ ಯೋಜನೆಯೂ ಹೌದು.

ಅಂತಿಮವಾಗಿ ಹೇಳಬೇಕೆಂದರೆ, ಅನನ್ಯ ಮೂಲಕ ಕನ್ನದಕ್ಕೊಬ್ಬ ಪ್ರತಿಭಾವಂತ ನಿರ್ದೇಶಕಿ ಆಗಮನವಾಗಿದೆ. ತಂದೆ ಗಿರೀಶ್ ಅವರಂತೆಯೇ ಕನ್ನಡ ಚಿತ್ರರಂಗಕ್ಕೆ ಇವರಿಂದಲೂ ಸಾಕಷ್ಟು ಉತ್ತಮ ಹೆಸರು ಒದಗಿ ಬರಲಿ, ಅನನ್ಯ ಅವರ ಭವಿಷ್ಯದ ಕನಸಾದ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ಬೇಗನೇ ಸಾಕಾರವಾಗಲಿ ಎನ್ನುವುದು "ಗೃಹಶೋಭಾ" ಆಶಯ.

(ನನ್ನ ಈ ಲೇಖನವು ಹೆಸ್ರಾಂತ ಮಹಿಳಾ ಮಾಸಪತ್ರಿಕೆ "ಗೃಹಶೋಭಾ" ದ ಮೇ 2016 ರ ಸಂಚಿಕೆಯಲ್ಲಿ "ಗೋಲ್ಡನ್ ಗರ್ಲ್ಸ್" ವಿಶೇಷ ಮಾಲಿಕೆಯಲ್ಲಿ ಪ್ರಕಟಗೊಂಡಿತ್ತು. )

Wednesday, May 11, 2016

Karnataka’s Unique Danseuse – Nirmala Madhava

Establishing the splendor of Indian art and culture all over America, Canada, Dubai and other parts of the world, is the co-founder and chief choreographer of Pampa Dance Academy, Nirmala Madhava. She has lived in the USA for the last 25 years with her family. She is the chief choreographer in PAMPA Dance Academy and is responsible for teaching many children Indian classical dance and music. In addition, she has performed at AKKA and other international events over the years.


Recently, when she came to India to perform at  Sri. Bannanje Govindacharya’s 80th birthday celebrations, Grihashobha magazine requested an interview with her. She has shared many aspects of her childhood, her journey in the dance field and many other experiences. Here are the highlights.

*Please tell us about Pampa Dance Academy…..

Pampa Dance Academy was founded in San Jose in 1993 by Dr. Purna Prasad (Nirmala’s brother-in-law). I started working there as the chief choreographer and dance teacher. There are other professionals who teach music and mridanga. Dr. Purna Prasad teaches mridanga. My husband, Bindu Madhava, is the audio – video and visual effects expert. Our institution will complete its 25th year next year!


I went to Canada in 1991 to perform at various events. Pampa Dance Academy was started the year after. I came from Canada to work as both teacher and performer. Although this was a challenging task, I have been able to carry out my duties very ably. There are nearly 250 students at the Academy now. I have dance assistants as well. We teach both the practical and theoretical aspects of dance. We conduct exams also. We teach them about Hindu mythology, classical music, and culture by presenting it in story form. This helps them learn easily and with interest. A lot of students don’t know about Indian art and culture; that is why we give these topics a lot of importance. Thirty-seven students have already performed their solo debuts. We will be performing several productions next year. Every year, we have two big events. 

Nritya Vaibhava, our Vijayadashmi performance, is where all students perform. This is an event where only family and friends are invited to attend to see how much progress their student has achieved. This is essentially a class presentation, not a professional show. This performance is for Pampa students’ family. 

In April, we stage a grand performance, where we have customized music and choreography. We invite both local artists and artists from India to perform at this event. In addition to these two annual performances, we perform several fund raising events. We also perform at libraries, Indian senior citizen organizations and other non-profit organizations. In addition to these, we perform lecture demonstrations at local schools and colleges; we conduct workshops, including yoga workshops. Yoga is the foundation of all Indian classical dances; which is why we give yoga a lot of importance at our Academy. We also give our students a working knowledge of both Carnatic and Hindustani music because this is vital to Indian dance.

Pampa Dance Academy has grown into a very large institution. On Sep 25, 2015, Indian Prime Minister, Hon. Narendra Modi had visited the Bay Area. Our Academy had been invited to perform for ten minutes in the cultural program to welcome him. There were nearly twenty thousand people in the audience. This was a huge opportunity for us! 

We have performed for RSS and other organizations. Recently, Swamiji from Puttige Matha (Udupi), has installed the Krishna Vrundavana temple in San Jose. On Nov. 14, 2015, we performed a grand fundraising event, Bhakti.

*Please tell us about your childhood and the event that started your journey into dance.......


I have lived and grown up in Gandhi Bazar in Bangalore. I studied at Gokulam Gardens School. One day, after school, when I was sitting outside my house, waiting for a friend (which friend, I have now forgotten), I heard the sound of a rhythmic beat coming out of a nearby garage. I went to investigate out of curiosity and found a number of children dancing there. Even though I didn’t know what kind of dance it was, I came home and told my mother that I wanted to learn. My mother enrolled me at that dance school.

I started my dance journey with my first guru, late Smt. Lalita Dorai. I went on to obtain a B.A. in dance from Bangalore University. During my bachelor’s degree, I was exposed to various forms of dance and dancers and teachers. I got the opportunity to learn about the amazing diversity of dance. During my teenage years, I joined Prabhat Kalavidaru. Here I worked for over fifteen years and learnt and performed many different choreographies. I also learnt Kathak from late Dr. Maya Rao. I am now proficient in both Bharata Natya and Kathak. When I was about to become a professional dancer and start performing solo dance performances, in 1991, I got the opportunity to come to Canada. After staying there for a year, I moved to America, where I have been for the last 25 years.

*You have worked with the internationally acclaimed choreographer, Lawrence Peck. Please tell us your experience with him.......

One morning while checking my email, I noticed there was one labeled “San Francisco Opera House”. When I read the mail, I found out that they were searching for dancers. I knew this was a great opportunity for me and without hesitation, I replied, “Yes, I am coming!” Lawrence Peck is the chief choreographer of the San Francisco Opera. He asked me whether I would perform at the Opera House. I agreed readily. They arranged my performance (12 shows) in an auditorium that seats nearly 2000 people. During the time I worked with him, I learnt many things such as the importance of body language on stage, the importance of costume, jewelry and dialogue delivery etc. He taught me everything in great detail.

*You have come to Bangalore to perform for Sri. Bannanje’s birthday celebration. Please tell us how you met him......

In 1982, when the movie, Madhvacharya, was made, I first heard of him. I was with Prabhat Kalavidaru then. My brother-in-law, Dr. Purna Prasad, acted as Madhvacharya. He talked to me at length about Sri. Bannanje. Unfortunately, I didn’t get to meet him. After I came to America, some of my friends had talked about his lectures. I got the opportunity of attending his lectures and met him. Over the years, the bond between us has strengthened. He has been coming to our area for the last two years to speak about Vedanta etc. 





Last year he invited me to perform at his 80th birthday celebration. I accepted immediately. In the 45 minutes, that I was given, I performed “Guru Namana”, including in my performance his composition on Narasimha. It has been an honor and privilege to perform for Guruji, his students and well -wishers.
I have performed all over Canada and the U.S.

*Please tell us about your performance here in India and how it was received......

In 25 years, you can call this my first performance in India! Some years ago, I had performed at a school in Bangalore. However, the audience was limited only the school students and their families. Guru Namana was my first performance in a large auditorium in front of such a large audience. Despite many offers, I was unable to travel here to perform. But for my first major performance here I have been lucky to obtain an interview with a major magazine!

*How does your husband, Bindu Madhava, help and support you? Please tell us a little about him......

We got married after I moved to America in 1994. He is not just my husband, but my best friend too. We met when I joined Prabhat Kalavidaru. We performed in many shows together. At that time in my community, dance was not considered a respectable profession for girls. They were very much against it. My mother, however, was always very supportive of me. In the same way, my husband has been very encouraging and supportive of my efforts in dance. We have collaborated on all my performances. He is my backbone. He helps in all of my performances. All the lighting and audio for my performances are his work. All of his family lives in the U.S. and are very supportive of me. We all work as one team. All in all, I’m very lucky!

*What is your opinion of today’s different dance styles?

There are many different styles nowadays, both classical and non classical. There is an audience for every type of dance. I don’t like to criticize any style of dance. Indian dance is celebrated and revered all over the world today. This is what I teach my students as well.

*What are your futures plans?

We have to prepare and practice for our regular performances in the U.S. I am also planning on some international performances. In addition, I am planning a gala celebration of PAMPA’s 25th anniversary.

*How do you spend your free time?

I like to cook and garden in my free time. I go hiking with some of my friends. I also go to the gym to exercise and do yoga. Keeping the body strong is vital for a dancer. Exercise is very important to maintain the strength and muscles in the body. I also watch movies sometimes. Mainly, I like to stay home and cook.

*What advice do you have for the youth and future generations of artistes?

For anyone to be acclaimed as a consummate dancer, just attending a dance school is not enough. You have to understand the material and absorb it. When you discuss whatever your teacher has taught, new topics will emerge from those discussions. You have to learn classical music in detail, both practically and theoretically. You also need to have a strong knowledge of taala (rhythm) and Indian literary classics and mythology. Dance is not merely body movement. There is much more depth to it. If you understand all these things in detail, your dancing will have more depth and feeling to it. If an artiste can do all this, they will definitely become successful.

*Have you received offers to choreograph for Hollywood or Bollywood?

I have received a few but have rejected them. I don’t have any interest or expertise in that field. I find that I can choreograph what seems realistic to me. The kind of satisfaction that I get from my stage performances, I don’t get from film dance choreography. It is not something that I will consider seriously.


(This is the translated version of my article which is published in Grihashobha Kannada magazine (April 2016 issue) about Karnataka’s Unique Danseuse Nirmala Madhava.Translated by Vandana Tirumale.)