Monday, April 18, 2016

ಕನ್ನಡ ನಾಡಿನ ಅಪೂರ್ವ ನೃತ್ಯ ಪ್ರತಿಭೆ - ನಿರ್ಮಲಾ ಮಾಧವ



ಕನ್ನಡ ನಾಡಿನಲ್ಲಿ ಹುಟ್ಟಿ ಕೆನಡಾ, ಅಮೆರಿಕಾ, ದುಬೈ ಸೇರಿದಂತೆ ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯ ಕಂಪನ್ನು ಹರಡುತ್ತಿರುವವರು ಪಂಪಾ ಡ್ಯಾನ್ಸ್ ಅಕಾಡಮಿಯ ಸಹಯೋಗಿ, ಕೊರಿಯೋಗ್ರಾಫರ್, ನಿರ್ಮಲಾ ಮಾಧವ. ಕಳೆದ ೨೫ ವರ್ಷಗಳಿಂದಲೂ ಅಮೆರಿಕಾದಲ್ಲಿ ತನ್ನ ಕುಟುಂಬದವರೊಡನೆ ನೆಲೆಸಿದ್ದಾರೆ.  ಇವರು ಪಂಪಾ ಡ್ಯಾನ್ಸ್ ಅಕಾಡಮಿ ಸಂಸ್ಥೆಯ ಮುಖೇನ ಇದುವರೆಗೂ ನೂರಾರು ಮಕ್ಕಳಿಗೆ ಭಾರತೀಯ ಸಂಗೀತ ಹಾಗೂ ನೃತ್ಯ ತರಬೇತಿಯನ್ನು ನೀಡುತ್ತಿರುವರು. ಅಲ್ಲದೆ ತಾವೂ ಸಹ "ಅಕ್ಕ" ಸಮ್ಮೇಳನ ಸೇರಿದಂತೆ ಸಾಕಷ್ಟು ಸಂಖ್ಯೆಯ ಅಂತರಾಷ್ಟ್ರೀಯ ನೃತ್ಯ ಸಮ್ಮೇಳನಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.


ಇತ್ತೀಚೆಗೆ ನಡೆದ "ಬನ್ನಂಜೆ ೮೦ರ ಸಂಭ್ರಮ" ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಿರ್ಮಲಾರವರನ್ನು ನಿಮ್ಮ "ಗೃಹಶೋಭಾ" ಪತ್ರಿಕೆಯು ಮಾತಿಗೆ ಆಹ್ವಾನಿಸಿದಾಗ ತಮ್ಮ ಬಾಲ್ಯ, ವೃತ್ತಿ ಬದುಕು ಸೇರಿದಂತೆ ಜೀವನದ ಅನುಭವದ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಸಂದರ್ಶನದ ಮುಂಖ್ಯಂಶವು ಮುಂದಿನಂತಿದೆ-

ಪ್ರ: ಪಂಪಾ ಡ್ಯಾನ್ಸ್ ಅಕಾಡಮಿ ಬಗ್ಗೆ ಹೇಳಿ..
ಪಂಪಾ ಡ್ಯಾನ್ಸ್ ಅಕಾಡಮಿ ೧೯೯೨ ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾಲುಸೆ ಎನ್ನುವಲ್ಲಿ ಡಾ.ಪೂರ್ಣ ಪ್ರಸಾದ್ (ನಿರ್ಮಲಾವರ ಪ್ತಿಯ ಸಹೋದರ) ಅವರಿಂದ ಪ್ರಾರಂಭಿಸಲ್ಪಟ್ಟಿತು. ಅದಾಗ ನಾನು ಕೂಡ ಅದರಲ್ಲಿ ತೊಡಗಿಸಿಕೊಂಡು ನೃತ್ಯ ತರಬೇತಿ ನೀಡಲು ಪ್ರಾರಂಭಿಸಿದೆ. ಇನ್ನು ಸಂಗೀತ, ಮೃದಂಗ ಮೊದಲಾದವನ್ನು ಕಲಿಸಲು ಬೇರೆ ಬೇರೆ ನುರಿತ ತರಬೇತುದಾರರಿದ್ದಾರೆ. ಸ್ವತಃ ಪೂರ್ಣ ಪ್ರಸಾದ್ ತಾವು ಮೃದಂಗವನ್ನು ಕಲಿಸುತ್ತಾರೆ. ನನ್ನ ಪತಿ ಬಿಂದು ಮಾದವ, ಆಡಿಯೋ-ವೀಡಿಯೋ ವಿಷುವಲ್ ಎಫೆಕ್ಟ್ಸ್ ನಲ್ಲಿ ಎಕ್ಸ್ ಪರ್ಟ್. ಹೀಗೆ ನಾವು ಪ್ರಾರಂಭಿಸಿದ ಸಂಸ್ಥೆ ಇದೇ ಮುಂದಿನ ವರ್ಷ ೨೫ ವ್ರ್ಷಗಳನ್ನು ಪೂರೈಸುತ್ತಿದೆ. ನಾನು ೧೯೯೧ ನಲ್ಲಿ ಕೆನಡಾದಲ್ಲಿ ನೃತ್ಯ ಕಾರ್ಯಕ್ರಮಗಳಿಗಾಗಿ ತೆರಳಿದ್ದೆ. ಅದೇ ನಂತರದ ವರ್ಷ <ಪಾ ಡ್ಯಾನ್ಸ್ ಅಕಾಡಮಿ ಪ್ರಾರಂಭವಾಯಿತು. ಕೆನಡಾದಿಂದ ಅಮೆರಿಕಾಗೆ ಬಂದ ನಾನು ಇನ್ಸ್ಟಿ ಟ್ಯೂಟ್ ನಲ್ಲಿ ಟೀಚ್ರ್ಫ್ ಕಂ ಪರ್ಫಾರ್ಮರ್ ಆಗಿದ್ದೇನೆ. ಎರ್ಡೂ ಕೆಲಸ ಏಕಕಾಲದಲ್ಲಿ ನಡೆಸಿಕೊಂಡು ಹೋಗುವುದು ಸ್ವಲ್ಪ ಕಷ್ಟ್ವಾದರೂ ನಾನದನ್ನು ನಿಭಾಯಿಸುತ್ತಿದ್ದೇನೆ. ಸ್ಕೂಲಿನಲ್ಲಿ ಸುಮಾರು ೧೫೦ ಜನ ವಿದ್ಯಾರ್ಥಿಗಳಿದ್ದಾರೆ. ಜತೆಗೆ ಅಸಿಸ್ಟೆಂಟ್ ಗಳೂ. ನಾವು ಥಿಯರಿ ಹಾಗೂ ಪ್ರ್ಯಾಕ್ಟಿಕಲ್ ಎರಡೂ ಬಗೆಯಲ್ಲಿ ನೃತ್ಯವನ್ನು ಹೇಳಿಕೊಡುತ್ತೇವೆ, ವಿದ್ಯಾರ್ಥಿಗಳಿಗೆ ಎಕ್ಸಾಮ್ಸ್ ಗಳನ್ನೂ ಕಂಡಕ್ಟ್ ಮಾಡುತ್ತೇವೆ.
ಹಿಂದೂ ಮಿಥಾಲಜಿ, ಇಂಡಿಯನ್ ಕಲ್ಚರ್ ಕುರಿತಂತೆ, ಸಂಗೀತದ ಪ್ರಾಮುಖ್ಯತೆ ಕುರಿತಂತೆ ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಮನದಟ್ಟು ಮಾಡಿಸಲಾಗುತ್ತದೆ. ಅಲ್ಲಿನ ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ ಕುರಿತಂತೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಹೀಗಾಗಿ ನಾವು ನಮ್ಮ ಪಠ್ಯದಲ್ಲಿ ಇದಕ್ಕೆ ಪ್ರಾಮುಖ್ಯತೆ ನೀಡಿದ್ದೇವೆ.

ಇದಾಗಲೇ ನಮ್ಮ ೩೭ ವಿದ್ಯಾರ್ಥಿಗಳು ಸೋಲೋ ಅರ್ರಂಗೇಟ್ರಂ ಮಾಡಿದ್ದಾರೆ. ಮುಂದಿನ ವರ್ಷ ಕೂದಾ ಇನ್ನಷ್ಟು ಕಾರ್ಯಕ್ರಗಳನ್ನು ನಡೆಸುತ್ತೇವೆ, ವರ್ಷದಲ್ಲಿ ಎರ್ಡು ದೊಡ್ಡ ಪ್ರಮಾಣದ ಕಾರ್ಯಕ್ರಮ (ಬಿಗ್ ಇವೆಂಟ್) ನಡೆಸುತ್ತೇವೆ. ವಿಜಯದಶಮಿಯ ಸಮಯದಲ್ಲಿ "ನೃತ್ಯ ವೈಭವ" ಎನ್ನುವ ವಾರ್ಷಿಕ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳ ಪೋಷಕರಿಗೂ ಆಹ್ವಾನ ನೀಡುತ್ತೇವೆ. ಇದರಿಂದ ಅವರಿಗೆ ತಮ್ಮ ಮಕ್ಕಳು ಎಷ್ಟು ಮಟ್ಟಿಗೆ ಅಭ್ಯಾಸ ನಡೆಸಿದ್ದಾರೆ ಎನ್ನುವುದರ ಅರಿವು ಮೂಡುತ್ತದೆ. ಇದು ಕೇವಲ ಕ್ಲಾಸ್ ಪ್ರೆಸೆಂಟೇಷನ್ ಮಾತ್ರವೇ ಹೊರತು, ಪರ್ಫಾರ್ಮೆನ್ಸ್ಫ್ ತೋರಿಸುವುದಲ್ಲ. ಇಲ್ಲಿ ಸಾರ್ವಜನಿಕರೆದುರು ಕಾರ್ಯಕ್ರಮ ಆಯೋಜಿತವಾಗುವುದಿಲ್ಲ. ಕೇವಲ ಪೋಷಕರಿಗೆ, ಮಿತ್ರರಿಗೆ ಮಾತ್ರವೇ ಪ್ರದರ್ಶನ ಏರ್ಪಟ್ಟಿರುತ್ತದೆ.
೨೫ ವರ್ಷಗಳಿಂದಲೂ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಇನ್ನು ಏಪ್ರಿಲ್ ನಲ್ಲಿ ನಾವೇ ಮ್ಯೂಸಿಕ್ ಪ್ರೊಗ್ರಾಂ ನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತೇವೆ. ನಾವೇ ಮ್ಯೂಸಿಕ್ ಕಂಪೋಸ್ ಮಾಡುವುದಲ್ಲದೆ ಅಲ್ಲಿನ ದೊಡ್ಡ ಒಡ್ಡ ಲೋಕಲ್ ಆರ್ಟಿಸ್ಟ್ ಗಳನ್ನು ಕರೆಸಿ ಕಾರ್ಯಕ್ರಮ ಆಯೋಜಿಸುತ್ತೇವೆ. ಕೆಲವೊಮ್ಮೆ ಭಾರ್ತದಿಂದಲೂ, ಕಾರ್ಯಕ್ರಮಕ್ಕಾಗಿ ಮಹತ್ವದ ಸಂಗೀತಗಾರರು, ನೃತ್ಯ ಕಲಾವಿದರನ್ನು ಆಹ್ವಾನಿಸುತ್ತೇವೆ.
ಎರ್ಡು ದೊಡ್ಡ ಕಾರ್ಯಕ್ರಮಗಳಲ್ಲದೆಯೂ ಇನ್ನೂ ಕೆಲವು ಫಂಡ್ ರೈಸಿಂಗ್ ಕಾರ್ಯಕ್ರಮಗಳು ಮಾಡುತ್ತೇವೆ. ಲೈಬ್ರರೀಸ್ ಗಳಲ್ಲಿ ಪ್ರೊಗ್ರಾಮ್ ನೀಡುತ್ತೇವೆ. ಅಲ್ಲಿಗೆ ಭೇಟಿ ನೀಡುವ ಭಾರ್ತೀಯ ಹಿರಿಯ ನಾಗರಿಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಇದೆಲ್ಲವೂ ನಾನ್ ಫ್ರಾಫಿಟ್ ಕಾರ್ಯಕ್ರಮಗಳಾಗಿರುತ್ತವೆ. ಇಷ್ಟಲ್ಲದೆ ಶಾಲೆಗಳಿಗೆ ತೆರಳಿ ಲಕ್ಚರ್ ಡೆಮಾನ್ಸ್ಟ್ರೇಷನ್ ನೀಡುತ್ತೇವೆ. ವರ್ಕ್ ಶಾಪ್ ಮಾಡುತ್ತೇವೆ. ಯೋಗ ವರ್ಕ್ ಶಾಪ್ ನ್ನು ಸಹ ನಡೆಸುತ್ತೇವೆ. ಯಾವುದೇ ಭಾರ್ತೀಯ ನೃತ್ಯ ಶೈಲಿಗೆ ಯೋಗವು ಬುನಾದಿಯಾಗಿದೆ. ಹೀಗಾಗಿ ನಮ್ಮಲ್ಲಿ ಯೋಗಕ್ಕೂ ಬಹಳ ಮಹತ್ವ ನೀಡುತ್ತೇವೆ. ಜತೆಗೆ ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತಗಳ ಕುರಿತಂತೆ ಕಲಿಸುತ್ತೇವೆ. ನೃತ್ಯಕ್ಕೆ ಹಿನ್ನೆಲೆಯಾಗಿ ಸಂಗೀತದ ಅವಷ್ಯಕತೆ ಇದ್ದ ಕಾರಣ ಇದೂ ಅಗತ್ಯವಾಗಿದೆ.
ಒಟ್ತಾರೆ ಪಂಪಾ ಡ್ಯಾನ್ಸ್ಫ್ ಅಕಾದಮಿ ಒಂದು ದೊಡ್ದ ಸಂಸ್ಥೆಯಾಗಿ ಇಂದು ಬೆಳೆದಿದೆ. ಸಪ್ಟೆಂಬರ್ ೨೯ಕ್ಕೆ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ್ದ ಸಮಯದಲ್ಲಿ ಅವರ ಸ್ವಾಗತಕ್ಕೆ ನಮ್ಮ ಕಾರ್ಯಕ್ರಮ ಆಯೋಜಿತವಾಗಿತ್ತು. ಹತ್ತು ನಿಮಿಷದ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತು ಸಾವಿರ ಮಂದಿ ಸೇರಿದ್ದರು. ಅದೊಂದು ದೊಡ್ಡ ಅವಕಾಶ! ಆರ್ ಎಸ್ ಎಸ್ ಗಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಇತ್ತೀಚೆಗೆ ಉಡುಪಿ ಪುತ್ತಿಗೆ ಮಠದ ಸ್ವಾಮಿಗಳು ಅಮೆರಿಕಾಗೆ ತೆರಳಿ ಅಲ್ಲಿ ಶ್ರೀಕೃಷ್ಣ ವೃಂದಾವನ ದೇವಾಲಯ ನಿರ್ಮಿಸಿದ್ದಾರೆ. ನವೆಂಬರ್ ೧೪ ರಂದು ಅದಕ್ಕಾಗಿ "ಭಕ್ತಿ" ಎನ್ನುವ ವಿಶೇಷ ಕಾರ್ಯಕ್ರಮ ನಮ್ಮ ಕಡೆಯಿಂದ ನಡೆಸಿಕೊಟ್ಟಿದ್ದೇವೆ.
ಪ್ರ ನಿಮ್ಮ ಬಾಲ್ಯ ಹಾಗೂ ನೀವು ನೃತ್ಯದ ಕಡೆಗೆ ಸೆಳೆಯಲ್ಪಟ್ಟ ಸನ್ನಿವೇಶದ ಕುರಿತಂತೆ ತಿಳಿಸಿಕೊಡಿ.
ನಾನು ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ. ಇಲ್ಲಿನ ಗೋಕುಲಂ ಗಾರ್ಡನ್ ಸ್ಕೂಲ್ ನಲ್ಲಿ ನಾನು ಓದಿದ್ದೆ. ಅಂದಿನ ದಿನಗಳಲ್ಲಿ ಒಮ್ಮೆ ಸ್ಕೂಲ್ ಬಿಟ್ಟಾಗ ಅಲ್ಲಿನ ಕಟ್ಟೆ ಮೇಲೆ ಕುಳಿತು ಒಬ್ಬ ಸ್ನೇಹಿತರಿಗಾಗಿ ಕಾಯುತ್ತಿದ್ದೆ. ಅದಾರಿಗಾಗಿ
ನಾನು ಕಾಯುತ್ತಿದ್ದೆ, ಅದು ಈಗ ನೆನಪಿಲ್ಲ. ಅಲ್ಲೇ ಹತ್ತಿರದಲ್ಲೊಂದು ಸಣ್ಣ ಗರಾಜ್ ಇತ್ತು. ಅಲ್ಲಿಂದ ಒಂದು ಬಗೆಯ ರಿದಂ ಪ್ಯಾಟರ್ನ್ ಶಬ್ದ ಕೇಳುತ್ತಿತ್ತು. ಕುತೂಹಲದಿಂದ ಒಳಗೆ ಹೋಗಿ ನೋಡಿದಾಗ ಒಂದಷ್ಟು ಜನ ಡ್ಯಾನ್ಸ್ ಮಾಡುತ್ತಿದ್ದರು. ಅದೇನು ಡ್ಯಾನ್ಸ್ ಎನ್ನುವುದೂ ನನಗಾಗ ತಿಳಿದಿರಲಿಲ್ಲ. ಮನೆಗೆ ಬಂದು ಅಮ್ಮನಿಗೆ ನಾನೂ ಡ್ಯಾನ್ಸ್ ಕಲಿಯಬೇಕೆಂದಿದ್ದೇನೆ ಎಂದಾಗ ಅಮ್ಮ ನನ್ನನ್ನು ಅಲ್ಲಿಗೆ ಸೇರಿಸಿದರು.


ನನ್ನ ಮೊದಲ ಗುರುಗಳು ಲಲಿತಾ  ದೊರೈ, ಅವರಿಂದ ನನ್ನ ನೃತ್ಯಾಭ್ಯಾಸ ಮೊದಲಾಯಿತು. ಮುಂದೆ ಇದೇ ನೃತ್ಯ ವಿಷಯದಲ್ಲಿಯೇ ಬೆಂಗಳೂರು ವಿಶ್ವವಿದ್ಯಾನಿಲಯದೈಂದ ಬ್ಯಾಚುಲರ್ ಡಿಗ್ರೀ ಪಡೆದುಕೊಂಡೆ. ಅಲ್ಲಿ ನನಗೆ ಎಲ್ಲಾ ವಿವಿಧ ಪ್ರಕಾರದ ನೃತ್ಯದ ಪರಿಚಯವಾಗಿತ್ತು. ಬೇರೆ ಬೇರೆ ಗುರುಗಳು, ಪ್ರಾಚಾರ್ಯರು ನನಗಾಗ ದೊರಕಿದರು. ಇದರ ಪರಿಣಾಮ ನನಗೆ ಡ್ಯಾನ್ಸ್ ಬಗ್ಗೆದರ ವೈವಿದ್ಯತೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅವಕಾಶವಾಯಿತು. ಇದಾದ ಬಳಿಕ ನಾನು ಪ್ರಭಾತ್ ಕಲಾವಿದರ ಬಳಗಕ್ಕೆ ಸೇರಿಕೊಂಡೆ. ಅಲ್ಲಿ ಸುಮಾರು ಹದಿನೈದು ವರ್ಷ ಕೆಲಸ ಮಾಡಿದೆ. ಹಲವಾರು ಬಗೆಯ ಕೊರಿಯೋಗ್ರಫಿ, ಪರ್ಫಾರ್ಮೆನ್ಸ್ ಮಾಡಿದ್ದೆ. ಇದರ ಮಧ್ಯದಲ್ಲಿ ಡಾ. ಮಾಯಾ ರಾವ್ ಅವರ ಬಳಿ ಕಥಕ್ ಅಭ್ಯಾಸ ಮಾಡಿದೆ. ಹೀಗಾಗಿ ನನಗೀಗ ಭರತನಾಟ್ಯ ಹಾಗೂ ಕಥಕ್ ಎರಡೂ ನೃತ್ಯ ಪ್ರಕಾರಗಳು ಸಿದ್ದಿಸಿದೆ.
ಹೀಗೆ ನಾನಿನ್ನೇನು ಪರಿಪೂರ್ಣ್ ಪ್ರಮಾಣದ ಕಲಾವಿದೆಯಾಗಿ ಸ್ಟೇಜ್ ಪರ್ಫಾರ್ಮೆನ್ಸ್ ನೀಡಬೇಕೆನ್ನುವಷ್ಟ್ರಲ್ಲಿ ೧೯೯೧ರಲ್ಲಿ ನನಗೆ ಕೆನಡಾಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಒಂದು ವರ್ಷಗಳ ಕಾಲ ಇದ್ದು ಅಲ್ಲಿಂದ ಅಮೆರಿಕಾಗೆ ತೆರಳಿದೆ. ಅಲ್ಲಿಂದ ಇಪ್ಪತ್ತೈದು ವರ್ಷ ಅಮೆರಿಕಾದಲ್ಲಿಯೇ ನೆಲೆಸಿದ್ದೇನೆ.
ಪ್ರ ನೀವು ಅಂತರಾಷ್ಟ್ರೀಯ ಖ್ಯಾತಿಯ ಕೊರಿಯೋಗ್ರಾಫರ್ ಲಾರೆನ್ಸ್ ಪೆಕ್ ಕ್ ಅವರೊಂದಿಗೆ ಕೆಲಸ ಮಾಡಿದ್ದಿರಿ. ಅವರ್ ಜತೆಗಿನ ನಿಮ್ಮ ಅನುಭವ ಹೇಗಿತ್ತು?

ಒಂದು ದಿನ ಮೇಲ್ ಚೆಕ್ ಮಾಡುತ್ತಿರಬೇಕಾದರೆ, ಸಬ್ಜೆಕ್ಟ್ ನಲ್ಲಿ "ನ್ಯಾನ್ ಫ್ರಾನ್ಸಿಸ್ಕೋ ಆಪ್ರಾ ಹೌಸ್" ಎಂದಿದ್ದುದನ್ನು ತೆರೆದು ಓದಿದಾಗ ಅವರು ಡ್ಯಾನ್ಸರ್ ಗಳಿಗಾಗಿ ಹುಡುಕಾಟದಲ್ಲಿರುವ ವಿಚಾರ ತಿಳಿಯಿತು. ನನ್ನ ಪಾಲಿಗದು ಗ್ರೇಟ್ ಅಪಾರ್ಚುನಿಟಿ ಆಗಿತ್ತು. ನಾನು ಹಿಂದು ಮುಂದು ನೋಡಲಿಲ್ಲ. ಯಸ್, ಆಮ್ ಕಮಿಂಗ್ ಎಂದು ರಿಪ್ಲೇ ಕಳಿಸಿದ್ದೆ. ಲಾರೆನ್ಸ್ ಪೆಕ್ ಸಂಸ್ಥೆಯ ಮೈನ್ ಕೊರಿಯೋಗ್ರಾಫರ್. ಅವರು ನನ್ನನ್ನು ಕರೆದು "ಇಲ್ಲಿ ಬಂದು ಪರ್ಫಾರ್ನೆನ್ಸ್ ಮಾಡ್ತೀರಾ?" ಕೇಳಿದರು. ನನಗೂ ಇಷ್ಟವಾಗಿತ್ತು.  ನಾನು ಒಪ್ಪಿದೆ. ಅಲ್ಲಿ ಸುಮಾರು ಹನ್ನೆರಡು ಷೋ ನಡೆದಿತ್ತು. ಸುಮಾರು ಎರಡರಿಂದ ಮೂರು ಸಾವಿರ ಜನ ಕುಳಿತುಕೊಳ್ಳಬಹುದಾದ ಆಡಿಟೋರಿಯಂ ನಲ್ಲಿ ನನ್ನ ಪರ್ಫಾರ್ಮೆನ್ಸ್ ಏರ್ಪಾಟಾಗುತ್ತಿತ್ತು. ನಾನಲ್ಲಿದ್ದಷ್ಟು ದಿನವೂ ಬಹಳ ವಿಚಾರಗಳಾನ್ನು ಕಲಿತುಕೊಂಡೆ. ಸ್ಟೇಜ್ ಮೇಲೆ ನಮ್ಮ ಬಾಡಿ ಲಾಂಗ್ವೇಜ್ ಹೇಗಿರಬೇಕು, ಕಾಸ್ಟ್ಯೂಮ್, ಜುವೆಲ್ಲರಿ, ಪ್ರತಿಯೊಂದೂ ಎಷ್ಟು ಮುಖ್ಯ, ಡೈಲಾಗ್ ಡೆಲಿವರಿ ಹೇಗಿರಬೇಕು, ಹೀಗೆ ಪ್ರತಿಯೊಂದು ವಿಚಾರಗಳನ್ನೂ ಬಹಳ ವಿವರವಾಗಿ ತಿಳಿಸಿಕೊಟ್ಟರು.
ಪ್ರ ನೀವು ಬನ್ನಂಜೆಯವರ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕಾಗಿ ಬೆಂಗಳೂರಿಗೆ ಬಂದಿದ್ದೀರಿ. ನಿಮಗೆ ಅವರ ಪರಿಚಯ ಹೇಗಾಯಿತು?


ಅವರ ಹೆಸರು ನನಗೆ ತಲುಪಿದ್ದು ೧೯೮೭ ನಲ್ಲಿ ಅಯ್ಯರ್ ಅವರು "ಮದ್ವಾಚಾರ್ಯ"" ಮೂವಿ ಮಾಡಿದ್ದ ಸಮಯ. ನನ್ನ ಪತಿಯ ಅಣ್ಣನವರೇ ಮದ್ವಾಚಾರ್ಯ ಪಾತ್ರ ಮಾಡಿದ್ದರು. ಅದಾಗ ನಾನು ಪ್ರಭಾತ್ ಕಲಾವಿದರ ಸಂಘದಲ್ಲಿದ್ದೆಝೀಗಾಗಿ ನನ್ನೊಂದಿಗೆ ಅವರು ಬನ್ನಂಜೆ ಅವರ ಕುರಿತಂತೆ ಮಾತಾಡಿದ್ದರು. ಆದರೆ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ. ನಂತರ ನಾನು ಅಮೆರಿಕಾಗೆ ತೆರಳಿದೆ. ಅಲ್ಲಿಯೂ ಕೆಲ ಜನ ಸ್ನೇಹಿತರು ಬನ್ನಂಜೆಯವರು ಅಮೆರಿಕಾದಲ್ಲಿ ನಡೆಸಿಕೊಡುತ್ತಿದ್ದ ಪ್ರವಚನಕ್ಕೆ ಬರುವಂತೆ ಕರೆಯುತ್ತಿದ್ದರು. ಅದೊಮ್ಮೆ ನಾನೂ ಪ್ರವಚನಕ್ಕೆ ತೆರಳಿದೆ. ಅವರನ್ನು ಭೇಟಿಯಾಗಿದ್ದು, ಮಾತನಾಡಿಸಿಸ್ದೆ. ಹಾಗೇ ನನ್ನ-ಬನ್ನಂಜೆ ಗುರುಗಳ ನಡುವೆ ಆತ್ಮೀಯತೆ ಬೆಳೆಯುತ್ತಾ ಬಂದಿತುಇದೀಗ ಎರ್ಡು ವರ್ಷಗಳಿಂದ ಅವರು ಪ್ರವಚನಕ್ಕಾಗಿ ಪ್ರತಿ ವರ್ಷವೂ ನಮ್ಮಲ್ಲಿಗೆ ಬರುತ್ತಿದ್ದಾರೆ ಹೀಗೆ ನನ್ನ ಅವರ ಪರಿಚಯವಾಗಿತ್ತು.
ಕಳೆದ ಬಾರಿ ಬಂದಾಗ ಅವರೇನನ್ನ ೮೦ನೇ ಜನ್ಮದಿನವನ್ನು ಬೆಂಗಳೂರಿನಲ್ಲಿ ಆಚರಿಸುತ್ತಿದ್ದಾರೆ. ನೀನು ಬರಬೇಕು” ಎಂದು ಕರೆದಾಗ ಗುರುಗಳ ಕರೆಗೆ ಸ್ಪಂದಿಸಿ ಬಂದೆ. ಕಾರ್ಯಕ್ರಮದಲ್ಲಿ ನನಗೆ ಸಿಕ್ಕಿದ ೪೫ ನಿಮಿಷಗಳ ಅವಧಿಯಲ್ಲಿ ನನ್ನ "ಗುರು ನಮನ" ಹೆಸರಿನ ಪರ್ಫಾರ್ಮೆನ್ಸ್ಫ್ ನೀಡಿದೆ. ಅವರೇ ರಚಿಸಿದ ನೃಸಿಂಹ ಸ್ತುತಿಗೆ ನೃತ್ಯ ರೂಪ ನೀಡಿ ಅವರ ಹಾಗೂ ಅವರ ಅಪಾರ ಸಂಖ್ಯೆಯ ಶಿಷ್ಯರೂ, ಅಭಿಮಾನಿಗಳ ಎದುರಿಗೆ ಪರ್ಫಾರ್ಮೆನ್ಸ್ ನೀಡಲು ಸಿಕ್ಕಿದ ಅವಕಾಶ ನನ್ನ ಅದೃಷ್ಟ ಎನ್ನಬೇಕು.
ಪ್ರ ನೀವು ಕೆನಡಾ, ಯುಎಸ್ ಗಳಲ್ಲಿ ಸಾಕಷ್ಟು ಪ್ರದರ್ಶನ ಕೊಟ್ಟಿದ್ದೀರಿ. ಆದರೆ, ನೀವು ಭಾರತದಲ್ಲಿ ಇಷ್ಟರವರೆಗೆ ಯಾವ ಬಗೆಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದೀರಿ? ಇಲ್ಲಿನ ಜನರಿಂದ ನಿಮ್ಮ ಪ್ರದರ್ಶನದ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯೆಗಳು ಬಂದಿವೆ?

ಹಾಗೆ ನೋಡಲು ಹೋದರೆ ಕಳೆದ ೨೫ ವರ್ಷಗಳಲ್ಲಿ ಇದು (ಬನ್ನಂಜೆ ೮೦ರ ಸಂಭ್ರಮ ಕಾರ್ಯಕ್ರಮದಲ್ಲಿ ನೀಡಿದ ಪ್ರದರ್ಶನ)ನನ್ನ ದೇಶದಲ್ಲಿ ನನ್ನ ಮೊದಲ ಪರ್ಫಾರ್ಮೆನ್ಸ್.ಿನ್ನು ಕೆಲವು ವರ್ಷಗಳ ಕೆಳಗೆ ಒಂದು ಶಾಲೆಯಲ್ಲಿ ಕಾರ್ಯಕ್ರಮ ನಡೆಸಿಸ್ಕೊಟ್ಟಿದ್ದೆ. ಆದರೆ ಅದು ಕೇವಲ ಶಾಲಾ ಮಟ್ಟದಲ್ಲಿತ್ತೇ ಹೊರತು ಸಾರ್ವಜನಿಕ ಕಾರ್ಯಕ್ರಮವಾಗಿರಲಿಲ್ಲ. ಆದರೆ ದೊಡ್ಡ ಆಡಿಟೋರಿಯಂ ನಲ್ಲಿ, ಇಷ್ಟು ಜನಗಳ ಮುಂದೆ ಇದೇ ನನ್ನ ಫಸ್ಟ್ ಪ್ರೊಗ್ರಾಂ, "ಗುರು ನಮನ" ಬನ್ನಂಜೆ ಗುರುಗಳ ಕಾರ್ಯಕ್ರಮ. ಎಷ್ಟೋ ಅವಕಾಶಗಳು ಬಂದರೂ ನಾನು ಅಮೆರಿಕಾದಲ್ಲಿದ್ದುದರಿಂದ ನನಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ನಾನು ನೀಡಿದ ಈ ನನ್ನ ಮೊದಲ ಪ್ರದರ್ಶನಕ್ಕೆ ಬಹಳ ಒಳ್ಳೆಯ ಪ್ರತಿಕ್ರೆಯೆ, ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದರೆ ತಪ್ಪಲ್ಲ.
ಪ್ರ ನಿಮ್ಮ ಪತಿ, ಬಿಂದು ಮಾಧವ ಅವರು ನಿಮಗೆ ಯಾವ ರೀತಿಯಲ್ಲಿ ಸಹಾಯ, ಸಹಕಾರ ನೀಡುತ್ತಾರೆ? ಅವರ ಬಗ್ಗೆ ನಾಲ್ಕು ಮಾತು ತಿಳಿಸಿ.
ನಾನು ಮದುವೆಯಾದದ್ದು ೧೯೯೪ರಲ್ಲಿ ಅಮೆರಿಕಾಗೆ ಹೋದ ನಂತರವೇ ಮದುವೆಯಾದೆವು. ಬಿಂದು ಮಾಧವ, ನನ್ನ ಪತಿ ಅಷ್ಟೇ ಅಲ್ಲ, ನನ್ನ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಪ್ರಭಾತ್ ಕಲಾವಿದರ ಸಂಗದಲ್ಲಿ ನಾವಿಬ್ಬರೂ ಒಟ್ಟಿಗೇ ಡ್ಯಾನ್ಸ್ ಮಾಡುತ್ತಿದ್ದೆವು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು. ಇನ್ನು ನಮ್ಮ ಕಮ್ಯೂನಿಟಿನಲ್ಲಿ ಡ್ಯಾನ್ಸ್ ಎಂದರೆ ಅದು ಡೆಡ್ ಎಗನಿಸ್ಟ್ ಆಗಿತ್ತು. ಹೆಣ್ಣು ಮಕ್ಕಳು ಡ್ಯಾನ್ಸ್ ಮಾಡುವುದೆಂದರೆ ಅದೆಲ್ಲಾ ಸಮಾಜಕ್ಕೆ ಕಳಂಕವೆನ್ನುವಂತಿತ್ತು. ಆದರೆ ನಮ್ಮ ತಾಯಿಯವರು ಮಾತ್ರ ನನ್ನ ಆಸಕ್ತಿಗೆ ಎಂದೂ ಅಡ್ಡಿ ಬರಲಿಲ್ಲ. ಮುಂದೆ ನನಗೆ ಸಿಕ್ಕ ಬಿಂದು ಮಾಧವ, ಪತಿ ಸಹ ನನಗೆ


ಉತ್ತಮ ಸಹಕಾರ ನೀಡಿದ್ದಾರೆ. ಇಬ್ಬರೂ ಜೊತೆಯಾಗಿ ಸಾಕಷ್ಟು ನೃತ್ಯ ಸಂಬಂಧಿತ ಕೆಲಸ ಮಾಡಿದ್ದೇವೆ. ಹೀ ಈಸ್ ಮೈ ಬ್ಯಾಕ್ ಬೋನ್. ನನ್ನ ಕಾರ್ಯಕ್ರಮಗಳಿಗೆಲ್ಲಾ ಸಾಕಷ್ಟು ಸಹಕಾರ ನೀಡುತ್ತಾರೆ. ಮತ್ತೆ ನನ್ನ ಪರ್ಫಾರ್ಮೆನ್ಸ್ ಹಗೆ ಬೆಳಕಿನ ವ್ಯವಸ್ಥೆ (ಲೈಟಿಂಗ್ಸ್ ಇತ್ಯಾದಿ) ಮಾಡುವುದೆಲ್ಲಾ ಅವರೇ. ಇನ್ನು ಬಿಂದು ಅವರ ಫ್ಯಾಮಿಲಿ ಎಲ್ಲಾ ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ.ವರೂ ಸಹ ಪ್ರತಿಯೊಬ್ಬರೂ ನನ್ನ ಪ್ರೊಡಕ್ಷನ್, ಕಾರ್ಯಕ್ರಮಕ್ಕೆ ಸಹಕರಿಸುತ್ತಾರೆ. ಅವರೆಲ್ಲಾ ಒಂದೇ ಟೀಮ್ ನಂತಿದ್ದೇವೆ. ಒಟ್ಟಾರೆ ನಾನು ಬಹಳ ಲಕ್ಕಿ!
ಪ್ರ ಇಂದಿನ ನೃತ್ಯ ಶೈಲಿಯ ಕುರಿತಂತೆ ನಿಮ್ಮ ಅಭಿಪ್ರಾಯವೇನು?
ಹೌದು, ಇವತ್ತು ಬೇರೆ ಬೇರೆ ಪ್ರಕಾರದ ಡ್ಯಾನ್ಸ್ ಗಳು ಬಂದಿದೆ. ಕ್ಲಾಸಿಕಲ್, ಕಮರ್ಷಿಯಲ್ ಡ್ಯಾನ್ಸ್ ಇದೆ. ಆದರೆ ಪ್ರತಿಯೊಂದಕ್ಕೂ ಅದರದೇ ಆದ ಆಡಿಯನ್ಸ್ ಇದ್ದಾರೆ. ನಾನು ಯಾವುದನ್ನೂ ದೂರಲು ಇಷ್ಟಪಡುವುದಿಲ್ಲ.ದರಲ್ಲಿಯೂ ಭಾರ್ತೀಯ ನೃತ್ಯ ಶೈಲಿಗೆ ಇವತ್ತಿಗೂ ವಿಶ್ವ ಮನ್ನಣೆ ಇದ್ದೇ ಇದೆ. ನಾವು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೂ ಅದನ್ನೇ ಹೇಳುತ್ತೇವೆ.
ಪ್ರ ನಿಮ್ಮ ಮುಂದಿನ ಯೋಜನೆಗಳೇನು?
ಮುಂದಿನ ಯೋಜನೆಗಳು ಎಂದರೆ, ಪ್ರತೀ ಬಾರಿ ಅಮೆರಿಕಾದಲ್ಲಿ ನಾವು ನೀಡುವ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದೇವೆ.  ಇದರ ಮಧ್ಯೆ ನಾನು ನನ್ನ ಈ ಬಗೆಯ ಪ್ರದರ್ಶನಗಳನ್ನು ವಿಶ್ವದಾದ್ಯಂತ ನೀಡಬೇಕೆಂದು ಯೋಚಿಸುತ್ತಿದ್ದೇನೆ. ಹಾಗೆಯೇ ಮುಂದಿನ ವರ್ಷ ಪಂಪಾ ಡ್ಯಾನ್ಸ್ ಅಕಾದಮೆಯ ೨೫ ನೇ ವರ್ಷ ಆಚರಣೆ ಇದೆ. ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತಿದ್ದೇವೆ.
ಪ್ರ ನಿಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಿ?
ನಾನು ಫ್ರೀ ಆಗಿದ್ದಾಗ ಕುಕ್ಕಿಂಗ್ ಮಾಡ್ತೀನಿ, ಕುಕ್ಕಿಂಗ್, ಗಾರ್ಡನಿಂಗ್ ನಂಗೆ ಇಷ್ಟ. ಒಂದಷ್ಟು ಜನರ ಟೀಂ ನೊಂದಿಗೆ ಹೈಕ್ ಗೆ ಹೋಗ್ತೀವಿ. ನಾನು ಜಿಮ್ ಗೆ ಹೋಗುತ್ತೇನೆ. ಯೋಗ ಮಾಡುತ್ತೇನೆ. ಎಕ್ಸರ್ ಸೈಜ್ ಮಾಡುತ್ತೇನೆ. ಡ್ಯಾನ್ಸ್ ಗೆ ಬಾಡಿ ಮಸಲ್ ಗಳು ಸ್ಟ್ರಾಂಗ್ ಆಗಿರಬೇಕಾದದ್ದು ಅತೀ ಅಗತ್ಯ. ಹಾಗಾಗಿ ಎಕ್ಸರ್ ಸೈಜ್ ಅತ್ಯಂತ ಮುಖ್ಯವಾಗುತ್ತದೆ.  ಕೆಲವೊಮ್ಮೆ ಮೂವಿ ನೋಡೋದೂುಂಟು. ಆದರೆ ಮುಖ್ಯವಾಗಿ ಮನೆನಲ್ಲಿ ಇದ್ದು ಕುಕ್ಕಿಂಗ್ಸ್ ಮಾಡೋದು ನನಗೆ ಬಹಳ ಇಷ್ಟ.
ಪ್ರ ಮುಂದಿನ ಯುವಪೀಳಿಗೆಗೆ, ನೃತ್ಯ ಕಲಾವಿದರಿಗೆ ನಿಮ್ಮ ಸಂದೇಶವೇನು?
ಯಾರೇ ಆದರೂ ಉತ್ತಮ ನೃತ್ಯಗಾರರಾಗಬೇಕೆಂದರೆ ಕೇವಲ ಶಾಲೆಗೆ ಬಂದು ಕಲಿತು ಹೋಗುವುದಷ್ಟೆ ಅಲ್ಲ. ಏನನ್ನು ಕಲಿಯುತ್ತೀರೋ ಅದನ್ನು ಅರ್ಥ ಮಾಡಿಕೊಂಡು ಮುದುವರಿಯಿರಿ. ನಿಮ್ಮ ಗುರುಗಳ ಬಳಿ ನಿಮ್ಮ ಕಲಿತ ವಿದ್ಯೆಯ ಕುರಿತಂತೆ ಚರ್ಚೆ ನಡೆಸಿದಾಗ ಇನ್ನಷ್ಟು ವಿಚಾರ ನಿಮಗೆ ತಿಳಿಯಬಹುದು. ಒಟ್ಟಾರೆ ಪ್ರತಿಯೊಂದು ಹಂತವನ್ನೂ ಅರ್ಥ ಮಾಡಿಕೊಂಡು ಅಭ್ಯಸಿಸಬೇಕು. ನೃತ್ಯ ಮಾಡುವಾಗ ಏನೋ ಸುಮನೆ ಕೈ ಕಾಲುಗಳನ್ನು ಅಲ್ಲಾಡಿಸುವುದಲ್ಲ. ಹಾಡು, ಅದರ ಹಿಂದಿರುವ ಅರ್ಥ ಸೂಚನೆಗಳನ್ನೂ ಕಲಿಯಬೇಕಾಗುತ್ತದೆ. ಹಾಗೆ ಮಾಡಿದಾಗಲೇ ನಮಗೆ ಹೆಚ್ಚು ಭಾವಪೂರ್ಣವಾಗಿ ಅಭಿನಯಿಸಲು


ಸಾಧ್ಯವಾಗುತ್ತದೆ. ಜತೆಗೆ ಬಾರ್ತೀಯ ಕ್ಲಾಸಿಕ್ಸ್ ಗಳನ್ನೂ, ಭಾರತೀಯ ಮಿಥಾಲಜಿಯನ್ನೂ ಅಭ್ಯಾಸ ಮಾಡಬೇಕು. ಭಾರತೀಯ ಸಂಸ್ಕೃತಿಯನ್ನು ಅರಿತುಕೊಂಡು ಅಭಿನಯಿಸುವುದರಿಂದ ಹೆಚ್ಚು ಹೆಚ್ಚು ಸಹಜ ಅಭಿನಯ ಮೂಡಿ ಬರಲು ಸಾಧ್ಯವಿದೆ. ಸಂಗೀತ, ತಾಳಗಳ ಅರಿವನ್ನು ಮೂಡಿಸಿಕೊಳ್ಳಿ ಇಷ್ಟೆಲ್ಲಾ ಮಾಡಿದಾಗ ಒಬ್ಬ ಯಶಸ್ವಿ ನೃತ್ಯಪಟುವಾಗಲು ಖಂಡಿತಾ ಕಷ್ಟವಾಗಲಾರದು.
ಪ್ರ ನಿಮಗೆ ಹಾಲಿವುಡ್ ಅಥವಾ ಬಾಲಿವುಡ್ ಕಡೆಯಿಂದ ಸಿನಿಮಾಗೆ ಕೊರಿಯೋಗ್ರಾಫ್ ಮಾಡುವುದಕ್ಕೆ ಆಹ್ವಾನ ಬಂದಿತ್ತೆ?
ಕೆಲವೊಂದು ಬಂದಿತ್ತು. ಆದರೆ ನಾನು ಹಾಗೆ ಅದನ್ನು ಒಪ್ಪಿಕೊಳ್ಲಲಿಲ್ಲ. ನನ್ನ ಆಸಕ್ತಿಯ ಕ್ಷೇತ್ರವೇ ಬೇರೆ, ನನಗೂ ಸಿನಿಮಾ ರಂಗಕ್ಕೂ ಸಾಮ್ಯತೆ ಸರಿಯಾಗಲಾರದು. ಸಿನಿಮಾ ಕೊರಿಯಾಗ್ರಫಿ ಬಗ್ಗೆ ನನಗೆಂದೂ ಆಸಕ್ತಿ ಇಲ್ಲ. ನನ್ನ ಪ್ರಕಾರ ಡ್ಯಾನ್ಸ್ ರಿಯಲಿಸ್ಟಿಕ್ ಆಗಿರಬೇಕು. ಆದರೆ ಸಿನಿಮಾ ನೃತ್ಯಗಳು ಯಾವುದೂ ನೈಜವಾಗಿರುವುದಿಲ್ಲ. ನಾನು ಸ್ಟೇಜ್ ಪರ್ಫರ್ಮೆನ್ಸ್ ನೀಡಿದಾಗ ನನಗೇನು ಸಮಾಧಾನ ದೊರಕುತ್ತದೆಯೋ ಸಮಾಧಾನ ನನಗಲ್ಲಿ ದೊರಕಲಾರದು. ಒಟ್ಟಾರೆ ಅದು ನನ್ನಕ್ಷೇತ್ರವಲ್ಲ. ನಾನು ಕಡೆ ಹೋಗಲಾರೆ

(ಈ ನನ್ನ ಲೇಖನವು ಏಪ್ರಿಲ್ 2016 ರ "ಗೃಹಶೋಭಾ" ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)

Saturday, April 16, 2016

Some Memories of Shravanabelagola Trip

A few pics of Sravanabelagola trip
.
View of Chandragiri from Vindyagiri



























Trikoota Basadi, Sravanabelagola






















Gullammajji Statue, Sravanabelagola










Fishes


Elephant 


Monkey













Bharatha


One of the inscription






Parshwanatha Swamy



Kushmandini Devi