Friday, December 09, 2022

ವಿಜಯಾನಂದ - ಛಲಗಾರನೊಬ್ಬನ ಜೀವನಗಾಥೆಯೋ? ಸ್ವಯಂ ಆತ್ಮಪ್ರಶಂಸೆಯೋ?

 ಚಿತ್ರ: ವಿಜಯಾನಂದ
ನಿರ್ದೇಶನ: ರಿಷಿಕಾ ಶರ್ಮಾ
ನಿರ್ಮಾಪಕರು: ವಿಆರ್ ಎಲ್ ಫಿಲ್ಮ್ ಪ್ರೊಡಕ್ಷನ್ಸ್, , ಆನಂದ ಸಂಕೇಶ್ವರ
ಪಾತ್ರವರ್ಗ: ನಿಹಾಲ್, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ , ಶೈನ್ ಶೆಟ್ಟಿ, ದಯಾಳ್ ಪದ್ಮನಾಭ, ರಮೇಶ್ ಭಟ್ ಹಾಗೂ ಮುಂತಾದವರು
ಎಡಿಟಿಂಗ್: ಹೇಮಂತ್ ಕುಮಾರ್
ಛಾಯಾಗ್ರಹಣ: ಕೀರ್ತನ್ ಪೂಜಾರಿ
ಸಂಗೀತ: ಗೋಪಿ ಸುಂದರ್
ರೇಟಿಂಗ್: 3.5/5


ಇಂದು (ಡಿಸೆಂಬರ್ 9) ವಿಶ್ವದಾದ್ಯಂತ ತೆರೆ ಕಂಡಿರುವ ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಕ್ಸೃತ ಡಾ. ವಿಜಯಸಂಕೇಶ್ವರ ಅವರ ಜೀವನ ಆಧಾರಿತ ಚಿತ್ರ "ವಿಜಯಾನಂದ" ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಓಪನಿಂಗ್ ಪಡೆದಿದೆ.  ‘ಟ್ರಂಕ್’ ಎಂಬ ಚಿತ್ರದ ನಿರ್ದೇಶಕರಾದ ರಿಷಿಕಾ ಶರ್ಮ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರು ಕಥೆಯನ್ನು ಕತೂಹಲಭರಿತವಾಗಿ ಹೆಣೆದಿದ್ದಾರೆ. ವಿ.ಆರ್.ಎಲ್. ಸಂಸ್ಥೆಯ ಹುಟ್ಟು, ಬೆಳವಣಿಗೆಯನ್ನು  ಯಾವುದೇ ಅತಿಶಯೋಕ್ತಿ ಎನಿಸದಂತೆ ಸಹಜವಾಗಿ ತೋರಿಸಲಾಗಿದೆ. ಕೇವಲ ಒಂದು ಟ್ರಕ್‌ನೊಂದಿಗೆ ಪ್ರಾರಂಭವಾಗಿ ದೊಡ್ಡ ಲಾಜಿಸ್ಟಿಕ್ಸ್ ಕಂಪನಿಯನ್ನು ಹೇಗೆ ಸ್ಥಾಪಿಸಿದರು ಎನ್ನುವುದೇ ಸಿನಿಮಾದ ಜೀವಾಳ. 

ಇದನ್ನೂ ನೋಡಿ: ವಿಜಯಾನಂದ ಟ್ರೈಲರ್


ವಿಜಯ ಸಂಕೇಶ್ವರ ಹೇಗೆ ಬೆಳೆದರೆನ್ನುವುದನ್ನು ಅವರ ಪುತ್ರ್ತ ಆನಂದ್ ಸಂಕೇಶ್ವರ ನಿರೂಪಣೆ ಮಾಡುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ವಿಜಯ್ ಸಂಕೇಶ್ವರ್ (ನಿಹಾಲ್) ಇವರ ತಂದೆ(ಅನಂತ್ ನಾಗ್)  ಗದಗದಲ್ಲಿ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್ ಮಾಲಕರು.ಈ ಮುದ್ರಣಾಲಯದಲ್ಲಿ ಸ್ಟಡಿ ಪುಸ್ತಕಗಳು, ಮದುವೆ ಪತ್ರಿಕೆಗಳು ಸೇರಿದಂತೆ ಹಲವಾರು ವಿಧದ ಪುಸ್ತಕ, ಪತ್ರಿಕೆ ಪ್ರಿಂಟ್ ಆಗುತ್ತದೆ. ಆದರೆ ವಿಜಯ ಸಂಕೇಶ್ವರ್ ಗೆ ತನ್ನ ತಂದೆಯ ವ್ಯವಹಾರ ಮುಂದುವರಿಸಲು ಇಷ್ಟವಿಲ್ಲದೆ ಅವರ ವಿರೋಧ ಕಟ್ಟಿಕೊಂಡು ತನ್ನದೇ ಆದ ಲಾಜಿಸ್ಟಿಕ್ ವ್ಯಾಪಾರ ಮಾಡಲು ತೊಡಗುತ್ತಾನೆ. ತಾನು ನಂಬಿದ ದಾರಿಯನ್ನು ಅನುಸರಿಸುವ ಆತ ಸಾಧನೆಯ ಹಾದಿಯಲ್ಲಿ ಅನೇಕ ಬಗೆಯ ಅವಮಾನ, ಅಡ್ಡಿ ಆತಂಕ ಎದುರಿಸುತ್ತಾನೆ. ಮುಂದೆ ಅವರು ಕನ್ನಡ ದಿನಪತ್ರಿಕೆ ಪ್ರಾರಂಭಿಸಿದ್ದು, ಅದನ್ನು ಆಂಗ್ಲ ಭಾಷಾ ಪತ್ರಿಕಾ ಸಮೂಹಕ್ಕೆ ಹೇಗೆ ಮಾರಾಟ ಮಾಡಲಾಗಿದೆ ಮತ್ತೆ ಐದು ವರ್ಷದಲ್ಲಿ ಮತ್ತೊಂದು ಪತ್ರಿಕೆ ಪ್ರಾರಂಭ ಮಾಡಿದ್ದು ಹೇಗೆ ಎನ್ನುವುದನ್ನು ಸಹ ಚಿತ್ರದಲ್ಲಿ ತೋರಿಸಲಾಘಿದೆ. 

ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯ ಪರಿಚಯ : ‘ಅನವರತ ಅಪ್ಪು’


ನಿರ್ದೇಶಕರ ಹೋಂ ವರ್ಕ್ ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ. ಇದೊಂದು ವ್ಯಕ್ತಿಯ ಜೀವನಾಧಾರಿತ ಚಿತ್ರವಾಗಿರುವುದರಿಂದ ಯಾವುದೇ ಹಾಸ್ಯ ದೃಶ್ಯಗಳೈಲ್ಲದೆ ಚಿತ್ರ ಸಂಪೂರ್ಣ ಸೀರಿಯಸ್ ಆಗಿ ಮೂಡಿಬಂದಿದೆ.  ಇನ್ನು ವಿಜಯ ಸಂಕೇಶ್ವರ 2012ರಲ್ಲಿ ಮಗ ಆನಂದ್ ಜೊತೆಗೂಡಿ ವಿಜಯವಾಣಿ ಪತ್ರಿಕೆಯನ್ನು ಪ್ರಾರಂಭಿಸಿರುವಲ್ಲಿಗೆ ಚಿತ್ರ ಅಂತ್ಯವಾಗಿದೆ.  ಬಿಜೆಪಿ ಪರವಾಗಿ ಮೂರು ಬಾರಿ ಸಂಸದರಾಗಿ ಗೆದ್ದಿರುವ ವಿಜಯ ಸಂಕೇಶ್ವರ್ ತಾವು ಬಿಜೆಪಿ ತೊರೆದು ಕನ್ನಡ ನಾಡು ಎನ್ನುವ ಪಕ್ಷ ಕಟ್ಟಿರುವುದಾಗಲಿ ನಂತರದಲ್ಲಿ ಆ ಪಕ್ಷವನ್ನು ಮತ್ತೆ ಬಿಜೆಪಿ ಜತೆಗೆ ವಿಲೀನ ಮಾಡಿದ್ದಾಗಲಿ ಇಲ್ಲಿ ಪ್ರಸ್ತಾಪವಾಗಿಲ್ಲ. ಅದಷ್ಟೇ ಅಲ್ಲದೆ ವಿಜಯ ಸಂಕೇಶ್ವರ ಅವರ ಮತ್ತೊಂದು ದೊಡ್ಡ ಸಾಹಸವಾಗಿರುವ ದಿಗ್ವಿಜಯ ಟಿವಿ ನ್ಯೂಸ್ ಚಾನಲ್ ಬಗ್ಗೆ ಸಹ ಚಿತ್ರದಲ್ಲಿ ಯಾವ ಪ್ರಸ್ತಾಪವೂ ಇಲ್ಲ. ಚಿತ್ರದ ಅಂತ್ಯದಲ್ಲಿ ’ಟು ಬಿ ಕಂಟಿನ್ಯೂ...’ ಎಂದಿರುವುದರಿಂಡ ಮುಂದಿನ ದಿನದಲ್ಲಿ ಸಂಕೇಶ್ವರ ಜೀವನದ ಮತ್ತಷ್ಟು ಘಟನೆಗಳು ಮುಂದಿನ ಭಾಗದಲ್ಲಿ ಮೂಡಿಬರಬಹುದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲಿ ನಟನಾಗಬೇಕೆನ್ನುವ ಆಸೆ ಈಗ ಕೈಗೂಡಿದೆ: ಸಚಿವ ಡಾ. ಕೆ. ಸುಧಾಕರ್



ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ಕಾಣಿಸಿಕೊಂಡು ಅತ್ಯುತ್ತಮ ಅಭಿನಯ ನೀಡೀದ್ದಾರೆ. ಅವರು ಸಿನಿಮಾದಲ್ಲಿ ಮೂರು ವಯೋಮಾನ ಮತ್ತು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ನಟ ಮತ್ತು ಆ್ಯಂಕರ್ ಆಗಿದ್ದ ಇವರು ಮೊದಲ ಚಿತ್ರದಲ್ಲೇ ನಾಯಕ ನಟರಾಗಿ ಮೆಚ್ಚುಗೆ ಗಳಿಸುಉವುದರಲ್ಲಿ ಅನುಮಾನವಿಲ್ಲ.  ನಂದ ಸಂಕೇಶ್ವರ್ ಪಾತ್ರದಲ್ಲಿ ನಟಿಸಿರುವ ಭರತ್ ಬೋಪಣ್ಣ ಕೂಡ ತಮ್ಮ ಪಾತ್ರಾಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ಅನಂತ್ ನಾಗ್, ತಾಯಿಯಾಗಿ ವಿನಯಾ ಪ್ರಸಾದ್ ಅಭಿನಯ ಮೆಚ್ಚುವಂತಿದೆ. ಇದಲ್ಲದೆ ಸಂಕೇಶ್ವರ ಅವರಿಗೆ ವ್ಯಾಪಾರದಲ್ಲಿ ನೆರವಾಗುವ ಗಣೇಶ್ ದಾದಾ ಪಾತ್ರದಲ್ಲಿ ರವಿಚಂದ್ರನ್, ಪತ್ರಿಕಾ ಸಂಪಾದಕ ರಾಮರಾವ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಅವರ ಪಾತ್ರವೂ ಮಹತ್ವದ್ದಾಗಿದ್ದು ಜನರಿಗೆ ಇಷ್ತವಾಗುತ್ತದೆ. ಸಂಕೇಶ್ವರ ಅವರ ಪತ್ನಿಯಾಗಿ ಲಲಿತಾ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಅಭಿನಯವೂ ಗಮನಾರ್ಹವಾಗಿದೆ. ಉಳಿದ ಎಲ್ಲಾ ಪಾತ್ರಧಾರಿಗಳೂ ಆಯಾ ಪಾತ್ರಗಳ ಅನುಗುಣವಾಗಿ ಅಭಿನಯಿಸಿದ್ದಾರೆ. 


ಇನ್ನು ಹಿನ್ನೆಲೆ ಸಂಗೀತ, ಕೊರಿಯೋಗ್ರಫಿ ವಿಚಾರ ನೋಡುವುದಾದರೆ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್  ಅಚ್ಚುಕಟ್ತಾಗಿ ಕೆಲಸ ಮಾಆಡಿದ್ದಾರೆ. ಆದರೆ ವಿಜಯ ಸಂಕೇಶ್ವರ ಜೀವನಾಧಾರಿತ ಈ ಸಿನಿಮಾದಲ್ಲಿ ಯಾವ ಡ್ಯುಎಟ್ ಹಾಡುಗಳು, ವಿದೇಶೀ ಲೊಕೇಷನ್ ಗಳಾಗಲಿ ಕಾಣಿಸುಉವುದಿಲ್ಲ. ಇಷ್ತೇ ಅಲ್ಲ ಚಿತ್ರದಲ್ಲಿ ಮಾರುಕಟ್ಟೆಯಲ್ಲಿ ನಡೆಯುವ ಒಂದೇ ಒಂದು ಫೈಟ್ ಹೊರತಾಗಿ ಯಾವುದೇ ಸಾಹಸ ದೃಶ್ಯಗಳೂ ಇಲ್ಲ.  ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಕೆಲಸವೂ ಸಹ ಚಿತ್ರದ ಸೌಂದರ್ಯಕ್ಕೆ ಗರಿಯಾಗಿದೆ. 

ಇದನ್ನೂ ಓದಿ: ‘ಬಾಂಡ್ ರವಿ’ ಟ್ರೇಲರ್ ರಿಲೀಸ್-ಪುನೀತ್ ಅಭಿಮಾನಿ ಚಿತ್ರಕ್ಕೆ ಸಿಕ್ತು ದೊಡ್ಮನೆಯ ಆಶೀರ್ವಾದ


ಇಷ್ಟೆಲ್ಲಾ ಹೇಳಿದ ಮೇಲೆ  ವಿಆರ್​ಎಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ ಸಂಕೇಶ್ವರ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆನ್ನುವುದನ್ನು ಉಲ್ಲೇಖಿಸಲೇಬೇಕು. ಇದನ್ನೇ ಇನ್ನೊಂದು ದಿಕ್ಕಿನಿಂದ ನೋಡಿದರೆ  ಓರ್ವ ಸಾಧಕ ವ್ಯಕ್ತಿಯ ಕುರಿತು ನಾಡಿನ ಜನತೆ ತಿಳಿಯಲಿ, ಅವರ ಜೀವನ ಕಂಡು ತಾವೂ ಸ್ಫೂರ್ತಿ ಹೊಂದಲೆಂದು ಈ ಚಿತ್ರವನ್ನು ವಿಆರ್​ಎಲ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಆದರೆ ತಮ್ಮದೇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರ ಕುರಿತು ತಾವೇ ಚಿತ್ರ ತಯಾರಿಸುವ ಮೂಲಕ ಆ ವ್ಯಕ್ತಿಯ ಬದುಕಿನ ಕೇವಲ ಒಳ್ಳೆಯ ಅಂಶಗಳನ್ನು ಮಾತ್ರವೇ ಎತ್ತಿ ತೋರಿಸುತ್ತಿದ್ದಾರೆ ಎನ್ನುವ ಭಾವನೆ ಪ್ರೇಕ್ಷಕರಲ್ಲಿ ಮೂಡಲು ಅವಕಾಶಗಳಿದೆ. ಅದರಲ್ಲಿಯೂ ವಿಜಯ ಸಂಕೇಶ್ವರ ಕೇವಲ ಉದ್ಯಮಿಯಾಗಿ ಮಾತ್ರವಲ್ಲ ಓರ್ವ ರಾಜಕಾರಣಿಯಾಗಿ ಸಹ ಗುರುತಿಸಿಕೊಂಡಿರುವುದರಿಂದ ತಮ್ಮದೇ ಸಂಸ್ಥೆಯ ಮೂಲಕ ತಮ್ಮ ಕಥೆಯನ್ನು ಹೇಳಿಕೊಂಡಿರುವುದು ಅದೊಂದು ಸ್ವಯಂ ಆತ್ಮಪ್ರಶಂಸೆ ಮಾಡಿಕೊಡಂತೆ ಎನಿಸದಿರದು. ಮುಂದಿನ ದಿನಗಳಲ್ಲಿ ಸಂಕೇಶ್ವರ ಅವರ ರಾಜಕೀಯ ವಿರೋಧಿಗಳು ಇದನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.  

ಇದನ್ನೂ ಓದಿ: ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ



ಇದೆಲ್ಲಾ ಏನೇ ಇದ್ದರೂ ಕನ್ನಡ ಚಿತ್ರರಂಗದ ಮಟ್ಟಿಗೆ ’ವಿಜಯಾನಂದ’ ನಿಜಕ್ಕೂ ಒಂದು ಹೊಸ ದಾಖಲೆಯನ್ನು ಮೂಡಿಸಿದ ಚಿತ್ರ. ವಿಶ್ವದಾದ್ಯಂತ ವಿ.ಆರ್.ಎಲ್. ಸಮೂಹ ಗೆಲುವಿನ ಪತಾಕೆ ಹಾರಿಸಿದಂತೆ ’ವಿಜಯಾನಂದ’ ಚಿತ್ರವೂ ಸಹ ಗೆಲುವನ್ನು ಕಾಣಲಿ...