Monday, March 30, 2015

ವಿಶ್ವದ ನಂ. 1 ಆಟಗಾರ್ತಿ: ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.ಸಿರಿ ಫೋರ್ಟ್‌ ಸ್ಪೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ಸೈನಾ 21–16, 21–14ರಲ್ಲಿ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನೊನ್‌ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಜತೆಗೆ ವಿಶ್ವದ ನಂಬರ್ 1 ಆಟಗಾರ್ತಿ ಪಟ್ಟಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಪಟ್ಟಕ್ಕೆ ಏರಿದ ಭಾರತದ ಪ್ರಥಮ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ ಜೀವನ ಸಾಧನೆಗಳ ಬಗೆಗಿನ ಕಿರುನೋಟವೊಂದು ಇಲ್ಲಿದೆ 


ಸೈನಾ, ಜನಿಸಿದ್ದು ಹರಿಯಾಣದ ’ಹಿಸ್ಸಾರ್ ನಗರ’ದಲ್ಲಿ.1990ರ ಮಾರ್ಚ್ 17ರಂದು.ಸೈನಾ  ತಂದೆ, ’ಡಾ. ಹರ್ವೀರ್ ಸಿಂಗ್’ ರವರು,ವೃತ್ತಿಯಲ್ಲಿ  ಹೈದರಾಬಾದ್’ ನ, ’Directorate of Oil Seeds Research Centre ನಲ್ಲಿ ವಿಜ್ಞಾನಿ. ಆಗಿದ್ದು ತಾಯಿ ಉಷಾ ನೆಹ್ವಾಲ್‌ ಮ‌ೂಲತಃ ಹರ್ಯಾಣದ ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್‌. 

ಸೈನಾ ಬಾಲಕಿಯಾಗಿದ್ದಾಗಲೇ ಹೈದರಾಬಾದಿಗೆ ವಲಸೆ ಬಂದ ’ಡಾ. ಹರ್ವೀರ್ ಸಿಂಗ್ ಕುಟುಂಬ ಸೈನಾ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪೋಷಿಸಿತು. ತಂದೆ ಹರ್ವೀರ್ ಸಿಂಗ್ ಮಗಳನ್ನು ಉತ್ತಮ ಬ್ಯಾಡ್ಮಿಂಟನ್ ತಾರೆಯನ್ನಾಗಿ ರೂಪಿಸುವ ಉದ್ದೇಶದಿಂದ ತನ್ನ ಉಳಿತಾಯ ಮತ್ತು ಭವಿಷ್ಯನಿಧಿಯ ಹಣವನ್ನು ವ್ಯಯಿಸಿದ್ದರು. 

ಇಂದು ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿರುವ ಸೈನಾ ಈ ಸ್ಥಾನವನ್ನು ತಲುಪುವ ಹಿಂದೆ ಅವರ ಸತತ ಪರಿಶ್ರಮವೂ ಇದೆ. ಪ್ರಾರಂಭದಲ್ಲಿ ಸೈನಾ ಮುಂಜಾನೆ ೫ ಗಂಟೆಗೆ ಎದ್ದು, ೨೦ ಕಿ. ಮೀ ದೂರದ ಕ್ರೀಡಾಂಗಣಕ್ಕೆ ನಡೆದುಕೊಂಡು ಹೋಗಿ ಅಭ್ಯಾಸ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಮಗಳಿಗೆ ಅನುಕೂಲವಾಗಲೆಂದು ಸಿಂಗ್ ಕ್ರೀಡಾಂಗಣದ ಬಳಿಯೇ ಮನೆಮಾಡಿದರು. 

ವಿಶ್ವದ ನಂಬರ್ 1 ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್


ಅತಿಕ್ ಜುಹಾರಿ, ಪುಲ್ಲೇಲಾ ಗೋಪಿಚಂದ್ ,ವಿಮಲ್ ಕುಮಾರ್ ರವರ ಬಳಿಕಯಲ್ಲಿ ಅಭ್ಯಾಸ ನಡೆಸಿದ ಸೈನಾ ಪ್ರಸ್ತುತ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಎಸ್.ಎಂ. ಅರೀಫ್ ರವರನ್ನು ತಮ್ಮ ಕೋಚ್ ಆಗಿಸಿಕೊಂಡಿದ್ದಾರೆ. ೨೦೦೩ರಲ್ಲಿ ಝಕೊಸ್ಲಾವಿಯಾ ಜೂನಿಯರ್ ಓಪನ್ ಅಲ್ಲಿ ೧೯ ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಸೈನಾ ನೆಹ್ವಾಲ್ ಇಲ್ಲಿಂದ ಮುಂದೆ ಆಕೆ ಮಾಡಿದ್ದೆಲ್ಲವೂ ಇತಿಹಾಸ ಸೃಷ್ಟಿಸುವ ಕಾರ್ಯ.

 2004ರ ಕಾಮನ್‌ವೆಲ್ತ್ ಯೂತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕಗೆಲ್ಲುವ ಸಾಧನೆ ಮಾಡಿದ್ದ ಸೈನಾ 2005ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ನಲ್ಲಿಯೂ ಚಾಂಪಿಯನ್ ಆಗಿದ್ದರು. 2006 ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರನ್ನರ್ ಅಪ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ, ಫಿಲಿಫೈನ್ಸ್ ಬ್ಯಾಡ್ಮಿಂಟನ್ ಓಪನ್ ಗೆಲುವು, ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು, ಹೀಗೆ ಒಂದರ ಬೆನ್ನ ಹಿಂದೊಂದರಂತೆ ಸಾಧನೆಗೈಯುತ್ತಲೇ ಹೋದರು. 

ಮುಂದೆ ೨೦೦೮ರಲ್ಲಿ ಕಾಮನ್‍ವೆಲ್ತ್ ಯುವ ಕ್ರೀಡಾಕೂಟ ದಲ್ಲಿ ಚಿನ್ನದ ಪದಕ ಗಳಿಸಿದ ಸೈನಾ 2012ರ ಲಂಡನ್ ಒಲಂಪಿಕ್ ನಲ್ಲಿ ಕಂಚಿನ ಪದಕ ವಿಜೇತರಾಗುವ ಮೂಲಕ ಆ ಸಾಧನೆ ಮಾಡಿದ ಭಾರ್ತದ ಪ್ರಥಮ ಬ್ಯಾಡ್ಮಿಂಟನ್ ಆತಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ೨೦೦೯ರಲ್ಲಿ ಇಂಡೋನೇಷಿಯಾ ಓಪನ್ ಸೀರೀಸ್ ನಲ್ಲಿ ಗೆಲುವು ಸಾಧಿಸಿ ಸೂಪರ್ ಸೀರೀಸ್ ಗೆದ್ದ ಪ್ರಥಮ ಭಾರತೀಯರೆನಿಸಿದರು. 

ಭಾರ್ತದ ಹೆಮ್ಮೆಯ ಬ್ಯಾಡ್ಮಿಂತನ್ ಆತಗಾರ್ತಿಯಾದ ಸೈನಾ ನೆಹ್ವಾಲ್ ಸಾಧನೆಗಳನ್ನು ಪರಿಗಣಿಸಿ ಇದುವರೆಗೆ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ ಅರ್ಜುನ ಪ್ರಶಸ್ತಿ(2009), ರಾಜೀವ್ ಗಾಂಧಿ ಖೇಲ್ ರತ್ನ (2010) ಪದ್ಮಶ್ರೀ(2010)ಗಳು ಸೇರಿವೆ. 

ಹೀಗೆ ಇಂದು ನಮ್ಮ ನಾಡಿನ ಹೆಮ್ಮೆಯ ಕ್ರೀಡಾ ತಾರೆಆಗಿರುವ ಸೈನಾ ತಮ್ಮ ಮುಂದಿನ ಜೀವನದಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಉನ್ನತಿಯನ್ನು ಕಾಣಲೆಂದು ಹಾರೈಸೋಣ. 

Tuesday, March 24, 2015

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ ನಟ

ಕನ್ನಡಿಗ ಸಂಚಾರಿ ವಿಜಯ್ ಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆಯಾಗಿದ್ದು  ಅದರಲ್ಲಿ ಕ್ವೀನ್ ಚಿತ್ರದ ನಾಯಕಿ ಕಂಗನಾ ರನೌತ್ ಶ್ರೇಷ್ಠ ನಟಿ ಹಾಗೂ 'ನಾನು ಅವನಲ್ಲ ಅವಳು' ಕನ್ನಡ ಚಿತ್ರದ ನಾಯಕ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ್ದಾರೆ. 'ಹರಿವು' (ನಿರ್ಮಾಣ ಓಂ ಸ್ಟುಡಿಯೋ, ನಿರ್ದೇಶಕ: ಮಂಜುನಾಥ್ (ಮನ್ಸೋರೆ)) ಚಿತ್ರಕ್ಕೆ ಶ್ರೇಷ್ಠ ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಸಂಚಾರಿ ವಿಜಯ್ ಯಾರು?

ಅತ್ಯುತ್ತಮ ನಟ ಸಂಚಾರಿ ವಿಜಯ್ 


ಇಂದು ರಾಷ್ಟ್ರ ಪ್ರಶಸ್ತಿ ಗಳಿಸಿರುವ ಸಂಚಾರಿ ವಿಜಯ್ ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಗ್ರಾಮದವರಾದ ವಿಜಯ್ ಕಲಾಸಕ್ತಿ ತುಂಬಿದ ಕುಟುಂಬದಲ್ಲಿ ಬೆಳೆದವರು. ತಾಯಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರೆ ತಂದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಕಂಪ್ಯೂಟರ್ ಸೈನ್ಸ್ ಶಿಕ್ಷಣಕ್ಕೆಂದು ಬೆಂಗಳೂರು ದಾರಿ ಹಿಡಿದ ಅವರನ್ನು ಕಲೆಯ ಆಕರ್ಷಣೆ ಬಿಡಲಿಲ್ಲ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿಜಯ್‌ಗೆ, ನೀನು ಇರಬೇಕಾದ ಜಾಗ ಇದಲ್ಲ ಎಂದು ರಂಗಭೂಮಿಯತ್ತ ಕರೆದುಕೊಂಡು ಹೋದ ಗೆಳೆಯ ರಂಗಪ್ಪ, ಅಲ್ಲಿ ಮಧುಸೂದನ್ ಎಂಬುವವರನ್ನು ಪರಿಚಯಿಸಿದರು.ಅವರಿಂದ ಕೇಶ್ರೀ ಅವರ ಪರಿಚಯ ಉಂಟಾಯಿತು.

ದರ್ಪಣ ತಂಡದ ಮೂಲಕ "ಸಾವು ಧ್ಯೇಯಕಿಲ್ಲ" ಎಂಬ ನಾಟಕದಲ್ಲಿ ಸೈನಿಕನ ಪಾತ್ರದಿಂದ ರಂಗಭೂಮಿಗೆ ಕಾಲಿಟ್ಟ ವಿಜಯ್ ನಂತರ ವಿವಿಧ ಪಾತ್ರಗಳಲ್ಲಿ ಪರಿಪಕ್ವಗೊಳ್ಳುತ್ತ ಬಂದರು. ಮುಂದೆ ಖ್ಯಾತ ನಿರ್ದೇಶಕರುಗಳಾದ ಮಾಲತೇಶ್ ಬಡಿಗೇರ್ , ಛಾಯಾ ಭಾರ್ಗವಿ ,ಮಂಜುನಾಥ ಬಡಿಗೇರ್ ,ಎಂ.ಸಿ.ಆನಂದ್ ,ಎಸ್. ಆನಂದ್ ,ಜೋಸೆಫ್ ಜಾನ್ ,ಮಹೇಶ್ ಪಲ್ಲಕ್ಕಿ ರವರಂತಹರೊಂದಿಗೆ ಅನುಭವವನ್ನು ಪಡೆದುಕೊಳ್ಳುತ್ತ 'ಸಂಚಾರಿಯ'ತ್ತ ಸಾಗಿದ ವಿಜಯ್ ಹೆಸರಾಂತ ನಿರ್ದೇಶಕಿ ಮಂಗಳ.ಎನ್ ರವರ ಗರಡಿಯಲ್ಲಿ ಅರಹಂತ ನಾಟಕದ ಖಾರವೆಲನಾಗಿ ಮುಖ್ಯ ಪಾತ್ರದಲ್ಲಿ ಗುರುತಿಸಿಕೊಂಡರು. ಅದಾದನಂತರ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಾ ಬಂದ ವಿಜಯ್  ಹೊಸ ಹೊಸ ಪ್ರಯತ್ನಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತ ಸಾಗುತ್ತಿರುವಾಗ ವಿಜಯ್ ರವರ ಪ್ರತಿಭೆಗೆ ಇನ್ನಷ್ಟು ಮೆರಗುಕೊಡಲು ಮಂಗಳ.ಎನ್ ರವರು ನಿರ್ದೇಶಕನಾಗುವ ಅವಕಾಶವನ್ನು 'ಪಿನೋಕಿಯೊ' ಎಂಬ ನಾಟಕದ ಮೂಲಕ ಕಲ್ಪಿಸಿದರು. ಕೊಟ್ಟ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ವಿಜಯ್ ವಿಸ್ಮಯಕಾರಿಯಾಗಿ ಪಿನೋಕಿಯೊ ವನ್ನು ರಂಗದ ಮೇಲೆ ತಂದರು. ಹೀಗೆ ಸಂಚಾರಿ ಥಿಯೇಟರ್ ನಲ್ಲಿ ಬೆಳೆದು ಬಂದ ವಿಜಯ್ ,"ಸಂಚಾರಿ ವಿಜಯ್" ಆಗಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ತನ್ನ ಬಾಲ್ಯದಿಂದಲೇ ಬಳುವಳಿಯಾಗಿ ಬಂದ ಕಲೆಯನ್ನು ಸತತವಾಗಿ ಪೋಷಿಸಿಕೊಂಡು ಬಂದ ವಿಜಯ್  ಡಿ ಡಿ 9 (ಚಂದನ) ದಲ್ಲಿ 'ನಗು ನಗುತಾ ನಲಿ' ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದಿನ ದಿನಗಳಲ್ಲಿ ಶ್ರೀನಗರ ಚಂದ್ರು ರವರ ನಿರ್ದೇಶನದ 'ಹೊಸ ಬಾಳಿಗೆ ನೀ ಜೊತೆಯಾದೆ', ಪೃಥ್ವಿ ಕುಲಕರ್ಣಿ ರವರ ನಿರ್ದೇಶನದ 'ಪಾರ್ವತಿ ಪರಮೇಶ್ವರ', 'ಪಾಂಡುರಂಗ ವಿಠಲ', ಪಂಚರಂಗಿ ಪೊಂ ಪೊಂ', ಗುರುರವರ ನಿರ್ದೇಶನದ 'ರೌರವ', ಸೇತುರಾಮ್ ರವರ ನಿರ್ದೇಶನದ 'ಅನಾವರಣ'ದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 

ಮಂಜುನಾಥ್ ಮನ್ಸೂರ್ ಮತ್ತು ಸಂತೋಷ್ ಕೊಡೆನ್ಕೆರಿ ನಿರ್ದೇಶನದ 'ಹರಿವು', ಬಿ.ಸುರೇಶ್ ರವರ 'ಕವಲೊಡೆದ ದಾರಿ', ಅರವಿಂದ್ ಕುಪ್ಲಿಕರ್ ನಿರ್ದೇಶನದ ಟಿಕೆಟ್, Kಶ್ರೀ ರವರ ನಿರ್ದೇಶನದ 'ನೀವು ಸರದಿಯಲ್ಲಿದ್ದೀರಿ', ಗುರು ನಿರ್ದೇಶನದ 'ಮರ್ಡರ್', ಎಂಬ ಕಿರುಚಿತ್ರಗಳಲ್ಲಿ ನಟಿಸಿದ ವಿಜಯ್ ಎಂ.ಎಲ್.ಪ್ರಸನ್ನ ರವರ ನಿರ್ದೇಶನದ  'ರಂಗಪ್ಪ ಹೋಗ್ಬಿಟ್ನ', ರಘು ರಾಜ್ ರವರ  ನಿರ್ದೇಶನದ 'ರಾಮ ರಾಮ ರಘುರಾಮ', ಎಂ.ಎಸ್.ರಮೇಶ್ ರವರ ನಿರ್ದೇಶನದ 'ವಿಲನ್' ಮತ್ತು 'ದಾಸ್ವಾಳ', ಪ್ರಕಾಶ್ ರಾಜ್/ರೈ  ಅಭಿನಯಿಸಿ ನಿರ್ದೇಶಿಸುತ್ತಿರುವ ಮೂರು ಭಾಷೆಯ 'ಒಗ್ಗರಣೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ 

ವಿಜಯ್, ಸಂಚಾರಿ ವಿಜಯ್ ಆದದ್ದೇಕೆ?

ರಂಗಾಯಣ ರಘು ಅವರ ಪತ್ನಿ ಎನ್.ಮಂಗಳ ಅವರ ಸಂಚಾರಿ ಥೀಯೇಟರ್ ತಂಡದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡು ಬಂದ ವಿಜಯ್'ಹೆಸರಿನ ಮುಂದೆ ಸಂಚಾರಿ ಎಂಬ ಪದವೂ ಅಂಟಿಕೊಂಡು ಇಂದು “ಸಂಚಾರಿ ವಿಜಯ್” ಆಗಿ ನಮ್ಮೆದುರಿಗಿದ್ದಾರೆ. 

ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ

೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಇದುವರೆಗೂ ಇಬ್ಬರು ಕನ್ನಡಿಗರಿಗೆ ಲಭಿಸಿತ್ತು. ೧೯೭೫ರಲ್ಲಿ ಎಂ.ವಿ. ವಾಸುದೇವ ರಾವ್ (ಚೋಮನ ದುಡಿಯಲ್ಲಿನ ಚೋಮನ ಪಾತ್ರ), ೧೯೮೬ರಲ್ಲಿ ಚಾರುಹಸನ್ (ತಬರನ ಕತೆಯ ತಬರ ಶೆಟ್ಟಿಯ ಪಾತ್ರ) ಈ ಗೌರವಕ್ಕೆ ಪಾತ್ರರಾಗಿದ್ದರು.

ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ

೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಗೆ ಇದುವರೆಗೂ ಮೂವರು ಕನ್ನಡಿಗರು ಭಾಜನರಾಗಿದ್ದರು.೧೯೭೩ರಲ್ಲಿ ನಂದಿನಿ ಭಕ್ತವತ್ಸಲ (ಕಾಡುವಿನಲ್ಲಿನ ಕಮಲಿ ಪಾತ್ರ), ೨೦೦೪ರಲ್ಲಿ ತಾರಾ (ಹಸೀನಾ ಚಿತ್ರದಲ್ಲಿನ ಹಸೀನಾ ಪಾತ್ರ) ಹಾಗೂ ೨೦೦೭ರಲ್ಲಿ ಉಮಾಶ್ರೀ (ಗುಲಾಬಿ ಟಾಕೀಸ್ ನಲ್ಲಿನ ಗುಲಾಬಿ ಪಾತ್ರ) ಈ ಉನ್ನತ ಪುರಸ್ಕಾರಕ್ಕೆ ಪಾತ್ರರಾಗಿದ್ದರು. 


Friday, March 13, 2015

ರಣಜಿ ಟ್ರೋಫಿ: ಕರ್ನಾಟಕ ಚಾಂಪಿಯನ್

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಕ್ರಿಕೆಟ್ಫೈನಲ್ಪಂದ್ಯದಲ್ಲಿ ಕರ್ನಾಟಕವು ಇನಿಂಗ್ಸ್ಹಾಗೂ 217 ರನ್ಗಳಜಯ ಪಡೆದು 2014-15ನೇ ಸಾಲಿನ ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡ ವಿನಯ್ಬಳಗವು ಸತತ ಎರಡನೇ ಬಾರಿ ರಣಜಿ ಟೂರ್ನಿಯ ಚಾಂಪಿಯನ್ಆಗಿ ಹೊರಹೊಮ್ಮಿದೆ.

Ranaji Trophy 2015 Champions 


ರಣಜಿ ಇತಿಹಾಸ
Raja Bhupindar Singh

ಜುಲೈ 1934 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಭೆ ನಂತರ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್" ಎನ್ನುವ ಕ್ರಿಕೆಟ್ ಸರಣಿ ಪ್ರಾರಂಭಗೊಂಡಿತು. 1934-35 ರಲ್ಲಿ ಮೊದಲ ರಣಜಿ ಪಂದ್ಯಗಳು ನಡೆದವು. ಪಟಿಯಾಲದ ಮಹರಾಜ ಭುಪಿಂದರ್ ಸಿಂಗ್ 1911ರಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡಿದ್ದ ಬಾರತೀಯ ಕ್ರಿಕೆಟ್ ತ್ಂಡದ ನಾಯಕರಾಗಿದ್ದರುಅವರು ಕುಮಾರ್ ಶ್ರೀ ರಂಜಿತ್ಸಿಂಹಜೀ, ಸಿನ್ಜಿ ಜಾಮ್ ಸಾಹಿಬ್ ಗೌರವಾರ್ಥವಾಗಿ ರಣಜಿ ಟ್ರೋಫಿ ದಾನವಾಗಿ ನೀಡಿದ್ದರು. ಇಲ್ಲಿಂದ ಮುಂದೆ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್"ಎಂದಿದ್ದ್ ಸರಣಿಅಯ ಹೆಸರನ್ನು ರಣಜಿ ಟ್ರೋಫಿ ಕ್ರಿಕೆಟ್ ಸರಣಿ ಎಂದು ಬದಲಾಯಿಸಲಾಗಿತ್ತು.
ಮೊದಲ ರಣಜಿ ಟ್ರೋಫಿ ಚಾಂಪಿಯನ್ಷಿಪ್ ಬಾಂಬೆ ಗೆದ್ದುಕೊಂಡಿತು. ಅಂತಿಮ ಸುತ್ತಿನ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿದ ಮುಂಬೈ ಸಾಧನೆ ಮಾಡಿತ್ತು. ಹೈದರಾಬಾದ್ ತಂಡದ ಸೈಯದ್ ಮೊಹಮ್ಮದ್ ಹದಿ ರಣಜಿ ಪಂದ್ಯಾವಳಿಯಲ್ಲಿ ಮೊದಲ ಶತಕ ಬಾರೀಸಿದ್ ದಾಖಲೆ ಮಾಡಿದ್ದರು. ಇದುಅವರೆಗೆ ಮುಂಬೈ ಒಟ್ಟೂ 40 ಬಾರಿ ಪ್ರಶಸ್ತಿ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ,ಕರ್ನಾಟಕ 8 ಬಾರಿ ಪ್ರಶಸ್ತಿ ಗಳಿಸಿ ಎರಡನೇ ಸ್ಥಾನದಲ್ಲಿದೆ.

ರಣಜಿ ಕುರಿತಂತೆ ಮುಖ್ಯ ಮಾಹಿತಿಗಳು ಕೆಳಗಿನಂತಿವೆ
ಕರ್ನಾಟಕ ಪ್ರಶಸ್ತಿ ಗೆದ್ದ ವರ್ಷ ಹಾಗೂ ನಾಯಕರು
ವರ್ಷ
ಸ್ಥಳ
ನಾಯಕ
ಎದುರಾಳಿ ತ್ಂಡ
1973 - 74
ಜೈಪುರ
ಎರ್ರಪಳ್ಳಿ ಪ್ರಸನ್ನ
ರಾಜಾಸ್ಥಾನ
1977 - 78
ಮೋಹನ್ ನಗರ
ಎರ್ರಪಳ್ಳಿ ಪ್ರಸನ್ನ
ಉತ್ತರ ಪ್ರದೇಶ
1982 – 83
ಮುಂಬೈ
ಬ್ರಿಜೇಶ್ ಪಟೇಲ್
ಮುಂಬೈ
1995 – 96
ತಮಿಳು ನಾಡು
ಅನಿಲ್ ಕುಂಬ್ಳೆ
ಚೆನ್ನೈ
1997 – 98
ಉತ್ತರ ಪ್ರದೇಶ
ರಾಹುಲ್ ದ್ರಾವಿಡ್
ಬೆಂಗಳೂರು
1998 – 99
ಮಧ್ಯ ಪ್ರದೇಶ
ಸುನಿಲ್ ಜೋಷಿ
ಬೆಂಗಳೂರು
2013 – 14
ಹೈದರಾಬಾದಾಛ್
ವಿನಯ್
ಮಹಾರಾಷ್ಟ್ರ
2014 - 15
ಮುಂಬೈ
ವಿನಯ್
ತಮಿಳು ನಾಡು






ಅಂತಿಮ ಸ್ಕೋರ್ ವಿವರ
ತಮಿಳುನಾಡು  134 (62.4 ಓವರ್ಗಳಲ್ಲಿ)
ಕರ್ನಾಟಕ ಮೊದಲ ಇನಿಂಗ್ಸ್‌ 231.2 ಓವರ್ಗಳಲ್ಲಿ 762
ತಮಿಳುನಾಡು ಎರಡನೇಇನಿಂಗ್ಸ್ 107.5 ಓವರ್ಗಳಲ್ಲಿ 411
(ಬುಧವಾರದ ಅಂತ್ಯಕ್ಕೆ 40 ಓವರ್ಗಳಲ್ಲಿ 3 ವಿಕೆಟ್ಗೆ 113)

ಬಾಬಾ ಅಪರಾಜಿತ್ಸಿ ರಾಬಿನ್ ಉತ್ತಪ್ಪ ಬಿ ಎಸ್‌. ಅರವಿಂದ್‌  68
ವಿಜಯ್ಶಂಕರ್ಸಿ ಮತ್ತು ಬಿ ವಿನಯ್ಕುಮಾರ್‌  103
ದಿನೇಶ್ಕಾರ್ತಿಕ್ಸಿ ಅರವಿಂದ್ಬಿ ಶ್ರೇಯಸ್ಗೋಪಾಲ್‌  120
ರಾಮಸ್ವಾಮಿ ಪ್ರಸನ್ನ ಸಿ ಮನೀಷ್ ಪಾಂಡೆ ಬಿ ಎಚ್‌.ಎಸ್. ಶರತ್‌  08
ಎಂ. ರಂಗರಾಜನ್ ಸಿ ಮನೀಷ್ಪಾಂಡೆ ಬಿ ಅರವಿಂದ್‌  33
ಅಶ್ವಿನ್ಕ್ರೈಸ್ಟ್ಸ್ಟಂಪ್ಡ್ರಾಬಿನ್ಉತ್ತಪ್ಪ ಬಿ ಶ್ರೇಯಸ್ಗೋಪಾಲ್‌  00
ಲಕ್ಷ್ಮಿಪತಿ ಬಾಲಾಜಿ ಔಟಾಗದೆ  05
ಪ್ರಶಾಂತ್ ಪರಮೇಶ್ವರನ್‌ (ಬ್ಯಾಟ್ಮಾಡಲು ಬರಲಿಲ್ಲ)  00
ಇತರೆ: (ಬೈ-3, ಲೆಗ್ಬೈ-6, ವೈಡ್‌-5, ನೋ ಬಾಲ್‌-2)  16

ವಿಕೆಟ್ಪತನ: 4-191 (ಅಪರಾಜಿತ್‌; 60.3), 5-306 (ಶಂಕರ್‌; 80.6), 6-344 (ಪ್ರಸನ್ನ; 87.5), 7-379 (ಕಾರ್ತಿಕ್‌; 96.1), 8-379 (ಅಶ್ವಿನ್‌; 98.1), 9-411 (ರಂಗರಾಜನ್‌; 107.5)

ಬೌಲಿಂಗ್‌: ಅಭಿಮನ್ಯು ಮಿಥುನ್ 18-2-84-0, ಎಚ್‌.ಎಸ್. ಶರತ್‌ 20-4-77-1, ಎಸ್. ಅರವಿಂದ್‌ 21.5-6-52-2, ಶ್ರೇಯಸ್ ಗೋಪಾಲ್ 25-4-126-4, ವಿನಯ್ಕುಮಾರ್‌ 21-8-43-2, ಆರ್‌. ಸಮರ್ಥ್‌ 2-0-20-0.
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್ಹಾಗೂ 217 ರನ್ಗೆಲುವು.
ಪಂದ್ಯ ಶ್ರೇಷ್ಠ: ಕರುಣ್ನಾಯರ್

Sunday, March 08, 2015

ಔಟ್‌ಲುಕ್‌ ಸಂಸ್ಥಾಪಕ ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ವಿಧಿವಶ

 ಹಿರಿಯ ಪತ್ರಕರ್ತ ಹಾಗೂ ಔಟ್ ಲುಕ್ ವಾರಪತ್ರಿಕೆ ಸಮೂಹ ಸಂಸ್ಥೆ ಸ್ಥಾಪಕ ಅಧ್ಯಕ್ಷ ವಿನೋದ್ ಮೆಹ್ತಾ ಅವರು ಭಾನುವಾರ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ರಾವಲ್ಪಿಂಡಿ(ಪಾಕಿಸ್ತಾನ)ಯಲ್ಲಿ ಫೆ.1, 1942ರಂದು ಜನಿಸಿದ ಮೆಹ್ತಾ ಅವರು ಔಟ್ ಲುಕ್ ಮ್ಯಾಗಜೀನ್ ನ ಸ್ಥಾಪಕ, ಸಂಪಾದಕರಾಗಿ ಹಾಗೂ ಮುಖ್ಯಸ್ಥರಾಗಿ 2012ರ ತನಕ ಕಾರ್ಯನಿರ್ವಹಿಸಿದರು.ದಿ ಇಂಡಿಪೆಂಡೆಂಟ್, ಡಬೋನೇರ್, ಸಂಡೇ ಅಬ್ಸರ್ವರ್, ಪಯನಿಯರ್, ಇಂಡಿಯನ್ ಪೋಸ್ಟ್ ಸೇರಿದಂತೆ ದೇಶದ ಪ್ರತಿಷ್ಠಿತ ದಿನಪತ್ರಿಕೆ ಮತ್ತು ವಾರಪತ್ರಿಕೆಗಳ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಹಿಂದಿ ಚಿತ್ರರಂಗದ ಪ್ರಬುದ್ಧ ನಟಿ ಮೀನಾಕುಮಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುತ್ರ ಸಂಜಯ್‌ಗಾಂಧಿ ಅವರ ಜೀವನಚರಿತ್ರೆಯ ಪುಸ್ತಕ ಬರೆದು ಜನಪ್ರಿಯರಾಗಿದ್ದರು. 

ದೇಶದ ಪ್ರಚಲಿತ ವಿದ್ಯಮಾನಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಕುರಿತು ಮೆಹ್ತಾ ಅವರು ಖಡಕ್ ಆಗಿ ತಮ್ಮ ವಾದ ಮಂಡಿಸುತ್ತಿದ್ದರು.ದೇಶದ ಅನೇಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಉತ್ತಮ ಒಡನಾಟ ಹೊಂದಿದ್ದ ಮೆಹ್ತಾ ಅವರು ಮಾಧ್ಯಮ ಜಗತ್ತಿನ ದಿಗ್ಗಜರಲ್ಲಿ ಒಬ್ಬರಾಗಿ ಸದಾ ಕಾಲ ಸ್ಮರಿಸಲ್ಪಡುತ್ತಾರೆ.

ದಿನಾಂಕ ೦೫-೦೭-೨೦೧೪ರಂದು ಕನ್ನಡದ ಖ್ಯಾತ ಪತ್ರಿಕೆ ಪ್ರಜಾ ವಾಣಿಯಲ್ಲಿ ಪ್ರಕಟವಾದಾ ಅವರ ಲೇಖನವಿದು ಮೆಹ್ತಾ ನಿಧನದ ಈ ಸಮಯದಲ್ಲಿ ಅವರ ಈ ಲೇಖನವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆ ಹಿರಿಯ ಚೇತನಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಹಾರೈಸೋಣ.

***
Vinod Mehtha - February 01 - 1942 - March 08 - 2015

ಪ್ರಬಲ ನಾಯಕನ ಸುತ್ತ ಆಸೆಗಳು, ಭಯಗಳು

ನರೇಂದ್ರಮೋದಿ ಬಹಳ ಅದ್ದೂರಿ­ಯಾಗಿ ಪ್ರಧಾನಿ ಪದವಿಯನ್ನು ಗೆದ್ದು­ಕೊಂಡಿದ್ದಾರೆ. ಅವರು ಇಷ್ಟೊಂದು ಭವ್ಯವಾಗಿ ಗೆದ್ದು­ಕೊಳ್ಳಲು ಸಾಧ್ಯ­ವಾದದ್ದು ಜನರು ಅವರನ್ನು ಮನ­ಮೋಹನ್ ಸಿಂಗ್ ಅವರಂತಲ್ಲದ ‘ಬಲಿಷ್ಠ ನಾಯಕ’ ಎಂದು ಭಾವಿಸಿ­ದ್ದರಿಂದ.

ದೇಶಕ್ಕೆ ಈಗ ದೃಢ ನಿಶ್ಚಯ­ವುಳ್ಳ ನಾಯಕತ್ವ ಬೇಕಾಗಿದೆ ಎಂಬು­ದನ್ನು ನಾನು ಒಪ್ಪುತ್ತೇನೆ. ಆದರೆ ಇಂಥ ಅತೀ ಪ್ರಬಲ ನಾಯಕರು ಪ್ರಜಾ­ಸತ್ತಾತ್ಮಕ ಮತ್ತು ಕಾನೂನುಬದ್ಧ ಆಡಳಿತಕ್ಕೆ ಅಪಾಯಕಾರಿಯಾಗಿಯೂ ಇರುತ್ತಾರೆ. ಪ್ರಬಲ ನಾಯಕನೊಬ್ಬ ಅಗತ್ಯವಿರುವುದನ್ನು ಮಾಡಿಯೇ ತೀರುತ್ತಾನೆ ಎಂಬುದರಲ್ಲಿ ಸಂಶಯ­ವಿಲ್ಲ. ಮೋದಿ ಈ ವಿಷಯದಲ್ಲಿ ಈಗಾಗಲೇ ತಾವೇನು ಎಂಬುದನ್ನು ಸಾಬೀತು ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಅರಾಜಕತೆಯ ವಾತಾವರಣದಲ್ಲಿ ನ್ಯಾನೋ ಕಾರು ತಯಾರಿಕಾ ಘಟಕದ ಯೋಜನೆ ವಿಫಲವಾದಾಗ ರತನ್ ಟಾಟಾ ರಾತ್ರೋರಾತ್ರಿ ಅದನ್ನು  ಗುಜ­ರಾತ್‌ಗೆ ವರ್ಗಾಯಿಸಲು ತೀರ್ಮಾನಿ­ಸಿದರು. ಮೋದಿ ಮೂರು–ನಾಲ್ಕು ದಿನಗಳಲ್ಲಿ ಯೋಜನೆಯನ್ನು ಕಾರ್ಯ­ರೂಪಕ್ಕೆ ತರಲು ಬೇಕಿರುವ ಎಲ್ಲಾ ಪರವಾನಿಗೆಗಳನ್ನು ದೊರಕಿಸಿ­ಕೊಂಡು ರತನ್ ಟಾಟಾ ಮೇಜಿನ ಮೇಲಿಟ್ಟರು. ಆದ್ದರಿಂದ ಸಹಜವಾಗಿಯೇ ರತನ್ ಟಾಟಾ ಮೋದಿ­ಯವರ ದೊಡ್ಡ ಬೆಂಬಲಿಗರಲ್ಲಿ ಒಬ್ಬರಾದರು.

ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿರುವ ಮತದಾರರಿಗೆ ನರೇಂದ್ರ ಮೋದಿಯವರ ಗುಜರಾತ್ ಅಭಿವೃದ್ಧಿ ಮಾದರಿ ಮನಸ್ಸಿಗೆ ನಾಟಿದೆ.

ಆದರೆ ಈ ಅಭಿವೃದ್ಧಿಯನ್ನು ಸಾಧಿಸಿದ್ದು ಹೇಗೆ? ಯಾವ ನಾಯಕನೂ ಬಹಿರಂಗವಾಗಿ ‘ನಾನು ಎಲ್ಲಾ ಪ್ರಜಾಸತ್ತಾತ್ಮಕ ನೀತಿ­ಗಳನ್ನು ಬದಿಗಿರಿಸಿ ದಿಢೀರ್ ಫಲಿತಾಂಶ­ಗಳನ್ನು ನೀಡುತ್ತೇನೆ’ ಎಂದು ಹೇಳುವು­ದಿಲ್ಲ. ಆತ ಆರಂಭದಲ್ಲಿ ನಿಯಮಗಳನ್ನು ಅಕ್ಷರಶಃ ಪಾಲಿಸುವವನಂತೆ ನಟಿಸುತ್ತಾನೆ. ಕಾನೂ­ನಿನ ಪರಿಧಿ­ಯೊಳಗೇ ತನ್ನ ಕಾರ್ಯಸೂಚಿ­ಯನ್ನು ಜಾರಿಗೆ ತರುವ ಭರವಸೆಗಳನ್ನು ನೀಡುತ್ತಾನೆ.

ಭಾರೀ ಜನಾದೇಶವನ್ನು ಪಡೆದಿರುವ ಮೋದಿ, ನಿಯಮಗಳನ್ನು ಬದಿಗಿರಿಸಿ ಮುಂದುವರಿಯುವ ಅಡ್ಡದಾರಿಗಳನ್ನು ಅವಲಂಬಿಸುವ ಪ್ರಲೋಭನೆಗೆ ಒಳಗಾಗಬಹುದು. ಹೀಗೆ ಮಾಡಿದ ಮೇಲೆ ‘ಕೆಲವು ನಿಯಮಗಳನ್ನು ಮುರಿದರೆ ಅದರಲ್ಲಿ ತಪ್ಪೇನೂ ಇಲ್ಲ.

ಕಾರ್ಯಸಾಧನೆಯಲ್ಲಿ ನಾನು ಚತುರ ಎಂಬ ಕಾರಣಕ್ಕಾಗಿ ನನಗೆ ಜನಾದೇಶ ದೊರೆತಿದೆ. ನೀವು ನನ್ನ ಕೆಲಸ ನೋಡಿ. ಅದನ್ನು ಹೇಗೆ ಮಾಡಿದೆ ಎಂಬ ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಲೂಬಹುದು.

ಇದನ್ನೆಲ್ಲಾ ಸಾರ್ವಜನಿಕರ ಸಮ್ಮತಿಯೊಂದಿಗೇ ಮಾಡಬಹುದು ಎಂಬುದು ಈ ಸನ್ನಿವೇಶದ ಭೀತಿ­ದಾಯಕ ಆಯಾಮ. ಅಂದರೆ ಮೋದಿಯವರನ್ನು ಪ್ರಧಾನಿ ಪದವಿಗೆ ಏರಿಸಿದ ಮತದಾರರು ಆತ ಮಾಡಬಹುದಾದ ಈ ಬಗೆಯ ತಪ್ಪುಗಳನ್ನು ಕಡೆಗಣಿಸುವುದಕ್ಕೂ ಸಿದ್ಧರಾಗಿದ್ದಾರೆ. ನಿಯಮೋ­ಲ್ಲಂಘನೆಗೆ ರಾಷ್ಟ್ರೀಯ ಹಿತಾಸಕ್ತಿಯ ಲೇಪವಿರು­ವಾಗ ಇದು ಸುಲಭವೂ ಹೌದು. ಇದು ಮತ್ತೆ ನಮ್ಮನ್ನು ಗುರಿ ಮತ್ತು ಮಾರ್ಗದ ಹಳೆಯ ಪ್ರಶ್ನೆಗೇ ತಂದು ನಿಲ್ಲಿಸುತ್ತದೆ. ಗುರಿ ಬಹಳ ಮುಖ್ಯ–ಹೌದು ಅದು ಮುಖ್ಯವೇ, ಅದನ್ನು ಯಾರು ನಿರಾಕರಿಸು­ತ್ತಾರೆ–ಆದ್ದರಿಂದ ಅದನ್ನು ಸಾಧಿಸುವ ಮಾರ್ಗದ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳಬೇಡಿ ಎಂಬ ತರ್ಕದೊಂದಿಗೆ ಎಲ್ಲವೂ ಆರಂಭವಾಗುತ್ತದೆ.

ರಾಷ್ಟ್ರೀಯ ಸಮ್ಮತಿಯೊಂದಿದೆ ಎಂದಾದಾಗ, ಮೋದಿ ಕಾನೂನುಗಳನ್ನು ಮೀರುವಾಗ, ಅದನ್ನು ಪ್ರಶ್ನಿಸಬೇಕಾದ ಪೌರ ಮತ್ತೆಲ್ಲೋ ನೋಡುತ್ತಾ ಅದನ್ನು ನಿರ್ಲಕ್ಷಿಸಿಬಿಡುತ್ತಾನೆ. ಕಾರಣ ಆತನಿಗೂ ಮೋದಿಯವರಂತೆ ಮಾರ್ಗಕ್ಕಿಂತ ಗುರಿಯೇ ಮುಖ್ಯ. ಕೆಲವು ಸಾವಿರ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದಿ­ದ್ದರೆ ಅವರನ್ನೊಂದು ಲಾರಿಯಲ್ಲಿ ತುಂಬಿಸಿ ದೂರ ಕೊಂಡೊಯ್ಯುವುದರಲ್ಲಿ ತಪ್ಪಿಲ್ಲ. ಅವರಿಗೆ ತಿನ್ನಲೊಂದಿಷ್ಟು ಆಹಾರ ಮತ್ತು ಸ್ವಲ್ಪ ಪರಿಹಾರವನ್ನು ಕೊಟ್ಟರೆ ಸಾಕು ಎಂಬ ನಿಲುವಿಗೆ ಪೌರನೂ ಬಂದುಬಿಟ್ಟಿರುತ್ತಾನೆ.

ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬಹಳ ಜಾಗರೂಕತೆಯಿಂದ ಕಾಪಾಡಬೇಕು. ಪ್ರಧಾನಿ ಪದವಿಯಲ್ಲಿರುವ ಮೋದಿಯವರಿಗೆ ಬೇಕಿರುವುದು ತನ್ನ ಕಾರ್ಯಸಾಧನೆಗೆ ಅಗತ್ಯವಿರುವ ಅವಕಾಶ ಮಾತ್ರ. ಆದರೆ ದೇಶ ನಿರಂತರವಾಗಿ  ಅಧಿಕಾರಕ್ಕಿರುವ ಲಕ್ಷ್ಮಣರೇಖೆಯನ್ನು ಮೋದಿಯವರಿಗೆ ನೆನಪಿಸುತ್ತಿರಬೇಕು.

ಗುಜರಾತ್‌ನಲ್ಲಿ ಈಗಾಗಲೇ ಸ್ವಜನಪಕ್ಷಪಾತದ ಬಂಡವಾಳಶಾಹಿ ಮಿತಿಮೀರಿದೆ. ಈ ಕುರಿತಂತೆ ದೇಶ ಎಚ್ಚರದಿಂದ ಇರಬೇಕು. ಎಲ್ಲಾ ಬಗೆಯ ಶೋಷಣೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿರುವ ದೇಶದ ಖನಿಜ ಸಂಪತ್ತಿನ ವಿಚಾರದಲ್ಲೂ ಇದೇ ಎಚ್ಚರವಿರಬೇಕು.

ಈ ಖನಿಜ ಸಂಗ್ರಹವಿರುವ ಭೂಮಿಯ ಮೇಲೆ ನಮ್ಮ ದೇಶದ ಬಡವರು ವಾಸಿಸುತ್ತಿದ್ದಾರೆ. ಖನಿಜಗಳನ್ನು ಹೊರತೆಗೆದು ಬಳಸುವುದಕ್ಕೆ ಅಲ್ಲಿ ಬದುಕುತ್ತಿರುವ ಹತ್ತಾರು ಸಾವಿರ ಪೌರರನ್ನು ನಿರ್ವಸಿತರನ್ನಾಗಿಸಬೇಕಾಗುತ್ತದೆ. ಪರಿಹಾರದ ವ್ಯವಸ್ಥೆ­ಯೊಂದನ್ನು ರೂಪಿಸಿರುವುದರಿಂದ ಖನಿಜಯುಕ್ತ ಭೂಮಿಯ ಸ್ವಾಧೀನ ಕಾನೂನುಬದ್ಧ. ಜೊತೆಗೆ ನಾಗರಿಕ ಸಮಾಜವೂ ಸಾಕಷ್ಟು ಎಚ್ಚರದಿಂದ ಇರುವುದರಿಂದ ನಿರ್ವಸಿತರಾ­ಗುವವರಿಗೆ ಸಲ್ಲಬೇಕಾದುದರಲ್ಲಿ ಶೇಕಡಾ 70ರಿಂದ 75ರಷ್ಟಾದರೂ ದೊರೆಯುತ್ತಿದೆ. ಒಂದೆರಡು ಪ್ರಕರಣಗಳಲ್ಲಿ ಸ್ಥಳೀಯರು ‘ನೀವೆಷ್ಟು ಹಣ ಕೊಡುತ್ತೀರಿ ಎಂಬುದು ನಮಗೆ ಮುಖ್ಯವಲ್ಲ. ನಾವು ಭೂಮಿ ಬಿಟ್ಟುಕೊಡುವುದಿಲ್ಲ’ ಎಂದಿದ್ದಾರೆ. ಇಂಥಲ್ಲಿ ಸರ್ಕಾರ ತಲೆಬಾಗಿ ಜನರ ಮಾತನ್ನು ಒಪ್ಪಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಮೋದಿ ಏನು ಮಾಡುತ್ತಾರೆ?

ವಾಸ್ತವದಲ್ಲಿ ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ನಾನು ಹೇಳಲಾರೆ. ಆದರೆ ಪ್ರಬಲ ನಾಯಕನೊಬ್ಬ ನ್ಯಾಯಬದ್ಧ ಪರಿಹಾರವನ್ನು ಕೊಡದೆಯೇ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿದೆ ಮತ್ತು ಅವರಿಗೆ ನ್ಯಾಯಬದ್ಧ ಪರಿಹಾರ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಬಲ್ಲ. ಉತ್ತಮ ಆಡಳಿತ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಶೀಘ್ರ­ಗತಿಯ ಅನುಷ್ಠಾನಗಳು ಒಂದಕ್ಕೊಂದು ಹೊಂದಿಕೊಳ್ಳು­ವುದಿಲ್ಲ ಎಂದು ನನಗನ್ನಿಸಿಲ್ಲ. ಪ್ರಬಲ ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವಗಳು ಪ್ರಗತಿಗೆ ಅಡ್ಡಿ ಎಂದು ನಂಬುವ ಪ್ರಬಲ ಚಿಂತನಾ ವಿಧಾನವೊಂದಿದೆ. ಯಶಸ್ವೀ ಪ್ರಧಾನಿಗೆ ವ್ಯವಸ್ಥೆಯನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದರ ಅರಿವಿರಬೇಕು. ಅದೃಷ್ಟವಶಾತ್ ನರೇಂದ್ರ ಮೋದಿ ಅವರಿಗೆ ವ್ಯವಸ್ಥೆಯೊಳಗೇ ತನಗೆ ಬೇಕಿರುವುದನ್ನು ಸಾಧಿಸುವುದಕ್ಕೆ ಅಗತ್ಯವಿರುವ ಚಾತುರ್ಯವಿದೆ. ಆದರೆ ಇದು ನಿಧಾನ­ಗತಿಯಲ್ಲಿ ನಡೆಯುವ ಕ್ರಿಯೆ ಎಂಬುದೂ ಅವರಿಗೆ ಗೊತ್ತಿದೆ.

ಶೀಘ್ರಗತಿಯಲ್ಲಿ ಕೆಲಸ ಮಾಡುವ ಪ್ರಸಿದ್ಧಿಯೊಂದಿಗೆ ಪ್ರಧಾನಿ ಪದವಿಗೆ ಏರಿರುವ ಮೋದಿಯವರಿಗೆ ಈ ಪ್ರಸಿದ್ಧಿ­ಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯೂ ಇರ­ಬ­­ಹುದು. ವ್ಯವಸ್ಥೆಯೊಳಗೆಯೇ ತನಗೆ ಬೇಕಿರುವ ಕೆಲಸ ಮಾಡಿಸಿ­ಕೊಳ್ಳಲು ಅವರಿಗೆ ಗೊತ್ತಿದೆ. ಇಂಥವರಿಗೆ ವ್ಯವಸ್ಥೆಯನ್ನು ಮೀರಿದರೆ ಆ ಕೆಲಸಗಳನ್ನು ಶೀಘ್ರಗತಿಯಲ್ಲಿ ಮಾಡಬಹುದು ಎಂಬುದೂ ತಿಳಿದಿರುತ್ತದೆ. ಇದೇ ಇಲ್ಲಿರುವ ಅಪಾಯ. ಹೊಸ ಪ್ರಧಾನಿ ಯಾವ ಹಾದಿಯನ್ನು ಆರಿಸಿಕೊಳ್ಳುತ್ತಾರೆ?

ತಮ್ಮ ಭಾಷಣಗಳಲ್ಲಿ ಮತ್ತೆ ಮತ್ತೆ  ನನಗೆ ‘ಒಂದು ಅವಕಾಶ ಕೊಡಿ’ ಎಂದು ಮೋದಿ ಮತದಾರರನ್ನು ವಿನಂತಿಸಿ­ದ್ದಾರೆ. ಮತದಾರರೀಗ ಅವರಿಗೂ ಒಂದು ಅವ­ಕಾಶ ಕೊಟ್ಟಿದ್ದಾರೆ. ಮೋದಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದನ್ನವರು ಜಾಣತನದಿಂದ ಬಳಸುತ್ತಾರೆಂದು ಭಾವಿಸೋಣ. ಅವರ ಟೀಕಾಕಾರರೂ ಅವರಿಗೆ ಶುಭವನ್ನೇ ಹಾರೈಸುತ್ತಾರೆ.


ನಮ್ಮ ನಡುವಿನ ಮಹಿಳಾ ಸಾಧಕಿಯರು

ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ನಮ್ಮ ನಡುವಿನ ಅನೇಕ ಸಾಹಸಿ ಮಹಿಳೆಯರ ಯಶೋಗಾಥೆಯನು ನಮ್ಮ ನಮ್ಮ ನಾಡಿನ ಪ್ರಸಿದ್ದ ಪತ್ರಿಕೆಗಳು ಇಂದು ವರದಿ ಮಾಡಿವೆ. ಅವುಗಳ ಒಂದು ಝಲಕ್ ನಿಮಗಾಗಿ.
































Saturday, March 07, 2015

‘ನಾನು ಮಲಾಲ’: ಹಿಂಸೆಯ ನಡುವೆ ಅರಳಿದ ಶಾಂತಿದೂತೆ

ಇಂದು ವಿಶ್ವ ಮಹಿಳಾ ದಿನಾಚರಣೆ ಇಂದು ನಾನಾ ದೇಶದ ನಾನಾ ಮಹಿಳೆಯರು ತಾವು ವಿವಿಧ ಕ್ಷೇತ್ರಗಳಾಲ್ಲಿ ಅಮೋಘ ಸಾಧನೆ ಮಾವಿದ್ದಾರೆ. ಇಂತಹವರೆಲ್ಲರ ನಡುವೆ ಎದ್ದು ಕಾಣುವ ಪುಟ್ಟ ಸಾಧಕಿ ಮಲಾಲ. ಅತಿ ಚಿಕ್ಕ ವಯಸ್ಸಿಗೆ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರ್ಳವಾ ಆಕೆಯ ಜೀವನಗಾಥೆ “I Am Malala” ಪುಸ್ತಕವನ್ನು ಇತ್ತೀಚೆಗೆ ಓದಿದಾಗ ನಿಜಕ್ಕೂ ರೋಮಾಂಚನವಾಯಿತು. ತಾಲಿಬಾನಿಗರ ಗುಂಡಿಗೆ ಎದೆಯೊಡ್ಡಿ ಗೆದ್ದ ದಿಟ್ಟೆಯ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿ ನೀಡುವಂತಹುದು. ಇಂತಹಾ ಪುಸ್ತಕದ ಕನ್ನಡಾನುವಾದನಾನು ಮಲಾಲದಲ್ಲಿನ  ಎರಡು ಅಧ್ಯಾಯಗಳು ಇಲ್ಲಿ ನಿಮಗಾಗಿ..... ಇದು ವಿಶ್ವ ಮಹಿಳಾ ದಿನದ ವಿಶೇಷ....

***




ನನ್ನ ಹಾಡು, ನನ್ನ ಪಾಡು

ಅವು ನಿಜಕ್ಕೂ ಕತ್ತಲು ಕವಿದಿದ್ದ ದಿನಗಳು. ಆಗ ನನ್ನನ್ನು ಜೀವಂತವಾಗಿ ಇಟ್ಟಿದ್ದುದು ನಮ್ಮ ಶಾಲೆಯೊಂದೇ. ದಿನಗಳಲ್ಲಿ ನಾನು ಬೀದಿಯಲ್ಲಿ ಹೋಗುತ್ತಿದ್ದಾಗ ಯಾರಾದರೂ ಗಂಡಸರು ಎದುರಾದರೆ ಸಾಕು, ಅವರೊಬ್ಬ ತಾಲಿಬ್ ('ತಾಲಿಬ್' ಎಂದರೆ 'ಧಾರ್ಮಿಕ ವಿದ್ಯಾರ್ಥಿ' ಎಂಬುದು ನಿಜವಾದ ಅರ್ಥ. ಆದರೆ, ಬದಲಾದ ಪರಿಸ್ಥಿತಿಯಲ್ಲಿ 'ತಾಲಿಬ್' ಎಂದರೆ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಸದಸ್ಯ ಎಂದು ಬೇರೆ ಅರ್ಥ ಪ್ರಾಪ್ತಿಯಾಗಿತ್ತು) ಇರಬಹುದೇನೋ ಎಂಬ ಅನುಮಾನ ಬರುತ್ತಿತ್ತು. ಆಗೆಲ್ಲ ನಾವು ನಮ್ಮ ಸ್ಕೂಲ್ ಬ್ಯಾಗನ್ನೂ ಪುಸ್ತಕಗಳನ್ನೂ ಶಾಲುವಿನ ಒಳಗಡೆ ಮುಚ್ಚಿಟ್ಟುಕೊಳ್ಳುತ್ತಿದ್ದೆವು. ನಮ್ಮ ಅಪ್ಪ ಯಾವಾಗಲೂ, ಬೆಳಗಿನ ಹೊತ್ತು ಮಗುವೊಂದು ಸಮವಸ್ತ್ರ ಹಾಕಿಕೊಂಡು ಶಾಲೆಗೆ ಹೋಗುವ ಕ್ಷಣವೇ ಹಳ್ಳಿಯೊಂದರಲ್ಲಿ ಕಾಣುವ ತುಂಬಾ ಸುಂದರವಾದ ದೃಶ್ಯ ಎನ್ನುತ್ತಿದ್ದರು. ಆದರೆ ಈಗ ನಮಗೆ ಶಾಲಾ ಸಮವಸ್ತ್ರ ಹಾಕಿಕೊಳ್ಳುವುದಕ್ಕೇ ಭಯವಾಗುತ್ತಿತ್ತು.

ಅಂತೂ ಇಂತೂ ನಾವು ಹೈಸ್ಕೂಲಿನವರೆಗೂ ಓದಿದೆವು. ಆಗ ನಮ್ಮ ಮೇಡಂಗಳಲ್ಲಿ ಒಬ್ಬರಾಗಿದ್ದ ಮರಿಯಂ ಅವರು, 'ನೀವು ಸಿಕ್ಕಾಬಟ್ಟೆ ಪ್ರಶ್ನೆಗಳನ್ನು ಕೇಳುತ್ತೀರಂತೆ. ಹೀಗಾಗಿ ನಿಮ್ಮ ತರಗತಿಗೆ ಯಾರೊಬ್ಬರೂ ಪಾಠ ಮಾಡಲು ಇಷ್ಟಪಡೋದಿಲ್ಲ' ಎಂದರು. ನಮಗಾಗ, 'ಬುದ್ಧಿವಂತ ಹುಡುಗಿಯರು' ಎಂದು ಕರೆಸಿಕೊಳ್ಳುವ ಆಸೆಯಿತ್ತು. ರಜೆಯಲ್ಲೂ ಮದುವೆಗಳಿಗೂ ನಮ್ಮ ಕೈಗಳನ್ನು ಮದರಂಗಿಯಿಂದ ಸಿಂಗರಿಸಿಕೊಂಡಾಗ ಹೂವು ಮತ್ತು ಚಿಟ್ಟೆಗಳ ಚಿತ್ತಾರವನ್ನು ಬಿಡಿಸಿಕೊಳ್ಳುವ ಬದಲು ಕ್ಯಾಲಕ್ಯುಲಸ್(ಕಲನಶಾಸ್ತ್ರ) ಮತ್ತು ರಸಾಯನಶಾಸ್ತ್ರದ ಸಮೀಕರಣಗಳನ್ನು ಬಿಡಿಸಿಕೊಳ್ಳುತ್ತಿದ್ದೆವು. ತರಗತಿಯಲ್ಲಿ ನನಗೂ ಮಲ್ಕಾ--ನೂರ್ಗೂ ಸ್ಪರ್ಧೆ ಮುಂದುವರಿದೇ ಇತ್ತು. ಅವಳು ನಮ್ಮ ಸ್ಕೂಲಿಗೆ ಸೇರಿಕೊಂಡಾಗ ಆಕೆ ನನ್ನನ್ನು ಹಿಂದಿಕ್ಕಬಹುದು ಎಂದು ಆಘಾತವಾಗಿತ್ತು. ಹೀಗಾಗಿ ನಾನು ತುಂಬಾ ಕಷ್ಟಪಟ್ಟು ಓದಲು ಶುರು ಮಾಡಿದೆ. ಮೂಲಕ ನಾನು ನಮ್ಮ ತರಗತಿಯಲ್ಲಿ ಪ್ರಥಮ ಸ್ಥಾನದ ಗೌರವವನ್ನು ಹಾಗೆಯೇ ಕಾಪಾಡಿಕೊಂಡೆ. ಸಾಮಾನ್ಯವಾಗಿ ಮಲ್ಕಾ ದ್ವಿತೀಯ ಸ್ಥಾನವನ್ನೂ ಮೋನಿಬಾ ತೃತೀಯ ಸ್ಥಾನವನ್ನೂ ಪಡೆಯುತ್ತಿದ್ದರು. ಶಿಕ್ಷಕರು ನಮಗೆ, 'ಪರೀಕ್ಷೆಯಲ್ಲಿ ಮೊದಲಿಗೆ ನೀವು ಎಷ್ಟು ಬರೆದಿದ್ದೀರಿ ಎಂದು ನೋಡುತ್ತಾರೆ, ಆಮೇಲೆ ಅದನ್ನು ಬರೆದಿರುವ ರೀತಿಯನ್ನು ಗಮನಿಸುತ್ತಾರೆ' ಎಂದು ಹೇಳಿದ್ದರು. ನಮ್ಮ ಮೂವರ ಪೈಕಿ ಮೋನಿಬಾ ತುಂಬಾ ಮುದ್ದಾಗಿ ಬರೆಯುತ್ತಿದ್ದಳು; ಅವಳು ಉತ್ತರ ಬರೆಯುವ ರೀತಿಯೂ ಅಚ್ಚುಕಟ್ಟಾಗಿತ್ತು.

ಆದರೆ, ಅವಳಿಗೆ ತನ್ನ ಮೇಲೆ ತನಗೇ ನಂಬಿಕೆ ಇರಲಿಲ್ಲ. ನಾನು ಇದನ್ನು ಅವಳಿಗೆ ಯಾವಾಗಲೂ ಹೇಳುತ್ತಿದ್ದೆ. ಅವಳಿಗೇನಾದರೂ ಕಡಿಮೆ ಅಂಕಗಳು ಬಂದಿದ್ದರೆ ಅವಳ ಮನೆಯ ಗಂಡಸರೆಲ್ಲ ಅದನ್ನೇ ಒಂದು ನೆಪ ಮಾಡಿಕೊಂಡು ಆಕೆಯ ವಿದ್ಯಾಭ್ಯಾಸಕ್ಕೆ ತೆರೆ ಎಳೆದುಬಿಡುತ್ತಿದ್ದರು. ಭಯ ಅವಳಿಗಿದ್ದೇ ಇತ್ತು. ಹೀಗಾಗಿ ಅವಳು ತುಂಬಾ ಕಷ್ಟಪಟ್ಟು ಓದುತ್ತಿದ್ದಳು. ಗಣಿತ ನನ್ನ ತಲೆಗೆ ಹತ್ತುತ್ತಿರಲಿಲ್ಲ. ಒಂದು ಸಲವಂತೂ ಪರೀಕ್ಷೆಯಲ್ಲಿ ನಾನು ಸೊನ್ನೆ ಸುತ್ತಿದ್ದೆ. ಆದರೆ, ಆಮೇಲೆ ಕಷ್ಟಪಟ್ಟು ಗಣಿತವನ್ನು ಕಲಿತೆ. ರಸಾಯನಶಾಸ್ತ್ರವನ್ನು ನಮಗೆ ಪಾಠ ಮಾಡುತ್ತಿದ್ದ ಒಬೇದುಲ್ಲಾ ಅವರು, 'ನೀನು ನಿಜಕ್ಕೂ ಹುಟ್ಟು ರಾಜಕಾರಣಿ' ಎನ್ನುತ್ತಿದ್ದರು. ಏಕೆಂದರೆ, ಮೌಖಿಕ ಪರೀಕ್ಷೆ ಆರಂಭವಾಗುವಾಗ ನಾನು ಯಾವಾಗಲೂ 'ಸರ್, ನೀವೇ ನನ್ನ ಅಚ್ಚುಮೆಚ್ಚಿನ ಶಿಕ್ಷಕರು. ನಿಮ್ಮ ಕ್ಲಾಸೆಂದರೆ ನನಗೆ ಪಂಚಪ್ರಾಣ' ಎನ್ನುತ್ತಿದ್ದೆ.

ನಮಗೆ ಸ್ಕೂಲೆಂದರೆ ಇಷ್ಟೇ ಅಲ್ಲ, ಇನ್ನೂ ಹೆಚ್ಚಿನದಾಗಿತ್ತು. ನಾಟಕಗಳನ್ನು ಆಡುವುದೆಂದರೆ ನಮಗೆ ತುಂಬಾ ಇಷ್ಟವಾಗಿತ್ತು. 'ರೋಮಿಯೊ ಅಂಡ್ ಜೂಲಿಯಟ್' ನಾಟಕವನ್ನು ಆಧರಿಸಿ, ನಾನು ಭ್ರಷ್ಟಾಚಾರದ ಮೇಲೊಂದು ನಾಟಕ ಬರೆದಿದ್ದೆ. ಇದರಲ್ಲಿ ರೋಮಿಯೊ ಸರಕಾರಿ ಅಧಿಕಾರಿಯಾಗಿದ್ದು, ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳನ್ನು ಸಂದರ್ಶಿಸುತ್ತಿರುತ್ತಾನೆ. ಸಂದರ್ಶನಕ್ಕೆ ಬರುವ ಮೊದಲ ಅಭ್ಯರ್ಥಿ ಒಬ್ಬ ಚೆಲುವಾದ ಹುಡುಗಿ. ರೋಮಿಯೊ ಅವಳಿಗೆ 'ಒಂದು ಸೈಕಲ್ಲಿಗೆ ಎಷ್ಟು ಚಕ್ರಗಳಿರುತ್ತವೆ?' ಎಂಬಂಥ ತುಂಬಾ ಸುಲಭವಾದ ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಅವಳು, 'ಎರಡು' ಎಂದು ಉತ್ತರಿಸುತ್ತಾಳೆ. ಆಗ ಅವನು, 'ನೀನು ನಿಜಕ್ಕೂ ತುಂಬಾ ಬುದ್ಧಿವಂತೆ' ಎಂದು ಹೊಗಳುತ್ತಾನೆ. ಆಮೇಲೆ ಸಂದರ್ಶನಕ್ಕೆ ಬರುವ ಅಭ್ಯರ್ಥಿ ಒಬ್ಬ ಗಂಡಸು. ರೋಮಿಯೊ ಅವನಿಗೆ 'ನೀನು ಕುರ್ಚಿಯಿಂದ ಒಂದಿಷ್ಟೂ ಮೇಲೇಳದೆ, ನಮ್ಮ ತಲೆಯ ಮೇಲಿರುವ ಫ್ಯಾನನ್ನು ತಯಾರಿಸುವುದು ಹೇಗೆ?' ಎಂಬಂಥ ಕಷ್ಟದ ಪ್ರಶ್ನೆಗಳನ್ನು ಕೇಳುತ್ತಿದ್ದ. ಆಗ ಅಭ್ಯರ್ಥಿ, 'ಫ್ಯಾನ್ ತಯಾರಿಸುವುದು ನನಗೆ ಹೇಗೆ ಗೊತ್ತಿರುತ್ತೆ ಸರ್?' ಎನ್ನುತ್ತಿದ್ದ. ಅದಕ್ಕೆ ರೋಮಿಯೊ, 'ಪಿಎಚ್.ಡಿ ಮಾಡಿದೀನಿ ಅಂತ ಹೇಳ್ತೀಯ, ಆದ್ರೆ ಫ್ಯಾನ್ ಬಗ್ಗೆ ನಿನಗೇನೂ ಗೊತ್ತಿಲ್ಲ' ಎಂದು ಹೇಳುತ್ತಿದ್ದ. ಕೊನೆಗೆ, ರೋಮಿಯೊ ಕೆಲಸವನ್ನು ಹುಡುಗಿಗೆ ಕೊಡುತ್ತಿದ್ದ.

ನಾಟಕದಲ್ಲಿ ಹುಡುಗಿಯ ಪಾತ್ರ ಮಾಡಿದ್ದವಳು ಮೋನಿಬಾ. ಅದು ತುಂಬಾ ಸಹಜವಾಗಿತ್ತು. ಅವಳ ಜೊತೆಗೆ ನನ್ನ ಇನ್ನೊಬ್ಬ ಸಹಪಾಠಿ ಅತಿಯಾ ನನ್ನ ಸಹಾಯಕಿಯ ಪಾತ್ರವನ್ನು ನಿರ್ವಹಿಸಿದ್ದಳು. ಅವಳು ತನ್ನ ಹಾಸ್ಯ ಪ್ರವೃತ್ತಿಯಿಂದಾಗಿ ನಾಟಕಕ್ಕೆ ಸ್ವಲ್ಪ ಉಪ್ಪು-ಖಾರ ಬರುವಂತೆ ನೋಡಿಕೊಂಡಳು. ನಾಟಕ ನೋಡಿ ಪ್ರತಿಯೊಬ್ಬರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕರು. ಹಾಗೆಯೇ, ನಾನು ಇತರರನ್ನು ಅನುಕರಿಸಲು (ಮಿಮಿಕ್ರಿ) ಇಷ್ಟಪಡುತ್ತಿದ್ದೆ. ಮಧ್ಯಂತರ ವಿರಾಮಗಳು ಬಂದಾಗ ನನ್ನ ಗೆಳತಿಯರು, ನಮ್ಮ ಶಿಕ್ಷಕ-ಶಿಕ್ಷಕಿಯರನ್ನು -ಅದರಲ್ಲೂ ನಿರ್ದಿಷ್ಟವಾಗಿ ಒಬೇದುಲ್ಲಾ ಸರ್ ಅವರನ್ನು - ಮಿಮಿಕ್ರಿ ಮಾಡಿ ತೋರಿಸುವಂತೆ ಕೇಳಿಕೊಂಡರು. ಆಗ ನಮ್ಮ ಪಾಲಿಗಿದ್ದುದು ತುಂಬಾ ಕೆಟ್ಟ ದಿನಗಳಾಗಿದ್ದರಿಂದ ನಮಗೆ ಹೀಗೆ ನಗಲು ಇಂಥ ಸಣ್ಣಸಣ್ಣ ಸಂಗತಿಗಳು ಬೇಕಾಗಿದ್ದವು.

2007 ಕೊನೆಯಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದ ತಾಲಿಬಾನಿಗಳ ಮೂಲೋತ್ಪಾಟನೆಯೇನೂ ಆಗಲಿಲ್ಲ. ಆಗ ಸೇನಾಪಡೆ ಸ್ವಾತ್ ಮತ್ತು ನಮ್ಮ ಪಟ್ಟಣದ ಎಲ್ಲೆಡೆಗಳಲ್ಲೂ ಇದ್ದರು, ನಿಜ. ಆದರೂ ಫಜ್ಲುಲ್ಲಾ ಮಾತ್ರ ದಿನವೂ ತನ್ನ ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಲೇ ಇದ್ದ. 2008 ಉದ್ದಕ್ಕೂ ಬಾಂಬ್ ಸ್ಫೋಟ ಮತ್ತು ಹತ್ಯೆಗಳು ದಿನವೂ ಸಂಭವಿಸುತ್ತ, ಪರಿಸ್ಥಿತಿ ಹಿಂದೆಂದಿಗಿಂತಲೂ ಕೆಟ್ಟದಾಯಿತು. ಆಗ ಪ್ರತಿಯೊಬ್ಬರೂ ಸೇನೆ ಮತ್ತು ತಾಲಿಬಾನ್ ಬಗ್ಗೆಯೇ ಮಾತನಾಡುತ್ತಿದ್ದರು. ಅಷ್ಟೇ ಅಲ್ಲ, ನಾವು ಅವೆರಡರ ಮಧ್ಯೆಯೂ ಸಿಕ್ಕಿಹಾಕಿಕೊಂಡಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಇತ್ತು. ನನ್ನ ಸಹಪಾಠಿ ಅತಿಯಾ, 'ತಾಲಿಬಾನಿಗಳು ಒಳ್ಳೆಯವರು, ಮಿಲಿಟರಿಯವರೇ ಕೆಟ್ಟವರು' ಎನ್ನುತ್ತ ನನ್ನನ್ನು ಆಡಿಕೊಳ್ಳುತ್ತಿದ್ದಳು. ಅದಕ್ಕೆ ನಾನು, 'ಅಲ್ಲ ಕಣೇ, ಒಂದು ಹಾವೂ ಒಂದು ಸಿಂಹವೂ ನಮ್ಮ ಕಡೆಗೆ ಬರ್ತಾ ಇವೆ ಅಂದುಕೊ. ಅವೆರಡರಲ್ಲಿ ಯಾವುದಾದರೂ ಒಂದನ್ನು ಮಾತ್ರ ಒಳ್ಳೇದು ಅಂತ ಹೇಳೋಕ್ಕಾಗುತ್ತೇನು?' ಎಂದು ಉತ್ತರಿಸುತ್ತಿದ್ದೆ.

ಹೊರಗೆ ಪರಿಸ್ಥಿತಿ ಅಷ್ಟೊಂದು ಭೀಕರವಾಗಿದ್ದರೂ ನಮ್ಮ ಶಾಲೆ ಮಾತ್ರ ತಣ್ಣಗಿತ್ತು. ನಮ್ಮ ತರಗತಿಯಲ್ಲಿದ್ದ ಮಿಕ್ಕ ಹುಡುಗಿಯರೆಲ್ಲ ಡಾಕ್ಟರುಗಳಾಗಬೇಕೆಂದು ಆಸೆ ಇಟ್ಟುಕೊಂಡಿದ್ದರು. ಆದರೆ ನಾನು ಮಾತ್ರ ಸಂಶೋಧಕಿಯಾಗಬೇಕೆಂದು ತೀರ್ಮಾನಿಸಿದ್ದೆ. ಸಂಶೋಧಕಿಯಾಗಿ ವಾಸನಾಶಕ್ತಿಯಿಂದಲೇ ತಾಲಿಬಾನಿಗಳನ್ನು ಪತ್ತೆ ಹಚ್ಚಿ, ಅವರ ಬಂದೂಕುಗಳನ್ನು ನಾಶ ಮಾಡುವಂಥ ಒಂದು ತಾಲಿಬಾನ್-ನಿರೋಧಕ ಸಾಧನವನ್ನು ಕಂಡುಹಿಡಿಯಬೇಕೆನ್ನವುದು ನನ್ನ ಆಸೆಯಾಗಿತ್ತು. ಆದರೆ, ನಿಜವಾದ ಪರಿಸ್ಥಿತಿ ಏನಾಗಿತ್ತೆಂದರೆ ಶಾಲೆಯಲ್ಲಿದ್ದ ನಾವೂ ಬೆದರಿಕೆಗೆ ತುತ್ತಾಗಿದ್ದೆವು. ಹೀಗಾಗಿ ನನ್ನ ಕೆಲವು ಗೆಳತಿಯರು ಸ್ಕೂಲಿಗೆ ಬರುವುದನ್ನೇ ನಿಲ್ಲಿಸಿದ್ದರು. ಫಜ್ಲುಲ್ಲಾನಂತೂ 'ಹೆಣ್ಣು ಮಕ್ಕಳು ಶಾಲೆಗೆ ಹೋಗಬಾರದು. ಅವರೇನಿದ್ದರೂ ಮನೆಯಲ್ಲೇ ಇರಬೇಕು' ಎಂದು ತನ್ನ ರೇಡಿಯೊ ಮೂಲಕ ಪ್ರಸಾರ ಮಾಡುತ್ತಲೇ ಇದ್ದ. ಆತನ ಬಂಟರು ರಾತ್ರಿ ಹೊತ್ತು ಕರ್ಫ್ಯೂ ಜಾರಿಯಲ್ಲಿರುತ್ತಿದ್ದಾಗ ಸ್ಕೂಲುಗಳನ್ನು ಬಾಂಬ್ ಹಾಕಿ ಧ್ವಂಸ ಮಾಡಲು ಶುರು ಮಾಡಿದರು. ರಾತ್ರಿಯ ಹೊತ್ತೇ ಅವರೇಕೆ ಕೆಲಸ ಮಾಡುತ್ತಿದ್ದರೆಂದರೆ, ಹೊತ್ತಿನಲ್ಲಿ ಯಾವ ಮಕ್ಕಳೂ ಅಲ್ಲಿರುತ್ತಿರಲಿಲ್ಲ.

ಉಗ್ರಗಾಮಿಗಳು ಮೊಟ್ಟಮೊದಲು ಬಾಂಬ್ ಇಟ್ಟು ನೆಲಸಮ ಮಾಡಿದ್ದು ಮಟ್ಟಾದಲ್ಲಿದ್ದ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಾದ 'ಶವಾರ್ ಝಾಂಗೇ'ಯನ್ನು. ಮನುಷ್ಯರಾದವರು ಹೀಗೂ ಮಾಡಬಹುದೆಂಬುದನ್ನು ನಮಗೆ ನಂಬಲೂ ಆಗಲಿಲ್ಲ. ಇದಾದಮೇಲೆ ಒಂದರ ಹಿಂದೊಂದರಂತೆ ಹೀಗೆಯೇ ಪ್ರತೀದಿನವೂ ಬಾಂಬುಗಳು ಸ್ಫೋಟಿಸತೊಡಗಿದವು. ಮಿಂಗೋರಾ ಕೂಡ ಇದಕ್ಕೆ ಹೊರತಾಗಲಿಲ್ಲ. ಎರಡು ಸಲವಂತೂ ನಾನು ನಮ್ಮ ಮನೆಯ ಅಡುಗೆ ಮನೆಯಲ್ಲಿದ್ದಾಗ ಬಾಂಬುಗಳು ಸ್ಫೋಟಿಸಿದವು. ಬಾಂಬ್ ಸ್ಫೋಟಿಸಿದ ಸ್ಥಳ ನಮ್ಮ ಮನೆಗೆ ಎಷ್ಟು ಹತ್ತಿರವಾಗಿತ್ತೆಂದರೆ, ಸ್ಫೋಟದ ತೀವ್ರತೆಗೆ ನಮ್ಮ ಮನೆ ಕಂಪಿಸಿತೊಡಗಿತಲ್ಲದೆ, ಕಿಟಿಕಿಯ ಮೇಲಿಟ್ಟಿದ್ದ ಫ್ಯಾನು ದೊಪ್ಪನೆ ಕೆಳಕ್ಕೆ ಬಿತ್ತು. ಅದಾದಮೇಲೆ ನನಗೆ ಅಡುಗೆಮನೆಗೆ ಹೋಗುವುದೆಂದರೇ ಭಯವಾಗುತ್ತಿತ್ತು. ತೀರಾ ಅನಿವಾರ್ಯವಾದಾಗ ಮಾತ್ರ ಓಡಿ ಹೋಗಿ, ಅಷ್ಟೇ ವೇಗವಾಗಿ ಓಡಿ ಬರುತ್ತಿದ್ದೆ.

ಅದು, 2008 ಫೆಬ್ರವರಿ ತಿಂಗಳ ಕೊನೆಯ ದಿನ. ಅವತ್ತು ಕೂಡ ಭಾರೀ ತೀವ್ರತೆಯ ಸ್ಫೋಟದ ಶಬ್ದ ಕೇಳಿಸಿತು. ಕ್ಷಣದಲ್ಲಿ ನಾನು ನಮ್ಮ ಮನೆಯ ಅಡುಗೆಮನೆಯಲ್ಲೇ ಇದ್ದೆ. ತುಂಬಾ ಹತ್ತಿರದಲ್ಲೇ ಆದ ಸ್ಫೋಟವಂತೂ ಕಿವಿಗಳು ಕಿವುಡಾಗಿ ಹೋಗುವಷ್ಟು ಜೋರಾಗಿತ್ತು. ಆಗ ನಾವು ಎಂದಿನಂತೆಯೇ ನಾವೆಲ್ಲರೂ ಬದುಕುಳಿದಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಒಬ್ಬರಿಗೊಬ್ಬರು, 'ಕೈಸ್ತಾ, ಪಿಶೋ, ಬಾಬಿ, ಕುಶಾಲ್, ಅಟಲ್!' ಎಂದು ಕೂಗಿಕೊಂಡೆವು. ಅದರ ಬೆನ್ನಲ್ಲೇ ಇಡೀ ಮಿಂಗೋರಾದ ಆಂಬುಲೆನ್ಸುಗಳೆಲ್ಲ ಒಂದರ ಹಿಂದೊಂದು ಸಾಗಿ ಹೋಗುತ್ತಿವೆಯೇನೋ ಎನ್ನುವಂತೆ ಸೈರನ್ಗಳ ಶಬ್ದ ನಮಗೆ ಕೇಳಿಸಿತು. ಅವತ್ತು ಏನಾಗಿತ್ತೆಂದರೆ, ಆತ್ಮಹತ್ಯಾ ಬಾಂಬರ್ ಒಬ್ಬ ಹಾಜಿ ಬಾಬಾ ಹೈಸ್ಕೂಲಿನ ಬ್ಯಾಸ್ಕೆಟ್ಬ್ಯಾಲ್ ಅಂಗಳದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದ. ಆಗ ಮೈದಾನದಲ್ಲಿ ತುಂಬಾ ಜನಪ್ರಿಯತೆ ಸಂಪಾದಿಸಿದ್ದ ಪೊಲೀಸ್ ಅಧಿಕಾರಿ ಜಾವೆದ್ ಇಕ್ಬಾಲ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಡೆಯುತ್ತಿದ್ದು, ಸಮಯದ ಪ್ರಾರ್ಥನೆ ನಡೆಯುತ್ತಿತ್ತು. ತಾಲಿಬಾನ್ ಉಗ್ರರ ಕೈಯಿಂದ ತಪ್ಪಿಸಿಕೊಳ್ಳಲು ನೋಡಿದ ಇಕ್ಬಾಲ್ ಅವರನ್ನು ತುಂಬಾ ದೂರದಲ್ಲಿರುವ ಒಂದು ಜಾಗದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಕೊಂದುಹಾಕಲಾಗಿತ್ತು. ಹೀಗೆ ಸತ್ತ ಇಕ್ಬಾಲ್ ಅವರು ಮಿಂಗೋರಾದವರು. ಹೀಗಾಗಿ ಅವರ ಪಾರ್ಥಿವ ಶರೀರವನ್ನು ಪೊಲೀಸ್ ವಂದನೆಗಾಗಿಯೂ ಅಂತ್ಯಸಂಸ್ಕಾರಕ್ಕಾಗಿಯೂ ಅಲ್ಲಿಗೆ ತರಲಾಗಿತ್ತು. ಆದರೆ, ಈಗ ನೋಡಿದರೆ ತಾಲಿಬಾನ್ಗಳು ಶೋಕದಲ್ಲಿ ಮುಳುಗಿದ್ದವರ ಮೇಲೂ ಬಾಂಬ್ ಹಾಕಿದ್ದರು. ಇದರ ಪರಿಣಾಮವಾಗಿ ಐವತ್ತೈದು ಜನ ಸತ್ತರು. ಸತ್ತವರ ಪೈಕಿ ಇಕ್ಬಾಲ್ ಅವರ ಕಿರಿಯ ಮಗ ಮತ್ತು ನಮಗೆ ಗೊತ್ತಿದ್ದ ಇನ್ನೂ ಹಲವರು ಸತ್ತರು. ಅಂತ್ಯಸಂಸ್ಕಾರಕ್ಕೆಂದು ನನ್ನ ಗೆಳತಿ ಮೋನಿಬಾಳ ಕುಟಿಂಬದಿಂದ ಹತ್ತು ಜನ ಹೋಗಿದ್ದರು. ಬಾಂಬ್ ಸ್ಫೋಟಕ್ಕೆ ಸಿಲುಕಿದ ಇಷ್ಟೂ ಮಂದಿಯ ಪೈಕಿ ಒಂದೋ ಎಲ್ಲರೂ ಬಲಿಯಾಗಿದ್ದರು; ಇಲ್ಲವೇ ಗಾಯಾಳುಗಳಾಗಿದ್ದರು. ಮೋನಿಬಾಳಂತೂ ಘಟನೆಯಿಂದ ನಡುಗಿ ಹೋದಳು. ಅಷ್ಟೇ ಅಲ್ಲ, ಇಡೀ ಪಟ್ಟಣವೇ ಆಘಾತಕ್ಕೊಳಗಾಗಿತ್ತು. ಆಗ ಪ್ರತಿಯೊಂದು ಮಸೀದಿಯಲ್ಲೂ ಶ್ರದ್ಧಾಂಜಲಿ ಸಭೆಗಳು ನಡೆದವು.

ಆಗ ನಾನು ನಮ್ಮ ಅಪ್ಪನ ಹತ್ತಿರ, 'ಅಪ್ಪ, ಈಗ ನಿನಗೆ ಭಯವಾಗ್ತಿದೆಯಾ?' ಎಂದೆ. ಅದಕ್ಕೆ ನಮ್ಮ ಅಪ್ಪ, 'ಮಗೂ, ರಾತ್ರಿ ಹೊತ್ತಂತೂ ಭಯ ಸಿಕ್ಕಾಬಟ್ಟೆ ಇರುತ್ತೆ... ಬೆಳಿಗ್ಗೆ ಹೊತ್ತೇನೋ ಮತ್ತೆ ಧೈರ್ಯ ಬರುತ್ತೆ. ಆದರೂ ನಾವು ನಮ್ಮ ಕಣಿವೆಯಿಂದ ತಾಲಿಬಾನ್ಗಳನ್ನು ತೊಲಗಿಸಬೇಕು. ಆಮೇಲೆ ಯಾರೂ ಹೀಗೆ ಭಯಪಡಬೇಕಾದ ಪ್ರಮೇಯವೇ ಇರೋದಿಲ್ಲ' ಎಂದರು. ನಿಜ, ಅಪ್ಪ ಹೇಳಿದ ಮಾತು ನಮ್ಮ ಮನೆಯ ಮಟ್ಟಿಗೆ ಸತ್ಯವಾಗಿತ್ತು. ನಾವೆಲ್ಲ ಭಯಭೀತರಾಗಿದ್ದೆವು. ಆದರೆ, ಭಯ ನಮಗಿದ್ದ ಧೈರ್ಯದಷ್ಟು ದೊಡ್ಡದಾಗಿರಲಿಲ್ಲ.
ಇಂಥ ಕಷ್ಟದ ಸಮಯದಲ್ಲಿ ಪಶ್ತೂನ್ಗಳಾದ ನಾವು ಹಿಂದಿನ ಕಾಲದ ಪದ್ಧತಿಗೆ ಮೊರೆ ಹೋದೆವು. ಅಂದರೆ, 2008ರಲ್ಲಿ ಸ್ವಾತ್ ಹಿರಿಯರೆಲ್ಲ ಸಭೆ ಸೇರಿ, ಫಜ್ಲುಲ್ಲಾನನ್ನು ಎದುರಿಸಲು 'ಖ್ವಾಮಿ ಜಿರ್ಗಾ' (ಜಿರ್ಗಾ ಎಂದರೆ, ಬುಡಕಟ್ಟು ಜನರು ಒಂದೆಡೆ ಸೇರುವಂಥ ಸ್ಥಳ. ನಮ್ಮಲ್ಲಿ ಚಾವಡಿ ಇದ್ದ ಹಾಗೆ ಎನ್ನಬಹುದು) ಎಂಬ ಒಂದು ಒಕ್ಕೂಟವನ್ನು ಹುಟ್ಟುಹಾಕಿದರು. ಸ್ಥಳೀಯರೇ ಆದ ಮುಕ್ತಾರ್ ಖಾನ್ ಯೂಸಫ್ಜಾಯಿ, ಖುರ್ಷೀದ್ ಕಾಕಾಜೀ ಮತ್ತು ಜಹೀದ್ ಖಾನ್ ತಮ್ಮೊಂದಿಗೆ ಕೈಜೋಡಿಸಬೇಕೆಂದು ಕೇಳಿಕೊಳ್ಳಲು ಪ್ರತಿಯೊಂದು 'ಹುಜ್ರಾ'ಗೂ ('ಹುಜ್ರಾ' ಎಂದರೆ ಪಶ್ತೂನ್ ಪಂಗಡದ ಗಂಡಸರು ಸಾಮಾನ್ಯವಾಗಿ ಒಟ್ಟುಗೂಡಿ, ಹರಟೆ ಹೊಡೆಯುವ ಜಾಗ) ಖುದ್ದಾಗಿ ಹೋದರು. ಹೀಗೆ ಹೋದಾಗ ಸಿಕ್ಕಿದವರು ಅಬ್ದುಲ್ ಖಾನ್ ಖಾಲಿಕ್. ಬಿಳಿಗಡ್ಡ ಬಿಟ್ಟುಕೊಂಡಿದ್ದ, ಎಪ್ಪತ್ನಾಲ್ಕು ವರ್ಷದ ಖಾಲಿಕ್ ಅವರು, ಹಿಂದೆ ನಮ್ಮ ಮಹಾರಾಣಿಯವರು ಸ್ವಾತ್ ಕಣಿವೆಯನ್ನಾಳುತ್ತಿದ್ದ ವಲಿಯವರನ್ನು ಕಾಣಲು ಭೇಟಿ ಕೊಟ್ಟಾಗ ಅವರ ಅಂಗರಕ್ಷಕರಲ್ಲಿ ಒಬ್ಬರಾಗಿದ್ದರು. ನಮ್ಮ ತಂದೆ ವಯಸ್ಸಿನಲ್ಲಿ ಹಿರಿಯರಾಗಲಿ, ಅಥವಾ ಪ್ರಭಾವಿ ಖಾನ್ ವಂಶದವರಾಗಲಿ ಆಗಿರಲಿಲ್ಲ. ಆದರೂ ನಮ್ಮ ಅಪ್ಪನನ್ನು 'ಖ್ವಾಮಿ ಜಿರ್ಗಾ' ವಕ್ತಾರರನ್ನಾಗಿ ಮಾಡಲಾಯಿತು. ಏಕೆಂದರೆ, ನಮ್ಮ ತಂದೆ ಮಾತನಾಡಲು ಹೆದರುತ್ತಿರಲಿಲ್ಲ. ನಮ್ಮ ಪಾಶ್ತೊ ಭಾಷೆಯನ್ನು ಕಾವ್ಯಾತ್ಮಕವಾಗಿ ಬಳಸುತ್ತಿದ್ದ ಅವರು, ನಮ್ಮ ರಾಷ್ಟ್ರಭಾಷೆ ಉರ್ದುವನ್ನೂ ಹಾಗೆಯೇ ಇಂಗ್ಲೀಷನ್ನೂ ಸರಾಗವಾಗಿ ಮಾತನಾಡುತ್ತಿದ್ದರು. ಇವೆಲ್ಲದರಿಂದಾಗಿ, 'ಖ್ವಾಮಿ ಜಿರ್ಗಾ' ಒಕ್ಕೂಟಕ್ಕೆ ನಮ್ಮ ತಂದೆ ಸ್ವಾತ್ ಒಳಗೂ ಹೊರಗೂ ಪರಿಣಾಮಕಾರಿ ವಕ್ತಾರರಾದರು.

ಇದಾದಮೇಲೆ ನಮ್ಮ ಅಪ್ಪ 'ಸ್ವಾತ್ ಹಿರಿಯ ಒಕ್ಕೂಟ' ಪರವಾಗಿ ಪ್ರತಿದಿನವೂ ವಿಚಾರ ಸಂಕಿರಣಗಳಲ್ಲೋ, ಇಲ್ಲವೇ ಫಜ್ಲುಲ್ಲಾಗೆ ಸವಾಲೆಸೆಯುವ ಮೂಲಕ ಸುದ್ದಿ ಮಾಧ್ಯಮಗಳಲ್ಲೋ ಕಾಣಿಸಿಕೊಳ್ಳುತ್ತಿದ್ದರು. ಅಲ್ಲೆಲ್ಲ ನಮ್ಮ ತಂದೆಯವರು ಫಜ್ಲುಲ್ಲಾನನ್ನು ಉದ್ದೇಶಿಸಿ, 'ನೀನೇನ್ ಮಾಡ್ತಾ ಇದ್ದೀಯ? ನೀನು ನಮ್ಮ ಬದುಕನ್ನೂ ಸಂಸ್ಕೃತಿಯನ್ನು ಹಾಳು ಮಾಡ್ತಾ ಇದ್ದೀಯ' ಎನ್ನುತ್ತಿದ್ದರು.
ಆಗ ನಮ್ಮ ಅಪ್ಪ ನನ್ನ ಹತ್ತಿರ, 'ಶಾಂತಿ ಸ್ಥಾಪನೆಗೋಸ್ಕರ ಕೆಲಸ ಮಾಡುವ ಯಾವುದೇ ಸಂಘಟನೆಯಿರಲಿ, ನಾನು ಅದನ್ನು ಸೇರಿಕೊಳ್ಳುತ್ತೇನೆ. ಯಾವುದೇ ಜಗಳವನ್ನು ಬಗೆಹರಿಸಲು ಇಷ್ಟಪಟ್ಟರೆ ಅಥವಾ ಅದರಿಂದ ಹೊರಬರಬೇಕೆಂದರೆ, ಮೊದಲು ನಾವು ಸತ್ಯವನ್ನು ಹೇಳಿಬಿಡಬೇಕು. ನೀನು ತಲೆನೋವಿನಿಂದ ಬಳಲುತ್ತಿದ್ದು, ಡಾಕ್ಟರ ಹತ್ತಿರ ಹೋದಾಗ ಹೊಟ್ಟೆನೋವೆಂದರೆ ಅವರು ತಾನೇ ಏನು ಮಾಡೋಕ್ಕಾಗುತ್ತೆ? ಆದ್ದರಿಂದ ನಾವು ಸತ್ಯವನ್ನೇ ಹೇಳಬೇಕು. ಸತ್ಯದಿಂದ ಭಯ ಮಾಯವಾಗುತ್ತದೆ' ಎನ್ನುತ್ತಿದ್ದರು.

ನಮ್ಮ ಅಪ್ಪ ತಮ್ಮ ಸಹಕಾರ್ಯಕರ್ತರನ್ನು ಭೇಟಿಯಾದಾಗ -ಅದರಲ್ಲೂ ತಮ್ಮ ಹಳೆಯ ಗೆಳೆಯರಾದ ಅಹಮದ್ ಶಾ, ಮಹಮದ್ ಫಾರೂಕ್ ಮತ್ತು ಜಹೀದ್ ಖಾನ್ ಅವರನ್ನು ಕಾಣಲು ಹೋದಾಗಲೆಲ್ಲ- ನಾನೂ ಅವರ ಜೊತೆ ಹೋಗುತ್ತಿದ್ದೆ. ಪೈಕಿ ಅಹಮದ್ ಶಾ ತಮ್ಮದೇ ಆದ ಸ್ಕೂಲನ್ನು ನಡೆಸುತ್ತಿದ್ದರೆ, ಮಹಮದ್ ಫಾರೂಕ್ ಅವರು ಸ್ಕೂಲಿನಲ್ಲೇ ಕೆಲಸ ಮಾಡುತ್ತಿದ್ದರು. ಜಹೀದ್ ಖಾನ್ ಅವರು ಹೋಟೆಲ್ ಮಾಲೀಕರಾಗಿದ್ದು, ತುಂಬಾ ದೊಡ್ಡ ಚಾವಡಿ (ಹುಜ್ರಾ) ಹೊಂದಿದ್ದರು. ಅವರೆಲ್ಲ ನಮ್ಮ ಮನೆಗೆ ಬಂದಾಗ ನಾನೇ ಅವರಿಗೆಲ್ಲ ಟೀ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಹಾಗೆ ಟೀ ಕೊಡಲು ಹೋದಾಗ ಹಾಗೆಯೇ ಮೌನವಾಗಿ ಕೂತುಕೊಂಡು, ಅವರು ತಾವು ಮುಂದೇನು ಮಾಡಬೇಕೆಂದು ಆಡುತ್ತಿದ್ದ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೆ. ಅವರೆಲ್ಲ ಆಗ, 'ಮಲಾಲಾ ಬರೀ ಜಿಯಾವುದ್ದೀನನ ಮಗಳಲ್ಲ. ಅವಳು ನಮ್ಮೆಲ್ಲರ ಮಗಳು' ಎನ್ನುತ್ತಿದ್ದರು.
ಅವರು ಪೇಶಾವರಕ್ಕೂ ಇಸ್ಲಾಮಾಬಾದ್ಗೂ ಹೋಗಿ, ರೇಡಿಯೋಕ್ಕೆ ಸಾಕಷ್ಟು ಸಂದರ್ಶನಗಳನ್ನು ನೀಡಿದರು. ಅದರಲ್ಲೂ 'ವಾಯ್ಸ್ ಆಫ್ ಅಮೆರಿಕ' ಮತ್ತು ಬಿ.ಬಿ.ಸಿ.ಗೆ (ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ಸಂದರ್ಶನ ನೀಡಲು ಇವರ ಪೈಕಿ ಯಾರಾದರೊಬ್ಬರು ಲಭ್ಯವಿರುತ್ತಿದ್ದರು. ಅವರು, 'ಸ್ವಾತ್ನಲ್ಲಿ ಈಗ ಏನೇನು ನಡೀತಾ ಇದೆಯೋ ಅದಕ್ಕೂ ಇಸ್ಲಾಂ ಧರ್ಮಕ್ಕೂ ಸಂಬಂಧವಿಲ್ಲ' ಎಂದು ಜನರಿಗೆ ಹೇಳಿದರು. ನಮ್ಮ ಅಪ್ಪ ಆಗ 'ಮಿಲಿಟರಿಯಲ್ಲಿರುವ ಕೆಲವರ ಮತ್ತು ಅಧಿಕಾರಿಗಳ ಸಹಾಯವೇ ಇಲ್ಲದೆ ಸ್ವಾತ್ನಲ್ಲಿ ತಾಲಿಬಾನ್ ನೆಲೆಯೂರಲು ಸಾಧ್ಯವೇ ಇಲ್ಲ. ಜನರ ಹಕ್ಕುಗಳನ್ನು ರಕ್ಷಿಸೋದು ಸರಕಾರದ ಕೆಲಸ. ಆದರೆ ಸರಕಾರ ಇರುವುದಕ್ಕೂ ಇಲ್ಲದೆ ಇರುವುದಕ್ಕೂ ಇರುವ ವ್ಯತ್ಯಾಸವೇನು ಅನ್ನದನ್ನೇ ಹೇಳಲಾಗದಂಥ ಕಷ್ಟದ ಪರಿಸ್ಥಿತಿ ಈಗ ಬಂದಿದೆ. ಹೀಗಾಗಿ, ಸರಕಾರ ಜನರನ್ನು ರಕ್ಷಿಸುತ್ತದೆ ಅನ್ನೋದನ್ನು ನಂಬಲು ಸಾಧ್ಯವಿಲ್ಲ' ಎಂದರು.

ನಮ್ಮ ದೇಶದ ಮಿಲಿಟರಿ ಮತ್ತು ಐಎಸ್ ತುಂಬಾ ಶಕ್ತಿಶಾಲಿಯಾಗಿದ್ದು, ತುಂಬಾ ಜನ ಅವೆರಡರ ವಿರುದ್ಧ ಬಹಿರಂಗವಾಗಿ ಒಂದೇಒಂದು ಮಾತನಾಡಲೂ ಹಿಂದೇಟು ಹಾಕುತ್ತಿದ್ದರು. ಆದರೆ ನಮ್ಮ ಅಪ್ಪನಾಗಲಿ, ಅವರ ಹಲವು ಗೆಳೆಯರಾಗಲಿ ಇದಕ್ಕೆಲ್ಲ ಹೆದರಲಿಲ್ಲ. ನಮ್ಮ ಅಪ್ಪನಂತೂ, 'ನೀವು ನಮ್ಮದೇ ಆದ ಜನ ಮತ್ತು ನಮ್ಮ ದೇಶವಾದ ಪಾಕಿಸ್ತಾನಕ್ಕೆ ವಿರುದ್ಧವಾಗಿ ಕೆಲಸ ಮಾಡ್ತಾ ಇದ್ದೀರಿ. ಯಾವತ್ತೂ ನೀವು ತಾಲಿಬಾನನ್ನು ಬೆಂಬಲಿಸಬೇಡಿ. ಅದು ನಿಜಕ್ಕೂ ಮನುಷ್ಯತ್ವವಲ್ಲ. ಸ್ವಾತ್ ಕಣಿವೆಯನ್ನು ಪಾಕಿಸ್ತಾನದ ಹಿತಕ್ಕಾಗಿ ತ್ಯಾಗ ಮಾಡಿದೆವು ಅಂತ ನಾವು ಕೇಳಿದ್ದೇವೆ. ಆದರೆ, ದೇಶಕ್ಕಾಗಿ ಏನನ್ನೂ ತ್ಯಾಗ ಮಾಡಬಾರದು ಅನಿಸುತ್ತಿದೆ. ಏಕೆಂದರೆ, ಒಂದು ದೇಶವೆಂದರೆ ಅದು ನಮಗೆ ತಾಯಿ ಇದ್ದಂತೆ. ಒಬ್ಬ ನಿಜವಾದ ತಾಯಿ ಯಾವತ್ತೂ ತನ್ನ ಮಕ್ಕಳನ್ನು ಕೈಬಿಡುವುದಾಗಲಿ, ಮಕ್ಕಳಿಗೇ ಮೋಸವನ್ನಾಗಲಿ ಮಾಡೋದಿಲ್ಲ' ಎಂದರು.

ಹೆಚ್ಚಿನ ಜನ ಹೀಗೆ ಏನನ್ನೂ ಮಾತನಾಡುತ್ತಿರಲಿಲ್ಲ. ಇದನ್ನು ನಮ್ಮ ಅಪ್ಪ ಸಹಿಸುತ್ತಿರಲಿಲ್ಲ. ಅವರು ಯಾವಾಗಲೂ ತಮ್ಮ ಜೇಬಿನಲ್ಲಿ ನಾಝಿಗಳ ಕಾಲದ ಜರ್ಮನಿಯಲ್ಲಿ ಬದುಕಿದ್ದ ಕವಿ ಮಾರ್ಟಿನ್ ನೀಮೋಲರ್ ಬರೆದಿದ್ದ ಕವಿತೆಯನ್ನು ಇಟ್ಟುಕೊಂಡಿರುತ್ತಿದ್ದರು- ಮೊದಲಿಗೆ ಅವರು ಕಮ್ಯುನಿಸ್ಟರನ್ನು ಕಾಡಿದರು.

ಆದರೆ, ನಾನಾಗ ಮಾತನಾಡಲಿಲ್ಲ. ಏಕೆಂದರೆ, ನಾನು ಕಮ್ಯುನಿಸ್ಟನಾಗಿರಲಿಲ್ಲ. ಆಮೇಲೆ ಅವರು ಸಮಾಜವಾದಿಗಳನ್ನು ತಡವಿಕೊಂಡರು. ಆಗಲೂ ನಾನು ಮಾತನಾಡಲಿಲ್ಲ. ಏಕೆಂದರೆ, ನಾನು ಸಮಾಜವಾದಿಯಾಗಿರಲಿಲ್ಲ. ಬಳಿಕ ಅವರು ಕಾರ್ಮಿಕ ಸಂಘಟನೆಗಳ ಮೇಲೆರಗಿದರು. ಆಗಲೂ ನಾನು ಮಾತನಾಡಲಿಲ್ಲ. ಏಕೆಂದರೆ, ನಾನು ಕಾರ್ಮಿಕ ನಾಯಕನಾಗಿರಲಿಲ್ಲ. ನಂತರ ಅವರು ಯಹೂದಿಗಳ ಮೇಲೆ ಬಿದ್ದರು. ಆಗಲೂ ನಾನು ಮಾತನಾಡಲಿಲ್ಲ. ಏಕೆಂದರೆ, ನಾನು ಯಹೂದಿಯೇನಾಗಿರಲಿಲ್ಲ. ಮುಂದೆ ಅವರು ಕ್ಯಾಥೊಲಿಕ್ಕರ ಮೇಲೆ ಕಣ್ಣು ಹಾಕಿದರು. ಆಗಲೂ ನಾನು ಮಾತನಾಡಲಿಲ್ಲ. ಏಕೆಂದರೆ, ನಾನು ಕ್ಯಾಥೊಲಿಕ್ಕನಾಗಿರಲಿಲ್ಲ. ಕೊನೆಗೆ ಅವರು ನನ್ನ ಮೇಲೇ ಎರಗಿದರು. ಆಗ, ನನ್ನ ಪರವಾಗಿ ಮಾತನಾಡಲು ಒಬ್ಬರೂ ಉಳಿದಿರಲಿಲ್ಲ.

ನಮ್ಮ ಅಪ್ಪ ಹೇಳುತ್ತಿರುವುದು ಸರಿಯಾಗಿಯೇ ಇದೆ ಎನ್ನುವುದು ನನಗೆ ಗೊತ್ತಿತ್ತು. ಏಕೆಂದರೆ, ಜನ ಮೌನವಾಗಿದ್ದರೆ ಏನೂ ಬದಲಾಗುವುದಿಲ್ಲ. ನಮ್ಮ ಅಪ್ಪ ಸ್ಕೂಲಿನಲ್ಲಿ ಒಂದು ಶಾಂತಿಯಾತ್ರೆಯನ್ನು ಏರ್ಪಡಿಸಿ, ಸ್ವಾತ್ನಲ್ಲಿ ನಡೆಯುತ್ತಿರುವುದರ ವಿರುದ್ಧ ಮಾತನಾಡುವಂತೆ ನಮ್ಮನ್ನು ಹುರಿದುಂಬಿಸಿದರು.

ಒಂದು ದಿನ ನಾನು, ನಮ್ಮ ದೇಶದ ಅತ್ಯಂತ ದೊಡ್ಡ ಟಿ.ವಿ. ಚಾನೆಲ್ಗಳಲ್ಲಿ ಒಂದಾದ 'ಜಿಯೋ'ಗೆ ಹೋದೆ. ಅವರ ಆಫೀಸಿನ ಗೋಡೆಯ ಮೇಲೆ ಹತ್ತಾರು ಟಿ.ವಿ.ಗಳನ್ನಿಟ್ಟಿದ್ದರು. ಅಷ್ಟೊಂದು ಚಾನೆಲ್ಲುಗಳನ್ನು ನೋಡಿ ನನಗಂತೂ ಆಶ್ಚರ್ಯವಾಯಿತು. ಆಮೇಲೆ ನಾನು, 'ಸುದ್ದಿ ಮಾಧ್ಯಮಗಳಿಗೆ ಸಂದರ್ಶನಗಳು ಬೇಕಾಗುತ್ತವೆ. ಅವರು ನಿಜಕ್ಕೂ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳನ್ನು ಸಂದರ್ಶಿಸಲು ಇಷ್ಟಪಟ್ಟಿದ್ದಾರೆ. ಆದರೆ, ಹುಡುಗಿಯರೆಲ್ಲ ಭಯಗೊಂಡಿದ್ದಾರೆ. ಒಂದು ವೇಳೆ ಹೆಣ್ಣು ಮಕ್ಕಳು ಧೈರ್ಯವಾಗಿಯೇ ಇದ್ದರೂ ಅವರ ತಂದೆ-ತಾಯಿಗಳು ಸಂದರ್ಶನಕ್ಕೆ ಅವಕಾಶ ಕೊಡುವುದಿಲ್ಲ. ಆದರೆ, ನಮ್ಮ ತಂದೆ ಮಾತ್ರ ಧೈರ್ಯಸ್ಥರಾಗಿದ್ದರು. ಅವರು ಯಾವಾಗಲೂ ನನ್ನ ಬೆಂಬಲಕ್ಕಿರುತ್ತಾರೆ. ಅವರು, ನೀನೊಂದು ಮಗು; ಮಾತನಾಡುವುದು ನಿನ್ನ ಹಕ್ಕು ಎನ್ನುತ್ತಾರೆ' ಎಂದು ಯೋಚಿಸಿದೆ. ನಾನು ಹೆಚ್ಚುಹೆಚ್ಚು ಸಂದರ್ಶನಗಳನ್ನು ನೀಡುತ್ತಾ ಹೋದಂತೆ, ಹೆಚ್ಚುಹೆಚ್ಚು ಶಕ್ತಿಶಾಲಿ ಎಂಬ ಭಾವನೆ ನನಗೆ ಬರುತ್ತಿತ್ತು. ಜೊತೆಗೆ ಹೆಚ್ಚುಹೆಚ್ಚು ಬೆಂಬಲವೂ ಸಿಗುತ್ತಿತ್ತು.
ನನಗೆ ಆಗಿನ್ನೂ ಹನ್ನೊಂದು ವರ್ಷವಾಗಿತ್ತಷ್ಟೆ. ಆದರೆ, ನಾನು ತುಂಬಾ ದೊಡ್ಡವಳಂತೆ ಕಾಣುತ್ತಿದ್ದೆ.

ಆಗ ಸುದ್ದಿ ಮಾಧ್ಯಮ ಕೂಡ ಒಬ್ಬ ಚಿಕ್ಕ ಹುಡುಗಿಯ ಮಾತು ಕೇಳಿಸಿಕೊಳ್ಳಲು ಇಷ್ಟಪಡುತ್ತಿತ್ತು. ಅಂಥ ದಿನಗಳಲ್ಲಿ ಒಬ್ಬ ಪತ್ರಕರ್ತರು ನನ್ನನ್ನು 'ಟಕ್ರಾ ಜೇನಾಯ್' ಎಂದರು. ಹೀಗೆಂದರೆ, 'ಪ್ರತಿಭಾವಂತೆಯಾದ ಪ್ರಾಯದ ಹೆಂಗಸು' ಎಂದರ್ಥ. ಇನ್ನೊಬ್ಬ ಪತ್ರಕರ್ತರು ನನ್ನನ್ನು 'ಪಖಾ ಜೇನಾಯ್' ಎಂದರು. ಹೀಗೆಂದರೆ, 'ನಿನ್ನ ವಯಸ್ಸಿಗೂ ಮೀರಿದ ಜಾಣೆ ನೀನು' ಎಂದರ್ಥ. ಆಗ ನನ್ನ ಅಂತರಾತ್ಮದಲ್ಲಿ ನನಗಿದ್ದ ನಂಬಿಕೆ ಎಂದರೆ, ' ದೇವರು ನನ್ನನ್ನು ಕಾಪಾಡುತ್ತಾನೆ' ಎನ್ನುವುದಷ್ಟೆ. ನಾನು ನನ್ನ ಹಕ್ಕುಗಳಿಗಾಗಿಯೂ ಹೆಣ್ಣು ಮಕ್ಕಳ ಹಕ್ಕುಗಳಿಗಾಗಿಯೂ ಮಾತನಾಡಿದರೆ ಅದರಲ್ಲೇನೂ ತಪ್ಪಿಲ್ಲ. ಹಾಗೆ ಮಾಡುವುದು ನನ್ನ ಕರ್ತವ್ಯ. ಅಂಥ ಸಂದರ್ಭಗಳಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆನ್ನುವುದನ್ನು ನೋಡಬೇಕೆಂದು ದೇವರು ಬಯಸಿದ್ದಾನೆ. ಕುರಾನ್ನಲ್ಲಿ 'ಅಸತ್ಯ ತೊಲಗಬೇಕು, ಸತ್ಯವಾದ್ದು ಉಳಿಯಬೇಕು' ಎನ್ನುವ ಒಂದು ಮಾತಿದೆ. ಅದರಂತೆ ನಾನು, 'ಫಜ್ಲುಲ್ಲಾ ಎಂಬ ಒಬ್ಬ ಮನುಷ್ಯ ಎಲ್ಲವನ್ನೂ ನಾಶ ಮಾಡಬಹುದಾದರೆ, ಒಬ್ಬ ಹುಡುಗಿ ಏಕೆ ಎಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ?' ಎಂದು ನಾನು ಆಶ್ಚರ್ಯಪಟ್ಟೆ. ಪ್ರತೀ ರಾತ್ರಿಯೂ ' ದೇವರೇ, ನನಗೆ ಶಕ್ತಿ ಕೊಡು' ಎಂದು ಪ್ರಾರ್ಥಿಸುತ್ತಿದ್ದೆ.

ಆಗ ಸ್ವಾತ್ ಸುದ್ದಿ ಮಾಧ್ಯಮಗಳ ಮೇಲೆ ತಾಲಿಬಾನಿಗಳ ಬಗ್ಗೆ ಸಕಾರಾತ್ಮಕವಾಗಿ ಬರೆಯುವಂತೆ ಒತ್ತಡವಿತ್ತು. ಹೀಗಾಗಿ ಕೆಲವು ಸುದ್ದಿ ಮಾಧ್ಯಮಗಳು ತಾಲಿಬಾನ್ ವಕ್ತಾರನಾಗಿದ್ದ ಮುಸ್ಲಿಂ ಖಾನ್ ಬಗ್ಗೆ ಬರೆಯುವಾಗ 'ಸ್ಕೂಲ್ ದಾದಾ' ಎಂದು ಗೌರವದಿಂದ ಬರೆಯುತ್ತಿದ್ದವು. ಆದರೆ, ವಾಸ್ತವವಾಗಿ ಅವನು ಸ್ಕೂಲುಗಳನ್ನು ಧ್ವಂಸ ಮಾಡುತ್ತಿದ್ದ. ಸ್ವಾತ್ ಕಣಿವೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸ್ಥಳೀಯ ಪತ್ರಕರ್ತರಿಗೆ ತುಂಬಾ ಅಸಮಾಧಾನವಿತ್ತು. ಹೀಗಾಗಿ ಅವರು, ನಮಗೆ ಒಂದು ಶಕ್ತಿಶಾಲಿ ವೇದಿಕೆಯನ್ನು ಒದಗಿಸಿಕೊಟ್ಟರು. ಏಕೆಂದರೆ, ಸ್ವತಃ ಪತ್ರಕರ್ತರಿಗೆ ಹೇಳಿಕೊಳ್ಳಲು ಸಾಧ್ಯವಿಲ್ಲದಂತಹ ಸಂಗತಿಗಳನ್ನು ನಾವು ಧೈರ್ಯವಾಗಿ ಹೇಳುತ್ತಿದ್ದೆವು.

ನಮ್ಮ ಮಾತುಗಳು ವಸಂತ ಕಾಲದಲ್ಲಿ ಬೀಸುವ ಗಾಳಿಗೆ ಹೇಗೆ ಕಾಡಿನ ಮರಗಳಲ್ಲಿ ಹೂವು ಚಿಮ್ಮುವುದೋ ಹಾಗಾಯಿತು. ಶಾಲೆಗಳನ್ನು ಬಾಂಬ್ ಇಟ್ಟು ಉಡಾಯಿಸಿ ಹಾಕುವುದನ್ನು ಉಗ್ರಗಾಮಿಗಳು ನಿಲ್ಲಿಸಿರಲಿಲ್ಲ. 2008 ಅಕ್ಟೋಬರ್ 7ರಂದು ದೂರದಲ್ಲೆಲ್ಲೋ ಒಂದೇ ಸಮನೆ ಬಾಂಬುಗಳು ಸ್ಫೋಟಿಸುತ್ತಿರುವ ಶಬ್ದ ಕೇಳಿಸುತ್ತಿತ್ತು. ಮಾರನೇ ದಿನ ಬೆಳಿಗ್ಗೆ ಎದ್ದಾಗ, ಮುಸುಕುಧಾರಿ ಉಗ್ರಗಾಮಿಗಳು ಬಾಲಕಿಯರಿಗೆಂದೇ ಇದ್ದ ಸಂಗೋಟಾ ಕಾನ್ವೆಂಟ್ ಸ್ಕೂಲ್ ಮತ್ತು ಗಂಡು ಮಕ್ಕಳಿಗೆಂದೇ ಇದ್ದ ಎಕ್ಸೆಲ್ಸಿಯರ್ ಕಾಲೇಜಿಗೆ ನುಗ್ಗಿ, ಅವೆರಡರ ಮೇಲೂ ಸುಧಾರಿತ ಸ್ಫೋಟಕಗಳನ್ನು ಹಾಕಿ, ನೆಲಸಮ ಮಾಡಿದ್ದಾರೆ ಎನ್ನುವುದು ಗೊತ್ತಾಯಿತು. ದುರಂತಕ್ಕೆ ಮೊದಲೇ ತಮಗೆ ಬೆದರಿಕೆಗಳು ಬರುತ್ತಿದ್ದುದರಿಂದ ಶಿಕ್ಷಕರೆಲ್ಲ ಮೊದಲೇ ಶಾಲೆಗೆ ವಿದಾಯ ಹೇಳಿದ್ದರು. ಇವೆರಡೂ ಶಾಲೆಗಳು ನಿಜಕ್ಕೂ ತುಂಬಾ ಹೆಸರುವಾಸಿಯಾಗಿದ್ದವು. ಅದರಲ್ಲೂ ಸಂಗೋಟಾ ಕಾನ್ವೆಂಟಂತೂ ನಮ್ಮ ಸೀಮೆಯನ್ನಾಳಿದ ಕಟ್ಟಕಡೆಯ ವಲಿಯ ಕಾಲದಿಂದಲೂ ತಾನು ನೀಡುತ್ತಿದ್ದ ಅತ್ಯುತ್ತಮ ಶಿಕ್ಷಣಕ್ಕೆ ಹೆಸರಾಗಿತ್ತು. ಜೊತೆಗೆ ಶಾಲೆಗಳು ತುಂಬಾ ದೊಡ್ಡವೂ ಆಗಿದ್ದವು. ಎಕ್ಸೆಲ್ಸಿಯರ್ ಶಾಲೆಯಲ್ಲಿ 2,000ಕ್ಕೂ ಹೆಚ್ಚು ಗಂಡು ಮಕ್ಕಳು ಓದುತ್ತಿದ್ದರೆ, ಸಂಗೋಟಾ ಕಾನ್ವೆಂಟಿನಲ್ಲಿ 1,000 ಹೆಣ್ಣು ಮಕ್ಕಳು ಓದುತ್ತಿದ್ದರು. ಬಾಂಬ್ ಸ್ಫೋಟದ ಸುದ್ದಿ ತಿಳಿದ ಮೇಲೆ ನಮ್ಮ ಅಪ್ಪ ಅಲ್ಲಿಗೆ ಹೋದರು. ನೋಡಿದರೆ, ಎರಡೂ ಶಾಲೆಯ ಕಟ್ಟಡಗಳು ನೆಲಸಮವಾಗಿದ್ದವು. ಕಟ್ಟಡಗಳ ಇಟ್ಟಿಗೆ ರಾಶಿ ಮತ್ತು ಸುಟ್ಟು ಬೂದಿಯಾದ ಪುಸ್ತಕಗಳ ಮಧ್ಯೆಯೇ ನಿಂತುಕೊಂಡು ನಮ್ಮ ಅಪ್ಪ ಟಿ.ವಿ. ವರದಿಗಾರರಿಗೆ ಸಂದರ್ಶನ ನೀಡಿದರು. ಅವರು ಬಗ್ಗೆ 'ಅಲ್ಲಿ ಉಳಿದಿದ್ದೆಲ್ಲ ಬರೀ ಅವಶೇಷಗಳಷ್ಟೇ....' ಎಂದರು.

ಇಷ್ಟಾದರೂ ನಮ್ಮ ಅಪ್ಪ , ಇವತ್ತಲ್ಲ ನಾಳೆಯಾದರೂ ವಿಧ್ವಂಸಕ ಕೃತ್ಯಗಳು ಕೊನೆಯಾಗುವ ದಿನ ಬಂದೇಬರುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ಅವರನ್ನು ನಿಜಕ್ಕೂ ತಲ್ಲಣಗೊಳಿಸಿದ್ದೆಂದರೆ, ಸ್ಥಳೀಯ ಜನರೇ ಸ್ಕೂಲುಗಳಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳು, ಪುಸ್ತಕಗಳು ಮತ್ತು ಕಂಪ್ಯೂಟರುಗಳನ್ನು ಲೂಟಿ ಹೊಡೆದುಕೊಂಡು ಹೋಗಿದ್ದು! ಸಂಗತಿ ಗೊತ್ತಾದಾಗಲಂತೂ ಅವರು, ' ಜನ ಸತ್ತ ಹೆಣದ ಮೇಲೆ ಮುಗಿಬೀಳುವ ರಣಹದ್ದುಗಳಂತೆ ಎರಗಿದರು' ಎಂದು ಗೋಳಾಡಿದರು.

ಮಾರನೇ ದಿನ ನಮ್ಮ ಅಪ್ಪ 'ವಾಯ್ಸ್ ಆಫ್ ಅಮೆರಿಕ' ಚಾನೆಲ್ಗೆ ಸಂದರ್ಶನ ನೀಡಲು ಹೋದರು. ಅಲ್ಲಿ ಅವರು ಬಾಂಬ್ ದಾಳಿಯನ್ನು ಕೋಪದಿಂದ ಖಂಡಿಸಿದರು. ಅತ್ತ ಇನ್ನೊಂದು ತುದಿಯಲ್ಲಿ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಫೋನ್ ಸಂಪರ್ಕದಲ್ಲಿದ್ದ. ನಮ್ಮ ತಂದೆ ' ಎರಡೂ ಸ್ಕೂಲುಗಳ ಮೇಲೆ ಬಾಂಬು ಹಾಕಿ ಧ್ವಂಸ ಮಾಡಿದಿರಲ್ಲ, ಸ್ಕೂಲುಗಳಿಂದ ನಿಮಗೇನಾಗಿತ್ತು?' ಎಂದು ಅವನನ್ನು ಕೇಳಿದರು.

ಪ್ರಶ್ನೆಗೆ ಮುಸ್ಲಿಂ ಖಾನ್, 'ಸಂಗೋಟಾ ಶಾಲೆಯು ಕಾನ್ವೆಂಟಾಗಿದ್ದು, ಅಲ್ಲಿ ಕ್ರೈಸ್ತ ಧರ್ಮವನ್ನು ಹೇಳಿ ಕೊಡ್ತಾ ಇದ್ರು. ಇನ್ನು ಎಕ್ಸೆಲ್ಸಿಯರ್ ಸ್ಕೂಲಿನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಒಟ್ಟಿಗೇ ಪಾಠ ಮಾಡುತ್ತಿದ್ದರು' ಎಂದ. ಅದಕ್ಕೆ ನಮ್ಮ ತಂದೆ, 'ಇಲ್ಲ... ನೀನು ಹೇಳ್ತಾ ಇರೋ ಎರಡೂ ಸಂಗತಿಗಳೂ ಶುದ್ಧ ತಪ್ಪು. 1960ನೇ ಇಸವಿಯಿಂದಲೂ ಇದ್ದ ಸಂಗೋಟಾ ಕಾನ್ವೆಂಟಿನಲ್ಲಿ ಯಾವತ್ತೂ ಯಾರನ್ನೂ ಕ್ರೈಸ್ತ ಮತಕ್ಕೆ ಮತಾಂತರಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಅವರಲ್ಲಿ ಕೆಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇನ್ನು, ಎಕ್ಸೆಲ್ಸಿಯರ್ ಸ್ಕೂಲಿನಲ್ಲಿ ಕೇವಲ ಪ್ರಾಥಮಿಕ ಹಂತದಲ್ಲಿ ಮಾತ್ರ ಸಹಶಿಕ್ಷಣವಿತ್ತು' ಎಂದರು.

ಮುಸ್ಲಿಂ ಖಾನ್ ಆಗ ಉತ್ತರಿಸಲೇ ಇಲ್ಲ. ಆಮೇಲೆ ನಾನು ನಮ್ಮ ಅಪ್ಪನ ಬಳಿ, ' ಉಗ್ರಗಾಮಿಗಳೆಲ್ಲ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಏನೆನ್ನುತ್ತಾರೆ? ತಮ್ಮ ಮಕ್ಕಳು ಕಲಿಯುವುದೂ ಇವರಿಗೆ ಬೇಕಿಲ್ಲವಾ?' ಎಂದೆ.

ನಮ್ಮ ಮುಖ್ಯ ಶಿಕ್ಷಕಿಯಾಗಿದ್ದ ಮರಿಯಂ ಅವರು ಸಂಗೋಟಾದಲ್ಲೇ ಓದಿದ್ದರು. ಅವರ ತಂಗಿ ಆಯೇಷಾ ಕೂಡ ಅದೇ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಹೀಗಾಗಿ ಆಯೇಷಾ ಮತ್ತು ಇನ್ನೂ ಕೆಲವು ಹೆಣ್ಣು ಮಕ್ಕಳು ನಮ್ಮ ಶಾಲೆಗೆ ಬಂದು ಸೇರಿಕೊಂಡರು. ಆಗ ನಮ್ಮ ಶಾಲೆಯಲ್ಲಿ ಸಂಗ್ರಹವಾಗುತ್ತಿದ್ದ ತಿಂಗಳ ಶುಲ್ಕವು ನಮ್ಮ ಉಳಿದ ಬಾಬತ್ತುಗಳಿಗೆಲ್ಲ ಸಾಕಾಗುತ್ತಿರಲಿಲ್ಲ. ಹೀಗಾಗಿ, ಹೆಣ್ಣು ಮಕ್ಕಳು ಶಾಲೆಗೆ ಸೇರಿಕೊಂಡಿದ್ದರಿಂದ ಇನ್ನೊಂದಿಷ್ಟು ಶುಲ್ಕ ಬರುವುದು ಸಾಧ್ಯವಾಯಿತು. ಆದ್ದರಿಂದ ಇದು ಸ್ವಾಗತಾರ್ಹವೇ ಆಗಿತ್ತು. ಆದರೆ, ನಮ್ಮ ಅಪ್ಪ ಏಕೋ ಸಂತೋಷದಿಂದಿರಲಿಲ್ಲ. ಬಾಂಬ್ ಸ್ಫೋಟಕ್ಕೆ ಸಿಲುಕಿ ಧ್ವಂಸವಾದ ಸಂಗೋಟಾ ಮತ್ತು ಎಕ್ಸೆಲ್ಸಿಯರ್ ಶಾಲೆಗಳೆರಡನ್ನೂ ಪುನರ್ನಿರ್ಮಾಣ ಮಾಡಬೇಕೆಂಬುದು ಅವರ ಪ್ರತಿಜ್ಞೆಯಾಗಿತ್ತು. ಇದಕ್ಕಾಗಿ ಅವರು ಎಲ್ಲ ಕಡೆಗೂ ಓಡಾಡಿದರು. ಒಂದು ಸಲ ದೊಡ್ಡ ಸಭೆಯಲ್ಲಿ ಮಾತನಾಡಿದ ನಮ್ಮ ಅಪ್ಪ, ಅಲ್ಲೇ ಇದ್ದ ಶ್ರೋತೃಗಳೊಬ್ಬರ ಮಗಳನ್ನು ಎತ್ತಿಕೊಂಡು, ' ಹೆಣ್ಣು ಮಗು ನಮ್ಮ ನಾಳಿನ ಭವಿಷ್ಯ. ಮಗು ದಡ್ಡಿಯಾಗಿರಬೇಕೆಂದು ನಾವ್ಯಾರಾದರೂ ಇಷ್ಟಪಡುತ್ತೇವಾ?' ಎಂದು ಕೇಳಿದರು. ನೆರೆದಿದ್ದ ಜನರು, 'ನಮ್ಮ ಹೆಣ್ಣು ಮಕ್ಕಳ ಭವಿಷ್ಯವನ್ನು ಬಲಿ ಕೊಡುವುದಕ್ಕಿಂತ ನಮ್ಮನ್ನೇ ನಾವು ಬಲಿ ಕೊಟ್ಟುಕೊಳ್ಳುತ್ತೇವೆ' ಎನ್ನುವ ಮೂಲಕ ನಮ್ಮ ಅಪ್ಪನ ಮಾತಿಗೆ ಒಪ್ಪಿಗೆ ಕೊಟ್ಟಿತು. ಸಂಗೋಟಾ ಶಾಲೆಯಿಂದ ನಮ್ಮ ಶಾಲೆಗೆ ಬಂದ ಹುಡುಗಿಯರು ಒಬ್ಬೊಬ್ಬರೂ ಒಂದಿಷ್ಟು ಭಯಾನಕ ಕತೆಗಳನ್ನು ಹೇಳುತ್ತಿದ್ದರು. ಪೈಕಿ ಆಯೇಷಾ ಒಂದು ದಿನ ಶಾಲೆಯನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಳಂತೆ. ಆಗ ತಾಲಿಬಾನ್ ಉಗ್ರಗಾಮಿಯೊಬ್ಬ ತಾನು ಕಗ್ಗೊಲೆಗೈದಿದ್ದ ಪೊಲೀಸನೊಬ್ಬನ ರುಂಡದ ಜುಟ್ಟನ್ನು ಹಿಡಿದುಕೊಂಡು ಅದನ್ನು ಪ್ರದರ್ಶಿಸುತ್ತಿದ್ದನಂತೆ; ಅದರಿಂದ ರಕ್ತ ಹಾಗೆಯೇ ತೊಟ್ಟಿಕ್ಕುತ್ತಿತ್ತಂತೆ

2008 ಕೊನೆಯ ಹೊತ್ತಿಗೆ ತಾಲಿಬಾನಿಗಳು 400 ಶಾಲೆಗಳನ್ನು ಧ್ವಂಸ ಮಾಡಿದ್ದರು. ಅಷ್ಟು ಹೊತ್ತಿಗೆ ಬೆನಝೀರ್ ಭುಟ್ಟೋ ಅವರ ವಿದುರ ಪತಿ ಆಸಿಫ್ ಅಲಿ ಜರ್ದಾರಿ ಅವರ ನೇತೃತ್ವದ ಸರಕಾರ ಬಂತು. ಆದರೆ, ಹೊಸ ಸರಕಾರ ಕೂಡ ಸ್ವಾತ್ ಪರಿಸ್ಥಿತಿ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಆಗ ನಾನು, ಜರ್ದಾರಿಯವರ ಪುತ್ರಿಯರೇ ಸ್ವಾತ್ ಸ್ಕೂಲಿನಲ್ಲಿ ಓದುತ್ತಿದ್ದಿದ್ದರೆ ಪರಿಸ್ಥಿತಿ ನಿಜಕ್ಕೂ ಚೆನ್ನಾಗಿರುತ್ತಿತ್ತು ಎಂದು ಜನರಿಗೆ ಹೇಳಿದೆ. ಆಗಂತೂ ದೇಶದ ಉದ್ದಗಲಕ್ಕೂ ಬಾಂಬ್ ಸ್ಫೋಟ ಸಂಭವಿಸುತ್ತಿತ್ತು. ಇಸ್ಲಾಮಾಬಾದ್ನ್ಲಲಿದ್ದ ಮೇರಿಯಟ್ ಹೋಟೆಲನ್ನೂ ಸಹ ಉಗ್ರರು ಬಾಂಬ್ ಇಟ್ಟು ಧ್ವಂಸ ಮಾಡಿದರು.

ಆಮೇಲೆ, 2008ನೇ ಇಸವಿಯ ಕೊನೆಯಲ್ಲಿ, ಫಜ್ಲುಲ್ಲಾನ ಉಪನಾಯಕ ಮೌಲಾನ ಶಾ ದೌರಾನ್ 'ಹೆಣ್ಣು ಮಕ್ಕಳ ಶಾಲೆಗಳೆಲ್ಲ ಸ್ತಬ್ಧವಾಗಲಿವೆ' ಎಂದು ರೇಡಿಯೋದಲ್ಲಿ ಘೋಷಿಸಿದ. ಅಷ್ಟೇ ಅಲ್ಲ, ಜನವರಿ ಹದಿನೈದರ ನಂತರ ಯಾವ ಹೆಣ್ಣು ಮಕ್ಕಳೂ ಶಾಲೆಗೆ ಹೋಗಬಾರದು ಎಂದು ಅವನು ಎಚ್ಚರಿಸಿದ. ಮೊದಲು ನಾನು, ಇದೊಂದು ತಮಾಷೆ ಇರಬೇಕೆಂದುಕೊಂಡೆ. ನನ್ನ ಗೆಳತಿಯರ ಹತ್ತಿರ, 'ನಾವು ಸ್ಕೂಲಿಗೆ ಹೋಗೋದನ್ನು ಜನ ಹ್ಯಾಗೆ ನಿಲ್ಲಿಸ್ತಾರೆ? ಅವರಿಗೆ ಯಾವ ಅಧಿಕಾರವೂ ಇಲ್ಲ. ಅವರೆಲ್ಲ ತಾವು ಪರ್ವತವನ್ನೇ ನಾಶ ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ಅವರ ಕೈಯಲ್ಲಿ ಒಂದು ರಸ್ತೆಯನ್ನೂ ನಿಯಂತ್ರಿಸುವುದು ಸಾಧ್ಯವಿಲ್ಲ' ಎಂದೆ.

ಮಿಕ್ಕ ಹುಡುಗಿಯರು ನನ್ನ ಮಾತನ್ನು ಒಪ್ಪಲಿಲ್ಲ. 'ಅಯ್ಯೋ ಮಾರಾಯ್ತಿ, ಅವರನ್ನು ತಡೆಯೋರ್ಯಾರು? ಅವರು ಈಗಾಗ್ಲೇ ನೂರಾರು ಸ್ಕೂಲುಗಳನ್ನು ಉಡಾಯಿಸಿ ಹಾಕಿದ್ದಾರೆ. ಆದರೂ ಅವರ ಮೇಲೆ ಯಾರೂ ಏನೂ ಮಾಡಿಲ್ಲ....' ಎಂದರು.

ಇಷ್ಟರ ನಡುವೆಯೂ ನಮ್ಮ ಅಪ್ಪ , 'ಸ್ವಾತ್ ಜನ ಮತ್ತು ಶಿಕ್ಷಕರು ಕಟ್ಟಕಡೆಯ ಕೊಠಡಿ, ಕಟ್ಟಕಡೆಯ ಶಿಕ್ಷಕ ಮತ್ತು ಕಟ್ಟಕಡೆಯ ಮಗು ಇರುವವರೆಗೂ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಾರೆ' ಎಂದು ಜನರಿಗೆ ಹೇಳುತ್ತಲೇ ಇದ್ದರು. ನಮ್ಮ ಅಪ್ಪ-ಅಮ್ಮ ಇಬ್ಬರೂ ಒಂದೇಒಂದು ದಿನವೂ ನನಗೆ 'ನೀನು ಸ್ಕೂಲಿಗೆ ಹೋಗೋದನ್ನು ನಿಲ್ಲಿಸು' ಅಂತ ಹೇಳಿದವರಲ್ಲ. ನಾವು ಸ್ಕೂಲಿಗೆ ಹೋಗುತ್ತಿದ್ದೆವು, ನಿಜ. ಆದರೆ, ತಾಲಿಬಾನಿಗಳು ಬಂದು ನಮ್ಮನ್ನೆಲ್ಲ ಸ್ಕೂಲಿಗೆ ಹೋಗದಂತೆ ತಡೆಯುವವರೆಗೂ ನಮಗೆ ವಿದ್ಯಾಭ್ಯಾಸ ಎಷ್ಟೊಂದು ಮುಖ್ಯವೆಂದು ಗೊತ್ತಾಗಿರಲಿಲ್ಲ. ಸ್ಕೂಲಿಗೆ ಹೋಗುವುದು, ಓದುವುದು ಮತ್ತು ನಮ್ಮ ಹೋಂವರ್ಕ್ಗಳನ್ನು ಮಾಡುವುದು ಕೇವಲ ಕಾಲಹರಣವಾಗಿರಲಿಲ್ಲ. ಅದು ನಿಜಕ್ಕೂ ನಮ್ಮ ಭವಿಷ್ಯವಾಗಿತ್ತು.

***

ಶೋಕತಪ್ತ ಕಣಿವೆ

! ದಾರಿಹೋಕನೇ, ಸವೆದ ಕಲ್ಲಿನ ಮೇಲೆ ನಿನ್ನ ತಲೆ ಇಡು
ಇದು ಪರದೇಶಿಗಳ ನೆಲವೇ ಹೊರತು ನಿನ್ನ ರಾಜರು ಕಟ್ಟಿದ್ದಲ್ಲ!
ಎಲ್ಲವೂ ಒಂದು ಕೆಟ್ಟ ಕನಸಿನಂತೆ ಕಾಣುತ್ತಿತ್ತು. ನಾವು ನಮ್ಮ ಕಣಿವೆಯನ್ನು ಹೆಚ್ಚೂಕಮ್ಮಿ ಮೂರು ತಿಂಗಳ ಮಟ್ಟಿಗೆ ತೊರೆದಿದ್ದೆವು. ವಾಪಸ್ ಕಣಿವೆಗೆ ಬರುವಾಗ ಬೆಟ್ಟದ ಮೇಲಿನ ಪುರಾತನ ಅವಶೇಷಗಳನ್ನೂ ಬೃಹತ್ ಬೌದ್ಧ ಸ್ತೂಪಗಳನ್ನು ಹಾದು, ಚರ್ಚಿಲ್ಸ್ ಪಿಕೆಟ್ ದಾಟಿದ ಮೇಲೆ ತುಂಬಾ ವಿಶಾಲವಾದ ಪಾತ್ರವನ್ನು ಹೊಂದಿದ್ದ ಸ್ವಾತ್ ನದಿಯನ್ನು ನೋಡಿದೆವು. ಅದನ್ನು ನೋಡಿದ ಕೂಡಲೇ ಅಪ್ಪ ಗಳಗಳನೆ ಅಳಲು ಶುರು ಮಾಡಿದರು. ಇಡೀ ಸ್ವಾತ್ ನದಿ ಸೇನೆಯ ನಿಯಂತ್ರಣದಲ್ಲಿದ್ದಂತೆ ಕಾಣುತ್ತಿತ್ತು. ನಾವು ಸಾಗುತ್ತಿದ್ದ ವಾಹನವನ್ನು ಕೂಡ ಸೋಟಕಗಳೇನಾದರೂ ಇವೆಯೇನೋ ಎಂದು ತಪಾಸಣೆಗೆ ಒಳಪಡಿಸಿದರು. ಆಮೇಲಷ್ಟೆ ನಮ್ಮ ವಾಹನವನ್ನು ಮಾಲಖಂಡ್ ಪಾಸ್ನತ್ತ ಹೋಗಲು ಬಿಟ್ಟರು. ಹಾಗೆ ಹೊರಟ ನಾವು ಕಣಿವೆಗೆ ಇಳಿದಾಗ ಎಲ್ಲೆಲ್ಲೂ ಸೇನೆಯ ಚೆಕ್ ಪಾಯಿಂಟುಗಳೇ ಕಾಣುತ್ತಿದ್ದವು. ಸೈನಿಕರಂತೂ ಅದೆಷ್ಟೋ ಮನೆಯ ಚಾವಣಿಗಳ ಮೇಲೆಲ್ಲ ತಮ್ಮ ಮಶೀನ್ ಗನ್ನುಗಳನ್ನು ಇಟ್ಟುಕೊಳ್ಳಲು ಗೂಡುಗಳನ್ನು ಮಾಡಿಕೊಂಡಿದ್ದರು.
ಹಳ್ಳಿಗಳನ್ನು ದಾಟಿ ಹೋಗುವಾಗ ಎಲ್ಲೆಲ್ಲೂ ಕಟ್ಟಡಗಳ ಅವಶೇಷಗಳು ಮತ್ತು ಸುಟ್ಟು ಕರಕಲಾದ ವಾಹನಗಳೇ ನಮ್ಮ ಕಣ್ಣಿಗೆ ಬಿದ್ದವು. ಅದನ್ನೆಲ್ಲ ನೋಡುತ್ತಿದ್ದಾಗ ನನಗೆ ಯುದ್ಧವನ್ನು ಕುರಿತ ಹಳೆಯ ಸಿನಿಮಾಗಳೂ ನನ್ನ ತಮ್ಮ ಕುಶಾಲ್ ತುಂಬಾ ಇಷ್ಟಪಟ್ಟು ಆಡುತ್ತಿದ್ದ ವಿಡಿಯೋ ಗೇಮುಗಳೂ ನೆನಪಾದವು. ಮಿಂಗೋರಾವನ್ನು ತಲುಪಿದಾಗಲಂತೂ ನಮಗೆಲ್ಲ ಆಘಾತವಾಯಿತು. ಏಕೆಂದರೆ, ಅಲ್ಲಿ ಸೇನೆಯೂ ತಾಲಿಬಾನ್ ಸಂಘಟನೆಯೂ ಪ್ರತಿಯೊಂದು ಬೀದಿಯಲ್ಲೂ ಹೇಗೆ ಬಡಿದಾಡಿಕೊಂಡಿದ್ದವೆಂದರೆ ಹೆಚ್ಚೂಕಮ್ಮಿ ಪ್ರತಿಯೊಂದು ಗೋಡೆಯ ಮೇಲೂ ಗುಂಡು ಬಿದ್ದ ಗುರುತುಗಳಿದ್ದವು. ಬಾಂಬ್ ಇಟ್ಟು ಸೋಟಿಸಿದ ಕಟ್ಟಡಗಳ ಅವಶೇಷಗಳನ್ನೇ ತಾಲಿಬಾನ್ಗಳು ಅಡಗುದಾಣಗಳನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅವಶೇಷಗಳ ರಾಶಿಯೇ ಅಲ್ಲಿತ್ತು. ಅಲ್ಲಿನ ಹೆಚ್ಚಿನ ಅಂಗಡಿ-ಮುಂಗಟ್ಟುಗಳೆಲ್ಲ ಗಟ್ಟಿಮುಟ್ಟಾದ ಶಟರ್ಗಳನ್ನು ಹೊಂದಿದ್ದವು. ಹೀಗಿಲ್ಲದೆ ಇದ್ದ ಅಂಗಡಿಗಳನ್ನೆಲ್ಲ ಲೂಟಿ ಮಾಡಲಾಗಿತ್ತು. ಇಡೀ ಮಿಂಗೋರಾ ಸ್ತಬ್ಧವಾಗಿತ್ತು; ರಸ್ತೆಗಳು ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಅದನ್ನೆಲ್ಲ ನೋಡಿದರೆ, ಇಡೀ ಪಟ್ಟಣಕ್ಕೇ ಪ್ಲೇಗ್ ರೋಗ ಬಡಿದಿದೆಯೇನೋ ಅನಿಸುವಂತಿತ್ತು. ಬಸ್ ನಿಲ್ದಾಣವಂತೂ ಭಣಗುಟ್ಟುತ್ತಿತ್ತು. ಮಿಂಗೋರಾದ ಬಸ್ ನಿಲ್ದಾಣ ಯಾವತ್ತೂ ಹೀಗಿರುತ್ತಿರಲಿಲ್ಲ. ಇಡೀ ಪಟ್ಟಣದಲ್ಲಿ ಬಸ್ಸುಗಳೂ ರಿಕ್ಷಾಗಳೂ ಯಾವಾಗಲೂ ಬುರ್ರನೆ ಓಡಾಡುತ್ತಿದ್ದವು. ಆದರೆ ಈಗ ನೋಡಿದರೆ ಇಡೀ ರಸ್ತೆಗಳೆಲ್ಲ ಖಾಲಿಖಾಲಿಯಾಗಿದ್ದವು. ಪಾದಚಾರಿ ಮಾರ್ಗದ ಮೇಲೆಲ್ಲ ಯಾವ್ಯಾವುದೋ ಗಿಡಗಳು ಹಸನಾಗಿ ಬೆಳೆದುಕೊಂಡಿದ್ದವು. ನಾವು ಮುಂಚೆ ಯಾವತ್ತೂ ಇಂಥ ಸ್ಥಿತಿಯಲ್ಲಿ ನಮ್ಮ ಪಟ್ಟಣವನ್ನು ನೋಡಿರಲಿಲ್ಲ.
ಕನಿಷ್ಠಪಕ್ಷ ಆಗ ತಾಲಿಬಾನ್ಗಳ ಸುಳಿವಾದರೂ ಇರಲಿಲ್ಲ!
ಇದಾಗಿ ಒಂದು ವಾರ ಉರುಳಿತ್ತು. ಅಂದರೆ, ಅದು ೨೦೦೯ನೇ ಇಸವಿಯ ಜುಲೈ ೨೪ನೇ ತಾರೀಖು. ಅವತ್ತು ನಮ್ಮ ಪ್ರಧಾನಿ, 'ಮಿಂಗೋರಾದಿಂದ ತಾಲಿಬಾನ್ಗಳನ್ನೆಲ್ಲ ಹೊರದಬ್ಬಲಾಗಿದೆ' ಎಂದು ಘೋಷಿಸಿದರು. ಸಂದರ್ಭದಲ್ಲಿ ಅವರು, ಗ್ಯಾಸ್ ಪೂರೈಕೆ ಹಿಂದಿನಂತೆ ಸಹಜ ಸ್ಥಿತಿಗೆ ಬರಲಿದೆ, ಬ್ಯಾಂಕುಗಳನ್ನೆಲ್ಲ ಮತ್ತೆ ತೆಗೆಯಲಾಗುವುದು ಎಂದು ಭರವಸೆ ನೀಡಿ, ಸ್ವಾತ್ ಜನರೆಲ್ಲರೂ ದಯವಿಟ್ಟು ಅಲ್ಲಿಗೆ ವಾಪಸ್ಸಾಗಬೇಕು ಎಂದು ಕರೆ ನೀಡಿದರು. ಒಟ್ಟಿನಲ್ಲಿ ಸ್ವಾತ್ ಒಟ್ಟು ಜನಸಂಖ್ಯೆಯಾದ ಒಂದೂಮುಕ್ಕಾಲು ಕೋಟಿಗಿಂತಲೂ ಹೆಚ್ಚಿನ ಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನ ಕಣಿವೆಯನ್ನು ತೊರೆದಿದ್ದರು. ಇವರಲ್ಲಿ ಹೆಚ್ಚಿನ ಜನರಿಗೆ, ಸ್ವಾತ್ಗೆ ಮರಳುವುದು ಕ್ಷೇಮಕರ ಎಂದೇನೂ ಅನಿಸಲಿಲ್ಲ.
ನಮ್ಮ ಮನೆ ಹತ್ತಿರ ಬರುತ್ತಿದ್ದಂತೆಯೇ ನಾವೆಲ್ಲರೂ ಮೌನಕ್ಕೆ ಜಾರಿದೆವು. ಯಾವಾಗಲೂ ವಟಗುಟ್ಟುತ್ತಲೇ ಇರುತ್ತಿದ್ದ ನನ್ನ ಪುಟಾಣಿ ತಮ್ಮ ಅಟಲ್ ಕೂಡ ಮೌನಧಾರಿಯಾಗಿದ್ದ. ನಮ್ಮ ಮನೆಯಂತೂ ಸೇನೆಯ ಪ್ರಧಾನ ಕಚೇರಿಯಾದ 'ಸರ್ಕ್ಯೂಟ್ ಹೌಸ್' ಪಕ್ಕದಲ್ಲೇ ಇತ್ತು. ಹೀಗಾಗಿ, ಶೆಲ್ ದಾಳಿಗೆ ಸಿಲುಕಿ ನಮ್ಮ ಮನೆಯೆಲ್ಲ ಧ್ವಂಸವಾಗಿ ಹೋಗಿರಬಹುದು ಎಂದು ನಾವು ಅಂದುಕೊಂಡಿದ್ದೆವು. ಅದೆಷ್ಟೋ ಮನೆಗಳನ್ನು ಲೂಟಿ ಹೊಡೆದಿರುವುದು ಕಣ್ಣಿಗೆ ಬಿದ್ದಿತ್ತು. ನಮ್ಮ ಅಪ್ಪ ಮನೆಯ ಗೇಟನ್ನು ತೆರೆಯುತ್ತಿದ್ದ ಕ್ಷಣಗಳಲ್ಲಿ ನಾವೆಲ್ಲರೂ ಉಸಿರನ್ನು ಬಿಗಿ ಹಿಡಿದುಕೊಂಡಿದ್ದೆವು. ನಾವು ಮನೆಮಠ ಬಿಟ್ಟು ಹೋಗಿದ್ದ ಮೂರು ತಿಂಗಳಲ್ಲಿ ಏನಾಗಿತ್ತೆಂದರೆ, ನಮ್ಮ ಹಿತ್ತಿಲೆಲ್ಲ ಕಾಡಾಗಿತ್ತು! ನಾವು ಮನೆಯೊಳಕ್ಕೆ ಕಾಲಿಡುತ್ತಿದ್ದಂತೆಯೇ ನಮ್ಮ ಕಣ್ಣಿಗೆ ಬಿದ್ದ ಮೊದಲ ಸಂಗತಿಯೇ ಇದಾಗಿತ್ತು.
ನನ್ನ ತಮ್ಮಂದಿರಿಬ್ಬರೂ ಕೂಡಲೇ ತಮ್ಮ ಅಚ್ಚುಮೆಚ್ಚಿನ ಕೋಳಿಗಳಿಗೆ ಏನಾಗಿದೆ ಎಂದು ನೋಡಲು ಓಡಿಹೋದರು. ಆದರೆ, ಅಷ್ಟೇ ವೇಗದಲ್ಲಿ ಅವರು ಅಳುತ್ತಾ ವಾಪಸ್ಸಾದರು. ಏಕೆಂದರೆ, ಅಲ್ಲಿ ಕೇವಲ ಕೋಳಿಗಳ ಪುಕ್ಕಗಳೂ ಮೂಳೆಗಳೂ ಬಿದ್ದಿದ್ದವು. ಅದನ್ನು ನೋಡಿದರೆ, ಅವು ಒಂದಕ್ಕೊಂದು ಅಂಟಿಕೊಂಡೇ ಸತ್ತು ಹೋಗಿದ್ದವೆನಿಸುತ್ತದೆ. ಒಟ್ಟಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಅವು ಕೊನೆಯುಸಿರೆಳೆದಿದ್ದವು.
ನನ್ನ ತಮ್ಮಂದಿರಿಗಾದ ದುಃಖವನ್ನು ನೋಡಿ ನನಗೆ ನಿಜಕ್ಕೂ ಬೇಸರವಾಯಿತು. ಅಂದಹಾಗೆ, ನಾನಾಗ ನನ್ನದೇ ಆದ ವಸ್ತುವೊಂದನ್ನು ಇದೆಯೋ, ಇಲ್ಲವೋ ಎಂದು ನೋಡಬೇಕಾಗಿತ್ತು. ಆಶ್ಚರ್ಯವೆಂದರೆ, ನನ್ನ ಪುಸ್ತಕಗಳನ್ನೆಲ್ಲ ಕಟ್ಟಿ ಇಟ್ಟಿದ್ದ ಸ್ಕೂಲ್ ಬ್ಯಾಗು ಸುರಕ್ಷಿತವಾಗಿತ್ತು. ಅಂದರೆ, ನನ್ನ ಪ್ರಾರ್ಥನೆ ಫಲ ಕೊಟ್ಟಿತ್ತು. ನಾನು ಬ್ಯಾಗಿನಿಂದ ಒಂದೊಂದೇ ಪುಸ್ತಕಗಳನ್ನು ಹೊರತೆಗೆದು, ಅವುಗಳತ್ತ ನೋಡಿದೆ. ಗಣಿತ, ಭೌತಶಾಸ್ತ್ರ , ಉರ್ದು, ಇಂಗ್ಲಿಷ್, ಪಾಶ್ತೊ, ರಸಾಯನಶಾಸ್ತ್ರ, ಜೀವಶಾಸ್ತ್ರ , ಇಸ್ಲಾಮಿಯಾತ್ ಮತ್ತು ಪಾಕಿಸ್ತಾನ ಅಧ್ಯಯನದ ಪುಸ್ತಕಗಳೆಲ್ಲ ಮೊದಲಿನಂತೆಯೇ ಇದ್ದವು! ಅಂತೂ ಇಂತೂ ಯಾವುದೇ ಭಯವಿಲ್ಲದೆ ನಾನು ಮತ್ತೆ ಸ್ಕೂಲಿಗೆ ಹೋಗಬಹುದಿತ್ತು.
ಆಮೇಲೆ ನಾನು ನನ್ನ ಹಾಸಿಗೆಯ ಮೇಲೆ ಹೋಗಿ ಕೂತೆ. ಕ್ಷಣದಲ್ಲಿ ನಾನು ಮೂಕಳಾಗಿ ಹೋದೆ.
ನಾವು ನಿಜಕ್ಕೂ ಅದೃಷ್ಟಶಾಲಿಗಳೆಂದೇ ಹೇಳಬೇಕು. ಏಕೆಂದರೆ, ನಮ್ಮ ಮನೆಯನ್ನು ಯಾರೂ ಹಾಳುಗೆಡವಿರಲಿಲ್ಲ. ನಮ್ಮ ಮನೆಯಿದ್ದ ಬೀದಿಯಲ್ಲಿಯೇ ನಾಲ್ಕೈದು ಮನೆಗಳನ್ನು ಲೂಟಿ ಹೊಡೆದು, ಅಲ್ಲಿದ್ದ ಟಿ.ವಿ. ಮತ್ತು ಒಡವೆಗಳನ್ನೆಲ್ಲ ಎಗರಿಸಿಕೊಂಡು ಹೋಗಲಾಗಿತ್ತು. ಪಕ್ಕದ ಮನೆಯ ಸಫೀನಾ ಅವರ ತಾಯಿಯಂತೂ ಒಡವೆಗಳನ್ನು ಜೋಪಾನ ಮಾಡಿಕೊಳ್ಳಲೆಂದು ಅವನ್ನೆಲ್ಲ ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಇಟ್ಟಿದ್ದರು. ಆದರೆ, ಬ್ಯಾಂಕಿನಲ್ಲಿಟ್ಟಿದ್ದರೂ ಅವನ್ನೆಲ್ಲ ಕೊಳ್ಳೆ ಹೊಡೆದಿದ್ದರು.
ನಮ್ಮ ಅಪ್ಪನಿಗಂತೂ ಮೊದಲು ಸ್ಕೂಲಿಗೆ ಏನಾಗಿದೆ ಎಂದು ನೋಡುವ ತವಕ ಮೇರೆ ಮೀರಿತ್ತು. ಹೀಗಾಗಿ ನಾನೂ ಅಪ್ಪನ ಜೊತೆಯಲ್ಲೇ ಹೋದೆ. ಹೆಣ್ಣು ಮಕ್ಕಳ ಶಾಲೆಯ ಎದುರಿಗಿದ್ದ ಕಟ್ಟಡಕ್ಕೆ ಕ್ಷಿಪಣಿಯೊಂದು ಅಪ್ಪಳಿಸಿತ್ತು. ಆದರೆ, ಶಾಲಾ ಕಟ್ಟಡಕ್ಕೆ ಯಾವ ಹಾನಿಯೂ ಆಗಿರಲಿಲ್ಲ. ಆದರೆ, ಅಪ್ಪನ ಹತ್ತಿರ ಇದ್ದ ಬೀಗದಕೈ ಏಕೋ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಅಪ್ಪ ಹುಡುಗನೊಬ್ಬನನ್ನು ಗೋಡೆಯ ಮೇಲಿಂದ ಹತ್ತಿಸಿ, ಒಳಗಡೆಯಿಂದಲೇ ಬೀಗ ತೆಗೆಸಿದರು. ನಾವು, ಎಲ್ಲಾ ನಾಶವಾಗಿ ಹೋಗಿರಬೇಕು ಎಂದುಕೊಂಡು ದಡದಡನೆ ಮೆಟ್ಟಿಲುಗಳನ್ನು ಹತ್ತಿ ಹೋದೆವು.
ನಾವಿನ್ನೂ ಶಾಲಾ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಪ್ಪ, 'ಇಲ್ಲಿ ಯಾರೋ ಝಾಂಡಾ ಹೂಡಿದ್ದರೆನಿಸುತ್ತದೆ' ಎಂದರು. ಏಕೆಂದರೆ, ಅಲ್ಲೆಲ್ಲ ಸಿಗರೇಟಿನ ತುಂಡುಗಳೂ ತಿಂಡಿತೀರ್ಥದ ಖಾಲಿ ಪೊಟ್ಟಣಗಳೂ ಬಿದ್ದಿದ್ದವು. ಕುರ್ಚಿಗಳೆಲ್ಲ ತಲೆಕೆಳಗಾಗಿದ್ದವಲ್ಲದೆ, ಇಡೀ ಜಾಗ ಗಲೀಜಾಗಿತ್ತು. ಸ್ಕೂಲಿನ ನಾಮಫಲಕ ಗೋಡೆಯ ಮೇಲೆ ಬಿದ್ದಿತ್ತು. ಅದನ್ನು ನಾವೆಲ್ಲ ಸೇರಿ ಮೇಲಕ್ಕೆತ್ತುತ್ತಿದ್ದಂತೆಯೇ ನಾನು ಕೂಗಿಕೊಂಡೆ. ಕೆಳಗೆ ನೋಡಿದರೆ ಆಡಿನ ಕೊಳೆತ ತಲೆ ಬಿದ್ದಿತ್ತು. ಅದನ್ನೆಲ್ಲ ನೋಡಿದರೆ, ಯಾರೋ ತಿಂದು ಬಿಟ್ಟು ಹೋಗಿರುವ ಭಾಗ ಎನಿಸುತ್ತಿತ್ತು.
ಆಮೇಲೆ ನಾವು ತರಗತಿಗಳು ನಡೆಯುತ್ತಿದ್ದ ಕೊಠಡಿಗಳೊಳಕ್ಕೆ ಕಾಲಿಟ್ಟೆವು. ಗೋಡೆಯ ಮೇಲೆ ಎಲ್ಲ ಕಡೆಯೂ ತಾಲಿಬಾನ್ ವಿರೋ ಘೋಷಣೆಗಳೇ ಕಾಣಿಸಿದವು. ಯಾರೋ ಒಬ್ಬ ಬೋರ್ಡಿನ ಮೇಲೆ ಪರ್ಮನೆಂಟ್ ಮಾರ್ಕರ್ ಪೆನ್ನಿನಿಂದ 'ಸೇನೆಗೆ ಜಯವಾಗಲಿ' (ಆರ್ಮಿ ಜಿಂದಾಬಾದ್) ಎಂದು ಬರೆದಿದ್ದ. ಈಗ ನಮಗೆ, ಇಷ್ಟು ದಿವಸ ನಮ್ಮ ಸ್ಕೂಲಿನಲ್ಲಿ ಯಾರು ಠಿಕಾಣಿ ಹೂಡಿದ್ದರೆನ್ನುವುದು ಗೊತ್ತಾಯಿತು. ಒಬ್ಬ ಯೋಧನಂತೂ ನನ್ನ ಸಹಪಾಠಿಯೊಬ್ಬಳ ಡೈರಿಯಲ್ಲಿ ಓಬೀರಾಯನ ಕಾಲದ ಪ್ರೇಮಕವಿತೆಯನ್ನೇ ಗೀಚಿದ್ದ. ನೆಲದ ಮೇಲೆಲ್ಲ ಗುಂಡಿನ ಪೆಟ್ಟಿಗೆಗಳು ಚೆಲ್ಲಾಡಿಕೊಂಡು ಬಿದ್ದಿದ್ದವು. ಸೈನಿಕರು ಗೋಡೆಗೆ ತೂತು ಕೊರೆದಿದ್ದರು. ಅದರಿಂದ ಇಡೀ ಪಟ್ಟಣವನ್ನೇ ನೋಡಬಹುದಾಗಿತ್ತು. ಪ್ರಾಯಶಃ, ಅವರು ತೂತಿನ ಮೂಲಕವೂ ಜನರಿಗೆ ಗುಂಡು ಹಾರಿಸಿರಬಹುದು. ನಮ್ಮ ಪಾಲಿಗೆ ಪವಿತ್ರವಾದ ಶಾಲೆಯು ಹೀಗೆ ರಣರಂಗವಾಗಿ ಬದಲಾಗಿದ್ದನ್ನು ನೋಡಿ ನನಗಂತೂ ಪಿಚ್ಚೆನಿಸಿತು.
ನಾವು ಹೀಗೆ ಸುತ್ತಮುತ್ತ ಎಲ್ಲವನ್ನೂ ನೋಡುತ್ತಿದ್ದಾಗ ಯಾರೋ ಒಬ್ಬರು ಕೆಳಗೆ ಬಾಗಿಲು ಬಡಿಯುತ್ತಿದ್ದುದು ನಮಗೆ ಕೇಳಿಸಿತು. ಅಪ್ಪ ಆಗ, 'ಏಯ್, ಮಲಾಲಾ! ಬಾಗಿಲನ್ನು ತೆಗೀಬೇಡ' ಎಂದರು.
ಶಾಲೆಯಲ್ಲಿದ್ದ ಅಪ್ಪನ ಆಫೀಸಿನಲ್ಲಿ ಸೇನೆ ಬರೆದಿಟ್ಟು ಹೋಗಿದ್ದ ಒಂದು ಪತ್ರ ಕಾಣಿಸಿತು. ಅದರಲ್ಲಿ , 'ಸ್ವಾತ್ ಕಣಿವೆಯನ್ನು ತಾಲಿಬಾನ್ಗಳಿಗೆ ಬಿಟ್ಟುಕೊಟ್ಟಿದ್ದು ನೀವೇ. ಇದರಿಂದಾಗಿ ನಾವು ತುಂಬಾ ಅಮೂಲ್ಯವಾದ ಅದೆಷ್ಟೋ ಯೋಧರನ್ನು ಕಳೆದುಕೊಂಡೆವು. ಇದಕ್ಕೆಲ್ಲ ನಿಮ್ಮ ಉದಾಸೀನವೇ ಕಾರಣ. ಪಾಕಿಸ್ತಾನದ ಸೇನೆ ಚಿರಾಯುವಾಗಲಿ' ಎಂಬ ಒಕ್ಕಣೆ ಇತ್ತು.
ಅದನ್ನು ನೋಡಿದ ಅಪ್ಪ, 'ನಿಜಕ್ಕೂ ಇದು ವಿಚಿತ್ರ. ಮೊದಲಿಗೆ ತಾಲಿಬಾನ್ ಉಗ್ರರು ಸ್ವಾತ್ ಜನರನ್ನು ದುರ್ಮಾರ್ಗಕ್ಕೆಳೆದರು, ಆಮೇಲೆ ಅವರು ನಮ್ಮವರನ್ನು ಕೊಂದರು, ಈಗ ನೋಡಿದರೆ ಇದಕ್ಕೆಲ್ಲ ನಮ್ಮನ್ನೇ ದೂಷಿಸಲಾಗುತ್ತಿದೆ...' ಎಂದರು.
ಹಾಗೆ ನೋಡಿದರೆ ಸೇನೆಗೂ ತಾಲಿಬಾನ್ಗೂ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಇರಲಿಲ್ಲ. ನಮ್ಮ ಪಕ್ಕದ ಮನೆಯವರೊಬ್ಬರು ಹೇಳಿದ ಪ್ರಕಾರ, ಸೇನಾಯೋಧರು ತಾವು ಕೊಂದು ಹಾಕಿದ ತಾಲಿಬಾನ್ ಉಗ್ರರ ಶವಗಳನ್ನು ಕೂಡ ಜನರೆಲ್ಲ ನೋಡಲೆಂದು ನಡುರಸ್ತೆಯಲ್ಲೇ ಬಿಟ್ಟು ಹೋಗುತ್ತಿದ್ದರಂತೆ. ಈಗ ನೋಡಿದರೆ ಸೇನೆಗೆ ಸೇರಿದ ಹೆಲಿಕಾಪ್ಟರುಗಳು ಜೀರುಂಬೆಗಳಂತೆ ನಮ್ಮ ತಲೆಯ ಮೇಲೇ ಹಾರಾಡುತ್ತಿದ್ದವು. ಹೀಗಾಗಿ, ನಾವು ಮನೆಗೆ ನಡೆದುಕೊಂಡು ಹೋಗುವಾಗಲೆಲ್ಲ ಗೋಡೆಗೆ ಅಂಟಿಕೊಂಡೇ ಹೆಜ್ಜೆ ಇಡುತ್ತಿದ್ದೆವು. ಇದರಿಂದಾಗಿ ನಾವು ಸೇನೆಯವರ ಕಣ್ಣಿಗೆ ಬೀಳುತ್ತಿರಲಿಲ್ಲ.
ಸೇನೆಯು ಸಾವಿರಾರು ಜನರನ್ನು ಬಂಸಿರುವ ಸಮಾಚಾರವನ್ನು ನಾವು ಕೇಳಿದೆವು. ಹೀಗೆ ಸೇನೆಯಿಂದ ಬಂತರಾಗಿದ್ದವರಲ್ಲಿ ಎಂಟು ವರ್ಷದ ಪುಟ್ಟ ಮಕ್ಕಳೂ ಇದ್ದರು. ಇವರನ್ನೆಲ್ಲ ಉಗ್ರಗಾಮಿಗಳು, ಆತ್ಮಹತ್ಯಾ ಬಾಂಬ್ಗಳನ್ನಾಗಿ ಮಾಡಲು ಸಂಚು ರೂಪಿಸಿ, ಮಕ್ಕಳ ತಲೆಯನ್ನೆಲ್ಲ ತೊಳೆದಿಟ್ಟಿದ್ದರು. ಮಕ್ಕಳನ್ನೆಲ್ಲ ತನ್ನ ವಶಕ್ಕೆ ತೆಗೆದುಕೊಂಡ ಸೇನೆ, ಅವರನ್ನೆಲ್ಲ ಹಿಂದಿನ ಸಹಜ ಸ್ಥಿತಿಗೆ ತರುವ ಉದ್ದೇಶದಿಂದ ವಿಶೇಷ ಶಿಬಿರಗಳಿಗೆ ಕಳಿಸಿತ್ತು. ಹೀಗೆ ಸೇನೆಗೆ ಸೆರೆ ಸಿಕ್ಕಿದವರಲ್ಲಿ ನಮ್ಮ ಉರ್ದು ಶಿಕ್ಷಕರು ಕೂಡ ಇದ್ದರು. ಆಸಾಮಿ ಏನು ಮಾಡಿದ್ದರೆಂದರೆ, 'ನಾನು ಹೆಣ್ಣು ಮಕ್ಕಳಿಗೆ ಪಾಠ ಮಾಡೋದಿಲ್ಲ' ಎಂದು ಹೇಳಿ, ಫಜ್ಲುಲ್ಲಾನ ಬಂಟರ ಜೊತೆ ಮನೆಮನೆಗೂ ನುಗ್ಗಿ ಸಿ.ಡಿ.ಗಳನ್ನೂ ಡಿ.ವಿ.ಡಿ.ಗಳನ್ನೂ ವಶಪಡಿಸಿಕೊಂಡು, ಅದನ್ನೆಲ್ಲ ನಾಶ ಮಾಡುವ ಕೆಲಸಕ್ಕೆ ಹೋಗಿದ್ದರು.
ಇಷ್ಟಾದರೂ ಫಜ್ಲುಲ್ಲಾ ಮಾತ್ರ ಇನ್ನೂ ತಲೆ ತಪ್ಪಿಸಿಕೊಂಡೇ ಇದ್ದ. ಇಮಾಂ ಡೇರಿಯಲ್ಲಿದ್ದ ಆತನ ಕೇಂದ್ರ ಕಚೇರಿಯನ್ನು ಧ್ವಂಸ ಮಾಡಿದ್ದ ಸೇನೆ, ಆತನನ್ನು ಪಿಯೋಚರ್ ಪರ್ವತದಲ್ಲಿ ಸುತ್ತುವರಿದಿರುವುದಾಗಿ ಹೇಳಿಕೊಂಡಿತ್ತು. ಆಮೇಲೆ ಅದು, 'ಫಜ್ಲುಲ್ಲಾ ನಮ್ಮ ದಾಳಿಗೆ ಸಿಲುಕಿ ಸಿಕ್ಕಾಬಟ್ಟೆ ಪೆಟ್ಟು ತಿಂದಿದ್ದಾನೆ. ಆತನ ವಕ್ತಾರ ಮುಸ್ಲಿಂ ಖಾನ್ ನಮ್ಮ ವಶದಲ್ಲಿದ್ದಾನೆ' ಎಂದಿತು. ಕೊನೆಗೆ ಸೇನೆ ಇದನ್ನೆಲ್ಲ ಬಿಟ್ಟು, 'ಫಜ್ಲುಲ್ಲಾ ನಮ್ಮ ಕೈಯಿಂದ ತಪ್ಪಿಸಿಕೊಂಡು, ಅಫಘಾನಿಸ್ತಾನಕ್ಕೆ ಪರಾರಿಯಾಗಿ ಬಿಟ್ಟ. ಅವನೀಗ ಅಲ್ಲಿನ ಕುನಾರ್ ಪ್ರಾಂತ್ಯದಲ್ಲಿದ್ದಾನೆ' ಎಂದು ಹೇಳಿತು. ಆಗ ಕೆಲವರು, 'ಫಜ್ಲುಲ್ಲಾನನ್ನು ಸೆರೆ ಸಿಕ್ಕಿದ್ದ. ಆದರೆ, ಅವನ ವಿಚಾರವಾಗಿ ಮುಂದೇನು ಮಾಡಬೇಕೆಂಬ ಬಗ್ಗೆ ಸೇನೆಗೂ ಐಎಸ್ಐಗೂ ಒಮ್ಮತ ಮೂಡಲಿಲ್ಲ. ಏಕೆಂದರೆ, ಸೇನೆ ಆತನನ್ನು ಜೈಲಿಗೆ ತಳ್ಳಬೇಕೆಂದು ಉದ್ದೇಶಿಸಿತ್ತು. ಆದರೆ, ಐಎಸ್ ಅವನನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಬಾಜೌರ್ಗೆ ಕರೆದುಕೊಂಡು ಹೋಗುತ್ತಿತ್ತು. ಆಗ, ಅವನು ಇವರಿಗೆ ಚಳ್ಳೆಹಣ್ಣು ತಿನ್ನಿಸಿ, ಗಡಿ ದಾಟಿ, ಅಫಘಾನಿಸ್ತಾನವನ್ನು ಸೇರಿಕೊಂಡ' ಎಂದು ಹೇಳಿದರು.
ಆಗ ತಾಲಿಬಾನ್ ನಾಯಕರ ಪೈಕಿ ಮುಸ್ಲಿಂ ಖಾನ್ ಮತ್ತು ಇನ್ನೊಬ್ಬ ಕಮಾಂಡರ್ ಮೆಹಮೂದ್ ಮಾತ್ರ ಸೇನೆಯ ವಶದಲ್ಲಿದ್ದರು ಅನಿಸುತ್ತದೆ. ಮಿಕ್ಕವರೆಲ್ಲ ಹಾಯಾಗಿ ಓಡಾಡಿಕೊಂಡಿದ್ದರು. ಫಜ್ಲುಲ್ಲಾ ಅಲ್ಲೇ ಇರುವವರೆಗೂ ತಾಲಿಬಾನ್ಗಳು ಮತ್ತೆ ಒಗ್ಗಟ್ಟಾಗಿ, ಅಕಾರಕ್ಕೆ ಬಂದುಬಿಟ್ಟಾರೆಂಬ ಭಯ ನನಗೆ ಇದ್ದೇ ಇತ್ತು. ಕೆಲವೊಮ್ಮೆಯಂತೂ ನನಗೆ ಸಂಬಂಧ ದುಃಸ್ವಪ್ನ ಬೀಳುತ್ತಿತ್ತು. ಆದರೆ ಈಗ ಒಂದು ಸಮಾಧಾನವೂ ಇತ್ತು. ಅದೇನೆಂದರೆ, ಆತನ ರೇಡಿಯೊ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿತ್ತು.
ನಮ್ಮ ಅಪ್ಪನ ಗೆಳೆಯರಾದ ಅಹಮದ್ ಶಾ ಅವರು ಇದನ್ನು 'ಇದು ನಿಯಂತ್ರಿತ ಶಾಂತಿ... ಹೆಚ್ಚು ದಿನ ಉಳಿಯೋದಿಲ್ಲ' ಎಂದರು. ಆದರೆ ಜನ ಕ್ರಮೇಣ ಕಣಿವೆಗೆ ವಾಪಸ್ಸಾಗಲು ಶುರು ಮಾಡಿದರು. ಏಕೆಂದರೆ, ಸ್ವಾತ್ ಅಷ್ಟೊಂದು ಸುಂದರವಾಗಿತ್ತು! ಅದನ್ನು ತುಂಬಾ ದಿನ ಬಿಟ್ಟಿರುವುದು ನಮಗ್ಯಾರಿಗೂ ಸಾಧ್ಯವಿರಲಿಲ್ಲ.
****
ಆಗಸ್ಟ್ ಒಂದನೇ ತಾರೀಖು ನಮ್ಮ ಸ್ಕೂಲಿನ ಗಂಟೆ ಮತ್ತೆ ಬಾರಿಸಿತು. ಶಬ್ದವನ್ನು ಕೇಳುವುದು, ಮತ್ತೆ ಹಿಂದಿನಂತೆ ಬಾಗಿಲುಗಳ ಮೂಲಕ ಸರಸರನೆ ಓಡುವುದು ಮತ್ತು ಮೆಟ್ಟಿಲುಗಳನ್ನು ಹತ್ತಿ ಇಳಿದು ಮಾಡುವುದೆಲ್ಲ ಹಿತಕರವಾದ ಅನುಭವವಾಗಿತ್ತು. ನನ್ನ ಹಳೆಯ ಗೆಳತಿಯರನ್ನೆಲ್ಲ ನೋಡಿ ನನಗಂತೂ ಮೇರೆ ಮೀರಿದ ಸಂತೋಷವಾಗಿತ್ತು. ನಾವು ಕಣಿವೆಯನ್ನು ಬಿಟ್ಟು ನಿರಾಶ್ರಿತರಾಗಿದ್ದಾಗಿನ ಅವಯ ನೂರಾರು ಕತೆಗಳು ನಮ್ಮೆಲ್ಲರಲ್ಲೂ ಇದ್ದವು. ನಮ್ಮಲ್ಲಿ ಹೆಚ್ಚಿನವರೆಲ್ಲ ನಿರಾಶ್ರಿತರಾಗಿದ್ದಾಗ ಸ್ನೇಹಿತರ ಮನೆಗಳಲ್ಲೋ, ನೆಂಟರ ಮನೆಗಳಲ್ಲೋ ಉಳಿದುಕೊಂಡಿದ್ದರು. ಕೆಲವರು ಮಾತ್ರ ನಿರಾಶ್ರಿತರಿಗೆಂದೇ ಹಾಕಿದ್ದ ಗುಡಾರಗಳಲ್ಲಿ ಇದ್ದು ಬಂದಿದ್ದರು. ಇವರಿಗೆ ಹೋಲಿಸಿದರೆ ನಾವು ಅದೃಷ್ಟವಂತರಾಗಿದ್ದೆವು ಎನ್ನುವುದು ನಮಗೆ ಗೊತ್ತಿತ್ತು. ಅನೇಕ ಮಕ್ಕಳಂತೂ ಗುಡಾರಗಳಲ್ಲೇ ಕೂತು ಪಾಠ ಕೇಳಬೇಕಾಗಿತ್ತು. ಏಕೆಂದರೆ, ಅವರ ಶಾಲೆಯನ್ನೆಲ್ಲ ತಾಲಿಬಾನ್ ಉಗ್ರಗಾಮಿಗಳು ನೆಲಸಮ ಮಾಡಿದ್ದರು. ನನ್ನ ಗೆಳತಿಯರ ಪೈಕಿ ಒಬ್ಬಳಾದ ಸುಂಡೂಸ್, ಬಾಂಬ್ ಸೋಟವೊಂದರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
'ಬಿ.ಬಿ.ಸಿ. ಡೈರಿ'ಯನ್ನು ಬರೆಯುತ್ತಿದ್ದುದು ನಾನೇ ಎನ್ನುವುದು ಎಲ್ಲರಿಗೂ ಗೊತ್ತಿದ್ದಂತೆ ಕಾಣುತ್ತಿತ್ತು. ಕೆಲವರು, ಅದನ್ನೆಲ್ಲ ನಮ್ಮ ಅಪ್ಪನೇ ನನ್ನ ಪರವಾಗಿ ಬರೆಯುತ್ತಿದ್ದರು ಎಂದುಕೊಂಡಿದ್ದರು. ಆಗ ನಮ್ಮ ಮುಖ್ಯ ಶಿಕ್ಷಕಿ ಮರಿಯಂ ಅವರು, 'ಇಲ್ಲ ಇಲ್ಲ.... ಮಲಾಲಾ ಕೇವಲ ಒಳ್ಳೆಯ ಭಾಷಣಕಾರ್ತಿಯಷ್ಟೇ ಅಲ್ಲ, ಅವಳಿಗೆ ಚೆನ್ನಾಗಿ ಬರೆಯಲೂ ಬರುತ್ತದೆ. ಅವಳು ಒಳ್ಳೆಯ ಬರಹಗಾರ್ತಿ ಕೂಡ' ಎಂದು ಹೇಳಿದರು.
****
ಬೇಸಿಗೆಯಲ್ಲಿ ನಮ್ಮ ಇಡೀ ತರಗತಿಯಲ್ಲಿ ಯಾವಾಗಲೂ ಒಂದೇ ವಿಷಯದ ಸುತ್ತ ಮಾತುಕತೆ ನಡೆಯುತ್ತಿತ್ತು. ಇಸ್ಲಾಮಾಬಾದ್ ನಮ್ಮ ಗೆಳತಿ ಶಿಝಾ, ಅಮೆರಿಕದ ಸ್ಟ್ಯಾನ್ಫೋರ್ಡ್ನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದ್ದು, ನಮ್ಮ ಶಾಲೆಯ ಒಟ್ಟು ಇಪ್ಪತ್ತೇಳು ಹುಡುಗಿಯರನ್ನು ಕೆಲದಿನಗಳ ಮಟ್ಟಿಗೆ ರಾಜಧಾನಿಗೆ ಆಹ್ವಾನಿಸಿದಳು. ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರೆ, ತಾಲಿಬಾನ್ ಆಳ್ವಿಕೆಯಡಿ ನಮಗೆಲ್ಲರಿಗೂ ಆಗಿದ್ದ ಆಘಾತದಿಂದ ಹೊರಬರಲು ಸಾಧ್ಯವಾಗುತ್ತದೆ ಎನ್ನುವುದು ಶಿಝಾಳ ಆಲೋಚನೆಯಾಗಿತ್ತು. ನಮ್ಮ ತರಗತಿಯಿಂದ ಆಹ್ವಾನ ಪಡೆದವರಲ್ಲಿ ನನ್ನ ಜೊತೆಗೆ ಮೋನಿಬಾ, ಮಲ್ಕಾ--ನೂರ್, ರಿಡಾ, ಕರಿಷ್ಮಾ ಮತ್ತು ಸುಂಡೂಸ್ ಇದ್ದರು. ಜೊತೆಗೆ ಅಮ್ಮ ಮತ್ತು ಮರಿಯಂ ಮೇಡಂ ಕೂಡ ಇದ್ದರು.
ಆಗಸ್ಟ್ ೧೪ರ ಸ್ವಾತಂತ್ರ್ಯ ದಿನಾಚರಣೆಗೆ ನಾವೆಲ್ಲ ರಾಜಧಾನಿಯತ್ತ ಬಸ್ಸನ್ನೇರಿ ಹೊರಟೆವು. ಎಲ್ಲರೂ ರೋಮಾಂಚನದಲ್ಲಿ ಮುಳುಗಿದ್ದರು. ಪೈಕಿ ಹೆಚ್ಚಿನ ಹುಡುಗಿಯರು ನಾವು ನಿರಾಶ್ರಿತರಾದಾಗ ಮಾತ್ರ ಕಣಿವೆಯಿಂದಾಚೆಗೆ ಪ್ರಯಾಣ ಮಾಡಿದ್ದರು. ಆದರೆ, ಈಗಿನ ಪ್ರಯಾಣ ಬೇರೆ ತರಹ ಇದ್ದು, ನಾವು ಕಾದಂಬರಿಗಳಲ್ಲಿ ಓದುವಂತಹ ರಜೆ ದಿನಗಳ ಹಾಗಿತ್ತು. ರಾಜಧಾನಿಯಲ್ಲಿ ಅತಿಥಿಗೃಹಗಳಲ್ಲಿ ಉಳಿದುಕೊಂಡಿದ್ದ ನಾವು ಅಲ್ಲಿ, ಕಣಿವೆಯಲ್ಲಿ ನಿಜಕ್ಕೂ ಏನೇನು ನಡೆಯುತ್ತಿದೆ ಎನ್ನುವ ಕತೆಗಳನ್ನು ಹೇಗೆ ಹೇಳಬೇಕೆಂಬುದನ್ನೂ ಅವರ ಸಹಾಯ ಕೋರುವುದನ್ನೂ ಕಾರ್ಯಾಗಾರಗಳ ಮೂಲಕ ಕಲಿತೆವು. ನಾವೆಲ್ಲರೂ ಎಷ್ಟೊಂದು ಗಟ್ಟಿಗಿತ್ತಿಯರೆಂಬುದನ್ನೂ ವಾಚಾಳಿಗಳೆಂಬುದನ್ನೂ ನೋಡಿ ಶಿಝಾ ಬಹುಶಃ ಮೊದಲ ಗೋಷ್ಠಿಯಿಂದಲೇ ಆಶ್ಚರ್ಯಚಕಿತಳಾಗಿರಬೇಕು ಎಂದು ನನಗನಿಸಿತು. ಬಗ್ಗೆ ಶಿಝಾ ನಮ್ಮ ಅಪ್ಪನ ಬಳಿ, ' ರೂಮಿನ ತುಂಬಾ ಬರೀ ಮಲಾಲಾಗಳೇ ತುಂಬಿಕೊಂಡಿದ್ದರು' ಎಂದರು.
ಇದರ ಜೊತೆಗೆ ನಾವು ಪಾರ್ಕಿಗೆ ಹೋಗುವುದು, ಸಂಗೀತ ಕೇಳುವುದು ಮುಂತಾದವನ್ನೂ ಮಾಡುತ್ತಿದ್ದೆವು. ಇಸ್ಲಾಮಾಬಾದಿನ ಜನರಿಗೆ ಇವೆಲ್ಲ ತುಂಬಾ ಮಾಮೂಲಿ ಸಂಗತಿಯಾಗಿದ್ದವು. ಏಕೆಂದರೆ, ಸ್ವಾತ್ನಲ್ಲಿ ಇವೆಲ್ಲ ರಾಜಕೀಯ ಪ್ರತಿಭಟನೆಯ ಭಾಗವಾಗಿದ್ದವು. ಸೌದಿಗಳು ಲಕ್ಷಾಂತರ ಹಣ ಸುರಿದು, ಮರ್ಗಾಲಾ ಹಿಲ್ಸ್ ಬುಡದಲ್ಲಿ ಕಟ್ಟಿಸಿದ್ದ ಫೈಸಲ್ ಮಸೀದಿಯನ್ನು ನಾವು ನೋಡಿದೆವು. ತುಂಬಾ ವಿಶಾಲವಾಗಿಯೂ ಬೆಳ್ಳಗೂ ಇದ್ದ ಅದು, ಮಸೀದಿಯ ಎರಡು ಕಂಬಗಳ ನಡುವೆ ಫಳಫಳನೆ ಹೊಳೆಯುತ್ತಿತ್ತು. ಅದೇ ಮೊದಲ ಬಾರಿಗೆ ನಾವು ರಂಗಮಂದಿರಕ್ಕೆ ಹೋಗಿ 'ಟಾಮ್, ಡಿಕ್ ಅಂಡ್ ಹ್ಯಾರಿ' ಎಂಬ ಇಂಗ್ಲಿಷ್ ನಾಟಕವನ್ನು ನೋಡಿದೆವು. ಹೋಟೆಲುಗಳಲ್ಲೆಲ್ಲ ಊಟ ಮಾಡಿದ ನಾವುಗಳು, ಅದೇ ಮೊದಲ ಬಾರಿಗೆ ಮ್ಯಾಕ್ಡೊನಾಲ್ಡ್ ಮಳಿಗೆಗೂ ಹೋಗಿಬಂದೆವು. ನಾನು ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ 'ಕ್ಯಾಪಿಟಲ್ ಟಾಕ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ, ನನಗೆ ಚೀನೀಸ್ ಹೋಟೆಲಿನಲ್ಲಿ ಊಟ ತಪ್ಪಿಹೋಯಿತು. ಆದರೂ ಅದೇ ಮೊದಲ ಬಾರಿಗೆ ನಾವು ಅಲ್ಲಿನ ಅನೇಕ ಸ್ಥಳಗಳನ್ನು ನೋಡಿದೆವು. ಅಲ್ಲಿ ನಾನು ರುಚಿ ನೋಡಿದ ಬಾತುಕೋಳಿಯ ಮಾಂಸದ ದೋಸೆಯನ್ನು ಮತ್ತೆ ಇಲ್ಲಿಯವರೆಗೂ ತಿಂದಿಲ್ಲ!
ಸ್ವಾತ್ಗೆ ಹೋಲಿಸಿ ನೋಡಿದರೆ ಇಸ್ಲಾಮಾಬಾದ್ ಸಂಪೂರ್ಣ ಭಿನ್ನವಾಗಿತ್ತು. ಒಂದು ಹೋಲಿಕೆ ಕೊಡುವುದಾದರೆ, ಇಸ್ಲಾಮಾಬಾದ್ಗೆ ಹೋಲಿಸಿದರೆ ನ್ಯೂಯಾರ್ಕ್ ಎಷ್ಟೊಂದು ಭಿನ್ನವಾಗಿದೆಯೋ ಹಾಗಿತ್ತು. ಶಿಝಾ ಅಲ್ಲಿ ನಮ್ಮನ್ನೆಲ್ಲ ವೈದ್ಯರೂ ನ್ಯಾಯವಾದಿಗಳೂ ಹೋರಾಟಗಾರ್ತಿಯರೂ ಆಗಿದ್ದ ಮಹಿಳೆಯರಿಗೆ ಪರಿಚಯ ಮಾಡಿಕೊಟ್ಟರು. ಆಗ ನಮಗೆಲ್ಲ, ಮಹಿಳೆಯರು ತುಂಬಾ ಮುಖ್ಯವಾದ ಕೆಲಸಗಳನ್ನು ಮಾಡಿಕೊಂಡೂ ತಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಉಳಿಸಬಲ್ಲರು ಎನ್ನುವುದು ಮನದಟ್ಟಾಯಿತು. ನಾವು ಅಲ್ಲಿ, ತಲೆಗೆ ಯಾವ ಪರ್ದಾವನ್ನೂ ಹಾಕಿಕೊಳ್ಳದೆ ನಿರ್ಭೀತವಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ನೋಡಿದೆವು. ಅದಾದಮೇಲೆ ನಾನೂ ಕೆಲವು ಸಭೆಗಳಲ್ಲಿ ನನ್ನ ತಲೆಯ ಮೇಲೆ ಶಾಲು ಹಾಕಿಕೊಳ್ಳುವುದನ್ನು ನಿಲ್ಲಿಸಿದೆ. ಆಗ ನನಗೆ, 'ನಾನು ಆಧುನಿಕ ಕಾಲದ ಹುಡುಗಿಯಾದೆ' ಎನಿಸುತ್ತಿತ್ತು. ಆದರೆ ಆಮೇಲೆ ನನಗೆ, ತಲೆಯ ಮೇಲೆ ವಸ್ತ್ರವನ್ನು ಹಾಕಿಕೊಳ್ಳುವುದನ್ನು ಬಿಡುವುದರಿಂದಷ್ಟೇ ಯಾರೂ ಆಧುನಿಕವಾಗಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಯಿತು.
ನಾವು, ಒಂದು ವಾರದ ಮಟ್ಟಿಗೆ ಇಸ್ಲಾಮಾಬಾದಿನಲ್ಲಿದ್ದೆವು. ಅಲ್ಲಿ, ಅಂದುಕೊಂಡಂತೆಯೇ ನನಗೂ ಮೋನಿಬಾಗೂ ಜಗಳವಾಯಿತು. ನಾನು ನನಗಿಂತ ಒಂದು ವರ್ಷ ದೊಡ್ಡ ಹುಡುಗಿಯ ಜೊತೆ ಇದ್ದುದನ್ನು ಕಂಡ ಮೋನಿಬಾ, 'ನೀನೀಗ ರೇಶಂ ಜೊತೆ ಇದ್ದೀಯ. ನನ್ನ ಜೊತೆ ರಿಡಾ ಇದ್ದಾಳೆ' ಎಂದಳು.
ಶಿಝಾ ನಮ್ಮನ್ನೆಲ್ಲ ಪ್ರಭಾವಿ ವ್ಯಕ್ತಿಗಳಿಗೆ ಪರಿಚಯ ಮಾಡಿಕೊಡಲು ಬಯಸಿದಳು. ನಮ್ಮ ದೇಶದಲ್ಲಿ 'ಪ್ರಭಾವಿ' ಎಂದರೆ, ಅದು 'ಸೇನೆ'ಯಲ್ಲದೇ ಬೇರೇನೂ ಅಲ್ಲ. ಇಂಥ ಒಂದು ಸಭೆ ಸೇನೆಯ ಪ್ರಧಾನ ವಕ್ತಾರರೂ ಅದರ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರೂ ಆಗಿದ್ದ ಜನರಲ್ ಅಥರ್ ಅಬ್ಬಾಸ್ ಅವರೊಂದಿಗೆ ಏರ್ಪಾಡಾಯಿತು. ನಾವೆಲ್ಲ ಅವರನ್ನು ನೋಡಲು ಇಸ್ಲಾಮಾಬಾದ್ ಅವಳಿ ನಗರವಾದ ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಗೆ ಹೋದೆವು. ಕಚೇರಿಯು ಹಸಿರು ಹುಲ್ಲುಹಾಸಿನಿಂದಲೂ ಹೂವುಗಳಿಂದಲೂ ಕಂಗೊಳಿಸುತ್ತ, ರಾವಲ್ಪಿಂಡಿಯ ಉಳಿದ ಭಾಗಗಳಿಗಿಂತ ಹೆಚ್ಚು ಶುಚಿಯಿಂದ ಕೂಡಿರುವುದನ್ನು ನೋಡಿ ನಮ್ಮ ಕಣ್ಣುಗಳು ಅರಳಿದವು. ಅಲ್ಲಿದ್ದ ಮರಗಳೆಲ್ಲ ಒಂದೇ ಗಾತ್ರದವಾಗಿದ್ದು, ಅವುಗಳ ಕಾಂಡಗಳಿಗೆಲ್ಲ ಅರ್ಧ ಭಾಗಕ್ಕೆ ಸರಿಯಾಗಿ ಬಿಳಿ ಬಣ್ಣ ಬಳಿಯಲಾಗಿತ್ತು. ಆದರೆ, ಇದರ ಹಿಂದಿನ ಕಾರಣ ನಮಗೆ ಗೊತ್ತಿರಲಿಲ್ಲ. ಪ್ರಧಾನ ಕಚೇರಿಯ ಒಳಗೆ ನಾವು ಹತ್ತಾರು ಟೆಲಿವಿಷನ್ಗಳಿದ್ದುದನ್ನು ನೋಡಿದೆವು. ಅಲ್ಲಿದ್ದವರು ಪ್ರತಿಯೊಂದು ಟಿ.ವಿ. ಚಾನೆಲ್ಲನ್ನೂ ಹದ್ದಿನ ಕಣ್ಣಿನಿಂದ ನೋಡುತ್ತಿದ್ದರು. ಆಗ ಇನ್ನೊಬ್ಬ ಅಕಾರಿ ನಮ್ಮ ಅಪ್ಪನಿಗೆ, 'ನೋಡಿ, ಇವತ್ತಿನ ಪತ್ರಿಕೆಗಳಲ್ಲಿ ನಮ್ಮ ಸೇನೆಯ ಬಗ್ಗೆ ಎಷ್ಟೊಂದು ಸುದ್ದಿ ಬಂದಿದೆ!' ಎಂದು ಒಂದು ದೊಡ್ಡ ಕಡತವನ್ನೇ ತೋರಿಸಿದರು. ಅದನ್ನು ನೋಡಿ ಅಪ್ಪನಿಗೆ ವಿಸ್ಮಯವಾಯಿತು. ಒಟ್ಟಿನಲ್ಲಿ ಅದನ್ನೆಲ್ಲ ನೋಡಿದರೆ, ನಮ್ಮ ರಾಜಕಾರಣಿಗಳಿಗಿಂತ ಸೇನೆಯೇ ಬಹಳ ಪರಿಣಾಮಕಾರಿಯಾಗಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸುತ್ತಿದೆ ಎನಿಸುತ್ತಿತ್ತು.
ಅಲ್ಲಿ ನಮ್ಮನ್ನೆಲ್ಲ ಒಂದು ದೊಡ್ಡ ಸಭಾಂಗಣಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ನಾವು, ಜನರಲ್ ಅಬ್ಬಾಸ್ ಅವರಿಗೆ ಕಾಯುತ್ತ ನಿಂತೆವು. ಅಲ್ಲಿನ ಗೋಡೆಗಳ ಮೇಲೆ ನಮ್ಮ ಸೇನೆಯ ನೇತೃತ್ವ ವಹಿಸಿಕೊಂಡಿದ್ದ ದಂಡನಾಯಕರೆಲ್ಲರ ಭಾವಚಿತ್ರಗಳಿದ್ದವು. ಅವುಗಳ ಪೈಕಿ ಸರ್ವಾಕಾರಿಗಳಾದ ಜನರಲ್ ಮುಷರ್ರಫ್ ಮತ್ತು ಜಿಯಾ ಉಲ್ ಹಕ್ ಅವರ ಫೋಟೋಗಳೂ ಇದ್ದವು. ಆಗ, ಬಿಳಿ ಕೈಗವಸುಗಳನ್ನು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ನಮಗೆಲ್ಲ ಟೀ, ಬಿಸ್ಕತ್ತು ಮತ್ತು ಮಾಂಸದ ಪುಟ್ಟಪುಟ್ಟ ಸಮೋಸಾಗಳನ್ನು ತಂದ. ಸಮೋಸಾವಂತೂ ಬಾಯಲ್ಲಿ ಹಾಗೆಯೇ ಕರಗಿ ಹೋಯಿತು! ಜನರಲ್ ಅಬ್ಬಾಸ್ ಅವರು ಬಂದಾಗ, ನಾವೆಲ್ಲ ಎದ್ದು ನಿಂತೆವು.
ಸ್ವಾತ್ನಲ್ಲಿ ತಮ್ಮ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ಅವರು ನಮಗೆಲ್ಲ ಹೇಳಲು ಶುರು ಮಾಡಿದರು. ಅವರು, ಅದನ್ನು ಒಂದು ಜೈತ್ರಯಾತ್ರೆಯಂತೆ ಬಿಂಬಿಸುತ್ತಿದ್ದರು. ಕಾರ್ಯಾಚರಣೆಯಲ್ಲಿ ಒಟ್ಟು ೧೨೮ ಯೋಧರು ಹುತಾತ್ಮರಾದರೆ, ,೬೦೦ ಉಗ್ರಗಾಮಿಗಳನ್ನು ಸದೆಬಡಿದು ಹಾಕಿದೆವು ಎಂದು ಅವರು ಹೇಳಿದರು.
ಅವರು ತಮ್ಮ ಮಾತು ಮುಗಿಸಿದ ಮೇಲೆ ಪ್ರಶ್ನೆಗಳನ್ನು ಕೇಳಲು ನಮಗೆಲ್ಲ ಅವಕಾಶವಿತ್ತು. ಆದರೆ, ಮೊದಲೇ ಪ್ರಶ್ನೆಗಳನ್ನೆಲ್ಲ ಸಿದ್ಧಪಡಿಸಿಕೊಂಡಿರಲು ನಮಗೆಲ್ಲ ಹೇಳಲಾಗಿತ್ತು. ಹೀಗಾಗಿ ನಾನು ಮೊದಲೇ ಏಳೆಂಟು ಪ್ರಶ್ನೆಗಳನ್ನು ಬರೆದಿಟ್ಟುಕೊಂಡಿದ್ದೆ. ಇದನ್ನು ನೋಡಿದ ಶಿಝಾ ನಕ್ಕು, 'ಅಷ್ಟೊಂದೆಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸಲಾರರು' ಎಂದಳು. ನಾನು ಮೊದಲ ಸಾಲಿನಲ್ಲೇ ಕೂತಿದ್ದೆ. ಹೀಗಾಗಿ, ಪ್ರಶ್ನೆಗಳನ್ನು ಕೇಳುವ ಸರದಿ ಬಂದಾಗ ನನ್ನನ್ನೇ ಮೊದಲು ಕರೆದರು. ಆಗ ನಾನು, 'ನೀವು ಎರಡು-ಮೂರು ತಿಂಗಳ ಹಿಂದೆ ಫಜ್ಲುಲ್ಲಾಗೂ ಆತನ ಬಂಟನಿಗೂ ಗುಂಡು ಹಾರಿಸಿದ್ದಾಗಿಯೂ ಅವರಿಬ್ಬರೂ ಗಾಯಗೊಂಡಿರುವುದಾಗಿಯೂ ಹೇಳಿದಿರಿ. ಆದರೆ ಆಮೇಲೆ, 'ಅವರಿಬ್ಬರೂ ಸ್ವಾತ್ನಲ್ಲಿದ್ದರು' ಎಂದೂ, ಇನ್ನು ಕೆಲವೊಮ್ಮೆ 'ಅವರಿಬ್ಬರೂ ಅಫಘಾನಿಸ್ತಾನದಲ್ಲಿದ್ದಾರೆ' ಎಂದೂ ಹೇಳಿದಿರಿ. ಅವರಿಬ್ಬರೂ ಅಲ್ಲಿಗೆ ಹೋಗುವುದು ಹೇಗೆ ಸಾಧ್ಯವಾಯ್ತು? ಅವರಿಬ್ಬರ ಬಗ್ಗೆ ನಿಮಗೆ ನಿಜಕ್ಕೂ ಅಷ್ಟೊಂದು ಮಾಹಿತಿ ಇದ್ದರೆ, ನೀವ್ಯಾಕೆ ಅವರನ್ನು ಹಿಡಿಯಬಾರದು?' ಎಂದು ಕೇಳಿದೆ.
ಅವರು, ನನ್ನ ಪ್ರಶ್ನೆಗೆ ಏನಿಲ್ಲವೆಂದರೂ ಹತ್ತು-ಹದಿನೈದು ನಿಮಿಷ ಉತ್ತರಿಸಿದರು. ಆದರೂ ನಿಜಕ್ಕೂ ಅವರು ಏನು ಹೇಳುತ್ತಿದ್ದಾರೆಂದು ನನಗೆ ಗೊತ್ತಾಗಲೇ ಇಲ್ಲ! ಆಮೇಲೆ ನಾನು, ಪುನರ್ನಿರ್ಮಾಣದ ಬಗ್ಗೆ ಕೇಳಿದೆ. ಅಷ್ಟೇ ಅಲ್ಲ, 'ನಮ್ಮ ಸ್ವಾತ್ ಕಣಿವೆಯ ಭವಿಷ್ಯದ ದೃಷ್ಟಿಯಿಂದ ಸೇನೆ ಏನಾದರೂ ಮಾಡಬೇಕು. ಅದನ್ನು ಬಿಟ್ಟು ಬರೀ ಸೇನಾ ಕಾರ್ಯಾಚರಣೆ ಮೇಲೆ ಗಮನ ಕೇಂದ್ರೀಕರಿಸುವುದಲ್ಲ' ಎಂದೆ.
ಮೋನಿಬಾ ಕೂಡ ಹೆಚ್ಚೂಕಮ್ಮಿ ಇಂಥದೇ ಪ್ರಶ್ನೆ ಕೇಳಿದಳು. ಅಂದರೆ, 'ಈಗ ಹಾಳಾಗಿರುವ ಕಟ್ಟಡಗಳನ್ನೂ ಶಾಲೆಗಳನ್ನೂ ಪುನಃ ಯಾರು ನಿರ್ಮಿಸುತ್ತಾರೆ?' ಎನ್ನುವುದು ಅವಳ ಪ್ರಶ್ನೆಯಾಗಿತ್ತು.
ಇದಕ್ಕೆ ಜನರಲ್ ಅಬ್ಬಾಸ್ ಕೊಟ್ಟ ಉತ್ತರ ಸೇನೆಯ ಗತ್ತಿನಿಂದ ಕೂಡಿದ್ದು, ಅವರ ಉತ್ತರ ಹೀಗಿತ್ತು- 'ಕಾರ್ಯಾಚರಣೆ ಮುಗಿದ ನಂತರ ಮೊದಲು ನಾವು ಎಲ್ಲವನ್ನೂ ವಶಪಡಿಸಿಕೊಳ್ಳುತ್ತೇವೆ, ಆಮೇಲೆ ಪುನರ್ವಸತಿ ಮಾಡುತ್ತೇವೆ, ಬಳಿಕ ಎಲ್ಲವನ್ನೂ ನಾಗರಿಕ ಇಲಾಖೆಗಳಿಗೆ ಬಿಟ್ಟುಕೊಡುತ್ತೇವೆ'.
ನಾವೆಲ್ಲರೂ ಆಗ, 'ತಾಲಿಬಾನನ್ನು ತಕ್ಕ ವಿಚಾರಣೆಗೆ ಒಳಪಡಿಸಲೇಬೇಕು' ಎಂದೆವು. ಆದರೆ, ಅದು ಸಾಧ್ಯವಾಗುವುದಿಲ್ಲ ಎನ್ನುವುದೂ ನಮಗೆ ಗೊತ್ತಿತ್ತು.
ಇದಾದಮೇಲೆ ಜನರಲ್ ಅಬ್ಬಾಸ್ ಅವರು ನಮ್ಮಲ್ಲಿ ಕೆಲವರಿಗೆ ತಮ್ಮ ವಿಸಿಟಿಂಗ್ ಕಾರ್ಡನ್ನು ಕೊಟ್ಟು, 'ನಿಮಗೇನಾದರೂ ಸಹಾಯ ಬೇಕೆನಿಸಿದರೆ ನನ್ನನ್ನು ಸಂಪರ್ಕಿಸಿ' ಎಂದರು.
ಪ್ರವಾಸದ ಕೊನೆಯ ದಿವಸ ನಾವೆಲ್ಲ, ತಾಲಿಬಾನ್ ಆಡಳಿತದಲ್ಲಿ ನಮಗಾದ ಅನುಭವಗಳ ಬಗ್ಗೆ 'ಇಸ್ಲಾಮಾಬಾದ್ ಕ್ಲಬ್'ನಲ್ಲಿ ಮಾತನಾಡಬೇಕಿತ್ತು. ಮೋನಿಬಾ ಬಗ್ಗೆ ಮಾತನಾಡಲು ಶುರು ಮಾಡುತ್ತಿದ್ದಂತೆಯೇ ಅವಳಿಗೆ ಅಳುವನ್ನು ತಡೆಯಲಾಗಲಿಲ್ಲ. ಕೂಡಲೇ ಮಿಕ್ಕವರೂ ಕಂಬನಿಗರೆಯಲು ಶುರು ಮಾಡಿದರು. ಒಂದು ವಾರದಲ್ಲಿ ನಾವು ಇಸ್ಲಾಮಾಬಾದ್ ವಿಭಿನ್ನವಾದ ಜೀವನವನ್ನು ಒಂದಿಷ್ಟು ಅನುಭವಿಸಿದೆವು. ನನ್ನ ಸರದಿ ಬಂದಾಗ, ಇಂಗ್ಲಿಷ್ ನಾಟಕವನ್ನು ನೋಡುವವರೆಗೂ ಪಾಕಿಸ್ತಾನದಲ್ಲಿ ಇಷ್ಟೊಂದು ಬುದ್ಧಿವಂತರಿದ್ದಾರೆ ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದೆ. ಆಮೇಲೆ, ಹಾಗೆಯೇ ಮುಂದುವರಿದು, 'ಇನ್ನುಮುಂದೆ ನಾವು ಭಾರತೀಯ ಸಿನಿಮಾಗಳನ್ನೇನೂ ನೋಡಬೇಕಾಗಿಲ್ಲ ಎನ್ನುವುದು ನಮಗೆ ಈಗ ಗೊತ್ತಾಗಿದೆ' ಎಂದು ಜೋಕ್ ಮಾಡಿದೆ. ಒಟ್ಟಿನಲ್ಲಿ ಇಸ್ಲಾಮಾಬಾದ್ನಲ್ಲಿದ್ದ ಸಮಯ ತುಂಬಾ ಆಹ್ಲಾದಕರವಾಗಿತ್ತು. ಪ್ರವಾಸ ಮುಗಿಸಿಕೊಂಡು ಸ್ವಾತ್ಗೆ ವಾಪಸ್ಸಾದಾಗ ಭವಿಷ್ಯದ ಬಗ್ಗೆ ನನಗೆ ತುಂಬಾ ಭರವಸೆ ಇತ್ತು. ಅದು ರಂಜಾನ್ ತಿಂಗಳು. ಆಗ ನಾನೊಂದು ಮಾವಿನ ಸಸಿ ನೆಟ್ಟೆ. ಏಕೆಂದರೆ, ರಂಜಾನ್ ತಿಂಗಳಲ್ಲಿ ಉಪವಾಸದ ನಂತರ ಮಾವಿನ ಹಣ್ಣನ್ನು ತಿನ್ನುವುದೆಂದರೆ ನಮಗೆಲ್ಲ ಅಚ್ಚುಮೆಚ್ಚು.
ಆಗ ನಮ್ಮ ಅಪ್ಪನಿಗೆ ಒಂದು ದೊಡ್ಡ ಸಮಸ್ಯೆ ಎದುರಾಗಿತ್ತು. ನಾವು ನಿರಾಶ್ರಿತರಾಗಿದ್ದ ಮೂರು ತಿಂಗಳ ಮಟ್ಟಿಗೆ ಅಪ್ಪ, ನಮ್ಮ ಶಾಲೆಯ ಯಾವೊಬ್ಬ ವಿದ್ಯಾರ್ಥಿಯಿಂದಲೂ ಶುಲ್ಕ ಕಟ್ಟಿಸಿಕೊಳ್ಳಲಿಲ್ಲ. ಆದರೆ, ನಮ್ಮ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕ-ಶಿಕ್ಷಕಿಯರು ಮಾತ್ರ ಮೂರು ತಿಂಗಳ ಸಂಬಳವನ್ನೂ ನಿರೀಕ್ಷಿಸುತ್ತಿದ್ದರು. ಅದು, ಏನಿಲ್ಲವೆಂದರೂ ಹತ್ತು ಲಕ್ಷ ರೂಪಾಯಿಗಳಿಗೂ ಮೀರಿದ ಬಾಬತ್ತಾಗಿತ್ತು. ನಿಜ ಹೇಳಬೇಕೆಂದರೆ, ಆಗ ನಮ್ಮಲ್ಲಿನ ಎಲ್ಲ ಖಾಸಗಿ ಶಾಲೆಗಳೂ ಇದೇ ಪರಿಸ್ಥಿತಿಯಲ್ಲಿದ್ದವು. ಒಂದು ಶಾಲೆ ಮಾತ್ರ ತನ್ನ ಬೋಧಕ ವೃಂದಕ್ಕೆ ಒಂದು ತಿಂಗಳ ಸಂಬಳವನ್ನು ಕೊಟ್ಟಿತು. ಆದರೆ, ಮಿಕ್ಕ ಶಾಲೆಗಳಿಗೆ ವಿಷಯದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಏಕೆಂದರೆ, ಶಾಲೆಗಳಿಗೆ ಅಷ್ಟೂ ತಿಂಗಳ ಸಂಬಳ ಕೊಡುವ ಶಕ್ತಿ ಇರಲಿಲ್ಲ. ನಮ್ಮ ಕುಶಾಲ್ ಸ್ಕೂಲಿನ ಶಿಕ್ಷಕ-ಶಿಕ್ಷಕಿಯರು 'ಪೂರ್ತಿ ಆಗದಿದ್ದರೆ ಸ್ವಲ್ಪವನ್ನಾದರೂ ಸಂಬಳವಾಗಿ ಕೊಡಬೇಕು' ಎಂದು ಪಟ್ಟು ಹಿಡಿದುಕೊಂಡು ಕೂತರು. ಏಕೆಂದರೆ, ಅವರೆಲ್ಲರಿಗೂ ಅವರವರವೇ ಆದ ತಾಪತ್ರಯಗಳಿದ್ದವು. ಪೈಕಿ ಒಬ್ಬರಾದ ಹೀರಾ ಅವರು ಸದ್ಯದಲ್ಲೇ ಮದುವೆಯಾಗುತ್ತಿದ್ದರು. ಹೀಗಾಗಿ ಅವರಿಗೆ ದುಡ್ಡಿನ ಅಗತ್ಯವಿತ್ತು.
ನಮ್ಮ ಅಪ್ಪ ತೀರಾ ಇಕ್ಕಟ್ಟಿನಲ್ಲಿದ್ದರು. ಆಗ ನಾವು, ಜನರಲ್ ಅಬ್ಬಾಸ್ ಅವರನ್ನೂ ಅವರು ನಮಗೆ ಕೊಟ್ಟಿದ್ದ ವಿಸಿಟಿಂಗ್ ಕಾರ್ಡನ್ನೂ ನೆನಪಿಸಿಕೊಂಡೆವು. ಏಕೆಂದರೆ, ನಾವೆಲ್ಲ ನಮ್ಮ ಮನೆಮಠ, ಊರುಕೇರಿಯನ್ನೆಲ್ಲ ತೊರೆದಿದ್ದೇ ಸೇನೆಯು ತಾಲಿಬಾನ್ಗಳನ್ನು ಹುಟ್ಟಡಗಿಸಲು ಕೈಗೆತ್ತಿಕೊಂಡ ಕಾರ್ಯಾಚರಣೆಯ ಪರಿಣಾಮವಾಗಿದ್ದು, ಈಗಿನ ನಮ್ಮ ಹೀನಸ್ಥಿತಿಗೆ ಅದೇ ಕಾರಣವಾಗಿತ್ತು. ಹೀಗಾಗಿ ನಾನೂ ನಮ್ಮ ಶಿಕ್ಷಕಿಯಾದ ಮರಿಯಂ ಅವರೂ ಜನರಲ್ ಅಬ್ಬಾಸ್ ಅವರಿಗೆ ಸದ್ಯದ ಪರಿಸ್ಥಿತಿಯನ್ನೆಲ್ಲ ವಿವರಿಸಿ ಒಂದು -ಮೆಯ್ಲ್ ಕಳಿಸಿದೆವು. ತುಂಬಾ ಕರುಣಾಮಯಿಯಾಗಿದ್ದ ಅಬ್ಬಾಸ್ ಅವರು ನಮಗೆ ಕೂಡಲೇ ಹನ್ನೊಂದು ಲಕ್ಷ ರೂಪಾಯಿಗಳನ್ನು ಕಳಿಸಿದರು. ಇದರಿಂದ ಅಪ್ಪ ನಮ್ಮ ಶಾಲೆಯ ಪ್ರತಿಯೊಬ್ಬ ಶಿಕ್ಷಕ-ಶಿಕ್ಷಕಿಯರಿಗೂ ಮೂರು ತಿಂಗಳ ಸಂಬಳ ಕೊಡುವುದು ಸಾಧ್ಯವಾಯಿತು. ಇದರಿಂದ ಶಿಕ್ಷಕರಂತೂ ಭಾರೀ ಖುಷಿಯಾದರು. ಅವರಲ್ಲಿ ಹೆಚ್ಚಿನವರು ತಮ್ಮ ಜೀವನದಲ್ಲೇ ಇಷ್ಟೊಂದು ಭಾರೀ ಮೊತ್ತವನ್ನು ನೋಡಿರಲಿಲ್ಲ. ಹೀರಾ ಮೇಡಂ ಅವರಂತೂ ನಮ್ಮ ಅಪ್ಪನ ಬಳಿ ಬಂದು ಕೃತಜ್ಞತೆಯ ಕಣ್ಣೀರು ಸುರಿಸುತ್ತ, 'ನನ್ನ ಮದುವೆ ಈಗ ಯಾವ ಅಡಚಣೆಯೂ ಇಲ್ಲದೆ, ಮೊದಲು ಅಂದುಕೊಂಡಂತೆಯೇ ನಡೆಯಲಿದೆ' ಎಂದರು.
ಹೀಗೆಂದ ಮಾತ್ರಕ್ಕೆ ನಾವು ಸೇನೆಯ ಬಗ್ಗೆ ಮೃದು ಧೋರಣೆ ತಳೆದೆವು ಎಂದಲ್ಲ. ತಾಲಿಬಾನ್ ನಾಯಕರನ್ನು ಹಿಡಿಯಲಾಗದ ಸೇನೆಯ ವೈಫಲ್ಯದ ಬಗ್ಗೆ ನನಗೂ ಅಪ್ಪನಿಗೂ ತೀವ್ರವಾದ ಅಸಮಾಧಾನವಿತ್ತು. ಹೀಗಾಗಿ ನಾನೂ ಅಪ್ಪನೂ ಬಗ್ಗೆ ಸಾಕಷ್ಟು ಸಂದರ್ಶನಗಳನ್ನು ಕೊಡುತ್ತಲೇ ಇದ್ದೆವು. ಸಂದರ್ಶನಗಳ ಪೈಕಿ ಕೆಲವಕ್ಕೆ ಅಪ್ಪನ ಗೆಳೆಯರಾದ ಜಹೀದ್ ಖಾನ್ ಕೂಡ ಬರುತ್ತಿದ್ದರು. ಅವರು 'ಸ್ವಾತ್ ಖ್ವಾಮಿ ಜಿರ್ಗಾ' ಸದಸ್ಯರೂ ಆಗಿದ್ದರು. ಜೊತೆಗೆ, ಅವರು ಅಖಿಲ ಸ್ವಾತ್ ಹೋಟೆಲ್ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು. ಅವರಂತೂ ಸ್ವಾತ್ ಜನಜೀವನ ಆದಷ್ಟು ಬೇಗ ಸಹಜ ಸ್ಥಿತಿಗೆ ಬರಲಿ ಎಂದು ಹಂಬಲಿಸುತ್ತಿದ್ದರು. ಏಕೆಂದರೆ, ಹಾಗಾದರೆ ಸ್ವಾತ್ಗೆ ಮತ್ತೆ ಪ್ರವಾಸಿಗರು ಬರುತ್ತಿದ್ದರು. ಅವರು ಕೂಡ ನಮ್ಮ ಅಪ್ಪನಂತೆಯೇ ಮುಚ್ಚುಮರೆ ಇಲ್ಲದೆ ಮಾತನಾಡುತ್ತಿದ್ದರು. ಹೀಗಾಗಿ ಅವರಿಗೆ ಕೂಡ ಬೆದರಿಕೆಗಳು ಬಂದಿದ್ದವು. ೨೦೦೯ನೇ ಇಸವಿಯ ನವೆಂಬರ್ ತಿಂಗಳ ಒಂದು ರಾತ್ರಿ ಅವರತ್ತ ಗುಂಡು ಹಾರಿಸಲಾಯಿತು. ಆದರೆ, ಅವತ್ತು ಅವರು ಕೂದಲೆಳೆಯ ಅಂತರದಲ್ಲಿ ಬಚಾವಾದರು. ರಾತ್ರಿ ದಾಳಿ ನಡೆದಾಗ ಅವರು ಸೇನೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಿಲಿಟರಿ ಅಕಾರಿಗಳೊಂದಿಗೆ ಮಾತುಕತೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಅದೃಷ್ಟಕ್ಕೆ ಅವರ ಕುಟುಂಬದ ಸದಸ್ಯರಲ್ಲಿ ಅನೇಕರು ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜಹೀದ್ ಖಾನ್ ಮೇಲೆ ಉಗ್ರರು ದಾಳಿ ನಡೆಸಿದ ಕೂಡಲೇ ಇವರೆಲ್ಲ ಪ್ರತಿದಾಳಿ ನಡೆಸಿ, ಗುಂಡಿನ ಮಳೆಗರೆದರು. ಪರಿಣಾಮವಾಗಿ ಉಗ್ರಗಾಮಿಗಳೆಲ್ಲ ಕಾಲ್ಕಿತ್ತರು.
ಇದಾದಮೇಲೆ ಡಿಸೆಂಬರ್ ಒಂದನೇ ತಾರೀಖು ಬಂತು. ಅವತ್ತು ಉಗ್ರಗಾಮಿಗಳು 'ಅವಾಮಿ ನ್ಯಾಷನಲ್ ಪಾರ್ಟಿಯ ಸ್ಥಳೀಯ ಮುಖಂಡ ಮತ್ತು ಖೈಬರ್ ಪಖ್ತೂಂಖ್ವಾ ಶಾಸನಸಭೆಯ ಸದಸ್ಯರಾದ ಡಾ|ಶಂಷೇರ್ ಅಲಿ ಖಾನ್ ಅವರ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ಎರಗಿದ. ಕ್ಷಣದಲ್ಲಿ ಖಾನ್ ಅವರು ತಮ್ಮ ಮನೆಯ 'ಹುಜ್ರಾ'ದಲ್ಲಿ ಸ್ನೇಹಿತರಿಗೂ ಶಾಸನಸಭೆಯ ಸದಸ್ಯರಿಗೂ ಈದ್ ಮಿಲಾದ್ ಶುಭಾಶಯಗಳನ್ನು ಹೇಳುತ್ತಿದ್ದರು. ಫಜ್ಲುಲ್ಲಾನ ಕೇಂದ್ರ ಕಚೇರಿ ಇದ್ದ ಇಮಾಂ ಡೇರಿಗೂ ಜಾಗಕ್ಕೂ ಕೇವಲ ಒಂದು ಮೈಲಿಯಷ್ಟೆ. ಡಾ|ಶಂಷೇರ್ ಅವರು ತಾಲಿಬಾನ್ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದ ವ್ಯಕ್ತಿಯಾಗಿದ್ದರು. ಬಾಂಬ್ ಸೋಟ ಎಷ್ಟೊಂದು ತೀವ್ರವಾಗಿತ್ತೆಂದರೆ, ಶಂಷೇರ್ ಅವರು ಸ್ಥಳದಲ್ಲೇ ಸತ್ತು ಹೋಗಿ, ಒಂಬತ್ತು ಮಂದಿ ಗಾಯಗೊಂಡರು. ಜನರು, ' ದಾಳಿ ನಡೆಸಿದ ಆಸಾಮಿ ಹದಿನೆಂಟು ವರ್ಷದ ಒಬ್ಬ ಹುಡುಗ' ಎಂದು ಹೇಳಿದರು. ಪೊಲೀಸರಿಗೆ ಹುಡುಗನ ಕಾಲುಗಳೂ ಇತರ ಅಂಗಾಂಗಗಳೂ ಸಿಕ್ಕಿದವು.
ಇದಾಗಿ ಒಂದೆರಡು ವಾರಗಳಾಗಿತ್ತು. ಆಗ, ಸ್ವಾತ್ ಜಿಲ್ಲಾ ಮಟ್ಟದ ಮಕ್ಕಳ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ನಮ್ಮ ಶಾಲೆಗೆ ಆಹ್ವಾನ ಬಂತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ 'ಯೂನಿಸೆಫ್' ಮತ್ತು ಅನಾಥ ಮಕ್ಕಳಿಗೆಂದೇ ಇದ್ದ 'ಖಪಾಲ್ ಕೋರ್' (ಹೀಗೆಂದರೆ 'ನನ್ನ ಮನೆ' ಎಂದರ್ಥ) ಪ್ರತಿಷ್ಠಾನಗಳೆರಡೂ ಸೇರಿ ಇದನ್ನು ಸ್ಥಾಪಿಸಿದ್ದವು. ಇದಕ್ಕೆ ಇಡೀ ಸ್ವಾತ್ನಿಂದ ಅರವತ್ತು ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿ ಆರಿಸಲಾಗಿತ್ತು. ಪೈಕಿ ಹೆಚ್ಚಿನವರೆಲ್ಲ ಗಂಡು ಮಕ್ಕಳೇ ಆಗಿದ್ದರು. ಸಮಾವೇಶಕ್ಕೆ ನಮ್ಮ ಶಾಲೆಯಿಂದ ಹನ್ನೊಂದು ಹೆಣ್ಣು ಮಕ್ಕಳೂ ಹೋಗಿದ್ದೆವು. ಇದರ ಮೊದಲ ಸಭೆ ಒಂದು ದೊಡ್ಡ ಸಭಾಂಗಣದಲ್ಲಿ ನಡೆಯಿತು. ಅದರಲ್ಲಿ ಅನೇಕ ರಾಜಕಾರಣಿಗಳೂ ಕಾರ್ಯಕರ್ತರೂ ಇದ್ದರು. ಅಲ್ಲಿ ಸ್ಪೀಕರ್ ಹುದ್ದೆಗಾಗಿ ಚುನಾವಣೆ ನಡೆದು, ಕೊನೆಯಲ್ಲಿ ನಾನೇ ಸ್ಥಾನಕ್ಕೆ ಆಯ್ಕೆಯಾದೆ! ಆಮೇಲೆ ವೇದಿಕೆಯ ಮೇಲೆ ನಾನು ನಿಂತುಕೊಳ್ಳುವುದೂ ಜನರು ನನ್ನನ್ನು 'ಮೇಡಂ ಸ್ಪೀಕರ್' ಎಂದು ಸಂಬೋಸುವುದೂ ತುಂಬಾ ವಿಚಿತ್ರವಾಗಿ ಕಾಣುತ್ತಿತ್ತು. ಆದರೆ, ನಮ್ಮ ದನಿ ಕೇಳುವಂತಾಗಿದ್ದು ನಮಗೆ ಹಿತಕರವಾಗಿತ್ತು. ಅಲ್ಲಿ ಒಂದು ವರ್ಷದ ಮಟ್ಟಿಗೆ ಪದಾಕಾರಿಗಳನ್ನು ಆರಿಸಲಾಯಿತು. ಆಮೇಲೆ ನಾವೆಲ್ಲರೂ ಪ್ರತೀ ತಿಂಗಳೂ ಸಭೆ ಸೇರುತ್ತಿದ್ದೆವು. ಅದರಲ್ಲಿ ನಾವು ಬಾಲಕಾರ್ಮಿಕ ಸಮಸ್ಯೆಯನ್ನು ಕೊನೆಗಾಣಿಸಬೇಕು, ಅಂಗವೈಕಲ್ಯಕ್ಕೆ ಒಳಗಾಗಿರುವ ಮಕ್ಕಳನ್ನೂ ಬೀದಿಬದಿಯ ಮಕ್ಕಳನ್ನೂ ಶಾಲೆಗೆ ಕಳಿಸಲು ಸಹಾಯ ಮಾಡಬೇಕು ಮತ್ತು ತಾಲಿಬಾನ್ಗಳಿಂದ ಧ್ವಂಸ ಮಾಡಿರುವ ಶಾಲೆಗಳನ್ನೆಲ್ಲ ಪುನರ್ನಿರ್ಮಾಣ ಮಾಡಬೇಕೆಂಬ ಒಟ್ಟು ಒಂಬತ್ತು ನಿರ್ಣಯಗಳನ್ನು ಅಂಗೀಕರಿಸಿದೆವು. ನಿರ್ಣಯಗಳನ್ನು ಅಂಗೀಕರಿಸಿದ ತಕ್ಷಣ ಅವನ್ನೆಲ್ಲ ಸಂಬಂಸಿದ ಅಕಾರಿಗಳಿಗೆ ಕಳಿಸಿಕೊಡಲಾಗುತ್ತಿತ್ತು. ಬಳಿಕ ಕೆಲವು ಅಕಾರಿಗಳಾದರೂ ಇವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು.
ಮೋನಿಬಾ, ಆಯೇಷಾ ಮತ್ತು ನಾನು ಆಗ 'ಇನ್ಸ್ಟಿಟ್ಯೂಟ್ ಫಾರ್ ವಾರ್ ಅಂಡ್ ಪೀಸ್ ರಿಪೋರ್ಟಿಂಗ್' ಎಂಬ ಬ್ರಿಟಿಷ್ ಸಂಸ್ಥೆ ನಡೆಸುತ್ತಿದ್ದ 'ಓಪನ್ ಮೈಂಡ್ಸ್ ಆಫ್ ಪಾಕಿಸ್ತಾನ್' ಎನ್ನುವ ಯೋಜನೆಯಡಿ ಪತ್ರಿಕೋದ್ಯಮವನ್ನು ಕಲಿತೆವು. ಒಂದು ವಿಷಯವನ್ನು ಕುರಿತು ಕ್ರಮಬದ್ಧವಾಗಿ ಹೇಗೆ ವರದಿ ಮಾಡಬೇಕೆಂಬುದನ್ನು ತುಂಬಾ ಉಲ್ಲಸಿತರಾಗಿ ತಿಳಿದುಕೊಂಡೆವು. ನನ್ನ ಸ್ವಂತ ಮಾತುಗಳು ಹೇಗೆ ಬದಲಾವಣೆ ತರಬಲ್ಲವು ಎಂಬುದನ್ನು ನಾನೇ ಸ್ವತಃ ನೋಡಿದ ಮೇಲೆ ಹಾಗೂ ಅಮೆರಿಕದ ನಿಯತಕಾಲಿಕೆಯೊಂದರಲ್ಲಿನ ಜೀವನ ಕುರಿತಿದ್ದ 'ಅಗ್ಲಿ ಬೆಟ್ಟಿ' ಡಿ.ವಿ.ಡಿ.ಗಳನ್ನು ನೋಡಿದ ಮೇಲೆ ನಾನು ಪತ್ರಿಕೋದ್ಯಮದಲ್ಲಿ ಆಸಕ್ತಿ ತಾಳಿದೆ. ಆದರೆ ನಾವಿಲ್ಲಿ ನಮ್ಮ ಬಟ್ಟೆಬರೆ ಮತ್ತು ಉಡುಪುಗಳ ಬಗ್ಗೆ ಬರೆಯುವುದಕ್ಕಿಂತ ನಮ್ಮನ್ನು ನಿಜವಾಗಿ ಕಾಡುತ್ತಿದ್ದ ಭಯೋತ್ಪಾದನೆ ಮತ್ತು ತಾಲಿಬಾನ್ಗಳಂಥವುಗಳ ಬಗ್ಗೆ ಬರೆದಾಗ ಇದು ಗೊತ್ತಾಗುತ್ತಿತ್ತು.
ತುಂಬಾ ಬೇಗನೇ ಇನ್ನೊಂದು ವರ್ಷದ ಪರೀಕ್ಷೆಗಳು ಬಂದವು. ವರ್ಷ ನಾನು ಮಲ್ಕಾ--ನೂರ್ಳನ್ನು ಹಿಂದಿಕ್ಕಿ, ಪ್ರಥಮ ಸ್ಥಾನ ಸಂಪಾದಿಸಿಕೊಂಡೆ. ಆಗ ನಮ್ಮ ಮುಖ್ಯೋಪಾಧ್ಯಾಯಿನಿಯವರು ಮಲ್ಕಾಳನ್ನು 'ಬರೀ ಪುಸ್ತಕ ಓದಿಕೊಂಡಿದ್ದರೆ ಸಾಲದು. ನೀನು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದನ್ನು ಮುಂದುವರಿಸು. ನೀನು ಮಲಾಲಾ ತರಹ ಇರ್ಬೇಕು, ಬೇರೆ ಕೆಲಸಗಳನ್ನೆಲ್ಲ ಮಾಡ್ಬೇಕು. ಅದು ಕೂಡ ವಿದ್ಯಾಭ್ಯಾಸದಷ್ಟೇ ಮುಖ್ಯ. ಕೆಲಸವೇ ಎಲ್ಲವೂ ಅಲ್ಲ' ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಅವಳು ಮಾತ್ರ ಇದ್ಯಾವುದನ್ನೂ ಮಾಡುವುದಕ್ಕೆ ತಯಾರಿರಲಿಲ್ಲ. ಇದಕ್ಕಾಗಿ ನಾನೇನೂ ಅವಳನ್ನು ದೂಷಿಸಲಿಲ್ಲ. ಏಕೆಂದರೆ, ಚೆನ್ನಾಗಿ ಅಂಕಗಳನ್ನು ಗಳಿಸುವುದರ ಮೂಲಕ ತನ್ನ ತಂದೆ-ತಾಯಿಗಳನ್ನು -ಅದರಲ್ಲೂ ಅವಳ ಅಮ್ಮನನ್ನು- ಖುಷಿಪಡಿಸಬೇಕಾದ ಅನಿವಾರ್ಯತೆ ಅವಳಿಗಿತ್ತು.
ಈಗಿನ ಸ್ವಾತ್ ಹಿಂದಿನ ಸ್ವಾತ್ನಂತಿರಲಿಲ್ಲ. ಹಾಗೆ ನೋಡಿದರೆ, ಸ್ವಾತ್ ಬರೀ ಗತವೈಭವವಾಗಿತ್ತಷ್ಟೆ. ಆದರೂ ಅದು ಮೆಲ್ಲಗೆ ಸಹಜ ಸ್ಥಿತಿಗೆ ಮರಳುತ್ತಿತ್ತು. ಸ್ವಾತ್ ಕಣಿವೆಯನ್ನು ತೊರೆದು ಹೋಗಿದ್ದ ಬನರ್ ಬಝಾರ್ ನರ್ತಕಿಯರಲ್ಲೂ ಕೆಲವರು ವಾಪಸ್ ಬಂದರು. ಅವರೆಲ್ಲ ಈಗ ಸಾರ್ವಜನಿಕವಾಗಿ ನೃತ್ಯ ಕಾರ್ಯಕ್ರಮ ಕೊಡುತ್ತಿರಲಿಲ್ಲ. ಬದಲಿಗೆ ಡಿ.ವಿ.ಡಿ.ಗಳನ್ನು ಮಾಡಿಕೊಂಡು, ಅದರಲ್ಲೇ ಜೀವನ ಸಾಗಿಸುತ್ತಿದ್ದರು. ತಾಲಿಬಾನ್ಗಳ ಆಳ್ವಿಕೆಯಲ್ಲಿ ಮಾಯವಾಗಿದ್ದ ಹಬ್ಬಗಳನ್ನೆಲ್ಲ ನಾವೀಗ ನೃತ್ಯ ಮತ್ತು ಸಂಗೀತದೊಂದಿಗೆ ಸಂಭ್ರಮಿಸುತ್ತಿದ್ದೆವು. ದಿನಗಳಲ್ಲಿ ನಮ್ಮ ಅಪ್ಪ ಮಾರ್ಗಜಾರ್ನಲ್ಲಿ ಇಂಥದೊಂದು ಹಬ್ಬವನ್ನು ಏರ್ಪಡಿಸಿ, ನಾವು ನಿರಾಶ್ರಿತರಾಗಿದ್ದಾಗ ನಮಗೆಲ್ಲ ಆಶ್ರಯ ನೀಡಿದ್ದವರಿಗೆಲ್ಲ ಧನ್ಯವಾದ ಸಮರ್ಪಿಸಲೆಂದು ಅವರನ್ನೆಲ್ಲ ಆಹ್ವಾನಿಸಿದರು. ಅವತ್ತು ಅಹೋರಾತ್ರಿ ಸಂಗೀತದ ನಿನಾದವಿತ್ತು.
ನನ್ನ ಹುಟ್ಟುಹಬ್ಬದ ಆಚೀಚೆ ಏನಾದರೊಂದು ಮಹತ್ತರ ಘಟನೆ ನಡೆಯುವಂತೆ ಕಾಣುತ್ತಿತ್ತು. ೨೦೧೦ರ ಜುಲೈನಲ್ಲಿ ನನಗೆ ಹದಿಮೂರು ವರ್ಷ ತುಂಬಿದಾಗ ಪ್ರಚಂಡ ಮಳೆ ಸುರಿಯಿತು. ಸಾಮಾನ್ಯವಾಗಿ ಸ್ವಾತ್ನಲ್ಲಿ ಮುಂಗಾರೇ ಇರುವುದಿಲ್ಲ. ಹೀಗಾಗಿ, ಅವತ್ತು ಮಳೆ ಬಂದಾಗ 'ಪರವಾಗಿಲ್ಲ, ಸಲ ಬೆಳೆ ಚೆನ್ನಾಗಿ ಬರಲಿದೆ' ಎಂದುಕೊಂಡು ಮೊದಲಿಗೆ ನಮಗೆಲ್ಲ ಖುಷಿಯೇ ಆಯಿತು. ಆದರೆ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಎಷ್ಟೊಂದು ಜೋರಾಗಿತ್ತೆಂದರೆ, ಎದುರಿಗಿದ್ದ ಮನುಷ್ಯರು ಕೂಡ ಕಾಣುತ್ತಿರಲಿಲ್ಲ. ಪರಿಸರವಾದಿಗಳು ಮೊದಲಿನಿಂದಲೂ, ತಾಲಿಬಾನ್ಗಳೂ ಮರಗಳ್ಳರೂ ಸೇರಿಕೊಂಡು ನಮ್ಮ ಪರ್ವತಗಳನ್ನೆಲ್ಲ ತರಿದು ಹಾಕಿದ್ದಾರೆ ಎಂದು ಎಚ್ಚರಿಸುತ್ತಲೇ ಇದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಕೆಸರಿನಿಂದ ಕೂಡಿದ್ದ ಪ್ರವಾಹ ಸೃಷ್ಟಿಯಾಗಿ ಕಣಿವೆಯನ್ನೆಲ್ಲ ಆಪೋಶನ ತೆಗೆದುಕೊಳ್ಳಲು ಶುರುವಾಯಿತು.
ಪ್ರವಾಹ ಸೃಷ್ಟಿಯಾದಾಗ ನಾವೆಲ್ಲ ಸ್ಕೂಲಿನಲ್ಲಿದ್ದೆವು. ಹೀಗಾಗಿ ನಮ್ಮನ್ನೆಲ್ಲ ಮನೆಗೆ ಕಳಿಸಿದರು. ಆದರೆ ಪ್ರವಾಹದ ಅಬ್ಬರ ಎಷ್ಟೊಂದಿತ್ತೆಂದರೆ ರಸ್ತೆಯಲ್ಲಿದ್ದ ಸೇತುವೆ ಮುಳುಗಿ ಹೋಗಿತ್ತು. ಹೀಗಾಗಿ ನಾವು ಇನ್ನೊಂದು ದಾರಿಯನ್ನು ಹುಡುಕಬೇಕಾಯಿತು. ಮುಂದಿನ ಸೇತುವೆಯ ಬಳಿ ಹೋದರೆ ಅದೂ ಜಲಾವೃತವಾಗಿತ್ತು. ಆದರೆ, ಅಲ್ಲಿ ನೀರು ಅಷ್ಟೊಂದು ಆಳವಾಗಿರಲಿಲ್ಲ. ಆದ್ದರಿಂದ ನಾವು ಅದನ್ನು ದಾಟಿ ಹೋದೆವು. ಅದಂತೂ ಗಬ್ಬುನಾತ ಹೊಡೆಯುತ್ತಿತ್ತು. ಒಟ್ಟಿನಲ್ಲಿ ನಾವು ಮನೆ ಸೇರುವುದರೊಳಗೆ ತೊಯ್ದು ತೊಪ್ಪೆಯಾಗಿದ್ದೆವಲ್ಲದೆ, ಮೈಯಿಂದ ದುರ್ನಾತ ಹೊರಬರುತ್ತಿತ್ತು.
ಮಾರನೇ ದಿನ, ನಮ್ಮ ಶಾಲೆಯೆಲ್ಲ ನೆರೆಯಲ್ಲಿ ಮುಳುಗಿಹೋಗಿದೆ ಎಂಬ ಸುದ್ದಿ ಕೇಳಿದೆವು. ನೀರನ್ನೆಲ್ಲ ಹೊರಹಾಕಲು ಹಲವು ದಿನಗಳೇ ಹಿಡಿದವು. ಅದೆಲ್ಲ ಆದಮೇಲೆ ನಾವು ಸ್ಕೂಲಿಗೆ ಹಿಂದಿರುಗಿದಾಗ ನೋಡಿದರೆ ಗೋಡೆಗಳ ಮೇಲೆಲ್ಲ ಎದೆಯೆತ್ತರಕ್ಕೆ ನೀರು ನಿಂತಿದ್ದ ಕಲೆಗಳು ಕಾಣುತ್ತಿದ್ದವು. ಎಲ್ಲೆಲ್ಲಿ ನೋಡಿದರೂ ಬರೀ ಮಣ್ಣೇ ಕಾಣುತ್ತಿತ್ತು. ನಮ್ಮ ಡೆಸ್ಕುಗಳು ಮತ್ತು ಕುರ್ಚಿಗಳ ಮೇಲೆಲ್ಲ ಮಣ್ಣು ಮೆತ್ತಿಕೊಂಡಿತ್ತು. ಕ್ಲಾಸ್ರೂಮುಗಳಲ್ಲೆಲ್ಲ ಕೆಟ್ಟ ವಾಸನೆ ತುಂಬಿಕೊಂಡಿತ್ತು. ಅದನ್ನೆಲ್ಲ ದುರಸ್ತಿ ಮಾಡಿಸಲು ಅಪ್ಪನಿಗೆ ತೊಂಬತ್ತು ಸಾವಿರ ರೂಪಾಯಿ ಕೈಬಿಟ್ಟಿತು. ಇದು, ತೊಂಬತ್ತು ವಿದ್ಯಾರ್ಥಿಗಳಿಂದ ಬರುತ್ತಿದ್ದ ಶುಲ್ಕಕ್ಕೆ ಸಮನಾಗಿತ್ತು.
ಪಾಕಿಸ್ತಾನದಾದ್ಯಂತ ಇದೇ ಕತೆಯಾಗಿತ್ತು. ಹಿಮಾಲಯದ ತಪ್ಪಲಿನಿಂದ ಹೊರಟು ನಮ್ಮ ದೇಶದ ಪಂಜಾಬ್, ಕರಾಚಿಗಳಲ್ಲೆಲ್ಲ ಹರಿದು ಕೊನೆಗೆ ಅರಬ್ಬೀ ಸಮುದ್ರವನ್ನು ಸೇರುವ, ನಮ್ಮ ಪಾಲಿಗೆ ಪವಿತ್ರವಾದ ಸಿಂಧೂ (ಇಂಡಸ್) ನದಿಯೆಂದರೆ ನಮಗೆಲ್ಲರಿಗೂ ಹೆಮ್ಮೆ. ಅಂಥ ನದಿ ಈಗ ಭೋರ್ಗರೆಯುತ್ತ ರುದ್ರಸ್ವರೂಪ ತಾಳಿತ್ತು. ಅದರ ಪ್ರವಾಹದ ಅಬ್ಬರ ಎಷ್ಟಿತ್ತೆಂದರೆ ರಸ್ತೆಗಳು, ಬೆಳೆದು ನಿಂತಿದ್ದ ಪೈರುಗಳು ಮತ್ತು ಇಡೀ ಹಳ್ಳಿಗಳೇ ಕೊಚ್ಚಿಕೊಂಡು ಹೋಗಿದ್ದವು. ಎರಡು ಸಾವಿರ ಜನ ಕೊಚ್ಚಿಕೊಂಡು ಹೋಗಿದ್ದರಲ್ಲದೆ, ಹೆಚ್ಚೂಕಮ್ಮಿ ಒಂದೂವರೆ ಕೋಟಿಯಷ್ಟು ಜನ ಸಂತ್ರಸ್ತರಾಗಿದ್ದರು. ಅವರಲ್ಲಿ ಹೆಚ್ಚಿನವರು ತಮ್ಮ ಮನೆಮಠವನ್ನೆಲ್ಲ ಕಳೆದುಕೊಂಡಿದ್ದರು; ಏಳು ಸಾವಿರ ಶಾಲೆಗಳು ಹೇಳಹೆಸರಿಲ್ಲದಂತಾಗಿದ್ದವು. ಇಂಥ ಪ್ರವಾಹವನ್ನು ಯಾರೊಬ್ಬರೂ ಕಂಡು ಕೇಳಿರಲಿಲ್ಲ. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರು ಇದನ್ನು 'ನಿಧಾನಗತಿಯ ಸುನಾಮಿ' ಎಂದು ಕರೆದರು. ಏಷ್ಯಾ ಖಂಡವನ್ನು ಅಪ್ಪಳಿಸಿದ ಸುನಾಮಿ, ೨೦೦೫ನೇ ಇಸವಿಯಲ್ಲಿ ಸಂಭವಿಸಿದ ಭೂಕಂಪ, 'ಕತ್ರಿನಾ' ಚಂಡಮಾರುತ ಮತ್ತು ಹೈಟಿಯಲ್ಲಿ ಉಂಟಾದ ಭೂಕಂಪಗಳೆಲ್ಲವೂ ಉಂಟುಮಾಡಿದ್ದಕ್ಕಿಂತ ಹೆಚ್ಚಿನ ಹಾನಿ ಒಂದೇಒಂದು ಪ್ರವಾಹದಿಂದಾಗಿತ್ತು.
ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಾತ್ ಕೂಡ ಒಂದಾಗಿತ್ತು. ನಮ್ಮಲ್ಲಿದ್ದ ನಲವತ್ತೆರಡು ಸೇತುವೆಗಳ ಪೈಕಿ ಮೂವತ್ತನಾಲ್ಕು ಕೊಚ್ಚಿಕೊಂಡು ಹೋಗಿದ್ದವು. ಇದರಿಂದಾಗಿ ಕಣಿವೆಯ ಹೆಚ್ಚಿನ ಭಾಗಕ್ಕೆ ಸಂಪರ್ಕವೇ ಕಡಿದುಹೋಗಿತ್ತು. ವಿದ್ಯುತ್ ಕಂಬಗಳು ತುಂಡುತುಂಡಾಗಿ ಹೋಗಿದ್ದರಿಂದ ವಿದ್ಯುತ್ ಕೂಡ ಇರಲಿಲ್ಲ. ನಾವಿದ್ದ ಬೀದಿ ಒಂದು ಬೆಟ್ಟದ ಮೇಲಿದ್ದುದರಿಂದ ನಮ್ಮ ಪರಿಸ್ಥಿತಿ ಸ್ವಲ್ಪ ಪರವಾಗಿರಲಿಲ್ಲ. ಆದರೆ, ಕೆಳಗೆ ಸಿಂಧೂ ನದಿಯ ಭೋರ್ಗರೆತವನ್ನು ಕೇಳಿಯೇ ನಾವು ನಡುಗಿ ಹೋಗಿದ್ದೆವು. ಅದಂತೂ ಆಗ ಎದುರಿಗೆ ಬರುವ ಎಲ್ಲವನ್ನೂ ನುಂಗಿ ನೊಣೆಯುವ ಡ್ರಾ ಗನ್ನಂತೆ ಕಾಣುತ್ತಿತ್ತು. ಪ್ರವಾಸಿಗಳು ಉಳಿದುಕೊಳ್ಳುತ್ತಿದ್ದ, ನದಿಯ ಅಂಚಿನ ಹೋಟೆಲುಗಳೂ ರೆಸ್ಟೋರೆಂಟುಗಳೂ ಜಲಸಮಾಯಾಗಿದ್ದವು. ಪ್ರವಾಸಿಗಳು ಉಳಿದುಕೊಳ್ಳುತ್ತಿದ್ದ ಜಾಗಗಳಂತೂ ಅಪಾರ ಹಾನಿಗೀಡಾಗಿದ್ದವು. ಬೆಟ್ಟದ ಮೇಲಿದ್ದ ರೆಸಾರ್ಟುಗಳಾದ ಮಾಲಂ ಜಬ್ಬಾ, ಮಾದ್ಯಾನ್ ಮತ್ತು ಬಹ್ರೇನ್ಗಳೆಲ್ಲ ಮಣ್ಣುಗೂಡಿದ್ದವು. ಅವುಗಳಿಗೆ ಸೇರಿದ ಹೋಟೆಲು ಮತ್ತು ಬಝಾರುಗಳು ಹೇಳಹೆಸರಿಲ್ಲದಂತಾಗಿದ್ದವು.
ನಮ್ಮ ಊರಾದ ಶಾಂಗ್ಲಾದಲ್ಲಿ ಕೂಡ ನಾವ್ಯಾರೂ ಊಹಿಸಲೂ ಸಾಧ್ಯವಿಲ್ಲದಷ್ಟು ಹಾನಿ ಸಂಭವಿಸಿರುವ ಸುದ್ದಿ ನಮ್ಮ ಕಿವಿಗೆ ಬಿತ್ತು. ರಾಜಧಾನಿಯಾದ ಅಲ್ಪುರಿಯಿಂದ ನಮ್ಮೂರಿಗೆ ಇದ್ದ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಇಷ್ಟೇ ಅಲ್ಲ, ಊರಿಗೆ ಊರೇ ನೀರಿನಲ್ಲಿ ಮುಳುಗಿ ಹೋಗಿದ್ದವು. ಬೆಟ್ಟ ಪ್ರದೇಶಗಳಾದ ಕರ್ಶಾತ್, ಶಾಪುರ್ ಮತ್ತು ಬರ್ಕಾನಾಗಳಲ್ಲಿದ್ದ ಮನೆಗಳೆಲ್ಲ ಮಣ್ಣಿನ ಕುಪ್ಪೆಯಾಗಿ ಹೋಗಿದ್ದವು. ನಮ್ಮ ಸೋದರಮಾವ ಫೈಜ್ ಮಹಮದ್ ಇದ್ದ ಮನೆಯೇನೋ ಉಳಿದುಕೊಂಡಿತ್ತು. ಆದರೆ, ಮನೆಯ ಮುಂದಿನ ರಸ್ತೆ ಮಾತ್ರ ಕಣ್ಣಿಗೆ ಕಾಣದಂತಾಗಿತ್ತು.
ಜನರಂತೂ ತಮ್ಮ ಸಾಮಾನು ಸರಂಜಾಮುಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅವರೆಲ್ಲ ತಮ್ಮ ಸಾಕುಪ್ರಾಣಿಗಳನ್ನು ಎತ್ತರದ ಜಾಗಗಳಿಗೆ ಸಾಗಿಸುತ್ತಿದ್ದರು. ಆದರೆ, ಮಳೆ ಅವರು ಬೆಳೆದಿದ್ದ ಬೆಳೆಯನ್ನೆಲ್ಲ ಸರ್ವನಾಶ ಮಾಡಿತ್ತು; ಅವರ ತೋಪುಗಳನ್ನೆಲ್ಲ ಧ್ವಂಸ ಮಾಡಿ, ಎಮ್ಮೆಗಳನ್ನೆಲ್ಲ ಆಪೋಶನ ತೆಗೆದುಕೊಂಡಿತ್ತು. ಹಳ್ಳಿಯ ಜನರಂತೂ ಅಸಹಾಯಕರಾಗಿ ಹೋಗಿದ್ದರು. ಅವರಿಗೆ ವಿದ್ಯುತ್ತನ್ನು ಕೊಡುತ್ತಿದ್ದ ತಾತ್ಕಾಲಿಕ ಜಲವಿದ್ಯುತ್ ಯೋಜನೆಗಳೆಲ್ಲ ನಾಶವಾಗಿ ಹೋಗಿದ್ದವು. ಹೀಗಾಗಿ, ಇಡೀ ಹಳ್ಳಿಗಳಿಗೆ ವಿದ್ಯುತ್ತಿರಲಿಲ್ಲ. ಸಿಂಧೂ ನದಿಯ ಒಡಲೆಲ್ಲ ಕಸಕಡ್ಡಿಗಳಿಂದ ತುಂಬಿ, ಅದರ ನೀರೆಲ್ಲ ಕಂದು ಬಣ್ಣಕ್ಕೆ ತಿರುಗಿದ್ದರಿಂದ ಅವರಿಗೆಲ್ಲ ಶುದ್ಧ ಕುಡಿಯುವ ನೀರೂ ಇರಲಿಲ್ಲ. ನೀರಿನ ಸೆಳವು ಎಷ್ಟೊಂದು ತೀವ್ರವಾಗಿತ್ತೆಂದರೆ ಕಾಂಕ್ರೀಟ್ ಕಟ್ಟಡಗಳೂ ನೆಲ ಕಚ್ಚಿದ್ದವು. ಮುಖ್ಯ ರಸ್ತೆಯುದ್ದಕ್ಕೂ ಇದ್ದ ಶಾಲೆಗಳು, ಆಸ್ಪತ್ರೆಗಳು ಮತ್ತು ವಿದ್ಯುತ್ ಕೇಂದ್ರಗಳೆಲ್ಲವೂ ಇದೇ ಗತಿ ಕಂಡಿದ್ದವು.
ಇದೆಲ್ಲ ಹೇಗಾಯಿತೆಂದು ಯಾರಿಗೂ ಅರ್ಥವಾಗುವಂತಿರಲಿಲ್ಲ. ಜನರು ಸ್ವಾತ್ ನದಿಯ ದಂಡೆಯಲ್ಲಿ ಮೂರು ಸಾವಿರ ವರ್ಷಗಳಿಂದಲೂ ಬದುಕುತ್ತಿದ್ದು, ಅದನ್ನು ತಮ್ಮ ಜೀವನಾಡಿ ಎಂದೇ ಕಾಣುತ್ತಿದ್ದಾರೆ. ಸ್ವಾತ್ ನದಿಯನ್ನು ಇಲ್ಲಿನ ಜನರು ಯಾವತ್ತೂ ತಮ್ಮ ಪಾಲಿಗೆ ಗಂಡಾಂತರಕಾರಿ ಎಂದುಕೊಂಡಿಲ್ಲ. ಜೊತೆಗೆ, ನಮ್ಮ ಕಣಿವೆಯಂತೂ ಹೊರಜಗತ್ತಿನ ಕಣ್ಣಿಗೆ ಸ್ವರ್ಗವೇ ಸೈ! ಆದರೆ, 'ಈಗ ನಮ್ಮದು ಶೋಕತಪ್ತ ಕಣಿವೆಯಾಗಿದೆ' ಎಂದು ನನ್ನ ಸೋದರಸಂಬಂ ಸುಲ್ತಾನ್ ರೋಮ್ ಹೇಳುತ್ತಿದ್ದ. ಅವನ ಮಾತು ನಿಜ. ಏಕೆಂದರೆ ಮೊದಲು ನಮ್ಮ ಮೇಲೆ ಭೂಕಂಪ ಅಪ್ಪಳಿಸಿತು, ಆಮೇಲೆ ತಾಲಿಬಾನ್ಗಳು ಎರಗಿದರು, ಬಳಿಕ ಸೇನೆ ಕಾರ್ಯಾಚರಣೆ ನಡೆಸಲು ನುಗ್ಗಿತು ಮತ್ತು ಈಗ ಮೂರಾಬಟ್ಟೆಯಾಗಿದ್ದ ಬದುಕನ್ನೆಲ್ಲ ಮತ್ತೆ ಕಟ್ಟಿಕೊಳ್ಳುತ್ತಿರುವಾಗ ವಿನಾಶಕಾರಿಯಾದ ಪ್ರವಾಹ ಬಂದಿತ್ತು. ತಾಲಿಬಾನ್ಗಳು ಈಗ ಮತ್ತೆ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು, ಮತ್ತೆಲ್ಲಾದರೂ ಒಗ್ಗಟ್ಟಾಗಿ ಇನ್ನೊಮ್ಮೆ ನಮ್ಮ ಕಣಿವೆಯನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಬಹುದು ಎಂದು ಜನರು ಚಿಂತಾಕ್ರಾಂತರಾಗಿದ್ದರು.
ನಮ್ಮ ಅಪ್ಪ ಆಗ ಸ್ನೇಹಿತರಿಂದ ಮತ್ತು ಸ್ವಾತ್ ಖಾಸಗಿ ಶಾಲೆಗಳ ಒಕ್ಕೂಟದಿಂದ ನಿ ಸಂಗ್ರಹಿಸಿ, ಶಾಂಗ್ಲಾಗೆ ಆಹಾರ ಮತ್ತಿತರ ಸಾಮಗ್ರಿಗಳನ್ನೆಲ್ಲ ರವಾನಿಸಿದರು. ನಮ್ಮ ಗೆಳತಿ ಶಿಝಾ ಮತ್ತು ಇಸ್ಲಾಮಾಬಾದಿನಲ್ಲಿ ನಾವು ಭೇಟಿಯಾಗಿದ್ದ ಇತರ ಕೆಲವು ಕಾರ್ಯಕರ್ತರೆಲ್ಲ ಮಿಂಗೋರಾಗೆ ಬಂದು ಸಾಕಷ್ಟು ಹಣವನ್ನು ವಿತರಿಸಿದರು. ಆದರೆ, ಭೂಕಂಪವಾದಾಗ ಬಂದು ಅಪಾರ ಸಹಾಯ ಮಾಡಿದಂತೆಯೇ ಈಗಲೂ ಇಸ್ಲಾಮಿಕ್ ಸಂಘಸಂಸ್ಥೆಗಳ ಸದಸ್ಯರು ಎಲ್ಲರಿಗಿಂತಲೂ ಮೊದಲೇ ಬಂದಿಳಿದರು. ಅವರೆಲ್ಲ ಕುಗ್ರಾಮಗಳಿಗೂ ತುಂಬಾ ಒಂಟಿಯಾಗಿದ್ದ ಜಾಗಗಳಿಗೂ ಪರಿಹಾರ ಸಾಮಗ್ರಿಗಳ ಜೊತೆ ಎಲ್ಲರಿಗಿಂತ ಮೊದಲೇ ಹೋದರು. ಆಗ ತುಂಬಾ ಜನರು, 'ನಾವೆಲ್ಲ ಇತ್ತೀಚೆಗೆ ಹಬ್ಬದಲ್ಲಿ ಹಾಡನ್ನೂ ನೃತ್ಯವನ್ನೂ ಏರ್ಪಡಿಸಿದ್ದಕ್ಕೆ ದೇವರು ಕೊಟ್ಟ ಶಿಕ್ಷೆ ಪ್ರವಾಹ' ಎಂದರು. ಆದರೆ, ಸಲ ಒಂದೇಒಂದು ಸಮಾಧಾನವಿತ್ತು. ಅದೇನೆಂದರೆ, ಇಂಥದನ್ನೆಲ್ಲ ಪ್ರಸಾರ ಮಾಡಲು ಈಗ ರೇಡಿಯೊ ಇರಲಿಲ್ಲ!
ಜನರ ಗೋಳು ಹೀಗೆಯೇ ಮುಂದುವರಿದಿತ್ತು. ಅವರೆಲ್ಲ ತಮ್ಮ ಪ್ರೀತಿಪಾತ್ರರನ್ನು , ತಮ್ಮ ಮನೆ-ಮಠಗಳನ್ನು, ತಮಗೆ ದಿನ ಮೂರು ಹೊತ್ತು ಊಟ ಕೊಡಿಸುತ್ತಿದ್ದ ಕಸುಬುಗಳನ್ನೆಲ್ಲ ಕಳೆದುಕೊಂಡಿದ್ದರು. ಆದರೆ, ನಮ್ಮ ದೇಶದ ಅಧ್ಯಕ್ಷರಾದ ಆಸಿಫ್ ಜರ್ದಾರಿಯವರು ಮಾತ್ರ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಫ್ರಾನ್ಸ್ನಲ್ಲಿ ವಿಹಾರಾರ್ಥ ಪ್ರವಾಸದಲ್ಲಿದ್ದರು. ಇದನ್ನು ಕೇಳಿದ ಮೇಲೆ ನಾನು ಅಪ್ಪನನ್ನು , 'ಅಪ್ಪ, ಒಳ್ಳೆಯ ಕೆಲಸಗಳನ್ನು ಮಾಡದಂತೆ ನಮ್ಮ ರಾಜಕಾರಣಿಗಳನ್ನೆಲ್ಲ ಯಾವ ಶಕ್ತಿ ತಡೆದಿದೆ? ಅವರಿಗೆಲ್ಲ ನಮ್ಮ ಜನರೇಕೆ ನೆಮ್ಮದಿಯಾಗಿರಬಾರದು? ಅವರಿಗೇಕೆ ನಮ್ಮ ಜನರಿಗೆಲ್ಲ ಆಹಾರ ಮತ್ತು ವಿದ್ಯುತ್ ಸಿಗಬಾರದು?' ಎಂದು ಕೇಳಿದೆ.
ಇಸ್ಲಾಮಿಕ್ ಸಂಘಟನೆಗಳ ನಂತರ ನಮಗೆ ಹೆಚ್ಚು ನೆರವು ಬಂದಿದ್ದು ಸೇನೆಯಿಂದ. ಅಂದಮಾತ್ರಕ್ಕೆ, ಕೇವಲ ನಮ್ಮ ದೇಶದ ಸೇನೆ ಎಂದರ್ಥವಲ್ಲ. ಅಮೆರಿಕ ಸರ್ಕಾರ ಕೂಡ ಆಗ ನಮ್ಮ ನೆರವಿಗೆ ಹೆಲಿಕಾಪ್ಟರುಗಳನ್ನು ಕಳಿಸಿತು. ಇದನ್ನು ನೋಡಿ ಜನ ಅನುಮಾನಪಟ್ಟರು. ಆಗ, ಅಮೆರಿಕವೇ 'ಹಾರ್ಪ್' ತಂತ್ರಜ್ಞಾನದ ಮೂಲಕ ಸಾಗರದ ತಳದಲ್ಲಿ ದೈತ್ಯ ಅಲೆಗಳನ್ನು ಸೃಷ್ಟಿಸಿ, ಅದರ ಮೂಲಕ ಪ್ರವಾಹದ ಅವಾಂತರವನ್ನೆಲ್ಲ ಹುಟ್ಟುಹಾಕಿದೆ ಎಂಬ ವಾದವೂ ಕೇಳಿಬರುತ್ತಿತ್ತು. ಇದರ ಜೊತೆಗೆ, ಅಮೆರಿಕವು ನಮಗೀಗ ನೆರವು ನೀಡುವ ನೆವದಲ್ಲಿ ಪಾಕಿಸ್ತಾನವನ್ನು ಕಾನೂನುಬದ್ಧವಾಗಿಯೇ ಪ್ರವೇಶಿಸಿ, ಆಮೇಲೆ ನಮ್ಮ ವಿರುದ್ಧ ಬೇಹುಗಾರಿಕೆ ನಡೆಸುವ ಹುನ್ನಾರ ಹೊಂದಿದೆ ಎಂಬ ಮಾತೂ ಕೇಳಿಬರುತ್ತಿತ್ತು.
ಅಂತೂ ಇಂತೂ ಮಳೆ ನಿಂತರೂ ಬದುಕು ಮಾತ್ರ ತುಂಬಾ ದುಸ್ತರವಾಗಿತ್ತು. ನಮಗಾಗ ಒಳ್ಳೆಯ ನೀರಾಗಲಿ, ವಿದ್ಯುತ್ತಾಗಲಿ ಇರಲಿಲ್ಲ. ಆಗಸ್ಟ್ನಲ್ಲಿ ಮಿಂಗೋರಾದಲ್ಲಿ ಮೊಟ್ಟಮೊದಲ ಕಾಲರಾ ಪ್ರಕರಣ ಬೆಳಕಿಗೆ ಬಂದಿತು. ಕೂಡಲೇ ಆಸ್ಪತ್ರೆಯ ಹೊರಭಾಗದಲ್ಲಿ ರೋಗಿಗಳಿಗೆಂದೇ ಗುಡಾರ ಹಾಕಲಾಯಿತು. ಆಗ ನಮ್ಮ ಊರುಗಳಿಗೂ ಉಳಿದ ಭಾಗಗಳಿಗೂ ಸಂಪರ್ಕವೇ ಕಡಿತಗೊಂಡಿತ್ತು. ಹೀಗಾಗಿ, ಇದ್ದಬದ್ದ ಅಲ್ಪಸ್ವಲ್ಪ ಆಹಾರ ತುಂಬಾ ದುಬಾರಿಯಾಯಿತು. ಅದು ನಮ್ಮ ಸೀಮೆಯಲ್ಲಿ ಪೀಚ್ ಹಣ್ಣು ಮತ್ತು ಈರುಳ್ಳಿಯ ಋತು. ರೈತರಂತೂ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಹೆಚ್ಚಿನ ರೈತರು ಆಗ ಭೋರ್ಗರೆಯುತ್ತ ಹರಿಯುತ್ತಿದ್ದ ನದಿಯನ್ನು ದೋಣಿಗಳ ಸಹಾಯದಿಂದಲೂ ರಬ್ಬರ್ ಟೈರುಗಳ ನೆರವಿನಿಂದಲೂ ದಾಟಿ, ಪೀಚ್ ಮತ್ತು ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಿದರು. ನಮ್ಮ ಅಂಗಡಿಮುಂಗಟ್ಟುಗಳಲ್ಲೂ ಪೇಟೆಯಲ್ಲೂ ಪೀಚ್ ಹಣ್ಣನ್ನು ಕಂಡಾಗ ನಮಗೆಲ್ಲ ತುಂಬಾ ಸಂತೋಷವಾಯಿತು.
ಆದರೆ, ಸಲ ನಮಗೆ ಹಿಂದೆಲ್ಲ ಸಿಗುತ್ತಿದ್ದಂತೆ ವಿದೇಶಿ ನೆರವು ಹರಿದುಬರಲಿಲ್ಲ. ಏಕೆಂದರೆ, ಪಾಶ್ಚಾತ್ಯ ಜಗತ್ತಿನ ಅನೇಕ ಶ್ರೀಮಂತ ರಾಷ್ಟ್ರಗಳು ಆರ್ಥಿಕ ದೃಷ್ಟಿಯಿಂದ ತಾವೇ ಸಂಕಷ್ಟದಲ್ಲಿದ್ದರು. ಜೊತೆಗೆ, ಹೀಗೆ ಇಲ್ಲಿ ಭಯಂಕರ ಪ್ರವಾಹ ಬಂದಿದ್ದರೂ ನಮ್ಮ ಅಧ್ಯಕ್ಷರಾದ ಜರ್ದಾರಿಯವರು ಯೂರೋಪಿನ ದೇಶಗಳಲ್ಲಿ ವಿಹಾರದಲ್ಲಿ ಮುಳುಗಿದ್ದರಿಂದ ದೇಶಗಳಿಗೆ ನಮ್ಮ ಮೇಲೆ ಅಷ್ಟೊಂದು ಸಹಾನುಭೂತಿ ಮೂಡಲಿಲ್ಲ. ಇಷ್ಟೇ ಅಲ್ಲದೆ, ಅನೇಕ ವಿದೇಶಿ ಸರಕಾರಗಳು, 'ನಿಮ್ಮಲ್ಲಿ ಒಬ್ಬೇಒಬ್ಬ ರಾಜಕಾರಣಿಯೂ ಆದಾಯ ತೆರಿಗೆ ಕಟ್ಟೋದಿಲ್ಲ. ಹೀಗಾಗಿ, ಈಗ ಧನಸಹಾಯ ಕೊಡಿ ಅಂತ ತೆರಿಗೆದಾರರಾದ ಜನರನ್ನು ಕೇಳುವುದು ಕಷ್ಟ' ಎಂದು ಬೊಟ್ಟು ಮಾಡಿದವು. ಅಲ್ಲದೆ, ವಿದೇಶಿ ಸಂಘಸಂಸ್ಥೆಗಳಿಗೆ ತಮ್ಮ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ಚಿಂತೆ ಇತ್ತು. ಏಕೆಂದರೆ, ತಾಲಿಬಾನ್ ವಕ್ತಾರನೊಬ್ಬ ಮಾತನಾಡಿ, 'ಪಾಕಿಸ್ತಾನ ಸರಕಾರವು ಯಾವ ಕಾರಣಕ್ಕೂ ಕ್ರಿಶ್ಚಿಯನ್ನರೂ ಯಹೂದಿಗಳೂ ಕೊಡುವ ನೆರವನ್ನು ಸ್ವೀಕರಿಸಬಾರದು' ಎಂದು ಫರ್ಮಾನು ಹೊರಡಿಸಿದ್ದ. ಅದೇನೂ ತಮಾಷೆಗೆ ಹೇಳಿದ ಮಾತಾಗಿರಲಿಲ್ಲ. ತಾಲಿಬಾನ್ಗಳು ತುಂಬಾ ಗಂಭೀರವಾಗಿಯೇ ಎಚ್ಚರಿಕೆ ನೀಡಿದ್ದರು. ಇದೆಲ್ಲ ಸಾಲದೆಂಬಂತೆ, ಹಿಂದಿನ ಅಕ್ಟೋಬರ್ನಲ್ಲಿ ಇಸ್ಲಾಮಾಬಾದಿನಲ್ಲಿದ್ದ 'ವಿಶ್ವ ಆಹಾರ ಕಾರ್ಯಕ್ರಮದ' ಕಚೇರಿಯ ಮೇಲೆ ಉಗ್ರರು ಬಾಂಬ್ ಹಾಕಿ, ಐವರನ್ನು ಬಲಿ ತೆಗೆದುಕೊಂಡಿದ್ದರು.
ಹೀಗಿದ್ದಾಗ, ತಾಲಿಬಾನ್ಗಳು ನಿಜಕ್ಕೂ ಸ್ವಾತ್ ಕಣಿವೆಯನ್ನು ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಹೇಳುತ್ತಿದ್ದ ಚಿಹ್ನೆಗಳು ನಮಗೆಲ್ಲ ಢಾಳಾಗಿ ಕಾಣಿಸಲು ಶುರುವಾದವು. ಏಕೆಂದರೆ, ದಿನಗಳಲ್ಲಿ ಉಗ್ರಗಾಮಿಗಳು ಇನ್ನೂ ಎರಡು ಶಾಲೆಗಳನ್ನು ಬಾಂಬ್ ಇಟ್ಟು ಚಿಂದಿ ಮಾಡಿದರು. ಅಲ್ಲದೆ, ನೆರವಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮಿಂಗೋರಾದಲ್ಲಿದ್ದ ತಮ್ಮ ತಾಣಕ್ಕೆ ವಾಪಸ್ಸಾಗುತ್ತಿದ್ದ ಕ್ರಿಶ್ಚಿಯನ್ ಸಂಸ್ಥೆಯೊಂದರ ಮೂವರನ್ನು ಅಪಹರಿಸಿ, ನಂತರ ಅವರನ್ನು ಬರ್ಬರವಾಗಿ ಕೊಲ್ಲಲಾಯಿತು. ಇದರ ಜೊತೆಗೆ ನಮಗೆ ಇನ್ನೊಂದು ಆಘಾತಕರವಾದ ಸುದ್ದಿ ಬಂತು. ಅದೇನೆಂದರೆ, ನಮ್ಮ ಅಪ್ಪನ ಸ್ನೇಹಿತರೂ ಸ್ವಾತ್ ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆಗಿದ್ದ ಡಾ|ಮಹಮದ್ ಫಾರೂಖ್ ಅವರ ಕಚೇರಿಗೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ಮಳೆಗರೆದು, ಅವರನ್ನು ಕೊಂದು ಹಾಕಿದ್ದರು. ಇಸ್ಲಾಮಿಕ್ ವಿದ್ವಾಂಸರಾಗಿದ್ದ ಫಾರೂಖ್ ಅವರು, ಜಮಾತ್--ಇಸ್ಲಾಮಿ ಪಕ್ಷದ ಮಾಜಿ ಸದಸ್ಯರೂ ಆಗಿದ್ದರು. ತಾಲೀಬಾನೀಕರಣದ ವಿರುದ್ಧ ದೊಡ್ಡದಾಗಿ ದನಿ ಎತ್ತಿದ್ದ ಅವರು, ಆತ್ಮಹತ್ಯಾ ಬಾಂಬ್ ದಾಳಿಗಳ ವಿರುದ್ಧ ಫತ್ವಾ ಕೂಡ ಹೊರಡಿಸಿದ್ದರು.

ಇವೆಲ್ಲದರಿಂದಾಗಿ ನಾವೆಲ್ಲರೂ ಮತ್ತೊಮ್ಮೆ ನಿರಾಸೆಯ ಮಡುವಿನಲ್ಲಿ ಮುಳುಗಿದೆವಲ್ಲದೆ, ಭಯಭೀತರೂ ಆದೆವು. ನಾವೆಲ್ಲರೂ ಮನೆಮಠ ತೊರೆದು ನಿರಾಶ್ರಿತರಾಗಿದ್ದಾಗ, ನಾನು ರಾಜಕಾರಣಿಯಾಗಬೇಕೆಂದು ಯೋಚಿಸಿದ್ದೆ. ನನ್ನ ಆಸೆ ನ್ಯಾಯಯುತವಾದುದೆಂಬುದು ನನಗೆ ಈಗ ಗೊತ್ತಾಗಿತ್ತು. ನಮ್ಮ ದೇಶ ಒಂದಲ್ಲ ಎರಡಲ್ಲ, ಹತ್ತಾರು ಸಮಸ್ಯೆಗಳಲ್ಲಿ ಮುಳುಗಿತ್ತು. ಆದರೆ, ಅವುಗಳನ್ನು ಎದುರಿಸುವಂಥ ಒಬ್ಬೇಒಬ್ಬ ಸಾಚಾ ನಾಯಕನೂ ಇರಲಿಲ್ಲ.