Saturday, January 23, 2021

ಬಾದಾಮಿ: 2.5 ಲಕ್ಷ ವರ್ಷ ಪ್ರಾಚೀನ ಹಳೆ ಶಿಲಾಯುಗದ ಕಲ್ಲು ಉಪಕರಣ ತಯಾರಿಕಾ ಘಟಕ ಪತ್ತೆ

 ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ(ಎಎಸ್‌ಐ) ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪ ತಮಿನಾಳ ಗ್ರಾಮದಲ್ಲಿರುವ ಗುಡ್ಡದಲ್ಲಿ 2.5 ಲಕ್ಷ ವರ್ಷಗಳಷ್ಟು ಹಳೆಯದಾದ ಪ್ಯಾಲಿಯೊಲಿಥಿಕ್ (ಹಳೆಯ ಶಿಲಾಯುಗ) ಕಲ್ಲಿನ ಉಪಕರಣಗಳ ಉತ್ಪಾದನಾ ಘಟಕವನ್ನು ಪತ್ತೆಹಚ್ಚಿದೆ.

ನಾಗ್ಪುರದ ಪ್ರಿಹಿಸ್ಟೋರಿಕ್ ಶಾಖೆಯ ನಾಲ್ಕು ಸದಸ್ಯರ ತಂಡವು ತಮಿನಾಳ ಮತ್ತು ಕಟಾರ್ಕಿ ಗ್ರಾಮದ ನಡುವೆ ಇರುವ ರಂಗನಾಥ ಬೆಟ್ಟದಲ್ಲಿ ಉತ್ಖನನ ನಡೆಸುತ್ತಿದೆ.

"ಮಲಪ್ರಭಾ ನದಿಯ ದಡದಲ್ಲಿರುವ ಸಣ್ಣ ಬೆಟ್ಟದಲ್ಲಿ, ಶಿಲಾಯುಗದ ಸಮಯದಲ್ಲಿ ಬಳಕೆಯಲ್ಲಿರುವ ವಿಭಿನ್ನ ಕಲ್ಲಿನ ಉಪಕರಣಗಳನ್ನು ನಾವು ಪತ್ತೆಹಚ್ಚಿದ್ದೇವೆ." ಎಂದು ಪುರಾತತ್ವಶಾಸ್ತ್ರಜ್ಞ ಅಧೀಕ್ಷಕ ರಮೇಶ್ ಮೂಲಿಮನಿ ಹೇಳಿದರು. “19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತದ ಇತಿಹಾಸಪೂರ್ವ ಸ್ಥಳಗಳ ಭೂವೈಜ್ಞಾನಿಕ ಸಮೀಕ್ಷೆಗಳನ್ನು ನಡೆಸಿದ ಭಾರತೀಯ ಇತಿಹಾಸಪೂರ್ವ ಮತ್ತು ಭೂವಿಜ್ಞಾನಿ ರಾಬರ್ಟ್ ಬ್ರೂಸ್ ಫೂಟೆ ಸೇರಿದಂತೆ ಹಲವಾರು ವಿದ್ವಾಂಸರು ಕ್ಯಾದಾ, ಕಟಾರ್ಕಿ ಮತ್ತು ಬಾದಾಮಿಯ ಇತರ ಹಳ್ಳಿಗಳಲ್ಲಿ 2 ಲಕ್ಷ ವರ್ಷ ಹಳೆಯ ಕಲ್ಲಿನ ಉಪಕರಣಗಳು, ವಸ್ತುಗಳನ್ನು ಪತ್ತೆ ಮಾಡಿದ್ದಾರೆ.  ಆದಾಗ್ಯೂ, ಹಳೆ ಶಿಲಾಯುಗದ ಕಲ್ಲು ಉಪಕರಣ  ಉತ್ಪಾದನಾ ಘಟಕದ ಸ್ಥಳವನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದರು. ಈಗ,ನಾವು ಇದರ ಬಗೆಗೆ ಕಂಡುಕೊಂಡಿದ್ದೇವೆ, ಇದು ಸುಮಾರು 2.5 ಲಕ್ಷ ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ. ” ಅವರು ವಿವರಿಸಿದರು.

ಕಲ್ಲಿನ ಉಪಕರಣಗಳಲ್ಲಿ ರಂಗನಾಥ ಬೆಟ್ಟದ ವಿವಿಧ ಆಯುಧಗಳು, ಕೈಕೊಡಲಿಗಳು, ಸೇರಿವೆ. ಉತ್ಖನನದ ನಂತರ, ಹೆಚ್ಚಿನ ಪರಿಶೋಧನೆ, ಸಂಶೋಧನೆಗಳ ದಾಖಲಾತಿಗಾಗಿ ಅನುಮತಿ ಕೋರಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. “ಇವುಗಳು ಅಮೂಲ್ಯಮತ್ತು ಅಪರೂಪದ ಕಲ್ಲು ಉಪಕರಣಗಳ ಉತ್ಪಾದನಾ ಕೈಗಾರಿಕೆ ಸ್ಥಳ.ಇವುಗಳು ಈ ಮಾನವ ಗುಂಪುಗಳು ತಮ್ಮ ದೈನಂದಿನ ಜೀವನದಲ್ಲಿ ಬಳಸಿದ ವಸ್ತುಗಳ ಉತ್ಪಾದನೆಯಲ್ಲಿ ಹೆಚ್ಚಿನ ನಿಖರತೆ ಮೂಡಿಸಲು ಕಾರಣವಾಗಲಿದೆ. ಈ ಪ್ರದೇಶದಿಂದ ಪತ್ತೆಯಾದ ಕಲ್ಲಿನ ಉಪಕರಣಗಳ ದಾಖಲೆಯು ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತಿಹಾಸಪೂರ್ವ ಸಮುದಾಯಗಳ ಸಂಖ್ಯಾತ್ಮಕ ಸಾಂದ್ರತೆಯನ್ನು ಸೂಚಿಸುತ್ತದೆ. ಈ ಶೋಧನೆಯ ಬಗ್ಗೆ ನಾವು ಸರಿಯಾದ ದಾಖಲಾತಿಗಳನ್ನು ಮಾಡುವತ್ತ ಗಮನ ಹರಿಸಿದ್ದೇವೆ" ಮೂಲಿಮನಿ ಹೇಳಿದ್ದಾರೆ.

ಬಾದಾಮಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಉತ್ಖನನದ ಅಗತ್ಯವನ್ನು ಒತ್ತಿಹೇಳುತ್ತಾ, ಪುರಾತತ್ತ್ವ ಶಾಸ್ತ್ರದ ತಜ್ಞ ಮಂಜುನಾಥ ಸುಳ್ಳೊಳ್ಳಿ  “ಈ ಪ್ರದೇಶದಲ್ಲಿ ನೆಲೆಗೊಂಡಿರುವ ಗುಡ್ಡಗಾಡಿನಲ್ಲಿ ಇನ್ನೂ ಹಲವಾರು ಪ್ರಾಚೀನ  ಕಲ್ಲು ಉಪಕರಣ ಉತ್ಪಾದನಾ ಘಟಕಗಳಿವೆ. ಎಲ್ಲಾ ಹಳೆ ಶಿಲಾಯುಗದ  ಕಲ್ಲು ಉಪಕರಣ ಕೈಗಾರಿಕೆಗಳನ್ನು ಅನ್ವೇಷಿಸುವುದು ಇಂದಿನ ಅಗತ್ಯವಾಗಿದೆ. ಇದಲ್ಲದೆ, ಬಾದಾಮಿಯಲ್ಲಿರುವ ಬೆಟ್ಟಗಳಲ್ಲಿ ಪ್ರಾಚೀನ ಜನರು ಬಳಸುತ್ತಿದ್ದ ನೂರಾರು ಗುಹೆಗಳು ಮತ್ತು ಆಶ್ರಯ ತಾಣಗಳಿದೆ."

"ಆದಾಗ್ಯೂ, ಈ ಪ್ರದೇಶದಲ್ಲಿ ಮಾನವ ವಿಕಾಸ ಎಂದು ಆಗಿದೆ ಎನ್ನುವ ಬಗ್ಗೆ ನಿಖರ  ಸಮಯದ ದಾಕಲೆ ಇಲ್ಲ, ಇಡೀ ಗುಡ್ಡವು ಬಂಡೆಗಳಿಂದ ಕೂಡಿದೆ ಮತ್ತು ಇಡೀ ಗಿರಿಶೃಂಗವು  ಶಿಲಾಮಯವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಉತ್ಖನನ ಮತ್ತು ದಾಖಲಾತಿಗಳನ್ನು ನಡೆಸಿದರೆ, ನಾವು ಮುಂದಿನ ಪೀಳಿಗೆಗೆಶ್ರೀಮಂತ ಪರಂಪರೆಯೊಂದರ ಪರಿಚಯ ಮಾಡಿಸಬಹುದು." ಎಂದು ಎಂದು ಬಾಗಲಕೋಟೆ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ  ಸುಳ್ಳೊಳ್ಳಿ ಹೇಳಿದ್ದಾರೆ.

ಉತ್ಖನನದ ಭಾಗವಾಗಿದ್ದ ಇತರ ಎಎಸ್‌ಐ ಅಧಿಕಾರಿಗಳು ಎಂದರೆ ಡಾ. ಗಜಾನನ ಕೆ., ದೇವೇಂದ್ರ ಕೆ. ಹಾಗೂ ನರಸಿಲಾಲ್ ಎಂ. ಅವರಾಗಿದ್ದಾರೆ.

Thursday, January 21, 2021

ಮೂಲಾ ನಕ್ಷತ್ರ- ಇದು ಬ್ರಹ್ಮಾಂಡ ಸೃಷ್ಟಿಯ ಬೇರು!

 ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂಲಾ ನಕ್ಷತ್ರಕ್ಕೆ ಬಹಳ ಮಹತ್ವವಿದೆ. ಇಪ್ಪತ್ತೇಳು ನಕ್ಷತ್ರಗಳ ಪೈಕಿ ಮೂಲಾ  ನಕ್ಷತ್ರ ಅತ್ಯಂತ "ಕೆಟ್ಟದ್ದು" ಎಂಬ ಭಾವನೆ ಬಲವಾಗಿದೆ. ಆದರೆ ನಿಜ ಸಂಗತಿ ಎಂದರೆ ನಮ್ಮ ಬ್ರಹ್ಮಾಂಡದ ಉದಯವಾಗಿದ್ದೇ ಈ ಮೂಲ ನಕ್ಷತ್ರದಿಂದ! ಇದು ನಮ್ಮ ಕ್ಷೀರಸಾಗರ (ಮಿಲ್ಕಿ ವೇ) ನ ನಟ್ಟ ನಡುವೆ ಸ್ಥಿತವಾಗಿದೆ.

ಜ್ಯೋತಿಷ್ಯದಲ್ಲಿನ ಈ ಇಪ್ಪತ್ತೇಳು ನಕ್ಷತ್ರಗಳು ಚಿಕ್ಕಚಿಕ್ಕ ನಕ್ಷತ್ರಗಳ ಗುಂಪುಗಳಗಿದೆ. , ಅದು ಚಂದ್ರನು ಭೂಮಿಯನ್ನು ಸುತ್ತುತ್ತಿರುವಾಗ ಚಲಿಸುತ್ತದೆ. ಇಂಗ್ಲಿಷ್ನಲ್ಲಿ, ನಕ್ಷತ್ರಗಳನ್ನು lunar mansions ಎನ್ನಲಾಗುತ್ತದೆ. ಮೂಲಾ ನಕ್ಷತ್ರ  19 ನೇ ನಕ್ಷತ್ರವಾಗಿದೆ.ಚಂದ್ರನು 0: 00-13: 20 ಡಿಗ್ರಿ ಧನು ರಾಶಿಯ ನಡುವೆ ಇದ್ದಾಗ ನೀವು ಹುಟ್ಟಿದ್ದರೆ, ನಿಮ್ಮದು ಮೂಲಾ ನಕ್ಷತ್ರವಾಗಿರಲಿದೆ.

ಮೂಲಾನಕ್ಷತ್ರವು ಇಂಗ್ಲಿಷ್ ನಲ್ಲಿ ಲಾಮ್ಡಾ ಸ್ಕಾರ್ಪಿಐ ಎಂದು ಕರೆಯಲ್ಪಡುತ್ತದೆ . ಅದು ಧನು ರಾಶಿಯಲ್ಲಿ ಎರಡನೆಯ ಅತ್ಯಂತ ಪ್ರಕಾಶ ಮಾನ ನಕ್ಷತ್ರ. ಅದು ಒಂದು ಹಲವು ನಕ್ಷತ್ರಗಳ ಪುಂಜ. ದೂರದಲ್ಲಿರವ ನಮಗೆ ಒಂದೇ ನಕ್ಷತ್ರದಂತೆ ಕಾಣುವುದು. ಅದು ನಮ್ಮಿಂದ 570 ಕೋಟಿ ಜ್ಯೋತಿರ್ವರ್ಷದ ದೂರದಲ್ಲಿದೆ. ಒಂದು ಜ್ಯೋತಿರ್ವರ್ಷ ವೆಂದರೆ - ಒಂದು ಸೆಕೆಂಡಿಗೆ ೩೦೦೦೦೦ ಕಿಲೋಮೀಟರ್ ಹೋಗುವ ಬೆಳಕಿನ ಕಿರಣ ಒಂದು ವರ್ಷದಲ್ಲಿ ಹೋಗುವ ದೂರ. ಮೂಲಾ ನಕ್ಷತ್ರ ನಮ್ಮಿಂದ ಅಷ್ಟು ದೂರಲ್ಲಿರುವ ನಕ್ಷತ್ರಗಳ ಒಂದು ಪುಂಜ. ಅದು ಈಗ ವಿಜ್ಞಾನದ ಪ್ರಕಾರ ವೃಶ್ಚಿಕ ರಾಶಿಗೆ ಸೇರಿಹೋಗಿದೆ. 

ರಾಮಾಯಣದಲ್ಲಿ ರಾಮನು ಮೂಲ ನಕ್ಷತ್ರ ದೈತ್ಯಕುಲದವರ ನಕ್ಷತ್ರ ಎಂದು ಹೇಳಿದನು. ವರ್ನಾಳ್ ವಿಷುವತ್ ಸಂಕ್ರಾಂತಿಯು ಮೂಲ ನಕ್ಷತ್ರದಲ್ಲಿ ಬಂದಾಗ ದೈತ್ಯ ರಾಜವಂಶವು ಪ್ರಾರಂಭವಾಯಿತು ಎಂದು ಇದು ಖಚಿತಪಡಿಸಿದೆ. ಈ ಅವಧಿಯು ಕ್ರಿ.ಪೂ 17000 ಗಿಂತ ಅಥವಾ ಅದಕ್ಕೂ ಹೊಂದಿನದೆಂದು ಇದರಿಂದ ಸಾಬೀತಾಗಿದೆ.

ಪ್ರತಿ ನಕ್ಷತ್ರವು ತನ್ನದೇ ಆದ ಸ್ಥಿರ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಗ್ರಹಗಳ ಆಡಳಿತ, ನಕ್ಷತ್ರ ಗುಂಪು, ರಾಶಿಚಕ್ರ ಚಿಹ್ನೆ, ದೇವತೆ, ಚಿಹ್ನೆ ಮತ್ತು ಶಕ್ತಿ ಸೇರಿವೆ. ಮೂಲಾ ನಕ್ಷತ್ರದ ವೈಶಿಷ್ಟ್ಯಗಳು ಕೆಳಗಿನಂತಿದೆ-

ಸಂಸ್ಕೃತದ ಹೆಸರು: ಮೂಲಾ  ಸಂಸ್ಕೃತದಲ್ಲಿ “ಮೂಲ” ಎಂದರೆ ಸ್ಥಿತಿಸ್ಥಾಪಕತ್ವ, ಸಂಪತ್ತು ಮತ್ತು ಉತ್ತಮ ಮನೆತನವನ್ನು ಸೂಚಿಸುತ್ತದೆ

ಗ್ರಹ ಆಡಳಿತ: ಕೇತು. ಪುರಾಣಗಳಲ್ಲಿ ಛಾಯಾಗ್ರಹ, ರಾಹುವಿನ  ತಲೆಯಿಲ್ಲದ ದೇಹ ಎಂದು ಕರೆಯಲ್ಪಡುವ ಕೇತು ತೀವ್ರತೆ, ನಷ್ಟ ಮತ್ತು ಅತಿಕ್ರಮಣಕ್ಕೆ ಸಂಬಂಧಿಸಿದೆ.

ನಕ್ಷತ್ರ ಗುಂಪು: ದೈತ್ಯಾಕಾರದ. ನಕ್ಷತ್ರಗಳನ್ನು ರಾಕ್ಷಸರು, ಮಾನವರು ಮತ್ತು ದೇವತೆಗಳೆಂದುಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಮೂಲಾದೈತ್ಯಾಕಾರದ ನಕ್ಷತ್ರ. ಈ ಗುಂಪಿನಲ್ಲಿರುವ ಜನರು ಸಾಮಾನ್ಯವಾಗಿ ಅರ್ಥಗರ್ಭಿತ, ದೃಢ ಇಚ್ಚಾಶಕ್ತಿ  ಮತ್ತು ದೃಢ ನಿಶ್ಚಯವನ್ನುಹೊಂದಿರುತ್ತಾರೆ. ಅವರು ಕೋಪ ಮತ್ತು ಹಿಂಸೆಯ ಗುಣ ಸ್ವಭಾಗ ಹೊಂದಿರಬಹುದು.

ರಾಶಿಚಕ್ರ ಚಿಹ್ನೆ: ಧನು ರಾಶಿ. ಧನು ರಾಶಿ ಅದೃಷ್ಟ ಮತ್ತು ನೀತಿವಂತರು. ಅವರು ಬುದ್ಧಿವಂತರು, ಹೃದಯವಂತರು ಮತ್ತು ಆಧ್ಯಾತ್ಮಿಕಒಲವು ಹೊಂದಿರುತ್ತಾರೆ.

ದೇವತೆ: ಅಲಕ್ಷ್ಮಿ. ವೈದಿಕ ದೇವತಾಶಾಸ್ತ್ರದಲ್ಲಿ, ಅಲಕ್ಷ್ಮಿಯನ್ನು ಸಾವಿನ ಮತ್ತು ದುರದೃಷ್ಟದ ದೇವತೆ ಎಂದು ಕರೆಯಲಾಗುತ್ತದೆ. ಅವಳು ದಂಭಾ (ವಂಚನೆ) ಮತ್ತು ಮಾಯಾ (ಮೋಸ) ದ ತಾಯಿ.

ಚಿಹ್ನೆ: ಬೇರುಗಳು. ಇದು ಅಡಿಪಾಯ, ಆಳ, ಸ್ಥಿರತೆ, ಗುಪ್ತ ಶಕ್ತಿ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.

ಶಕ್ತಿ: ಬೇರುಸಹಿತ ಅಥವಾ ಹಾಳುಮಾಡಲು. ಮುಲಾ ನಕ್ಷತ್ರದಡಿಯಲ್ಲಿ ಜನಿಸಿದ ವ್ಯಕ್ತಿಗಳು ವಿನಾಶಕಾರಿ ಶಕ್ತಿಯನ್ನು ಹೊಂದಿದ್ದು ಅವರನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಕಾಳಜಿ ಮತ್ತು ಶಿಸ್ತಿನಿಂದ, ಉತ್ತಮ ಆಧ್ಯಾತ್ಮಿಕ ಪ್ರಗತಿಗೆ ಮತ್ತು ಇತರರಿಗೆ ಸಹಾಯ ಮಾಡಲು ಇವರನ್ನು ಬಳಸಿಕೊಳ್ಳಬಹುದು.

ಪ್ರತಿಧ್ವನಿಸುವ ಉಚ್ಚಾರಾಂಶಗಳು: ಭಾರತದಲ್ಲಿ, ಜನ್ಮ ನಕ್ಷತ್ರವನ್ನು ಸಾಂಪ್ರದಾಯಿಕವಾಗಿ ಮಗುವಿನ ಹೆಸರನ್ನು ಆರಿಸುವ ಒಂದು ಸಾಧನವಾಗಿ ಬಳಸಲಾಗುತ್ತದೆ. ಮೂಲಾ ನಕ್ಷತ್ರದ ನಾಲ್ಕು ಪಾದಗಳಿಗೆ ಅನುಸಾರ ಉಚ್ಚಾರಾಂಶಗಳು ಯೇ, ಯೋ , ಭಾ , ಭೀ  ಜನ್ಮ ಸಮಯ ತಿಳಿದಿಲ್ಲದಿದ್ದರೆ ಜ್ಯೋತಿಷ್ಯ ನಕ್ಷೆಯನ್ನು ಲೆಕ್ಕಾಚಾರ ಮಾಡುವಾಗ ವ್ಯಕ್ತಿಯ ಮೊದಲ ಹೆಸರಿನ ಉಚ್ಚಾರಾಂಶವನ್ನು ಕೆಲವೊಮ್ಮೆ ಬಳಸಲಾಗುತ್ತದೆ.

ವಿಜ್ಞಾನ ದ ಹಿನ್ನೆಲೆಯಲ್ಲಿ ಮೂಲಾ ನಕ್ಷತ್ರ


ಲಾಮ್ಡಾ ಸ್ಕಾರ್ಪಿಐ (Lambda Scorpii) ಅಥವಾ ಮೂಲಾ ನಕ್ಷತ್ರ ರಾತ್ರಿ ಆಕಾಶದಲ್ಲಿ ಕಾಣುವ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾಗಿದೆ. ಇದು ಶೌಲಾ ಎಂಬ ಸಾಂಪ್ರದಾಯಿಕ ಹೆಸರನ್ನು ಹೊಂದಿದೆ, ಇದು ಅರೇಬಿಕ್  الشولاء al-šawlā´  ನಿಂದ ಬಂದಿದೆ, ಇದರರ್ಥ 'ಬೆಳೆದ [ಬಾಲ]', ಇದು ಚೇಳಿನ ಬಾಲದಲ್ಲಿ ಕಾಣುವ ನಕ್ಷತ್ರ  2016 ರಲ್ಲಿ, ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು ನಕ್ಷತ್ರಗಳಿಗೆ ಸರಿಯಾದ ಹೆಸರುಗಳನ್ನು ಪಟ್ಟಿ ಮಾಡಲು ಮತ್ತು ಪ್ರಮಾಣೀಕರಿಸಲು ಸ್ಟಾರ್ ನೇಮ್ಸ್ (ಡಬ್ಲ್ಯುಜಿಎಸ್ಎನ್) ನಲ್ಲಿ ವರ್ಕಿಂಗ್ ಗ್ರೂಪ್ ಅನ್ನು ಆಯೋಜಿಸಿತು. ಜುಲೈ 2016 ರ ಡಬ್ಲ್ಯುಜಿಎಸ್ಎನ್‌ನ ಮೊದಲ ಬುಲೆಟಿನ್ ಡಬ್ಲ್ಯುಜಿಎಸ್‌ಎನ್ ಅನುಮೋದಿಸಿದ ಮೊದಲ ಎರಡು ಬ್ಯಾಚ್‌ಗಳ ಹೆಸರುಗಳ ಕೋಷ್ಟಕವನ್ನು ಒಳಗೊಂಡಿತ್ತು; ಇದರಲ್ಲಿ ಸ್ಕಾರ್ಪಿಐ ಎಂಬ ನಕ್ಷತ್ರಕ್ಕೆ ಶೌಲಾ ಎಂಬ ಹೆಸರನ್ನು ಸೇರಿಸಿದ್ದಾರೆ.

ಮೂಲಾ ನಕ್ಷತ್ರಕ್ಕೆ ಇರುವ ಚಿಹ್ನೆಯು ಒಟ್ಟಾಗಿ ಕಟ್ಟಲಾದ ಬೇರುಗಳ ಗುಂಪನ್ನಹೋಲುತ್ತದೆ. ಇದನ್ನು ಆನೆಯ ಅಂಕುಶ ಎಂದೂ ಕರೆಯಲಾಗಿತ್ತದೆ. ಚೀನೀ ಭಾಷೆಯಲ್ಲಿ, 尾宿 (Wěi Xiù) ಅಂದರೆ ಬಾಲ, ಇದರರ್ಥ ಬಾಲದ ಎಂಟನೇ ನಕ್ಷತ್ರ"

ಲಾಮ್ಡಾ ಸ್ಕಾರ್ಪಿಐ ಸೂರ್ಯನಿಂದ 570 ಬೆಳಕಿನ ವರ್ಷಗಳ ದೂರದಲ್ಲಿದೆ.

ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಇಂಟರ್ಫೆರೋಮೆಟ್ರಿಕ್ ಅವಲೋಕನಗಳು ಇದು ವಾಸ್ತವವಾಗಿ ಎರಡು ಬಿ-ಮಾದರಿಯ ನಕ್ಷತ್ರಗಳು ಮತ್ತು ಪೂರ್ವ-ಮುಖ್ಯ-ಅನುಕ್ರಮ ನಕ್ಷತ್ರವನ್ನು ಒಳಗೊಂಡಿರುವ ಟ್ರಿಪಲ್ ಸ್ಟಾರ್ ಸಿಸ್ಟಮ್ ಎಂದು ತೋರಿಸಿದೆ. ಪ್ರಾಥಮಿಕ ನಕ್ಷತ್ರವು ಬೀಟಾ ಸೆಫೀ ವೇರಿಯಬಲ್ ನಕ್ಷತ್ರವಾಗಿದ್ದು, ಸುಮಾರು ನೂರನೇ ಒಂದು ಭಾಗದಷ್ಟು ವೇಗದ ಹೊಳಪಿನ ಬದಲಾವಣೆಗಳನ್ನು ಹೊಂದಿದೆ. ಪೂರ್ವ-ಮುಖ್ಯ-ಅನುಕ್ರಮ ನಕ್ಷತ್ರವು 6 ದಿನಗಳ ಕಕ್ಷೀಯ ಅವಧಿಯನ್ನು ಹೊಂದಿದೆ ಮತ್ತು ಬಿ ಕಂಪ್ಯಾನಿಯನ್ 1053 ದಿನಗಳ ಅವಧಿಯನ್ನು ಹೊಂದಿದೆ. ಮೂರು ನಕ್ಷತ್ರಗಳು ಒಂದೇ ಕಕ್ಷೀಯ ಸಮತಲದಲ್ಲಿರುತ್ತವೆ, ಅವು ಒಂದೇ ಸಮಯದಲ್ಲಿ ರೂಪುಗೊಂಡಿವೆ ಎಂದು ಬಲವಾಗಿ ಸೂಚಿಸುತ್ತದೆ. ಪ್ರಾಥಮಿಕ, ಪೂರ್ವ-ಮುಖ್ಯ-ಅನುಕ್ರಮ ನಕ್ಷತ್ರ ಮತ್ತು ಬಿ ಕಂಪ್ಯಾನಿಯನ್ ದ್ರವ್ಯರಾಶಿಗಳು ಕ್ರಮವಾಗಿ 14.5, 2.0 ಮತ್ತು 10.6 ಸೌರ ದ್ರವ್ಯರಾಶಿಗಳಾಗಿವೆ. ವ್ಯವಸ್ಥೆಯ ವಯಸ್ಸು 10–13 ದಶಲಕ್ಷ ವರ್ಷಗಳ ವ್ಯಾಪ್ತಿಯಲ್ಲಿದೆ ಎಂದು ಅಂದಾಜಿಸಲಾಗಿದೆ 15 ನೇ-ಪ್ರಮಾಣದ ನಕ್ಷತ್ರವು 42 ಆರ್ಕ್ ಸೆಕೆಂಡುಗಳ ಪ್ರತ್ಯೇಕತೆಯನ್ನು ಹೊಂದಿದೆ, ಆದರೆ 12 ನೇ-ಪ್ರಮಾಣದ ನಕ್ಷತ್ರವು 95 ಆರ್ಕ್ ಸೆಕೆಂಡುಗಳ ದೂರದಲ್ಲಿದೆ. ಈ ಘಟಕಗಳು ಲ್ಯಾಂಬ್ಡಾ ಸ್ಕಾರ್ಪಿಯೊಂದಿಗೆ ದೈಹಿಕವಾಗಿ ಸಂಬಂಧ ಹೊಂದಿದೆಯೆ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಅವರಿಬ್ಬರೂ ಇದ್ದರೆ, ಮೊದಲನೆಯದು ಅಂದಾಜು 7,500 ಖಗೋಳ ಘಟಕಗಳನ್ನು (ಖ.ಮಾ.) ಮತ್ತು ಎರಡನೆಯ ಅಂದಾಜು 17,000 ಖ.ಮಾ. (0.27 ಬೆಳಕಿನ ವರ್ಷಗಳು) ದೂರವಿರುತ್ತದೆ. ರಿಯೊ ಗ್ರಾಂಡೆ ಡೊ ನಾರ್ಟೆ ರಾಜ್ಯವನ್ನು ಸಂಕೇತಿಸುವ ಬ್ರೆಜಿಲ್ ಧ್ವಜದಲ್ಲಿ ಶೌಲಾ ಕಾಣಿಸಿಕೊಳ್ಳುತ್ತದೆ.

***

ಧನುರ್ ರಾಶಿಯಲ್ಲಿರುವ ಮೂಲಾ ನಕ್ಷತ್ರ ಒಂದು ಗುಂಪು ಸ್ಯಾಜಿಟರಿ ಎ ಸ್ಯಾಜಿಟರಿ ಬಿ ಒಳಗೊಂಡಿರು ವ ಈ ನಕ್ಷತ್ರದ ಗುಂಪಿಗೆ ಮೂಲಾ ಎಂದು ಕರೆಯಲಾಗುತ್ತದೆ. ಚಂದ್ರ ಧನುರ್ ರಾಶಿಯ ದಿಕ್ಕಿನಲ್ಲಿ, ಮೂಲಾ  ನಕ್ಷತ್ರದ ದಿಕ್ಕಿನಲ್ಲಿದ್ದಾಗ ಹುಟ್ಟಿದವರು ಆ ಮೂಲಾ ನಕ್ಷತ್ರದವರಾಗಿರುತ್ತಾರೆ. ಗುಂಪಿನಲ್ಲಿ ಇರುವ ಬಾಲದ ತುದಿಯಲ್ಲಿನ ನಕ್ಷತ್ರ ಮೂಲಾ. ನಮ್ಮ ಬ್ರಹ್ಮಾಂಡದ ಮದ್ಯಭಾಗದಲ್ಲಿ ಸ್ಯಾಜಿಟರಿ 3 ಬಂದಿದ್ದು ಇದೇ ಮೂಲಾ ನಕ್ಷತ್ರದ ಸ್ಥಾನವಾಗಿದೆ.


ಇಡೀ ಬ್ರಹ್ಮಾಂಡ ಸೃಷ್ಟಿಯಾಗಿರುವುದೇ ಧನುರ್ ರಾಶಿ, ಮೂಲಾ ನಕ್ಷತ್ರದಲ್ಲಿ! ಸ್ಯಾಜಿಟರಿ ಎ ಸ್ಯಾಜಿಟರಿ ಬಿ ನಲ್ಲಿ ಬ್ರಹ್ಮಾಂಡ ಸೃಷ್ಟಿಯಾಗಿದೆ ಎಂದು ಆಧುನಿಕ ವಿಜ್ಞಾನ  ಸಹ ಒಪ್ಪಿದೆ. ಇದನ್ನೇ ಬ್ಲಾಕ್ ಹೋಲ್ (ಕಪ್ಪು ರಂದ್ರ) ಎಂದು ಕರೆಯಲಾಗುತ್ತದೆ.

ಈವೆಂಟ್ ಹರೈಸನ್ ಟೆಲಿಸ್ಕೋಪ್ ಬಳಸಿ, ಕಪ್ಪು ರಂದ್ರದ ಮೊದಲ ಚಿತ್ರ ಸೆರ್ರೆಹಿಡಿದಾಗ  ಈ ಚಿತ್ರ ತೆಗೆಯಲಾಗಿದ್ದ ಸಮಯದಲ್ಲೇ , ಗುರು ಕ್ಷೀರಪಥದ ಹೃದಯದಲ್ಲಿ (ಮೂಲ ನಕ್ಷತ್ರದಲ್ಲಿ 0 ಡಿಗ್ರಿ 14 ನಿಮಿಷ ಸೈಡ್ರಿಯಲ್ ಸಗ್ಗಿಟೇರಿಯಸ್). ಸಂಚರಿಸಿದ್ದನು!!

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, 27 ಸಾಮಾನ್ಯ ನಕ್ಷತ್ರಗಳು (ನಕ್ಷತ್ರಪುಂಜಗಳು) ಇವೆ, ಮತ್ತು ನೈಸರ್ಗಿಕ ರಾಶಿಚಕ್ರ ಅಥವಾ “ನೈಸರ್ಹಿಕ ಕುಂಡಲಿ” ಯ ಪ್ರತಿಯೊಂದು ಚಿಹ್ನೆ ಮತ್ತು ಪ್ರತಿ ನಕ್ಷತ್ರವು 13 ಡಿಗ್ರಿ 20 ನಿಮಿಷಗಳ ಉದ್ದವನ್ನು ಹೊಂದಿರುತ್ತದೆ ಮತ್ತು ಪ್ರತಿ ನಕ್ಷತ್ರವು ತನ್ನದೇ ಆದ ಅಧಿಪತಿಯನ್ನು ಹೊಂದಿರುತ್ತದೆ (ಅದನ್ನು ನಿಯಂತ್ರಿಸುವ ಗ್ರಹ) . ಅವುಗಳಲ್ಲಿ ಮೂಲಾ ನಕ್ಷತ್ರವು ಧನು ರಾಶಿ ಚಿಹ್ನೆಯಲ್ಲಿ ಇರಿಸಲ್ಪಟ್ಟಿದೆ ಮತ್ತು ಧನು ರಾಶಿಯ 0 ಡಿಗ್ರಿಗಳಿಂದ 13 ಡಿಗ್ರಿವರೆಗೆ ವ್ಯಾಪಿಸಿ್ದ್ದು . ಇದು ಗುಪ್ತ ವಸ್ತುಗಳು ಮತ್ತು ಘಟನೆಗಳನ್ನು (ಕಪ್ಪು ಕುಳಿಗಳಂತೆ!) ಸಂಕೇತಿಸುತ್ತದೆ.ಇದು ಉರಿಯ ಸ್ವಭಾವವನ್ನೂ ಹೊಂದಿದೆ

* ಈವೆಂಟ್ ಹರೈಸನ್ ಟೆಲಿಸ್ಕೋಪ್ ಬಳಸಿ, ವಿಜ್ಞಾನಿಗಳು ನಕ್ಷತ್ರಪುಂಜದ M87 ನ ಮಧ್ಯಭಾಗದಲ್ಲಿರುವ ಕಪ್ಪು ಕುಳಿಯ ಚಿತ್ರವನ್ನು ಪಡೆದರು, ಅದರಹಾರಿಜಾನ್ ಬಳಿ ಬಲವಾದ ಗುರುತ್ವಾಕರ್ಷಣೆಯ ಪ್ರಭಾವದಿಂದ ಅದರ ಸುತ್ತಲೂ ಸುತ್ತುವ ಬಿಸಿ ಅನಿಲದಿಂದ ಹೊರಸೂಸುವದರ ಮೂಲಕ ಅದನ್ನು ವಿವರಿಸಲಾಗಿತ್ತು,

Tuesday, January 12, 2021

ಸ್ವಾಮಿ ವಿವೇಕಾನಂದರ ಅಪ್ಪಟ ಅನುಯಾಯಿ ಹರ್ಷಾನಂದ

 ಬೆಂಗಳುರು ಬಸವನಗುಡಿ ರಾಮಕೃಷ್ಣಾಶ್ರಮದ ಹಿರಿಯ ಸನ್ಯಾಸಿ, ಅಧ್ಯಕ್ಷರೂ ಆಗಿದ್ದ ಸ್ವಾಮಿ ಹರ್ಷಾನಂದಜೀ(91) ನಿನ್ನೆ ವಿಧಿವಶರಾದರು.1989ರಿಂದ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಹರ್ಷಾನಂದಜೀ ಮಠದ ಆರನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿರಾಜಾನಂದರಿಂದ ಮಂತ್ರದೀಕ್ಷೆ ಪಡೆಇದ್ದರು. 1962ರಲ್ಲಿ ಮಠದ ಎಂಟನೇ ಅಧ್ಯಕ್ಷರಾದ ಸ್ವಾಮಿ ವಿಶುದ್ದಾನಂದರಿಂದ ಸನ್ಯಾಸದೀಕ್ಷೆ ಪಡೆದಿದ್ದರು. 

ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರಾದರೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದ ಶ್ರೀ ವೆಂಬಾರ್ ವೆಂಕಟ ಚಾರ್ ಅವರ ಪತ್ನಿ ಶ್ರೀಮತಿ ವೆಂಕಟಲಕ್ಷ್ಮಿ ಅವರು ತಮ್ಮ ತವರೂರಾದ ಆಂಧ್ರಾದ ಕಡಪ ಜಿಲ್ಲೆಯ ಪ್ರುದಟ್ಟೂರ್ ಎಂಬ ಊರಿನಲ್ಲಿ 25 ನೇ ಮಾರ್ಚ್ 1931ರಂದು ಹರ್ಷಾನಂದ ಜನಿಸುತ್ತಾರೆ. ಇವರ ಬಾಲ್ಯದ ಹೆಸರು ಸುಂದರ ಕೃಷ್ಣ.ಇದು ಅವರ ತಾತ ಕೃಷ್ಣಮಾಚಾರುಲು ಎಂಬ ಖ್ಯಾತ ವಕೀಲರ ಹೆಸರೂಮುತ್ತಜ್ಜನ ಹೆಸರು ಸುಂದರಾ ಚಾರ್  ಎಂಬೆರಡು ಹೆಸರಿನ ಸೇರ್ಪಡೆಯಾಗಿತ್ತು. ಮನೆಯವರೆಲ್ಲರ ಪಾಲಿಗೆ ಈ ಬಾಲಕ "ಕಿಟ್ಟು"ವಾಗಿದ್ದ.

ಈ ಕಿಟ್ಟುವಿಗೆ , ಮೂವರು ಸಹೋದರರು ಮತ್ತು ಮೂವರು ಸಹೋದರಿಯರಿದ್ದರು.ಇವನಿಗೆ ಬಾಲ್ಯದಿಂದ ಅತ್ಯಂತ ಚುರುಕಾದ ಬುದ್ದಿ, ತುಂಟತನ ಹಾಗೂ ಕೋಪಿಷ್ಟ ಗುಣಗಳಿದ್ದವು.ಓದಿನಲ್ಲಿ ಮಾತ್ರ ಸದಾ ಮುಂದಿದ್ದ. ಹಾಗಾಗಿ ಸುಂದರ ಕೃಷ್ಣ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ಮೈಸೂರು ರಾಜ್ಯಕ್ಕೆ 3 ನೇ ರ್ಯಾಂಕ್ ಪಡೆದಿದ್ದರು. ಓದು ಮಾತ್ರವಲ್ಲದೆ ಕರ್ನಾಟಕ ಸಂಗೀತಾಭ್ಯಾಸ ಸಹ ಮಾಡಿದ್ದ ಬಾಲಕ ಸುಂದರ ಕೃಷ್ಣಉತ್ತಮ ಗಾಯಕರಾಗಿದ್ದ. ಅಲ್ಲದೆ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದ ಇವರು ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು.

ಪಿಯುಸಿ ಓದುತ್ತಿದ್ದಾಗ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದ್ದಿದ್ದಲ್ಲದೇ, ಆಗ್ಗಿಂದ್ದಾಗ್ಗೆ ಅವರ ಸ್ನೇಹಿತರ ಜೊತೆಯಲ್ಲಿ ಅಲ್ಲಿನ ಸಂಜೆಯ ಪ್ರಾರ್ಥನೆಗಳಿಗೆ ಹಾಜರಾಗುವ ಮೂಲಕ ಧಾರ್ಮಿಕ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ತೋರಿದ್ದರು. 1949 ರಲ್ಲಿ ತಮ್ಮ ಪಿಯೂಸಿ ಪರೀಕ್ಷೆಗೆ ಕೆಲ ತಿಂಗಳುಗಳ ಮುನ್ನ ಮನೆ ಬಿಟ್ಟು ಕೋಲ್ಕತ್ತಾದ ಬೇಲೂರು ಮಠಕ್ಕೆ ಹೋಗಿದ್ದ ಸುಂದರ ಕೃಷ್ಣ ಅವರಿಗೆ ಅಲ್ಲಿನ ಹ್ರಿಯ ಸ್ವಾಮೀಜಿ "ಮೊದಲು ಓದು ಮುಗಿಸು ಆಮೇಲೆ ಇಚ್ಚೆ ಬಲವಾಗಿದ್ದರೆ ಸನ್ಯಾಸ ಸ್ವೀಕರಿಸು" ಎಂದು ಹೇಳಿ ಬೆಂಗಳೂರಿಗೆ ವಾಪಾಸ್ ಕಳಿಸಿದ್ದರು. ಆ ನಂತರ ಸುಂದರ ಕೃಷ್ಣ 1949 ರಲ್ಲಿ ರಾಜ್ಯಕ್ಕೇ 5 ನೇ ರ್ಯಾಂಕ್ ಮೂಲಕ ಯಶಸ್ವಿಯಾಗಿ ಪಿಯು ಮುಗಿಸಿದ್ದರು.

ಸ್ವಾಮಿ ಹರ್ಷಾನಂದರು ವಿಶ್ವೇಶ್ವರಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾಗಿ ಪದವಿ ಪಡೆದವರು. ಪಿಯು ಆದ ನಂತರ ಅಂದಿನ ಪ್ರಸಿದ್ದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್  ಸೇರ್ಪಡೆಯಾಗಿದ್ದ ಸುಂದರ ಕೃಷ್ಣ 1953 ರಲ್ಲಿ ಮೊದಲನೇ ರ‌್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದು ತಮ್ಮ ಪದವಿಯನ್ನು ಮುಗಿಸಿದ್ದರು. ಆ ನಂತರ  ಎಚ್‌ಎಎಲ್‌ನಲ್ಲಿ ತರಬೇತಿಗಾಗಿ ಸೇರಿ ಆರು ತಿಂಗಳ ಕಾಲದ ತರಭೇತಿಯ  ಬಳಿಕ ಕೆಲಸ ಖಾಯಂ ಅಗುವುದರಲ್ಲಿತ್ತು ಆದರೆ ಅವರ ಮನಸ್ಸೆಲ್ಲಾ ರಾಮಕೃಷ್ಣ ಮಠದತ್ತಲೇ ಇದ್ದು ಮನೆಯವರಿಗೆ ಅರಿವಿಗೂ ಬಾರದಂತೆ ಶ್ರೀ ತ್ಯಾಗೇಶ್ವರಾನಂದಜಿ ಅವರನ್ನು ಸಂಪರ್ಕಿಸಿ  ಅವರ ಒಪ್ಪಿಗೆಯ ಅನುಸಾರ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸುವ ನಿರ್ಧಾರ ಮಾಡುತ್ತಾರೆ. ಅದರಂತೆ , ಸುಂದರ ಕೃಷ್ಣ ಅವರನ್ನು ಅಂತಿಮವಾಗಿ 1 ನೇ ಮಾರ್ಚ್ 1954 ರಂದು ರಾಮಕೃಷ್ಣ ಮಠಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಗಾಗುತ್ತದೆ. ಆ ನಂತರ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಸುಮಾರು 4 ವರ್ಷಗಳ ಕಾಲ ಕಳೆದ ನಂತರ ಸುಂದರ ಕೃಷ್ಣ ಅವರಿಗೆ, ಬ್ರಹ್ಮಚಾರಿ ಸೂರ್ಯ ಚೈತನ್ಯ ಎಂದು ಮರುನಾಮಕರಣ ಆಗುತ್ತದೆ. ಅಲ್ಲಿಂದ ಅವರನ್ನು ಮಂಗಳೂರಿನ ಆಶ್ರಮಕ್ಕೆ6 ವರ್ಷಗಳ ಕಾಲ (1954-1960)  ಕಳುಹಿಸಲಾಗಿತ್ತದೆ.  ಅಲ್ಲಿ ಸುಮಾರು 4 ವರ್ಷಗಳ ನಂತರ, ಮಠದ ಆದೇಶಾನುಸಾರ ಅವರಿಗೆ ಸ್ವಾಮಿ ಹರ್ಷಾನಂದ ಎಂದು ಹೆಸರಿಸಲಾಯಿತು

ಸ್ವಾಮಿ ಹರ್ಷಾನಂದರು ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರೇರಿತರಾದರು. ಅವರು 1954 ರಲ್ಲಿ ರಾಮಕೃಷ್ಣ ಮಿಷನ್‌ಗೆ ಸೇರಿದರು, ಅಲ್ಲಿ ಅವರಿಗೆ ರಾಮಕೃಷ್ಣ ಮಿಷನ್‌ನ ಬೆಂಗಳೂರು ಶಾಖೆಯ ಆರನೇ ಅಧ್ಯಕ್ಷ ಸ್ವಾಮಿ ವಿರಾಜಾನಂದ ಮಾರ್ಗದರ್ಶನ ನೀಡಿದರು ಅವರು ಬೇಲೂರು ಮಠ,(ರಾಮಕೃಷ್ಣ ಮಿಷನ್‌ನ ಪ್ರಧಾನ ಕಚೇರಿ) ಮೈಸೂರು, ಮಂಗಳೂರು, ಮತ್ತು ಅಲಹಾಬಾದ್‌ನಲ್ಲಿ ಕೆಲಸ ಮಾಡಿದ್ದರು.

ಮೈಸೂರಿಗೆ ಆಗಮಿಸಿದ ಹರ್ಷಾನಂದರು 1969 ರವರೆಗೆ ಮೈಸೂರು ಆಶ್ರಮದಲ್ಲಿದ್ದರು.  ಕಲ್ಕತ್ತಾದ ಪ್ರಧಾನ ಕಚೇರಿಯಾದ ಬೇಲೂರು ಮಠಕ್ಕೆ ವರ್ಗಾಯಿಸಲಾಗಿ ಅವರು ಅಲ್ಲಿ 3 ವರ್ಷಗಳ ಕಾಲ ಇದ್ದ ಹರ್ಷಾನಂದ 1973ರಲ್ಲಿ  ಮತ್ತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರು  RIMSE (Ramakrishna Institute of Moral & Spiritual Education) ಮತ್ತು ಇನ್ನೊಂದು  BEd ಕಾಲೇಜನ್ನು ಪ್ರಾರಂಭಿಸಿದ್ದರು. ಅಲ್ಲಿಂದ ಹೈದರಾಬಾದ್ ಗೆ ತೆರಳಿದ ಹರ್ಷಾನಂದರು ಹೈದರಾಬಾದಿನ ಮಠದಲ್ಲಿನ ಹೊಸ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕಟ್ಟಡಗಳು ಪೂರ್ಣಗೊಳಿಸುವ ಮೂಲಕ  ಇಂದಿಗೂ ಹೈದರಾಬಾದ್ ನಗರದ ಒಂದು ಹೆಗ್ಗುರುತಾಗುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡೆಹ್ರಾಡೂನ್‌ನ ಕಿಶನ್ ಪುರಕ್ಕೆ, ಅಲಹಾಬಾದ್ ಗೆ ವರ್ಗಾಯಿಸಲ್ಪಟ್ಟ ಹರ್ಷಾನಂದ ಅಲಹಾಬಾದ್ ಮಠದ ಮುಖ್ಯಸ್ಥರಾಗಿ  ನೇಮಕವಾದರು. ಅಲ್ಲಿ ನಾಲ್ಕು ವರ್ಷ ಕಾಲ ತಂಗಿದ್ದ ಸ್ವಾಮಿಗಳು  1989 ರಲ್ಲಿ ಅವರ ತವರೂರಾದ ಬೆಂಗಳೂರಿನ ಆಶ್ರಮ ಮುಖ್ಯಸ್ಥರಾದರು. ರಾಮಕೃಷ್ಣ ಮಠದಲ್ಲಿ ಸ್ವಾಮಿ ರಂಗನಾಥನಂದರ ನಂತರ ಅತ್ಯುತ್ತಮ ಭಾಷಣಕಾರರೆಂದೇ ಹರ್ಷಾನಂದರು ಪ್ರಸಿದ್ಧರಾಗಿದ್ದರು. ಅವರು ಕನ್ನಡ, ತೆಲುಗು, ಹಿಂದಿ, ಬೆಂಗಾಲಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅದ್ಭುತವಾದ ಭಾಷಣಕಾರರಾಗಿದ್ದರು

ಅವರು ಬಹುಭಾಷಾ ಮತ್ತು ಸಂಸ್ಕೃತ, ಕನ್ನಡ, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರುಸ್ವಾಮಿ ಹರ್ಷಾನಂದರು ಹಿಂದೂ ಸಾಹಿತ್ಯಕ್ಕೂ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ "ಎ ಕನ್ಸೈಸ್ ಎನ್ಸೈಕ್ಲೋಪೀಡಿಯಾ ಆಫ್ ಹಿಂದೂ ಧರ್ಮ" ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

 ಹರ್ಷಾನಂದರ ಹಲವು ವಿಸ್ತಾರವಾದ ಪ್ರಬಂಧಗಳೆಲ್ಲಾ ಕಿರುಹೊತ್ತಿಗೆಗಳ ರೂಪುಗೊಂಡು ದೇಶವಿದೇಶಗಳ ಭಕ್ತಾದಿಗಳಿಗೆ ಹಲವಾರು ಭಾಷೆಗಳಲ್ಲಿ ಲಭ್ಯವಿವೆ. ಭಜನೆಗಳನ್ನು ಹಾಡುವುದೆಂದರೆ ಅವರಿಗೆ ಬಲು ಖುಷಿ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಶೈಲಿಗಳಲ್ಲಿಸುಶ್ರಾವ್ಯವಾಗಿ ಹಾಡುತ್ತಿದ್ದರು.ಅವುಗಳೆಲ್ಲಾ ಕ್ಯಾಸೆಟ್ ಹಾಗೂ ಸಿ.ಡಿ ಗಳ ರೂಪದಲ್ಲಿ ಹೊರಬಂದಿವೆ. '

Saturday, January 09, 2021

ದರ್ಗಾವಾಗಿ ಬದಲಾದ ಮೊಘಲರ ವಿರುದ್ಧ ಹೋರಾಡಿದ್ದ ರಾಜ ಹೇಮಚಂದ್ರ ವಿಕ್ರಮಾದುತ್ಯನ ಸಮಾಧಿ!!

 ಹೇಮು ಎಂದೂ ಕರೆಯಲ್ಪಡುವ ಹೇಮಚಂದ್ರ ವಿಕ್ರಮಾದಿತ್ಯ ಒಬ್ಬ ಶ್ರೇಷ್ಠ ಹಿಂದೂ ರಾಜನಾಗಿದ್ದು, ಈ ಹಿಂದೆ ಮೊಘಲರು ಮತ್ತು ಆಫ್ಘಾನರ ಉತ್ತರ ಭಾರತದಾದ್ಯಂತ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾಗ ಸೂರಿ ರಾಜವಂಶದ ಆದಿಲ್ ಷಾ ಸೂರಿಯ ಒಬ್ಬ ನಿಷ್ಠಾವಂತ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ. 

ದರ್ಗಾ ಆಗಿ ಬದಲಾದ ರಾಜ ಹೇಮುವಿನ ಸಮಾಧಿ

ಅಕ್ಬರ್‌ಗೆ ಘಾಜಿ ಎಂಬ ಬಿರುದನ್ನು ಪಡೆಯಲು ಬೈರಮ್ ಖಾನ್1556 ರ ನವೆಂಬರ್ 5 ರಂದು ಈ ಹೇಮುವಿನ ಶಿರಚ್ಚೇಧ ಮಾಡಿದ್ದ!

ಆ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ನಾಸ್ತಿಕರನ್ನು ಅಥವಾ ಕಾಫೀರರನ್ನು ಕೊಲ್ಲುವ ಮುಸ್ಲಿಂ ಯೋಧನಿಗೆ ನೀಡುತ್ತಿದ್ದ ಬಿರುದು "ಘಾಜಿ" ಇಂತಹಾ ಸಹಸ್ರ ಸಹಸ್ರ ಕೊಲೆ, ಹತ್ಯೆಗಳ ಬಳಿಕ ರಚನೆಯಾಗಿದ್ದೇ ಉತ್ತರ ಪ್ರದೇಶದ ಇಂದಿನ ಘಾಜಿಯಾಬಾದ್!!

ಕ್ರಿ.ಶ 1554 ರಲ್ಲಿ ಆದಿಲ್ ಷಾ ಇಸ್ಲಾಂ ಷಾ ಸೂರಿಯ 12 ವರ್ಷದ ಮಗ ಫಿರೋಜ್ಷಾ ಸೂರಿಯನ್ನು ಹತ್ಯೆಗೈದು ಸಿಂಹಾಸನವನ್ನು ಏರಿದನು.

ಹೇಮುವನ್ನು ಅವನ ವಜೀರ್ (ಸಚಿವ) ಆಗಿ ನೇಮಿಸಲಾಯಿತು.


1555 ರಲ್ಲಿ, ಆದಿಲ್ ಅವರ ಸಹೋದರ, ಆಗ್ರಾದ ಇಬ್ರಾಹಿಂ ಷಾ ಸೂರಿ ದಂಗೆ ಎದ್ದ, ಆದಿಲ್ ಶಾ ಸಿಂಹಾಸನವನ್ನು ಕಳೆದುಕೊಂಡ. ದು ರಾಜ್ಯವನ್ನು 4 ಭಾಗಗಳಾಗಿ ಒಡೆಯಲುಕಾರಣವಾಗುತ್ತದೆ.ಇಬ್ರಾಹಿಮ್ ನನ್ನು ಎರಡು ಬಾರಿ ಹೇಮು ಸೋಲಿಸಿದ. ಒಮ್ಮೆ ಕಲ್ಪಿ ಬಳಿ ಮತ್ತುಖನುವಾ ಬಳಿ. ಹೇಮು ಮುತ್ತಿಗೆ ಹಾಕಿದ ಮತ್ತುಬಯಾನಾ ಕೋಟೆಯಲ್ಲಿ ಆಶ್ರಯ ಪಡೆದನು.

1910 ರ ದಶಕದ ಹೇಮು ವಿಕ್ರಮಾದಿತ್ಯನ ಚಿತ್ರಣ

ಬಂಗಾಳದ ಮುಹಮ್ಮದ್ ಷಾ ಕಲ್ಪಿಯ ಮೇಲೆ ದಾಳಿ ಮಾಡಿದಾಗ, ಆದಿಲ್ ಶಾಕಲ್ಪಿ ಬಳಿಯ ಚಪ್ಪರ್‌ಘಟ್ಟದ ಯುದ್ಧದಲ್ಲಿ ಸೋತು ಕೊಲ್ಲಲ್ಪಟ್ಟ ಆಗ ಹೇಮುವನ್ನು ಕರೆಯಲಾಗಿತ್ತು.ಆದಿಲ್ ಬಂಗಾಳದ ಹಿಡಿತ ಸಾಧಿಸಿ ಶಹಬಾಜ್ ಖಾನ್ ನನ್ನು ರಾಜ್ಯಪಾಲರನ್ನಾಗಿ ನೇಮಿಸಿದ. ಆತ ಚುನಾರ್ ನನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ. 

ಮಹಮ್ಮದ್ ಷಾ ಮಗನಾಗಿದ್ದ ಘಿಯಾಸುದ್ದೀನ್ ಬಹದ್ದೂರ್ ಷಾ II (ಖಿಜ್ರ್ ಖಾನ್ ಸೂರಿ) ಗೆ ಬಂಗಾಳ ಮತ್ತೆ ಮಣಿಯಿತು. ಕ್ರಿ.ಶ 1557 ರಲ್ಲಿ, ಖಿಜ್ರ್ ಖಾನ್ ಷಾ ಅವರೊಂದಿಗಿನ ಯುದ್ಧದಲ್ಲಿ ಆದಿಲ್ ಷಾನನ್ನು ಸೋಲಿಸಲಾಯಿತು.ಮತ್ತು ಕೊಲ್ಲಲಾಯಿತು.

ಹೇಮು ಉತ್ತರ ಭಾರತದಾದ್ಯಂತ ಪಂಜಾಬ್‌ನಿಂದ ಬಂಗಾಳದವರೆಗೆ ಮತ್ತು ಆಗ್ರಾ ಮತ್ತು ದೆಹಲಿಯಲ್ಲಿ ಹುಮಾಯೂನ್ ಮತ್ತು ಅಕ್ಬರ್‌ನ ಮೊಘಲ್ ಪಡೆಗಳೊಂದಿಗೆ ಹೋರಾಡಿ, ಆದಿಲ್ ಷಾ ಪರ ರ 22 ಯುದ್ಧಗಳನ್ನು ಗೆದ್ದನು. ಈ ಎಲ್ಲಾ ಯುದ್ಧಗಳು ಆದಿಲ್ ಷಾ ವಿರುದ್ಧ ದಂಗೆ ಎದ್ದ ಆಫ್ಘಾನರ ವಿರುದ್ಧವಾಗಿದ್ದವು!

ಜನವರಿ 26, 1556 ರಂದು ಹುಮಾಯೂನ್ ನಿಧನರಾದಾಗ ಹೇಮು ಬಂಗಾಳದಲ್ಲಿದ್ದ. . ಅದೇ ವರ್ಷದಲ್ಲಿ ಹೇಮು ಆಗ್ರಾವನ್ನು ವಶಪಡಿಸಿಕೊಂಡ. ದೆಹಲಿಯ ಮೇಲೆ ದಾಳಿ ಮಾಡಲು ಉದ್ದೇಶಿಸಿದ.  ಹುಮಾಯೂನ್‌ನ ಉತ್ತರಾಧಿಕಾರಿ ಅಕ್ಬರ್‌ಗೆ ಅವನ ಆಡಳಿತಗಾರ ತರ್ದಿ ಬೇಗ್ ಖಾನ್ ಹೇಮು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ.  ತುಘಲಕಾಬಾದ್ ಕದನದಲ್ಲಿ ಮೊಘಲರನ್ನು ಸೋಲಿಸಲಾಗಿತ್ತು. ಕ್ರಿ.ಶ 1556 ರ ಅಕ್ಟೋಬರ್ 7 ರಂದು ಹೇಮು ದೆಹಲಿಯನ್ನು ತನ್ನದಾಗಿಸಿಕೊಂಡನು.

ವಿಕ್ರಮಾದಿತ್ಯ (ಬಿಕ್ರಂಜಿತ್) ಬಿರುದು

ದೆಹಲಿಯನ್ನು ವಶಪಡಿಸಿಕೊಂಡ ನಂತರ, ಹೇಮು ರಾಜನ ಸ್ಥಾನಮಾನವನ್ನು ಪಡೆದುಕೊಂಡನು ಮತ್ತು ವಿಕ್ರಮಾದಿತ್ಯ (ಅಥವಾ ಬಿಕ್ರಂಜಿತ್) ಎಂಬ ಬಿರುದನ್ನು ಪಡೆದುಕೊಂಡನು, ಇದು ಭಾರತದ ಪ್ರಾಚೀನ ಕಾಲದಹಲವಾರು ಹಿಂದೂ ರಾಜರು ಬಳಸಿದ ಒಂದು ಬಿರುದಾಗಿದೆ. ಹೇಮುನ ಮಿಲಿಟರಿ ಬಲವು ಸಂಪೂರ್ಣವಾಗಿ ಆಫ್ಘಾನರಿಂದ ಕೂಡಿದ್ದಾಗಿತ್ತು.ಅವರು ಅವನ ದರೋಡೆಯ ಬಗ್ಗೆ ಆಸಕ್ತಿ ತೋರಲಿಲ್ಲ.  ಅಲ್ಲದೆ ಅವನ ಕಡೆಗಾಲಕ್ಕಾಗಿ ಪ್ರಾರ್ಥಿಸುತ್ತಿದ್ದರು!

ಆದರೆ ಹೇಮು ಆದಿಲ್ ಷಾನನ್ನು ತನ್ನ ಚಕ್ರವರ್ತಿ ಎಂದು ಒಪ್ಪಿಕೊಳ್ಳುತ್ತಿದ್ದ. ಹಾಗಿದ್ದರೂ ಅಕ್ಬರ್ಪಾಣಿಪತ್ ನಲ್ಲಿ ದಾಳಿ ನಡೆಸಿದ್ದರಿಂದ ಹೇಮು ಆಳ್ವಿಕೆಯು ಒಂದು ತಿಂಗಳಿಗಿಂತ ಕಡಿಮೆ ಕಾಲ ನಡೆಯಿತು.

ಎರಡನೇ ಪಾಣಿಪತ್ ಕದನ


ಅಕ್ಬರ್ ಮತ್ತು ಬೈರಮ್ ಖಾನ್ ಯುದ್ಧಭೂಮಿಯಿಂದ ಎಂಟು ಮೈಲಿ ದೂರದಲ್ಲಿ ಹಿಂಭಾಗದಲ್ಲಿಯೇ ಇದ್ದರು. ತೀವ್ರವಾಗಿ ಹೋರಾಡಿದ ಯುದ್ಧದಲ್ಲಿ, ಮೊನಚಾದ ಮು ಬಾಣವೊಂದು ಕಣ್ಣಿಗೆ ಸಿಲುಕಿಪ್ರಜ್ಞಾಹೀನನಾದಾಗ ಹೇಮು ವಿಜಯದ ಹಾದಿ ತಲುಪಿದ್ದ! 

ಇದು ಸೈನ್ಯದಲ್ಲಿ ಭೀತಿಯನ್ನು ಉಂಟುಮಾಡಿತು, ಅದು ಸಾಮಾನ್ಯ ನಿಯಮವನ್ನು ಮುರಿದು ಓಡಿಹೋಗಲು ಪ್ರಯತ್ನಿಸಿದೆ.  ಹಾಗೆ ಓಡಲು ಯತ್ನಿಸಿದ್ದ 5000 ಕ್ಕೂ ಹೆಚ್ಚು ಸೈನಿಕರು ಕೊಲ್ಲಲ್ಪಟ್ಟರು.ಗಾಯಗೊಂಡ ಹೇಮುನನ್ನು ಹೊತ್ತ ಆನೆಯನ್ನು ಸೆರೆಹಿಡಿದು ಮೊಘಲ್ ಶಿಬಿರಕ್ಕೆ ಕರೆದೊಯ್ಯಲಾಯಿತು. ಬೈರಮ್ ಖಾನ್ 13 ವರ್ಷದ ಅಕ್ಬರ್‌ನನ್ನು ಹೇಮುವಿನ ಶಿರಚ್ಚೇಧ ಮಾಡಲು ಬೇಡಿದ್ದನು. ಆದರೆ ಅವನು ಸಾಯುತ್ತಿರುವ ಮನುಷ್ಯನ ಬಳಿಗೆ ಕತ್ತಿಯನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ್ದನು, ಅಕ್ಬರ್ ತನ್ನ ಕತ್ತಿಯಿಂದ ಹೇಮುನ ತಲೆಯನ್ನು ಮುಟ್ಟುವಂತೆ ಮನವೊಲಿಸಿದ ಬೈರಮ್ ಖಾನ್ ಬಳಿಕ ಹೇಮುವನ್ನು ಗಲ್ಲಿಗೇರಿಸಿದನು!!

ದೆಹಲಿಯ ದ್ವಾರದ ಮೇಲೆ  ಅವನ ದೇಹವನ್ನು ನೇತು ಹಾಕಲಾಗಿತ್ತು. ಹೇಮುವಿನ ತಲೆಯನ್ನು ಕಾಬೂಲ್ ಗೆ ಕಳಿಸಲಾಗಿತ್ತು!ತರುವಾಯ ಇತರರ ತಲೆಗಳಿಂದ ಮಿನಾರ್ ನಿರ್ಮಿಸಲಾಯಿತು.

ಈ ಯುದ್ಧದ ಮೂಲಕ ಮೊಘಲರು ಯುದ್ಧದಲ್ಲಿ ಆನೆಗಳ ಮಹತ್ವವನ್ನು ಅರಿತುಕೊಂಡರು.

ಹೇಮಚಂದ್ರ ವಿಕ್ರಮಾದಿತ್ಯ ಸಮಾಧಿ ಸ್ಥಳ ಮಾಚರಿಯಲ್ಲಿ (ಅಳ್ವಾರ್ ಸಮೀಪ)ವಾಸಿಸುತ್ತಿದ್ದ ಹೇಮುವಿನ ಕುಟುಂಬವನ್ನು ಪಾಣಿಪತ್‌ನಲ್ಲಿ ಹೋರಾಡಿದ ಮೊಘಲ್ ಅಧಿಕಾರಿ ಪಿರ್ ಮುಹಮ್ಮದ್ ಅವರು ಸೆರೆಹಿಡಿದಿದ್ದ. ಪಿರ್ ಮುಹಮ್ಮದ್ ಅವರು ಇಸ್ಲಾಂಗೆ ಮತಾಂತರಗೊಂಡರೆ ಹೇಮು ಅವರ ಹಿರಿಯ ತಂದೆಯ ಜೀವವನ್ನು ಉಳಿಸಿಕೊಡುವುದಾಗಿ ಹೇಳಿದ!. ಮುದುಕ ನಿರಾಕರಿಸಿದಾಗ ಅವನನ್ನು ಗಲ್ಲಿಗೇರಿಸಲಾಯಿತು. ಆದಾಗ್ಯೂ, ಹೇಮುವಿನ ಪತ್ನಿತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು, 

ಭಾರತದ ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಪಾಣಿಪತ್ ನಗರದ ಸಮೀಪ ಜಿಂದ್ ರಸ್ತೆಯಲ್ಲಿರುವ ಶೋಂದಾಪುರ ಗ್ರಾಮದಲ್ಲಿ ಈಗ ಹೇಮುವಿನ ಸಮಾಧಿ ಸ್ಥಳ ಎಂದು ಕರೆಯಲ್ಪಡುವ ಸ್ಥಳವಿದೆ.ಪಾಣಿಪತ್‌ನಲ್ಲಿ ಹೇಮು ಬೆಂಬಲಿಗರು ರಕವನ್ನು ನಿರ್ಮಿಸಿದರು. ಅದು ಅವನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಸ್ಥಾಪಿತವಾಗಿದೆ.

ಹರಿಯಾಣ ರಾಜ್ಯ ಸರ್ಕಾರದಿಂದ ನಿರ್ಲಕ್ಷಿತವಾಗಿದ್ದ ಈ ಸ್ಥಳ ವನ್ನು ದುರ್ಗಾ ಆಗಿ ಪರಿವರ್ತಿಸಿ ಇದೀಗ ಮುಸ್ಲಿಮರು ಬಳಸಿಕೊಂಡಿದ್ದಾರೆ!

1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಬಾಬರ್ ಶಿಬಿರ ಮತ್ತು 1556 ರಲ್ಲಿ ಎರಡನೇ ಪಾಣಿಪತ್ ಕದನದಲ್ಲಿ ಅಕ್ಬರ್ ಶಿಬಿರವನ್ನು ರಚಿಸಿದ್ದ ಈ ಪ್ರದೇಶದ ಒಡೆತನ1990 ರವರೆಗೆ ಹರಿಯಾಣ ಎಎಸ್ಐನೊಂದಿಗೆ ಇತ್ತು. ಪ್ರದೇಶದಲ್ಲಿ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ.ಬಾಬರ್ ವಾಸವಾಗಿದ್ದಾಗ ನಿರ್ಮಿಸಲಾದ ಶಿಥಿಲಾವಸ್ಥೆಯಲ್ಲಿರುವ ಲಖೋರಿ ಇಟ್ಟಿಗಳನ್ನು ಅತಿಕ್ರಮಣ ಮಾಡಲಾಗಿದೆ.ಅಲ್ಲದೆ ಇದನ್ನೀಗ ದರ್ಗಾ ಎಂದು ಕರೆಯಲಾಗುತ್ತದೆ.

ದಾಖಲೆಗಳಲ್ಲಿರಚನೆಯನ್ನು ಪರ್ಷಿಯನ್ ಭಾಷೆಯಲ್ಲಿ ‘ಖಾಂಘಾ’ ಎಂದು ವರ್ಗೀಕರಿಸಲಾಗಿದೆ, ಇದರರ್ಥ ‘ಸೆರೈ’ ಅಥವಾ ಪ್ರಯಾಣಿಕರಿಗೆ ವಿಶ್ರಾಂತಿ ಸ್ಥಳ. ಇಂತಹ ಸೆರೈಗಳನ್ನು ಅನೇಕವೇಳೆ ಸತ್ತವರ ನೆನಪಿಗಾಗಿ ಶ್ರೀಮಂತರು ನಿರ್ಮಿಸಿದ್ದಾರೆ, ವಿಶೇಷವಾಗಿ ಹರಿಯಾಣದ ರೇವಾರಿ ಪ್ರದೇಶದಲ್ಲಿ ಇಂತಹಾ ಅನೇಕ ರಚನೆಗಳಿದ್ದು ಇವುಗಳಲ್ಲಿ ಹೇಮಚಂದ್ರನೂ ಸೇರಿದ್ದಾನೆ. ಪ್ರಯಾಣಿಕರಿಗಾಗಿ ‘ಚತ್ರ’ ಅಥವಾ ‘ವಿಶ್ರಾಂತಿ ಸ್ಥಳಗಳು’ ಎಂದು ಕರೆಯಲ್ಪಡುವ ಇಂತಹ ಹಲವಾರು ರಚನೆಗಳು ರೇವಾರಿ ಪ್ರದೇಶದಲ್ಲಿ ಇದೇ ರೀತಿಯ ವಾಸ್ತುಶಿಲ್ಪದೊಂದಿಗೆ ಕಂಡುಬರುತ್ತವೆ ಮತ್ತು ಕಳೆದ ಹಲವು ಶತಮಾನಗಳಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ಸ್ಥಳವು ಇನ್ನೂ ರಾಜ ಹೇಮಚಂದ್ರನ ತಲೆ ಇಲ್ಲದ ದೇಹವನ್ನು ಹೊಂದಿದೆ, ಆದರೆ ಇದು ದರ್ಗಾ (ಅಪರಿಚಿತ ಸೂಫಿ ಸಂತನ) ಸಮಾಧಿಯಂತೆ ಕಾಣಿಸುವಂತೆ ಪರಿವರ್ತಿತವಾಗಿದೆ.

ಅಕ್ಟೋಬರ್ 2016 ರಲ್ಲಿ, ಕೆಲವು ಸ್ಥಳೀಯರು ದರ್ಗಾದಿಂದ ಹಸಿರು ಧ್ವಜವನ್ನು ತೆಗೆದುಹಾಕಿ ಮತ್ತು ಅದನ್ನು ಕೇಸರಿ ಧ್ವಜಕ್ಕೆ ಬದಲಿಸಿದರು. ಹೇಮಚಂದ್ರ ವಿಕ್ರಮಾದಿತ್ಯನ ಪೋಸ್ಟರ್ ಗಳನ್ನು ಸಹ ಪ್ರದೇಶದಲ್ಲಿ ಹಾಕಲಾಗಿದ್ದು ಚೆನ್ನೈನಿಂದ ಬಂದ ಮೊಹಮ್ಮದ್ ನಜೀಬ್ ಅವರನ್ನು ಇಲ್ಲಿಂದ ದೂರ ಕಳಿಸುವಂತೆ ಒತ್ತಾಯಿಸಿದರು.

ಮೊಹಮ್ಮದ್ ನಜೀಬ್ ತಾವು 1987 ರಿಂದ ತದರ್ಗಾಕ್ಕೆ ಬರುತ್ತಿರುವುದಾಗಿ2002 ರಿಂದ ಆ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದುದಾಗಿ ಹೇಳುತ್ತಾರೆ. ರಾಜ ಹೇಮುವುನ ಸಮಾಧಿಯನ್ನು ಅಕ್ರಮವಾಗಿ ಅತಿಕ್ರಮಿಸಲಾಗಿದೆ ಮತ್ತು ಹಸಿರು ಬಣ್ಣ ಬಳಿಯಲಾಗಿದೆ ಎಂದು ಸ್ಥಳೀಯರು ವಾದಿಸಿದರು.

ಈವರೆಗೆ ಪೊಲೀಸರು ಯಾವ ಪ್ರಕರಣ ಸಹ ದಾಖಲಿಸಿಕೊಂಡಿಲ್ಲ.


Tuesday, January 05, 2021

ಏಕದಿನ ಕ್ರಿಕೆಟ್ ಗೆ ಸುವರ್ಣ ಸಂಭ್ರಮ! 50 ವರ್ಷಗಳ ಹಿಂದೆ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆದಿತ್ತು 'ಜೋಕ್ ಮ್ಯಾಚ್'

ಟಿ-20ನಂತಹಾ ಕ್ರಿಕೆಟ್ ಬಂದಿದ್ದರೂ ಸಹ ತನ್ನದೇ ಛಾಪು ಹೊಂದಿರುವ ಐವತ್ತು ಓವರ್ ಗಳ ಏಕದಿನ ಕ್ರಿಕೆಟ್ ಗೆ ಇಂದು ಸುವರ್ಣ ಸಂಭ್ರಮ. 1971ರ ಜನವರಿ 5ರಂದು ಏಕದಿನ ಮಾದರಿಯ ಅಂತರಾಷ್ಟ್ರೀಯ ಪಂದ್ಯ ಜನ್ಮ ತಾಳಿತ್ತು. 


ಏಕದಿನ ಕ್ರಿಕೆಟ್ ಜನ್ಮದಾಳಲು ಕಾರಣನಾದ ವರುಣ!

ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳು ಮೊದಲ ಏಕದಿನ ಪಂದ್ಯವನ್ನಾಡಿದ್ದವು. ಆಶಸ್ ಸರಣಿಯಲ್ಲಿ ಮೂರನೇ ದಿನದ ಟೆಸ್ಟ್ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಒಂದು ಮೀಸಲು ದಿನವನ್ನು ಇಡಲು ನಿರ್ಧರಿಸಿದಾಗ ಏಕದಿನ ಕ್ರಿಕೆಟ್ ಜನ್ಮ ಪಡೆದಿತ್ತು. ಅಂದಿನಿಂದ ಡಿಸೆಂಬರ್ 2 ರಂದು ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆದ ಇತ್ತೀಚಿನ ಅಂತರರಾಷ್ಟ್ರೀಯ ಪಂದ್ಯ 4,267 ನೇ ಸ್ಥಾನ ಹೊಂದಿದೆ. 

ಆದರೆ ಅಂದು 1970-71ರ ಆಶಸ್ ಪ್ರವಾಸದ ವ್ಯವಸ್ಥಾಪಕ ಡೇವ್ ಕ್ಲಾರ್ಕ್ಇಲಿಂಗ್ವರ್ತ್ ಟೀಂಗೆ ಎಂಸಿಜಿಯಲ್ಲಿ 40 ಓವರ್‌ಗಳ ಪೂರ್ವಸಿದ್ಧತೆಯಿಲ್ಲದ ಪಂದ್ಯವೊಂದರಲ್ಲಿ ಭಾಗವಹಿಸಬೇಕೆಂದು ಹೇಳಿದಾಗ ಅವರಿಗೆ ಸಹ ಇದು ಮುಂದೊಂದು ದಿನ ಮಹತ್ವದ ಸರಣಿಗಳ ಹುಟ್ಟಿಗೆ ಕಾರಣವಾಗುತ್ತದೆ ಎನ್ನುವುದು ಗೊತ್ತಿರಲಿಲ್ಲ!

40-40 ಓವರ್ ಏಕದಿನ

ಪ್ರಸ್ತುತ, ಏಕದಿನ ಪಂದ್ಯಗಳು 50-50 ಓವರ್‌ಗಳು, ಆದರೆ ಮೊದಲ ಏಕದಿನ 40-40 ಓವರ್‌ಗಳದ್ದಾಗಿತ್ತು.ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿತು. 82 ರನ್ ಗಳಿಸಿದ ಇಂಗ್ಲೆಂಡ್‌ನ ಜಾನ್ ಎಡ್ರಿಚ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪಂದ್ಯಶ್ರೇಷ್ಠ ಎನಿಸಿಕೊಂಡರು.. ಅವರಿಗೆ 90 ಫೌಂಡ್  ಬಹುಮಾನ ನೀಡಲಾಯಿತು. ಈ ಐತಿಹಾಸಿಕ ಘಟನೆಗೆ 46,000 ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯದ ನಂತರ, ಸರ್ ಡಾನ್ ಬ್ರಾಡ್ಮನ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ, "ಇಂದು ನೀವು ಐತಿಹಾಸಿಕ ಘಟನೆಯನ್ನು ನೋಡಿದ್ದೀರಿ" ಎಂದಿದ್ದರು.

ನವೆಂಬರ್ 1970 ರಲ್ಲಿ, ಆಶಸ್ ಸರಣಿಗಾಗಿ ಇಂಗ್ಲೆಂಡ್ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತು. ಆ ಸಮಯದಲ್ಲಿ, ಆಶಸ್ ಸರಣಿಯಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಲಾಯಿತು. ಮೊದಲ ಪಂದ್ಯವನ್ನು ಬ್ರಿಸ್ಬೇನ್‌ನಲ್ಲಿ ಆಡಲಾಯಿತು, ಅದು ಡ್ರಾದಲ್ಲಿ ಕೊನೆಗೊಂಡಿತು. ಎರಡನೇ ಪಂದ್ಯವು ಪರ್ತ್‌ನಲ್ಲಿ ನಡೆಯಿತು ಮತ್ತು ಇದು ಕೂಡ ಡ್ರಾ ಆಗಿತ್ತು.ಈಗ ಮೆಲ್ಬೋರ್ನ್‌ನಲ್ಲಿ ಮೂರನೇ ಟೆಸ್ಟ್ ಆಡುವ ಸಮಯದಲ್ಲಿ . ಪಂದ್ಯವು ಡಿಸೆಂಬರ್ 29, 1970 ರಂದು ಪ್ರಾರಂಭವಾಗಬೇಕಿತ್ತು. ಆದರೆ ಭಾರೀ ಮಳೆ ಆಟದ ಮೊದಲ ಮೂರು ದಿನಗಳನ್ನು ವ್ಯರ್ಥ ಮಾಡಿತು. ಆಗ ರೆಫರಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಆದರೆ ಆ ದಿನಗಳಲ್ಲಿ ಕ್ರಿಕೆಟ್ ಪಂದ್ಯಗಳಿಗೆ ವಿಮೆ ಮಾಡಿಸಲಾಗುತ್ತಿರಲಿಲ್ಲ.ಈಗಾಗಲೇ, ಪಂದ್ಯದ ಮೊದಲ ಮೂರು ದಿನಗಳು ಮಳೆಯಿಂದ ವ್ಯರ್ಥವಾಗಿದ್ದರಿಂದ ಸಂಘಟಕರಿಗೆ ದೊಡ್ಡ ನಷ್ಟವಾಗಿತ್ತು. ಮೆಲ್ಬೋರ್ನ್ ಟೆಸ್ಟ್ ನ ಟ್ಕೆಟ್ ಗಳನ್ನು ಪ್ರೇಕ್ಷಕರಿಗೆ ಹಿಂದಿರುಗಿಸಬೇಕಾಗಿತ್ತು. ಸರಣಿಯ ಕೊನೆಯಲ್ಲಿ ಏಳನೇ ಟೆಸ್ಟ್ ಆಡಲು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದವು. ಆದರೆ ಈ ಹೆಚ್ಚುವರಿ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಆಟಗಾರರು ಹೆಚ್ಚುವರಿ ಹಣವನ್ನು ಕೋರಿದ್ದರು. ಏಕೆಂದರೆ ಆ ಸಮಯ ಕ್ರಿಕೆಟ್‌ನಲ್ಲಿ ಪ್ರಾಯೋಜಕರು, ಒಪ್ಪಂದಗಳು ಮತ್ತು ಹಣದ ಹೊಳೆ ಹರಿಯುತ್ತಿರಲಿಲ್ಲ./ಆ ಸಮಯದಲ್ಲಿ, ಕ್ರಿಕೆಟಿಗರು ಪ್ರತಿದಿನ ಪಂದ್ಯಕ್ಕೆ ಹಣ ಪಡೆಯುತ್ತಿದ್ದರು.

ಕೇವಲ  5,000 ಫೌಂಡ್ ನೀಡಿ ಪ್ರಾಯೋಜಕತ್ವ ಪಡೆದ ತಂಬಾಕು ಕಂಪನಿ!

ನಂತರ, ಮೆಲ್ಬೋರ್ನ್‌ನ ಸ್ಥಳೀಯರ ಮನರಂಜನೆ ಮತ್ತು ಎರಡೂ ತಂಡಗಳ ಆಟಗಾರರ ಆರ್ಥಿಕ ಲಾಭವನ್ನು ಗಮನದಲ್ಲಿಟ್ಟುಕೊಂಡು ತಂಡಗಳ ನಡುವೆ 40-40 ಓವರ್‌ಗಳ ಏಕದಿನ ಪಂದ್ಯವನ್ನು ನಡೆಸಲು ಎರಡೂ ದೇಶಗಳ ಅಧಿಕಾರಿಗಳು ನಿರ್ಧರಿಸಿದರು. ಆದರೆ ಈ ಪಂದ್ಯಕ್ಕೆ ಪ್ರಾಯೋಜಕರನ್ನು ಹುಡುಕುವುದು ಕಷ್ಟದ ಕೆಲಸವಾಗಿತ್ತು. ಅಂತಿಮವಾಗಿ, ತಂಬಾಕು ಕಂಪನಿಯಾದ ರೋಥ್‌ಮ್ಯಾನ್ಸ್ ಪಂದ್ಯವನ್ನು ಕೇವಲ 5,000 ಫೌಂಡ್ ಗೆಪ್ರಾಯೋಜಿಸಲು ಒಪ್ಪಿಕೊಂಡರು. ಅದರಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿಜೇತರಿಗೆ 90 ಫೌಂಡ್ ನಿಗದಿಪಡಿಸಲಾಯಿತು.ವೆಚ್ಚವನ್ನು ಸರಿದೂಗಿಸಲು ಕಂಪನಿಯು ಪಂದ್ಯಕ್ಕಾಗಿ 20,000 ಟಿಕೆಟ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿತ್ತು.

ಇಂಗ್ಲೆಂಡ್ -11 ಮತ್ತು ಆಸ್ಟ್ರೇಲಿಯಾ -11 ಎಂಬ ಎರಡು ತಂಡಗಳು ಮೈದಾನದಲ್ಲಿದ್ದವು. ಟಾಸ್ ಗೆದ್ದ ಆಸ್ಟ್ರೇಲಿಯಾ -11 ನಾಯಕ ಬಿಲ್ ಲೌರಿ ಇಂಗ್ಲೆಂಡ್ -11 ನಾಯಕ ರೇ ಇಲಿಂಗ್ವರ್ತ್ ಅವರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಇಂಗ್ಲೆಂಡ್ -11 39.4 ಓವರ್‌ಗಳಲ್ಲಿ 190 ಕ್ಕೆ ಆಲೌಟ್ ಆಗಿತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜಾನ್ ಆಂಡ್ರಿಚ್ 82 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದ್ದರು.ಆಸ್ಟ್ರೇಲಿಯಾ -11 ವಿರುದ್ಧ ಜಯಗಳಿಸುವ ಗುರಿ 40 ಓವರ್‌ಗಳಲ್ಲಿ 191 ರನ್ ಆಗಿತ್ತು. . ಇಯಾನ್ ಚಾಪೆಲ್ ಅವರ 60 ರನ್ 0 ಆಸ್ಟ್ರೇಲಿಯಾ -11 ಐದು ವಿಕೆಟ್ ನಷ್ಟಕ್ಕೆ ಸುಲಭವಾಗಿ ದಾಟಲು ನೆರವಾಯಿತು.

ಮೊದಲ ಪಂದ್ಯ ವೀಕ್ಷಿಸಿದ್ದು 46,000  ಮಂದಿ!

ಪ್ರಾಯೋಜಕ ಕಂಪನಿ ರಾಥ್‌ಮ್ಯಾನ್ಸ್ ಪಂದ್ಯವನ್ನು ವೀಕ್ಷಿಸಲು 20,000 ಪ್ರೇಕ್ಷಕರನ್ನು ನಿರೀಕ್ಷಿಸಿತ್ತು.ಆದರೆ ಪಂದ್ಯವನ್ನು ವೀಕ್ಷಿಸಲು 46,000 ಕ್ಕೂ ಹೆಚ್ಚು ಪ್ರೇಕ್ಷಕರು ಬಂದರು. ಇದು ಕಂಪನಿಯು ಹಣವನ್ನು ಮರುಪಡೆಯಲು ಸಹಾಯ ಮಾಡುವುದಲ್ಲದೆ ದೊಡ್ಡ ಲಾಭವನ್ನು ಗಳಿಸಿಕೊಳ್ಲಲು ಕಾರಣವಾಗಿತ್ತು.ಪಂದ್ಯದ ಯಶಸ್ಸಿನ ನಂತರ, ಐಸಿಸಿ ಇದನ್ನು ಅಂತರರಾಷ್ಟ್ರೀಯ ಪಂದ್ಯವೆಂದು ಅನುಮೋದಿಸಿತು. ಏಕದಿನ ಕ್ರಿಕೆಟ್ ಪಂದ್ಯ ಅಧಿಕೃತವಾಗಿ ಪ್ರಾರಂಭವಾಯಿತು!!

ಈ ನನ್ನ ಲೇಖನವು 'ಕನ್ನಡಪ್ರಭ ಡಾಟ್ ಕಾಂ' ನಲ್ಲಿ "ಕ್ರಿಕೆಟ್ ಪಾಲಿನ ಐತಿಹಾಸಿಕ ದಿನದ ಹಿನ್ನೆಲೆಯಲ್ಲಿ " ಪ್ರಕಟವಾಗಿದೆ