ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ(ಎಎಸ್‌ಐ) ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪ ತಮಿನಾಳ ಗ್ರಾಮದಲ್ಲಿರುವ ಗುಡ್ಡದಲ್ಲಿ 2.5 ಲಕ್ಷ ವರ್ಷಗಳಷ್ಟು ಹಳೆಯದಾದ ಪ್ಯಾಲಿಯೊಲಿಥಿಕ್ (ಹಳೆಯ ಶಿಲಾಯುಗ) ಕಲ್ಲಿನ ಉಪಕರಣಗಳ ಉತ್ಪಾದನಾ ಘಟಕವನ್ನು ಪತ್ತೆಹಚ್ಚಿದೆ.
ನಾಗ್ಪುರದ ಪ್ರಿಹಿಸ್ಟೋರಿಕ್ ಶಾಖೆಯ ನಾಲ್ಕು ಸದಸ್ಯರ ತಂಡವು ತಮಿನಾಳ ಮತ್ತು ಕಟಾರ್ಕಿ ಗ್ರಾಮದ ನಡುವೆ ಇರುವ ರಂಗನಾಥ ಬೆಟ್ಟದಲ್ಲಿ ಉತ್ಖನನ ನಡೆಸುತ್ತಿದೆ.
"ಮಲಪ್ರಭಾ ನದಿಯ ದಡದಲ್ಲಿರುವ ಸಣ್ಣ ಬೆಟ್ಟದಲ್ಲಿ, ಶಿಲಾಯುಗದ ಸಮಯದಲ್ಲಿ ಬಳಕೆಯಲ್ಲಿರುವ ವಿಭಿನ್ನ ಕಲ್ಲಿನ ಉಪಕರಣಗಳನ್ನು ನಾವು ಪತ್ತೆಹಚ್ಚಿದ್ದೇವೆ." ಎಂದು ಪುರಾತತ್ವಶಾಸ್ತ್ರಜ್ಞ ಅಧೀಕ್ಷಕ ರಮೇಶ್ ಮೂಲಿಮನಿ ಹೇಳಿದರು. “19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತದ ಇತಿಹಾಸಪೂರ್ವ ಸ್ಥಳಗಳ ಭೂವೈಜ್ಞಾನಿಕ ಸಮೀಕ್ಷೆಗಳನ್ನು ನಡೆಸಿದ ಭಾರತೀಯ ಇತಿಹಾಸಪೂರ್ವ ಮತ್ತು ಭೂವಿಜ್ಞಾನಿ ರಾಬರ್ಟ್ ಬ್ರೂಸ್ ಫೂಟೆ ಸೇರಿದಂತೆ ಹಲವಾರು ವಿದ್ವಾಂಸರು ಕ್ಯಾದಾ, ಕಟಾರ್ಕಿ ಮತ್ತು ಬಾದಾಮಿಯ ಇತರ ಹಳ್ಳಿಗಳಲ್ಲಿ 2 ಲಕ್ಷ ವರ್ಷ ಹಳೆಯ ಕಲ್ಲಿನ ಉಪಕರಣಗಳು, ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಆದಾಗ್ಯೂ, ಹಳೆ ಶಿಲಾಯುಗದ ಕಲ್ಲು ಉಪಕರಣ ಉತ್ಪಾದನಾ ಘಟಕದ ಸ್ಥಳವನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದರು. ಈಗ,ನಾವು ಇದರ ಬಗೆಗೆ ಕಂಡುಕೊಂಡಿದ್ದೇವೆ, ಇದು ಸುಮಾರು 2.5 ಲಕ್ಷ ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ. ” ಅವರು ವಿವರಿಸಿದರು.
ಕಲ್ಲಿನ ಉಪಕರಣಗಳಲ್ಲಿ ರಂಗನಾಥ ಬೆಟ್ಟದ ವಿವಿಧ ಆಯುಧಗಳು, ಕೈಕೊಡಲಿಗಳು, ಸೇರಿವೆ. ಉತ್ಖನನದ ನಂತರ, ಹೆಚ್ಚಿನ ಪರಿಶೋಧನೆ, ಸಂಶೋಧನೆಗಳ ದಾಖಲಾತಿಗಾಗಿ ಅನುಮತಿ ಕೋರಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. “ಇವುಗಳು ಅಮೂಲ್ಯಮತ್ತು ಅಪರೂಪದ ಕಲ್ಲು ಉಪಕರಣಗಳ ಉತ್ಪಾದನಾ ಕೈಗಾರಿಕೆ ಸ್ಥಳ.ಇವುಗಳು ಈ ಮಾನವ ಗುಂಪುಗಳು ತಮ್ಮ ದೈನಂದಿನ ಜೀವನದಲ್ಲಿ ಬಳಸಿದ ವಸ್ತುಗಳ ಉತ್ಪಾದನೆಯಲ್ಲಿ ಹೆಚ್ಚಿನ ನಿಖರತೆ ಮೂಡಿಸಲು ಕಾರಣವಾಗಲಿದೆ. ಈ ಪ್ರದೇಶದಿಂದ ಪತ್ತೆಯಾದ ಕಲ್ಲಿನ ಉಪಕರಣಗಳ ದಾಖಲೆಯು ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತಿಹಾಸಪೂರ್ವ ಸಮುದಾಯಗಳ ಸಂಖ್ಯಾತ್ಮಕ ಸಾಂದ್ರತೆಯನ್ನು ಸೂಚಿಸುತ್ತದೆ. ಈ ಶೋಧನೆಯ ಬಗ್ಗೆ ನಾವು ಸರಿಯಾದ ದಾಖಲಾತಿಗಳನ್ನು ಮಾಡುವತ್ತ ಗಮನ ಹರಿಸಿದ್ದೇವೆ" ಮೂಲಿಮನಿ ಹೇಳಿದ್ದಾರೆ.
ಬಾದಾಮಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಉತ್ಖನನದ ಅಗತ್ಯವನ್ನು ಒತ್ತಿಹೇಳುತ್ತಾ, ಪುರಾತತ್ತ್ವ ಶಾಸ್ತ್ರದ ತಜ್ಞ ಮಂಜುನಾಥ ಸುಳ್ಳೊಳ್ಳಿ “ಈ ಪ್ರದೇಶದಲ್ಲಿ ನೆಲೆಗೊಂಡಿರುವ ಗುಡ್ಡಗಾಡಿನಲ್ಲಿ ಇನ್ನೂ ಹಲವಾರು ಪ್ರಾಚೀನ ಕಲ್ಲು ಉಪಕರಣ ಉತ್ಪಾದನಾ ಘಟಕಗಳಿವೆ. ಎಲ್ಲಾ ಹಳೆ ಶಿಲಾಯುಗದ ಕಲ್ಲು ಉಪಕರಣ ಕೈಗಾರಿಕೆಗಳನ್ನು ಅನ್ವೇಷಿಸುವುದು ಇಂದಿನ ಅಗತ್ಯವಾಗಿದೆ. ಇದಲ್ಲದೆ, ಬಾದಾಮಿಯಲ್ಲಿರುವ ಬೆಟ್ಟಗಳಲ್ಲಿ ಪ್ರಾಚೀನ ಜನರು ಬಳಸುತ್ತಿದ್ದ ನೂರಾರು ಗುಹೆಗಳು ಮತ್ತು ಆಶ್ರಯ ತಾಣಗಳಿದೆ."
"ಆದಾಗ್ಯೂ, ಈ ಪ್ರದೇಶದಲ್ಲಿ ಮಾನವ ವಿಕಾಸ ಎಂದು ಆಗಿದೆ ಎನ್ನುವ ಬಗ್ಗೆ ನಿಖರ ಸಮಯದ ದಾಕಲೆ ಇಲ್ಲ, ಇಡೀ ಗುಡ್ಡವು ಬಂಡೆಗಳಿಂದ ಕೂಡಿದೆ ಮತ್ತು ಇಡೀ ಗಿರಿಶೃಂಗವು ಶಿಲಾಮಯವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಉತ್ಖನನ ಮತ್ತು ದಾಖಲಾತಿಗಳನ್ನು ನಡೆಸಿದರೆ, ನಾವು ಮುಂದಿನ ಪೀಳಿಗೆಗೆಶ್ರೀಮಂತ ಪರಂಪರೆಯೊಂದರ ಪರಿಚಯ ಮಾಡಿಸಬಹುದು." ಎಂದು ಎಂದು ಬಾಗಲಕೋಟೆ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಸುಳ್ಳೊಳ್ಳಿ ಹೇಳಿದ್ದಾರೆ.
ಉತ್ಖನನದ ಭಾಗವಾಗಿದ್ದ ಇತರ ಎಎಸ್‌ಐ ಅಧಿಕಾರಿಗಳು ಎಂದರೆ ಡಾ. ಗಜಾನನ ಕೆ., ದೇವೇಂದ್ರ ಕೆ. ಹಾಗೂ ನರಸಿಲಾಲ್ ಎಂ. ಅವರಾಗಿದ್ದಾರೆ.
No comments:
Post a Comment