"ಪ್ರಕಾಶಮಾನತೆ, ಸ್ಪಷ್ಟತೆ" ಯ ಸಂಸ್ಕೃತ ಪದ "ಶುಕ್ರ"ದ ಅರ್ಥ, ಈತ ಭೃಗು ಸಂಹಿತೆ ರಚನೆಗಾರ ಭೃಗುವಿನ ಪುತ್ರ. ದೈತ್ಯರ ಗುರು. ನವಗ್ರಹಗಳಲ್ಲಿ ಒಂದಾದ ಶುಕ್ರ ಗ್ರಹದೊಂದಿಗೆ ಗುರುತಿಸಲ್ಪಡುತ್ತದೆ. ಶುಕ್ರವಾರದ ದಿನ ಈ ಶುಕ್ರ ಎಂಬ ಹೆಸರಿನೊಂದಿಗೆ ಗುರುತಿಸಲಾಗುತ್ತದೆ. ಶುಕ್ರನನ್ನು ಪುರಾಣಗಳಲ್ಲಿ ನಾನಾ ಬಗೆಯಲ್ಲಿ ಚಿತ್ರಿಸಲಾಗಿದೆ. ಒಂಟೆ, ಕುದುರೆ ಅಥವಾ ಮೊಸಳೆಯ ಮೇಲೆ ಕುಳಿತಂತೆ ತೋರಿಸಲಾಗಿದೆ. ಆತನ ಕೈನಲ್ಲಿ ಕೋಲು, ಮಣಿಗಳು ಮತ್ತು ಕಮಲ ಮತ್ತು ಕೆಲವೊಮ್ಮೆ ಬಿಲ್ಲು ಮತ್ತು ಬಾಣವನ್ನು ಕಾಣಬಹುದು.
ಭಾರತೀಯ
ಭಾಷೆಗಳಲ್ಲಿ ಶುಕ್ರ ಎಂದರೆ ಶುಕ್ರವಾರದ
ದಿನದ ಹೆಸರು, ಮತ್ತುಸೌರಮಂಡಲದ ಒಂದು ಗ್ರಹದ ಹೆಸರೂ ಆಗಿದೆ. ಭೃಗುವಿನ ಪುತ್ರ(ಭೃಗು ಸಂಹಿತೆಯ ರಚನೆಗಾರ) ಹಾಗೂ ಅಸುರರ
ಗುರು,. ಭಗವದ್ಗೀತೆಯಲ್ಲಿ ಅವನನ್ನು ಒಬ್ಬ ಪೂಜಕನಾಗಿ ಹೇಳಲಾಗಿದೆ. ಅಲ್ಲಿ ಕೃಷ್ಣನು ಅರ್ಜುನನಿಗೆ ಕವಿಗಳಲ್ಲಿ ಅವನು "ಉಶಾನಸ್" ಎಂದು ಹೇಳುತ್ತಾನೆ. ಇದಲ್ಲದೆ ಶುಕ್ರ ಅಥವಾ ಶುಕ್ರಾಚಾರ್ಯನಿಗೆ ಈ ಮುಂದಿನ ಹೆಸರುಗಳಿದೆ-\
ಅಸ್ಪುಜಿತ,ಕವಿ/ಕಾವ್ಯಾ, ಮಘಾಭವ, ದಿಶ್ನ್ಯಾ, ಭಾರ್ಗವ ಇತ್ಯಾದಿ...
ಶುಕ್ರಾಚಾರ್ಯ
ಭೃಗು ಹಾಗೂ ಖ್ಯಾತಿಯ ಪುತ್ರ. ಸೃಷ್ಟಿಕರ್ತ ಬ್ರಹ್ಮನ ಮೊಮ್ಮಗ. ಬಾಲಕನಾಗಿದ್ದಾಗ ಶುಕ್ರ ಮತ್ತು ಬೃಹಸ್ಪತಿ ಒಂದೇ ಗುರುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಗುರು ಅಂಗೀರಸ ಬೃಹಸ್ಪತಿಯ ತಂದೆಯೂ ಆಗಿದ್ದರು. ಬೃಹಸ್ಪತಿಗಿಂತ ಶುಕ್ರನು ಹೆಚ್ಚಿನ ಜ್ಞಾನ ಹೊಂದಿದ್ದನು., ಬುದ್ದಿವಂತನಾಗಿದ್ದನು. ಮೇಲಾಗಿ ಮೃತಪಟ್ಟ ಜನರನ್ನು ಪುನಃ ಜೀವಂತವಾಗಿಸುವ ವಿದ್ಯೆ ಇವನಿಗೆ ಒಲಿದಿತ್ತು!! ಸಾವನ್ನು ಗೆದ್ದವನೆಂಬ ಬಿರುದು ಹೊಂದಿದ ಶಿವನಿಂದ ಈ
ಅಪರೂಪದ ವಿಜ್ಞಾನವನ್ನು ಶುಕ್ರ ತಮ್ಮದಾಗಿಸಿಕೊಂಡಿದ್ದನು.
ದೇವಿ
ಭಾಗವತ ಪುರಾಣವು ಶುಕ್ರನ ತಾಯಿಯನ್ನು ಕಾವ್ಯಮಾತ ಎಂದು ಉಲ್ಲೇಖಿಸುತ್ತದೆ. ಸ್ತ್ರೀ ಸ್ವಭಾವದ ಶುಕ್ರ ಬ್ರಾಹ್ಮಣ ಗ್ರಹ. ಸ್ವಾತಿ ನಕ್ಷತ್ರ ಆರೋಹಣದಲ್ಲಿದ್ದಾಗ ಶ್ರಾವಣ ಶುದ್ಧ ಅಷ್ಟಮಿಯ ಪಾರ್ಥಿವಾ ವರ್ಷದ ಶುಕ್ರವಾರ ಜನಿಸಿದ!!!
ಶುಕ್ರನು
ಋಷಿ ಅಂಗೀರಸನಿಂದ ವೇದಾದ್ಯಯನ ಮಾಡಿದ್ದನು. ಆದರೆ
ಅಂಗೀರಸ ತನ್ನ
ಮಗ ಬೃಹಸ್ಪತಿಗೆ ಒಲವು ತೋರಿದ್ದರಿಂದ ಶುಕ್ರನಿಗೆ ಅಡ್ಡಿಯಾಗಿತ್ತು. ಆ ನಂತರ ಅವನು
ಗೌತಮ ಋಷಿಯ ಬಳಿ ಹೋಗಿ ಅಧ್ಯಯನಕ್ಕೆ ತೊಡಗಿದನು.
ಕೆಲ
ಕಾಲದ ನಂತರ ಶುಕ್ರಾಚಾರ್ಯ ಶಿವನ ಕುರಿತು ಘೋರ ತಪಸ್ಸನ್ನು ಆಚರಿಸಿ ಸಂಜೀವನಿ ಮಂತ್ರದ ಉಪದೇಶ ಹೊಂದಿದನು. ಶುಕ್ರಾಚಾರ್ಯನು ಪ್ರಿಯವೃತನ ಪುತ್ರಿ ಊರ್ಜಸ್ವತಿಯನ್ನು ವಿವಾಹವಾದನು. ಅವರಿಗೆ ಚಂಡ, ಅಕರ್ಮ, ಸಂದ, ತ್ವಸ್ಥರ, ಧರಾತ್ರಾ ಎಂಬ ಐವರು ಗಂಡು ಮಕ್ಕಳೂ ಇನ್ನೋರ್ವ ಪತ್ನಿ ದೇವರಾಜ ಇಂದ್ರನ ಪುತ್ರಿ ಜಯಂತಿಯಿಂದ ದೇವಯಾನಿ ಎಂಬ ಪುತ್ರಿಯೂ ಇದ್ದರು ಇವರ ಮಕ್ಕಳ ಪೈಕಿ ಅಕರ್ಮ ಹಾಗೂ ಸಂದ ದೈತ್ಯರಾಜ ಹಿರಣ್ಯಕಷಿಪುವಿನ ಸಲಹೆಗಾರರಾಗಿದ್ದರು!!
ಇನ್ನು
ದೇವಯಾನಿ ಪಾಂಡವ-ಕೌರವರ ಪೂರ್ವಜ ಯಯಾತಿಯ ಪತ್ನಿ. ಈಕೆಗೆ ಯದು, ತುರ್ವಸು ಎಂಬಿಬ್ಬರು ಮಕ್ಕಳಿದ್ದರು. ಈ ಯದು ಮುಂದೆ
ಯದುವಂಶದ ಮೂಲ ಪುರುಷನಾದ. ಯಾದವ ಕುಲದ ಪ್ರವರ್ತಕನಾದ. ಇದೇ ವಂಶದಲ್ಲಿ ವಿಷ್ಣು ಶ್ರೀಕೃಷ್ಣನಾಗಿ ಜನಿಸಿದ್ದ!!! ಕೃಷ್ಣ ಶುಕ್ರಾಚಾರ್ಯನ ವಂಶದಿಂದ ಬಂದವನು!!
ಈ
ಅವಧಿಯಲ್ಲಿ ಬೃಹಸ್ಪತಿ ದೇವತೆಗಳ ಗುರುಗಳಾದರು. ವಿಷ್ಣು ತಾನು
ಕೊಲ್ಲಬೇಕೆಂದಿದ್ದ ಕೆಲವು
ಅಸುರರಿಗೆ ಆಶ್ರಯ ನೀಡಿದ್ದರಿಂದ ಶುಕ್ರಾಚಾರ್ಯನ ತಾಯಿಯನ್ನು ವಿಷ್ಣು ಕೊಂದು ಹಾಕಿದನು!!! ಇದು ಶುಕ್ರಾಚಾರ್ಯನಿಗೆ ವಿಷ್ಣುವಿನ ಮೇಲೆ ದ್ವೇಷ ಮೂಡಲು ಕಾರಣವಾಗಿತ್ತು, ಹಾಗೂ ತಾವು ವಿಷ್ಣುವಿನ ವಿರೋಧಿಗಳಾದ ಅಸುರರ ಗುರುಗಳಾಗಲು ಅವರನ್ನು
ಪ್ರೇರೇಪಿಸಿತು. ದೇವತೆಗಳ ವಿರುದ್ಧ ಜಯ ಸಾಧಿಸಲು ಶುಕ್ರಾಚಾರ್ಯ
ಅಸುರರಿಗೆ, ದಾನವರಿಗೆ ಸಹಾಯ ಮಾಡಿದ್ದನು. ಸತ್ತ ಮತ್ತು ಗಾಯಗೊಂಡವರನ್ನು ಶುಕ್ರನು
ತಾನು ಕಂಡುಕೊಂಡಿದ್ದ ಸಂಜೀವಿನಿ ವಿದ್ಯೆಯಿಂದ ಪುನರುಜ್ಜೀವನಗೊಳಿಸುತ್ತಿದ್ದನು.
ವಾಮನ
ರೂಪಿ ವಿಷ್ಣುವಿನಿಂದ ಒಂದು ಕಣ್ಣನ್ನು ಕಳೆದುಕೊಂಡ ಶುಕ್ರ!!!
ಪುರಾಣದಲ್ಲಿ
ಬರುವ ವಾಮನ-ಮಹಾಬಲಿಯ ಕಥೆಯ ಬಗ್ಗೆ ಈ ಹಿಂದಿನ ಬ್ಲಾಗ್
ನಲ್ಲಿ ವಿವರಿಸಿದ್ದೇನೆ. ಹಾಗೆ ಕಶ್ಯಪ ಕುಲದ ವಾಮನ ಮಹಾಬಲಿ ತಾನು ಯಾಗ ನಡೆಸುತ್ತಿದ್ದಾಗ ಅವನಿಂದ ದಾನ ಪಡೆಯಲು ಆಗಮಿಸುತ್ತಾನೆ. ಆ ವೇಳೆ ಹಿರಣ್ಯಕಷಿಪುವಿನ
ಮರಿಮಗ, ಪ್ರಹ್ಲಾದನ ಮೊಮ್ಮಗನಾಗಿದ್ದ ಮಹಾಬಲಿಗೆ ಶುಕ್ರಾಚಾರ್ಯ ಗುರು, ಮಾರ್ಗದರ್ಶಕರಾಗಿರುತ್ತಾರೆ.
ವಾಮನನ
ಬೇಡಿಕೆಗೆ ಬಲಿ ಸಮ್ಮತಿಸಿದಾಗ ಶುಕ್ರಾಚಾರ್ಯ ಬಲಿಯನ್ನು ದಾನ ನೀಡಬೇಡ ಎಂದು ತಡೆದಿದ್ದ. ಆದರೆ ಮಹಾಬಲಿ ತಾನು ವಚನ ಭಂಗ ಮಾಡಲಾರೆ ಎಂದಾಗ ಶುಕ್ರಾಚಾರ್ಯ ತಮ್ಮ ಯೋಗಶಕ್ತಿಯಿಂದ ಸೂಕ್ಷ್ಮದೇಹವನ್ನು ತಾಳಿ ದಾನಕ್ಕೆ ನೀರು ಬಿಡಬೇಕಾದ ಕಮಂಡಲುವಿನಲ್ಲಿ ಕುಳಿತುಬಿಟ್ಟ. ಆಗ
ಬಲಿ ದಾನ ನೀಡಬೇಕಾಗಿ ಬಂದಾಗ ಕಮಂಡಲುವಿನಿಂದ ಒಂದು ಹನಿ ನೀರೂ ಚೆಲ್ಲಲಿಲ್ಲ. ಆ ವೇಳೆ ವಾಮನ
ಕಮಂಡಲದಲ್ಲಿ ಶುಕ್ರಾಚಾರ್ಯನಿದ್ದದ್ದನ್ನು ಅರಿತು ದರ್ಭೆಯಿಂದ ಕಮಂಡಲುವಿನೊಳಕ್ಕೆ ಚುಚ್ಚಿದ. ಹಾಗೆ ಶುಕ್ರಾಚಾರ್ಯ ಒಂದು ಕಣ್ಣನ್ನು ಕಳೆದುಕೊಂಡ!!! ಇತ್ತ
ವಾಮನ ತನ್ನ ದಾನವಾದ ಮೂರು ಬಾಗದ ಭೂಮಿ ಪಡೆದು ಮಹಾಬಲಿಯನ್ನು ಪಾತಾಳಕ್ಕೆ (ದಕ್ಷಿಣ ಅಮೆರಿಕಾ) ಕಳಿಸಿದ.
ಕಚ-ದೇವಯಾನಿ ವೃತ್ತಾಂತ
ಇನ್ನು
ದೇವಯಾನಿ ಶುಕ್ರಾಚಾರ್ಯನ ಮಗಳು ಆಕೆ ಬೃಹಸ್ಪತಿಯ ಮಗ ಕಚನನ್ನು ಮದುವೆಯಾಗಲು
ಬಯಸಿದ್ದಳು. ಶುಕ್ರಾಚಾರ್ಯರಿಂದ ಸಂಜೀವಿನಿ ವಿದ್ಯೆ ಕಲಿತು ಬರಲು ಕಚನನ್ನು ದೇವತೆಗಳು ಕಳಿಸಿದ್ದರು. ಆ ಸಮಯದಲ್ಲಿ ಕಚನನ್ನು
ಕಂಡ ದೇವಯಾನಿ ಅವನಲ್ಲಿ ಅನುರಕ್ತಳಾದಳು. ಆದರೆ ಕಚ ತಾನು ಬ್ರಹ್ಮಚಾರಿ,
ಮೇಲಾಗಿ ಗುರುಪುತ್ರಿಯಾದ ನಿನ್ನನ್ನು ವಿವಾಹವಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ! ಆದರೆ ದೇವಯಾನಿ ಮತ್ತೆ ಮತ್ತೆ ಒತ್ತಾಯಿಸಿದಾಗ ಕೋಪಗೊಂಡ ಕಚನು "ನಿನಗೆ ಬ್ರಾಹ್ಮಣರನ್ನು ವಿವಾಹವಾಗುವ ಯೋಗವಿಲ್ಲದಂತಾಗಲಿ" ಎಂದು ಶಪಿಸಿದ್ದ!(ಇದರಿಂದ ಮುಂದೆ ದೇವಯಾನಿ ಕ್ಷತ್ರಿಯರಾಜ ಯಯಾತಿಯ ಪತ್ನಿಯಾಗುತ್ತಾಳೆ. ಆ ಕಥೆ ನನ್ನ
ಹಿಂದಿನ ಬ್ಲಾಗ್ ನಲ್ಲಿ ವಿವರವಾಗಿದೆ. ) ಇನ್ನು ಶುಕ್ರಾಚಾರ್ಯ ಕಚನಿಗೆ ಅನೇಕ ರಹಸ್ಯ ಸಿದ್ಧಾಂತಗಳನ್ನು ಕಲಿಸಿದ. ಜತೆಗೆ ಅಂತಿಮವಾಗಿ ಮೃತ್ಯು ಸಂಜೀವಿನಿ ವಿಜ್ಞಾನವನ್ನು ಕಲಿಸಿದ್ದ! ಇದನ್ನು ತಿಳಿದ ಕಚ ಮುಂದೆ ಒಬ್ಬ ಮಹಾನ್ ಋಷಿಯಾಗಿ ಪ್ರಸಿದ್ದನಾದ.ದೇವತೆಗಳಿಗೆ ಆ ಜ್ಞಾನವನ್ನು ಕಲಿಸಿದ.
ವರಿಗೆ ವಿಜಯವನ್ನು ಭರವಸೆ ನೀಡಿದರು.
ಮಹಾಭಾರತದ
ಸಮಯದಲ್ಲಿ, ಶುಕ್ರಾಚಾರ್ಯ ಭೀಷ್ಮನ ಮಾರ್ಗದರ್ಶಕರಲ್ಲಿ ಒಬ್ಬನಾಗಿದ್ದ. ಭೀಷ್ಮ ಯುವಕನಾಗಿದ್ದಾಗ ಗುರು ಶುಕ್ರಾಚಾರ್ಯ ಅವನಿಗೆ ರಾಜಕೀಯ ವಿಜ್ಞಾನವನ್ನು ಉಪದೇಶಿಸಿದ್ದ!!
ಶುಕ್ರಾಚಾರ್ಯನ
ಪ್ರಸಿದ್ದ ಶಿಷ್ಯರು
- ಕಚ: ಶುಕ್ರಾಚಾರ್ಯನ ಪ್ರತಿಸ್ಪರ್ಧಿ ಬೃಹಸ್ಪತಿಯ ಮಗ. ಕಚ ಶುಕ್ರಾಚಾರ್ಯರ ನಂಬಿಕೆಯನ್ನು ಗೆದ್ದು ಅಂತಿಮವಾಗಿ ಶುಕ್ರಾಚಾರ್ಯರಿಂದ ಮೃತ ಸಂಜೀವಿನಿ ಕಲೆಯನ್ನು ಕಲಿಯುವಲ್ಲಿ ಯಶಸ್ವಿಯಾದ.
- ವೃಷವರ್ವ: ಅಸುರರ ರಾಜ ಮತ್ತು ಶರ್ಮಿಷ್ಟೆಯ ತಂದೆ, ಪಾಂಡವರ ಮತ್ತು ಕೌರವರ ಪೂರ್ವಜ
- ಪ್ರಹ್ಲಾದ: ವಿಷ್ಣುವಿನ ಭಕ್ತ ಮತ್ತು ಅಸುರರ ಅತ್ಯಂತ ಶಕ್ತಿಶಾಲಿ ರಾಜ.
- ಮಹಾಬಲಿ: ಪ್ರಹ್ಲಾದನ ಮೊಮ್ಮಗ ಅಸುರರ ರಾಜ. ವಿಷ್ಣುವಿನ ಭಕ್ತ
- ದಂಡ: ಅಯೋಧ್ಯೆಯ ರಾಜ ಇಕ್ಷ್ವಾಕು ಅವರ ಕಿರಿಯ ಮತ್ತು ಅತ್ಯಂತ ಬೇಜವಾಬ್ದಾರಿ ಮಗ. ಅವನು ಶುಕ್ರಾಚಾರ್ಯನಿಗೆ ವಿಧೇಯನಾಗಿದ್ದರೂ ಶುಕ್ರನ ಮಗಳನ್ನು ಅವಳ ಇಚ್ಚೆಗೆ ವಿರುದ್ಧವಾಗಿ ಭೋಗಿಸಲು ಮುಂದಾದಾಗ ಕೊಲ್ಲಲ್ಪಟ್ಟನು. ಆದ್ದರಿಂದ ಅವನ ಹಿಂದಿನ ರಾಜ್ಯವು ದಂಡಕನ ಕಾಡು(ದಂಡಕಾರಣ್ಯ) ಆಗಿ ಮಾರ್ಪಟ್ಟಿತು.
- ಪೃಥು: ಮೊದಲ ಪವಿತ್ರ ರಾಜ ಮತ್ತು ಮೊದಲ ನಿಜವಾದ ಕ್ಷತ್ರಿಯ
- ಭೀಷ್ಮ: ಶಂತನು ರಾಜನ ಮಗ. ಜ್ಞಾನ ಮತ್ತು ಸಂಖ್ಯಾಶಾಸ್ತ್ರದ ಎಲ್ಲಾ ಶಾಖೆಗಳನ್ನು ಈತ ಶುಕ್ರಾಚಾರ್ಯನಿಂದ ಅಧ್ಯಯನ ಮಾಡಿದ.
ಶುಕ್ರಾಚಾರ್ಯನ
ಶಿವಭಕ್ತಿ
ಪುರಾಣಗಳಲ್ಲಿ
ಶುಕ್ರನು ಶಿವನ ಮಹಾಭಕ್ತನಾಗಿದ್ದ ಎಂದು ಹೇಳುತ್ತದೆ. ಹಾಗಾಗಿಯೇ ಶಿವನು ಶುಕ್ರಾಚಾರ್ಯನಿಗೆ ಮೃತ ಸಂಜೀವಿನಿಯ ಮಂತ್ರ ಬೋಧಿಸಿದ್ದ. ಅಷ್ಟು ಮಾತ್ರವಲ್ಲದೆ ಈ ಮಂತ್ರವನ್ನುದುರುಪಯೋಗಪಡಿಸಿಕೊಳ್ಳಬೇಡವೆಂದೂ ಆದೇಶಿಸಿದ್ದ. ಆದರೆ ಅಸುರರನ್ನು
ದೇವತೆಗಳ ವಿರುದ್ಧ ಯುದ್ಧಕ್ಕೆ ನಿಲ್ಲಿಸಿ ಮೃತರಾದ ಅಸುರರನ್ನು ಮರುಜೀವ ಕೊಡಲು ಶುಕ್ರಾಚಾರ್ಯ ಈ ವಿದ್ಯೆ ಬಳಸಿದ್ದ.
ಇದರಿಂದ ದೇವರಾಜ ಇಂದ್ರ ಹಾಗೂ ಇತರೆ ದೇವತೆಗಳು ಕುಪಿತರಾಗಿ ಅವರು ಶಿವನಲ್ಲಿ ದೂರು ಕೊಟ್ಟಿದ್ದರು. ಆಗ ಶಿವ ಶುಕ್ರಾಚಾರ್ಯ
ತನ್ನ ಮಾತಿಗೆ ತಪ್ಪಿದನೆಂದು ಕೋಪಿಸಿಕೊಂಡ ಹಾಗೂ ಶುಕ್ರನನ್ನು ಇಡಿಯಾಗಿ ನುಂಗಿಬಿಟ್ಟ!! ಹೀಗೆ ಹಲವಾರು ವರ್ಷಗಳ ಕಾಲ ಶುಕ್ರನು ಶುವನ ಹೊಟ್ಟೆಯಲ್ಲೇ ಇದ್ದ. ಆ
ಅವಧಿಯಲ್ಲಿ ಶಿವನ ಉರಿಯುತ್ತಿರುವ ಹೊಟ್ಟೆಯಲ್ಲಿ, ಸುಕ್ರನು ಶಿವನನ್ನು ಪೂಜಿಸಿದ್ದ. ಅದೊಮ್ಮೆ ಶಿವನು ಈ ಪೂಜೆಯಿಂದ ಪ್ರಸನ್ನವಾಗಿ
ಶುಕ್ರನನ್ನು ಮತ್ತೆ ಬಿಡುಗಡೆ ಮಡಿದ್ದ. ಆ ವೇಳೆ ಶುಕ್ರನು
ಶಿವನ ಲಿಂಗದ ಮೂಲಕ ಹೊರಬಂದಿದ್ದ!!!
ವಾಮನರೂಪದ
ವಿಷ್ಣು ದರ್ಭೆಯಿಂದ ಚುಚ್ಚಿದ ಪರಿಣಾಮ ಒಂದು ಕಣ್ಣನ್ನು ಕಳೆದುಕೊಂಡ ಶುಕ್ರಾಚಾರ್ಯ ತಾನು ಮಾಯಲೈ(ಮಾಲಿ ದ್ವೀಪರಾಷ್ಟ್ರ) ಕ್ಕೆ ತೆರಳಿ ಶಿವನನ್ನು ಕುರಿತು ಮತ್ತೆ ತಪಸ್ಸು ಮಾಡಿದ್ದ. ಆ ವೇಳೆ ಅವನಿಗೆ
ಮತ್ತೆ ಕಣ್ಣಿನ ದೃಷ್ಟಿ ಮರುಕ ಳಿಸಿತ್ತು!
ಮಹಾಭಾರತ
ವಿಭಾಗಗಳ ಸಂಯೋಜನೆ ಮಾಡಿದ್ದ ಶುಕ್ರಾಚಾರ್ಯ!!
ಉಷವಾನ
ಕವಿ ಅಥವಾ ಉಸಾನ ಕವಿ ಎಂದು ಕರೆಯಲ್ಪಡುವ
ಯೋಗ-ವ್ಯಾಸನು ಪ್ಪತ್ನಾಲ್ಕು ಭರತ ಸೂತ್ರಗಳ ಲೇಖಕ ಎಂದು ಹೇಳಲಾಗಿದೆ, ಇದು ಭಾರ್ಗವ-ವ್ಯಾಸರಿಂದ 24000 ಸ್ಲೋಕಗಳ ಭರತ-ಸರ್ಹಿತಕ್ಕೆ ಹಿನ್ನೆಲೆಯಾಗಿತ್ತು ಈ ಸಂಹಿತೆಯಲ್ಲಿನ ಗೀತೆಯ
ಆವೃತ್ತಿಯು 6 ಅಧ್ಯಾಯಗಳಲ್ಲಿ ಕೇವಲ 144 ಸ್ಲೋಕಗಳನ್ನು ಹೊಂದಿತ್ತು.
ಈ
ಕಾವ್ಯ ಉಸಾನ ಅಥವಾ ಕಾವ್ಯ ಉಷವಾನ ಎಂದರೆ ಬೇರಾರೂ ಅಲ್ಲ ಅವನೇ ಶುಕ್ರಾಚಾರ್ಯ!!!
ಕಾವ್ಯ
ಉಸಾನನ ಹೆಸರು ಋಗ್ವೇದದಲ್ಲಿ ಕಂಡುಬರುತ್ತದೆ. ಈತನನ್ನು ಪುರಾತನ
ಕವಿ, ಋಷಿ ಎಂದು ಉಲ್ಲೇಖಿಸಲಾಗಿದೆ. ಋಗ್ವೇದವೇ ಪ್ರಾಚೀನ ಗ್ರಂಥವಾಗಿದ್ದು ಇದರಲ್ಲೇ ಕಾವ್ಯ ಉಸಾನನನ್ನು ಪ್ರಾಚೀನ ಕವಿ ಎಂದಿದ್ದರೆ ಶುಕ್ರಾಚಾರ್ಯನ ಜೀವಿತ ಕಾಲ ಅದೆಷ್ಟು ಹಿಂದಿದ್ದಿರಬೇಕು ಎನ್ನುವುದನ್ನು ನೀವೇ ಊಹಿಸಿ!!
ಹೀಗೆ
ಅತ್ಯಂತ ಪ್ರಾಚೀನ ವ್ಯಕ್ತಿಯಾಗಿದ್ದ ಕಾರಣ ಕಾವ್ಯ ಉಸಾನಾ ಸಂಸ್ಕೃತ
ಮತ್ತು ಸಂಸ್ಕೃತೇತರ (ಅವೆಸ್ತಾನ್, ಪರ್ಷಿಯನ್) ಸಾಹಿತ್ಯದಲ್ಲಿ ಪೌರಾಣಿಕ ಪಾತ್ರವಾಗಿ ವಿವಿಧ ವ್ಯಾಖ್ಯಾನಗಳಿಗೆ ಒಳಪಟ್ಟಿದ್ದಾನೆ.
ಉಸಾನಾ
ಎಂಬ ಪದದ ಅರ್ಥ “ಉತ್ಸಾಹ”, “ಭಾವೋದ್ರಿಕ್ತ”, “ಉತ್ಸಾಹಭರಿತ”. ಅವನು
ಕವಿಯಿಂದ ಜನಿಸಿದನು, ಆದ್ದರಿಂದ "ಕಾವ್ಯಾ" ಅವನ ಪೋಷಕನಾಗಿ. ಕವಿ ಎಂದರೆ ಕವಿ ಋಷಿ, ಉಸಾನಾ ಕವಿಗಳಿಗೆ ಮಾದರಿ ಎಂದು ವ್ಯಾಖ್ಯಾನವಿದೆ. ಇದೆಲ್ಲವೂ ಶುಕ್ರಾಚಾರ್ಯನ ವ್ಯಕ್ತಿತ್ವಕ್ಕೆ ಹೋಲಿಕೆಯಾಗುತ್ತದ ಎನ್ನುವುದು ಗಮನಾರ್ಹ ಅಂಶ!!
ಇನ್ನು
ಉಸಾನನ ಮನೆಗೆ ದೇವರಾಜ ಇಂದ್ರ ಹಾಗೂ ಕುತ್ಸ(ಬಹುಷಃ ಅಸುರ ಅಥವಾ ಪರ್ಷಿಯನ್ ರಾಜ??) ಒಟ್ತಾಗಿ ಆಗಮಿಸುವ ಅನೇಕ ಘಟನೆಗಳ ಸೂಚನೆ ವೇದಗಳಲ್ಲಿ ಆಗಾಗ ಬರುತ್ತದೆ ಆ ಇಬ್ಬರೂ ಉಸಾನನಿಗೆ
ಪ್ರಾರ್ಥನೆ, ಸಮರ್ಪಣೆ ಮಾಡುತ್ತಾರೆ. ಅವನು ವೈದಿಕ ಕವಿಯ ಶಕ್ತಿಯನ್ನು ಸಂಕೇತಿಸುತ್ತಾನೆ, ಮತ್ತು ಆದ್ದರಿಂದ ಕವಿಗಳ ಮೂಲರೂಪವೆಂದು ಪ್ರಸಿದ್ಧನಾಗುತ್ತಾನೆ, ಗೀತೆಯಲ್ಲಿ ಕೃಷ್ಣನು ಸಹ ಸೂಚ್ಯವಾಗಿ ಇದನ್ನು
ಒಪ್ಪಿದ್ದಾನೆ!!
ಈ
ಕವಿ ಉಸಾನಾನ ವಿವರಣೆ ಪರ್ಷಿಯನ್ ಧಾರ್ಮಿಕ ಗ್ರಂಥ ಜೆಂದ್ ಅವೆಸ್ತಾದಲ್ಲಿ ಸಿಕ್ಕುತ್ತದೆ. ಆದರೆ ಅಲ್ಲಿ ಕವಿ ಉಸಾನಾನ ಮೂಲದ ಬಗ್ಗೆ ಯಾವ ವಿವರಣೆ ಸರಿಯಾಗಿಲ್ಲ. ":ಉಸಾನಾ ಇತರೆ ಸಂಸ್ಕೃತಿಗಳೊಂದಿಗೆ
ಕಠಿಣ ಪರಿಸ್ಥಿತಿಯನ್ನು ಎದುರುಸುದ್ದ. . ಸಿಂಧೂನ ಪಶ್ಚಿಮಕ್ಕೆ, ಕವಿ ಉಸಾನ ಶ್ರೇಷ್ಠತೆಯಿಂದ""ಪಾತಾಳಕ್ಕೆ ಬಿದ್ದ" ವ್ಯಕ್ತಿಯಾಗಿದ್ದ. ಎಂದು
ವರ್ಣಿಸಿದೆ. ಎಂದರೆ ಶುಕ್ರಾಚಾರ್ಯ ಭಾರತದಿಂದ ಪರ್ಷಿಯಾಗೆ ಹೋಗಿದ್ದ! ಹಾಗೂ ಅವನು ಹಾಗೆ ಅಲ್ಲಿಗೆ ಹೊರಡಲು ಕಾರಣ ಮತ್ತದೇ ನಮ್ಮ ದೇವತೆಗಳು, ಇಂದ್ರ ಹಾಗೂ ಅವರ ಅಧಿಕಾರದ ಪಾರಮ್ಯವೇ ಆಗಿತ್ತು!!
ವಿಶ್ವಾಮಿತ್ರನ
ಲೇಖನ ಸರಣಿಯಲ್ಲಿ ನಾನು ಈ ಹಿಂದೆ ಹೇಳಿದಂತೆಯೇ
ಉತ್ತರದಲ್ಲಿ ವಸಿಷ್ಟ, ಇಂದ್ರಾದಿಗಳ ಪಾರಮ್ಯವನ್ನು ಧಿಕ್ಕರಿಸಲಾಗದೆ ಆತ ದಕ್ಷಿಣ ದಿಕ್ಕಿಗೆ
ಪ್ರಯಾಣಿಸಿದ್ದ. ಹಾಗೆಯೇ ಶುಕ್ರಾಚಾರ್ಯ ಸಹ ಭಾರತ ಭೂಮಿಯಲ್ಲಿನ
ಇಂದ್ರ, ದೇವತೆಗಳ ಅಧಿಕಾರವನ್ನು ಮುರಿಯಲು ಅವರಿಂದ ದೂರದ ಪ್ರದೇಶಕ್ಕೆ ತೆರಳಿಲ್ ಅಲ್ಲಿಂದ ಕಾರ್ಯಾಚರಣೆ ನಡೆಸಿದ್ದ!!! ಪಾತಾಳ ಲೋಕವೆಂದರೆ ದಕ್ಷಿಣ ಅಮೆರಿಕಾ ಎನ್ನಲು ಇದೂ ಸಹ ಒಂದು ದಾಖಲೆಯಾಗಬಹುದು.
ಏಕೆಂಡರೆ ಪಾತಾಳಕ್ಕೆ ಬಲಿಯನ್ನು ವಾಮನ ಕಳಿಸಿದ ನಂತರ ಶುಕ್ರಾಚಾರ್ಯನೂ ಅಲ್ಲಿಗೆ ತೆರಳಿರಬಹುದು. ಭೀಷ್ಮ ಹಾಗೂ ಮಹಾಭಾರತ ಕಾಲದಲ್ಲಿ ವಿಶ್ವಾಮಿತ್ರನಂತೆಯೇ ಅದೇ ಹೆಸರಿನ ಬೇರೆ ಬೇರೆ ವ್ಯಕ್ತಿಗಳು ಭಾರತಕ್ಕೆ ಆಗಮಿಸಿರಬಹುದು ಇಲ್ಲವೇ ಇಲ್ಲೇ ಹುಟ್ಟಿಕೊಂಡಿರಬಹುದು.
ಏನೇ
ಆದರೂ ಋಗ್ವೇದದಲ್ಲಿನ ಕವಿ ಉಸಾನನು ಇದೇ ಶುಕ್ರಾಚಾರ್ಯ ಎನ್ನುವುದು ನನ್ನ ಭಾವನೆ ಇನ್ನು ಈ ಶುಕ್ರಾಚಾರ್ಯ ಪರ್ಷಿಯಾದೊಂದಿಗೆ,
ಅಲ್ಲಿನ ಯಹೂದಿಗಳ ಜತೆಗೆ ಸಂಪರ್ಕ ಸಾಧಿಸಿದ್ದು ಹೇಗೆ? ಅದರ ವಿವರಣೆ ನೋಡೋಣ.
No comments:
Post a Comment