Wednesday, September 09, 2020

ಮಹಾಭಾರತದ ಯಯಾತಿಯ ಕಥೆಯ ಹಿಂದಿನ ವೈದ್ಯಕೀಯ ವಿಜ್ಞಾನದ ನಿಗೂಢ ಸಂಕೇತ!!

2014 ಡಿಸೆಂಬರ್ನಲ್ಲಿ, ದಕ್ಷಿಣ ಆಫ್ರಿಕಾದ ಸ್ಟೆಲೆನ್ಬೋಶ್ ವಿಶ್ವವಿದ್ಯಾಲಯದ ಮೂತ್ರಾಶಯ ಶಾಸ್ತ್ರಜ್ಞ ಆಂಡ್ರೆ ವಾನ್ ಡೆರ್ ಮೆರ್ವೆ ನೇತೃತ್ವದ ತಜ್ಞರು 21 ವರ್ಷದ ಯುವಕನಿಗೆ ಮೊಟ್ಟ ಮೊದಲ ಯಶಸ್ವಿ ಪುರುಷ ಜನನಾಂಗದ ಕಸಿ ನಡೆಸಿದ್ದರುಶಸ್ತ್ರಚಿಕಿತ್ಸಾ ತಂಡದಲ್ಲಿ  ಆಂಡ್ರೆ ವಾನ್ ಡೆರ್ ಮೆರ್ವೆ ಮತ್ತು ಪ್ಲಾಸ್ಟಿಕ್ ಸರ್ಜನ್ ಫ್ರಾಂಕ್ ಗ್ರೇವ್ ಇದ್ದರು. 9 ಗಂಟೆಗಳ ಕಾರ್ಯವಿಧಾನವು ರಕ್ತನಾಳಗಳು ಮತ್ತು ನರಗಳನ್ನು ಸಂಪರ್ಕಿಸಲು ಮೈಕ್ರೋಸರ್ಜರಿಯನ್ನು ಬಳಸಿಕೊಳ್ಲಲಾಗಿತ್ತು ವ್ಯಕ್ತಿ 18 ವರ್ಷ ವಯಸ್ಸಿನವನಾಗಿದ್ದಾಗ "ಸುನ್ನತಿ" ಪ್ರಕ್ರಿಯೆಯ ಪರಿಣಾಮವಾಗಿ ತನ್ನ ಜನನಾಂಗವನ್ನು ಕಳೆದುಕೊಂಡಿದ್ದ. ಶಸ್ತ್ರಚಿಕಿತ್ಸೆಯ ತರುವಾಯ 13 ಮಾರ್ಚ್ 2015 ಹೊತ್ತಿಗೆ ಯುವಕನಿಗೆ ಕಸಿ ಮಾಡಲಾಗಿದ್ದ ಜನನಾಂಗದ ಮೂಲಕ  ಮೂತ್ರ ವಿಸರ್ಜನೆ, ನಿಮಿರುವಿಕೆ,ಮತ್ತು ಸ್ಖಲನ ಸೇರಿದಂತೆ  ಎಲ್ಲಾ ಬಗೆಯ ಕೆಲಸ ಮಾಡಲು ಶಕ್ತನಾಗಿದ್ದಾನೆಂದು ವರದಿಯಾಗಿತ್ತು.ಆದರೆ ಸಂವೇದನೆಯು ಸಂಪೂರ್ಣವಾಗಿ ಮರಳಲು ಎರಡು ವರ್ಷಗಳನ್ನು ತೆಗೆದುಕೊಂಡಿದೆ.  ಆದರೆ ವಿಶ್ವದ ಮೊಟ್ಟಮೊದಲ ಪುರುಷ ಜನನಾಂಗದ ಕಸಿ ಶಸ್ತ್ರಚಿಕಿತ್ಸೆ ಸಂಕೇತಗಳು ನಮಗೆ ಮಹಾಭಾರತದ ಆದಿಪರ್ವದಲ್ಲಿ ಸಿಕ್ಕುತ್ತದೆ!!

Yayāti
ಯಯಾತಿ

ಪಾಂಡವರ ಪೂರ್ವಜ, ನಹುಷನ ಪುತ್ರ ಯಯಾತಿಯ ಜೀವನದಲ್ಲಿ ವಿಶೇಷ ಘಟನೆ ಸಂಭವಿಸಿತ್ತು ಎಂದು ಮಹಾಭಾರತದಲ್ಲಿ ನಮಗೆ ಸಂಕೇತ ಲಭ್ಯವಾಗುತ್ತದೆಯಯಾತಿಗೆ ದೇವಯಾನಿ ಹಾಗೂ  ಶರ್ಮಿಷ್ಟೆ ಎಂಬಿಬ್ಬರು ಪತ್ನಿಯರು. ಇದರಲ್ಲಿ ದೇವಯಾನಿ ಅಸುರ ಕುಲದವರ ಗುರು ಶುಕ್ರಾಚಾರ್ಯನ ಪುತ್ರಿ. ಶುಕ್ರಾಚಾರ್ಯ ಮಂತ್ರ, ತಂತ್ರಾದಿ ವಿದ್ಯೆಗಳನ್ನು ಸಿದ್ದಿಸಿಕೊಂಡ ಮಹಾನ್ ತಪಸ್ವಿಇನ್ನು ಶರ್ಮಿಷ್ಟೆ ದೈತ್ಯಕುಲದ ರಾಜ ವೃಶಪರ್ವನ ಮಗಳು. ಈಕೆ ದೇವಯಾನಿಯ ಸ್ನೇಹಿತೆ ಬಳಿಕ ಆಕೆಯ ದಾಸಿಯಾಗಿದ್ದಳು.

ಯಾಯತಿಯ ವಿವರವಾದ ಕಥೆ ಭಾಗವತ ಪುರಾಣದ 19 ನೇ ಅಧ್ಯಾಯದಲ್ಲಿ ಬರುತ್ತದೆ.

ಯಯಾತಿಗೆ ದೇವಯಾನಿಯಿಂದ ಯದು ಹಾಗೂ ಯವನ ಎಂಬ ಇಬ್ಬರು ಮಕ್ಕಳಿದ್ದರು. ಶರ್ಮಿಶ್ಃಟೆಯಿಂದ ದ್ರುಹ್ಯು, ಅನು ಹಾಗೂ ಪುರು ಎಂಬ ಮೂವರು ಮಕ್ಕಳಾಗಿದ್ದರುಇದರಲ್ಲಿ ಯದು ಮುಂದೆ ಯಾದವ ಕುಲದ ಮೂಲಪುರುಷನಾಗುತ್ತಾನೆ, ಕೃಷ್ಣ ಜನ್ಮದಾಳಿದ ವಂಶದ ಆದಿಪುರುಷನೇ ಯದು-ಶುಕ್ರಾಚಾರ್ಯನ ಮೊಮ್ಮಗ!!  ಪುರು ಕುರುಕುಲ(ಕೌರವ-ಪಾಂಡವ) ಮೂಲಪುರುಷನಾಗಿದ್ದಾನೆಈತ ದೈತ್ಯರಾಜ ವೃಶಪರ್ವನ ಮೊಮ್ಮಗ!

ದೇವಯಾನಿಗೆ ಶರ್ಮಿಷ್ಟೆ ಹಾಗೂ ಯಯಾತಿಯ ಸಂಬಂಧ ಹಾಗೂ ಅವರಿಬ್ಬರಿಗೆ ಮೂವರು ಮಕ್ಕಳಿರುವ ವಿಚಾರ ತಿಳಿದ ನಂತರ ಅವಳು ನೇರವಾಗಿ ತನ್ನ ತಂದೆಯ ಬಳಿ ತೆರಳಿ ಎಲ್ಲವನ್ನೂ ನಿವೇದಿಸುತ್ತಾಳೆ.

ಶುಕ್ರಾಚಾರ್ಯ ಬಗ್ಗೆ ರಾಜ ಯಯಾತಿಯಲ್ಲಿ ತಮ್ಮ ಅಸಮಾಧಾನ ತೋಡಿಕೊಂಡನು. ಬಳಿಕ  ಯಾಯತಿ ತನ್ನ ಯೌವನವನ್ನು ಕಳೆದುಕೊಂಡು ತಕ್ಷಣವೇ ವೃದ್ದನಾಗುವಂತೆ ಶಾಪವಿತ್ತನು!!

 (ಇಲ್ಲಿ ನಾವು ಗಮನಿಸುವುದಾದರೆ ಶುಕ್ರಾಚಾರ್ಯನಿಗೆ ತನ್ನ ಮಗಳಿಗಾದ ಅನ್ಯಾಯದಿಂದ ಕೋಪ ಉಕ್ಕೇರಿರುತ್ತದೆ. ಅದೇ ಕೋಪದ ಕಾರಣ ಅಳಿಯನೊಂದಿಗೆ ಜಗಳವಾಗಿ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರಬಹುದು. ವೇಳೆ ಶುಕ್ರಾಚಾರ್ಯ ತಾನು ಯಯಾತಿಯ ಜನನಾಂಗವನ್ನು ಕತ್ತರಿಸಿರಬಹುದು ಇಲ್ಲವೆ ಭಾಗ ಊನವಾಗುವಂತೆ ಬಲವಾಗಿ ಏಟು ಕೊಟ್ಟಿರಬಹುದು. ಇದನು ಮಹಾಭಾರತದಲ್ಲಿ "ಶಾಪ" ಕಥೆಯಾಗಿ ಮಾರ್ಪಡಿಸಿದ್ದಾರೆ!!)

ಶಾಪದ ಘಟನೆಯಾಗಿ ದಿನಗಳು ಉರುಳಿದಂತೆ ದೇವಯಾನಿಗೆ ತನ್ನ ತಪ್ಪಿನ ಅರಿವಾಗಿದೆ. ಏಕೆಂದರೆ ಪತಿ ಯಯಾತಿ ವೃದ್ದನಾದರೆ ತಾನೂ ಸಹ ಸುಖದಿಂದ ವಂಚಿತಳಾಗುತ್ತೇನೆ ಎಂದು ಅರಿವು ಮೂಡಿದೆ. ಆಗ ಮತ್ತೆ ಆಕೆ ತನ್ನ ತಂದೆ ಬಳಿ ತೆರಳಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಕೇಳುತ್ತಾಳೆ. ಆಗ ಶುಕ್ರಾಚಾರ್ಯ "ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ! ಆದರೆ ಯಾವುದಾದರೂ ವ್ಯಕ್ತಿ ಯಯತಿಯ ಮುಪ್ಪಿನ ಜೀವನವನ್ನು ತಾನು ತೆಗೆದುಕೊಂಡು ಅವನಿಗೆ ತನ್ನ ಯೌವನವನ್ನು ಧಾರೆ ಎರೆದರೆ ಆಗ ಶಾಪ ತೊಲಗಲಿದೆ" ಎಂದೆನ್ನುತ್ತಾನೆ

ಶಾಪಗ್ರಸ್ತ ಯಾಯತಿ ಶುಕ್ರಾಚಾರ್ಯನನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾನೆ

(ಎಂದರೆ ಒಮ್ಮೆ ಜನನಾಂಗ ಊನವಾಗಿದ್ದರೆ ಅಥವಾ ಭಿನ್ನವಾಗಿದ್ದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ಬೇರೆಯವರ ಜನನಾಂಗವನ್ನು ಕಸಿ ಮಾಡುವ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಲಬಹುದು!! ಹೀಗಾಗಿ ಯಯಾತಿಗೆ ಮತ್ತೆ ಯ್ಪ್ವನ ಮರಳಲು ಹಾಗೂ ಆತ ಮತ್ತೆ  ರತಿಕ್ರೀಡೆಯಲ್ಲಿ ತೊಡಗುವಂತಾಗಲು ಆತನಿಗೆ ಪುರುಷ ಜನನಾಂಗದ ಕಸಿ ಮಾಡಿಸುವುದು ಅನಿವಾರ್ಯ ಎಂದು ದೇವಯಾನಿಗೆ ಶುಕ್ರಾಚಾರ್ಯ ಹೇಳಿದ್ದನು!!)

ಯಯಾತಿಗೆ ಶುಲ್ರಾಚಾರ್ಯರ ಮಾತಿನಿಂದ ನಿರಾಳವಾಗಿತ್ತು. ಯಯಾತಿ ತಕ್ಷಣ ತನ್ನ ಐದು ಮಕ್ಕಳನ್ನು ಕರೆದು ತನಗೆ ಮರಳಿ ಯೌವನ ಪಡೆಯಬೇಕಿದೆ. ಅದಕ್ಕಾಗಿ ನಿಮ್ಮಲ್ಲಿ ಯಾರಾದರೂ ನನ್ನ ವೃದ್ದಾಪ್ಯವನ್ನು ಪಡೆಯಲು ಬಯಸುವಿರಾ? ಎಂದು ಪ್ರಶ್ನಿಸಿದಾಗ ದೇವಯಾನಿಯ ಮಕ್ಕಳಾದ ಯದು, ಯವನರು ಅದಕ್ಕೆ ನಿರಾಕರಿಸುತ್ತಾರೆ!! ಕಡೆಯಲ್ಲಿ ಶರ್ಮಿಷ್ಟೆಯ ಪುತ್ರ ಕಿರಿಯ ಮಗ ಪುರು ತಂದೆಯ ವೃದ್ದಾಪ್ಯವನ್ನು ಪಡೆಯಲು ಒಪ್ಪುತ್ತಾನೆ. ಹಾಗಾಗಿ ಮುಂದೆ ಯಯಾತಿ  ಹಿರಿಯ ಮಗ ಯದುವಿಗೆ ಪಟ್ಟಗಟ್ಟದೆ ಕಿರಿಯ ಪುತ್ರ ಪುರುವಿಗೆ ರಾಜ್ಯವನ್ನು ವಹಿಸುತ್ತಾನೆ! ಇದು ಮುಂದಿನ ತಲೆಮಾರಿನಲ್ಲಿ ಯದು ಹಾಗೂ ಅವನ ಮಕ್ಕಳನ್ನು ಶಾಶ್ವತವಾಗಿ ರಾಜಪದವಿಯಿಂದ ದೂರವಿಡುತ್ತದೆ!!! ಯದುವಂಶದಲ್ಲಿ(ಯಾದವ ಕುಲ)ದಲ್ಲಿ ಜನಿಸಿದ ಬಲರಾಮ, ಕೃಷ್ಣರೂ ಕೂಡ ಸಿಂಹಾಸನವನ್ನೇರಲಿಲ್ಲಎನ್ನುವುದು ನಾವಿಲ್ಲಿ ಗಮನಿಸಬಹುದು.

( ಮೇಲಿನ ವಿವರಣೆಯಂತೆ ಯಯಾತಿಯು ತಾನು ಜನನಾಂಗ ಊನಕ್ಕೆ ಒಳಗಾಗಿದ್ದೇನೆ, ಇದಕ್ಕಾಗಿ ಜನನಾಂಗ ಕಸಿ ಮಾಡಿಸಬೇಕಿದೆ. ಹಾಗಾಗಿ ನಿಮ್ಮಲ್ಲಿ ಯಾರಾದರೂ ನನಗಾಗಿ ಜನನಾಂಗ ದಾನ ಮಾಡುವಿರಾ ಎಂದು ಮಕ್ಕಳನ್ನು ಕೇಳಿದ್ದ. ಆಗ ಯದು ಆದಿಯಾಗಿ ನಾಲ್ವರು ಹಿರಿಯ ಮಕ್ಕಳು ಅದಕ್ಕೆ ನಿರಾಕರಿಸಿದ್ದರು. ಕಡೆಗೆ ಕಿರಿಯ ಮಗ ಪುರು ತಂದೆಗಾಗಿ ತನ್ನ ಜನನಾಂಗ ಕೊಡಲು ಒಪ್ಪಿಗೆ ಸೂಚಿಸಿದ್ದ!!! ಇದಕ್ಕೆ ಬದಲಿಯಾಗಿ ಯಯಾತಿ ಪುರುವನ್ನೇ ತನ್ನ ನಂತರ ಸಿಂಹಾಸನಕ್ಕೆ ಅಧಿಕಾರಿಯಾಗಿ ಮಾಡಿದ್ದ!!!)

ಇನ್ನು ಹೀಗೆ ಪುರುವಿನಿಂದ ಯೌವನ ಪಡೆದ ಯಯಾತಿ ಹಲವು ವರ್ಷಗಳ ಕಾಲ ಇಂದ್ರಿಯ ಸುಖಗಳನ್ನು ಅನುಭವಿಸಿದನು  ಬಳಿಕ ಮತ್ತೆ ಅದರ ನಿರರ್ಥಕತೆಯನ್ನು ಅರಿತು ಪುರುವಿಗೆ ಮತ್ತೆ ಯೌವನ ಮರಳಿಸಿದ(ಎಂದರೆ ಪ್ರಪಂಚದ ಎಲ್ಲಾ ಆಹಾರ, ಸಂಪತ್ತು ಮತ್ತು ಮಹಿಳೆಯ ಸುಖ  ಏನು ಸಿಕ್ಕರೂ ಒಬ್ಬ ಮನುಷ್ಯನ ಕಾಮವನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ!!ಅನಿಯಂತ್ರಿತ ಇಂದ್ರಿಯಗಳು ತುಪ್ಪವನ್ನು ಬೆಂಕಿಯಲ್ಲಿ ಸುರಿಯುತ್ತಿದ್ದಂತೆ  ಬೆಂಕಿ ಇನ್ನಷ್ಟು ಹೆಚ್ಚುವಂತೆ ಬಯಕೆಗಳು ಈಡೇರುತ್ತಿದ್ದಂತೆ ಇನ್ನಷ್ಟು ಆಸೆಯನ್ನು ಚಿಗುರಿಸುತ್ತದೆ. ಭೋಗದಿಂದ ಕಾಮ, ಆಸೆಯು ಉಲ್ಬಣಗೊಳ್ಳುತ್ತದೆ .ಶಕ್ತಿ ಮತ್ತು ಸಂತೋಷಕ್ಕಾಗಿ ಆಶಿಸುವವನು ತಕ್ಷಣವೇ ಕಡುಬಯಕೆಯನ್ನು ತ್ಯಜಿಸಬೇಕು)

(ಇಲ್ಲಿ ನಿಜವಾಗಿ ನಡೆದದ್ದು ಪುರುಷ ಜನನಾಂಗದ ಮತ್ತು ವೃಷಣಗಳ ಕಸಿ! ಇದಕ್ಕೆ ಸಂಕೇತವಾಗಿ ಯಯಾತಿಯ ಮಗನ ಹೆಸರು "ಪುರು" ಎಂದಿರುವುದನ್ನು ಕಾಣಬಹುದು. "ಪುರು"ಎಂದರೆ "ಪುರುಷ" ಪುರುಷ ಅಂಗದ ದಾನ ನೀಡಿದ್ದ ವ್ಯಕ್ತಿ ಎಂದೂ ಊಹಿಸಲು ಅವಕಾಶವಿದೆ!! ಹಾಗೆಯೇ ಅಂದು  ತಂದೆ ಮತ್ತು ಮಗನ ನಡುವೆ ಯಶಸ್ವಿಯಾಗಿ ಜನನಾಂಗದ ಕಸಿ ನಡೆದಿತ್ತು. ಮತ್ತು ಅದರಿಂದ ವೃದ್ದನಾಗಿದ್ದ ತಂದೆ ಯೌವನದ ಸುಖ ಅನುಭವಿಸುವಂತಾಗಿತ್ತು!!! ಆದರೆ ಇಂದ್ರಿಯಗಳ ಆಸೆಗೆ ಮಿತಿಇಲ್ಲ ಎಂದು ಅರಿವಾಗಲು ಯಯಾತಿ ತಾನು ಕಸಿ ಮಾಡಿಸಿಕೊಂಡಿದ್ದ ಜನನಾಂಗವನ್ನು ಮತ್ತೆ ತನ್ನ ಪುತ್ರನಿಗೆ ಮರಳಿ ಕಸಿ ಮಾಡಿಸಿದ್ದ!)

ಆಯುರ್ವೇದದ ಹಿನ್ನೆಲೆಯಲ್ಲಿ ಯಯಾತಿಯ "ಯೌವನ" ವಿಶ್ಲೇಷಣೆ

ಆಯುರ್ವೇದ ಶಾಸ್ತ್ರದ ಹಿನ್ನೆಲೆಯಲ್ಲಿ ಯಯಾತಿಯ ಜೀವನದ ವೃದ್ದಾಪ್ಯ, ಯೌವನದ ಘಟನೆಯನ್ನು ಹೀಗೆ ವಿಶ್ಲೇಷಿಸಬಹುದು.

ಸೃಷ್ಟಿಯ ಪ್ರತಿಯೊಂದು ಅಂಶಗಳಲ್ಲೂ ಸಮಾನ ಮತ್ತು ವಿರುದ್ಧ ಶಕ್ತಿಗಳು ಇಲ್ಲಿವೆ. ಅವು ಅಸ್ತಿತ್ವದಲ್ಲಿಲ್ಲದಿದ್ದರೆ, ಸೃಷ್ಟಿ ಸಹ ಅಸ್ತಿತ್ವದಲ್ಲಿರುವುದಿಲ್ಲ. ಹಾಗಾಗಿ ಸೃಷ್ಟಿಯನ್ನು ರೂಪಿಸುವ ಎಲ್ಲದರಲ್ಲೂ ದ್ವಂದ್ವವಿರಲೇಬೇಕು!!ಕತ್ತಲೆಯನ್ನು ಅರ್ಥಮಾಡಿಕೊಳ್ಳಲು, ಬೆಳಕು ಇರಬೇಕು. ಅದೇ ರೀತಿ ಸಂತೋಷವನ್ನು ತಿಳಿದುಕೊಳ್ಳಲು, ದುಃಖವೂ ಇರಬೇಕು. ಸೃಷ್ಟಿಯಲ್ಲಿ ಯಾವುದೂ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ಪ್ರತಿಯೊಂದು ಕ್ರಿಯೆಯು ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ. ಪ್ರತಿ ಭೋಗ  (ಆನಂದ) ದಲ್ಲಿ (ನೋವು) ಇರುತ್ತದೆ.

ಒಬ್ಬ ವ್ಯಕ್ತಿಯು ಆಸೆಪಡುವ ಯಾವುದೇ ದೈಹಿಕ ಆಸೆ-ಆಹಾರವಾಗಲಿ ಅಥವಾ ಲೈಂಗಿಕ ಆನಂದವಾಗಲಿ, ಅದು ದೇಹಕ್ಕೆ ವಯಸ್ಸಿಗೆ ಕಾರಣವಾಗುತ್ತದೆ. ಆಹಾರದಲ್ಲಿನ ಮಸಾಲೆಗಳು, ಅದುರುಚಿಯನ್ನು ನೀಡುತ್ತದೆ, ಇದು ಕರುಳಿನ ಮೇಲಿನ ಪದರದ ತುಕ್ಕಿಗೆ ಕಾರಣವಾಗುವುದಲ್ಲದೆ, ದೇಹದ ವಯಸ್ಸಾಗುವ  ಪ್ರಕ್ರಿಯೆಯನ್ನು ವೇಗಗೊಳಿಸುವ ಹೈಪರ್ ಆಕ್ಟಿವಿಟಿಗೆ  ಕಾರಣವಾಗುತ್ತದೆ. ಅಂತೆಯೇ, ಲೈಂಗಿಕ ಭೋಗವು "ಶುಕ್ರ" ಎಂಬ ಪ್ರಮುಖ ದ್ರವದ ನಷ್ಟಕ್ಕೆ ಕಾರಣವಾಗುತ್ತದೆ. ವಾಸ್ತವವಾಗಿ, ಆಯುರ್ವೇದದಲ್ಲಿ ಲೈಂಗಿಕ ಆನಂದಕ್ಕಾಗಿ ಬಳಸಲಾದ ಪದವು "ಶುಕ್ರನಾಶ" ಅಥವಾ "ಶುಕ್ರನಷ್ಟ" ಎಂದಿದೆ!!!

ಶುಕ್ರ ಎಂದರೆ ಪ್ರಕಾಶಮಾನವಾದ, ಶುದ್ಧ ಮತ್ತು ವಿಕಿರಣ. ಇದು ಯಾವುದೋ “ಸಾರ” ಎಂದೂ ಅರ್ಥೈಸಬಲ್ಲದು. ಆಯುರ್ವೇದದಲ್ಲಿ, ಈ ಪದವನ್ನು ಸಾಮಾನ್ಯವಾಗಿ ಗಂಡು (ಪುರುಷರ ವೀರ್ಯಾಣು)ವೀರ್ಯ ಮತ್ತು ಹೆಣ್ಣು(ಮಹಿಳೆಯ ಅಂಡಾಣು)ಮೊಟ್ಟೆ ಎರಡನ್ನೂ ವಿವರಿಸಲು ಬಳಸಲಾಗುತ್ತದೆ, ಏಕೆಂದರೆ ಅವು ದೇಹದ ಇತರ ಎಲ್ಲಾ ಧಾತುವುಗಿಂತ  (ಅಂಗಾಂಶಗಳ) ಸಾರವನ್ನು ಹೊಂದಿರುತ್ತವೆ. ಶುಕ್ರ ಧಾತು ರಚನೆಯ ಚಕ್ರದಲ್ಲಿ ಏಳನೇ ಮತ್ತು ಅಂತಿಮ ಧಾತು. ಆರೋಗ್ಯಕರ ಶುಕ್ರವನ್ನು ಹೊಂದಿರುವ ವ್ಯಕ್ತಿಯು ಆತ್ಮದ ಪ್ರಕಾಶವನ್ನು ಹೊಂದಿರುತ್ತಾನೆ, ಕಣ್ಣುಗಳು ಮತ್ತು ಚರ್ಮವು ಬೆಳಕನ್ನು ಹೊರಸೂಸುತ್ತದೆ. ಸೂಕ್ಷ್ಮ ವ್ಯಕ್ತಿಯು ಈ ಬೆಳಕನ್ನು ಗ್ರಹಿಸಬಹುದು. ಇತರರು ಇದನ್ನು ಹೊಳಪು ಎಂದು ಬಾವಿಸುತ್ತಾರೆ. ಅಥವಾ ಹಾಗೆ ಉಚ್ಚ ಶುಕ್ರ ಧಾತುವನ್ನು ಹೊಂದಿರುವವನನ್ನು ಜನರು ಹೆಚ್ಚು ವಿಶ್ವಾಸಾರ್ಹ್, ಶಕ್ತಿವಂತ ಎಂದು ಭಾವಿಸುತ್ತಾರೆ.

Shukra dhatu | Ayurveda, Alternative medicine natural treatments, Ayurveda  yoga

ಆಯುರ್ವೇದದ ಪ್ರಕಾರ, ಮಾನವ ದೇಹವು ರಸ, ರಕ್ತ, ಮಾಂಸ, ಮೇಧಸ್, ಅಸ್ಥಿ, ಮಜ್ಜೆ ಮತ್ತು ಶುಕ್ರ  ಎಂಬ ಏಳು ಧಾತುಗಳಿಂದ ಕೂಡಿದೆ. ಏಳು ಧಾತುಗಳು ಒಂದಕ್ಕೊಂದು ಸಂಪರ್ಕ ಹೊಂದಿದೆ. , ಒಂದರ ನಷ್ಟವು ಅದರ ಹಿಂದಿನವರ ನಷ್ಟಕ್ಕೂ ಕಾರಣವಾಗುತ್ತದೆ. ಉದಾಹರಣೆಗೆ ರಸದ ನಷ್ಟ ಇತರ ಧಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ರಕ್ತದ ನಷ್ಟವು ರಕ್ತ ಮತ್ತು ರಸ ಎರಡರ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ಶುಕ್ರವನ್ನು ಸ್ವಲಿಸಿದರೆ ಅಥವಾ ನಷ್ಟವಾಗಿಸಿಕೊಂಡರೆ ಅದು ಇತರ ಆರು ಧಾತುಗಳ ನಷ್ಟಕ್ಕೆ ಕಾರಣವಾಗುತ್ತದೆ!

ನಮ್ಮ ಋಷಿಮುನಿಗಳು ಬ್ರಹ್ಮಚರ್ಯ ಅಥವಾ ಬ್ರಹ್ಮಚಾರಿಗಳಿಗೆ  ತುಂಬಾ ಪ್ರಾಮುಖ್ಯತೆ ನೀಡಿರುವುದು ಇದೇ ಕಾರಣಕ್ಕಾಗಿದೆ!!

ಶುಕ್ರವನ್ನು ಸಂರಕ್ಷಿಸಲು ಮತ್ತು ಸಂರಕ್ಷಿತ ಶುಕ್ರವನ್ನು  "ಓಜಸ್" ಆಗಿ ಪರಿವರ್ತಿಸಲು ಯೋಗದಲ್ಲಿ ತಂತ್ರಗಳಿವೆ, ಇದು ಒಂದು ಸೂಕ್ಷ್ಮ ಧಾತು, ವ್ಯಕ್ತಿಯ ಸುತ್ತಲಿನ ಅಸಾಧಾರಣ ಕಾಂತಿಗೆ ಕಾರಣವಾಗಿದೆ. ಮುಂದುವರಿದ ಹಂತದಲ್ಲಿ, "ಓಜಸ್" "ತೇಜಸ್" ಆಗಿ ರೂಪಾಂತರಗೊಳ್ಳುತ್ತದೆ, ಇದು ಯೋಗಿಗಳಿಂದ ಹೊರಹೊಮ್ಮುವ ವಿಶೇಷ  ಕಾಂತೀಯತೆಗೆ ಕಾರಣವಾಗಿದೆ. ಅರೆ-ಸುಪ್ತ ಕುಂಡಲಿನಿ ಶಕ್ತಿಯ ಜಾಗೃತಿಯಲ್ಲಿ ಶುಕ್ರ ಪ್ರಮುಖ ಪಾತ್ರ ವಹಿಸುತ್ತದೆ!!

ಯಯಾತಿ ತನ್ನ ಜೀವನದ ಮೂಲಕ ಸಾಕಷ್ಟು ದೈಹಿಕ ಸುಖಗಳನ್ನು ಅನುಭವಿಸುತ್ತಿದ್ದನು. ಪರಿಣಾಮವಾಗಿ, ಆತನಿಗೆ (ಅತಿಯಾದ ಶುಕ್ರನಷ್ಟದಿಂದ )ದೇಹವು ಬೇಗ ಕ್ಷೀಣಿಸಲು ಅಥವಾ ವೃದ್ದಾಪ್ಯ ಆವರಿಸಲು ತೊಡಗಿತ್ತುಇಂದ್ರಿಯಗಳ ಶಕ್ತಿ ಕಡಿಮೆಯಾಗುತ್ತಿರುವುದು ಅವನಿಗೆ ಚಿಂತೆಯನ್ನುಂಟು ಮಾಡಿತ್ತು. . ಅವನು ತನ್ನ ಯೌವನವನ್ನು ಪುನರ್ ಪಡೆದುಕೊಳ್ಲಲುತೀವ್ರ ತಪಸ್ಸು ಮಾಡಿದನು. ನಂತರ  ಆತನಿಗೆ ಯೌವನವನ್ನು ಧಾರೆ ಎರೆಯಲು ಸಿದ್ದವಿರುವ "ವ್ಯಕ್ತಿ"ಗಾಗಿ ಹುಡುಕಿದನು. ಅವನು ತನ್ನ ಮಗನಾದ ಪುರುವನ್ನು ಬಗ್ಗೆ ಕೇಳಲು ಅವನು ತನ್ನ ತಂದೆಯ ಆಶಯವನ್ನು ನೆರವೇರಿಸಲು ಸ್ವ ಇಚ್ಚೆಯಿಂದ ಒಪ್ಪಿಕೊಂಡನು. ಯಯಾತಿ ತನ್ನ ಯೌವನವನ್ನು ಮರಳಿ ಪಡೆದನು ಮತ್ತು ಸುಮಾರು ವರ್ಷಗಳ ಕಾಲ ದೈಹಿಕ ಸುಖವನ್ನು ಅನುಭವಿಸಿದನು. ಇಷ್ಟು ವರ್ಷಗಳ ನಂತರವೂ ಅವರು ಹೆಚ್ಚಿನ ಸಂತೋಷಕ್ಕಾಗಿ ಹಂಬಲಿಸಿದರು. ದೈಹಿಕ ಆನಂದಕ್ಕೆ ಅಂತ್ಯವಿಲ್ಲ ಎಂದು ಅದು ಅಂತಿಮವಾಗಿ ಅವನಿಗೆ  ಅರಿವಾಗಿತ್ತು!

ಇನ್ನು ಯಯಾತಿಯ ಮಾವ ಶುಕ್ರಾಚಾರ್ಯನ ಬಗ್ಗೆ ಸ್ವಲ್ಪ ವಿವರವಾಗಿ ನೋಡೋಣ.....

...ಮುಂದುವರಿಯುವುದು

No comments:

Post a Comment